by vijayendra – Peepal Media

ವಾಲ್ಮೀಕಿ ನಿಗಮದ ಹಗರಣ ವಿರೋದಿಸಿ ಡಿಸಿ ಕಚೇರಿಗಳಿಗೆ BJP ಮುತ್ತಿಗೆ: ವಿಜಯೇಂದ್ರ
ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು. ಏಕೆಂದರೆ ಅವರೇ ಹಣಕಾಸು ಸಚಿವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿತರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಪೋಲಾಗಿದೆ. ಕಾಂಗ್ರೆಸ್ ಸರ್ಕಾರವೇ ಈ ಹಣವನ್ನು ದೋಚಿದೆ. ಈ ಪ್ರಕರಣದಲ್ಲಿ ಪರಿಶೀಷ್ಟರಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಇದೇ 28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ನಿಗಮದ ಹಗರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಪತ್ರದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಆತುರಾತುರವಾಗಿ ಎಸ್‍ಐಟಿಯನ್ನೂ ರಚಿಸಿ ತನಗೆ ಬೇಕಾದಂತೆ ತನಿಖೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಅಲ್ಲಿ ಇಲ್ಲಿ ಅಧಿಕಾರಿ ಮನೆಯಲ್ಲಿ ಒಂದಷ್ಟು ಹಣ ಲಭಿಸಿದೆ ಎನ್ನುವ ಮೂಲಕ ಕಣ್ಣೊರೆಸುವ ತಂತ್ರವನ್ನು ಎಸ್‍ಐಟಿ ಮಾಡುತ್ತಿದೆ. ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ತೆಲಂಗಾಣಕ್ಕೆ ಬೇನಾಮಿ ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್‍ಡ್ರಾ ಮಾಡಿದ್ದಾರೆ. ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು  ವಿಜಯೆಂದ್ರ ದೂರಿದರು.

ಗ್ಯಾರಂಟಿ ಹೆಸರಲ್ಲಿ ಜನತೆಯ ಕಿವಿಗೆ ಹೂ: ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದರಿಂದ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ. ವಿದ್ಯುತ್ ದರ ಏರಿಸಿದ್ದಾರೆ. ರೈತರು ತಮ್ಮ ಹೊಲಕ್ಕೆ ಟ್ರಾನ್ಸ್ ಫಾರ್ಮರ್ ಹಾಕಿಸಲು 25 ಸಾವಿರ ಇದ್ದುದನ್ನು 2.5 ಲಕ್ಷಕ್ಕೆ ಏರಿಸಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸಿದ್ದಾರೆ. ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ನಾಡಿನ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ವಿಜಯೇಂದ್ರ ದೂರಿದರು.

ರಾಜ್ಯದ ರೈತರು ಬರದಿಂದ ನರಳಿ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಟ್ರ್ಯಾಕ್ಟರ್- ಟಿಲ್ಲರ್ ಬಳಸುವ ರೈತರೂ ತೊಂದರೆ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜದ ದರ ಶೇ 40- 50ರಷ್ಟು ಹೆಚ್ಚಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರ ಯಾಕೆ ಇಷ್ಟು ಕಟುವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು. ಜನವಿರೋಧಿ ತೀರ್ಮಾನಗಳೇಕೆ ಎಂದು ಕೇಳಿದರು. ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ಅವರು ತಿಳಿಸಿದರು. ಹಾಲಿನ ದರದ ಬಳಿಕ ಬಸ್ ಪ್ರಯಾಣದರವೂ ದುಬಾರಿ ಆಗಲಿದೆ ಎಂದು ಅವರು ತಿಳಿಸಿದರು.

ಲೋಕಸಭೆ ಚುನಾವಣೆ ಟಾರ್ಗೆಟ್; ಬಿಜೆಪಿಯಲ್ಲೇ ವಿಜಯೇಂದ್ರ ತಲೆದಂಡಕ್ಕೆ ಕ್ಷಣಗಣನೆ!
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಬಿಜೆಪಿಯ ಗದ್ದುಗೆ ಗುದ್ದಾಟ ಒಂದು ರೀತಿಯದ್ದಾದರೆ, ರಾಜ್ಯದಲ್ಲಿ ಈ ಬಾರಿಯ ಚುನಾವಣಾ ಫಲಿತಾಂಶದ ನಂತರ ದೊಡ್ಡ ದೊಡ್ಡ ತಲೆಗಳು ಬಿಜೆಪಿಯಲ್ಲಿ ನೆಲಕ್ಕುರುಳಲಿವೆ. ಹೀಗೊಂದು ಸುಳಿವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಹಾಕಿ, ಬಿಜೆಪಿ ನಾಯಕರ ತಲೆಗೆ ಹುಳ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರದಲ್ಲಿದ್ದಾಗ ಬಿಜೆಪಿ ಪಕ್ಷ ಬರೋಬ್ಬರಿ 25 ಸೀಟುಗಳನ್ನು ಪಡೆಯುವ ಮೂಲಕ ಗೆಲುವಿನ ಕೇಕೆ ಹಾಕಿತ್ತು. ಆದರೆ ಈ ಬಾರಿ ಆ ಮಟ್ಟಿಗಿನ ಗೆಲುವು ಕಷ್ಟಸಾಧ್ಯ ಎಂಬ ಅರಿವಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಕನಿಷ್ಟ 20 ರಿಂದ 22 ಸೀಟುಗಳ ಟಾರ್ಗೆಟ್ ಕೊಡಲಾಗಿತ್ತು.

ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಟ 18 ರಿಂದ 20 ಸೀಟುಗಳನ್ನು ಪಡೆದೇ ತೀರುತ್ತೇವೆ ಎಂಬ ಉಮೇದಿನಲ್ಲಿರುವಾಗ 15 ರಿಂದ 18 ಸೀಟು ತನ್ನದಾಗಿಸಿಕೊಂಡರೂ ಅದು ಕಾಂಗ್ರೆಸ್ ಪಕ್ಷದ ನಿಜವಾದ ಗೆಲುವು ಎಂದೇ ಹೇಳಲಾಗುತ್ತಿದೆ. ಹೀಗಿರುವಾಗ, ಬಿಜೆಪಿ ಈ ಹಿಂದಿನ ಅತಿ ಹೆಚ್ಚು ಸೀಟುಗಳನ್ನು ಕಳೆದುಕೊಳ್ಳಲಿದೆ, ಅಷ್ಟೇ ಅಲ್ಲದೇ ರಾಜ್ಯದಲ್ಲಿ ಹೊಸ ಪ್ರಯೋಗಗಳಿಗೆ ಕೈ ಇಟ್ಟ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಿಗೆ ಗಗನ ಕುಸುಮವಾಗಲಿವೆ ಎಂಬ ಮಾತುಗಳು ಕೇಳಿ ಬಂದಿದೆ.

ಈ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ “ರಾಜ್ಯ ಬಿಜೆಪಿಯ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ – ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್ ಎಸ್ ಎಸ್‌ನ ಒಂದು ಬಣದ ಆಶೀರ್ವಾದ ಕೂಡಾ ಇದೆ ಎಂದು ಹೇಳಲಾಗುತ್ತಿದೆ” ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಈ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಮಕ್ಕಳು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸದಿದ್ದರೆ ತಾವೆಲ್ಲ ಶಾಶ್ವತವಾಗಿ ಮೂಲೆ ಸೇರುವುದು ಖಚಿತ ಎನ್ನುವ ಆತಂಕದಲ್ಲಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಪೋಟ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ರಾಜ್ಯದ ಕಾಂಗ್ರೆಸ್ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೊದಲು ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಈ ಪಕ್ಷದ್ರೋಹಿ ಶಿಂಧೆ ಅವರ ಪಕ್ಷ ಈ ಚುನಾವಣೆಯಲ್ಲಿ ಧೂಳೀಪಟವಾಗಲಿರುವುದು ಮಾತ್ರವಲ್ಲ ಮಹಾರಾಷ್ಟ್ರದ ರಾಜಕೀಯದಲ್ಲಿ ಅವರು ಮೂಲೆ ಸೇರುವುದು ಖಚಿತ. ಈ ಹತಾಶೆಯಿಂದ ಏನೋ ಬಡಬಡಿಸಿದ್ದಾರೆ. ಅವರ ಮಾತನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ ಎಂದು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಕಷ್ಟಕಾಲದಲ್ಲಿ ಉದ್ದೇಶಪೂರ್ವಕವಾಗಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಯಶಸ್ಸಿನಲ್ಲಿ ಇರುವಾಗ ನೆಲ ಕಚ್ಚಿರುವ ಬಿಜೆಪಿ ಪಕ್ಷವನ್ನು ಮೇಲೆತ್ತುವುದು ತೀರಾ ಕಷ್ಟ. ಇಂತಹ ಸಂದರ್ಭದಲ್ಲೇ ವಿಜಯೇಂದ್ರ ಪಕ್ಷದ ಸಾರಥಿಯಾದರೆ ಸುಲಭವಾಗಿ ಸೋಲಿನ ಹೊಣೆಯನ್ನ ವಿಜಯೇಂದ್ರ ಅಥವಾ ಯಡಿಯೂರಪ್ಪ ತಲೆಗೆ ಕಟ್ಟಬಹುದು ಎಂಬ ಲೆಕ್ಕಾಚಾರ ಬಿಎಸ್​ವೈ ವಿರೋಧಿಗಳ ಲೆಕ್ಕಾಚಾರ ಎಂಬ ಮಾತು ಕೇಳಿ ಬಂದಿದೆ.

ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಯ ನಂತರ ಕಾಂಗ್ರೆಸ್ ಕಂಗೆಟ್ಟಿದೆ : ಬಿ.ವೈ ವಿಜಯೇಂದ್ರ
ರಾಜ್ಯ ವಿಧಾನಸಭಾ ಚುನಾವಣೆ ನಂತರ ಹಲವು ದಿನಗಳಿಂದ ಖಾಲಿ ಉಳಿದಿದ್ದ ವಿಪಕ್ಷ ನಾಯಕನ ಸ್ಥಾನ ಹಾಗೂ ಹೊಸ ರಾಜ್ಯಾಧ್ಯಕ್ಷನ ಆಯ್ಕೆಯಿಂದ ಕಾಂಗ್ರೆಸ್ ಕಂಗೆಟ್ಟಂತೆ ಆಡುತ್ತಿದೆ ಎಂದು ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಇಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಕಾಂಗ್ರೆಸ್ ಈ ವರೆಗೂ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಕಾಲೆಳೆದಿತ್ತು. ಈಗ ಮತ್ತೆ ಬಿಜೆಪಿ ಕಾಲೆಳೆಯುತ್ತಿರುವುದು ನೋಡಿದರೆ ಕಾಂಗ್ರೆಸ್ ನಾಯಕರಿಗೆ ಹೊಸ ಆತಂಕ ಶುರುವಾದಂತಿದೆ ಎಂದು ಹೇಳಿದ್ದಾರೆ.

ನಾನು ಹಾಗೂ ವಿಪಕ್ಷ ನಾಯಕರು ಒಟ್ಟಾಗಿ ಪಕ್ಷವನ್ನು ಮುನ್ನಡೆಸುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಪಕ್ಷವನ್ನು ಸುಭದ್ರವಾಗಿ ಕಟ್ಟಲು ಸಂಕಲ್ಪಿಸುತ್ತೇವೆ. ಆ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ಗೆ ಸ್ಪಷ್ಟ ಸಂದೇಶ ರವಾನಿಸಲಿದ್ದೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಕಳೆದ ಅವಧಿಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 28 ಕ್ಕೆ 28 ಸ್ಥಾನ ಗೆಲ್ಲುವ ಗುರಿ ನಮಗಿದೆ. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಮತ್ತೊಂದು ಅವಧಿಗೆ ಮುಂದುವರೆಯಲು ಬಿಜೆಪಿ ಪಕ್ಷಕ್ಕೆ ಶಕ್ತಿ ತುಂಬಲಿದ್ದೇವೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

“ಕಿರಿಯ ವಯಸ್ಸಿನವರ ಕೆಳಗೆ ಕೆಲಸ ಮಾಡೋದು ಹೇಗೆ?” : ವಿಜಯೇಂದ್ರ ಆಯ್ಕೆಗೆ ರಮೇಶ್ ಜಾರಕಿಹೊಳಿ ಅಸಮಾಧಾನ
ಬರೋಬ್ಬರಿ ಆರು ತಿಂಗಳ ಹಗ್ಗಜಗ್ಗಾಟ, ತಿಣುಕಾಟಗಳ ನಂತರ ಈಗ ಬಿಜೆಪಿ ಪಕ್ಷ ಹೊಸ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿದೆ. ಆದರೆ ಈ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೇ ಬಿನ್ನಮತದ ಅಪಸ್ವರ ಎದುರಾಗಿದೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಈಗ ಶಾಸಕ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷನ ಆಯ್ಕೆ ಹಿರಿತನದ ಆಧಾರದಲ್ಲಿ ಮಾಡಬೇಕಿತ್ತು. ಆದರೆ ಬಿಜೆಪಿಯಲ್ಲಿ ಹೀಗಾಗಿಲ್ಲ. ಕೇವಲ ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ಆದ ಆಯ್ಕೆಯ ಜೊತೆಗೆ ತಮಗಿಂತ ಕಿರಿಯ ವಯಸ್ಸಿನವರ ಕೆಳಗೆ ಕೆಲಸ ಮಾಡೋದು ಹೇಗೆ ಎಂದು ವರಿಷ್ಠರ ಮುಂದೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಅದೇ ವಿಜಯೇಂದ್ರ ಬದಲಾಗಿ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದರೆ ಒಪ್ಪಬಹುದಿತ್ತು. ಆದರೆ ಈ ಆಯ್ಕೆ ಅಷ್ಟು ಸೂಕ್ತ ಅಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕೇವಲ ಯಡಿಯೂರಪ್ಪ ಮಾತ್ರವಲ್, ಬಿಜೆಪಿ ಪಕ್ಷದಲ್ಲಿ ಹಲವಷ್ಟು ಹಿರಿಯ ನಾಯಕರುಗಳು ಪಕ್ಷ ಮುನ್ನಡೆಸುವ ನಿಟ್ಟಿನಲ್ಲಿ ಸಬಲರಿದ್ದಾರೆ. ಆದರೆ ಅನುಭವ ಮತ್ತು ವಯಸ್ಸು ಎರಡರಲ್ಲೂ ಕಿರಿಯ ಎನ್ನಿಸಿಕೊಳ್ಳುವ ವಿಜಯೇಂದ್ರ ಆಯ್ಕೆ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ರಮೇಶ್ ಜಾರಕಿಹೊಳಿ ಹೊರಹಾಕಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ಅರವಿಂದ್ ಬೆಲ್ಲದ, ಸಿ.ಟಿ.ರವಿ, ವಿ.ಸೋಮಣ್ಣ, ಕೆ.ಎಸ್.ಈಶ್ವರಪ್ಪ, ಡಾ.ಕೆ.ಸುಧಾಕರ್ ನಂತರ ಈಗ ರಮೇಶ್ ಜಾರಕಿಹೊಳಿ ಸಹ ವಿಜಯೇಂದ್ರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಒಳಗಿನ ಅಸಮಾಧಾನದ ಬೇಗುದಿ ರಾಜ್ಯಾಧ್ಯಕ್ಷನ ಆಯ್ಕೆಯ ನಂತರ ಮತ್ತಷ್ಟು ಹೆಚ್ಚಾಗಿದೆ. ಒಬ್ಬೊಬ್ಬ ನಾಯಕನೂ ಕೊಡುವ ಪ್ರತಿಕ್ರಿಯೆಗಳು ಮುಂದಿನ ದಿನಗಳಲ್ಲಿ ಪಕ್ಷವನ ಸಂಘಟಿಸುವ ಬದಲು ಇನ್ನಷ್ಟು ಕಂದಕ ಸೃಷ್ಟಿಯಾಗಬಹುದು ಎನ್ನಲಾಗಿದೆ.

ಬಿಜೆಪಿಯಲ್ಲಿ ʻಜೋಕರ್ʼ ಆಗಿಯೇ ಉಳಿದುಬಿಟ್ಟರಾ ಬಸನಗೌಡ ಪಾಟೀಲ್‌ ಯತ್ನಾಳ್?‌
ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕ ಆದ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಆರ್.ಅಶೋಕ್‌ ಅವರಿಗೆ ಒಲಿದುಬಂದಿದೆ. ಸದ್ಯದ ಮಟ್ಟಿಗೆ ರಾಜ್ಯ ಬಿಜೆಪಿಯಲ್ಲಿ ಇರುವುದು ಎರಡೇ ಪ್ರಮುಖ ಹುದ್ದೆಗಳು. ಈ ಎರಡರಲ್ಲಿ ಒಂದು ತನಗೆ ಒಲಿಯಬಹುದೆಂದು, ಅದರಲ್ಲೂ ಪ್ರತಿಪಕ್ಷ ನಾಯಕನ ಸ್ಥಾನ ತನಗೇ ದೊರೆಯಬಹುದೆಂದು ಕಾದಿದ್ದ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ದೊಡ್ಡ ನಿರಾಶೆಯಾಗಿದೆ. ನಿರಾಶೆ ಮಾತ್ರವಲ್ಲ ಅದು ಹತಾಶೆಯ ಹಾಗೂ ಕಾಣುತ್ತಿದೆ. ಬಿಜೆಪಿ ಪಾಲಿಗೆ ಯತ್ನಾಳ್‌ ಒಬ್ಬ ಜೋಕರ್‌ ಆಗಿಯೇ ಉಳಿದುಹೋಗಿದ್ದಾರೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದರು. ಅವರ ರಾಜಕೀಯ ಜೀವನದ ದೊಡ್ಡ ಸಾಧನೆ ಅದೇನೇ. ನಂತರ ಯತ್ನಾಳ್‌ ಪಕ್ಷ ತೊರೆದು ಜೆಡಿಎಸ್‌ ಸೇರಿದರು. ಅಲ್ಲೂ ಅವರು ಬಾಳಲಿಲ್ಲ. ಮತ್ತೆ ಬಿಜೆಪಿಗೆ ಬಂದರಾದರೂ ಪಕ್ಷದಲ್ಲಿ ಅವರು ಬಯಸುವ ಸ್ಥಾನಮಾನ ಸಿಗಲೇ ಇಲ್ಲ. ಬಹುಶಃ ಅದು ಸಿಗುವುದೂ ಇಲ್ಲ. ಯಾಕೆಂದರೆ ಬಿಜೆಪಿ ಯತ್ನಾಳ್‌ ಅವರನ್ನು ಎಂದೂ ಗಂಭೀರವಾಗಿ ತೆಗೆದುಕೊಂಡಿದ್ದೇ ಇಲ್ಲ.

ಬಹುಶಃ ಇಡೀ ದೇಶದಲ್ಲಿ ಪಕ್ಷ ವಿರೋಧಿ ಮಾತುಗಳನ್ನು ಆಡಿದ ಎಲ್ಲ ರಾಜಕೀಯ ಪಕ್ಷಗಳ ಧುರೀಣರ ಪಟ್ಟಿ ಮಾಡಿದರೆ ಯತ್ನಾಳ್‌ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನ ಬೇಕೆಂದರೆ ಹೈಕಮಾಂಡ್‌ ಗೆ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ ಕೊಡಬೇಕು ಎಂದುಬಿಟ್ಟಿದ್ದರು ಯತ್ನಾಳ್.‌ ಬೇರೆ ಯಾರಾದರೂ ಈ ಮಾತು ಆಡಿದ್ದರೆ ಇಪ್ಪತ್ತ್ನಾಲ್ಕು ಗಂಟೆಯೊಳಗೆ ಅವರು ಉಚ್ಛಾಟನೆಗೊಳ್ಳುತ್ತಿದ್ದರು. ಆದರೆ ಯತ್ನಾಳ್‌ ಅವರನ್ನು ಬಿಜೆಪಿ ನಾಯಕರು ಉಚ್ಛಾಟಿಸಲಿಲ್ಲ, ಕನಿಷ್ಠ ಅಮಾನತು ಕೂಡ ಮಾಡಲಿಲ್ಲ.

ಇದೊಂದೇ ವಿಷಯವೆಂದೇನಲ್ಲ, ಯತ್ನಾಳ್‌ ಸತತವಾಗಿ ಪಕ್ಷದ ನಾಯಕರ ವಿರುದ್ಧ ಗುರುಗುಟ್ಟುತ್ತಲೇ ಬಂದಿದ್ದಾರೆ. ಅದರಲ್ಲೂ ರಾಜ್ಯ ಬಿಜೆಪಿಯ ಮುಂಚೂಣಿ ನಾಯಕ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಯತ್ನಾಳ್‌ ಹೇಳಿಕೆಗಳನ್ನೇ ಕೋಟ್‌ ಮಾಡುತ್ತಾ ಇದೆಲ್ಲ ನೋಡಿ ನಿಮ್ಮ ಪಕ್ಷದವರೇ ಹೇಳಿರೋದು ಎಂದು ಮುಜುಗರಕ್ಕೆ ಸಿಲುಕಿಸಿದ್ದರು. ಏನೇ ಆದರೂ ಯತ್ನಾಳ್‌ ಅವರ ವಿರುದ್ಧ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಲೇ ಇಲ್ಲ. ಒಂದು ಬಾರಿ ನೋಟೀಸ್‌ ಕೊಟ್ಟರೂ ಅದು ಮುಂದಕ್ಕೆ ಹೋಗಲೇ ಇಲ್ಲ. ಬಿಜೆಪಿ ನಾಯಕರಿಗೆ ಯತ್ನಾಳ್‌ ಪಕ್ಷ ಬಿಡುವುದೂ ಬೇಕಿಲ್ಲ. ಸಮಯ ಬಂದಾಗ ಎದುರಾಳಿಗಳ ವಿರುದ್ಧ ತನ್ನ ಹರಿತ ನಾಲಿಗೆಯಿಂದ ನಿಂದಿಸಲು ಯತ್ನಾಳ್‌ ಅವರಿಗೆ ಬೇಕು. ಹಿಂದು-ಮುಸ್ಲಿಂ ವಿಷಯ ಬಂದಾಗ ವಿಷ ಕಾರುವ ಹೇಳಿಕೆ ನೀಡಲೂ ಯತ್ನಾಳ್‌ ಬೇಕು. ಆದರೆ ಅಧಿಕಾರ-ಸ್ಥಾನಮಾನ ಮಾತ್ರ ಕೊಡುವುದಿಲ್ಲ.

ಯತ್ನಾಳ್‌ ಮುಸ್ಲಿಂ ಬಾಹುಳ್ಯವುಳ್ಳ ವಿಜಯಪುರ ಕ್ಷೇತ್ರದಿಂದ ಆರಿಸಿ ಬರುತ್ತಿದ್ದಾರೆ. ಅಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಒಂದು ಲಕ್ಷ ಮೂವತ್ತು ಸಾವಿರಕ್ಕೂ ಹೆಚ್ಚು. ಹೇಳಿಕೇಳಿ ಯತ್ನಾಳ್‌ ಮುಸ್ಲಿಂ ದ್ವೇಷದ ಹೇಳಿಕೆ ನೀಡುವುದರಲ್ಲಿ ಎತ್ತಿದ ಕೈ. ಹೀಗಿದ್ದೂ ಅಲ್ಲಿ ಗೆಲ್ಲುತ್ತಿರುವುದೇ ಯತ್ನಾಳ್‌ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಾರೆ ಮತ್ತು ರಾಜಾರೋಷವಾಗಿ ಮುಸ್ಲಿಮರ ಮತಗಳು ತನಗೆ ಬೇಕಾಗಿಲ್ಲ ಎಂದು ಚುನಾವಣಾ ಪೂರ್ವದಲ್ಲಿ ಘೋಷಿಸಿಕೊಳ್ಳುತ್ತಾರೆ. ವಿಜಯಪುರದಲ್ಲಿ ಮುಸ್ಲಿಂ ಮತಗಳು ಪ್ರತಿ ಚುನಾವಣೆಯಲ್ಲಿ ವಿಭಜನೆಯಾಗಿ ಯತ್ನಾಳ್‌ ಗೆಲ್ಲುತ್ತಾರೆ. ಇದನ್ನು ತಡೆಯುವ ಪ್ರಯತ್ನವನ್ನು ಕಾಂಗ್ರೆಸ್‌ ಪಕ್ಷ ಮಾಡಿಯೂ ಇಲ್ಲ. ಕೆಲವು ಹಿರಿಯ ಕಾಂಗ್ರೆಸ್‌ ಮುಖಂಡರು ಯತ್ನಾಳ್‌ ಗೆಲಿಸುವ ಸಲುವಾಗಿಯೇ ದುರ್ಬಲ ಅಭ್ಯರ್ಥಿಗಳನ್ನು ಹಾಕುತ್ತಾರೆ ಎಂಬ ಮಾತಿದೆ. ಹಿಂದೂಗಳ ಮತಗಳನ್ನೂ ಸೆಳೆಯಬಲ್ಲ ಪ್ರಬಲ ಅಭ್ಯರ್ಥಿಯನ್ನು ಸ್ಪರ್ಧೆಗೆ ತಂದರೆ ಯತ್ನಾಳ್‌ ಸೋಲುವುದು ಖಚಿತ. ಒಂದು ರೀತಿಯಲ್ಲಿ ಅವರಿಗೆ ಕಾಂಗ್ರೆಸ್‌ ಋಣವೂ ಇದೆ. ಭಾರತೀಯ ಜನತಾ ಪಕ್ಷದ ಮುಖಂಡರಿಗೆ ಈ ಸೂಕ್ಷ್ಮಗಳೆಲ್ಲ ಗೊತ್ತಿಲ್ಲ. ಕ್ಷೇತ್ರದಿಂದ ಆಚೆಗೆ ಯತ್ನಾಳ್‌ ಅವರಿಗೆ ಇರುವ ಬೆಂಬಲ ಅಷ್ಟಕ್ಕಷ್ಟೆ. ಮೀಡಿಯಾಗಳ ಮುಂದೆ ಅಬ್ಬರಿಸುವುದನ್ನು ಹೊರತುಪಡಿಸಿ ರಚನಾತ್ಮಕವಾಗಿ ಕೆಲಸ ಮಾಡಿದ ಹಿನ್ನೆಲೆ ಯತ್ನಾಳ್‌ ಅವರಿಗಿಲ್ಲ. ಹೀಗಾಗಿ ಅವರಿಗೆ ಮಹತ್ವದ ಹುದ್ದೆಗಳನ್ನು ಅದು ಕೊಡುವುದೂ ಇಲ್ಲ.

ವಿರೋಧ ಪಕ್ಷದ ನಾಯಕಸ್ಥಾನ ತಪ್ಪಿದ ಸಿಟ್ಟಿನಲ್ಲಿ ಯತ್ನಾಳ್‌ ಮಾಧ್ಯಮದವರ ಜೊತೆ ಮಾತನಾಡುತ್ತ, ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರುಗಳನ್ನು ʻಚಿಂದಿ ಚೋರ್‌ʼಗಳು ಎಂದು ನಿಂದಿಸಿದ್ದಾರೆ. ಈಗಲೂ ಯಥಾಪ್ರಕಾರ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಬಿಜೆಪಿ ಯತ್ನಾಳ್‌ ಅವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಮುಂದೆಯೂ ಲೆಕ್ಕಕ್ಕೆ ಇಟ್ಟುಕೊಳ್ಳುವ ಸಾಧ್ಯತೆ ಇಲ್ಲ. ಇಸ್ಪೀಟ್‌ ಎಲೆಗಳ ನಡುವಿನ ಜೋಕರ್‌ ನಂತೆ ಯತ್ನಾಳ್‌ ಬಿಜೆಪಿಯಲ್ಲಿ ಇದ್ದಾರೆ ಅಷ್ಟೆ.

ವಿಜಯೇಂದ್ರ ಪದಗ್ರಹಣ : ಬಹಿರಂಗವಾಗಿ ಅಸಮಾಧಾನ ಹೊಂದಿದವರೆಲ್ಲ ಗೈರು
ಅಂತೂ ರಾಜ್ಯ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಸಾರಥ್ಯದಲ್ಲಿ ಬಿಜೆಪಿ ಮತ್ತೆ ಹೊಸ ಹುರುಪು ಪಡೆದುಕೊಳ್ಳಲು ಮುಂದಾಗಿದೆ. ಈ ನಡುವೆ ರಾಜ್ಯಾಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಪೈಪೋಟಿ ಕೊಟ್ಟಂತಹ ಹಲವು ಮಂದಿ ನಾಯಕರು ವಿಜಯೇಂದ್ರ ಪದಗ್ರಹಣ ಕಾರ್ಯದಲ್ಲಿ ಗೈರಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ವೈ ವಿಜಯೇಂದ್ರ ಅವರಿಗೆ ಮುಂದೆ ಪಕ್ಷ ಕಟ್ಟುವ ಜೊತೆಗೆ ಅಸಮಾಧಾನಿತರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದೂ ಸಹ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಜಯೇಂದ್ರ ಆಯ್ಕೆ ಹಿನ್ನೆಲೆಯಲ್ಲಿ ಅನೇಕ ಮಂದಿ ಹಲವು ವರ್ಷಗಳಿಂದ ಪಕ್ಷ ಕಟ್ಟಲು, ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದವರು ಕಾರ್ಯಕ್ರಮಕ್ಕೆ ಗೈರಾಗಿ ವಿಜಯೇಂದ್ರ ಅವರಿಗೆ ಬಹಿರಂಗ ಸಂದೇಶ ರವಾನಿಸಿದ್ದಾರೆ.

ಪ್ರಮುಖವಾಗಿ ಸಿ.ಟಿ.ರವಿ, ವಿ.ಸೋಮಣ್ಣ, ಅರವಿಂದ್ ಬೆಲ್ಲದ, ಅರವಿಂದ್ ಲಿಂಬಾವಳಿ, ಬಸನಗೌಡ ಪಾಟೀಲ್ ಯತ್ನಾಳ್, ಡಾ.ಕೆ.ಸುಧಾಕರ್​, ಎಸ್.ಟಿ ಸೋಮಶೇಖರ್ ಅವರ ಕಡೆಯಿಂದ ವಿಜಯೇಂದ್ರ ಆಯ್ಕೆಗೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಅದರಲ್ಲಿ ಎಸ್.ಟಿ.ಸೋಮಶೇಖರ್ ಹಾಗೂ ವಿ.ಸೋಮಣ್ಣ ಈಗಾಗಲೇ ಬಿಜೆಪಿ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಾಗಿದೆ.

ಇನ್ನು ಬಿ.ಎಲ್ ಸಂತೋಷ್ ಅವರ ಬಣದವರೆಂದೇ ಗುರುತಿಸಿಕೊಂಡಿರುವ ಸಿಟಿ ರವಿ, ಅರವಿಂದ್ ಬೆಲ್ಲದ, ಅರವಿಂದ್ ಲಿಂಬಾವಳಿ, ಡಾ.ಸುಧಾಕರ್ ಯಾವುದೇ ಕೆಲಸದ ಒತ್ತಡ ಇಲ್ಲದಿದ್ದರೂ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ವಿಜಯೇಂದ್ರ ಅವರಿಗೆ ಸವಾಲು ಎಸೆದಿದ್ದಾರೆ. ವಿಜಯೇಂದ್ರ ಆಯ್ಕೆ ನೇರವಾಗಿ ಬಿ.ಎಲ್.ಸಂತೋಷ್ ಬಣಕ್ಕೆ ಹಿನ್ನಡೆಯಾಗಿದ್ದು ಈ ಬಗ್ಗೆ ಕಾರ್ಯಕ್ರಮಕ್ಕೆ ಹಾಜರಾಗಿರುವ ಕೆ.ಎಸ್.ಈಶ್ವರಪ್ಪ ಕೂಡಾ ವಿಜಯೇಂದ್ರಗೆ ಎಲ್ಲಾ ರೀತಿಯ ಅಧಿಕಾರ ಇಲ್ಲ ಎಂದಿದ್ದಾರೆ. ಆ ಮೂಲಕ ತವರು ಜಿಲ್ಲೆ ಶಿವಮೊಗ್ಗದ ಕಡೆಯಿಂದಲೇ ಬಂಡಾಯದ ಬಿಸಿ ತಟ್ಟಿದೆ.

ಇನ್ನು ಹಿಂದುತ್ವದ ಫೈರ್ ಬ್ರಾಂಡ್ ಹಾಗೆ ಗುರುತಿಸಿಕೊಂಡಿರುವ ಯತ್ನಾಳ್ ಅವರು ಹಿಂದಿನಿಂದಲೂ ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಟೀಕಿಸಿಕೊಂಡು ಬಂದವರು. ಅವರೂ ಸಹ ಕಾರ್ಯಕ್ರಮಕ್ಕೆ ಗೈರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಲಿಂಗಾಯತ ಮತಗಳು ಒಂದು ಕಡೆ ತಗೆದುಕೊಳ್ಳುವ ವಿಚಾರದಲ್ಲಿ ವಿಜಯೇಂದ್ರಗೆ ಪಕ್ಷ ಕಟ್ಟುವುದಕ್ಕಿಂತ ಹೆಚ್ಚಾಗಿ ಬಂಡಾಯ ಶಮನವೇ ದೊಡ್ಡ ತಲೆನೋವಾಗಬಹುದು ಎನ್ನಲಾಗಿದೆ.

ಅಸಮಾಧಾನಿತರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಾರಾ ಬಿಜೆಪಿ ಹೊಸ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ?
ರಾಜ್ಯ ವಿಧಾನಸಭಾ ಚುನಾವಣೆ ನಂತರ ಕರ್ನಾಟಕ ಬಿಜೆಪಿ ಅಕ್ಷರಶಃ ದಿಕ್ಕು ದೆಸೆಯಿಲ್ಲದ ಅತಂತ್ರ ಸ್ಥಿತಿಯಲ್ಲಿತ್ತು. ಒಂದು ಕಡೆ ವಿಪಕ್ಷ ನಾಯಕನಿಲ್ಲ, ಇನ್ನೊಂದು ಕಡೆ ರಾಜ್ಯಾಧ್ಯಕ್ಷ ಇದ್ದರೂ ಆ ಸ್ಥಾನ ಸಂಪೂರ್ಣ ಕೋಮಾ ಸ್ಥಿತಿಗೆ ಹೋಗಿತ್ತು. ಇಂತಹ ಸ್ಥಿತಿಯಲ್ಲಿ ಇದ್ದ ಬಿಜೆಪಿಗೆ ಈಗ ಹೊಸ ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ.

ಆದರೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆಗೆ ಈಗ ಬಿಜೆಪಿಯಲ್ಲಿ ಬಹಿರಂಗವಾಗಿಯೇ ಬಿನ್ನಮತ ಸ್ಪೋಟಗೊಂಡಿದೆ. ಕುಟುಂಬ ರಾಜಕಾರಣದ ವಿರುದ್ಧವೇ ದನಿ ಏರಿಸಿಕೊಂಡು ಬಂದ ಬಿಜೆಪಿಯಲ್ಲೇ ಈಗ ಕುಟುಂಬ ರಾಜಕಾರಣ ನಡೆಯುತ್ತಿದೆ. ಕೇವಲ ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷ ಗಿಟ್ಟಿಸಿಕೊಂಡ ಬಗ್ಗೆ ವಿಜಯೇಂದ್ರ ವಿರುದ್ಧ ಸ್ವಪಕ್ಷೀಯರೇ ಅಸಮಾಧಾನ ಹೊರ ಹಾಕಿದ್ದಾರೆ.

ಸಧ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿ ಇದ್ದವರ ಪಟ್ಟಿ ಮಾಡ್ತಾ ಹೋದರೆ ಸಿಗೋದು ಹತ್ತು ಹಲವು ಹೆಸರುಗಳು. ಅದರಲ್ಲಿ ಸದಾನಂದ ಗೌಡ, ವಿ.ಸೋಮಣ್ಣ, ಯಡಿಯೂರಪ್ಪರ ಟೀಕಿಸುತ್ತಲೇ ಬಂದಿರುವ ಬಸನಗೌಡ ಪಾಟೀಲ್ ಯತ್ನಾಳ್ ಇನ್ನೂ ಹಲವರು ತಮ್ಮದೇ ವರ್ಚಸ್ಸಿನಿಂದ ಗುರುತಿಸಿಕೊಂಡವರಾದರೆ,  ಬಿ.ಎಲ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿರುವ ಆರ್.ಅಶೋಕ್, ಅಶ್ವತ್ ನಾರಾಯಣ್, ಅರವಿಂದ ಬೆಲ್ಲದ್, ಸಿ.ಟಿ.ರವಿ, ಮುರುಗೇಶ್ ನಿರಾಣಿ ಇನ್ನೂ ಹತ್ತು ಹಲವು ಮಂದಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ನೀಡಿದ್ದರು.

ರಾಜ್ಯಾಧ್ಯಕ್ಷರ ಹುದ್ದೆ ಆಯ್ಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಸಿಟಿ ರವಿಯವರು “ಇಂತಹ ಸಮಯದಲ್ಲಿ ನಾನು ಏನೇ ಮಾತನಾಡಿಜರೂ ಅದು ಅಪಾರ್ಥಕ್ಕೆ ಗುರಿಯಾಗುತ್ತದೆ. ನಾನು ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ” ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಹಾಗೆಯೇ ಆರ್.ಅಶೋಕ್, ಅಶ್ವತ್ ನಾರಾಯಣ್, ಅರವಿಂದ ಬೆಲ್ಲದ್, ಸಿ.ಟಿ.ರವಿ, ಮುರುಗೇಶ್ ನಿರಾಣಿ ಇನ್ನೂ ಹಲವು ನಾಯಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೆ ಅಲ್ಲದೆ ಕರಾವಳಿ ಭಾಗಕ್ಕೆ ಈ ವರೆಗೂ ಇದ್ದ ವಿಶೇಷ ಪ್ರಾತಿನಿಧ್ಯ ಕೂಡಾ ಈ ಬಾರಿ ಇಲ್ಲದಾಗಿದೆ. ದೊಡ್ಡ ನಾಯಕರು ಅಥವಾ ಶಾಸಕರ ಮಟ್ಟದಲ್ಲಿ ಅಸಮಾಧಾನ ಇರದಿದ್ದರೂ ಕಾರ್ಯಕರ್ತರ ಮಟ್ಟದಲ್ಲೂ ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಬಿಜೆಪಿ ಹೈಕಮಾಂಡ್ ಲಿಂಗಾಯತ ಪ್ರಾತಿನಿಧ್ಯವನ್ನು ಮತ್ತೆ ಮುನ್ನೆಲೆಗೆ ತರಲು ಈ ದಾರಿ ಅನಿವಾರ್ಯವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಏನೇ ಆದರೂ ಈಗಾಗಲೇ ಲಿಂಗಾಯತ ಮತಗಳು ಬಹುತೇಕ ಕಾಂಗ್ರೆಸ್ ಪರ ತಿರುಗಿದ್ದು ಇದನ್ನು ಬಿಜೆಪಿ ಸೆಳೆಯುವುದು ಒಂದು ಸವಾಲೇ ಸರಿ.

ಹೊಸ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನವೆಂಬರ್ 17 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ. ‘ಎಲ್ಲಾ ಶಾಸಕರಿಗೂ ಆಹ್ವಾನ ನೀಡುತ್ತೇನೆ, ಪ್ರಮುಖ ಮುಖಂಡರಿಗೂ ಆಹ್ವಾನ ನೀಡುತ್ತೇನೆ,ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದ್ದೇನೆ’ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ ‘ಕೇವಲ ಜಿಲ್ಲಾ ಘಟಕದ ಅಧ್ಯಕ್ಷರುಗಳನ್ನು ಮಾತ್ರ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದೇನೆ. ಉಳಿದಂತೆ ಮಾಧ್ಯಮಗಳ ಮೂಲಕ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಲಿದ್ದೇನೆ’ ಎಂದು ವಿಜಯೇಂದ್ರ ಹೇಳಿದ್ದಾರೆ.

ಏನೇ ಇರಲಿ. ದಿಕ್ಕು ದೆಸೆ ಇಲ್ಲದಂತಿದ್ದ ಬಿಜೆಪಿಗೆ ಹೇಳಿಕೊಳ್ಳೋದಕ್ಕಾದರೂ ಒಬ್ಬ ರಾಜ್ಯಾಧ್ಯಕ್ಷ ಸಿಕ್ಕಿದ್ದಾರೆ. ಬಳಲಿ ಬೆಂಡಾಗಿರೋ ಬಿಜೆಪಿ ಮರುಹುಟ್ಟು ಪಡೆಯೋಕೆ ಇರೋ ಅಡ್ಡಗಾಲನ್ನು ದಾಟಿ ಹೇಗೆ ಮುಂಬರುತ್ತೆ ಅನ್ನೋದು ಗಮನಿಸಬೇಕಾದ ವಿಚಾರ.

ಒಂದು ವಾರದೊಳಗೆ ವಿರೋಧ ಪಕ್ಷದ ನಾಯಕನ ಆಯ್ಕೆ: ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಬೆಂಗಳೂರು: ಬಿಜೆಪಿಯ ನೂತನ ಕರ್ನಾಟಕ ಅಧ್ಯಕ್ಷರಾಗಿ ಬಿ.ವೈ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಮೊದಲ ಆದ್ಯತೆ ಎಂದು ವಿಜಯೇಂದ್ರ ಶುಕ್ರವಾರ ಹೇಳಿದ್ದಾರೆ.

“ರಾಷ್ಟ್ರೀಯ ಅಧ್ಯಕ್ಷರು ಕರ್ನಾಟಕದಿಂದ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಜವಾಬ್ದಾರಿಯನ್ನು ನೀಡಿದ್ದಾರೆ. ನಾನದನ್ನು ಮಾಡಿ ತೋರಿಸುತ್ತೇನೆ ಎಂದರು.

ಘೋಷಣೆ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ, ನಾನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಗ ಎನ್ನುವುದರ ಕುರಿತು ಹೆಮ್ಮೆಯಿದೆ ಎಂದರು.

ಯಡಿಯೂರಪ್ಪ ತೋರಿಸಿದ ಹಾದಿಯಲ್ಲಿ ನಾವು ಕೆಲಸ ಮಾಡುತ್ತೇವೆ. ನಾನು ಅವರ ಮಗ ಎಂಬ ಕಾರಣಕ್ಕೆ ನನಗೆ ಈ ಅವಕಾಶ ಸಿಕ್ಕಿಲ್ಲ. ಪಕ್ಷದ ವರಿಷ್ಠರು ನನ್ನ ಸಾಮರ್ಥ್ಯ ಗುರುತಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ ಎಂದರು.

ವಿರೋಧ ಪಕ್ಷದ ನಾಯಕರ ನೇಮಕ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಮುಂದಿನ ಶುಕ್ರವಾರದೊಳಗೆ ನೇಮಕ ಮಾಡಲಾಗುವುದು ಎಂದರು.

ಅಷ್ಟರೊಳಗೆ ಶಾಸಕಾಂಗ ಪಕ್ಷದ ಸಭೆ ಕರೆದು ವಿರೋಧ ಪಕ್ಷದ ನಾಯಕನ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ನವದೆಹಲಿಯಿಂದಲೂ ವೀಕ್ಷಕರು ಆಗಮಿಸಲಿದ್ದು, ಅವರ ಸಹಕಾರದೊಂದಿಗೆ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ವಿ.ಸೋಮಣ್ಣ, ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಜೊತೆಯಾಗಿ ಕರೆದುಕೊಂಡು ಹೋಗಲಾಗುವುದು ಎಂದು ಸಮರ್ಥಿಸಿಕೊಂಡರು.