Bathroom video – Peepal Media

ಮಾಲ್‌ ನ ಬಾತ್‌ ರೂಮ್ ಗೆ ಕ್ಯಾಮರಾ ಇಟ್ಟ ಟೆಕ್ಕಿಯ ಬಂಧನ!
ಕೇರಳದ ಕೊಚ್ಚಿಯಲ್ಲಿರುವ ಪ್ರಸಿದ್ಧ ಶಾಪಿಂಗ್ ಕಾಂಪ್ಲೆಕ್ಸ್ ಲುಲು ಮಾಲ್‌ನಲ್ಲಿ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಹೊಕ್ಕು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿರುವ ಆರೋಪದ ಮೇಲೆ ಅಭಿಮನ್ಯು ಎಂಬ 23 ವರ್ಷದ ಟೆಕ್ಕಿಯನ್ನು ಬಂಧಿಸಲಾಗಿದೆ.

ಕೊಚ್ಚಿಯ ಇನ್ಫೋಪಾರ್ಕ್‌ನಲ್ಲಿರುವ ಪ್ರಮುಖ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಅಗಸ್ಟ್‌ 16, ಬುಧವಾರದಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಕೊಚ್ಚಿ ಪೊಲೀಸರು ತಿಳಿಸಿದ್ದಾರೆ. ತಪಾಸಣೆ ವೇಳೆ ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ಈತನ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ.

ಬಿ ಟೆಕ್ ಪದವೀಧರನಾಗಿರುವ ಆರೋಪಿ ಅಭಿಮನ್ಯು ಮೂಲತಃ ಕಣ್ಣೂರು ಜಿಲ್ಲೆಯ ಕರಿವೆಲ್ಲೂರಿನವನಾಗಿದ್ದು ಈತನ ಮೇಲೆ ಐಪಿಸಿಯ ಸೆಕ್ಷನ್ 354 (ಸಿ) ((Voyeurism – ಇತರರ ಲೈಂಗಿಕ ಕ್ರಿಯೆಯನ್ನು ಕದ್ದು ನೋಡುವುದು) ಮತ್ತು 419 (Impersonation – ಬುರ್ಖಾ ಹಾಕಿ ಬೇರೆಯವರಂತೆ ಸೋಗು ಹಾಕಿದ್ದು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಇ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ. ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ಗೆ ಪ್ರವೇಶಿಸಿ ತನ್ನ ಮೊಬೈಲ್ ಇಟ್ಟಿದ್ದಾನೆ. ನಂತರ ತನ್ನ ಫೋನನ್ನು ಸಣ್ಣ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ, ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾಗೆ ರಂಧ್ರವನ್ನು ಕೊರೆದು ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದಾನೆ ಎಂದು ಪೊಲೀಸರು ಸೇರಿಸಿದ್ದಾರೆ.

ನಂತರ ವಾಶ್‌ ರೂಮಿನ ಬಾಗಿಲ ಬಳಿ ನಿಂತಿದ್ದ ಈತನ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿದ ಮಾಲ್‌ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ. ನಂತರ ಆತನಿಂದ ಬುರ್ಖಾ ಹಾಗೂ ಮೊಬೈಲ್ ವಶಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿದ್ದಾರೆ.