bbmp – Peepal Media

ಮನೆ ಕಾಂಪೌಂಡ್​ ಒಳಗಿನ ಪಾರ್ಕಿಂಗ್​ಗೂ ಶುಲ್ಕ ಬಿಗ್ ಶಾಕ್ ನೀಡಿದ BBMP
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದೆಡೆ ಫ್ರೀ ಕೊಟ್ಟರೆ ಇನ್ನೊಂದೆಡೆ ಅದರ ದುಪ್ಪಟ್ಟು ಹಣವನ್ನು ಜನಸಾಮಾನ್ಯರ ಕೈಯಿಂದ ಕೀಳುತ್ತಿದೆ. ರಾಜ್ಯದಲ್ಲಿ ಇಂದಿನಿಂದ ಹಾಲು, ವಿದ್ಯುತ್​ ದರ ಏರಿಕೆಯಾಗಿದ್ದು, ರಾಜ್ಯದ ಜನರು ರೋಸಿ ಹೋಗಿದ್ದಾರೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಸದ್ದಿಲ್ಲದೆ ಮತ್ತೊಂದು ಸುತ್ತಿನ ಟ್ಯಾಕ್ಸ್ ಏರಿಕೆಗೆ ಬಿಬಿಎಂಪಿ ಪ್ಲಾನ್​ ಮಾಡಿದೆ.‌ಹೌದು.. ವಾಹನ ನಿಲ್ದಾಣದ ಪ್ರದೇಶವಾರು ಯೂನಿಟ್ ದರ ನಿರ್ಧರಿಸಲು ಕರಡು ಅಧಿಸೂಚನೆಯನ್ನು ಬಿಬಿಎಂಪಿ ಹೊರಡಿಸಿದ್ದು, ಈ ಸಂಬಂಧ ಸಾರ್ವಜನಿಕರು ಸಲಹೆ ಮತ್ತು ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ.

ಮನೆಯ ಕಾಂಪೌಂಡ್​, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲಾ ರೀತಿಯ ಕಟ್ಟಡಗಳಿಗೆ ಪಾರ್ಕಿಂಗ್ ದರ ಏರಿಕೆ ಮಾಡಲು ತೀರ್ಮಾನಿಸಿದೆ. ವಸತಿ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 600 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 2 ರೂ.) ವಸೂಲಿ ಮಾಡಲು ನಿರ್ಧರಿಸಲಾಗಿದೆ. ವಾಣಿಜ್ಯ ಅಥವಾ ವಸತಿಯೇತರ ಉದ್ದೇಶದ ಕನಿಷ್ಠ 150 ಚದರ ಅಡಿ ಪಾರ್ಕಿಂಗ್ ಸ್ಥಳಕ್ಕೆ ವಾರ್ಷಿಕ 1,125 ರೂ. ಪಾರ್ಕಿಂಗ್ ತೆರಿಗೆ (ಆರಂಭಿಕ ದರ) (ಚದರ ಅಡಿಗೆ 3 ರೂ.) ಸಂಗ್ರಹಿಸಲು ಬಿಬಿಎಂಪಿ ತೀರ್ಮಾನಿಸಿದೆ.ಮೊದಲೆಲ್ಲ ಕಮರ್ಷಿಯಲ್ ಇದ್ದರೆ, ಕಮರ್ಷಿಯಲ್ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಹಾಗೂ ವಸತಿ ಇದ್ದರೆ ವಸತಿ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕವನ್ನು ಬೇಕಾಬಿಟ್ಟಿಯಾಗಿ ವಸೂಲಿ ಮಾಡಲಾಗುತ್ತಿತ್ತು. ಆದರೆ ಇದೀಗ ಪಾರ್ಕಿಂಗ್​ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ.

BBMP ಯಿಂದ ಬೀದಿ ಬದಿಯ ಅಂಗಡಿಗಳ ತೆರವು, ಸಂಘಟನೆಗಳ ಖಂಡನೆ
ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, BBMP ಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ. ಬಿಬಿಎಂಪಿ ಗೆ ಸೇರಿದ ಕಾಂಪ್ಲೆಕ್ಸ್ ಹಾಗೂ ಬಸ್ ನಿಲ್ದಾಣದ ಆವರಣ ಹಾಗೂ ಫುಟ್ ಪಾತ್ ಗಳಲ್ಲಿ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಇಳಿದಿದೆ.

ನಗರದ ಜಯನಗರ ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಇದ್ದ ಬೀದಿ ಬದಿಯ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಇಂದು ನಡೆದಿದೆ. ಬಿಬಿಎಂಪಿ ಮಾರ್ಷಲ್ ಗಳು ಜಯನಗರದ ಬಿಡಿಎ ಕಾಂಪ್ಲೆಕ್ಸ್ ಪ್ರದೇಶದಿಂದ 400 ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದಾರೆ.

ದಶಕಗಳಿಂದಲೂ ಈ ಜಾಗದಲ್ಲಿ ಬೀದಿ ಬದಿಯ ವ್ಯಾಪಾರಿಗಳು ವ್ಯಾಪಾರ ನಡೆಸಿಕೊಂಡು ಬಂದಿದ್ದರೂ ಇಲ್ಲಿಯವರೆಗೆ ಈ ರೀತಿಯ ತೆರವು ಕಾರ್ಯ ನಡೆದಿರಲಿಲ್ಲ. ಅಷ್ಟೆ ಅಲ್ಲದೆ ಬಿಬಿಎಂಪಿ ಕಡೆಯಿಂದ ಈ ವ್ಯಾಪಾರಿಗಳು ಪರವಾನಗಿ ಕೂಡ ಪಡೆದವರಾಗಿದ್ದಾರೆ. ಆದರೆ ಬಿಬಿಎಂಪಿ ಏಕಾಏಕಿ ಇಂತಹ ನಿರ್ಧಾರ ತಗೆದುಕೊಂಡಿದ್ದು ಬೀದಿ ಬದಿಯ ವ್ಯಾಪಾರಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ಇಲ್ಲಿ ಬಿಬಿಎಂಪಿ ಪ್ರಕಾರ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಪರವಾನಗಿ ಹೊಂದಿದ್ದರೂ ಸಹ ಈ ಪ್ರದೇಶದಲ್ಲಿ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅನುಮತಿ ಇಲ್ಲ. ಮೂರು ತಿಂಗಳ ಹಿಂದೆ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ನೋಟಿಸ್ ಕೂಡಾ ನೀಡಿತ್ತು.

ಬಿಬಿಎಂಪಿ ಮಾರ್ಷಲ್ಗಳು ಇತ್ತೀಚೆಗೆ ಮಾರಾಟಗಾರರಿಗೆ ಸ್ಥಳದಿಂದ ತೆರವುಗೊಳಿಸುವಂತೆ ಮಾಹಿತಿ ನೀಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ನಡೆಸಲು ಯಾವುದೇ ಪರ್ಯಾಯ ಪ್ರದೇಶಗಳನ್ನು ನಿಗದಿಪಡಿಸಲಾಗಿಲ್ಲ.

ಸಧ್ಯ ಜಯನಗರ ಪ್ರದೇಶದಲ್ಲಿ ನಡೆದ ಈ ತೆರವು ಕಾರ್ಯಾಚರಣೆಗೆ ಅನೇಕ ಕಾರ್ಮಿಕ ಸಂಘಟನೆಗಳು, ಬೀದಿಬದಿ ವ್ಯಾಪಾರಿಗಳ ಒಕ್ಕೂಟಗಳು ಖಂಡನೆ ವ್ಯಕ್ತಪಡಿಸಿದೆ. ಬೀದಿ ಬದಿ ವ್ಯಾಪಾರಿ ಕಾಯ್ದೆಯ ಪ್ರಕಾರ, ವ್ಯಾಪಾರ ನಡೆಸಲು ಪರ್ಯಾಯ ಸ್ಥಳಗಳಿಗೆ ಹಂಚಿಕೆ ಮಾಡದೆ ನಾಗರಿಕ ಸಂಸ್ಥೆ ಬೀದಿ ಬದಿ ವ್ಯಾಪಾರಿಗಳನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಎಐಸಿಸಿಟಿಯು ಹೇಳಿದೆ.

ದ್ವೇಷ ಭಾಷಣದಲ್ಲಿ ಬಿಜೆಪಿಗೆ ಪ್ರಥಮ ಸ್ಥಾನ! -ಎಡಿಆರ್‌ ವರದಿ: ಕರ್ನಾಟಕದಲ್ಲಿ ಯಾರು ವಿಜೇತರು?
ಬೆಂಗಳೂರು, ಅಕ್ಟೋಬರ್‌.06:  ಒಟ್ಟು 107 ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳಿದ್ದು, ಅವರಲ್ಲಿ  ಸುಮಾರು 40% ಮಂದಿ ಬಿಜೆಪಿಯವರು ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.

Association of Democratic Reforms (ADR) ಮತ್ತು National Election Watch (New) ತಯಾರಿಸಿರುವ ಈ ವರದಿ ಅಕ್ಟೋಬರ್‌ 3, ಮಂಗಳವಾರದಂದು ಬಿಡುಗಡೆಯಾಗಿದ್ದು, ಇದನ್ನು ಕಳೆದ ಚುನಾವಣೆಯ ಸಂದರ್ಭದಲ್ಲಿ ಹಾಲಿ ಸಂಸದ, ಶಾಸಕರು ಸಲ್ಲಿಸಿರುವ ಅಫಿಡವಿಟ್‌ನ ಮಾಹಿತಿಗಳಿಂದ ತಯಾರು ಮಾಡಲಾಗಿದೆ.

ವರದಿಯನ್ನು ಇಲ್ಲಿ ಓದಿ: Analysis of Sitting MPs/MLAs with Declared Cases Related to Hate Speech

ಭಾರತೀಯ ಕಾನೂನಿನಲ್ಲಿ ದ್ವೇಷಕಾರಿ ಭಾಷಣಕ್ಕೆ ಸಂಬಂಧ ಪಟ್ಟ ಯಾವುದೇ ವ್ಯಾಖ್ಯಾನಗಳಿಲ್ಲ. ಆದರೆ ಕಾನೂನು ಆಯೋಗದ ವರದಿ ಸಂಖ್ಯೆ 267 ರ ಪ್ರಕಾರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(A), 153(B), 295(A), 298, 505(1) ಮತ್ತು 505 (2) ದ್ವೇಷದ ಭಾಷಣಕ್ಕೆ ಸಂಬಂಧಿಸಿದೆ. ಅಲ್ಲದೇ ಸೆಕ್ಷನ್ 8, ಸೆಕ್ಷನ್ 123 (3A) ಮತ್ತು ಸೆಕ್ಷನ್ 125 ಸೆಪ್ರೆಸೆಂಟೇಷನ್ ಆಫ್ ಪೀಪಲ್ ಆಕ್ಟ್, 1951‌ ಮೂಲಕ ದ್ವೇಷ ಭಾಷಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಕಾನೂನು ಆಯೋಗದ ವರದಿ-267ಯನ್ನು ಇಲ್ಲಿ ಓದಿ: Law Commission Report No. 267- on Hate Speech

ಏನಿದೆ ವರದಿಯಲ್ಲಿ?

ಎಡಿಆರ್‌ ವರದಿಯ ಪ್ರಕಾರ, ಒಟ್ಟು 763 ಹಾಲಿ ಸಂಸದರಲ್ಲಿ 33 ಮತ್ತು ಒಟ್ಟು 4,005 ಹಾಲಿ ಶಾಸಕರ ಪೈಕಿ 74 ಮಂದಿ ತಮ್ಮ ಅಫಿಡವಿಟ್‌ನಲ್ಲಿ ದ್ವೇಷ ಭಾಷಣಕ್ಕೆ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಬಿಜೆಪಿಯೇ ಇಂತಹ ಹೆಚ್ಚು ಶಾಸಕ ಹಾಗೂ ಸಂಸದರನ್ನು ಹೊಂದಿದೆ.

ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿರುವ 33 ಹಾಲಿ ಸಂಸದರ ಪೈಕಿ 22 ಮಂದಿ ಬಿಜೆಪಿಯವರೇ ಆಗಿದ್ದಾರೆ.

ಇತರ ಪಕ್ಷಗಳ ಸಂಸದರ ಪೈಕಿ ಕಾಂಗ್ರೆಸ್‌ನ ಇಬ್ಬರು, ಆಮ್ ಆದ್ಮಿ ಪಕ್ಷ (AAP), AIMIM, AIUDF, DMK, MDMK , ಪಟ್ಟಾಲಿ ಮಕ್ಕಳ್ ಕಚ್ಚಿ, ಶಿವಸೇನೆ (ಉದ್ಧವ್ ಠಾಕ್ರೆ), ವಿಡುತಲೈ ಚಿರುತೈಗಲ್ ಕಚ್ಚಿಯ ತಲಾ ಒಬ್ಬರು ಮತ್ತು ಮತ್ತು ಒಬ್ಬ ಸ್ವತಂತ್ರ ಸಂಸದನ ಮೇಲೆ ಈ ಪ್ರಕರಣ ದಾಖಲಾಗಿದೆ.

74 ಶಾಸಕರ ಪೈಕಿ 20 ಮಂದಿ ಬಿಜೆಪಿಯವರು, ಕಾಂಗ್ರೆಸ್‌ನ 13, ಎಎಪಿಯ 6, ಸಮಾಜವಾದಿ ಪಕ್ಷ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ತಲಾ 5, ಡಿಎಂಕೆ ಮತ್ತು ಆರ್‌ಜೆಡಿಯ ತಲಾ 4, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಮೂರು ಶಾಸಕರ ಮೇಲೆ ದ್ವೇಷ ಭಾಷಣದ ಕೇಸ್‌ ದಾಖಲಾಗಿದೆ.

AIUDFನ ಇಬ್ಬರು ಮತ್ತು AIMIM, CPI(M), NCP, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ, ಟಿಡಿಪಿ, ಟಿಪ್ರ ಮೋಥಾ ಪಾರ್ಟಿ ಮತ್ತು ಬಿಆರ್‌ಎಸ್‌ನ ತಲಾ ಒಬ್ಬರ ಹಾಗೂ ಇಬ್ಬರು ಸ್ವತಂತ್ರ ಶಾಸಕರ ವಿರುದ್ಧವೂ ದ್ವೇಷ ಭಾಷಣದ ಪ್ರಕರಣಗಳಿವೆ.

ಯಾವ ರಾಜ್ಯಕ್ಕೆ ಪ್ರಥಮ ಸ್ಥಾನ?

ದ್ವೇಷಕಾರುವ ಭಾಷಣ ಮಾಡುವ ಹೆಚ್ಚು ಸಂಸದರನ್ನು ಹೊಂದಿರುವ ಉತ್ತರ ಪ್ರದೇಶ ಪ್ರಥಮ ಸ್ಥಾನವನ್ನು ಪಡೆದಿದೆ. ಇಲ್ಲಿನ ಏಳು ಹಾಲಿ ಸಂಸದರ ಮೇಲೆ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ದ್ವಿತೀಯ ಸ್ಥಾನ ಪಡೆದಿರುವ ತಮಿಳುನಾಡಿನ ನಾಲ್ಕು ಸಂಸದರ, ಬಿಹಾರ, ಕರ್ನಾಟಕ ಮತ್ತು ತೆಲಂಗಾಣದ ತಲಾ ಮೂರು ಸಂಸದರ ಮೇಲೆ ಈ ಕೇಸುಗಳಿವೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಸಂಸದರಿದ್ದು, ಈ ರಾಜ್ಯಗಳು ತೃತೀಯ ಸ್ಥಾನ ಪಡೆದಿವೆ.  ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್‌ನಿಂದ ತಲಾ ಒಬ್ಬ ಸಂಸದರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದ್ವೇಷ ಕಾರುವ ಭಾಷಣ ಮಾಡುವ ಶಾಸಕರ ಪೈಕಿ ತಲಾ ಒಂಬತ್ತು ಮಂದಿ ಬಿಹಾರ ಮತ್ತು ಉತ್ತರ ಪ್ರದೇಶದವರಾಗಿದ್ದು, ಈ ರಾಜ್ಯಗಳು ಶಾಸಕರ ವಿಭಾಗದಲ್ಲಿ ಪ್ರಥಮ ಸ್ಥಾನಗಳನ್ನು ಪಡೆದಿವೆ.

ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದ ಆರು ಶಾಸಕರು ತಮ್ಮ ರಾಜ್ಯಗಳನ್ನು ದ್ವಿತೀಯ ಸ್ಥಾನಕ್ಕೆ ತಂದಿದ್ದಾರೆ, ಅಸ್ಸಾಂ ಮತ್ತು ತಮಿಳುನಾಡಿನ ತಲಾ ಐವರು ಹಾಗೂ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳದ ತಲಾ ನಾಲ್ಕು ಜನ ಶಾಸಕರು ದ್ವೇಷ ಭಾಷಣದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಜಾರ್ಖಂಡ್ ಮತ್ತು ಉತ್ತರಾಖಂಡದಿಂದ ತಲಾ ಮೂವರು ಶಾಸಕರು, ಕರ್ನಾಟಕ, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರದ ತಲಾ ಇಬ್ಬರು ಶಾಸಕರು ಹಾಗೂ ಮಧ್ಯಪ್ರದೇಶ, ಒಡಿಶಾದ ತಲಾ ಓರ್ವ ಶಾಸಕರು ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಫಿಡವಿಟ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.

ಎಡಿಆರ್‌ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ದ್ವೇಷ ಭಾಷಣದ ಪ್ರಕರಣವನ್ನು ಹೊಂದಿರುವ ಒಟ್ಟು 480 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗಳು, ಲೋಕಸಭೆ ಮತ್ತು ರಾಜ್ಯಸಭೆಯ ಚುನಾವಣೆಗಳಿಗೆ ಸ್ಪರ್ಧಿಸಿದ್ದಾರೆ.

“ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ, ಅದರಲ್ಲೂ ಮತೀಯ ದ್ವೇಷವನ್ನು ಉತ್ತೇಜಿಸುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಕೃತ್ಯಗಳನ್ನು ಎಸಗುವ ಆರೋಪ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ರಾಜಕೀಯ ಪಕ್ಷಗಳು ಗುಂಪುಗಳ ನಡುವೆ ಹಿಂಸಾಚಾರ – ಕೋಮುಗಲಭೆಯಂತಹ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ,” ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ ದ್ವೇಷ ಭಾಷಣ ಸ್ಪರ್ಧೆಯ ವಿಜೇತರು ಯಾರ್ಯಾರು?

ಕರ್ನಾಟಕದಲ್ಲಿ ಕಾರ್ಕಳ ಶಾಸಕ ವಿ ಸುನೀಲ್‌ ಕುಮಾರ್‌ ಅವರ ಮೇಲೆ ದ್ವೇಷಕಾರಿ ಭಾಷಣಕ್ಕಾಗಿ IPC Sections – 153A, 505A ಅಡಿಯಲ್ಲಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (FIR No. – Crime No.16/2018)

ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರ ಮೇಲೆ ಎಂಟು ಕೇಸುಗಳು ದಾಖಲಾಗಿವೆ. ಇದರಲ್ಲಿ ಅಶ್ಲೀಲ ಪುಸ್ತಕ, ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ IPC Section-292, ಮಹಿಳೆಯ ಮೇಲೆ ಹಲ್ಲೆ IPC Section-354B, ಲೈಂಗಿಕ ದೌರ್ಜನ್ಯ IPC Section-354A, ಮೋಸ IPC Section420, ಫೋರ್ಜರಿ IPC Section-468, ಲಂಚ IPC Section-171B ಇತ್ಯಾದಿ ಕೇಸುಗಳೂ ಮುನಿರತ್ನ ಮೇಲೆ ದಾಖಲಾಗಿವೆ.

“ದ್ವೇಷ ಭಾಷಣವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಂಕೀರ್ಣ ಸವಾಲು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸಲು ಐಪಿಸಿಯಲ್ಲಿ ಹೊಸ ನಿಬಂಧನೆಗಳನ್ನು ಸೇರಿಸುವ ಅಗತ್ಯವಿದೆ. IPC, 1860 ಮತ್ತು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, 1973 (the Code of Criminal Procedure, 1973) ಗೆ ತಿದ್ದುಪಡಿಗಳು, ಕೆಲವು ಪ್ರಕರಣಗಳಲ್ಲಿ ಹಿಂಸಾಚಾರದ ಪ್ರಚೋದನೆಯನ್ನು ‘ದ್ವೇಷಕ್ಕೆ ಪ್ರಚೋದನೆಯನ್ನು ನಿಷೇಧಿಸುವುದು – Prohibiting incitement to hatred’ ಎಂಬ ಹೊಸ ನಿಬಂಧನೆಗಳನ್ನು ಸೇರಿಸುವ ಮೂಲಕ IPC ಸೆಕ್ಷನ್ 505 ಅನ್ನು ಅನುಸರಿಸಿ, ಮತ್ತು ಅದಕ್ಕೆ ಅನುಗುಣವಾಗಿ CrPC ಯ ಮೊದಲ ಪರಿಚ್ಛೇದದಲ್ಲಿ ತಿದ್ದುಪಡಿ ಮಾಡಬೇಕು,” ಎಂಬ ಕಾನೂನು ಆಯೋಗದ ವರದಿಯ ಶಿಫಾರಸ್ಸನ್ನು ಎಡಿಆರ್‌ ವರದಿ ಒಪ್ಪಿಕೊಂಡಿದೆ.

ಚುನಾವಣೆಯ ಮೊದಲು, ಚುನಾವಣಾ ಸಮಯದಲ್ಲಿ ಮತ್ತು ನಂತರ ದ್ವೇಷಪೂರಿತ ಭಾಷಣ ಮಾಡುವ ಅಭ್ಯರ್ಥಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. “ಕಾನೂನುಬಾಹಿರ” ಹೇಳಿಕೆಗಳನ್ನು ನೀಡಲು ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಅದು ಎಡಿಆರ್ ಹೇಳಿದೆ. “ಆದ್ದರಿಂದ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿರುವ ಇಂತಹ ಕಾನೂನುಬಾಹಿರ ಹೇಳಿಕೆಗಳನ್ನು ಪರಿಶೀಲಿಸಬೇಕು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಬೇಕು” ಎಂದು ಎಡಿಆರ್ ಶಿಫಾರಸು ಮಾಡಿದೆ.

ಬಿಜೆಪಿ ಬಾನಗಡಿಯ ತನಿಖೆಗೆ ಆದೇಶದ ಬೆನ್ನಲ್ಲೇ ಬೆಂಗಳೂರು ಪಾಲಿಕೆಯಲ್ಲಿ ಬೆಂಕಿ: ತನಿಖೆಗೆ ಆದೇಶಿಸಿದ ಮುಖ್ಯಮಂತ್ರಿ
ಬೆಂಗಳೂರು ನಗರ ಪಾಲಿಕೆಯ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು 9 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ.

ಈ ಘಟನೆ ಸಂಜೆ 5ರಿಂದ 5.30ರ ನಡುವೆ ನಡೆದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನಾನು ಕಛೇರಿಯಲ್ಲಿದ್ದೆ, ಕರೆಂಟ್‌ ಹೋಗಿತ್ತು, ನಂತರ ನಮ್ಮ ಕಚೇರಿಯ ಹಿಂಭಾಗದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನನಗೆ ತಿಳಿಯಿತು. ಅಲ್ಲಿಗೆ ಹೋದಾಗ, ಕಟ್ಟಡದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆ. ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ. ಅಲ್ಲಿ ಕೆಲಸ ಮಾಡುವವರು ಗಾಯಗೊಂಡರು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು,” ಅವರು ಹೇಳಿದರು.

ಗಾಯಾಳುಗಳನ್ನು ಸಮೀಪದ ಸೈಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗಕ್ಕೆ ದಾಖಲಿಸಲಾಗಿದೆ.

ಮುಖ್ಯ ಎಂಜಿನಿಯರ್ ಸೇರಿದಂತೆ ಒಂಬತ್ತು ಎಂಜಿನಿಯರ್‌ಗಳಿಗೆ ಗಾಯಗಳಾಗಿವೆ ಎಂದು ನಾಥ್ ಹೇಳಿದರು. ಆದರೆ, ಅವರ ಆರೋಗ್ಯದ ಸ್ಥಿತಿಯ ಕುರಿತು ವಿವರಿಸಲು ನಿರಾಕರಿಸಿದರು.

ವಸ್ತುಗಳಿಗೆ ಹಾನಿಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ, ಬಿಬಿಎಂಪಿ ಮುಖ್ಯಸ್ಥರು ಅದನ್ನು ನಂತರ ತಿಳಿಯಬಹುದು ಎಂದು ಹೇಳಿದರು.

ಸದ್ಯ ಅಲ್ಲಿ ಸುಟ್ಟು ಕರಕಲಾದ ವಿಷಯದ ಬಗ್ಗೆ ಗಮನ ಹರಿಸುತ್ತಿಲ್ಲ, ಅದು ನಂತರ ತಿಳಿಯಲಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.

ನ್ಯಾಯಾಂಗ ತನಿಖೆಯ ಹೊರತಾಗಿ, ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಾಗರಿಕ ಸಂಸ್ಥೆಯಲ್ಲಿನ ಅಕ್ರಮಗಳ ತನಿಖೆಗಾಗಿ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ಸಮಿತಿಗಳನ್ನು ರಚಿಸಿದ್ದಾರೆ.

ಸಿದ್ದರಾಮಯ್ಯ ಅವರು ಉಪ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಹೇಗೆ ಮತ್ತು ಏಕೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸುವಂತೆ ನಾಥ್ ಅವರಿಗೆ ಆದೇಶಿಸಿದ್ದಾರೆ. ಗಾಯಾಳುಗಳ ಮುಖ ಮತ್ತು ಕೈಗಳಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು, “ಗಾಯಾಳುಗಳಿಗೆ ಶೇಕಡಾ 30ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಅವರು ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆಯಿದೆ” ಎಂದು ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿ ಬೆಂಕಿ ; 9 ಕ್ಕೂ ಹೆಚ್ಚು ನೌಕರರಿಗೆ ಗಾಯ
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕೇಂದ್ರ ಕಚೇರಿಯ ಕಟ್ಟಡದಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, 9 ಕ್ಕೂ ಹೆಚ್ಚು ನೌಕರರು ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.

ಸಂಜೆ ವೇಳೆಗೆ ಕಚೇರಿಯ ತಾಂತ್ರಿಕ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರೂ ಘಟನಾ ಸ್ಥಳಕ್ಕೆ ಅರ್ಧಗಂಟೆ ತಡವಾಗಿ ಬಂದ ಕಾರಣ ಕೆಲವು ನೌಕರರಿಗೆ ಬೆಂಕಿ ನಂದಿಸಲು ಮುಂದಾಗಿದೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿಯನ್ನು ಸಂಪೂರ್ಣ ನಂದಿಸಿದ್ದು, ಪರಿಸ್ಥಿತಿ ಹತೋಟಿಗೆ ಬಂದಿದೆ.

ಒಟ್ಟು 9 ಮಂದಿಗೆ ಗಾಯ.

2 ಮಹಿಳೆಯರು, 7 ಪುರುಷರಿಗೆ ಗಾಯ.

ಮುಖ್ಯ ಅಭಿಯಂತರರಾದ ಶಿವಕುಮಾರ್ ರವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆ ನೀಡಲು ಕರೆತರಲಾಗಿದೆ.

ಉಳಿದ 8 ಮಂದಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ ಗಳ ಮೂಲಕ ವಿಕ್ಟೋರೊಯಾ ಆಸ್ಪತ್ರೆಗೆ ರವಾನಿಸಲಾಯಿತು.

ಗುಣನಿಯಂತ್ರಣ ಪ್ರಯೋಗಾಲಯ:

ಶಿವಕುಮಾರ್, ಮುಖ್ಯ ಅಭಿಯಂತರರು.

ಕಿರಣ್, ಕಾರ್ಯಪಾಲಕ ಅಭಿಯಂತರರು.

ಸಂತೋಷ್ ಕುಮಾರ್, ಕಾರ್ಯಪಾಲಕ ಅಭಿಯಂತರರು.

ವಿಜಯಮಾಲ, ಕಾರ್ಯಪಾಲಕ ಅಭಿಯಂತರರು.

ಶ್ರೀಧರ್, ಸಹಾಯಕ ಕಾರ್ಯಪಾಲಕ ಅಭಿಯಂತರರು.

ಸಿರಾಜ್, ಪ್ರಥಮ ದರ್ಜೆ ಸಹಾಯಕರು.

ಜ್ಯೋತಿ, ಆಪರೇಟರ್.

ಶ್ರಿನಿವಾಸ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್.

ಮನೋಜ್, ಗಣಕಯಂತ್ರ ನಿರ್ವಾಹಕರು.

ಘಟನೆಯಲ್ಲಿ ಸುಮಾರು 9 ಕ್ಕೂ ಹೆಚ್ಚು ನೌಕರರಿಗೂ ಸುತ್ತು ಗಾಯಗಳಾಗಿದ್ದರೆ, ಅವರನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂತಹ ಗಂಭೀರ ಗಾಯಗಳು ಆಗದಿದ್ದರೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾದಿಂದ ಪಾರಾಗಿದ್ದಾರೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸ್ಥಳಕ್ಕೆ ದಾವಿಸಿ ಪರಿಶೀಲನೆ

ಆತ್ಮಹತ್ಯೆ ಪ್ರಕರಣ : ಮಾಧ್ಯಮಗಳ ಸುಳ್ಳುಗಳು, ಬಿಜೆಪಿ ನಾಯಕರ ಟ್ವೀಟ್ ಗಳು..
ಬೆಂಗಳೂರಿನಲ್ಲಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅಡಿಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ಹಾಗೂ ಬಿಜೆಪಿ ಪಕ್ಷದ ಕೆಲವು ನಾಯಕರು ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಗುತ್ತಿಗೆದಾರನೇ ಅಲ್ಲ ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ದೊಡ್ಡಯ್ಯ ಅವರ ಮಗ ಗೌತಮ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಗೌತಮ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಕೆಲವು ಪ್ರಮುಖ ಸುದ್ದಿವಾಹಿನಿಗಳು ಆತ ಒಬ್ಬ ಗುತ್ತಿಗೆದಾರ, ಬಿಲ್ ಪಾವತಿ ವಿಳಂಬದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆತ್ಮಹತ್ಯೆಗೆ ಸರ್ಕಾರವೇ ಪರೋಕ್ಷ ಹೊಣೆ ಎಂಬಂತೆ ಬೇಜವಾಬ್ದಾರಿಯಾಗಿ ವರದಿ ಬಿತ್ತರಿಸಿವೆ.

ಇತ್ತ ರಾಜ್ಯದ ಕೆಲವು ಗುತ್ತಿಗೆದಾರರೂ ಸಹ ಬಾಕಿ ಬಿಲ್ ಪಾವತಿಗಾಗಿ ಬೀದಿಯಲ್ಲಿ ನಿಂತು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಈ ಸುದ್ದಿ ಹೆಚ್ಚು ಮಹತ್ವ ಪಡೆದಿದೆ. ಇದನ್ನೇ ಹಿಂದೆ ಮುಂದೆ ಯೋಚಿಸದೇ ಬಿಜೆಪಿ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆ ನ್ಯೂಸ್ ಚಾನಲ್ ಬಿತ್ತರಿಸಿದ ಸುಳ್ಳು ಸುದ್ದಿಯನ್ನೆ ಹಂಚಿಕೊಂಡು, ಸರ್ಕಾರದ ಮೇಲೆ ಆರೋಪ ಮಾಡಿದೆ.

ಅಧಿಕಾರಕ್ಕೆ ಬಂದ ದಿನದಿಂದ ಕಲೆಕ್ಷನ್, ಕಮಿಷನ್ ಎನ್ನುತ್ತಾ ಲೂಟಿಗಿಳಿದ ಪರಿಣಾಮವೇ ಇಂದು ಬಿಬಿಎಂಪಿ ಗುತ್ತಿಗೆದಾರ ಗೌತಮ್ ಕಾಮಗಾರಿ ಬಿಲ್‌ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರ ಕೊಡಲ್ಲ, ಆಣೆ ಮಾಡೋಲ್ಲ, ಪ್ರತಿಭಟನೆ ಮಾಡಿದ್ರೆ ಬ್ಲ್ಯಾಕ್ ಮೇಲ್ ಎನ್ನುತ್ತ ಬೇಜವಾಬ್ದಾರಿಯಿಂದ ವರ್ತಿಸಿದ ಡಿಸಿಎಂ @DKShivakumar ಮತ್ತು… pic.twitter.com/7ZVdcyCntH
— BJP Karnataka (@BJP4Karnataka) August 10, 2023

ಅಷ್ಟೆ ಅಲ್ಲದೆ ಬಿಜೆಪಿ ನಾಯಕ ಸಿಟಿ ರವಿ ಕೂಡಾ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ‘ಇದು ರಾಜ್ಯದ ಗುತ್ತಿಗೆದಾರರಿಗೆ ಕಾಂಗ್ರೆಸ್ ಸರ್ಕಾರದ ಸೂಸೈಡ್ ಭಾಗ್ಯ. ಬಿಲ್ ಪಾವತಿ ವಿಳಂಬದ ಕಾರಣಕ್ಕೆ ಬಿಬಿಎಂಪಿ ಗುತ್ತಿಗೆದಾರ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..’ ಎನ್ನುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.

The CONgress government in Karnataka has come up with “Suicide Bhagya” for Contractors.

BBMP contractor Shri Gautam has committed suicide after facing delays in getting his payment for the work executed by him.

Recently, BBMP contractors had accused the State’s Deputy Chief… pic.twitter.com/A1E56kBggf
— C T Ravi 🇮🇳 ಸಿ ಟಿ ರವಿ (@CTRavi_BJP) August 10, 2023

ಅಷ್ಟೆ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಸರ್ಕಾರ ಗುತ್ತಿಗೆದಾರರು ಬಾಕಿ ಬಿಲ್ ಪಾವತಿ ಮಾಡದೇ ಇದ್ದದ್ದಕ್ಕೆ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೂಡಾ ನೀಡಿದರು.

ಆದರೆ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಗೌತಮ್ ಕುಟುಂಬಸ್ಥರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಅಷ್ಟೆ ಅಲ್ಲದೆ ಆತ ಗುತ್ತಿಗೆದಾರನೇ ಅಲ್ಲ, ಆತನ ಹೆಸರಿನಲ್ಲಿ ಗುತ್ತಿಗೆದಾರಿಕೆಯ ಲೈಸೆನ್ಸ್ ಕೂಡಾ ಇಲ್ಲ. ಆತ ಸ್ವಂತದ್ದಾಗಿ ಒಂದು ಕೋಳಿ ಫಾರಂ ನಡೆಸುತ್ತಿದ್ದದ್ದು ಬಿಟ್ಟರೆ ಬೇರೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲ ದಿನಗಳಿಂದ ಗೌತಮ್ ಡಿಪ್ರೆಷನ್ ಗೆ ಒಳಗಾಗಿದ್ದಾರೆ. ಸರಿಯಾಗಿ ಊಟ ತಿಂಡಿ ಮಾಡುತ್ತಿರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಇದರ ನಡುವೆ ಆತನಿಗೆ ಮದುವೆ ತಯಾರಿ ಕೂಡಾ ನಡೆದಿತ್ತು. ಮದುವೆ ಸಂಬಂಧ ಮಾತುಕತೆ ಕೂಡಾ ನಡೆದಿತ್ತು. ಇದೇ ಕಾರಣಕ್ಕೆ ಆತ ಡಿಪ್ರೆಷನ್ ಗೆ ಹೋಗಿದ್ದ. ಆತ್ಮಹತ್ಯೆಗೂ ಹಿಂದಿನ ದಿನ ರಾತ್ರಿ ತಡವಾಗಿ ಮನೆಗೆ ಬಂದಿದ್ದಾನೆ. ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ ಹಿನ್ನೆಲೆಯಲ್ಲಿ ಆತನ ರೂಮಿನಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣದ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟಾದರೂ ಇದೊಂದು ಸುಳ್ಳು ಸುದ್ದಿ ಎಂಬ ಮಾಹಿತಿ ಹೊರ ಬಂದರೂ ಬಿಜೆಪಿ ಪಕ್ಷವಾಗಲಿ, ಬಿಜೆಪಿ ನಾಯಕರಾಗಲಿ ತಮ್ಮ ಟ್ವಿಟ್  ತಪ್ಪು ಮಾಹಿತಿಯಿಂದ ಬಂದದ್ದು ಎಂದು ಸ್ಪಷ್ಟಪಡಿಸಿಲ್ಲ. ಅಷ್ಟೆ ಅಲ್ಲದೆ ತಾವು ಮಾಡಿದ ಟ್ವಿಟ್ ನ್ನು ಇನ್ನೂ ಹಾಗೇ ಉಳಿಸಿಕೊಂಡಿದ್ದಾರೆ.

ಮಲ್ಲತ್ತಹಳ್ಳಿ ಕೆರೆಯ ಬಳಿ ಟಾಯ್ ಟ್ರೈನ್ ಟ್ರ್ಯಾಕ್ ಹಾಕುವಂತಿಲ್ಲ : BBMPಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಬೆಂಗಳೂರು ನಗರದ ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಮನರಂಜನಾ ಉದ್ಯಾನ ನಿರ್ಮಿಸಲು ಕೈಗೊಂಡಿದ್ದ ಗಾಜಿನ ಮನೆ, ತೂಗು ಸೇತುವೆ ಮತ್ತು ಮಕ್ಕಳ ಆಟಕ್ಕೆ ರೈಲಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಕಳೆದವಾರ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇಂದು ಕೆರೆಯ ಹೊರ ಗಡಿಯಿಂದ 30 ಮೀಟರ್‌ ಅಂತರದಲ್ಲಿ ಟಾಯ್‌ ಟ್ರೈನ್‌ಗೆ ಟ್ರ್ಯಾಕ್‌ ಹಾಕದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಪೌರ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ನಿರ್ದೇಶನ ನೀಡಿದೆ.

ಸಮಾಜ ಸೇವಕಿ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಕರ್ನಾಟಕ ಟ್ಯಾಂಕ್ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಕಾಯಿದೆ 2014ರ ಸೆಕ್ಷನ್ 12(3)ರ ಪ್ರಕಾರ ಕೆರೆ/ಕೆರೆಗಳ ಹೊರ ಗಡಿಯಿಂದ 30 ಮೀಟರ್‌ಗಳ ಒಳಗೆ ಇಂತಹ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ, ಹೀಗಾಗಿ ಬಿಬಿಎಂಪಿಯು ಈ ನಿಯಮವನ್ನು ಉಲ್ಲಂಘಿಸುವಂತಿಲ್ಲ ಎಂದು ಪೀಠ ಸೂಚಿಸಿದೆ.

ಕಾಯಿದೆಯ ಸೆಕ್ಷನ್ 12 (6)ರ ಅಡಿಯಲ್ಲಿ ಕೆಟಿಸಿಡಿಎ ಮತ್ತು ರಾಜ್ಯ ಸರ್ಕಾರದಿಂದ ಟ್ರ್ಯಾಕ್ ಹಾಕಲು ಅನುಮೋದಿಸಲಾಗಿದೆ ಎಂದು ಬಿಬಿಎಂಪಿ ವಾದಿಸಿದೆ. ಆದರೆ ಹೈಕೋರ್ಟ್‌, ಟಾಯ್ ಟ್ರೈನ್‌ಗಾಗಿ ಟ್ರ್ಯಾಕ್ ನಿರ್ಮಾಣದ ಕಾಮಗಾರಿ ಎಂದು ಪರಿಗಣಿಸಲಾಗುವುದಿಲ್ಲ. ಇದು ಕಾನೂನು ಬಾಹಿರ ನಿರ್ಮಾಣವಾಗುತ್ತದೆ. “ಆದ್ದರಿಂದ, ಪ್ರಶ್ನೆಯಲ್ಲಿರುವ ಸರೋವರದ ಹೊರಗಿನ ಗಡಿಯಿಂದ 30 ಮೀಟರ್ ಒಳಗೆ ಇದನ್ನು ಅನುಮತಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.

ಮಳೆನೀರು ಚರಂಡಿ ನಿರ್ಮಿಸಿ ಮಲ್ಲತ್ತಹಳ್ಳಿ ಕೆರೆಗೆ ಹರಿಯುವ ಘನತ್ಯಾಜ್ಯ, ಲೀಚೆಟ್/ಕೊಳಚೆ ನೀರು ಬೇರೆಡೆಗೆ ಹರಿಸಲು ಬಿಬಿಎಂಪಿಗೆ ನ್ಯಾಯಾಲಯ ಅನುಮತಿ ನೀಡಿದ್ದು, ತೂಗು ಸೇತುವೆ, ಗಾಜಿನ ಮನೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು BBMPಗೆ ಕೋರ್ಟ್ ತಡೆ ನೀಡಿದೆ.

‘ನಮ್ಮ ಕ್ಲಿನಿಕ್’ಗಳಲ್ಲಿ ಕರ್ತವ್ಯನಿರ್ವಹಿಸಲು ವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು: ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆಯಂತೆ, ನೂತನವಾಗಿ ಸ್ಥಾಪಿಸಲಾಗುವ ‘ನಮ್ಮ ಕ್ಲಿನಿಕ್’ಗಳಲ್ಲಿ ಕರ್ತವ್ಯನಿರ್ವಹಿಸಲು ವೈದ್ಯಾಧಿಕಾರಿಗಳ ಹುದ್ದೆಗೆ 01 ವರ್ಷದ ಅವಧಿಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಆಸಕ್ತಿವುಳ್ಳ ಎಂ.ಬಿ.ಬಿ.ಎಸ್ ಪದವಿ ಮತ್ತು ಕೆ.ಎಂ.ಸಿ ಕೌನ್ಸಿಲ್‌ ನೊಂದಾವಣಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮುಂದುವರಿದು, ಆಸಕ್ತ ಅಭ್ಯರ್ಥಿಗಳು ಸಂಬಂಧಿಸಿದ ವಿದ್ಯಾರ್ಹತೆಯ ಮೂಲ ದಾಖಲೆಗಳು ಮತ್ತು ಒಂದು ಜೆರಾಕ್ಸ್ ಪ್ರತಿ, ಭಾವಚಿತ್ರದೊಂದಿಗೆ ಮುಖ್ಯ ಆರೋಗ್ಯಾಧಿಕಾರಿ(ಸಾರ್ವಜನಿಕ ಆರೋಗ್ಯ) ರವರ ಕಛೇರಿ, ಅನೆಕ್ಸ್-2 ಕಟ್ಟಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು-560 002 ವಿಳಾಸಕ್ಕೆ ಖುದ್ದಾಗಿ – ಅರ್ಜಿ ಸಲ್ಲಿಸಲು ಎಂದು ಮುಖ್ಯ ಆರೋಗ್ಯಾಧಿಯಾದ ಡಾ. ಬಾಲಸುಂದರ್ ರವರು ಕೋರಿರುತ್ತಾರೆ.

ಮತದಾರ ಪಟ್ಟಿ ಪರಿಷ್ಕರಣೆಯ ಪರಿಶೀಲನೆ ; ವಿಶೇಷ ಅಧಿಕಾರಿಗಳ ನೇಮಿಸಿದ ಚುನಾವಣಾ ಆಯೋಗ
ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹಾದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಮತಗಟ್ಟೆ ಹಂತದ ಅಧಿಕಾರಿಗಳನ್ನಾಗಿ ನೇಮಿಸಿರುವುದು ತನಿಖೆಯಿಂದ ಸಾಭೀತಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

‘ಚಿಲುಮೆ’ ಸಂಸ್ಥೆಯು ಮತದಾರರ ಜಾಗೃತಿ ಅಭಿಯಾನವನ್ನು ದುರುಪಯೋಗ ಪಡಿಸಿಕೊಂಡಿದ್ದು, ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರ್ಪಡೆ ಮತ್ತು ಕೈಬಿಡುವ ಕೆಲಸವನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಎಸ್.ರಂಗಪ್ಪ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರ ಅಮಾನತಿ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ. ಜೊತೆಗೆ ಮತದಾರರ ಪಟ್ಟಿಯಲ್ಲಿ ಆದ ದೊಡ್ಡ ಪ್ರಮಾಣದ ಬದಲಾವಣೆಯನ್ನು ಶೇಕಡಾ 100 ರಷ್ಟು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದೆ

ಇನ್ನು ಈ ಮೂರೂ ಕ್ಷೇತ್ರಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ಸಂಪೂರ್ಣ ಪರಿಶೀಲನೆಗೆ ಮೂವರು ವಿಶೇಷ ಅಧಿಕಾರಿಗಳನ್ನು ಚುನಾವಣಾ ಆಯೋಗ ನೇಮಿಸಿದೆ. ಅವರಲ್ಲಿ ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ.ಆರ್.ವಿಶಾಲ್ ಮತ್ತು ಮಹಾದೇವಪುರ ಕ್ಷೇತ್ರಕ್ಕೆ ಅಜಯ್ ನಾಗಭೂಷಣ್ ಅವರನ್ನು ಆಯೋಗ ನೇಮಿಸಿದೆ.

ಇನ್ನು ಈ ಅಕ್ರಮಗಳ ಕುರಿತಾದ ತನಿಖೆ ನಡೆಸುತ್ತಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರಿಗೆ ಮತದಾರರ ಪಟ್ಟಿ ಪರಿಷ್ಕರಣೆಯ ಸಮಗ್ರ ಜವಾಬ್ದಾರಿಯನ್ನೂ ವಹಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಐಟಿ, ಇಡಿಗಳು ದಾಳಿ ನಡೆಸದೆ ಯಾಕೆ ಇನ್ನೂ ಕಣ್ಣು ಮುಚ್ಚಿಕೊಂಡಿವೆ ? : ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿನ ರೂವಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ? ಇಷ್ಟು ದಿನವಾದರೂ ಈ ಅಕ್ರಮ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ. ಚುನಾವಣಾ ಆಯೋಗಕ್ಕೆ ಈ ಕುರಿತು ಮೊದಲೇ ಮಾಹಿತಿ ಇತ್ತು. ಚುನಾವಣಾ ಆಯೋಗದವರು ಬಿಬಿಎಂಪಿಗೆ ಈ ಕುರಿತು ಪತ್ರಗಳನ್ನೂ ಬರೆದಿದ್ದರು. ಆದರೂ ಆಯೋಗಕ್ಕೂ ಕೇರ್ ಮಾಡದೆ ಚಿಲುಮೆ ಸಂಸ್ಥೆಯ ಅಕ್ರಮ ಹೆಚ್ಚಾಗುತ್ತಾ ಹೋಗಿದೆ. ಹಾಗಾಗಿ ಚುನಾವಣಾ ಆಯೋಗ ಈ ಅಕ್ರಮಕ್ಕೆ ಮೌನ ಸಮ್ಮತಿ ನೀಡಿದೆಯೆ? ಸುಪ್ರೀಂ ಕೋರ್ಟು ಚುನಾವಣಾ ಆಯೋಗದ ಮೇಲೆ ಮಾಡಿರುವ ವಿಮರ್ಶೆಗಳು ಸರಿಯಾಗಿವೆ ಅಲ್ಲವೆ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹೊಂಗಸಂದ್ರದ ಬಿಜೆಪಿಯ ಕಛೇರಿಯಲ್ಲಿ ಹಾಲಿ ಶಾಸಕರು ಹಾಗೂ ವಿಧಾನಸಭೆಯ ಮುಖ್ಯ ಸಚೇತಕರಾದ ಸತೀಶ್‍ರೆಡ್ಡಿಯವರ  ನೇತೃತ್ವದಲ್ಲಿಯೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಕುರಿತು ತರಬೇತಿ ನೀಡಲಾಗಿದೆ. ಆದರೆ ಪರಿಷ್ಕರಣೆ ಕಾರ್ಯಕ್ಕಾಗಿಯೆ 25000 ದಿಂದ 30000 ರೂಪಾಯಿಗಳನ್ನು ನೀಡಿ ನೇಮಕಾತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ನೂರಾರು ಸಂಖ್ಯೆಯ ನೌಕರರಿಗೆ ಸಂಬಳ ಕೊಡಲು ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ಈ ಸಂಸ್ಥೆಗೆ ನೀಡಿದವರು ಯಾರು? ಇಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸುತ್ತಿದ್ದವರ ಉದ್ದೇಶವಾದರೂ ಏನು? ಅಕ್ರಮವಾಗಿ ವಿನಿಯೋಗಿಸಿದ ಹಣದ ಕುರಿತು ಇನ್ನೂ ದಾಳಿಗಳನ್ನು ನಡೆಸದೆ ಐಟಿ, ಇಡಿಗಳು ಯಾಕೆ ಇನ್ನೂ ಕಣ್ಣು ಮುಚ್ಚಿಕೊಂಡಿವೆ ? ಎಂದು ಸಿದ್ದರಾಮಯ್ಯ ಪ್ರಶ್ನೆಗಳ ಸರಮಾಲೆ ಹಾಕಿದ್ದಾರೆ.

ಆದರೂ ಇಷ್ಟು ಬೃಹತ್ ಮಟ್ಟದ ಹಗರಣ ನಡೆದಿದ್ದರೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ? ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿಯ ಎಂಎಲ್‍ಎಗಳು, ಸಚಿವರುಗಳ ಮೇಲೆ ಮತ್ತು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿಗಳ ಮೇಲೆ ಏಕೆ ಯಾವುದೇ ಕ್ರಮ ವಹಿಸಿಲ್ಲ? ಎಂದು ಕಿಡಿಕಾರಿದ್ದಾರೆ.

ಬಿಬಿಎಂಪಿಯಲ್ಲಿ ನಡೆದಿರುವ ಮತದಾರರ ಪಟ್ಟಿಯ ಅಕ್ರಮಕ್ಕೆ, ಚುನಾವಣಾ ಆಯೋಗ ಮತ್ತು ಬಿಬಿಎಂಪಿಯ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಸಂಪೂರ್ಣ ಜವಾಬ್ಧಾರರಾಗಿದ್ದು ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ ಎಂದು ವಿರೋಧ ಪಕ್ಷದನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ/ಅರೆ ಸರ್ಕಾರಿ ನೌಕರರನ್ನು ನೇಮಿಸುವುದರ ಬದಲಿಗೆ ಖಾಸಗಿ ವ್ಯಕ್ತಿಗಳನ್ನು ಬಿಎಲ್‍ಓ ಗಳಾಗಿ ನೇಮಕ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳನ್ನು ಯಾವ ಕಾರಣಕ್ಕೂ ನೇಮಕ ಮಾಡಬಾರದೆಂದು ಕಾನೂನು ಹೇಳುತ್ತದೆ. ಇವರು ಒಂದು ಪಕ್ಷದ ಕಾರ್ಯಕರ್ತರಂತೆ ಕಾಣಿಸುತ್ತಾರೆ ಎಂದು ದೂರಿದ್ದಾರೆ.

ಚಿಲುಮೆ ಸಂಸ್ಥೆಯ ಕಛೇರಿಗಳಲ್ಲಿ ಸಚಿವರ ಚೆಕ್ಕುಗಳು ಮತ್ತು ಲೆಟರ್ ಹೆಡ್‍ಗಳು ದೊರೆತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಿದ್ದರೆ ಸದರಿ ಸಚಿವರ ಮೇಲೆ ಯಾಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು, ಸೇರಿಸಲು ಯಾವುದೇ ಅರ್ಜಿ ನಮೂನೆಗಳನ್ನು ಪಡೆಯದೆ ಈ ಕೃತ್ಯ ಎಸಗಿರುವುದು ಘೋರವಾದ ಅಪರಾಧವಾಗಿದ್ದು ಇದನ್ನು ಪ್ರತಿ ದಿನ ಸಾಕ್ಷಿಗಳ ಸಮೇತ ಜನರು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಆದ್ದರಿಂದ ಈ ಕೂಡಲೆ ಜನರು ನೀಡಿರುವ ನಮೂನೆ 6, 7, 8, ಮತ್ತು 8ಎ ಗಳ ಅರ್ಜಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಯಾವುದೆ ಅರ್ಜಿಗಳಿಲ್ಲದೆ ಮತದಾರರ ಪಟ್ಟಿಗೆ ಸೇರಿಸಿರುವ, ಕೈಬಿಟ್ಟಿರುವ, ತಿದ್ದುಪಡಿ ಮಾಡಿರುವ, ವರ್ಗಾವಣೆ ಮಾಡಿರುವ ಪ್ರಕರಣಗಳೆಷ್ಟು ಎಂಬುದನ್ನು ಚುನಾವಣಾ ಆಯೋಗ ಈ ಕೂಡಲೆ ಎಲ್ಲ ರಾಜಕೀಯ ಪಕ್ಷಗಳಿಗೆ, ಸಾರ್ವಜನಿಕರಿಗೆ ತಿಳಿಸಬೇಕು. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ ಮಾಡಿರುವ ಎಲ್ಲ ಬದಲಾವಣೆಗಳನ್ನು ಈ ಕೂಡಲೆ ರದ್ದು ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ,

ಅರ್ಜಿ ಸ್ವೀಕರಿಸದೆ, ನೋಟೀಸು ನೀಡದೆ, ಅರ್ಜಿಗಳ ಮೇಲೆ ಆದೇಶ ಮಾಡದೆ ಮತದಾರರ ಪಟ್ಟಿಗೆ ಸೇರಿಸಿರುವ, ತೆಗೆದಿರುವ, ವರ್ಗಾವಣೆ ಮಾಡಿರುವ ಎಲ್ಲ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಅಟ್ಟಬೇಕು. ನಿಷ್ಪಕ್ಷಪಾತವಾಗಿ ವರ್ತಿಸದ ಅಧಿಕಾರಿಗಳನ್ನು ಈ ಕೂಡಲೆ ಚುನಾವಣಾ ಕರ್ತವ್ಯಗಳಿಂದ ಬಿಡುಗಡೆ ಗೊಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ವ್ಯವಸ್ಥೆಯ ಪಾವಿತ್ರ್ಯವನ್ನು ಉಳಿಸಲು ಕಾಂಗ್ರೆಸ್ ಹೋರಾಟ ಪ್ರಾರಂಭಿಸಿದ ಕೂಡಲೆ ಬಿಜೆಪಿಯ ಕೆಲವರು 2017ರ ದಾಖಲೆಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಚಿಲುಮೆ ಸಂಸ್ಥೆಯನ್ನು ಬೆಳೆಸಿದ್ದೆ ಕಾಂಗ್ರೆಸ್ ಎಂದು ಸುಳ್ಳು ಹೇಳಲಾರಂಭಿಸಿದ್ದಾರೆ. ಇದಕ್ಕಾಗಿ ಮಹದೇವಪುರದ ಸಹ ಕಂದಾಯಾಧಿಕಾರಿ ಆದೇಶ ನೀಡಿದ್ದಾರೆಂಬ ಆದೇಶ ಪ್ರತಿಯನ್ನು ತೋರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಹದೇವಪುರದಲ್ಲಿರುವುದು ಬಿಜೆಪಿ ಪಕ್ಷದ ಎಂಎಲ್‍ಎ. ಬಿಜೆಪಿ ಪಕ್ಷದವರು ಇರುವ ಕಡೆಯೆ ಇದನ್ನು ಪ್ರಾರಂಭಿಸಿದ್ದಾರೆ. ಚಿಲುಮೆ ಸಂಸ್ಥೆಗೆ ಆದೇಶ ನೀಡಿದ್ದಾರೆ ಎಂದು ಬಿಜೆಪಿಯವರು ತೋರಿಸುತ್ತಿರುವುದರಲ್ಲಿ ಸಹ ಕಂದಾಯಾಧಿಕಾರಿ ಸಹಿ ಮಾಡಿದ್ದಾರೆ. ಅದರಲ್ಲಿ ಉಲ್ಲೇಖ 9-7-2017 ರಂದು ಚಿಲುಮೆ ಸಂಸ್ಥೆ ನೀಡಿರುವ ಮನವಿ ಎಂದಿದೆ. ಈ ಅರ್ಜಿ ಸಾಚಾ ಆಗಿದೆಯೆ? ಆಗಿದ್ದರೆ ಬಿಜೆಪಿ ಎಂಎಲ್‍ಎ ಇರುವ ಕಡೆಯೆ ಇದು ಯಾಕೆ ಸಂಭವಿಸಿದೆ? ಆ ಅಧಿಕಾರಿಯ ಮೇಲೆ ಯಾರ ಒತ್ತಡವಿತ್ತು? ಬೂತು ಮಟ್ಟದ ಅಧಿಕಾರಿಯನ್ನು ನೇಮಿಸಲು ಸಹ ಕಂದಾಯಾಧಿಕಾರಿಗೆ ಯಾವುದೇ ಅಧಿಕಾರವಿಲ್ಲವೆಂದು  ಪ್ರಜಾಪ್ರತಿನಿಧಿ ಕಾಯ್ದೆ-1950 ಹೇಳುತ್ತದೆ.  ಹಾಗಾಗಿ ಬಿಜೆಪಿಯವರು ಒಬ್ಬ ಸಣ್ಣ ಅಧಿಕಾರಿ ಮೇಲೆ ಪ್ರಭಾವ ಬೀರಿ ಅಕ್ರಮವಾಗಿ ಆದೇಶ ಕೊಡಿಸಿದ್ದಾರೆಯೆ ಎಂಬುದನ್ನೂ ಪರಿಶೀಲಿಸಬೇಕಲ್ಲವೆ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯಾವ ವರ್ಷದಿಂದ ಅಕ್ರಮಗಳಾಗಿವೆಯೊ ಆ ವರ್ಷದಿಂದ ಪ್ರತಿಯೊಂದು ಸೇರ್ಪಡೆ, ಪ್ರತಿಯೊಂದು ತೆಗೆಯುವಿಕೆಯನ್ನು ಚುನಾವಣಾ ಆಯೋಗವು ಖುದ್ದು ಪರಿಶೀಲಿಸಿ ಖಾತ್ರಪಡಿಸಿಕೊಳ್ಳಬೇಕು. ಅದುವರೆಗೂ ಈಗ ಸಿದ್ಧಪಡಿಸಿರುವ ಮತದಾರರ ಪಟ್ಟಿಯನ್ನು ಪ್ರಕಟ ಮಾಡದೆ ತಡೆಹಿಡಿಯಬೇಕು. ಭಾಗಿಯಾದ ಎಲ್ಲರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಚಿಲುಮೆ ಸಂಸ್ಥೆಗೆ ಹಣ ನೀಡಿರುವವರು ಯಾರು? ಯಾಕಾಗಿ ಅವರಿಗೆ ಹಣ ನೀಡುತ್ತಿದ್ದರು? ಚಿಲುಮೆ ಸಂಸ್ಥೆಯ ಹಿನ್ನೆಲೆ ಏನು? ಅವರ ಹಿಂದೆ ಯಾರ್ಯಾರು ಇದ್ದಾರೆ? ಸಂಸ್ಥೆಯವರು ಯಾರೊಂದಿಗೆ ಸಂಪರ್ಕದಲ್ಲಿದ್ದರು? ಅವರ ನಡುವೆ ನಡೆದ ಸಂವಹನಗಳೇನು? ಸಂವಾದಗಳೇನು? ಇವೆಲ್ಲ ಅಂಶಗಳನ್ನು ತನಿಖೆ ಮಾಡಿ ಸಾರ್ವಜನಿಕರ ಮುಂದೆ ಇಡಬೇಕಾಗಿದೆ. ಹಾಗೆಯೆ ರಾಜ್ಯದಲ್ಲಿ ಎಲ್ಲೆಲ್ಲಿ ಹೀಗಾಗಿದೆ ಎಂಬ ಮಾಹಿತಿಯನ್ನೂ ಆಯೋಗವು ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಗಳ ಪರಿಷ್ಕರಣೆಯ ಮೇಲೆ ನಿಗಾವಹಿಸಬೇಕಾದ ಎಲೆಕ್ಟೋರಲ್ ರೋಲ್ ಅಬ್ಸರ್ವರ್ ಗಳು ಏನು ಮಾಡಿದ್ದಾರೆ ? ಅವರು ನಿರ್ಲಕ್ಷ್ಯ ವಹಿಸಿದ್ದರೆ, ಪಕ್ಷಪಾತ ಮಾಡಿದ್ದರೆ ಅವರ ಮೇಲೆಯೂ ನಿರ್ದಾಕ್ಷಿಣ್ಯವಾದ ಕ್ರಮ ತೆಗೆದುಕೊಳ್ಳಬೇಕು. ಬಿಬಿಎಂಪಿಯ ಡಿ ಲಿಮಿಟೇಷನ್ ಪ್ರಕ್ರಿಯೆಯಲ್ಲಿಯೂ ಈ ಸಂಸ್ಥೆ ಭಾಗವಹಿಸಿದೆಯೆಂದು ಹೇಳಲಾಗುತ್ತಿದೆ.  ಈ ಕೆಲಸವು ವೈಜ್ಞಾನಿಕವಾಗಿ ನಡೆದಿದೆಯೆ? ಎಂಬುದರ ಕುರಿತು ರಾಜ್ಯ ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಅವೈಜ್ಞಾನಿಕವಾಗಿದ್ದರೆ, ಪಕ್ಷಪಾತದಿಂದ ಕೂಡಿದ್ದರೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಹಾಗೂ ತನಿಖೆಯನ್ನು ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು ಮಾಡಿದರೆ ಅದು ಪಕ್ಷಪಾತದಿಂದ ಕೂಡಿರುತ್ತದೆ. ಆದ್ದರಿಂದ ಕೂಡಲೆ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.