bengalure – Peepal Media

ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿ ಐದು ಹಂತದ ಕುತಂತ್ರಗಳು: ರಾಹುಲ್‌ಗಾಂಧಿ
ಹೊಸದಿಲ್ಲಿ:  ಕಳೆದ ನವೆಂಬರ್ 2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಐದು ಹಂತದ ಮ್ಯಾಜ್‌ ಫಿಕ್ಸಿಂಗ್‌ ಮಾಡಿಕೊಂಡಿದೆ.  ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನಾಯಕತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ, 235 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಈ ಪೈಕಿ ಬಿಜೆಪಿಯೊಂದೇ 132 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಕುರಿತು Indian Express ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಲೇಖನ ಬರೆದಿರುವ ರಾಹುಲ್ ಗಾಂಧಿ, ಬಿಜೆಪಿಯ ಗೆಲುವಿನ ಹಿಂದಿನ ಕುತಂತ್ರಗಳ ಬಗ್ಗೆ ಮಾತನಾಡಿದ್ದಾರೆ.

“ಮೊದಲ ಹಂತ ಚುನಾವಣಾ ಆಯೋಗ ನೇಮಕಾತಿಯ ತಿರುಚುವಿಕೆ, ಎರಡನೆ ಹಂತ ಮತಪಟ್ಟಿಗೆ ನಕಲಿ ಮತದಾರರ ಸೇರ್ಪಡೆ, ಮೂರನೆಯ ಹಂತ ಮತದಾನ ಪ್ರಮಾಣದಲ್ಲಿ ಏರಿಕೆ, ನಾಲ್ಕನೆಯ ಹಂತ ಬಿಜೆಪಿ ಗೆಲ್ಲಬೇಕಾದ ಅಗತ್ಯವಿರುವೆಡೆ ನಕಲಿ ಮತದಾನ ನಡೆಸುವುದು ಹಾಗೂ ಐದನೆಯ ಹಂತ ಸಾಕ್ಷ್ಯಾಧಾರಗಳನ್ನು ಬಚ್ಚಿಡುವುದು” ಎಂದು ರಾಹುಲ್‌ ಗಾಂಧಿ ಆರೋಪ ಮಾಡಿದ್ದಾರೆ. ಅಲ್ಲದೆ ಈ ಲೇಖನದ ಪುಟವನ್ನು ಅವರು ತಮ್ಮ ಎಕ್ಸ್ ಪೋಸ್ಟ್‌ನೊಂದಿಗೂ ಹಂಚಿಕೊಂಡಿದ್ದಾರೆ.

ನಾನು ಸಣ್ಣ ಪ್ರಮಾಣದ ವಂಚನೆಯ ಕುರಿತು ಮಾತನಾಡುತ್ತಿಲ್ಲ. ಬದಲಿಗೆ ನಮ್ಮ ರಾಷ್ಡ್ರೀಯ ಸಂಸ್ಥೆಗಳನ್ನು ಕೈವಶ ಮಾಡಿಕೊಂಡು ಬೃಹತ್ ಪ್ರಮಾಣದ ವಂಚನೆ ಎಸಗಲಾಗಿದೆ ಎಂದು ಅವರು ದೂರಿದ್ದಾರೆ.

ಆದರೆ, ರಾಹುಲ್ ಗಾಂಧಿಯ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗ, ನಮ್ಮ ಕಾರ್ಯವಿಧಾನ ಸ್ವಾಯತ್ತವಾಗಿಯೇ ಉಳಿದಿದ್ದು, ನಾವು ಸಾಂವಿಧಾನಿಕ ಕಾನೂನುಗಳಿಗೆ ಕಟಿಬದ್ಧವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದೆ.

ಈ ನಡುವೆ, ರಾಹುಲ್ ಗಾಂಧಿಯ ಆರೋಪಗಳನ್ನು ‘ಅಪಮಾನಕಾರಿ’ ಎಂದು ಟೀಕಿಸಿರುವ ಬಿಜೆಪಿ, “ರಾಷ್ಟ್ರೀಯ ಸಂಸ್ಥೆಗಳಿಗೆ ಕಳಂಕ ಹಚ್ಚುವ ಕೆಲಸ ಮಾಡಿದೆ. ಈ ಆರೋಪಗಳ ಕುರಿತು ಚುನಾವಣಾ ಆಯೋಗವು ಪದೇ ಪದೇ ನಿಖರವಾಗಿ ವಿವರಿಸಿದ್ದರೂ ರಾಹುಲ್‌ ಗಾಂಧಿ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಪ್ರತ್ಯುತ್ತರ ನೀಡಿದೆ.

ಮಹಾರಾಷ್ಟ್ರದಲ್ಲಿ ಬಕ್ರೀದ್ ಸಮಯದಲ್ಲಿ ಜಾನುವಾರು ಮಾರುಕಟ್ಟೆಗಳ ಬಂದ್? :‌ ಕುರಿ ವ್ಯಾಪಾರಿಗಳಿಂದ ವಿರೋಧ
ಮುಂಬೈ: ಜಾನುವಾರುಗಳ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿರುವ ಮಹಾರಾಷ್ಟ್ರ ಗೋಸೇವಾ ಆಯೋಗ ವು (ಎಂಜಿಎಸ್)ವು ಬಕ್ರೀದ್‌ಗೆ ಮುನ್ನ ಜೂ.1 ಮತ್ತು ಜೂ.8ರ ನಡುವೆ ಯಾವುದೇ ಜಾನುವಾರು ಮಾರುಕಟ್ಟೆಗಳು  ಕಾರ್ಯ ನಿರ್ವಹಿಸಬಾರದು, ಪೂರ್ತಿಯಾಗಿ ಬಂದ್‌ ಆಗಿರಬೇಕು ಎಂದು ಆದೇಶ ಹೊರಡಿಸಿದೆ ಎಂದು ಮುಂಬೈ ಸ್ಥಳಿಯ  ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ.

ಬಕ್ರೀದ್‌ ಅನ್ನು ಜೂ.7ರಂದು ಆಚರಿಸಲಾಗುತ್ತಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಆಡು ಮತ್ತು ಕುರಿಗಳನ್ನು ವಧೆಯನ್ನು ಒಳಗೊಂಡಿದೆ. ಬಹಳಷ್ಟು,  ರೈತರು, ಕುರಿ- ಮೇಕೆ ಸಾಕಾಣಿಕೆದಾರರು ಭಕ್ರೀದ್‌ ಹಬ್ಬಕ್ಕಾಗಿಯೇ ಕುರಿ ಮೇಕೆಗಳನ್ನು ಸಾಕಿಕೊಂಡು ಹಬ್ಬ ನಡೆಯುವ ಸಂದರ್ಭದಲ್ಲಿ ಮಾರಾಡ ಮಾಡುತ್ತಾರೆ. ಗೋ ಹತ್ಯೆ ನೀಷೇದಕ್ಕಾಗಿ ಕುರಿ ಮೇಕೆಗಳನ್ನು ಮಾರಾಟ ಮಾಡುವ ಜಾನುವಾರು ಮಾರುಕಟ್ಟೆಗಳನ್ನು ಬಂದ್‌ ಮಾಡಿದರೆ  ನಾವು ಕುರಿ ಮೇಕೆ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ವಿರೋಧವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಂಜಿಎಸ್ ಮೇ 27ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಅಕ್ರಮ ಗೋಹತ್ಯೆ ನಡೆಯದಂತೆ ನೋಡಿಕೊಳ್ಳಲು ಯಾವುದೇ ಜಿಲ್ಲೆಯಲ್ಲಿ ಜಾನುವಾರು ಮಾರುಕಟ್ಟೆಗಳು ಕಾರ್ಯ ನಿರ್ವಹಿಸುವಂತಿಲ್ಲ ಎಂದು ತನ್ನ ಆದೇಶ ಪತ್ರದಲ್ಲಿ ತಿಳಿಸಿದೆ.

ಗೂಗಿ ವಾ ಥಿಯೋಂಗ: ನಮ್ಮೊಳಗಿರಬೇಕಾದ ಎಚ್ಚರ
‘ಅಧೀನಕ್ಕೊಳಪಟ್ಟವರು ಯಾವಾಗ ತಮ್ಮ ಯಜಮಾನನ ವಿಜಯವನ್ನು,
ಅವನ ಸದ್ಗುಣಗಳನ್ನು ಹೊಗಳಲು ಪ್ರಾರಂಭಿಸುತ್ತಾರೋ
ಆಗ ಆಳುವವನ ದಿಗ್ವಿಜಯಗಳಿಗೆ ಕೊನೆಯೆಂಬುದಿರುವುದಿಲ್ಲ.’
-ಗೂಗಿ ವಾ ಥಿಯೋಂಗಾ, ‘ಡಿಕಾಲೊನೈಸಿಂಗ್ ಮೈಂಡ್’

ಗೂಗಿ ವಾ ಥಿಯೋಂಗ ನಿನ್ನೆ (28.05.2025) ನಮ್ಮನ್ನಗಲಿದ್ದಾರೆ. ಕೀನ್ಯಾದ ಆದಿವಾಸಿ ಜನಾಂಗವೊಂದರಲ್ಲಿ ಜನಿಸಿ ಲೋಕ ಬೆರಗಾಗುವಂತೆ ಬದುಕಿದ ಗೂಗಿ ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕವನ್ನು ತೊರೆದಿದ್ದಾರೆ. ಯುರೋಪಿನ ವಸಾಹತುಗಳಾಗಿದ್ದ ಪೂರ್ವ ಆಫ್ರಿಕಾದ ದೇಶಗಳ ಕಪ್ಪು ಜನರ ನೈಜ ಪ್ರತಿನಿಧಿಯಾಗಿ ಗೂಗಿ ನಿರಂತರವಾಗಿ ಬರೆದರು. ನಾನು ಬರೆದದ್ದು ಬರವಣಿಗಾಗಿ ಅಲ್ಲ, ಬರೆದದ್ದು ನನ್ನವರ ವಿಮೋಚನೆಗಾಗಿ. ನನ್ನ ಬರವಣಿಗೆಯಲ್ಲಿ ಸೌಂದರ್ಯವಿದೆಯೇ? ಅಲಂಕಾರಗಳಿವೆಯೇ? ಪ್ರತಿಮೆಗಳಿವೆಯೇ ಎಂಬುದು ನಿಮಗೆ ಬಿಟ್ಟ ವಿಚಾರ.

ಆದರೆ ನಾನು ಬರೆದದ್ದು ನನ್ನ ಜನರ ಅತ್ಮಪ್ರತ್ಯಯಗಳ ಉಳುವಿಕೆಗಾಗಿ. ಯುರೋಪಿನ ಭ್ರಮೆಗಳು ನಮ್ಮ ಜನಾಂಗಗಳನ್ನು ಆವರಿಸಿಕೊಂಡುಬಿಟ್ಟವೆ. ಯುರೋಪ್ ನಮ್ಮ ಜನಾಂಗಗಳ ಅಂತರಂಗಗಳನ್ನು ಹೊಕ್ಕು ಕೂತಿದೆ. ನಮ್ಮ ದೇಶಗಳು ವಸಾಹತುಶಾಹಿಯಿಂದ ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಪಡೆದಿವೆ. ಆದರೆ ಮಾನಸಿಕವಾಗಿ ಇನ್ನೂ ಯುರೋಪಿನ ದಾಸ್ಯದಲ್ಲಿಯೇ ಬದುಕುತ್ತಿವೆ. ಇಂತಹ ಗುಲಾಮಗಿರಿಯಿಂದ ನನ್ನ ಜನ ವಿಮೋಚಿತರಾಗಬೇಕು ಎಂಬ ಕಾರಣಕ್ಕಾಗಿ ನಾನು ಬರೆದೆ’ ಎಂದು ಗೂಗಿ ತನ್ನ ಬರಹದ ಉದ್ದೇಶಗಳನ್ನು ಹೇಳಿಕೊಳ್ಳುತ್ತಲೇ ಬದುಕಿದರು.

ಹೀಗೆ ಬದುಕಿದ ಗೂಗಿ ಆಫ್ರಿಕಾದ ವಿವಿಧ ದೇಶಗಳ ಕಪ್ಪು ಜನರ ದಮನಿಗಳಲ್ಲಿ ಎಚ್ಚರಗಳ ದೀಪ ಹಚ್ಚಿದರು. ನೈಜೀರಿಯಾದ ಚಿನುವ ಅಚಿಬೆ, ವೋಲೆ ಸೋಯಿಂಕಾರಂತಹ ದೊಡ್ಡ ಲೇಖಕರಿಗೆ ಗೂಗಿ ಪ್ರೇರಣೆ ನೀಡಿದರು. ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯನ್ನು ಆಫ್ರಿಕಾದ ಲೇಖಕರು ರಾಜಕೀಯಾರ್ಥಿಕ ನೆಲೆಯಲ್ಲಿ ಮುಖಾಮುಖಿಯಾದರು. ಕೆನ್ ಸರೋವಿವಾ, ಫ್ರಾಂಜ್ ಫ್ಯಾನನ್, ಅಲ್ಬರ್ಟ್ ಮೆಮ್ಮಿ, ಏಮಿ ಸಿಸಾರೆ ತರಹದ ಚಿಂತಕ/ಹೋರಾಟಗಾರರಿಗೆ ಗೂಗಿ ಒಂದು ಸೈದ್ಧಾಂತಿಕ ವೇದಿಕೆಯನ್ನು ನಿರ್ಮಾಣ ಮಾಡಿದರು.

ತಮ್ಮ Petals of Blood ಕೃತಿಯಲ್ಲಿ ಗೂಗಿ;ಅವರು ಬೈಬಲ್ ಹೊತ್ತುಕೊಂಡು ಬಂದರು, ಸೈನಿಕರು ಬಂದೂಕು ಹೊತ್ತು ಬಂದರು, ವಸಾಹತುಶಾಹಿಗಳು ಬಂಡವಾಳ ಹೂಡಲು ಬಂದರು. ಈ ಕ್ರಿಶ್ಚಿಯನ್ ಧರ್ಮ, ಬಂದೂಕು ಮತ್ತು ಬಂಡವಾಳಗಳೆಂಬ ತ್ರಿಮೂರ್ತಿಗಳು ಏಕತ್ರಗೊಂಡು ಆಫ್ರಿಕಾಕ್ಕೆ ಬಂದರು.’ ಎಂದು ಯುರೋಪಿನ ಸಾಮ್ರಾಜ್ಯಶಾಹಿಯನ್ನು ಗೂಗಿ ವಿಶ್ಲೇಷಿಸುತ್ತಾರೆ. ಧರ್ಮದ ಹರಡುವ ಭ್ರಮೆಗಳನ್ನು, ಯುದ್ಧಗಳ ಹಿಂಸೆಗಳನ್ನು ಮತ್ತು ಬಂಡವಾಳಶಾಹಿ ಆಧುನಿಕತೆಯು ನಮ್ಮ ಮುಂದೊಡ್ಡುವ ಪ್ರಲೋಭನೆಗಳನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸದಿದ್ದಲ್ಲಿ ನಮ್ಮ ವಿಮೋಚನೆ ಅಸಾಧ್ಯ ಎಂಬುದನ್ನು ಗೂಗಿ ಸಮಸ್ತ ತಳಸಮುದಾಯಗಳಿಗೆ ಅರುಹಿದರು. ಆದರೆ ಜಗತ್ತು ಇಂದು ಧಾರ್ಮಿಕ ಮತ್ತು ಜನಾಂಗೀಯ ಶ್ರೇಷ್ಟತೆಯ ಬೆನ್ನು ಬಿದ್ದಿದೆ. ಫ್ಯಾಸಿಸಂ ಮೈಮುರಿದು ಎದ್ದು ಕುಳಿತಿದೆ. ಸಾಮ್ರಾಜ್ಯಶಾಹಿ ತನ್ನ ಕಬಂಧಬಾಹುಗಳನ್ನು ಇನ್ನಿಲ್ಲದಂತೆ ವಿಸ್ತರಿಸುತ್ತಿದೆ.
ಗೂಗಿ ವಾ ಥಿಯೋಂಗಾ, ವೋಲೆ ಶೋಯಿಂಕಾ, ಅಚಿಬೆ, ಅಂಬೇಡ್ಕರ್ ರಂತಹ ಮಹಾನುಭಾವರು ಓದುವ ನಮ್ಮಗಳ ಆನಂದಕ್ಕೆ ಸೀಮಿತಗೊಳ್ಳಬಾರದು. ವರ್ತಮಾನವನ್ನು ಬದಲಿಸುವ ನಮ್ಮ ಶ್ರಮದಲ್ಲಿ ಅವರು ಪರ್ಯವಸಾನಗೊಳ್ಳಬೇಕು.

–ಎ.ಎಸ್‌.ಪ್ರಭಾಕರ
ಕನ್ನಡ ವಿವಿ, ಹಂಪಿ

ಯುದ್ಧ ಭೀತಿ: ಭಾರತದಲ್ಲಿ ಎಟಿಎಂಗಳು ಬಂದ್‌ ಆಗುತ್ತವೆಯೇ?
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತದಲ್ಲಿ ಎಟಿಎಂಗಳು  3 ದಿನಗಳವರೆಗೆ ಬಂದ್‌ ಆಗುತ್ತವೆ ಎಂಬ ವದಂತಿ ಹರಡುತ್ತಿದೆ. ಆದರೆ, ಈ ಮಾಹಿತಿಯನ್ನು ಭಾರತ ಸರ್ಕಾರದ ಗೃಹ ಸಚಿವಾಲಯ ತಳ್ಳಿ ಹಾಕಿದೆ.

ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಾಗರೀಕರಿಗೆ ದಾಳಿ ಮತ್ತು ಮುಷ್ಕರಗಳಂತಹ ತುರ್ತು ಪರಿಸ್ಥಿತಿಗಳಿಗೆ ಸಿದ್ಧರಾಗಲು ತರಬೇತಿ ನೀಡಲಾಗುತ್ತಿದೆ. ಈ ಬೆನ್ನಲ್ಲೆ ಎಟಿಎಂಗಳು ಬಂದ್‌ ಆಗುತ್ತವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸೈಬರ್ ದಾಳಿಯ ನಂತರ ಸರ್ಕಾರವು ಕೆಲವು ದಿನಗಳವರೆಗೆ ಎಟಿಎಂಗಳನ್ನು ಮುಚ್ಚಲಿದೆ. ಆನ್‌ಲೈನ್‌ ವಹಿವಾಟಿಗೂ ಅಡಚಣೆಯಾಗಲಿದೆ ಎಂದು ವ್ಯಾಟ್ಸಪ್‌ ಫೇಸ್‌ಬುಕ್‌ ಟ್ವೀಟರ್‌ಗಳಲ್ಲಿ ಸಂದೇಶ ಹರಿದಾಡುತ್ತಿತ್ತು.

ಆದರೆ, “ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಪಾಕಿಸ್ತಾನವು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಭಾರತದಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಂಬಬಾರದು ” ಎಂದು  ಕೇಂದ್ರ ಸರ್ಕಾರ ತಿಳಿಸಿದೆ.

ಇಂಡಿಯಾ VS ಪಾಕಿಸ್ತಾನ ಇಂಪಾರ್ಟೆಂಟ್ ಎಂದು ವಾಟ್ಸಾಪ್ ಸಂದೇಶವು ಪ್ರಾರಂಭವಾಗುತ್ತದೆ. ” ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಸೈಬರ್ ದಾಳಿಯಿಂದಾಗಿ ಭಾರತದಾದ್ಯಂತ ಎಟಿಎಂಗಳನ್ನು ಮುಚ್ಚಲಾಗುವುದು “.

“ಮುಂದಿನ 2 – 3 ದಿನಗಳವರೆಗೆ ಎಟಿಎಂಗಳನ್ನು ಮುಚ್ಚಲಾಗುವುದು “

“ಸೈಬರ್‌ ದಾಳಿ ಸಾಧ್ಯತೆ ಇದೆ ಯುದ್ಧದ ವೇಳೆ ಆನ್‌ಲೈನ್ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಿ”

ಎಂಬ ಮೇಸೆಜ್‌  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಇದು ಸುಳ್ಳು ಸುದ್ದಿ ಭಾರತದಾದ್ಯಂತ ಎಟಿಎಂಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿಯನ್ನು ಪಿಐಬಿಯ ಸತ್ಯ – ಪರಿಶೀಲನಾ ಘಟಕವು ಕೂಡ ಪರಿಶೀಲನೆ ನಡೆದಿದೆ. ಇದೊಂದು ನಕಲಿ ಸುದ್ದಿ ನಂಬ ಬೇಡಿ ಎಂದು ಪಿಐಬಿ ಜನರಿಗೆ ತಿಳಿಸಿದೆ. ಇವುಗಳ ಜತೆಗೆ ಐಎನ್‌ಎಸ್‌ ವಿಕ್ರಾಂತ್‌, ಎಸ್‌ 400 ಕುರಿತ ಹಲವು ನಕಲಿ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಅವುಗಳನ್ನು ನಂಬಬೇಡಿ ಎಂದು ಪಿಐಬಿ

ಪೆಟ್ರೋಲ್‌, ಡಿಸೇಲ್‌ ದಾಸ್ತಾನು ಸಾಕಷ್ಟಿದೆ, ಹೆದರಬೇಡಿ: ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌
ಹೊಸದಿಲ್ಲಿ: ಎಲ್ಲ ಪ್ರಜೆಗಳಿಗೂ ಸಾಕಾಗುವಷ್ಟು ದೇಶಾದ್ಯಂತ ಸಾಕಷ್ಟು ಇಂಧನ(ಪೆಟ್ರೋಲ್, ಡಿಸೇಲ್‌) ದಾಸ್ತಾನು ಹೊಂದಿದ್ದೇವೆ.  ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆಯನ್ನು ನೀಡಿದೆ.

ಭಾರತ –ಪಾಕಿಸ್ತಾನದ ಉದ್ವಿಗ್ನತೆಯ ಮಧ್ಯೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್, ಇಂಡಿಯನ್ ಆಯಿಲ್ ದೇಶಾದ್ಯಂತ ಸಾಕಷ್ಟು ಇಂಧನ ದಾಸ್ತಾನುಗಳನ್ನು ಹೊಂದಿದೆ. ಯಾವುದೇ ಸಮಸ್ಯೆಯಿಲ್ಲದೆ ಸರಾಗವಾಗಿ ಸರಬರಾಜು ಆಗುತ್ತಿದೆ. ಜನರು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ. ಇಂಧನ ಮತ್ತುಎಲ್‌ಪಿಜಿ ನಮ್ಮ ಎಲ್ಲಾ ಔಟ್‌ಲೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿರಲಿದೆ. ಜನರು ಶಾಂತವಾಗಿರಿ ಮತ್ತು ಅನಗತ್ಯವಾಗಿ ಪೇಕ್‌ ಸುದ್ದಿಗಳಿಗೆ ಕವಿಗೊಡುವ ಅಗತ್ಯವಿಲ್ಲ ಎಂದು ಪೋಸ್ಟ್‌ ನಲ್ಲಿ ತಿಳಿಸಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಪೆಟ್ರೋಲ್, ಡೀಸಿಲ್ ವ್ಯತ್ಯಯದ ಭೀತಿಯಿಂದ ದೇಶದ ಕೆಲವೆಡೆ ಜನರು ಪೆಟ್ರೋಲ್ ಬಂಕ್‌ಗಳಲ್ಲಿ ಜಮಾಯಿಸಿದ್ದರು. ಇಂಧನವನ್ನು ಸಂಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿರುವುದನ್ನು ತೋರಿಸುವ ಪೋಸ್ಟ್‌ಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ.

ಸುದ್ದಿಮೂಲ: PTI

ಬಾಲಕಿ ಮೇಲೆ ಅತ್ಯಾಚಾರ: ತಲೆಮರೆಸಿಕೊಂಡ ಆರೋಪಿ ವಿಶ್ವನಾಥ್‌ ಹೆಗಡೆ
ಶಿರಸಿ: ತಾಲೂಕಿನ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹವ್ಯಕ ಬ್ರಾಹ್ಮಣ ಸಮುದಾಯದ ವಿಶ್ವನಾಥ್‌ ಹೆಗಡೆ (40) ಎಂಬಾತ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಳನೇ ತರಗತಿ ವ್ಯಾಸಂಗ ಮುಗಿಸಿ ಬೇಸಿಗೆ ರಜೆಯ ಕಾರಣ ಮನೆಯಲ್ಲಿಯೇ ಇದ್ದ ಬಾಲಕಿ ಮೇಲೆ ವಿಶ್ವನಾಥ್‌ ಹೆಗಡೆ ಎಂಬಾತ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಮಗು ತನ್ನ ತಾಯಿಗೆ ಈ ವಿಷಯವನ್ನು ತಿಳಿಸಿದ್ದು, ತಾಯಿ ಆರೋಪಿಯ ಮನೆ ಬಾಗಿಲಿಗೆ ಹೋಗಿ ಕೇಳಿದ್ದಾರೆ. ಆದರೆ, ಆರೋಪಿ “ನಾನು ಹಾಗೇನೂ ಮಾಡಿಲ್ಲ. ನಾನೇ ಮಾಡಿದ್ದೇನೆ ಎನ್ನುವುದಕ್ಕೆ ನಿನ್ನ ಹತ್ತಿರ ಸಾಕ್ಷಿ ಇದೆಯೇ” ಎಂದು ಉಡಾಪೆಯಿಂದ ಮಾತಾಡಿದ್ದಾನೆ. ನಂತರ ತಾಯಿ, ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಶಿರಸಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣದಡಿ ದೂರು ನೀಡಿದ್ದಾರೆ. ದೂರು ನೀಡಿದ ಮೂರ್ನಾಲ್ಕು ದಿನಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ದೌರ್ಜನ್ಯ ಪ್ರಕರಣವೆಂದು ದೂರು ದಾಖಲಿಸಿಕೊಂಡಿದ್ದು, ದೂರುದಾರರಿಗೆ ಪೊಲೀಸರು ಎಫ್‌ಐಆರ್‌ ಪ್ರತಿಯನ್ನೂ ಕೂಡ ನೀಡದೆ ಕಳುಹಿಸಿದ್ದಾರೆ ಎನ್ನಲಾಗಿದೆ. ‌ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.

ಬುಧವಾರ ಬೆಳಿಗ್ಗೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡುವ ಕುರುಹು ತಿಳಿದ ಆರೋಪಿ ಪರಾರಿಯಾಗಿದ್ದಾನೆ. ಇಡೀ ದಿನ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾನೆಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಆರೋಪಿ ತನ್ನ ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ನಾಳೆ ʼಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘʼಕ್ಕೆ ಚಾಲನೆ
ಬೆಂಗಳೂರು:  ನಾಳೆ ಅಂದರೆ ಏಪ್ರಿಲ್‌ 23ರಂದು ಸಂಜೆ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ʼಕರ್ನಾಟಕ ಪುಸ್ತಕ ಮಾರಾಟಗಾರರು,ಪ್ರಕಾಶಕರು ಹಾಗೂ ಲೇಖಕರ ಸಂಘʼ ಚಾಲನೆ ಪಡೆಯಲಿದೆ. ಕನ್ನಡ ಪುಸ್ತಕೋದ್ಯಮವನ್ನು ಬೆಳೆಸುವುದು ಮತ್ತು ಪುಸ್ತಕ ಮಾರಾಟಗಾರರು, ಪ್ರಕಾಶಕರು ಮತ್ತು ಲೇಖಕರ ನಡುವೆ ಸೇತುವೆಯಾಗಿ ಕೆಲಸು ಮಾಡುವುದು ಈ ಸಂಘಟನೆಯ ಉದ್ದೇಶವಾಗಿದೆ ಎಂದು ಸಂಘಟನೆಯ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಪುಸ್ತಕಗಳಿಗೆ ಓದುಗರ ಕೊರತೆ ಕಾಡುತ್ತಿದೆ. ಕನ್ನಡ ಪುಸ್ತಕೋದ್ಯಮವೂ ಹೊಸ ಆಲೋಚನೆಗಳ ಅಲಭ್ಯತೆ ಮತ್ತು ಸರ್ಕಾರ-ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದೆ ಸಂಕಷ್ಟದಲ್ಲಿದೆ. ಇಂಥ ಸನ್ನಿವೇಶದಲ್ಲಿ ತಮ್ಮ ಪುಸ್ತಕ ಪ್ರಕಟಿಸಬೇಕೆಂಬ ಆಶಯ ಇರುವ ಲೇಖಕರು, ಪುಸ್ತಕ ಮಾರಾಟವನ್ನೇ ಬದುಕಾಗಿಸಿಕೊಂಡ ದೂರದೂರುಗಳ ಪುಸ್ತಕ ಮಾರಾಟಗಾರರು ಹಾಗೂ ಸಣ್ಣ ಪ್ರಕಾಶಕರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕೆಂಬ ಆಶಯದಿಂದ ಈ ಸಂಘವನ್ನು ಹುಟ್ಟು ಹಾಕಲಾಗುತ್ತಿದೆ.

ಸಂಘವು ಪುಸ್ತಕ ಪ್ರಕಾಶಕರು, ವಿತರಕರು ಮತ್ತು ಲೇಖಕರ ಮಧ್ಯೆ ಸಂಪರ್ಕ ಸೇತುವೆಯಂತೆ ಕಾರ್ಯ ನಿರ್ವಹಿಸುವ ಉದ್ದೇಶ ಹೊಂದಿದೆ. ವಿಚಾರಸಂಕಿರಣ, ಕಾರ್ಯಾಗಾರ, ತರಬೇತಿ ಮತ್ತು ಪ್ರಸಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು; ಇದಕ್ಕಾಗಿ ಪುಸ್ತಕ ಮೇಳ, ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಸದಸ್ಯರ ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಾಂಸ್ಥಿಕ ಯೋಜನೆಗಳನ್ನು ರೂಪಿಸಲಾಗುತ್ತದೆ. ಅಂತಾರಾಷ್ಟ್ರೀಯ-ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಪುಸ್ತಕ ಪ್ರದರ್ಶನ/ಮೇಳಗಳನ್ನು ಸರ್ಕಾರದ ನಾನಾ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳು, ನಿಗಮ-ಮಂಡಳಿಗಳು, ಪ್ರಾಧಿಕಾರಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವುದು ಹಾಗೂ ಅಂತಾರಾಷ್ಟ್ರೀಯ-ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ನಡೆಯುವ ಪುಸ್ತಕ ಪ್ರದರ್ಶನ/ಮೇಳಗಳಲ್ಲಿ ಪಾಲ್ಗೊಳ್ಳಲು ಸದಸ್ಯರಿಗೆ ನೆರವಾಗುವುದು ಸಂಘದ ಉದ್ದೇಶಗಳಲ್ಲಿ ಒಂದು. ಇದೆಲ್ಲವನ್ನೂ ಸಂಘಟನೆ ಮೂಲಕ, ಸಾಮೂಹಿಕ ಪ್ರಯತ್ನದ ಮೂಲಕ ಸಾಧ್ಯವಾಗಿಸುವ ಉದ್ದೇಶ ಹೊಂದಲಾಗಿದೆ. ಸಮಾನತೆ, ಸಮಸಮಾಜ ಮತ್ತು ಸಂವಿಧಾನ ನಮ್ಮ ಗುರಿಯಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಸ್ತಕಗಳ ಕುರಿತು ವಿಶೇಷ ಉಪನ್ಯಾಸ

ಚಿಂತಕ ಡಾ. ರಹಮತ್‌ ತರಿಕೆರೆಯವರು ʼಸಮಕಾಲೀನ ಸಂದರ್ಭದಲ್ಲಿ ಪುಸ್ತಕಗಳುʼ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಹಿರಿಯ ಲೇಖಕಿ ಆರ್.‌ ಪೂರ್ಣಿಮಾ, ದಲಿತ ಮುಖಂಡ ಮಾವಳ್ಳಿ ಶಂಕರ್‌, ಆಕೃತಿ ಪ್ರಕಾಶನದ ಗುರುಪ್ರಸಾದ್‌ ಡಿ.ಎನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಸವರಾಜ ಸೂಳಿಭಾವಿ, ಧನಂಜಯ್‌,  ಮಾಧವ್‌ ಐತಾಳ್‌, ರಾಜೇಶ್ವರಿ, ಅಕ್ಷತಾ ಹುಂಚದಕಟ್ಟೆ, ವಿ.ಆರ್.ಕಾರ್ಪೆಂಟರ್‌, ಚಂದ್ರು ತುರಹುಣಸೆ, ಅನಿಲ್‌ ಚಿಕ್ಕದಳವಟ್ಟ ಮತ್ತು ನಿತೇಶ್‌ ಕುಂಟಾಡಿ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ನಾಲ್ವರು ಸೇರಿದಂತೆ 7 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಶಿಫಾರಸು
ನವದೆಹಲಿ: ಕರ್ನಾಟಕದ ನಾಲ್ವರು ಸೇರಿದಂತೆ ಏಳು ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಧ್ಯಕ್ಷತೆಯ ಕೊಲಿಜಿಯಂ ಶಿಫಾರಸು ಹೊರಡಿಸಿದ್ದಾರೆ.

ಆ ಶಿಫಾರಸು ಹೇಳಿಕೆಯಲ್ಲಿ, “ಹೈಕೋರ್ಟ್‌ಗಳಲ್ಲಿ ವೈವಿಧ್ಯತೆಯನ್ನು ಹೆಚ್ಚಿಸುವ ಮತ್ತು ನ್ಯಾಯಾಂಗದ ಆಡಳಿತದ ಗುಣಮಟ್ಟವನ್ನು ಬಲಪಡಿಸುವ ಉದ್ದೇಶದಿಂದ, ಸುಪ್ರೀಂ ಕೋರ್ಟ್ ಕೊಲಿಜಿಯಂ ಎಪ್ರಿಲ್ 15, 2025 ಮತ್ತು ಎಪ್ರಿಲ್ 19, 2025 ರಂದು ನಡೆದ ಸಭೆಗಳಲ್ಲಿ ನ್ಯಾಯಾಲಯಗಳ ನ್ಯಾಯಾಧೀಶರ ವರ್ಗಾವಣೆಗೆ ಶಿಫಾರಸು ಮಾಡಿದೆ” ಎಂದು ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನಿಂದ, ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ, ನ್ಯಾಯಮೂರ್ತಿ ಕೃಷ್ಣನ್ ನಟರಾಜನ್ ಅವರನ್ನು ಕೇರಳಕ್ಕೆ, ನ್ಯಾಯಮೂರ್ತಿ ನೆರನಹಳ್ಳಿ ಶ್ರೀನಿವಾಸನ್ ಸಂಜಯ್ ಗೌಡ ಅವರನ್ನು ಗುಜರಾತ್‌ಗೆ ಮತ್ತು ನ್ಯಾಯಮೂರ್ತಿ ದೀಕ್ಷಿತ್ ಕೃಷ್ಣ ಶ್ರೀಪಾದ್ ಅವರನ್ನು ಒಡಿಶಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಶಿಫಾರಸು ಮಾಡಲಾಗಿದೆ.

ನ್ಯಾಯಮೂರ್ತಿ ಪೆರುಗು ಶ್ರೀ ಸುಧಾ ಅವರನ್ನು ತೆಲಂಗಾಣ ಹೈಕೋರ್ಟ್‌ ನಿಂದ ಕರ್ನಾಟಕಕ್ಕೆ, ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಕಸೋಜು ಸುರೇಂದರ್ ಅಲಿಯಾಸ್ ಕೆ ಸುರೇಂದರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ಮತ್ತು ಆಂಧ್ರಪ್ರದೇಶ ಹೈಕೋರ್ಟ್‌ ನಿಂದ ನ್ಯಾಯಮೂರ್ತಿ ಕುಂಭಾಜದಲ ಮನ್ಮಧ ರಾವ್ ಅವರನ್ನು ಕರ್ನಾಟಕಕ್ಕೆ ವರ್ಗಾಯಿಸಲು ಶಿಫಾರಸು ಮಾಡಲಾಗಿದೆ.

ಬಿ.ಆರ್. ಗವಾಯಿ ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿ: ಶಿಫಾರಸು ಮಾಡಿದ CJI ಸಂಜೀವ್ ಖನ್ನಾ
ನವದೆಹಲಿ: ಪ್ರಸ್ತುತ ಮುಖ್ಯ ನ್ಯಾಯಮೂರ್ತಿ (CJI) ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಅಧಿಕೃತವಾಗಿ ಶಿಫಾರಸು ಮಾಡಿದ್ದು,  ಗವಾಯಿ ಅವರು ದೇಶದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.

ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇ 14ರಂದು ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮೇ 13ರಂದು ನಿವೃತ್ತರಾಗಲಿದ್ದಾರೆ.

ನ್ಯಾಯಮೂರ್ತಿ ಗವಾಯಿ ಅವರು ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 64 ವರ್ಷದ ನ್ಯಾಯಮೂರ್ತಿ ಖನ್ನಾ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆರು ತಿಂಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆರು ತಿಂಗಳ ಅವಧಿಯನ್ನು ಹೊಂದಿರುತ್ತಾರೆ.

ಸಂಪ್ರದಾಯದ ಪ್ರಕಾರ, ಪ್ರಸ್ತುತ ಮುಖ್ಯ ನ್ಯಾಯಾಧೀಶರು ತಮ್ಮ ಉತ್ತರಾಧಿಕಾರಿಯನ್ನು ನಾಮನಿರ್ದೇಶನ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಕಳುಹಿಸುತ್ತಾರೆ. ಸಚಿವಾಲಯವು ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳಿಂದ ಅವರ ಉತ್ತರಾಧಿಕಾರಿಯ ಹೆಸರಿಗೆ ಪ್ರಸ್ತಾವನೆಯನ್ನು ಕೋರಿತ್ತು. ನ್ಯಾಯಮೂರ್ತಿ ಗವಾಯಿ ಅವರು ನವೆಂಬರ್‌ನಲ್ಲಿ ನಿವೃತ್ತರಾಗಲಿರುವ ಕಾರಣ ಸುಮಾರು ಆರು ತಿಂಗಳ ಕಾಲ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿದ್ದಾರೆ. ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನಂತರ, ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಲಿರುವ ಎರಡನೇ ದಲಿತರಾಗಲಿದ್ದಾರೆ.

1960ರ ನವೆಂಬರ್ 24ರಂದು ಅಮರಾವತಿಯಲ್ಲಿ ಜನಿಸಿದ ಗವಾಯಿ, 1985ರ ಮಾರ್ಚ್ 16ರಂದು ವಕೀಲರಾಗಿ ಸೇರಿಕೊಂಡರು. ಆರಂಭದಲ್ಲಿ ಅವರು ಮಾಜಿ ಅಡ್ವೊಕೇಟ್ ಜನರಲ್ ಮತ್ತು ಹೈಕೋರ್ಟ್ ನ್ಯಾಯಾಧೀಶರಾಗಿದ್ದ ದಿವಂಗತ ಬಾರ್ ರಾಜಾ ಎಸ್ ಭೋಸಲೆ ಅವರ ಅಡಿಯಲ್ಲಿ 1987 ರವರೆಗೆ ಕೆಲಸ ಮಾಡಿದರು. ನಂತರ ಅವರು 1987 ರಿಂದ 1990 ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಸ್ವತಂತ್ರವಾಗಿ ಅಭ್ಯಾಸ ಮಾಡಿದರು. 1990ರ ನಂತರ, ಅವರು ಮುಖ್ಯವಾಗಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನಿನ ಮೇಲೆ ಕೇಂದ್ರೀಕರಿಸಿ ಅಭ್ಯಾಸ ಮಾಡಿದರು.

ಅವರು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಅಮರಾವತಿ ವಿಶ್ವವಿದ್ಯಾಲಯಕ್ಕೆ ಸ್ಥಾಯಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರನ್ನು 2003ರ ನವೆಂಬರ್ 14ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು. ನಂತರ 2005ರ ನವೆಂಬರ್ 12ರಂದು ಅವರನ್ನು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ʼಭೀಮ ಹೆಜ್ಜೆ 100ʼ ಅಂಬೇಡ್ಕರ್‌ ಕಾರ್ಯಕ್ರಮ: ಇಂದು ನಿಪ್ಪಾಣಿಯಲ್ಲಿ ಉದ್ಘಾಟನೆ
ಬೆಂಗಳೂರು:  ಡಾ.ಅಂಬೇಡ್ಕರರ ಜನ್ಮದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ  ಹಾಗೂ ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದು 100 ವರ್ಷಗಳಾದ ಹಿನ್ನೆಲೆಯಲ್ಲಿ “ಭೀಮ ಹೆಜ್ಜೆ 100” ಎಂಬ ಹೆಸರಿನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಯೋಜಿಸಲಾಗುತ್ತಿದೆ. ಎಂದು ಸಚಿವ ಪ್ರಲ್ಹಾದ್ ಜೋಶಿ ಅವರು ಹೇಳಿದರು.

ಭೀಮ ಹೆಜ್ಜೆ 100ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯು ಸಂದರ್ಭದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ; ದಲಿತ ವಿರೋಧಿ ಕೂಡ ಎಂದು ಜನರಿಗೆ ಭೀಮ ಹೆಜ್ಜೆ ಕಾರ್ಯಕ್ರಮದ ವೇಳೆ ತಿಳಿಸುತ್ತೇವೆ ಎಂದು ಘೋಷಿಸಿದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಯಾವ ಕಾರಣಕ್ಕಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದರೋ ಅದನ್ನು ಜನರಿಗೆ ನೆನಪಿಸಲಾಗುವುದು. ಕಾಂಗ್ರೆಸ್ ಪಕ್ಷವು ಅವರಿಗೆ ಅನ್ಯಾಯ ಮಾಡಿದ್ದರು. ಅವರು ಸಂವಿಧಾನ ರಚನಾ ಸಭೆಯಲ್ಲಿ ಇರಬಾರದೆಂಬ ಕಾರಣಕ್ಕೆ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟ ಸಂಗತಿಯನ್ನು ಜನರ ಮುಂದೆ ಇಡುತ್ತೆವೆ. ಜೊತೆಗೆ ಎರಡೆರಡು ಬಾರಿ ಅವರನ್ನು ಸೋಲಿಸಿದ್ದು, ಮಧ್ಯಂತರ ಸರಕಾರಕ್ಕೆ ಬಾರದಂತೆ ತಡೆದುದನ್ನು ಸಹ ಬಹಿರಂಗಪಡಿಸುತ್ತೇವೆ ಎಂದರು.

ದಲಿತರ ಮೀಸಲಾತಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ವಿರೋಧಿಸಿದ್ದನ್ನು ಜನರ ಮುಂದೆ ತೆರೆದಿಡುತ್ತೇವೆ. ಈಗಲೂ ಖರ್ಗೆಯವರಿಗೆ ಅವಮಾನ ಮಾಡಿದ್ದನ್ನೂ ತಿಳಿಸುತ್ತೇವೆ ಎಂದು ಅವರು ಹೇಳಿದರು.

ಪ್ರಶ್ನೆಗೆ ಉತ್ತರಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಶಾಸಕಿ ಶಶಿಕಲಾ ಜೊಲ್ಲೆ ಅವರು ನಿಪ್ಪಾಣಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬಂದು 100 ವರ್ಷವಾಗುತ್ತಿದೆ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಬೆಳಗಾವಿಗೆ ಮಹಾತ್ಮ ಗಾಂಧಿಯವರು ಬಂದ ಕಾರ್ಯಕ್ರಮ ಅವರು ಮಾಡಿದ್ದಾರೆ. ಅದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭೇಟಿಯ 100 ವರ್ಷ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಸರಕಾರ ಈ ಕಾರ್ಯಕ್ರಮ ಮಾಡಿದ್ದರೆ ನಾವು ಮಾಡುತ್ತಿರಲಿಲ್ಲ. ಇದು ನಮ್ಮ ಬದ್ಧತೆ ಎಂದು  ಜೋಶಿ ತಿಳಿಸಿದರು.