Bharat Jodo Nyaya Yatra – Peepal Media

ಇಂದಿನಿಂದ ಶುರುವಾಗಲಿದೆ 67 ದಿನಗಳ ಭಾರತ್ ಜೋಡೋ ನ್ಯಾಯ ಯಾತ್ರೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಇಂದು ಮಣಿಪುರದ ತೌಬಲ್ ಜಿಲ್ಲೆಯಿಂದ ಪ್ರಾರಂಭವಾಗಲಿದೆ. ಮಣಿಪುರದ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಯಾತ್ರೆ ಪ್ರಾರಂಭಿಸುವ ಸ್ಥಳದ ಬಗ್ಗೆ ನಿರಾಕರಣೆ ತೋರಿದ್ದರೂ ಈಗ ಖಾಸಗಿ ಜಾಗದಿಂದ ಯಾತ್ರೆ ಶುರು ಆಗುವ ಬಗ್ಗೆ ಕಾಂಗ್ರೆಸ್ ತಿಳಿಸಿದೆ.

ಈ ಮೊದಲು ರಾಜಧಾನಿ ಇಂಫಾಲ್ನಿಂದ ಪ್ರಾರಂಭವಾಗಬೇಕಿದ್ದ ಈ ಯಾತ್ರೆ ಇಂದು ಮಧ್ಯಾಹ್ನ 12 ಗಂಟೆಗೆ ಖೊಂಗ್ಜೋಮ್ ಯುದ್ಧ ಸ್ಮಾರಕದಿಂದ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ, ಮಣಿಪುರ ಸರ್ಕಾರ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ.

ಈ ಹಿಂದಿನ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಯಾತ್ರೆ ಸಂಪೂರ್ಣವಾಗಿ ಪಾದಯಾತ್ರೆಯೇ ಆಗಿತ್ತು. ಆದರೆ ರಾಹುಲ್ ಗಾಂಧಿ ಅವರು ಮಣಿಪುರದ ತೌಬಲ್ ಜಿಲ್ಲೆಯಿಂದ ಮುಂಬೈಗೆ 6,200 ಕಿಲೋಮೀಟರ್ ದೂರವನ್ನು 60-70 ಯಾತ್ರಿಗಳೊಂದಿಗೆ ಬಸ್ ಮೂಲಕ ಯಾತ್ರೆ ಮುಂದುವರೆಸುವ ಬಗ್ಗೆ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ತಿಳಿಸಿದ್ದಾರೆ. ಮಾರ್ಗಮಧ್ಯೆ ಬರುವ ದಟ್ಟಾರಣ್ಯ ಹಾಗೂ ಪಕ್ಷದ ಇತರೆ ಹಿರಿಯ ನಾಯಕರ ಆರೋಗ್ಯದ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಸ್ಥಳಗಳಲ್ಲಿ ಮಾತ್ರ ಪಾದಯಾತ್ರೆ ಮೂಲಕ ಯಾತ್ರೆ ಮುಂದುವರೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಚಾಲನೆ ನೀಡಲು ಇಂಫಾಲ್ನ ಹಪ್ಟಾ ಕಾಂಗ್ಜೆಬಂಗ್ ಸಾರ್ವಜನಿಕ ಮೈದಾನಕ್ಕೆ ಅವಕಾಶ ನೀಡುವಂತೆ ನಾವು ಜನವರಿ 2 ರಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪಿಸಿದ್ದೆವು. ಯಾತ್ರೆಯು ಇಂಫಾಲ್ ನಿಂದ ಪ್ರಾರಂಭವಾಗಿ ಮುಂಬೈನಲ್ಲಿ ಕೊನೆಗೊಳ್ಳಲಿದೆ ಎಂದು ನಾವು ಘೋಷಿಸಿದ್ದೇವೆ” ಎಂದು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಚಾಲನೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಚಾಲನೆ ನೀಡಲು ಸಜ್ಜಾಗಿದ್ದಾರೆ ಮತ್ತು ಪ್ರಾರಂಭದ ಸ್ಥಳವನ್ನು ಬದಲಾಯಿಸಲಾಗಿದ್ದರೂ, ಯಾತ್ರೆಯ ಮಾರ್ಗವು ಒಂದೇ ಆಗಿರುತ್ತದೆ ಎಂದು ಪಕ್ಷದ ನಾಯಕರು ದೃಢಪಡಿಸಿದರು.

ಜನವರಿ 14 ರಂದು ಮಣಿಪುರದಲ್ಲಿ ಪ್ರಾರಂಭವಾಗುವ ಈ ಯಾತ್ರೆ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದ್ದು, 67 ದಿನಗಳ ಅವಧಿಯಲ್ಲಿ ಒಟ್ಟು 6,713 ಕಿಲೋಮೀಟರ್ ದೂರವನ್ನು ಕ್ರಮಿಸಿದೆ. ಯೋಜಿತ ಮಾರ್ಗವು 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಹಾದುಹೋಗುವುದನ್ನು ಒಳಗೊಂಡಿದೆ.

“ಸುಳ್ಳುಗಳನ್ನು ಎದುರಿಸಿ, ಸರ್ಕಾರದ 10 ವರ್ಷಗಳ ವೈಫಲ್ಯವನ್ನು ಜನರ ಮುಂದಿಡಿ” – ಮಲ್ಲಿಕಾರ್ಜುನ ಖರ್ಗೆ
“ನಿರಂತರವಾಗಿ ಬಿಜೆಪಿ ಸರ್ಕಾರ ಹಬ್ಬಿಸುತ್ತಿರುವ ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಜನರ ಮುಂದೆ ತೆರೆದಿಡಲು ಸದಾ ಜಾಗೃತರಾಗಿರಿ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆ ಹಾಗೂ ಸಂಘಟನೆಗಳಿಗೆ ಕರೆ ನೀಡಿದ್ದಾರೆ.

ಲೋಕಸಭೆ ಚುನಾವಣೆಗೆ ಎಡೆಬಿಡದ ತಯಾರಿಯಲ್ಲಿರುವ ಕಾಂಗ್ರೆಸ್ ಪಕ್ಷ ಈಗ ಬಿಜೆಪಿ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡುವಂತೆ ಸಂಘಟನೆಗಳ ಮುಖ್ಯಸ್ಥರಿಗೆ ಕರೆ ನೀಡಿದರು. 10 ವರ್ಷಗಳಿಂದ ಸರ್ಕಾರ ನೀಡುತ್ತಿರುವ ಸುಳ್ಳಿನ ಜೊತೆಗೆ 10 ವರ್ಷಗಳ ಸರ್ಕಾರದ ವೈಫಲ್ಯಗಳ ಪಟ್ಟಿ ತೆರೆದಿಡಲು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸಂಘಟನೆಗಳೊಂದಿಗೆ ನಡೆಸಿದ ಸಭೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಕಿರಿಯ ಸಹೋದ್ಯೋಗಿಗಳಿಗೆ ಸಾಮಾಜಿಕ ಮಾಧ್ಯಮ ಹಾಗೂ ಜನರೊಂದಿಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು, ಸತ್ಯವನ್ನು ಹೇಳುವಾಗ ಸಭ್ಯತೆಯ ವರ್ತನೆ ಇರಬೇಕು ಎಂದು ಸಂಘಟನೆ ಮುಖ್ಯಸ್ಥರು ಕಾರ್ಯಕರ್ತರಿಗೆ ತಿಳಿ ಹೇಳಬೇಕು ಎಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ.

ಮುಂಬರುವ ಭಾನುವಾರ ಮಣಿಪುರದ ಇಂಫಾಲ್‌ನಿಂದ ಆರಂಭವಾಗಲಿರುವ ಲೋಕಸಭೆ ಚುನಾವಣೆ ಸಿದ್ಧತೆ ಮತ್ತು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ (BJNY) ಕುರಿತು ಪಕ್ಷದ ಮುಂಚೂಣಿ ಸಂಘಟನೆಗಳು, ಇಲಾಖೆಗಳು ಮತ್ತು ಕೋಶಗಳ ಮುಖ್ಯಸ್ಥರ ಸಭೆಯನ್ನು ಉದ್ದೇಶಿಸಿ ಖರ್ಗೆ ಮಾತನಾಡಿದರು.

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಹೆಚ್ಚಿಸಲು ಮತ್ತು ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಹೇಳಿದ ಖರ್ಗೆಯವರು, “ಜನರ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ, ರಾಜಕೀಯ ವಿರೋಧಿಗಳು ಹರಡುತ್ತಿರುವ ? ನಾವು ಎದುರಿಸಬೇಕಾಗಿದೆ … ನಮ್ಮ ಉದ್ದೇಶಗಳನ್ನು ತಿರುಚುವ ಅಥವಾ ಹಾಳುಗೆಡವುವ ಯಾವುದೇ ವಿಚಾರಕ್ಕೂ ಪ್ರತಿಕ್ರಿಯೆ ಮಾಡಬೇಡಿ,” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದು ರಾಷ್ಟ್ರ ಮಟ್ಟದ ನಾಯಕರಿಂದ ಹಿಡಿದು, ಬೂತ್ ಮಟ್ಟದ ಕಾರ್ಯಕರ್ತರಿಗೂ ಅನ್ವಯ ಎಂದು ಮಲ್ಲಿಕಾರ್ಜುನ ಖರ್ಗೆಯವರು ತಿಳಿಸಿದ್ದಾರೆ.

ಈ ನಡುವೆ ಕಾಂಗ್ರೆಸ್ ಪಕ್ಷ ಮತ್ತು I.N.D.I.A ಮೈತ್ರಿಕೂಟದ ಬಗ್ಗೆ ಆತ್ಮವಿಶ್ವಾಸದ ಭವಿಷ್ಯವನ್ನು ಬಣ್ಣಿಸಿದ ಅವರು, ರಾಜಕೀಯ ವಾತಾವರಣ ವಿಭಿನ್ನವಾಗಿದೆ ಮತ್ತು ವಿರೋಧ ಪಕ್ಷದ ಬಣದಲ್ಲಿನ ಒಗ್ಗಟ್ಟಿನಿಂದಾಗಿ ಎನ್‌ಡಿಎಯಲ್ಲಿ ಅಸಮಾಧಾನವಿದೆ ಎಂದು ಹೇಳಿದರು.

“ಕಳೆದ ಕೆಲವು ತಿಂಗಳುಗಳಲ್ಲಿ ನಾವೆಲ್ಲರೂ ತುಂಬಾ ಶ್ರಮಿಸಿದ್ದೇವೆ. ಪ್ರತಿಕೂಲ ವಾತಾವರಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಟ್ಟು 4.92 ಕೋಟಿ ಮತಗಳನ್ನು ಪಡೆದಿದೆ, ಆದರೆ ನಮಗೆ ನಿರೀಕ್ಷೆಯಂತೆ ಸ್ಥಾನಗಳು ಸಿಗಲಿಲ್ಲ…ಹಿಂತಿರುಗಿ ನೋಡಿದಾಗ ನಾವು ಈಗ ಎದುರು ನೋಡಬೇಕಾಗಿದೆ. ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ದೂರವಿಲ್ಲ ಎಂದು ಖರ್ಗೆಯವರು ಹೇಳಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಖರ್ಗೆಯವರು, “ನರೇಂದ್ರ ಮೋದಿ ಸಂಸತ್ತನ್ನು ಕೇವಲ ಚಪ್ಪಾಳೆ ಮತ್ತು ಶುಭಾಶಯಗಳ ವೇದಿಕೆಯನ್ನಾಗಿ ಮಾಡಿದ್ದಾರೆ ಮತ್ತು ಸಮಸ್ಯೆಗಳನ್ನು ಹೇಳಲು ಸಾರ್ವಜನಿಕರ ಬಳಿಗೆ ಹೋಗುವುದೊಂದೇ ಅವರಿಗೆ ಉಳಿದಿರುವ ಮಾರ್ಗವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಜನರ ಸಂಪರ್ಕದಲ್ಲಿದೆ. ಭಾರತ್ ಜೋಡೋ ಯಾತ್ರೆಯಿಂದ ಇಲ್ಲಿಯವರೆಗೆ ನಾವೆಲ್ಲರೂ ನೇರವಾಗಿ ಕಾರ್ಯಕರ್ತರಂತೆ ಜನರ ಸಂಪರ್ಕದಲ್ಲಿ ಇದ್ದೇವೆ.. ಇದು ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲೂ ಮುಂದುವರೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಹಾಗೆಯೇ ಪ್ರಸ್ತುತ ಭಾರತದ ಅತಿ ದೊಡ್ಡ ಸಮಸ್ಯೆಗಳಾದ ಬೆಲೆಯೇರಿಕೆ ಮತ್ತು ನಿರುದ್ಯೋಗದ ಬಗ್ಗೆ ವಿಚಾರವನ್ನು ಮರೆಮಾಚಲು ಬಿಜೆಪಿ ಪಕ್ಷ ಭಾವನಾತ್ಮಕ ಹಾಗೂ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟು ಜನರ ದಾರಿ ತಪ್ಪಿಸಲು ನಿರಂತರವಾಗಿ ಮುಂದಿದೆ. ಆದರೆ ಭಾರತ್ ಜೋಡೋ ನ್ಯಾಯ ಯಾತ್ರೆ ಇದೇ ವಿಚಾರವನ್ನು ಮುಂದಿಟ್ಟು ಜನರ ಗಮನ ಸೆಳೆಯಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೇಶ ಕಳೆದ 10 ವರ್ಷಗಳಲ್ಲಿ ಸುಮಾರು 45 ವರ್ಷ ಹಿಂದಿನ ದಾರುಣ ಸ್ಥಿತಿ ತಲುಪಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಇನ್ನೂ ಹೆಚ್ಚಾಗಿದೆ. ಭಾರತದಲ್ಲಿ ಕಳೆದ 10 ವರ್ಷಗಳಿಂದ ಆದಂತಹ ಅನ್ಯಾಯವನ್ನು ಮರೆಮಾಚಲು ಬಿಡಬಾರದು. ಜಾತಿಗಣತಿಯಂತಹ ವಿಚಾರ ಹೆಚ್ಚು ಮುನ್ನೆಲೆಗೆ ಬರಬೇಕು ಎಂದು ಖರ್ಗೆಯವರು ಪ್ರಸ್ತಾಪಿಸಿದ್ದಾರೆ.

ಭಾರತ್ ಜೋಡೋ ನ್ಯಾಯ ಯಾತ್ರೆ ; ಅನುಮತಿ ನಿರಾಕರಿಸಿದ ಮಣಿಪುರ ಸರ್ಕಾರ
ಇಂಫಾಲ್ ಪೂರ್ವ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಆರಂಭಿಸಲು ರಾಹುಲ್ ಗಾಂಧಿಗೆ ಅನುಮತಿ ನೀಡಲು ಮಣಿಪುರ ಸರ್ಕಾರ ನಿರಾಕರಿಸಿದೆ. ಈ ಬಗ್ಗೆ ಮಣಿಪುರ ಕಾಂಗ್ರೆಸ್ ಪಕ್ಷ ಇದು ಜನರ ಹಕ್ಕುಗಳ ಉಲ್ಲಂಘನೆ ಹಾಗೂ ದುರದೃಷ್ಟಕರ ಎಂದು ಬಣ್ಣಿಸಿದೆ.

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಜನವರಿ 14 ರಿಂದ ಮಣಿಪುರ ರಾಜ್ಯದ ಇಂಪಾಲ್ ಪೂರ್ವ ಜಿಲ್ಲೆಯಾದ ಹಟ್ಟಾ ಕಾಂಗ್ಜೆಬುಂಗ್‌ನಿಂದ ಪ್ರಾರಂಭವಾಗಬೇಕಿತ್ತು. ಆದರೆ ನಿರಂತರವಾಗಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಂದೆ ಆಗಬಹುದಾದ ಅನಾಹುತಗಳ ನೆಪದಿಂದ ಮಣಿಪುರ ಸರ್ಕಾರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ನಿರಾಕರಿಸಿದೆ

“ನಾವು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನಲ್ಲಿ ರ್ಯಾಲಿಯನ್ನು ಶುರು ಮಾಡಲು ನಿರ್ಧರಿಸಿರುವ ‘ಭಾರತ್ ಜೋರೋ ನ್ಯಾಯ್ ಯಾತ್ರೆ’ ಸ್ಥಳಕ್ಕೆ ಅನುಮತಿ ಕೋರಿದ್ದೇವೆ. ಆದರೆ, ಮುಖ್ಯಮಂತ್ರಿಗಳು ಅದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಪರ್ಯಾಯ ಸ್ಥಳವನ್ನು ನಾವು ಹುಡುಕಲಿದ್ದೇವ’’ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶಾಮ್ ಮೇಘಚಂದ್ರ ಹೇಳಿದರು.

ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಎಐಸಿಸಿ ನಾಯಕರು ಇದರ ನೇತೃತ್ವ ವಹಿಸಲಿದ್ದಾರೆ. ಯಾತ್ರೆಯು ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದ್ದು, 66 ದಿನಗಳಲ್ಲಿ 15 ರಾಜ್ಯಗಳಲ್ಲಿ 6700 ಕಿ.ಮೀ. ಈ ಯಾತ್ರೆಯು 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಸ್ಥಾನಗಳನ್ನು ಒಳಗೊಂಡಿದೆ.

ಮರುನಾಮಕರಣಗೊಂಡ ಕಾಂಗ್ರೆಸ್ ನ “ಭಾರತ್ ನ್ಯಾಯ ಯಾತ್ರೆ”; ಹೊಸ ಹೆಸರೇನು ಗೊತ್ತಾ?
ಜನವರಿ 14 ರಿಂದ ಈಶಾನ್ಯ ಭಾರತದಿಂದ ಪಶ್ಚಿಮ ತೀರಕ್ಕೆ ಪ್ರಾರಂಭವಾಗಲಿರುವ ತನ್ನ “ಭಾರತ್ ನ್ಯಾಯ ಯಾತ್ರೆ” ಹೆಸರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಗುರುವಾರ ಮರುನಾಮಕರಣ ಮಾಡಿದೆ. ಅದರಂತೆ ಈ ಜಾಥಾವನ್ನು ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಎಂದು ಕರೆಯಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಪಿಸಿಸಿ ಮುಖ್ಯಸ್ಥರು ಮತ್ತು ಸಿಎಲ್‌ಪಿ ನಾಯಕರ ಸಭೆಯಲ್ಲಿ, ‘ಭಾರತ್ ಜೋಡೋ ಯಾತ್ರೆ’ ಜನರ ಮನಸ್ಸಿನಲ್ಲಿ ಹುದುಗಿರುವ ಬ್ರ್ಯಾಂಡ್ ಆಗಿದೆ ಎಂದು ಭಾವಿಸಲಾಗಿದೆ. ನಾವು ಅದನ್ನು ಕಳೆದುಕೊಳ್ಳಬಾರದು” ಎಂದು ಜೈರಾಮ್ ರಮೇಶ್ ಹೇಳಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಡೆಯುವ ಭಾರತ್ ಜೋಡೋ ನ್ಯಾಯ ಯಾತ್ರೆ ಜನವರಿ 14 ರಂದು ಮಣಿಪುರದಿಂದ ಪ್ರಾರಂಭವಾಗಲಿದ್ದು, ಮಣಿಪುರದ ಜನಾಂಗೀಯ ಹಿಂಸಾಚಾರದ ನಂತರ ಇನ್ನೂ ಸಹಜ ಸ್ಥಿತಿಗೆ ತಲುಪಲು ಹೆಣಗಾಡುತ್ತಿರುವ ಈಶಾನ್ಯ ರಾಜ್ಯಕ್ಕೆ ಈ ಯಾತ್ರೆಯನ್ನು ಸಮರ್ಪಿಸಲಿದೆ ಎಂದು ತಿಳಿಸಿದ್ದಾರೆ.

66 ದಿನಗಳ 6,700-ಕಿಮೀ ಪೂರೈಸುವ ಈ ಮೆರವಣಿಗೆ ಮಹಾತ್ಮ ಗಾಂಧಿಯವರ ಜನ್ಮಸ್ಥಳವಾದ ಗುಜರಾತ್‌ನ ಪೋರಬಂದರ್‌ನಲ್ಲಿ ಮುಕ್ತಾಯಗೊಳ್ಳುವ ಮೊದಲು 15 ರಾಜ್ಯಗಳು ಮತ್ತು 100 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಭಾರತ್ ಜೋಡೋ ನ್ಯಾಯ್ ಯಾತ್ರೆಯು ಇಂಫಾಲ್‌ನಿಂದ ಮಧ್ಯಾಹ್ನ 12.30 ಕ್ಕೆ ಪ್ರಾರಂಭವಾಗಲಿದೆ. ಇದು ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಅರುಣಾಂಚಲ್ ಪ್ರದೇಶ, ಮೇಘಾಲಯ ಮೂಲಕ ಹಾದುಹೋಗುತ್ತದೆ ಮತ್ತು ಮಧ್ಯ ಭಾರತವನ್ನು ತಲುಪುವ ಮೊದಲು ಬಂಗಾಳವನ್ನು ತಲುಪುತ್ತದೆ.

ಕಳೆದ ಬಾರಿಯಂತೆ ಯಾತ್ರೆಯು ಸಂಪೂರ್ಣವಾಗಿ ಕಾಲ್ನಡಿಗೆಯಲ್ಲಿ ಇರುವುದಿಲ್ಲ. ಪ್ರಯಾಣದ ಭಾಗಗಳಿಗೆ, ಪಕ್ಷವು ಬಸ್‌ಗಳನ್ನು ಬಳಸುತ್ತದೆ ಎಂದು ಜೈರಾಮ್ ರಮೇಶ್ ಇಂದು ಮಧ್ಯಾಹ್ನ ಸುದ್ದಿಗಾರರಿಗೆ ತಿಳಿಸಿದರು.