Bhanu Mushtaq’s Booker Prize is celebrated – Peepal Media

ಭಾನು ಮುಷ್ತಾಕ್‌ರವರಿಗೆ ಬೂಕರ್ ಪ್ರಶಸ್ತಿ ರವರಿಗೆ ನಗರದಲ್ಲಿ ಜನಪರ ಚಳುವಳಿಗಳ ಒಕ್ಕೂಟದಿಂದ ಸಂಭ್ರಮ
ಹಾಸನ : ಎಲ್ಲಾರ ಜನಪರಗಳ ಕಾಳಜಿ ಇರುವಒಡನಾಡಿ, ಸಾಹಿತಿ, ವಕೀಲರು, ಶ್ರೀಮತಿ ಭಾನುಮುಷ್ತಾಕ್‌ ಅವರಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ನಗರದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದಿಂದ ಗುರುವಾರದಂದು ಸಾರ್ವಜನಿಕ ಸಂಭ್ರಮ ಹಾಗೂ ಅಭಿನಂದನೆ ಸಲ್ಲಿಸುವುದಕ್ಕೆಎಲ್ಲಾ ಸಂಘ ಸಂಸ್ಥೆಗಳು ಸೇರಿಘೋಷಣೆ ಕೂಗಿ ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿ ಅಭಿನಂದಿಸಿದರು. ಮೊದಲು ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಹೂವಿನ ಮಳೆ ಕರೆದರು. ನಂತರ ಲೇಖಕಿ ಬಾನು ಮುಷ್ತಾಕ್‌ಅವರ 2025ನೇ ಸಾಲಿನ ಅನುವಾದಿತಕೃತಿ `ಹಾರ್ಟ್ ಲ್ಯಾಂಪ್’ ಗೆ ಬೂಕರ್ ಪ್ರಶಸ್ತಿ ಪಡೆದುಕೊಂಡಿದನ್ನುಘೋಷಣೆಕೂಗುವುದರ ಮೂಲಕ ಸಂಭ್ರಮಿಸಿ ಸಿಹಿ ಹಂಚಿದರು. ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟದ ಮುಖಂಡ ಧರ್ಮೇಶ್ ಮಾತನಾಡಿ, ಭಾನುಮುಷ್ತಾಕ್‌ಅವರ ಆರಂಭ ದಿನಗಳಿಂದಲೂ ಜನಪರ ಚಳುವಳಿಗಳು, ರೈತ ಚಳುವಳಿ, ದಲಿತ ಹಾಗೂ ಕಾರ್ಮಿಕ ಚಳುವಳಿಗಳ ಜೊತೆ ಸಂಬಂಧ ಇಟ್ಟು ಕೊಂಡಂತವರುಂದರು. ಸಾಮಾಜಿಕ ಒಡನಾಟವೇ ಅವರ ಸಾಹಿತ್ಯದಲ್ಲಿ ಸಾಮಾಜಿಕ ವಿಚಾರವನ್ನು ಹೆಚ್ಚು ಕೊಡುವುದಕ್ಕೆ ಸಹಕಾರಿಆಗಿದೆ. ಅವರಿಗೆ ಈಗ ಅಂತರಾಷ್ಟಿಯ ಪ್ರಶಸ್ತಿ ಬಂದಿರುವುದು ನಮಗೆಲ್ಲಾಒಂದುರೀತಿಯ ಸಂಭ್ರಮ. ಅವರುಇಲ್ಲಿಗೆ ಬಂದ ನಂತರ ಸ್ವಾಗತಿಸಿ ನಾಗರೀಕ ಸನ್ಮಾನ ಮಾಡುವಂತಹ ಕಾರ್ಯಕ್ರಮ ಇರುತ್ತದೆ. ಹಾಸನದ ಹೆಸರನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡಖ್ಯಾತಿ ಬಂದಿದೆ. ಈ ಬಗ್ಗೆ ವಿಶ್ವದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ದೀಪ ಬಸ್ತಿ ಮತ್ತು ಭಾನು ಮುಷ್ತಾಕ್‌ ಕನ್ನಡಕ್ಕೆ ಸಿಕ್ಕಿರುವ ಮೊದಲನೆ ಬುಕರ್ ಪ್ರಶಸ್ತಿ ಇದಾಗಿದೆ. ಇಂಡಿಯಕ್ಕೆ ಹಲವಾರು ಪ್ರಶಸ್ತಿ ಬಂದಿದೆ. ಜೊತೆಗೆ ಕನ್ನಡಿಗರು ತೆಗೆದುಕೊಂಡಿದ್ದಾರೆ ಈ ಪ್ರಶಸ್ತಿ. ಆದರೇ ಕನ್ನಡಕ್ಕೆ, ಕನ್ನಡ ಭಾಷೆ ಕೃತಿಗೆ ಸಿಕ್ಕಿರುವ ಒಂದು ಪ್ರಶಸ್ತಿ ಇದಾಗಿದೆ ಎಂದು ಶ್ಲಾಘಿಸಿದರು. ಇದೊಂದು ಬಹಳ ದೊಡ್ಡ ಸಾಧನೆ. ಇದನ್ನ ಇಡೀ ದೇಶ ಸಂಭ್ರಮಿಸುತ್ತಿದೆ. ಹಾಸ ಜಿಲ್ಲೆಯಲ್ಲೂ ಸಂಭ್ರಮಿಸುತ್ತಿದ್ಧೇವೆ. ಭಾನುಮುಷ್ತಾಕ್ ನಮ್ಮಜೊತೆಇದ್ದರೂ ನಮ್ಮಒಡನಾಡಿಎಂಬುದು ಹೆಮ್ಮೆಯಿದೆ. ಅವರ ಬರುವಿಕೆಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಆ ಸಂಭ್ರಮದಕ್ಷಣಕ್ಕಾಗಿಕಾಯುತ್ತಿದ್ದೇವೆಎಂದು ಹೇಳಿದರು.
ಹಿರಿಯ ಸಾಹಿತಿರೂಪ ಹಾಸನ್ ಮಾತನಾಡಿ, ಇವತ್ತು ನಮ್ಮೆಲ್ಲರಿಗೂ ಹಾಸನದಜನರಿಗೆತುಂಬ ಸಂತೋಷದ ದಿನವಾಗಿದೆ. ಕಳೆದ ವರ್ಷಇದೆ ಸಂದರ್ಭದಲ್ಲಿಅತ್ಯAತ ನೋವು ಸಂಕಟದ ವೇಳೆ ಹಾದು ಹೋಗಿರುವುದು ಎಲ್ಲಾರಿಗೂ ನೆನಪು ಇದೆ. ಅಂದು ಹಾಸನ ಬೇಡವಾದಕಾರಣಕ್ಕೆ ಪ್ರಸಿದ್ಧಿ ಪಡೆದಿತ್ತು. ಆದರೇಇವತ್ತು ನಿಜವಾಗಿ ಹಾಸನದಘನತೆ ಏನು? ಅದರಗೌರವ ಏನು? ಅದು ಎಷ್ಟು ಸಾಧನೆಯನ್ನು ಮಾಡಿದೆ ಬಗ್ಗೆ ತಿಳಿಸಿಕೊಡುವಂತಹ ವೇಳೆಗೆ ನಾವು ಭಾನುಮುಷ್ತಾಕ್ ಮತ್ತು ದೀಪ ಬಸ್ತಿ ಅವರುಅಂತರಾಷ್ಟ್ರೀಯ  ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡು ನಮ್ಮೆಲ್ಲರಿಗೂ, ಕನ್ನಡಿಗರಿಗೂ ಹೆಮ್ಮೆಯನ್ನು ತಂದಿದ್ದಾರೆ ಎಂದರು. ಭಾನುಮುಷ್ತಾಕರು ಇಲ್ಲಿಗೆ ಬಂದ ನಂತರ ವಿಜೃಂಭಣೆಯಿಂದ ಆಚರಿಸುವ ಕೆಲಸ ಮಾಡೋಣ. ಈಗ ನಾವೆ ಫೇಸ್ ಬುಕ್, ಸೋಶಿಯಲ್ ಮಿಡಿಯದಲ್ಲಿ ಹಾಗೂ ವಾಟ್ಸಾಪ್ ನಲ್ಲಿ ಹಂಚಿಕೊಳ್ಳುತ್ತಿದ್ದೇವು. ಅದರಲ್ಲೂ ಮಹಿಳೆಯರು, ಲೇಖಕಿಯರು ಎನ್ನುವುದು ನನಗೆ ತುಂಭ ಸಂತೋಷಕೊಡುವ ವಿಷಯ. ಒಬ್ಬ ಮುಸ್ಲಿಂ ಹೆಣ್ಣು ಮಗಳು ಹೊರಗೆ ಬಂದುಇಷ್ಟೆಲ್ಲಾ ಸಾಧನೆ ಮಾಡುವುದು, ವಕೀಲೆ ವೃತ್ತಿಯಲ್ಲಿತೊಡಗುವಂತದು, ಸಾಮಾಜಿಕ ಹೋರಾಟದಲ್ಲಿ ಇರುವುದು ಎಲ್ಲಾವು ಅಪುರೂಪವಾದಂತಹ ಸಂದರ್ಭದಲ್ಲಿಇವತ್ತು ಭಾನುಮುಷ್ತಾಕ್‌ ಏರಿದಂತ ಎತ್ತರ ಎಲ್ಲಾ ಲೇಖಕಿಯರಿಗೂ ಸ್ಪೂರ್ತಿಯನ್ನುಕೊಡುವ ವಿಷಯಎಂದು ಶ್ಲಾಘನೆವ್ಯಕ್ತಪಡಿಸಿದರು. ಪುರುಷ ಪ್ರಧಾನ ಸಮಾಜಧಾರ್ಮಿಕ ಮತಾಂದತೆ ಹೊಂದಿರುವ ಸಮಾಜದಲ್ಲಿ ಕೂಡ ಇನ್ನು ಹೆಣ್ಣು ಮಕ್ಕಳನ್ನು ಕೀಳಾಗೆ ನೋಡುತ್ತಿದ್ದು, ಅವರ ಸಾಧನೆಯನ್ನುಕಡೆಗಣಿಸುವಂತಹ, ನಿರ್ಲಕ್ಷಿಸುವ ಈ ಸಂದರ್ಭದಲ್ಲಿ ಅತ್ಯಂತ ಎತ್ತರಕ್ಕೆ ಏರಿ ಸಾಭಿತುಪಡಿಸಿರುವುದಕ್ಕೆ ನಿಜವಾಗಿ ಭಾನುಮುಷ್ತಾಕ್‌ ಅವರನ್ನ ಅಭಿನಂಧಿಸಬೇಕು ಎಂದು ಹೇಳಿದರು. ಜೊತೆಗೆಅದನ್ನ ಅನುವಾಧಿಸಿದಂತಹ ದೀಪಬಸ್ತಿಯನ್ನು ಕೂಡ ನೆನಪಿಸಿಕೊಳ್ಳಲಾಗುವುದು. ಇನ್ನು ಹೆಚ್ಚಿನ ಸಾಧನೆಯನ್ನುಇವರು ಮಾಡಲಿ. ಈ ಸಾಧನೆಒಬ್ಬರದಲ್ಲ. ಇಡೀ ಹಾಸನ, ಕನ್ನಡಿಗರು ಭಾರತಕ್ಕೆ ಸಂದಂತಹ ಗೌರವಾಗಿದೆ ಎಂದು ತಿಳಿಸಿದರು.
ಇದೆ ವೇಳೆ ಜಿಲ್ಲಾಜನಪರ ಚಳುವಳಿಗಳ ಒಕ್ಕೂಟದ ಅಂತರಾಷ್ಟ್ರೀಯ  ಚಿತ್ರಕಲಾವಿದಕೆ.ಟಿ. ಶಿವಪ್ರಸಾದ್, ಪತ್ರಕರ್ತರಾದ ನಾಗರಾಜು ಹೆತ್ತೂರ್, ಮಂಜು ಬನವಾಸೆ, ಚಲಂ. ಎಂ.ಜಿ. ಪೃಥ್ವಿ, ವೈದ್ಯೆರಂಗಲಲಕ್ಷ್ಮೀ, ಸಿ. ಸುವರ್ಣ, ಶಾಡ್ರಕ್, ಕೆ.ಟಿ. ಜಯಶ್ರೀ, ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಆರ್.ಪಿ.ಐ. ಸತೀಶ್, ಕೃಷ್ಣದಾಸ್, ಚಿನ್ನಸ್ವಾಮಿ ಮಹೇಶ್‌ ಇತರರು ಉಪಸ್ಥಿತರಿದ್ದರು.