Bajarangdal – Peepal Media

ಬಜರಂಗದಳ ಅಸ್ತಿತ್ವಕ್ಕೆ ಬಂದಿದ್ದು ಯಾವಾಗ? ಇದಕ್ಕೂ ಕಾಂಗ್ರೆಸ್ಸಿಗೂ ಇದೆಯಾ ಸಂಬಂಧ?
ಬಜರಂಗದಳ ಮತ್ತೆ ಚರ್ಚೆಯಲ್ಲಿದೆ. ಹರಿಯಾಣದ ನುಹ್ (ಮೇವಾತ್) ನಲ್ಲಿ ನೆಡದ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಬಿಟ್ಟು ಬಜರಂಗಿ‌ ಅಲಿಯಾಸ್ ರಾಜ್‌ಕುಮಾರ್ ‌ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಟ್ಟು ಸ್ವತಃ ತಾನು ಬಜರಂಗದಳದ ಸದಸ್ಯನೆಂದು ಘೋಷಿಸಿಕೊಂಡಿದ್ದರೂ, ಅವನಿಗೂ ಬಜರಂಗದಳಕ್ಕೂ ಯಾವುದೇ ಸಂಬಂಧವಿಲ್ಲವೆಂದು ವಿಶ್ವ ಹಿಂದೂ ಪರಿಷದ್‌ ಘೋಷಿಸಿದೆ. ಕರ್ನಾಟಕದ ಚುನಾವಣೆಯಲ್ಲೂ ಬಜರಂಗದಳ ನಿಷೇಧದ ಕುರಿತು ಮಾತುಗಳು ಕೇಳಿ ಬಂದಿದ್ದವು ಮತ್ತು ಹಲವೆಡೆ ಈ ಮಾತು ಚುನಾವಣೆಯ ಮೇಲೆ ಪ್ರಭಾವ ಬೀರಿತ್ತು ಎನ್ನುವ ಮಾತುಗಳೂ ಕೇಳಿ ಬಂದಿದ್ದವು.

ಈಗ ಅತ್ತ ಮಧ್ಯಪ್ರದೇಶದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದಂತೆ ಮತ್ತೆ ಅಲ್ಲಿಯೂ ಬಜರಂಗ ನಿಷೇಧದ ವಿಷಯ ಮುನ್ನೆಲೆಗೆ ಬಂದಿದೆ. ಆದರೆ ದಿಗ್ವಿಜಯ ಸಿಂಗ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಬಜರಂಗದಳ ನಿಷೇಧಿಸುವ ಯಾವುದೇ ಯೋಚನೆಯಿಲ್ಲ, ಆದರೆ ಹಿಂಸಾತ್ಮಕ ಚಟುವಟಿಕೆಯಲ್ಲಿ ಯಾರು ಪಾಲ್ಗೊಂಡರೂ ಬಿಡುವುದಿಲ್ಲ ಎನ್ನುವ ಕರ್ನಾಟಕ ಕಾಂಗ್ರೆಸ್‌ ಮಾದರಿಯ ಹೇಳಿಕೆಯನ್ನೇ ನೀಡಿದ್ದಾರೆ.

ಇಂತಹ ಬಜರಂಗದಳ ಆರಂಭಗೊಂಡಿದ್ದು ಹೇಗೆ? ಅದರ ಹಿನ್ನೆಲೆ ಏನು ಎನ್ನುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ಮುಂದೆ ಓದಿ…

‘ಆಪರೇಷನ್ ಬ್ಲೂ ಸ್ಟಾರ್’….

ಅದು ಜುಲೈ 1984..’ಆಪರೇಷನ್ ಬ್ಲೂ ಸ್ಟಾರ್’ ಮುಗಿದ ಒಂದು ತಿಂಗಳಾಗಿತ್ತು. ಆದರೆ, ಪಂಜಾಬ್‌ನಲ್ಲಿ ಹಿಂದೂಗಳ ವಿರುದ್ಧ ಆಗಾಗ್ಗೆ ಹಿಂಸಾಚಾರದ ಘಟನೆಗಳು ನಡೆಯುತ್ತಲೇ ಇದ್ದವು. ಏತನ್ಮಧ್ಯೆ, ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ವಿಮೋಚನೆಗಾಗಿ ವಿಶ್ವ ಹಿಂದೂ ಪರಿಷತ್ ಸಮಿತಿಯೊಂದನ್ನು ರಚಿಸಿತು. ಸಮಿತಿಯ ನೇತೃತ್ವವನ್ನು ಗೋರಖನಾಥ ಮಠದ ಮುಖ್ಯಸ್ಥ ಮಹಂತ್ ವೈದ್ಯನಾಥ್ ವಹಿಸಿದ್ದರೆ, ಕಾಂಗ್ರೆಸ್ ನಾಯಕ ದೌ ದಯಾಳ್ ಖನ್ನಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸೆಪ್ಟೆಂಬರ್ 1984ರಲ್ಲಿ, ಸಮಿತಿಯು ಬಿಹಾರದ ಸೀತಾಮಡಿಯಿಂದ ಅಯೋಧ್ಯೆಗೆ 400 ಕಿಮೀ ದೂರದ ಯಾತ್ರೆಯನ್ನು ಪ್ರಾರಂಭಿಸಿತು.

ಕತೆಯನ್ನು ಮುಂದುವರೆಸುವ ಮೊದಲು ದೌ ದಯಾಳ್ ಖನ್ನಾ ಎನ್ನುವ ಕಾಂಗ್ರೆಸ್ ನೇತಾರನ ಕುರಿತು ಒಂದಷ್ಟು ತಳಿಯೋಣ ಬನ್ನಿ.

1935ರಲ್ಲಿ, ದೌ ದಯಾಳ್ ಖನ್ನಾ ಮೊರಾದಾಬಾದ್ ಪುರಸಭೆಯ ಸದಸ್ಯರಾಗಿ ಆಯ್ಕೆಯಾದರು. ದೌ ದಯಾಳ್ ಖನ್ನಾ ಅವರು 1937ರಲ್ಲಿ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. 1940ರಲ್ಲಿ, ಸತ್ಯಾಗ್ರಹ ಚಳವಳಿಯಲ್ಲಿ ಅವರಿಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು. 1942 ಲ್ಲಿ, ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಜೈಲಿಗೆ ಹೋದರು ಮತ್ತು ಅವರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿದರು.

ದೌ ದಯಾಳ್ ಖನ್ನಾ ಅವರ ಪ್ರಯತ್ನದಿಂದಾಗಿ, ಮೊರಾದಾಬಾದ್ ಪುರಸಭೆಯು ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಗೋಹತ್ಯೆಯನ್ನು ನಿಷೇಧಿಸಿತು. ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾಗಿ, ಅವರು 1974 ರವರೆಗೆ ಉತ್ತರ ಪ್ರದೇಶ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಚುನಾಯಿತ ಸದಸ್ಯರಾಗಿದ್ದರು. 1962-1967ರಲ್ಲಿ ಅವರು ಉತ್ತರ ಪ್ರದೇಶ ಸರ್ಕಾರದ ಆರೋಗ್ಯ ಸಚಿವರಾಗಿದ್ದರು. 25 ವರ್ಷಗಳ ಕಾಲ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು.

ದೌ ದಯಾಳ್ ಖನ್ನಾ

ಸರಯೂ ದಡದಲ್ಲಿ ಅದ್ಧೂರಿ ಕಾರ್ಯಕ್ರಮ

ಯಾತ್ರೆಯ ಮೆರವಣಿಗೆಗೆ ಮುನ್ನ ಟ್ರಕ್‌ ಒಂದರಲ್ಲಿ ರಾಮ ಮತ್ತು ಸೀತೆಯ ವಿಗ್ರಹಗಳನ್ನು ಸ್ಥಾಪಿಸಲಾಗಿತ್ತು. ಹಿಂದೆ ವಾಹನಗಳಲ್ಲಿ ಸಾಧು ಸಂತರು, ಸಾವಿರಾರು ಜನ ಬರುತ್ತಿದ್ದರು. ಅಕ್ಟೋಬರ್ 6, 1984ರಂದು, ಯಾತ್ರೆಯು ಅಯೋಧ್ಯೆಯ ಸರಯೂ ಸೇತುವೆ ಬಳಿ ಕೊನೆಗೊಂಡಿತು. ಅಕ್ಟೋಬರ್ 7ರಂದು ಸರಯೂ ತೀರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು ಎಂದು ಹಿರಿಯ ಪತ್ರಕರ್ತ ವಿನಯ್ ಸೀತಾಪತಿ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ರಾಮ ಜನ್ಮ ಭೂಮಿಯನ್ನು ಬೆಂಬಲಿಸುವವರಿಗೆ ಮತ ನೀಡಿ

ಅಂದು ನಡೆದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ದೊಡ್ಡ ಚಿತ್ರವೊಂದನ್ನು ಇರಿಸಲಾಗಿತ್ತು. ಈ ಚಿತ್ರದಲ್ಲಿ ನಿರಾಯುಧ ಸಂತರ ಮುಂದೆ ಖಡ್ಗಗಳನ್ನು ಹಿಡಿದು ನಿಂತಿರುವ ಮುಸ್ಲಿಮರನ್ನು ತೋರಿಸಲಾಗಿತ್ತು. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗಾಗಿ ಮುಸ್ಲಿಮರು ಈ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಒತ್ತಾಯಿಸಿದರು. ಈ ಭೂಮಿ ಹಾಗೂ ಉಳಿದ ಎರಡು ಪುಣ್ಯ ಕ್ಷೇತ್ರಗಳನ್ನು (ಕಾಶಿ, ಮಥುರಾ) ಮುಕ್ತಿಗೊಳಿಸಲು ಯಾರೇ ಪ್ರಯತ್ನಿಸಿದರೂ ಮುಂದಿನ ಚುನಾವಣೆಯಲ್ಲಿ ಅವರಿಗೆ ಹಿಂದೂಗಳು ಮತ ನೀಡಬೇಕು ಎಂದು ಕಾರ್ಯಕ್ರಮದಲ್ಲಿ ನಿರ್ಣಯಿಸಲಾಯಿತು.

ವಾನರಸೇನೆಯಿಂದ ಪ್ರೇರಿತವಾಗಿರುವ ಬಜರಂಗದಳ

ಅಕ್ಟೋಬರ್ 8, 1984ರಂದು, ವಿಶ್ವ ಹಿಂದೂ ಪರಿಷತ್ತು ವಾನರಸೇನೆಯಿಂದ ಪ್ರೇರಿತ ಬಜರಂಗದಳದ ರಚನೆಯನ್ನು ಘೋಷಿಸಿತು. ವಾನರಸೇನೆಯು ಸೀತಾಮಾತೆಯನ್ನು ಉಳಿಸಲು ರಾಮನಿಗೆ ಸಹಾಯ ಮಾಡಿತ್ತು. ರಾಮನ ಜನ್ಮಸ್ಥಳವನ್ನು ಮರಳಿ ಪಡೆಯುವುದು ಇದರ ಉದ್ದೇಶವಾಗಿತ್ತು. ಅದರ ನಂತರ, ಬಜರಂಗದಳವು ಕೆಲವು ವರ್ಷಗಳ ಕಾಲ ರಾಮಜನ್ಮಭೂಮಿ ಚಳವಳಿಯ ಪ್ರಮುಖ ಭೂಮಿಕೆಯಲ್ಲಿತ್ತು. ಡಿಸೆಂಬರ್ 6, 1992ರಂದು ಭಜರಂಗದಳ ನೇತೃತ್ವದ ಕರಸೇವಕರು ಅಯೋಧ್ಯೆಯಲ್ಲಿ ವಿವಾದಾತ್ಮಕ ಕಟ್ಟಡವನ್ನು ಕೆಡವಿದರು. ಅದರ ನಂತರ ಸರ್ಕಾರ ಬಜರಂಗದಳವನ್ನು ನಿಷೇಧಿಸಿತು.

ವಿಎಚ್‌ಪಿ ವೆಬ್‌ಸೈಟ್‌ನಲ್ಲಿ..

ವಿಶ್ವ ಹಿಂದೂ ಪರಿಷತ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಬಜರಂಗದಳ ಯಾರ ವಿರುದ್ಧವೂ ಪ್ರತಿಭಟಿಸಲು ಹುಟ್ಟಿಕೊಂಡಿಲ್ಲ. ಹಿಂದೂಗಳನ್ನು ಸವಾಲು ಮಾಡುವ ಕೋಮು ವಿರೋಧಿ ಶಕ್ತಿಗಳಿಂದ ರಕ್ಷಿಸಲು ಇದನ್ನು ಸ್ಥಾಪಿಸಲಾಗಿತ್ತು. ಆ ಸಮಯದಲ್ಲಿ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಸ್ಥಳೀಯ ಯುವಕರಿಗೆ ಭಜರಂಗದಳವನ್ನು ವಹಿಸಲಾಯಿತು. ನಂತರ, ದೇಶಾದ್ಯಂತದ ಯುವಕರು ಈ ಸಂಸ್ಥೆಗೆ ಸೇರಿದರು. 1993ರಲ್ಲಿ, ಮೊದಲ ಬಾರಿಗೆ, ಭಜರಂಗದಳದ ಅಖಿಲ ಭಾರತ ಸಾಂಸ್ಥಿಕ ರೂಪವನ್ನು ನೀಡಲು ನಿರ್ಧರಿಸಲಾಯಿತು. ಎಲ್ಲಾ ರಾಜ್ಯಗಳಲ್ಲಿ ಬಜರಂಗದಳ ಶಾಖೆಗಳನ್ನು ರಚಿಸಲಾಯಿತು.

ಹರಿಯಾಣ : ಶಾಂತಿ ಕದಡುತ್ತಿರುವ ವಿಎಚ್‌ಪಿ ಹಾಗೂ ಭಜರಂಗದಳ ನಿಷೇಧಕ್ಕೆ ಕಾಫ್ ಪಂಚಾಯತ್ ಕರೆ
ಹರಿಯಾಣ : ರಾಜ್ಯದ ನುಹ್ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಗಳ ನಂತರ ಹರಿಯಾಣಾದ ಸುಮಾರು 50 ಪಂಚಾಯತ್‌ಗಳು ಮುಸ್ಲಿಮರನ್ನು ಬಹಿಷ್ಕರಿಸಲು ಕರೆ ನೀಡಿವೆ. ಆದರೆ ರಾಜ್ಯದಲ್ಲಿ ತಮ್ಮದೇ ಆದ ಬಲ ಹೊಂದಿರುವ ರೈತ ಸಂಘಟನೆಗಳು ಹಾಗೂ ಖಾಫ್ ಪಂಚಾಯತ್ ಗಳು ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಮುಸ್ಲಿಂ ಸಮುದಾಯದವರ ಬಹಿಷ್ಕಾರಕ್ಕೆ ವಿರೋಧ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಹರಿಯಾಣದ ಹಿಸಾರ್ ಬಾಸ್ ಗ್ರಾಮದಲ್ಲಿ ಖಾಫ್ ಸಭೆಯನ್ನು ಆಯೋಜಿಸಲಾಗಿತ್ತು. ಮುಸಲ್ಮಾನರಿಗೆ ರಕ್ಷಣೆಯ ಪ್ರಮುಖ ಉದ್ದೇಶದಿಂದ ಈ ಸಭೆಯನ್ನು ನಡೆಸಲಾಗಿತ್ತು. ಅಷ್ಟೆ ಅಲ್ಲದೆ ರಾಜ್ಯದಲ್ಲಿ ಶಾಂತಿ ಕದಡುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳವನ್ನು ನಿಷೇಧಿಸಲು ಖಾಫ್ ಸಭೆಯಲ್ಲಿ ಕರೆ ನೀಡಿವೆ.

ಬುಧವಾರ ಭಾರತೀಯ ಕಿಸಾನ್ ಮಜ್ದೂರ್ ಯೂನಿಯನ್ ಬ್ಯಾನರ್‌ ಅಡಿಯಲ್ಲಿ ಹಿಸಾರ್ ಬಾಸ್ ಗ್ರಾಮದಲ್ಲಿ ಮಹಾ ಪಂಚಾಯತ್ ಅನ್ನು ಆಯೋಜಿಸಲಾಗಿತ್ತು. ಈ ಮಹಾಪಂಚಾಯತ್ ನಲ್ಲಿ ರಾಜ್ಯಾದ್ಯಂತ ಸುಮಾರು 2,000 ರೈತ ಮುಖಂಡರು ಭಾಗಿಯಾಗಿದ್ದರು. ಮಹಾಪಂಚಾಯತ್ ನಲ್ಲಿ ಕೋಮು ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸಲು ಕರೆ ನೀಡಲಾಗಿದೆ.

ಮಹಾಪಂಚಾಯತ್ ಆಯೋಜಿಸಿದ್ದ ರೈತ ನಾಯಕ ಸುರೇಶ್ ಕೋಠ್ ಮಾತನಾಡಿ, “ರಾಜ್ಯದಲ್ಲಿ ಕೋಮು ಸೌಹಾರ್ದ ಕದಡಲು ಕೆಲವರು ಯತ್ನಿಸಿದ್ದಾರೆ. ಅವರಿಗೆ ಧೈರ್ಯವಿದ್ದರೆ ಈ ಮಹಾಪಂಚಾಯತ್ ನಡೆವ ಜಾಗಕ್ಕೆ ಬಂದು ಮುಸಲ್ಮಾನರಿಗೆ ಪ್ರವೇಶ ನೀಡುವುದನ್ನು ಹೇಗೆ ತಡೆಯುವರು ನೋಡೋಣ” ಎಂದು ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ಮೇವಾತ್ ನಲ್ಲಿ ಶಾಂತಿ ನೆಲೆಸುವಂತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ನುಹ್ ಸೇರಿದಂತೆ ಹರಿಯಾಣದ ವಿವಿಧ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದ ಅಡಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ಗಲಭೆಗೆ ಪ್ರಮುಖ ಕಾರಣರಾದ ಮೋನು ಮಾನೇಸರ್ ಹಾಗೂ ಬಿಟ್ಟು ಬಜರಂಗಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ. ಪ್ರಚೋದನಕಾರಿ ಭಾಷಣಗಳನ್ನು ಹಾಕಿ ಘರ್ಷಣೆಗೆ ಪ್ರಚೋದನೆ ನೀಡುವ ವಿಡಿಯೋಗಳನ್ನು ಶೇರ್ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮಹಾ ಪಂಚಾಯತ್ ನಲ್ಲಿ ಒತ್ತಾಯಿಸಲಾಯಿತು.

ಸಧ್ಯ ಈ ಬಗ್ಗೆ ವಿಸ್ತೃತವಾಗಿ ವರದಿ ಮಾಡಿರುವ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ (The New Indian Express) ಹಿಸಾರ್ ಬಾಸ್ ಗ್ರಾಮದಲ್ಲಿ ನಡೆದ ಖಾಫ್ ಸಭೆಯ ಮಾಹಿತಿ ಹೊರಹಾಕಿದೆ. ಪತ್ರಿಕೆಗೆ ನೀಡಿರುವ ಮಾಹಿತಿ ಪ್ರಕಾರ ನುಹ್ ಜಿಲ್ಲೆಯಲ್ಲಿ ಈಗ ನಿಷೇಧಾಜ್ಞೆ ಹೇರಿರುವ ಹಿನ್ನೆಲೆಯಲ್ಲಿ ಶಾಂತಿ ನೆಲೆಸಿದ ನಂತರ ಎರಡೂ ಸಮುದಾಯಗಳ ಮುಖಂಡರೊಂದಿಗೆ ಶಾಂತಿ ಸ್ಥಾಪನೆಯ ಮಾತುಕತೆ ನಡೆಸಲಾಗುವುದು ಎಂದು ಸರ್ವಖಾಪ್ ಪಂಚಾಯತ್‌ನ ರಾಷ್ಟ್ರೀಯ ವಕ್ತಾರ ಸುಬೆ ಸಿಂಗ್ ಸ್ಮೈನ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ವಿಎಚ್‌ಪಿ ಹಾಗೂ ಭಜರಂಗದಳ ಹೊಂಚು ಹಾಕಿ ಕುಳಿತಿವೆ. ಇನ್ನು ವರ್ಷದ ಒಳಗೇ ಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಮುದಾಯಗಳನ್ನು ವಿಭಜಿಸುವ ಹಾಗೂ ರಾಜ್ಯದ ಮತದಾರರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ವಿಎಚ್‌ಪಿ ಹಾಗೂ ಭಜರಂಗದಳ ಪಿತೂರಿ ನಡೆಸಿವೆ. ಹೀಗಾಗಿ ವಿಎಚ್‌ಪಿ ಹಾಗೂ ಭಜರಂಗದಳದ ಸಂಪೂರ್ಣ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಕರೆ ನೀಡಿವೆ‌.

ಪ್ರಚೋದನೆ ಭಾಷಣ ಪ್ರಕರಣ: ಐವರ ಬಂಧನ : ರೌಡಿಶೀಟರ್ ರಘುಗಾಗಿ ಹುಡುಕಾಟ
ಸಕಲೇಶಪುರ: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂದಿಸಿದಂತೆ ತಲೆಮರೆಸಿಕೊಂಡಿರುವ ಭಜರಂಗದಳ ಮುಖಂಡ ರಘು ಸಹಚರರು ಎಂದು ಗುರುತಿಸಿಕೊಂಡಿರುವ ಐವರನ್ನು ಸಕಲೇಶಪುರ ಟೌನ್ ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಭಜರಂಗದಳ ಸಕ್ರಿಯ ಕಾರ್ಯಕರ್ತನಾಗಿ ಹಾಗೂ ಬೆಳಗೋಡು ಅರೋಗ್ಯ ಇಲಾಖೆಯಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸಮಾಡುವ ಶ್ರೀಕಾಂತ್, ಶ್ರೀಜೀತ್, ಪ್ರತಾಪ್, ಹಾಗೂ ಇತರೆ ಇಬ್ಬರನ್ನೂ ಬಂಧಿಸಲಾಗಿದೆ.
ಇನ್ನೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.
ರೌಡಿ ಶೀಟರ್ ರಘು ಬಂಧನಕ್ಕೆ ಎರಡನೇ ದಿನವೂ ಶೋಧ ಕಾರ್ಯ ಮುಂದುವರೆದಿದೆ.‌

ಪ್ರತಿಭಟನೆಗೆ ಅನುಮತಿ ಪಡೆದಿರಲಿಲ್ಲ:
ತಾಲ್ಲೂಕಿನಲ್ಲಿ ತರಕಾರಿ ಮತ್ತು ಮೀನು ಮಾರುವ ಮುಸಲ್ಮಾನರ ಮೇಲೆ ಗುಂಡು ಹಾರಿಸುವ ಬೆದರಿಕೆ ಹಾಕಿ
ಪ್ರಚೋದನಕಾರಿ ಭಾಷಣ ಮಾಡಿದ ಪ್ರತಿಭಟನೆಗೆ ಪೋಲಿಸ್ ಇಲಾಖೆಯಿಂದ ಅನುಮತಿ ಪಡೆದಿರಲಿಲ್ಲ.‌ ಈ ಪ್ರತಿಭಟನೆಯಲ್ಲೂ ಕಾನೂನು ಉಲ್ಲಂಘನೆಯಾಗಿದೆ.

ಪೋಲಿಸರಿಗೆ ಯಾವುದೇ ರೀತಿಯ ಮಾಹಿತಿ ನೀಡದೇ ಏಕಾಏಕಿ ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿರುವುದು ಬೆಳಕಿಗೆ ಬಂದಿದೆ.

ಪೀಪಲ್ ಟಿವಿ ವರದಿ Impact : ರೌಡಿಶೀಟರ್ ರಘು ಬಂಧನಕ್ಕೆ ಬಂದ ಪೊಲೀಸರು ; ಆರೋಪಿ ಪರಾರಿ
ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಭಜರಂಗದಳದ ಮಾಜಿ ರಾಜ್ಯ ಸಂಚಾಲಕ, ರೌಡಿಶೀಟರ್ ಸಕಲೇಶಪುರದ ರಘು ಎಂಬಾತನನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಆದರೆ ಬಂಧನದ ಸುಳಿವು ಸಿಗುತ್ತಿದ್ದಂತೆ ರಘು ಪರಾರಿಯಾಗಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ವ್ಯಾಪಕವಾಗಿ ಬಲೆ ಬೀಸಿದ್ದಾರೆ.

30.06.2023 ರ ಶುಕ್ರವಾರ ಬೆಳಿಗ್ಗೆ ಮಾಡಿದ ಈತನ ಪ್ರಚೋದನಕಾರಿ ಭಾಷಣದ ತುಣುಕನ್ನು ಪೀಪಲ್ ಟಿವಿ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಜಾಗೃತಗೊಂಡ ಪೊಲೀಸ್ ಇಲಾಖೆ ಈತನನ್ನು ಬಂಧಿಸಲು ಮುಂದಾಗಿದೆ.

ಗೋಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಅದನ್ನು ಖಂಡಿಸಿ ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ‘ಮುಸಲ್ಮಾನ ವ್ಯಾಪಾರಿಗಳು ಮನೆಗೆ ಬಂದರೆ ಗುಂಡಿಟ್ಟು ಸಾಯಿಸಿ’ ಎಂದು ಇದೇ ರಘು ಪ್ರಚೋದನಕಾರಿ ಭಾಷಣ ಮಾಡಿದ್ದನು.

ಸಧ್ಯ ಪೀಪಲ್ ಟಿವಿ ವರದಿಯನ್ನು ಆದರಿಸಿ ಕಾರ್ಯ ಪ್ರವೃತ್ತರಾದ ಪೊಲೀಸರ ದೊಡ್ಡ ತಂಡವನ್ನು ರಚಿಸಿ ಬಂಧಿಸಲು ಮುಂದಾಗಿದ್ದಾರೆ. ಇದರಿಂದ ತಲೆ ತಪ್ಪಿಸಿಕೊಂಡ ರೌಡಿಶೀಟರ್ ರಘು ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾನೆ. ಈತನ ಮೇಲೆ ಹಲವಷ್ಟು ಅಪರಾಧ ಪ್ರಕರಣಗಳು ಇವೆ. ಇಂತದ್ದೇ ಅನಾಹುತಕಾರಿ ಕೆಲಸಕ್ಕೆ ಈ ವ್ಯಕ್ತಿಯ ಮೇಲೆ ಗಡಿಪಾರಿಗೂ ಹಲವಷ್ಟು ಬಾರಿ ಆದೇಶ ನೀಡಲಾಗಿದೆ. ಚುನಾವಣೆ ಸಂದರ್ಭ ಮೈಸೂರು ಶಾಸಕ ತನ್ವೀರ್ ಸೇಠ್ ಅವರನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿರುವುದನ್ನು ನೆನೆಯಬಹುದು.

ಕಾಪು ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರ ದಾಳಿ ಪ್ರಕರಣ – ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸದಸ್ಯರನ್ನು ಖುಲಾಸೆಗೊಳಿಸಿದ ನ್ಯಾಯಾಲಯ
ಕಾಪ್: ಒಂಬತ್ತು ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಕಾಪುವಿನ ಕಟ್ಟಿಂಗೇರಿ ಗ್ರಾಮದಲ್ಲಿ ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಭಜರಂಗದಳ (ಬಿಡಿ) ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಸದಸ್ಯರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

2013 ರಲ್ಲಿ ಶಿರ್ವ, ಸೂಡ ಮತ್ತು ಕಟ್ಟಿಗೇರಿ ಸುತ್ತಮುತ್ತಲಿನ ಗ್ರಾಮಗಳ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ಸದಸ್ಯರು ರಾತ್ರಿ ಕ್ರಿಶ್ಚಿಯನ್ ಗುಂಪಿನ ಪ್ರಾರ್ಥನಾ ಕೇಂದ್ರಕ್ಕೆ ಅಕ್ರಮವಾಗಿ ನುಗ್ಗಿ ಕೇಂದ್ರದೊಳಗಿನ ಎಲ್ಲಾ ಆಸ್ತಿಯನ್ನು ನಾಶಪಡಿಸಿದ್ದರು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಪ್ರಾರ್ಥನಾ ಕೇಂದ್ರದ ಮುಖ್ಯಸ್ಥ ರೋಷನ್ ರಾಜೇಶ್ ಲೋಬೊ ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ  ಪ್ರಕರಣದಲ್ಲಿ ಪಾಲ್ಗೊಂಡ 19 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 18 ಜನರ ಸಾಕ್ಷಿ ವಿಚಾರಣೆ ನಡೆಸಲಾಯಿತು.  ನಂತರ ವಿಚಾರಣೆಯಲ್ಲಿ ಮಾರಕಾಸ್ತ್ರಗಳು, ಮೊಬೈಲ್ ಫೋನ್ ಗಳು, ಟಿ-ಶರ್ಟ್ ಗಳು ಮತ್ತು ಇತರ 14 ವಸ್ತುಗಳನ್ನು ಗುರುತಿಸಲಾಗಿತ್ತು.

ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ವಿನಾಯಕ ವಾಂಖೆಡೆ ಅವರು, ಸಾಕ್ಷಿಗಳು ಆರೋಪಿಗಳ ಮೇಲಿನ ಆರೋಪಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗುವುದು ಎಂದು ಘೋಷಿಸಿದ್ದರು.

ಬಜರಂಗದಳ ಮುಖಂಡನಿಂದ ತನ್ವೀರ್ ಸೇಠ್ ಗೆ ಕೊಲೆ ಬೆದರಿಕೆ : ವಿಡಿಯೋ ವೈರಲ್!
ಕಾಂಗ್ರೆಸ್​ ಶಾಸಕ ತನ್ವೀರ್ ಸೇಠ್ (Tanveer Seth)​ ಟಿಪ್ಪು (Tippu) ಪ್ರತಿಮೆ ನಿರ್ಮಾಣ ಮಾಡಲಿ, ಅಂದೇ ಅವರ ಅಂತಿಮಯಾತ್ರೆ ಎಂದು ಸಕಲೇಶಪುರ ಭಜರಂಗದಳದ ನಾಯಕ ರಘು ಎಂಬ ವ್ಯಕ್ತಿ ಬೆದರಿಕೆ ಹಾಕಿರುವ ವಿಡಿಯೋ ಈಗ ವೈರಲ್ ಆಗಿದೆ.

ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡುವವರು ದೇಶದ್ರೋಹಿ ಚಟುವಟಿಕೆಯ ಒಂದು ಭಾಗ ಆಗುತ್ತಾರೆ ಎಂದು ಶಿವಮೊಗ್ಗದಲ್ಲಿ (Shivamogga) ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬೆದರಿಕೆ ವೀಡಿಯೋ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಟಿಪ್ಪು ರಾಜ್ಯವಲ್ಲದೇ ದೇಶಕ್ಕೆ ಕಂಟಕ ತಂದಿರುವ ವ್ಯಕ್ತಿ ಇಂತಹ ವ್ಯಕ್ತಿಯ ಒಂದೇ ಒಂದು ಅಡಿ ಪ್ರತಿಮೆ ನಿರ್ಮಾಣವಾದರೂ ಅಂದೆ ಅವರ ಅಂತಿಮಯಾತ್ರೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಮಾತನಾಡಿರುವವರು ಸಕಲೇಶಪುರ ಭಜರಂಗದಳದ ನಾಯಕ ರಘು ಎನ್ನಲಾಗಿದ್ದು, ಪತ್ರಕರ್ತ ಇಮ್ರಾನ್ ಖಾನ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

#Karnataka @BajrangDalOrg leader Raghu Sakaleshapura issues threat to @INCKarnataka mla Tanveer Sait saying even if one feet of #tippusultan statue is built in #Mysuru. We will take out your final rites. pic.twitter.com/J06XCH6SUl
— Imran Khan (@KeypadGuerilla) November 17, 2022

ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಈಗ ಕೊಲೆ ಬೆದರಿಕೆ ಬಂದಿದೆ.