bengalore university – Peepal Media

ಶೌಚಾಲಯದೊಳಗೆ ವಿದ್ಯಾರ್ಥಿನಿಯರನ್ನು ಚಿತ್ರೀಕರಿಸಿದ ಆರೋಪ: ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಇಣುಕಿ ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಪೊಲೀಸರು, ಖಾಸಗಿ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರುವ 21 ವರ್ಷದ ವಿದ್ಯಾರ್ಥಿಯ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಆರೋಪದ ಮೇಲೆ ಇತ್ತೀಚೆಗೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಆರೋಪಿ ವಿದ್ಯಾರ್ಥಿ ಈ ಹಿಂದೆ ಶೌಚಾಲಯದಲ್ಲಿ ಇಣುಕಿ ನೋಡುತ್ತಿರುವಾಗ ಸಿಕ್ಕಿಬಿದ್ದಿದ್ದ. ಈ ಕಾರಣ ಅತನು ಕ್ಷಮಾಪಣಾ ಪತ್ರವನ್ನು ಸಲ್ಲಿಸಿದ ನಂತರ ಇನ್ನೊಂದು ಬಾರಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಆ ವಿದ್ಯಾರ್ಥಿ ಮತ್ತು ಅದೇ ತಪ್ಪನ್ನು ಮಾಡಿದ್ದು, ಎರಡು ದಿನಗಳ ನಂತರ ಮತ್ತೆ ತನ್ನ ಕೃತ್ಯವನ್ನು ಪುನರಾವರ್ತಿಸಿದ್ದಾನೆ. ಹೀಗಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಬಾರಿ ಪ್ರಕರಣವನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರ್ಧರಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ವಿವಿ: ಸಂಶೋಧನಾ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನಿವಾರಿಸುವಂತೆ ಆಗ್ರಹ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರ್ಣಾವದಿ ಸಂಶೋಧನೆ ಕೈಗೊಂಡಿರುವ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸಿ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿಕೊಡಬೇಕೆಂದು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ, ವಿಶ್ವವಿದ್ಯಾಲಯದ ಕುಲಪತಿಯವರಿಗೆ ಆಗ್ರಹಿಸಿದೆ.

ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಧರಣಿ ಸತ್ಯಾಗ್ರಹ ಕೈಗೊಂಡ ಸಂಶೋಧನಾ ವಿದ್ಯಾರ್ಥಿಗಳು, ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು.

ಹಳೆಯ ಸಂಶೋಧನಾ ವಿದ್ಯಾರ್ಥಿ ನಿಲಯ ಮಳೆ ಬಂದರೆ ಸೋರುತ್ತಿದ್ದು ಮತ್ತು ಮೇಲ್ಟಾವಣಿಯ ಸಿಮೆಂಟ್ ಸೀಲಿಂಗ್ ಬೀಳುತ್ತಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅಪಾಯವಿದೆ. ಹಾಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಶೋಧನ ವಿದ್ಯಾರ್ಥಿನಿಲಯವನ್ನು ಶೀಘ್ರವಾಗಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎಸ್.ಸಿ/ಎಸ್.ಟಿ ಘಟಕದಿಂದ ಲ್ಯಾಪ್ ಟಾಪ್ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕುಲಪತಿಗಳ ನೇತೃತ್ವದಲ್ಲಿ ನಡೆದು ಉತ್ತಮ ಗುಣಮಟ್ಟ ಲ್ಯಾಪ್ ಟಾಪ್‌ನ್ನು ಶೀಘ್ರವಾಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡಬೇಕು. ಜೆ.ಆರ್.ಎಸ್ ವಿದ್ಯಾರ್ಥಿಗಳಿಗೆ ಹಿಂದೆ ಎಸ್.ಸಿ/ಎಸ್.ಟಿ ಘಟಕದಿಂದ ಲ್ಯಾಪ್ಪಾಪ್ ನೀಡಲಾಗಿದೆ ಇದನ್ನು ಈ ವರ್ಷವು ಮುಂದುವರಿಸಬೇಕು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ವಾರ್ಷಿಕ ಸಾಧಿಲ್ವಾರು ವೆಚ್ಚವನ್ನು ಕಿರಿಯ ಸಂಶೋಧಕರಿಗೆ 25 ಸಾವಿರ ಹಾಗು ಹಿರಿಯ ಸಂಶೋಧಕರಿಗೆ 30 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಸಂಶೋಧನಾ ವಿದ್ಯಾರ್ಥಿಗಳು ಒತ್ತಾಯಿಸಿದರು.

ವಿಶ್ವವಿದ್ಯಾಲಯದ ಶಿಷ್ಯವೇತನ ಪಡೆಯುತ್ತಿರುವ ಸಂಶೋಧನಾರ್ಥಿಗಳಿಗೆ ಮೊದಲ ಎರಡು ವರ್ಷ ಕಿರಿಯ ಸಂಶೋಧಕರು ನಂತರ ಮೂರು ವರ್ಷ ಹಿರಿಯ ಸಂಶೋಧಕರು ಎಂದು ಪರಿಗಣಿಸಿ ಶಿಷ್ಯವೇತನ ನೀಡಬೇಕು.  ಎಸ್.ಸಿ/ಎಸ್.ಟಿ ಘಟಕದಿಂದ ನೀಡುವ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ವಿದ್ಯಾರ್ಥಿಗಳು ವಿಚಾರ ಸಂಕಿರಣ ನಡೆಸಬೇಕು. ರಾಷ್ಟ್ರೀಯ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಸಾರಿಗೆ ವಸತಿ,ತಗಲುವ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸಬೇಕು ಮತ್ತು ಉತ್ತಮವಾದ ಸಂಶೋಧನ ಪ್ರಬಂದವನ್ನು ಆಯ್ಕೆಮಾಡಿ ಅವರಿಗೆ ಬಾಬಾ ಸಾಹೇಬ್ ಡಾ.ಬಿ.ಅರ್. ಅಂಬೇಡ್ಕರ್ ಚಿನ್ನದ ಪದಕವನ್ನು ಪ್ರತಿ ಘಟಿಕೋತ್ಸವದಲ್ಲಿ ನೀಡಬೇಕು.

ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳನ್ನು ಆಲಿಸುವ ಒಂದು ಉನ್ನತವಾದ ಸೆಲ್ ನ್ನು ತೆರೆಯಬೇಕು ಹಾಗೂ ಸಂಶೋಧನಾರ್ಥಿಗಳಿಗೆ ಕ್ಷೇತ್ರ ಕಾರ್ಯ ಮಾಡಲು ಹ್ಯಾನ್ಸ್ ಕ್ಯಾಮರ ಎಸ್.ಸಿ/ಎಸ್.ಟಿ ಘಟಕದಿಂದ ವಿಶ್ವ ವಿದ್ಯಾಲಯ ವಿತರಿಸಬೇಕು ಎಂದು ಒತ್ತಾಯಿಸಲಾಗಿದ್ದು, ಪ್ರತಿಭಟನೆಯ ನಂತರ ವಿದ್ಯಾರ್ಥಿಗಳು ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು.

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯ ತಂಗಿಗೆ ಸರ್ಕಾರಿ ಉದ್ಯೋಗದ ಭರವಸೆ
ಬೆಂಗಳೂರು: ಕಳೆದ ತಿಂಗಳು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 23 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪಶ್ರೀ ಅವರ ತಂಗಿಗೆ ಉಚಿತ ಶಿಕ್ಷಣ ನೀಡಲು ಬೆಂಗಳೂರು ವಿಶ್ವವಿದ್ಯಾಲಯ (ಬಿಯು) ಸೋಮವಾರ ನಿರ್ಧರಿಸಿದ್ದು, ಆದಾಗ್ಯೂ, ವಿಶ್ವವಿದ್ಯಾನಿಲಯವು ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸಿಂಡಿಕೇಟ್ ಸಭೆಯ ನಂತರ, ಬಿಯು ಉಪಕುಲಪತಿ ಡಾ.ಜಯಕರ ಎಸ್.ಎಂ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ಪದವಿಪೂರ್ವ ಕೋರ್ಸ್ ಮಾಡುತ್ತಿರುವ ಶಿಲ್ಪಾಶ್ರೀ ಅವರ ತಂಗಿಗೆ ವಿಶ್ವವಿದ್ಯಾಲಯವು ಉಚಿತ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತದೆ. ವಿಶ್ವವಿದ್ಯಾನಿಲಯದ ಸಿಬ್ಬಂದಿ ಒಂದು ದಿನದ ವೇತನ ಮತ್ತು ಸಭೆಯ ಸಂಭಾವನೆಯನ್ನು ಶಿಲ್ಪಶ್ರೀ ಅವರ ಕುಟುಂಬಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ, ಆದರೆ ಈ ದೇಣಿಗೆ ಮುಂದುರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಶಿಲ್ಪಾಶ್ರೀ ಕುಟುಂಬಕ್ಕೆ 1.5 ಕೋಟಿ ಪರಿಹಾರ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಲು ಸಾಧ್ಯವಾಗದ ಕಾರಣ, ವಿಶ್ವವಿದ್ಯಾಲಯವು ಶಿಲ್ಪಾಶ್ರೀ ಅವರ ತಂಗಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ವಿಶೇಷ ಅನುಮತಿ ನೀಡಲಿದೆ ಎಂದು ಡಾ.ಜಯಕರ ಹೇಳಿದರು.

ಘಟನೆಯ ಹಿನ್ನಲೆ

ಅಕ್ಟೋಬರ್ 10 ರಂದು ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಶಿಲ್ಪಾಶ್ರೀಯವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಸ್‌ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ನಂತರ ಆಕೆಯನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ತೀವ್ರಗಾಯಗೊಂಡಿದ್ದ ಕಾರಣ, ಅಕ್ಟೋಬರ್ 23 ರಂದು ನಿಧನರಾದರು. ಕೋಲಾರ ಜಿಲ್ಲೆಯ ಬಂಗಾರಪೇಟೆಯ ರವಿ-ಪದ್ಮಾ ದಂಪತಿಯ ಮೂವರು ಪುತ್ರಿಯರಲ್ಲಿ ಒಬ್ಬರಾದ ಅವರು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು.

ಪರಿಸ್ಥಿತಿ ಕುರಿತು ತಂದೆಯ ಅಳಲು

ಸದ್ಯದ ಪರಿಸ್ಥಿತಿ ಕುರಿತು ಅಳಲನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿರುವ ಶಿಲ್ಪಶ್ರೀ ತಂದೆಯವರು, ನಾನು ಪ್ರತಿ ತಿಂಗಳು ಕೂಲಿ ಮಾಡಿ 10 ರಿಂದ 15 ಸಾವಿರ ರೂ.ಗಳಿಸುತ್ತೇನೆ. ಈ ಹಣದಿಂದ ನಾನು ನನ್ನ ಕುಟುಂಬವನ್ನು ನಿಭಾಯಿಸುತ್ತಾ, ನನ್ನ ಮೂರು ಮಕ್ಕಳನ್ನು ಓದಿಸಿಕೊಂಡು ಬಂದಿದ್ದೇನೆ. ನಾನು 10 ನೇ ತರಗತಿಯವರೆಗೆ ಓದಿದ್ದೇನೆ ಆದರೂ ಕೂಡ ನಾನು ಅನಕ್ಷರಸ್ಥ, ಹಾಗಾಗಿ ನನ್ನ ರೀತಿ ನನ್ನ ಮಕ್ಕಳು ಆಗಬಾರದೆಂಬ ಉದ್ದೇಶದಿಂದ ಸಾಲ ಮಾಡಿ ಓದಿಸುತ್ತಿದ್ದೆ. ನಾನು ಸಾಲ ಮಾಡಿದರು ಅವರ ವಿದ್ಯಾಭ್ಯಾಸಕ್ಕೆ ಹಣ ಸರಿಹೋಗದಿರುವ ಕಾರಣ, ನನ್ನ ಹೆಂಡತಿಯ ಸಹೋದರಿಯರು ನನಗೆ ಸಹಾಯ ಮಾಡುತ್ತಿದ್ದರು. ಇದರಿಂದ ಚನ್ನಾಗಿ ಓದುತ್ತಿದ್ದ ನನ್ನ ಮಗಳು, ಓದು ಮುಗಿದ ನಂತರ ಬ್ಯಾಂಕಿಂಗ್ ಅಥವಾ ಸರ್ಕಾರಿ ಉದ್ಯೋಗ ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು, ಆದರೆ ಇಂದು ಅವಳ ಕನಸನ್ನು ನನಸು ಮಾಡಿಕೊಳ್ಳದೆ ನಮ್ಮನ್ನ ಬಿಟ್ಟು ಹೋಗಿದ್ದಾಳೆ ಎಂದು ದುಃಖ್ಖ ವ್ಯಕ್ತಪಡಿಸಿದರು.

ಶಿಲ್ಪಾಶ್ರೀ ಸಾವಿನ ಬಳಿಕ ಕುಟುಂಬದ ಪರಿಸ್ಥಿತಿ ಗಂಭೀರ

ಶಿಲ್ಪಾಶ್ರೀ ಅವರ ಅಕ್ಕ ನಿವೇದಿತಾ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವೀಧರರಾಗಿದ್ದು, ಕಳೆದ ಮೂರು ತಿಂಗಳಿಂದ ಟ್ರಾನ್ ಅಸೋಸಿಯೇಟ್ ಆಗಿ ಇ-ಕಾಮರ್ಸ್ ಮೇಜರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ಕಟುಂಬಕ್ಕೆ ಸ್ವಲ್ಪ ಮಟ್ಟಿಗೆ ನೆರವಾಗುತ್ತಿದ್ದರು. ಆದರೆ ಶಿಲ್ಪಶ್ರೀ ಅಪಘಾತಕ್ಕೆ ಒಳಗಾದ ನಂತರ, ನಿವೇದಿತಾ ತನ್ನ ಕಚೇರಿಯಲ್ಲಿ ಹೆಚ್ಚು ರಜೆ ತೆಗೆದುಕೊಳ್ಳಲು ಅವಕಾಶ ನೀಡದ ಕಾರಣ ಕೆಲಸ ಬಿಡಬೇಕಾಯಿತು. ಇದರಿಂದಾಗಿ ಕುಟುಂಬಕ್ಕೆ ಸಿಗುತ್ತಿದ್ದ ಸ್ವಲ ಪ್ರಮಾಣದ ನೆರವು ಕೂಡ ಇಲ್ಲದಂತಾಗಿದೆ ಎಂದು ನಿವೇದಿತಾ ತನ್ನ ಅಳನನ್ನು ತೋಡಿಕೊಂಡಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ: ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು: ಬೆಂಗಳೂರು ನಗರದ ವಿಶ್ವವಿದ್ಯಾಲಯದ 2022-23ನೇ ಸಾಲಿನ ಅತಿಥಿ ಉಪನ್ಯಾಸಕರ ಆನ್‌ಲೈನ್‌ ಮೂಲಕ ಸಲ್ಲಿಸುವ ಅರ್ಜಿ ಸೆಪ್ಟಂಬರ್‌ 28ರವರೆಗೆ ವಿಸ್ತರಿಸಲಾಗಿದೆ.

ವಿಶ್ವ ವಿದ್ಯಾಲಯವು ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ, ಸ್ನಾತಕ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಿಗೆ ಹಾಗೂ ಮಲ್ಲೇಶ್ವರದ ಬಹುಶಿಸ್ತೀಯ ಮಹಿಳಾ ಕಾಲೇಜಿಗೆ 2022 ಆಗಸ್ಟ್‌ 29ರಂದು ಅತಿಥಿ ಉಪನ್ಯಾಸಕರ ನೇಮಕಾತಿ ಅರ್ಜಿಗೆ ಆಹ್ವಾನಿಸಲಾಗಿತ್ತು. ಈ ಹಿನ್ನಲೆ ಅರ್ಜಿದಾರರು ತಮ್ಮ ಭೌತಿಕ ಪ್ರತಿಯನ್ನು ಇದೇ ತಿಂಗಳು ಸೆ.29ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಶ್ವವಿದ್ಯಾಲಯ ಉಳಿದರೆ ನಿಮ್ಮ ಮಕ್ಕಳ ಜೀವ, ಜೀವನ ಉಳಿದಂತೆ: ಎಸ್‌ಡಿಪಿಐ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವೆಂದರೆ ಅದೊಂದು ಧರ್ಮ ಜಾತಿಗಳ ಸಂಘರ್ಷದ ಕೊಂಪೆ ಎನ್ನುವ ಆರೋಪ ಹೇರಿ, ವಿಶ್ವವಿದ್ಯಾಲಯದ ಘನತೆ ಹಾಳುಮಾಡಿ, ಅಶಾಂತಿ ಸೃಷ್ಟಿಸಿ ವಿಶ್ವವಿದ್ಯಾಲಯವನ್ನು ವಿವಾದಿತ ಕೇಂದ್ರವನ್ನಾಗಿ ಮಾಡಿಬಿಡುವ ಸಂಚು ನಡೆಯುತ್ತಿದೆ ಎಂದು ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್  ಆರೋಪಿಸಿದ್ದಾರೆ.

ಕೇವಲ ಸಣ್ಣದೊಂದು ದೇವಸ್ಥಾನ ನಿರ್ಮಿಸಿದರೆ ಏನಾಗಿಬಿಡುತ್ತದೆ ?ಎಂದು ಪ್ರಶ್ನೆ ಮಾಡುವವರಿಗೆ ಗೊತ್ತಿರಲಿ. ಮುಂದೆ ಇದು ಕೇವಲ ಒಂದು ದೇವಸ್ಥಾನದ ಪ್ರಶ್ನೆಯಾಗಿ ಮಾತ್ರ ಉಳಿದು ಬಿಡಲ್ಲ.‌ ಈ ನಾಡಿನ ಸಮಸ್ತ ಬಡವರು, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮಕ್ಕಳ ಭವಿಷ್ಯದ ಪ್ರಶ್ನೆಯಾಗಲಿದೆ ಎಂದು ಭಾಸ್ಕರ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಮ್ಮ ಮಕ್ಕಳನ್ನು ಬೇಕಿದ್ದರೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಅಥವಾ ಅದಕ್ಕೂ ಮೀರಿ ವಿದೇಶಗಳಿಗೆ ಕಳಿಸಿ ಅವರ ಬಾಳು ಹಸನು ಮಾಡಬಲ್ಲ  ಈ ದೇಶದ ಮನುವ್ಯಾದಿ ವ್ಯವಸ್ಥೆಯು, ಈ ಸಣ್ಣ ದೇವಸ್ಥಾನದ ವಿಚಾರವನ್ನೇ ಹಂತ ಹಂತವಾಗಿ ಬೆಳೆಸುತ್ತಾ, ಮುಂದೊಂದು ದಿನ ಇದೇ ಸಮಸ್ಯೆಯನ್ನು, ನಾಡಿನ ಸಮಸ್ತ ವಿದ್ಯಾರ್ಥಿಗಳ ಸಮಸ್ಯೆಯನ್ನಾಗಿ ಪರಿವರ್ತಿಸಿ, ಬೆಂಗಳೂರು ವಿಶ್ವವಿದ್ಯಾಲಯವೆಂದರೆ ಅದೊಂದು ದೇವರು ಧರ್ಮ ಜಾತಿಗಳ ಸಂಘರ್ಷದ ಕೊಂಪೆ ಎನ್ನುವಂತಹ ದಾರಿದ್ರ್ಯವನ್ನೇ  ಸೃಷ್ಟಿಸಿ, ವಿಶ್ವವಿದ್ಯಾಲಯದ ಘನತೆ, ಪ್ರಶಾಂತ ವಾತಾವರಣ ಹಾಗು ರಕ್ಷಣೆಯನ್ನು ಹಾಳು ಮಾಡಿ, ವಿಶ್ವವಿದ್ಯಾಲಯವನ್ನೊಂದು ಶಾಶ್ವತ ವಿವಾದಿತ ಕೇಂದ್ರವನ್ನಾಗಿ ಮಾಡಿ ಬಿಡುವ ಹುನ್ನಾರವಡಗಿದೆ ಎಂದಿದ್ದಾರೆ.

ಆ ಮೂಲಕ ದಲಿತ, ಶೂದ್ರ, ಅಲ್ಪಸಂಖ್ಯಾತ ಹಾಗು ಎಲ್ಲ ಬಡವರ ಮಕ್ಕಳ ಉನ್ನತ ವ್ಯಾಸಂಗದ ಹಕ್ಕು ಮತ್ತು ಅವಕಾಶವನ್ನು ಕಿತ್ತುಕೊಂಡು, ತಮ್ಮ ಮನುವಾದಿ ಜಾತಿಯ ಮಕ್ಕಳ ಅಡಿಯಾಳಾಗಿ ಇತರೆ ಜಾತಿ ಧರ್ಮದ ಮಕ್ಕಳು ಸಾಯಲೆಂಬುದೇ ಇದರ ಹಿಂದಿರುವ ಮನುವಾದಿ‌ ಸಂಘಟನೆಗಳ ಹುನ್ನಾರ‌ ಎಂದು ಭಾಸ್ಕರ್ ಪ್ರಸಾದ್ ದೂರಿದ್ದಾರೆ.

ದೇವರು ದಿಂಡಿರು ಯಾರಿಗೆ ಬೇಕಿದೆಯೋ ಅವರು ದೇವಸ್ಥಾನಗಳಿಗೆ ಹೋಗುತ್ತಾರೆ. ತಮ್ಮ ಮನೆ ಮಠಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಇದನ್ಯಾರೂ ಬೇಡ ಎನ್ನುತ್ತಿಲ್ಲ. ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯವಾಗಿ ಮಾತ್ರವೇ ಉಳಿಯಲಿ ಹೊರತು, ಮನುವಾದಿಗಳ ತಟ್ಟೆ ಕಾಸಿನ ಗಂಜಿ ಕೇಂದ್ರವಾಗದಿರಲಿ ಅಷ್ಟೇ. ಅಯ್ಯೋ ನಮಗ್ಯಾಕೆ ಬೇಕಪ್ಪ ಇದೆಲ್ಲಾ ಎಂದು ಜವಾಬ್ದಾರಿ ಮರೆತು ಮಾತಾಡುವವರಿಗೆ ಚೆನ್ನಾಗಿ ಗೊತ್ತಿರಲಿ. ನೀವು ನಿಮ್ಮ ಮಕ್ಕಳ ಭವಿಷ್ಯಕ್ಕೆ ಕಂಟಕರಾಗಲಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹೋರಾಟದ ಪ್ರತಿರೋಧಕ್ಕೆ SDPI ನಿಮ್ಮ ಜೊತೆ ಇರಲಿದೆ ಎಂದು ಭರವಸೆ ನೀಡಿದ್ದಾರೆ.