BC Patil – Peepal Media

Fact Check : ಮೋದಿ ಹ್ಯಾಂಡ್ ಸ್ಟಾಂಡ್ ವಿಡಿಯೋ : ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ನಾಯಕ ಬಿಸಿ ಪಾಟೀಲ್
ದೇವಸ್ಥಾನವೊಂದರಲ್ಲಿ ಪ್ರದಕ್ಷಿಣೆ ಹಾಕುವಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೈ ಆಧಾರದಲ್ಲಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲೂ ಈ ವಿಡಿಯೋವನ್ನು ಬಿಜೆಪಿ ನಾಯಕ ಮಾಜಿ ಸಚಿವ ಬಿಸಿ ಪಾಟೀಲ್ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 26 ನೇ ವಯಸ್ಸಿನಲ್ಲಿ, ಅಂದರೆ 1977 ನೇ ಇಸವಿಯಲ್ಲಿ ಯೋಗಾಸನ ಮಾಡುತ್ತಿರುವ ವಿಡಿಯೋ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹಂಚಿಕೊಂಡ ವಿಡಿಯೋ ಸಾಕ್ಷಿ ಈಗ ಅವರ ಟ್ವಿಟ್ಟರ್ ಮೂಲಕ ಹರಿದಾಡಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಕೆದಕಿದಾಗ ತೀರಾ ಹಳೆಯ ಇತಿಹಾಸ ಈ ವಿಡಿಯೋ ಹೊಂದಿಲ್ಲ ಎಂಬುದು ಬಹಿರಂಗಗೊಂಡಿದೆ.

ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ. pic.twitter.com/YnQekOLSH9
— B C Patil (@bcpatilkourava) January 6, 2024

ವಿಡಿಯೋದಲ್ಲಿ ನರೇಂದ್ರ ಮೋದಿ ಕಿರಿಯ ವಯಸ್ಸನ್ನು ಹೋಲುವ ವ್ಯಕ್ತಿ ಕಾಲು ಮೇಲೆ ಮಾಡಿ ತನ್ನ ಎರಡು ಕೈಗಳಿಂದ ನಡೆದಾಡಿದ್ದು ಕಂಡುಬಂದಿದೆ. ಆದರೆ ಈ ಚಿತ್ರ ಬಳಸಿ ಗೂಗಲ್ ಮೂಲಕ ಹುಡುಕಾಡಿದಾಗ ಈ ವಿಡಿಯೋ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಪ್ರಕಟಿಸಿದ್ದು 2021 ರ ಜೂನ್ ನಲ್ಲಿ ಎಂದು ತಿಳಿದು ಬಂದಿದೆ.

E TV ಭಾರತ್ ಸುದ್ದಿ ವಾಹಿನಿಯಲ್ಲಿ ಈ ವಿಡಿಯೋ ಮೊದಲ ಬಾರಿ ಪ್ರಕಟವಾಗಿದ್ದು, ಕೇದಾರನಾಥ ದೇವಾಲಯದ ಆವರಣದಲ್ಲಿ ಇದು ಚಿತ್ರೀಕರಣಗೊಂಡಿದೆ ಎಂಬುದು Fact check ಮೂಲಕ ತಿಳಿದು ಬಂದಿದೆ. ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿ ಆಚಾರ್ಯ ಸಂತೋಷ್ ತ್ರಿವೇದಿ ಎಂಬುದೂ ಈಗ ಬಹಿರಂಗಗೊಂಡಿದೆ.

ಆ ವಿಡಿಯೋ ಮೊದಲ ಬಾರಿಗೆ ಪ್ರಕಟಗೊಂಡ ನಂತರ ಹಲವು ಬಾರಿ ತಪ್ಪು ಮಾಹಿತಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ. ಆದರೂ ಸಹ ನೆಟ್ಟಿಗರು ಹಿಂದು ಮುಂದು ನೋಡದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ಎಂದು ಹಂಚಿಕೊಂಡಿದ್ದಾರೆ.

ಈ ಬಾರಿ ಕರ್ನಾಟಕದ ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಸಿ.ಪಾಟೀಲ್ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಒಬ್ಬ ಜವಾಬ್ದಾರಿಯುತ ವ್ಯಕ್ತಿ ಕೂಡಾ ಸಮಾಜದಲ್ಲಿ ಈ ರೀತಿಯ ಸುಳ್ಳು ಮಾಹಿತಿ ಹಬ್ಬಿಸುವಂತೆ ಮಾಡುವ ಅಸಲಿ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸಿದೆ.