attack – Peepal Media

ಮತ್ತೆ 49 ಪ್ರತಿಪಕ್ಷಗಳ ಸಂಸದರ ಅಮಾನತು, ಇದುವರೆಗೆ ಒಟ್ಟು 141!
ನವದೆಹಲಿ: ಲೋಕಸಭೆಯಲ್ಲಿ ಡಿಸೆಂಬರ್ 13 ರಂದು ನಡೆದ ಭದ್ರತಾ ಉಲ್ಲಂಘನೆಯ ಕುರಿತು ಚರ್ಚೆಗೆ ಆಗ್ರಹಿಸಿ  ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಲವತ್ತೊಂಬತ್ತು ಜನ ಪ್ರತಿಪಕ್ಷ ಸಂಸದರನ್ನು ಮಂಗಳವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಳಿಸಲಾಗಿದೆ.

ಇದೇ ಕಾರಣಕ್ಕಾಗಿ 78 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಮಾರನೇ ದಿನ ಈ ಅಮಾನತು ನಡೆದಿದೆ. ಇದುವರೆಗೆ ಡಿಸೆಂಬರ್ 14 ರಿಂದ ಉಭಯ ಸದನಗಳಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ ಲೋಕಸಭೆಯಲ್ಲಿ 141 – 95 ಮತ್ತು ರಾಜ್ಯಸಭೆಯಲ್ಲಿ 46.

ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ – ಪ್ರತಿಪಕ್ಷಗಳದ್ದು ಕೇವಲ ಎರಡು ಸರಳ ಬೇಡಿಕೆಗಳು- ಕೇಂದ್ರ ಗೃಹ ಸಚಿವರು ಭದ್ರತಾ ಲೋಪದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಿ ಚರ್ಚೆಗೆ ಬರಬೇಕು ಎಂಬುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸುಪ್ರಿಯಾ ಸುಳೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.

ಯಾವುದೇ ಅರ್ಥಪೂರ್ಣ ಚರ್ಚೆಯಿಲ್ಲದೆ ಕಠಿಣ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ ಮತ್ತು ಡಿಸೆಂಬರ್ 13 ರಂದು ಲೋಕಸಭೆಗೆ ದಾಳಿಕೋರರ ಪ್ರವೇಶವನ್ನು ಸುಲಭಗೊಳಿಸಿದ ಬಿಜೆಪಿ ಸಂಸದ ಮಾತ್ರ ಯಾವ ಶಿಕ್ಷೆಯಿಲ್ಲದೆ ಸ್ವತಂತ್ರವಾಗಿದ್ದಾರೆ ಎಂದು ಹೇಳಿದ್ದಾರೆ.

“ಹೊಸ ಸಂಸತ್ತಿನಲ್ಲಿ ನ್ಯಾಮೋಕ್ರಸಿಯ ಎಲ್ಲಾ ದಬ್ಬಾಳಿಕೆಗಳು ಕಾಣುತ್ತಿವೆ,” ಎಂದು ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Today at least 50 more INDIA MPs were suspended from the Lok Sabha alone! A complete purge is being executed so that draconian Bills are passed without any meaningful debate, and so that the BJP MP who facilitated entry of the two intruders into the Lok Sabha on December 13th…
— Jairam Ramesh (@Jairam_Ramesh) December 19, 2023

For the first time in my parliamentary career of nearly 15 years, I too entered the well of the House holding a placard calling for a discussion on the recent security breach. I did so out of solidarity with my @INCIndia colleagues, who have been unjustly suspended for demanding…
— Shashi Tharoor (@ShashiTharoor) December 19, 2023

“ಆಂತರಿಕ ಭದ್ರತೆ ಮತ್ತು ಪೊಲೀಸರನ್ನು ಗೃಹ ಸಚಿವಾಲಯ ನಿಯಂತ್ರಿಸುವುದರಿಂದ ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಒತ್ತಾಯಿಸುತ್ತಿವೆ. ಅವರು [ಶಾ] ಘಟನೆಯ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರೆ ಏನಾಗುತ್ತಿತ್ತು,” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

#WATCH | Lok Sabha MP Farooq Abdullah suspended for the remainder of the Winter session of Parliament

"Who does the Police come under? What would have happened if he (Union Home Minister) had made a statement in Parliament on the incident (security breach)?" pic.twitter.com/WDstvY2Lz1
— ANI (@ANI) December 19, 2023

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸಂಸತ್ತಿನ ಈ ಪರಿಸ್ಥಿತಿಯನ್ನು ಉತ್ತರ ಕೊರಿಯಾಕ್ಕೆ ಹೋಲಿಸಿದ್ದಾರೆ. “ಇದು ಟೋಕನ್ ಹೌಸ್ ಆಗಲಿದೆ” ಎಂದು ಚಿದಂಬರಂ ಪಿಟಿಐಗೆ ತಿಳಿಸಿದ್ದಾರೆ.

VIDEO | "This is going to resemble the North Korean Assembly. This is going to be a token house," says Congress MP @KartiPC on suspension of 49 Lok Sabha MPs. pic.twitter.com/mCt4JwUvC0
— Press Trust of India (@PTI_News) December 19, 2023

ಸಂಸತ್‌ ಮೇಲೆ ʼನಿರುದ್ಯೋಗದʼ ಹೊಗೆ!
ಡಿಸೆಂಬರ್‌ 13, ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ನುಗ್ಗಿ, ಹಳದಿ ಬಣ್ಣದ ಹೊಗೆಯನ್ನು ಹಾರಿಸಿ ʼಸರ್ವಾಧಿಕಾರʼದ ವಿರುದ್ದ ಘೋಷಣೆಗಳನ್ನು ಕೂಗಿದರು. ಸಂಸತ್‌ ದಾಳಿ ಎಂಬಂತೆ ಬಿಂಬಿಸಲ್ಪಟ್ಟ ಆರು ಮಂದಿ ಯುವಕರ ಈ ನಾಟಕೀಯ ಸಂಭವ ದೇಶದಾದ್ಯಂತ ನಿರುದ್ಯೋಗದ ವಿರುದ್ಧದ ಪ್ರತಿಭಟನೆಯಾಗಿ ಬದಲಾಯಿತು.

ಉದ್ಯೋಗ ಸಿಗದೆ ಈ ʼಪ್ರತಿಭಟನಾಕಾರರುʼ ಹತಾಶರಾಗಿ ಹೋಗಿದ್ದರು. ಹರಿಯಾಣ ಮೂಲದ ನೀಲಂ ಆಜಾದ್ ಎಂಬ ಮಹಿಳೆ ಉನ್ನತ ಸ್ನಾತಕೋತ್ತರ ಪದವಿಯನ್ನು ಪಡೆದೂ ನಿರುದ್ಯೋಗಿಯಾಗಿದ್ದರು.. ಇವರೆಲ್ಲಾ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಭಿಮಾನಿಗಳಾಗಿದ್ದರೆಂದೂ, 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ಸ್ಫೋಟಿಸಿದಂತೆ ಇದನ್ನೂ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿಯವರೂ ಈ ಘಟನೆಯ ಹಿಂದೆ ʼನಿರುದ್ಯೋಗʼದ ಕಾರಣವನ್ನು ಕಂಡಿದ್ದಾರೆ.

ಮೋದಿ ಸರ್ಕಾರವು ಆರೋಪಿಗಳನ್ನು ಭಯೋತ್ಪಾದನೆಯ ಆರೋಪದಡಿಯಲ್ಲಿ ಬಂಧಿಸಿದರೂ ಎಷ್ಟೇ ನಾಟಕೀಯವಾಗಿದ್ದರೂ, ಇದು ಹೇಗೆ ಭಯೋತ್ಪಾದಕ ಕೃತ್ಯವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಮೂಲಕ ಇಡೀ ಕೃತ್ಯ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ನಿರುದ್ಯೋಗದ ಬಗೆಗಿನ ಚರ್ಚೆಗೆ ಕಾರಣವಾಗಿದೆ.

ನಿರುದ್ಯೋಗ ಎಂಬ ಮಹಾಮಾರಿ!

ಈ ಘಟನೆಯ ಹೊರತಾಗಿಯೂ ದೇಶದಾದ್ಯಂತ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ವರದಿಗಳು ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ನಮ್ಮ ಮುಂದೆ ಇಟ್ಟಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಅಂಕಿಅಂಶಗಳು, ಔದ್ಯೋಗಿಕ ವಲಯದಲ್ಲಿ 15-29 ವರ್ಷ ವಯಸ್ಸಿನ ಯುವಕರ ಪ್ರಮಾಣ 2016-17 ರಲ್ಲಿ 25% ಇದ್ದದ್ದು, 2022-23 ರಲ್ಲಿ 17% ಕ್ಕೆ ಗಂಭೀರವಾಗಿ ಕುಸಿದಿರುವುದನ್ನು ತೋರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, 45 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ 37% ರಿಂದ 49% ಕ್ಕೆ ಏರಿದೆ.

ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ತೀವ್ರವಾಗಿ ಹೆಚ್ಚಾಗಿದೆ. ಪಕ್ಕದ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ತಮ್ಮ ದೇಶದ ಯುವಕ-ಯುವತಿಯರಿಗೆ ಉದ್ಯೋಗ ನೀಡುವಲ್ಲಿ ಉತ್ತಮ ಕೆಲಸವನ್ನು ಮಾಡಿದೆ ಎಂದು ವಿಶ್ವ ಬ್ಯಾಂಕ್‌ನ ಡೇಟಾ ತೋರಿಸುತ್ತದೆ. ಭಾರತ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಬದಲು ಜನಸಂಖ್ಯೆಯ ಬೆಳವಣಿಗೆಯನ್ನು ಮುಂದುವರಿಸಿದೆ. HSBC ಯ ಭಾರತೀಯ ಅರ್ಥಶಾಸ್ತ್ರಜ್ಞ ಪ್ರಾಂಜುಲ್ ಭಂಡಾರಿ, ಮುಂದಿನ ಒಂದು ದಶಕದಲ್ಲಿ ಭಾರತವು 70 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಆದರೆ, ಅದು ಕೇವಲ 24 ಮಿಲಿಯನ್‌ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಉದ್ಯೋಗ ಮತ್ತು ಶಿಕ್ಷಣ ಪರಸ್ಪರ ವಿರುದ್ಧ ಸಂಬಂಧವನ್ನು ಹೊಂದಿರುವಂತೆ ಕಾಣುತ್ತಿದೆ ಎಂದರೆ ದುರಾದೃಷ್ಟ. ಒಂದು ಹೆಚ್ಚಾದರೆ ಇನ್ನೊಂದು ಕಡಿಮೆಯಾಗುತ್ತದೆ. ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ಪ್ರಕಾರ ಭಾರತದ ನಿರುದ್ಯೋಗ ಮಟ್ಟ ಯುವ ಪದವೀಧರರಲ್ಲಿಯೇ ಹೆಚ್ಚು, ಅಂದರೆ 42%. ಸಂಸತ್ತಿನಮೇಲೆ ದಾಳಿ ಮಾಡಿದ ಯುವಕರು ಭಾರತದಲ್ಲಿ ವಿದ್ಯಾವಂತ ಯುವಕ ಜನತೆ ಭಾರತದ ಜಾಬ್‌ ಮಾರ್ಕೆಟ್‌ನ ಮೇಲೆ ಅತ್ಯಂತ ಕಳಪೆ ನಿರೀಕ್ಷೆಗಳನ್ನು ಹೊಂದಿರುವುದನ್ನು ತೋರಿಸುತ್ತದೆ.

ಈ ಎಲ್ಲಾ ಪರಿಸ್ಥಿತಿಗಳನ್ನು ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ದೇಶದ ಜನತೆ ನಿರುದ್ಯೋಗವನ್ನು ಅತ್ಯಂತ ಕರಾಳ ಸಮಸ್ಯೆಯೆಂಬಂತೆ ನೋಡುತ್ತಿರುವುದು ಅತಿಶಯೋಕ್ತಿಯಲ್ಲ. ದೆಹಲಿ ಮೂಲದ ಥಿಂಕ್ ಟ್ಯಾಂಕ್ ಲೋಕ್‌ನೀತಿ ಗುಜರಾತ್‌ನ 88% ಜನರು ನಿರುದ್ಯೋಗವನ್ನು “ದೊಡ್ಡ ಸಮಸ್ಯೆ” ಎಂದು ಪರಿಗಣಿಸಿದ್ದಾರೆ ಎಂದು ಹೇಳಿದೆ. ಇತರ ರಾಜ್ಯಗಳ ಜನರೂ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ.

ರಾಜಕೀಯವಾಗಿ ಸೋತಿದೆಯೇ ದೇಶ?

ನಿರುದ್ಯೋಗದ ಸಮಸ್ಯೆ ದೇಶದ ರಾಜಕೀಯ ವೈಫಲ್ಯ ಎಂಬಂತೆ ಯಾಕೆ ಪರಿಗಣಿಸಲ್ಪಟ್ಟಿಲ್ಲ ಎಂಬುದೇ ಅಚ್ಚರಿ. ಅದೊಂದು ರಾಜಕೀಯ ಚರ್ಚೆಯ ವಿಷಯವಾಗಿ ಯಾಕೆ ಬದಲಾಗಿಲ್ಲ? ಹಾಗೊಂದು ವೇಳೆ ಜನರು ನಿರುದ್ಯೋಗವನ್ನು ರಾಜಕೀಯ ಸಮಸ್ಯ ಎಂಬಂತೆ ಪರಿಗಣಿಸಿದರೂ, ಅದು ರಾಜ್ಯ ಮಟ್ಟದಲ್ಲಿ ಮಾತ್ರ. ಇದು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿತ್ತು. ಭಾರತ್ ರಾಷ್ಟ್ರ ಸಮಿತಿಯು ಅಧಿಕಾರವನ್ನು ಕಳೆದುಕೊಳ್ಳಲು ಮತ್ತು ಮತದಾರರು ಕಾಂಗ್ರೆಸ್ ಸರ್ಕಾರವನ್ನು ರಾಜ್ಯಕ್ಕೆ ತರಲು ಮುಖ್ಯ ಕಾರಣವೇ ನಿರುದೈೋಗ ಸಮಸ್ಯೆ. ಪಶ್ಚಿಮ ಬಂಗಾಳದ ಎಸ್‌ಎಸ್‌ಸಿ ಹಗರಣ ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದಂತಹ ಸರ್ಕಾರಿ ನೇಮಕಾತಿಯಲ್ಲಿನ ಭ್ರಷ್ಟಾಚಾರಗಳು ರಾಜ್ಯ ಸರ್ಕಾರಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ. ʼಕೆಲಸ ಕೊಡದೆ ವಂಚಿಸಿದ್ದಾರೆʼ ಎಂಬುದೇ ಉದ್ಯೋಗ ಇಲ್ಲದ ವಿದ್ಯಾವಂತ ಯುವಕರ ಕೋಪ!

ಇದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರಗಳು ಈಗ ಅನೇಕ ನೀತಿಗಳನ್ನು ಜಾರಿಗೆ ತರುತ್ತಿವೆ. ನಿಮಗೆ ಗೊತ್ತಿರುವಂತೆ ಬಿಹಾರ ಜಾತಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಜಾತಿ ಆಧಾರಿತ ಕೋಟಾಗಳನ್ನು 50% ರಿಂದ 65% ಕ್ಕೆ ವಿಸ್ತರಿಸಿದೆ. ಇದು ಇತರ ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಉತ್ತಮ ಅವಕಾಶವನ್ನು ನೀಡಬಹುದು.

ಆದರೆ ಸರ್ಕಾರಿ ಉದ್ಯೋಗಗಳ ಸಂಖ್ಯೆ ತೀರಾ ಕಡಿಮೆ. ಹಾಗಾಗಿ, ಸರ್ಕಾರಗಳು ತಳಮಟ್ಟದ ಯುವಕನ್ನು ತಲುಪಲು ನಗದು ವರ್ಗಾವಣೆಯಂತಹ ಕ್ರಮಗಳ ಕಡೆಗೆ ಗಮನ ಹರಿಸಿವೆ. ಕರ್ನಾಟಕದಲ್ಲಿ ಕಾಂಗ್ರೇಸ್‌ ಮಾಡಿದ್ದೂ ಇದನ್ನೇ. ಮಿರುದ್ಯೋಗಿ ಯುವಕರಿಗೆ ಉದ್ಯೋಗ ಕಂಡುಕೊಳ್ಳುವ ಅವಧಿಯ ವರೆಗೆ ಆರ್ಥಿಕ ನೆರವು ನೀಡುವುದು. ಸಹಜವಾಗಿಯೇ ಇದು ನಿರುದ್ಯೋಗಿಗಳಿಗೆ ಒಂದು ಮಟ್ಟದ ವರೆಗೆ ಆರ್ಥಿಕ ಬೆಂಬಲವಾಗುತ್ತದೆ.

ಸಾಂವಿಧಾನಿಕವಾಗಿ ಆರ್ಥಿಕ, ಹಣಕಾಸು ಮತ್ತು ವಾಣಿಜ್ಯದಂತಹ ಬಹುತೇಕ ಅಧಿಕಾರಗಳು ಕೇಂದ್ರಕ್ಕೆ ಸೇರಿದ್ದು. ಉದ್ಯೋಗಗಳನ್ನು ಸೃಷ್ಟಿಸುವುದು ಮುಖ್ಯವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿ. ವಿಪರ್ಯಾಸವೆಂದರೆ, ಜನರ ನಿರುದ್ಯೋಗ ಪ್ರೇರಿತ ಕೋಪ ಕೇಂದ್ರದ ಕಡೆಗೆ ತುಂಬಾ ತುಂಬಾ ಕಡಿಮೆ. ಇದರ ಹಿಂದೆ ಕೆಲಸ ಮಾಡಿರುವುದು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆ. ಉದ್ಯೋಗ ಕೇಳಬೇಕಾದ ಯುವಕರಿಗೆ ಚರ್ಚಿಸಲು ಹಾಗೂ ಯೋಚಿಸಲು, ಅವರನ್ನು ಉದ್ಯೋಗದ ಬಗ್ಗೆ ಯೋಚಿಸದಂತೆ ಮಾಡಲು ಬಿಜೆಪಿಯ ನರೇಟಿವ್‌ಗಳು ಪ್ರಖರವಾಗಿ ಕೆಲಸ ಮಾಡಿವೆ. ನಿರುದ್ಯೋಗಿ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ಅಗತ್ಯಗಳ ಬಗ್ಗೆ ಯೋಚನೆ ಮಾಡದಂತೆ ಬಿಜೆಪಿ ಮಾಡಿದೆ. ಕೊನೆಯಲ್ಲಿ, ʼಉದ್ಯೋಗ ಇಲ್ಲದಿದ್ದರೂ ಏನಂತೆ, ಮೋದಿ ಇರಬೇಕು!ʼ ಎಂಬ ಯೋಚನೆಗಳನ್ನು ಬಿತ್ತಲಾಗಿದೆ.

ದೆಹಲಿಯ ಕಡೆಗಿಲ್ಲ ಜನಾಕ್ರೋಶ!

ಉದ್ಯೋಗ ನೀಡುವುದು ಕೇಂದ್ರದ ಜವಬ್ದಾರಿ. ಜನತೆ ಕೇಂದ್ರದ ಮೇಲೆ ತಮ್ಮ ಆಕ್ರೋಶವನ್ನು ತೋರಿಸಬೇಕು. ಆದರೆ, ನಿರುದ್ಯೋಗದ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಮುಖ್ಯವಾಹಿನಿಗಳ ಮಾಧ್ಯಮಗಳು ತಮ್ಮ ಜವಬ್ದಾರಿಯನ್ನು ಮರೆತಿವೆ. ಅವುಗಳು ಅನಧಿಕೃತವಾಗಿ ಬಿಜೆಪಿಯ ಐಟಿ ಸೆಲ್‌ಗಳಾಗಿ ಬದಲಾಗಿವೆ.

ಮೇಲ್ವರ್ಗಗಳ ಜನರು ತಾವು ವೈಯಕ್ತಿಕವಾಗಿ ನಿರುದ್ಯೋಗದಿಂದ ಬಳಲುತ್ತಿದ್ದರೂ, ಕೇಸರಿ ಪಕ್ಷದ ಮೇಲೆ ತಮ್ಮ ಕೋಪವನ್ನು ತೋರಿಸುತ್ತಿಲ್ಲ. ಇಲ್ಲಿ ನಿರುದ್ಯೋಗ ಎಂಬುದು ಚರ್ಚೆಯ ವಿಷಯವೇ ಅಲ್ಲ. ದೇವಾಲಯ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿದೆ, ಧರ್ಮ ಅಪಾಯದಲ್ಲಿದೆ ಎಂಬ ನರೇಟಿವ್‌ಗಳು 2014 ರಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿ ಕೆಲಸ ಮಾಡಿವೆಯೋ, ಇವತ್ತಿಗೂ ಹಾಗೆಯೇ ಚರ್ಚಿಸಬೇಕಾದ ಅಗತ್ಯ ವಿಷಯಗಳಿಂದ ಜನರನ್ನು ಹಾದಿತಪ್ಪಿಸುತ್ತಿವೆ. ಒಂದು ಲೆಕ್ಕದಲ್ಲಿ ನೋಡಿದರೆ, ಈ ನರೇಟಿವ್‌ಗಳ ಪ್ರಭಾವ ಈಗ ಹೆಚ್ಚೇ ಇದೆ.

ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳ ಹೊರತಾಗಿಯೂ, ನಿರುದ್ಯೋಗ ಎಂಬ ʼರಾಜಕೀಯವಲ್ಲದೇ ಹೋಗಿರುವʼ ಸಮಸ್ಯೆ ಆಗಾಗ ಹೆಡೆ ಎತ್ತಿ ಬುಸುಗುಡುತ್ತಾ, ಇದ್ದಕ್ಕಿದ್ದಂತೆ ವಿಷಗಾಳಿ ಬಿಡುತ್ತದೆ. ಆಗ ಸಂಸತ್‌ ಮೇಲೆ ನಡೆಸಿದ ಹಳದಿ ಹೊಗೆ ದಾಳಿಯಂತಹ ಘಟನೆಗಳು ನಡೆಯುತ್ತವೆ. 1980 ರ ದಶಕದ ಉತ್ತರಾರ್ಧದಿಂದ ಭಾರತವು ಆರ್ಥಿಕವಾಗಿ ಸಮರ್ಪಕವಾಗಿ ಬೆಳೆಯುತ್ತಿದ್ದರೂ, ನಿರುದ್ಯೋಗ, ಅದರಲ್ಲೂ ಕಾರ್ಮಿಕ ಶಕ್ತಿಯನ್ನು ಕಡಿಮೆ ಬಳಸಿಕೊಳ್ಳುತ್ತಿರುವ ಕ್ಷೇತ್ರಗಳಲ್ಲಿ ಬೆಳೆಯುತ್ತಲೇ ಇದೆ. ಅಂದರೆ, ಆರ್ಥಿಕವಾಗಿ ಬೆಳೆಯುವುದು ಮತ್ತು ಉದ್ಯೋಗ ಹೆಚ್ಚಳದ ಮಧ್ಯೆ ಸಂಬಂಧವೇ ಇಲ್ಲ.

ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ವರದಿಯೂ ಇದನ್ನೇ ಹೇಳುತ್ತದೆ. ಇದರ ಪ್ರಕಾರವೂ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದ ಬೆಳವಣಿಗೆಯ ನಡುವೆ ಯಾವುದೇ ಸಂಬಂಧವಿಲ್ಲ . ಇದಲ್ಲದೆ, ಭಾರತದ ನಿರುದ್ಯೋಗ ಸಮಸ್ಯೆಯ ಇನ್ನೊಂದು ಕರಾಳ ಆಧ್ಯಾಯವೆಂದರೆ, ಮಹಿಳರೂ ಸಂಬಳದ ಕೆಲಸವನ್ನು ಅತೀ ಕಡಿಮೆ ಮಾಡುತ್ತಿದ್ದಾರೆ. ಭಾರತದ ಮಹಿಳಾ ಕಾರ್ಮಿಕ ಬಲ ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ.

ನಿರುದ್ಯೋಗದ ಸಮಸ್ಯೆಯನ್ನು ಸುಧಾರಿಸಲು ಬೃಹತ್ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯೊಂದರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ಮತದಾರರು, ಉದ್ಯೋಗ ಸಮಸ್ಯೆಯನ್ನು ಸರ್ಕಾರ ನಿವಾರಿಸಬಹುದು ಎಂದು ಯೋಚಿಸುವುದೂ ಅಸಂಭನೀಯ. ಇದು ನನ್ನ ವೈಯಕ್ತಿಕ ನಿರಾಶವಾದವಾಗಿದ್ದರೆ ಸಾಕು! ಹಿಂದುತ್ವದಂತಹ ಐಡೆಂಟಿಟಿ ಪಾಲಿಟಿಕ್ಸ್ ಆಡವಾಡುವ ವರೆಗೆ ಇದು ಸಾದ್ಯವಾಗುತ್ತದೆಯೋ ಇಲ್ಲವೋ.

ಭದ್ರತಾ ಲೋಪ ಎಂದು ಕೈ ತೊಳೆದುಕೊಳ್ಳುತ್ತಿದೆ ಕೇಂದ್ರ: ರಾಜ್ಯ ಕಾಂಗ್ರೆಸ್
ಬೆಂಗಳೂರು: ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ, ಆದರೂ ಕ ಭದ್ರತಾ ಲೋಪ ಎಂದು ಬಿಂಬಿಸಿ ಸಂಸತ್ ಮೇಲಿನ ದಾಳಿಯನ್ನ ಮರೆಸುವ ಹುನ್ನಾರ ನೆಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ದೂರಿದೆ.

ಈ ಹಿನ್ನಲೆಯಲ್ಲಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ ಎಂದು ತಿಳಿಸುವ ಮೂಲಕ, ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಸಂಬಂಧವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.

ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ.@mepratap ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?
ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ?…
— Karnataka Congress (@INCKarnataka) December 15, 2023

ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?
ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ? ದಾಳಿಕೋರರ ಮೇಲೆ UAPAಯಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ, ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ.ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ?ಕೇಂದ್ರ ಸರ್ಕಾರ ಕೇವಲ ಭದ್ರತಾ ಲೋಪ ಎನ್ನುವುದನ್ನು ಬಿಂಬಿಸಿ ಕೈ ತೊಳೆದುಕೊಳ್ಳಲು ಹೊರಟಿರುವುದೇಕೆ? ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರೆಶ್ನೆಗಳ ಸುರಿಮಳೆ ಸುರಿಸಿದೆ.

ಪ್ರಧಾನಿಗಳನ್ನೇ ರಕ್ಷಿಸಲು ಬಿಜೆಪಿಗೆ ಸಾಧ್ಯವಿಲ್ಲ! ಮುಂದುವರಿದ ವಿಪಕ್ಷಗಳ ಧರಣಿ
ನವದೆಹಲಿ: ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಚರ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆಗೆ ನಡೆಸಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮುಂದೂಡಲಾಗಿದೆ. ಸತತ ಎರಡು ದಿನಗಳ ಕಾಲ ಸಂಸತ್ತಿನಲ್ಲಿ ಅಸ್ತವ್ಯಸ್ತ ಉಂಟಾಗಿದೆ.

ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್‌ಕರ್‌ ಅವರು ಈ ವಿಷಯದ ಬಗ್ಗೆ ಚರ್ಚೆಗಾಗಿ ವಿರೋಧ ಪಕ್ಷದ ಸದಸ್ಯರಿಂದ ಹಲವಾರು ನೋಟಿಸ್‌ಗಳನ್ನು ಸ್ವೀಕರಿಸಿದರೂ, ಈ ವಿನಂತಿಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು. ಲೋಕಸಭೆಯಲ್ಲೂ ಪರಿಸ್ಥತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಸಂಸತ್ತಿನ ಹೊರಗೆ ಮಕರ ದ್ವಾರದ ಮೆಟ್ಟಿಲುಗಳು ಹೊಸ ಪ್ರತಿಭಟನೆಯ ಪಾಯಿಂಟ್ ಆಗಿ ಬದಲಾಗಿದ್ದು, ಅಮಾನತುಗೊಂಡ ಸಂಸದರು ಭಿತ್ತಿಪತ್ರಗಳೊಂದಿಗೆ ಸರ್ಕಾರ ಹಠಮಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಅಮಾನತುಗೊಂಡ ಸಂಸದರ ಜೊತೆ ಸೇರಿಕೊಂಡಿದ್ದಾರೆ.

ಸದನದ ಹೊರಗಿರುವ ಗಾಂಧಿ ಪ್ರತಿಮೆ ಎದುರು ಇತರ ಸಂಸದರೊಂದಿಗೆ ಪ್ರತಿಭಟನೆ ನಡೆಸಿದ ಡಿಎಂಕೆ ಸಂಸದೆ ಕನಿಮೊಳಿ, ‘ಈ ದೇಶವನ್ನು ರಕ್ಷಿಸುವವರು ತಮ್ಮಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ. ಅವರಿಗೆ ಸಂಸತ್ತಿನ ರಕ್ಷಣೆಯನ್ನೇ ಮಾಡಲಾಗಿಲ್ಲ. ಪ್ರಧಾನಿಯವರು ಅಲ್ಲಿದ್ದರೆ, ಅವರನ್ನೂ  ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಯಾವುದೇ ಭದ್ರತೆಯ ಉಲ್ಲಂಘನೆಗೆ ದೇಶ ಮತ್ತು ಸರ್ಕಾರ ಹೊಣೆಯಾಗಬೇಕು. ಪ್ರಧಾನಿ ಮತ್ತು ಗೃಹಮಂತ್ರಿ ಸಂಸತ್ತಿಗೆ ಬಂದು ಏನಾಯಿತು ಎಂದು ನಮಗೆ ತಿಳಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅವರು ಅದನ್ನೂ ಮಾಡಲಿಲ್ಲ,” ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಕ್ಕಟ್ಟಿಗೆ ಕೇಂದ್ರ ಗೃಹ ಸರ್ಕಾರವನ್ನು ದೂಷಿಸಿ, ಇದನ್ನು ತಡೆಯಲು ಏನೂ ಮಾಡಿಲ್ಲ  ಎಂದು ಆರೋಪಿಸಿದ್ದಾರೆ.

“ಗೃಹ ಸಚಿವರು ದೆಹಲಿ ಪೊಲೀಸ್ ಮತ್ತು ದೇಶದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಹೊರಗೆ ಮಾಧ್ಯಮದ ವಾಹಿನಿಗಳೊಂದಿಗೆ ಮಾತನಾಡುತ್ತಿದ್ದಾರೆ, ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ, ಸಂಸತ್ತಿನ ಅಧಿವೇಶನದಲ್ಲಿ ಸದಸ್ಯರಾಗಿರುವ ಅವರು ತಮ್ಮ ಹೊಣೆಗಾರಿಕೆಯಂತೆ ಸಂಸತ್ತಿನ ಸದನದಲ್ಲಿ ಇರಬೇಕು. ಅವರು ಸಂಸದರೊಂದಿಗೆ ಮಾತನಾಡಲು ಇಲ್ಲಿಗೆ ಬರಬೇಕು,” ಎಂದು ತರೂರ್‌ ಹೇಳಿದ್ದಾರೆ.

ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪರಿಸ್ಥಿತಿಯನ್ನು ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾ, “ಸಭಾಧ್ಯಕ್ಷರು ಈಗಾಗಲೇ ಸರ್ವಪಕ್ಷ ಸಭೆಯಲ್ಲಿ ಸದಸ್ಯರೊಂದಿಗೆ [ಭದ್ರತಾ ಉಲ್ಲಂಘನೆ ಬಗ್ಗೆ] ಚರ್ಚಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಈಗಾಗಲೇ ಹೇಳಿದ್ದಾರೆ ಮತ್ತು ನಾವು ಅನುಸರಿಸಬೇಕಾದ ನಿರ್ದೇಶನಗಳನ್ನು ಅವರು ನೀಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಸದನ ನಡೆಸಲು ಬಿಡುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗಳು ಅವರಿಗೆ ತಕ್ಕುದಲ್ಲ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು,” ಎಂದು ಹೇಳಿದ್ದಾರೆ.

ಖರ್ಗೆ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ, ಕೃಪೆ:X/@kharge

ಸಂಸತ್ತು ಪ್ರಾರಂಭವಾಗುವ ಮೊದಲು, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯು ಕಾರ್ಯತಂತ್ರವನ್ನು ರೂಪಿಸಲು, ಇಡೀ ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.

ಸಂಸತ್‌ ದಾಳಿ ʼಯೋಜಿತ ಪಿತೂರಿʼ: ನ್ಯಾಯಾಲಯಕ್ಕೆ ಪೊಲೀಸ್‌ ಹೇಳಿಕೆ
ನವದೆಹಲಿ: ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆಗಾಗಿ ಬಂಧಿಸಲಾದ ನಾಲ್ವರು ವ್ಯಕ್ತಿಗಳು ಒಂದು “ಯೋಜಿತ ಪಿತೂರಿ” ಯ ಭಾಗ ಎಂದು ದೆಹಲಿ ಪೊಲೀಸರು ಗುರುವಾರ ನಗರದ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮನೋರಂಜನ್ ಡಿ, ಸಾಗರ್ ಶರ್ಮಾ, ನೀಲಂ ಆಜಾದ್ ಮತ್ತು ಅಮೋಲ್ ಶಿಂಧೆ ಎಂದು ಗುರುತಿಸಲಾದ ನಾಲ್ವರು ಆರೋಪಿಗಳ ವಿರುದ್ಧ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ನಗರ ನ್ಯಾಯಾಲಯ ಇವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ʼಇವರು ನಾಪತ್ತೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಪೋಸ್ಟ್ ಮಾಡಿ, ಪತ್ತೆ ಮಾಡಿದವರಿಗೆ ಸ್ವಿಸ್ ಬ್ಯಾಂಕ್‌ನಿಂದ ಬಹುಮಾನ ನೀಡಲಾಗುವುದು ಎಂದಿರುವ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ಅವರು [ಮೋದಿ] ಜಾಗತಿಕ ಮಟ್ಟದಲ್ಲಿ ನಮ್ಮ ಪ್ರತಿನಿಧಿ. ಅವರು ಘೋಷಿತ ಅಪರಾಧಿಯಂತೆ ಕಾಣೆಯಾಗಿದ್ದಾರೆ ಎಂದು ಇವರ ಬಗ್ಗೆ ಹೇಳಲಾಗಿದೆ. ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ಎಂಬುದನ್ನು ಇದು ತೋರಿಸುತ್ತದೆ. ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಇರಲೂ ಬಹುದು” ಎಂಬ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯನ್ನು ಲೈವ್ ಲಾ ವರದಿ ಮಾಡಿದೆ.

ತನಿಖೆಯ ಭಾಗವಾಗಿ ಆರೋಪಿಗಳನ್ನು ಮುಂಬೈ ಮತ್ತು ಲಕ್ನೋಗೆ ಕರೆದೊಯ್ಯಲು 15 ದಿನಗಳ ಕಾಲ ಇವರನ್ನು ಪೊಲೀಸ್ ಕಸ್ಟಡಿಗೆ ನೀಡಲು ಪ್ರಾಸಿಕ್ಯೂಷನ್ ಕೋರಿತ್ತು. ಆದರೆ, ಪ್ರತಿವಾದಿ ವಕೀಲರು, ಇದಕ್ಕೆ ನಾಲ್ಕರಿಂದ ಐದು ದಿನಗಳ ಪೊಲೀಸ್ ಕಸ್ಟಡಿ ಸಾಕು ಎಂದು ವಾದಿಸಿದ್ದಾರೆ.

ಡಿಸೆಂಬರ್ 13 ರಂದು, ಮನೋರಂಜನ್ ಮತ್ತು ಶರ್ಮಾ ಹಳದಿ ಬಣ್ಣದ ಹೊಗೆಯನ್ನು ಹಾಕಿ ಲೋಕಸಭೆಯಲ್ಲಿ ದಾಂಧಲೆ ಎಬ್ಬಿಸಿದ್ದರು. ಸಂಸತ್ತಿನ ಹೊರಗೆ ಆಜಾದ್ ಮತ್ತು ಶಿಂಧೆ ಎಂಬ ಆರೋಪಿಗಳು ಹೊಗೆ ಹಾರಿಸಿ “ಸರ್ವಾಧಿಕಾರ ನಿಲ್ಲಿಸಿ” ಎಂದು ಘೋಷಣೆ ಕೂಗಿದ್ದರು.

ಮೋದಿ ಅಭಿಮಾನಿ, ರಿಕ್ಷಾ ಡ್ರೈವರ್‌, ನಿರುದ್ಯೋಗಿ: ಸಂಸತ್‌ ದಾಳಿ ನಡೆಸಿದ್ಯಾರು?
"ನನ್ನ ಹೆಸರು ನೀಲಂ. ಭಾರತ ಸರ್ಕಾರ ನಮ್ಮ ವಿರುದ್ಧ ದೌರ್ಜನ್ಯ ಎಸಗುತ್ತಿದೆ. ನಮ್ಮ ಹಕ್ಕುಗಳಿಗಾಗಿ ಮಾತನಾಡಲು ನಮಗೆ ಸಾಧ್ಯವಾಗುತ್ತಿಲ್ಲ, ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಮತ್ತು ನಮ್ಮನ್ನು ಕಂಬಿಗಳ ಹಿಂದೆ ಇರಿಸಿ ಚಿತ್ರಹಿಂಸೆ ನೀಡುತ್ತಾರೆ. ನಮ್ಮ ಹಕ್ಕುಗಳಿಗಾಗಿ ಮಾತನಾಡಲು ನಮಗೆ ಯಾವುದೇ ಮಾಧ್ಯಮ ಇರಲಿಲ್ಲ.... ನಾವು ಯಾವುದೇ ಸಂಘ ಅಥವಾ ಗುಂಪುಗಳಿಗೆ ಸಂಬಂಧ ಪಟ್ಟವರಲ್ಲ. ನಾವು ಸಾಮಾನ್ಯರು, ನಾವು ವಿದ್ಯಾರ್ಥಿಗಳು, ನಾವು ನಿರುದ್ಯೋಗಿಗಳು”

ಹೀಗೆಂದು ಡಿಸೆಂಬರ್ 13 ಬುಧವಾರದಂದು ಭದ್ರತೆಯನ್ನು ಮೀರಿ ಸಂಸತ್ತಿನ ಮೇಲೆ ದಾಳಿ ಮಾಡಿದ ನಾಲ್ವರು ಆರೋಪಿಗಳಲ್ಲಿ ಒಬ್ಬರಾದ ನೀಲಂ (42) ಪೊಲೀಸರು ಎಳೆದುಕೊಂಡು ಹೋಗುವಾಗ ಕೂಗಿದ್ದಾರೆ.

ಪೊಲೀಸರು ಇದಕ್ಕೆ ಸಂಬಂಧಿಸಿದ ಏಳು ಜನರನ್ನು ಗುರುತಿಸಿದ್ದು, ಆರು ಜನರನ್ನು ಬಂಧಿಸಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ.

ಇವರಲ್ಲಿ ಸಾಗರ್ ಶರ್ಮಾ ಮತ್ತು ಕರ್ನಾಟಕದ ಮನೋರಂಜನ್ ಡಿ  ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಸದನದೊಳಗೆ ಬಣ್ಣದ ಹೊಗೆಯ ಡಬ್ಬಿಗಳನ್ನು ಹಾಕಿದ್ದಾರೆ., ಇನ್ನಿಬ್ಬರಾದ ಅಮೋಲ್ ಶಿಂಧೆ ಮತ್ತು ನೀಲಂ ಘೋಷಣೆಗಳನ್ನು ಕೂಗುತ್ತಾ, ಸದನದ ಹೊರಗೆ, ಸಂಸತ್ತಿನ ಆವರಣದಲ್ಲಿ ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಹಾರಿಸಿದ್ದಾರೆ. ಇನ್ನೂ ಮೂವರು ಸಹಚರರನ್ನು ಬಿಹಾರ ಮೂಲದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಮತ್ತು ಈತನ ಪತ್ನಿ ಎಂದು ಗುರುತಿಸಲಾಗಿದೆ.

ಗುರುಗ್ರಾಮದಲ್ಲಿ ತಂಗಿದ್ದ ಆರೋಪಿಗಳು ಬುಧವಾರ ಬೆಳಗ್ಗೆ ಸಂಸತ್ತಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.

ಲಕ್ನೋದ ಇ-ರಿಕ್ಷಾ ಚಾಲಕ ಸಾಗರ್ ಶರ್ಮಾ

ಆರೋಪಿಗಳಲ್ಲಿ ಓರ್ವನಾದ ಸಾಗರ್ ಶರ್ಮಾನ ಬಳಿ ಇದ್ದ ಸಂದರ್ಶಕರ ಪಾಸ್‌ನಲ್ಲಿ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹಿ ಇತ್ತು. ಈತ  ಲಕ್ನೋದ ಅಲಂಬಾಗ್‌ನ ಇ-ರಿಕ್ಷಾ. ಬಡಗಿಯೋರ್ವರ ಮಗನಾದ ಈತ ಲಕ್ನೋದಲ್ಲಿ ಬಅಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ದಾಳಿಯ ಎರಡು ದಿನಗಳ ಹಿಂದೆ ಈತ ಮನೆ ಬಿಟ್ಟಿದ್ದ.

“ಇದನ್ನೆಲ್ಲಾ ನೋಡಿ ನನಗೆ ಆಘಾತವಾಗಿದೆ. ನನ್ನ ಮಗ ಹೀಗೆ ಮಾಡಲು ಸಾಧ್ಯವಿಲ್ಲ. ಅವನು ಈ ರೀತಿ ಮಾಡುತ್ತಾನೆ ಎಂದು ನನಗೆ ನಂಬಲು ಸಾಧ್ಯವಿಲ್ಲ” ಎಂದು ಸಾಗರ್ ತಾಯಿ ರಾಣಿ ಶರ್ಮಾ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ವರದಿಯಾಗಿದೆ.

ಸಾಗರ್‌ ಶರ್ಮಾನ ಆಧಾರ್‌ ಕಾರ್ಡ್‌ ಕೃಪೆ:The Quint

ಮೋದಿ ಅಭಿಮಾನಿ ಮನೋರಂಜನ್

ಆರೋಪಿಗಳಲ್ಲಿ ಓರ್ವನಾದ ಕರ್ನಾಟಕದ ಮೈಸೂರಿನ ಮನೋರಂಜನ್ ಡಿ‌, 2014 ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ. ಈತ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿ ಎಂದು ಆತನ ತಂದೆ ದೇವರಾಜೇಗೌಡ ಹೇಳಿದ್ದಾರೆ.

"ನನ್ನ ಮಗ ಏನಾದರೂ ಒಳ್ಳೆಯ ಕೆಲಸ ಮಾಡಿದ್ದರೆ ಖಂಡಿತ ನಾನು ಬೆಂಬಲಿಸುತ್ತೇನೆ. ಅವನು ತಪ್ಪು ಮಾಡಿದ್ದರೆ ಅದನ್ನು ತೀವ್ರವಾಗಿ ಖಂಡಿಸುತ್ತೇನೆ, ಅವನು ಮಾಡಿದ್ದು ಶಿಕ್ಷಾರ್ಹ ಅಪರಾಧ, ಸಮಾಜದ ವಿರುದ್ಧ ಏನಾದರೂ ತಪ್ಪು ಮಾಡಿದ್ದರೆ ಅವನನ್ನು ಗಲ್ಲಿಗೇರಿಸಲಿ"

ಮೈಸೂರಿನ ವಿಜಯನಗರದಲ್ಲಿರುವ ತಮ್ಮ ಮನೆಯ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈತನ ತಂದೆ ಹೀಗೆ ಹೇಳಿದ್ದಾರೆ.

ಇವರದ್ದು ಬಿಜೆಪಿ ಬೆಂಬಲಿಗರ ಕುಟುಂಬ, ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಆತನ ತಂದೆ ಹೇಳಿದ್ದಾರೆ. ಈತ ವಿವೇಕಾನಂದರ ಕೃತಿಗಳನ್ನು ಓದುತ್ತಿದ್ದ, ಮಾತ್ರವಲ್ಲ ಈತನ ಬಳಿ 10,000 ಪುಸ್ತಕಗಳಿದ್ದವು ಎಂದು ದೇವರಾಜೇಗೌಡ ತಿಳಿಸಿದ್ದಾರೆ.

ಮನೋರಂಜನ್ ಆಧಾರ್‌ ಕಾರ್ಡ್‌ ಕೃಪೆ:The Quint

ನಿರುದ್ಯೋಗಿ ನೀಲಂ

ಸಂಸತ್ತಿನ ಹೊರಗೆ ಬಂಧಿಸಲಾದ ಇಬ್ಬರು ಆರೋಪಿಗಳಲ್ಲಿ ಒಬ್ಬರಾದ ನೀಲಂ ಹರಿಯಾಣದ ಜಿಂದ್‌ನ ಘಾಸೊ ಖುರ್ದ್ ಗ್ರಾಮದವರು. ಹಿಸಾರ್‌ನಲ್ಲಿ ನಾಗರಿಕ ಸೇವಾ ಪ್ರವೇಶ ಪರೀಕ್ಷೆಗೆ ಓದುತ್ತಿದ್ದ ಈಕೆ, ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆ ಬೇಕರಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೋರ್ವರ

"ನೀಲಂ ನನ್ನ ಸಹೋದರಿ. ಅವಳು ದೆಹಲಿಯಲ್ಲಿದ್ದಾಳೆಂದು ನಮಗೆ ಗೊತ್ತಿರಲಿಲ್ಲ. ಅವಳು ಸ್ಟಡಿ ಮಾಡಲು ಹಿಸಾರ್‌ನಲ್ಲಿದ್ದಾಳೆ ಎಂದು ನಾವು ತಿಳಿದಿದ್ದೆವು.. ಅವಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗುತ್ತಿದ್ದಳು"

ಆಕೆಯ ಕಿರಿಯ ಸಹೋದರ ANI ಗೆ ತಿಳಿಸಿದ್ದಾರೆ. ಇವರ ಪ್ರಕಾರ ನೀಲಂ BA, MA, B.Ed, M.Ed, CTET, M.Phil ಮತ್ತು NET-ಅರ್ಹತೆ ಹೊಂದಿದ್ದರೂ ನಿರುದ್ಯೋಗಿಯಾಗಿದ್ದರು.

ನಿರುದ್ಯೋಗ ಸಮಸ್ಯೆ ಕುರಿತು ಹಲವು ಬಾರಿ ಮಾತನಾಡಿದ್ದ ಈಕೆ, ರೈತ ಹೋರಾಟದಲ್ಲೂ ಭಾಗವಹಿಸಿದ್ದರು. ಈ ಬಗ್ಗೆ ಅಕೆಯ ತಾಯಿ ಸರಸ್ವತಿ ಹೀಗೆ ಹೇಳಿದ್ದಾರೆ,

<kbd>"ಅವಳು ನಿರುದ್ಯೋಗದಿಂದ ಬೇಸತ್ತಿದ್ದಳು. ಸಾಕಷ್ಟು ಓದಿದ್ದಳು. ಆದರೆ ನಾವು ಯಾವುದೇ ಪ್ರಭಾವಿ ಸಂಪರ್ಕಗಳನ್ನು ಹೊಂದಿರಲಿಲ್ಲ. ಅವಳು ಯಾವಾಗಲೂ ನಿರುದ್ಯೋಗದ ಬಗ್ಗೆ ಮಾತನಾಡುತ್ತಿದ್ದಳು. ಅವಳು ಕೆಲಸ ಪಡೆಯಲು ಸಾಧ್ಯವಾಗದೆ, ಸಾಯುವುದೇ ಉತ್ತಮ ಎಂದು ಹೇಳುತ್ತಿದ್ದಳು. ಕೊನೆಯ ಬಾರಿ ಅಕೆಯೊಂದಿಗೆ ಮಾತನಾಡುವಾಗ ಒಳ್ಲೆಯ ಡಾಕ್ಟರ್‌ ಒಬ್ಬರನ್ನು ನೋಡಬೇಕು ಎಂದು ಹೇಳಿದ್ದಳು"</kbd>

ಸಂಸತ್‌ ಆವರಣದಲ್ಲಿ ಘೋಷಣೆ ಕೂಗುತ್ತಿರುವ ನೀಲಂ ಕೃಪೆ: ANI

ದಿನಗೂಲಿ ನೌಕರ, ಸೈನಿಕನಾಗಬೇಕೆಂದಿದ್ದ ಅಮೋಲ್ ಶಿಂಧೆ!

ಸಂಸತ್ತಿನ ಹೊರಗೆ ನೀಲಂ ಜೊತೆಗೆ ಘೋಷಣೆ ಕೂಗುತ್ತಾ ಬಣ್ಣದ ಹೊಗೆ ಹಾಕಿದ ಇನ್ನೋರ್ವ ಆರೋಪಿ ಅಮೋಲ್ ಶಿಂಧೆ (25). ಈತ ಮಹಾರಾಷ್ಟ್ರದ ಲಾತೂರ್‌ ಮೂಲದವನು.

ಪಿಟಿಐ ವರದಿಯಂತೆ ಚಕುರ್ ತಹಸಿಲ್‌ನ ಝರಿ ಗ್ರಾಮದ ಶಿಂಧೆ, ಸೇನಾ ನೇಮಕಾತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿ ಬಂದಿದ್ದ.

ಬಿಎ ಪದವೀಧರರಾಗಿದ್ದ ಈತ, ಪೊಲೀಸ್ ಮತ್ತು ಸೇನಾ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾ, ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದ. ಈ ಘಟನೆಯ ನಂತರ ಆತನ ಕುಟುಂಬವನ್ನು ವಿಚಾರಣೆ ಮಾಡಲು ಲಾತೂರ್ ಪೊಲೀಸರ ತಂಡವು ಮನೆಗೆ ಭೇಟಿ ನೀಡಿದೆ.

ಅಮೋಲ್ ಶಿಂಧೆ, ಕೃಪೆ: ವಿಡಿಯೋ

ವಿಕ್ಕಿ ಶರ್ಮಾ ಮತ್ತು ಪತ್ನಿ!

ಐದು ಮತ್ತು ಆರನೇ ಆರೋಪಿಗಳು ಗುರುಗ್ರಾಮ್‌ನ ವಿಕ್ಕಿ ಶರ್ಮಾ ಮತ್ತು ಆತನ ಪತ್ನಿ.

ANI ವರದಿಯಲ್ಲಿ  ಆರ್‌ಡಬ್ಲ್ಯೂಎ ಅಧ್ಯಕ್ಷ ವಿಜಯ್ ಪರ್ಮಾರ್ ಅವರ ಹೇಳಿಕೆ ವರದಿಯಾಗಿದ್ದು, ಇದರಲ್ಲಿ ವಿಕ್ಕಿಗೆ ಸ್ಥಿರವಾದ ಉದ್ಯೋಗವಿರಲಿಲ್ಲ ಮತ್ತು ಡ್ರೈವಿಂಗ್, ಇಲ್ಲವೇ  ಸೆಕ್ಯುರಿಟಿ ಗಾರ್ಡ್‌ನಂತಹ ಕೆಲಸಗಳನ್ನು ಮಾಡುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ವಿಕ್ಕಿ ಮತ್ತು ಆತನ ಪತ್ನಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಜೋಡಿಗೆ 14 ವರ್ಷದ ಮಗಳಿದ್ದಾಳೆ.

“ಈ ರೀತಿ ಹಿಂದೆ ಮಾಡದಿದ್ದರೂ, ಆತ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಮತ್ತು ನೆರೆಹೊರೆಯವರನ್ನು ನಿಂದಿಸುತ್ತಿದ್ದನು” ಎಂದು ಪರ್ಮಾರ್ ಹೇಳಿದ್ದಾರೆ.

ಏಳನೇ ಆರೋಪಿ ಲಲಿತ್ ಝಾ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈತನ ಗುರುಗ್ರಾಮ್‌ನಲ್ಲಿ ಇರುವ ಮನೆಯಲ್ಲಿ ಆರೋಪಿಗಳು ತಂಗಿದ್ದರು. ಆರೋಪಿಗಳಿಂದ ಇದು ವರೆಗೆ ಯಾವುದೇ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿಲ್ಲ. ಪೊಲೀಸರು ಲಲಿತ್‌ ಝಾನ ಹುಡುಕಾಟದಲ್ಲಿದ್ದಾರೆ.

ಸಂಸತ್‌ ದಾಳಿ: 8 ಭದ್ರತಾ ಸಿಬ್ಬಂದಿ ಅಮಾನತು
ನವದೆಹಲಿ: ಭದ್ರತಾ ಲೋಪದ ಬಗ್ಗೆ ಚರ್ಚೆಯನ್ನು ನಡೆಸುವಂತೆ  ಪ್ರತಿಪಕ್ಷಗಳ ನಾಯಕರು ಬುಧವಾರ ಪಟ್ಟು ಹಿಡಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಗುರುವಾರ ಕೆಲ ಕಾಲ ಮುಂದೂಡಲಾಗಿದೆ.

ಈ ಸಂದರ್ಭದಲ್ಲಿ ಚೇಂಬರ್‌ನ ಸುರಕ್ಷತೆಯ ಉಸ್ತುವಾರಿ ವಹಿಸಿದ್ದ ಎಂಟು ಭದ್ರತಾ ಸಿಬ್ಬಂದಿಗಳನ್ನು ಲೋಕಸಭೆಯ ಕಾರ್ಯದರ್ಶಿ ಅಮಾನತುಗೊಳಿಸಿರುವುದು ವರದಿಯಾಗಿದೆ.

ಲೋಕಸಭೆಯಲ್ಲಿ ಪ್ರತಿಭಟನಾ ನಿರತ ಸಂಸದರಿಗೆ ಬುಧವಾರದ ಘಟನೆಯ ಬಗ್ಗೆ ಮಾತನಾಡುತ್ತಾ  ಸ್ಪೀಕರ್ ಓಂ ಬಿರ್ಲಾ ಈ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಆಗಂತುಕರು ಸಂದರ್ಶಕರ ಪಾಸ್‌ಗಳೊಂದಿಗೆ ಪ್ರವೇಶಿಸಿ , ಕಣ್ಣುರಿಯುಂಟು ಮಾಡುವ ಹೊಗೆಯನ್ನು ಬಿಟ್ಟಿದ್ದರು. ಓರ್ವ ಸಂದರ್ಶಕರ ಗ್ಯಾಲರಿಯಿಂದ ಕೆಳಗೆ ಜಿಗಿದಿದ್ದು, ಬೆಂಚುಗಳ ಮೇಲೆ ಹಾರಿ ನೇರವಾಗಿ ಸ್ಪೀಕರ್ ಕುರ್ಚಿಗೆ ಹೋಗುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಂಸತ್‌ ದಾಳಿ: ಸಂಸದ ಪ್ರತಾಪ್ ಸಿಂಹ ಬಳಿಪಾಸ್ ಪಡೆಯಲು ತಂದೆಯ ಹೆಸರನ್ನು ಬಳಸಿಕೊಂಡಿದ್ದ ಮನೋರಂಜನ್

ಸದನದ ಭದ್ರತೆಯು ಲೋಕಸಭೆಯ ಸೆಕ್ರೆಟರಿಯೇಟ್‌ನ ಜವಾಬ್ದಾರಿಯಾಗಿದೆ ಎಂದು ಬಿರ್ಲಾ ತಿಳಿಸಿದ್ದಾರೆ. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡುವ ಮೊದಲು, “ನಾನು ನಿಮ್ಮೊಂದಿಗೆ ಈ ಕುರಿತು ಚರ್ಚಿಸಿದ್ದೇನೆ… ಸಚಿವಾಲಯದ ಕಾರ್ಯನಿರ್ವಹಣೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ರೀತಿಯ ಉಲ್ಲಂಘನೆ ದುರದೃಷ್ಟಕರ, ಭವಿಷ್ಯದಲ್ಲಿ ಜಾಗರೂಕರಾಗಿರಬೇಕು ಮತ್ತು ಸುಖಾಸುಮ್ಮನೆ ಎಲ್ಲರಿಗೂ ಸಂದರ್ಶಕರ ಪಾಸ್‌ಗಳನ್ನು ನೀಡದಂತೆ ಎಲ್ಲಾ ಸಂಸದರಿಗೆ ಮನವಿ ಮಾಡಿದ್ದಾರೆ. “ಹಳೆಯ ಸಂಸತ್ತಿನಲ್ಲೂ ಇಂತಹ ಘಟನೆಗಳು ನಡೆದಿವೆ. ಘಟನೆಯ ನಂತರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಮುಂದಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಲಾಗಿದೆ ”ಎಂದು ಸಿಂಗ್ ಲೋಕಸಭೆಯಲ್ಲಿ ಸಂಸದರಿಗೆ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲೂ, ಪ್ರತಿಪಕ್ಷಗಳು ಘಟನೆಯ ಬಗ್ಗೆ ಚರ್ಚೆ ಮಾಡುವಂತೆ ಜೋರಾಗಿ ಕೂಗಿ ಒತ್ತಾಯಿಸುತ್ತಿದ್ದಂತೆ, ಸಭಾಪತಿ ಜಗದೀಪ್ ಧನಕರ್ ಅವರು ಸದನವನ್ನು ಸಂಕ್ಷಿಪ್ತವಾಗಿ ಮುಂದೂಡಿದರು.

ಸಂಸತ್‌ ದಾಳಿ: ಮನೋರಂಜನ್‌ನನ್ನು ಕಮ್ಯುನಿಸ್ಟ್‌ ಎಂದು ಬಿಂಬಿಸಲು SFI ನಾಯಕರ ಫೋಟೊ ದುರುಪಯೋಗ

ಬುಧವಾರ ಭದ್ರತಾ ಲೋಪಕ್ಕಾಗಿ ಐವರನ್ನು ಬಂಧಿಸಲಾಗಿದ್ದು, ಪೊಲೀಸರು ಆರನೇ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಗುಂಪು 18 ತಿಂಗಳಿನಿಂದ ದಾಳಿಯನ್ನು ಯೋಜಿಸಿತ್ತು.

ಅವರಲ್ಲಿ ಇಬ್ಬರು, ಮೈಸೂರಿನ ಇಂಜಿನಿಯರ್ ಡಿ ಮನೋರಂಜನ್ ಮತ್ತು ಲಕ್ನೋ ಪದವೀಧರ ಸಾಗರ್ ಶರ್ಮಾ ಅವರು ಬುಧವಾರ ಕೆಳಮನೆಗೆ ನುಗ್ಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ತೆಗೆದುಕೊಂಡರು.

ಮತ್ತಿಬ್ಬರು, ಹಿಸಾರ್‌ನ ನೀಲಂ ಆಜಾದ್ ಮತ್ತು ಲಾತೂರ್ ಪದವೀಧರ ಅನ್ಮೋಲ್ ಶಿಂಧೆ ಸಂಸತ್ತಿನ ಹೊರಗೆ ಘೋಷಣೆಗಳನ್ನು ಕೂಗಿ, ಹೊಗೆಯ ಡಬ್ಬಿಯನ್ನು ಹಾರಿಸಿದ್ದಾರೆ. ಮತ್ತು “ಸರ್ವಾಧಿಕಾರ ಸಾಧ್ಯವಿಲ್ಲ,” ಎಂದು ಕೂಗಿದ್ದಾರೆ.

ಬಂಧನಕ್ಕೊಳಗಾದ ಐದನೇ ವ್ಯಕ್ತಿ ಗುರ್‌ಗಾಂವ್‌ನ ಲಲಿತ್ ಝಾ ಮನೆಯಲ್ಲಿ ಇವರು ತಂಗಿದ್ದರು. ವಿಕ್ಕಿ ಅಥವಾ ವಿಶಾಲ್ ಶರ್ಮಾ ಎಂಬ ಶಂಕಿತ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಅಧಿಕಾರವನ್ನು ಬಳಸಿ ಮನೋರಂಜನ್ ಮತ್ತು ಶರ್ಮಾ ಸಂದರ್ಶಕರ ಪಾಸ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಗೃಹ ಸಚಿವಾಲಯವು ಸಿಆರ್‌ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.

ಭದ್ರತಾ ಲೋಪ : ಲೋಕಸಭೆ ಸದನಕ್ಕೆ ನುಗ್ಗಿದ ಆಗಂತುಕರು, ಸಂಸದ ಪ್ರತಾಪ್ ಸಿಂಹ ಹೆಸರಿನಲ್ಲಿತ್ತಾ ಪಾಸ್!?

ಪುಲ್ವಾಮಾ ದಾಳಿ: ಹುತಾತ್ಮ ಸೈನಿಕರ ಮನೆಯವರಿಂದ ನವೆಂಬರ್‌ 26ಕ್ಕೆ ಕೇಂದ್ರದ ವಿರುದ್ದ ಪ್ರತಿಭಟನೆ
ನವದೆಹಲಿ, ಅಕ್ಟೋಬರ್.‌18:  2019 ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಯೋಧರ ಕುಟುಂಬದ ಸದಸ್ಯರು ಸಂಭವಿಸಿದ ಲೋಪಗಳಿಗೆ ಹೊಣೆಗಾರಿಕೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿ ನವೆಂಬರ್ 26 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.

ಮಾಜಿ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ ಬ್ಯಾನರ್‌ನಡಿಯಲ್ಲಿ (Confederation of Ex-Paramilitary Forces Welfare Associations), ಹತ್ಯೆಗೀಡಾದ ಯೋಧರ ಪತ್ನಿಯರು ಮತ್ತು  ಕುಟುಂಬ ಸದಸ್ಯರು ನವೆಂಬರ್ 26, ಸಂವಿಧಾನ ದಿನದಂದು ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಲಿದ್ದಾರೆ.

“ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್‌ಪಿಎಫ್ ಜವಾನರ ಪತ್ನಿಯರು ಮತ್ತು ಕುಟುಂಬ ಸದಸ್ಯರನ್ನು ಕರೆತರಲು ನಾವು ಯೋಜಿಸಿದ್ದೇವೆ. ಪುಲ್ವಾಮಾ ದಾಳಿಯಾಗಿ ನಾಲ್ಕು ವರ್ಷಗಳು ಕಳೆದಿವೆ ಮತ್ತು ನಮ್ಮ 40 ಯೋಧರ ಹತ್ಯೆಗೆ ಕಾರಣವಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿದೆ,” ಎಂದು ಸಂಘದ ರಾಷ್ಟ್ರೀಯ ಸಂಯೋಜಕ ರಣಬೀರ್ ಸಿಂಗ್ ತಿಳಿಸಿದ್ದು ದಿ ಟೆಲಿಗ್ರಾಫ್‌ ವರದಿ ಮಾಡಿದೆ.

ಚುನಾವಣೆಯ ಸಮಯದಲ್ಲಿ ಯಾವಾಗಲೂ ರಾಷ್ಟ್ರೀಯತೆಯನ್ನು ಪ್ರಚಾರಕ್ಕೆ  ಬಳಸುವ ನರೇಂದ್ರ ಮೋದಿ ಸರ್ಕಾರವು 40 ಸಿಆರ್‌ಪಿಎಫ್ ಸಿಬ್ಬಂದಿಗಳ ಹತ್ಯೆಗೆ ಕಾರಣವಾದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ನೀಡಿಲ್ಲ ಎಂದು ಅವರು ಅವರು ಆರೋಪಿಸಿದ್ದಾರೆ. ಫೆಬ್ರವರಿ 14, 2019 ರಂದು ಸೈನಿಕರು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡು ನಲವತ್ತು ಸೈನಿಕರು ಹತರಾಗಿದ್ದರು.

“ಹತರಾದ ಈ 40 ಸಿಆರ್‌ಪಿಎಫ್ ಸೈನಿಕರ ಕುಟುಂಬಗಳಿಗೆ ಗುಪ್ತಚರ ವರದಿಗಳ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಎಂದು ತಿಳಿದುಕೊಳ್ಳುವ ಎಲ್ಲಾ ಹಕ್ಕುಗಳಿವೆ” ಎಂದು ಸಿಂಗ್ ಹೇಳಿದ್ದಾರೆ.

ಮೋದಿ ಸರ್ಕಾರದ ಗುಪ್ತಚರ ವೈಫಲ್ಯದ ಪರಿಣಾಮವಾಗಿ ದಾಳಿ ನಡೆದಿದೆ ಎಂದು ಆರೋಪಿಸಿ ದಿ ವೈರ್‌ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ನೀಡಿದ ಸಂದರ್ಶನ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಶನದಲ್ಲಿ ಸೈನಿಕರಿಗೆ ಕೇಂದ್ರ ಸರ್ಕಾರವು ವಿಮಾನವನ್ನು ನೀಡಲು ನಿರಾಕರಿಸಿದ್ದು ಅವರ ಹತ್ಯೆಗೆ ಕಾರಣ ಎಂದು ನೇರ ಆರೋಪ ಮಾಡಿದ್ದರು. ಇದನ್ನು ಮೋದಿಯವರು ಗಮನಕ್ಕೆ ತಂದಾಗ ಅವರು “ತುಮ್ ಅಭಿ ಚುಪ್ ರಹೋ (ನೀನೂ ಈಗ ಸುಮ್ಮನಿರು)” ಎಂದು ಹೇಳಿದ್ದರು ಎಂದು ಮಲಿಕ್ ಹೇಳಿದ್ದರು.

ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ವಿಮಾ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸತ್ಯಪಾಲ್‌ ಮಲಿಕ್ ವಿರುದ್ಧ ಸಮನ್ಸ್ ಜಾರಿ ಮಾಡಿತು.

ಸತ್ಯಪಾಲ್‌ ಮಲಿಕ್‌ ಅವರ ಆರೋಪಗಳನ್ನು ಉಲ್ಲೇಖಿಸಿ ರಣಬೀರ್ ಸಿಂಗ್, “ಇದಾಗಿ ನಾಲ್ಕು ವರ್ಷಗಳು ಕಳೆದಿವೆ, ಆದರೆ ಮೋದಿ ಸರ್ಕಾರವು ಹೊಣೆಗಾರಿಕೆಯನ್ನು ಸರಿಪಡಿಸಲು ವಿಫಲವಾಗಿದೆ. ಚುನಾವಣೆ ಗೆಲ್ಲುವುದೊಂದೇ ಅವರ ಆದ್ಯತೆ. ಸಂಸತ್ ಚುನಾವಣೆಗೂ ಮುನ್ನ ಈ ಬಾರಿಯೂ ಇದೇ ರೀತಿಯ ದಾಳಿಗಳು ನಡೆಯಬಹುದು. ಈ ದೇಶದ ಜನರು ಎಚ್ಚರದಿಂದಿರಬೇಕು” ಎಂದು ಕೇಂದ್ರ ಸರ್ಕಾರವನ್ನು ಆರೋಪಿಸಿದ್ದಾರೆ.

“ಇದರ ಬದಲು ಅವರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಿಟ್ಟು ಬಾಯಿಮುಚ್ಚಿಸುವ ಪ್ರಯತ್ನವಾಗುತ್ತಿದೆ,” ಎಂದು ಮಲಿಕ್‌ ಅವರಿಗೆ ಸಿಬಿಐ ಕಳಿಸಿರುವ ಸಮನ್ಸ್‌ ಉಲ್ಲೇಖಿಸಿ ಸಿಂಗ್‌ ಹೇಳಿದ್ದಾರೆ.

ಲೋಕಸಭೆ ಚುನಾವಣೆಯ ವೇಳೆ 40 ಸಿಆರ್‌ಪಿಎಫ್ ಯೋಧರ ಹತ್ಯೆ ಮತ್ತು ಬಾಲಾಕೋಟ್‌ನಲ್ಲಿ ನಡೆದ ಐಎಎಫ್ ದಾಳಿಯನ್ನು ಮೋದಿ ರಾಜಕೀಯವಾಗಿ ಬಳಸಿಕೊಂಡಿದ್ದಾರೆ ಮತ್ತು ಮತದಾರರು ತಮ್ಮ ಮತವನ್ನು ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿಗೆ  ಹತರಾದ ವೀರ ಯೋಧರಿಗೆ ಅರ್ಪಿಸುವಂತೆ ಕೇಳಿಕೊಂಡಿದ್ದರು ಎಂದು ಮಲಿಕ್ ಹೇಳಿದ್ದರು.  ಪುಲ್ವಾಮಾ ದಾಳಿಯು 2019 ರ ಸಂಸತ್ ಚುನಾವಣೆಗೆ ಎಂಟು ವಾರಗಳ ಮೊದಲು ನಡೆದಿತ್ತು

ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಹಲ್ಲೆ: ಎಚ್‌.ಡಿ.ಕೆ ಆಕ್ರೋಶ
ಬೆಳಗಾವಿ: ಬೆಳಗಾವಿಯ ಗೋಗ್ಟೆ ಕಾಲೇಜ್‌ ಆಫ್‌ ಕಾಮರ್ಸ್‌ʼನ ಶ್ರೇಯಸ್‌ ಎಂಬ ವಿದ್ಯಾರ್ಥಿ, ಜಿಲ್ಲೆಯ ಅಂತರ್‌ ಕಾಲೇಜು ಉತ್ಸವದಲ್ಲಿ ಕನ್ನಡ ಧ್ವಜವನ್ನು ಹಾರಿಸಿದ ವಿಧ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆದಿದೆ. ನಂತರ ವಿದ್ಯಾರ್ಥಿಯು ಹಲ್ಲೆ ನಡೆಸಿದವರ ಮೇಲೆ ಪೊಲೀಸರಿಗೆ ದೂರು ನೀಡಲು ಹೋದಾಗ, ಪೊಲೀಸರು ಕೂಡ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದರ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ. ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ ಎಂದು ಕಿಡಿಕಾರಿದ್ದಾರೆ.

ಡಿಸಿಪಿ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳು ಇಬ್ಬರು ಬಾಲಕನ ವಿಷಯದಲ್ಲಿ ಕ್ರೂರವಾಗಿ ವರ್ತಿಸಿ ದರ್ಪ ತೋರಿಸಿರುವುದು ಸರಿಯಲ್ಲ. ಡಿಸಿಪಿ ಅಧಿಕಾರಿ ಆ ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿ, ಬೂಟು ಕಾಲಿನಿಂದ ಒದ್ದಿರುವುದು ಅಕ್ಷಮ್ಯ ಹಾಗೂ ಅನಾಗರಿಕ ವರ್ತನೆ ಎಂದು ಗಡುಗಿದ್ದಾರೆ.

ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಬಾಲಕನ ಮೇಲೆ ಹಲ್ಲೆ ನಡೆಸಿದ ಇತರೆ ಬಾಲಕರನ್ನು ವಶಕ್ಕೆ ಪಡೆದು, ಅವರಿಗೆ ಚಿತಾವಣೆ ನೀಡಿದವರನ್ನು ಬಂಧಿಸಬೇಕು ಹಾಗೂ ಕನ್ನಡ ಬಾವುಟ ಹಾರಿಸಿದ ಬಾಲಕನ ಮೇಲೆ ದುಂಡಾವರ್ತನೆ ತೋರಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಬೆಳಗಾವಿಯಲ್ಲಿ ಗೊಂದಲ ಹೆಚ್ಚಾಗುತ್ತಿದೆ. ಪ್ರತಿ ಸೂಕ್ಷ್ಮ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯ ಕೈಯ್ಯಲ್ಲಿ ಕನ್ನಡ ಮತ್ತು ಕನ್ನಡಿಗರು ಸುರಕ್ಷಿತವಾಗಿಲ್ಲ ಎನ್ನುವುದು ಸ್ಪಷ್ಟ. ಬೆಳಗಾವಿ ವಿಷಯ ಗಮನಿಸಿದರೆ ಅದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ನಡೆದಿರುವ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತೇನೆ.
ದೂರು ಕೊಡಲು ಹೋದ ಆ ವಿದ್ಯಾರ್ಥಿ ಮೇಲೆ ಪೊಲೀಸರು ಕೂಡ ಅಮಾನುಷವಾಗಿ ಹಲ್ಲೆ ನಡೆಸಿರುವುದು ಕನ್ನಡಕ್ಕೆ, ಕರ್ನಾಟಕಕ್ಕೆ ಬಗೆದ ದೊಡ್ಡ ದ್ರೋಹ.1/4#ಕನ್ನಡ #ಬೆಳಗಾವಿ
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 1, 2022

ತೆಲಂಗಾಣ ಸಂಸದ ಅರವಿಂದ್‌ ಧರ್ಮಪುರಿ ಮನೆ ಧ್ವಂಸ : ಬಿಜೆಪಿ ಕಿಡಿ
ಬೆಂಗಳೂರು : ತೆಲಂಗಾಣದ ನಿಝಾಮಾಬಾದ್‌ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಅವರ ಮನೆ ಮೇಲೆ ಗೂಂಡಾವರ್ತನೆ ತೋರಿದ ಟಿಆರ್‌ಎಸ್‌ ಕಾರ್ಯಕರ್ತರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಬಿಜೆಪಿ ದಾಳಿಯ ವಿರುದ್ಧ ಕಿಡಿಕಾರಿದೆ.

ನವೆಂಬರ್‌ 18, ಶುಕ್ರವಾರದಂದು ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಭಾರತ ರಾಷ್ಟ್ರ ಸಮಿತಿ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಅವರ ಮನೆಯ ಮೇಲೆ ದಾಳಿ ಮಾಡಿ ಮನೆಯನ್ನು ಧ್ವಂಸಗೊಳಿಸಿದ್ದಾರೆ.

ತೆಲಂಗಾಣದ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿಯವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಲು ಬಯಸಿದ್ದಾರೆ ಎಂದು ಅರವಿಂದ್‌ ಅವರ ಮಗಳು ಕವಿತಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕರೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದು, ಟಿಆರ್‌ಎಸ್‌ ಕಾರ್ಯಕರ್ತರು ಸಂಸದರ ಮನೆಯನ್ನು ಮುತ್ತಿಗೆ ಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ , ʼ ತೆಲಂಗಾಣದ ನಿಝಾಮಾಬಾದ್‌ ಬಿಜೆಪಿ ಸಂಸದ ಅರವಿಂದ್‌ ಧರ್ಮಪುರಿ ಅವರ ಮನೆ ಮೇಲೆ ಆಡಳಿತಾರೂಢ ಟಿಆರ್‌ಎಸ್‌ ಪಕ್ಷದ ಗೂಂಡಾಗಳು ದಾಳಿ ಮಾಡಿರುವುದನ್ನು ರಾಜ್ಯ ಬಿಜೆಪಿ ಬಲವಾಗಿ ಖಂಡಿಸುತ್ತದೆ. ದ್ವೇಷ ರಾಜಕಾರಣದ ಭಾಗವಾಗಿ ಗೂಂಡಾವರ್ತನೆ ತೋರಿದ ಟಿಆರ್‌ಎಸ್‌ ಕಾರ್ಯಕರ್ತರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.