Bharatiya Janata Party – Peepal Media

ವಕ್ಫ್ ಮಸೂದೆ ವಂಚನೆ: ಮುಸ್ಲಿಂ ಕಲ್ಯಾಣದ ಕಾಳಜಿಯ ಹಿಂದಿನ ಮೋದಿ ಸರ್ಕಾರದ ಉದ್ದೇಶ ಏನು?
ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನನ್ನು ಹೊಂದದ ಪಕ್ಷವೊಂದು ಆ ಸಮುದಾಯದ ಕಲ್ಯಾಣದ ಬಗ್ಗೆ ಉಪದೇಶ ನೀಡುವುದು ವಿಚಿತ್ರವಾಗಿದೆ. ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅಥವಾ ಚಿರಾಗ್ ಪಾಸ್ವಾನ್ ಅವರಂತಹ ಮಿತ್ರಪಕ್ಷಗಳಿಂದ ಇನ್ನೂ ವಿರೋಧ ಪಕ್ಷಗಳು ಏನನ್ನಾದರೂ ನಿರೀಕ್ಷೆ ಮಾಡುತ್ತಿರುವುದು ಅಷ್ಟೇ ವಿಚಿತ್ರವಾಗಿವೆ
- ಲೇಖನ: ಸಂಜಯ್ ಕೆ. ಝಾ, ರಾಜಕೀಯ ವಿಶ್ಲೇಷಕರು

ಎಪ್ರಿಲ್ 2 ರಂದು ಲೋಕಸಭೆಯಲ್ಲಿ ದೇಶ ಕಂಡುಕೇಳರಿಯದ ತರ್ಕಹೀನ ಮತ್ತು ವಂಚನೆಯ ಜಾತ್ರೆಯೇ ನಡೆಯಿತು. ನರೇಂದ್ರ ಮೋದಿ ಸರ್ಕಾರವು ಮುಸ್ಲಿಂ ಸಮುದಾಯದ ಉದ್ಧಾರಕ್ಕಾಗಿ ವಕ್ಫ್ ಮಸೂದೆಯನ್ನು ತಂದಿದ್ದೇವೆ ಎಂದು ಹೇಳಿಕೊಂಡು ಸ್ವತಂತ್ರ ಭಾರತ ಕಂಡ ಅತ್ಯಂತ ನೀಚ ರಾಜಕೀಯ ವಂಚನೆಯನ್ನು ಮಾಡಿದೆ. ತರ್ಕಹೀನ ಮತ್ತು ವಂಚನೆಯು ರಾಷ್ಟ್ರದ ಸಾಮೂಹಿಕ ವಿವೇಕವನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ವಕ್ಫ್ ಮಸೂದೆಯ ಉದ್ದೇಶದ ಬಗ್ಗೆ ಬಹಳಷ್ಟು ಬರೆಯಲಾಗಿದೆ, ಮಾತನಾಡಲಾಗಿದೆ. ಅವಿದ್ಯಾವಂತರಿಗೆ ಕೂಡ ಇದರ ನಿಜವಾದ ಉದ್ದೇಶ ಏನೆಂದು ತಿಳಿದಿದೆ. ಅದರ ಬಗ್ಗೆ ಆಳವಾಗಿ ಹೋಗುವುದು ಬೇಡ. ಆದರೆ  ಕಳೆದ ಏಳು ದಶಕಗಳಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದದ್ದನ್ನು ಮೋದಿ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕನಸು ಕಂಡಿದೆ – ಮುಸ್ಲಿಮರ ಆಸ್ತಿಗಳನ್ನು ಸಮುದಾಯದ ಕಲ್ಯಾಣಕ್ಕಾಗಿ ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು ಎಂಬ ಅಮೃತ ಕಾಲದ ಅದ್ಭುತ ಹೇಳಿಕೆಯನ್ನು ಗಂಭೀರವಾಗಿ ಪರಿಶೀಲಿಸಬೇಕಾದ ಅಗತ್ಯವಿದೆ. ಬಡ ಮುಸ್ಲಿಮರ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ, ಯುವಕರನ್ನು ಕೌಶಲ್ಯಪೂರ್ಣರನ್ನಾಗಿಸಲು, ಮಹಿಳೆಯರ ಸಬಲೀಕರಣಕ್ಕಾಗಿ ಈ ಸಂಪನ್ಮೂಲಗಳನ್ನು ಏಕೆ ಬಳಸಿಕೊಳ್ಳಬಾರದು – ಎಂಬಂತ ಮಂತ್ರಿಗಳ ಬಾಯಿಂದ ಉದುರುತ್ತಿರುವ ಮಾತುಗಳು ದೇಶದ ಗಾಯಗೊಂಡ ಆತ್ಮದ ಮೇಲೆ ಹಚ್ಚುವ ಸಾಂತ್ವನಕಾರಿ ಮುಲಾಮಿನಂತೆ ಕಾಣುತ್ತಿದೆ.

ದೇಶ ಕೃತಜ್ಞತೆಯನ್ನು ತೋರಬೇಕಾದುದು ತಾನೇ ದೇವರೆಂಬ ಭ್ರಮೆಯಲ್ಲಿರುವ ಉದಾರ ಮನಸ್ಸಿನ ಅಮಿತ್ ಶಾಗೆ, ಅವರು ಸುರಿಸುತ್ತಿರುವ ಕರುಣೆ ನಿಸ್ಸಂದೇಹವಾಗಿ ಅವರ ಮಾರ್ಗದರ್ಶಕರ ದಯೆಯನ್ನೂ ಮೀರಿಸಿದೆ. ಗುಜರಾತ್‌ನಲ್ಲಿ ಕೋಮು ಸೌಹಾರ್ದತೆಯ ಸುಟ್ಟು ಬೂದಿಯಾದಾಗ, ಅದರ ಚಿತಾಭಸ್ಮದಿಂದ ಹುಟ್ಟಿದ ದ್ವಂದ್ವ ನೀತಿಯನ್ನು ಮರೆತುಬಿಡೋಣ. ಕೇವಲ ತಿಂಗಳುಗಳ ಹಿಂದೆ – ಬೇರೆ ಯಾವುದೇ ಸರ್ಕಾರ ಬಂದರೂ ಜನರ ಆಸ್ತಿ ಮತ್ತು ಆಭರಣಗಳನ್ನು ಕಸಿದುಕೊಂಡು ನುಸುಳುಕೋರರ ಮತ್ತು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸುವವರಿಗೆ ಕೊಡುತ್ತದೆ- ಎಂದು ಮೋದಿ ಹೇಳಿದ್ದನ್ನು ಮರೆತುಬಿಡೋಣ. ಗೂಂಡಾಗಳು ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಮಾಡಿದಾಗ, ಅವರ ಪುಂಡರು ಮುಸ್ಲಿಮರನ್ನು ದೇಶದ್ರೋಹಿಗಳೆಂದು ಬಣ್ಣಿಸುವ ವಿಷಕಾರಿ ಘೋಷಣೆಗಳನ್ನು ಕೂಗಿದಾಗ, ಮುಗ್ಧ ಜನರನ್ನು ಬೀದಿಗಳಲ್ಲಿ ಹೊಡೆದು ಸಾಯಿಸಿದಾಗ ವಾಚಾಳಿ ಗೃಹ ಸಚಿವರು ಒಂದು ಮಾತನ್ನೂ ಹೇಳುವುದಿಲ್ಲ ಎಂಬುದನ್ನು ಮರೆತುಬಿಡೋಣ. ರಾಜಕೀಯ ಸ್ಪರ್ಧೆಯನ್ನು 80 vs 20 ಯುದ್ಧ ಎಂದು ವ್ಯಾಖ್ಯಾನಿಸಿದಾಗ ಪ್ರಧಾನಿಯವರ ಮೌನವನ್ನು ಮರೆತುಬಿಡೋಣ.

ಈ ಸುಳ್ಳನ್ನು ಮಾರಾಟ ಮಾಡುವ ಸರ್ಕಾರದ ಧೈರ್ಯ ದಿಗ್ಭ್ರಮೆಗೊಳಿಸುವಂತಿದೆ. ಇಡೀ ದೇಶ ಒಂದು ಗಳಿಗೆ ಇವರ ರಾಜಕೀಯದ ನಿಲುವನ್ನು ಮರೆತುಬಿಡುತ್ತದೆ ಎಂಬಂತೆ, ಅವರ ಧರ್ಮಾಂಧ ಹಿಂಬಾಲಕರು ಸರ್ಜರಿ ಮುಗಿಯುವ ವರೆಗೆ ಸುಮ್ಮನಿರುತ್ತಾರೆ ಎಂಬಂತೆ, ದೇಶದ ರಾಜಕೀಯ ವ್ಯವಸ್ಥೆಗೆ ಲೋಕಲ್‌ ಅನಸ್ತೇಶಿಯಾ ಕೊಟ್ಟು ಈ ಕೆಲಸವನ್ನು ಮಾಡಬಹುದು ಎಂದು ಅವರು ಅಂದುಕೊಂಡಿದ್ದಾರೆ. ತ್ರಿವಳಿ ತಲಾಖ್ ಅನ್ನು ತೆಗೆದುಹಾಕುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನೆರವಾಗಿದ್ದೇವೆ ಎಂಬ ಅಸಹಜ ಪ್ರಚಾರವನ್ನು ಸೃಷ್ಟಿಸಿದಾಗ ಇದು ನಡೆಯಿತು. ಬಡ ಮುಸ್ಲಿಂ ಮಹಿಳೆಯ ಪತಿ ಅಥವಾ ಅವಳ ಸಹೋದರನನ್ನು ಬೀದಿಯಲ್ಲಿ ಕಿರುಕುಳಕ್ಕೊಳಗಾದಾಗ ಅಥವಾ ಗಲ್ಲಿಗೇರಿಸಿದಾಗ ಅವಳ ಮೇಲೆ ಅದು ಪರಿಣಾಮ ಬೀರುವುದಿಲ್ಲವೇ? ತ್ರಿವಳಿ ತಲಾಖ್ ರದ್ದತಿಯಿಂದ ಪ್ರಯೋಜನ ಪಡೆದ ಮುಸ್ಲಿಂ ಮಹಿಳೆಗೆ ಆ ಪರಕೀಯತೆಯ ಭಾವನೆ, ಅಸಮಾನತೆಯ ನೋವು, ದೇಶದ್ರೋಹಿ ಎಂದು ಹಣೆಪಟ್ಟಿ ಹೊರುವ ಭಯ ಇರುವುದಿಲ್ಲವೇ?

ಈ ಸರ್ಕಾರದ ಈ ಪರೋಪಕಾರದ ಮನಸ್ಸು ಸ್ವಿಚ್-ಆನ್ ಸ್ವಿಚ್-ಆಫ್ ಮೋಡ್‌ನಲ್ಲಿ ಕೆಲಸ ಮಾಡುತ್ತದೆ. ಸಮಾನತೆ ಮತ್ತು ನ್ಯಾಯವು ಹಣದ ನೆರವಿಗೆ ಮಾತ್ರ ಸೀಮಿತವಾಗಿದೆ. ಮುಸ್ಲಿಮರು ಮಾತ್ರ ಏಕೆ ನಿರಂತರವಾಗಿ ರಾಷ್ಟ್ರಕ್ಕೆ ತಮ್ಮ ನಿಷ್ಠೆಯನ್ನು ಸಾಬೀತುಪಡಿಸುತ್ತಲೇ ಇರಬೇಕು? ಅವರ ಧಾರ್ಮಿಕ ಚಟುವಟಿಕೆಗಳ ಮೇಲೆ ವಿಶೇಷ ನಿರ್ಬಂಧಗಳು ಏಕೆ? ಕನ್ವರ್ ಯಾತ್ರೆಯ ಸಮಯದಲ್ಲಿ ಬೀದಿ ವ್ಯಾಪಾರಿಗಳ ಧರ್ಮವನ್ನು ಗುರುತಿಸಲು ವಿಶೇಷ ಕ್ರಮಗಳನ್ನು ಏಕೆ ತೆಗೆದುಕೊಳ್ಳಬೇಕು? ಈದ್‌ನಲ್ಲಿ ಭಕ್ತರಿಗೆ ಅನುಕೂಲ ಮಾಡಿಕೊಡಲು ಯಾವ ವಿಶೇಷ ಕ್ರಮಗಳನ್ನು ಘೋಷಿಸಲಾಗಿದೆ? ನವರಾತ್ರಿಗಳು ಮತ್ತು ಇತರ ಹಬ್ಬಗಳ ಸಮಯದಲ್ಲಿ ದಿನಗಳವರೆಗೆ ಮಾಂಸದ ಅಂಗಡಿಗಳನ್ನು ಮುಚ್ಚುವ ಮೂಲಕ ಅವರ ವ್ಯವಹಾರಗಳನ್ನು ಏಕೆ ಗುರಿಯಾಗಿಸಿಕೊಳ್ಳಲಾಗುತ್ತದೆ? ಇತರ ಧರ್ಮಗಳ ಭಕ್ತರ ಮೇಲೆ ಯಾವ ನಿರ್ಬಂಧಗಳನ್ನು ವಿಧಿಸಲಾಗಿದೆ? ಆಕ್ಷೇಪಣೆಗಳು ಅಂತ್ಯವಿಲ್ಲ – ಅಜಾನ್‌ನಿಂದ ಹಿಜಾಬ್‌ವರೆಗೆ, ಮದರಸಾಗಳಿಂದ ಮಸೀದಿಗಳವರೆಗೆ, ಅವರನ್ನು ಎರಡನೇ ದರ್ಜೆಯ ನಾಗರಿಕರ ಸ್ಥಾನಮಾನಕ್ಕೆ ತಳ್ಳಲು ಸ್ಪಷ್ಟ ತಂತ್ರವನ್ನು ಹೆಣೆಯಲಾಗಿದೆ.

ನೀಚ ಉದ್ದೇಶಗಳನ್ನು ಹೆಚ್ಚಾಗಿ ಉದಾತ್ತ ಆಡಂಬರಗಳಿಂದ ಮರೆಮಾಚಲಾಗುತ್ತದೆ. ನಾಜಿ ಫಿಲಾಸಫಿಯಷ್ಟು ನೈತಿಕತೆ ಮತ್ತು ಆದರ್ಶವಾದಕ್ಕೆ ಯಾವುದೇ ರಾಜಕೀಯವೂ ಹೆಚ್ಚಿನ ಒತ್ತು ನೀಡಿಲ್ಲ. ಆದರೆ ಅಡಾಲ್ಫ್ ಹಿಟ್ಲರ್ ಅಂಚಿನಲ್ಲಿರುವ ಸಮುದಾಯದ ಮೇಲೆ ಹೇಗೆ ಅಮಾನವೀಯ ನಿರ್ಬಂಧಗಳನ್ನು ವಿಧಿಸಬೇಕು ಎಂಬುದನ್ನು ಜಗತ್ತಿಗೇ ತೋರಿಸಿದನು. ಅವನು ಯಹೂದಿಗಳ ವಿರುದ್ಧ ಸಣ್ಣಪುಟ್ಟ ತಾರತಮ್ಯದ ಕೃತ್ಯಗಳೊಂದಿಗೆ ಪ್ರಾರಂಭಿಸಿ, ನಿಧಾನವಾಗಿ ಅವರ ಪ್ರಯಾಣ ಮತ್ತು ವ್ಯವಹಾರಗಳ ಮೇಲೆ ನಿರ್ಬಂಧಗಳನ್ನು ಹೇರುವವರೆಗೆ ಮುಂದುವರೆದನು, ನಂತರ ಮಾನವಕುಲ ಕಂಡ ಕೇಳರಿಯದ ಅತ್ಯಂತ ಕ್ರೂರ ನರಮೇಧವನ್ನು ಆರಂಭಿಸಿದನು. “ಬುದ್ಧಿಶಕ್ತಿ ಮತ್ತು ವಿವೇಚನೆ” ತನ್ನ ಭಕ್ತರ ದಾರಿ ತಪ್ಪಿಸಬಹುದು ಎಂದು ಹಿಟ್ಲರ್ ಅವರಿಗೆ ತಮ್ಮ ಇನ್‌ಸ್ಟಿಂಕ್ಟ್‌ಗಳನ್ನು (ಪ್ರಚೋದನೆಗಳಿಗೆ ಹುಟ್ಟುವ ಪ್ರತಿಕ್ರಿಯೆಗಳನ್ನು) ಮಾತ್ರ ನಂಬುವಂತೆ ಹೇಳಿ ಅವರ ಮನವೊಲಿಸುತ್ತಿದ್ದನು. ತನ್ನ ನಿರ್ಧಾರಗಳನ್ನು ಯಾರೂ ಪ್ರಶ್ನಿಸದ ವಾತಾವರಣವನ್ನು ಅವನು ಸೃಷ್ಟಿಸಿದನು.

ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಿಜೆಪಿಗೆ ಏನಾದರೂ ಪ್ರಶ್ನೆಗಳನ್ನು ಕೇಳುತ್ತವೆಯೇ?- ನಿಮ್ಮ ಕಾರ್ಯಸೂಚಿ ಏನು? ನೀವು ಮುಸ್ಲಿಮರ ಉದ್ದಾರ ಮಾಡುತ್ತೀರಾ, ಸಮಾನತೆ ಮತ್ತು ನ್ಯಾಯದ ಸಾಂವಿಧಾನಿಕ ಯೋಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಬಯಸುತ್ತೀರಾ, ನೀವು ಒಳ್ಳೆಯ ದೇಶಕ್ಕಾಗಿ ಒಡೆದು ಆಳುವ ರಾಜಕೀಯವನ್ನು ಬಿಡಲು ಬಯಸುತ್ತೀರಾ? ಬಣ್ಣ ಬಣ್ಣದ ಮಾತುಗಳು ಮತ್ತು ಒರಟಾದ ಅವಕಾಶವಾದವು ಮೋಸಗಾರರನ್ನು ಮೂರ್ಖರನ್ನಾಗಿ ಮಾಡಬಹುದು, ಆದರೆ ರಾಷ್ಟ್ರವನ್ನು ದುರ್ಬಲಗೊಳಿಸುತ್ತದೆ. ಬಿಜೆಪಿ ಮೊದಲು ಮುಸ್ಲಿಂ ಯುವಕರನ್ನು ದೇಶದ್ರೋಹಿಗಳೆಂದು ಕರೆಯುವ ಮೂಲಕ ಅವರನ್ನು ಪ್ರತ್ಯೇಕಿಸಲು ಬಯಸುತ್ತದೆಯೇ ಅಥವಾ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಶಿಕ್ಷಣ ಮತ್ತು ಕೌಶಲ್ಯವನ್ನು ನೀಡಲು ಬಯಸುತ್ತದೆಯೇ ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು. ವಕ್ಫ್ ಚರ್ಚೆಯ ಸಮಯದಲ್ಲಿ ಸಂಸತ್ತಿನಲ್ಲಿ ವ್ಯಕ್ತಪಡಿಸಿದ ಭಾವನೆಗಳು ನಿಜವಾದದ್ದಾಗಿದ್ದರೆ, ಅದು ಮಂತ್ರಿಗಳ ಭಾಷಣಗಳು, ಅವರ ಬೆಂಬಲಿಗರ ನಡವಳಿಕೆ ಮತ್ತು ಅವರ ಹಿಂದೆ ಮುಂದೆ ಓಡುವ ಮಾಧ್ಯಮಗಳಲ್ಲಿ ಪ್ರತಿಫಲಿಸಬೇಕು. ವಂಚನೆಯ ರಾಜಕೀಯವು ಬೆತ್ತಲೆಯಾಗಿದೆ; ಎಲ್ಲರೂ ಎಲ್ಲವನ್ನೂ ನೋಡುತ್ತಿದ್ದಾರೆ. ಕ್ಷಣಿಕ ಸದಾಚಾರದ ಅರಿವಳಿಕೆಯಡಿಯಲ್ಲಿ ಇರಿಸಲ್ಪಟ್ಟ ರಾಷ್ಟ್ರವು ತನ್ನ ಕಣ್ಣ ಮುಂದೆ ಏನಾಗುತ್ತಿದೆ ಎಂಬುದನ್ನು ನೋಡಲು ಸಾಧ್ಯವಿಲ್ಲ ಎಂಬ ಊಹೆಯು ಮೂರ್ಖತನವಾಗಿದೆ. ಜಗತ್ತಿಗೆ ಸತ್ಯ ತಿಳಿದಿದೆ ಮತ್ತು ಅದು ಕುತರ್ಕ ಹಾಗೂ ಮೊಂಡುವಾದಗಳನ್ನು ಮೀರಿ ಸತ್ಯ ಎತ್ತರದಲ್ಲಿ ನಿಂತಿದೆ.

ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸದಸ್ಯನನ್ನು ಹೊಂದದ ಪಕ್ಷವೊಂದು ಆ ಸಮುದಾಯದ ಕಲ್ಯಾಣದ ಬಗ್ಗೆ ಉಪದೇಶ ನೀಡುವುದು ವಿಚಿತ್ರವಾಗಿದೆ. ಆದರೆ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಅಥವಾ ಚಿರಾಗ್ ಪಾಸ್ವಾನ್ ಅವರಂತಹ ಮಿತ್ರಪಕ್ಷಗಳಿಂದ ಇನ್ನೂ ವಿರೋಧ ಪಕ್ಷಗಳು ಏನನ್ನಾದರೂ ನಿರೀಕ್ಷೆ ಮಾಡುತ್ತಿರುವುದು ಅಷ್ಟೇ ವಿಚಿತ್ರವಾಗಿವೆ. ಅವರು ಬಿಜೆಪಿಯ ಹಳೆಯ ಮತ್ತು ವಿಶ್ವಾಸಾರ್ಹ ಮಿತ್ರರು. ಅವರಿಗಿರುವ ಸೈದ್ಧಾಂತಿಕ ಹಿಂಜರಿಕೆಗಳು ಅವರನ್ನು ಬಿಜೆಪಿಯಿಂದ ದೂರ ಇರಿಸುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನ.

ನಿತೀಶ್ ಕುಮಾರ್ ಅವರ ರಾಜಕೀಯವು ಬಿಜೆಪಿಯ ಮಡಿಲಲ್ಲಿ ಬೆಳೆದ ಕೂಸು. ಅವರ ಸಾಂದರ್ಭಿಕ ದ್ರೋಹಗಳು ಸೈದ್ಧಾಂತಿಕವಾಗಿರದೆ, ಯುದ್ಧತಂತ್ರದ್ದಾಗಿದ್ದವು. ಅದಕ್ಕೆ ರಾಷ್ಟ್ರೀಯ ಕಾಳಜಿ ಇಲ್ಲ, ವೈಯಕ್ತಿಕ ಮಹತ್ವಾಕಾಂಕ್ಷೆಗಳೇ ಮುಖ್ಯವಾಗಿದ್ದವು. ನಾಯ್ಡು ಕೂಡ ಸೈದ್ಧಾಂತಿಕ ಬದ್ಧತೆಯ ರಾಜಕೀಯವನ್ನು ಮಾಡಿಲ್ಲ. ಅದು ಅದು ಅವರಿಂದ ತುಂಬಾ ದೂರದಲ್ಲಿದೆ. ಅವರ ರಾಜಕೀಯದ ಮೂಲತತ್ವ ಅಧಿಕಾರ ಮತ್ತು ಸ್ವಾರ್ಥ ಅಷ್ಟೇ. ಸಂವಿಧಾನವನ್ನು ಸಮಾಧಿ ಮಾಡಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿದರೂ ಈ ಇಬ್ಬರೂ ಬಿಜೆಪಿಯೊಂದಿಗೆ ಇರುತ್ತಾರೆ. ಇವರ ಸ್ವಂತ ರಾಜಕೀಯ ಹಿತಾಸಕ್ತಿಗಳು ಅಪಾಯದಲ್ಲಿದ್ದರೆ ಪ್ರಾಯೋಗಿಕ ರಾಜಕೀಯದ ಒತ್ತಡದಲ್ಲಿ ಅವರು ಬಿಜೆಪಿಯೊಂದಿಗೆ ಇನ್ನೂ ತೀವ್ರವಾದ ಸಂಬಂಧವನ್ನು ಬೆಳೆಸುತ್ತಾರೆ. ಕಾಂಗ್ರೆಸ್ ಅಥವಾ ಇತರ ಜಾತ್ಯತೀತ ಪಕ್ಷಗಳು ಇವರ ಸಹಾಯದಿಂದ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಬಯಸುವುದು ಜಾತ್ಯತೀತತೆಯ ಅಣಕವಾಗಿದೆ. ಈ ವರ್ತನೆ ಅವರ ದೌರ್ಬಲ್ಯಗಳು ಮತ್ತು ಅಸಹಾಯಕತೆಯನ್ನು ಬಹಿರಂಗಪಡಿಸುತ್ತದೆ.

ಇನ್ನೂ ಕೆಟ್ಟದ್ದೇನೆಂದರೆ, ಕೆಲವು ವಿರೋಧ ಪಕ್ಷದ ನಾಯಕರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮೋದಿಯನ್ನು ಟೀಕಿಸುತ್ತದೆ ಎಂದು ಕನಸು ಕಾಣುತ್ತಿರುವುದು. ಇಲ್ಲ, ಎಂದಿಗೂ ಇದು ಸಾಧ್ಯ ಇಲ್ಲ. ಆರ್‌ಎಸ್‌ಎಸ್ ಮೋದಿಯ ಬಗ್ಗೆ ವಿಮರ್ಶಾತ್ಮಕ ಮೌಲ್ಯಮಾಪನವನ್ನು ರೂಪಿಸಿರಬಹುದು, ಆದರೆ ಸರ್ಕಾರವನ್ನು ಬಲಪಡಿಸಲು ಮತ್ತು ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮಾತ್ರ ಅದು ಬದಲಿ ಬಗ್ಗೆ ಯೋಚಿಸುತ್ತದೆ. ಮೋದಿಯ ಅಡಿಯಲ್ಲಿ ಆರ್‌ಎಸ್‌ಎಸ್ ತನ್ನ ಅತ್ಯುತ್ತಮ ಫಲವನ್ನು ಕಂಡಿದೆ ಮತ್ತು ಅದರ ಪ್ರತಿಯೊಂದು ಹೆಜ್ಜೆಯೂ ತನ್ನ ಪ್ರಾಬಲ್ಯದ ನಿಯಂತ್ರಣವನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿರುತ್ತದೆ.

ಆರೆಸ್ಸೆಸ್‌ನಲ್ಲಿನ ಮನಸ್ಸಿನ ಬದಲಾವಣೆ ಅಥವಾ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನತಾದಳ (ಯುನೈಟೆಡ್) (ಜೆಡಿ (ಯು) ನಂತಹ ಪಕ್ಷಗಳಿಂದ ಉಂಟಾಗುವ ಪಲ್ಟಿಗಳು ವಿರೋಧ ಪಕ್ಷದ ಮೇಲೆ ಅವಲಂಬಿತವಾಗಿವೆ, ಇದು ಸ್ವತಃ ಸೈದ್ಧಾಂತಿಕ ಅಶುದ್ಧತೆಯ ಲಕ್ಷಣವಾಗಿದೆ. ವಕ್ಫ್ ಮಸೂದೆಯಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಪ್ರಕ್ಷುಬ್ಧತೆಯನ್ನು ನಿರೀಕ್ಷಿಸಿದವರು ಈ ಅನುಭವದಿಂದ ಸರಿಯಾದ ಪಾಠಗಳನ್ನು ಕಲಿಯಬೇಕು. ಅವರು ಹಾಗೆ ಮಾಡದಿದ್ದರೆ, ಮುಂದೆ ಅವರು ಅವರು ಸಂವಿಧಾನದ ಸಣ್ಣ ಪ್ರತಿಯನ್ನು ತಮ್ಮ ನಡುಗುವ ಕೈಯಲ್ಲಿ ಹಿಡಿದುಕೊಂಡು ಗೊಂದಲದಲ್ಲಿ ಮುಳುಗುತ್ತಲೇ ಇರುತ್ತಾರೆ.

ಲೇಖನ: ಸಂಜಯ್ ಕೆ. ಝಾ, ರಾಜಕೀಯ ವಿಶ್ಲೇಷಕರು
ದಿ ವೈರ್‌ನಲ್ಲಿ ಪ್ರಕಟಿಸಲಾಗಿರುವ The Waqf Bill Deception: What’s the Modi Government’s Agenda Behind Concern for Muslim Welfare? ಲೇಖನದ ಕನ್ನಡಾನುವಾದ

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸಿಕ್ಕಿರುವ ದೇಣಿಗೆಯಲ್ಲಿ 87% ಹೆಚ್ಚಳ!
ಬೆಂಗಳೂರು: 2022-2023 ರಿಂದ 2023-2024 ರವರೆಗೆ ಬಿಜೆಪಿಗೆ ಸಿಕ್ಕಿರುವ ದೇಣಿಗೆಯು  87% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಚುನಾವಣಾ ಬಾಂಡ್‌ಗಳ ಪಾಲು ಅರ್ಧಕ್ಕಿಂತ ಕಡಿಮೆಯಿದ್ದರೂ ಸಹ  ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿನ ಏರಿಕೆಯನ್ನು ಚುನಾವಣಾ ಆಯೋಗಕ್ಕೆ ತನ್ನ ಆಡಿಟ್ ವರದಿಯಲ್ಲಿ ಬಿಜೆಪಿ ತೋರಿಸಿದೆ.

2023-2024ರ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯು 2022-2023ರಲ್ಲಿ ಬಿಜೆಪಿಗೆ 2,120.06 ಕೋಟಿ ರುಪಾಯಿಗಳಿಂದ 2023-2024ರಲ್ಲಿ 3,967.14 ಕೋಟಿ ರುಪಾಯಿಗಳಿಗೆ ಏರಿಕೆಯಾಗಿರುವುದನ್ನು ಎಂದು ತೋರಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ 1,685.62 ಕೋಟಿ ರೂಪಾಯಿಗಳನ್ನು (ಒಟ್ಟು ದೇಣಿಗೆಯ 42.4%) ಸ್ವೀಕರಿಸಿದೆ. ಇದಕ್ಕೆ ಹೋಲಿಸಿದರೆ 2022-2023ರಲ್ಲಿ, ಸದ್ಯ ರದ್ದಾಗಿರುವ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ 1,294.14 ಕೋಟಿ ರುಪಾಯಿ (ಒಟ್ಟು ದೇಣಿಗೆಯ 61%) ಪಡೆದುಕೊಂಡಿತ್ತು.

ಲೋಕಸಭೆ ಚುನಾವಣೆಗೆ ಮುಂಚಿತವಾಗಿ 2022-2023 ರಿಂದ 2023-2024 ರವರೆಗೆ ಕಾಂಗ್ರೆಸ್‌ಗೆ ಸಿಕ್ಕಿರುವ ದೇಣಿಗೆಯಲ್ಲಿ 320% ಹೆಚ್ಚಾಗಿದೆ ಎಂದು ಅದರ ಆಡಿಟ್ ವರದಿ ತೋರಿಸಿದೆ. ಪಕ್ಷವು 2022-2023ರಲ್ಲಿ 268.62 ಕೋಟಿ ರುಪಾಯಿ ಮತ್ತು 2023-2024ರಲ್ಲಿ 1,129.66 ಕೋಟಿ ರುಪಾಯಿ ದೇಣಿಗೆಯನ್ನು ಪಡೆದಿತ್ತು. ಇದರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆ 2022-2023ರಲ್ಲಿ 63.6% ಮತ್ತು 2023-2024ರಲ್ಲಿ 73.3% ರಷ್ಟಿದ್ದವು.

ಸುಪ್ರೀಂ ಕೋರ್ಟ್ 2024 ರ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತು. ಹೀಗಾಗಿ 2023-2024 ನೇ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸಿದ ಕೊನೆಯ ವರ್ಷವಾಗಿದೆ.

ಪ್ರಧಾನಿ ಮತ್ತು ರಾಷ್ಟ್ರಪತಿ ಹಿಂದುಗಳೇ ಅಲ್ಲ! – ಶಂಕರಾಚಾರ್ಯ
ಬೆಂಗಳೂರು: ಸದ್ಯದ ಬಿಜೆಪಿ ಆಡಳಿತದಲ್ಲಿ ಗೋಹತ್ಯೆ ಮುಂದುವರಿದಿದೆ ಎನ್ನುತ್ತಾ ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು “ಪ್ರಧಾನಿ ಮತ್ತು ರಾಷ್ಟ್ರಪತಿ ಹುದ್ದೆಗಳಲ್ಲಿ ಕುಳಿತವರು ಹಿಂದೂಗಳಲ್ಲ,” ಎಂದು ಹೇಳಿದ್ದಾರೆ.

‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ಯ ಎರಡನೇ ದಿನವಾದ ಇಂದು ಲಕ್ನೋದಲ್ಲಿ ಮಾತನಾಡಿದ ಅವಿಮುಕ್ತೇಶ್ವರಾನಂದ್, “ಯಾವುದೇ ಒಬ್ಬ ಹಿಂದೂ ಪ್ರಧಾನಿ ಅಥವಾ ರಾಷ್ಟ್ರಪತಿ ಗೋಹತ್ಯೆ ನಿಲ್ಲಿಸಲು ಆದೇಶವನ್ನು ಹೊರಡಿಸುತ್ತಾರೆ, ಇಲ್ಲವೇ ರಾಜೀನಾಮೆ ನೀಡುತ್ತಾರೆ,” ಎನ್ನುತ್ತಾ ಆ ಹುದ್ದೆಗಳಲ್ಲಿ ಇರುವವರು “ಪ್ರದರ್ಶನಕ್ಕೆ ಇಟ್ಟಿರುವ ಲಕ್ನೋ ಆನೆಯ ಪ್ರತಿಮೆಗಳು,” ಎಂದು ಟೀಕಿಸಿದ್ದಾರೆ

ಜ್ಯೋತಿರ್ಮಠ ಶಂಕರಾಚಾರ್ಯರು ಆರಂಭಿಸಿದ ‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ ಭಾನುವಾರ ಅಯೋಧ್ಯೆಯಿಂದ ಆರಂಭಗೊಂಡಿದ್ದು, ಸೋಮವಾರ ಲಖನೌ ತಲುಪಿದ್ದು, ಇದೀಗ ಬಿಹಾರದ ಬಕ್ಸಾರ್‌ಗೆ ತೆರಳಲಿದೆ.

“ಅವರಲ್ಲಿ ಹಿಂದೂ ಯಾರು? ಯಾವ ರಾಷ್ಟ್ರಪತಿ ಹಿಂದೂ; ಯಾವ ಪ್ರಧಾನಿ ಹಿಂದೂ? ಅವರು ಹಿಂದೂಗಳಾಗಿದ್ದರೆ ಅವರ ಆಡಳಿತದಲ್ಲಿ ಗೋಹತ್ಯೆ ಮುಂದುವರಿಯುತ್ತಿತ್ತೇ? ನೀವು ಹಿಂದೂಗಳು. ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದರೆ, ನಿಮ್ಮ ಆಡಳಿತದಲ್ಲಿ ಗೋಹತ್ಯೆಯನ್ನು ಒಪ್ಪಿಕೊಳ್ಳುತ್ತೀರಾ?” ಎಂದು ಪ್ರಧಾನಿ ಮತ್ತು ರಾಷ್ಟ್ರಪತಿ ಇಬ್ಬರೂ ಹಿಂದೂಗಳು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.

ಲಕ್ನೋದ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಜ್ಯೋತಿರ್ಮಠ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ್, “ಇಲ್ಲಿಯವರೆಗೆ, ಯಾವುದೇ ಹಿಂದೂ ಈ ಹುದ್ದೆಗಳನ್ನು (ಪ್ರಧಾನಿ/ರಾಷ್ಟ್ರಪತಿ) ವಹಿಸಿಕೊಂಡಿಲ್ಲ. ಹೀಗಿದ್ದಿದ್ದರೆ ಅವರ ಅಂತರಂಗದ ಆತ್ಮಸಾಕ್ಷಿ ಇದನ್ನು (ಗೋಹತ್ಯೆ) ಮುಂದುವರಿಯುವಂತೆ ಮಾಡಲು ಬಿಡುತ್ತಿರಲಿಲ್ಲ. ಅವರು ಹುದ್ದೆಗೆ ರಾಜೀನಾಮೆ ನೀಡುತ್ತಿದ್ದರು ಇಲ್ಲವೇ, ಇಲ್ಲಿ ಗೋಹತ್ಯೆ ಮಾಡುವಂತಿಲ್ಲ ಎಂದು ಆದೇಶ ಹೊರಡಿಸುತ್ತಿದ್ದರು,” ಎಂದು ಹೇಳಿದ್ದಾರೆ.

“ಈಗ ಈ ಹುದ್ದೆಗಳಲ್ಲಿ ಯಾವೊಬ್ಬ ಹಿಂದೂವೂ ಕುಳಿತಿಲ್ಲ” ಎಂದೂ ಅವರು ಹೇಳಿದ್ದಾರೆ.

“ಲಕ್ನೋದ ಉದ್ಯಾನವನಗಳಲ್ಲಿರುವ ಆನೆಗಳಂತೆಯೇ… ಅವು (ನಿಜವಾದ) ಆನೆಗಳೇ? ಅವು ನಡೆಯುತ್ತವೆಯೇ? ಅವು ಪ್ರದರ್ಶನಕ್ಕೆ ಮಾತ್ರ, ಅಲ್ಲಿ ನಿಲ್ಲಿಸಲು ಮಾತ್ರ. ಲಕ್ನೋದ ಉದ್ಯಾನವನಗಳ ಆನೆಗಳು ಕೇವಲ ಪ್ರದರ್ಶನಕ್ಕಾಗಿ ಮತ್ತು ನಡೆಯಲು ಸಾಧ್ಯವಿಲ್ಲ, ಮರವನ್ನು ಮುರಿಯಲು ಸಾಧ್ಯವಿಲ್ಲ ಮತ್ತು ಸೌಂದರ್ಯವನ್ನು ನೀಡಲೂ ಸಾಧ್ಯವಿಲ್ಲ … ಅದೇ ರೀತಿಯಲ್ಲಿ, ಅವರು ಪ್ರದರ್ಶನಕ್ಕಾಗಿರುವ ಹಿಂದೂಗಳು … ನಿಜವಾದ ಹಿಂದೂಗಳಲ್ಲ. ಅವರು ಹಿಂದೂಗಳಾಗಿದ್ದರೆ, ಅವರ ಆಡಳಿತದಲ್ಲಿ ಒಂದೇ ಒಂದು ಬಾರಿಯೂ ಗೋಹತ್ಯೆ ನಡೆಯುತ್ತಿರಲಿಲ್ಲ,” ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ‘ಗೋಧ್ವಜ ಸ್ಥಾಪನಾ ಭಾರತ ಯಾತ್ರೆ’ ನಡೆಸುವಾಗ ಗೋಹತ್ಯೆ ನಿಲ್ಲಿಸಲು ಶಕ್ತಿ ನೀಡುವಂತೆ ರಾಮ್ ಲಲ್ಲಾನ ಬಳಿ ಕೇಳಿದ್ದೇನೆ, ಗೋಹತ್ಯೆ ನಿಷೇಧ ಈಡೇರಿಸುವವರೆಗೆ ದೇವರ ದರ್ಶನಕ್ಕೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದೇನೆ ಎಂದು ಅವಿಮುಕ್ತೇಶ್ವರಾನಂದರು ಹೇಳಿದ್ದಾರೆ.

ಜ್ಯೋತಿರ್ಮಠ ಶಂಕರಾಚಾರ್ಯರು ಯಾತ್ರೆಯ ಪ್ರಾರಂಭಕ್ಕಾಗಿ ಭಾನುವಾರ ಅಯೋಧ್ಯೆಯಲ್ಲಿದ್ದರು ಆದರೆ ರಾಮ ಮಂದಿರಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದರು ಮತ್ತು ಅದರ ಸಂಕೀರ್ಣವನ್ನು ಮಾತ್ರ ಪ್ರದಕ್ಷಿಣೆ ಮಾಡಿದರು.

ದೇವಾಲಯಕ್ಕೆ ಏಕೆ ಭೇಟಿ ನೀಡಲಿಲ್ಲ ಎಂಬ ಪ್ರಶ್ನೆಗೆ, ಅವಿಮುಕ್ತೇಶ್ವರಾನಂದರು, “ಭಾಗಶಃ ನಿರ್ಮಿಸಲಾದ ದೇವಾಲಯದಲ್ಲಿ ಯಾರೂ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ ಮತ್ತು ಅದರ ‘ಶಿಖರ’ ಪೂರ್ಣಗೊಂಡ ನಂತರ ದೇವಾಲಯಕ್ಕೆ ಭೇಟಿ ನೀಡುತ್ತೇನೆ,” ಎಂದು ಹೇಳಿದರು.

2024 ರ ಜನವರಿಯಲ್ಲಿ, ಅವಿಮುಕ್ತೇಶ್ವರಾನಂದರವರು ಅಪೂರ್ಣವಾಗಿರುವ ರಾಮಮಂದಿರದಲ್ಲಿ ರಾಮ ಲಲ್ಲಾನ ‘ಪ್ರಾಣ ಪ್ರತಿಷ್ಠೆ’ ಮಾಡಿದ್ದು ʼಶಾಸ್ತ್ರಗಳಿಗೆ ವಿರುದ್ಧವಾಗಿದೆʼ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಸುದ್ದಿಯಾಗಿದ್ದರು.

ಇಂದು ಸೋಮವಾರ, “ರಾಮನ ಜೊತೆಗೆ, ನಮಗೆ ಲಕ್ಷ್ಮಣ ಜೀ ಕೂಡ ಬೇಕು – ಅದಕ್ಕಾಗಿಯೇ ನಾವು ಲಕ್ಷ್ಮಣಪುರಿಗೆ ಬಂದಿದ್ದೇವೆ (ಲಕ್ನೋದ ಹಳೆಯ ಹೆಸರು, ಇದನ್ನು ರಾಮನ ಕಿರಿಯ ಸಹೋದರ ಲಕ್ಷ್ಮಣ ಸ್ಥಾಪಿಸಿದ ಎಂದು ಪುರಾಣ ಹೇಳುತ್ತದೆ)” ಎಂದು ಹೇಳಿದರು. ಸ್ವಾಮೀಜಿ ದೇಶಾದ್ಯಂತ ಸಂಚರಿಸಲು ಯೋಜನೆ ಹಾಕಿಕೊಂಡಿದ್ದು, ಎಲ್ಲಾ ರಾಜ್ಯಗಳಲ್ಲಿ ʼಗೋಧ್ವಜʼ ಸ್ಥಾಪಿಸಲು ಯೋಜಿಸಿತ್ತಿರುವುದಾಗಿ ಹೇಳಿದ್ದಾರೆ.

‘ಯೋಗಿ ಇದ್ದರೂ ಗೋಮಾಂಸ ರಫ್ತಿನಲ್ಲಿ ಯುಪಿ ಅಗ್ರಸ್ಥಾನ – ತಿರುಪತಿ ಲಡ್ಡು ತನಿಖೆ ವಿಳಂಬ’

ಗೋಹತ್ಯೆ ನಿಷೇಧಕ್ಕೆ ಕೇಂದ್ರ ಸರಕಾರ ಕಾನೂನನ್ನು ರೂಪಿಸಬೇಕು ಎಂದಿರುವ ಜ್ಯೋತಿರ್ಮಠ ಶಂಕರಾಚಾರ್ಯರು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸದ್ಯಕ್ಕೆ ಮಠ ತೊರೆದಿರುವುದಾಗಿ ಹೇಳಿದ್ದಾರೆ.

“ಮಹಂತ್ ಯೋಗಿ ಆದಿತ್ಯನಾಥ್ ಅವರು ಯುಪಿ ಮುಖ್ಯಮಂತ್ರಿಯಾಗಿದ್ದಾರೆ … ಹೀಗಿದ್ದೂ, ಯುಪಿ ಗರಿಷ್ಠ ಪ್ರಮಾಣದಲ್ಲಿ ಗೋಮಾಂಸ ರಫ್ತು ಮಾಡುತ್ತಿದೆ … ಬಿಜೆಪಿ ಮೊದಲು ನನ್ನ ಯಾತ್ರೆಯನ್ನು ವಿರೋಧಿಸಿತು – ಇದು ನನಗೆ ಆಶ್ಚರ್ಯವನ್ನುಂಟುಮಾಡಿತು” ಎಂದು ಅವರು ಹೇಳಿದರು.

“ನಮ್ಮನ್ನು ನಾಗಾಲ್ಯಾಂಡ್‌ನಲ್ಲಿ ನಿಲ್ಲಿಸಲಾಯಿತು, ಆದರೆ ನಾವು ಇನ್ನೂ ನಾಗಾಲ್ಯಾಂಡ್‌ಗೆ ಭೇಟಿ ನೀಡುತ್ತೇವೆ. ಇದು ಬಿಜೆಪಿಯ ದ್ವಂದ್ವ ನೀತಿ- ಇದು ನನಗೆ ಆಶ್ಚರ್ಯ ತಂದಿದೆ,” ಎಂದು ಅವರು ಹೇಳಿದರು. “ಶಂಕರಾಚಾರ್ಯರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಗೋವನ್ನು ತಿನ್ನುವುದು ಅವರ ಹಕ್ಕು ಎಂದು ಅಲ್ಪಸಂಖ್ಯಾತರು ಹೇಳಲು ಸಾಧ್ಯವಿಲ್ಲ. ಹೀಗಿದ್ದರೆ, ಅವರು ಷರಿಯಾ ಕಾನೂನು ಹೊಂದಿರುವ ದೇಶಕ್ಕೆ ಹೋಗಲಿ,” ಎಂದು ಹೇಳಿಕೆ ನೀಡಿದ್ದಾರೆ.

ತಿರುಪತಿ ಲಡ್ಡು ಪ್ರಸಾದದ ವಿಚಾರದಲ್ಲಿ ಮಾತನಾಡಿದ ಅವಿಮುಕ್ತೇಶ್ವರಾನಂದ, ಕೋಟ್ಯಂತರ ಜನ ಗೋಮಾಂಸದ ಕೊಬ್ಬಿನಂಶವಿರುವ ಪ್ರಸಾದ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 18 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಆಡಳಿತದಲ್ಲಿ ತಿರುಪತಿ ಪ್ರಸಾದದ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಯಿತು. ರೆಡ್ಡಿ ಆರೋಪಗಳನ್ನು “ಹೇಯ” ಮತ್ತು “ಶುದ್ಧ ಸುಳ್ಳು”, ಇದು ರಾಜಕೀಯ ಲಾಭಕ್ಕಾಗಿ ಸಿಎಂ ಮಾಡಿರುವ ವಿವಾದ ಎಂದು ಅವರು ಹೇಳಿದ್ದರು.

ಈ ಕುರಿತು ಮಾತನಾಡಿದ ಜ್ಯೋತಿರ್ಮಠದ ಶಂಕರಾಚಾರ್ಯರು, “ಜನ ಹಿಂದೂಗಳ ಮತವನ್ನು ಪಡೆದು ಆದರೆ ಹಿಂದೂಗಳಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರ ಮತಗಳನ್ನು ತೆಗೆದುಕೊಂಡು ಇನ್ನೂ ಗೋಹತ್ಯೆಯನ್ನು ಮುಂದುವರಿಸಿದ್ದಾರೆ … ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯು ಭವಿಷ್ಯದಲ್ಲಿ ಬೆಳೆಯದಂತೆ ನೋಡಿಕೊಳ್ಳಲು ನಾವು ನಮ್ಮ ‘ಮಠ’ವನ್ನು ತೊರೆಯುತ್ತಿದ್ದೇವೆ,” ಎಂದು ಹೇಳಿದರು.

“ಈ ದೇಶದಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಚರ್ಚೆಯಲ್ಲಿರುವಾಗ, ನಾವು ರಾಜ್ಯಗಳಾದ್ಯಂತ ‘ಗೋಮಾತೆ’ಗಾಗಿ ಬೇರೆ ಬೇರೆ ಕಾನೂನುಗಳನ್ನು ಏಕೆ ಹೊಂದಿದ್ದೇವೆ?” ಎಂದು ಪ್ರಶ್ನಿಸಿದರು.

ತಿರುಪತಿಯಲ್ಲಿ ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ದನದ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ಸಮಿತಿಯನ್ನು ರಚಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎಂದು ಜ್ಯೋತಿರ್ಮಠ ಶಂಕರಾಚಾರ್ಯರು ಟೀಕಿಸಿದ್ದಾರೆ.

“ಇದು ಸಣ್ಣ ಸಮಸ್ಯೆ ಎಂದು ನೀವು ಭಾವಿಸುತ್ತೀರಾ? ಈಗಾಗಲೇ ತನಿಖೆ ಆರಂಭವಾಗಬೇಕಿತ್ತು. ಆದರೆ ಏನಾಗುತ್ತಿದೆ? ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ಕೋಟ್ಯಂತರ ಹಿಂದೂಗಳ ಪರಿಶುದ್ಧತೆಗೆ ಭಂಗ ತರುವ ಯತ್ನ ನಡೆಯುತ್ತಿದೆ,” ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆಂಧ್ರಪ್ರದೇಶ ಸರ್ಕಾರ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದ ಅವರು, ಎಸ್‌ಐಟಿ ತನಿಖೆಯನ್ನು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನಿಸಿದರು. “ಸಮಸ್ಯೆಯು ಹಿನ್ನಲೆಗೆ ಸರಿಬೇಕೆಂದು ಸರ್ಕಾರ ಬಯಸುತ್ತದೆಯೇ?” ಎಂದು ಕೇಳಿದ್ದಾರೆ.

ಭಾರತ ವಿದೇಶಾಗ ನೀತಿ ಅಲ್ಲ… ಅದಾನಿ ವಿದೇಶಾಂಗ ನೀತಿ!
ಗೌತಮ್‌ ಅದಾನಿ ಮತ್ತು ಮೋದಿಯವರು ಖಾಸಾ ದೋಸ್ತಿಗಳು. ಒಬ್ಬ ಬಿಲಿಯನೇರ್‌ ಉದ್ಯಮಿ ಪ್ರಧಾನಿಯೊಬ್ಬರ ಸೀಟಿನ ಮೇಲೆ ಅಗೋಚರವಾಗಿ ಕುಳಿತಂತೆ ಕಾಣುತ್ತದೆ. ಇಬ್ಬರೂ ಗುಜರಾತಿಗಳು. 2014 ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಅದಾನಿ ಗ್ರೂಪ್ ತನ್ನ ವ್ಯವಹಾರಗಳನ್ನು ಆಕ್ರಮಣಕಾರಿ ರೀತಿಯಲ್ಲಿ ವಿಸ್ತರಿಸಿಕೊಂಡಿದೆ. ಮೋದಿ ಹೋದ ದೇಶದಲ್ಲೆಲ್ಲಾ ಅದಾನಿ ತಮ್ಮ ಲಾಭವನ್ನು ಮಾಡಿಕೊಂಡಿದ್ದಾರೆ. ಮಂಗಳೂರು ಸೇರಿದಂತೆ ಭಾರತದ ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಗಣಿಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಮತ್ತು ಗ್ಯಾಸ್ ಸ್ಟೇಷನ್‌ಗಳನ್ನು ತನ್ನದಾಗಿಸಿಕೊಂಡು ದೇಶ ಯಾಕೆ, ಪ್ರಪಂಚದಲ್ಲೇ ಅತಿದೊಡ್ಡ ಖಾಸಗಿ ಮಾಲೀಕನಾಗುತ್ತಿದ್ದಾರೆ.

ಕೀನ್ಯಾದ ನೈರೋಬಿ ವಿಮಾನ ನಿಲ್ದಾಣವನ್ನು 30 ವರ್ಷಗಳವರೆಗೆ ನಿರ್ವಹಿಸಲು ಅದಾನಿ ಗ್ರೂಪ್‌ಗೆ ಹಕ್ಕನ್ನು ನೀಡುವ ಒಪ್ಪಂದವನ್ನು ಅಲ್ಲಿನ ಉಚ್ಚ ನ್ಯಾಯಾಲಯ ಅಮಾನತುಗೊಳಿಸಿದೆ. ಇದು ಭಾರತದ ಹೊರಗೆ ವಿಮಾನ ನಿಲ್ದಾಣ ಸ್ಥಾಪಿಸುವ ಮೊದಲ ಪ್ರಯತ್ನವಾಗಿದೆ. ಕೀನ್ಯಾದ ನ್ಯಾಯಾಲಯದ ಈ ಆದೇಶವು ಜಾಗತಿಕವಾಗಿ ವಿಸ್ತರಿಸುವ ಅದಾನಿ ಗ್ರೂಪ್ಸ್‌ನ ಯೋಜನೆಗಳಿಗೆ ಹಿನ್ನಡೆಯಾಗಿದೆ.

ಮೋದಿಯವರು ಬೇರೆ ದೇಶಗಳ ಜೊತೆಗೆ ಮಾಡುವ ರಾಜತಾಂತ್ರಿಕ ಒಪ್ಪಂದಗಳ ಬೆನ್ನಲ್ಲೇ ಅದಾನಿ ಗ್ರೂಪ್ಸ್‌ ತನ್ನ ಯೋಜನೆಗಳನ್ನು ಆ ದೇಶಗಳಲ್ಲಿ ವಿಸ್ತರಿಸಿದೆ. ಮೋದಿಯವರು ಒಂದು ದೇಶಕ್ಕೆ ಬೇಟಿ ನೀಡಿದರೆ, ಇಲ್ಲವೇ ಆ ದೇಶದ ಮುಖ್ಯಸ್ಥನನ್ನು ಬೇಟಿ ನೀಡಿದ ತಿಂಗಳ ಒಳಗೆ ಅದಾನಿಯವರಿಗೆ ಆ ದೇಶದಲ್ಲಿ ಯೋಜನೆಯೊಂದು ಘೋಷಣೆಯಾಗುತ್ತದೆ.

ಕೀನ್ಯಾದ ಪ್ರಧಾನ ಮಂತ್ರಿಯು ಡಿಸೆಂಬರ್ 2023 ರಲ್ಲಿ ನವದೆಹಲಿಗೆ ಭೇಟಿ ನೀಡಿದರು. ಮೂರು ತಿಂಗಳ ನಂತರ, ಮಾರ್ಚ್‌ನಲ್ಲಿ, ಅದಾನಿ ಗ್ರೂಪ್ ನೈರೋಬಿ ವಿಮಾನ ನಿಲ್ದಾಣವನ್ನು ನವೀಕರಿಸಲು ಮತ್ತು ವಿಸ್ತರಿಸಲು ಪ್ರಸ್ತಾವನೆಯನ್ನು ಸಲ್ಲಿಸಿತು. ಜೂನ್‌ನಲ್ಲಿ, ಕೀನ್ಯಾದ ಅಧಿಕಾರಿಗಳು ರಾಷ್ಟ್ರೀಯ ವಿಮಾನಯಾನ ನೀತಿಯನ್ನು ಬದಲಾಯಿಸಿದರು ಮತ್ತು ವಿಮಾನ ನಿಲ್ದಾಣ ಹೂಡಿಕೆ ಯೋಜನೆಯನ್ನು ಅನುಮೋದಿಸಿದರು. ಈ ಬಗ್ಗೆ ಸ್ಕ್ರೋಲ್.ಇನ್‌ ವರದಿ ಮಾಡಿದೆ.

ಈ ಪ್ರಕರಣ ಬೆಳಕಿಗೆ ಬಂದಂತೆ, ಇದನ್ನು ವಿರೋಧಿಸಿ ಕೀನ್ಯಾದ ಮಾನವ ಹಕ್ಕುಗಳ ಆಯೋಗ ಮತ್ತು ಬಾರ್ ಅಸೋಸಿಯೇಷನ್ ​​ಕಾನೂನು ಸವಾಲನ್ನು ಹಾಕಿವೆ. ಲಾಭ ತರುವ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಘಟಕಕ್ಕೆ ಗುತ್ತಿಗೆ ನೀಡುವುದು ಸರಿಯಲ್ಲ, ಯಾವುದೇ ಸ್ಪರ್ಧಾತ್ಮಕ ಬಿಡ್ಡಿಂಗ್‌ ಇಲ್ಲದೇ ಇದನ್ನು ಗೌಪ್ಯವಾಗಿ ಮಾಡಲಾಗುತ್ತಿದೆ ಎಂದು ಹೇಳಿವೆ. ಕೀನ್ಯಾದ ಹೈಕೋರ್ಟ್ ಸೆಪ್ಟೆಂಬರ್ 9 ರಂದು ಈ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮೋದಿಯ ಪ್ರಭಾವವನ್ನು ಬಳಸಿ ಕೀನ್ಯಾದ ಒಳಗೆ ನುಗ್ಗಿರುವ ಅದಾನಿ ಗ್ರೂಪ್ಸ್‌ನ ಈ ಯೋಜನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನು ಪಡೆಯಿತು. ಕೀನ್ಯಾದ ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆಗಳು ಎದ್ದವು.

ಇದರ ಬೆನ್ನಲ್ಲೇ ಅಲ್ಲಿನ ಸರ್ಕಾರಿ ಸಲಹೆಗಾರರೊಬ್ಬರು ಈ ವಿಮಾನ ನಿಲ್ದಾಣದ ವಿಚಾರದಲ್ಲಿ ಅದಾನಿ ಜೊತೆಗೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿಲ್ಲ, ಕೀನ್ಯಾದಲ್ಲಿ ಹೈ-ವೋಲ್ಟೇಜ್ ವಿದ್ಯುತ್ ಮಾರ್ಗಗಳನ್ನು ನಿರ್ಮಿಸಲು ಅದಾನಿ ಗ್ರೂಪ್ಸ್‌ಗೆ 1.3 ಬಿಲಿಯನ್ ಡಾಲರ್ ರಿಯಾಯಿತಿಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

The Adani Group’s proposed takeover of the airport in Nairobi, Kenya, has led to widespread protests in the country, with the Kenya Aviation Workers Union calling for a strike to demonstrate its opposition. This is a matter of grave concern for India, because the non-biological…
— Jairam Ramesh (@Jairam_Ramesh) September 3, 2024

ಕೀನ್ಯಾದಲ್ಲಿ ನಡೆದಿರುವ ಈ ಅಕ್ರಮ ಚರ್ಚೆಯಾಗುತ್ತಿರುವಂತೆ, ಅದಾನಿ-ಮೋದಿಯ ಜೋಡಿಯ ಇಂತದ್ದೇ ಇನ್ನೊಂದು ಅಕ್ರಮ ಬಾಂಗ್ಲಾದೇಶದಲ್ಲೂ ವಿವಾದಕ್ಕೆ ಈಡಾಗಿದೆ.  ಅಲ್ಲಿನ ಈಗಿನ ಮಧ್ಯಂತರ ಸರ್ಕಾರವು ಅದಾನಿ ಜೊತೆಗೆ ಹಿಂದಿನ ಸರ್ಕಾರ ಮಾಡಿಕೊಂಡಿರುವ ವಿದ್ಯುತ್ ಖರೀದಿ ಒಪ್ಪಂದವನ್ನು ಪರಿಶೀಲಿಸುತ್ತಿದೆ

ಬಾಂಗ್ಲಾದಲ್ಲೂ ಕೀನ್ಯಾದಂತೆ ಮೋದಿ ಪ್ರಭಾವ ಬಳಸಿದ ಅದಾನಿ

2015 ರ ಜೂನ್ ತಿಂಗಳಲ್ಲಿ ಪ್ರಧಾನ ಮೋದಿ ಮೊದಲ ಬಾರಿಗೆ ಢಾಕಾಗೆ ಭೇಟಿ ನೀಡಿದರು. ಆ ಬೇಟಿಯಲ್ಲಿ ಬಾಂಗ್ಲಾದೇಶಕ್ಕೆ ಅಗತ್ಯವಾದ ವಿದ್ಯುತ್ ಪೂರೈಸಲು ಪ್ರಮುಖ ಪಾಲುದಾರನಾಗಿ ಭಾರತ ಸಹಾಯ ಮಾಡಲಿದೆ ಎಂದು ಮೋದಿ ಹೇಳಿದರು. ಇದಾಗಿ ಎರಡು ತಿಂಗಳ ನಂತರ, ಜಾರ್ಖಂಡ್‌ನಿಂದ ಬಾಂಗ್ಲಾಕ್ಕೆ ವಿದ್ಯುತ್ ರಫ್ತು ಮಾಡಲು ಅದಾನಿ ಬಾಂಗ್ಲಾದೇಶದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಇದರ ಬೆನ್ನಲ್ಲೇ ಎರಡು ವರ್ಷಗಳ ನಂತರ, 2017 ರ ಏಪ್ರಿಲ್ ತಿಂಗಳಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನವದೆಹಲಿಗೆ ಭೇಟಿಯ ನೀಡಿದರು.

ಇದರ ಬಗ್ಗೆ ಬಾಂಗ್ಲಾದಲ್ಲಿ ತೀವ್ರ ವಿರೋಧ ವ್ಯಕ್ತವಾಗಿ, ಅಲ್ಲಿನ ಪ್ರತಿಪಕ್ಷಗಳು ಮೋದಿ ಸರ್ಕಾರದ ಒತ್ತಡಕ್ಕೆ ಮಣಿದು ಹಸೀನಾ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಆರೋಪವನ್ನು ಮಾಡಿದವು.

It is an honour to have met Hon PM of Bangladesh Sheikh Hasina in Delhi. Her vision for Bangladesh is inspirational and stunningly bold.

We are committed to commissioning our 1600 MW Godda Power Project and dedicated transmission line to Bangladesh by Bijoy Dibosh, 16 Dec 2022. pic.twitter.com/LySohNBSrV
— Gautam Adani (@gautam_adani) September 5, 2022

ಈಗ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಸರ್ಕಾರ ಪತನವಾಗಿ ಹೊಸ ಆಡಳಿತ ಬಂದಿದೆ. ಅದಾನಿ ಜೊತೆಗೆ ಮಾಡಿಕೊಂಡಿರುವ ಹಿಂದಿನ ಸರ್ಕಾರದ ಒಪ್ಪಂದ ರದ್ದಾಗುವ ಸೂಚನೆ ಕಂಡುಬರುತ್ತಿದೆ.

ಇದರ ಬಗ್ಗೆ ಸ್ಕ್ರೋಲ್.ಇನ್‌ ಅದಾನಿ ಗ್ರೂಪಿನ ವಕ್ತಾರರೊಬ್ಬರ ಅಭಿಪ್ರಾಯವನ್ನು ವರದಿ ಮಾಡಿದ್ದು, “ಬಾಂಗ್ಲಾದೇಶ ಸರ್ಕಾರವು ನಮ್ಮ ಪಿಪಿಎಯನ್ನು ಮರುಪರಿಶೀಲನೆ ನಡೆಸುತ್ತಿದೆ ಎಂಬುದಕ್ಕೆ ನಮಗೆ ಯಾವುದೇ ಮಾಹಿತಿ ಇಲ್ಲ. ಪಾಲುದಾರರಾಗಿ ನಮಗೆ ಬರಬೇಕಾದ ಗಣನೀಯ ಪ್ರಮಾಣದ ಬಾಕಿ ಪಾವತಿಗಳ ಹೊರತಾಗಿಯೂ ನಾವು ವಿದ್ಯುತ್ ಪೂರೈಕೆಯನ್ನು ಮುಂದುವರಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.

ಮೋದಿ ಪ್ರಧಾನಿಯಾಗುವ ಮೊದಲು, 2014 ಕ್ಕಿಂತ ಹಿಂದೆ, ಅದಾನಿ ಗ್ರೂಪ್ಸ್‌ ಇಂಡೋನೇಷ್ಯಾ, ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿತ್ತು, ಈಗ ಅದು ಏಷ್ಯಾ ಸೇರಿದಂತೆ ಆಫ್ರಿಕಾದಾದ್ಯಂತ ತನ್ನ ಯೋಜನೆಗಳನ್ನು ವಿಸ್ತರಿಸಿದೆ.  ಇದರ ಹಿಂದೆ ಮೋದಿಯವರು ಕುಳಿತಿರುವ ಪ್ರಧಾನಿ ಖುರ್ಚಿ ಕೆಲಸ ಮಾಡಿರುವುದು ಕಂಡುಬರುತ್ತಿದೆ.

ಶ್ರೀಲಂಕಾದಲ್ಲಿ ಮೋದಿ-ಅದಾನಿ ಜೋಡಿ ಕಮಾಲ್!

ಶ್ರೀಲಂಕಾದಲ್ಲಿ‌ ಅಲ್ಲಿನ ವಿದ್ಯುಚ್ಛಕ್ತಿ ಮಂಡಳಿಯ ಅಧಿಕಾರಿಯೊಬ್ಬರು ಸಂಸದೀಯ ಸಮಿತಿಯ ಮುಂದೆ ಹೇಳಿಕೆಯೊಂದನ್ನು ನೀಡಿದ್ದರು. 2021 ರ ನವೆಂಬರ್‌ನಲ್ಲಿ ಆಗಿನ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷೆ ತನ್ನ ದೇಶದ  ಪವನ ಶಕ್ತಿ ಯೋಜನೆಯನ್ನು ಅದಾನಿ ಗ್ರೂಪ್ಸ್‌ಗೆ ಹಸ್ತಾಂತರಿಸುವಂತೆ ಮೋದಿ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿರುವ ಬಗ್ಗೆ ಆ ಅಧಿಕಾರಿ ಹೇಳಿದ್ದಾರೆ.

ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದ ಜೊತೆ ಜೊತೆಗೆ ರಾಜಪಕ್ಸೆಯವರು ಮೋದಿಯವರನ್ನು ಭೇಟಿಯಾದ ಕೆಲ ದಿನಗಳ ನಂತರ ಇದು ನಡೆದಿದೆ. ಇದು ಸುದ್ದಿಯಾಗುತ್ತಿದ್ದಂತೆ ಶ್ರೀಲಂಕಾದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಅಧಿಕಾರಿ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇದಾಗುವ ಮೊದಲೇ, 2020 ರ ಫೆಬ್ರವರಿ ತಿಂಗಳಲ್ಲಿ, ಆಗಿನ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ದೆಹಲಿಗೆ ಬಂದು ಮೋದಿಯವರನ್ನು ಭೇಟಿ ಮಾಡಿ, ” ಪ್ರಮುಖ ಆರ್ಥಿಕ ವಿಚಾರಗಳ” ಬಗ್ಗೆ ಚರ್ಚಿಸಿದ್ದರು. ಇದಾಗಿ ತಿಂಗಳ ನಂತರ, ಭಾರತ, ಶ್ರೀಲಂಕಾ ಮತ್ತು ಜಪಾನ್ ನಡುವಿನ ಒಪ್ಪಂದದ ಭಾಗವಾಗಿ ಕೊಲಂಬೊ ಬಂದರಿನಲ್ಲಿ ಪೂರ್ವ ಕಂಟೈನರ್ ಟರ್ಮಿನಲ್ ಅನ್ನು ನಿರ್ವಹಿಸುವ ಯೋಜನೆಯನ್ನು ಅದಾನಿ ಗ್ರೂಪ್ಸ್‌ಗೆ ನೀಡಿರುವುದಾಗಿ ವರದಿಯಾಗಿದೆ. ಅನೇಕ ಸಂಘಟನೆಗಳ ಮತ್ತು ಬೌದ್ಧರ ಪ್ರತಿಭಟನೆಯ ನಂತರ, ಶ್ರೀಲಂಕಾ ಈ ಒಪ್ಪಂದವನ್ನು ತಿರಸ್ಕರಿಸಿತು, ಆದರೆ ಅದಾನಿ ಗ್ರೂಪ್ ಬಂದರಿನಲ್ಲಿ ಮತ್ತೊಂದು ಟರ್ಮಿನಲ್ ಅನ್ನು ನಿರ್ವಹಿಸುವ ಹಕ್ಕನ್ನು ಪಡೆದುಕೊಂಡಿತು.

ನೇಪಾಳಕ್ಕೂ ಹೆಜ್ಜೆ ಇಡಲಿದ್ಯಾ ಆದಾನಿ ಗೂಪ್ಸ್‌?

2024 ರಲ್ಲಿ, ನೇಪಾಳದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ತನ್ನದಾಗಿಸಿಕೊಳ್ಳಲು ಅದಾನಿ ಗ್ರೂಪ್ ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಚೀನಾದಿಂದ ಸಾಲ ಪಡೆದು ನಿರ್ಮಿಸಲಾಗಿರುವ ಅಲ್ಲಿನ ಪೋಖರಾ ಮತ್ತು ಭೈರಹವಾದ ಎರಡು ಹೊಸ ವಿಮಾನ ನಿಲ್ದಾಣಗಳು ಜೆಟ್ ವಿಮಾನಗಳಿಗಾಗಿ ಎತ್ತರದ ವಾಯುಮಾರ್ಗಗಳನ್ನು ತೆರೆಯದ ಕಾರಣ ಭಾರತಕ್ಕೆ ಸಿಕ್ಕಿರಲಿಲ್ಲ. ನೇಪಾಳದ ಪ್ರಧಾನಿ ಮೋದಿಯವರೊಂದಿಗೆ 2023 ರ ಜೂನ್‌ನಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಇದಾದ ನಂತರ ಅದಾನಿ ಗ್ರೂಪ್‌ನ ಅಧಿಕಾರಿಗಳು ನೇಪಾಳದ ನಾಗರಿಕ ವಿಮಾನಯಾನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಕಠ್ಮಂಡುಗೆ ಭೇಟಿ ನೀಡಿದರು ಎಂದು ದೇಶದ ಹಣಕಾಸು ಸಚಿವರು ತಿಳಿಸಿದ್ದಾರೆ.

ಮಲೇಷ್ಯಾ…ಸಿಂಗಾಪುರ….ವಿಯೆಟ್ನಾಂ…ತಾಂಜೇನಿಯಾ!

2017 ರ ಮಾರ್ಚ್  ತಿಂಗಳಲ್ಲಿ, ಮೋದಿಯವರು ಮಲೇಷ್ಯಾದ ಪ್ರಧಾನ ಮಂತ್ರಿ ನಜೀಬ್ ತುನ್ ರಜಾಕ್ ಅವರನ್ನು ನವದೆಹಲಿಯಲ್ಲಿ ಅತಿಥಿ ಸತ್ಕಾರ ಮಾಡಿದರು. ಇಬ್ಬರೂ ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಮತ್ತು ಭಾರತೀಯ ಉದ್ಯಮಗಳಿಂದ ಮಲೇಷ್ಯಾದಲ್ಲಿ ವ್ಯಾಪಾರ  ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಚರ್ಚಿಸಿದರು. ಒಂದು ತಿಂಗಳ ನಂತರ, ಕ್ಯಾರಿ ದ್ವೀಪದಲ್ಲಿ ಮೆಗಾ ಕಂಟೈನರ್ ಪೋರ್ಟ್ ಯೋಜನೆಯನ್ನು ಅಭಿವೃದ್ಧಿಪಡಿಸಲು ಅದಾನಿ ಗ್ರೂಪ್ ಮಲೇಷಿಯಾದ ಕಂಪನಿಯೊಂದಿಗೆ ಎಂಒಯುಗೆ ಸಹಿ ಹಾಕಿತು.

2018 ರ ಜೂನ್ ತಿಂಗಳಲ್ಲಿ, ಮೋದಿಯವರು ಸಿಂಗಾಪುರಕ್ಕೆ ಪ್ರವಾಸ ಹೋದರು, ಅಲ್ಲಿನ ಪ್ರಧಾನಿ ಲೀ ಸೀನ್ ಲೂಂಗ್ ಅವರನ್ನು ಭೇಟಿಯಾದರು. ಒಂದು ತಿಂಗಳಾದ ಮೇಲೆ, ಸಿಂಗಾಪುರದ ಸರ್ಕಾರಿ ಸ್ವಾಮ್ಯದ ಹೂಡಿಕೆ ಸಂಸ್ಥೆ ಟೆಮಾಸೆಕ್ ಅದಾನಿ ಪೋರ್ಟ್ಸ್‌ನಲ್ಲಿ 1,000 ಕೋಟಿ ರುಪಾಯಿಯ ಹೂಡಿಕೆ ಮಾಡಿತು.

ಮೋದಿ 2023 ರ ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ತಾಂಜಾನಿಯಾದ ಅಧ್ಯಕ್ಷ್ಯೆ ಸಮಿಹಾ ಸುಲುಹು ಅವರ ಅತಿಥಿ ಸತ್ಕಾರ ಮಾಡಿದರು. ಎಂಟು ತಿಂಗಳ ನಂತರ, 2024 ರ ಮೇ ತಿಂಗಳಲ್ಲಿ, ದಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ ಅನ್ನು ನಿರ್ವಹಿಸಲು ಅದಾನಿ ಗ್ರೂಪ್ಸ್‌ 30 ವರ್ಷಗಳ ರಿಯಾಯಿತಿ ಒಪ್ಪಂದವನ್ನು ಪಡೆದುಕೊಂಡಿತು . ಟರ್ಮಿನಲ್ ಸೇವೆಗಳನ್ನು ಒದಗಿಸುವ ಕಂಪನಿಯಲ್ಲಿ 95% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಇದು ಅಬುಧಾಬಿಯ ಎಡಿ ಪೋರ್ಟ್ಸ್ ಗುಂಪಿನೊಂದಿಗೆ ಜಂಟಿ ಉದ್ಯಮವನ್ನು ಮಾಡಿಕೊಂಡಿತು.

It was an honour to meet the charismatic President of the United Republic of Tanzania, Her Excellency @SuluhuSamia. Fascinating to hear her deep insights about the future of Africa and discuss the possibilities for forging a long-term partnership with one of Africa's most… pic.twitter.com/mhUQ19clr6
— Gautam Adani (@gautam_adani) June 14, 2024

Had an excellent meeting with President @SuluhuSamia. We reviewed the full range of India-Tanzania relations and have elevated our time-tested relation to a Strategic Partnership. The areas of our discussion included trade, commerce and people-to-people linkages. pic.twitter.com/ovGfUyDTa3
— Narendra Modi (@narendramodi) October 9, 2023

ಮೊನ್ನೆ ಮೊನ್ನೆ, ಅಂದರೆ 2024 ರ ಜುಲೈ-ಆಗಸ್ಟ್‌ನಲ್ಲಿ ವಿಯೆಟ್ನಾಂನ ಪ್ರಧಾನಿ ಫಾಮ್ ಮಿನ್ಹ್ ಚಿನ್ಹ್ ಅವರು ದೆಹಲಿಗೆ ಬಂದರು. ಅವರು ಮೋದಿಯನ್ನು ಭೇಟಿಯಾದ ಅದೇ ದಿನ, ಅವರು ಗೌತಮ್ ಅದಾನಿಯನ್ನೂ ಭೇಟಿ ಮಾಡಿದರು, ಆಗ ವಿಯೆಟ್ನಾಂನಲ್ಲಿ ಎರಡು ವಿಮಾನ ನಿಲ್ದಾಣಗಳಲ್ಲಿ ಹೂಡಿಕೆ ಮಾಡಲು ಅದಾನಿ ಗ್ರೂಪನ್ನು ಪರಿಗಣಿಸುತ್ತಿದ್ದೇವೆ ಎಂದು ಘೋಷಿಸಿದರು. ಬಂದರು ನಿರ್ಮಿಸುವ ಅದರ ಯೋಜನೆಗಳ ಭಾಗವಾಗಿ  ಈ ಒಪ್ಪಂದಕ್ಕೆ ಅನುಮೋದನೆಯನ್ನು ನೀಡಿದೆ.

2017 ರ ಜುಲೈನಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು. ಇಸ್ರೇಲ್‌ಗೆ ಬೇಟಿ ನೀಡಿದ ಮೊದಲ ಪ್ರಧಾನಿಯಾದರು. ಇವರ ಮೊದಲ ಬೇಟಿಯ ನಂತರ ಅದಾನಿ ಗ್ರೂಪ್ ಇಸ್ರೇಲ್‌ನೊಂದಿಗೆ ಮಹತ್ವದ ವ್ಯಾಪಾರಗಳನ್ನು ಕುದುರಿಸಿಕೊಂಡಿದೆ. 2018 ರ  ಜನವರಿಯಲ್ಲಿ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೆಹಲಿಗೆ ಬಂದರು. ಅದೇ ವರ್ಷ ಡಿಸೆಂಬರ್‌ನಲ್ಲಿ, ಅದಾನಿ ಗ್ರೂಪ್ ಜಂಟಿಯಾಗಿ ಇಸ್ರೇಲಿ ಸಂಸ್ಥೆ ಎಲ್ಬಿಟ್ ಸಿಸ್ಟಮ್ಸ್ ಜೊತೆಗೆ ತೆಲಂಗಾಣದಲ್ಲಿ ವೈಮಾನಿಕ ಮಿಲಿಟರಿ ಡ್ರೋನ್‌ಗಳನ್ನು ತಯಾರಿಸುವ ಸೌಲಭ್ಯ ವ್ಯವಸ್ಥೆಯನ್ನು ಉದ್ಘಾಟಿಸಿತು. 2022 ರಲ್ಲಿ, ಅದಾನಿ ಗ್ರೂಪ್ ಇಸ್ರೇಲ್‌ನ ಹೈಫಾ ಬಂದರನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತು.

Created with Datawrapper – Souce: Scroll.in

ವಿದೇಶಾಂಗ ನೀತಿ ಇರುವುದೇ ಅದಾನಿಗಾಗಿ!

ಗೌತಮ್‌ ಅದಾನಿ ಮತ್ತು ಮೋದಿಯವರು ಖಾಸಾ ದೋಸ್ತಿಗಳು. ಒಬ್ಬ ಬಿಲಿಯನೇರ್‌ ಉದ್ಯಮಿ ಪ್ರಧಾನಿಯೊಬ್ಬರ ಸೀಟಿನ ಮೇಲೆ ಅಗೋಚರವಾಗಿ ಕುಳಿತಂತೆ ಕಾಣುತ್ತದೆ. ಇಬ್ಬರೂ ಗುಜರಾತಿಗಳು. 2014 ರಲ್ಲಿ ಮೋದಿ ಪ್ರಧಾನಿಯಾದ ಮೇಲೆ ಅದಾನಿ ಗ್ರೂಪ್ ತನ್ನ ವ್ಯವಹಾರಗಳನ್ನು ಆಕ್ರಮಣಕಾರಿ ರೀತಿಯಲ್ಲಿ ವಿಸ್ತರಿಸಿಕೊಂಡಿದೆ. ಮಂಗಳೂರು ಸೇರಿದಂತೆ ಭಾರತದ ವಿಮಾನ ನಿಲ್ದಾಣಗಳು, ಬಂದರುಗಳು, ಕಲ್ಲಿದ್ದಲು ಗಣಿಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳು ಮತ್ತು ಗ್ಯಾಸ್ ಸ್ಟೇಷನ್‌ಗಳನ್ನು ತನ್ನದಾಗಿಸಿಕೊಂಡು ದೇಶ ಯಾಕೆ, ಪ್ರಪಂಚದಲ್ಲೇ ಅತಿದೊಡ್ಡ ಖಾಸಗಿ ಮಾಲೀಕನಾಗುತ್ತಿದ್ದಾರೆ.

ಭಾರತದ ವಿದೇಶಾಂಗ ನೀತಿಯನ್ನು ಬಳಸಿಕೊಂಡು ಜಾಗತಿಕವಾಗಿ ಬೆಳೆಯುತ್ತಿರುವ ಕ್ರೋನಿ ಕ್ಯಾಪಿಟಲಿಸಂನ ವಿನಾಶಕಾರಿ ಸ್ವರೂಪವನ್ನು ನೋಡಿ, ದೇಶದ ಬುದ್ದಿಜೀವಿಗಳು, ಆರ್ಥಿಕ ಚಿಂತಕರು, ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ವಿರೋಧಿಸಿದ್ದಾರೆ. 2023 ರ ಫೆಬ್ರವರಿ ತಿಂಗಳಲ್ಲಿ ಸಂಸತ್ತಿನಲ್ಲಿ ಮಾತನಾಡುತ್ತಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಇದು ಭಾರತದ ವಿದೇಶಾಂಗ ನೀತಿಯಲ್ಲ. ಇದು ಅದಾನಿ ಜಿಯವರ ವಿದೇಶಾಂಗ ನೀತಿ,” ಎಂದು ಟೀಕಿಸಿದ್ದರು.

ಕಳೆದ ವರ್ಷ ಅಮೆರಿಕದ ಶಾರ್ಟ್-ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ಸ್‌ ಮಾಡಿರುವ ಕಾರ್ಪೊರೇಟ್ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪಗಳು ಜಾಗತಿಕ ಚರ್ಚೆಯಾದ ಮೇಲೆ ಅದಾನಿ-ಮೋದಿ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಲು ಆರಂಭವಾಗಿವೆ.

ಇತ್ತೀಚೆಗೆ ಸ್ವಿಸ್‌ನ ಅಧಿಕಾರಿಗಳು ಅದಾನಿ ಗ್ರೂಪ್ ಪರವಾಗಿ ಹಣವನ್ನು ಲಾಂಡರಿಂಗ್ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿ ತೈವಾನ್ ಮೂಲದ ವ್ಯಕ್ತಿಯೊಬ್ಬನ 311 ಮಿಲಿಯನ್ ಡಾಲರ್‌ ಹಣ ಹೊಂದಿದ್ದ ಖಾತೆಯನ್ನು ಅಮಾನತು ಮಾಡಿದ್ದರು. ಆದರೆ ಅದಾನಿ ಗ್ರೂಪ್ಸ್‌ ಎಂದಿನಂತೆ ಈ ಆರೋಪವನ್ನು ನಿರಾಕರಿಸಿದೆ.

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಕೇರಳ ಪೊಲೀಸ್‌ FIR
ಬೆಂಗಳೂರು,ಅಕ್ಟೋಬರ್.‌31: ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭಾನುವಾರ, ಕಲಮಸ್ಸೆರಿ ಪುರಸಭೆಯ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಕೂಟದಲ್ಲಿ ಎರಡು ದೊಡ್ಡ ಸ್ಫೋಟಗಳು ಸಂಭವಿಸಿದವು. ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಮಾವೇಶಕ್ಕೆ ರಾಜ್ಯದಾದ್ಯಂತ ಸುಮಾರು 2,500 ಯೆಹೋವನ ಸಾಕ್ಷಿಗಳು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಸ್ಫೋಟಗಳು ಸಂಭವಿಸಿದವು.

ಇದರ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದಂತೆ, ಚಂದ್ರಶೇಖರ್ X ಪೋಸ್ಟ್‌ನಲ್ಲಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವದೆಹಲಿಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, “ಜಿಹಾದ್‌ಗಾಗಿ ಭಯೋತ್ಪಾದಕ ಹಮಾಸ್‌ನ ನೀಡಿದ ಕರೆ ಮುಗ್ಧ ಕ್ರಿಶ್ಚಿಯನ್ನರ ಮೇಲಿನ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿದೆ” ಎಂದು ಟ್ವೀಟ್‌ ಮಾಡಿದ್ದರು.

ಈ ಸ್ಫೋಟ ಸಂಭವಿಸುವ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್ ಗಾಜಾ ಮೇಲಿನ ಇಸ್ರೇಲ್‌ನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಕೋರಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಚಂದ್ರಶೇಖರ್, “ಕೊಳಕು, ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ” ಪಿಣರಾಯ್‌ ವಿಜಯನ್ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನ್ ಮೂಲಭೂತವಾದಿಗಳ ವಿರುದ್ಧ ಸಹಿಷ್ಣುತೆ ತೋರಿದ್ದಾರೆ ಎಂದು ಕಿಡಿಕಾರಿದ್ದರು.

ಅಕ್ಟೋಬರ್ 27 ರಂದು ಮಲಪುರಂನಲ್ಲಿ ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಪ್ಯಾಲಿಸ್ತೇನ್ ಪರ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹಮಾಸ್‌ನ ಮಾಜಿ ಮುಖ್ಯಸ್ಥ ಖಲೀದ್ ಮಶಾಲ್ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು ವರದಿಯಾಗಿತ್ತು.

ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಲ್ಲಿ ಒಂದಾದ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಪ್ಯಾಲೇಸ್ಟಿನಿಯನ್ ಹೋರಾಟಗಾರರನ್ನು ಪ್ರಪಂಚದಾದ್ಯಂತದ ಜನರು ಬೆಂಬಲಿಸಬೇಕು ಎಂದು ಮಶಾಲ್ ಭಾಷಣದಲ್ಲಿ ಹೇಳಿದ್ದರು.

“ಇಸ್ರೇಲ್ ನಮ್ಮ ನಿವಾಸಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಮನೆಗಳನ್ನು ಕೆಡವಲಾಗುತ್ತಿದೆ. ಅವರು ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ನಾಶಪಡಿಸಿದ್ದಾರೆ. ಅವರು ಚರ್ಚುಗಳು, ದೇವಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿಶ್ವಸಂಸ್ಥೆಯ ಕಟ್ಟಡಗಳನ್ನೂ ನಾಶಪಡಿಸುತ್ತಿದ್ದಾರೆ. ಈ ದಾಳಿಯ ಗಾಜಾವನ್ನು ಇಲ್ಲವಾಗಿಸುವುದೇ ಇದರ ಅರ್ಥ, ಮತ್ತು ಅವರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಗಾಜಾದಲ್ಲಿನ ಹೋರಾಟಗಾರರು ಅವರನ್ನು ತಮ್ಮ ಮಿಲಿಟರಿಯಿಂದ ಸೋಲಿಸಿದ್ದಾರೆ,” ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.

ಪ್ಯಾಲಿಸ್ತೇನ್ ಹಿತಾಸಕ್ತಿಗಳನ್ನು ಸಮರ್ಥಿಸುವ ಸೋಗಿನಲ್ಲಿ ಸಂಘಟಕರು ಹಮಾಸನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ತನಿಖೆಗೆ ಕರೆ ಆಗ್ರಹಿಸಿತ್ತು.

ಇದಾದ ನಂತರ, ಸೋಮವಾರ, ಪಿಣರಾಯ್‌ ವಿಜಯನ್ ಹಮಾಸ್ ನಾಯಕನ ಭಾಷಣವನ್ನು ಪೊಲೀಸರು ಪರಿಶೀಲಿಸುತ್ತಾರೆ ಮತ್ತು ರಾಜೀವ್‌ ಚಂದ್ರಶೇಖರ್ ಅವರನ್ನು “ಅತ್ಯಂತ ವಿಷಕಾರಿ” ಎಂದು ಟೀಕಿಸಿದ್ದು ಪಿಟಿಐಯಲ್ಲಿ ವರದಿಯಾಗಿತ್ತು.