art – Peepal Media

ಶ್ರೀ ರೇಣುಕಾಂಬ ಕಲಾಸಂಘದಿಂದ ಪ್ರಕೃತಿ ಸಂರಕ್ಷಣೆ ಹಾಗೂ ಆತ್ಮಹತ್ಯೆ ತಡೆ ಜಾಗೃತಿ, ಸನ್ಮಾನ ಕಾರ್ಯಕ್ರಮ
ಶ್ರೀ ರೇಣುಕಾಂಬ ಕಲಾಸಂಘ (ರಿ)ಬೆಂಗಳೂರು ಇವರ ಆಯೋಜನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ನೆರವಿನೊಂದಿಗೆ ಪ್ರಕೃತಿ ಸಂರಕ್ಷಣೆ ಹಾಗೂ ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಅಂತರ ರಾಷ್ಟ್ರೀಯಮಟ್ಟದ ಕುಚಿಪುಡಿ, ಭರತನಾಟ್ಯ ಹಾಗೂ ನೃತ್ಯಗಳು, ರಾಜ್ಯಮಟ್ಟದ ಗೀತಗಾಯನ, ವಚನ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ದಿನಾಂಕ 8/5/2025 ಗುರುವಾರದಂದು
ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿದವು.

ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ರವರು, ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಆಡಳಿತಾಧಿಕಾರಿಯಾದ ಶ್ರೀ ತುಷಾರ್ ಗಿರಿನಾಥ್ ರವರು, ಕಲ್ಯಾಣದ ಐ.ಎ.ಎಸ್ ವಿಶೇಷ ಆಯುಕ್ತರಾದ ಶ್ರೀ ಸೂರಳ್ಕರ್ ವಿಕಾಶ್ ಕಿಶೋರ್ ರವರು, ಆರ್. ಆರ್. ನಗರ ವಲಯದ ಆಯುಕ್ತರಾದ ಶ್ರೀ ಡಾll ಸತೀಶ್ ರವರು ಹಾಗೂ ಆರ್. ಆರ್. ನಗರ ವಲಯದ ಜಂಟಿ ಆಯುಕ್ತರಾದ ಶ್ರೀಮತಿ ಡಾll ಆರತಿ ಆನಂದ್ ಇವರೆಲ್ಲರೂ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. ಬೆಂಗಳೂರಿನ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸಾರಥಿ ದಿನಪತ್ರಿಕೆಯ ಸಂಪಾದಕರು ಹಾಗೂ ಚಲನ ಚಿತ್ರ ನಟ ಮತ್ತು ನಿರ್ಮಾಪಕರು ಆದಂತಹ ಶ್ರೀ ಗಂಡಸಿ ಸದಾನಂದ ಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಆದಂತಹ ಶ್ರೀ ಗುರುರಾಜ ಪಟೇಲ್ ಬೆಟ್ಟಳ್ಳಿಯವರು, ಅಖಿಲ ಕರ್ನಾಟಕ ಡಾll ಮಾಯಣ್ಣಗೌಡ ಕಲಾವಿದ ಬಳಗದ ಶ್ರೀ ಮಾಯಣ್ಣಗೌಡರು, ಮೂಡಲಪಾಳ್ಯದ ಗೋವಿಂದರಾಜ ನಗರದ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರವೀಶ್ ರವರು, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜನಪ್ರಿಯ ನಿರೂಪಕರು ಆದಂತಹ ಶ್ರೀ ಆರ್. ವೆಂಕಟರಾಜು, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕರು ಆದಂತಹ ಶ್ರೀ ಮಂಜು ಪಾಂಡವಪುರ, ಮಾರುತಿ ಮೆಡಿಕಲ್ಸ್ ಮಾಲಿಕರು ಹಾಗೂ ಗೋ ಸಂರಕ್ಷಕರು ಆದಂತಹ ಶ್ರೀ ಮಹೇಂದ್ರ ಮನೋತ್ ರವರು, ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ. ನಾಗರಾಜ್ ರವರು, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಕಾಂತೇಶ್ ಸಿ. ಮಾರನಪುರ ರವರು, ಬೆಂಗಳೂರಿನ ರಂಗಭೂಮಿ ಕಲಾವಿದರು ಹಾಗೂ ನಾಟಕ ಮತ್ತು ಚಲನಚಿತ್ರ ನಿರ್ದೇಶಕರಾದ ಶ್ರೀ ನಾಗೇಂದ್ರಪ್ರಸಾದ್ ರವರು, ನಾಗಾವರದ ಸಮಾಜ ಸೇವಕರು ಹಾಗೂ ಹಿರಿಯ ರಂಗಭೂಮಿ ಕಲಾವಿದರು ಆದಂತಹ ಶ್ರೀ ಆರ್. ಕೃಷ್ಣಮೂರ್ತಿ ಫೈಯರ್ ರವರು, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಸಮಾಜ ಸೇವಕರು ಆದಂತಹ ಶ್ರೀ ವಜ್ರಮೂರ್ತಿರವರು, ಬೆಂಗಳೂರಿನ ಚಲನಚಿತ್ರ ನಟರು ಹಾಗೂ ರಂಗಭೂಮಿ ಕಲಾವಿದರಾದ ಶ್ರೀ ಸೂರ್ಯರವರು, ಬೆಂಗಳೂರಿನ ರಂಗಭೂಮಿ ಕಲಾವಿದರಾದ ಶ್ರೀ ನವೀನ್ ಗೌಡರವರು ಹಾಗೂ ಕಿರುತೆರೆ ಹಾಗೂ ಚಲನಚಿತ್ರ ನಟಿ ಮತ್ತು ರಂಗಭೂಮಿ ಕಲಾವಿದೆಯಾದಂತಹ ಶ್ರೀಮತಿ ಲಲಿತಾ ಶ್ರೀಧರ್ ಇವರೆಲ್ಲರೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಗೀತ ಗಾಯನ, ವಚನ ವಾಚನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆದವು. ಈ ಎಲ್ಲಾ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಬೆಂಗಳೂರಿನ ವಿಜಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀ ವಾದಿರಾಜರು ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಬಸವಲಿಂಗ ಎಲ್ ರವರು ನಡೆಸಿಕೊಟ್ಟರು.

ಕವಿಗೋಷ್ಠಿಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಆಗಮಿಸಿದ ಸುಮಾರು ಮೂವತ್ತು ಕವಿ/ ಕವಯಿತ್ರಿಯರು ಪಾಲ್ಗೊಂಡಿದ್ದರು. ಎಲ್ಲರೂ ಅನೇಕ ಉತ್ತಮ ವಿಷಯಗಳನ್ನು ಒಳಗೊಂಡ ತಮ್ಮ ಸ್ವಯಂ ರಚಿತ ಕವನಗಳನ್ನು ವಾಚನ ಮಾಡಿದರು. ಕವನ ವಾಚನದಲ್ಲಿ ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯೆಯೊಬ್ಬರು ಕೂಡಾ ತಮ್ಮ ಸ್ವಯಂ ರಚಿತ ಕವನವನ್ನು ವಾಚನ ಮಾಡುತ್ತಾ “ನನ್ನ ದೇಹ ನನ್ನ ಹಕ್ಕು” ಎನ್ನುವ ಸಂದೇಶ ಹೊತ್ತ ಕವನದ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನವನ್ನು ಮಾಡಿದ್ದಾರೆ.

ನಂತರ ಅಂತರರಾಷ್ಟ್ರೀಯ ಕುಚಿಪುಡಿ ಮತ್ತು ಭರತನಾಟ್ಯ ಕಲಾವಿದೆ ಗುರು ಡಾll ಎನ್ ಅನುಪಮಾ ಭೂಷಣ್ ರವರಿಂದ ಮತ್ತು ಅವರ ಶಿಷ್ಯವೃಂದದಿಂದ ಹಾಗೂ ರಸಜ್ಞ ಆಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ತಂಡದವರಿಂದ ಅಮೋಘವಾದ ನೃತ್ಯ ಪ್ರದರ್ಶನಗಳು ನೆರವೇರಿದವು. ತದನಂತರ ಜಿತುರೇಶಾ ಕಾವ್ಯನಾಮದ ಪ್ರೊ. ತುಕ್ಕಪ್ಪ ರವರ ರಚನೆ ಹಾಗೂ ನಿರ್ದೇಶನದ “ಕೈಲಾಸದ ಬಾಗಿಲಲ್ಲಿ ಆತ್ಮಗಳು” (ಆತ್ಮಹತ್ಯೆ ತಡೆಯಿರಿ ಜೀವ ಉಳಿಸಿರಿ) ನಾಟಕವು ನವಭಾರತ ಉದಯ ಪ್ರತಿಷ್ಠಾನದ ಅಭಿನಯ ರಂಗಕಲಾ ತಂಡದಿಂದ ಮೂಡಿಬಂತು. ಈ ನಾಟಕದ ಮೂಲಕ ಆತ್ಮಹತ್ಯೆಯು ಪರಿಹಾರವಲ್ಲ ಎನ್ನುವ ಸಂದೇಶವನ್ನು ಸಮಾಜಕ್ಕೆ ರವಾನೆ ಮಾಡಲಾಯಿತು. ನಾಟಕ ಪಾತ್ರಧಾರಿಗಳೆಲ್ಲರ ಅಭಿನಯವು ಅದ್ಭುತವಾಗಿತ್ತು. ಕಾರ್ಯಕ್ರಮಗಳ ನಿರೂಪಣೆಯನ್ನು ಬೆಂಗಳೂರಿನ ಸಂಗೀತಾ ಗಿರೀಶ್ ರವರು ಮಾಡಿದರು.

ನಾಟಕದ ನಡುವಿನ ವಿರಾಮದ ವೇಳೆಯಲ್ಲಿ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿ/ಕವಯಿತ್ರಿಯರಿಗೆ ಹಾಗೂ ಸಮಾಜದ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ,ಸನ್ಮಾನ,ಗೌರವಗಳನ್ನು ಪ್ರದಾನ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕವಿಗಳು ಹಾಗೂ ಕವಯಿತ್ರಿಯರೆಲ್ಲರಿಗೂ ಹಾಗೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೂ ಆದರಪೂರ್ವಕವಾಗಿ ಶಾಲು ಹೊದಿಸಿ, ಹಾರ ಹಾಕಿ, ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ಜೊತೆಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದವರು ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯರು ಎನ್ನುವುದು ಹೆಮ್ಮೆಯ ವಿಚಾರ. ಶ್ರೀ ರೇಣುಕಾಂಬ ಕಲಾಸಂಘದ ಈ ಮಹತ್ತರ ಕಾರ್ಯಕ್ಕೆ ಕೈಜೋಡಿಸಿದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಾಗೂ ಬೆಂಗಳೂರಿನ ಮಹಾನಗರ ಪಾಲಿಕೆಯವರು ಎನ್ನುವುದು ಅತ್ಯಂತ ಸಂತೋಷದ ಸಂಗತಿ.

ಶ್ರೀ ರೇಣುಕಾಂಬ ಕಲಾಸಂಘದವರು ಗಾಯನ,ನಾಟ್ಯ,ನಾಟಕ ಮುಂತಾದ ಕಲೆಗಳನ್ನು ಪೋಷಿಸುತ್ತಿರುವುದಲ್ಲದೇ ಸಮಾಜದ ಮುಖ್ಯವಾಹಿನಿಯಲ್ಲಿ ತಮ್ಮನ್ನು ಗುರುತಿಸಿಕೊಂಡು ಅನೇಕ ವರ್ಷಗಳಿಂದ ಸಮಾಜದ ಒಳಿಗಾಗಿ ದುಡಿಯುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ, ಅನುಕರಣೀಯ ಹಾಗೂ ಅಭಿನಂದನಾರ್ಹ.

ಶಿಕ್ಷಕಿ ಹಾಗೂ ಕವಯಿತ್ರಿಯಾದಂತಹ ಶ್ರೀಮತಿ ಸಾವಿತ್ರಮ್ಮ ಓಂಕಾರ್ ರವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿ ಗಣ್ಯರ ಹಾಗೂ ಶ್ರೀ ರೇಣುಕಾಂಬ ಕಲಾಸಂಘದ ಸದಸ್ಯರ ರೇಖಾ ಚಿತ್ರವನ್ನು ರಚಿಸಿದರು. ಇವರು ಹೀಗೆ ತಮ್ಮ ಹಲವು ಪ್ರಿಯ ಸಾಹಿತಿಗಳ ರೇಖಾ ಚಿತ್ರಗಳನ್ನು ಬಿಡಿಸಿದ್ದಾರೆ. ಈ ಚಿತ್ರಗಳನ್ನು ನಯನ ಸಭಾಂಗಣದ ಆವರಣದಲ್ಲಿ ಕಾರ್ಯಕ್ರಮದ ದಿನದಂದು ಪ್ರದರ್ಶಿಸಲಾಗಿತ್ತು.

ಇಂದಿನ ಈ ಕಾರ್ಯಕ್ರಮಕ್ಕೆ ಕೈಜೋಡಿಸಿರುವ ಜಿತುರೇಶಾ ಕಾವ್ಯನಾಮದ ಪ್ರೊ. ತುಕ್ಕಪ್ಪನವರು ಕಾರ್ಯಕ್ರಮದ ಪ್ರಾರಂಭದಲ್ಲಿ ಮಾತನಾಡಿ ಶ್ರೀ ರೇಣುಕಾಂಬ ಕಲಾಸಂಘದವರ ಪರಿಚಯವನ್ನು ಹಾಗೂ ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ಎಲ್ಲರಿಗೂ ಪರಿಚಯಿಸಿದರು. ಅವರ ಮಾತುಗಳನ್ನು ಆಲಿಸಿದಾಗ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಶ್ರೀ ರೇಣುಕಾಂಬ ಕಲಾಸಂಘದ ಬಗ್ಗೆ ಹೆಮ್ಮೆ ಎನಿಸಿತು. ಈ ಕಲಾಸಂಘದ ಪ್ರತಿಯೊಬ್ಬ ಸದಸ್ಯರೂ ಅಭಿನಂದನಾರ್ಹರು. ಸಮಾಜಕ್ಕೆ ಇವರೆಲ್ಲರೂ ಮಾಡುತ್ತಿರುವ ಸೇವೆ ಅಪಾರ. ಇವರ ಸೇವೆಯು ಇತರರಿಗೂ ಮಾದರಿಯಾಗಿದೆ. ಶ್ರೀ ರೇಣುಕಾಂಬ ಕಲಾಸಂಘದಿಂದ ಇನ್ನೂ ಇಂತಹಾ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ನಡೆಯುತ್ತಿರಲಿ ಎಂದು ಒಮ್ಮನಸ್ಸಿನಿಂದ ಎಲ್ಲರೂ ಹಾರೈಸೋಣ.

ವರದಿ: ರುಕ್ಮಿಣಿ. ಎಸ್. ನಾಯರ್
ಬೆಂಗಳೂರು.

ಕೆಜಿ ಸುಬ್ರಹ್ಮಣ್ಯನ್:‌ ಚಿತ್ರಕಲಾ ಪರಿಷತ್‌ನಲ್ಲಿ ಚಿಂತಕನೊಬ್ಬನ ಕಲಾಕೃತಿಗಳ ಪ್ರದರ್ಶನ
ಕಲೆ ಮನುಷ್ಯರ ಬದುಕಿನ ಜೊತೆ ಅವಿನಾಭಾವ ಸಂಬಂಧ ಹೊಂದಿರುವಂತಹದ್ದು, ಭಾಷೆಗೂ ಮೊದಲು ಹುಟ್ಟಿದ ಸಂಭಾಷಣೆ ಕಲೆ. ʼಗುಹಾ ಚಿತ್ರʼಗಳಿಂದ ಹಿಡಿದು, ಪ್ರಕೃತಿಯ ಆಳದಿಂದ ಮನುಷ್ಯರ ಬಾಳಿಗೆ ಇಳಿದ ಶಬ್ದ ತರಂಗಳವರೆಗೆ ಕಲೆಯ ಸಾಧ್ಯತೆಗಳು ಅಪರಿಮಿತ. ಹಲವು ಭಾಷೆಗಳ ಲಿಪಿಗಳು ಚಿತ್ರಗಳನ್ನೇ ಅಕ್ಷರಗಳಾಗಿಸಿದಂತಿರುವುದು ಇದಕ್ಕೆ ಸಾಕ್ಷಿ.

ಮಕ್ಕಳು ಹುಟ್ಟುತ್ತಲೇ ವಿಶ್ವಮಾನವರಾಗಿರುತ್ತಾರೆ, ಬೆಳೆಯುತ್ತಾ ಬೆಳೆಯುತ್ತಾ ನಾವು ಅವರನ್ನು ಅಲ್ಪಮಾನವರಾಗಿಸುತ್ತೇವೆ ಎಂದವರು ನಮ್ಮ ಕುವೆಂಪು. ಅಂತೆಯೇ, ಮಕ್ಕಳು ಹುಟ್ಟುತ್ತಲೇ ಕಲಾವಿದರು ಆಗಿರುತ್ತಾರೆ ಅನ್ನಬಹುದು. ಅಥವಾ ಮಕ್ಕಳ ಸೃಜನಶೀಲತೆಯ ವೈವಿಧ್ಯತೆಗಳನ್ನು ಅರಗಿಸಲು ಸಾಧ್ಯವಾಗದ ನಾವು ಅವರನ್ನು ನಮ್ಮದೇ ಹಳಸಲು ಕಣ್ಣಿಂದ ನೋಡಿ, ಒಳಗಣ್ಣಿಂದ ನೋಡಲಾಗದೆ ಸೋತು ಹೋಗುತ್ತೇವೆ. ಅವರ ದಾರಿಗಳನ್ನು ಮೊಟಕುಗೊಳಿಸುತ್ತೇವೆ. ಇವೆಲ್ಲವನ್ನೂ ಮೀರಿ ಆಧುನಿಕ ಲೋಕದಲ್ಲಿ ತಮ್ಮೊಳಗೆ ಕಲೆಯ ರಸಸ್ವಾಧವನ್ನು ಆವಾಹಿಸಿಕೊಳ್ಳುವವರು ವಿರಳ. ಅದರಲ್ಲೂ ಸಾಮಾಜಿಕವಾಗಿ, ರಾಜಕೀಯವಾಗಿ ಕಲೆಯ ಅಗತ್ಯವನ್ನು ಅರಿತಿರುವ ಕಲಾವಿದರು ಅಪರೂಪ.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಖ್ಯಾತ ಚಿತ್ರ ಕಲಾವಿದ ‘ಕೆ ಜಿ ಸುಬ್ರಹ್ಮಣ್ಯನ್’ ಅವರ ವರ್ಣಚಿತ್ರಗಳ ಪ್ರದರ್ಶನ “ಒನ್ ಹಂಡ್ರೆಡ್ ಇಯರ್ಸ್ ಅಂಡ್ ಕೌಂಟಿಂಗ್: ರಿ-ಸ್ಕ್ರಿಪ್ಟಿಂಗ್ ಕೆ.ಜಿ. ಸುಬ್ರಹ್ಮಣ್ಯನ್” ಎಂಬ ಪರಿಕಲ್ಪನೆಯೊಂದಿಗೆ ‘ಎಮಾಮಿ ಆರ್ಟ್ ಗ್ಯಾಲರಿʼ ಮತ್ತು ʼಸೀಗಲ್ ಫೌಂಡೇಶನ್ ಫಾರ್ ದ ಆರ್ಟ್ಸ್ʼ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿದೆ.

ಎಪ್ರಿಲ್‌ 5, 2025 ರಂದು ಆರಂಭವಾಗಿರುವ ಈ ಪ್ರದರ್ಶನವು ಮೇ 20, 2025 ವರೆಗೆ ನಡೆಯಲಿದೆ. ಇದನ್ನು ಖ್ಯಾತ ಕ್ಯುರೇಟರ್ ‘ನ್ಯಾನ್ಸಿ ಅಡಜಾನಿಯʼ ಕ್ಯುರೇಟ್‌ ಮಾಡಿದ್ದಾರೆ.

ಮುಂಬಯಿಯಲ್ಲಿ ನೆಲೆಸಿರುವ ನ್ಯಾನ್ಸಿ ಖ್ಯಾತ ಕಲಾವಿದರಾದ ನವಜೋತ್ ಅಲ್ತಾಫ್, ಸುಧೀರ್ ಪಟವರ್ಧನ್, ಮೆಹ್ಲಿ ಗೋಬಾಯ್ ಮತ್ತು ನೆಲ್ಲಿ ಸೇತ್ನಾ ಅವರುಗಳ ಜೀವಮಾನ ಸಾಧನೆಯ ಕುರಿತು ಸಂಶೋಧಾನಾತ್ಮಕ ಪ್ರದರ್ಶನಗಳನ್ನು ಏರ್ಪಡಿಸಿದ ಅನುಭವವನ್ನು ಹೊಂದಿದ್ದಾರೆ. ಭಾರತದ ಸ್ತ್ರೀವಾದಿ ಚಳುವಳಿಯ ಹಿನ್ನೆಲೆಯಲ್ಲಿ ʼವುಮೆನ್‌ ಈಸ್‌ ಆಸ್‌ ವುಮೆನ್‌ ಡಸ್‌ʼ ಎಂಬ ಮಹತ್ವದ ಕಲಾ ಪ್ರದರ್ಶನವನ್ನು ಸಂಯೋಜಿಸಿದ್ದಾರೆ. ಉಪಕಥನಗಳು (ಸಬಾಲ್ಟಾರ್ನ್), ಮಾಧ್ಯಮ ಕಲೆ, ಜನಪರ ಕಲೆ, ಸಹಯೋಗದ ಕಲೆ, ಬಹುಸಾಂಸ್ಕೃತಿಕ ಕಲೆಗಳ ಜೊತೆಗೆ ಕಲಾ ಇತಿಹಾಸ, ಸ್ತ್ರೀವಾದಿ ತತ್ವ, ಮಾನವಶಾಸ್ತ್ರ, ಸಾಮಾಜಿಕ ಪ್ರಜ್ಞೆ ಮತ್ತು ತತ್ವಶಾಸ್ತ್ರಗಳ ಕುರಿತು ಹೊಸ ತಾತ್ವಿಕ ಮಾದರಿಗಳನ್ನು ತಮ್ಮ ವಿಸ್ತೃತ ಬರವಣಿಗೆಯ ಮೂಲಕ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ.

ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿರುವ ಪ್ರದರ್ಶನದಲ್ಲಿ ನ್ಯಾನ್ಸಿ ಅಡಜಾನಿಯವರು ಕೆ ಜಿ ಸುಬ್ರಹ್ಮಣ್ಯನ್ ಅವರ ಕಲಾ ಲೋಕದ ಆಳ, ಅಗಲ ಮಾತ್ರವಲ್ಲದೇ, ಅದರಲ್ಲಿನ ದ್ವಂದ್ವ ನಿಲುವುಗಳ ಬಗ್ಗೆ ಕೂಡಾ ತುಂಬಾ ವಿವರವಾಗಿ ಮತ್ತು ವಿಮರ್ಶಾತ್ಮಾಕವಾಗಿ ಬೆಳಕು ಚೆಲ್ಲಿದ್ದಾರೆ. ಸುಬ್ರಹ್ಮಣ್ಯನ್ ಅವರ ಆಕ್ರಿಲಿಕ್ ಮಾಧ್ಯಮದ ಹಿಮ್ಮುಖ ಚಿತ್ರಕಲೆಯನ್ನು ಮತ್ತು ಅಂಚೆಪತ್ರ ಅಳತೆಯ ರೇಖಾಚಿತ್ರಗಳನ್ನು ಪ್ರಸ್ತುತಪಡಿಸುತ್ತಲೇ, ಅವರ ಕೃತಿ ನಿರ್ಮಿತಿಯ ಕುರಿತಾದ ಗುರುತರವಾದ ಮೊತ್ತದ ಪತ್ರಾಗಾರದ ವಸ್ತುವಿಷಯಗಳನ್ನು ಕುರಿತೂ ಸಹ ನೋಡುಗರ ಮತ್ತು ಕೇಳುಗರ ಗಮನ ಸೆಳೆಯುವುದು ಸಹ ಈ ಚಿತ್ರ ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಅಡಜಾನಿಯವರು.

ಚಿತ್ರಕಲಾವಿದನ ಸುತ್ತ ಹೀರೋ ಎಂಬ ಪ್ರಭಾವಳಿಯನ್ನು ಸೃಷ್ಟಿಸಿ, ಆತನ ಕಲೆಯ ನೈಜವಾದ ವಿಮರ್ಶೆ ಮಾಡದಿರುವುದು ಕಲಾವಿದನಿಗೆ ಬಗೆದ ದ್ರೋಹ. ನ್ಯಾನ್ಸಿಯವರು ಈ ಪ್ರದರ್ಶನದಲ್ಲಿ ಕೆಜಿಎಸ್‌ ಅವರ ಕಲೆಯ ಮೂಲಕ ಅವರಿಗೆ ಮಹಿಳೆಯರ ದೇಹದ ಬಗ್ಗೆ ಇದ್ದ ಪೂರ್ವಾಗ್ರಹಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅವರ ಅನೇಕ ಕಲಾಕೃತಿಗಳಲ್ಲಿ ಮಹಿಳೆಯರ ಬಗ್ಗೆ ಮತ್ತು ಲೈಂಗಿಕತೆಯ ಬಗ್ಗೆ ಇರುವ ದ್ವಂದ್ವ ದೃಷ್ಟಿಕೋನಗಳನ್ನು ನೋಡಬಹುದು.

ಕೆ ಜಿ ಎಸ್ ೧೯೨೪ ರಲ್ಲಿ ಕೇರಳದ ʼʼಕೂತುಪರಂಬ್‌ʼನಲ್ಲಿ ಹುಟ್ಟಿದರು. ಆರಂಭದಲ್ಲಿ ಗಾಂಧೀಜಿಯ ಪ್ರಬಾವಕ್ಕೊಳಗಾದ ಇವರು ಸ್ವಲ್ಪಕಾಲ ಸೆರೆವಾಸವನ್ನು ಅನುಭವಿಸಿದ್ದಲ್ಲದೇ, ಮುಂದಿನ ವಿಧ್ಯಾಭ್ಯಾಸಕ್ಕಾಗಿ ಯಾವುದೇ ಸರಕಾರಿ ಕಾಲೇಜಿಗೆ ಸೇರದಂತೆ ಬ್ರಿಟೀಷ್‌ ಸರಕಾರ ಇವರ ಮೇಲೆ ನಿರ್ಬಂಧವನ್ನೂ ಹೇರಿತ್ತು. ಅಧ್ಯಯನಕ್ಕಾಗಿ ಠಾಗೋರರ ಶಾಂತಿನಿಕೇತನದ ಕಲಾಭವನಕ್ಕೆ ಸೇರ್ಪಡೆಯಾದದ್ದು ಒಬ್ಬ ಕಲಾವಿದನಾಗಿ ಅವರ ಜೀವನದ ಮಹತ್ವದ ತಿರುವು ನೀಡಿತ್ತು. ತದನಂತರ ಅವರು ಲಂಡನ್ನಿನ ʼಸ್ಲೇಡ್‌ ಸ್ಕೂಲ್‌ ಆಫ್‌ ಆರ್ಟ್‌ʼ ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಿದ್ದರು.

ಬರೋಡಾದ ಎಂ ಎಸ್‌ ವಿಶ್ವವಿಧ್ಯಾಲಯದಲ್ಲಿ ಉಪನ್ಯಾಸಕರಾಗಿದ್ದ ಸುಬ್ರಹ್ಮಣ್ಯನ್ ರವರು 1962 ರಿಂದ 1979 ರ ವರೆಗೂ ಅಲ್ಲಿನ ಲಲಿತಕಲಾ ಮೇಳದಲ್ಲಿ ತಯಾರಿಸಲಾದ ಬೊಂಬೆಗಳನ್ನು ಸಹ ಈ ಚಿತ್ರಕಲಾ ಪ್ರದರ್ಶನದಲ್ಲಿ ಇಡಲಾಗಿದೆ. ಇವಲ್ಲದೇ, ಇಲ್ಲಿಯವರೆಗೂ ನೋಡಿರದ, ಕೆಜಿಎಸ್ ಅವರನ್ನು ಕುರಿತಾದ ಪತ್ರಾಗಾರದ ಸಾಮಗ್ರಿಗಳಾದ ಮಕ್ಕಳ ಪುಸ್ತಕಗಳ ಬಗ್ಗೆ ಕರಕುಶಲ ಮಾಕ್-ಆಪ್ಗಳು, ಭಿತ್ತಿಚಿತ್ರಗಳ ಸೃಷ್ಟಿಗಾಗಿ ಅವಶ್ಯಕವಿರುವ ಆರಂಭಿಕ ಕರಡು ರೇಖಾಚಿತ್ರಗಳು ಮತ್ತು ಅವರ ಸಶಕ್ತ ಭಿತ್ತಿಚಿತ್ರ ‘ದ ವಾರ್ ಆಫ್ ದ ರೆಲಿಕ್ಸ್’ (2012) ಗಾಗಿ ನಿರ್ಮಿಸಲಾದ ‘ಮೆಕೆ’ (ಕಿರು ಮೂಲಮಾದರಿ) ಸಹ ಇಲ್ಲಿವೆ.

ಅವರ ರಾಜಕಾರಣ ತಾತ್ವಿಕತೆಯು ಒಂದು ನಿರಂತರ ಕ್ರಿಯೆಯಾಗಿದ್ದು, ಕಿರು ಪ್ರಕಾರವಾಗಿ ಹೊರ ಹೊಮ್ಮಿರುವ ಅವರ ಮಕ್ಕಳ ಕೃತಿಗಳಲ್ಲಿಯೂ ಈ ಸತ್ವವು ಅಡಕವಾಗಿಹುದು. ಇದನ್ನು ಈ ಕಲಾವಿದ ಸುದೀರ್ಘ ಕಾಲಾವಧಿಯಲ್ಲಿ ನಿರ್ಮಿಸಿದ್ದಾರೆ. ಜೊತೆಗೆ ಇವರ ‘ಸುಪ್ತಾವಸ್ತೆಯ ಕನಸʼನ್ನು ಪ್ರದರ್ಶಿಸುವ      ಬೊಂಬೆಗಳಲ್ಲೂ ಈ ಅಂಶಗಳು ಕಂಡುಬರುತ್ತವೆ. ಭವಿಷ್ಯದ ಜನಾಂಗಗಳು ಸಾಮಾಜಿಕ, ರಾಜಕೀಯ ಪ್ರಕ್ರಿಯೆಗಳಿಗೆ ತೆರೆದುಕೊಳ್ಳಬೇಕಾದ ಅಗತ್ಯಗಳ ಬಗ್ಗೆ ಕೆಜಿಎಸ್‌ ಅವರಿಗಿದ್ದ ಕಾಳಜಿ ಅವರ ಕಲೆಯಲ್ಲಿ ವ್ಯಕ್ತವಾಗುತ್ತದೆ.

ಕೆ.ಜಿ. ಸುಬ್ರಹ್ಮಣ್ಯನ್ ಅವರ ಶತಮಾನೋತ್ಸವ ಪ್ರದರ್ಶನದ ಎರಡನೇ ಆವೃತ್ತಿಯಾದ ಇದು ಮೊದಲಿಗೆ ಕೊಲ್ಕೊತ್ತದ ಇಮಾಮಿ ಆರ್ಟ್ ಕೇಂದ್ರದಲ್ಲಿ ಪ್ರದರ್ಶಿತವಾಗಿತ್ತು. ಈ ಬೆಂಗಳೂರಿನ ಆವೃತ್ತಿಯು ಕೊಲ್ಕೊತ್ತಾದ ಪ್ರದರ್ಶನದ ವಿಸ್ತೃತ ರೂಪವಾಗಿದ್ದ, ಇದರಲ್ಲಿ ಹೆಚ್ಚುವರಿ ಕೃತಿಗಳನ್ನು ಸೇರಿಸಲಾಗಿದೆ. ಕೆಜಿಎಸ್ ಅವರ ಪ್ರಮುಖ ಚಿತ್ರಕೃತಿಗಳಾದ ‘ಚಿನ್ನಮಸ್ತ’ (1991), ‘ಗರ್ಲ್ ವಿತ್ ಕ್ಯಾಟ್ ಬಾಯ್’ (1991), ‘ಬಿರ್ಭುಮ್ ನೇಟಿವಿಟಿ’ (1991), ‘ದೇವಿ ೨ ಮತ್ತು ೩’ (2008) ಮತ್ತು ‘ಮಾಡೋನ ಅಂಡ್ ಚೈಲ್ಡ್’ (2005) ಅಂತಹ ಕೃತಿಗಳೊಂದಿಗೆ ಮತ್ತಷ್ಟು ಕೃತಿಗಳೂ ಇಲ್ಲಿವೆ. ಈ ಬೆಂಗಳೂರು ಆವೃತ್ತಿಯು ಕೆಜಿಎಸ್‌ರವರ ಪಿರಾಮೆಲ್ ಆರ್ಟ್ ಫೌಂಡೇಶನ್ಗೆ ಸೇರಿದ 1960ರ ಮಧ್ಯಭಾಗದ ಐತಿಹಾಸಿಕ ಪೋಸ್ಟ್ ಕ್ಯೂಬಿಸ್ಟ್ ಕೃತಿಗಳನ್ನೂ ಒಳಗೊಂಡಿವೆ. ಈ ನಿರ್ಮಿತಿಗಳು ಕಲಾ ಪರಿಣಿತನ ಮೇರುಕೃತಿಗಳ ಪ್ರಮುಖ ಪರಿವರ್ತನ ಹಂತವನ್ನು ಪ್ರತಿನಿಧಿಸುತ್ತವೆ. ಜೊತೆಗೆ ಕೆಜಿಎಸ್ ಅವರ ಮತ್ತೊಂದು ಸರಣಿಕೃತಿ ‘ಅಟ್ ದ ಜಿಂಚೆಂಗ್ ಹೋಟೆಲ್: ಡ್ರಾಯಿಂಗ್ ಫ್ರಮ್ ಚೈನಾ’ (1985) ಚೈನಾದ ಸಣ್ಣಪುಟ್ಟ ಹಳ್ಳಿ ಪಟ್ಟಣಗಳಲ್ಲಿನ ದೈನಂದಿನ ಜನಜೀವನವನ್ನು ಕುರಿತಾದ ಸೂಕ್ಷ್ಮಗಳನ್ನು ಕಟ್ಟಿಕೊಡುವ ಕೃತಿಸರಣಿ ಸ್ಥಳೀಯ ಸೂಕ್ಷ್ಮಇತಿಹಾಸದ ಮೇರುಕೃತಿಯಾಗಿ ಪ್ರದರ್ಶನದಲ್ಲಿದೆ.

ಕೆ ಜಿ ಸುಬ್ರಹ್ಮಣ್ಯನ್ ಸೃಜನಶೀಲತೆಯನ್ನು ಅದರ ಎಲ್ಲಾ ವೈವಿಧ್ಯತೆಗಳೊಂದಿಗೆ ಅನಾವರಣ ಮಾಡಿದ ಕಲಾವಿದ. ಲೇಖಕ, ದೃಶ್ಯಚಿಂತಕ ಹಾಗು ಶಿಕ್ಷಣ ತಜ್ಞರೂ ಆಗಿದ್ದ ಕೆಜಿಎಸ್ ಕಲಾತ್ಮಕತೆಯ ಅಪರಿಮಿತ ಸಾಧ್ಯತೆಗಳನ್ನು ಸಮೃದ್ಧಗೊಳಿಸಿದ ಆಧುನಿಕ ಕಲಾವಿದರಲ್ಲಿ ಅತ್ಯಂತ ಪ್ರಮುಖ ಹೆಸರು. ಕೆಜಿಎಸ್ ಎಂಬ ಸೃಜನಶೀಲ ಮೇಧಾವಿಯ ವ್ಯಕ್ತಿತ್ವದ ಹಲವು ಆಯಾಮಗಳನ್ನು ಪ್ರಸ್ತುತ ಪ್ರದರ್ಶನವು ಅನಾವರಣಗೊಳಿಸುತ್ತಾ, ಇವರ ಕುರಿತು ಇಲ್ಲಿಯವರೆಗೂ ನೆಲನಿಂತಿರುವ ರೂಢಿಗತ ಅರಿವನ್ನು ಕೆಡವಿ ಮತ್ತೆ ಕಟ್ಟಲು ಪ್ರೇರೇಪಿಸುತ್ತದೆ.

ನಮ್ಮ ಗತ ಇತಿಹಾಸವನ್ನು ಆರೋಗ್ಯಕರ ವಿಮರ್ಶೆಯ ಮಾದರಿಗಳಾಗಿ ಕಾಣಬೇಕೇ ಹೊರತು ಉಸಿರುಗಟ್ಟಿಸುವ ಸಂಪ್ರದಾಯವಾಗಿಯಲ್ಲ ಎಂದು ಸುಬ್ರಹ್ಮಣ್ಯನ್ ಅವರು ನಮಗೆ ಕಲಿಸಿದ ಪಾಠವು ಇಂದು ಬಹಳ ಪ್ರಸ್ತುತವಾಗಿದೆ. ಈ ಪಾಠ ಅವರದೇ ಕಲಾಕೃತಿಗಳನ್ನು ನೋಡುವಾಗಲು ಅನ್ವಯವಾಗುತ್ತದೆ.

ಪ್ರಸ್ತುತ ರಾಜಕೀಯ ಮತ್ತು ಸಾಂಸ್ಕೃತಿಕ ಯುದ್ಧದಲ್ಲಿ ಭೂತಕಾಲವನ್ನು, ಪುರಾತನವನ್ನು ಸಶಸ್ತ್ರಗೊಳಿಸಿ ಯುದ್ದಕ್ಕೆ ನಿಲ್ಲಿಸಲಾಗಿದೆ. ಯಾರು ಇಲ್ಲಿ ಒಳಗೊಳ್ಳುತ್ತಾರೆ, ಯಾರು ಹೊರಗುಳಿಯುತ್ತಾರೆ ಎಂಬುದನ್ನೂ ನಿರ್ಧರಿಸಲಾಗುತ್ತಿದೆ. ಇಂತಹ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲಿ, ಸುಬ್ರಹ್ಮಣ್ಯನ್ ಅಂತಹ ಕಲಾವಿದ-ಕಲಾ ಚಳುವಳಿಕಾರರ ಕೃತಿಸಮುಚ್ಛಯದಲ್ಲಿ ಅಡಕವಾಗಿರುವ ಅಭಿವ್ಯಕ್ತಿ ಕ್ರಮವನ್ನು ಪುನರ್ ಭೇಟಿ ಮಾಡುವುದು ಮುಖ್ಯವಾಗುತ್ತದೆ ಎನ್ನುತ್ತಾರೆ ನ್ಯಾನ್ಸಿ ಅಡಜಾನಿ.

ಈ ಪ್ರದರ್ಶನದಲ್ಲಿ ಕೆಜಿಎಸ್‌ ಅವರ ರಾಜಕೀಯ ಕೃತಿಗಳನ್ನು ನೋಡಬಹುದು. ಉದಾಹರಣೆಗೆ 1971 ರ ಬಾಂಗ್ಲಾದೇಶ ಯುದ್ಧವನ್ನು ನೆನಪಿಸುವ ಟೆರಾಕೋಟಾಗಳು ಮತ್ತು ಮಕ್ಕಳಿಗಾಗಿ ಬರೆದ ಪುಸ್ತಕ ‘ದಿ ಟಾಕಿಂಗ್ ಫೇಸ್’ ನಲ್ಲಿ ಇರುವ 1975-1977 ರ ತುರ್ತು ಪರಿಸ್ಥಿತಿಯ ಕಟುವಾದ ವಿಮರ್ಶೆ. ಈ ಕೃತಿಗಳು ರಾಜಕೀಯ ಸಂದರ್ಭಗಳಿಗೆ ನೀಡಿದ ಪ್ರತಿಕ್ರಿಯೆಯಾಗಿ ಕಂಡರೂ,  ಇದು ಅವರ ರಾಜಕೀಯ ತಾತ್ವಿಕೀಕರಣದ ನಿರಂತರ ಪ್ರಕ್ರಿಯೆಯಾಗಿ ಕಾಣುತ್ತದೆ.

ಈ ಚಿತ್ರ ಪ್ರದರ್ಶನವು ಈ ಮೊದಲು ಕಲ್ಕತ್ತಾದಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಪ್ರದರ್ಶನವು ಹೆಚ್ಚು ಸಂಕೀರ್ಣವೂ, ವಿಶಾಲವೂ ಆಗಿದೆ.

ಲೇಖನ: ಗುರು ಸುಳ್ಯ

ನ.8 ರಿಂದ 18 ರ ವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ನಿಕೋಲಸ್ ರೋರಿಕ್ ಕಲಾಕೃತಿಗಳ ಪ್ರದರ್ಶನ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನವೆಂಬರ್‌ 8 ರಿಂದ 18 ರ ವರೆಗೆ ವಿಶ್ವಪ್ರಸಿದ್ದ ಕಲಾವಿದ, ಬರಹಗಾರ ಮತ್ತು ತತ್ವಜ್ಞಾನಿ ಪ್ರೊ. ನಿಕೋಲಸ್ ರೋರಿಕ್ ರವರ 150ನೇ ಜನ್ಮಶತಮಾನೋತ್ಸವದ ಕಲಾಕೃತಿ ಪ್ರದರ್ಶನ ನಡೆಯಲಿದೆ.

ರಷ್ಯಾದ ಕಲಾವಿದ ಪ್ರೊ.ನಿಕೋಲಸ್ ರೋರಿಕ್ ಅವರು ಭಾರತದ ಹಿಂದೂ ಧರ್ಮ, ಯೋಗ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. 1920 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇವರು ಹಿಮಾಲಯದ ಮೇಲೆ ಅನೇಕ ಕಲಾಕೃತಿಗಳನ್ನು ರಚಿಸಿದ್ದರು.

ಚಿತ್ರಕಲಾ ಪರಿಷತ್‌ನಲ್ಲಿ ಇವರ ಅಮೂಲ್ಯ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ನವೆಂಬರ್‌ 8 ರಂದು ಬೆಳಗ್ಗೆ 11:30 ಕ್ಕೆ ನಡೆಯಲಿರುವ ಪ್ರದರ್ಶನದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚೆನ್ನೈನ ರಷ್ಯನ್ ಫೆಡರೇಶನ್‌ನ  ಜನರಲ್ ವ್ಯಾಲೆರಿ ಕಾಝೀವ್ ಕಾನ್ಸುಲ್, ಭೋರೂಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್‌ ಟ್ರಸ್ಟ್‌ನ ಉಪಾಧ್ಯಕ್ಷರಾದ  ಎನ್. ಅಗರವಾಲ್ ಅವರು ಉಪಸ್ತಿತರಿರಲಿದ್ದಾರೆ. ಕಾರ್ಯಕ್ರಮದ ಕುರಿತು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ಥಳ: ಗ್ಯಾಲರಿ 1 ಮತ್ತು 2, ಕರ್ನಾಟಕ ಚಿತ್ರಕಲಾ ಪರಿಷತ್ತು

ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ವಾಣಿಜ್ಯ ಮಂಡಳಿ ಸನ್ಮಾನ￼
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ವಿಶಿಷ್ಟ ಕಥಾಹಂದರದ ‘ಡೊಳ್ಳು’ ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ವಿಭಾಗ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ.  ‘ತಲೆದಂಡ’ ಚಿತ್ರಕ್ಕೆ ಪರಿಸರ ಕಾಳಜಿಯ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯ ಗರಿ ಒಲಿದಿದೆ.  ‘ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ’ ವಿಭಾಗದಲ್ಲಿ ಗಿರೀಶ್​ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

ಮೊನ್ನೆ ಫಿಲ್ಮ್‌ ಚೇಂಬರ್ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತರನ್ನು ಸನ್ಮಾನ ಮಾಡಲಾಯಿತು. ಡೊಳ್ಳು ಸಿನಿಮಾ ನಿರ್ಮಾಪಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ, ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ‘ತಲೆದಂಡ’ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್ ಸೇರಿದಂತೆ ಈ ಬಾರಿ ಪ್ರಶಸ್ತಿ ವಿಜೇತರಿಗೆ ಫಿಲ್ಮಂ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಸಾರಥ್ಯದಲ್ಲಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಫಿಲ್ಮಂ ಚೇಂಬರ್ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.