arvindh kejriwal – Peepal Media

‘ಶೀಶ್ ಮಹಲ್’ ನಿವಾಸವನ್ನು ಹಿಂದಿನ ಸ್ವರೂಪಕ್ಕೆ ಬದಲಿಸಿ ಎಂದು ದೆಹಲಿ ಗವರ್ನರ್ ಅವರನ್ನು ಒತ್ತಾಯಿಸಿದ ಬಿಜೆಪಿ
ದೆಹಲಿ ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಅದರ ಮೂಲ ಸ್ವರೂಪಕ್ಕೆ ಮರು ಸ್ಥಾಪಿಸುವಂತೆ ಭಾರತೀಯ ಜನತಾ ಪಕ್ಷ ಸೋಮವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರನ್ನು ಒತ್ತಾಯಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ತಮ್ಮ ಪಕ್ಷದ ಮುಖ್ಯಮಂತ್ರಿಯವರು 6, ಫ್ಲ್ಯಾಗ್‌ಸ್ಟಾಫ್ ರಸ್ತೆಯಲ್ಲಿರುವ ಈ ಬಂಗಲೆಯಲ್ಲಿ ವಾಸಿಸುವುದಿಲ್ಲ ಎಂದು ಪಕ್ಷ ತಿಳಿಸಿದೆ. ಬಿಜೆಪಿಯಿಂದ “ಶೀಶ್ ಮಹಲ್” ಅಥವಾ ಶ್ರೀಮಂತ ಅರಮನೆ ಎಂದು ಕರೆಯಲ್ಪಡುವ ಈ ನಿವಾಸವನ್ನು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಳಸುತ್ತಿದ್ದರು.

ಶನಿವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿತು. ಎಎಪಿ 22 ಕ್ಷೇತ್ರಗಳನ್ನು ಗೆದ್ದುಕೊಂಡಿತು.

ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು, ಕೇಜ್ರೀವಾಲ್‌ ಸರ್ಕಾರ ಎಂಟು ಟೈಪ್-ಫೈವ್ ಫ್ಲಾಟ್‌ಗಳು ಮತ್ತು ಎರಡು ಸರ್ಕಾರಿ ಬಂಗಲೆಗಳನ್ನು ಸಿವಿಲ್ ಲೈನ್ಸ್‌ನಲ್ಲಿರುವ 6, ಫ್ಲ್ಯಾಗ್‌ಸ್ಟಾಫ್ ರಸ್ತೆಯ ಬಂಗಲೆಯೊಂದಿಗೆ ವಿಲೀನಗೊಳಿಸಿ “50,000 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಅದ್ದೂರಿ ಸಂಕೀರ್ಣ”ವನ್ನು ನಿರ್ಮಿಸಿದೆ ಎಂದು ಹೇಳಿದ್ದಾರೆ.

“ಈ ಆಸ್ತಿಗಳನ್ನು ಅವುಗಳ ಮೂಲ ಸ್ಥಿತಿಗೆ ಪುನಃಸ್ಥಾಪಿಸಲು ಮತ್ತು 6, ಫ್ಲ್ಯಾಗ್‌ಸ್ಟಾಫ್ ರಸ್ತೆಯನ್ನು 10,000 ಚದರ ಮೀಟರ್‌ಗಿಂತ ಕಡಿಮೆ ಇರುವ ಅದರ ಹಿಂದಿನ ಪ್ರದೇಶಕ್ಕೆ ಹಿಂದಿರುಗಿಸಲು” ಅವರು ಲೆಫ್ಟಿನೆಂಟ್ ಗವರ್ನರ್ ಅವರ “ತುರ್ತು ಹಸ್ತಕ್ಷೇಪ” ವನ್ನು ಕೋರಿದರು.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ ಈ ಕಟ್ಟಡವನ್ನು ಯಾವ ಉದ್ದೇಶಕ್ಕಾಗಿ ಬಳಸಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚ್‌ದೇವ ಹೇಳಿದರು.

ದೆಹಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಪಕ್ಷ ಇನ್ನೂ ಘೋಷಿಸಿಲ್ಲ, 26 ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದಿದೆ.

ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ ರಾಷ್ಟ್ರ ರಾಜಧಾನಿಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು “ಶೀಶ್ ಮಹಲ್” ಆಗಿ ಪರಿವರ್ತಿಸಲಾಯಿತು ಎಂದು ಬಿಜೆಪಿ ಪದೇ ಪದೇ ಟೀಕಿಸಿತ್ತು.

ನಿವಾಸದೊಳಗೆ 40 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ನವೀಕರಣ ಕಾರ್ಯ ನಡೆದಿದೆ ಎಂದು ಹಿಂದುತ್ವ ಪಕ್ಷ ಆರೋಪಿಸಿದೆ.

ಜನವರಿ 28 ರಂದು ದೆಹಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಜ್ರಿವಾಲ್ “ಶೀಶ್ ಮಹಲ್” ನಿರ್ಮಿಸಿದ್ದಾರೆ ಎಂಬ ಬಿಜೆಪಿಯ ಹೇಳಿಕೆಗಳನ್ನು ಪುನರುಚ್ಚರಿಸಿದರು .

ಕೇಜ್ರಿವಾಲ್ ಬಂಧನ ಖಂಡಿಸಿ ಪ್ರತಿಭಟನೆ: ಅತಿಶಿ, ಸೌರಭ್ ಸೇರಿ ಹಲವರು ಪೊಲೀಸ್‌ ವಶಕ್ಕೆ
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷವು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ದೆಹಲಿಯ ಎಎಪಿ ಮುಖಂಡರು ಮತ್ತು ಬೆಂಬಲಿಗರು ಆಪ್ ಮತ್ತು ಬಿಜೆಪಿ ಪ್ರಧಾನ ಕಛೇರಿ ಬಳಿಯಿರುವ ಐಟಿಒ ಬಳಿ  ಬೆಳಗ್ಗೆಯಿಂದಲೇ ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ, ಈ ಪ್ರದೇಶದಲ್ಲಿ ಗುಂಪು ಸೇರುವುದನ್ನು ನಿಷೇಧಿಸಿ 144 ಸೆಕ್ಷನ್ ಕರ್ಪ್ಯೂ ಜಾರಿ ಮಾಡಲಾಗಿದೆ. ಪ್ರತಿಭಟನಾ ನಿರತ ಸಚಿವರಾದ ಸೌರಭ್‌ ಭಾರದ್ವಾಜ್‌, ಅತಿಶಿ ಸೇರಿದಂತೆ ಹಲವು ಆಪ್‌ ನಾಯಕರನ್ನು ವಶಕ್ಕೆ ಪಡೆಯಲಾಗಿದೆ.

ಎಎಪಿ ಬೆಂಬಲಿಗರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎರಡೂ ಪಕ್ಷಗಳ ಪ್ರಧಾನ ಕಚೇರಿ ಇರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಸಂಚಾರಕ್ಕೆ ತಡೆ ನೀಡಿದ್ದಾರೆ.

ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದ ಕೇಜ್ರಿವಾಲ್‌:  ನಾಟಕೀಯ ಬೆಳವಣಿಗೆಯೊಂದರಲ್ಲಿ ತಮ್ಮ ಬಂಧನದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಿಂಪಡೆದಿದ್ದಾರೆ.

ಕಳೆದ ವಾರ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಆರ್‌ ಎಸ್ ನಾಯಕಿ ಕೆ.ಕವಿತಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ವಿಶೇಷ ಪೀಠವು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ

ಕೇಜ್ರಿವಾಲ್ ಅವರು ಕೆಳ ಹಂತದ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಾಮೀನು ಸೇರಿದಂತೆ ಯಾವುದೇ ಪರಿಹಾರಕ್ಕೆ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಕೆ.ಕವಿತಾ ಅವರಿಗೆ ವಿಶೇಷ ಪೀಠವು ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನನ್ನ ವಿರುದ್ಧ ಬಲವಂತದ ಕ್ರಮ ಬೇಡ: ಇ.ಡಿ ವಿರುದ್ದ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೇಜ್ರಿವಾಲ್
ನವದೆಹಲಿ:  ಇಡಿ (ಜಾರಿ ನಿರ್ದೇಶನಾಲಯ) ನನ್ನ ವಿರುದ್ಧ ಬಲವಂತದ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ನನ್ನನ್ನು ಬಂಧಿಸಲೂಬಹುದು ಎಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ದೆಹಲಿ ಹೈಕೋರ್ಟ್‌ ನಲ್ಲಿ ಹೊಸ ಅರ್ಜಿ ಸಲ್ಲಿಸಿದ್ದಾರೆ.

ಅಬಕಾರಿ ನೀತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ತನ್ನ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದು ಬೇಡವೆಂದು  ವಿನಂತಿಸಿ ಕೇಜ್ರಿವಾಲ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ʼಎಕ್ಸ್‌ʼ ಮಾಹಿತಿ ನೀಡಿದೆ.

ಸುರೇಶ್ ಕುಮಾರ್‌ ಕೈಟ್ ಅವರಿರುವ ವಿಭಾಗೀಯ ಪೀಠ ಇಂದು ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಇದುವರೆಗೂ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಅರವಿಂದ ಕೇಜ್ರಿವಾಲ್ ಅವರಿಗೆ 9 ಬಾರಿ ನೋಟಿಸ್‌ ಜಾರಿ ಮಾಡಿದೆ. ತಮಗೆ ಜಾರಿ ನಿರ್ದೇಶನಾಲಯ ನೀಡಿದ ಸರಣಿ ನೋಟಿಸ್ ಪ್ರಶ್ನಿಸಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಬಗ್ಗೆ ವಿವರಣೆ ಬಯಸಿ ಕೋರ್ಟ್ ಇ.ಡಿಗೆ ನೋಟಿಸ್‌ ಜಾರಿ ಮಾಡಿದೆ.

ಬಂಧನದ ಆತಂಕ: ಕೇಜ್ರಿವಾಲ್ ಅವರನ್ನು ಇ.ಡಿ ಬಂಧಿಸಲು ತಯಾರಿ ಮಾಡಿಕೊಂಡಿದೆ. ಈ ಬಂಧನವಾಗದಂತೆ ರಕ್ಷಣೆ ನೀಡಿದರೆ ವಿಚಾರಣೆಗೆ ಹಾಜರಾಗಲು ಸಿದ್ದರಿದ್ದಾರೆ ಎಂದು ಕೇಜ್ರಿವಾಲ್‌ ಪರ ವಕೀಲರು ಬುಧವಾರ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

ಎಮ್‌ಸಿಡಿ ಚುನಾವಣೆ ಅತ್ಯಂತ ಕಷ್ಟಕರವಾಗಿತ್ತು: ಕೇಜ್ರಿವಾಲ್‌ ವಿಶ್ಲೇಷಣೆ
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಹಾಗು ಆಮ್‌ ಆದ್ಮಿ ಪಾರ್ಟಿಯ ಸರ್ವೋಚ್ಛ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪ್ರಕಾರ ದಿಲ್ಲಿ ಮುನ್ಸಿಪಲ್‌ ಕೌನ್ಸಿಲ್‌ (ಎಂಸಿಡಿ) ಚುನಾವಣೆ ಎದುರಿಸುವುದು ಹಿಂದಿನ ಎಲ್ಲ ಚುನಾವಣೆಗಳಿಗಿಂತ ಹೆಚ್ಚು ಕಷ್ಟಕರವಾಗಿತ್ತು ಎಂದು ವಿಶ್ಲೇಷಿಸಿದ್ದಾರೆ.

ನೂತನವಾಗಿ ಚುನಾಯಿತರಾದ ತಮ್ಮ ಪಕ್ಷದ ಮಹಾನಗರ ಪಾಲಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಎದುರಿಸಲು ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದರಲ್ಲದೆ, ಇಂಥ ಸಂಕಷ್ಟದಲ್ಲಿಯೂ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳನ್ನು ಅಭಿನಂದಿಸಿದರು.

ಎಂಸಿಡಿಯಲ್ಲಿ ಎಎಪಿ ಈ ಬಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಎಎಪಿ ಮತ್ತು ಬಿಜೆಪಿ ನಡುವಿನ ತೀವ್ರ ಹಣಾಹಣಿಯಲ್ಲಿ ಎಎಪಿ ದಿಲ್ಲಿ ಎಂಸಿಡಿಯ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ಸ್ಥಾನಗಳನ್ನು ಗಳಿಸಲು ಯಶಸ್ವಿಯಾಗಿತ್ತು.

ಎಂಸಿಡಿಯಲ್ಲಿ ಪರಿಣಾಮಕಾರಿಯಾಗಿ ಆಡಳಿತವನ್ನು ಜಾರಿಗೊಳಿಸಲು ಎಲ್ಲರ ಬೆಂಬಲ ಬೇಕಿದೆ ಎಂದು ಪುನರುಚ್ಚರಿಸಿದ ಕೇಜ್ರಿವಾಲ್‌ ತಮಗೆ ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದವೂ ಬೇಕಿದೆ ಎಂದು ಹೇಳಿದರು.

ಬಿಜೆಪಿ ಚುನಾವಣೆ ಸಮಯದಲ್ಲಿ ಎಎಪಿ ವಿರುದ್ಧ ಮೇಲಿಂದ ಮೇಲೆ ಅಪಪ್ರಚಾರ ಮಾಡುತ್ತ ಬಂದಿತು. 7 ಮುಖ್ಯಮಂತ್ರಿಗಳು, 17 ಕೇಂದ್ರ ಸಚಿವರು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಎಲ್ಲರೂ ಈ ಅಪಪ್ರಚಾರದಲ್ಲಿ ತೊಡಗಿದ್ದರು. ಇದಕ್ಕೆ ಮಾಧ್ಯಮಗಳನ್ನೂ ಬಳಸಿಕೊಂಡರು. ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿರುವ ವಿಡಿಯೋಗಳನ್ನು ಚುನಾವಣೆಯ ಸಮಯದಲ್ಲಿ ಬಿಡುಗಡೆಗೊಳಿಸಲಾಯಿತು. ನಮಗೆ ಸತ್ಯವನ್ನು ನಿರೂಪಿಸಲು ಸಹ ಅವಕಾಶ ನೀಡಲಿಲ್ಲ ಎಂದು ಅವರು ತಮ್ಮ ಭಾಷಣದಲ್ಲಿ ಹರಿಹಾಯ್ದರು.

ಪ್ರಚಾರ ಸಂದರ್ಭದಲ್ಲಿ ಬಿಜೆಪಿ ನಾಯಕರು ತಾವು ಪ್ರಾಮಾಣಿಕರು ಎಂದು ಹೇಳಿಕೊಳ್ಳಲಿಲ್ಲ. ಬದಲಾಗಿ ಎಎಪಿ ಕೂಡ ತಮ್ಮಂತೆ ಭ್ರಷ್ಟಾಚಾರಿ ಪಕ್ಷ ಎಂದು ಹೇಳುತ್ತ ಬಂದರು ಎಂದು ಕೇಜ್ರಿವಾಲ್‌ ಟೀಕಿಸಿದರು.

ಎಂಸಿಡಿ ಚುನಾವಣೆಗೆ ಮುನ್ನ ದೆಹಲಿಯಲ್ಲಿ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧದ ಆರೋಪಗಳು ಸೇರಿದಂತೆ ಹಲವಾರು ವಿವಾದಗಳು ಹೊರಬಂದಿದ್ದವು. ಬಿಜೆಪಿ ಮತ್ತು ಎಎಪಿಯ ನಡುವೆ ಮಾತಿನ ಸಂಘರ್ಷಗಳು ನಡೆಯುತ್ತಿದ್ದವು. ಇದೆಲ್ಲದರ ನಡುವೆಯೂ ಎಎಪಿ ಎಂಸಿಡಿ ಚುನಾವಣೆ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ದೆಹಲಿಯ ಮೂರು ಮುನ್ಸಿಪಾಲ್ ಆಡಳಿತಗಳು ಏಕೀಕರಣಗೊಂಡ ನಂತರದ ಮೊದಲ ಎಂಸಿಡಿ ಚುನಾವಣೆ ಇದಾಗಿದ್ದು, ದೆಹಲಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಆಮ್‌ ಆದ್ಮಿ ಪಾರ್ಟಿಗೆ ನಗರದಲ್ಲಿ ತನ್ನ ಆಡಳಿತದ ಅಧಿಕಾರವನ್ನು ವಿಸ್ತರಿಸಲು ಅವಕಾಶ ಕಲ್ಪಿಸಿದಂತಾಗಿದೆ.

ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ ಆಮ್‌ ಆದ್ಮಿ ಪಾರ್ಟಿ
ಹೊಸದಿಲ್ಲಿ: ಹತ್ತು ವರ್ಷಗಳ ಹಿಂದೆ ಅರವಿಂದ ಕೇಜ್ರಿವಾಲ್ ಆಮ್‌ ಆದ್ಮಿ ಪಕ್ಷವನ್ನು ಸ್ಥಾಪಿಸಿದಾಗ ಇದೂ ಕೂಡ ಹತ್ತರಲ್ಲಿ ಹನ್ನೊಂದು ಎಂದು ಭಾವಿಸಿದವರೇ ಹೆಚ್ಚು. ರಾಜಕೀಯ ಅನುಭವವಿಲ್ಲದೆ, ಮಾಜಿ ತೆರಿಗೆ ಅಧಿಕಾರಿ, ಆರ್‌ಟಿಐ ಕಾರ್ಯಕರ್ತ ಕೇಜ್ರಿವಾಲ್‌ ಅವರ ಬೆನ್ನಿಗಿದ್ದಿದ್ದು ಒಂದಷ್ಟು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಮಾತ್ರ.

ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾಗಿದೆ. 2011ರಲ್ಲಿ ಅಣ್ಣಾ ಹಜಾರೆ ಜನಲೋಕಪಾಲ್‌ ಗಾಗಿ ಆರಂಭಿಸಿದ ದೇಶವ್ಯಾಪಿ ಚಳವಳಿಯ ಚಾಲನಾ ಶಕ್ತಿಯಾಗಿದ್ದ ಕೇಜ್ರಿವಾಲ್‌ ಭಾರತದ ಜನತೆಗೆ ಪರಿಚಿತರಾಗಿದ್ದರು. ಚಳವಳಿ ಮಾಡಿ ಸರ್ಕಾರಗಳನ್ನು ಬ್ಲಾಕ್‌ ಮೇಲ್‌ ಮಾಡುವ ಬದಲು ನೀವೇ ರಾಜಕೀಯಕ್ಕೆ ಬನ್ನಿ ಎಂದು ಕಾಲೆಳೆದರು ಅಂದಿನ ಕಾಂಗ್ರೆಸ್‌ ನಾಯಕರು. ಬಹುಶಃ ಅದೇ ಕಾಂಗ್ರೆಸ್‌ ಪಾಲಿಗೆ ಮುಳುವಾಯಿತು. ಕೇಜ್ರಿವಾಲ್‌ ಕಟ್ಟಿದ ಆಮ್‌ ಆದ್ಮಿ ಪಾರ್ಟಿ ಈಗ ದೆಹಲಿ ಪಾರ್ಟಿಯಾಗಿ ಉಳಿದಿಲ್ಲ, ಬದಲಾಗಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ ಪಕ್ಷಕ್ಕೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆಮ್‌ ಆದ್ಮಿ ಪಾರ್ಟಿಯನ್ನು ಸ್ಥಾಪಿಸಿ, ಮೊದಲ ಪ್ರಯತ್ನದಲ್ಲೇ ದೆಹಲಿಯ ಮುಖ್ಯಮಂತ್ರಿಯಾಗುವಲ್ಲಿ ಅರವಿಂದ ಕೇಜ್ರಿವಾಲ್‌ ಯಶಸ್ವಿಯಾದರು. ಈ ಹತ್ತು ವರ್ಷಗಳಲ್ಲಿ ಅತ್ಯಂತ ಗಮನಾರ್ಹವಾದ ವಿದ್ಯಮಾನವೆಂದರೆ ಬಿಜೆಪಿಯ ಭರ್ಜರಿ ಬೆಳವಣಿಗೆ ಮತ್ತು ಕಾಂಗ್ರೆಸ್‌ ನ ಹೀನಾಯ ಹಿನ್ನೆಡೆಗಳು. ಈ ಎರಡರ ನಡುವೆ ಎಎಪಿ ರಾಷ್ಟ್ರ ರಾಜಕಾರಣದ ಹೊಸ ಆಟಗಾರನಂತೆ ಬೆಳೆದಿರುವುದು ಕಾಕತಾಳೀಯವೇನೂ ಅಲ್ಲ.

ಯಾವುದೇ ಒಂದು ರಾಜಕೀಯ ಪಕ್ಷ ರಾಷ್ಟ್ರೀಯ ಪಕ್ಷವೆನಿಸಿಕೊಳ್ಳಬೇಕು ಎಂದರೆ ಕನಿಷ್ಠ ಮೂರು ರಾಜ್ಯಗಳಲ್ಲಿ ಶೇ.3ರಷ್ಟು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿರಬೇಕು. ಈ ಲೆಕ್ಕಾಚಾರದ ಪ್ರಕಾರ ಮೂರು ರಾಜ್ಯಗಳಿಂದ 11 ಲೋಕಸಭಾ ಸದಸ್ಯ ಸ್ಥಾನಗಳನ್ನು ಗೆದ್ದಿರಬೇಕು. ಸದ್ಯದ ಮಟ್ಟಿಗೆ ಎಎಪಿ ಬಳಿ ಒಬ್ಬನೇ ಒಬ್ಬ ಲೋಕಸಭಾ ಸದಸ್ಯನಿಲ್ಲ.

ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯಲು ಇರುವ ಮತ್ತೊಂದು ಮಾನದಂಡವೇನೆಂದರೆ, ಒಂದು ರಾಜಕೀಯ ಪಕ್ಷ ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಮಾನ್ಯತೆ ಹೊಂದಿರಬೇಕು. ಇದಕ್ಕಾಗಿ ಆಯಾ ರಾಜ್ಯದ ಶೇ.6ರಷ್ಟು ಮತಪ್ರಮಾಣ (ವೋಟ್‌ ಶೇರ್) ಅಥವಾ ಕನಿಷ್ಠ ಇಬ್ಬರು ಶಾಸಕರನ್ನು ಹೊಂದಿರಬೇಕು. ಒಂದುವೇಳೆ ಶೇ.6ರಷ್ಟು ಮತಪ್ರಮಾಣವಿಲ್ಲದೇ ಹೋದರೆ ಕನಿಷ್ಠ ಮೂರು ಮಂದಿ ಶಾಸಕರನ್ನು ಹೊಂದಿರಬೇಕು.

ಈ ಮಾನದಂಡದ ಪ್ರಕಾರ ಎಎಪಿ ಈಗ ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದೆ. ದೆಹಲಿ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಆ ಪಕ್ಷಕ್ಕೆ ಈಗ ಭಾರೀ ಬಹುಮತವಿದೆ. ಗೋವಾದಲ್ಲಿ ಶೇ.6ರಷ್ಟು ಮತಪ್ರಮಾಣ ಮಾತ್ರವಲ್ಲದೆ, ಎರಡು ಶಾಸಕ ಸ್ಥಾನವೂ ಆ ಪಕ್ಷಕ್ಕಿದೆ. ಈಗ ಗುಜರಾತ್‌ ಚುನಾವಣೆಯಲ್ಲೂ ಖಾತೆ ತೆರೆಯುವ ಮೂಲಕ, ಅಲ್ಲೂ ಸಹ ರಾಜ್ಯಮಟ್ಟದ ಪಕ್ಷವಾಗಿ ಎಎಪಿ ಹೊರಹೊಮ್ಮಿದೆ.

ಸದ್ಯಕ್ಕೆ ಭಾರತದ ರಾಜಕಾರಣದಲ್ಲಿ ಒಟ್ಟು ಎಂಟು ರಾಜಕೀಯ ಪಕ್ಷಗಳಿಗೆ ರಾಷ್ಟ್ರೀಯ ಪಕ್ಷಗಳೆಂಬ ಮಾನ್ಯತೆಯನ್ನು ಚುನಾವಣಾ ಆಯೋಗ ನೀಡಿದೆ. ಬಿಜೆಪಿ, ಕಾಂಗ್ರೆಸ್‌, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ, ತೃಣಮೂಲ ಕಾಂಗ್ರೆಸ್‌ ಪಕ್ಷ, ಎನ್‌ ಸಿಪಿ, ಸಿಪಿಐ, ಸಿಪಿಎಂ ಮತ್ತು ಬಹುಜನ ಸಮಾಜ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಮಾನ್ಯತೆ ಪಡೆದಿರುವ ಪಕ್ಷಗಳು. ಗಮನಾರ್ಹ ಅಂಶವೆಂದರೆ ಎನ್‌ ಸಿಪಿ, ಟಿಎಂಸಿ, ಸಿಪಿಐ ಮತ್ತು ಬಿಎಸ್‌ ಪಿ ಪಕ್ಷಗಳ ಬಲ ಕುಸಿಯುತ್ತ ಬಂದಿದ್ದು, ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಳ್ಳುವ ಹಂತ ತಲುಪಿವೆ. ಈ ಪಕ್ಷಗಳಿಗೆ ಈಗಾಗಲೇ ಚುನಾವಣಾ ಆಯೋಗ ನೋಟಿಸ್‌ ಜಾರಿ ಮಾಡಿದ್ದು, ರಾಷ್ಟ್ರೀಯ ಪಕ್ಷಗಳ ಸ್ಥಾನಮಾನದಿಂದ ಯಾಕೆ ಕೆಳಗೆ ಇಳಿಸಬಾರದು ಎಂದು ಕೇಳಿದೆ. 2024ರ ಸಾರ್ವತ್ರಿಕ ಚುನಾವಣೆವರೆಗೆ ತಮಗೆ ನೀಡಲಾಗಿರುವ ರಾಷ್ಟ್ರೀಯ ಪಕ್ಷದ ಸ್ಥಾನಮಾನದಿಂದ ಕೆಳಗೆ ಇಳಿಸಬಾರದು ಎಂದು ಈ ಪಕ್ಷಗಳು ಕೋರಿವೆ. ಚುನಾವಣಾ ಆಯೋಗ ಈ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಟಿಎಂಸಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚು ಲೋಕಸಭಾ ಸದಸ್ಯ ಸ್ಥಾನಗಳು ಇದ್ದರೂ, ಅವೆಲ್ಲವೂ ಪಶ್ಚಿಮ ಬಂಗಾಳದಿಂದಲೇ ಬಂದಿವೆ. ಎನ್‌ ಸಿಪಿ ಈಗ ಕೇವಲ ಮಹಾರಾಷ್ಟ್ರಕ್ಕೆ ಸೀಮಿತವಾಗಿದೆ. ಸಿಪಿಎಂ ಕೂಡ ಕೇರಳ ಮತ್ತು ತ್ರಿಪುರಕ್ಕೆ ಸೀಮಿತವಾಗಿದೆ. ಸಿಪಿಎಂ ಇದಕ್ಕಿಂತ ದಾರುಣವಾದ ಸ್ಥಿತಿಯನ್ನು ಎದುರಿಸುತ್ತಿದೆ.

ಈ ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಷ್ಟ್ರೀಯ ಸ್ಥಾನಮಾನ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ ಎಎಪಿ ದೇಶದ ಎಲ್ಲ ಭಾಗಗಳಲ್ಲೂ ತನ್ನ ಅಸ್ತಿತ್ವ ಮೂಡಿಸುತ್ತ ಹೊಸ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ.

ರಾಷ್ಟ್ರೀಯ ಪಕ್ಷವಾದರೆ ಇರುವ ಲಾಭಗಳು:

ಒಂದು ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆತರೆ ಸಿಗುವ ಲಾಭವೇನೆಂದರೆ ಆ ಪಕ್ಷಕ್ಕೆ ನೀಡಲಾದ ಚುನಾವಣಾ ಚಿಹ್ನೆ ಬೇರೆ ಯಾವ ರಾಜ್ಯದಲ್ಲೂ ಇನ್ಯಾವುದೇ ಪಕ್ಷ, ಅಭ್ಯರ್ಥಿಗೆ ನೀಡಲಾಗುವುದಿಲ್ಲ. ಉದಾಹರಣೆಗೆ ಎಎಪಿ ಪಕ್ಷಕ್ಕೆ ನೀಡಲಾಗಿರುವ ಪೊರಕೆಯ ಚಿಹ್ನೆ ಆ ಪಕ್ಷದ ಬಳಿಯೇ ಉಳಿಯುತ್ತದೆ.

ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮಾತ್ರ ಪ್ರಸಾರಭಾರತಿ ಅಡಿಯಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ  ಪ್ರಚಾರ ಮಾಡುವ ಅವಕಾಶ ಲಭಿಸುತ್ತದೆ.

ಚುನಾವಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು 40 ಮಂದಿ ಸ್ಟಾರ್‌ ಪ್ರಚಾರಕರನ್ನು ಹೊಂದಬಹುದಾಗಿದೆ. ಅವರ ಪ್ರಯಾಣದ ಖರ್ಚುಗಳನ್ನು ಅಭ್ಯರ್ಥಿಗಳ ಖರ್ಚಿನ ಲೆಕ್ಕಕ್ಕೆ ಪಡೆಯಲಾಗುವುದಿಲ್ಲ.

ರಾಷ್ಟ್ರೀಯ ಪಕ್ಷಗಳಿಗೆ ತಮ್ಮ ಪಕ್ಷದ ಪ್ರಧಾನ ಕಚೇರಿ ನಿರ್ಮಿಸಿಕೊಳ್ಳಲು ಸರ್ಕಾರಿ ಜಾಗವನ್ನು ನೀಡಲಾಗುತ್ತದೆ. ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೇವಲ ಒಬ್ಬ ಅನುಮೋದಕರ ಸಹಿ ಸಾಕಾಗುತ್ತದೆ.

ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಎರಡು ಸೆಟ್‌ ಪರಿಷ್ಕೃತ ಪಟ್ಟಿಯನ್ನು ಉಚಿತವಾಗಿ ಒದಗಿಸಲಾಗುತ್ತದೆ. ಚುನಾವಣೆಗಳ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಉಚಿತವಾಗಿ ಮತದಾರರ ಪಟ್ಟಿಯನ್ನು ನೀಡಲಾಗುತ್ತದೆ.

ಎಎಪಿ ಈಗ ಹೊಸ ಕಾಂಗ್ರೆಸ್:

ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಕಳೆದುಕೊಳ್ಳುತ್ತ ಸಾಗುತ್ತಿರುವಂತೆ ಎಎಪಿ ರಾಷ್ಟ್ರ ರಾಜಕಾರಣದ ಹೊಸ ಕಾಂಗ್ರೆಸ್‌ ಪಕ್ಷವಾಗಿ ಗುರುತಿಸಿಕೊಳ್ಳುತ್ತಿದೆ. ಅರ್ಥಾತ್‌ ಬಿಜೆಪಿಗೆ ಕಾಂಗ್ರೆಸ್‌ ಹೊರತಾದ ಪರ್ಯಾಯವಾಗಿ ಗುರುತಿಸಿಕೊಳ್ಳುತ್ತಿದೆ.

ದೇಶದ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಎದುರಾಳಿಗಳಾಗಿ ಈವರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಹಣಾಹಣಿ ನಡೆಸುತ್ತಿದ್ದವು. ಈಗ ಕಾಂಗ್ರೆಸ್‌ ಸ್ಥಾನವನ್ನು ನಿಧಾನವಾಗಿ ಎಎಪಿ ತುಂಬುತ್ತಿದೆ.

ಗುಜರಾತ್‌ ಚುನಾವಣೆಯಲ್ಲಿ ಖಾತೆ ತೆರೆದಿರುವ ಎಎಪಿ ಹಿಮಾಚಲ ಪ್ರದೇಶದಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಹಿಮಾಚಲ ಪ್ರದೇಶದ ಎಎಪಿ ಘಟಕವನ್ನೇ ಬಿಜೆಪಿ ತನ್ನ ಒಳಗೆ ಸೇರಿಸಿಕೊಂಡ ನಂತರ ಹೊಸದಾಗಿ ಪಕ್ಷವನ್ನು ಸಂಘಟಿಸುವ ಸವಾಲನ್ನು ಎಎಪಿ ಎದುರಿಸಬೇಕಾಗಿ ಬಂದಿತ್ತು.

ಕೇಜ್ರಿವಾಲ್‌ ಅವರ ಮುಂದಿನ ಗುರಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ ಘಡ ಮತ್ತು ಕರ್ನಾಟಕ.

ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಭಾಷಣ ಮಾಡುವುದು ಸಾಮಾನ್ಯ. ಆದರೆ ಆ ಕೆಲಸವನ್ನು ನಿಜವಾಗಿಯೂ ಮಾಡಲು ಹೊರಟಿರುವುದು ಆಮ್‌ ಆದ್ಮಿ ಪಾರ್ಟಿ ಎಂದರೆ ಅತಿಶಯೋಕ್ತಿಯೇನಲ್ಲ.