bond – Peepal Media

ಜನವರಿಯಲ್ಲಿ 570 ಕೋಟಿಯ ಎಲೆಕ್ಟೋರಲ್ ಬಾಂಡ್‌ಗಳ ಮಾರಾಟಹಣ ಮಾಡ್ತಾ ಇದ್ಯಾ ಬಿಜೆಪಿ?
2024 ರ ಜನವರಿ 2 ರಿಂದ ಜನವರಿ 11 ರವರೆಗೆ ನಡೆದ ಚುನಾವಣಾ ಬಾಂಡ್ ಮಾರಾಟದ ಇತ್ತೀಚಿನ ಹಂತದಲ್ಲಿ 570 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ಸಾಮಾಜಿಕ ಕಾರ್ಯಕರ್ತ ಕಮೋಡೋರ್ ಲೋಕೇಶ್ ಬಾತ್ರಾ ಅವರು  ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಸಲ್ಲಿಸಿದ ಪ್ರಶ್ನೆಗೆ ಉತ್ತರವಾಗಿ ಬಹಿರಂಗವಾಗಿದೆ.

ಇದು ಕಳೆದ ವರ್ಷ ನವೆಂಬರ್‌ನಲ್ಲಿ ಈ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಾಲ್ಕು ಅರ್ಜಿಗಳನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ ನಂತರ ಮಾರಾಟವಾದ ಎರಡನೇ ಬ್ಯಾಚ್‌ನ ಎಲೆಕ್ಟೋರಲ್ ಬಾಂಡ್‌ಗಳಾಗಿದ್ದು, 2018 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಮಾರಾಟವಾದ 30 ನೇ ಬ್ಯಾಚ್ ಆಗಿದೆ.

ಬಾತ್ರಾ ಅವರ ಪ್ರಶ್ನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡಿದ ಉತ್ತರದ ಪ್ರಕಾರ, ಬೆಂಗಳೂರು, ಜೈಪುರ, ಚೆನ್ನೈ, ಗಾಂಧಿನಗರ, ಕೋಲ್ಕತ್ತಾ, ಹೈದರಾಬಾದ್, ನವದೆಹಲಿ, ವಿಶಾಖಪಟ್ಟಣಂ, ಮುಂಬೈ ಮತ್ತು ಎಸ್‌ಬಿಐ ಶಾಖೆಗಳಲ್ಲಿ 5,71,80,03,000 ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ.

897 ಬಾಂಡ್‌ಗಳಲ್ಲಿ 1,000, 10,000, 1 ಲಕ್ಷ ಮತ್ತು ರೂ 1 ಕೋಟಿ ರುಪಾಯಿ ಮುಖಬೆಲೆಯಲ್ಲಿ ಮಾರಾಟವಾದ 415, ಅಂದರೆ ಸುಮಾರು ಅರ್ಧದಷ್ಟು ಕೋಲ್ಕತ್ತಾದಲ್ಲಿ ಮಾರಾಟವಾಗಿದೆ.

ಗರಿಷ್ಠ ಸಂಖ್ಯೆಯ ಬಾಂಡ್‌ಗಳಲ್ಲಿ (540) ಒಂದು ಕೋಟಿ ರುಪಾಯಿ ಮುಖಬೆಲೆಯ 161 ಬಾಂಡ್‌ಗಳು ಕೋಲ್ಕತ್ತಾದಲ್ಲಿ ಮಾರಾಟವಾಗಿದೆ. ಇದರ ನಂತರ ಹೈದರಾಬಾದ್ (131) ಮತ್ತು ಚೆನ್ನೈಯಲ್ಲಿ (73) ಮಾರಾಟವಾಗಿವೆ. ಈ ಹಂತದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಚಲಾವಣೆಯಲ್ಲಿರುವ ಒಟ್ಟು ಹಣದ 94.4% ರಷ್ಟು 1 ಕೋಟಿ ರುಪಾಯಿ ಮುಖಬೆಲೆಯದ್ದು.

ಈ ಅವಧಿಯಲ್ಲಿ ಮಾರಾಟವಾದ ಸುಮಾರು 92% ಬಾಂಡ್‌ಗಳು ಕೇವಲ 10 ಲಕ್ಷ ರೂಪಾಯಿಗಳ 25 ಬಾಂಡ್‌ಗಳೊಂದಿಗೆ ನಗದೀಕರಿಸಲ್ಪಟ್ಟಿವೆ ಮತ್ತು 1 ಲಕ್ಷ ರುಪಾಯಿ ಮುಖಬೆಲೆಯವು ಬಳಕೆಯಾಗದೆ ಉಳಿದಿವೆ.  ಬಾಂಡ್ ಮಾರಾಟದ ಮುಂದಿನ ಹಂತವು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ಚುನಾವಣಾ ಬಾಂಡ್‌ ವಿವಾದ

ಚುನಾವಣಾ ಬಾಂಡ್ ಯೋಜನೆಯನ್ನು ಅಪಾರದರ್ಶಕ ಮತ್ತು ಲೆಕ್ಕಕ್ಕೆ ಸಿಗದ ಹಣವನ್ನು ರಾಜಕೀಯ ಪಕ್ಷಗಳಿಗೆ ರವಾನೆ ಮಾಡಲು ತರಲಾಯಿತು.

ನವೆಂಬರ್ 2, 2023 ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ ಎರಡು ದಿನಗಳ ನಂತರ ಕೊನೆಯ ಸುತ್ತಿನ ಎಲೆಕ್ಟೋರಲ್ ಬಾಂಡ್ ಮಾರಾಟವನ್ನು ಘೋಷಿಸಲಾಯಿತು.

2017 ರಲ್ಲಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೊದಲ ಅರ್ಜಿ ಮತ್ತು 2023 ರಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿರುವ ಪ್ರಕರಣದ ನಡುವೆ ಇರುವ ಆರು ವರ್ಷಗಳ ಅಂತರದ ಬಗ್ಗೆ ಲೋಕೇಶ್ ಬಾತ್ರಾ ಗಮನ ಸೆಳೆದಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ದೊಡ್ಡ ಉದ್ಯಮಿಗಳು, ಕಾರ್ಪೊರೇಟ್ ದಾನಿಗಳ ಗೌಪ್ಯತೆಯ ಹಕ್ಕನ್ನು ರಕ್ಷಿಸಲು ಸರ್ಕಾರವು ಮನವಿ ಮಾಡಿತು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಚುನಾವಣಾ ಬಾಂಡ್ ಫಂಡ್‌ಗಳ ಮೂಲಗಳನ್ನು ತಿಳಿದುಕೊಳ್ಳಲು ನಾಗರಿಕರಿಗೆ ಯಾವುದೇ ಮೂಲಭೂತ ಹಕ್ಕಿಲ್ಲ ಎಂದು ಹೇಳಿದರು.

ಚುನಾವಣಾ ಬಾಂಡ್ ದಾನಿಗಳ ಮಾಹಿತಿ ಆರ್‌ಟಿಐನಿಂದ ಪಡೆಯಲು ಸಾಧ್ಯವಿಲ್ಲದಂತೆ ಮಾಡಿದ್ದರೂ,  ಎಸ್‌ಬಿಐನಂತಹ ಸಾರ್ವಜನಿಕ ಬ್ಯಾಂಕ್‌ನಿಂದ ಡೇಟಾವನ್ನು ಪಡೆಯಲು ಮತ್ತು ದಾನಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಬಹುದಾದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳವಳವಿದೆ.

ಹಣ ಯಾರಿಗೆ ಹೋಗುತ್ತಿದೆ?

ಮಾರ್ಚ್ 2022 ಮತ್ತು ಮಾರ್ಚ್ 2023 ರ ನಡುವೆ ರೂ 2,800 ಕೋಟಿ ರುಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಮಾರಾಟವಾಗಿವೆ.  ಇವುಗಳಲ್ಲಿ ಸುಮಾರು 46% ಅಥವಾ ರೂ 1,294 ಕೋಟಿ ರುಪಾಯಿ ಬಿಜೆಪಿಗೆ ಹೋಗಿವೆ ಎಂದು ಪತ್ರಕರ್ತ ಅರವಿಂದ್ ಗುಣಶೇಖರ್ ಎಕ್ಸ್‌ನಲ್ಲಿನ ತಿಳಿಸಿದ್ದಾರೆ.

Principal Opposition Party, Congress has received ₹ 171 crore worth electoral bonds in the FY 2023, which is just 6% of the electoral bonds sold in the said period.

In total, as of March 2023, Congress has received ₹ 1,135 crore via electoral bonds, 9.5% of total electoral… pic.twitter.com/3iWReUofYd
— Arvind Gunasekar (@arvindgunasekar) February 8, 2024

2018 ರಲ್ಲಿ ಯೋಜನೆಯನ್ನು ಪರಿಚಯಿಸಿದಾಗಿನಿಂದ  ಚುನಾವಣಾ ಬಾಂಡ್‌ಗಳ ಲಾಭವನ್ನು ಬಿಜೆಪಿ ಪಡೆಯುತ್ತಲೇ ಬಂದಿದೆ. 2018-2023ರ ನಡುವೆ ಮಾರಾಟವಾದ 12,008 ಕೋಟಿ ಮೌಲ್ಯದ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಿಜೆಪಿಗೆ ಹೋಗಿದೆ. ಐದು ವರ್ಷಗಳ ಅವಧಿಯಲ್ಲಿ 1,135 ಕೋಟಿ ರುಪಾಯಿಗಳಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕಾಂಗ್ರೆಸ್ ಕೇವಲ 9.5% ಅನ್ನು ಪಡೆದುಕೊಂಡಿದೆ.