Bilkis Bano – Peepal Media

ಬಿಲ್ಕಿಸ್ ಬಾನು ಪ್ರಕರಣ: ಎರಡೇ ವಾರಕ್ಕೆ ಪೆರೋಲ್ ಮೇಲೆ ಹೊರ ಬಂದ ಅಪರಾಧಿ
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಎರಡು ವಾರದ ಹಿಂದೆ ಮರಳಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ, ಇದೀಗ ಅವರಲ್ಲೋರ್ವನಾದ ಪ್ರದೀಪ್ ಮೋಧಿಯಾನನ್ನು ಐದು ದಿನಗಳ ಪರೋಲ್‌ನಲ್ಲಿ ಬುಧವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ಪ್ರದೀಪ್ ಮೋಧಿಯಾನ ಮಾವ ನಿಧನರಾಗಿದ್ದು, ಗುಜರಾತಿನ ದಾಹೋಡ್ ಜಿಲ್ಲೆಯ ರಂಧಿಕಪುರದ ತನ್ನ ಸ್ವಗ್ರಾಮಕ್ಕೆ ಮರಳಲು ಗುಜರಾತ ಉಚ್ಚ ನ್ಯಾಯಾಲಯವು ಆತನಿಗೆ ಪರೋಲ್ ಮಂಜೂರು ಮಾಡಿದೆ.
ಮೋಧಿಯಾ 30 ದಿನಗಳ ಪರೋಲ್‌ನ್ನು ಕೋರಿದ್ದ. ತನ್ನ ಕಕ್ಷಿದಾರ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಸಕಾಲದಲ್ಲಿ ಜೈಲಿಗೆ ಮರಳಿದ್ದಾನೆ ಮತ್ತು ಜೈಲಿನಲ್ಲಿ ಆತನ ನಡವಳಿಕೆಯೂ ಉತ್ತಮವಾಗಿತ್ತು ಎಂದು ಮೋಧಿಯಾ ಪರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.

ಪರೋಲ್ ಷರತ್ತುಗಳಂತೆ ಮೋಧಿಯಾ ರಂಧಿಕಪುರ ಪೋಲಿಸ್ ಠಾಣೆಗೆ ವರದಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪರೋಲ್ ಅವಧಿಯಲ್ಲಿ ಜಿಲ್ಲೆಯ ಪೋಲಿಸರು ಯಾವುದೇ ಎಚ್ಚರಿಕೆ ವಹಿಸಬೇಕಿಲ್ಲ. ಆತ ಸ್ವಯಂ ಜೈಲಿಗೆ ಮರಳುವ ನಿರೀಕ್ಷೆಯಿದೆ ಎಂದು ದಾಹೋಡ್‌ನ ಲಿಮಖೇಡಾ ಡಿಎಸ್‌ಪಿ ವಿಶಾಖಾ ಜೈನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
2022,ಆ.15ರಂದು ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಅಪರಾಧಿಗಳು ಜ.21ರಂದು ತಡರಾತ್ರಿ ಶರಣಾಗಿದ್ದರು.

ಎಲ್ಲ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸುವ ಗುಜರಾತ್ ಸರಕಾರದ ವಿವಾದಾತ್ಮಕ ನಿರ್ಧಾರಕ್ಕೆ ಮುನ್ನ 2008,ಜನವರಿಯಿಂದ ತನ್ನ ಜೈಲುವಾಸದ ಅವಧಿಯಲ್ಲಿ ಮೋಧಿಯಾನನ್ನು ಪರೋಲ್‌ನಲ್ಲಿ 1,041 ಮತ್ತು ಫರ್ಲೋದಲ್ಲಿ 223 ದಿನಗಳ ಅವಧಿಗೆ ಬಿಡುಗಡೆಗೊಳಿಸಲಾಗಿತ್ತು.

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸುವ ನಿರ್ಧಾರಕ್ಕಾಗಿ ಕಳೆದ ಜನವರಿಯಲ್ಲಿ ಗುಜರಾತ್ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,ಅದರ ನಿರ್ಧಾರವನ್ನು ರದ್ದುಗೊಳಿಸಿತ್ತು ಮತ್ತು ನಿಗದಿತ ಗಡುವಿನೊಳಗೆ ಜೈಲಿಗೆ ಮರಳುವಂತೆ ಅಪರಾಧಿಗಳಿಗೆ ಆದೇಶಿಸಿತ್ತು.
ಜೈಲಿನಲ್ಲಿದ್ದಾಗ ಹಲವು ಬಾರಿ ಪರೋಲ್ ಪಡೆದು ಹೊರಗೆ ಬಂದಿದ್ದ ಅಪರಾಧಿಗಳು ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ್ದರು. ಅವರ ಅವಧಿಪೂರ್ವ ಬಿಡುಗಡೆಗೆ ಮಾನವ ಹಕ್ಕುಗಳ ಕಾರ್ಯಕರ್ತರು,ಕಾನೂನು ತಜ್ಞರು,ಇತರರು ಮತ್ತು ಸ್ವತಃ ಬಿಲ್ಕಿಸ್ ಬಾನು ಆಘಾತ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಲ್ಕಿಸ್ ಪ್ರಕರಣದ ಆರೋಪಿಗಳ ಶರಣಾಗತಿಯ ಬಗ್ಗೆ ಇನ್ನೂ ಮಾಹಿತಿ ಇಲ್ಲ: ಪೊಲೀಸರು
ದಾಹೋದ್ (ಗುಜರಾತ್), ಜನವರಿ 9: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳ ಶರಣಾಗತಿ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ, ಆದರೆ ಗುಜರಾತ್ ಸರ್ಕಾರದ ಕ್ಷಮಾದಾನವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಅವರು ವಾಸಿಸುವ ಪ್ರದೇಶದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

2002ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್ ಬಾನೊ ಮತ್ತು ಆಕೆಯ ಏಳು ಕುಟುಂಬ ಸದಸ್ಯರನ್ನು ಹತ್ಯೆಗೈದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು “ಘೋರ ಅಪರಾಧ” ಕುರಿತು ಸುಪ್ರೀಂ ಕೋರ್ಟ್ ಏನು ಹೇಳಿದೆ ಎಂಬುದನ್ನು ನೆನಪಿನಲ್ಲಿಡಿ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಕರಣದ 11 ಅಪರಾಧಿಗಳು ಶಿಕ್ಷೆಯ ವಿನಾಯತಿ ವಿನಂತಿಯೊಂದಿಗೆ ಮಹಾರಾಷ್ಟ್ರ ಸರ್ಕಾರವನ್ನು ಸಂಪರ್ಕಿಸಬಹುದು ಇಂತಹ ಅಪರಾಧಗಳನ್ನು ಸಮಾಜ ಒಪ್ಪುವುದಿಲ್ಲ ಎಂದರು

ಆದಾಗ್ಯೂ, ಅಪರಾಧಿಗಳು “ಸಂಪರ್ಕವಿಲ್ಲದವರಲ್ಲ” ಮತ್ತು ಅವರಲ್ಲಿ ಕೆಲವರು ಸಂಬಂಧಿಕರನ್ನು ಭೇಟಿ ಮಾಡುತ್ತಿದ್ದಾರೆ ಎಂದು ದಾಹೋದ್ ಪೊಲೀಸ್ ವರಿಷ್ಠಾಧಿಕಾರಿ ಬಲರಾಮ್ ಮೀನಾ ಹೇಳಿದ್ದಾರೆ. “ಪೊಲೀಸರಿಗೆ ಯಾವುದೇ ಮಾಹಿತಿ ಬಂದಿಲ್ಲ (ಅವರ ಶರಣಾಗತಿಯ ಬಗ್ಗೆ), ಮತ್ತು (ಸುಪ್ರೀಂ ಕೋರ್ಟ್) ತೀರ್ಪಿನ ಪ್ರತಿ ನಮಗೆ ಬಂದಿಲ್ಲ. ಅಪರಾಧಿಗಳು ಸಿಂಗ್ವಾಡ್ ತಾಲೂಕಿನ ಸ್ಥಳೀಯರಾಗಿದ್ದು, ಸೋಮವಾರ ಬೆಳಿಗ್ಗೆಯಿಂದ ಪೊಲೀಸರು ತೀರ್ಪು ಪ್ರಕಟಿಸುವ ಮೊದಲು ನಿಯೋಜಿಸಲಾಗಿತ್ತು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಕೋಮು ಸಂಘರ್ಷ ಭುಗಿಲೆದ್ದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು” ಎಂದು ಅವರು ಹೇಳಿದರು.

“ಅಪರಾಧಿಗಳು ಅಪರಿಚಿತರಲ್ಲ, ಮತ್ತು ಅವರಲ್ಲಿ ಕೆಲವರು ತಮ್ಮ ಸಂಬಂಧಿಕರನ್ನು ಭೇಟಿ ಮಾಡುತ್ತಿದ್ದಾರೆ. ನಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಯಾವುದೇ ಆದೇಶದ ಪ್ರತಿಯನ್ನು ಸ್ವೀಕರಿಸಿಲ್ಲ, ಆದರೆ ಇಡೀ ರಂಧಿಕ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ನಿಯೋಜಿಸಲ್ಪಟ್ಟಿದ್ದಾರೆ” ಎಂದು ಮೀನಾ ಹೇಳಿದರು.

ಗೋಧ್ರಾ ರೈಲು ದಹನ ಘಟನೆಯ ನಂತರ ಕೋಮು ಗಲಭೆಗಳು ಭುಗಿಲೆದ್ದ ನಂತರ ಪಲಾಯನ ಮಾಡುವಾಗ 21 ವರ್ಷ ಮತ್ತು ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನೋ ಅತ್ಯಾಚಾರಕ್ಕೊಳಗಾದರು. ಆಕೆಯ ಮೂರು ವರ್ಷದ ಮಗಳು ಮತ್ತು ಇತರ ಆರು ಕುಟುಂಬ ಸದಸ್ಯರು ಕೊಲ್ಲಲ್ಪಟ್ಟರು.

ಗುಜರಾತ್ ಸರ್ಕಾರ ತನ್ನ ವಿವೇಚನೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಅವರಿಗೆ ನೀಡಲಾದ ವಿನಾಯಿತಿಯನ್ನು ರದ್ದುಗೊಳಿಸಿದೆ. 2022ರ ಸ್ವಾತಂತ್ರ್ಯ ದಿನದಂದು ಅಕಾಲಿಕವಾಗಿ ಬಿಡುಗಡೆಯಾದ ಎಲ್ಲಾ ಅಪರಾಧಿಗಳನ್ನು ಎರಡು ವಾರಗಳಲ್ಲಿ ಮತ್ತೆ ಜೈಲಿಗೆ ಕಳುಹಿಸುವಂತೆ ಅದು ಆದೇಶಿಸಿದೆ.

bilkis bano,bilkis bano case,bilkis bano verdict,supreme court on bilkis bano case,bilkis bano rape case,bilkis bano news,bilkis bano case today,bilkis bano gujarat case,bilkis bano gangrape,bilkis bano gang rape case,bilkis bano hearing,bilkis bano case 2002,survivor bilkis bano,bilkis bano gang rape,bilkis bano case kya hai,bilkis bano gangrape case,supreme court on bilkis bano,bilkis bano bano rape case verdict,bilkis bano rape

ಬಿಲ್ಕಿಸ್ ಬಾನು ತೀರ್ಪು : ನ್ಯಾಯಾಂಗದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಿದೆ
2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಿಲ್ಕಿಸ್ ಬಾನು ಕುಟುಂಬದ ಸದಸ್ಯರ ಹತ್ಯೆಗೆ ಕಾರಣರಾದ ಪುರುಷರ ಅಕಾಲಿಕ ಬಿಡುಗಡೆಗೆ ಗುಜರಾತ್ ಸರ್ಕಾರ ಅನುಕೂಲ ಮಾಡಿಕೊಟ್ಟಿತ್ತು. ಈ ಬಗ್ಗೆ ಗುಜರಾತ್ ನ ಭಾರತೀಯ ಜನತಾ ಪಕ್ಷದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ತನಿಖೆಯನ್ನು ಗುಜರಾತ್ ಪೋಲೀಸರಿಂದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಗೆ ವರ್ಗಾಯಿಸಲಾಗಿತ್ತು. ಇದರ ವಿಚಾರಣೆಯನ್ನು ಮುಂಬೈ ಗೆ ವರ್ಗಾಯಿಸಿದ ನಂತರ ಮುಂಬೈ ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಪರಾಧಿಗಳನ್ನು ಬಿಡುಗಡೆಗೊಳಿಸಿ ಅವರೊಂದಿಗೆ ವೇದಿಕೆ ಹಂಚಿಕೊಂಡು,ಅಪರಾಧಿಗಳಿಗೆ ಹಾರ ಹಾಕಿ ಸನ್ಮಾನಿಸಿದ್ದ ಅವಮಾನಕರ ಘಟನೆಗೆ, ಇದೀಗ ನ್ಯಾಯಾಲಯವು ಅವರನ್ನು ಎರಡು ವಾರಗಳಲ್ಲಿ ಜೈಲಿಗೆ ಮರಳುವಂತೆ ನಿರ್ದೇಶಿಸಿರುವುದರೊಂದಿಗೆ ಕೊನೆಗೊಂಡಿದೆ.

ಮಹಾರಾಷ್ಟ್ರದಲ್ಲಿ ಶಿಕ್ಷೆಗೆ ಒಳಗಾದ ಅಪರಾಧಿಗಳಿಗೆ ವಿನಾಯಿತಿ ನೀಡಲು ಗುಜರಾತ್ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಅಪರಾಧಿಗಳಿಗೆ ಅಗ್ಗಾಗ್ಗೆ ಪೆರೋಲ್ ಗಳನ್ನು ನೀಡಬಾರದು, ಎರಡು ವಾರಗಳಲ್ಲಿ ಅಪರಾಧಿಗಳು ಹಾಜರಾಗಬೇಕು, ವಿಫಲವಾದರೆ ಗುಜರಾತ್ ಪೋಲಿಸರು ಅವರನ್ನು ಹುಡುಕಬೇಕಾಗುತ್ತದೆ ಎಂದು ನೀಡಿರುವ ತೀರ್ಪು ನ್ಯಾಯಾಂಗದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಿದೆ.

ಪ್ರಬಲ ರಾಜಕೀಯದ ವಿರುದ್ಧ ಒಂಟಿ ಮಹಿಳೆ ಕಣಕ್ಕಿಳಿದು ಹೋರಾಟ ಮಾಡುವುದು ಸುಲಭದ ಮಾತಲ್ಲ. ಈ ಯುದ್ಧದಲ್ಲಿ ಬಿಲ್ಕಿಸ್ ಬಾನುಗೆ ತಡವಾಗಿಯಾದರೂ ನ್ಯಾಯ ದೊರಕಿದೆ.

“ಯುದ್ದವು ಕಠಿಣವಾಗಿತ್ತು ಆದರೆ ಬಿಲ್ಕಿಸ್ ಬಾನು ಛಲ ಬಿಡದೇ ಶಕ್ತಿಯ ಸ್ತಂಭದಂತೆ ಹೋರಾಡಿದರು” ಎಂದು ಬಿಲ್ಕಿಸ್ ಬಾನು ಅವರ ವಕೀಲರಾದ ಶೋಭಾ ಗುಪ್ತಾ ಮಾದ್ಯಮಗಳಿಗೆ ಹೇಳಿಕೆ ನೀಡಿದರು.

ಹನ್ನೊಂದು ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ ಆರಂಭಿಕ ಬಿಡುಗಡೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಒಂದು ಗಂಟೆಯ ನಂತರ ಬಿಲ್ಕಿಸ್ ಭಾನುರವರು ಮತ್ತೆ ನಾನು ಉಸಿರಾಡುವಂತೆ ಅನಿಸುತ್ತಿದೆ. ನ್ಯಾಯವೆಂದರೆ ಇದು, ನಾನು ಸಮಾಧಾನದಿಂದ ಕಣ್ಣೀರು ಹಾಕಿದೆ, ಒಂದೂವರೆ ವರ್ಷಗಳಲ್ಲಿ ಇಂದು ಮೊದಲ ಬಾರಿ ಮುಗುಳ್ನಕ್ಕು, ಮಕ್ಕಳನ್ನು ತಬ್ಬಿಕೊಂಡೆ, ಇಂದು ನ್ಯಾಯಲಯದ ಮೇಲೆ ಭರವಸೆ ಮೂಡಿತು ಎಂದು ತಮ್ಮ ಅನಿಸಿಕೆ ಹಂಚಿಕೊಂಡಿರುವುದು ಮನಕಲಕುತ್ತದೆ.

ಮಮತಾ ಆರ್
ವಿಮರ್ಶಕರು

ʼಇವತ್ತು, ಮತ್ತೆ ಉಸಿರಾಡುತ್ತಿದ್ದೇನೆ!ʼ – ಬಿಲ್ಕಿಸ್ ಬಾನೋ ಹೃದಯಸ್ಪರ್ಶಿ ಪತ್ರ!
ಬಿಲ್ಕಿಸ್ ಬಾನೊ ಅವರು ಒಂದೂವರೆ ವರ್ಷಗಳ ನಂತರ ಮೊದಲ ಬಾರಿಗೆ ಮುಗುಳ್ನಗೆ ಸೂಸಿದ್ದಾರೆ. 2002 ರ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿ, ತನ್ನ ಕುಟುಂಬ ಸದಸ್ಯರನ್ನು ಕೊಂದ ಪಾಪಿಗಳನ್ನು ಬಿಡುಗಡೆ ಮಾಡಿದ್ದು, ಬಹುಶಃ ಎಷ್ಟು ದೊಡ್ಡ ಶಾಕ್‌ ಹಾಗೂ ಭಯವನ್ನು ಸೃಷ್ಟಿಸಿರಬಹುದು ಯೋಚಿಸಿ. ಈಗ ಸುಪ್ರೀಂ ಕೋರ್ಟ್ ತೀರ್ಪು ಅವರಿಗೆ ಆತ್ಮ ಸಂತೋಷವನ್ನು ತಂದಿದೆ. ಇವರು ತಮ್ಮ ವಕೀಲೆ ಶೋಭಾ ಗುಪ್ತಾ ಮೂಲಕ ಬರೆದ ಪತ್ರದಲ್ಲಿ ಏನು ಹೇಳಿದ್ದಾರೆ ಓದಿ.

“ಇಂದು ನನಗೆ ನಿಜವಾದ ಹೊಸ ವರ್ಷ ಬಂದಿದೆ. ನಾನು ಸಮಾಧಾನದ ಕಣ್ಣೀರು ಹಾಕಿದ್ದೇನೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡು ಸಂಭ್ರಮಿಸಿದ್ದೇನೆ,” ಎಂದು ಬಾನೊ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ವಿಭಾಗೀಯ ಪೀಠವು ಜನವರಿ 8, ಸೋಮವಾರ ಗರ್ಭಿಣಿ ಬಾನೊ ಮೇಲೆ ಅತ್ಯಾಚಾರ ಎಸಗಿ ಕುಟುಂಬದ 14 ಮಂದಿಯನ್ನು ಅಮಾನುಷವಾಗಿ ಕೊಂದ 11 ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆ ಮಾಡುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇಲ್ಲ ಎಂದು ಹೇಳಿದೆ.

“ನನ್ನ ಎದೆಯ ಮೇಲಿದ್ದ ಬೆಟ್ಟ ಗಾತ್ರದ ಕಲ್ಲನ್ನು ಎತ್ತಿ ಎಸೆದಂತೆ ಭಾಸವಾಗುತ್ತಿದೆ. ನಾನು ಮತ್ತೆ ಉಸಿರಾಡುತ್ತೇನೆ. ಇದು ನ್ಯಾಯಯುತ ಭಾವನೆ. ನನಗೆ, ನನ್ನ ಮಕ್ಕಳು ಮತ್ತು ಮಹಿಳೆಯರಿಗೆ ಎಲ್ಲೆಡೆ, ಎಲ್ಲರಿಗೂ ಸಮಾನ ನ್ಯಾಯದ ಭರವಸೆಯನ್ನು ನೀಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಾನು ಧನ್ಯವಾದ ಹೇಳುತ್ತೇನೆ,” ಎಂದು ಹೇಳಿದ್ದಾರೆ.

ಈ ಸಂಕಷ್ಟದ ಹಾದಿಯಲ್ಲಿ ತನ್ನ ಪಕ್ಕವೇ ಇದ್ದು ಧೈರ್ಯ ತುಂಬಿದ ತಮ್ಮ ಪತಿಗೆ, ತಮ್ಮ ಸ್ನೇಹಿತರಿಗೆ “ಪ್ರತಿ ಕಷ್ಟದ ತಿರುವಿನಲ್ಲಿ ತನ್ನ ಕೈಯನ್ನು ಹಿಡಿದಿದ್ದಕ್ಕಾಗಿ” ಧನ್ಯವಾದ ಹೇಳಿದ್ದಾರೆ. ನ್ಯಾಯಾಂಗದ ಮೇಲೆ ಎಂದಿಗೂ ಬರವಸೆ ಕಳೆದುಕೊಳ್ಳದಂತೆ ಮಾಡಿದ ತಮ್ಮ ವಕೀಲರಾದ ಗುಪ್ತಾ ಅವರಿಗೆ ಬಾನೋ ಧನ್ಯವಾದ ಅರ್ಪಿಸಿದ್ದಾರೆ.

“ಒಂದೂವರೆ ವರ್ಷಗಳ ಹಿಂದೆ, ಆಗಸ್ಟ್ 15, 2022 ರಂದು, ನನ್ನ ಕುಟುಂಬವನ್ನು ನಾಶಪಡಿಸಿದ ಮತ್ತು ನನ್ನ ಅಸ್ತಿತ್ವವನ್ನು ಅಲುಗಾಡಿಸಿದವರಿಗೆ ಆರಂಭಿಕ ಬಿಡುಗಡೆಯನ್ನು ನೀಡಿದಾಗ, ನಾನು ಕುಸಿದು ಬಿದ್ದಿದ್ದೆ. ಒಂದು ಮಿಲಿಯನ್ ಐಕಮತ್ಯದ ಬೆಂಬಲ ನನ್ನ ದಾರಿಯಲ್ಲಿ ಬರುವವ ವರೆಗೆ ನನ್ನ ಧೈರ್ಯವೆಲ್ಲಾ ಮುಗಿದು ನಾನು ದಣಿದಿದ್ದೇನೆ ಎಂದುಕೊಂಡಿದ್ದೆ”

ಸಾವಿರಾರು ಸಾಮಾನ್ಯ ಜನರು ಸುಪ್ರೀಂ ಕೋರ್ಟ್‌ಗೆ ಹೋಗಿ ಒಗ್ಗಟ್ಟಿನಿಂದ ಮೇಲ್ಮನವಿಗಳು ಮತ್ತು ಬಹಿರಂಗ ಪತ್ರಗಳನ್ನು ಸಲ್ಲಿಸಿದರು. ಬಾನೊ “ನ್ಯಾಯದ ಪರಿಕಲ್ಪನೆಯನ್ನು ಉಳಿಸುವ” ಇಚ್ಛೆಯನ್ನು ಭಾರತದ ಪ್ರತಿಯೊಬ್ಬ ಮಹಿಳೆಗೆ ನೀಡಿದ್ದಾರೆ.

ಅಪರಾಧಿಗಳೆಲ್ಲಾ ಆಡಳಿತಾರೂಢ ಬಿಜೆಪಿಯ ಸದಸ್ಯರು. ಇವರಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ತಾನು ಸ್ಥಾಪಿಸಿದ ಅಧಿಕಾರಿಗಳು ಮತ್ತು ‘ಸಮಾಜಿಕ ಕಾರ್ಯಕರ್ತರು’ ಒಳಗೊಂಡ ಸಮಿತಿ ಮಾಡಿದೆ ಎಂದು ಗುಜರಾತ್ ಸರ್ಕಾರ ಹೇಳಿದೆ.

ಸೋಮವಾರ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗುಜರಾತ್ ಸರ್ಕಾರವು “ಅಪರಾಧಿಗಳ ಪರವಾಗಿ ವರ್ತಿಸಿದೆ” ಎಂದು ಹೇಳಿದೆ ಮತ್ತು ಅಪರಾಧಿಗಳು “ತಮ್ಮ ಶಿಕ್ಷೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸಾಧ್ಯವಾದರೆ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಕಡಿಮೆಯಾಗುತ್ತದೆಯಾಗಿ ಚಿಮೇರಾ…ಅಂದರೆ ಬೆಂಕಿಯುಗುಳುವ ರಕ್ಕಸನಾಗುತ್ತದೆ” ಎಂದು ಹೇಳಿದರು.

ಈ ತೀರ್ಪು ಬಂದ ನಂತರ ಕಾನೂನಿನ ಮೇಲೆ ತಮ್ಮ ನಂಬಿಕೆ ದೃಢವಾಗಿದೆ ಎಂದು ಬಾನೊ ಹೇಳಿದ್ದಾರೆ. “ಈ ತೀರ್ಪಿನ ಸಂಪೂರ್ಣ ಅರ್ಥವನ್ನು ನನ್ನ ಸ್ವಂತ ಬದುಕಿಗಾಗಿ ಮತ್ತು ನನ್ನ ಮಕ್ಕಳ ಜೀವನಕ್ಕಾಗಿ ನಾನು ಹೀರಿಕೊಳ್ಳುವಾಗ, ಇಂದು ನನ್ನ ಹೃದಯದಿಂದ ಹೊರಹೊಮ್ಮುವ ದುವಾ ಪ್ರಾರ್ಥನೆ ಇಷ್ಟೇ – ಕಾನೂನಿನ ನಿಯಮ ಎಲ್ಲರಿಗೂ ಒಂದೇ, ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು,” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಅವರ ಸಂಪೂರ್ಣ ಹೇಳಿಕೆಯನ್ನು ಗುಜರಾತ್ ಮತ್ತು ಹಿಂದಿಯಲ್ಲಿಯೂ ನೀಡಲಾಗಿತ್ತು, ಇಲ್ಲಿ ಕನ್ನಡದಲ್ಲಿ ನೀಡಲಾಗಿದೆ.

ಬಿಲ್ಕಿಸ್ ಯಾಕೂಬ್ ರಸೂಲ್ ಹೇಳಿಕೆ

ಜನವರಿ 8, 2024

2002 ರಲ್ಲಿ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ 14 ಸದಸ್ಯರನ್ನು ಹತ್ಯೆಗೈದ 11 ಮಂದಿ ಅಪರಾಧಿಗಳಿಗೆ ನೀಡಲಾಗಿದ್ದ ವಿನಾಯತಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಸುಪ್ರೀಂ ಕೋರ್ಟ್ ಪೀಠವು ರದ್ದುಗೊಳಿಸಿದೆ.

ಇಂದು ನನಗೆ ನಿಜವಾದ ಹೊಸ ವರ್ಷ ಬಂದಿದೆ. ನಾನು ಸಮಾಧಾನದ ಕಣ್ಣೀರು ಹಾಕಿದ್ದೇನೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡಿದ್ದೇನೆ. ನನ್ನ ಎದೆಯ ಮೇಲಿದ್ದ ಬೆಟ್ಟ ಗಾತ್ರದ ಕಲ್ಲನ್ನು ಎತ್ತಿ ಎಸೆದಂತೆ ಭಾಸವಾಗುತ್ತಿದೆ. ನಾನು ಮತ್ತೆ ಉಸಿರಾಡುತ್ತೇನೆ. ಇದು ನಿಜವಾದ ನ್ಯಾಯ. ನನಗೆ, ನನ್ನ ಮಕ್ಕಳು ಮತ್ತು ಮಹಿಳೆಯರಿಗೆ ಎಲ್ಲೆಡೆ, ಎಲ್ಲರಿಗೂ ಸಮಾನ ನ್ಯಾಯದ ಭರವಸೆಯನ್ನು ನೀಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಾನು ಧನ್ಯವಾದ ಹೇಳುತ್ತೇನೆ.

ನಾನು ಹಿಂದೆಯೇ ಹೇಳಿದ್ದೆ, ಈಗ ಮತ್ತೊಮ್ಮೆ ಹೇಳುತ್ತೇನೆ, ನಾನು ನಡೆದ ದಾರಿಯಲ್ಲಿ ಎಂದಿಗೂ ಏಕಾಂಗಿಯಾಗಿ ನಡೆಯಲು ಸಾಧ್ಯವಿಲ್ಲ. ನನ್ನ ಪತಿ ಮತ್ತು ನನ್ನ ಮಕ್ಕಳು ನನ್ನ ಪಕ್ಕದಲ್ಲಿಯೇ ಇದ್ದರು. ಅಂತಹ ದ್ವೇಷದ ಸಮಯದಲ್ಲಿ ನನಗೆ ತುಂಬಾ ಪ್ರೀತಿಯನ್ನು ನೀಡಿದ ನನ್ನ ಸ್ನೇಹಿತರು ನನ್ನ ಜೊತೆಗೆ ಇದ್ದಾರೆ ಮತ್ತು ಪ್ರತಿ ಕಷ್ಟದ ತಿರುವಿನಲ್ಲಿ ನನ್ನ ಕೈಯನ್ನು ಹಿಡಿದಿದ್ದಾರೆ. ನಾನು ಅಸಾಧಾರಣ ವಕೀಲರನ್ನು ಹೊಂದಿದ್ದೇನೆ, ವಕೀಲ ಶೋಭಾ ಗುಪ್ತಾ 20 ವರ್ಷಗಳ ಕಾಲ ನನ್ನೊಂದಿಗೆ ಅಚಲವಾಗಿ ನಡೆದಿದ್ದಾರೆ ಮತ್ತು ನ್ಯಾಯದ ಪರಿಕಲ್ಪನೆಯಲ್ಲಿ ನಾನು ಭರವಸೆ ಕಳೆದುಕೊಳ್ಳಲು ಅವರು ಅವಕಾಶವೇ ನೀಡಲಿಲ್ಲ.

ಒಂದೂವರೆ ವರ್ಷಗಳ ಹಿಂದೆ, ಆಗಸ್ಟ್ 15, 2022 ರಂದು, ನನ್ನ ಕುಟುಂಬವನ್ನು ನಾಶಪಡಿಸಿದ ಮತ್ತು ನನ್ನ ಅಸ್ತಿತ್ವವನ್ನು ಭಯಪಡಿಸಿದವರಿಗೆ ಆರಂಭಿಕ ಬಿಡುಗಡೆಯನ್ನು ನೀಡಿದಾಗ, ನಾನು ಕುಸಿದು ಬಿದ್ದೆ. . ಒಂದು ಮಿಲಿಯನ್ ಐಕಮತ್ಯದ ಬೆಂಬಲ ನನ್ನ ದಾರಿಯಲ್ಲಿ ಜೊತೆಯಾಗುವ ವರೆಗೆ ನನ್ನ ಧೈರ್ಯವೆಲ್ಲಾ ಮುಗಿದು ನಾನು ದಣಿದಿದ್ದೇನೆ ಎಂದುಕೊಂಡಿದ್ದೆ. ಭಾರತದ ಸಾವಿರಾರು ಜನ ಸಾಮಾನ್ಯರು ಮತ್ತು ಮಹಿಳೆಯರು ಮುಂದೆ ಬಂದರು. ನನ್ನೊಂದಿಗೆ ನಿಂತರು, ನನ್ನ ಪರವಾಗಿ ಮಾತನಾಡಿದರು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಅರ್ಜಿಗಳನ್ನು ಸಲ್ಲಿಸಿದರು. ಎಲ್ಲೆಡೆಯಿಂದ 6000 ಜನ, ಮುಂಬೈನಿಂದ 8500 ಜನ ಮನವಿಗಳನ್ನು ಬರೆದರು; ಕರ್ನಾಟಕದ 29 ಜಿಲ್ಲೆಗಳಿಂದ 40,000 ಜನರು, 10,000 ಜನರು ಮುಕ್ತ ಪತ್ರ ಬರೆದಿದ್ದಾರೆ. ಈ ಪ್ರತಿಯೊಬ್ಬರಿಗೂ, ನಿಮ್ಮ ಅಮೂಲ್ಯವಾದ ಒಗ್ಗಟ್ಟು ಮತ್ತು ಶಕ್ತಿಯನ್ನು ನನಗೆ ನೀಡಿದಕ್ಕಾಗಿ ನನ್ನ ಕೃತಜ್ಞತೆಗಳು. ನನಗೆ ಮಾತ್ರವಲ್ಲ, ಭಾರತದ ಪ್ರತಿಯೊಬ್ಬ ಮಹಿಳೆಗೂ ನ್ಯಾಯದ ಪರಿಕಲ್ಪನೆಯನ್ನು ಕಾಪಾಡಲು ನೀವು ಹೋರಾಟ ಮಾಡುವ ಇಚ್ಛೆಯನ್ನು ನನಗೆ ನೀಡಿದ್ದೀರಿ. ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನನ್ನ ಸ್ವಂತ ಜೀವನಕ್ಕಾಗಿ ಮತ್ತು ನನ್ನ ಮಕ್ಕಳ ಬದುಕಿಗಾಗಿ ಈ ತೀರ್ಪಿನ ಸಂಪೂರ್ಣ ವ್ಯಾಖ್ಯಾನವನ್ನು ನಾನು ಹೀರಿಕೊಳ್ಳುವಾಗ, ಇಂದು ನನ್ನ ಹೃದಯದಿಂದ ಹೊರಹೊಮ್ಮುವ ದುವಾ (ಪ್ರಾರ್ಥನೆ) ಸರಳ, ಇಷ್ಟೇ – ಕಾನೂನಿನ ನಿಯಮ ಎಲ್ಲರಿಗೂ ಒಂದೇ, ಎಲ್ಲಕ್ಕಿಂತ ಹೆಚ್ಚಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು.

ಬಿಲ್ಕಿಸ್ ಬಾನೋ,  ಜನವರಿ 8, 2024

(ಪತ್ರವನ್ನು ಶೋಭಾ ಗುಪ್ತಾ ಮೂಲಕ ಹಸ್ತಾಂತರಿಸಲಾಗಿದೆ)

ಬಿಲ್ಕಿಸ್‌ ಬಾನೋ ಪ್ರಕರಣ: ಗುಜರಾತ್‌ ಅತ್ಯಾಚಾರಿಗಳ ಸಹಾಯಕ್ಕೆ ಮಹಾರಾಷ್ಟ್ರದ ಕ್ಷಮಾದಾನ ನೀತಿ ಸಹಾಯಕ್ಕೆ ಬರಬಹುದೇ?
ಬಿಲ್ಕಿಸ್‌ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸುವ ಹಕ್ಕು ಮಹಾರಾಷ್ಟ್ರ ಸರ್ಕಾರ ಹೊಂದಿದೆಯೇ ಹೊರತು ಗುಜರಾತ್‌ ಸರ್ಕಾರಕ್ಕೆ ಅಂತಹ ಅಧಿಕಾರವಿಲ್ಲ ಎಂದು ಹೇಳಿತ್ತು. ಈ ಹಿಂದೆ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದ ಕಾರಣ ಈ ಪ್ರಕರಣದ ವ್ಯಾಪ್ತಿ ಮಹಾರಾಷ್ಟ್ರದಲ್ಲಿ ಬರುತ್ತದೆ.

ಈಗ ಸುಪ್ರೀಂ ಕೋರ್ಟ್‌ ಆದೇಶದ ನಂತರ ಎಲ್ಲರ ಕಣ್ಣು ಮಹಾರಾಷ್ಟ್ರ ಸರ್ಕಾರದತ್ತ ತಿರುಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಬೆಂಬಲಿತ ಶಿವಸೇನಾ ಸರ್ಕಾರವಿರುವುದರಿಂದಾಗಿ ಈ ಕುರಿತು ಕುತೂಹಲ ಹೆಚ್ಚಾಗಿದೆ.

ಹಾಗಿದ್ದರೆ ಮಹಾರಾಷ್ಟ್ರ ಸರ್ಕಾರಕ್ಕೆ ಈ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಸಾಧ್ಯವೇ?

ನ್ಯಾಯಾಲಯದ ಆದೇಶವು ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಪರಿಹಾರ ನೀತಿಯು ಶಿಕ್ಷೆಗೊಳಗಾದ ಪುರುಷರ ಮನವಿಗೆ ಅನ್ವಯಿಸುತ್ತದೆ ಎಂದು ಸೂಚಿಸುತ್ತದೆ. ತೀರ್ಪಿನ ಪ್ಯಾರಾಗ್ರಾಫ್ 52.6 ಕ್ಷಮಾದಾನ ಪ್ರಕ್ರಿಯೆಯಲ್ಲಿ ವಿಚಾರಣಾ ನ್ಯಾಯಾಲಯದ ಅಭಿಪ್ರಾಯದ ಮಹತ್ವವನ್ನು ಒತ್ತಿಹೇಳುತ್ತದೆ.

ಒಂದು ವೇಳೆ ಈ ಅಪರಾಧಿಗಳ ಮಾಫಿ ಅರ್ಜಿಯನ್ನು ಪರಿಗಣಿಸುವುದಿದ್ದರೆ 11.04.2008 ರ ಸರ್ಕಾರದ ನಿರ್ಣಯದ ನಿಯಮಗಳ ಪ್ರಕಾರ ಪರಿಗಣಿಸಬೇಕಾಗುತ್ತದೆ.

ಮಹಾರಾಷ್ಟ್ರದ 2008 ರ ಸರ್ಕಾರದ ನಿರ್ಣಯವು ಮಾಫಿನಾಮೆಗೆ ಅರ್ಹತೆಯ ಚೌಕಟ್ಟನ್ನು ಹೊಂದಿಸುತ್ತದೆ. ಯಾವುದೇ ಮಾಫಿಗೆ ಮೊದಲು ಅಪರಾಧಿಯು 18 ವರ್ಷಗಳ ಕನಿಷ್ಠ ಶಿಕ್ಷೆಯನ್ನು ಅನುಭವಿಸಿರಬೇಕು ಎಂದು ನಿರ್ದೇಶನವು  ಹೇಳುತ್ತದೆ. ಮಹಿಳೆಯರ ವಿರುದ್ಧದ ಅಸಾಧಾರಣ ಹಿಂಸೆಯನ್ನು ಒಳಗೊಂಡ ಅಪರಾಧಗಳಿಗೆ, ಅಪರಾಧಿಗಳು 28 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ನಂತರವಷ್ಟೇ ಕ್ಷಮೆಗೆ ಅರ್ಹರಾಗಬಹುದು.

2008ರ ನೀತಿಯನ್ನು ಪರಿಗಣಿಸಿ, ಹನ್ನೊಂದು ಅಪರಾಧಿಗಳಿಗೆ ಬಿಡುಗಡೆ ನೀಡುವುದಾದರೂ ಅದಕ್ಕಾಗಿ ಅವರು 2026ರ ತನಕ ಕಾಯಬೇಕು. ಆದರೆ, ಅಸಾಧಾರಣ ಹಿಂಸಾಚಾರದ ಷರತ್ತಿನ ಪ್ರಕಾರ ಅವರು 2036ರವರೆಗೆ ಜೈಲಿನಲ್ಲಿರಬೇಕಾಗುತ್ತದೆ.

2008ರ ಕ್ಷಮಾದಾನ ನೀತಿಯಲ್ಲದೆ 1992ರ ಕ್ಷಮಾದಾನ ನೀತಿಯೂ ಅಸ್ಥಿತ್ವದಲ್ಲಿದೆ. ಆದರೆ ಕೆಲವು ಅನಿಶ್ಚಿತತೆಗಳ ಕಾರಣ ನ್ಯಾಯಾಧೀಶರು 2008ರ ನೀತಿಯನ್ನು ಈ ಪ್ರಕರಣದಲ್ಲಿ ಅನ್ವಯಿಸಿದ್ದಾರೆ. ಆದರೆ 1992ರ ನೀತಿಯಡಿಯಲ್ಲಿಯೂ, ಅಪರಾಧದ ತೀವ್ರತೆಯನ್ನು ಅವಲಂಬಿಸಿ 2030 ಅಥವಾ 2036ರ ನಂತರವಷ್ಟೇ ಬಿಡುಗಡೆ ಸಾಧ್ಯ.

ಸರ್ಕಾರ ಈ ಕುರಿತಾದ ನೀತಿಗಳನ್ನು ಬದಲಾಯಿಸದೇ ಹೋದಲ್ಲಿ ಈ ಹನ್ನೊಂದು ಜನ ಅಪರಾಧಿಗಳಿಗೆ ಜೈಲೇ ಗತಿ.

#bilkis bano,bilkis bano case,bilkis bano news,supreme court on bilkis bano case,bilkis bano verdict,bilkis bano hearing,bilkis bano gangrape,bilkis bano case today,bilkis bano rape case,bilkis bano case 2002,bilkis bano gujarat case,survivor bilkis bano,bilkis bano gang rape case,bilkis bano gang rape,bilkis bano case kya hai,bilkis bano bano rape case verdict,bilkis bano gangrape case,supreme court on bilkis bano,bilkis bano gang rape case 2002

ಬಿಲ್ಕಿಸ್‌ ಬಾನು ಪ್ರಕರಣ: 11 ಆರೋಪಿಗಳು ಮತ್ತೆ ಜೈಲಿಗೆ
ದೆಹಲಿ: ಬಿಲ್ಕಿಸ್ ಬಾನು ಅತ್ಯಾಚಾರ  ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಗುಜರಾತ್ ಸರ್ಕಾರದ ವಿನಾಯತಿ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. 2002ರಲ್ಲಿ ನಡೆದ ಗುಜರಾತ್ ಗಲಭೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿ, ಮಗು ಮತ್ತು ಮನೆಯವರನ್ನು ಸಾಯಿಸಿದ 11 ಮಂದಿ ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ((Bilkis Bano)ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯಮಾಡಿದೆ. ಈ ಅರ್ಜಿ ವಿಚಾರಣೆ ಮುಂದುವರಿಸುವುದಾಗಿ ಎಂದು ಸುಪ್ರೀಂ ಹೇಳಿದೆ.  ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಈ ತೀರ್ಪು ನೀಡಿದ್ದು, ಅಪರಾಧಿಗಳು ಮತ್ತೆ ಕಂಬಿ ಎಣಿಸಬೇಕಾಗಿದೆ.

ಗುಜರಾತ್ ಸರ್ಕಾರಕ್ಕೆ ಈ ಆರೋಪಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನಿರ್ಧಾರ ಮಹಾರಾಷ್ಟ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ಹೇಳಿದೆ.

2022ರ ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು ಈ ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು. ಇದರ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ರವಾಗಿತ್ತು. ಅಪರಾಧಿಗಳು ಬಿಡುಗಡೆಯಾದಾಗ ಅದ್ಧೂರಿ ಸ್ವಾಗತವನ್ನು ನೀಡಲಾಗಿತ್ತು. ಇವರ ಜೊತೆಗೆ ಬಿಜೆಪಿ ಸಂಸದರು, ಶಾಸಕರು, ವೇದಿಕೆಯನ್ನು ಹಂಚಿಕೊಂಡಿದ್ದರು. ಈ ಅಪರಾಧಿಗಳಲ್ಲಿ ಒಬ್ಬನಾದ ರಾಧೇಶ್ಯಾಮ್ ಶಾ ತನ್ನ ವಕೀಲಿ ವೃತ್ತಿಯನ್ನೂ ಆರಂಭಿಸಿದ್ದ.

ಬಿಲ್ಕಿಸ್ ಬಾನೋ ಪ್ರಕರಣ: ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಛೀಮಾರಿ!
ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 11 ಕೈದಿಗಳನ್ನು ಗುಜರಾತ್ ಸರ್ಕಾರ ಅವರು 14 ವರ್ಷಗಳ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸುವ ಮೊದಲೇ ಬಿಡುಗಡೆ ಮಾಡಿರುವುದು ದೇಶಾದ್ಯಂತ ಚರ್ಚೆಯ ವಿಷಯವಾಗಿತ್ತು.

2002ರ ಗಲಭೆಯ ಸಮಯದಲ್ಲಿ, ಬಿಲ್ಕಿಸ್ ಬಾನೋ ಎಂಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕುಟುಂಬವನ್ನು ಕಗ್ಗೊಲೆ ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿಶೇಷ ಪೀಠವು ಇವೆಲ್ಲವನ್ನೂ ಒಟ್ಟಾಗಿ ತನಿಖೆ ನಡೆಸುತ್ತಿದೆ.

ಅಪರಾಧಿಗಳಿಗೆ 14 ವರ್ಷಗಳ ನಂತರ ಬಿಡುಗಡೆ ಮಾಡುವ ಮೂಲಕ ಸುಧಾರಣೆಗೆ ಅವಕಾಶ ನೀಡುವ ಈ ನಿಯಮವು ಇತರ ಕೈದಿಗಳಿಗೆ ಎಷ್ಟು ಅನ್ವಯಿಸುತ್ತದೆ? ನೀತಿಯನ್ನು ಏಕೆ ಆಯ್ದ ಕೆಲವರಿಗೆ ಮಾತ್ರ ಅನ್ವಯಿಸಲಾಗುತ್ತಿದೆ? ಸುಧಾರಿಸಲು ಮತ್ತು ಮತ್ತೆ ಸಮಾಜದ ಅಂಗವಾಗಲು ಅವಕಾಶವನ್ನು ಎಲ್ಲರಿಗೂ ನೀಡಬೇಕು. ಹೇಗೆ? ಇದು ಕಾರ್ಯರೂಪಕ್ಕೆ ಬರುತ್ತಿದೆಯೇ? ನಮ್ಮ ಜೈಲುಗಳು ಏಕೆ ತುಂಬಿ ತುಳುಕುತ್ತಿವೆ? ನಮಗೆ ವಿವರ ನೀಡಿ ಎಂದು ನ್ಯಾಯಾಲಯ ಹೇಳಿದೆ.

ಬಿಲ್ಕಿಸ್ ಅಪರಾಧಿಗಳಿಗಾಗಿ ಜೈಲು ಸಲಹಾ ಸಮಿತಿಯನ್ನು ಯಾವ ಆಧಾರದ ಮೇಲೆ ರಚಿಸಲಾಗಿದೆ ಎಂದು ಪ್ರಶ್ನಿಸಿದ ನ್ಯಾಯಾಲಯ, ವಿವರಗಳನ್ನು ನೀಡುವಂತೆ ರಾಜ್ಯಕ್ಕೆ ಆದೇಶಿಸಿದೆ. ಗೋಧ್ರಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯದ ಕಾರಣ ಅದರ ಅಭಿಪ್ರಾಯವನ್ನು ಏಕೆ ಕೇಳಲಾಗಿದೆ ಎಂದೂ ಅದು ಕೇಳಿದೆ.

ನಂತರದ ಎರಡನೇ ಅತಿದೊಡ್ಡ ಶಿಕ್ಷೆ ಇದಾಗಿದೆ. ಇಂತಹ ಸಂದರ್ಭದಲ್ಲಿಯೂ ಅವರನ್ನು ಅವಧಿಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಲು ಹೇಗೆ ಸಾಧ್ಯ? ಎಂದು ಕೇಳಿತು.

‘ಅಪರಾಧಿಗಳ ಬಿಡುಗಡೆಯು ರಾಜ್ಯ ಸರ್ಕಾರದ ಕ್ಷಮಾಪಣೆ ನೀತಿಯನ್ನು ಅವಲಂಬಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, 1992ರಲ್ಲಿ ಗುಜರಾತ್ ಸರ್ಕಾರ ರೂಪಿಸಿರುವ ಈ ನೀತಿ ಆಧರಿಸಿ ಅಪರಾಧಿಗಳಿಗೆ ಕ್ಷಮಾಪಣೆ ನೀಡಲಾಗಿದೆ. ಈ ಪ್ರಕ್ರಿಯೆಯು ಕಾನೂನುಬದ್ಧವಾಗಿಯೇ ನಡೆದಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ರಾಜು ಸಮರ್ಥಿಸಿಕೊಂಡರು.

ಘೋರ ಅಪರಾಧ ಎಸಗಿದ ಅಪರಾಧಿಗಳ ಸುಧಾರಣೆಗೂ ಕಾನೂನಿನಡಿ ಅವಕಾಶ ಕಲ್ಪಿಸಬಹುದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಜೈಲು ಸಲಹಾ ಸಮಿತಿಯ (ಸಮಿತಿಯಲ್ಲಿ ಇಬ್ಬರು ಬಿಜೆಪಿ ಶಾಸಕರು ಇದ್ದರು ಎಂಬ ಆರೋಪವಿದೆ) ವರದಿ ಕೇಳಿತು. ಬಳಿಕ ‘ಅಪರಾಧಿಗಳಿಗೆ ಕ್ಷಮಾಪಣೆ ನೀಡುವ ಬಗ್ಗೆ ಅಭಿಪ್ರಾಯ ಪಡೆಯುವಾಗ ಸಿಬಿಐ ಕೂಡ ಆಕ್ಷೇಪ ವ್ಯಕ್ತಪಡಿಸಲಿಲ್ಲವೇ’ ಎಂದು ಪ್ರಶ್ನಿಸಿತು. ನಂತರ ಆಗಸ್ಟ್ 24ಕ್ಕೆ ವಿಚಾರಣೆಯನ್ನು ಮುಂದೂಡಿತು.

ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಿಲ್ಕಿಸ್‌ ಬಾನೋ
ನವದೆಹಲಿ: 2002 ರ ಗುಜರಾತ್ ದಂಗೆಯಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಇಡೀ ಕುಟುಂಬವನ್ನು ಕೊಂದಿದ್ದ 11 ಆರೋಪಿಗಳನ್ನು ಬಿಡುಗಡೆ ಮಾಡಿರುವುದರ ವಿರುದ್ಧ ಬಿಲ್ಕಿಸ್ ಬಾನೋ ಪ್ರಶ್ನಿಸಿ   ಬುಧವಾರದಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು 1992ರ ಕ್ಷಮಾದಾನ ನೀತಿಯಡಿ ಗುಜರಾತ್‌ ಸರ್ಕಾರ ಈ ನೀಚ ಕೃತ್ಯ ಎಸಗಿದ್ದ ಹನ್ನೊಂದು ಜನರನ್ನು ಬಿಡುಗಡೆ ಮಾಡಿದ್ದು, ಈ ವಿರುದ್ಧ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ, ಹಿಂದೂ ಸಂಘಟನೆಯೊಂದು ಅತ್ಯಾಚಾರಿಗಳನ್ನು ವೀರರಂತೆ ಪರಿಗಣಿಸಿ ಸ್ವಾಗತಿಸಿದ್ದರು.

ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವ ನಿರ್ಧಾರದಲ್ಲಿ ಭಾಗಿಯಾಗಿದ್ದ ಮತ್ತು ಅವರನ್ನು “ಸಂಸ್ಕಾರಿ ಬ್ರಾಹ್ಮಣರು” ಎಂದು ಬಣ್ಣಿಸಿದ್ದ, ಈ ವರೆಗೂ ಆರು ಬಾರಿ ಶಾಸಕರಾಗಿರುವ ಬಿಜೆಪಿ ನಾಯಕ ʼಚಂದ್ರಸಿನ್ಹ ರೌಲ್ಜಿʼ ಅವರು ಈ ಬಾರಿ ಗೋಧ್ರಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೋ ಅವರ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ ಮುಂದೆ ಧ್ವನಿ ಎತ್ತಿದ್ದಾರೆ.

ಬಿಲ್ಕಿಸ್‌ ಬಾನೋ 21ನೇ ವರ್ಷದವರಿದ್ದಾಗ, ಗೋಧ್ರಾ ರೈಲು ದಹನದ ನಂತರ ಗುಜರಾತ್‌ನಲ್ಲಿ 59 ಯಾತ್ರಾರ್ಥಿಗಳು ಸಾವನ್ನಪ್ಪಿದ ನಂತರ ನಡೆದ ಗಲಭೆಯಲ್ಲಿ ತನ್ನ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದವರನ್ನು ಸಾಮೂಹಿಕ ಅತ್ಯಾಚಾರವನ್ನೆಸಗಿ ಒಂಬತ್ತು ಜನರನ್ನು ಕೊಂದಿದ್ದ 11 ಜನರನ್ನು ಗುಜರಾತ್‌ ಸರ್ಕಾರ ಆಗಸ್ಟ್‌ 15 ರಂದು ಬಿಡುಗಡೆ ಮಾಡಲಾಗಿತ್ತು.

ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳ ಶೀಘ್ರ ಬಿಡುಗಡೆಯನ್ನು ನಿರ್ಬಂಧಿಸುವ 2014 ರ ವಿಮೋಚನಾ ನೀತಿಯನ್ನು ಅನುಸರಿಸಿದ್ದರೆ ಗುಜರಾತ್ ಸರ್ಕಾರ ಈ ರೀತಿಯ ಬಿಡುಗಡೆ ಮಾಡುವ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಬಿಲ್ಕಿಸ್‌ ಬಾನೋ ಹೇಳಿದ್ದಾರೆ.

ಬಿಜೆಪಿ ಬೆಂಬಲಿತ ಅತ್ಯಾಚಾರಿಗಳ ಒಳ್ಳೆಯ ಗುಣ ಮತ್ತು ಅದರಾಚೆಗಿನ ಸತ್ಯಗಳು
2002 ರ ಗುಜರಾತ್ ಗಲಭೆಯಲ್ಲಿ ಗರ್ಭಿಣಿ ಹೆಣ್ಣು ಮಗಳಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ಮತ್ತು ಆಕೆಯ ಇಡೀ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳನ್ನು “ಸನ್ನಡತೆ” ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ವ್ಯಾಪಕ ಟೀಕೆ ಮತ್ತು ಕಾನೂನು ಸಮರಕ್ಕೆ ಕೈ ಇಟ್ಟ ನಂತರ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಗೆಗಿನ ಆತಂಕಕಾರಿ ವಿಚಾರ ಕೂಡಾ ಹೊರಬಿದ್ದಿತ್ತು.

ಆದರೆ ಅಪರಾಧಿಗಳ “ಸನ್ನಡತೆ”ಯ ಬಿಡುಗಡೆಗೂ ಮುನ್ನ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗ ಪೆರೋಲ್‌ನಲ್ಲಿರುವಾಗಲೇ ಅಪರಾಧಿಗಳು ಈ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಮತ್ತು ಕಿರುಕುಳ ನೀಡಿದ ದೂರುಗಳ ಬಗೆಗಿನ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದು “ಸನ್ನಡತೆ”ಯ ಸಮರ್ಥನೆಗೆ ವಿರುದ್ಧವಾಗಿದೆ. ಈ ನಡುವೆ ಅಪರಾಧಿಗಳು ಶಿಕ್ಷೆ ಅನುಭವಿಸುತ್ತಿರುವಾಗ ಅವರು ಯಾವುದೇ ತಪ್ಪು ಎಸಗಿಲ್ಲ, ಜೊತೆಗೆ ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಗುಜರಾತ್ ಸರ್ಕಾರ ಈಗಾಗಲೇ ಹೇಳಿಕೊಂಡಿತ್ತು.

ಆದರೆ 2017 ರಿಂದ 2021 ರ ನಡುವೆ, ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ವಿರುದ್ಧ ಪ್ರಕರಣದ ಸಾಕ್ಷಿಗಳು ದೂರುಗಳನ್ನು ನೀಡಿದ್ದು ಮತ್ತು ಈ ಬಗ್ಗೆ ಎಫ್‌ಐಆರ್‌ ಕೂಡಾ ದಾಖಲಿಸಿದ್ದು ಗುಜರಾತ್ ಪೊಲೀಸ್ ಇಲಾಖೆಯ ಕಡತಗಳಲ್ಲೇ ಇನ್ನೂ ಜೀವಂತವಾಗಿದೆ.

ಜುಲೈ 6, 2020 ರಂದು ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಶಾ ಮತ್ತು ಮಿತೇಶ್‌ಭಾಯ್ ಭಟ್ ವಿರುದ್ಧ ಬಿಲ್ಕಿಸ್ ಬಾನೋ ಪ್ರಕರಣದ ಪ್ರಮುಖ ಸಾಕ್ಷಿಗಳಾದ ಪಿಂಟುಭಾಯ್ ದೂರು ನೀಡಿದ್ದರು. ಈ ಬಗ್ಗೆ ಐಪಿಸಿ ಸೆಕ್ಷನ್‌ 354 (ಹಲ್ಲೆ ಅಥವಾ ಕ್ರಿಮಿನಲ್‌ ಹಿನ್ನೆಲೆ), 504 (ಬೆದರಿಕೆ), 506 (2) (ಕೊಲೆ ಬೆದರಿಕೆ) ಮತ್ತು 114 (ಪ್ರಚೋದನೆ) ಅಡಿಯಲ್ಲಿ ದಾಹೋದ್‌ನ ರಾಧಿಕಪುರ ಪೊಲೀಸ್ ಠಾಣೆಯಲ್ಲಿ ಅಪರಾಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್, ಮಿಥೇಶ್ ಭಾಯ್ ಭಟ್ ಮತ್ತು ಮತ್ತೊಬ್ಬ ಆರೋಪಿ ಆಶಿಶ್ ಸೇರಿದಂತೆ ಮೂವರು ವ್ಯಕ್ತಿಗಳು, ಸಬೆರಾಬೆನ್ ಮತ್ತು ಆಕೆಯ ಮಗಳು ಅರ್ಫಾ ಮತ್ತು ಸಾಕ್ಷಿ ಪಿಂಟೂಭಾಯ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಈಗ ಬೆಳಕಿಗೆ ಬಂದ ಎಫ್‌ಐಆರ್ ಹೇಳುತ್ತದೆ. ಮತ್ತೊಬ್ಬ ಸಾಕ್ಷಿಯಾದ ಮನ್ಸೂರಿ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್ ಅವರು ಜನವರಿ 1, 2021 ರಂದು ಸೈಲೇಶ್ ಚಿಮ್ಮನ್‌ಲಾಲ್ ಭಟ್ ವಿರುದ್ಧ ದಾಹೋದ್ ಪೊಲೀಸರಿಗೆ ದೂರು ಸಲ್ಲಿಸಿದರು. ಅವರು ಪೆರೋಲ್‌ನಲ್ಲಿ ಹೊರಬಂದ ಅಪರಾಧಿಯಿಂದ ಬೆದರಿಕೆ ಬಂದಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸೈಲೇಶ್ ಚಿಮ್ಮನಲಾಲ್ ಭಟ್ ಕೂಡಾ ಬಿಲ್ಕೀಸ್ ಬಾನೋ ಪ್ರಕರಣದ ಪ್ರಮುಖ ಅಪರಾಧಿ.

ಈ ನಡುವೆ ಪೆರೋಲ್ ನಲ್ಲಿ ಇದ್ದ ಸಮಯದಲ್ಲೇ ಲಿಮ್ಖೇಡಾ ಶಾಸಕ ಸೈಲೇಶ್ ಭಾಯ್ ಬಾಭೋರ್ ಮತ್ತು ಸಂಸದ ಜಸ್ವಂತ್ ಸಿಂಗ್ ಬಾಭೋರ್ ಅವರು ಅಪರಾಧಿ ಸೈಲೇಶ್ ಚಿಮ್ಮನ್‌ಲಾಲ್ ಭಟ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮತ್ತು ಅವರನ್ನು ಸನ್ಮಾನಿಸಿದ ಬಗ್ಗೆಯೂ ದೂರಿನಲ್ಲಿ ದಾಖಲಾಗಿದೆ‌‌. ಇಬ್ಬರು ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿರುವ ಫೋಟೋವನ್ನು ದೂರಿನಲ್ಲಿ ಲಗತ್ತಿಸಲಾಗಿದೆ. ಆದರೆ ದೂರಿನಲ್ಲಿ ಬಿಜೆಪಿ ಜನಪ್ರತಿನಿಧಿಗಳು ಇದ್ದ ಕಾರಣಕ್ಕೋ ಏನೋ, ಈ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ.

ಪ್ರಕರಣದ ಇತರ ಇಬ್ಬರು ಸಾಕ್ಷಿಗಳಾದ ಘಾಂಚಿ ಆದಂಭೈ ಇಸ್ಮಾಯಿಲ್‌ಭಾಯ್ ಮತ್ತು ಘಾಂಚಿ ಇಮ್ತಿಯಾಜ್‌ಭಾಯ್ ಯೂಸುಫ್‌ಭಾಯ್ ಅವರು ಅಪರಾಧಿಗಳಲ್ಲಿ ಒಬ್ಬರಾದ ಗೋವಿಂದ್ ನಾಯ್ ವಿರುದ್ಧ ಜುಲೈ 28, 2017 ರಂದು ದೂರು ದಾಖಲಿಸಿದ್ದಾರೆ. “ರಾಜಿ ಮಾಡಿಕೊಳ್ಳಲು ಒಪ್ಪದಿದ್ದರೆ ಆರೋಪಿಗಳು ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಅರ್ಜಿದಾರರು ಗುಜರಾತ್ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ದೂರು ಕೂಡಾ ಎಫ್‌ಐಆರ್ ಆಗಿ ಬದಲಾಗಲೇ ಇಲ್ಲ.

ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು “ಉತ್ತಮ ನಡವಳಿಕೆ” ಅಡಿಯಲ್ಲಿ ಮೇಲೆ ಉಲ್ಲೇಖಿಸಿದ ಅಪರಾಧಿಗಳೂ ಸೇರಿದಂತೆ ಒಟ್ಟು 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಬಿಜೆಪಿ ಪಕ್ಷದ ಮುಖಂಡರು ಗುಜರಾತ್‌ನ ಜೈಲಿನ ಹೊರಗೆ ನಿಂತು ಅವರನ್ನು ವೀರರಂತೆ ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಿದ್ದರು. ಅಪರಾಧಿಗಳನ್ನು ಏಕೆ ಬಿಡುಗಡೆ ಮಾಡಲಾಯಿತು ಎಂಬುದಕ್ಕೆ ಗುಜರಾತ್‌ ಸರ್ಕಾರ ಉತ್ತರವಾಗಿ ಸರಣಿ ತೀರ್ಪುಗಳನ್ನು ಉಲ್ಲೇಖಿಸಿದೆ.

ಆದರೆ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್ ಗೆ ಕೊಟ್ಟ “ಉತ್ತಮ ನಡವಳಿಕೆ”ಯ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಿನ್ನೆ ಟೀಕಿಸಿದೆ. “ತೀರ್ಪುಗಳ ಸರಣಿಯನ್ನು ಉಲ್ಲೇಖಿಸಿರುವ ಕೌಂಟರ್ ಅಫಿಡವಿಟ್ ಅನ್ನು ನಾನು ನೋಡಿಲ್ಲ. ಗುಜರಾತ್ ಸರ್ಕಾರದ ಈ ಅಭಿಪ್ರಾಯದಲ್ಲಿ ಹಲವಷ್ಟು ಲೋಪಗಳಿವೆ” ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ಅಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರ ಉತ್ತಮ ನಡವಳಿಕೆಯನ್ನು ಉಲ್ಲೇಖಿಸಿದ್ದಾರೆ. “ಸರ್ಕಾರ ಮತ್ತು ಸಂಬಂಧಪಟ್ಟವರು ಈ ನಿರ್ಧಾರವನ್ನು ತೆಗೆದುಕೊಂಡಾಗ, ಇದು ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣದ ಒಟ್ಟು 11 ಮಂದಿ ಅಪರಾಧಿಗಳಲ್ಲಿ 7 ಜನರ ವಿರುದ್ಧ ಆರೋಪ ಕೇಳಿ ಬಂದಿದೆ. ಅದರಲ್ಲಿ 5 ಮಂದಿಯ ಮೇಲೆ ಕೇಸು ದಾಖಲಾದರೆ, 3 ಜನರ ಮೇಲಷ್ಟೇ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಇಷ್ಟೂ ಜನ ಬಿಜೆಪಿ ಹಿನ್ನೆಲೆಯವರಾಗಿದ್ದು, ಅಪರಾಧ ನಡೆದ ನಂತರ ಬಿಜೆಪಿ ಪಕ್ಷದ ಚುನಾಯಿತ ಶಾಸಕರು, ಸಂಸದರ ಕಡೆಯಿಂದಲೇ ಸನ್ಮಾನಿತರಾದವರು ಎಂಬುದು ಗಮನಾರ್ಹ ಅಂಶ.

ದೂರು ದಾಖಲು ಮಾಡಲು ಮತ್ತು ಮುಂದಿನ ಪ್ರಕ್ರಿಯೆಯಲ್ಲಿ ಎಫ್ಐಆರ್ ದಾಖಲಾಗಲು ಈ ಶಾಸಕ ಮತ್ತು ಸಂಸದರು ಮುಖ್ಯವಾಗಿ ಅಡ್ಡಗಾಲು ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಷ್ಟಾದರೂ ಬಿಜೆಪಿ ಪಕ್ಷ ಇವರಿಗೆ “ಒಳ್ಳೆಯ ನಡತೆ” ಪ್ರಮಾಣ ಪತ್ರ ನೀಡಿದ್ದು ದುರಂತ. ಈ ಘಟನೆಯಿಂದ ಒಂದಂತೂ ಸ್ಪಷ್ಟ, ಅಪರಾಧಿಯೊಬ್ಬ ಅತ್ಯಾಚಾರ, ಕೊಲೆ, ಗುಂಪುಗಲಭೆಯಂತಹ ಎಂತಹ ಕ್ರಿಮಿನಲ್ ಪ್ರಕರಣದಲ್ಲಿ ಇದ್ದರೂ ಬಿಜೆಪಿ ಪಕ್ಷದ ಹಿನ್ನೆಲೆ ಇದ್ದರೆ ಇಂದಲ್ಲ ನಾಳೆ ಖಂಡಿತ ಎಲ್ಲಾ ಪ್ರಕರಣಗಳಿಂದ ಮುಕ್ತ ಆಗಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಂತಾಗುತ್ತದೆ.

ಸಧ್ಯ ಈ ಬಿಡುಗಡೆ ಪ್ರಕರಣಕ್ಕೆ ತಡೆ ಹಿಡಿಯಬೇಕು ಎಂದು ಸಲ್ಲಿಸಿರುವ ಅರ್ಜಿ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಟಿಎಂಸಿ ಸಂಸದೆ ಮೊಹುವಾ ಮೋಯಿತ್ರಾ ಸೇರಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಅಪರಾಧಿಗಳ ವಿರುದ್ಧದ ದೂರು, ಎಫ್ಐಆರ್ ಕೂಡಾ ಈಗ ಬೆಳಕಿಗೆ ಬಂದಿರುವುದು, ಅಪರಾಧಿಗಳು ಮತ್ತೆ ಜೈಲು ಸೇರಬಹುದು ಎಂದೇ ಅಂದಾಜಿಸಲಾಗುತ್ತಿದೆ.

ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿಗೆ ಜೀವ ಬೆದರಿಕೆ ; ಆತಂಕ ವ್ಯಕ್ತಪಡಿಸಿದ ಇಮ್ತಿಯಾಜ್ ಘಾಂಚಿ
ಬಿಲ್ಕಿಸ್ ಬಾನು ಪ್ರಕರಣದ ಏಕೈಕ ಸಾಕ್ಷಿ 45 ವರ್ಷದ ಇಮ್ತಿಯಾಜ್ ಘಾಂಚಿ ಅವರಿಗೆ ಜೀವ ಬೆದರಿಕೆಯ ಧಮಕಿ ಹಾಕಿದ್ದಾರೆ. ಆಘಾತಕಾರಿ ವಿಚಾರ ಎಂದರೆ ಧಮಕಿ ಹಾಕಿದ್ದು ಬೇರೆ ಯಾರೂ ಅಲ್ಲ, “ಸನ್ನಡತೆ” ಅಡಿಯಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿರುವ ಬಿಲ್ಕಿಸ್ ಬಾನು ಪ್ರಕರಣದ ಪ್ರಮುಖ ಅಪರಾಧಿ ರಾಧೇಶ್ಯಾಮ್ ಶಾ.

ಹೌದು.. 2002 ರ ಗುಜರಾತ್ ಕೋಮು ಗಲಭೆಯಲ್ಲಿ 3 ವರ್ಷದ ಪುಟ್ಟ ಮಗು ಸೇರಿದಂತೆ 14 ಜನರನ್ನು ಕೊಂದು, ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಹೆಣ್ಣನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ 11 ಮಂದಿ ಅಪರಾಧಿಗಳೆಂದು ಕೋರ್ಟ್ ಸಾಭೀತುಪಡಿಸಿತ್ತು. ಇವರನ್ನು ಜೀವಾವಧಿ ಶಿಕ್ಷೆಗೂ ಆದೇಶಿಸಿತ್ತು. ಆದರೆ ಗುಜರಾತ್ ಸರ್ಕಾರ ಇಂತಹ ನರಹಂತಕರಿಗೆ “ಸನ್ನಡತೆ” ಆಧಾರದಲ್ಲಿ ಆಗಸ್ಟ್ 16 ರಂದು ಅಷ್ಟೂ 11 ಮಂದಿಯನ್ನು ಬಿಡುಗಡೆ ಮಾಡುವ ಆದೇಶ ಹೊರಡಿಸಿತ್ತು. ಈ ಸುದ್ದಿ ಈಗಲೂ ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಟೀಕೆಗೆ ಕಾರಣವಾಗಿದೆ. ಜೊತೆಗೆ ಇವರ ಬಿಡುಗಡೆ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಆದೇಶ ಹಿಂಪಡೆಯಲು ಅರ್ಜಿ ಹಾಕಲಾಗಿದೆ.

ಸಧ್ಯ ಈ ಪ್ರಕರಣದ ಅಡಿಯಲ್ಲಿ ಅಪರಾಧಿ ಸ್ಥಾನದಲ್ಲಿ ಇರುವ ರಾಧೇಶ್ಯಾಮ್ ಶಾ ಎಂಬ ವ್ಯಕ್ತಿ ಬಿಲ್ಕಿಸ್ ಬಾನು ಪ್ರಕರಣದ ಏಕೈಕ ಸಾಕ್ಷಿ ಇಮ್ತಿಯಾಜ್ ಘಾಂಚಿ ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ಆರೋಪಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರಿಗೆ ಪತ್ರ ಬರೆದು ಇಂತಹ ವ್ಯಕ್ತಿಯಿಂದ ತನಗೆ ಜೀವ ಬೆದರಿಕೆ ಇದೆ.. ಈ ಮನವಿಯನ್ನು ತುರ್ತು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಇಂಗ್ಲಿಷ್ ನಿಯತಕಾಲಿಕೆ The Quint ವರದಿ ಮಾಡಿದ್ದು, ಅಪರಾಧಿ ರಾಧೇಶ್ಯಾಮ್ ಶಾ “ನಿಮ್ಮನ್ನು ಊರು ಬಿಡಿಸುವ ವರೆಗೂ ನಾವು ಬಿಡುವುದಿಲ್ಲ. ರಕ್ತ ಹೆಪ್ಪುಗಟ್ಟುವಂತೆ ಹೊಡೆಯುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಇಮ್ತಿಯಾಜ್ ಘಾಂಚಿ The Quint ಗೆ ಮಾಹಿತಿ ಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ “ಅಪರಾಧಿಗಳ ಬಿಡುಗಡೆ ದಿನದಿಂದಲೂ ಇದು ನಡೆಯುತ್ತಲೇ ಇದೆ. ನಮ್ಮ ಮೇಲೆ ಮತ್ತು ನಮ್ಮ ಕುಟುಂಬದ ಮೇಲೆ ಯಾವ ಸಂದರ್ಭದಲ್ಲಾದರೂ ದಾಳಿ ನಡೆಯಬಹುದು ಎಂಬ ಆತಂಕ ಮನೆ ಮಾಡಿದೆ” ಎಂದು ತಮ್ಮೊಳಗಿನ ಆತಂಕ ಹೊರಹಾಕಿದ್ದಾರೆ.

ಕಳೆದ ಸೆ.15 ರಂದು ಸಿಂಗ್ವಾಡ್ ಗ್ರಾಮದಿಂದ ದೇವಗಡ್ ಬರಿಯಾದಲ್ಲಿರುವ ತಮ್ಮ ನಿವಾಸಕ್ಕೆ ಪ್ರಯಾಣ ಮಾಡುತ್ತಿದ್ದಾಗ ಮತ್ತೆ ಘಾಂಚಿ ಅವರಿಗೆ ಅಪರಾಧಿ ರಾಧೇಶ್ಯಾಮ್ ಷಾ ಬೆದರಿಕೆ ಹಾಕಿದ ಬಗ್ಗೆ ಉಲ್ಲೇಖಿಸಿ ಹೇಳಿದ್ದಾರೆ. ಇನ್ನೊಂದು ಬಾರಿ ರೈಲ್ವೆ ನಿಲ್ದಾಣದಲ್ಲಿ ಅಪರಾಧಿ ರಾಧೇಶ್ಯಾಮ್ ಎದುರಾಗಿ, ಹತ್ತಿರ ಬರಲು ಸನ್ನೆ ಮಾಡಿದ್ದಾನೆ. ಆಗ ಹತ್ತಿರ ಹೋದ ಘಾಂಚಿಯವರಿಗೆ “ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮನ್ನು ಯಾರಿಂದಲೂ ತಡೆಯಲಾಗದು. ನಿಮ್ಮ ರಕ್ತ ಹೆಪ್ಪುಗಟ್ಟುವಂತೆ ನಿಮ್ಮನ್ನು ಥಳಿಸಲಿದ್ದೆವೆ” ಎಂದು ಧಮಕಿ ಹಾಕಿದ್ದಾರೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

“2002 ರ ಗಲಭೆ ನಂತರ ನಾವು ಮೂಲದಿಂದ ಇದ್ದ ರಣಧೀಕ್ ಪುರವನ್ನು ತೊರೆದಿದ್ದೇವೆ. ಆ ಗ್ರಾಮಕ್ಕೆ ಮತ್ತೆ ಹಿಂತಿರುಗುವ ಧೈರ್ಯ ಇಲ್ಲ. ಆದರೆ ನಾನು ದಿನಗೂಲಿ ನೌಕರ ಆಗಿದ್ದರಿಂದ ಕೆಲಸ ಹುಡುಕಿ ಪ್ರತಿದಿನ ಹೊರಗೆ ಓಡಾಡಲೇಬೇಕು. ಈ ಸಂದರ್ಭದಲ್ಲಿ ನನಗೆ ಕೆಲವು ದಿನಗಳಿಂದ ಎದುರಾಗುತ್ತಿರುವ ರಾಧೇಶ್ಯಾಮ್ ಷಾ ಇಂದ ಪದೇ ಪದೇ ಜೀವ ಬೆದರಿಕೆ ಬರುತ್ತಿದೆ. ಶುರುವಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಜೀವಬೆದರಿಗೆ ಜಾಸ್ತಿ ಆಗಿದ್ದರಿಂದ ನಾವು ಜೀವ ಉಳಿಸಿಕೊಳ್ಳಲೇಬೇಕು” ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ರಕ್ಷಣೆ ಮನವಿ ಕೋರಿದ ಇಮ್ತಿಯಾಜ್ ಘಾಂಚಿ ಭಯವನ್ನು ತೋಡಿಕೊಂಡಿದ್ದಾರೆ.

ಘಾಂಚಿಯವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ಬರೆದ ಪತ್ರದ ಪ್ರತಿಯನ್ನು ಗುಜರಾತ್ ರಾಜ್ಯದ ಗೃಹ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ತಲುಪಿಸಿದ್ದಾರೆ.

ಬಿಲ್ಕಿಸ್ ಬಾನು ಪ್ರಕರಣದ ಸಾಕ್ಷಿ ಆದ ಇಮ್ತಿಯಾಜ್ ಘಾಂಚಿ ಅವರು ಮುಂಬೈ ಸಿಬಿಐ ನ್ಯಾಯಾಲಯಕ್ಕೆ ವಿಚಾರಣೆಯ ಸಂದರ್ಭದಲ್ಲಿ, ಗೋದ್ರಾ ರೈಲು ಸುಟ್ಟ ಘಟನೆಯ ಮರುದಿನ, ಆರೋಪಿಗಳಲ್ಲಿ ಒಬ್ಬರಾದ ಈಗ ಮೃತರಾಗಿರುವ ನರೇಶ್ ಮೋಧಿಯಾ ಕೈಯಲ್ಲಿ ರಾಂಪುರಿ ಚಾಕು ಹಿಡಿದಿರುವುದನ್ನು ನೋಡಿದ್ದೇನೆ ಎಂದು ಮತ್ತೊಬ್ಬ ಆರೋಪಿ ಪ್ರದೀಪ್ ಮೋಧಿಯಾ ಗುಜರಾತ್‌ನ ರಂಧಿಕ್‌ಪುರದಲ್ಲಿರುವ ತನ್ನ ನಿವಾಸದ ಬಳಿ ಕಲ್ಲು ತೂರಾಟ ಮತ್ತು ಘೋಷಣೆಗಳನ್ನು ಕೂಗುವುದನ್ನು ನಾನು ನೋಡಿದ್ದೇನೆ ಎಂದು ಸಾಕ್ಷ್ಯ ನುಡಿದಿದ್ದರು.

ಸಧ್ಯ ಈ ಅಪರಾಧಿಗಳ ಬಿಡುಗಡೆ ಬಗ್ಗೆ ದೇಶಾಧ್ಯಂತ ಆಕ್ರೋಶ ಬುಗಿಲೆದ್ದಿದ್ದು, ಇದೇ ಸಂದರ್ಭದಲ್ಲಿ ಅಪರಾಧಿ ರಾಧೇಶ್ಯಾಮ್ ಕಡೆಯಿಂದ ಪ್ರಮುಖ ಸಾಕ್ಷಿ ಇಮ್ತಿಯಾಜ್ ಘಾಂಚಿಯವರಿಗೆ ನಿರಂತರ ಬೆದರಿಕೆ ಬರುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಜೊತೆಗೆ ರಾಧೇಶ್ಯಾಮ್ ನಡತೆ ಮತ್ತು ಅಲ್ಲಿನ ಬೆಳವಣಿಗೆ ನೋಡಿದರೆ ಯಾವ ಸಮಯದಲ್ಲಿ ಬೇಕಾದರೂ ಹಿಂದಿನ ದಾಳಿ ಮರುಕಳಿಸಬಹುದು ಎಂದೇ ಅಂದಾಜಿಸಬಹುದು. ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಗುಜರಾತ್ ಸರ್ಕಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಯಾವ ರೀತಿಯಲ್ಲಿ ಪ್ರಕರಣ ಸ್ವೀಕರಿಸಲಿದೆ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.