blog – Peepal Media

ಸ್ವಾತಂತ್ರ್ಯ ಹೋರಾಟದಲ್ಲಿ ಬಿಲ್ಲವರು: ಜೈಲಿನ ಕಡತಗಳು ಹೇಳುವ ಸಾಕ್ಷಿ
ಭಾರತದ ಸ್ವಾತಂತ್ರ್ಯ ಚಳುವಳಿಯು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು, ಪ್ರಾಣವನ್ನು ಮುಡಿಪಾಗಿಟ್ಟ ಜನರ  ನಿಸ್ವಾರ್ಥ ಹೋರಾಟದ ಸುದೀರ್ಘ ಇತಿಹಾಸದ ಜನ ಸಂಗ್ರಾಮ. ಬ್ರಿಟಿಷ್‌ ಸಾಮ್ರಾಜ್ಯಶಾಹಿಯ ವಿರುದ್ಧ ಶಸ್ತ್ರ ಹಿಡಿದು ಹೋರಾಟ ಮಾಡದೇ ಹೋದರೂ ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ಧಾರೆ ಎರೆದ ಹಲವರ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವು ಈ ನಾಡಿನ ಮೂಲೆ ಮೂಲೆಗಳಲ್ಲಿ ಪಿಸುಗುಡುತ್ತಿದ್ದು ಈ ಹೋರಾಟಗಾರರ ಬಗ್ಗೆ ಇತಿಹಾಸದ ಪುಟಗಳು ತೆರೆ ಮರೆಯಲ್ಲಿ ಉಳಿದು ಮೌನವಾಗಿವೆ. ಆ ತೆರೆ ಸರಿಸಿ ಮರೆಯಲ್ಲಿ ಉಳಿದ, ಹೆಚ್ಚು ಪ್ರಚಾರ ಪಡೆಯದ ಸಾಮಾನ್ಯರ ಹೋರಾಟದ ಚರಿತ್ರೆಯನ್ನು ಸ್ಮರಿಸುವ ಪ್ರಯತ್ನ ಮಾಡುವುದು ಮತ್ತು  ಸ್ವಾತಂತ್ರ್ಯ-75ರ ಈ ಸಂದರ್ಭಕ್ಕೆ ಪೀಪಲ್‌ ಮೀಡಿಯಾ ಸಲ್ಲಿಸುವ ಗೌರವವೆಂದು ನಾವು ಭಾವಿಸುತ್ತೇವೆ.

ದಕ್ಷಿಣ ಕನ್ನಡದ ಬಿಲ್ಲವ ಸಮುದಾಯದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಶಿಕ್ಷೆಗೆ ಒಳಗಾಗಿದ್ದಾರೆ ಎಂದು  ತಿಳಿಯುತ್ತದೆ. ಬಿಲ್ಲವರ ಮನಸ್ಥಿತಿಯ ದರ್ಶನವಾಗುತ್ತದೆ ಮಾತ್ರವಲ್ಲ ಬಿಲ್ಲವರ  ದೌರ್ಬಲ್ಯಗಳೇನೆಂಬುದನ್ನು ಜೈಲಿನ ಕಡತಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ ಎಂದು ನಿವೃತ್ತ ಶಿಕ್ಷಕಿ, ಸಾಮಾಜಿಕ ಚಿಂತಕಿ ಬಿ.ಎಂ ರೋಹಿಣಿ ಹೇಳುತ್ತಾರೆ. ʼಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ   ದಕ್ಷಿಣ ಕನ್ನಡದ ಮಹಿಳೆಯರು ಮತ್ತು ಪುರುಷರುʼ ಎಂಬ ಅಧ್ಯಯನ ನಡೆಸುವ ಸಂದರ್ಭದಲ್ಲಿ  ಈ ಮಾಹಿತಿಗಳನ್ನು ಅವರು ಜೈಲಿನ ಕಡತಗಳ ಒಳ ಹೊಕ್ಕು  ಕಲೆ ಹಾಕಿದ್ದಾರೆ.

ಜೈಲುಗಳು ನಾಗರಿಕ ಸಮಾಜದ ಕೊಡುಗೆ. ನಮ್ಮ ದೇಶದಲ್ಲಿ ಸಾವಿರಾರು ಜೈಲುಗಳಿವೆ. ನಮ್ಮ ಕರ್ನಾಟಕದಲ್ಲಿಯೇ ಬೇರೆ ಬೇರೆ ಕೆಟಗರಿಯ ನೂರು ಜೈಲುಗಳಿವೆ. ಮಂಗಳೂರಿನ ಜಿಲ್ಲಾ ಕಾರಾಗ್ರಹವು 1850 ರಲ್ಲಿ ಸ್ಥಾಪಿತವಾಗಿದೆ. ಅಂದಿನಿಂದ ಇಂದಿನ ವರೆಗೂ ಲಕ್ಷಾಂತರ ಮಂದಿ ಅಪರಾಧಿಗಳು ಈ ಬಂದೀಖಾನೆಯಲ್ಲಿ ಶಿಕ್ಷೆ ಅನುಭವಿಸಿದ್ದಾರೆ. ಈಗಲೂ ಸುಮಾರು 250 ರಷ್ಟು ಮಂದಿ ಸ್ತ್ರೀ ಪುರುಷ ಕೈದಿಗಳು ವಿಚಾರಣಾಧೀನರಾಗಿಯೋ, ಕಾನೂನಿನ ರೀತಿಯಲ್ಲಿ ಶಿಕ್ಷೆಯನ್ನು ಸ್ವೀಕರಿಸಿಯೋ ಇಲ್ಲಿ ಕ್ಷಣಗಣನೆಯನ್ನು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಕಾಲದ ಜೈಲಿನ ನಿರ್ವಹಣೆ ಬ್ರಿಟಿಷರ ಕೈಯಲ್ಲಿತ್ತು. ಜೈಲಿನ ಕಡತಗಳಲ್ಲಿ ದಾಖಲಾದ ಅಪರಾಧ ದಾಖಲೆಗಳು, ಆಧುನಿಕ ಕಾಲದ ಜೈಲಿನ ದಾಖಲೆಗಳಿಗೆ ವಿಶೇಷ ವ್ಯತ್ಯಾಸವೇನೂ ಕಾಣದು. ಒಂದೇ ಒಂದು ವ್ಯತ್ಯಾಸವೆಂದರೆ, ಸ್ವಾತಂತ್ರ್ಯ ಹೋರಾಟಗಾರರು ಜೈಲು ಶಿಕ್ಷೆಗೆ ಒಳಗಾದದ್ದು. ಬ್ರಿಟಿಷರ ವಿರುದ್ಧ ಹೋರಾಡಿ ಡಿಫೆನ್ಸಿವ್ ಆಫ್ ಇಂಡಿಯಾ ಆಕ್ಟ್ ಸೆಕ್ಷನಿನ ಮೂಲಕ ಜೈಲು ಶಿಕ್ಷೆ ಅನುಭವಿಸಿದ್ದು. ಇವರಲ್ಲಿ ಹೆಚ್ಚಿನವರು ಬಳ್ಳಾರಿಯ ಆಲಿಪುರಂ ಜೈಲಿಗೆ ರವಾನಿಸಲ್ಪಟ್ಟವರು. ಕೆಲವರು ಇಲ್ಲಿಯೇ ಒಂದು ತಿಂಗಳೋ, ಮೂರು ತಿಂಗಳೋ ಜೈಲು ಶಿಕ್ಷೆ ಪಡೆದವರು.

ಅನಾಮಿಕರಾಗಿ ಉಳಿದ ಹಿಂದುಳಿದ ವರ್ಗದ ಸ್ವಾತಂತ್ರ್ಯಹೋರಾಟಗಾರರು

ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಬರೆದ ಲೇಖಕರು ನಾಯಕರುಗಳ ಜತೆಯಲ್ಲಿ ನೂರಾರು ಮಂದಿ ಹಿಂದುಳಿದ ವರ್ಗದ ಮೊಗವೀರರು, ಬಿಲ್ಲವರು, ದೇವಾಡಿಗರು, ದಲಿತರು, ಸೆರೆಮನೆಗೆ ತಳ್ಳಲ್ಪಟ್ಟರು ಎಂದು ದಾಖಲಿಸಿದ್ದಾರೆ. ಆದರೆ, ಈ ನೂರಾರು ಮಂದಿ ಹಿಂದುಳಿದ ವರ್ಗದವರು ಅನಾಮಿಕರಾಗಿಯೇ ಉಳಿದಿದ್ದಾರೆ. ಜೈಲು ಸೇರಿದ ಕೈದಿಗಳ ಹೆಸರುಗಳ ಮುಂದೆ ಭಟ್, ಶೆಣೈ, ಕಾಮತ್, ಪ್ರಭು, ಶೆಟ್ಟಿ ಮುಂತಾದ ಉಪನಾಮಗಳಿರುವುದರಿಂದ ಅವರು ಯಾವ ಸಮುದಾಯಕ್ಕೆ ಸೇರಿದವರೆಂಬುದನ್ನು ಗುರುತಿಸಲು ಸಾಧ್ಯವಿದೆ. ಸೇಸ, ದೂಮ, ಲಿಂಗಪ್ಪ, ತುಕ್ರ, ಮುಂತಾದ ಹೆಸರುಗಳುಳ್ಳ ದಾಖಲೆಗಳು ಹಿಂದುಳಿದ ಮತ್ತು ದಲಿತ ವರ್ಗವೆಂದು ಖ್ಯಾತಿಯಾಗುತ್ತದಾದರೂ, ಯಾವ ಸಮುದಾಯಕ್ಕೆ ಸೇರಿದವರೆಂಬುದು ನಮೂದಿಸಲ್ಪಟ್ಟಿಲ್ಲ. ಇಲ್ಲಿ ನಾಯಕರ ಅನುಯಾಯಿಗಳಾಗಿ ಬಂದುದು ಒಂದು ಕಾರಣವಾದರೆ, ತಮ್ಮ ಹೆಸರನ್ನು ಕಡತದಲ್ಲಿ ಸರಿಯಾಗಿ ನಮೂದಿಸಲಾಗದ ಅವರ ಅನಕ್ಷರತೆಯೂ ಕಾರಣವಾಗಿದೆ.  ಅಲ್ಲದೆ, ಈ ಅನುಯಾಯಿಗಳನ್ನು ಕೇವಲವಾಗಿ ಕಂಡ ಜೈಲು ಸಿಬ್ಬಂದಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ.

ಇವರು ಮಾಸಾಶನ ಪಡೆದ ದಾಖಲೆಗಳಿಲ್ಲ

ಈ ಸೇಸ, ತುಕ್ರನವರು ಸ್ವಾತಂತ್ರ್ಯ ಯೋಧರಿಗೆ ಸಲ್ಲುವ ಯಾವ ಮಾಸಾಶನವನ್ನು ಪಡೆದ ದಾಖಲೆಗಳಿಲ್ಲ. ಉಳಿದವರ ಹೆಸರುಗಳಲ್ಲಿ ಅವರು ಸರಕಾರದ ಮಾಸಾಶನ ಪಡೆದ ದಾಖಲೆಗಳಿವೆ. ಇನ್ನೂ ಒಂದು ವಿಶೇಷ ದಾಖಲೆಯೆಂದರೆ, 143 ನೇ ಸೆಕ್ಷನ್ ಅಡಿಯಲ್ಲಿ ಜೈಲು ಸೇರಿದ ಮೇಲ್ವರ್ಗದವರು ಸ್ವಾತಂತ್ರ್ಯ ಹೋರಾಟಗಾರರು ಪಡೆಯುವ ಕೀರ್ತಿ ಮತ್ತು ಸೌಲಭ್ಯಗಳನ್ನು ಪಡೆದಿದ್ದಾರೆ. ಆದರೆ, ಅದೇ ಸೆಕ್ಷನ್ ಅಡಿಯಲ್ಲಿ ಜೈಲು ಸೇರಿದ ರಾಮ ಪೂಜಾರಿ, ತಿಮ್ಮಪ್ಪ ಪೂಜಾರಿ, ಪಿ ನಾರಾಯಣ ಪೂಜಾರಿಯವರಿಗೆ 143 ಸೆಕ್ಷನ್ ಜತೆಗೆ 379 ಸೆಕ್ಷನ್ ಅನ್ನು ಲಗತ್ತಿಸಲಾಗಿದೆ. 379 ಸೆಕ್ಷನ್ ಕಳವು ಅಪರಾಧಕ್ಕೆ ಸಂಬಂಧಿಸಿದ್ದು. ಈ ಬಿಲ್ಲವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರೂ ಕಳವು ಕೇಸೊಂದು ಅವರನ್ನು ಸುತ್ತಿಕೊಂಡದ್ದು ಹೇಗೆ? ಎಂಬುದು ನಿಗೂಢವಾಗಿದೆ. ಇವರಲ್ಲಿ ಇಬ್ಬರು ಅನಕ್ಷರಸ್ಥರಾಗಿದ್ದು, ಒಬ್ಬ ಅಕ್ಷರಸ್ಥನಾಗಿದ್ದ. ಇದು 1942 ನೇ ಇಸವಿಯ ಕಾಲದ ಸ್ವಾತಂತ್ರ್ಯ ಚಳುವಳಿಯ ಜೈಲಿನ ಕಡತಗಳಲ್ಲಿರುವ ದಾಖಲೆಗಳು.

ನಾಯಕರ ಅನುಯಾಯಿಗಳಾಗಿಯೇ ತೃಪ್ತಿಪಟ್ಟವರು

ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಿದ ದಿನದಂದೇ ಗೋವಿಂದ ಪೂಜಾರಿ, ಕಾಳು ಪೂಜಾರಿ ಮುಂತಾದವರು ಒಂದೇ ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿದ್ದಾರೆ. ಆದರೆ, ಅವರು ಸ್ವಾತಂತ್ರ್ಯ ಹೋರಾಟಗಾರರೆಂಬ ಸರ್ಟಿಫಿಕೇಟ್ ಪಡೆದ ದಾಖಲೆಗಳಿಲ್ಲ. ಹಿಂದುಳಿದ ಸಮುದಾಯ ಅಕ್ಷರ ಸಂಸ್ಕೃತಿಗೆ ಆಗ ತಾನೇ ಪ್ರವೇಶ ಪಡೆದ ಕಾಲವಾಗಿತ್ತದು. ಆರ್ಥಿಕವಾಗಿ ಸಬಲರಾಗಿದ್ದರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದು ಗೌರವದ ಕೆಲಸ ಎಂದಾಗಲೀ, ದೇಶಭಕ್ತಿಯ ದ್ಯೋತಕವೆಂದಾಗಲೀ ಈ ಸಮುದಾಯ ಅರಿತಿರಲಿಲ್ಲ. ಅದೊಂದು ಮನೆ ಹಾಳು ಮಂದಿಯ ತಲೆತಿರುಕ ಕೆಲಸವೆಂಬ ಭಾವನೆಯೇ ಈ ಮಂದಿಯಲ್ಲಿ ವ್ಯಾಪಕವಾಗಿತ್ತು. ಹಾಗೆಂದು, ಬಿಲ್ಲವರು ಮೊಗವೀರರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲೇ ಇಲ್ಲವೆಂದು ಹೇಳುವಂತಿಲ್ಲ. ಇಲ್ಲಿಯ ಜನಸಂಖ್ಯೆಗೆ ಹೋಲಿಸಿದರೆ, ಅವರ ಸಂಖ್ಯೆ ತೀರಾ ಕಡಿಮೆಯೆಂದೇ ಹೇಳಬೇಕು. ನಾಯಕರಾಗಿ ಮುಂದುವರಿಯಲು ಬೇಕಾದ ಧೀಶಕ್ತಿ ಕೊರತೆಯೂ ಇದಕ್ಕೆ ಕಾರಣ ಇದ್ದಿರಬಹುದು. ಸಂಘಟನಾ ಚಾತುರ್ಯವು ಉಳಿದ ವರ್ಗದಲ್ಲಿದ್ದಂತೆ ಇವರಲ್ಲಿ ಇರಲಿಲ್ಲವೆಂದೇ ಹೇಳಬೇಕು. ಮುನ್ನುಗ್ಗುವ ಛಾತಿ ಇತ್ತು,ಕೆಚ್ಚು ಇತ್ತು. ನಾಯಕರ ಅನುಯಾಯಿಗಳಾಗಿ ಮುಂದುವರಿಯುವುದರಲ್ಲಿಯೇ ಯಶಸ್ಸು ಕಂಡ ಸಮುದಾಯವಿದು.

ಬಿಲ್ಲವರಿಗೆ ತಟ್ಟಿದ ಮದ್ಯಪಾನದ ಶಾಪ

ಗಾಂಧೀಜಿಯ ಮದ್ಯಪಾನ ನಿಷೇಧದ ಕರೆಯೂ ಈ ವರ್ಗವನ್ನು ಚಳುವಳಿಯಲ್ಲಿ ನಿರಂತರವಾಗಿ ದುಡಿಸಿಕೊಳ್ಳುವುದರಲ್ಲಿ ಸೋತಿರಬಹುದು. ಯಾಕೆಂದರೆ, ಆ ಕಾಲದ ದಾಖಲೆಗಳು ಹೇಳುವ ಸತ್ಯಗಳೇ ಇದಕ್ಕೆ ಸಾಕ್ಷಿಯಾಗಿದೆ. ಪಾನ ನಿಷೇಧದಿಂದ ಬ್ರಿಟಿಷರ ಕಾಲದಲ್ಲೂ ಅಕ್ರಮ ಸಾರಾಯಿ ದಂಧೆ ಮಾಡಿ ಜೈಲು ವಾಸ ಕಂಡವರಲ್ಲಿ 70% ಮಂದಿ ಬಿಲ್ಲವರು. ಮದ್ಯಪಾನ ಆಗಲೂ ಈಗಲೂ ಬಿಲ್ಲವರಿಗೆ ಶಾಪವಾಗಿ ಕಾಡುತ್ತಿದೆ. ಈ ಶಾಪದಿಂದ ಬಿಡುಗಡೆ ಹೊಂದಿದ ಕೆಲವರು ಮಾತ್ರ ಸ್ವಾತಂತ್ರ್ಯ ಹೋರಾಟಗಾರರಾಗಿ ಗುರುತಿಸಿಕೊಂಡದ್ದು ಕಾಣುತ್ತದೆ.

ಲ್ಯಾಂಡ್‌ ಲಾರ್ಡ್‌ ಸೋಮಪ್ಪ ಪೂಜಾರಿ

ಜೈಲಿನ ಕಡತಗಳಲ್ಲಿರುವ ಇನ್ನೂ ಒಂದು ಮಹತ್ತ್ವದ ಸಂಗತಿ ಎಂದರೆ ಸೋಮಪ್ಪ ಪೂಜಾರಿ ಎಂಬವರು 302 ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿದ್ದ ದಾಖಲೆಯಲ್ಲಿ ಆತ ‘ಲ್ಯಾಂಡ್ ಲಾರ್ಡ್’ ಎಂದು ನಮೂದಿತನಾಗಿದ್ದಾನೆ. ಹೀಗೆ ನಮೂದಿಸಲ್ಪಡಬೇಕಾದರೆ ಆತನಿಗೆ ಎಷ್ಟು ಜಮೀನಿತ್ತೆಂಬುದು ತಿಳಿಯುತ್ತದೆ. ಬಿಲ್ಲವರು ಸ್ಥಳೀಯ ರಾಜರಿಂದ ಉಂಬಳಿ ಜಮೀನು ಪಡೆದ ದಾಖಲೆಗಳಿವೆ ಎಂದು ನಮ್ಮ  ಕ್ಷೇತ್ರ ಕಾರ್ಯಗಳು ತಿಳಿಸುತ್ತವೆ. ಅಂತಹ ಸಾವಿರಾರು ಎಕರೆ ಜಮೀನನ್ನು  ಅಪಾತ್ರರಿಗೆ ದಾನ ಮಾಡಿಯೋ, ಧರ್ಮ ನೇಮ ಮಾಡಿ ಸಾಲಕ್ಕಾಗಿ ಮಾರಿಯೋ  ಐಷಾರಾಮೀ ಬದುಕಿಗೆ ದಾಸರಾಗಿ ಮೂರು ಕಾಸಿಗೆ ಜಮೀನನ್ನು ಮಾರಾಟ ಮಾಡಿಯೋ ಕಳಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಜಮೀನಿನ ವ್ಯಾಜ್ಯಕ್ಕಾಗಿ ಕೊಲೆ, ಮನಸ್ತಾಪಗಳು ಸರ್ವೇ ಸಾಮಾನ್ಯ ಎಂದು ಜೈಲಿನ ಕಡತಗಳು ಹೇಳುತ್ತವೆ.

ಶತಮಾನಗಳ ಹಿಂದೆ ಬಿಲ್ಲವರು ಹೀಗಿದ್ದರು

ಜೈಲಿನ ಕಡತಗಳಲ್ಲಿ ಕೈದಿಯ ವೇಷಭೂಷಣಗಳ ಉಲ್ಲೇಖಗಳೂ ಇವೆ.  ತಲೆಗೊಂದು ಮುಂಡಾಸು, ಕಿವಿಯಲ್ಲಿ ಮೇಲೆ  ಮತ್ತು ಕೆಳಗೆ ಚಿನ್ನದ ಆಭರಣ, ಕಾಲಿಗೆ ಕಡಗ ಧರಿಸಿದ ವಿವರಗಳು ಇವೆ. ಶತಮಾನಗಳ ಹಿಂದಿನ ಕಾಲದಲ್ಲಿ ಬಿಲ್ಲವರು ಹೇಗಿದ್ದರು ಎಂಬುದನ್ನು ಈ ದಾಖಲೆಗಳು ಸಾಕ್ಷೀಕರಿಸುತ್ತವೆ. 1868 ನೇ ಇಸವಿಯ ದಾಖಲೆಗಳಲ್ಲಿ ಹೆಚ್ಚಾಗಿ ಕಳ್ಳತನ ಮತ್ತು ಕೊಲೆ ಕೇಸುಗಳೇ ದಾಖಲಾಗಿವೆ. ಅವುಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದವರಲ್ಲೂ ಬಿಲ್ಲವರ ಸಂಖ್ಯೆಯೇ ಗಣನೀಯವಾಗಿದೆ. ಈ ಸಮುದಾಯ ಯಾಕೆ ಹಿಂದುಳಿದಿದೆ ಎಂಬುದಕ್ಕೆ ಜೈಲು, ಕೋರ್ಟುಗಳ ಸುತ್ತಾಟವೇ ಕಾರಣವಾಗಿರಬಹುದಲ್ಲವೇ? ಬಹುಷಃ ಈಗಲೂ ಕೂಡಾ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಬಿಲ್ಲವರ ಸಂಖ್ಯೆಯೂ ಗಣನೀಯವಾಗಿದೆ.

ಈ ಕಡತಗಳು ಒಂದರ್ಥದಲ್ಲಿ ಅಮೂಲ್ಯ ನಿಧಿಗಳು. ಆದರೆ, ಅವುಗಳು ಈಗ ಇರುವ ಸ್ಥಿತಿಯಲ್ಲಿಯೇ ಇದ್ದರೆ ಆ ದಾಖಲೆಗಳು ಪೂರ್ಣ ನಾಶವಾಗುವ ಸಂಭವವಿದೆ. ಅವುಗಳನ್ನು ಆರ್ಕೈವ್ಸ್ ಗಳಲ್ಲಿ ಇಟ್ಟು ಸಂರಕ್ಷಿಸುವ ಪ್ರಯತ್ನ ನಮ್ಮ ಆಡಳಿತ ವ್ಯವಸ್ಥೆಗಿರುವಂತೆ ಕಾಣುತ್ತಿಲ್ಲ. ಅವುಗಳ ಮಹತ್ತ್ವಗಳ ಅರಿವೂ ಅವರಿಗೆ ಇದ್ದಂತಿಲ್ಲ. ಅವುಗಳನ್ನು ದೀರ್ಘ ಕಾಲದವರೆಗೆ ಸಂರಕ್ಷಿಸುವ ಮುಂಜಾಗ್ರತೆಗಳನ್ನು ಸರಕಾರ ಆದಷ್ಟು ಶೀಘ್ರದಲ್ಲಿ ಮಾಡಬೇಕಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಬಿ.ಎಂ ರೋಹಿಣಿ
ಲೇಖಕಿ, ಸಾಮಾಜಿಕ ಚಿಂತಕಿ

ಸಮರ್ಥ ನಾಯಕರಿಲ್ಲದೆ ದಿಕ್ಕೆಟ್ಟ ಮುಸ್ಲಿಮರು
ಕೋಮುವಾದಿಗಳು ಸೃಷ್ಟಿಸಿರುವ ಆತಂಕ, ಅನಕ್ಷರತೆ, ಬಡತನದೊಂದಿಗೆ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಸುವ ಯಾವುದೇ ಸಮರ್ಥ ನಾಯಕ ಈ ಸಮುದಾಯದಲ್ಲಿ ಕಾಣುತ್ತಿಲ್ಲ. ಬಹುತೇಕ ಮುಸ್ಲಿಮರಿಗೆ ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ‌ ಮಾರ್ಗವೂ ಕಾಣುತ್ತಿಲ್ಲ.

ನಮ್ಮ ಸಾಮಾಜಿಕ ವ್ಯವಸ್ಥೆಯೇ ಎಷ್ಟೊಂದು ಕಲುಷಿತವಾಗಿದೆ ಎಂದರೆ ದಲಿತ ಪ್ರಧಾನಿ, ದಲಿತ ಮುಖ್ಯಮಂತ್ರಿಯ ಕೂಗು ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಕೇಳಿಬರುತ್ತಿದೆಯಾದರೂ ಮುಸ್ಲಿಂ‌ ಮುಖ್ಯಮಂತ್ರಿ ಅಥವಾ ಮುಸ್ಲಿಂ ಪ್ರಧಾನಿಯ ಪಿಸುಗುಟ್ಟುವಿಕೆಯೂ ಇಲ್ಲ. ಕೆಲವು ತಿಂಗಳಿಂದ ಈ ಬಗ್ಗೆಯೇ ಯೋಚಿಸುತ್ತಿದ್ದೆ. ಮೊನ್ನೆಮೊನ್ನೆಯಷ್ಟೇ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಎಂಬ ಚಾಮರಾಜಪೇಟೆ ಶಾಸಕ, ಮುಸ್ಲಿಮರ ಸಂಖ್ಯೆ ಒಕ್ಕಲಿಗರ ಸಂಖ್ಯೆಗಿಂತ ಹೆಚ್ಚಿದೆ, ನಾನು ಕೂಡ ಮುಖ್ಯಮಂತ್ರಿ ಸ್ಥಾನದ‌ ಆಕಾಂಕ್ಷಿ ಎಂದು ಹೇಳಿದಾಗ ನಾನು ಆರಂಭಿಸಿ ನಿಂತಿದ್ದ ಲೇಖನಕ್ಕೆ ಮತ್ತೆ ಜೀವ‌ ಬಂತು.

ನಾನೇ ಬಲ್ಲಂತೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪದಚ್ಯುತಿಗೆ ಲಿಂಗಾಯತರಾದ ರಾಜಶೇಖರಮೂರ್ತಿ ಮತ್ತು ಒಕ್ಕಲಿಗರಾದ ಎಸ್.ಎಂ.ಕೃಷ್ಣ ಕೈಜೋಡಿಸಿದರಾದರೂ ಅವರಿಬ್ಬರೂ ತಾವೇ ಮುಖ್ಯಮಂತ್ರಿಯಾಗುವ ಪ್ರಯತ್ನ ನಡೆಸಿದ್ದರು. ಆಗ ಏನಾದರೂ ರಾಜಿ ಅಭ್ಯರ್ಥಿಯಾಗಿ ಜಾಫರ್ ಷರೀಫ್ ಹೆಸರು ಹೊರಹೊಮ್ಮಿದರೆ ಎಂಬ ಆತಂಕ, ಮುಸ್ಲಿಂ‌ ಸಮುದಾಯದ ಬಗೆಗಿನ ಅಸಹನೆಯಿಂದಾಗಿ, ಲಿಂಗಾಯತ ಜಾತಿ‌ಪ್ರೇಮದ ಪತ್ರಕರ್ತರೊಬ್ಬರು ಪ್ರತಿ ವಾರ ಜಾಫರ್ ಷರೀಫ್ ಹೆಸರಿಗೆ ಕಳಂಕ ತರುವಂಥ ಜಮೀನು ಹಗರಣ ಸೇರಿದಂತೆ ಯಾವ್ಯಾವುದೋ ವರದಿಗಳನ್ನು ಅತ್ಯುತ್ಸಾಹದಿಂದ ಬರೆದಿದ್ದನ್ನು ನಾನೇ ನೋಡಿದ್ದೇನೆ. ಆದರೆ ಆ ವರದಿಗಳಿಗೆ ಯಾವುದೇ ಆಧಾರ ಇದ್ದಂತಿರಲಿಲ್ಲ. ಆಗ ಕಂದಾಯ ಸಚಿವರಾಗಿದ್ದ ರಾಜಶೇಖರ ಮೂರ್ತಿ ಅವರ ಸಹಕಾರದಿಂದ ಜಾಫರ್ ಷರೀಫ್ ವಿರುದ್ಧ ದೂರು ಪಡೆದಿದ್ದ (ನೀಡಿದ್ದ ಅಲ್ಲ) ಪತ್ರಗಳೇ ಈ ವರದಿಗೆ ಆಧಾರವಾಗಿದ್ದವು. ಟಿ.ಎ.ಪೈ ಎಂಬ ಮೆರಿಟ್ ಇದ್ದವರೊಬ್ಬರು ರೈಲ್ವೇ ಸಚಿವರಾಗಿ ಸಂಪೂರ್ಣ ವಿಫಲರಾಗಿದ್ದರೂ ಒಂದು ಸಮುದಾಯ ಬಿಂಬಿಸುವ‌ ಯಾವುದೇ ಮೆರಿಟ್ ಇಲ್ಲದ ಜಾಫರ್ ಷರೀಫ್ ರೈಲ್ವೇ ಸಚಿವರಾಗಿ ಯಶಸ್ವಿಯಾಗಿದ್ದವರು. ಅಪ್ಪಟ ದೇಶಭಕ್ತ, ಪ್ರಶ್ನಾತೀತ ಜಾತ್ಯತೀತ ನಾಯಕ ಷರೀಫ್ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಸಂಚಿನಿಂದ ಅವಕಾಶ ವಂಚಿತರಾದವರು.

ಕಾರ್ಯಕರ್ತನ ಹಂತದಿಂದ ನಾಯಕನಾಗಿ ಬೆಳೆದ ಜಾಫರ್ ಷರೀಫ್ ಒಂದು ಕಾಲಘಟ್ಟದಲ್ಲಿ ಮಾಜಿ‌ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ‌ ಕಾರು ಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ಅವರು ಅಂದಿರಿಕಿ ಮಂಚಿವಾಳ್ಳು ಅನ್ನುವಂತಿರಲಿಲ್ಲ. ಆದರೆ ಯಾರದೇ ದ್ವೇಷ ಕಟ್ಟಿಕೊಳ್ಳಲಿಲ್ಲ. ಆರೆಸ್ಸೆಸ್ ನ‌ ಕೆಲವು ಪ್ರಮುಖರೂ ಜಾಫರ್ ಷರೀಫ್ ಜತೆ ಉತ್ತಮ‌ ಬಾಂಧವ್ಯ ಹೊಂದಿದ್ದರು. ಮುಸ್ಲಿಂ ಸಮುದಾಯದ ದುರದೃಷ್ಟ ಎಂದರೆ ಜಾಫರ್ ಷರೀಫರಂಥ ನಾಯಕ ಮತ್ತೊಬ್ಬ ರೂಪುಗೊಳ್ಳಲಿಲ್ಲ.

ರಹಮಾನ್ ಖಾನ್ ಗೆ ಸಮೂಹ ನಾಯಕತ್ವದ ಲಕ್ಷಣಗಳೇ ಇರಲಿಲ್ಲ. ಅವರಾಯಿತು ಅಮಾನತ್ ಬ್ಯಾಂಕ್ ಆಯಿತು ಎನ್ನುವಂತಿದ್ದವರು. ಅವರದೇನಿದ್ದರೂ ರಾಜ್ಯಸಭೆಯ ಕೃಪಾಪೋಷಿತ ರಾಜಕಾರಣ! ಇನ್ನೊಬ್ಬ ನಾಯಕನಾಗಿ ಬೆಳೆಯಬಹುದಾಗಿದ್ದ ಸಿ.ಎಂ.ಇಬ್ರಾಹಿಂ ವಿದೂಷಕನ ಮಟ್ಟದಲ್ಲೇ ಉಳಿದುಬಿಟ್ಟರು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರೋಲೆಕ್ಸ್ ವಾಚ್ ಹಗರಣ ಸೇರಿದಂತೆ ಅನೇಕ ವಿವಾದಗಳಿಂದ ಇಬ್ರಾಹಿಂ ಸುದ್ದಿಯಲ್ಲಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಒಕ್ಕೂಟ ಸರ್ಕಾರದಲ್ಲಿ ಸಚಿವರಾಗಿದ್ದರು. ಹುಬ್ಬಳ್ಳಿಯ ಈದ್ಗಾ ವಿವಾದ ಒಂದು ಮಟ್ಟದಲ್ಲಿ ಬಗೆ ಹರಿಯುವುದಕ್ಕೆ ಕಾರಣರಾಗಿದ್ದರು. ಕ್ರಮೇಣ ದೇವೇಗೌಡರೊಂದಿಗೆ ಮುನಿಸಿಕೊಂಡು ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಗೆ ವಾಪಸಾದರು. ಯಾವಾಗಲೋ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾರಣದಿಂದ ಅವರ ಕಾಂಗ್ರೆಸ್ ವಾಪಸಾತಿಗೆ, ವಿಧಾನಪರಿಷತ್ ಸದಸ್ಯರಾಗುವುದಕ್ಕೆ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗುವುದಕ್ಕೆ ಸಾಕಷ್ಟು ಅಡೆತಡೆಗಳಿದ್ದವು. ಆದರೆ ಸಿದ್ದರಾಮಯ್ಯ ಕಾರಣದಿಂದ ಅಷ್ಟಾದರೂ ಅವಕಾಶಗಳನ್ನು ಪಡೆಯುವುದು ಸಾಧ್ಯವಾಗಿತ್ತು. ಆದರೆ ಸಿದ್ದರಾಮಯ್ಯ ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಬೇಸರ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕನಾಗಿ ಮಾಡಲಿಲ್ಲ ಎಂಬ ಸಿಟ್ಟು ಅವರನ್ನು ಮತ್ತೆ ಕಾಂಗ್ರೆಸ್‌ ತೊರೆಯುವಂತೆ ಮಾಡಿ ಜೆಡಿಎಸ್ ನಲ್ಲಿ‌ ದೇವೇಗೌಡರ ಪದತಲಕ್ಕೆ ಮತ್ತೆ ಬೀಳುವಂತಾಯಿತು.

ಕೆಲವು‌ ವರ್ಷಗಳ ಹಿಂದೆ ಉತ್ತರ‌ಪ್ರದೇಶದಲ್ಲಿ ಅಖಿಲ ಭಾರತ ಮುಸ್ಲಿಂ ಮಂಚ್ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದರಾದರೂ ಅದೇನಾಯಿತೋ ಯಾರಿಗೂ ಗೊತ್ತಿಲ್ಲ.‌ ಅವರೂ ಉದ್ದೇಶಪೂರ್ವಕವಾಗಿ ಮರೆತುಬಿಟ್ಟರು. ಚಂದದ ಭಾಷಣ ಮಾಡುತ್ತಾರೆ, ವಚನಗಳನ್ನು ಉದ್ಧರಿಸುತ್ತಾರೆ. ಆದರೆ ಅವರು ಆಸ್ಥಾನ ವಿದೂಷಕ ಮಟ್ಟ‌ ಮೀರಿ ಕತ್ತಲಲ್ಲಿರುವ ಮುಸ್ಲಿಂ ಸಮುದಾಯಕ್ಕೆ ನಾಯಕನಾಗುವುದು ಹೋಗಲಿ ಮಿಣುಕು ಹುಳವಾದರೂ ಆಗುವ ಒಂದೇ ಒಂದು ಲಕ್ಷಣ ತೋರಲಿಲ್ಲ.

ರೋಷನ್ ಬೇಗ್ ಎಡಬಿಡಂಗಿಯಾಗಿ ಹಿಂದೂಗಳನ್ನು ಓಲೈಸುತ್ತಾ ಕಾಲಹರಣ ಮಾಡಿದರಷ್ಟೇ ಅಲ್ಲದೇ ಹಗರಣಗಳ ಬಲೆಯಲ್ಲಿ ಸಿಕ್ಕಿ ಬಿದ್ದರು. ಬಿಜೆಪಿ ಬಾಗಿಲು ಬಡಿದು ನಿರಾಶರಾಗಿ ವಾಪಸಾದರು. ಮುಸ್ಲಿಮರ ವಿಚಾರಗಳಿಗೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಸದಾ ಸುದ್ದಿಯಲ್ಲಿರುತ್ತಾರಾದರೂ ಘನತೆ ಇಲ್ಲದ ಅವರ ನಾಯಕತ್ವ ಚಾಮರಾಜಪೇಟೆಯನ್ನು ಮೀರಿ ಬೆಳೆದಂತಿಲ್ಲ. ತನ್ವೀರ್ ಸೇಠ್ ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿ ಗುರುತಿಸಿಕೊಂಡು ತಮ್ಮ ತಂದೆಯ ನವಾಬ್ ಶೈಲಿಯ ಬದುಕಿನಿಂದ ಹೊರಬಂದಿದ್ದರೂ ಗಟ್ಟಿ ನಾಯಕನಾಗಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಸಗೀರ್ ಅಹ್ಮದ್ ತುಂಬ ಸಭ್ಯರಾಗಿದ್ದರೂ ದಿಟ್ಟತನ ಕಾಣಿಸಲಿಲ್ಲ.

ದಕ್ಷಿಣ ಕನ್ನಡದ ಯು.ಟಿ.ಖಾದರ್ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಜತೆ ಮಂತ್ರಿಯಾಗಿದ್ದಾಗ ಸದಾ ಸುದ್ದಿಯಲ್ಲಿದ್ದವರು. ಸ್ವಲ್ಪಮಟ್ಟಿಗಿನ ವೈಚಾರಿಕ ಪ್ರಜ್ಞೆಯೂ ಇರುವವರು. ಆದರೆ ಕನ್ನಡ ನಾಡಿನ ಮುಸ್ಲಿಮರನ್ನು ಒಗ್ಗೂಡಿಸಿ ಮುನ್ನಡೆಸುವ ಅಯಸ್ಕಾಂತೀಯ ಗುಣಗಳಿಲ್ಲ. ಬಿ.ಎ.ಮೊಯ್ದೀನ್ ರಂಥವರು ಸಜ್ಜನಿಕೆಯನ್ನು ಮೀರಿದ ರಾಜಕಾರಣ ಮಾಡಲಾಗದೇ ಮೌನದಲ್ಲೇ ಮರೆಗೆ ಸರಿದು ಬಿಟ್ಟರು. ಕೆಲವು ದಶಕಗಳ ಹಿಂದೆ ಓರ್ವ ಅಪರೂಪದ ನಾಯಕನಾಗುವ‌ ಲಕ್ಷಣಗಳನ್ನು ತೋರಿದ್ದ ಬಿ.ಎ.ಉಮರಬ್ಬ ಅಪಘಾತದಲ್ಲಿ ದುರ್ಮರಣ ಹೊಂದಿ ನೋವುಂಟು ಮಾಡಿದ್ದರು. ಕಮರುಲ್ ಇಸ್ಲಾಂ ಗುಲ್ಬರ್ಗಕ್ಕೇ ಸೀಮಿತರಾಗಿ, ಮಂತ್ರಿಯಾಗಿ ತಮ್ಮ ಸಮುದಾಯದ ನಾಯಕನಾಗುವ‌ ಯಾವುದೇ ಲಕ್ಷಣ ತೋರಲಿಲ್ಲ. ಬಿ.ಎ.ಹಸನಬ್ಬ ಎಂ.ಎಲ್.ಸಿ.‌ಆಗುವುದಷ್ಟಕ್ಕೇ‌ ಸೀಮಿತರಾಗಿ ಮರೆತೇ ಹೋಗಿಬಿಟ್ಟರು.

ಜಾಫರ್ ಷರೀಫರಿಗಿದ್ದ ದಿಟ್ಟತನ, ಸರಳತನ, ದಕ್ಷತೆ, ದೂರದೃಷ್ಟಿ ಈ ಯಾವುದೇ ಲಕ್ಷಣಗಳು ಈಗಿನ ಮುಸ್ಲಿಂ ಜನ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. ಒಟ್ಟಿನಲ್ಲಿ ಕರ್ನಾಟಕದ ಮುಸ್ಲಿಂ ಸಮುದಾಯ ನಾಯಕರಿಲ್ಲದೇ ಸೊರಗುತ್ತಿದೆ. ಮುಸ್ಲಿಮರದೇ ಆದ ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದರೂ ಆಶಾಭಾವನೆ ಹುಟ್ಟಿಸುವ ರೀತಿಯಲ್ಲಿ ಅವುಗಳ ಚಟುವಟಿಕೆ ಕಾಣುತ್ತಿಲ್ಲ. ಅಂಧರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ ಎಂಬಂತೆ ಸದ್ದು ಮಾಡುತ್ತಿರುವುದು, ಸುದ್ದಿಯಲ್ಲಿರುವುದು ಜಮೀರ್ ಖಾನ್. ಬೇಜವಾಬ್ದಾರಿ ಹೇಳಿಕೆಗಳಿಂದಲೇ ಸುದ್ದಿಯಾಗುವ ಜಮೀರ್ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾದಾಗ ತಮಗೆ ಇನೋವಾ ಕಾರ್ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ತಾವು ಬಾಲ್ಯದಿಂದಲೂ ಐಷಾರಾಮಿ ಕಾರ್ ಗಳಲ್ಲಿ ಓಡಾಡುತ್ತಿದ್ದವನು, ಈಗ‌ ನೀಡಿರುವುದು ಕೆಟ್ಟ ಕಾರಾಗಿದ್ದು ಟೊಯೋಟೋ ಫಾರ್ಚುನರ್ ಕಾರ್ ಗೆ ಬೇಡಿಕೆ ಇಟ್ಟಿದ್ದರು. ಬಸವಕಲ್ಯಾಣ ವಿಧಾನಸಭಾ‌ಕ್ಷೇತ್ರದ ಉಪಚುನಾವಣೆಯ ಸಭೆಯೊಂದರಲ್ಲಿ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ಒಂದು ಕಾಲದ ಗೆಳೆಯ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ‘ಕಾಲಾ ಕುಮಾರಸ್ವಾಮಿ’ ಎಂದು ಅವರ ಕಪ್ಪು ಬಣ್ಣದ ಬಗ್ಗೆ ಗೇಲಿ ಮಾಡಿದ್ದಲ್ಲದೇ ಕಪ್ಪಿರುವವರನ್ನು ಕಪ್ಪು ಎನ್ನದೇ ಬಿಳಿ ಎನ್ನಲಾಗುತ್ತದೆಯೇ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಹಿಜಾಬ್ ವಿವಾದದ ಸಂದರ್ಭದಲ್ಲಿ ಅವರು ಭಾರತದಲ್ಲಿ ಮಹಿಳೆಯರು ಹಿಜಾಬ್ ಧರಿಸದಿರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಹೆಚ್ಚು ಎಂಬ ತಮ್ಮ ಅಪರೂಪದ ಸಂಶೋಧನೆಯನ್ನು ಮುಂದಿಟ್ಟು ಉಗಿಸಿಕೊಂಡಿದ್ದರು.
ಇತ್ತೀಚೆಗೆ ಅವರು ನೀಡಿರುವ ಹೇಳಿಕೆ ಸಂಖ್ಯಾಬಲ ಇರುವ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ತಾವು ಕೂಡ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.

ಸಂಖ್ಯಾಬಲ ಇರುವ‌ ಸಮುದಾಯಗಳಿಂದ ಕೆಂಗಲ್‌ಹನುಮಂತಯ್ಯ, ಎಚ್.ಡಿ.ದೇವೇಗೌಡ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮೊದಲಾದವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗೆಯೇ ಸಂಖ್ಯಾಬಲವೇ ಇಲ್ಲದ ದೇವರಾಜ‌ ಅರಸು, ಎಸ್.ಬಂಗಾರಪ್ಪ, .ವೀರಪ್ಪ ಮೊಯ್ಲಿ, ಧರಂಸಿಂಗ್ ಕೂಡ‌ ಮುಖ್ಯಮಂತ್ರಿಗಳಾಗಿದ್ದಾರೆ. ಜನಸಂಖ್ಯೆಯ ಆಧಾರದಲ್ಲೇ ಹೇಳುವುದಾದರೆ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.20 ರಷ್ಟಿರುವ ದಲಿತರ ಪ್ರಮಾಣ ಇತರ ಎಲ್ಲ ಜಾತಿಗಳಿಗಿಂತ ಹೆಚ್ಚು. ಆನಂತರ ಶೇ.16 ರಷ್ಟಿರುವ‌ ಮುಸ್ಲಿಮರು. ಲಿಂಗಾಯತರು ಶೇ.14, ಒಕ್ಕಲಿಗರು ಶೇ.11. ಮುಖ್ಯವಾಗಿ ಅನ್ಯಾಯವಾಗಿರುವುದು ದಲಿತರಿಗೆ. ಆದರೆ ಜನಸಂಖ್ಯೆಯ ಆಧರ ಇರಿಸಿಕೊಂಡೇ ಯೋಗ್ಯರಿಗೆ ಮಾತ್ರ ಮಣೆ ಹಾಕಬೇಕಾಗುತ್ತದೆ. ಮುಸ್ಲಿಮರಲ್ಲಿ ಜಾಫರ್‌ಷರೀಫ್ ಅವರ‌ ಮಟ್ಟದ ಅಥವಾ ಅವರ ಹತ್ತಿರಕ್ಕಾದರೂ ಕಾಣುವ ಒಬ್ಬನೇ ಒಬ್ಬ ನಾಯಕ‌ ಮುಸ್ಲಿಂ‌ ಸಮುದಾಯದಲ್ಲಿಲ್ಲ.

ವಿವಾದಗಳ ಧಾರಾವಾಹಿಯ ನಾಯಕನಂತಿರುವ ಜಮೀರ್‌ಖಾನ್ ಇನ್ನೂ ಆ‌ ಮಟ್ಟಕ್ಕೇರುವ ಲಕ್ಷಣಗಳಂತೂ ಗೋಚರಿಸುತ್ತಿಲ್ಲ. ವಾಸ್ತವದಲ್ಲಿ ಜಮೀರ್ ತಾವೇ ಮುಂದಿನ‌ ಮುಖ್ಯಮಂತ್ರಿಯಾಗುವುದಕ್ಕಾಗಿ ಹಾಗೆ ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಯೊಂದರಲ್ಲಿ ಎಸ್.ಎಂ.ಕೃಷ್ಣ ನಂತರ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ‌ ಅವಕಾಶ ಇದ್ದು ಅದಕ್ಕೆ ಪೂರಕವಾಗಿ ಸಿದ್ಧರಾಗುವಂತೆ ಕರೆ ನೀಡಿದ್ದಕ್ಕೆ ಪರೋಕ್ಷ ಆಕ್ಷೇಪ ಮತ್ತು ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಬಿಂಬಿಸುತ್ತಿರುವ‌ ಒಂದು ಗುಂಪಿಗೆ ಬೆಂಬಲ ನೀಡುವುದು ಜಮೀರ್ ಉದ್ದೇಶವಾಗಿತ್ತು.

ದುರಂತ ಎಂದರೆ ಕೋಮುವಾದಿಗಳು ಸೃಷ್ಟಿಸಿರುವ ಆತಂಕ, ಅನಕ್ಷರತೆ, ಬಡತನದೊಂದಿಗೆ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಸುವ ಯಾವುದೇ ಸಮರ್ಥ ನಾಯಕ ಈ ಸಮುದಾಯದಲ್ಲಿ ಕಾಣುತ್ತಿಲ್ಲ. ಬಹುತೇಕ ಮುಸ್ಲಿಮರಿಗೆ ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ‌ ಮಾರ್ಗವೂ ಕಾಣುತ್ತಿಲ್ಲ. ಇದರ ಫಲವಾಗಿ ಮೂರೂ ಹೊತ್ತು ಸಂಘ ಪರಿವಾರ, ಬಿಜೆಪಿ ಆಡಳಿತ, ನರೇಂದ್ರ ಮೋದಿ, ಅಮಿತ್ ಶಾ ರನ್ನೇ ಟೀಕಿಸುವ ಯಾವುದೇ ವೈಚಾರಿಕ ತಿಳಿವಳಿಕೆಯ ಅಡಿಪಾಯ ಇಲ್ಲದ ಯುಟ್ಯೂಬ್ ಭಾಷಣಕೋರರು ಮುಸ್ಲಿಮರ ನಾಯಕರಾಗುತ್ತಿದ್ದಾರೆ.

ಇಂಥ ಬಹುತೇಕರು ತಮ್ಮನ್ನು‌ ಪ್ರಗತಿಪರರೆಂದು ಭಾವಿಸಿರುವ ಹಿಂದೂ ಯುವಕರು. ಇಂಥವರಿಂದ ಮುಸ್ಲಿಂ‌ ಸಮುದಾಯಕ್ಕೆ ಅಪಾಯವೇ ಹೆಚ್ಚು. ಪ್ರಗತಿ ಎನ್ನುವುದು‌ ಮುನ್ನಡೆಯುವುದೇ ಹೊರತು ಶಿಲಾಯುಗದತ್ತ ಹಿನ್ನಡೆಯಲ್ಲ. ಸದ್ಯ ಬೇಕಿರುವುದು ಸಾಮರಸ್ಯವೇ ಹೊರತು ಸಾಮಾಜಿಕ ಅಶಾಂತಿಯಲ್ಲ. ಸಮುದ್ರ ಮಂಥನದಿಂದ ಅಮೃತ ಸಿಕ್ಕಿರಬಹುದು. ಆದರೆ ವರ್ತಮಾನದ ಬೆಳವಣಿಗೆಗಳು ಉರಿವ‌ ಬೆಂಕಿಗೆ ತುಪ್ಪ‌ ಹಾಕುವಂತಿರಬಾರದು. ನಿಜಕ್ಕೂ‌ ಪ್ರಗತಿಪರರಾಗಿರುವ‌ ಹಿಂದೂಗಳು ಮುಸ್ಲಿಂ ಸಮುದಾಯದ ಜತೆಗಾರರಾಗಿ‌ ಮುನ್ನಡೆಯಬೇಕೇ ಹೊರತು ಹಾದಿ ತಪ್ಪಿಸುವ‌ ನಾಯಕರಾಗಬಾರದು. ಜಾಫರ್ ಷರೀಫ್ ಇದ್ದಿದ್ದರೆ ಮುಸ್ಲಿಮರು ಈಗ ಎದುರಿಸುತ್ತಿರುವ‌ ಗೊಂದಲಗಳು ಖಂಡಿತ ಇರುತ್ತಿರಲಿಲ್ಲ. ಯಾಕೆಂದರೆ ಅವರೋರ್ವ ಅಸಾಮಾನ್ಯ ನಾಯಕ. ಈಗ‌ ಅಂಥವರಿಲ್ಲ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

-ಟಿ.ಕೆ ತ್ಯಾಗರಾಜ್
ಹಿರಿಯ ಪತ್ರಕರ್ತರು ಹಾಗು ಹವ್ಯಾಸಿ ಬರಹಗಾರಗು.
(ಸೌಜನ್ಯ: ಹಿಮಾಗ್ನಿ ವಾರಪತ್ರಿಕೆ)

ಅಣುಬಾಂಬ್ ದಾಳಿ: ಹಿರೋಶಿಮಾ ನಾಗಸಾಕಿ ಭಸ್ಮವಾದ ಕರಾಳ ಕಥನ
ಜಪಾನ್‌ ನ ಪ್ರಮುಖ ನಗರಗಳಾದ ಹಿರೋಶಿಮಾ, ನಾಗಸಾಕಿ ಮೇಲೆ ಅಮೆರಿಕ ಅಣುಬಾಂಬ್‌ ಹಾಕಿದ ಕರಾಳ ಘಟನೆಗೆ ಇದೀಗ 77 ವರ್ಷ. 1945 ರ ಆಗಸ್ಟ್‌ 6 ರಂದು ಹಿರೋಶಿಮಾ ನಗರದ ಮೇಲೆ ಅಣುಬಾಂಬ್‌ ಪ್ರಯೋಗ ಮಾಡಿದ ಅಮೆರಿಕ ಆಗಸ್ಟ್‌ 9 ರಂದು ನಾಗಸಾಕಿ ನಗರದ ಮೇಲೆ ಪರಮಾಣು ದಾಳಿ ನಡೆಸಿತ್ತು. ಈ ಅಣುಬಾಂಬ್‌ ದುರಂತವು ಇಂದಿಗೂ ಕೂಡ ಮನುಕುಲಕ್ಕೆ ಆತಂಕದ ಘಟನೆಯಾಗಿದೆ. ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಈ ಘಟನೆಯ ಕುರಿತು ಪೀಪಲ್ ಮೀಡಿಯಾ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದೆ.

ಆಗಸ್ಟ್ 6, 1945, ಹಿರೋಶಿಮಾ

Hiroshima  (image courtesy BBC)

ಇಪ್ಪತ್ತನೆಯ ವಾಯುಪಡೆಯ 509 ನೇ ಕಾಂಪೋಸಿಟ್ ಗ್ರೂಪ್ ನ ಪೈಲಟ್ ಗಳು, ಮೆಕಾನಿಕ್ ಗಳು ಮತ್ತು ಸಿಬ್ಬಂದಿಗಳೆಲ್ಲರೂ ವಿಶೇಷವಾಗಿ ಮಾರ್ಪಡಿಸಿದ ಬಿ-29 ಯುದ್ಧ ವಿಮಾನಗಳ ತರಬೇತಿ ಪಡೆದಿದ್ದರು. ಅದು ಬಾಂಬ್ ದಾಳಿಗೆ ಸಿದ್ಧಪಡಿಸಲಾದ ವಿಮಾನ. 509 ನೇ ಕಮಾಂಡರ್ ಕರ್ನಲ್ ಪೌಲ್ ಡಬ್ಲ್ಯೂ ಟಿಬ್ಬೆಟ್ಸ್ ಅದರ ಪೈಲಟ್. 11 ಮಂದಿ ಸಿಬ್ಬಂದಿಯಿದ್ದ ಅದರಲ್ಲಿ ಮೇಜರ್ ಥಾಮಸ್ ಫೆರೆಬಿ ಬಾಂಬಾರ್ಡಿಯರ್ ಆಗಿದ್ದರು ಮತ್ತು ಮ್ಯಾನ್ ಹಾಟ್ಟನ್ ಪ್ರೊಜೆಕ್ಟ್ ನ ಮಾಜಿ ಆರ್ಡಿನೆನ್ಸ್ ತಜ್ಞ ಕ್ಯಾಪ್ಟನ್ ವಿಲಿಯಂ (‘ಡೀಕ್’) ಪಾರ್ಸನ್ಸ್ ವೆಪನರ್ ಆಗಿದ್ದರು.

ಟಿಬ್ಬೆಟ್ಸ್ ಈ ಕಾರ್ಯಾಚಣೆಗಾಗಿ ಸ್ವತಃ ವಿಮಾನ ಸಂಖ್ಯೆ 82 ನ್ನು ಆಯ್ಕೆ ಮಾಡಿದ್ದ ಮತ್ತು ಆಗಸ್ಟ್ 6, 1945 ರಂದು ಸರಿಸುಮಾರು ನಸುಕಿನ 2.45 ರ ಹೊತ್ತಿಗೆ ಟೇಕ್ ಆಫ್ ಮಾಡುವ ಸ್ವಲ್ಪ ಮೊದಲು  ಆತ ತನ್ನ ತಾಯಿಯ ಹೆಸರಾದ ‘ಎನೋಲಾ ಗೇ’ ಯನ್ನು  ವಿಮಾನದ ಮೂತಿಯ  ಮೇಲೆ ಬರೆಯಲು ನಿರ್ವಹಣಾ ಕೆಲಸಗಾರರಿಗೆ ಹೇಳಿದ. ಎನೋಲಾ ಗೇ ಜತೆಯಲ್ಲಿ ಎರಡು ಇತರ ಬಿ-29 ಗಳಿದ್ದವು. ಅವುಗಳ ಕೆಲಸ, ಬಾಂಬ್ ದಾಳಿ ಪೂರ್ವದಲ್ಲಿ ಪ್ರದೇಶದ ವೀಕ್ಷಣೆ ಮತ್ತು ಬಾಂಬ್ ದಾಳಿ ನಂತರದ ಸ್ಥಿತಿಯ ಚಿತ್ರೀಕರಣ.

ಎನೋಲಾ ಗೇ ಆಕಾಶಕ್ಕೆ ಹಾರಿದ ನಂತರವಷ್ಟೇ ಪಾರ್ಸನ್ಸ್ ‘ಲಿಟಲ್ ಬಾಯ್’ ಗೆ (ಬಾಂಬ್ ನ ಹೆಸರು) ಅಂತಿಮ ಘಟಕಗಳನ್ನು ಸೇರಿಸಿದ (ಯಾಕೆಂದರೆ, ಮಾರ್ಪಡಿಸಲಾದ ಬಿ-29 ವಿಮಾನಗಳು ಟೇಕ್ ಆಫ್ ಆಗಿದ್ದಾಗ ಈ ಹಿಂದೆ ಅಪಘಾತಕ್ಕೀಡಾಗಿದ್ದವು. ಅಣುಬಾಂಬ್ ಹೊಂದಿರುವ ವಿಮಾನ ಟೇಕ್ ಆಫ್ ಆಗುವಾಗ ಅಪಘಾತಕ್ಕೆ ಈಡಾದರೆ ಪರಿಣಾಮ ಘೋರ). ಆಕಾಶ ಸ್ವಚ್ಛವಿತ್ತು ಮತ್ತು ಗುರಿಯನ್ನು ಸಮೀಪಿಸುವಾಗ ‘ಎನೋಲಾ ಗೇ’ ಗೆ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಬೆಳಿಗ್ಗೆ 7.15 (ಟಿನಿಯನ್ ಸಮಯ) ಪಾರ್ಸನ್ಸ್ ಶಸ್ತ್ರಾಸ್ತ್ರವನ್ನು ಸಜ್ಜುಗಳಿಸಿದ ಮತ್ತು ಎನೋಲಾ ಗೇ ದಾಳಿಗೆ ನಿಗದಿಪಡಿಸಲಾದ  31,000 ಅಡಿ ಎತ್ತರವನ್ನು ಏರಿತು. ಮೊದಲ ಗುರಿ (ಹಿರೋಶಿಮಾ) ಮತ್ತು ಎರಡನೆಯ ಗುರಿಗಳ (ಕೊಕುರಾ ಮತ್ತು ನಾಗಸಾಕಿ) ಮೇಲೆ ಹವಾಮಾನ ಹೇಗಿದೆ ಎಂದು ನೋಡಲು ಇತರ ವಿಮಾನಗಳು ಮುಂದೆ ಹಾರಿದವು. ಮಿಶನ್ ಪೈಲಟ್ ಹಿರೋಶಿಮಾದ ಮೇಲೆ ಸ್ವಲ್ಪ ಮೋಡದ ಹೊದಿಕೆ ಇದೆ, ಆದರೂ ಆ ಗುರಿಯತ್ತ ಮುಂದುವರಿಯಬಹುದು ಎಂದು ಟಿಬ್ಬೆಟ್ಸ್ ಗೆ ರೇಡಿಯೋ ಸಂದೇಶ ನೀಡಿದರು.

ಸ್ಥಳೀಯ ಕಾಲಮಾನ ಬೆಳಿಗ್ಗೆ 8.00 ಗಂಟೆಯ ನಂತರ ಎನೋಲಾ ಗೇ ಸಿಬ್ಬಂದಿಗೆ ಹಿರೋಶಿಮಾ ಕಂಡಿತು. ಸುಮಾರು 8.12 ರ ಸಮಯ ಟಿಬ್ಬೆಟ್ಸ್ ಬಾಂಬ್ ದಾಳಿ ನಡೆಸಲು ಫೆರೆಬಿಗೆ ವಿಮಾನದ ನಿಯಂತ್ರಣ ಬಿಟ್ಟುಕೊಟ್ಟ. ಫೆರೆಬಿಯ ಗುರಿ ಅಯೋಯಿ ಸೇತುವೆಯಾಗಿದ್ದು, ಅದು ಓಟಾ ನದಿಯ ಮೇಲೆ ವಿಶಿಷ್ಟವಾದ ಇಂಗ್ಲಿಷ್ ನ ಟಿ ಆಕಾರದ ಹರವು. ಟಿಬ್ಬೆಟ್ಸ್ ತನ್ನ ಸಿಬ್ಬಂದಿಗೆ ತಮ್ಮ ರಕ್ಷಣಾತ್ಮಕ ಕನ್ನಡಕಗಳನ್ನು ಧರಿಸುವಂತೆ ಸೂಚಿಸಿದ. 8.15 ಕ್ಕೆ ಬಾಂಬನ್ನು ಬೀಳಿಸಲಾಯಿತು. ಬಾಂಬ್ ಸ್ಫೋಟದ ಪರಿಣಾಮದ ವ್ಯಾಪ್ತಿಯನ್ನು ತಪ್ಪಿಸಿಕೊಳ್ಳಲು ಟಿಬ್ಬೆಟ್ಸ್ ತನ್ನ ಯುದ್ಧ ವಿಮಾನವನ್ನು ಕ್ಷಿಪ್ರವಾಗಿ ಬಂದ ದಾರಿಯತ್ತ ತಿರುಗಿಸಿದ.

‘ಲಿಟಲ್ ಬಾಯ್’ ನೆಲದಿಂದ 1900 ಅಡಿ ಎತ್ತರದ ಮಟ್ಟಕ್ಕೆ ಇಳಿಯಲು 45 ಸೆಕೆಂಡ್ ತೆಗೆದುಕೊಂಡಿತು. ಬಳಿಕ ಶಿಮಾ ಆಸ್ಪತ್ರೆಯ ಮೇಲೆ ಆಗಸದಲ್ಲಿ ಸ್ಫೋಟಿಸಿತು. ತಕ್ಷಣ ನೆಲದ ಮಟ್ಟದ ತಾಪಮಾನ 7000 ಡಿಗ್ರಿ ಸೆಲ್ಶಿಯಸ್ ಗೆ ಏರಿತು. ಪ್ರಬಲ ಸ್ಫೋಟದ ಕಂಪನ ಭೂಪ್ರದೇಶವನ್ನು ಆವರಿಸಿತು. ಬೃಹತ್ ಅಣಬೆಯಾಕಾರದ ಮೋಡವು 40,000 ಅಡಿಗಳಿಗಿಂತ (12 ಕಿಮೀ) ಎತ್ತರಕ್ಕೆ ಏರಿತು. ಸ್ಫೋಟವನ್ನು ನೇರವಾಗಿ ಗಮನಿಸಿದ ಎನೋಲಾಗೇ ಯ ಟೇಲ್ ಗನ್ನರ್ ಬಾಬ್ ಕರೆನ್ ಈ ಭೀಕರ ದೃಶ್ಯವನ್ನು ‘ನರಕಸದೃಶ’ ಎಂದು ವಿವರಿಸಿದ. ಹಿರೋಶಿಮಾದ ಬಾನಿನಲ್ಲಿ ಉಂಟಾದ ಅಣಬೆ ಮೋಡವು 640 ಕಿಮೀ ದೂರದವರೆಗೂ ಗೋಚರಿಸಿತು.

ಆಗಸ್ಟ್ 9, 1945, ನಾಗಸಾಕಿ

Nagasaki    (image courtesy DM.Com)

ನಸುಕಿನ 3.47 ಕ್ಕೆ ಬಿ-29 ‘ಬಾಕ್ ‍ಸ್ಕಾರ್’ ಯುದ್ಧ ವಿಮಾನವು ಟಿನಿಯನ್ ನಿಂದ ಬಾನಿಗೆ ಚಿಮ್ಮಿತು. ಮೇಜರ್ ಚಾರ್ಲ್ ಸ್ ಸ್ವೀನಿಯು ಪೈಲಟ್ ಆಗಿದ್ದ. ಬೊಂಬಾರ್ಡಿಯರ್ ಆಗಿ ಕ್ಯಾಪ್ಟನ್ ಕೆರ್ಮಿಟ್ ಬೀಹಾನ್ ಇದ್ದ. ವೆಪನರ್ ಆಗಿ ಮ್ಯಾನ್ ಹಟನ್ ಯೋಜನೆಯ ಹಿರಿಯ ಕಮಾಂಡರ್ ಫ್ರೆಡ್ರಿಕ್ ಆಶ್ವರ್ತ್ ಜತೆಗಿದ್ದ. ಬಾಂಬ್ ನ ಹೆಸರು ‘ಫ್ಯಾಟ್ ಮ್ಯಾನ್’. ‘ಲಿಟಲ್ ಬಾಯ್’ ಗೆ ಭಿನ್ನವಾಗಿ ಫ್ಯಾಟ್ ಮ್ಯಾನ್ ನನ್ನು ಬಾಕ್ ಸ್ಕಾರ್ ಗೆ ಏರಿಸುವ ಮೊದಲೇ ಸಂಪೂರ್ಣ ಜೋಡಣೆ ಮಾಡಲಾಗಿತ್ತು. ಉದುರಿಸಲು ಸೂಕ್ತವಾಗುವ ಹಾಗೆ ಆಕಾಶಕ್ಕೆ ಏರಿದ ತಕ್ಷಣ ಆಶ್ವರ್ತ್ ಅದನ್ನು ವಿಮಾನಕ್ಕೆ ಜೋಡಿಸಿದ. ಹಿರೋಶಿಮಾದಲ್ಲಿ ಮಾಡಿದಂತೆಯೇ ಹವಾಮಾನ ಪರಿಸ್ಥಿತಿ ತಪಾಸಣೆ ಮಾಡಲು ಇತರ ಬಿ 29 ವಿಮಾನಗಳು ಮುಂದುಗಡೆ ಹಾರುತ್ತಿದ್ದವು. ಕೊಕುರಾದ ಮೇಲೆ ಆಕಾಶ ಸುಮಾರಾಗಿ ಸ್ವಚ್ಛ ಇದೆ ಎಂದು ವರದಿ ಮಾಡಲಾಯಿತು.

ಸ್ಥಳೀಯ ಕಾಲಮಾನ ಬೆಳಗಿನ 9.45 ಕ್ಕೆ ಬಾಕ್ ಸ್ಕಾರ್ ಕೊಕುರಾವನ್ನು ತಲಪಿತು. ಆಗ  ದಟ್ಟ ಮೋಡ ಮತ್ತು ಮಂಜು ಆವರಿಸಿ ಕೆಳಗೆ ಏನೂ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು; ಹಿಂದಿನ ರಾತ್ರಿ ಯಹಾಟಾ ಎಂಬ ಪಕ್ಕದ ನಗರದ ಮೇಲೆ ನಡೆದ ಬಾಂಬು ದಾಳಿಯ ಪರಿಣಾಮ ಇರಬೇಕು. ಮೂರು ಬಾರಿ ಯತ್ನಿಸಲಾಯಿತಾದರೂ ಯಶ ಸಿಗಲಿಲ್ಲ. ಗುರಿಯು (ನಗರದ ಬೃಹತ್ ಶಸ್ತ್ರ ಸಂಗ್ರಹಾಗಾರ) ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕೊಕುರಾದ ಮೇಲೆ ಹಾರುತ್ತಾ ಸುಮಾರು 45 ನಿಮಿಷಗಳು ವ್ಯರ್ಥವಾದವು. ಇಂಧನ ಮುಗಿಯುತ್ತ ಬಂದಿತ್ತು. ಅಲ್ಲದೆ ಜಪಾನಿನ ವಿಮಾನ ನಿರೋಧಕ ರಕ್ಷಣಾ ವ್ಯವಸ್ಥೆಯ ಭಯವೂ ಇತ್ತು. ಹಾಗಾಗಿ ಎರಡನೆ ಗುರಿಯತ್ತ ಹಾರಲು ನಿರ್ಧರಿಸಲಾಯಿತು. ಪೈಲಟ್ ಸ್ವೀನಿಯು ವಿಮಾನವನ್ನು ದಕ್ಷಿಣಕ್ಕೆ  ನಾಗಸಾಕಿಯತ್ತ ತಿರುಗಿಸಿದ.

ಹಾಗೆ ನೋಡಿದರೆ, ಭೌಗೋಳಿಕವಾಗಿ ನಾಗಸಾಕಿ ಸೂಕ್ತ ಗುರಿಯಾಗಿರಲಿಲ್ಲ. ಹಿರೋಶಿಮಾ ಮಟ್ಟಸವಾಗಿದ್ದು ನಗರ ಕೇಂದ್ರದ ಸನಿಹದಲ್ಲಿ ಭಿನ್ನ ಲಕ್ಷಣವನ್ನು ಹೊಂದಿದ್ದರೆ, ನಗರ ಪ್ರದೇಶವಾದ ನಾಗಸಾಕಿಯು ಎರಡು ಕರಾವಳಿ ಕಣಿವೆಗಳಾಗಿ ವಿಭಜನೆಗೊಂಡಿದ್ದು, ನಡುವೆ ಶಿಖರ ಶ್ರೇಣಿಯಿತ್ತು. ನಗರದ ಹತ್ತಿರದ ಬಂದರು ಪ್ರದೇಶದ ಶಸ್ತ್ರ ಕಾರ್ಖಾನೆ ಮಿಟ್ಸುಬಿಷಿಯು ದಾಳಿಯ ಪ್ರಧಾನ ಗುರಿಯಾಗಿತ್ತು. ಜನದಟ್ಟಣೆಯ ಎರಡು ಕಣಿವೆಗಳ ನಡುವೆ ಇದು ಇತ್ತು.  ಆದರೆ ಹಿರೋಶಿಮಾದಲ್ಲಿ ಉದುರಿಸಲಾದ ಬಾಂಬ್ ಗಿಂತಲೂ ಹೆಚ್ಚು ಶಕ್ತಿಯ ಬಾಂಬ್ ಆಗಿದ್ದರೂ ಏರು ತ‍ಗ್ಗುಗಳಿಂದ ಕೂಡಿದ್ದ ಭೂಪ್ರದೇಶ ಸ್ಫೋಟದ  ಪರಿಣಾಮವನ್ನು ತಗ್ಗಿಸುವಂತಿತ್ತು.

ಸ್ಥಳೀಯ ಕಾಲಮಾನ ಸುಮಾರು ಬೆಳಗಿನ 11 ಕ್ಕಿಂತ ಕೊಂಚ ಮುನ್ನ ಬಾಕ್ ಸ್ಕಾರ್ ನಾಗಸಾಕಿಯ ಆಗಸಕ್ಕೆ ಬಂತು. ಆದರೆ ಅಲ್ಲಿ ಕೊಕುರಾಗಿಂತಲೂ ಹೆಚ್ಚು ದಪ್ಪನೆಯ ಮೋಡ ಇತ್ತು. ಅದೇ ಹೊತ್ತಿನಲ್ಲಿ ವಿಮಾನದ ಇಂಧನ ಇನ್ನೂ ಕಡಿಮೆಯಾಗಿತ್ತು. ಇನ್ನೂ ಹೆಚ್ಚು ಕಾಲ ಆಗಸದಲ್ಲಿ ಹಾರುವಂತಿರಲಿಲ್ಲ. ಆಗ ನಿಗದಿತ ಗುರಿಗಿಂತ ತುಂಬಾ ಉತ್ತರಕ್ಕೆ ಮೋಡಗಳ ನಡುವೆ ಒಂದು ಖಾಲಿ ಜಾಗ ಕಾಣಿಸಿತು. ತಡಮಾಡದೆ ಬೀಹೆನ್ ಬಾಂಬನ್ನು ಉದುರಿಸಿಬಿಟ್ಟ. 11.02 ಕ್ಕೆ ಬಾಂಬು ನೆಲದಿಂದ ಮೇಲಕ್ಕೆ 1650 ಅಡಿ ಎತ್ತರದ ಮಟ್ಟವನ್ನು ತಲಪಿತು. ನಗರ ಕೇಂದ್ರದ ವಾಯುವ್ಯಕ್ಕಿರುವ ಉರಕಾಮಿ ಕಣಿವೆಯ ಮೇಲೆ ಸ್ಫೋಟಿಸಿತು. ಸ್ಫೋಟದ ಆಘಾತ ಅಲೆಗಳಿಗೆ ಬಾಕ್ ಸ್ಕಾರ್ ಒಮ್ಮೆ ತೀವ್ರವಾಗಿ ಅಲುಗಾಡಿತು. ವೀಕ್ಷಣಾ ವಿಮಾನಗಳು ಹತ್ತಾರು ಸಾವಿರ ಅಡಿ ಎತ್ತರಕ್ಕೆ ಏರಿದ ಅಣಬೆ ಮೋಡವನ್ನು ಚಿತ್ರೀಕರಿಸಿದವು.  ಹೊರಟ ತಾಣವಾದ ಟಿನಿಯನ್ ಅನ್ನು ತಲಪುವಷ್ಟು ಇಂಧನ ಇರದ ಕಾರಣ ವಿಮಾನನ್ನು ಒಕಿನಾವಾದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಬಾಂಬು ಸ್ಫೋಟಕ್ಕೆ ಸಿಲುಕಿದವರ ಸ್ಥಿತಿ

(image courtesy-news.un.org)

ಇದು ಬಾಂಬು ಉದುರಿಸಿದವರ ಕಥನವಾದರೆ, ಬಾಂಬು ಸ್ಫೋಟಕ್ಕೆ ಸಿಲುಕಿದವರ ಸ್ಥಿತಿ ಹೇಗಿತ್ತು? ಅದು ಮಾನವ ಇತಿಹಾಸಲ್ಲಿ ಕಂಡು ಕೇಳರಿಯದ ಎಂತಹ  ನರಕ ಯಾತನೆಯಾಗಿತ್ತು? ಅಣುಬಾಂಬ್ ದಾಳಿಯ ಪ್ರತ್ಯಕ್ಷದರ್ಶಿ ಸಕೂಯಿ ಶಿಮೋಹಿರಾ ಅವರ ಮಾತಿನಲ್ಲೇ ಕೇಳಿ.  “ಅಮೆರಿಕಾದ ಸೇನಾ ಪಡೆಗಳು ನಡೆಸುತ್ತಿದ್ದ ವೈಮಾನಿಕ ದಾಳಿಯಿಂದ ಪಾರಾಗುವ ಸಲುವಾಗಿ ನಾವು ಹೆಚ್ಚಿನ ಸಮಯವನ್ನು ಸೇನಾ ಬಂಕರ್ ಗಳಲ್ಲಿ ಕಳೆಯುತ್ತಿದ್ದೆವು. ಬಹಳ ದಿನಗಳ ನಂತರ ಅಂದರೆ, ಆಗಸ್ಟ್ 8, 1945 ರಂದು ರಾತ್ರಿ ನಾವು ನಮ್ಮ ಮನೆಯಲ್ಲಿ ಮಲಗಿದ್ದೆವು. ಮಾರನೇ ದಿನ ಅಂದರೆ, ಆಗಸ್ಟ್ 9 ರ ಬೆಳಗಿನ ಅಂದಾಜು 7 ಗಂಟೆಯ ಸಮಯ. ಮನೆಯ ಮೇಲೆ ಆಗಸದಲ್ಲಿ ಹಾರಿ ಹೋದ ವಿಮಾನವನ್ನು ನೋಡಿದ ನಮ್ಮ ತಾಯಿ ಅವಸರವಸರವಾಗಿ ನಮ್ಮನ್ನು ಎಬ್ಬಿಸಿ, ಈಗ ಬಾಂಬ್ ದಾಳಿಯಾಗಲೂ ಬಹುದು. ನೀವು ತಕ್ಷಣ ಬಂಕರ್ ಗೆ ಓಡಿ ಅಂದಳು. ಈ ಕಡೆ ಬರಬೇಡಿ, ಏನೂ ತೊಂದರೆ ಇಲ್ಲವಾದರೆ ನಾನೇ ಅಲ್ಲಿಗೆ ಬಂದು ಕರೆದುಕೊಂಡು ಬರುವೆ ಎಂದಳು. ನಾವು ಬಂಕರ್ ನಲ್ಲಿ ಇದ್ದೆವು. ಸುಮಾರು 11 ಗಂಟೆಯ ಸಮಯ. ಹೊರಗಡೆ ಕಿವಿಗಡಚಿಕ್ಕುವ ಭೀಕರ ಸದ್ದು ಕೇಳಿಸಿತು. ನಾನು ಜೋರಾಗಿ ಕಿರಿಚಿದ್ದು ಹೊರತುಪಡಿಸಿದರೆ ಇನ್ನೇನೂ ನೆನಪಿಲ್ಲ. ಪ್ರಜ್ಞೆ ಮರುಕಳಿಸಿದಾಗ ನೋಡುತ್ತೇನೆ, ನಮ್ಮ ಬಂಕರ್ ನಲ್ಲಿದ್ದ ಬಹುತೇಕರ ಕಣ್ಣುಗುಡ್ಡೆಗಳು ಕಿತ್ತು ಹೊರಬಂದು ಜೋತಾಡುತ್ತಿದ್ದವು. ಅದೃಷ್ಟವಶಾತ್ ನಾನು ಮತ್ತು ನನ್ನ ತಂಗಿ ಅಪಾಯದಿಂದ ಪಾರಾಗಿದ್ದೆವು. ತಕ್ಷಣ ಅಮ್ಮನ ನೆನಪಾಯಿತು. ಮನೆಯ ಕಡೆ ಓಡಿದೆವು. ದಾರಿಯ ತುಂಬ ಎಲ್ಲಿ ನೋಡಿದರೂ ಶವಗಳು. ಮನೆಯ ಒಳಗಡೆ ಅಮ್ಮ ಕುಳಿತಿದ್ದಳು. ಅಳುತ್ತಾ ಹೋಗಿ ಆಕೆಯನ್ನು ಮುಟ್ಟಿದೆವು. ಆಕೆಯ ದೇಹ ಬೂದಿಯಾಗಿ ಉದುರಿಹೋಯಿತು. ಆಕೆ ಕುಳಿತಲ್ಲಿಯೇ ಸತ್ತು ಹೋಗಿದ್ದಳು”. ಇದು ಅಣುಬಾಂಬ್ ದಾಳಿಗೆ ಗುರಿಯಾಗಿ ಬದುಕುಳಿದವರ ಪೈಕಿ ಒಬ್ಬರು ಹೇಳಿದ ಕತೆ. ಹಾಗಾದರೆ ಇತರ ಅನೇಕ ಕತೆಗಳು ಹೇಗಿರಬಹುದು? ಊಹಿಸುವುದೂ ಕಷ್ಟ.

ಹಿರೋಶಿಮಾದ ಮೇಲೆ ಅಮೆರಿಕಾ ಸೇನಾ ಪಡೆ ಉದುರಿಸಿದ ಅಣುಬಾಂಬ್ ನಿಂದ ತಕ್ಷಣ ಸತ್ತವರು 70 ಸಾವಿರ ಮಂದಿ. ವರ್ಷದ ಕೊನೆಗೆ ಇದು 1 ಲಕ್ಷವನ್ನು ದಾಟಿತು. ನಗರದ ಮೂರನೇ ಎರಡು ಭಾಗ ಧ್ವಂಸವಾಯಿತು. ಬಾಂಬ್ ಸ್ಫೋಟದ ಪರಿಣಾಮವಾದ ಅಣಬೆಯಂತಹ ಮೋಡ ನೆಲದಿಂದ 12 ಕಿಲೋಮೀಟರ್ ಎತ್ತರ ಆಗಸಕ್ಕೆ ಏರಿತು.

ನಾಗಸಾಕಿಯ ಮೇಲೆ ನಡೆದ ದಾಳಿಯ ಪರಿಣಾಮ ನೆಲದ ಮೇಲಿನ ತಾಪಮಾನ 7000 ಡಿಗ್ರಿ ಸೆಲ್ಶಿಯಸ್ ದಾಟಿತು. ತಕ್ಷಣ 40 ಸಾವಿರ ಮಂದಿ ಸತ್ತರು. ಅಣುವಿಕಿರಣದ ಪರಿಣಾಮದಿಂದ ವರ್ಷದ ಕೊನೆಗಾಗುವಾಗ ಮತ್ತೆ 30 ಸಾವಿರ ಮಂದಿ ಸತ್ತರು. ನಗರದ 40% ಕಟ್ಟಡಗಳು ನಾಮಾವೇಶವಾದವು.

ಯುದ್ಧವೊಂದರಲ್ಲಿ ಕಂಡು ಕೇಳರಿಯದ ವಿನಾಶ ಉಂಟು ಮಾಡಿದ ಮೊದಲ ಅಣುಬಾಂಬ್ ದಾಳಿಯ ಕಥನವಿದು. ಯುದ್ಧಕ್ಕೆ ಹೊರಟವರು ಜಗತ್ತಿನ ಮೇಲೆ ಹಿಡಿತ ಸಾಧಿಸಬೇಕೆಂಬ ವಿಸ್ತರಣಾ ಬಯಕೆಯ ಸಾಮ್ರಾಜ್ಯಶಾಹಿ ಶಕ್ತಿಗಳು. ಸತ್ತವರು ಮಿಲಿಯಗಟ್ಟಲೆ ಮಂದಿ ಮತ್ತು ಅವರಲ್ಲಿ ಬಹುತೇಕರು ಯುದ್ಧದೊಂದಿಗೆ ಯಾವ ಸಂಬಂಧವೂ ಇಲ್ಲದ ಅಮಾಯಕ ನಾಗರಿಕರು !

1939-45 ರ ನಡುವೆ ಆರು ವರ್ಷಗಳ ಕಾಲ ಜರ್ಮನಿ, ಇಟಲಿ, ಜಪಾನ್ ಮತ್ತು ಬ್ರಿಟನ್, ಫ್ರಾನ್ಸ್, ಅಮೆರಿಕಾ, ಸೋವಿಯತ್ ಯೂನಿಯನ್ ನಡುವೆ ನಡೆದ ಘನಘೋರ ಎರಡನೆಯ ಮಹಾಯುದ್ಧದಲ್ಲಿ ಸತ್ತವರು 6.5 ಕೋಟಿ ಜನ. ಇದರಲ್ಲಿ ಬಹುತೇಕರು ನಾಗರಿಕರು. ಎರಡನೆಯ ಮಹಾಯುದ್ಧ ಮತ್ತು ಅದರಲ್ಲೂ ಮುಖ್ಯವಾಗಿ ಜಪಾನ್ ಮೇಲಣ ಅಣುಬಾಂಬ್ ದಾಳಿ ನಮ್ಮನ್ನು ಯುದ್ಧದ ವಿರುದ್ಧ ಚಿಂತಿಸುವಂತೆ ಮಾಡಬೇಕು. ಯುದ್ಧದಲ್ಲಿ ‘ಗೆದ್ದವ ಸೋತ ಸೋತವ ಸತ್ತ’ ಎಂಬ ಮಾತಿದೆ. ಯುದ್ಧ ಎಂದರೆ ಮಹಾ ವಿನಾಶ. ಯುದ್ಧ ಎಂದರೆ ಘೋರ ಸಾವು. ಅದಕ್ಕೆ ಹಿರೋಶಿಮಾ ಮತ್ತು ನಾಗಸಾಕಿಯ ಘಟನೆಗಳು ಜೀವಂತ ಉದಾಹರಣೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಗುಲಾಬಿ ಬಿಳಿಮಲೆ
ಮಂಗಳೂರು ಮೂಲದವರಾದ ಇವರು,
ವೃತ್ತಿಯಿಂದ ಪತ್ರಕರ್ತೆ ಹಾಗು ಪ್ರವೃತ್ತಿಯಿಂದ ಬರಹಗಾರ್ತಿಯಾಗಿದ್ದಾರೆ