Basanagowda Patil Yatnal – Peepal Media

ರೆಬೆಲ್​ ಯತ್ನಾಳ್​​ಗೆ ಬಿಗ್​ ಶಾಕ್​.. ಬಿಜೆಪಿಯಿಂದ ಶಾಸಕ ಬಸನಗೌಡ ಯತ್ನಾಳ್​ ಕಿಕೌಟ್!
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಇದೀಗ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ. ನಿರಂತರವಾಗಿ ಪಕ್ಷದ ನಾಯಕರನ್ನು ಬಹಿರಂಗವಾಗಿ ಟೀಕಿಸಿದ ಪರಿಣಾಮ ಈಗ ಯತ್ನಾಳ್ ಉಚ್ಛಾಟನೆ ವರೆಗೂ ಬಂದು ನಿಂತಿದೆ.

ಪದೇ ಪದೇ ಸ್ವಪಕ್ಷದ ನಾಯಕರ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದಲ್ಲೇ ಪ್ರತ್ಯೇಕ ಬಣ ರಾಜಕೀಯಕ್ಕೂ ಕಾರಣರಾಗಿದ್ದರು. ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಯತ್ನಾಳ್ ಬಣದ ಜೊತೆಗೆ ಗುರುತಿಸಿಕೊಂಡು, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದೀಗ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಅವರನ್ನು ಉಚ್ಚಾಟಿಸಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಆದೇಶ ಹೊರಡಿಸಿ ಅಚ್ಚರಿ ಮೂಡಿಸಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಲೇ ಬಂದಿದ್ದ ಯತ್ನಾಳ್ ಅವರಿಗೆ ಈಗಾಗಲೇ ಹಲವಾರು ಬಾರಿ ಶಿಸ್ತು ಸಮಿತಿಯು ನೋಟಿಸ್ ನೀಡಿತ್ತು. ಆದರೆ ಇದೀಗ ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿಯು ಪಕ್ಷದಿಂದ ಅವರನ್ನು 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶಿಸಿದೆ.

ಗುಂಡೂರಾವ್‌ ಮನೆಯಲ್ಲೇ ಅರ್ಧ ಪಾಕಿಸ್ಥಾನವಿದೆ! – ಯತ್ನಾಳ್
ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್‌‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೈವಾಡವಿದೆ ಎಂಬ ರೀತಿ ಟ್ವೀಟ್ ಮಾಡಿದ್ದ ದಿನೇಶ್ ಗುಂಡೂರಾವ್‌ (Dinesh gundurao) ಅವರಿಗೆ ಶಾಸಕ ಯತ್ನಾಳ್‌ ಎಂದಿನಂತೆ ತಮ್ಮದೇ ಲಂಗು ಲಗಾಮಿಲ್ಲದ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ.

ಎನ್‌ಐಎ ತಂಡ ತೀರ್ಥಹಳ್ಲಿಯ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿತ್ತು ಈ ವಿಚಾರ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟ್ವೀಟ್ ಮಾಡಿದ್ದು ಎನ್‌ಐಎ ವಿಚಾರಣೆಗೆ ಒಳಪಡಿಸಿದೆ ಎಂದರೆ ಬಿಜೆಪಿ ಕೈವಾಡವಿದೆ ಎಂದೇ ಅರ್ಥ ಅಲ್ಲವೇ? ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ಗುಂಡೂರಾವ್ ಅರ್ಧ ಮನೆಯೇ ಪಾಕಿಸ್ತಾನ , ಅವರ ಮನೆಯಲ್ಲಿ ಪಾಕಿಸ್ತಾನವೇ ಇದೆ… ದೇಶದ ವಿರುದ್ಧ ಹೇಳಿಕೆ ನೀಡೊದು ಅವರಿಗೆ ಚಟವಾಗಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತನ ವಿಚಾರಣೆ ಕುರಿತು ಮಾತನಾಡಿದ ಯತ್ನಾಳ್, “ಮೊಬೈಲ್‌ ವ್ಯಾಪಾರಿಗಳು ಅವರು, ಅವರ ಬಳಿ ಯಾವ ಗಿರಾಕಿ ಬರುತ್ತಾರೊ ಗೊತ್ತಾಗಲ್ಲ, ಅದು ಬಿಜೆಪಿ ಕಾಂಗ್ರೆಸ್‌ ಅಂತ ಏನಿಲ್ಲ, ತನಿಖೆಗೆ ಎಲ್ಲಾ ಸಹಕಾರ ನೀಡುತ್ತೇನೆ ಎಂದಿದ್ದಾರೆ ಮುಗಿತು ಅಷ್ಟೇ…” ಎಂದು ಯತ್ನಾಳ್ ಹೇಳಿದ್ದಾರೆ.

ದೇಶದಲ್ಲಿ ಮೋದಿ ಬಂದರೆ ಮಾತ್ರ ನಮಗೆ ಉಳಿಗಾಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ, ಎಷ್ಟು ಸೀಟು ಗೆಲ್ಲುತ್ತೋ ಗೊತ್ತಿಲ್ಲ 500 ಸೀಟು ಕೂಡ ಗೆಲ್ಲಬಹುದು ಎಂದರು.

ಈ ಬಾರಿ ಇಪ್ಪತ್ತೆಂಟು ಕ್ಷೇತ್ರ ಗೆಲ್ಲುತ್ತೇವೆ

ಕರಾವಳಿ ಭಾಗದಲ್ಲಿ ಮೂರಕ್ಕೆ ಮೂರು ಲೋಕಸಭಾ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ – ಚಿಕ್ಕಮಗಳೂರು ಕ್ಷೇತ್ರಗಳನ್ನು ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಅನಿವಾರ್ಯ ಮತ್ತು ಅವಶ್ಯ ಎಂಬುದು ಸಾಮಾನ್ಯ ಮತದಾರರಿಗೂ ಅನಿಸಿದೆ. ಕೆಲ ಕಾರ್ಯಕರ್ತರಲ್ಲಿ ಕೆಲವು ವಿಷಯಗಳ ಕುರಿತು ಅಸಮಾಧಾನ ಇದ್ದರೂ ಸಹ ದೇಶದ ಹಿತ ದೃಷ್ಟಿಯಿಂದ ಎಲ್ಲರೂ ಒಟ್ಟಿಗೆ ನಿಂತು ಬಿಜೆಪಿ ಗೆಲ್ಲಿಸುತ್ತಾರೆ. ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಮುದುಡಿದ ಕಮಲ ; ಅರಳಿದ ಕೈ : ಯತ್ನಾಳ್ ಗೆ ಮುಖಭಂಗ
ಭಾರಿ ನಾಟಕೀಯತೆಯ ನಡುವೆ ಮಂಗಳವಾರ ನಡೆದ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿಜಯಪುರ ನಗರ ಪಾಲಿಕೆಯಲ್ಲಿ ಏಕೈಕ ದೊಡ್ಡ ಪಕ್ಷವಾಗದಿದ್ದರೂ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದೆ.

ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಜೆಪಿ ಚುನಾವಣಾಧಿಕಾರಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣೆ ಸಭೆಯಿಂದ ಹೊರ ನಡೆದ ಘಟನೆ ಜರುಗಿತು. ಆ ನಂತರ ಬಿಜೆಪಿ ಒಳಗೇ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದ ಪರಿಣಾಮ ಅಗತ್ಯ ಸಂಖ್ಯಾಬಲ ಇದ್ದರೂ ಬಿಜೆಪಿ ಸೋಲುಣ್ಣಬೇಕಾಯಿತು.

ಜ.9 ರಂದು ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು 2023 ಡಿಸೆಂಬರ್ 28 ರಂದು ಅಧಿಸೂಚನೆ ಹೊರಡಿಸಿದ್ದರು. ಪರಿಣಾಮ ಮಂಗಳವಾರ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಚುನಾವಣೆ ಪ್ರಕ್ರಿಯೆ ನಡೆಸಿದರು.

ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 35 ಸದಸ್ಯರಲ್ಲಿ ಪಂಗಡದ ಏಕೈಕ ಸದಸ್ಯ ಕಾಂಗ್ರೆಸ್‍ನ ದಿನೇಶ ಹಳ್ಳಿ ಉಮೇದುವಾರಿಕೆ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ. 34 ರ ಸದಸ್ಯೆ ಮೆಹಜಬಿನ್ ಹೊರ್ತಿ ಹಾಗೂ ಬಿಜೆಪಿ ಪಕ್ಷದಿಂದ ವಾರ್ಡ್ ನಂ.12 ರಿಂದ ಗೆದ್ದಿರುವ ರಶ್ಮಿ ಕೋರಿ ಉಮೇದುವಾರಿಕೆ ಸಲ್ಲಿಸಿದ್ದರು.

ಬಿಜೆಪಿ ಸದಸ್ಯರು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಲೇ ಮೇಯರ್-ಉಪ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರ ನಡೆದರು. ಸಭೆ ಬಹಿಷ್ಕರಿಸಿ ಹೊರ ಬಂದ ಬಿಜೆಪಿ ಸದಸ್ಯರಲ್ಲಿ ಕೆಲವರು ಚುನಾವಣಾಧಿಕಾರಿಕಾರಿ ವಿರುದ್ಧ ಧಿಕ್ಕಾರ ಕೂಗುವ ಜತೆಗೆ ಕಪ್ಪು ಪಟ್ಟಿಯನ್ನೂ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಬಿಜೆಪಿ 17 ಸದಸ್ಯರ ಬಲ ಹೊಂದಿದ್ದರೂ ಓರ್ವ ಸದಸ್ಯರ ನಿಧನದಿಂದ 16ಕ್ಕೆ ಇಳಿದಿದ್ದು, ಶಾಸಕ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರ ಮತಗಳು ಸೇರಿದಂತೆ 18 ಮತಗಳನ್ನು ಮಾತ್ರ ಹೊಂದಿತ್ತು. ಪಾಲಿಕೆಯ 10 ಸದಸ್ಯರು, ಇಬ್ಬರು ಎಮ್ಮೆಲ್ಸಿ, ಇಬ್ಬರು ಎಂಎಲ್‍ಎ ಹೊಂದಿದ್ದ ಕಾಂಗ್ರೆಸ್ 14 ಮತಗಳನ್ನು ಹೊಂದಿದ್ದರೂ ಐವರು ಪಕ್ಷೇತರರು, ಎಂಐಎಂ ಪಕ್ಷದ ಇಬ್ಬರು ಹಾಗೂ ಓರ್ವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಸಧ್ಯ ರಾಜ್ಯ ರಾಜಕಾರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಸ್ವಪಕ್ಷೀಯರೇ ಮಸಲತ್ತು ನಡೆಸಿದ್ದು, ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿನ ಬಿಜೆಪಿ ಸೋಲು ಈಗ ಯತ್ನಾಳ್ ರನ್ನು ಮತ್ತೆ ಕುಗ್ಗುವಂತೆ ಮಾಡಿದೆ. ಇತ್ತ ಇಂತಹ ನಾಟಕೀಯ ಬೆಳವಣಿಗೆ ಬಗ್ಗೆ ಅರಿವಿದ್ದ ಕಾಂಗ್ರೆಸ್ ಗೆ ಎಲ್ಲವೂ ನಿರೀಕ್ಷಿತ ಎಂಬಂತೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಯತ್ನಾಳ್ ವರಿಷ್ಠರ ಭೇಟಿ : ಸಧ್ಯದಲ್ಲೇ ಬಿಜೆಪಿಯಲ್ಲಿ ಬದಲಾವಣೆಯ ಮುನ್ಸೂಚನೆ ಭರವಸೆ
ಕರ್ನಾಟಕ ಬಿಜೆಪಿ ಒಳಗಿನ ಕೆಟ್ಟ ರಾಜಕೀಯ ವ್ಯವಸ್ಥೆ ಬಗ್ಗೆ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿದ್ದೇನೆ ಎಂದು ಬಿಜೆಪಿ ಶಾಸಕ ಬನಸಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಬಂದ ರಾಜ್ಯ ಬಿಜೆಪಿಯಲ್ಲಿನ ಹೊಂದಾಣಿಕೆ ಮತ್ತು ಕೆಟ್ಟ ರಾಜಕೀಯ ವ್ಯವಸ್ಥೆಯ ವಾಸ್ತವ ಚಿತ್ರಣದ ಕುರಿತು ಬಿಜೆಪಿ ರಾಷ್ಟ್ರೀಯ ಘಕದ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅರುಣ್ ಸಿಂಗ್, ರಾಧಾಮೋಹನ್ ಅಗರವಾಲ್ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿ ಬಂದಿದ್ದೇನೆ ಎಂದು ಯತ್ನಾಳ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಈ ಬಾರಿಯ ದೆಹಲಿ ನಾಯಕರ ಭೇಟಿ ಯಶಸ್ವಿಯಾಗಿದೆ. ಯಡಿಯೂರಪ್ಪ ಅವಧಿಯಲ್ಲಿ ನಡೆದ ಕೋವಿಡ್ ಹಗರಣದ ಬಗ್ಗೆ ವರಿಷ್ಠರಿಗೆ ವಿವರವಾಗಿ ತಿಳಿಸಿದ್ದೇನೆ. ನಾನು ಬಹಿರಂಗವಾಗಿ ಆರೋಪ ಮಾಡಿರುವುದಕ್ಕೆ ಯಾವುದೇ ಎಚ್ಚರಿಕೆಯನ್ನಾಗಲಿ, ಕ್ರಮಕೈಗೊಳ್ಳುವುದಾಗಿ ಹೇಳಿಲ್ಲ, ನಡ್ಡಾ ಮತ್ತು ಅಮಿತ್ ಶಾ ಅವರು ಅತ್ಯಂತ ಗೌರವಯುತವಾಗಿ ನನ್ನ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ ಎಂದು ಹೇಳಿದರು.

ಇವೆಲ್ಲವೂ ತಾತ್ಕಾಲಿಕ.. ಮುಂದಿನ ಲೋಕಸಭೆ ಚುನಾವಣೆ ನಂತರ ರಾಜ್ಯ ಬಿಜೆಪಿ ಮೊದಲಿನಂತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಬರುವ ಬಗ್ಗೆ ವರಿಷ್ಠರು ತಿಳಿಸಿದ್ದಾರೆ. ಆದರೆ ವಿಜಯೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಯತ್ನಾಳ್ ಗೆ ವರಿಷ್ಠರ ಶಿಸ್ತು ಕ್ರಮದ ಎಚ್ಚರಿಕೆ ಎಂದು ಸುಳ್ಳು ಮಾಹಿತಿ ಪ್ರಚಾರ ನಡೆಸಿದ್ದಾರೆ ಎಂದು ಶಾಸಕ ಯತ್ನಾಳ್ ಮತ್ತೆ ವಿಜಯೇಂದ್ರ ಮೇಲೆ ಆರೋಪಿಸಿದ್ದಾರೆ.

ಸಮವಸ್ತ್ರ ನೀತಿ ಮುಸಲ್ಮಾನರಿಗೆ ಮಾತ್ರ ಅಲ್ಲ, ಹಿಂದೂಗಳಿಗೂ ಇಲ್ಲ: ಯತ್ನಾಳ್
ಹಿಜಾಬ್ ಬ್ಯಾನ್ ವಾಪಸ್ ಊಟ ಬಟ್ಟೆ ಅವರವರ ಆಯ್ಕೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಹಾಗಾದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದಿದ್ದಾರೆ.

ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ,
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದು ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದ್ದರೂ, ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಯತ್ನಾಳ್ ದೂರಿದ್ದಾರೆ.

ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ!
ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳೂ ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ, ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ಪೊಲೀಸರ ವರ್ಗಾವಣೆಗೆ ಸರ್ಕಾರದ ಮೀನಾಮೇಷ : ಯತ್ನಾಳ್
ಬೆಂಗಳೂರು : ಕರ್ನಾಟಕ ನಾಗರಿಕ ಸೇವಾ ನಿಯಮ(KCSR)ಗಳ ಅಡಿಯಲ್ಲಿ ಪೊಲೀಸರ ವರ್ಗಾವಣೆಗೆ ಸರ್ಕಾರವು ಮೀನಾಮೇಷ ಮಾಡುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಪತಿ- ಪತ್ನಿ ಹಾಗು ಸಾಮಾನ್ಯ ಅಂತರ್ ಜಿಲ್ಲಾ ವರ್ಗಾವಣೆಗಳಿಗೆ ಸರ್ಕಾರ KCSR ನಿಯಮಗಳ ಅನ್ವಯ ಸರಿಯಾದ ನಿಯಮಗಳನ್ನು ರೂಪಿಸಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.

2 ವರ್ಷ, 6 ತಿಂಗಳು ಕನಿಷ್ಠ ಸೇವೆ ಇದ್ದ ನಿಯಮಕ್ಕೆ ಈಗ 7 ವರ್ಷ ಕನಿಷ್ಠ ಸೇವೆಯಂದು ತಿದ್ದುಪಡಿ ಮಾಡಿ, ಈವರೆಗೂ ಯಾವುದೇ ವರ್ಗಾವಣೆ ಮಾಡದೆ ಸರ್ಕಾರ ಪೋಲೀಸರ ಜೀವನದ ಜೊತೆ ಆಟವಾಡುತ್ತಿದೆ ಎಂದು ಯತ್ನಾಳ್ ದೂರಿದ್ದಾರೆ.

ದೂರದ ಊರಿನಲ್ಲಿ ವಯಸ್ಸಾದ ತಂದೆ ತಾಯಂದಿರನ್ನೂ ನೋಡಲು ಆಗದೆ, ದಿನಕ್ಕೆ 12-14 ಘಂಟೆ ಕೆಲಸ ಮಾಡುವ ಪೋಲೀಸರ ಗೋಳು ಈ ಸರ್ಕಾರಕ್ಕೆ ಕೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಜ್ಯೇಷ್ಠತೆಯನ್ನೂ ಬಿಟ್ಟು ಅಂತರ್ ಜಿಲ್ಲಾ ವರ್ಗಾವಣೆಗೆ ಮನವಿ ಸಲ್ಲಿಸಿರುವ ಪೊಲೀಸ್ ಸಿ ಹಾಗು ಡಿ ನೌಕರರನ್ನು ಅಲೆದಾಡಿಸಿ ಅವರಿಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವುದು ಬಿಟ್ಟರೆ, ಸರ್ಕಾರ ಸಾಧಿಸಿದ್ದು ಏನೂ ಇಲ್ಲ. ಈ ವಿಷಯದ ಬಗ್ಗೆ ಸರ್ಕಾರ ಸೂಕ್ತವಾದ ನಿಯಮಗಳನ್ನು ರೂಪಿಸಬೇಕು, ಈಗಾಗಲೇ ಆರಂಭಿಸಿರುವ ಆನ್‌ಲೈನ್‌ ಪೋರ್ಟಲ್‌ನಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಹಾಗು ಕಾನೂನು ರೀತ್ಯಾ ವರ್ಗಾವಣೆ ಮಾಡಬೇಕು ಎಂದಿದ್ದಾರೆ.

ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಸಂಬಂಧಗಳು ಇರುತ್ತವೆ ಎನ್ನುವುದನ್ನು ಮನಗೊಂಡು ಸರ್ಕಾರ ಹಾಗು ಪೊಲೀಸ್ ಅಧಿಕಾರಿಗಳು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿನಂತಿಸಿಕೊಂಡಿದ್ದಾರೆ.

ಐಸಿಸ್ ನಂಟಿನ ಆರೋಪ ಮಾಡಿದವರ ಜೊತೆಗೇ ಯತ್ನಾಳ್ ವ್ಯಾವಹಾರಿಕ ಸಂಬಂಧ! ; ತಿರುಗುಬಾಣ ಆಯ್ತಾ ಯತ್ನಾಳ್ ತಂತ್ರ?
ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಐಸಿಸ್ ಬೆಂಬಲಿಗರ ನಂಟು ಇದೆ ಎಂಬ ಗಂಭೀರ ಆರೋಪ ಮಾಡಿದ್ದರು. ಮುಸ್ಲಿಂ ಧರ್ಮೀಯರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ನಿಂತಿದ್ದ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಅವರ ಫೋಟೊ ಉಲ್ಲೇಖಿಸಿ ಐಸಿಸ್ ನಂಟನ್ನು ಹೊಂದಿರುವವರ ಜೊತೆಗೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದರು.

ಅಷ್ಟೆ ಅಲ್ಲದೆ ನೇರವಾಗಿ ಕೇಂದ್ರ ಗೃಹ ಸಚಿವರಿಗೆ ಯತ್ನಾಳ್ ಪತ್ರ ಬರೆದಿದ್ದು, ಮೌಲ್ವಿ ಉಗ್ರರ ಸಂಪಕ ಹೊಂದಿರುವ ಆರೋಪದ ಬಗ್ಗೆ ಎನ್‍ಐಎ ತನಿಖೆ ನಡೆಸುವಂತೆ ಮನವಿ ಮಾಡಿ ಪತ್ರವನ್ನು ಬರೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಆದರೆ ಇದೇ ಹೇಳಿಕೆ ಈಗ ಶಾಸಕ ಯತ್ನಾಳ್ ಗೆ ತಿರುಗುಬಾಣವಾಗುವ ಸಾಧ್ಯತೆ ಹುಟ್ಟು ಹಾಕಿದೆ. ಶಾಸಕ ಯತ್ನಾಳ್ ಆರೋಪದ ಬೆನ್ನಲ್ಲೇ ಈಗ ಕಾಂಗ್ರೆಸ್ ಪಕ್ಷ ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಶ್ಮಿ ಅವರು ಬಿಜೆಪಿ ಮುಖಂಡರ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ವಿವಿಧ ಫೋಟೋಗಳನ್ನು ಬಿಡುಗಡೆ ಮಾಡಿ ಯತ್ನಾಳ್ ಹಾಗೂ ಬಿಜೆಪಿ ಪಕ್ಷವನ್ನು ಮುಜುಗರಕ್ಕೆ ಸಿಕ್ಕಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡಾ ತನ್ವೀರ್ ಹಾಶ್ಮಿಯವರ ಜೊತೆಗೆ ನಿಂತಿದ್ದ ಫೋಟೊ ಹಂಚಿಕೊಂಡ ಕಾಂಗ್ರೆಸ್ ಸಾಮಾಜಿಕ ಜಾಲತಾಣ, ‘ಯತ್ನಾಳ್ ಆರೋಪದ ಮೇಲೆಯೇ ಹೇಳುವುದಾದರೆ ಇವರ ಮೇಲೂ ಆರೋಪ ಯಾಕೆ ಮಾಡಿಲ್ಲ’ ಎನ್ನುವ ಮೂಲಕ ಗಂಭೀರವಾಗಿ ಯತ್ನಾಳ್ ನಡೆಯನ್ನು ಟೀಕಿಸಿದ್ದಾರೆ.

ಈ ಆರೋಪ ದೊಡ್ಡ ಮಟ್ಟಕ್ಕೆ ಸುದ್ದಿ ಆಗುತ್ತಿದ್ದಂತೆ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗೆ ಶಾಸಕ ಯತ್ನಾಳ್ ವ್ಯಾವಹಾರಿಕವಾಗಿಯೂ ಸಂಪರ್ಕ ಹೊಂದಿದ ಬಗ್ಗೆ ಪ್ರಜಾವಾಣಿ ವರದಿ ಮಾಡಿದೆ. ಯತ್ನಾಳ್ ಹಾಗೂ ತನ್ವೀರ್ ಹಾಶ್ಮಿ ವಿಜಯಪುರ ನಗರದ ಗಾಂಧಿಚೌಕದ ಬಳಿಯಿರುವ ‘ಟೂರಿಸ್ಟ್ ಹೋಟೆಲ್’ನ ಪಾಲುದಾರರಾಗಿರುವ ಬಗ್ಗೆ ಈ ವರದಿ ಬಹಿರಂಗಪಡಿಸಿದೆ.

ವಿಜಯಪುರ ನಗರದ ಹೊರವಲಯದ ಮಹಲ್ ಐನಾಪುರ ಗ್ರಾಮದ ವಿಜಯಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿಯೂ ಯತ್ನಾಳ್ ಹಾಗೂ ತನ್ವೀರ್ ಹಾಶ್ಮಿಯವರ ವಾಣಿಜ್ಯ ಮಳಿಗೆಗಳು ಅಕ್ಕಪಕ್ಕದಲ್ಲೇ ಇವೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರು ಹಾಶ್ಮಿಯವರ ಜೊತೆಗೆ ಇಷ್ಟೆಲ್ಲಾ ನಂಟು ಹೊಂದಿರುವ ಯತ್ನಾಳ್ ಅವರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಎತ್ತಿದ್ದಾರೆ. ಅಷ್ಟೆ ಅಲ್ಲದೆ ‘ಹಾಶ್ಮಿಯವರು ಐಸಿಸ್ ಜೊತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಿದ್ದಿದ್ದರೆ, ಇಷ್ಟು ವರ್ಷ ಏಕೆ ಯತ್ನಾಳ್ ಸುಮ್ಮನಿದ್ದರು? ಒಂದೋ ಯತ್ನಾಳ್ ಅವರು ಆರೋಪ ಸಾಬೀತು ಪಡಿಸಬೇಕು, ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇಷ್ಟೆಲ್ಲಾ ಆರೋಪಗಳ ನಡುವೆ ಮೌಲ್ವಿ ತನ್ವೀರ್ ಹಾಶ್ಮಿ ಮೌನ ಮುರಿದಿದ್ದು, “ನನಗೆ ಭಯೋತ್ಪಾದಕರ ಜೊತೆ ನಂಟಿದೆ ಎಂಬುವುದು ಖಾತ್ರಿಪಡಿಸಿದರೆ ದೇಶ ತೊರೆಯುತ್ತೇನೆ. ನೀವು ಮಾಡಿರುವ ಆರೋಪ ಸುಳ್ಳು ಎಂಬುವುದು ಖಚಿತವಾದರೆ ದೇಶ ತೊರೆಯಲು ಸಿದ್ದರಿದ್ದೀರಾ?” ಎಂದು ಸವಾಲ್ ಹಾಕಿದ್ದಾರೆ.

ವಿವಿಧ ಮಾಧ್ಯಮಗಳ ಫ್ಯಾಕ್ಟ್ ಚೆಕ್ ವಿಭಾಗಗಳು ನಡೆಸಿದ ತನಿಖೆ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ಆರೋಪ ಸುಳ್ಳು ಎಂದು ತಿಳಿದು ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ತನ್ವೀರ್ ಹಾಶ್ಮಿಯವರು ಯತ್ನಾಳ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗದೇ, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಒಲವು ಹೊಂದಿದ್ದ ಹಿನ್ನೆಲೆಯಲ್ಲಿ ಈ ರೀತಿಯ ಆರೋಪ ಮಾಡಿದ್ದಾರೆ. ವಯಕ್ತಿಕ ದ್ವೇಷದ ಕಾರಣಕ್ಕೆ ಮೌಲ್ವಿ ತನ್ವೀರ್ ಹಾಶ್ಮಿಯವರ ಸಾಮಾಜಿಕ ಜಾಲತಾಣ ಖಾತೆಯಲ್ಲಿನ ಫೋಟೋಗಳನ್ನು ಎತ್ತಿ ಈ ರೀತಿಯ ಅಪಪ್ರಚಾರಕ್ಕೆ ಯತ್ನಾಳ್ ಇಳಿದಿದ್ದಾರೆ ಎಂದೂ ತಿಳಿದು ಬಂದಿದೆ.

ಇತ್ತ ತನ್ವೀರ್ ಹಾಶ್ಮಿಯವರ ಜೊತೆಗೆ ವ್ಯಾವಹಾರಿಕವಾಗಿ ಸಂಬಂಧ ಹೊಂದಿರುವುದು ಸಾಭೀತುಪಡಿಸಬೇಕು, ಇಲ್ಲವಾದರೆ ಈ ರೀತಿಯ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಯತ್ನಾಳ್ ಗುಡುಗಿದ್ದಾರೆ. ಈ ಆರೋಪ ಪ್ರತ್ಯಾರೋಪಗಳನ್ನು ನೋಡಿದರೆ ಪ್ರಕರಣ ಸಂಪೂರ್ಣವಾಗಿ ಯತ್ನಾಳ್ ವಿರುದ್ಧವಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಯತ್ನಾಳ್ ಪರ ನಿಂತವರು ಮುಜುಗರಕ್ಕೆ ಸಿಕ್ಕುವ ಸಾಧ್ಯತೆಗಳೇ ಹೆಚ್ಚಿದೆ.

ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ತನಿಖೆ ವಾಪಸ್ : ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಯತ್ನಾಳ್
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಅಡಿಯಲ್ಲಿ ಡಿ.ಕೆ.ಶಿವಕುಮಾರ್ ಮೇಲಿದ್ದ ಪ್ರಕರಣ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದ ತನಿಖೆ ಮುಂದುವರೆಸಬೇಕು ಎಂದು ಯತ್ನಾಳ್ ಪಟ್ಟು ಹಿಡಿದಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಅಡಿಯಲ್ಲಿ ಅಂದಿನ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಕಳೆದ ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಕರಣವನ್ನು ಹಿಂಪಡೆಯಲು ನಿರ್ಣಯಿಸಿದೆ.

ಈ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ತಾವು ಸರ್ಕಾರದ ಕ್ರಮವನ್ನು ಕೋರ್ಟ್ ನಲ್ಲಿ ಪ್ರಶ್ನಿಸೋದಾಗಿಯೂ ತಿಳಿಸಿದ್ದರು. ಅದರಂತೆ ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಿಬಿಐ ತನಿಖೆಗೆ ಒಪ್ಪಿಗೆ ಹಿಂಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಕ್ರಮವಾಗಿಲ್ಲ ಎಂದು ಸೂಚಿಸಿ ಹೈಕೋರ್ಟ್ ಗೆ ಪ್ರಕರಣದ ತನಿಖೆ ಮುಂದುವರೆಸುವಂತೆ ಅರ್ಜಿ ಸಲ್ಲಿಸಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐಗೆ ನೀಡಲಾಗಿದ್ದಂತ ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣ ಹಿಂಪಡೆದ ಕ್ರಮವದ ಬಗ್ಗೆ ಸೂಕ್ತ ನಿರ್ದೇಶವನ್ನು ಸರ್ಕಾರಕ್ಕೆ ನೀಡುವಂತೆ ಕೋರಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಗೆ ಬಿಗ್ ಶಾಕ್ ಅನ್ನು ನೀಡಿದ್ದಾರೆ.

ಬಿಜೆಪಿಯಲ್ಲಿ ʻಜೋಕರ್ʼ ಆಗಿಯೇ ಉಳಿದುಬಿಟ್ಟರಾ ಬಸನಗೌಡ ಪಾಟೀಲ್‌ ಯತ್ನಾಳ್?‌
ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕ ಆದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಆರ್.ಅಶೋಕ್‌ ಅವರಿಗೆ ಒಲಿದುಬಂದಿದೆ. ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಇರುವುದು ಎರಡೇ ಪ್ರಮುಖ ಹುದ್ದೆಗಳು. ಈ ಎರಡರಲ್ಲಿ ಒಂದು ತನಗೆ ಒಲಿಯಬಹುದೆಂದು, ಅದರಲ್ಲೂ ಪ್ರತಿಪಕ್ಷ ನಾಯಕನ ಸ್ಥಾನ ತನಗೇ ದೊರೆಯಬಹುದೆಂದು ಕಾದಿದ್ದ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ದೊಡ್ಡ ನಿರಾಶೆಯಾಗಿದೆ. ನಿರಾಶೆ ಮಾತ್ರವಲ್ಲ ಅದು ಹತಾಶೆಯ ಹಾಗೂ ಕಾಣುತ್ತಿದೆ. ಬಿಜೆಪಿ ಪಾಲಿಗೆ ಯತ್ನಾಳ್‌ ಒಬ್ಬ ಜೋಕರ್‌ ಆಗಿಯೇ ಉಳಿದುಹೋಗಿದ್ದಾರೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದರು. ಅವರ ರಾಜಕೀಯ ಜೀವನದ ದೊಡ್ಡ ಸಾಧನೆ ಅದೇನೇ. ನಂತರ ಯತ್ನಾಳ್‌ ಪಕ್ಷ ತೊರೆದು ಜೆಡಿಎಸ್‌ ಸೇರಿದರು. ಅಲ್ಲೂ ಅವರು ಬಾಳಲಿಲ್ಲ. ಮತ್ತೆ ಬಿಜೆಪಿಗೆ ಬಂದರಾದರೂ ಪಕ್ಷದಲ್ಲಿ ಅವರು ಬಯಸುವ ಸ್ಥಾನಮಾನ ಸಿಗಲೇ ಇಲ್ಲ. ಬಹುಶಃ ಅದು ಸಿಗುವುದೂ ಇಲ್ಲ. ಯಾಕೆಂದರೆ ಬಿಜೆಪಿ ಯತ್ನಾಳ್‌ ಅವರನ್ನು ಎಂದೂ ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲ.

ಬಹುಶಃ ಇಡೀ ದೇಶದಲ್ಲಿ ಪಕ್ಷ ವಿರೋಧಿ ಮಾತುಗಳನ್ನು ಆಡಿದ ಎಲ್ಲ ರಾಜಕೀಯ ಪಕ್ಷಗಳ ಧುರೀಣರ ಪಟ್ಟಿ ಮಾಡಿದರೆ ಯತ್ನಾಳ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಬೇಕೆಂದರೆ ಹೈಕಮಾಂಡ್‌ ಗೆ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ ಕೊಡಬೇಕು ಎಂದುಬಿಟ್ಟಿದ್ದರು ಯತ್ನಾಳ್.‌ ಬೇರೆ ಯಾರಾದರೂ ಈ ಮಾತು ಆಡಿದ್ದರೆ ಇಪ್ಪತ್ತ್ನಾಲ್ಕು ಗಂಟೆಯೊಳಗೆ ಅವರು ಉಚ್ಛಾಟನೆಗೊಳ್ಳುತ್ತಿದ್ದರು. ಆದರೆ ಯತ್ನಾಳ್‌ ಅವರನ್ನು ಬಿಜೆಪಿ ನಾಯಕರು ಉಚ್ಛಾಟಿಸಲಿಲ್ಲ, ಕನಿಷ್ಠ ಅಮಾನತು ಕೂಡ ಮಾಡಲಿಲ್ಲ.

ಇದೊಂದೇ ವಿಷಯವೆಂದೇನಲ್ಲ, ಯತ್ನಾಳ್‌ ಸತತವಾಗಿ ಪಕ್ಷದ ನಾಯಕರ ವಿರುದ್ಧ ಗುರುಗುಟ್ಟುತ್ತಲೇ ಬಂದಿದ್ದಾರೆ. ಅದರಲ್ಲೂ ರಾಜ್ಯ ಬಿಜೆಪಿಯ ಮುಂಚೂಣಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಯತ್ನಾಳ್‌ ಹೇಳಿಕೆಗಳನ್ನೇ ಕೋಟ್‌ ಮಾಡುತ್ತಾ ಇದೆಲ್ಲ ನೋಡಿ ನಿಮ್ಮ ಪಕ್ಷದವರೇ ಹೇಳಿರೋದು ಎಂದು ಮುಜುಗರಕ್ಕೆ ಸಿಲುಕಿಸಿದ್ದರು. ಏನೇ ಆದರೂ ಯತ್ನಾಳ್‌ ಅವರ ವಿರುದ್ಧ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಲೇ ಇಲ್ಲ. ಒಂದು ಬಾರಿ ನೋಟೀಸ್‌ ಕೊಟ್ಟರೂ ಅದು ಮುಂದಕ್ಕೆ ಹೋಗಲೇ ಇಲ್ಲ. ಬಿಜೆಪಿ ನಾಯಕರಿಗೆ ಯತ್ನಾಳ್‌ ಪಕ್ಷ ಬಿಡುವುದೂ ಬೇಕಿಲ್ಲ. ಸಮಯ ಬಂದಾಗ ಎದುರಾಳಿಗಳ ವಿರುದ್ಧ ತನ್ನ ಹರಿತ ನಾಲಿಗೆಯಿಂದ ನಿಂದಿಸಲು ಯತ್ನಾಳ್‌ ಅವರಿಗೆ ಬೇಕು. ಹಿಂದು-ಮುಸ್ಲಿಂ ವಿಷಯ ಬಂದಾಗ ವಿಷ ಕಾರುವ ಹೇಳಿಕೆ ನೀಡಲೂ ಯತ್ನಾಳ್‌ ಬೇಕು. ಆದರೆ ಅಧಿಕಾರ-ಸ್ಥಾನಮಾನ ಮಾತ್ರ ಕೊಡುವುದಿಲ್ಲ.

ಯತ್ನಾಳ್‌ ಮುಸ್ಲಿಂ ಬಾಹುಳ್ಯವುಳ್ಳ ವಿಜಯಪುರ ಕ್ಷೇತ್ರದಿಂದ ಆರಿಸಿ ಬರುತ್ತಿದ್ದಾರೆ. ಅಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಒಂದು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು. ಹೇಳಿಕೇಳಿ ಯತ್ನಾಳ್‌ ಮುಸ್ಲಿಂ ದ್ವೇಷದ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ. ಹೀಗಿದ್ದೂ ಅಲ್ಲಿ ಗೆಲ್ಲುತ್ತಿರುವುದೇ ಯತ್ನಾಳ್‌ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ ಮತ್ತು ರಾಜಾರೋಷವಾಗಿ ಮುಸ್ಲಿಮರ ಮತಗಳು ತನಗೆ ಬೇಕಾಗಿಲ್ಲ ಎಂದು ಚುನಾವಣಾ ಪೂರ್ವದಲ್ಲಿ ಘೋಷಿಸಿಕೊಳ್ಳುತ್ತಾರೆ. ವಿಜಯಪುರದಲ್ಲಿ ಮುಸ್ಲಿಂ ಮತಗಳು ಪ್ರತಿ ಚುನಾವಣೆಯಲ್ಲಿ ವಿಭಜನೆಯಾಗಿ ಯತ್ನಾಳ್‌ ಗೆಲ್ಲುತ್ತಾರೆ. ಇದನ್ನು ತಡೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಪಕ್ಷ ಮಾಡಿಯೂ ಇಲ್ಲ. ಕೆಲವು ಹಿರಿಯ ಕಾಂಗ್ರೆಸ್‌ ಮುಖಂಡರು ಯತ್ನಾಳ್‌ ಗೆಲಿಸುವ ಸಲುವಾಗಿಯೇ ದುರ್ಬಲ ಅಭ್ಯರ್ಥಿಗಳನ್ನು ಹಾಕುತ್ತಾರೆ ಎಂಬ ಮಾತಿದೆ. ಹಿಂದೂಗಳ ಮತಗಳನ್ನೂ ಸೆಳೆಯಬಲ್ಲ ಪ್ರಬಲ ಅಭ್ಯರ್ಥಿಯನ್ನು ಸ್ಪರ್ಧೆಗೆ ತಂದರೆ ಯತ್ನಾಳ್‌ ಸೋಲುವುದು ಖಚಿತ. ಒಂದು ರೀತಿಯಲ್ಲಿ ಅವರಿಗೆ ಕಾಂಗ್ರೆಸ್‌ ಋಣವೂ ಇದೆ. ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಈ ಸೂಕ್ಷ್ಮಗಳೆಲ್ಲ ಗೊತ್ತಿಲ್ಲ. ಕ್ಷೇತ್ರದಿಂದ ಆಚೆಗೆ ಯತ್ನಾಳ್‌ ಅವರಿಗೆ ಇರುವ ಬೆಂಬಲ ಅಷ್ಟಕ್ಕಷ್ಟೆ. ಮೀಡಿಯಾಗಳ ಮುಂದೆ ಅಬ್ಬರಿಸುವುದನ್ನು ಹೊರತುಪಡಿಸಿ ರಚನಾತ್ಮಕವಾಗಿ ಕೆಲಸ ಮಾಡಿದ ಹಿನ್ನೆಲೆ ಯತ್ನಾಳ್‌ ಅವರಿಗಿಲ್ಲ. ಹೀಗಾಗಿ ಅವರಿಗೆ ಮಹತ್ವದ ಹುದ್ದೆಗಳನ್ನು ಅದು ಕೊಡುವುದೂ ಇಲ್ಲ.

ವಿರೋಧ ಪಕ್ಷದ ನಾಯಕಸ್ಥಾನ ತಪ್ಪಿದ ಸಿಟ್ಟಿನಲ್ಲಿ ಯತ್ನಾಳ್‌ ಮಾಧ್ಯಮದವರ ಜೊತೆ ಮಾತನಾಡುತ್ತ, ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರುಗಳನ್ನು ʻಚಿಂದಿ ಚೋರ್‌ʼಗಳು ಎಂದು ನಿಂದಿಸಿದ್ದಾರೆ. ಈಗಲೂ ಯಥಾಪ್ರಕಾರ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಬಿಜೆಪಿ ಯತ್ನಾಳ್‌ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಮುಂದೆಯೂ ಲೆಕ್ಕಕ್ಕೆ ಇಟ್ಟುಕೊಳ್ಳುವ ಸಾಧ್ಯತೆ ಇಲ್ಲ. ಇಸ್ಪೀಟ್‌ ಎಲೆಗಳ ನಡುವಿನ ಜೋಕರ್‌ ನಂತೆ ಯತ್ನಾಳ್‌ ಬಿಜೆಪಿಯಲ್ಲಿ ಇದ್ದಾರೆ ಅಷ್ಟೆ.

ಪ್ರಧಾನಮಂತ್ರಿಗಳೆಂದರೆ ಸರ್ವಾಧಿಕಾರಿಯೇ? : ಸಿಎಂ ಸಿದ್ದರಾಮಯ್ಯ
ಹಾಸನ : ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ ಅವರ ಆಡಳಿತವನ್ನು ಟೀಕಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಪ್ರಧಾನಮಂತ್ರಿಗಳ ವಿರುದ್ಧ ಸಿದ್ದರಾಮಯ್ಯ ದುರಹಂಕಾರದಿಂದ  ಮಾತನಾಡುತ್ತಾರೆ  ಎಂದು ಹೇಳಿದ ಬಗ್ಗೆ ಪ್ರಧಾನಿ ಏನು ಸರ್ವಾಧಿಕಾರಿಯೇ? ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪ್ರಧಾನಮಂತ್ರಿಗಳ ವಿರುದ್ಧ ಸಿದ್ದರಾಮಯ್ಯ  ಮಧ್ಯಪ್ರದೇಶದ ಚುನಾವಣೆಯಲ್ಲಿ ನನ್ನ ಬಗ್ಗೆಯೂ ಪ್ರಧಾನಿ ಮಾತನಾಡಿದ್ದಾರೆ. ಇದೂ ಸಹ ದುರಹಂಕಾರ ಅಲ್ಲವೇ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸರ್ಕಾರ ಕೇವಲ ಶಾಸಕರನ್ನು ಸೆಳೆಯುವ ಕೆಲಸದಲ್ಲಿ ಮಗ್ನವಾಗಿದೆ ಎಂದಿರುವ ಬಗ್ಗೆ ಮಾತನಾಡಿ ಕುಮಾರಸ್ವಾಮಿಯವರು ಯಾವಾಗ ಸತ್ಯವನ್ನು ಹೇಳಿದ್ದಾರೆ ಎಂದರು. ಸುಳ್ಳು ಆರೋಪಗಳನ್ನು ಮಾಡುವುದು, ಸುಳ್ಳು ಹೇಳುವುದನ್ನು ಬಿಟ್ಟರೆ ಬೆರೆ ಏನೂ ಮಾಡುತ್ತಿಲ್ಲ. ವಿರೋಧ ಪಕ್ಷ ಎಂದ ಮೇಲೆ ಸಲಹೆಗಳನ್ನು ನೀಡಬೇಕು ಎಂದರು.

ಪರಿಶೀಲನೆ ನಂತರ ಲೋಕಸಭಾ ಅಭ್ಯರ್ಥಿ ತೀರ್ಮಾನ
ಹಾಸನದ ಲೋಕಸಭಾ ಚುನಾವಣಾ ಅಭ್ಯರ್ಥಿ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಹಾಸನ ಜಿಲ್ಲೆಗೆ ಸಚಿವರನ್ನು ವೀಕ್ಷಕರಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿನ  ಜನನಾಯಕರ ಅಭಿಪ್ರಾಯಗಳ ವರದಿಯನ್ನು ಪಡೆದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಯತ್ನಾಳ್ ಶೇಮ್ ಲೆಸ್ ವ್ಯಕ್ತಿ
ಶಾಸಕ ಬಸವರಾಜ ಯತ್ನಾಳ್ ಅವರು ಕಾಂಗ್ರೆಸ್ ಶೇಮ್‍ಲೆಸ್ ಸರ್ಕಾರ ಎಂದು ಹೇಳಿರುವ ಬಗ್ಗೆ ಮಾತನಾಡಿ ಯತ್ನಾಳ್ ಅವರೇ ಶೇಮ್‍ಲೆಸ್ ವ್ಯಕ್ತಿ. ಅವರ ನಡವಳಿಕೆ ಸರಿಯಿಲ್ಲದ ಕಾರಣ ಬಿಜೆಪಿ ಅವರಿಗೆ ನೋಟೀಸು ಜಾರಿ ಮಾಡಿತ್ತು ಎಂದರು.