BJP leader – Peepal Media

ಅಪ್ರಾಪ್ತ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ; ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡನ ಮೇಲೆ ‘ಪೋಕ್ಸೋ’ ದಾಖಲು
ಎಸ್ಸೆಸ್ಸೆಲ್ಸಿ ಓದುತ್ತಿದ್ದ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಟ್ವಾಳ ಭಾಗದ ಬಿಜೆಪಿ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಆಗಿರುವ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ತಡವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.

ಎಸ್ಸೆಸ್ಸೆಲ್ಸಿ ಓದುತ್ತಿದ್ದ 16 ವರ್ಷದ ಬಾಲಕಿಗೆ ಸುಳ್ಳು ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾಗಿ ಆರೋಪಿ ಪ್ರಯತ್ನಿಸಿದ್ದ ಎಂಬ ಮಾಹಿತಿಯೂ ಕೇಳಿಬಂದಿದೆ. ಬಂಟ್ವಾಳ ಭಾಗದ ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕನೂ ಆಗಿರುವ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬ ವ್ಯಕ್ತಿ ಜಿಲ್ಲಾ ವ್ಯಾಪ್ತಿಯಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದ.

ಆದರೆ ತಡವಾಗಿಯಾದರೂ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಆರೋಪಿತ ವ್ಯಕ್ತಿಯ ಹಿಡಿಯಲು ಶೋಧ ಕಾರ್ಯ ನಡೆದಿದೆ.

ಬಾಲಕಿಯ ಪೋಷಕರು ಆರೋಪಿಗೆ ಸೇರಿದ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಕಳೆದ ಜನವರಿ ತಿಂಗಳಲ್ಲಿ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗುತ್ತಿದೆ.

ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದರೂ ಯಾಕೆ ಶಾಲೆಗೆ ಬಂದಿಲ್ಲವೆಂದು ಶಾಲೆಯ ಶಿಕ್ಷಕರು ವಿಚಾರಿಸುವ ಸಲುವಾಗಿ ಆಕೆಯ ಮನೆಗೆ ತೆರಳಿದ್ದರು.

ಈ ವೇಳೆ, ಬಾಲಕಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಶಿಕ್ಷಕರನ್ನು ನೋಡಲು ಬಿಟ್ಟಿರಲಿಲ್ಲ. ಆರೋಪಿ ಮಹೇಶ್ ಭಟ್ ರಾಜಕೀಯ ಪ್ರಭಾವದ ಕಾರಣಕ್ಕೆ ಶಿಕ್ಷಕರಿಗೆ ಬಾಲಕಿಯ ಭೇಟಿಗೂ ಅವಕಾಶ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವಿಷಯ ಪೊಲೀಸ್ ಠಾಣೆಗೆ ತಿಳಿದು ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಮೇಲ್ನೋಟಕ್ಕೆ ಈ ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯ. ಯಾಕೆಂದರೆ ಪೊಲೀಸರು ಪ್ರಕರಣ ದಾಖಲಿಸಿರುವುದೂ ಸಹ ತೀರಾ ಗಂಭೀರವಾಗಿ ವಿಷಯ ದಾಖಲಿಸಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

“ನೀನು ನನ್ನ ಜೊತೆ ಗುಡ್ಡಕ್ಕೆ ಬರ್ತೀಯಾ” ಎಂದಷ್ಟೇ ಆರೋಪಿ ಸಂತ್ರಸ್ತೆಯನ್ನು ಕೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಸಧ್ಯ ಈ ಬಗ್ಗೆ ಯಾವುದೇ ಸ್ಥಳೀಯ ನಾಯಕರೂ ದನಿ ಎತ್ತದಿರುವುದು ಪ್ರಕರಣ ಹಾದಿ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಫೊರೆನಿಕ್ಸ್ ಲ್ಯಾಬಲ್ಲಿ ಪತ್ತೆಯಾದ ಮೊಸಳೆ ಕಣ್ಣೀರು (ರಾಜಕೀಯ ವಿಡಂಬನೆ)
ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ ಕೇಳಿ ಗೊಣಗುತ್ತ ಅರೆನಿದ್ದೆಯಿಂದ ಎಚ್ಚೆತ್ತ. ನಮೋ ಗ್ರಹಚಾರವನ್ನು ಹಳಿಯುತ್ತ ಅರಮನೆಯತ್ತ ಹೆಜ್ಜೆ ಹಾಕಿದ.

ಇನ್ನೇನು ಅರಮನೆ ಬಂತು ಅನ್ನುವಷ್ಟರಲ್ಲಿ ಗಕ್ಕನೆ ನಿಂತ ಅಪರಿಮಿತ ಕುತಂತ್ರಿ ಆಕಾಶದತ್ತ ದಿಟ್ಟಿಸಿದ. ಫಳಫಳನೆ ಹೊಳೆವ ನಕ್ಷತ್ರಗಳು, ಚಂದ್ರನ ಬಿಟ್ಟರೆ ಎಲ್ಲೂ ಚಾದರದಷ್ಟು ಮೋಡಗಳು ಕಾಣಲಿಲ್ಲ. ಹಾಗಿದ್ದರೆ, ರಸ್ತೆಯೆಲ್ಲಾ ತೇವಗೊಂಡು ನೀರು ಹರಿದು ಬರುತ್ತಿರುವುದಾದರೂ ಎಲ್ಲಿಂದ? ಗಾಬರಿಯಿಂದ ಅರಮನೆ ಹೊಕ್ಕಾಗ ಅಲ್ಲಿಯ ದೃಶ್ಯ ಕಂಡು ಗಕ್ಕನೆ ನಿಂತ. ನೆರೆದಿದ್ದ ನೂರಾರು ಲಂಡಭಕ್ತರ ರೋದನೆಯ ಕಣ್ಣೀರು ಹೊಳೆಯಾಗಿ ಹರಿದು ಬರುತ್ತಿತ್ತು.

ಹೆಜ್ಜೆ ಇರಿಸಲು ಜಾಗವಿಲ್ಲದಂತೆ ನೆರೆದಿದ್ದ ಭಕ್ತರ ಮಧ್ಯೆ ಇರುಕಿಸಿಕೊಂಡವನು ತಳ್ಳಾಡುತ್ತ ಅವರನ್ನು ದೂಡಿ ಕೊಂಡು ನಮೋ ಕೊಠಡಿಯತ್ತ ಬಂದ. ಅದಾಗಲೇ ಮಂತ್ರಿಗಳು, ಪೂರ್ವಾಶ್ರಮದ ಚಡ್ಡಿಧಾರಿಗಳು, ಗೋದಿ ಮಾಧ್ಯಮದ ಬಕೆಟ್ ಪತ್ರಕರ್ತರು – ಎಲ್ಲರೂ ಮ್ಲಾನವದನರಾಗಿ ನಿಂತದ್ದು ಕಂಡ ಅಪರಿಮಿತ ಕುತಂತ್ರಿಗೆ ಸುದ್ದಿ ತನಗೆ ತಡವಾಗಿ ಸಿಕ್ಕು ಕೊನೆಯವನಾಗಿ ಬಂದದ್ದಕ್ಕೆ ಮುಜುಗರವಾಯಿತು. ಏನು ನಡೆದಿದೆ? ಸಾಮ್ರಾಟನಿಗೆ ಏನಾದರೂ ವಿಪತ್ತು ಒದಗಿ ಬಂತೆ? ಏನೊಂದು ತಿಳಿಯದೆ ಕಮಲೀ ಮುಖಂಡ ಕಪಿ ದಡ್ಡನತ್ತ ಕಣ್ಸನ್ನೆಯಲ್ಲಿ ಕೇಳಿದರೆ ʼಎಲ್ಲಾ ಮುಗಿದು ಹೋದ ಹಾಗೆ!ʼ ಎನ್ನುವಂತೆ ಕೊಠಡಿಯತ್ತ ಜೋಲು ಮೋರೆ ಮಾಡಿದ. ಕೊಠಡಿಯ ಬಾಗಿಲ ಕೆಳಗಿನ ಸಂದಿಯಲ್ಲಿ ನೀರು ಹರಿದು ಬಂದು ಲಂಡಭಕ್ತರ ಕಣ್ಣೀರನ ಮುಖ್ಯವಾಹಿನಿಯಲ್ಲಿ ಸೇರುತ್ತಿತ್ತು.

ಮತ್ತಷ್ಟು ಗೊಂದಲಗೊಂಡ ಅಪರಿಮಿತ ಕುತಂತ್ರಿ, ಅಲ್ಲೇ ನಿಂತು ಕಣ್ಣೀರನ್ನು ಒರೆಸುತ್ತ ಕರ್ಚೀಫನ್ನು ಹಿಂಡುತ್ತಿದ್ದ ನಮೋ ಆಪ್ತಕಾರ್ಯದರ್ಶಿಗೆ “ಸಾಮ್ರಾಟರು ಎಲ್ಲಿ?” ಎಂದ.

“ವಿದೇಶಕ್ಕೆ ತೆರಳಿದ್ದ ನಮೋ ಮಹಾಸ್ವಾಮಿಗಳು ತಡರಾತ್ರಿ ಬಂದಾಗ ಬಹಳ ಚಿಂತೆಯಲ್ಲಿದ್ದಂತೆ ಕಂಡರು. ತುಟಿ ಎರಡು ಮಾಡದೆ ಬಿರುಗಾಳಿಯಂತೆ ಕೊಠಡಿ ಸೇರಿ ದಢಾರೆಂದು ಅಗುಳಿ ಹಾಕಿಕೊಂಡರು. ನಾನು ಮಾತಾಡಿಸುವ ಧೈರ್ಯ ಮಾಡಲಿಲ್ಲ. ಅರ್ಧತಾಸಿನ ನಂತರ “ಅಯ್ಯೋ!” ಎಂದು ಕೂಗಿದ ಹಾಗಾಯಿತು. ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ. ಒಳಗಿನಿಂದ ಒಂದೇ ಸಮನೆ ನೀರು ಪ್ರವಾಹದಂತೆ ಹರಿದು ಬಂತು”

ಕಳೆದ ವರ್ಷ ಕೂಡ ಇಂಥದ್ದೇ ಪ್ರಸಂಗ ನಡೆದದ್ದು ಅ. ಕುತಂತ್ರಿಯ ನೆನಪಿಗೆ ಬಂತು. ʼಆಗ ಮಮ್ಮೀ…ಮಮ್ಮೀನ ನೋಡ್ಬೇಕು ಅಂತ ರಚ್ಚೆ ಹಿಡಿದಿದ್ದ. ಈಗ ಮಮ್ಮೀ ಇಲ್ಲ. ಮತ್ಯಾವ ಹೊಸ ನೌಟಂಕಿ ಶುರು ಮಾಡಿದ್ದಾನೊ! ಇತ್ತೀಚಿಗೆ ಮೆಥೆಡ್ ಆಕ್ಟಿಂಗ್ ಬೇರೆ ಪ್ರಾಕ್ಟಿಸ್ ಮಾಡ್ತಿದ್ದಾನೆʼ ಎಂದು ತಲೆ ಕೆರೆದುಕೊಂಡು, ಬಾಗಿಲನ್ನು ಒಡೆಯಲು ಕಾವಲುಗಾರರಿಗೆ ಹೇಳಿದ.

ಯಾರೂ ಒಳ ಬರದಂತೆ ಎಚ್ಚರಿಸಿ ತಾನೊಬ್ಬನೇ ರೂಮಿನೊಳಗೆ ಬಂದರೆ, ನಮೋ ಬಿಟ್ಟ ಕಣ್ಣು ಬಿಟ್ಟಂತೆ ಶೂನ್ಯದತ್ತ ದಿಟ್ಟಿಸುತ್ತ ಮಂಚದ ಮೇಲೆ ಕುಳಿತಿದ್ದ. ಮುಖದಲ್ಲಿ ದುಃಖ ಕೆರೆಯಂತೆ ನಿಂತಿತ್ತು. ಬಲಗಣ್ಣಿಂದ ಮಾತ್ರ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ʼಒಂದೇ ಕಣ್ಣಿನಿಂದ ಅಳು…ವಾಹ್! ಗ್ರೇಟ್ ಆಕ್ಟಿಂಗ್ʼ. ಯಾವುದಕ್ಕೂ ಇರಲಿ ಎಂದು ತನ್ನ ಮೊಬೈಲಲ್ಲಿ ಫೋಟೊ ಕ್ಲಿಕ್ಕಿಸಿದ. ಹಿನ್ನೆಲೆಯಲ್ಲಿ ಕಣ್ಣೀರಧಾರೆ…ಇದೇಕೆ…ಇದೇಕೆ…ಪ್ಯಾತೊ ಸಾಂಗ್ ಕೇಳಿಬರುತ್ತಿತ್ತು. “ಮಹಾಸ್ವಾಮಿಗಳೆ… ಏನಾಯಿತು? ಎಚ್ಚರಗೊಳ್ಳಿ” ಎಂದರೆ ನಮೋ ಅಲುಗಾಡದೆ ಶಿಲೆಯಾಗಿದ್ದ.

ಅ. ಕುತಂತ್ರಿ ಕೂಡಲೇ – ಆಪ್ತಕಾರ್ಯದರ್ಶಿ, ಕಪಿ ದಡ್ಡ, ಮಂತ್ರಿಮಂಡಲ, ಮಾ.ಕೃ.ಕುಟೀರದ ಪುರೋಹಿತ ಸೇರಿದಂತೆ ಎಲ್ಲಾ ಕೇಸರಿ ಪ್ರಮುಖರನ್ನು ಸೇರಿಸಿ ನಮೋ ಸಾಮ್ರಾಟರಿಗೆ ಆಗಿರುವ ಆಘಾತವನ್ನು ಅರಿಯಲು ತುರ್ತುಸಭೆಯನ್ನು ಕರೆದ. ಸಭೆಯಲ್ಲಿ ಕಳೆದೆರೆಡು ದಿನಗಳಿಂದ ನಮೋ ಸುತ್ತ ಆದ ಘಟನೆಗಳನ್ನು ಕೆದಕುತ್ತ ಶೋಧನೆ ನಡೆಯಿತು.

24×7 – ನಮೋಗೆ ಸಕಲ ಇಷ್ಟಾರ್ಥ ಸೇವೆ ಸಲ್ಲಿಸುತ್ತ ಜೊತೆಗಿರುವ ಆಪ್ತಕಾರ್ಯದರ್ಶಿಯ ಅಭಿಪ್ರಾಯವನ್ನು ಮೊದಲು ಕೇಳಲಾಗಿ “ಬಾಲಕನಂತಿದ್ದ ರಾಗಾ ಈಗ ಬ್ಲಾಕ್ ಬೆಲ್ಟ್ ತೊಟ್ಟು, ತೊಡೆ ತಟ್ಟುತ್ತ ಅಗ್ನಿವೀರ್, ಶೇರ್ ಮಾರ್ಕೆಟ್ ಸ್ಕಾಂಡಲ್, ಪರೀಕ್ಷೆ ಪೇಪರ್ ಲೀಕ್, ಜಾತಿ ಜನಗಣತಿ..ಎಕ್ಸೆಟ್ರಾಂತ ಇತ್ತೀಚಿಗೆ ಎಸೆಯುವ ಸವಾಲುಗಳಿಗೆ ಕೌಂಟರ್ ಕೊಡಲಾಗದೆ ಮಹಾಸ್ವಾಮಿಗಳು ಕಂಗೆಟ್ಟಿದ್ದರು. ಅದೂ ಸಾಲದೂಂತ ತಮ್ಮದೇ ಕಮಲೀ ಸಭಾ ನಡಾವಳಿಗಳ ಬಗ್ಗೆ ಬಹಳ ಕಳವಳಗೊಂಡಿದ್ದರು. ತಾನು ಎತ್ತಿ ಆಡಿಸಿ, ಮುದ್ದಾಡಿ ಗದ್ದುಗೆ ಮೇಲೆ ಕೂರಿಸಿದ ಬುಲ್ಡ್ ಡೋಜರ್ ಭೋಗಿಬಾಬಾ, ಸಭೆಗಳಲ್ಲಿ ಎಲ್ಲರಂತೆ ಸಾಷ್ಟಾಂಗ ಬೀಳುವುದಿರಲಿ ಕನಿಷ್ಟ ನಮಸ್ಕರಿಸಿ ಗೌರವ ಕೊಡದೆ ಅಪಮಾನಿಸಿದ್ದು ಅವರನ್ನು ಚಿಂತೆಯ ಕೂಪಕ್ಕೆ ತಳ್ಳಿತ್ತು. ಮೊನ್ನೆ ಅವರ ಫ್ಯಾಷನ್ ಡಿಸೈನರ್ ಅಳತೆ ತೆಗೆದುಕೊಳ್ಳುವಾಗ ಐವತ್ತಾರು ಇದ್ದ ಎದೆ ಗಾತ್ರ ಇಂಚಿನ ಪಟ್ಟಿಯಲ್ಲಿ ಮೂವತ್ತಾರಕ್ಕೆ ಇಳಿದದ್ದನ್ನು ನೋಡಿ ಅವರು ಕುಸಿದು ಹೋಗಿದ್ದರು” ಎಂದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.

“ಅದು ಇರಬಹುದು. ಆದರೆ…” ಎಂದು ಮಧ್ಯೆ ಬಾಯಿ ಹಾಕಿದ ವಿದೇಶಾಂಗ ಮಂತ್ರಿ “ನೆನ್ನೆ ರೂಸ್ ಗೆ ಹೋಗಿದ್ದಾಗ ಎರಡೂ ದೇಶದ ಪ್ರಧಾನಿಗಳನ್ನು ಕೂಡಿಸಿ ʼಫಾರಿನ್ ಮಿತ್ರೋ…ಇದು ಕಲಹಕ್ಕೆ ಕಾಲವಲ್ಲ. ಯುದ್ದ ನಿಲ್ಲಿಸಿʼ ಎಂದು ಶಾಂತಿಯ ಮಂತ್ರ ಜಪಿಸಿದ ವಿಶ್ವಗುರುವಿನ ಮಾತಿಗೆ ಅವರುಗಳು ಮೊದಲಿಗೆ ತಲೆಯಾಡಿಸಿ, ಕೈ ಕುಲುಕಿ ಹಗ್ ಮಾಡಿದ್ದರು. ಆದರೆ…ಅನಿವಾಸಿಗಳನ್ನು ಸ್ಟೇಡಿಯಮ್ಮಲ್ಲಿ ಗುಡ್ಡೇ ಹಾಕಿ, ದೇಶದಲ್ಲಿ ಆಗುತ್ತಿರುವ ಬುಲೆಟ್ ಟ್ರೈನ್ ಸ್ಪೀಡಿನ ಡೆವಲಪ್ ಮೆಂಟ್ ಬಗ್ಗೆ ಬುರುಡೆ ಬಿಡುತ್ತಿರಬೇಕಾದರೆ ಬಾಂಬೊಂದು ನಮೋ ಸಾಹೇಬರ ಅಡಿಗೆ ಬಂದು ಬಿತ್ತು. ಎದ್ದೇನೊ ಬಿದ್ದೇನೆಂದು ಪುಷ್ಪಕ ವಿಮಾನ ಹತ್ತಿ ವಾಪಸ್ಸು ಬರೋವಾಗ ನಮೋ ಸಾಹೇಬರು ಭಯದಿಂದ ನಡುಗುತ್ತಿದ್ದರು. ಅದೂ ಒಂದು ಕಾರಣ ಇರಬಹುದು” ಎಂದದ್ದು ಅ.ಕುತಂತ್ರಿಗೆ ಸರಿಬರಲಿಲ್ಲ. “ಹು…ಹು…ಇಲ್ಲ..ನಮೋ ಸಾಹೇಬರು ರಾಕೆಟ್ಟುಗಳನ್ನು ಕೈಯಲ್ಲೇ ಹಿಡಿದು ಹಾರಿಸುವ ಎಂಟೆದೆ ಅಲ್ಲ…ಹದಿನೆಂಟೆದೆ ಭಂಟ. ಹೆದರಿಕೊಂಡು ಬಂದಿರಲಾರರು. ತಾನಿಲ್ಲದ ಟೈಮಲ್ಲಿ ವೈರಿಗಳು ದೇಶವನ್ನು ಒಡೆದು ಹಾಕುತ್ತಾರೆಂದು ಬೇಗ ಬಂದಿದ್ದಾರೆ…ಅಷ್ಟೇ” ಎಂದು ಕಿತ್ತು ಹೋದ ನಮೋ ಧೈರ್ಯಕ್ಕೆ ಒಂದಷ್ಟು ತೇಪೆ ಮೆತ್ತಿದ.

ಅಷ್ಟರಲ್ಲಿ ಕಪಿ ದಡ್ಡ “ಕುತಂತ್ರಿಗಳೇ…ಸಾಮ್ರಾಟರ ಮನೋ ವೇದನೆಗೆ ನಾನೂ ಕಾರಣ ಇರಬಹುದು. ಆ ಪೊಮೆರಿಯನ್ ತಳಿಯ ಮಂಗನಾ ಶೇಪೌಟನ್ನು ಕಮಲೀ ಪಕ್ಷಕ್ಕೆ ಸೇರಿಸಿ ತಪ್ಪು ಮಾಡಿದೆ. ಎಷ್ಟು ಹೇಳಿದರೂ ನಾಬಾಲಿಕ್ ಬುದ್ದಿಯ ಅದಕ್ಕೆ ಅರ್ಥವಾಗುತ್ತಿಲ್ಲ. ಚಳುವಳಿ ಮಾಡುತ್ತಿರುವ ರೈತರು ಟೆರರಿಷ್ಟ್ ಗಳು. ಅಲ್ಲಿ ರೇಪ್ ಗಳು ಆಗುತ್ತಿವೆ. ಮರ್ಡರ್ ಮಾಡಿ ಡೆಡ್ ಬಾಡಿಗಳನ್ನು ನೇತು ಹಾಕಿದ್ದಾರೆ…ಹೀಗೆ ತಲೆಬುಡ ಇಲ್ಲದೆ ಮಾತಾಡುತ್ತಿದ್ದಾಳೆ. ಜನರು, ವಿರೋಧಿಗಳು ಇವೆಲ್ಲ ನಮೋ ಹೇಳಿಕೊಟ್ಟ ಗಿಳಿಮಾತುಗಳು ಎಂದು ವೃಥಾ ಸಾಮ್ರಾಟರನ್ನು ಛೇಡಿಸುತ್ತಿದ್ದಾರೆ. ಅಕಟಕಟಾ…” ಎಂದು ಗದ್ಗದಿತನಾದ.

ಎಷ್ಟು ಚರ್ಚಿಸಿದರೂ ನಮೋ ರೋದನೆಯ ಮೂಲ ಯಾವುದೆಂದು ತಿಳಿಯಲು ಸಭೆ ಸೋತಾಗ ಅ.ಕುತಂತ್ರಿ ಫೋರೆನಿಕ್ಸ್ ಲ್ಯಾಬ್ ತಂತ್ರಜ್ಞರಿಗೆ ಬರಹೇಳಿದ. ಇಡೀ ದೇಹ ಮುಚ್ಚುವಂತೆ ಪಿಪಿಇ ತೊಟ್ಟು ಬಂದ ಪರಿಣಿತರು ಸ್ಟ್ಯಾಚು ಆಗಿದ್ದ ನಮೋ ಕಣ್ಣೀರಿನ ಸ್ಯಾಂಪಲ್ಲನ್ನು ಸಂಗ್ರಹಿಸಿ ಅ.ಕುತಂತ್ರಿಗೆ ವಂದಿಸಿ ಹೊರಟಾಗ, “ವರ್ಷಗಟ್ಟಲೆ ರಿಸರ್ಚ್ ಮಾಡುತ್ತ ಕೂರಬೇಡಿ. ಬೇಗ ರಿಸಲ್ಟ್ ಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ” ಎಂದು ಗುಟುರು ಹಾಕಿದ. ಅಷ್ಟರಲ್ಲಿ ಕಾವಲುಗಾರ ಬಂದು ಆಪ್ತಕಾರ್ಯದರ್ಶಿಯ ಕಿವಿಗೆ ಉಸಿರಿದ್ದನ್ನು, ಅವನು ಅ.ಕುತಂತ್ರಿಯ ಕಿವಿಗೆ ಸುರಿದ.

ನಮೋ ಸಂಕಟದಲ್ಲಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. “ಏನದು ಹೇಳಿ. ನಿಮ್ಮ ಬೇಗುದಿ ಕಡಿಮೆಯಾಗುತ್ತೆ” ಎಂದು ಅ.ಕುತಂತ್ರಿ ಬೆನ್ನನ್ನು ನೀವಿದ. “ಅಲ್ಲಿ…ಅಲ್ಲಿ…ಬಂಗಾಲದಲ್ಲಿ… ಅತ್ಯಾಚಾರ…ಬಲಾತ್ಕಾರ…ದೀದಿ…ದೀದಿ…ಬೇಟಿ ಬಚಾವ್…ಬೇಟಿ ಪಡಾವ್” ಎಂದು ತೊದಲುತ್ತ ತೆರೆದಿದ್ದ ಕಣ್ಣುಗಳನ್ನು ಮುಚ್ಚಿ ಹಾಸಿಗೆಗೆ ಒರಗಿದ. ಒಂಟಿ ಕಣ್ಣೀರು ಮತ್ತಷ್ಟು ಒಸರಿ ಬಂತು.

ಮಹಿಳೆ ಶೋಷಣೆ ಬಗ್ಗೆ ನಮೋ ಸುರಿಸಿದ ಕೊಳಗಗಟ್ಟಲೆ ಕಣ್ಣೀರ ಬಗ್ಗೆ ಬಕೆಟ್ ಮಾಧ್ಯಮಗಳು ತರಹೇವಾರಿ ಹೆಡ್ಡಿಂಗ್ ಗಳನ್ನು ಕೊಟ್ಟು ಪ್ರಸಾರ ಮಾಡಿದವು. ಮಾತೃಹೃದಯದ ನಮೋ ಸಂಕಟಕ್ಕೆ ಲಂಡಭಕ್ತರ ಕರುಳು ಕಿವಿಚಿ ಬಂದು ಕಣ್ಣೀರಧಾರೆಯನ್ನು ಹರಿಸಿ, ಅಂಗಡಿಮುಂಗಟ್ಟು ಆಸ್ಪತ್ರೆಗಳ ಮೇಲೆ ದಾಳಿ ಎಸಗಿ ಧ್ವಂಸ ಮಾಡಿದರು. ರಸ್ತೆಗಳನ್ನು ಬಂದು ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಶೋಷಿತಳಿಗೆ ಸಂತಾಪ ಸೂಚಿಸಿದರು.

ಫೋರೆನಿಕ್ಸ್ ಲ್ಯಾಬ್ ನಲ್ಲಿ ತನಿಖೆ ನಡೆಸಿದ್ದ ತಂತ್ರಜ್ಞರಿಗೆ ಅಸಹಜ, ವಿಶೇಷವಾದ ಫಲಿತಾಂಶ ದೊರೆತು ʼಯುರೇಕಾ!ʼ ಎಂದು ಸಂಭ್ರಮಗೊಂಡರು. “ನಮೋ ಅವರ ಒಂದೇ ಕಣ್ಣಿನಲ್ಲಿ ಅಶ್ರು ಬಂದದ್ದಕ್ಕೆ ಕಾರಣ ಸಿಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಶೋಧನೆಯಿಂದ ತಿಳಿಯಬಹುದು. ಆದರೆ, ನಮೋ ಅವರು ಸುರಿಸಿದ ಕಣ್ಣೀರು, ಮೊಸಳೆ ಕಣ್ಣೀರಿಗೆ ಹೋಲಿಕೆಯಾಗುತ್ತಿರುವುದು ತನಿಖೆಯಲ್ಲಿ ತಿಳಿದು ಬಂದು ಅಚ್ಚರಿ ತಂದಿದೆ” ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.

“ದೇಶದಲ್ಲಿ ಇಪ್ಪತ್ತು ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಯೋಧರ ಪತ್ನಿಯರನ್ನು ಸೇರಿ ಹಲವು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಮಾನಭಂಗ ಎಸಗಲಾಗಿದೆ. ಇದ್ಯಾವುದರ ಬಗ್ಗೆ ಉಸಿರೆತ್ತದೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುವ ಸಾಮ್ರಾಟ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾನೆ. ಎಂಥಾ ನಾಚಿಗೆಗೇಡು!” ಎಂದು ದೇಶವಾಸಿಗಳು ನಮೋ ಆಷಾಢಭೂತಿತನಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರು.

ಚಂದ್ರಪ್ರಭ ಕಠಾರಿ
cpkatari@yahoo.com

ಇಲ್ಲಿ ನಮ್ಮವರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನದಿಂದ ಕರೆತಂದು ಉದ್ಯೋಗ ಕೊಡುವುದು ಸರಿಯೇ?: CAA ಕುರಿತು ಕೇಜ್ರಿವಾಲ್‌ ಪ್ರತಿಕ್ರಿಯೆ
ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ ಸಂಖ್ಯೆಯ ಹಿಂದೂ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಬರುವಂತೆ ಮಾಡುತ್ತೇವೆ,  ಕರೆ ತರುತ್ತೇವೆ. ಅವರಿಗೆ ಉದ್ಯೋಗ ಕೊಡಿಸುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ, ಇಲ್ಲೇ ನೆಲೆಸುವಂತೆ ಮಾಡುತ್ತೇವೆ ಅನ್ನುವುದು ವಿಚಿತ್ರ ಅಲ್ಲವೇ ಎಂದು ಪ್ರಶ್ನಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಚುನಾವಣೆ ಸಂದರ್ಭದಲ್ಲಿ CAA ಜಾರಿಗೆ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರ ಏನಾದರು ಒಳ್ಳೆ ಕೆಲಸ ಮಾಡಿದ್ದರೆ ಇವತ್ತು CAA ಬದಲಾಗಿ ತಾವು ಮಾಡಿದ ಕೆಲಸ ತೋರಿಸಿ ಓಟು ಕೇಳಬಹುದ್ದೀತು ಎಂದರು.

ಹಣದುಬ್ಬರ ಮತ್ತು ನಿರುದ್ಯೋಗ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಮಧ್ಯಮವರ್ಗದ ಕುಟುಂಬಕ್ಕೂ ಇಂದು ಮನೆ ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಬೆನ್ನು ಮುರಿಯುತ್ತಿದೆ, ಮತ್ತೊಂದೆಡೆ ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗ, ಮತ್ತು ಹಣದುಬ್ಬರಕ್ಕೆ ಸರಕಾರ ಪರಿಹಾರ ಹುಡುಕುವ ಬದಲು ಸಿಎ ಬಗ್ಗೆ ಮಾತನಾಡುತ್ತಿರುವುದು ತುಂಬಾ ದುಖಃಕರ ಸಂಗತಿ ಎಂದರು.

ಭಾರತದ ಅನೇಕ ಜನರು ನಿರಾಶ್ರಿತರಾಗಿದ್ದಾರೆ.  ಆದರೆ ಬಿಜೆಪಿಯವರು ಪಾಕಿಸ್ತಾನದಿಂದ ಜನರನ್ನು ಕರೆತಂದು ಭಾರತದಲ್ಲಿ ನೆಲೆಸಲು ಬಯಸುತ್ತಾರೆ.  ಅವರಿಗೆ ಮನೆಗಳನ್ನು ನೀಡಲು ಬಯಸುತ್ತಾರೆ.  ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕಾದ ಭಾರತ ಸರ್ಕಾರದ ಸರ್ಕಾರಿ ಹಣ ಬೇರೆ ದೇಶದ ಜನರಿಗೆ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.

ಆ ಮೂರು ದೇಶಗಳಲ್ಲಿ ಸುಮಾರು 2.5 ರಿಂದ 3 ಕೋಟಿ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಈ ಮೂರು ದೇಶಗಳು ಬಡ ದೇಶಗಳು ಹೌದು. ಭಾರತದ ಬಾಗಿಲು ತೆರೆದ ತಕ್ಷಣ ಈ ಮೂರು ದೇಶಗಳಿಂದ ಭಾರಿ ಜನಸಮೂಹವು ನಮ್ಮ ಭಾರತಕ್ಕೆ ಬರುತ್ತದೆ, ಈ 2.5 ಕೋಟಿ ಜನರಲ್ಲಿಯೂ ಸಹ. 1.5 ಕೋಟಿ ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆಲ್ಲ  ಯಾರು ಉದ್ಯೋಗ ಕೊಡುತ್ತಾರೆ?  ನೀವು ಅವರನ್ನು ಎಲ್ಲಿ ನೆಲೆಗೊಳಿಸುತ್ತೀರಿ? ಇವರಿಗೆಲ್ಲ ಬಿಜೆಪಿಯವರು ತಮ್ಮ  ಮನೆಯಲ್ಲಿ ಪಾಲು ಕೊಡುತ್ತಾರೆಯೇ? ಅವರು ತಮಗೆ ಸಿಗುವ ಉದ್ಯೋಗವನ್ನು ಇವರಿಗೆಲ್ಲ ಬಿಟ್ಟುಕೊಡುತ್ತಾರೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.

ಹಾಗಾದರೆ ಬಿಜೆಪಿ ಏಕೆ ಇಂಥ ಮಹಾನ್‌ ತಪ್ಪನ್ನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.̤ ಉತ್ತರ ಬಹಳ ಸರಳವಾಗಿದೆ. ಕೇವಲ ವೋಟ್ ಬ್ಯಾಂಕ್ ಸೃಷ್ಟಿಸುವ ಕೊಳಕು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಒಂದೂವರೆ ಕೋಟಿ ಜನರನ್ನು ಭಾರತಕ್ಕೆ ಕರೆತಂದು ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಭಾರೀ ಲಾಭವಾಗಬಹುದು. ಒಂದೆಡೆ  ಹರಿಯಾಣದ ಬಿಜೆಪಿಯ ಸರ್ಕಾರಕ್ಕೆ ಅಲ್ಲಿನ ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳನ್ನು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಕಳುಹಿಸುತ್ತಿದೆ.  ನಮ್ಮ ಮಕ್ಕಳನ್ನು ಯುದ್ಧಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಡೀ ಪ್ರಪಂಚದ ಯಾವುದೇ ದೇಶವು ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ದೇಶಗಳ ಬಡವರನ್ನು ನೆರೆಯ ದೇಶಗಳ ಜನರು ತಮ್ಮ ದೇಶಕ್ಕೆ ಬರುವುದನ್ನು ತಡೆಯಲು ವಿವಿಧ ರೀತಿಯ ಕಾನೂನುಗಳನ್ನು ಮಾಡುತ್ತದೆ. ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ.  ಪಕ್ಕದ ದೇಶದ ಬಡವರಿಗೆ ದೇಶವನ್ನು ಪ್ರವೇಶಿಸಲು ಬಾಗಿಲು ಪ್ರವೇಶಿಸುವುತ್ತಿರುವುದು ನಮ್ಮಲ್ಲಿಯೇ ಮೊದಲು. ಇಂಥ ಕೊಳಕು ರಾಜಕೀಯ ಮಾಡುತ್ತಿರುವ ಪ್ರಪಂಚದಲ್ಲೇ ಏಕೈಕ ಪಕ್ಷವೆಂದರೆ ಅದು ಬಿಜೆಪಿಯಾಗಿದೆ ಎಂದು ಹರಿಹಾಯ್ದರು.

ಯೋಚಿಸಬೇಕಾದ ವಿಷಯವೆಂದರೆ ಕಳೆದ 10 ವರ್ಷಗಳಲ್ಲಿ ಭಾರತದ 11 ಲಕ್ಷಕ್ಕೂ ಹೆಚ್ಚು ದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಭಾರತವನ್ನು ತೊರೆದಿದ್ದಾರೆ. ಈ ಜನರು ಭಾರತದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳನ್ನು ನಡೆಸುತ್ತಿದ್ದರು.  ಜನರಿಗೆ ಉದ್ಯೋಗ ನೀಡುತ್ತಿದ್ದರು.  ಬಿಜೆಪಿಯ ತಪ್ಪು ನೀತಿಗಳು ಮತ್ತು ಅವರ ದೌರ್ಜನ್ಯಗಳಿಂದ ಬೇಸತ್ತು ಅವರು ಭಾರತವನ್ನು ತೊರೆದರು. ನಿಜವಾಗಿಯೂ ವಾಪಸ್‌ ಕರೆತರಬೇಕಾದರೆ ಆ ಉದ್ಯಮಿಗಳನ್ನು ಕರೆತನ್ನಿ. ಅವರು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ.  ಅವರು ಹೊಸ ಕಾರ್ಖಾನೆಗಳನ್ನು ಮತ್ತು  ಹೊಸ ಉದ್ಯಮಗಳನ್ನು ತೆರೆಯುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.

2014ರ ಹಿಂದೆ ಬಂದ ನುಸುಳುಕೋರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ಇದು ಕೇವಲ ಆರಂಭ.  ಒಮ್ಮೆ ಬಾಗಿಲು ತೆರೆದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಸಮುದ್ರೋಪಾದಿಯಲ್ಲಿ ಜನ ಬರುತ್ತಾರೆ.  ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಈಶಾನ್ಯ ರಾಜ್ಯಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ಈ ವಲಸೆ ಜನರ ಭಾರವನ್ನು ಹೊರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ನಕಲಿ ಮೈಸೂರು ಸ್ಯಾಂಡಲ್ ಸೋಪ್ ಜಾಲ : ಬಿಜೆಪಿ ಘಟಾನುಘಟಿಗಳೇ ಇಲ್ಲಿ ಖದೀಮರು.!
ಇತ್ತೀಚೆಗಷ್ಟೆ ರಾಜ್ಯದಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಜಾಲದ ಬಗ್ಗೆ ಸುದ್ದಿ ಆದ ಬೆನ್ನಲ್ಲೇ ಈಗ ಆ ಜಾಲದ ಕಿಂಗ್ ಪಿನ್ ಗಳನ್ನು ಕರ್ನಾಟಕ ಅಧಿಕಾರಿಗಳು ಪತ್ತೆ ಹಚ್ಚಿ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಹೈದರಾಬಾದ್ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರುಗಳು ಎಂದು ತಿಳಿದು ಬಂದಿದೆ.

ಹೈದರಾಬಾದ್​ನಲ್ಲಿ ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ತಯಾರಿಕೆ ಘಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಾರ್ಖಾನೆ ನಡೆಸುತ್ತಿದ್ದ ರಾಕೇಶ್ ಜೈನ್, ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ. ಆರೋಪಿತ ಜೈನ್​ಗಳಿಬ್ಬರೂ ಬಿಜೆಪಿಯ ಸಕ್ರಿಯ ನಾಯಕರು, ಕಾರ್ಯಕರ್ತರು ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದರು.

ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ನಕಲಿ ಮೈಸೂರು ಸ್ಯಾಂಡಲ್ ಸೋಪ್ ಜಾಲ ಸಿಕ್ಕಿಬಿದ್ದ ಸಂಗತಿಯನ್ನು ವಿವರಿಸಿದ್ದಾರೆ. “ಸಚಿವ ಎಂಬಿ ಪಾಟೀಲ್ ಅವರಿಗೆ ಅನಾಮಿಕನೊಬ್ಬ ಕರೆ ಮಾಡಿ, ಮೈಸೂರು ಸ್ಯಾಂಡಲ್ ನಕಲಿ​ ಸೋಪ್ ಮಾರಾಟದ ಬಗ್ಗೆ ಮಾಹಿತಿ ನೀಡುತ್ತಾನೆ. ಇದನ್ನು ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟದ ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡುತ್ತಾರೆ. ನಂತರ ಅಧಿಕಾರಿಗಳು ನಕಲಿ ಸೋಪ್ ತಯಾರಿಕೆ ಮತ್ತು ಮಾರಾಟ ಜಾಲ ಪತ್ತೆ ಹಚ್ಚಲು ಮುಂದಾದರು ಎಂದು ತಿಳಿಸಿದರು.

ನಂತರ ಹೈದರಾಬಾದ್​ಗೆ ತೆರಳಿದ ಅಧಿಕಾರಿಗಳು 25 ಲಕ್ಷ ರೂ. ಆರ್ಡರ್ ಇದೆ, ಬಹಳ ದೊಡ್ಡ ಆರ್ಡರ್ ಇರುವುದರಿಂದ ಕಾರ್ಖಾನೆಗೆ ಬರುತ್ತೇವೆ ಎಂದು ಹೇಳುತ್ತಾರೆ. ನಂತರ ಸಿಕ್ಕ ಸೋಪುಗಳ ಮಾದರಿಯನ್ನು ಪರಿಶೀಲಿಸಿ, ನಕಲಿ ಎಂದು ಖಚಿತವಾಗುತ್ತಿದ್ದಂತೆ ಅಧಿಕಾರಿಗಳು ಕಾರ್ಖಾನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಕಲಿ ಸೋಪ್​ ಮತ್ತು ಕವರ್​ಗಳು ಪತ್ತೆಯಾಗಿವೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಪ್ರಕರಣದ ಸಂಬಂಧ ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬುವವರ ಮೇಲೆ ಎಫ್ಐಆರ್ ದಾಖಲಾಗಿದೆ. ಇವರಿಬ್ಬರೂ ಸ್ಥಳೀಯ ಘಟಾನುಘಟಿ ಬಿಜೆಪಿ ನಾಯಕರು, ಇವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಬಿಜೆಪಿ ರಾಜಕಾರಣಿ ರಾಜಾ ಸಿಂಗ್ ನಿಕಟ ಸಂಪರ್ಕ ಇದೆ ಎಂದು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ ಬಿಜೆಪಿ ಪರಾಜಿತ ಅಭ್ಯರ್ಥಿಯಾದ ಮಣಿಕಂಠ ರಾಥೋಡ್ ಕೂಡಾ ಇವರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿದೆ.

ಉತ್ತರಾಖಂಡ: ಬಿಜೆಪಿ ನಾಯಕನಿಂದ ಅಪ್ರಾಪ್ತೆಯ ಅತ್ಯಾಚಾರ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂಪಾವತ್ ಜಿಲ್ಲೆಯ ಬಿಜೆಪಿ ನಾಯಕನ ಮೇಲೆ ಉತ್ತರಾಖಂಡ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಮಲ್ ರಾವತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್‌ ಮೀಡಿಯಾ

ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಅಡಿಯಲ್ಲಿ (ಪೋಕ್ಸೋ)  ಪ್ರಕರಣ ದಾಖಲಿಸಲಾಗಿದೆ ಎಂದು ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ.

ಶನಿವಾರ ವೈದ್ಯಕೀಯ ಪರೀಕ್ಷೆಯ ನಂತರ ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಪಿಂಚಾ ತಿಳಿಸಿದ್ದಾರೆ. (PTI)

ಬಿಜೆಪಿ ಜೊತೆ ಸಂಬಂಧಿತ ಮೂವರಿಂದ ಮಹಿಳೆ ಮೇಲೆ ಹಲ್ಲೆ: ಜಾಮೀನು ಮಂಜೂರು
ಮಹಾರಾಷ್ಟ್ರ: ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರಿಗೆ ಥಾಣೆ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ ಮತ್ತು. ಈ ಗುಂಪು ಮಹಿಳೆಯನ್ನು ಕಾರಿನಿಂದ ಹಲ್ಲೆ ಮಾಡಲು ಯತ್ನಿಸಿತ್ತು.

ಅಶ್ವಜಿತ್ ಗಾಯಕವಾಡ್, ರೊಮಿಲ್ ಪಾಟೀಲ್ ಮತ್ತು ಸಾಗರ್ ಶೆಡ್ಗೆ ಜಾಮೀನು ಸಿಕ್ಕಿದ ಆರೋಪಿಗಳು.  ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಅಶ್ವಜಿತ್ ಗಾಯಕವಾಡ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲಕುಮಾರ ಗಾಯಕವಾಡ ಅವರ ಪುತ್ರ.

ಪ್ರಿಯಾ ಸಿಂಗ್ ಎಂಬ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಘೋಡ್‌ಬಂದರ್ ರಸ್ತೆಯ ಹೋಟೆಲ್‌ಗೆ ಗಾಯಕ್ವಾಡ್ ಅವರನ್ನು ಭೇಟಿಯಾಗಲು ಹೋಗಿದ್ದಾಗಿ ಹೇಳಿರುವ ಮಹಿಳೆಯ ಜೊತೆಗೆ ಅಶ್ವಜಿತ್‌ ಜಗಳವಾಡಿರುವ ಬಗ್ಗೆ  ಪಿಟಿಐ ವರದಿ ಮಾಡಿದೆ.

ಗಾಯಕ್‌ವಾಡ್ ಅವರ ಕಾರಿನಿಂದ ಆಕೆ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಆಕೆಯನ್ನು ಕಾರಿನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ.

ಅಶ್ವಜಿತ್ ಗಾಯಕ್‌ವಾಡ್ ಜತೆ ಸಂಬಂಧ ಹೊಂದಿದ್ದ ಈಕಗೆ ಆತನ ವೈವಾಹಿಕ ಬದುಕಿನ ಬಗ್ಗೆ ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಆದರೂ, ಗಾಯಕ್‌ವಾಡ್ ಆಕೆ ಕೇವಲ ಸ್ನೇಹಿತೆ ಮಾತ್ರ, ಅವಳು ತನ್ನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಳು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾನುವಾರ ಪೊಲೀಸರು ಗಾಯಕ್‌ವಾಡ್, ಪಾಟೀಲ್ ಮತ್ತು ಶೆಡ್ಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 279 (ವೇಗದ ಚಾಲನೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಭಾನುವಾರ ಬಂಧಿಸಿದ್ದರು.

ಸೋಮವಾರ, ಆರೋಪಿಗಳ ಪರ ವಕೀಲ ಬಾಬಾ ಶೇಖ್ ಅವರು ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದ್ದರು, ಅವರ ಮೇಲಿನ ಎಲ್ಲಾ ಆರೋಪಗಳು ಜಾಮೀನು ನೀಡಬಹುದಾದವು ಮತ್ತು ವಿಚಾರಣೆಗಾಗಿ ಪೊಲೀಸರಿಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪೊಲೀಸರು ಏಕೆ ಕೊಲೆ ಯತ್ನದ ದೂರನ್ನು ದಾಖಲಿಸಿಲ್ಲ ಎಂದು ಮಹಿಳೆಯ ಪರ ವಕೀಲರು ಕೇಳಿದ್ದಾರೆ.

ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು. ತಲಾ 15,000 ರೂ.ಗಳ ಬಾಂಡ್ ಅನ್ನು ನೀಡುವಂತೆ ಸೂಚಿಸಿದೆ.

ಮೈಸೂರು ಬಸ್ ನಿಲ್ದಾಣ ವಿವಾದ ; ಗೆದ್ದದ್ಯಾರು, ಸೋತಿದ್ಯಾರು
ಮೈಸೂರು: ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ ಸಿಂಹ ಇಬ್ಬರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬಸ್‌ಸ್ಟ್ಯಾಂಡ್ ತನ್ನ ಎರಡು ಗೋಪುರಗಳನ್ನು ಕಳೆದುಕೊಳ್ಳುವುದರೊಂದಿಗೆ ವಿವಾದಕ್ಕೆ ಒಂದು ಹಂತದ ಪರಿಹಾರ ಸಿಕ್ಕಂತಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ ಸಿಂಹ “ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು.” ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಈ ನಡೆ ಬಿಜೆಪಿ ಹಿರಿಯ ರಾಜಕಾರಣಿ ರಾಮದಾಸ್ ಅವರಿಗೆ ಆದ ಅವಮಾನವೆಂದೇ ಅವರ ಅಭಿಮಾನಿಗಳು ಅಭಿಪ್ರಾಯಪಡುತ್ತಾರೆ. ಆ ರೀತಿಯ ಗೋಪುರಗಳಿರುವ ರಚನೆ ಮೈಸೂರು ಸೇರಿದಂತೆ ಕರ್ನಾಟಕದ ಎಲ್ಲೆಡೆ ಇದ್ದರೂ ಇದನ್ನೇ ಟಾರ್ಗೆಟ್ ಮಾಡಿರುವುದು ಪ್ರತಾಪ ಸಿಂಹ ಅವರ ದ್ವೇಷದ ರಾಜಕಾರಣದ ಮುಂದುವರೆದ ಭಾಗ ಎನ್ನುತ್ತಿದ್ದಾರೆ.

ಇದರಿಂದ ಮೈಸೂರು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ. ಬಸ್ ನಿಲ್ದಾಣದ ಗುಂಬಜ್ ಬಗ್ಗೆ ಸ್ವತಃ ಶಾಸಕ ರಾಮದಾಸ್ ನಾನಾ ರೀತಿಯಲ್ಲೂ ಸಮರ್ಥನೆ ಕೊಟ್ಟರೂ ಅವರ ಹಿರಿತನಕ್ಕೂ ಬೆಲೆ ಕೊಡದೇ ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದು ಕೂತಿದ್ದರು.

ಇದರ ನಡುವೆ ಬಸ್ ನಿಲ್ದಾಣದ ಗುತ್ತಿಗೆದಾರ ಮುಸ್ಲಿಂ ಎಂಬ ಬಗ್ಗೆಯೂ ಪ್ರತಾಪ್ ಸಿಂಹ ಗುಂಪು ಇನ್ನೊಂದು ರೀತಿಯಲ್ಲಿ ವಾದ ಹರಿಬಿಟ್ಟಿತ್ತು. ಅಲ್ಲೂ ಸಹ ಶಾಸಕ ರಾಮದಾಸ್ ಗುತ್ತಿಗೆದಾರನ ಹೆಸರನ್ನು ಬಹಿರಂಗಪಡಿಸಿದ್ದರು. ಜೊತೆಗೆ ಅನವಶ್ಯಕವಾಗಿ ಬಸ್ ನಿಲ್ದಾಣದ ವಿವಾದಕ್ಕೆ ಧರ್ಮದ ಲೇಪನ ಕೊಟ್ಟ ಪ್ರತಾಪ್ ಸಿಂಹ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಅಷ್ಟೆ ಅಲ್ಲ, ನನ್ನ ಕ್ಷೇತ್ರದಲ್ಲಿ ಮುಕ್ತವಾಗಿ ನನಗೆ ಜನಸೇವೆ ಮಾಡಲು ಆಗುತ್ತಿಲ್ಲ ಎಂದೂ ಸಹ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಇವೆಲ್ಲದರಿಂದ ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂಬುದು ಸ್ಪಷ್ಟವಾಗಿತ್ತು.

ಈ ಹಿಂದೆ ಮೈಸೂರಿನ ರಿಂಗ್ ರೋಡ್ ವಿಷಯದಲ್ಲೂ ಸಂಸದ ಮತ್ತು ಶಾಸಕರ ನಡುವೆ ವಿವಾದವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದರ ಮುಂದುವರೆದ ಭಾಗವೇ ಈ ಬಸ್‌ಸ್ಟ್ಯಾಂಡ್ ವಿವಾದವಾಗಿದ್ದು ಇಬ್ಬರು ರಾಜಕಾರಣಿಗಳ ನಡುವಿನ ಪ್ರತಿಷ್ಟೆಯ ಜಗಳಕ್ಕೆ ನಷ್ಟವಾಗಿದ್ದು ಜನರ ತೆರಿಗೆಯ ಹಣವೆನ್ನುವುದು ವಿಪರ್ಯಾಸ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.

ಬಿ.ಎಲ್ ಸಂತೋಷ್ ಗೆ ಬಂಧನದ ಭೀತಿ; ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ SIT ಕಡೆಯಿಂದ ಸಮನ್ಸ್ ಜಾರಿ
ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದ್ದ ಮಂದಿ ಬಿ.ಎಲ್.ಸಂತೋಷ್ ನೇತೃತ್ವದಲ್ಲೇ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ ವಿಡಿಯೋ ಸಾಕ್ಷಿಯನ್ನು TRS ನಾಯಕರು ಬಿಡುಗಡೆ ಮಾಡಿದ್ದರು.

ಸದ್ಯ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ (SIT) ಬಿ.ಎಲ್.ಸಂತೋಷ್ ಗೆ ಸಮನ್ಸ್ ನೀಡಿದೆ. ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ.ಆನಂದ್ ನೇತೃತ್ವದ ವಿಶೇಷ ತನಿಖಾ ತಂಡ ಮತ್ತು ನ್ಯಾಯಾಧೀಶರ ಮೇಲ್ವಿಚಾರಣೆ ನಂತರ ಈ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಿದೆ. ಅದರಂತೆ ನವೆಂಬರ್ 29 ರ ಒಳಗೆ ತನಿಖೆಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಮಾತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಈ ಹಿಂದೆಯೇ ವರದಿಯಾದಂತೆ ಟಿಆರ್ಎಸ್ ಶಾಸಕರ ಖರೀದಿಗೆ ಇಳಿದಿದ್ದ ಮೂವರು ಆರೋಪಿಗಳಾದ ಸತೀಶ್ ಶರ್ಮಾ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬುವವರನ್ನು ಅಕ್ಟೋಬರ್ 26 ರಂದು ಹೈದರಾಬಾದ್ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಹಣದ ಮೂಲಕ ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ TRS ಆರೋಪಿಸುತ್ತಲೇ ಬಂದಿತ್ತು, ಆದರೆ ಯಾವುದೇ ಗಟ್ಟಿಯಾದ ಸಾಕ್ಷ್ಯಗಳು ಇರಲಿಲ್ಲ.

ಆ ನಂತರ ಆದ ಮೂವರು ಖದೀಮರ ಬಂಧನದ ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ BJP ಹಿನ್ನೆಲೆಯ ವ್ಯಕ್ತಿಗಳನ್ನು ಹಿಡಿಯಲು TRS ಯಶಸ್ವಿಯಾಗಿತ್ತು.

ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ್ದೂ ಸಹ ವರದಿಯಾಗಿದೆ. ಈಗಾಗಲೇ ತೆಲಂಗಾಣ ಪೊಲೀಸರ ಆತಿಥ್ಯದಲ್ಲಿ ಇರುವ ಮೂವರು ಆರೋಪಿಗಳ ಹೇಳಿಕೆಯ ಅಡಿಯಲ್ಲಿ ತೆಲಂಗಾಣ ಪೊಲೀಸರು ಪುತ್ತೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

ಸದ್ಯ ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡ ಮೂಲದವರಾಗಿರುವ ಕಾರಣ ಶಾಸಕರ ಖರೀದಿ ಕಾರಣಕ್ಕೆ ಇರಿಸಿಕೊಂಡಿದ್ದರು ಎನ್ನಲಾದ ಹಣ ಮತ್ತು ಇನ್ನುಳಿದ ಆರೋಪಿಗಳ ಶೋಧಕ್ಕೆ ತೀವ್ರ ತಪಾಸಣೆಗೆ ತೆಲಂಗಾಣ ಪೊಲೀಸರು ಇಳಿದಿದ್ದಾರೆ.

ಬಿ.ಎಲ್.ಸಂತೋಷ್ ಗೆ ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಾಗಿದ್ದು, ನವೆಂಬರ್ 21 ರ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ ನಲ್ಲಿ ಸೂಚಿಸಲಾಗಿದೆ. ತೆಲಂಗಾಣ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಷ್ಟು ಸುಲಭವಾಗಿ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಮಾಹಿತಿಯನ್ನು ಟಿಆರ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ತೆಲಂಗಾಣದಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳು ಸೂಚಿಸಿದ ಪ್ರಮುಖ ಹೆಸರುಗಳಲ್ಲಿ ಬಿ.ಎಲ್.ಸಂತೋಷ್ ಮೊದಲಿಗರಾಗಿ ನಂತರ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೆಸರು ಮುಂಚೂಣಿಯಲ್ಲಿದೆ.

ಮಕ್ಕಳ ದಿನದಂದು ನೆಹರೂ ಹೆಸರು ಮರೆತ ಬಿಜೆಪಿಗರು ; ಕಣ್ತಪ್ಪೋ? ಉದ್ದೇಶಪೂರ್ವಕವೋ?
ಇಂದು ಮಕ್ಕಳ ದಿನಾಚರಣೆ. ಎಲ್ಲರಿಗೂ ಗೊತ್ತಿರುವಂತೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ( Nehru ) ಅವರ ಜಯಂತಿಯಂದು ಭಾರತದಲ್ಲಿ ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಮಕ್ಕಳನ್ನು ನೆಹರೂ ಅವರು ಬಹುವಾಗಿ ಇಷ್ಟ ಪಡುತ್ತಿದ್ದ ಹಿನ್ನೆಲೆಯಲ್ಲಿ ನೆಹರು ಅವರ ನಿಧನದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14ರಂದು ನಾವೆಲ್ಲರೂ ಈ ದಿನವನ್ನು ಆಚರಿಸಿಕೊಂಡು ಬಂದಿರುತ್ತೇವೆ.

ಅಂದಹಾಗೆ ಪ್ರತೀ ಬಾರಿಯ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಸಮಾಜದಲ್ಲಿ ಹಿರಿಯರು, ತಿಳಿದವರು, ಗುರು ಸಮಾನರು ಅನ್ನಿಸಿಕೊಂಡವರು ಮಕ್ಕಳ ದಿನದ ಮಹತ್ವ, ಅದರ ಅಗತ್ಯದ ಜೊತೆಗೆ ಅದರ ಹಿನ್ನಲೆಯನ್ನೂ ತಿಳಿಸಿಕೊಡುವುದು ವಾಡಿಕೆಯಂತೆ ಬಂದಿದೆ. ಜೊತೆಗೆ ಅದು ಇಂದಿನ ತುರ್ತು ಅಗತ್ಯ ಕೂಡಾ. ಯಾಕೆಂದರೆ ಇತ್ತೀಚೆಗೆ ಸುಳ್ಳು ಮತ್ತು ತಪ್ಪು ಮಾಹಿತಿಗಳಿಂದ ಸಮಾಜದಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಜವಾಬ್ದಾರಿಯುತ ಜನಪ್ರತಿನಿಧಿಗಳೇ ಮಾಡಲು ಶುರುವಿಟ್ಟುಕೊಂಡಿರುವುದು ದುರಂತ.

ಇದರ ಮುಂದುವರಿದ ಭಾಗವಾಗಿ ಈ ದಿನ ಬಿಜೆಪಿ ಪಕ್ಷದ ಎಲ್ಲಾ ಪ್ರಮುಖ ಮುಖಂಡರು ಮಕ್ಕಳ (Children’s day) ದಿನಾಚರಣೆಯಂದು ಎಲ್ಲೂ ಸಹ ಜವಾಹರಲಾಲ್ ನೆಹರೂ ಅವರ ಹೆಸರು, ನೆಹರೂ ಭಾವಚಿತ್ರ, ನೆಹರೂ ಅವರ ಸಣ್ಣ ಪರಿಚಯದ ಉಲ್ಲೇಖವನ್ನೂ ಮಾಡದೇ, ಕೊನೆಯ ಪಕ್ಷ ಅವರೊಬ್ಬ ಮಾಜಿ ಪ್ರಧಾನಿ ಎಂಬ ಗೌರವವನ್ನೂ ಕೊಡದೇ ಅವಮಾನಿಸಿರುವುದು ಬೆಳಕಿಗೆ ಬಂದಿದೆ.

ನಾಡಿನ ಎಲ್ಲಾ ಪ್ರೀತಿಯ ಮಕ್ಕಳಿಗೆ 'ಮಕ್ಕಳ ದಿನಾಚರಣೆ'ಯ ಶುಭಾಶಯಗಳು.

ಶಿಕ್ಷಣ, ಉತ್ತಮ ನಡೆ, ನುಡಿ, ಸಚ್ಚಾರಿತ್ರ್ಯದೊಂದಿಗೆ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸುತ್ತೇನೆ. #ChildrensDay pic.twitter.com/1JxqfLMA22
— B Sriramulu (@sriramulubjp) November 14, 2022

ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಮತ್ತು ನಮ್ಮ ಸಂತೋಷದ ಭವಿಷ್ಯದ ಕನಸುಗಳನ್ನು ಹೊತ್ತಿದ್ದಾರೆ.

ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. pic.twitter.com/e2wx5ejllH
— S T Somashekar Gowda (@STSomashekarMLA) November 14, 2022

ಇಂದಿನ ಮಕ್ಕಳು ಮುಂದಿನ ಪ್ರಜೆಗಳು.

ಮಕ್ಕಳಿಗೆ ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಮಾನವರಾಗಲು ಕೌಶಲ್ಯ, ಶಿಸ್ತು, ಸಂಸ್ಕಾರ ಕಲಿಸಿ, ಉತ್ತಮ ನಾಗರೀಕರನ್ನಾಗಿಸಿ, ಮಕ್ಕಳನ್ನು ನಮ್ಮ ದೇಶದ ಆಸ್ತಿ, ಭವಿಷ್ಯರನ್ನಾಗಿ ಮಾಡೋಣ.

ಸಮಸ್ತ ನಾಡಿನ ಜನತೆಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.💐#happychildrensday2022 pic.twitter.com/DURxNdFDCU
— Vijayendra Yeddyurappa (@BYVijayendra) November 14, 2022

ಪ್ರತೀ ಬಾರಿಯೂ ಭಾರತದಲ್ಲಿ ನೆಹರೂ ಅವರ ವಿಚಾರ ಬಂದಾಗ ಬಿಜೆಪಿ ಪಕ್ಷ ಬೇಕಂತಲೇ ನೆಹರೂ ಅವರನ್ನು ನಿರ್ಲಕ್ಷಿಸಿದ್ದಿದೆ (Avoid). ನಿರ್ಲಕ್ಷ್ಯ ಮಾತ್ರವಲ್ಲ ದೇಶದಲ್ಲಿನ ಯಾವುದೇ ಅವಗಡಗಳಿಗೂ ‘ನೆಹರೂ ಅವರೇ ಕಾರಣ’ ಎಂಬ ರೀತಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ತಪ್ಪುಗಳನ್ನು ಮರೆಮಾಚಲು ನೆಹರೂ ಅವರ ಬಗ್ಗೆ ಮೇಲಿಂದ ಮೇಲೆ ಜನರ ಮನಸ್ಸಿನಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಬಿತ್ತುತ್ತಲೇ ಬಂದಿದೆ.

ಸಧ್ಯ ಇವತ್ತಿನ ಮಕ್ಕಳ ದಿನಾಚರಣೆ ಕೂಡಾ ಕರ್ನಾಟಕ ಬಿಜೆಪಿ ಪಕ್ಷದ ಪ್ರಮುಖ ಮುಖಂಡರುಗಳು ತಾವೊಬ್ಬ ಆಡಳಿತ ಪಕ್ಷದ ಪ್ರತಿನಿಧಿ ಎಂಬುದನ್ನೂ ಮರೆತು ಬಿಜೆಪಿ ಪಕ್ಷದ ಅಜೆಂಡಾದ ಭಾಗದಂತೆ ವರ್ತಿಸಿರುವುದು ಸ್ಪಷ್ಟ.

Our nation is home to 444 mn children. Each of that child will make our country's future in the coming years. As a govt we are committed to ensuring every child has equal access to the best of education, healthcare and growth opportunities. #ChildrensDay pic.twitter.com/YB6nIqfkOG
— Dr Sudhakar K (@mla_sudhakar) November 14, 2022

ಎಲ್ಲಾ ಪ್ರೀತಿಯ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ಎಲ್ಲರೂ ಏಕತೆಯಿಂದ ವೈವಿಧ್ಯತೆಯ ನಾಡು ಕಟ್ಟಲು ಮುಂದಾಗಿ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ.#ChildrensDay pic.twitter.com/e5LBHZVaOa
— Munirathna (@MunirathnaMLA) November 14, 2022

'ಮಕ್ಕಳ ದಿನಾಚರಣೆ' ವಿಶೇಷ ದಿನವಾಗಿದ್ದು, ಮಕ್ಕಳ ಹಕ್ಕುಗಳು, ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಭಾರತದಾದ್ಯಂತ ಆಚರಿಸಲಾಗುತ್ತದೆ.

ನನ್ನೆಲ್ಲ ಪ್ರೀತಿಯ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು pic.twitter.com/z4G3Qfo21E
— R. Ashoka (ಆರ್. ಅಶೋಕ) (@RAshokaBJP) November 14, 2022

ಸಧ್ಯ ಬಿಜೆಪಿ ಪಕ್ಷದ ಪ್ರಮುಖ ಮುಖಂಡರ ಈ ನಡೆ ಕಣ್ತಪ್ಪಿನಿಂದ ಆದ ಪ್ರಮಾದ ಖಂಡಿತಾ ಅಲ್ಲ. ಭಾರತದಲ್ಲಿ ಮಕ್ಕಳ ದಿನಾಚರಣೆ ಅಂತ ಬಂದಾಗ ಮುಖ್ಯವಾಗಿ ಬರುವ ಹೆಸರೇ ಮಕ್ಕಳ ಪ್ರಿಯವಾದ ವ್ಯಕ್ತಿ ಚಾಚಾ ನೆಹರೂ. ಪಕ್ಷ ಸಿದ್ಧಾಂತಗಳ ಆಚೆಗೂ ಭಾರತಕ್ಕೆ ನೆಹರೂ ಅವರ ಕೊಡುಗೆ ಅಪಾರವಾದದ್ದು.

ದುರಂತ ಎಂದರೆ ಇಂತಹ ಸಂದರ್ಭದಲ್ಲಿ ಗಟ್ಟಿ ದನಿಯಲ್ಲಿ ನಿಂತು ಪ್ರಶ್ನಿಸಬೇಕಾದ ಕಾಂಗ್ರೆಸ್ ಪಕ್ಷಕ್ಕೆ ಜಡತ್ವ ಬಂದಂತಿದೆ. ಇಂತಹ ಯಾವುದೇ ಪ್ರಮಾದಗಳಾದ ಸಂದರ್ಭದಲ್ಲಿ ಕಾಂಗ್ರೆಸ್ ದಿಟ್ಟತನದಿಂದ ಬಿಜೆಪಿ ಎದುರು ವಾದಿಸಿದ್ದು ಇತ್ತೀಚಿನ ದಿನಗಳಲ್ಲಿ ಇಲ್ಲವೇ ಇಲ್ಲ. ಇದೂ ಸಹ ಬಿಜೆಪಿ ಪಕ್ಷದ ಇಂತಹ ದೋರಣೆಗೆ ಸುಲಭದ ದಾರಿಯಾದಂತಾಗಿದೆ.

ಮಕ್ಕಳು ದೇವರು, ದೇವರೂ ಒಂದು ಮಗು.

ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. pic.twitter.com/d0JBAuJqCj
— V. Somanna (@VSOMANNA_BJP) November 14, 2022

ಪ್ರೀತಿಯ ಮಕ್ಕಳಿಗೆ 'ಮಕ್ಕಳ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು.
ನಿಮ್ಮ ಆಸಕ್ತಿಯ ವಿಷಯಗಳನ್ನು ಕಲಿಯುವ ಮೂಲಕ ಜೀವನದ ಗುರಿಯ ಕಡೆಗೆ ಉತ್ಸಾಹ, ಸಮಚಿತ್ತದಿಂದ ಸಾಗಿ. ಯಶಸ್ಸು ಖಂಡಿತ ನಿಮ್ಮದಾಗುತ್ತದೆ. #ChildrensDay2022 pic.twitter.com/hZQjt6JTdg
— B.C Nagesh (@BCNagesh_bjp) November 14, 2022

ನಾವು ರಸ್ತೆ, ವಿಶ್ವವಿದ್ಯಾಲಯ ನಿರ್ಮಿಸಿದರೆ ಬಿಜೆಪಿಯವರು ಮಾತ್ರ ಬಳಸುತ್ತಾರೆಯೇ?: ಜೆಪಿ ನಡ್ಡಾ
ಛತ್ತೀಸ್‌ಗಢ: ಇಲ್ಲಿಯ ಬಿಲಾಸ್‌ಪುರದಲ್ಲಿ ಮಾತನಾಡಿದ ಬಿಜೆಪಿ ಮುಖ್ಯಸ್ಥ ಜೆ.ಪಿ ನಡ್ಡಾ ಅವರು ನಾವು ರಸ್ತೆ, ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದರೆ ಅದನ್ನು ಬಿಜೆಪಿಯವರು ಮಾತ್ರ ಬಳಸುತ್ತಾರೆಯೇ ಎಂದು ಜನರನ್ನು ಉದ್ದೇಶಿಸಿ ಹೇಳಿದರು.

ನೀವು ಬಿಜೆಪಿ ಅಥವಾ ಕಾಂಗ್ರೆಸ್ ಅನ್ನು ನೋಡಬೇಡಿ, ನಿಮ್ಮ ಬಗ್ಗೆ ಯಾರು ಯೋಚಿಸುತ್ತಿದ್ದಾರೆ ಎನ್ನುವುದನ್ನು ನೋಡಿ ಮತ್ತು ಬಿಜೆಪಿ ಆ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

ಇನ್ನು ಮಾತು ಮುಂದುವರೆಸಿದ ಅವರು, ನಾವು ಈಗ ಅವಕಾಶವನ್ನು ಪಡೆದಿದ್ದೇವೆ, ಆದ್ದರಿಂದ ನಮಗೆ ಬೆಂಬಲ ನೀಡಿ, ನಾವು ಎಲ್ಲರಿಗೂ ಕೆಲಸ ಮಾಡುತ್ತೇವೆ ಎಂದು ನಾನು ಕಾಂಗ್ರೆಸ್ ಬೆಂಬಲಿಗರಿಗೆ ಹೇಳುತ್ತೇನೆ ಎಂದರು.