breakimg news – Peepal Media

ಕೋಮುವಾದಿ ಶೋ: ಟೈಮ್ಸ್ ನೌ ನವಭಾರತ್, ನ್ಯೂಸ್ 18 ಇಂಡಿಯಾ, ಆಜ್ ತಕ್‌ಗೆ ದಂಡ
ಬೆಂಗಳೂರು: ದ್ವೇಷ ಹರಡುವ ಮತ್ತು   ಕೋಮು ಸೌಹಾರ್ದತೆಯನ್ನು ಕೆಡಿಸುವ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವ ಟಿವಿ ಚಾನೆಲ್‌ಗಳಿಗೆ ಈ ಕಾರ್ಯಕ್ರಮಗಳನ್ನು ತೆಗೆದುಹಾಕಲು ಮತ್ತು ದಂಡ ಪಾವತಿಸಲು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (The News Broadcasting & Digital Standards Authority – NBDSA ) ಕರೆ ನೀಡಿದೆ. ಎನ್‌ಬಿಡಿಎಸ್‌ಎ ಪ್ರಸ್ತುತ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎಕೆ ಸಿಕ್ರಿ ಅವರ ನೇತೃತ್ವದಲ್ಲಿದೆ.

ಟೈಮ್ಸ್ ನೌ ನವಭಾರತ್ ಗೆ 1 ಲಕ್ಷ ರೂಪಾಯಿ ದಂಡ ಹಾಗೂ ನ್ಯೂಸ್ 18 ಇಂಡಿಯಾಗೆ 50,000 ರೂಪಾಯಿ ದಂಡ ವಿಧಿಸಲಾಗಿದ್ದು, ಆಜ್ ತಕ್ ಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಮೂರು ಚಾನೆಲ್‌ಗಳು ಕಾರ್ಯಕ್ರಮಗಳ ಆನ್‌ಲೈನ್ ಆವೃತ್ತಿಗಳನ್ನು ಏಳು ದಿನಗಳಲ್ಲಿ ತೆಗೆದುಹಾಕಲು ಆದೇಶ ನೀಡಲಾಗಿದೆ ಎಂದು ಲೈವ್‌ಲಾ ವರದಿ ಮಾಡಿದೆ .

ಕಾರ್ಯಕರ್ತ ಇಂದ್ರಜೀತ್ ಘೋರ್ಪಡೆ ಅವರು ಕೋಮು ಪ್ರಚೋದಕ ಟಿವಿ ಕಾರ್ಯಕ್ರಮಗಳ ವಿರುದ್ಧ ದೂರು ದಾಖಲಿಸಿದ ನಂತರ ಇದು ನಡೆದಿದೆ. ಟೈಮ್ಸ್ ನೌ ನವಭಾರತ್ ಮೆಗಾ ಟೈಮ್ಸ್ ಗುಂಪಿನ ಭಾಗವಾಗಿದ್ದು, ಆಂಕರ್ ಹಿಮಾಂಶು ದೀಕ್ಷಿತ್ ಅವರು ಮುಸ್ಲಿಮರನ್ನು ಗುರಿಯಾಗಿಸಿ ಮಾತನಾಡಿದ್ದಾರೆ ಮತ್ತು ಅಂತರ-ಧರ್ಮೀಯ ಸಂಬಂಧಗಳನ್ನು “ಲವ್ ಜಿಹಾದ್” ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖೇಶ್ ಅಂಬಾನಿ ಒಡೆತನದ ನ್ಯೂಸ್ 18 ಇಂಡಿಯಾ ಪ್ರಸಾರ ಮಾಡಿರುವ ಮೂರು ಟಿವಿ ಶೋಗಳಿಗೆ ದಂಡ ವಿಧಿಸಲಾಗಿದ್ದು, ಅದರಲ್ಲಿ ಎರಡು ಶೋಗಳಲ್ಲಿ ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಡೆಸಿಕೊಟ್ಟಿದ್ದಾರೆ. ಈ ಶೋಗಳಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು “ಲವ್ ಜಿಹಾದ್” ಎಂದು ಕರೆಯುವ ಮೂಲಕ ಕೋಮುವಾದ ಹರಡುವ ಪ್ರಯತ್ನ ಮಾಡಲಾಗಿದೆ.

ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್‌ನಲ್ಲಿ ಕೋಮು ಪ್ರಚೋದಕ ಶೋ ನಡೆಸಿರುವ ಆಂಕರ್ ಸುಧೀರ್ ಚೌಧರಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಚೌದರಿ ರಾಮನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ವರದಿಯಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿದ್ದರು.

ದೂರುದಾರರು ಸುದ್ದಿಗೆ ಇರಬೇಕಾದ ನಿಷ್ಪಕ್ಷಪಾತ, ವಸ್ತುನಿಷ್ಠತೆ, ತಟಸ್ಥತೆ ಮತ್ತು ನಿಖರತೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಈ ಟಿವಿ ಚಾನೆಲ್‌ಗಳು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿದ್ದಾರೆ. NBDSA ದ್ವೇಷದ ಭಾಷಣ ತಡೆಗಟ್ಟುವಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಘಟನೆಗಳನ್ನು ವರದಿ ಮಾಡುವಲ್ಲಿ ಕೋಮುವಾದಿ ನಿರೂಪಣೆಗಳನ್ನು ನಿಯಂತ್ರಿಸುತ್ತದೆ.

“ಲವ್ ಜಿಹಾದ್” ಕುರಿತು ಟೈಮ್ಸ್ ನವಭಾರತ್ ಕಾರ್ಯಕ್ರಮದಲ್ಲಿ, “ಇಂಪ್ಯೂನ್ಡ್ ಬ್ರಾಡ್‌ಕಾಸ್ಟ್ ಅನ್ನು ಅವಲೋಕಿಸಿದಾಗ, ಪ್ರಸಾರದ ಪ್ರಾರಂಭದಲ್ಲಿಯೇ ನಿರ್ದಿಷ್ಟ ಸಮುದಾಯದ ಪುರುಷರು ಮತ್ತೊಂದು ಸಮುದಾಯದ ಮಹಿಳೆಯರಿಗೆ ಆಮಿಷ ಒಡ್ಡಿದ್ದಾರೆ ಎಂದು ಆಂಕರ್ ತೀರ್ಪು ಕೊಟ್ಟಿದ್ದಾನೆ. ತಮ್ಮ ಧಾರ್ಮಿಕ ಗುರುತನ್ನು ಮರೆಮಾಚಿ, ಅಂತಹ ಮಹಿಳೆಯರ ವಿರುದ್ಧ ಹಿಂಸಾಚಾರ ಅಥವಾ ಕೊಲೆಗಳನ್ನು ಮಾಡಿದ್ದಾರೆ ಹಾಗೂ ಲವ್ ಜಿಹಾದ್‌ಗೆ ಸಂಬಂಧಿಸಿದ ನಿರ್ದಿಷ್ಟ ಸಮುದಾಯದ ಮಹಿಳೆಯರ ಮೇಲೆ ಹಿಂಸೆ ಅಥವಾ ಕೊಲೆಗಳು ನಡೆದಿವೆ ಎಂದು ಆಂಕರ್‌ ಹೇಳಿದ್ದಾನೆ,” ಎಂದು NBDSA ತಿಳಿಸಿದೆ.

“ಇದು ಆಂಕರ್‌ನಿಂದ ಕೇಳಿದ ಪ್ರಶ್ನೆಗಳು ಮತ್ತು ಆಕ್ಷೇಪಾರ್ಹ ಶೋನಲ್ಲಿ ನೀಡಿದ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಅಂತಹ ಆಪಾದಿತ ಘಟನೆಗಳಿಗೆ ಕೋಮುವಾದಿ ದೃಷ್ಟಿಕೋನವನ್ನು ನೀಡಲಾಗುತ್ತಿದೆ ಮತ್ತು ಅಪರಾಧಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲಿನ ಆಯ್ದ ದೌರ್ಜನ್ಯದ ಪ್ರಕರಣಗಳ ಬಗ್ಗೆ ಕೆಲವು ಪ್ಯಾನೆಲಿಸ್ಟ್‌ಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ, ಆಂಕರ್ ಕಿರುಚಾಡುತ್ತಾ ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಿಲ್ಲ.,” ಎಂದು NBDSA ತೀರ್ಪು ನೀಡಿದೆ.

“ಪ್ರತಿಯೊಬ್ಬ ನಾಗರಿಕನು, ಯಾವ ಧರ್ಮದವನಾಗಿದ್ದರೂ, ಅವನು/ಅವಳು ಯಾವ ಧರ್ಮಕ್ಕೆ ಸೇರಿದ್ದರೂ, ಅವನ/ಅವಳ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾನೆ. ಹಿಂದೂ ಹುಡುಗಿ ಬೇರೆ ಧರ್ಮದ ಹುಡುಗನನ್ನು ಮದುವೆಯಾದ ಮಾತ್ರಕ್ಕೆ ಅಂತಹ ಹಿಂದೂ ಹುಡುಗಿಯನ್ನು ವಂಚಿಸಲಾಗಿದೆ ಅಥವಾ ಮದುವೆಗೆ ಒತ್ತಾಯಿಸಲಾಗಿದೆ ಎಂದು ಸಾಬೀತು ಮಾಡದ ಹೊರತು ಲವ್ ಜಿಹಾದ್‌ ಆಗುವುದಿಲ್ಲ. ಇದಲ್ಲದೆ, ಇಂತಹ ಬಲವಂತದ ವಿವಾಹಗಳ ಕೆಲವು ಘಟನೆಗಳನ್ನು ಬಳಸಿ ಇಡೀ ಸಮುದಾಯವನ್ನು ಬ್ರ್ಯಾಂಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ, “ಲವ್ ತೋ ಬಹಾನಾ ಹೇ … ಹಿಂದೂ ಬೇಟಿಯಾಂ ನಿಶಾನ ಹೈಂ ” ಜಿಹಾದಿಯೋಂ ಸೇ ಬೇಟಿ ಬಚಾವೋ” ಎಂಬಂತಹ ಟಿಕ್ಕರ್‌ಗಳೊಂದಿಗೆ ಘಟನೆಗಳನ್ನು ತಳುಕುಹಾಕುವುದು ಸೂಕ್ತವಲ್ಲ.”

“ಲವ್ ಜಿಹಾದ್” ಎಂಬ ಪದವನ್ನು “ಮುಂದೆ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಗಂಭೀರ ಆತ್ಮಾವಲೋಕನದೊಂದಿಗೆ ಬಳಸಬೇಕು, ಧಾರ್ಮಿಕ ಸ್ಟೀರಿಯೊಟೈಪಿಂಗ್ ರಾಷ್ಟ್ರದ ಜಾತ್ಯತೀತ ಸಂರಚನೆಯನ್ನು ನಾಶಪಡಿಸುತ್ತದೆ” ಎಂದು NBDSA ಹೇಳಿದೆ.

ಫೆಬ್ರವರಿ 4, 2020 ರಂದು, ಗೃಹ ವ್ಯವಹಾರಗಳ ಸಚಿವಾಲಯವು ಸಂಸತ್ತಿಗೆ ಲಿಖಿತ ಪ್ರತಿಕ್ರಿಯೆಯಲ್ಲಿ, ಲವ್ ಜಿಹಾದ್’ ಪದವನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ಹೇಳಿದೆ. ಲವ್ ಜಿಹಾದ್‌ನಂತಹ ಯಾವುದೇ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಉತ್ತರಿಸಿತ್ತು.

“ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಒಳಪಟ್ಟು ಧರ್ಮವನ್ನು ಪ್ರತಿಪಾದಿಸಲು, ಪಾಲಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ದೃಷ್ಟಿಕೋನವನ್ನು ಎತ್ತಿ ಹಿಡಿದಿವೆ. ಅಂತರ್-ಧರ್ಮೀಯ ವಿವಾಹಗಳ ಕೇರಳದ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಮಾಡಿದೆ,” ಎಂದು ಕೇಂದ್ರ ಸಚಿವಾಲಯ ಹೇಳಿದೆ.

ಭಾರತೀಯ ಟಿವಿ ಸುದ್ದಿ ವಾಹಿನಿಗಳು ದ್ವೇಷವನ್ನು ಹರಡುತ್ತಿರುವುದು ಕೆಲವು ವರ್ಷಗಳಿಂದ ನಡೆಯುತ್ತಿರುವ ಕಳವಳಕಾರಿ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ 2022 ರಲ್ಲಿ, ಭಾರತೀಯ ಮಾಧ್ಯಮಗಳಲ್ಲಿ ದ್ವೇಷ ಹರಡುವ ಬಗ್ಗೆ ವಿಚಾರಣೆ ನಡೆಸುವಾಗ, “ದ್ವೇಷವು TRP ತರುತ್ತದೆ, ಲಾಭವನ್ನು ಹೆಚ್ಚಿಸುತ್ತದೆ,” ಎಂದು ಒಬ್ಬರು ನ್ಯಾಯಾಧೀಶರು ಹೇಳಿದ್ದರು.

“ಇದು ಇಡೀ ಸಮುದಾಯವನ್ನು ಗುರಿಯಾಗಿಸುವ ಮೂಲಕ ಈ ಘಟನೆಗಳನ್ನು ಸಾಮಾನ್ಯೀಕರಿಸಲಾಗಿದೆ. ಇದು ನೀತಿ ಸಂಹಿತೆ ಮತ್ತು ಬ್ರಾಡ್ಕಾಸ್ಟಿಂಗ್ ಮಾನದಂಡಗಳ ಅಡಿಯಲ್ಲಿ ಬರುವ ನಿಷ್ಪಕ್ಷಪಾತ, ವಸ್ತುನಿಷ್ಠತೆ ಮತ್ತು ತಟಸ್ಥತೆಯ ತತ್ವಗಳ ಉಲ್ಲಂಘನೆಯಾಗಿದೆ. ಮತ್ತು ವರದಿಯಲ್ಲಿರುವ ನಿರ್ದಿಷ್ಟ ಮಾರ್ಗಸೂಚಿಗಳು ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಸಂಬಂಧಿಸಿವೆ. ಆಕ್ಷೇಪಾರ್ಹ ಕಾರ್ಯಕ್ರಮ ಪ್ರಸಾರದಲ್ಲಿ, ಆಂಕರ್‌ ನಡೆಸಿರುವ ಚರ್ಚೆಗಳಲ್ಲಿ ಆಂಕರ್‌ಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗಳ ಷರತ್ತು (ಎಫ್) ಮತ್ತು (ಎಚ್) ಅನ್ನು ಉಲ್ಲಂಘಿಸಲಾಗಿದೆ,” ಎಂದು  ಎನ್‌ಬಿಡಿಎಸ್‌ಎ ತನ್ನ ಆದೇಶದಲ್ಲಿ ತಿಳಿಸಿದೆ.

ಮಾರ್ಚ್ 2, 2023 ರಂದು, NBDSA ಮೂರು ಟಿವಿ ಸುದ್ದಿ ವಾಹಿನಿಗಳಿಗೆ ಅವು ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶಿಸಿತ್ತು. ಅವರಲ್ಲಿ ನ್ಯೂಸ್ 18 ಇಂಡಿಯಾ ಮತ್ತು ಟೈಮ್ಸ್ ನೌ, ಜೀ ಟಿವಿ ಹೊರತುಪಡಿಸಿ ಉಳಿದಂತೆ ಮೂರು ಅಪರಾಧಿಗಳು ಮತ್ತೆ ತಮ್ಮ ಅಪರಾಧವನ್ನು ಮುಂದುವರಿಸಿದ್ದಾರೆ. ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅವರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಯೂಟ್ಯೂಬ್‌ನಿಂದ ಅವರು ಪ್ರಸಾರ ಮಾಡಿದ ಏಳು ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶ ನೀಡಲಾಗಿತ್ತು.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ & ಡಿಜಿಟಲ್ ಅಸೋಸಿಯೇಷನ್ ​​(ಎನ್‌ಬಿಡಿಎ) [ಹಿಂದೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ​​(ಎನ್‌ಬಿಎ) ಎಂದು ಕರೆಯಲಾಗುತ್ತಿತ್ತು] ಒಂದು ಸರಕಾರೇತರ ಸಂಸ್ಥೆ. ಇದು ಖಾಸಗಿ ದೂರದರ್ಶನ ಸುದ್ದಿ, ಅವುಗಳ ವ್ಯವಹಾರಗಳು ಮತ್ತು ಡಿಜಿಟಲ್ ಮಾಧ್ಯಮಗಳನ್ನು ಪ್ರತಿನಿಧಿಸುತ್ತದೆ. ಇದು ತನ್ನನ್ನು ತಾನು “ಭಾರತದಲ್ಲಿ ಸುದ್ದಿ, ಪ್ರಸ್ತುತ ವ್ಯವಹಾರಗಳು ಮತ್ತು ಡಿಜಿಟಲ್ ಪ್ರಸಾರಕರ ಸಾಮೂಹಿಕ ಧ್ವನಿ” ಎಂದು ಕರೆದುಕೊಂಡಿದೆ. ಇದು ಸಂಪೂರ್ಣವಾಗಿ ಅದರ ಸದಸ್ಯರಿಂದ ಸಿಗುವ ಧನಸಹಾಯದಿಂದ ನಡೆಯುವ ಸಂಸ್ಥೆಯಾಗಿದೆ.

ಕಾದಂಬರಿ ದಿಗ್ಗಜ, ಶಿಕ್ಷಣ ತಜ್ಞ ಕೆಟಿ ಗಟ್ಟಿ ನಿರ್ಗಮನ
ಮಂಗಳೂರು: ಶಿಕ್ಷಣ ತಜ್ಞ, ಕಾದಂಬರಿ ಲೋಕದ ದಿಗ್ಗಜ, ಭಾಷಾ ತಜ್ಞ ಕೆಟಿ ಗಟ್ಟಿ ಎಂದೇ ಖ್ಯಾತರಾಗಿರುವ ಕೂಡ್ಲು ತಿಮ್ಮಪ್ಪ ಗಟ್ಟಿಯವರು ಇಂದು (ಫೆಬ್ರವರಿ 19, ಸೋಮವಾರ) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತ್ನಿ, ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕದ ಪರಿಸರ ವಿಜ್ಞಾನಿ ಪ್ರಿಯದರ್ಶಿನಿ, ಆಸ್ಟ್ರಿಯಾದಲ್ಲಿ ಮಾನವಶಾಸ್ತ್ರಜ್ಞೆಯಾಗಿರುವ ಆಗಿರುವ ಚಿತ್ ಪ್ರಭಾರನ್ನು ಅಗಲಿದ್ದಾರೆ.

ವಿದ್ಯಾರ್ಥಿಪ್ರಿಯ ಪ್ರಾಧ್ಯಾಪಕರೆನಿಸಿದ ಕೆಟಿ ಗಟ್ಟಿಯವರು 1938 ಜುಲೈ ೨೨ ರಂದು ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ ಜನಿಸಿದರು. ತಂದೆ ಧೂಮಪ್ಪ ಗಟ್ಟಿಯವರು ಕೃಷಿಕರೂ, ಯಕ್ಷಗಾನದ ಅಭಿಮಾನಿಗಳೂ ಕೂಡ. ಇವರ ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಹಾಡಬಲ್ಲವರಾಗಿದ್ದರು.

ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಎಂಟನೆಯ ತರಗತಿಯವರೆಗೆ ಕಲಿತು, ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳುವಳಿಯಲ್ಲಿ ಬಾಗಿಯಾದರು. ನಂತರ ಪಿಯು ಹಾಗೂ ಬಿಎ ಪದವಿಗಳನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದರು. ಮಾಯಿಪ್ಪಾಡಿಯ ಸರಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಲ್ಲಿ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದರು. ತಲಚೇರಿಯ ಸರಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿಎಡ್‌ ಪದವಿ ಪಡೆದು, ಕಾಸರಗೋಡಿದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.

ಖಾಸಗಿಯಾಗಿ ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದ ಗಟ್ಟಿಯವರು, 1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಯಲ್ಲಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್‌ಫರ್ಡಿನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಪಡೆದ ಡಿಪ್ಲೊಮ ಪಡೆದರು.

1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ಹತ್ತವರೇ ಪ್ರೇರಣೆಯಾದರು. ಯಕ್ಷಗಾನ ಪ್ರಿಯರಾದ ತಂದೆ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಲಿ (ಮಂಗಳೂರು)ಯೊಡನೆ ಊರೂರು ಸುತ್ತುತ್ತಾ, ಮನೆಗೆ ತರುತ್ತಿದ್ದ ಪುಸ್ತಕಗಳನ್ನು ಕೆಟಿ ಗಟ್ಟಿಯವರು ಓದುತ್ತಿದ್ದರು.

ಇವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ಸುಧಾವಾರ ಪತ್ರಿಕೆಯಲ್ಲಿ 1976ರಲ್ಲಿ ಪ್ರಕಟವಾಯಿತು. ಇದು ಸುಧಾ ವಾರಪತ್ರಿಕೆಯ ಸರ್ಕ್ಯುಲೇಷನ್‌ ಹೆಚ್ಚು ಮಾಡಿತ್ತು. ನಾಲ್ಕು ಮುದ್ರಣಗಳನ್ನೂ ಕಂಡಿತು.

1978ರಲ್ಲಿ ಗಟ್ಟಿಯವರು ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರ ವರೆಗೆ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಒಂದೇ ಪತ್ರಿಕೆಯಲ್ಲಿ ಇಷ್ಟು ಕಾದಂಬರಿಗಳನ್ನು ಪ್ರಕಟಿಸಿದ್ದು ಲೇಖಕನಾಗಿ ಕೆಟಿ ಗಟ್ಟಿಯವರ ಸಾಧನೆ.

ಇದಲ್ಲದೆ ತುಷಾರ ಮಾಸ ಪತ್ರಿಕೆಯಲ್ಲಿ ‘ಮನೆ’, ಕಾಮಯಜ್ಞ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರ ಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ 10’, ಕರ್ಮವೀರ ವಾರಪತ್ರಿಕೆಯಲ್ಲಿ ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಮುಂತಾದವುಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದೂ ಸೇರಿ ಬರೆದ ಕಾದಂಬರಿಗಳು ಸುಮಾರು 46.

ಇಥಿಯೋಪಿಯಾದಲ್ಲಿದ್ದಾಗ ಒಮ್ಮೆ ನಡೆದ ಘಟನೆ ಇವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆಗಿಡವನ್ನೂ ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರೆಗೆ ಕಾಡಿದ ಪ್ರಶ್ನೆ: ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ-ನಾನು ಓಡಿಸಿದ್ದು ಸರಿಯಾ? ಅನುಭವಿಸಿದ ಈ ಪ್ರಶ್ನೆಗೆ ಉತ್ತರವಾಗಿ ಬಂದದ್ದೇ ‘ಅರಗಿನ ಅರಮನೆ’ ಕಾದಂಬರಿ.

ಭಾರತಕ್ಕೆ ಮರಳಿ ಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡರು. ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’,‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳನ್ನು ಪ್ರಕಟಿಸಿದರು.

ಶಿಕ್ಷಣ, ಸಾಹಿತ್ಯ, ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ಅನೇಕ ಲೇಖನಗಳನ್ನು ಇವರು ಪ್ರಕಟಿಸಿದ್ದಾರೆ. ‘ಮೂರನೆಯ ಧ್ವನಿ’ (ಸಾಹಿತ್ಯ ಚಿಂತನ), ‘ನಿನ್ನೆ ನಾಳೆಗಳ ನಡುವೆ’ (ಸಾಮಾಜಿಕ ಚಿಂತನ), ‘ನಮ್ಮ ಬದುಕಿನ ಪುಟಗಳು’, ನಮ್ಮೊಳಗಿನ ಆಕಾಶ, ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ (ವೈಚಾರಿಕ ಲೇಖನಗಳ ಕೃತಿಗಳು) ಪ್ರಕಟಗೊಂಡಿವೆ. ‘ಝೇಂಕಾರದ ಹಕ್ಕಿ’ ಎಂಬ ಇವರ ಕವನ ಸಂಕಲನ 1994 ರಲ್ಲಿ, 2001ರಲ್ಲಿ ಇಂಗ್ಲಿಷ್‌ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’ ಪ್ರಕಟವಾಗಿದೆ.

ರಂಗಭೂಮಿಯ ಬಗ್ಗೆ ವಿಶೇಷ ಒಲವಿದ್ದ ಗಟ್ಟಿಯವರು ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಸೇರಿದಂತೆ 18 ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೆಲವು ಆಕಾಶವಾಣಿಯಲ್ಲೂ ರೇಡಿಯೋ ನಾಟಕಗಳಾಗಿ ಪ್ರಸಾರವಾಗಿವೆ. ಪ್ರೌಢರಿಗಷ್ಟೇ ಅಲ್ಲದೆ ಮಕ್ಕಳಿಗಾಗಿಯೂ 30 ನಾಟಕಗಳನ್ನು ರಚಿಸಿದ್ದು ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಭಾಷೆಗಳಿಗೂ ಅನುವಾದಗೊಂಡಿವೆ.

ರಾಜ್ಯಪಾಲರಿಂದ ಕನ್ನಡ ಕಡ್ಡಾಯ ತಿರಸ್ಕಾರ
ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಬಳಕೆಯ ಮಾಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಕರ್ನಾಟಕ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್ ತಿರಸ್ಕರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನವರಿ 30 ಮಂಗಳವಾರ ತಿಳಿಸಿದ್ದಾರೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಗೆ (Kannada Language Comprehensive Development Act) ತಿದ್ದುಪಡಿ ತರಲು ಮತ್ತು ನಾಮ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲು ಹೊರಡಿಸಲಾದ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಜನವರಿ 5ರಂದು ಅನುಮೋದನೆ ನೀಡಿತ್ತು.

“ನಾವು ಕಾನೂನನ್ನು ರಚಿಸಿದ್ದೇವೆ ಮತ್ತು ಸುಗ್ರೀವಾಜ್ಞೆಯನ್ನು ಅನುಮೋದಿಸಿದ್ದೇವೆ. ರಾಜ್ಯಪಾಲರು ಒಪ್ಪಿಗೆ ನೀಡಬಹುದಿತ್ತು. ಬದಲಿಗೆ ವಿಧಾನಸಭೆಯಲ್ಲಿ ಅಂಗೀಕಾರ ಆಗಬೇಕು ಎಂದು ವಾಪಸ್ ಕಳುಹಿಸಿದ್ದಾರೆ,” ಎಂದು ಡಿಕೆಶಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಂಗಡಿ- ಉದ್ಯಮಗಳನ್ನು ಗುರಿಯಾಗಿಸಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ರಾಜಭವನದ ನಡುವಿನ ಮೊದಲ ಭಿನ್ನಾಭಿಪ್ರಾಯ ಈಗ ಬಹಿರಂಗವಾಗಿದೆ.

ಮುಂದಿನ ತಿಂಗಳು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನಕ್ಕೆ ಮುನ್ನವೇ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದು ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರ ಅಸಹಕಾರದ ಪ್ರಕರಣಗಳಲ್ಲಿ ಒಂದಾಗಲಿದೆ. ಗೆಹ್ಲೋಟ್ ಫೆಬ್ರವರಿ 12 ರಂದು ಶಾಸಕಾಂಗದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಶಿವಕುಮಾರ್ ಘೋಷಣೆಗೂ ಮುನ್ನ ಸಿದ್ದರಾಮಯ್ಯ ಅವರು ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದರು. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಅಂಗೀಕರಿಸಿದ ಮಸೂದೆಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಒತ್ತಾಯಿಸಿದ ನಂತರ ಗೆಹ್ಲೋಟ್ ಮೂರು ಮಸೂದೆಗಳಿಗೆ ಸಹಿ ಹಾಕಿದರು.

ಕ್ಲಿಯರ್ ಮಾಡಿದ ಬಿಲ್‌ಗಳಲ್ಲಿ ಒಂದು ವೈದ್ಯಕೀಯ ಪದವೀಧರರಿಗೆ ಕಡ್ಡಾಯ ಗ್ರಾಮೀಣ ಸೇವೆಯನ್ನು ತೆಗೆದುಹಾಕುವುದೂ ಸೇರಿದೆ. ಆದರೆ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾದ 17 ವಿಧೇಯಕಗಳ ಪೈಕಿ ರಾಜ್ಯಪಾಲರು ಕೇವಲ ಐದಕ್ಕೆ ಮಾತ್ರ ಒಪ್ಪಿಗೆ ನೀಡಿದ್ದಾರೆ.

ಅಲ್ಲದೇ, ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಗೊಳಿಸುವ ನಿರ್ಧಾರವು ರಾಜ್ಯ ಮತ್ತು ರಾಜಭವನದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ. ಇತ್ತೀಚೆಗೆ People’s Forum for Karnataka Education ರಾಜ್ಯದಲ್ಲಿ ಎನ್‌ಇಪಿಯ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸುವಂತೆ ಕೋರಿ 10 ಲಕ್ಷ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು.

‘ರಾಷ್ಟ್ರೀಯ ಭದ್ರತೆ’ಗಾಗಿ ಹೊಸ ಟೆಲಿಕಾಂ ಮಸೂದೆ: ಕೇಂದ್ರಕ್ಕಿದೆ ಸ್ವಾಧೀನ, ಸ್ಥಗಿತದ ಅಧಿಕಾರ
ನವದೆಹಲಿ: “ರಾಷ್ಟ್ರೀಯ ಭದ್ರತೆ” ಉದ್ದೇಶಗಳಿಗಾಗಿ ಯಾವುದೇ ರೀತಿಯ ದೂರಸಂಪರ್ಕ ಜಾಲವನ್ನು ಸ್ವಾಧೀನಪಡಿಸಿಕೊಳ್ಳಲು, ನಿರ್ವಹಿಸಲು ಅಥವಾ ಅಮಾನತುಗೊಳಿಸಲು ಕೇಂದ್ರಕ್ಕೆ ಅವಕಾಶ ನೀಡುವ ದೂರಸಂಪರ್ಕ ಮಸೂದೆ 2023 ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಸ್ತಾಪಿಸಿರುವ ಈ ಮಸೂದೆಯು 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಆಕ್ಟ್, ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್ 1933 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯಿದೆ 1950 ಅನ್ನು ಬದಲಿಸಲಿದೆ.

ಮಸೂದೆಗೆ ಅಗಸ್ಟ್‌ನಲ್ಲಿ ಸಿಕ್ಕಿತ್ತು ಕೇಂದ್ರ ಸಂಪುಟದ ಒಪ್ಪಿಗೆ

“ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ”, ಯಾವುದೇ ಸಂದೇಶವನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳು “ತಡೆಗಟ್ಟಬಹುದು ಅಥವಾ ತಡೆಹಿಡಿಯಬಹುದು” ಎಂದು ಈ ಮಸೂದೆ ಹೇಳುತ್ತದೆ.

ಸಾರ್ವಜನಿಕ ತುರ್ತುಸ್ಥಿತಿಯ ಸಂದರ್ಭದಲ್ಲಿ ಪ್ರತಿಕ್ರಿಯೆ ಮತ್ತು ರಿಕವರಿಗೆ ಅಧಿಕೃತವಾಗಿರುವ ಬಳಕೆದಾರರ ಅಥವಾ ಬಳಕೆದಾರರ ಗುಂಪಿನ ಸಂದೇಶಗಳನ್ನು ಆದ್ಯತೆಯ ಮೇಲೆ ರವಾನಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಬೇಕಾದ ಕಾರ್ಯವಿಧಾನವನ್ನು ಕೂಡ ಈ ಮಸೂದೆಯಲ್ಲಿ ನೀಡಲಾಗಿದೆ.

ಈ ಮಸೂದೆಯ ಮೂಲಕ ಕೇಂದ್ರ ಸರ್ಕಾರ “ದೂರಸಂಪರ್ಕ ಸೇವೆಗಳನ್ನು ಒದಗಿಸಲು”, ನೆಟ್‌ವರ್ಕ್‌ಗಳನ್ನು ನಿರ್ವಹಿಸಲು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಪರವಾನಗಿಗಳನ್ನು ನೀಡಲು ಸಾಧ್ಯವಾಗುತ್ತದೆ.

ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಸ್ಪೆಕ್ಟ್ರಮ್ ಅನ್ನು ಹಂಚುವ ವಿಧಾನದಲ್ಲಿ ಬದಲಾವಣೆಗಳನ್ನು ತರುವ ಮಸೂದೆಯು, ಹರಾಜು ಇಲ್ಲದೇ ಸ್ಪೆಕ್ಟ್ರಂ ಹಂಚಿಕೆ ಸೇವೆಗಳಿಗೆ ಆಡಳಿತಕ್ಕೆ ಬೆಲೆಯಲ್ಲಿ ನಿಗದಿಪಡಿಸುವ ಅವಕಾಶವನ್ನೂ ನೀಡುತ್ತದೆ.

ಕಾನೂನು ಬಾಹಿರ ಮೆಸೆಜ್‌ಗಳಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 2 ಕೋಟಿ ರುಪಾಯಿ ವರೆಗೆ ದಂಡ ಅಥವಾ ಎರಡೂ ಶಿಕ್ಷೆಗಳನ್ನು ವಿಧಿಸಬಹುದು ಎಂದು ಈ ಮಸೂದೆ ಹೇಳುತ್ತದೆ. ಇದು ಟೆಲಿಕಾಂ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಾಧಿಕರಣದ ರಚನೆಗೆ ಅವಕಾಶ ಒದಗಿಸುತ್ತದೆ.

ಕಳೆದ ವರ್ಷ ಬಿಡುಗಡೆಯಾದ ಕರಡಿನಲ್ಲಿ ದೂರಸಂಪರ್ಕ ಮಸೂದೆಯು ದೂರಸಂಪರ್ಕ ಸೇವೆಗಳ ವ್ಯಾಖ್ಯಾನದಲ್ಲಿ ವಾಟ್ಸಾಪ್, ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಹೊಸ-ಯುಗದ ಓವರ್-ದಿ-ಟಾಪ್ ಅಥವಾ OTT, ಸಂವಹನ ಸೇವೆಗಳನ್ನೂ ಸೇರಿಸಲು ಪ್ರಸ್ತಾಪಿಸಲಾಗಿತ್ತು.

ಪೊಲೀಸರ ವರ್ಗಾವಣೆಗೆ ಸರ್ಕಾರದ ಮೀನಾಮೇಷ : ಯತ್ನಾಳ್
ಬೆಂಗಳೂರು : ಕರ್ನಾಟಕ ನಾಗರಿಕ ಸೇವಾ ನಿಯಮ(KCSR)ಗಳ ಅಡಿಯಲ್ಲಿ ಪೊಲೀಸರ ವರ್ಗಾವಣೆಗೆ ಸರ್ಕಾರವು ಮೀನಾಮೇಷ ಮಾಡುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಪತಿ- ಪತ್ನಿ ಹಾಗು ಸಾಮಾನ್ಯ ಅಂತರ್ ಜಿಲ್ಲಾ ವರ್ಗಾವಣೆಗಳಿಗೆ ಸರ್ಕಾರ KCSR ನಿಯಮಗಳ ಅನ್ವಯ ಸರಿಯಾದ ನಿಯಮಗಳನ್ನು ರೂಪಿಸಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.

2 ವರ್ಷ, 6 ತಿಂಗಳು ಕನಿಷ್ಠ ಸೇವೆ ಇದ್ದ ನಿಯಮಕ್ಕೆ ಈಗ 7 ವರ್ಷ ಕನಿಷ್ಠ ಸೇವೆಯಂದು ತಿದ್ದುಪಡಿ ಮಾಡಿ, ಈವರೆಗೂ ಯಾವುದೇ ವರ್ಗಾವಣೆ ಮಾಡದೆ ಸರ್ಕಾರ ಪೋಲೀಸರ ಜೀವನದ ಜೊತೆ ಆಟವಾಡುತ್ತಿದೆ ಎಂದು ಯತ್ನಾಳ್ ದೂರಿದ್ದಾರೆ.

ದೂರದ ಊರಿನಲ್ಲಿ ವಯಸ್ಸಾದ ತಂದೆ ತಾಯಂದಿರನ್ನೂ ನೋಡಲು ಆಗದೆ, ದಿನಕ್ಕೆ 12-14 ಘಂಟೆ ಕೆಲಸ ಮಾಡುವ ಪೋಲೀಸರ ಗೋಳು ಈ ಸರ್ಕಾರಕ್ಕೆ ಕೇಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಜ್ಯೇಷ್ಠತೆಯನ್ನೂ ಬಿಟ್ಟು ಅಂತರ್ ಜಿಲ್ಲಾ ವರ್ಗಾವಣೆಗೆ ಮನವಿ ಸಲ್ಲಿಸಿರುವ ಪೊಲೀಸ್ ಸಿ ಹಾಗು ಡಿ ನೌಕರರನ್ನು ಅಲೆದಾಡಿಸಿ ಅವರಿಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವುದು ಬಿಟ್ಟರೆ, ಸರ್ಕಾರ ಸಾಧಿಸಿದ್ದು ಏನೂ ಇಲ್ಲ. ಈ ವಿಷಯದ ಬಗ್ಗೆ ಸರ್ಕಾರ ಸೂಕ್ತವಾದ ನಿಯಮಗಳನ್ನು ರೂಪಿಸಬೇಕು, ಈಗಾಗಲೇ ಆರಂಭಿಸಿರುವ ಆನ್‌ಲೈನ್‌ ಪೋರ್ಟಲ್‌ನಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಹಾಗು ಕಾನೂನು ರೀತ್ಯಾ ವರ್ಗಾವಣೆ ಮಾಡಬೇಕು ಎಂದಿದ್ದಾರೆ.

ಪೊಲೀಸರೂ ಮನುಷ್ಯರು, ಅವರಿಗೂ ಸಂಸಾರ ಸಂಬಂಧಗಳು ಇರುತ್ತವೆ ಎನ್ನುವುದನ್ನು ಮನಗೊಂಡು ಸರ್ಕಾರ ಹಾಗು ಪೊಲೀಸ್ ಅಧಿಕಾರಿಗಳು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿನಂತಿಸಿಕೊಂಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಮೊದಲ ಅಂಬೇಡ್ಕರ್‌ ಪ್ರತಿಮೆ ಅನಾವರಣ
ನವದೆಹಲಿ: ಸುಪ್ರೀಂ ಕೋರ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಅಂಬೇಡ್ಕರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ನವೆಂಬರ್ 26, ಭಾನುವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ಉದ್ಘಾಟಿಸಿದರು.

ಅಧ್ಯಕ್ಷ ಮುರ್ಮು ಅವರು ಸಂವಿಧಾನ ದಿನದ ಅಂಗವಾಗಿ ಮೊದಲ ಕಾನೂನು ಸಚಿವ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲಿ ಉಡುಗೆ ತೊಟ್ಟಿರುವ, ಎಡಗೈಯಲ್ಲಿ ಎಡಗೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದಿರುವ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ ಆವರಣದ ಮುಂಭಾಗದ ಉದ್ಯಾನದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಪ್ರತಿಮೆ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಿಜೆಐ ಡಿವೈ ಚಂದ್ರಚೂಡ್

ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿ ಮೊಟ್ಟಮೊದಲ ಅಂಬೇಡ್ಕರ್ ಪ್ರತಿಮೆ

ಡಾ ಬಿಆರ್ ಅಂಬೇಡ್ಕರ್‌ ಅವರ ಈ ಪ್ರತಿಮೆಯನ್ನು ಶಿಲ್ಪಿ ನರೇಶ್ ಕುಮಾವತ್ ನಿರ್ಮಿಸಿದ್ದಾರೆ. ಸುಪ್ರೀಂ ಕೋರ್ಟ್ ಸಂಕೀರ್ಣದಲ್ಲಿ ಇಲ್ಲಿಯವರೆಗೆ ಎರಡು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಒಂದು ಭಾರತೀಯ ಮೂಲದ ಬ್ರಿಟಿಷ್ ಕಲಾವಿದ ಚಿಂತಾಮೋನಿ ಕರ್ ರಚಿಸಿದ ಮದರ್ ಇಂಡಿಯಾದ ಭಿತ್ತಿಚಿತ್ರ. ಇನ್ನೊಂದು ಬ್ರಿಟಿಷ್ ಶಿಲ್ಪಿ ವಿನ್ಯಾಸಗೊಳಿಸಿದ ಮಹಾತ್ಮಾ ಗಾಂಧಿಯವರ ಪ್ರತಿಮೆ.

ಸಂವಿಧಾನ ರಚನಾ ಸಮಿತಿಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮತ್ತು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್ ಅವರ 132 ನೇ ಜನ್ಮದಿನವನ್ನು ಈ ವರ್ಷವೂ ಆಚರಿಸಲಾಗುತ್ತಿದೆ. ಡಾ ಅಂಬೇಡ್ಕರ್ ಅವರ ಜನ್ಮದಿನದ (ಏಪ್ರಿಲ್ 14 ) ಮುನ್ನಾದಿನದಂದು (ಏಪ್ರಿಲ್ 15), ವಕೀಲರಾದ ಪ್ರತೀಕ್ ಬೊಂಬಾರ್ಡ್ ಅವರು ಅಂಬೇಡ್ಕರ್ ಅವರ ಪ್ರತಿಮೆಯ ಬೇಡಿಕೆಯನ್ನು ಪ್ರಸ್ತಾಪಿಸಿ ಸಿಜೆಐ ಚಂದ್ರಚೂಡ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಸಿದ್ದರು.

ಸುಪ್ರೀಂ ಕೋರ್ಟ್‌ನೊಳಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧಿಯವರ ಪ್ರತಿಮೆಗಳಿವೆ. ಆದರೆ ಕೋಟ್ಯಂತರ ದೀನದಲಿತರ, ಅಂಚಿಗೆ ತಳ್ಳಲ್ಪಟ್ಟ ಜನರ ವಿಮೋಚಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಇಲ್ಲ. 70 ರ ದಶಕದಲ್ಲಿ ದಾದಾಸಾಹೇಬ್ ಗಾಯಕ್ವಾಡ್ ಅವರ ನೇತೃತ್ವದಲ್ಲಿ, ಅಂಬೇಡ್ಕರ್ವಾದಿಗಳು ಸಂಸತ್ತಿನ ಒಳಗೆ ಅವರ ಪ್ರತಿಮೆಯನ್ನು ಸ್ಥಾಪಿಸಲು ಹೋರಾಟ ನಡೆಸಿದ್ದರು.