Bengaluru Metro Fare Hike – Peepal Media

ಮೆಟ್ರೋ ದರ ಏರಿಕೆ ವಿಚಾರ ಮರುಪರಿಶೀಲನೆಗೆ ಅವಕಾಶವಿಲ್ಲ PIL ವಜಾಗೊಳಿಸಿದ ಕೋರ್ಟ್‌ ?
ಬೆಂಗಳೂರು : ಕೆಲ ತಿಂಗಳ ಹಿಂದೆ ಮೆಟ್ರೋ ದರ ಏರಿಕೆ ವಿಚಾರವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ನಿಯಮ ಬಾಹಿರವಾಗಿ ಶೇ.71ರಷ್ಟು ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ ಇಂದು ವಜಾಗೊಳಿಸಿ ಆದೇಶಿಸಿದೆ. ದರ ಏರಿಕೆಗೆ ರಚನೆಯಾಗಿದ್ದ ಸಮಿತಿ ಎಲ್ಲ ಆಯಾಮಗಳಲ್ಲಿ ಅಧ್ಯಯನ ಮಾಡಿ ದರ ಏರಿಕೆಗೆ ಶಿಫಾರಸು ಮಾಡಿತ್ತು. ತಜ್ಞರು ಪರಿಶೀಲಿಸಿ ಆದೇಶಿಸಿರುವ ಅಂಶಗಳನ್ನು ಕೋರ್ಟ್​​​ ಮರುಪರಿಶೀಲನೆಗೆ ಅವಕಾಶವಿಲ್ಲ.  ಶಾಸನಬದ್ಧ ಉಲ್ಲಂಘನೆಯನ್ನು ಹೊರತುಪಡಿಸಿ ಇತರೆ ನಿರ್ಧಾರದ ವಿಚಾರಗಳಲ್ಲಿ ಕೋರ್ಟ್​​​ ಮಧ್ಯಪ್ರವೇಶಿಸಲ್ಲ, ಅದಕ್ಕೆ ಅವಕಾಶವಿಲ್ಲ ಎಂದು​​​ ಹೇಳಿದೆ.

ಬೆಂಗಳೂರಿನ ಚೈತನ್ಯ ಸುಬ್ರಹ್ಮಣ್ಯ, ಚೇತನ್‌ ಗಾಣಿಗೇರ ಮತ್ತು ಸನತ್ ಕುಮಾರ್ ಶೆಟ್ಟಿ ಎಂಬುವವರು ಸಲ್ಲಿಸಿದ್ದ ಪಿಐಎಲ್​​​​  ವಿಚಾರಣೆಯನ್ನು ಮುಖ್ಯ ನ್ಯಾ.ಎನ್.ವಿ ಅಂಜಾರಿಯಾ & ನ್ಯಾ.ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸಿ ವಜಾಗೊಳಿಸಿದೆ.

ದರ ಏರಿಕೆಯ ಎಫೆಕ್ಟ್ ನಮ್ಮ ಮೆಟ್ರೋಗೆ ಭಾರೀ ನಷ್ಟ
ಬೆಂಗಳೂರು: ಫೆ. 9 ರಿಂದ ಪ್ರಯಾಣ ದರಗಳನ್ನು ಹೆಚ್ಚಿಸಿದ ಬಳಿಕ ನಮ್ಮ ಮೆಟ್ರೋ ಭಾರೀ ನಷ್ಟವನ್ನು ಅನುಭವಿಸಿದೆ. ಇದರಿಂದಾಗಿ ನಮ್ಮ ಮೆಟ್ರೋ ಸುಮಾರು 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಕಳೆದುಕೊಂಡಿದೆ.ಟಿಕೆಟ್ ಬೆಲೆಗಳು ಹೆಚ್ಚಾದಂತೆ ಜನರು ವಿಭಿನ್ನ ಮಾರ್ಗಗಳು ಮತ್ತು ಸಾರಿಗೆ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಇಡೀ ವಿಷಯದ ಬಗ್ಗೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಸರ್ಕಾರವನ್ನು ದೂಷಿಸಿದ್ದು, ಇದು ದುರುಪಯೋಗದ ಪರಿಣಾಮವಾಗಿದ್ದು, ಇದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಫೆಬ್ರವರಿ 8 ರಂದು, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು ಪ್ರಯಾಣ ದರವನ್ನು ಸುಮಾರು ಶೇ. 100 ರಷ್ಟು ಹೆಚ್ಚಿಸಿದ್ದರು. ಇದರ ಜೊತೆಗೆ, ಬಿಎಂಆರ್‌ಸಿಎಲ್ ‘ಪೀಕ್ ಅವರ್’ ಸಮಯದಲ್ಲಿ ಶೇ. 5 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಿತ್ತು. ದರ ಏರಿಕೆ ಜಾರಿಗೆ ಬಂದ ದಿನದಿಂದ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದು, ಹತ್ತು ದಿನಗಳ ನಂತರ, ಪ್ರಯಾಣಿಕರ ಸಂಖ್ಯೆ ದಿನಕ್ಕೆ 6.3 ಲಕ್ಷಕ್ಕೆ ಇಳಿಕೆಯಾಗಿದೆ ಎನ್ನಲಾಗಿದೆ.

ಮತ್ತೆ ಪರಿಶೀಲನಾ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರಿಗೆ ಕೆಲವು ವಿಭಾಗಗಳಲ್ಲಿ ದರ ಏರಿಕೆ ಶೇ. 100 ಕ್ಕಿಂತ ಹೆಚ್ಚಾಗಿದ್ದರಿಂದ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಿರ್ದೇಶಿಸಿದ ನಂತರ ಬಿಎಂಆರ್‌ಸಿಎಲ್ ತನ್ನ ದರ ಏರಿಕೆಯನ್ನು ಮರುಪರಿಶೀಲಿಸಲು ನಿರ್ಧರಿಸಿತ್ತು. ಇದೀಗ ಮೆಟ್ರೋ ರೈಲು ಅಧಿಕಾರಿಗಳು ಮಾರ್ಚ್ 1 ರಂದು ದರ ಏರಿಕೆಯ ಪರಿಣಾಮದ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.