ballari – Peepal Media

ಸರ್ಕಾರದ ಅಯೋಗ್ಯತನಕ್ಕೆ ಕನ್ನಡಿ ಹಿಡಿದು ತೋರಿಸಿದ ಶ್ರೀರಾಮುಲು: ಕಾಂಗ್ರೆಸ್‌ ಟೀಕೆ
ಬಳ್ಳಾರಿ: ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಕಾಲುವೆಗೆ ನೀರು ಹರಿಸಬೇಕೆಂದು ವೇದಾವತಿ ನದಿಯ ಬಳಿ ವಾಸ್ತವ್ಯ ಹೂಡಿದ್ದರು. ಈ ಹಿನ್ನಲೆಯಲ್ಲಿ ಶ್ರೀರಾಮುಲು ಅವರನ್ನು ರಾಜ್ಯ ಕಾಂಗ್ರೆಸ್‌ ಟೀಕಿಸಿದೆ

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಹರಿಯುತ್ತಿರುವ ವೇದಾವತಿ ನದಿಗೆ ಇತ್ತೀಚೆಗೆ ದಾಖಲೆಯ ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಮೇಲ್ಸೇತುವೆಯ ಪಿಲ್ಲರ್ ಕುಸಿದ ಪರಿಣಾಮ ಈ ಭಾಗ ಮತ್ತು ನೆರೆಯ ಆಂಧ್ರಪ್ರದೇಶದ ಕರ್ನೂಲು ಭಾಗದ ರೈತರಿಗೂ ಹೆಚ್ಚು ಹಾನಿ ಆಗಿತ್ತು. ಪಿಲ್ಲರ್ ಕುಸಿದ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಈ ಭಾಗಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಇದರಿಂದ 20 ಗ್ರಾಮಗಳಲ್ಲಿ ಭತ್ತ ಬೆಳೆದ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು.

ಈ ಸಂಬಂಧ ರೈತರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕ ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ರೈತರು, ಸಂಘಟನೆಗಳು, ಸ್ಥಳೀಯ ಮುಖಂಡರು ಮತ್ತು ಗುತ್ತಿಗೆದಾರರ ಜೊತೆಗೆ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೊತೆಗೆ ಪಕ್ಕದ ಆಂಧ್ರ ಪ್ರದೇಶದ ಜನಪ್ರತಿನಿಧಿಗಳ ಜೊತೆಗೆ ಮಾತನಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿ, ತಾತ್ಕಾಲಿಕ ಪಿಲ್ಲರ್ ನಿರ್ಮಾಣಕ್ಕೆ ಕಾಮಗಾರಿ ಶುರು ಮಾಡಿದ್ದರು.

ಇದರ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿ, “ನಾನು ಇಲ್ಲೇ ಇದ್ದು ರೈತರಿಗೆ ನೀರು ಬಿಡಿಸಿಯೇ ಇಲ್ಲಿಂದ ತೆರಳುವುದು. ಅಲ್ಲಿಯವರೆಗೆ ಇಲ್ಲಿಂದ ನಿರ್ಗಮಿಸುವುದಿಲ್ಲ” ಎಂದು ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದರು. ಇನ್ನೂ ಮುಂದುವರಿದು ಅಲ್ಲಿಗೇ ಹಾಸಿಗೆ ತರಿಸಿ ಕಾಮಗಾರಿ ಸ್ಥಳದಲ್ಲೇ ನಿದ್ರೆಗೂ ಜಾರಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ʼಬಸವರಾಜ ಬೊಮ್ಮಾಯಿಯವರ ಅಸಾಮರ್ಥ್ಯವನ್ನು ಎತ್ತಿ ತೋರಿಸಲು ಸಚಿವ ಶ್ರೀ ರಾಮುಲು ಅವರು ಬಳ್ಳಾರಿ ವೇದಾವತಿ ನದಿ ಬಳಿ ಪ್ರತಿಭಟನೆ ಕುಳಿತಿದ್ದಾರೆ. ಅಧಿಕಾರಿಗಳು ಸಿಎಂ ಮಾತು ಕೇಳುವುದಿಲ್ಲ, ಸಚಿವರಿಗೂ, ಸಿಎಂಗೂ ಹಾಗೂ ಅಧಿಕಾರಿಗಳ ಮದ್ಯ ಸಮನ್ವಯತೆ ಇಲ್ಲ, ಇವರ ಧರಣಿ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿʼ ಎಂದು ಕಾಂಗ್ರೆಸ್‌ ಟೀಕಿಸಿದೆʼ

ಕಾಂಗ್ರೆಸಿನವರದ್ದು 85 % ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಳ್ಳಾರಿ, ಅಕ್ಟೋಬರ್ 13:ಕಾಂಗ್ರೆಸ್ ನವರದ್ದು 85 % ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಿರಗುಪ್ಪದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಮಾತನ್ನು ಹಿಂದೆಯೇ ರಾಜೀವ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧೀ ಇವರೆಲ್ಲರಿಗಿಂತ ಸಜ್ಜನರು. ದಿಲ್ಲಿಯಿಂದ ನೂರು ರೂಪಾಯಿ ಕಳಿಸಿದರೆ. ಹಳ್ಳಿಗೆ 15 ರೂಪಾಯಿ ತಲುಪುತ್ತಿತ್ತು ಎಂದು ಪ್ರಾಮಾಣಿಕವಾಗಿ ಹೇಳಿದ್ದರು. 85 ರೂ.ಗಳು ಮಧ್ಯದಲ್ಲಿ ಸೋರಿಹೋಗುತ್ತಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ , ರಾಜ್ಯದಲ್ಲಿಯೂ ಕಾಂಗ್ರೆಸ್ ಪಕ್ಷವಿತ್ತು. ಇದು ಅಂದಿನ ವ್ಯವಸ್ಥೆ. ನರೇಂದ್ರ ಮೋದಿಯವರು ಬಂದ ನಂತರ ಎಲ್ಲಾ ಯೋಜನೆಗಳನ್ನು ನೇರವಾಗಿ ಎಲ್ಲಾ ಫಲಾನುಭವಿಗಳಿಗೆ ಶೇ 100ರಷ್ಟು ಮೊತ್ತವನ್ನು ಡಿಬಿಟಿ ವ್ಯವಸ್ಥೆಯಡಿ ತಲುಪಿಸಿದ್ದಾರೆ ಎಂದರು.

ಭೂಮಿ, ಆಕಾಶ, ಪಾತಾಳದಲ್ಲಿ ಭ್ರಷ್ಟಾಚಾರ

ಇವರ ಕಾಲದಲ್ಲಿ ಭೂಮಿಯ ಮೇಲೆ, ಆಕಾಶಕ್ಕೆ ಹಾಗೂ ಪಾತಾಳಕ್ಕೆ ಭ್ರಷ್ಟಾಚಾರ ಮಾಡಿದರು. ಆಕಾಶಕ್ಕೆ ಭ್ರಷ್ಟಾಚಾರ ಅಂದರೆ 2 ಜಿ ಹಗರಣ. ಕಾಮನ್ ವೆಲ್ತ್ ಹಾಗೂ ಕಲ್ಲಿದ್ದಲು ಹಗರಣ ಮಾಡುವ ಆಕಾಶ, ಭೂಮಿ, ಪಾತಾಳದಲ್ಲಿ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಕೆರೆ ತುಂಬಿಸುವ ಯೋಜನೆಯಡಿ ಭ್ರಷ್ಟಾಚಾರ, ನೀರಾವರಿ,ಸಣ್ಣ ನೀರಾವರಿ, ಗಂಗಾಕಲ್ಯಾಣ ಯೋಜನೆಯಡಿ 36 ಕೊಳವೆಬಾವಿಗಳನ್ನು ಒಂದೇ ದಿನ ಮಂಜೂರು ಮಾಡಿ ದುಡ್ಡು ಹೊಡೆದರು ಎಂದರು.

ಅಧಿಕಾರಕ್ಕಾಗಿ ರಾಜಕಾರಣ

ಜನಸಂಕಲ್ಪ ಯಾತ್ರೆ ರಾಯಚೂರು, ವಿಜಯನಗರ, ಕೊಪ್ಪಳಕ್ಕೆ ಹೋಗಿ ಬಳ್ಳಾರಿಗೆ ಬಂದಿದೆ. ಹೋದಲ್ಲೆಲ್ಲಾ ಜನಬೆಂಬಲ ಹಾಗೂ ಜೋಶ್ ದೊರೆತಿದೆ. ಕಾಂಗ್ರೆಸ್ ಪಕ್ಷದವರು ಪಾದಯಾತ್ರೆ ಮಾಡುತ್ತಿದ್ದಾರೆ. ಜನಪರವಾದ ನಿರ್ಣಯ ತೆಗೆದುಕೊಳ್ಳಲು ಕಾಂಗ್ರೆಸ್ಸಿಗೆ ಬರುವುದಿಲ್ಲ. ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ. ಅಧಿಕಾರಕ್ಕೆ ಬಂದಾಗ ಅವರು ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಂಡರು. ಜನರನ್ನು ಸಂಪೂರ್ಣವಾಗಿ ಮರೆಯುತ್ತಾರೆ. ಕಾಂಗ್ರೆಸ್ಸಿನ ಮಾಜಿ ಮಂತ್ರಿಗಳೊಬ್ಬರು ನಾವು ಅಧಿಕಾರ ದಲ್ಲಿದ್ದಾಗ ಮತ್ತು ಅಧಿಕಾರದಲ್ಲಿಲ್ಲದಾಗ ಅವರು ಏನಾಗುತ್ತಾರೆ ಎಂದು ತಿಳಿಸಿದ್ದರು. ಅಂದರೆ ಈ ರಾಷ್ಟ್ರವನ್ನು 50 ವರ್ಷ ಆಳಿ, ಈ ರಾಜ್ಯದ ಪ್ರಗತಿಗೆ ಮಾರಕವಾಗಿ, ರಾಜ್ಯವನ್ನು ತಮ್ಮ ಹೈ ಕಮಾಂಡಿಗೆ ಒತ್ತೆ ಇಟ್ಟು, ಕರ್ನಾಟಕ ರಾಜ್ಯದ ಸ್ವಾಭಿಮಾನವನ್ನೂ ಲೆಕ್ಕಿಸದೇ, ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿರುವ ಕಾಂಗ್ರೆಸ್ಸನ್ನು ಶಾಶ್ವತವಾಗಿ ಮನೆಗೆ ಕಳಿಸುವ ಕೆಲಸವನ್ನು ಕರ್ನಾಟಕದ ಜನತೆ 2023ರಲ್ಲಿ ಮಾಡಲಿದ್ದಾರೆ ಎಂದರು.

ಕಾಂಗ್ರೆಸ್ ಸಂಸ್ಕೃತಿ

ಅಧಿಕಾರಕ್ಕೆ ಬಂದಾಗ ಜನರನ್ನು ಮರೆತಿದ್ದಕ್ಕೆ ಉದಾಹರಣೆ ಎಂದರೆ. ಸೋನಿಯಾ ಗಾಂಧಿ ಬಳ್ಳಾರಿಗೆ ಸಂಸದರಾಗಿ ಬಂದರು. ಮೂರು ಸಾವಿರ ಕೋಟಿ ಪ್ಯಾಕೇಜ್ ಮಾಡುವುದಾಗಿ ಹೇಳಿದರು. ಎಲ್ಲಿದೆ ಪ್ಯಾಕೇಜ್? ಯಾರ ಮನೆಗೆ ಹೋಗಿದೆ? ಬಳ್ಳಾರಿ ಜಿಲ್ಲೆಗೆ ಒಂದು ಪೈಸೆಯನ್ನೂ ಕೊಡಲಿಲ್ಲ. ಧನ್ಯವಾದಗಳನ್ನೂ ಹೇಳಲಿಲ್ಲ. ಇದು ಕಾಂಗ್ರೆಸ್ ಸಂಸ್ಕೃತಿ ಎಂದರು.

ಹೂವಿನಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಳ್ಳಾರಿ, ಅಕ್ಟೋಬರ್ 13: ಹೂವಿನಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಮೂಲಕ ಈ ಭಾಗದ ರೈತರ ನೀರಿನ ಬವಣೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಹೂವಿನಹಡಗಲಿ ಜನಸಂಕಲ್ಪ ಯಾತ್ರೆಯಲ್ಲಿ ಉದ್ಘಾಟಿಸಿ ಮಾತನಾಡಿದರು.

ಹೂವಿನ ಹಡಗಲಿಯ ಅಂತರ್ಜಲ ಹೆಚ್ಚಳ:

ನಾನು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಳೆದ ಸಾರಿ ಇಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಸಿಂಗಟಾಲೂರು ಏತ ನೀರಾವರಿ ಪೂರ್ಣ ಮಾಡಬೇಕು ಎಂದು ಜನ ಬೇಡಿಕೆ ಇಟ್ಟಿದ್ದರು‌. ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ಹೂವಿನ ಹಡಗಲಿಯ 42 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಯಿತು. ಹೂವಿನಹಡಗಲಿಯಲ್ಲಿ ಕೆರೆ ತುಂಬಿಸುವ ಕೆಲಸವನ್ನೂ ಮಾಡಲಾಗಿದೆ. ಹೂವಿನ ಹಡಗಲಿಯ ಅಂತರ್ಜಲ ಹೆಚ್ಚಿಸಲು ಕೆಲಸ ಮಾಡಲಾಗಿದೆ. ಈ ಭಾಗದ ರೈತರಿಗೆ ನೀರಿನ ಬರ ನಿವಾರಿಸಲು ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪ ಅವರು ಕಾರಣ. ಹುಲಿಗುಡ್ಡದ ಯೋಜನೆ ತಾವು ಮಾಡಿದ್ದೇವೆ ಅಂತ ಕೆಲವರು ಹೇಳಿಕೊಳ್ಳುತ್ತಿದ್ದರು. ಅದನ್ನು ರದ್ದು ಮಾಡಿ ಸಿಂಗಟಾಲೂರು ಯೋಜನೆಗೆ ಜೋಡಿಸಿ ರೂಪಿಸಲಾಯಿತು. ತಡಕಲ್ಲ ನೀರಾವರಿ ಯೊಜನೆಯನ್ನು ಪೂರ್ಣ ಮಾಡಿ ಲೋಕಾರ್ಪಣೆ ಮಾಡಲಾಗುವುದು ಎಂದರು.

ಹೂವಿನಹಡಗಲಿಯ ಸಮಗ್ರ ಅಭಿವೃದ್ಧಿ ಮಾಡಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಏರ್ಪಡಿಸುವ ಈ ಭಾಗಕ್ಕೆ ನಾನು ನೀಡಿದ ಯೋಜನೆಗಳನ್ನು ನಿಮ್ಮ ಮುಂದೆ ರಿಪೋರ್ಟ್ ಕಾರ್ಡ್ ಇಟ್ಡು ಮತ್ತೆ ಅಧಿಕಾರಕ್ಕೆ ಬಂದು ಕನ್ನಡ ನಾಡಿನಲ್ಲಿ ಕಮಲ ಅರಳಿಸಿ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಹಾಕಬೇಕು. ನಮ್ಮ ನೆಚ್ಚಿನ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 150 ಸ್ಥಾನ ಗೆಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆನಂದಸಿಂಗ್ ಹಾಗೂ ಮತ್ತಿತರರು ಹಾಜರಿದ್ದರು.

ಬಳ್ಳಾರಿ ಗಣಿ ಕಾರ್ಮಿಕರ ಪಾದಯಾತ್ರೆ : ಮೂರನೇ ದಿನಕ್ಕೆ
ಬಳ್ಳಾರಿ : ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ಮಾಡುತ್ತಿದ ಪಾದಯಾತ್ರೆಯು ಇಂದು ಮೂರನೇ ದಿವಸಕ್ಕೆ ಕಾಲಿಟ್ಟಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ದಿನಾಂಕ 11.10.2022ರಂದು ಬೆಳೆಗ್ಗೆ 10 ಗಂಟೆಯಿಂಧ ಸಂಡೂರಿನಿಂದ ಬಳ್ಳಾರಿ ವರೆಗೆ 70 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಗೆ ಹೋರಾಟಗಾರರಾದ ಮೇಧಪಾಟ್ಕರ್ ಮತ್ತು ನಟ ಚೇತನ್‌ರವರು ಬಳ್ಳಾರಿ ಗಣಿ ಕಾರ್ಮಿಕರ ಪರವಾಗಿ ಚಾಲನೆ ನೀಡಿದ್ದರು.  ಸಂಡೂರಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಪ್ರಾರಂಭವಾದ ಬಳ್ಳಾರಿ ಗಣಿ ಕಾರ್ಮಿಕರ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.

ಪಾದಯಾತ್ರೆಯನ್ನು ಶುರು ಮಾಡಿದ್ದ ಬಳ್ಳಾರಿ ಗಣಿ ಕಾರ್ಮಿಕರ ಸಂಘವು ತೋರಣಗಲ್ಲು, ಕುಡಿತಿನಿ, ವಣಿವಿರಪುರ, ವಡ್ಡು, ಅಲ್ಲಿಪುರ, ಮತ್ತು ಇತರೆ ಪ್ರದೇಶಗಳ ಮೂಲಕ ತೆರಳಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಮಿಕರು ಕಾಲ್ನಡಿಗೆ ಜಾಥಾದಿಂದ ಬಳ್ಳಾರಿ ಜಿಲ್ಲಾಧಿಕಾರಿಯವರ ಕಚೇರಿ ಸೇರಿದ್ದಾರೆ. ಹಳ್ಳಿ-ಹಳ್ಳಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಮಿಕರ ಸಮಸ್ಯೆಗಳು ಮತ್ತು ಅವರ ಜೀವನ-ಜೀವನೋಪಾಯದ ಪರಿಸ್ಥಿತಿ ಕುರಿತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದ್ದರು. ಗಣಿ ಕಾರ್ಮಿಕರು ಕಳೆದ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಅವರುಗಳಿಗೆ ದೊರಕಬೇಕಾದ ಪರಿಹಾರ ಮತ್ತು ಹಕ್ಕುಗಳನ್ನು ಕೇಳುತ್ತಾ, ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಾದಯಾತ್ರೆಯು ಬಳ್ಳಾರಿ ಜಿಲ್ಲಾಧಿಕಾರಿಯವರ ಕಚೇರಿಯನ್ನು ತಲುಪಿ, ಈ ಕೆಳಕಂಡ ಹಕ್ಕೋತ್ತಾಯಗಳನ್ನು ಈಡೇರಿಸಲು ಹೋರಾಟವನ್ನು ನಡೆಸಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವರುಗಳು ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂದಿಡಲಾಗಿದೆ :

1. 2011 ರಲ್ಲಿ ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬೇಕು.

2. ಗಣಿ ಕಾರ್ಮಿಕರ ಕುಟುಂಬಕ್ಕೆ ನೀರಾವರಿ ಸೌಲಭ್ಯದೊಂದಿಗೆ 5 ಎಕರೆ ಭೂಮಿ ದೊರಕಬೇಕು.

3. ಕೆಲಸ ಪುನರಾರಂಭಗೊಂಡಿರುವ “ಎ” ಮತ್ತು “ಬಿ” ವರ್ಗದ ಗಣಿಗಳಲ್ಲಿ ಕೆಲಸ ಕಳೆದುಕೊಂಡ ಕಾರ್ಮಿರಿಗೆ ಮರು ಉದ್ಯೋಗ ಕಲ್ಪಿಸಿಕೊಡಬೇಕು.

4. ನಿವೃತ್ತಿ ವಯಸ್ಸನ್ನು ತಲುಪಿರುವ ಗಣಿ ಕಾರ್ಮಿಕರಿಗೆ ಮಾಸಿಕ ರೂ. 5,000/- ಪಿಂಚಣಿ ನೀಡಬೇಕು.

5. ಗಣಿ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ವ್ಯವಸ್ಥೆ ಮಾಡಬೇಕು.

6. ಸಮುದಾಯ ಸೌಲಭ್ಯಗಳಾದ ಅಂಗನವಾಡಿ, ಸಮುದಾಯ ಭವನಗಳು, ಗ್ರಂಥಾಲಯ, ಕಾರ್ಮಿಕರ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಬೇಕು.

7. ಗಣಿ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಬೇಕು.

8. ಗಣಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಬೇಕು.

ಮೂರು ದಿನದ ಹಕ್ಕೊತ್ತಾಯದ ಪಾದಯಾತ್ರೆಯನ್ನು ಹೋರಾಟಗಾರರಾದ ಮೇಧಪಾಟ್ಕರ್‌ ಮತ್ತು ನಟ ಚೇತನ್‌ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 2000ಕ್ಕೂ ಅಧಿಕ ಗಣಿ ಸಂತ್ರಸ್ಥರನ್ನು ಕುರಿತು ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಧಪಾಟ್ಕರ್‌ “ ಪಾದಯಾತ್ರೆಯು ಇಂದು ಜೀವನೋಪಾಯಕ್ಕಾಗಿ, ಸಮಾನ ಪಾಲು ಹಾಗೂ ಜೀವನಕ್ಕಾಗಿ ಮತ್ತು ಬದಲಾವಣೆಗೋಸ್ಕರವಾಗಿದೆ. ಗಣಿ ಮಾಫಿಯಾ ಮಾಡಿದ ಅನ್ಯಾಯ ನಮಗೆ ತಿಳಿದಿದೆ. ಇಂದು ದೇಶದ ಜಲ, ಅರಣ್ಯ ಮತ್ತು ಜಮೀನು ಎಲ್ಲವೂ ಖಾಸಗೀಕರಣವಾಗಿ ಮಾರ್ಪಟ್ಟಿವೆ. ಸರ್ಕಾರ ಕನಿಷ್ಠ ವೇತನ, ಕನಿಷ್ಠ ಬೆಂಬಲ ಬೆಲೆ ನೀಡಲು ಬಯಸುತ್ತಾರೆ. ಆದರೆ ನಮಗೆ ನಮ್ಮ ಸಮಾನ ಪಾಲು ಬೇಕು…ಕನಿಷ್ಠ ಅಲ್ಲ. ಖಾಯಂ ಆಗಿದ್ದ ಅನೇಕ ಕಾರ್ಮಿಕರು ಈಗ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಇದು ಕಾರ್ಮಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರ ಎಂದು ಹೇಳಿ ಸಂತೋಷ್‌ ಹೆಗ್ಡೆ ಅವರ ವರದಿಗಳನ್ನು ಪ್ರಸ್ಥಾಪಿಸಿದ್ದರು.

“ಪಾದಯಾತ್ರೆಯಲ್ಲಿರುವ ಕಾಂಗ್ರೆಸ್‌ ಈ ಪಾದಯಾತ್ರೆಗೆ ಸಂಬಂಧಿಸಿದಂತೆ ಏನು ಮಾಡುತ್ತಿದೆ ಎಂಬುದಕ್ಕೆ ಉತ್ತರಿಸಬೇಕು. ಅಧಿಕಾರದಲ್ಲಿರುವ ಸರ್ಕಾರಕ್ಕೆ ಇದೇ ಪ್ರಶ್ನೆ ಕೇಳಬೇಕು. ಸರ್ಕಾರ ಈ ಕಾರ್ಮಿಕರಿಗೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದರು. ಅಂಬೇಡ್ಕರ್‌ ಕಾರ್ಮಿಕ ಮಂತ್ರಿಯಾಗಿ ತಂದ ಕಾನೂನುಗಳು ಇಂದಿಗೂ ಸಹ ಕಾರ್ಮಿಕರನ್ನು ರಕ್ಷಿಸುತ್ತಿವೆ. ಅವುಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಯತ್ನಿಸುತ್ತಿದೆ ಎಂದು ಶೋಷಿತರು ಒಗ್ಗೂಡುವ ಅಗತ್ಯತೆಯ ಬಗ್ಗೆ ನಟ ಚೇತನ್‌ ಅಹಿಂಸರವರು ಮಾತನಾಡಿದ್ದರು