book – Peepal Media

20ನೇ ಶತಮಾನದ ಬಹಳ ದೊಡ್ಡ ಪುಸ್ತಕ ಪ್ರೇಮಿ ಡಾ.ಬಿ.ಆರ್.ಅಂಬೇಡ್ಕರ್: ಪ್ರೊ.ರಹಮತ್ ತರೀಕೆರೆ
ಬೆಂಗಳೂರು: ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಲೇಖಕರ ಸಂಘ ಬಹುತ್ವ ಆಯಾಮದ ಚಳವಳಿಯಾಗಿ ಮೂಡಲಿ ಎಂದು ಹಿರಿಯ ಸಾಹಿತಿ ಪ್ರೊ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಏಪ್ರಿಲ್ 23ರ, ಬುಧವಾರ ನಗರದ ಚಿತ್ರಕಲಾ ಪರಿಷತ್ತಿನ ದೇವರಾಜ ಅರಸು ಗ್ಯಾಲರಿಯಲ್ಲಿ ನಡೆದ  ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘದ ಉದ್ಘಾಟನೆ ಜೊತೆಗೆ ಅಂಬೇಡ್ಕರ್ ಜಯಂತಿ-ವಿಶ್ವ ಪುಸ್ತಕ ದಿನಾಚರಣೆಯ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

1979 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ದಲಿತ ಸಾಹಿತ್ಯಕ್ಕೆ ವೇದಿಕೆಯಲ್ಲಿ ಅವಕಾಶ ನೀಡದಿದ್ದಕ್ಕಾಗಿ ಒಂದು ಪ್ರತಿಭಟನೆಯಾಗಿ ಬಂಡಾಯ ಸಾಹಿತ್ಯ ಚಳವಳಿ ಹುಟ್ಟಿದಂತೆ, ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘವೂ ಕೆಲಸ ಮಾಡುತ್ತೆ ಎಂದೆನಿಸುತ್ತೆ. ಇದರಲ್ಲಿ ಒಂದು ಪ್ರತಿರೋಧ ಇದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಪುಸ್ತಕ ಸಂಸ್ಕೃತಿಯಲ್ಲಿ ಮೂರು ಮಾದರಿಗಳಿವೆ. ಶುದ್ಧ ವ್ಯಾಪಾರ ಮಾದರಿ, ಪುಸ್ತಕವನ್ನು ರಾಜಕೀಯ ಅಜೆಂಡಾವನ್ನಾಗಿ ನೋಡುವ ಮಾದರಿ, ಪುಸ್ತಕವನ್ನು ಮನುಕುಲದ ಸೇವೆಯನ್ನಾಗಿ, ಪ್ರಜಾಪ್ರಭುತ್ವದ ಸಂವೇದನಾಶೀಲ ನಾಗರಿಕರನ್ನು ಸೃಷ್ಠಿ ಮಾಡುವುದೇ ಪುಸ್ತಕ ಸಂಸ್ಕೃತಿಯ ಉದ್ದೇಶವನ್ನಾಗಿಸಿಕೊಂಡ ಮಾದರಿಯಾಗಿದೆ.

ಕಳೆದ 5ವರ್ಷಗಳಲ್ಲಿ ಪುಸ್ತಕದ ಅಂಗಡಿಯಲ್ಲಿ ಹೆಚ್ಚು ಮಾತಾಡಿದ್ದೇನೆ. ವಿಶ್ವ ವಿದ್ಯಾಲಯಗಳಲ್ಲಿ ನಡೆಯಬೇಕಾದ ಚರ್ಚೆಗಳು ಪುಸ್ತಕದಂಗಡಿಯಲ್ಲಿ ನಡೆಯುತ್ತಿವೆ ಎಂದು ಹೇಳಿದರು.

20ನೇ ಶತಮಾನದಲ್ಲಿ ಬಹಳ ದೊಡ್ಡ ಪುಸ್ತಕ ಪ್ರೇಮಿ ಯಾರಾದರೂ ಇದ್ದರೆ, ಅದು ಡಾ.ಬಿ.ಆರ್.ಅಂಬೇಡ್ಕರ್ ಅವರು. ಕಾರ್ಮಿಕ ಮಂತ್ರಿ ಯಾಗಿದ್ದಾಗ, ಹಳೆಯ ಪುಸ್ತಕದಂಗಡಿಗೆ ಹೋಗಿ ಪುಸ್ತಕಗಳನ್ನು ತೆಗೆದುಕೊಂಡು ಬರುತ್ತಿದ್ದರು.

ಭಾರತದ ಮಂತ್ರಿಯೊಬ್ಬರು ಧೂಳಿನ ಪುಸ್ತಕದಂಗಡಿಯಲ್ಲಿ ಸಮಯ ಕಳೆದಿದ್ದೂ ಯಾರಾದೂ ಇದ್ದರೆ ಅದೂ ಕೂಡ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾತ್ರ. ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ನಿರ್ಮಾಣ ಹಾಗೂ ಅವರ ಚಳವಳಿಯ ಪುಸ್ತಕಗಳು ಮುಖ್ಯ ಪಾತ್ರವಹಿಸಿವೆ ಎಂದು ತಿಳಿಸಿದರು.

ಸಿನೆಮಾ ಮತ್ತು ನಾಟಕಗಳು ನಾಯಕ ಮತ್ತು ನಿರ್ದೇಶಕ  ಕೇಂದ್ರಿತವಾಗಿರುತ್ತವೆ. ಆದರೆ ಸಿನೆಮಾದಲ್ಲಿ ಲೈಟ್‌ಬಾಯ್, ಪರದೆ ಎಳೆಯುವವರು ಇಲ್ಲದಿದ್ದರೇ ಏನಾಗುತ್ತಿತ್ತು. ಸಾಮೂಹಿಕ ದುಡಿಮೆಯ ಸಂಸ್ಕೃತಿಯ ಭಾಗವಾಗಿ ಕಲಾ ಮಾದ್ಯಮಗಳು ಸೃಷ್ಠಿಯಾಗಿವೆ. ಆದರೆ ನಟ ಕೇಂದ್ರಿತವಾಗಿ ವ್ಯಾಖ್ಯಾನ ಮಾಡಿ, ಇಡೀ ಕಲೆಯ ಸೃಷ್ಠಿಯ ಹಿಂದೆ ಇರುವ ವ್ಯಕ್ತಿಗಳನ್ನು ನಾವು ಮರೆತಿದ್ದೇವೆ.

ಇದು ಭಾರತೀಯರು ವ್ಯಕ್ತಿ ಕೇಂದ್ರಿತ ಇತಿಹಾಸವನ್ನು ರಚನೆ ಮಾಡುವ ದುಷ್ಪರಿಣಾಮದ ಭಾಗವಾಗಿದೆ ಎಂದು ಅಭಿಪ್ರಾಯಪಟ್ಟರು.

ಈಗ ಸಾಮೂಹಿಕ ಪ್ರಜ್ಞೆಯೇ ಇಲ್ಲವಾಗಿದೆ. ಆದಷ್ಟು ಹೊಸ ಉದ್ಯಮಶೀಲತೆಗಳನ್ನು ಸಾಮೂಹಿಕ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬೇಕು. ಬಹುತ್ವ ಎನ್ನುವುದು ಆದರ್ಶವಾದಾಗ ಅದನ್ನು ಪಾಲಿಸಬೇಕು. ಕರ್ನಾಟಕದ ಎಲ್ಲ ಕ್ಷೇತ್ರಗಳ ಸಾಧಕರ ಹಿನ್ನೆಲೆಯಲ್ಲಿ ದುಡಿದಿರುವವರನ್ನು ಸೇರಿಸಿಕೊಂಡೇ ನಾವು ಚರಿತ್ರೆಯನ್ನು ಕಟ್ಟಬೇಕಿದೆ ಎಂದು ತಿಳಿಸಿದರು.

ಹೊಸತಲೆಮಾರು ಓದನ್ನು ಹೇಗೆ ನೋಡುತ್ತಾರೆ, ಡಿಜಿಟಲ್ ಯುಗದಲ್ಲಿ ನೋಡುವ ಮತ್ತು ಕೇಳುವ ಸಂಸ್ಕೃತಿ ಅತಿವೇಗವಾಗಿ ಬೆಳೆಯುತ್ತಿದ್ದು, ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಸಂಘದ ಲೋಗೊ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ‘ನಾನು ಬರಹಗಾರನಲ್ಲ, ಚಿಂತಕನೂ ಅಲ್ಲ, ಆದರೆ ಬರಹಗಾರರು, ಚಿಂತಕರ ಜೊತೆ ಓದುತ್ತಾ, ಅವರ ಒಡನಾಟದಲ್ಲಿ ಬೆಳೆದ ಹೋರಾಟಗಾರ, ನಾವು ಓದಿಗೆ ತೆರೆದುಕೊಂಡದ್ದೇ ವಿಭಿನ್ನ ಎಂದು ಹೇಳಿದರು.

ಈ ವೇಳೆ ದೇಶದಲ್ಲೆಡೆ, ಹಾಗೂ ಜಗತ್ತಿನ ಸುತ್ತಮುತ್ತ ನೋಡಿರೆ ಪ್ರಜಾತಂತ್ರವನ್ನು ಬಳಸಿಕೊಂಡೇ ಸರ್ವಾಧಿಕಾರಿಗಗಳು ಅಧಿಕಾರಕ್ಕೇರುತ್ತಿದ್ದಾರೆ. ಅವರೆಲ್ಲರೂ ಪುಸ್ತಕ ದ್ವೇಷಿಗಳೇ, ಅವರಿಗೆ ಒಬ್ಬ ಕನ್ನಡಿಗನನ್ನು, ಒಂದು ಮಗುವನ್ನು ಕೂಡ ಸಹಿಸಿಕೊಳ್ಳಲಾಗುವುದಿಲ್ಲ.

ಇಂತಹ ಸಂದರ್ಭದಲ್ಲಿ ಪುಸ್ತಕ ಸಂಸ್ಕೃತಿಯ ಪಾತ್ರ ಏನು ಎನ್ನುವುದನ್ನು ಕೂಡ ಆಲೋಚನೆ ಮಾಡಬೇಕಿದೆ. ಇಡೀ ಪುಸ್ತಕೋದ್ಯಮ ಬಂಡವಾಳಶಾಹಿಗಳ ಕಪಿಮುಷ್ಠಿಗೆ ಸಿಲುಕಿವೆ. ಪುಸ್ತಕ ಮೇಳಗಳನ್ನು ಕೂಡ ಬಂಡವಾಳಶಾಹಿಗಳು ಸ್ಟಾರ್ ಹೊಟೇಲ್‌ಗಳಲ್ಲಿ ನಡೆಸುತ್ತಿದ್ದಾರೆ ಅಂತಾ ಆತಂಕ ವ್ಯಕ್ತ ಪಡಿಸಿದರು.

ಜೊತೆಗೆ ಪುಸ್ತಕ ಲೋಕ ಹೇಗೆ ಅಂಬೇಡ್ಕರ್ ಬರಹಗಳನ್ನು ವ್ಯವಸ್ಥಿತವಾಗಿ ಜನರ ಕೈಗೆ ಸಿಗದಂತೆ ನೋಡಿಕೊಂಡಿದೆ ಎಂಬುದನ್ನು ವಿವರಿಸಿದರು. ಜೊತೆಗೆ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ದಾರಿ ಮಾಡಿಕೊಡುತ್ತಿರುವ ಕರ್ನಾಟಕ ಪುಸ್ತಕ ಮಾರಾಟಗಾರರು ಪ್ರಕಾಶಕರು ಹಾಗೂ ಲೇಖಕರ ಸಂಘಕ್ಕೆ ಶುಭಾಷಯ ಕೋರುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ, ಪ್ರಕಾಶಕ ಗುರುಪ್ರಸಾದ್ ಡಿ.ಎನ್, ಪ್ರಕಾಶಕಿ ಡಾ.ಮಮತಾ ಕೆ.ಎನ್, ರಹಮತ್ ತರೀಕೆರೆ ಸೇರಿದಂತೆ ಅನೇಕ ಗಣ್ಯರು, ಪುಸ್ತಕಾಸಕ್ತರು ಉಪಸ್ಥಿತರಿದ್ದರು.

ಹಿಂದೂ ಧರ್ಮವು ವಿಕೃತವಾಗುತ್ತಿದೆ, ಭಾರತ ಪಾಕಿಸ್ತಾನವಾಗುತ್ತಿದೆ: ‘ದಿ ನ್ಯೂ ಐಕಾನ್’ ಪುಸ್ತಕ ಬಿಡುಗಡೆ ಮಾಡಿದ ಅರುಣ್‌ ಶೌರಿ
ಬೆಂಗಳೂರು: ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ, ಅರ್ಥಶಾಸ್ತ್ರಜ್ಞ, ಪತ್ರಕರ್ತ ಮತ್ತು ಲೇಖಕ ಅರುಣ್ ಶೌರಿ ಅವರ ವಿಡಿ ಸಾವರ್ಕರ್‌ ಕುರಿತಾದ ತಮ್ಮ ಇತ್ತೀಚಿನ ಪುಸ್ತಕ ದಿ ನ್ಯೂ ಐಕಾನ್ ಬಿಡುಗಡೆ ಬಿಡುಗಡೆಯಾಗಲಿದೆ. ಈ  ಪುಸ್ತಕವು ಹಿಂದುತ್ವವಾದಿ ಮತ್ತು ಸಮಕಾಲೀನ ಭಾರತೀಯ ರಾಜಕೀಯದಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿರುವ ವಿನಾಯಕ ದಾಮೋದರ್ ಸಾವರ್ಕರ್ ಅವರ ಜೀವನ, ಸಿದ್ಧಾಂತ ಮತ್ತು ಪರಂಪರೆಯ “ವಿಮರ್ಶಾತ್ಮಕ” ಚರ್ಚೆಯನ್ನು ಮಾಡುತ್ತದೆ.

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ (1998-2004) ಸಚಿವರಾಗಿ ಸೇವೆ ಸಲ್ಲಿಸಿದ ಶೌರಿ, ಆ ಅವಧಿಯಲ್ಲಿ ಪ್ರಮುಖ ಹಿಂದೂ ರಾಷ್ಟ್ರೀಯತಾವಾದಿ ಬುದ್ಧಿಜೀವಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟವರು. ದಿ ನ್ಯೂ ಐಕಾನ್‌ನಲ್ಲಿ ,  ಪದ್ಮಭೂಷಣ ಶೌರಿ ಐತಿಹಾಸಿಕ ಪುರಾವೆಗಳೊಂದಿಗೆ ಸಾವರ್ಕರ್ ಸಿದ್ದಾಂತದ ವಿಮರ್ಶೆ ಮಾಡಿದ್ದಾರೆ.

ಸಾವರ್ಕರ್ ಅವರು ಕೋಮು ಧ್ರುವೀಕರಣದ ಐಕಾನ್‌ ಆಗಿ ಉಳಿದಿದ್ದಾರೆ. 1937ರಲ್ಲಿ ದೇಶ ವಿಭಜನೆಯ ಬೀಜವನ್ನು ಬಿತ್ತಿ, ಹಿಂದೂ-ಬಹುಸಂಖ್ಯಾತ ರಾಷ್ಟ್ರದ ಚಿಂತನೆಯನ್ನು ನೀಡಿ ಹಿಂದೂ ಬಲಪಂಥೀಯರಿಂದ ವ್ಯಾಪಕವಾಗಿ ಆರಾಧಿಸಲ್ಪಡುತ್ತಿದ್ದಾರೆ. ಶೌರಿಯವರ ಟೀಕೆಯು ತೀವ್ರವಾದ ಚರ್ಚೆಗಳನ್ನು ಹುಟ್ಟುಹಾಕುವ ಸಾಧ್ಯತೆಯಿದೆ, ಏಕೆಂದರೆ ಇದು ಹಿಂದೂ ಬಲಪಂಥೀಯರನ್ನು ಒಳಗೊಂಡಂತೆ ಸಂಘಟಿತ ಧರ್ಮ ಮತ್ತು ರಾಜಕೀಯ ಸಿದ್ಧಾಂತಗಳಿಗೆ ಸವಾಲು ಹಾಕುತ್ತದೆ.

ಸಮಕಾಲೀನ ದಾಖಲೆಗಳು, ಗುಪ್ತಚರ ವರದಿಗಳು, ಆತ್ಮಚರಿತ್ರೆಗಳು ಮತ್ತು ದಾಖಲೆಗಳನ್ನು ಒಳಗೊಂಡಂತೆ “550 ಕ್ಕೂ ಹೆಚ್ಚು ಮೂಲಗಳ” ಆಧಾರದಲ್ಲಿ ಬರೆಯಲಾಗಿರುವ ಈ ಪುಸ್ತಕವು ಭಾರತೀಯ ಇತಿಹಾಸ, ಹಿಂದೂ ಗುರುತನ್ನು ಮತ್ತು ಸಾವರ್ಕರ್ ಅವರ ಬಗ್ಗೆ ಕಟ್ಟಲಾಗಿರುವ ಕಟ್ಟುಕತೆಗಳನ್ನು ವ್ಯವಸ್ಥಿತವಾಗಿ ಕೆಡವುತ್ತದೆ ಎಂದು ಅರುಣ್‌ ಶೌರಿ ಹೇಳುತ್ತಾರೆ.

“ಹಕ್ಕು ಪ್ರತಿಪಾದನೆಗಳು ವಿಮರ್ಶೆಯಲ್ಲಿ ಉಳಿಯುವುದಿಲ್ಲ. ಅದರಲ್ಲೂ ಸಾವರ್ಕರ್ ನಮ್ಮ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ ಅಥವಾ ನಿಜವಾಗಿಯೂ ತನ್ನ ಬಗ್ಗೆಯೇ ಹೇಳಿರುವ ಪುರಾಣಗಳು ಖಂಡಿತವಾಗಿಯೂ ಉಳಿಯುವುದಿಲ್ಲ. [ಸಾವರ್ಕರ್ ಅವರ] ಪ್ರಿಸ್ಕ್ರಿಪ್ಷನ್‌ಗಳಿಗೆ ಸಂಬಂಧಿಸಿದಂತೆ ನಾವು ಅವುಗಳನ್ನು ಅಳವಡಿಸಿಕೊಂಡರೆ ಹಿಂದುತ್ವ ರಾಷ್ಟ್ರವನ್ನು ವಾಸ್ತವವಾಗಿ ಅವರು ಖಂಡಿಸಿದಂತೆಯೇ ಆಗುತ್ತದೆ – ಅಂದರೆ, ಅದು ಇನ್ನೊಂದು ‘ಇಸ್ಲಾಮಿಕ್’ ರಾಷ್ಟ್ರವಾಗುತ್ತದೆ. ಒಂದುಗೂಡಿಸು ನಮ್ಮ ಸಮಾಜವು ದ್ವೇಷದಿಂದ ತುಂಬಿರುತ್ತದೆ. ಸೇಡು ತೀರಿಸಿಕೊಳ್ಳುವುದು, ಅವರ ಹೇಳಿದ ‘ತೀವ್ರ ಕ್ರೌರ್ಯ’ ಮತ್ತು ಉಳಿದವುಗಳು ರೂಢಿಯಲ್ಲಿ ಬರುತ್ತವೆ,” ಎಂದು ಶೌರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಮತ್ತು ಅಂತಹ ಪರಿಸ್ಥಿತಿಯನ್ನು ನಿರ್ಮಿಸಲು ಇರುವ ಸಾಧನಗಳೆಂದರೆ – ಸಂವಾದವನ್ನು ಕಡೆವಿ ಹಾಕುವುದು, ಸುಳ್ಳಿನಿಂದ ಅದನ್ನು ತುಂಬಿಸುವುದು ಮತ್ತು ಸುಳ್ಳನ್ನು ದೊಡ್ಡ ಉದ್ದೇಶಕ್ಕಾಗಿ ಹರಡುವುದು.ಒಂದೇ ಮಾತಿನಲ್ಲಿ ಹೇಳುವುದಾದರೆ, ಹಿಂದೂ ಧರ್ಮವು ವಿಕೃತವಾಗುತ್ತಿದೆ ಮತ್ತು ಭಾರತವು ಪಾಕಿಸ್ತಾನವಾಗುವ ಹಾದಿಯಲ್ಲಿದೆ,” ಎಂದು ಅರುಣ್‌ ಶೌರಿ ಹೇಳಿದ್ದಾರೆ.

ಪೆಂಗ್ವಿನ್ ಇಂಡಿಯಾ ಪ್ರಕಟಿಸಿದ ದಿ ನ್ಯೂ ಐಕಾನ್ ಪುಸ್ತಕವು ಜನವರಿ 30 ರಿಂದ ಲಭ್ಯವಿರುತ್ತದೆ, ಅದರ ಬೆಲೆ 999 ರುಪಾಯಿಗಳು.

ಈ ಲೇಖನವು ಸೌತ್ ಫಸ್ಟ್ ನಲ್ಲಿ ಪ್ರಕಟಿಸಲಾಗಿರುವ  Former Union Minister Arun Shourie critiques Savarkar’s legacy in new book ಲೇಖನದ ಅನುವಾದವಾಗಿದೆ.

ನಾವು AI ಸರ್ವಾಧಿಕಾರಕ್ಕೆ ಬಲಿಯಾಗುತ್ತಿದ್ದೇವೆಯೇ? ಯುವಲ್ ಹರಾರಿಯ ಹೊಸ ಪುಸ್ತಕ ‘ನೆಕ್ಸಸ್’ನಲ್ಲಿದೆ ಉತ್ತರ
ಬೆಂಗಳೂರು: ಮಾಹಿತಿ ಜಾಲಗಳಲ್ಲಿ ಆಗಿರುವ ಏರಿಕೆ ಮತ್ತು ಪ್ರಪಂಚದ ಮೇಲೆ ಅವುಗಳ ಆಳವಾದ ಪ್ರಭಾವವನ್ನು ಕುರಿತು ಇಸ್ರೇಲಿ ಬರಹಗಾರ ಮತ್ತು ಇತಿಹಾಸಕಾರ ಯುವಲ್ ನೋಹ್ ಹರಾರಿ ಅವರ ಹೊಸ ಪುಸ್ತಕ ನಮ್ಮ ಗಮನ ಸೆಳೆಯುತ್ತದೆ. ಕಥೆಗಳ ಶಕ್ತಿಯಿಂದ ಅಲ್ಗಾರಿದಮ್‌ಗಳ ಪ್ರಾಬಲ್ಯದವರೆಗೆ ಮತ್ತು ಕೃತಕ ಬುದ್ಧಿಮತ್ತೆಯ ಭರವಸೆಗಳು ಮತ್ತು ಅಪಾಯಗಳವರೆಗೆ ಮನುಕುಲದ ಪ್ರಯಾಣದ ಬಗ್ಗೆ ಇವರ Nexus ಪುಸ್ತಕ ಮಾತನಾಡುತ್ತದೆ.

ಪೆಂಗ್ವಿನ್ ರಾಂಡಮ್ ಹೌಸ್ ಪ್ರಕಟಿಸಿರುವ “Nexus” ನಲ್ಲಿ 11 ಅಧ್ಯಾಯಗಳಿವೆ. ಈ ಪುಸ್ತಕ “ಮಾಹಿತಿ ಜಾಲಗಳು ನಮ್ಮ ಜಗತ್ತನ್ನು ಹೇಗೆ ನಿರ್ಮಿಸಿವೆ” ಎಂಬುದರ ಕಥೆಯಾಗಿದೆ.

“AI ಬಗ್ಗೆ ಹೊಸದೇನಿದೆ, ಪ್ರಿಂಟಿಂಗ್ ಪ್ರೆಸ್‌ಗಳು ಮತ್ತು ರೇಡಿಯೊ ಸೆಟ್‌ಗಳಿಗಿಂತ ಇದು ಮೂಲಭೂತವಾಗಿ ಹೇಗೆ ಭಿನ್ನವಾಗಿದೆ ಮತ್ತು AI ಸರ್ವಾಧಿಕಾರವು ನಾವು ಹಿಂದೆ ನೋಡಿದ್ದಕ್ಕಿಂತ ಹೇಗೆ ಭಿನ್ನ ಎಂಬುದನ್ನು ಅರ್ಥಮಾಡಿಕೊಳ್ಳಲು ಇತಿಹಾಸದ ಆಳವಾದ ಜ್ಞಾನವು ಅತ್ಯಗತ್ಯವಾಗಿದೆ. ಈ ಪುಸ್ತಕವು ಹಿಂದಿನದನ್ನು ಅಧ್ಯಯನ ಮಾಡುವುದರಿಂದ ಭವಿಷ್ಯವನ್ನು ಊಹಿಸಲು ನಮಗೆ ಸಾಧ್ಯವಾಗುತ್ತದೆ ಎಂದು ವಾದಿಸುವುದಿಲ್ಲ.

“ಈ ಪುಸ್ತಕವನ್ನು ಬರೆಯುವ ಸಂಪೂರ್ಣ ಅಂಶವೆಂದರೆ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವ ಮೂಲಕ ನಾವು ಕೆಟ್ಟ ಫಲಿತಾಂಶಗಳನ್ನು ತಡೆಯಬಹುದು. ನಾವು ಭವಿಷ್ಯವನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ, ಅದನ್ನು ಚರ್ಚಿಸಲು ಸಮಯವನ್ನು ಏಕೆ ವ್ಯರ್ಥ ಮಾಡುಬೇಕು?” ಎಂದು ಈ ಪುಸ್ತಕದಲ್ಲಿ ಜನಪ್ರಿಯ ಪುಸ್ತಕ “ಸೇಪಿಯನ್ಸ್: ಎ ಬ್ರೀಫ್ ಹಿಸ್ಟರಿ ಆಫ್ ಹ್ಯೂಮನ್‌ಕೈಂಡ್” ನ ಈ ಲೇಖಕ ಬರೆಯುತ್ತಾರೆ.

ಉತ್ತಮ ಭವಿಷ್ಯವನ್ನು ರೂಪಿಸಲು ಮಾನವೀಯತೆಯು ಮಾಡಬೇಕಾದ ಆಯ್ಕೆಗಳ ರೋಮಾಂಚಕ ಮತ್ತು ಸಮಯೋಚಿತ ಪರಿಶೋಧನೆ ಎಂದು ಹೇಳಲಾಗಿರುವ ಈ ಪುಸ್ತಕವು “ಸಾರ್ವಜನಿಕ ಸಂವಾದವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುತ್ತದೆ ಮತ್ತು ತಾಂತ್ರಿಕ ವಿಕಾಸ ಹಾಗೂ ಅದರ ಸಾಮಾಜಿಕ ಪರಿಣಾಮಗಳ ಐತಿಹಾಸಿಕ ದಾಖಲೆಯನ್ನು ಒದಗಿಸುತ್ತದೆ”.

“AI ಮತ್ತು ಅಲ್ಗಾರಿದಮ್‌ಗಳು ನಮ್ಮ ಜೀವನವನ್ನು ವೇಗವಾಗಿ ಪರಿವರ್ತಿಸುತ್ತಿರುವ ಸಮಯದಲ್ಲಿ, ತಿಳುವಳಿಕೆಯುಳ್ಳ ಚರ್ಚೆಗಳನ್ನು ಉತ್ತೇಜಿಸಲು ಮತ್ತು ನಮ್ಮ ಸಾಮೂಹಿಕ ಆಯ್ಕೆಗಳಿಗೆ ಮಾರ್ಗದರ್ಶನ ನೀಡಲು ಇಂತಹ ಪುಸ್ತಕಗಳು ಅತ್ಯಗತ್ಯ ಎಂದು ನಾವು ನಂಬುತ್ತೇವೆ” ಎಂದು ಪೆಂಗ್ವಿನ್ ಸೆಲೆಕ್ಟ್‌ನ ಮಾರಾಟ ಮತ್ತು ಉತ್ಪನ್ನ ವಿಭಾಗದ ಮುಖ್ಯಸ್ಥ ಮನೋಜ್ ಸತ್ತಿ ಹೇಳುತ್ತಾರೆ..

2002 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿರುವ ಹರಾರಿ, ಪ್ರಸ್ತುತ ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದಲ್ಲಿ ಪ್ರಾದ್ಯಾಪಕರಾಗಿದ್ದಾರೆ, “Homo Deus: A Brief History of Tomorrow” ಮತ್ತು “21 Lessons for the 21st Century” ಇವರ ಜಗದ್ವಿಖ್ಯಾತ ಪುಸ್ತಕಗಳು.

ನವೆಂಬರ್‌ 6 ರಂದು, ʼದಯಾ ಗಂಗನಘಟ್ಟʼ ಅವರ ʼಉಪ್ಪುಚ್ಚಿ ಮುಳ್ಳುʼ ಪುಸ್ತಕ ಬಿಡುಗಡೆ
ಬೆಂಗಳೂರು: ನವೆಂಬರ್‌ 06 ರಂದು ಚಿತ್ರಕಲಾ ಪರಿಷತ್‌ ಆವರಣದಲ್ಲಿ ಲೇಖಕರಾದ ದಯಾ ಗಂಗನಘಟ್ಟ ಅವರ ʼಉಪ್ಪುಚ್ಚಿ ಮುಳ್ಳುʼ ಕಥಾ ಸಂಕಲನ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಪುಸ್ತಕವನ್ನು ಹಾಸನದ ಹಾಡ್ಲಹಳ್ಳಿ ಪ್ರಕಾಶನ ಪ್ರಕಟಿಸಿದ್ದು, ಹಿರಿಯ ಲೇಖಕರಾದ ಶ್ರೀ ಹಾಡ್ಲಹಳ್ಳಿ ನಾಗರಾಜ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಹಿರಿಯ ವಿಮರ್ಶಕಿ ಡಾ.ಎಂ.ಎಸ್ ಆಶಾದೇವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕೃತಿಯ ಕುರಿತು ಕಥೆಗಾರರಾದ ಕೇಶವ ಮಳಗಿ ಮತ್ತು ನಾಟಕಕಾರರಾದ ಡಾ. ಬೇಲೂರು ರಘುನಂದನ್ ಅವರು ಮಾತನಾಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕಥೆಗಾರ್ತಿಯಾದ ದಾಕ್ಷಾಯಿಣಿ ಗಂಗನಘಟ್ಟ, ಪತ್ರಕರ್ತರು ಮತ್ತು ಪ್ರಕಾಶಕರಾದ ಚಲಂ ಹಾಡ್ಲಹಳ್ಳಿ, ಕಾಜಾಣ, ರಂಗಚಂದಿರ, ಶಾರದಾ ಪ್ರತಿಷ್ಠಾನ, ಬೀ ಕಲ್ಚರ್, ರಂಗ ಹೃದಯ, ಜೇನು ಗಿರಿ, ಅಕ್ಷರ ಚಪ್ಪರ ಮತ್ತಿತರರು ಹಾಜರಿರುತ್ತಾರೆ.

ಆರಾಧ್ಯ ಫೌಂಡೇಶನ್ ವಿಜಯನಗರ ವತಿಯಿಂದ ಕಥಾಭಿನಯ ಹಾಗು ಗಂಗನಘಟ್ಟದ ಹಾಡುಗಾರ್ತಿಯರಿಂದ ಸೋಬಾನೆ ಪದ ಕಾರ್ಯಕ್ರಮ ಸಹ ಇರಲಿದೆ.

ಸೆ.11 ಕ್ಕೆ ʼಅಪ್ಪುʼ ಕುರಿತ ಕವನ ಸಂಕಲನ ಬಿಡುಗಡೆ
ಬೆಂಗಳೂರು: ಡಾ. ಪುನೀತ್‌ ರಾಜ್‌ಕುಮಾರ್‌ ಕುರಿತ ಕವಿತೆ-ಗೀತೆಗಳ ಸಂಕಲನ ʼಶಿವ ಮೆಚ್ಚಿದ ಬೆಟ್ಟದ ಹೂʼ ಕೃತಿ ಸೆ. 11ರಂದು ಬಿಡುಗಡೆಯಾಗಲಿದೆ.

ರವಿರಾಜ್‌ ಸಾಗರ್ ಅವರ ಸಂಪಾದನೆಯ ʼಶಿವ ಮೆಚ್ಚಿದ ಬೆಟ್ಟದ ಹೂʼ ಕೃತಿಯನ್ನು ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಮತ್ತು ಪೂರ್ಣಿಮ ರಾಜ್‌ಕುಮಾರ್‌ ಅವರು ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ  ಅಕ್ಕಮಹಾದೇವಿ ಸಭಾಂಗಣದಲ್ಲಿ ಮದ್ಯಾಹ್ನ 2.30ರಿಂದ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಎಂದು ಈ ಕುರಿತು ರವಿರಾಜ್‌ ಸಾಗರ್‌ ತಿಳಿಸಿದ್ದಾರೆ.

ಅಪ್ಪು ಅಭಿಮಾನಿ ಸಾಹಿತಿಗಳ ಬಳಗ ಮತ್ತು ಕರ್ನಾಟಕ ಹಸೆ ಚಿತ್ತಾರ ಪರಿಷತ್ತು (ರಿ) ಸಹಭಾಗಿತ್ವದಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಐ ಎ ಎಸ್‌ ಅಧಿಕಾರಿಗಳೂ, ಸಿನಿಮಾ ನಿರ್ಮಾಪಕರೂ ಆದ ಡಾ.ಶಿವಪ್ಪ ಅವರು ವಹಿಸಿಕೊಳ್ಳಲಿದ್ದಾರಲ್ಲದೆ ಪುಸ್ತಕದ ಪರಿಚಯ ಮಾಡಿಕೊಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ, ಪ್ರಸಿದ್ಧ ಚಲನಚಿತ್ರ ಗೀತ ರಚನೆಕಾರರಾದ ಕವಿರಾಜ್‌, ಹೃದಯ ಶಿವ, ಶ್ರೀ ಶ್ರೀಧರ ವಿ ಸಂಭ್ರಮ, ಕಸಾಪದ ಮಾಜಿ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ನೇಕಾರ ಪ್ರಕಾಶನದ ರಾಮಕೃಷ್ಣ, ಹಿರಿಯ ಮಾರ್ಕೆಟಿಂಗ್‌ ಎಕ್ಸೆಕ್ಯುಟಿವ್‌ ಹರೀಶ್‌ ಕೆ ಎಚ್‌, ಸಿನಿಮಾ ನಟ ವೀರೆನ್‌ ಕೇಶವ, ಲೇಖಕರು, ಶಿಕ್ಷಕಕರು ಡಾ. ಸುನಿಲ್‌ ಕುಮಾರ್‌ ಪರೀಟ, ಲೇಖಕರಾದ ಡಾ.ಮಲಕಪ್ಪ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಅಪ್ಪು ನುಡಿನಮನ, ಗೀತಗಾಯನ, ಅಪ್ಪು ಚಿತ್ರೋತ್ಸವ ಮತ್ತು ಹಸೆ ಚಿತ್ತಾರ ಪ್ರದರ್ಶನ ನಡೆಯಲಿದೆ.