bigg boss – Peepal Media

ಬಿಗ್ ಬಾಸ್ ಸ್ಪರ್ಧಿಗಳಿಗೆ ಗಾಯ! ಸರಣಿಯಿಂದ ಹೊರಗುಳಿಯುತ್ತಾರಾ ಸಂಗೀತ ಶೃಂಗೇರಿ, ಪ್ರತಾಪ್?
ಬಿಗ್ ಬಾಸ್ ಸರಣಿಯಲ್ಲಿ ಈ ಬಾರಿಯ ಕನ್ನಡದ ಬಿಗ್ ಬಾಸ್ 10 ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಶುರುವಿನಲ್ಲಿ ಹುಲಿಯುಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರೆ, ಇನ್ನೊಂದು ದಿನ ಜಾತಿ ನಿಂದನೆ ಆರೋಪದ ಅಡಿಯಲ್ಲಿ ನಟಿ ತನಿಶಾ ಕುಪ್ಪಂಡ ಹೆಚ್ಚು ಸುದ್ದಿ ಮಾಡಿದ್ದರು.

ಆ ವಿವಾದಗಳ ನಂತರ ಈಗ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ಟಾಸ್ಕ್ ನಲ್ಲಿ ನಟಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗೆ ಗಂಭೀರ ಗಾಯಗಳಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಟಾಸ್ಕ್ ನಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಗಾಳಿ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ ನಡುವೆ ಬಿಗ್ ಬಾಸ್ ನಲ್ಲಿ ಎರಡು ಗುಂಪುಗಳಾಗಿದ್ದು, ತಂಡದ ಸದಸ್ಯರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮಟ್ಟಕ್ಕೆ ಈಗ ಬಿಗ್ ಬಾಸ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗದರಿಸುವುದು, ತಳ್ಳಾಟ, ನೂಕಾಟ, ಹೆಣ್ಣು ಮಕ್ಕಳ ನಿಂಧನೆ, ವಯಕ್ತಿಕ ವಿಚಾರದ ಬಗ್ಗೆ ವಿವಾದಿತ ಚರ್ಚೆಯ ಕಾರಣಕ್ಕೆ ಈ ಬಾರಿಯ ಬಿಗ್ ಬಾಸ್ ಹೆಚ್ಚು ಸುದ್ದಿಯಲ್ಲಿದೆ.

ಕೆಲವೇ ದಿನಗಳ ಹಿಂದೆ ನಟಿ ಕಾವ್ಯ ಶಾಸ್ತ್ರಿ ಬಿಗ್ ಬಾಸ್ ನೋಡದೇ ಇದ್ದರೆ ಒಳಿತು, ಅಷ್ಟೆ ಅಲ್ಲದೆ ಚಿಕ್ಕ ಮಕ್ಕಳಿಗೆ ಈ ಬಾರಿಯ ಬಿಗ್ ಬಾಸ್ ತೋರಿಸಿದರೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ನಿರಾಸೆ ಮೂಡಿಸಿದೆ ಎಂದು ಸ್ವತಃ ಬಿಗ್ ಬಾಸ್ ಹಿಂದಿನ ಸರಣಿಯಲ್ಲಿ ಸ್ಪರ್ಧಿಯೂ ಆಗಿದ್ದ ಕಾವ್ಯ ಶಾಸ್ತ್ರಿ ಹೇಳಿದ್ದರು.

ಜಾತಿ ನಿಂದನೆ : ಬಿಗ್ ಬಾಸ್ ಸ್ಪರ್ಧಿ ತನಿಶಾ ವಿರುದ್ಧ FIR ದಾಖಲಿಸಿದ ಪೊಲೀಸರು
ಕನ್ನಡದ ಬಿಗ್ ಬಾಸ್ ಸೀಜನ್ 10 ಈ ಬಾರಿ ಒಂದಿಲ್ಲೊಂದು ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದೆ. ಇಲ್ಲಿಯವರೆಗೆ ಬಿಗ್ ಬಾಸ್ ಮನೆಯ ಒಳಗಿನ ಕೆಲವು ವಿಚಾರಕ್ಕೆ ಸುದ್ದಿಯಾದರೆ, ಈ ಬಾರಿ ಮನೆಯ ಹೊರಗೆ ಆದ ವಿವಾದಗಳಿಗೆ ಹೆಚ್ಚು ಸುದ್ದಿಯಾಗುತ್ತಿದೆ.

ಹುಲಿಯುಗುರು ಪ್ರಕರಣಕ್ಕೆ ವರ್ತೂರು ಸಂತೋಷ್ ಅರೆಸ್ಟ್ ಆದರೆ ಈಗ ಜಾತಿ ನಿಂದನೆಯ ಆರೋಪಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ತನಿಶಾ ವಿರುದ್ಧ FIR ದಾಖಲಾಗಿದೆ, ಹಾಗೂ ಪ್ರತಾಪ್ ಮೇಲೆ ಪ್ರಕರಣ ದಾಖಲಾಗಿ ವಿಚಾರಣೆ ಎದುರಿಸಿದ್ದಾರೆ. ಆ ಮೂಲಕ ಬಿಗ್ ಬಾಸ್​ ಮನೆಯ ಸ್ಪರ್ಧಿ ವಿರುದ್ಧ ದಾಖಲಾದ ಎರಡನೇ ಪ್ರಕರಣ ಇದಾಗಿದೆ.

ಇತ್ತೀಚಿನ ಸಂಚಿಕೆಯೊಂದರಲ್ಲಿ ನಟಿ ತನಿಷಾ ಹಾಗೂ ಡ್ರೋನ್​ ಪ್ರತಾಪ್ ನಡುವೆ ನಡೆದ ವಾಗ್ವಾದದಲ್ಲಿ ಬೋವಿ ಜನಾಂಗದ ಬಗ್ಗೆ ಅವಮಾನಕರ ಪದ ಬಳಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವವರು ಕುಂಬಳಗೋಡು ಪೊಲೀಸ್​ ಠಾಣೆಯಲ್ಲಿ ಜಾತಿ ನಿಂದನೆ (Atrocity), ಎಸ್​ಸಿ-ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಸಂಚಿಕೆಯೊಂದಲ್ಲಿ ತನಿಶಾ, ವಡ್ಡ ಎಂಬ ಪದ ಬಳಸುವ ಮೂಲಕ ಭೋವಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದೂ ಸಹ ಅಪಮಾನ ಮಾಡಲಾಗಿದೆ. ತನಿಷಾ ಅವರನ್ನು ಈ ಕೂಡಲೇ ಬಿಗ್​ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಪೊಲೀಸರು ತನಿಷಾರನ್ನು ಬಂಧಿಸಬೇಕು ಎಂದು ಸಮುದಾಯದ ಮುಖ್ಯಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಹಿನ್ನೆಲೆಯಲ್ಲಿ ತನಿಶಾ ಈಗ ಪ್ರಕರಣ ಎದುರಿಸಬೇಕಾಗಿದೆ.

ಈಗಾಗಲೇ ಕುಂಬಳಗೋಡು ಪೊಲೀಸರು ಬಿಗ್ ಬಾಸ್ ಸೆಟ್ ಗೆ ಹೋಗಿ ಪ್ರತಾಪ್ ಹಾಗೂ ತನಿಶಾ ಅವರನ್ನು ವಿಚಾರದಲ್ಲಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ತನಿಶಾ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೆಯೇ ರಿಯಾಲಿಟಿ ಶೋ ಸೆಟ್ ಕಡೆಯಿಂದ ತನಿಶಾ ಹಾಗೂ ಪ್ರತಾಪ್ ಅವರ ಧ್ವನಿ ಮುದ್ರಿಕೆಯನ್ನು ಪೊಲೀಸರು ಸಂಪಾದಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್!
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿ ಒಬ್ಬರು ಅರೆಸ್ಟ್ ಆಗಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ವರ್ತೂರು ಸಂತೋಷ್ ವಿರುದ್ಧ ಹುಲಿ ಉಗುರು ಧರಿಸಿರುವ ಆರೋಪ ಕೇಳಿ ಬಂದಿದೆ. ಬಿಗ್‌ಬಾಸ್ ಮನೆಗೆ ಏಕಾಏಕಿಯಾಗಿ ಎಂಟ್ರಿಕೊಟ್ಟ ಅರಣ್ಯಾಧಿಕಾರಿಗಳು ಸಂತೋಷ್‌ನನ್ನು ಬಂಧಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಆರೋಪಿಯನ್ನು ಕರೆದುಕೊಂಡು ಹೋಗಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರಾಮೋಹಳ್ಳಿ ಅರಣ್ಯಾಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಸಂತೋಷ್ ನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂತೋಷ್ ಅವರು ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕುರಿತು ವ್ಯಕ್ತಿಯೊಬ್ಬರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.