Campus kannadi – Peepal Media

ಲೈಫ್ ಲೀಡ್ ಮಾಡೋದು ಅಂದ್ರೆ…
ಬದುಕು ಬರೇ ಹೂವಿನ ಹಾಸಿಗೆಯಲ್ಲ. ಬದುಕೆಂಬ ಮನೆ ನೋವು ನಿಟ್ಟುಸಿರುಗಳಲ್ಲಿ ಒಮ್ಮೆ ಕುಸಿದರೂ ಸಾವರಿಸಿಕೊಂಡು ಎದ್ದು ಆ ಮನೆಯನ್ನು ನಾವೇ ಕಷ್ಟಪಟ್ಟು ಸಿಂಗರಿಸಿಕೊಂಡಾಗ ಬದುಕು ಮತ್ತೆ ಸಂಭ್ರಮಿಸುತ್ತದೆ. ಸಂದರ್ಭ ಏನೇ ಆಗಿರಲಿ, ಆ ಸಂದರ್ಭವನ್ನು ಪರಿಪೂರ್ಣವಾಗಿ ಅನುಭವಿಸಿ ಜೀವಿಸಬೇಕು ಎನ್ನುವುದು ಪತ್ರಿಕೋದ್ಯಮ ಪದವೀಧರೆ ಮಹಾಲಕ್ಷ್ಮಿ ದೇವಾಡಿಗ ಅವರ ಭರವಸೆಯ ನುಡಿಗಳು

ಒಬ್ಬನಿಗೆ/ಳಿಗೆ ಆತ್ಮ ವಿಶ್ವಾಸ ಅನ್ನೋದೆ ಅತಿದೊಡ್ಡ ಅಸ್ತ್ರ. ಯಾವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಹೇಗೆ ಉಪಯೋಗ ಮಾಡ್ತೇವೆ ಅನ್ನೋದು ನಮ್ಮ ಬುದ್ಧಿಶಕ್ತಿಯ ಮೇಲಿದೆ. ಸೋಲು ಸರ್ವೇ ಸಾಮಾನ್ಯವಾದ ಎರಡಕ್ಷರದ ಪದ, ಆದ್ರೆ ಅದನ್ನ ನಾವು ಯಾವ ರೂಪದಲ್ಲಿ ಸ್ವೀಕರಿಸ್ತೇವೋ ಅನ್ನೋದ್ರ ಮೇಲೆ ಅದರ ಪರಿಣಾಮ ನಿಂತಿದೆ.

ವೈಜ್ಞಾನಿಕವಾಗಿ ಹೇಳೋದಾದ್ರೆ ಒಂದು ಮಗು ಗರ್ಭ ಸೇರೋ ಮೊದ್ಲೆ ಕನಿಷ್ಠ ಮೂರು ಮಿಲಿಯನ್ ವೀರ್ಯಾಣುಗಳನ್ನು ಹಿಂದೆ ಹಾಕಿ ಗರ್ಭದಲ್ಲಿ ತನ್ನ ರೂಪ ಪಡೆದುಕೊಂಡು ಭೂಮಿಗೆ ಕಾಲಿಡುತ್ತೆ. ಹುಟ್ಟೋ ಮುಂಚೆನೇ ಸೋಲನ್ನು ಗೆದ್ದು ಬಂದ ಮಾನವನಿಗೆ ಹುಟ್ಟಿದ ನಂತರ ಅದನ್ನು ಅರಗಿಸಿಕೊಳ್ಳುವ ಶಕ್ತಿ ಬಹಳ ಕಡಿಮೆಯಾಗುತ್ತೆ. ಯಾಕೆ ಹೀಗಾಯ್ತು ಎಂದು ನಮಗೆ ನಾವೇ ಯಾವತ್ತಾದರೂ ಪ್ರಶ್ನೆ ಮಾಡಿಕೊಂಡಿದ್ದೇವಾ? ಇಲ್ಲ.

ಹುಟ್ಟಿನಿಂದ ಬೆಳೆದು ಒಂದು ಮಟ್ಟ ತಲುಪುವ ವರೆಗೂ ಮಾನವನಿಗೆ ಎದುರಾಗುವ ಕಷ್ಟ-ನಷ್ಟಗಳ ಲೆಕ್ಕಚಾರ ಮಾಡೋದು ಸಾಮಾನ್ಯ ಅಲ್ಲ. ಆದ್ರೆ ಅದನ್ನ ಗೆದ್ದು ಕೆಟ್ಟ ಸಮಯವನ್ನು ಹಿಂದಿಟ್ಟು ಮುಂದೆ ಬರುವವರ ಬದುಕು, ಭವಿಷ್ಯದಲ್ಲಿ ಇನ್ನೋರ್ವರಿಗೆ ಆದರ್ಶ ಆಗುವುದಂತೂ ಸತ್ಯ.

ಹುಟ್ಟಿನಿಂದ ಬೆಳೆದು ಒಂದು ಮಟ್ಟ ತಲುಪುವ ವರೆಗೂ ಮಾನವನಿಗೆ ಎದುರಾಗುವ ಕಷ್ಟ-ನಷ್ಟಗಳ ಲೆಕ್ಕಚಾರ ಮಾಡೋದು ಸಾಮಾನ್ಯ ಅಲ್ಲ. ಆದ್ರೆ ಅದನ್ನ ಗೆದ್ದು ಕೆಟ್ಟ ಸಮಯವನ್ನು ಹಿಂದಿಟ್ಟು ಮುಂದೆ ಬರುವವರ ಬದುಕು, ಭವಿಷ್ಯದಲ್ಲಿ ಇನ್ನೋರ್ವರಿಗೆ ಆದರ್ಶ ಆಗುವುದಂತೂ ಸತ್ಯ.

ಲೈಫ್‌ ನಲ್ಲಿ ಯಾವಾಗ ಏನ್ ಆಗ್ತದೆ, ಅಂತ ಹೇಳೋಕ್ಕೆ ಆಗದೆ ಇರ್ಬಹುದು ಆದ್ರೆ ಇಂತದ್ದು ನಡಿಯಬಹುದೇನೋ!!  ಅಂತ ಕೆಲವೊಮ್ಮೆ ಅಂದಾಜು ಮಾಡಬಹುದು. ಒಮ್ಮೊಮ್ಮೆ ನಾವು ಅಂದುಕೊಂಡ ಹಾಗೆ ಆಗ್ತದೆ. ಓಮ್ಮೊಮ್ಮೆ ಆಗೋದಿಲ್ಲ. ಏನೇ ಆದ್ರೂ ಪರ್ವಾಗಿಲ್ಲ ಮುಂದೆ ನನ್ನ ಬದುಕು ಉತ್ತಮವಾಗಿ ಇರ್ತದೆ ನಾನು ಉತ್ತಮವಾಗಿ ರೂಪಿಸಿಕೊಳ್ತೇನೆ ಅನ್ನೋ ಛಲ ಒಂದಿದ್ರೆ ಸಾಕು ನಮ್ಮ ಜೀವನದಲ್ಲಿ ಅದೇನೇ ಆದ್ರೂ ನಿಭಾಯಿಸಲು ಆಗ್ತದೆ.

ಇತ್ತೀಚಿನ ದಿನಗಳಲ್ಲಿ ನಾವು ಕೂಡ ಹಲವು ಕಡೆಯಿಂದ ಕೇಳ್ತಾ, ನೋಡ್ತಾ ಬರ್ತಾ ಇದ್ದೇವೆ. ಜೀವನದಲ್ಲಿ ಅತಿಯಾಗಿ ಸೋಲುಂಡಾಗಲೋ ಅಥವಾ ಮುಖ್ಯವಾದ ವ್ಯಕ್ತಿಯನ್ನು ಕಳೆದುಕೊಂಡಾಗ್ಲೋ ಮನುಷ್ಯರು ಸಾವನ್ನು ಅತಿಯಾಗಿ ಪ್ರೀತಿಸಿ ಅದರ ಮಡಿಲು ಸೇರಲು ಇಚ್ಛಿಸುತ್ತಾರೆ. ಬದುಕಿನಲ್ಲಿ ಹೀಗ್ ಇರ್ಬೇಕು, ಹೀಗ್ ಇರಬಾರ್ದು ಅಂತ ಒಬ್ಬರಿಗೆ ಹೇಳೋ ಹಕ್ಕು ನಮ್ಮಗಿಲ್ಲವಾದ್ರು ಒಂದೊಳ್ಳೆ ಹಿತೈಷಿಯಾಗಿ ಕಿವಿಮಾತು ಹೇಳಬಹುದಷ್ಟೆ.

ನಿಮ್ಮ ಹಿತೈಷಿಯಾಗಿ ನಾನು ಹೇಳೋದಿಷ್ಟೆ  ಲೈಫ್ ಅಂತ ಇದ್ಮೇಲೆ ಗೆಲುವು ಸೋಲು ಸಾಮಾನ್ಯ. ನಗು ಅಳು ಸಾಧಾರಣ. ಹುಟ್ಟು ಸಾವು ಲೋಕ ನಿಯಮ, ಇನ್ನೂ ಇದರ ಮಧ್ಯೆ ಇರೋ ನಮ್ಮ ಆಯಸ್ಸು , ಸ್ನೇಹ, ಸಂಬಂಧಗಳು, ಪ್ರೀತಿ, ದ್ವೇಷ ಇತ್ಯಾದಿಗಳೆಲ್ಲ ನಿಮಿತ್ತ ಮಾತ್ರ. ಈ ಲೋಕದಲ್ಲಿ ಎಲ್ಲವೂ ಶಾಶ್ವತವಲ್ಲ ನೆನಪು ಕೂಡ ಒಂದು ಲೆಕ್ಕದಲ್ಲಿ ಮರೀಚಿಕೆಯೇ ಸರಿ ಈ ಯುಗದಲ್ಲಿ.

ಎಲ್ಲ ಆದಿಗೂ ಒಂದು ಅಂತ್ಯ ಇರ್ತದೆ. ಲೈಫ್ ಅಲ್ಲಿ ಸೋತ್ರು ಗೆದ್ರು ಆ ಕ್ಷಣನ, ಆ ಸಮಯವನ್ನ ಜೀವಿಸಿ. ಪರಿಸ್ಥಿತಿ ಎಂತಹುದೇ ಆಗಿರಬಹುದು ಅದನ್ನ ಯಾವ ತರ  ತೆಗೆದುಕೊಂಡು ನಿಭಾಯಿಸಿ ನಮ್ಮ ಲೈಫ್ ನ ಲೀಡ್ ಮಾಡ್ತೇವೆ, ಅನ್ನೋದು ನಮ್ಮ ಕೈಲಿ ಇದೆ. ನೋವು ಅನ್ನೋದು ಹೊಸತಲ್ಲ. ಸೋಲು ಯಾವುದರ ಕೊನೆಯೂ ಅಲ್ಲ. ಹೀಗಿರುವಾಗ ನಮ್ಮ ಉಸಿರನ್ನು ಬಲವಂತವಾಗಿ ಅಂತ್ಯಗೊಳಿಸೋ ಹುಚ್ಚು ಪ್ರಯತ್ನ ಮಾಡೋದ್ರಿಂದ ನಮ್ಮ ಪಾಲಿಗೆ ಗೆಲುವು ಅನ್ನೋದು ಓಡಿ ಬಂದು ಅಪ್ಪಿಕೊಳ್ಳಲ್ಲ  ಅನ್ನೋದು ನೆನಪಿರಲಿ.

ಸಂದರ್ಭ ಏನೇ ಆಗಿರಲಿ ಆ ಸಂದರ್ಭವನ್ನು ಪರಿಪೂರ್ಣವಾಗಿ ಅನುಭವಿಸಿ ಜೀವಿಸಬೇಕು. ಪ್ರತಿದಿನ ಪ್ರತಿಕ್ಷಣ ಏನಾದರೂ ಹೊಸ ಪರೀಕ್ಷೆ ನಮಗೆಂದು ಕಾದಿರುತ್ತದೆ

ಜೀವನ  ಅಂದ್ರೆ ಒಂದು ಹಬ್ಬ ಅದನ್ನು ಆಚರಿಸೋಣ. ಬದುಕನ್ನು ನಾವು ದಿನಾಲೂ ಚಲಿಸುವ ದಾರಿ ಅಂತ ನೋಡೋಣ. ದಿನ  ಬೆಳಿಗ್ಗೆ ಎದ್ದು ಹೊರಗೆ ಹೋಗಿ ರಾತ್ರಿ ಮನೆ ಬರುವವರೆಗೂ ನಾವು ಭೇಟಿಯಾಗುವ ಜನರು, ಜಾಗದಿಂದ ಹಿಡಿದು ಹಾದಿಯಲ್ಲಿ ಸಿಗುವ ತಿರುವುಗಳು, ಅಡ್ಡಾದಿಡ್ಡಿ ರಸ್ತೆಗಳು. ಹೊಂಡ-ಕೊಂಡಗಳು ಎಲ್ಲದರಲ್ಲೂ ನಮ್ಮ ಬದುಕನ್ನು ಒಮ್ಮೆ ಚಿತ್ರಿಸಿ ಕೊಳ್ಳೋಣ. ನಗು-ಅಳು, ಏಳುಬೀಳು, ಸಾವು-ನೋವು, ಬಂಧು-ಬಾಂಧವರು ಸ್ನೇಹ ಸಂಬಂಧ ಎಲ್ಲವೂ ನಾವು ನಡೆಯುವ ದಾರಿಯಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ನಮ್ಮ ಸುತ್ತಲೂ ಏನು ನಡೆದಿದೆ ಏನು ನಡೆಯುತ್ತಿದೆ ಎಲ್ಲವೂ ನಾವು ನೋಡುವ ದೃಷ್ಟಿಕೋನದ ಮೇಲೆ ಬಲವಾಗಿ ನಿಂತಿದೆ..

ಜಗತ್ತಿನಲ್ಲಿ ಒಳ್ಳೆಯದು-ಕೆಟ್ಟದು ಎರಡೂ ಇದೆ. ಬದುಕಿಗೆ ಇವೆರಡೂ ಅಗತ್ಯ. ಕೆಟ್ಟದರ ಮೇಲೆ ಹೆಚ್ಚಿನ ಒತ್ತು ಕೊಡುವ ಬದಲು ಒಳ್ಳೆಯದನ್ನು ಹೆಚ್ಚು ನೋಡೋಣ ಒಳ್ಳೆಯದನ್ನು ಹಂಚೋಣ. ಇತರರನ್ನು ಉತ್ತಮರಾಗಿಸುವ ನಾವು ಮೊದಲು ಉತ್ತಮ ರಾಗೋಣ. ನಮ್ಮ ನಗು ನಮ್ಮ ಬಾಳು ಮೊದಲು ನಮಗೆ ತೃಪ್ತಿಯನ್ನು ನೀಡುವಂತಾಗಲಿ. ಉಳಿದವರು ಅವರ ಬದುಕನ್ನು ಅವರಾಗಿಯೇ ರೂಪಿಸಿಕೊಂಡು ಬದುಕುತ್ತಾರೆ. ಸಮಯಕ್ಕೆ ತಕ್ಕಂತೆ ನಾವು ಬದಲಾಗಬಹುದು, ಆದರೆ ನಮ್ಮ ಭೂತಕಾಲ ಎಂದು ಬದಲಾಗದು, ಉಳಿದಂತೆ ನಮ್ಮ ಭವಿಷ್ಯ ವರ್ತಮಾನದಲ್ಲಿ ನಾವು ನಡೆದುಕೊಳ್ಳುವ ರೀತಿ ನೀತಿಯಲ್ಲಿ ನಿಂತಿದೆ.

ಸಂದರ್ಭ ಏನೇ ಆಗಿರಲಿ ಆ ಸಂದರ್ಭವನ್ನು ಪರಿಪೂರ್ಣವಾಗಿ ಅನುಭವಿಸಿ ಜೀವಿಸಬೇಕು. ಪ್ರತಿದಿನ ಪ್ರತಿಕ್ಷಣ ಏನಾದರೂ ಹೊಸ ಪರೀಕ್ಷೆ ನಮಗೆಂದು ಕಾದಿರುತ್ತದೆ. ಪಾಸಾದರೂ ಫೇಲಾದರೂ ಪ್ರಯತ್ನ ಮಾತ್ರ ಬಿಡಬಾರದು. ಜೀವನದಲ್ಲಿ ಏನೇ ಆಗಲಿ, ಏನೇ ಹೋಗಲಿ ಆಯಸ್ಸು ಇರುವವರೆಗೂ ಉಸಿರು ನಿಲ್ಲುವವರೆಗೂ ಸಮಯಕ್ಕೆ ಜೊತೆ ಕೊಡಲೇಬೇಕು.

ಮಹಾಲಕ್ಷ್ಮಿ ದೇವಾಡಿಗ

ಪತ್ರಿಕೋದ್ಯಮ ಪದವೀಧರೆ, ಉಡುಪಿ

ಆಸಕ್ತಿ ಮತ್ತು ಅನಿವಾರ್ಯಗಳ ನಡುವೆ……
ಆರ್ಟ್ಸ್ ಯಾಕೆ ತಗೊಂಡೆ? ಆರ್ಟ್ಸ್ ಓದಿ ಮುಂದೆ ಏನ್ ಮಾಡಬೇಕು ಅಂದುಕೊಂಡಿದ್ದೀಯಾ? ಎಂಬುದು ಕಾಲೇಜು ಮೆಟ್ಟಲೇರಿದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು. ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯ ಗೌತಮಿ ತಿಪಟೂರು ಬರೆದ ಈ ಲೇಖನ ಕಲಾ ವಿಭಾಗವನ್ನು ತಾತ್ಸಾರ ಭಾವದಿಂದ ಕಾಣುವ ಎಲ್ಲರ ಕಣ್ಣು ತೆರೆಸುವಂತಿದೆ.

ಪ್ರತಿ ಸಾರಿ ಯಾರಾದರೂ ನನ್ನನ್ನು ಏನು ಓದುತ್ತಿದ್ದೀಯಾ? ಎಂದು ಕೇಳಿದರೆ ನನಗೆ ಮುಂದಿನ ಇಪ್ಪತ್ತು ನಿಮಿಷ ಏನು ನಡೆಯುತ್ತದೆಂದು ತಿಳಿದುಬಿಡುತ್ತದೆ.

ಅಯ್ಯೋ ಆರ್ಟ್ಸ್ ಓದ್ತಿದ್ದಿಯ..!? ಯಾಕೆ.. ? ಟೆನ್ತ್ ನಲ್ಲಿ ಒಳ್ಳೆಯ ಮಾರ್ಕ್ಸ್ ಬಂದಿತ್ತಲ್ವಾ..?  ಅಲ್ಲಾ.. ಆರ್ಟ್ಸ್ ಓದಿ ಮುಂದೆ ಏನ್ ಮಾಡಬೇಕು ಅಂದುಕೊಂಡಿದ್ದೀಯಾ ? ಆರ್ಟ್ಸ್ ಗೆ ಇಂಡಿಯಾದಲ್ಲಿ ಜಾಸ್ತಿ ಸ್ಕೋಪ್ ಇಲ್ಲ ಅಲ್ವಾ ? ಆದ್ರೂ ಆರ್ಟ್ಸ್ ಯಾಕೆ ತಗೊಂಡೆ ? ಹೀಗೆ ಹಲವು ಪ್ರಶ್ನೆಗಳ ಸುರಿಮಳೆಯಾಗುತ್ತದೆ. ಅವರ ಈ ಎಲ್ಲಾ ಪ್ರಶ್ನೆಗಳು ಆರ್ಟ್ಸ್ ತೆಗೆದು ಕೊಂಡರೆ ಮುಂದಿನ ಭವಿಷ್ಯವೇನು? ಎಂಬುದು.

ಹೌದು. ಉದ್ಯೋಗಾವಕಾಶ ತುಂಬಾ ಮುಖ್ಯ. ನಾವು ಓದುವ ಸಬ್ಜೆಕ್ಟ್ ನಮ್ಮ ಫ್ಯೂಚರ್ ನಲ್ಲಿ ಕೆಲಸಕ್ಕೆ (employment) ಸಹಾಯ ಆಗಬೇಕು. ನಾನೂ ಹೀಗೆಯೇ ಯೋಚಿಸಿ, ಎಲ್ಲರಂತೆ  ಪಿಯುಸಿ ಯಲ್ಲಿ ವಿಜ್ಞಾನ (p.c.m.c.s ) ವಿಷಯ ತೆಗೆದುಕೊಂಡೆ. ಎರಡು ತಿಂಗಳು ಕಳೆಯುವುದರೊಳಗೆ ನನ್ನೊಳಗೆ ಏನೋ ಖಾಲಿ ಎನ್ನಿಸ ತೊಡಗಿತು. ನಾನು ಓದುತ್ತಿರುವ ಸಬ್ಜೆಕ್ಟ್ ನನ್ನದಲ್ಲ ಎನಿಸುತ್ತಿತ್ತು. ಸ್ವತಃ ನಾನೇ ಸೈನ್ಸ್ ಆಯ್ಕೆ ಮಾಡಿ ಕೊಂಡಿದ್ದರೂ  ನನಗೆ ನಾನು ಮಾಡುತ್ತಿರುವುದರಲ್ಲಿ ತೃಪ್ತಿ ಇರಲಿಲ್ಲ. ಬರಿ ಕೆಲಸದ ಬಗ್ಗೆ ಯೋಚಿಸಿಕೊಂಡು ಸೈನ್ಸ್ ತೆಗೆದುಕೊಂಡೆನಲ್ಲ ಎನ್ನಿಸಲು ಶುರುವಾಯಿತು.  ಇದನ್ನೆಲ್ಲ ಅಪ್ಪನಿಗೆ ಹೇಳಿದೆ. ಅಪ್ಪ ಕೂಡಲೇ ಬಂದು ಸೈನ್ಸ್ ನಿಂದ ಆರ್ಟ್ಸ್ ಗೆ ಬದಲಾವಣೆ  ಮಾಡಿಸಿದರು.

ನನಗೆ ಆಗಲೇ ಅನ್ನಿಸಿದ್ದು, ನಾವು ಉದ್ಯೋಗಾವಕಾಶ (employability) ಮತ್ತು  ಟ್ರೆಂಡ್ ನಿಂದ ಪ್ರಭಾವಿತರಾಗಿ ನಿಜವಾಗಿಯೂ ನಮಗೆ ಏನು ಬೇಕು ಎಂಬುದನ್ನೇ ಮರೆತುಬಿಡುತ್ತೇವೆ ಎಂದು. ಹೌದು. ಉದ್ಯೋಗ ಮುಖ್ಯ. ಆದರೆ ಅದೇ ಫ್ಯೂಚರ್ ಅಲ್ಲವಲ್ಲ. ನಾವು ಮಾಡುವ ಕೆಲಸ / ಉದ್ಯೋಗ ನಮ್ಮ ಜೀವನದ ಒಂದು ಭಾಗವಷ್ಟೇ. ಆದರೆ ಅದೇ ಜೀವನ ಅಲ್ಲವಲ್ಲ.

ನಮ್ಮ ಆಸಕ್ತಿ  ಮತ್ತು ನಾವು ಆಯ್ಕೆಮಾಡಿಕೊಳ್ಳುವ ವಿಷಯವು  ನಾವು ಹೇಗೆ ಬೆಳೆದಿದ್ದೇವೆ, ನಮ್ಮ ಸುತ್ತಲಿನ ವಾತಾವರಣವೇನಿತ್ತು,  ಚಿಕ್ಕ ವಯಸ್ಸಿನಲ್ಲಿ ನಾವು ಯಾವ ರೀತಿಯ ಬಾಲ್ಯವನ್ನು ಅನುಭವಿಸಿದ್ದೇವೆ ಎಂಬೆಲ್ಲದರ ಮೇಲೆ ಅವಲಂಬಿತವಾಗಿದೆ. ಎಂದರೆ ಯಾವ  ಕಾರ್ಟೂನ್ ನೋಡುತ್ತಿದ್ದೆವು, ಯಾವ ಪುಸ್ತಕ ಓದುತ್ತಿದ್ದೆವು, ನಮ್ಮ ಚಿಕ್ಕ ವಯಸ್ಸಿನ ಫ್ರೆಂಡ್ಸ್ ಹೇಗಿದ್ದರು? ಯಾವೆಲ್ಲಾ ಆಟಗಳನ್ನು ಆಡುತ್ತಿದ್ದೆವು…ಮುಂತಾದ ಅಂಶಗಳು ಕೂಡ ನಮ್ಮ ಆಸಕ್ತಿಗಳಿಗೆ ಕಾರಣವಾಗಿರುತ್ತವೆ.  ಈ ಅಂಶಗಳು ನಮ್ಮ ಫ್ಯೂಚರ್ ಅಷ್ಟೇ ಅಲ್ಲದೆ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತವೆ.

ಉದಾಹರಣೆಗೆ ಈ  semester ನಲ್ಲಿ ನಾನು ‘Reading graphic narration’  ಎನ್ನುವ ಸಬ್ಜೆಕ್ಟ್ ತೆಗೆದುಕೊಂಡಿದ್ದೇನೆ. ಅದರಲ್ಲಿ ಕಾಮಿಕ್ ಪುಸ್ತಕಗಳು, ಮಾಂಗ, ಮಕ್ಕಳ ಚಿತ್ರಕಥೆ, ಗ್ರಾಫಿಕ್ಸ್ ನಾವೆಲ್ಸ್ ಗಳ ಬಗ್ಗೆ ಓದುತ್ತೇವೆ.

ಒಂದು ದಿನ ಕ್ಲಾಸಿನಲ್ಲಿ ಸೂಪರ್ ಮ್ಯಾನ್ ನಾವೆಲ್ಸ್  ಎಂದರೆ ಸ್ಪೈಡರ್ ಮ್ಯಾನ್, ಬ್ಯಾಟ್ಸ್‌ಮನ್‌ ಮಾರ್ವೆಲ್ ಸೀರೀಸ್ ಮುಂತಾದ ಬಹಳ ಜನಪ್ರಿಯ ಕಾಮಿಕ್ ಪುಸ್ತಕಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ವಿಷಯಗಳು ಎಲ್ಲರಿಗೂ ಚಿಕ್ಕಂದಿನಿಂದ ಚಿರಪರಿಚಿತವಾದ್ದರಿಂದ ಹೆಚ್ಚಾಗಿ ಎಲ್ಲಾ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಅವರವರ ಬಾಲ್ಯದಲ್ಲಿ ಈ ಕಾಮಿಕ್ ಪುಸ್ತಕಗಳು ಎಷ್ಟು ಮುಖ್ಯವಾದ ಪಾತ್ರ ವಹಿಸಿದವೆಂದು  ಹಾಗೂ ಈ ಕಾಮಿಕ್ ಪುಸ್ತಕಗಳ visual version ಎಂದರೆ ಮಾರ್ವೆಲ್ ಸೀರೀಸ್, ಮೂವೀಸ್, ಕಾಮಿಕ್ ಪುಸ್ತಕ ಪ್ರೇರಿತ ಟಿ ವಿ ಶೋಗಳು ಅವರ ಬಾಲ್ಯ  ಮತ್ತು ಇಮ್ಯಾಜಿನೇಷನ್ ಗಳ ಮೇಲೆ ಎಷ್ಟು ಪರಿಣಾಮ ಬೀರಿತ್ತೆಂದು ಹೇಳುತ್ತಿದ್ದರು. ನಾನು  ಒಂದು ಬದಿಯಲ್ಲಿ ಕುಳಿತು ಈ ಎಲ್ಲವನ್ನು ಕುತೂಹಲ ಮತ್ತು ಆಶ್ಚರ್ಯದಿಂದ ನೋಡುತ್ತಿದ್ದೆ.  ನಾನು ಏಕೆ ಅವರು ಮಾತನಾಡುತ್ತಿರುವ ಯಾವುದನ್ನೂ ನೋಡಿಲ್ಲ? ಯಾಕೆ ಎಲ್ಲ ಮಕ್ಕಳ ಬಾಲ್ಯದ ಮುಖ್ಯ ಭಾಗವಾಗಿರುವ ಈ ಕಾಮಿಕ್ ಗಳು, ಕಾರ್ಟೂನ್ ಗಳು ನನ್ನ ಬಾಲ್ಯದಲ್ಲಿ ಇರಲಿಲ್ಲ? ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತಿದ್ದೆ.

ಹೀಗೇ ಯೋಚಿಸುತ್ತಾ ನನ್ನ ಬಾಲ್ಯ ಹೇಗಿತ್ತೆಂದು ನೆನೆದು ಕೊಳ್ಳುತ್ತಿದ್ದೆ. ಹೌದು ನಾನು ಈ ಯಾವ ಜನಪ್ರಿಯ ಕಾಮಿಕ್ ಪುಸ್ತಕಗಳನ್ನಾಗಲಿ, ಟಿವಿ ಶೋಗಳನ್ನಾಗಲಿ ನೋಡಿಲ್ಲ. ನನ್ನ ಬಾಲ್ಯ ನೆನೆಸಿಕೊಂಡರೆ ಬಹುವಾಗಿ ಕಣ್ಣು ಮುಂದೆ ಬರುವುದು ನಾಟಕಗಳು, ನೃತ್ಯ, ಸಂಗೀತ. ಹಾಗೂ ಪುಸ್ತಕಗಳೆಂದರೆ ಮಲೆಗಳಲ್ಲಿ ಮದುಮಗಳು, ತಲೆಮಾರು, ತೊತ್ತೊ ಚಾನ್ ಮುಂತಾದ ಕಾದಂಬರಿಗಳು. ನಾನು ಟಿವಿಗಿಂತ ಹೆಚ್ಚಾಗಿ ನೋಡಿರುವುದು ನಾಟಕವನ್ನು. ಕೆಲವು ನಾಟಕಗಳನ್ನಂತು ಮತ್ತೆ ಮತ್ತೆ ಏಳೆಂಟು ಬಾರಿ ನೋಡಿರುತ್ತಿದ್ದೆ. ನನ್ನ ಅಪ್ಪ ಅಮ್ಮ ಕಲಾವಿದರಾದುದರಿಂದ ನಮ್ಮ ಮನೆಯ ವಾತಾವರಣ ಎಲ್ಲರ ಮನೆಗಳಿಗಿಂತ ತುಂಬಾ ಬೇರೆಯಾಗಿತ್ತು.

ಮನೆಯಲ್ಲಿಯೇ ಥಿಯೇಟರ್ ಕ್ಲಾಸ್, ಡಾನ್ಸ್ ಕ್ಲಾಸ್, ಸಂಗೀತ ಕ್ಲಾಸ್ ಗಳು ನಡೆಯುತ್ತಿದ್ದವು. ಜೊತೆಗೆ ಒಂದು ಪುಟ್ಟ ಲೈಬ್ರರಿಯೂ ಇತ್ತು.  ಮನೆಯಲ್ಲಿ ಪುಸ್ತಕಗಳ ಬಗೆಗಿನ ಚರ್ಚೆ, ಮತ್ತು ನನಗೆ ಪ್ರತಿದಿನ  ಕಥೆಗಳನ್ನು ಹೇಳಿ ಮಲಗಿಸುತ್ತಿದ್ದ ಅಕ್ಕ… ಹೀಗೆ, ಈ ಎಲ್ಲವೂ ಬಹಳ ವಿಭಿನ್ನವಾದ ವಾತಾವರಣವನ್ನು ನನ್ನ ಸುತ್ತ ಸೃಷ್ಟಿಸಿತ್ತು.

ಸ್ಕೂಲ್ ? ಓ… ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ನನಗೆ ಹೆಚ್ಚಾಗಿ ಶಾಲೆಗೆ ಹೋದ ನೆನಪೇ ಇಲ್ಲ. ಯಾವಾಗಲೂ ಅಪ್ಪ ಅಮ್ಮ ಎಲ್ಲೇ ಹೊರಟರು ನಾನು ಅವರ ಬಾಲದಂತೆ ಎಲ್ಲಾ ಕಡೆಗೂ ಹೋಗುತ್ತಿದ್ದೆ. ನಾಟಕ ನೋಡಲೆಂದೋ ಅಥವಾ ಯಾವುದೋ ನನಗೆ ಆ ವಯಸ್ಸಿನಲ್ಲಿ ಅರ್ಥವಾಗದ ಸೆಮಿನಾರ್ ಅಟೆಂಡ್ ಮಾಡಲೆಂದೋ ಒಂದಲ್ಲ ಇನ್ನೊಂದು ಕಾರಣದಿಂದ ಯಾವಾಗಲೂ  ಶಾಲೆಗೆ ರಜೆ ಹಾಕುತ್ತಿದ್ದೆ.  ಇದೇ ಕಾರಣಕ್ಕೆ ನನ್ನ ಅಪ್ಪ ಅಮ್ಮ ಬಹಳ ಜನಗಳ ಹತ್ತಿರ “ನೀವು ಹೀಗೆ ಈ ಮಗುವನ್ನು ಹಾಳು ಮಾಡಿ ಬಿಡುತ್ತೀರಾ” ಎಂದು ಹೇಳಿಸಿ ಕೊಂಡುದೂ ಇದೆ. ಹಾಗಂತ ನಾನು ಶಾಲೆಯಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. ಜೊತೆಗೆ ಶಾಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಭಾಷಣ ಏನೂ ನಡೆದರೂ ಗೌತಮಿ ಭಾಗವಹಿಸುವುದು ಖಂಡಿತವಾದ್ದರಿಂದ, ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೂ ನಾನು ಚಿರಪರಿಚಿತಳು. ಹೀಗೆ, ನನ್ನ ಬಾಲ್ಯ ಬೇರೆ ಮಕ್ಕಳಿಗಿಂತ ಭಿನ್ನವಾಗಿದ್ದರಿಂದ ನನಗೆ ಕ್ಲಾಸಿನಲ್ಲಿ ಚರ್ಚಿಸುತ್ತಿದ್ದ ಯಾವುದೇ ಕಾಮಿಕ್ ಪುಸ್ತಕಗಳಾಗಲಿ, ಮೂವಿಗಳಾಗಲಿ ಹೆಚ್ಚಾಗಿ ಪರಿಚಯವಿರಲಿಲ್ಲ.

ನನ್ನ ಕಾಲೇಜಿನ ಸಹಪಾಠಿಗಳ ಜೊತೆಗೆ ನನ್ನ ಬಾಲ್ಯವನ್ನು ಹೋಲಿಸಿದರೆ ಬಹಳ ವ್ಯತ್ಯಾಸವಿದೆ. ಇದೇ ರೀತಿ ನಮ್ಮ  ಆಸಕ್ತಿಗಳು ಮತ್ತು ವ್ಯಕ್ತಿತ್ವ ಕೂಡ ನಮ್ಮ ಬಾಲ್ಯ, ಬೆಳೆದ ವಾತಾವರಣ, ನಮ್ಮ ಸುತ್ತಲಿನ ಜನ ಮತ್ತು  ಅವರ ವಿಚಾರಗಳನ್ನು ಅವಲಂಬಿಸಿರುತ್ತದೆ.  ಉದಾಹರಣೆಗೆ- ನಾನು ಹಾಗೂ ನನ್ನ ಸಹಪಾಠಿಗಳು ಒಂದೇ ವಿಷಯವನ್ನು ಓದುತ್ತಿದ್ದರೂ ಪ್ರತಿಯೊಬ್ಬರ ಗ್ರಹಿಕೆ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಒಂದೇ ವಿಷಯವನ್ನು ಚರ್ಚಿಸುತ್ತಿದ್ದರು ಒಬ್ಬೊಬ್ಬರ ಅಭಿಪ್ರಾಯ ವಿಭಿನ್ನವಾಗಿರುತ್ತದೆ. ಹೀಗೆ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ, ಆಸಕ್ತಿ, ಹಾಗು ದೃಷ್ಟಿಕೋನಗಳ ಮೇಲೆ  ಅವರು ಬೆಳೆದಿರುವ ಪರಿಸರದ ಮತ್ತು  ಓದುವ ವಿಷಯಗಳ ಪ್ರಭಾವ ಬಹಳ ಗಾಢವಾಗಿರುತ್ತದೆ. ನಮ್ಮ ಸುತ್ತಲಿನ ಪರಿಸರ ನಮ್ಮ ವ್ಯಕ್ತಿತ್ವವನ್ನು ಮತ್ತು ಯೋಚನೆಗಳನ್ನು ಕಟ್ಟುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ನಾವು ಯಾವ ಸಬ್ಜೆಕ್ಟ್ ನಲ್ಲಿ ಮತ್ತು ಸ್ಟ್ರೀಮ್ (streem)ನಲ್ಲಿ ಆಸಕ್ತಿ ವಹಿಸುತ್ತೇವೆ ಎನ್ನುವುದು ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿರುತ್ತದೆ. ಅದನ್ನು materialistic ಆಗಿ ನೋಡುವುದು ಅಷ್ಟು ಸರಿಯಲ್ಲ ಅನ್ನಿಸುತ್ತದೆ. ಎಲ್ಲರಿಗೂ ಉದ್ಯೋಗಾವಕಾಶದ ಪ್ರಶ್ನೆ ಬಂದೇ ಬರುತ್ತದೆ. ಆದರೆ ನಾವು ಆಸಕ್ತಿ ಇಲ್ಲದ ವಿಷಯವನ್ನು ಕೇವಲ ಕೆಲಸಕ್ಕಾಗಿ ಇಷ್ಟವಿಲ್ಲದೆ ಕಷ್ಟಪಟ್ಟು ಓದಿದರೆ ಏನು ಪ್ರಯೋಜನ. ದುಡ್ಡು ಬರಬಹುದು ಜೀವನ ಕಂಫರ್ಟೆಬಲ್ (comfortable) ಆಗಿ ಇರಬಹುದು ಆದರೆ ಜೀವನದಲ್ಲಿ ಖುಷಿ ಮತ್ತು ಸಂತೃಪ್ತಿ ಕೂಡ  ಮುಖ್ಯವಲ್ಲವೇ?

ಗೌತಮಿ ತಿಪಟೂರು

ಬೆಂಗಳೂರಿನ ಕ್ರೈಸ್ಟ್‌ ಯೂನಿವರ್ಸಿಟಿಯಲ್ಲಿ ‌ʼಲಿಬರಲ್‌ ಆರ್ಟ್ಸ್ʼ ಓದುತ್ತಿದ್ದಾರೆ.

ಮಾತಿನ ಮಲ್ಲರ ಪಂಚಾಯತಿಕೆ
ಅವರಿಬ್ಬರೂ ಐದೇ ನಿಮಿಷಕ್ಕೆ ಅದೆಷ್ಟೋ ವರ್ಷಗಳಿಂದ ಪರಿಚಿತರೆಂಬಂತೆ ಮಾತಾಡುತ್ತಿದ್ದರು. ಬಸ್‌ನಲ್ಲಿ ಇದ್ದವರಿಗೆ ಒಂದು ರೀತಿ ಬಿಟ್ಟಿ ಸಮಾಚಾರ ಕೇಳಿದ ಭಾವ. ನಮಗೋ ನಮ್ಮ ಚೆಂದದ ನಿದ್ದೆ ಹಾಳಾಯಿತು ಎನ್ನುವ ಕೋಪ. ಅವರು ಯಾರು? ಕುಂದಾಪುರದ ನವ್ಯಶ್ರೀ ಶೆಟ್ಟಿ ಬರೆದಿರುವ ಈ ಬರಹ ಓದಿ…

ನಾವು ನಮ್ಮ ನಿತ್ಯದ ಜೀವನದಲ್ಲಿ ಹಲವು ಬಾರಿ ಭಿನ್ನ ವಿಭಿನ್ನ ಕಥೆಗಳಿಗೆ ಸಾಕ್ಷಿಯಾಗುತ್ತೇವೆ.  ಕಥೆಯೆಂದರೆ ನಾವು ಪುಸ್ತಕದಲ್ಲಿ ಓದುವ ಕಥೆಗಳೋ, ಅಥವಾ ನಮ್ಮ ಕಾಲ್ಪನಿಕ ಕಥೆಗಳೋ ಮಾತ್ರವಲ್ಲ. ನಮ್ಮ ನಿತ್ಯದ ಜೀವನದಲ್ಲಿ ನಡೆಯುವ, ನಮಗೆ ಕೊಂಚ ಭಿನ್ನ ಎನಿಸುವ ಘಟನೆಗಳು ಕೂಡ ಒಂದರ್ಥದಲ್ಲಿ ನನ್ನ ಪ್ರಕಾರ ಕಥೆಗಳೇ. ಕೆಲವೊಮ್ಮೆ ಅಂತಹ ಘಟನೆಗಳೇ ಬರಹ ರೂಪಕ್ಕೆ ಇಳಿದರೆ, ಇನ್ನೂ ಕೆಲವೊಮ್ಮೆ ಅವು ನಮ್ಮ ಮನಸ್ಸಿನಲ್ಲಿಯೇ ಹಾಗೆಯೇ ಅಚ್ಚೊತ್ತಿರುತ್ತವೆ..

ನಿತ್ಯದ ಜೀವನದಲ್ಲಿ ನಮಗೆ ಕೆಲವೊಬ್ಬರು ಕಥೆಯಾದರೆ, ಇನ್ನೂ ಕೆಲವರಿಗೆ ನಾವು ಕಥಾ ವಸ್ತು ಆಗುತ್ತೇವೆ. ಕಥೆಗೆ ಇಂತಹದೇ ಅನ್ನುವ ವ್ಯಾಖ್ಯಾನವಿಲ್ಲ. ಮೂರ್ತರೂಪ ಕೂಡ ಇಲ್ಲ. ಕಥೆಯನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ, ಅದನ್ನು ಹೇಗೆ ವ್ಯಾಖ್ಯಾನಿಸಬೇಕು ಅನ್ನುವುದು ನಮ್ಮ ಇಚ್ಛೆ.

ʼಕಥೆʼ ಈ ಪದವನ್ನು ನಾವು ನಿತ್ಯ ಹಲವು ಬಾರಿ ಉಪಯೋಗಿಸುತ್ತೇವೆ. “ಅವನೊಬ್ಬ ಎಷ್ಟು ಕಥೆ ಹೇಳುತ್ತಾನೆ, “ಕಥೆ ಶುರು ಮಾಡಿದ”  “ಸಾಕು ಮಾರಾಯ್ತಿ ನಿನ್ನ ಕಥೆ” ಇಂತಹ ಸಾಲುಗಳನ್ನು ನಾವು ಹಲವು ಬಾರಿ ಹೇಳಿರುತ್ತೇವೆ. ನಮ್ಮ ಆಡು ಮಾತಿನಲ್ಲಿ ಬರುವ ಕಥೆಗಳು, ನಾವು ಪುಸ್ತಕದಲ್ಲಿ ಓದಿದ ಕಥೆಗಳು ಎಲ್ಲವೂ ಒಂದೇ ರೀತಿಯಲ್ಲ. ಸಾಮಾನ್ಯವಾಗಿ ನಾವು ಆಡುಮಾತಿನಲ್ಲಿ ಹೇಳುವ ಕಥೆ ಎನ್ನುವ ಪದವನ್ನು ‘ಜಾಸ್ತಿ ಮಾತನಾಡುವವರನ್ನು’ ‘ತಮ್ಮ ಬಗ್ಗೆ ಪುರಾಣಗಳನ್ನು ಹೇಳುವವರʼ ಕುರಿತಾಗಿ ಹೇಳುವುದೇ ಜಾಸ್ತಿ. ಇಂತಹ ಕಥೆಗಾರರು ನಮಗೆ ನಿತ್ಯ ಹಲವು ಕಡೆ ಕಾಣ ಸಿಗುತ್ತಾರೆ. ಬಸ್ ಸ್ಟ್ಯಾಂಡ್, ಮಾರ್ಕೆಟ್, ಹೋಟೆಲ್, ಸಮಾರಂಭಗಳಲ್ಲಿ ಇಂತಹ ಕಥೆಗಾರರಿಗೆ ಕಮ್ಮಿಯಿಲ್ಲ.

ಒಮ್ಮೆ ನಡು ಮಧ್ಯಾಹ್ನ ಉಡುಪಿ ಸರ್ವಿಸ್ ಬಸ್ ಸ್ಟ್ಯಾಂಡ್ ಬಸ್ ಹತ್ತಿದ್ದೆ. ಜೂನಿಯರ್ ಅನುಪಮಾ ಕೂಡ ಜೊತೆಗಿದ್ದಳು. ಬಸ್ ಹತ್ತಿದ ಕೂಡಲೇ ನಿದ್ದೆಯ ಮಂಪರು ಆವರಿಸಿತ್ತು. ಆ ಹೊತ್ತಿಗೆ ಹಿಂಬದಿ ಸೀಟಿನಲ್ಲಿ ಕೂತಿದ್ದ ಇಬ್ಬರ ಧ್ವನಿ ರೇಡಿಯೋ ಸ್ಟೇಷನ್ ರೀತಿ ಒಮ್ಮಲೇ ಪಟ ಪಟ ಅಂತ ಆರಂಭವಾಯಿತು. ಒಬ್ಬ ಮಧ್ಯ ವಯಸ್ಸಿನ ಯುವಕ ಹಾಗೂ ಇನ್ನೊಬ್ಬರು 50-60 ರ ಪ್ರಾಯದ ಮಹಿಳೆ. ಬಸ್ ಹತ್ತುವ ಮುನ್ನ ಇಬ್ಬರೂ ಪರಸ್ಪರ ಅಪರಿಚಿತರು. ಆದರೆ ಬಸ್ ಹತ್ತಿದ ಮೇಲೆನೇ ಶುರುವಾಗಿದ್ದು ಅವರಿಬ್ಬರ ಮಾತುಕತೆ, ಪುರಾಣ.

ಎಷ್ಟೋ ಬಾರಿ ನಮಗೆ ಇನ್ನೊಬ್ಬರ ವಿಷಯ ಯಾಕೆ? ನಾವು ತುಂಬಾ ಒಳ್ಳೆಯವರಾಗಬೇಕು ಅಂದುಕೊಳ್ಳುತ್ತೇವೆ. ಆದರೆ, ಇಂತಹ ಕಥೆ ಪುರಾಣ ಬೇಡ ಬೇಡ ಎಂದರೂ ಬಹಳ ಬೇಗ ನಮ್ಮ ಕಿವಿಗೆ ಬಂದು ಬೀಳುತ್ತದೆ. ಅವರಿಬ್ಬರೂ ಐದೇ ನಿಮಿಷಕ್ಕೆ ಅದೆಷ್ಟೋ ವರ್ಷಗಳಿಂದ ಪರಿಚಿತರೆಂಬಂತೆ ಮಾತಾಡುತ್ತಿದ್ದರು. ಮಾತಾಡ್ತಾ ಮಾತಾಡ್ತಾ ಹಳ್ಳಿಯ ಚೆಂದದ ಚಿತ್ರಣ, ಊರು-ಕೇರಿ, ನಂಬಿದ ದೇವರ ಮನೆ, ಆಸ್ತಿ, ಮನೆಯವರು, ಮನೆ ಮಂದಿ, ಹವ್ಯಾಸ, ಅಭ್ಯಾಸ ಎಲ್ಲವೂ ಅವರ ಮಾತು ಕತೆಯಲ್ಲಿ ಬಂದು ಹಾದು ಹೋಗಿತ್ತು. ಬಸ್‌ನಲ್ಲಿ ಇದ್ದವರಿಗೆ ಒಂದು ರೀತಿ ಬಿಟ್ಟಿ ಸಮಾಚಾರ ಕೇಳಿದ ಭಾವ. ನಮಗೋ ನಮ್ಮ ಚೆಂದದ ನಿದ್ದೆ ಹಾಳಾಯಿತು ಎನ್ನುವ ಕೋಪ. ಆದರೂ ಒಂದು ರೀತಿ ಮಧ್ಯಾಹ್ನದ ಮನೋರಂಜನೆಯಲ್ಲಿ ಗಂಟೆಗಳ ಹಾದಿ ಕ್ರಮಿಸಿದ್ದೂ ಗೊತ್ತಾಗಿಲ್ಲ! ಗಂಟೆಯಾದರೂ ಅವರ ಕಥೆ ನಿಂತಿರಲಿಲ್ಲ ಅನ್ನುವುದು ಬೇರೆ ಮಾತು.

ಇಂತಹ ಹಲವಾರು ಕಥೆಗಾರರು ನಮಗೆ ನಿತ್ಯ ಕಾಣ ಸಿಗುತ್ತಾರೆ. ಎಲ್ಲರನ್ನೂ ನೆನಪಿನಲ್ಲಿಟ್ಟುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಆದರೆ ಇಂತಹ ಕೆಲವು ಘಟನೆಗಳು ಎಂದಿಗೂ ನೆನಪಿನಲ್ಲಿ ಉಳಿದು ಬಿಡುತ್ತವೆ. ಇಂತಹ ಘಟನೆಗಳು ಹೆಚ್ಚಾಗಿ ಕಂಡು ಬರುವುದು ಹಳ್ಳಿಯ ಭಾಗಗಳಲ್ಲಿ. ಕೆಲವೊಮ್ಮೆ ಕಿರಿ ಕಿರಿಯಾದರೂ, ಹಳ್ಳಿಯ ಮುಗ್ಧ ಮನಸ್ಸುಗಳ ಈ ಮಾತು ಕೇಳುವುದೇ ಚೆಂದ. ತಮ್ಮ ಅಕ್ಕ ಪಕ್ಕ ಯಾರಿದ್ದಾರೆ ಅನ್ನುವ ವಿಷಯ ಅವರಿಗೆ ಅಷ್ಟೇನೂ ದೊಡ್ಡ ಸಂಗತಿಯಲ್ಲ. ನಮ್ಮ ಜೊತೆ ಮಾತನಾಡುವವರ ಜೊತೆ ನಾವು ಮಾತನಾಡಬೇಕು ಎನ್ನುವುದಷ್ಟೇ ಅವರಿಗೆ ಗೊತ್ತು. ಅದು ಅವರ ಒಳ್ಳೆಯತನ. ನಾವು ಕೂಡ ಸಮಯ ಸಿಕ್ಕಾಗ ಇಂತಹ ಹಳ್ಳಿಯ ಜೀವಗಳ ಜೊತೆ ಮಾತನಾಡಬೇಕು. ಅವರ ಜೊತೆ ಮಾತನಾಡುತ್ತಾ ಹೋದಂತೆ ನಮಗೂ ಒಳ್ಳೆಯ ಕಥೆಗಳು ಸಿಗಬಹುದು. ಹಾಗಂದ ಮಾತ್ರಕ್ಕೆ ಪೊಳ್ಳು ಮಾತುಗಳನ್ನಾಡುವುದಲ್ಲ.

ಪರಸ್ಪರ ಸಂವಹನ ನಮ್ಮ ಜೀವನದ ಬಹುಮುಖ್ಯ ಭಾಗ. ಪರಿಚಿತರು ಅಪರಿಚಿತರಾಗುವುದು, ಅಪರಿಚಿತರು ಪರಿಚಿತರಾಗುವುದು ಹಲವು ಬಾರಿ ನಮ್ಮ ಮಾತುಗಳಿಂದ. ಹಾಗಾಗಿ ನಾವಾಡುವ ಮಾತು ಕೆಲವೊಮ್ಮೆ ಮಹತ್ವದ ಸ್ಥಾನ ವಹಿಸುತ್ತದೆ. ಮನುಷ್ಯ ಸಂಘ ಜೀವಿ. ನಾವು ಸಮಾಜದ ಜೊತೆಗೆ ನಂಟು ಬೆಸೆದುಕೊಂಡು ಬೆಳೆದು ಬಂದಿದ್ದೇವೆ. ಈ ಹಾದಿಯಲ್ಲಿ ಹಲವರ ಪರಿಚಯವಾಗುತ್ತದೆ.  ಕೆಲವರು ಸದಾ ನೆನಪಿನಲ್ಲಿ ಉಳಿಯುವವರು, ಇನ್ನೂ ಕೆಲವರು ಅರೆ ಕ್ಷಣಕ್ಕೆ ನೆನಪಿನಿಂದ ಮರೆಯಾಗುವವರು. ಆದರೆ ಎಲ್ಲರನ್ನೂ ಸಂಧಿಸುವುದು ನಮ್ಮ ಮಾತುಗಳು.

ಎಲ್ಲರೂ  ಮಾತಿನ ಮಲ್ಲರು. ಕೆಲವರು ಆತ್ಮೀಯರ ಜೊತೆ ಮಾತ್ರ ಮಾತನಾಡುತ್ತಾರೆ. ವಿಷಯಗಳನ್ನು ಹಂಚಿಕೊಂಡು, ತಮ್ಮವರ ಮಾತುಗಳಿಗೆ ಕಿವಿಯಾಗುತ್ತಾರೆ. ಇನ್ನೂ ಕೆಲವರು ಪರಿಚಯ ಇರದಿದ್ದರೂ ಮಾತನಾಡಿ ಸ್ನೇಹ ಸಂಪಾದನೆ ಮಾಡುತ್ತಾರೆ. ಹೊಸ ಕಥೆಗಳನ್ನು ಆಲಿಸಿ ಖುಷಿಯಾಗುತ್ತಾರೆ.

ಅತಿಯಾದ ಮೌನ ನಮಗೆ ಕೆಲವೊಮ್ಮೆ ಅಸಹನೀಯ. ಅದೇ ರೀತಿ ಅತಿಯಾದ ಮಾತು ಕೂಡ. ವಟ ವಟ ಮಾತನಾಡುವವರು ಕೆಲವೊಮ್ಮೆ ನಮಗೆ ಕಿರಿ ಕಿರಿ ಅನಿಸಬಹುದು. ಇನ್ನೂ ಕೆಲವೊಮ್ಮೆ ಅವರ ಮಾತುಗಳು ನಮ್ಮಲ್ಲಿ ಏನೋ ಒಂದು ಹೊಸ ಬದಲಾವಣೆಗೆ ನಾಂದಿ ಕೂಡ ಹಾಡಬಹುದು. ಹಾಗಾಗಿ ನಮ್ಮ ಮಾತಿಗೆ ಅದೇನೋ ಶಕ್ತಿಯಿದೆ. ನಮ್ಮ ಮಾತು ಮಾಧುರ್ಯದಂತೆ ಇರಬೇಕು. ಇನ್ನೊಬ್ಬರಿಗೆ ತೊಂದರೆ ಕೊಡುವ ಮಟ್ಟಿಗೆ ಅದು ಇರಬಾರದು. ಮಾತಿನ ಮಲ್ಲರ ಪಂಚಾಯತಿಕೆ ಯಾವತ್ತೂ ಅರ್ಥಪೂರ್ಣ ಮಾತುಗಳ ವೇದಿಕೆಯಾಗಿರಬೇಕೇ ಹೊರತು ಗಾಸಿಪ್‌ಗಳದ್ದಲ್ಲ ಎಂಬುದು ಬಹಳ ಮುಖ್ಯ.

ನವ್ಯಶ್ರೀ ಶೆಟ್ಟಿ

ಉಡುಪಿಯ ಎಂ ಜಿ ಎಮ್‌ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪೂರೈಸಿ ಇದೀಗ ಬರವಣಿಗೆಯತ್ತ ಹೆಜ್ಜೆ ಇಟ್ಟಿದ್ದಾರೆ.

ಮಾನವ ರೂಪಿಸಿದ ಕ್ರೂರ ವ್ಯವಸ್ಥೆಯ ಫಲಿತಾಂಶ- ಪರಿಸರ ನಾಶ
ಗುಬ್ಬಚ್ಚಿಯ ನೀತಿ ಕತೆಯೊಂದನ್ನು ಹೇಳುತ್ತಾ ಪರಿಸರ ನಾಶವನ್ನ ನಿಲ್ಲಿಸಿ ಅದನ್ನು ಉಳಿಸಿ ಕೊಳ್ಳುವ ಕೆಲಸಕ್ಕೆ ಮುಂದಾಗದೆ ಇದ್ದರೆ ಆ ಗುಬ್ಬಚ್ಚಿಯಂತೆ ಆಸರೆ, ಆಹಾರ ಇಲ್ಲದೆ ಅಲೆದಲೆದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ ಎಂಬುದನ್ನು ನೆನಪಿಸಿದ್ದಾರೆ ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಮುರುಳಿಮೋಹನ.ಆರ್

ಒಂದು ಗುಬ್ಬಚ್ಚಿಯು ಬೃಹತ್ ನಗರದ ಮರ ಒಂದರಲ್ಲಿ ತನ್ನ ವಾಸ್ತವ್ಯವನ್ನು ಹೂಡಿತ್ತು. ಕಾಲ ಕಳೆದಂತೆ ಆ ಗುಬ್ಬಚ್ಚಿ ಕೆಲವು ಮರಿಗಳಿಗೆ ಜನ್ಮ ನೀಡಿತ್ತು. ಆಹಾರಕ್ಕಾಗಿ ಹಾತೊರೆಯುವಂತಹ ಕಾಲವದು. ತಾಯಿ ಗುಬ್ಬಚ್ಚಿಯು ತನ್ನ ಮಕ್ಕಳನ್ನು ಸಂರಕ್ಷಿಸಲೆಂದು ಅನೇಕ ಕಡೆ ಆಹಾರ ಹುಡುಕುತ್ತಾ ತನ್ನ ಪಯಣ ಬೆಳೆಸಿ ಒಂದಿಷ್ಟು ಆಹಾರವನ್ನು ಸಂಗ್ರಹಿಸಿ ತಂದಿತು. ಅಷ್ಟರಲ್ಲಿ ಆ ಮರಿಗಳಲ್ಲಿ ಕೆಲವು ಮರಿಗಳು ಪ್ರಾಣ ಬಿಟ್ಟಿದ್ದವು. ಕೇವಲ ಒಂದು ಮರಿ ಮಾತ್ರ ಜೀವಂತವಾಗಿತ್ತು. ತಾಯಿ ಗುಬ್ಬಚ್ಚಿಯು ತಂದಂತಹ ಆಹಾರವನ್ನು ಆ ಮರಿಗೆ ನೀಡಿ ತನ್ನ ಆಹಾರಕ್ಕಾಗಿ ಮತ್ತೆ ಚೀರ ತೊಡಗಿತು.

ಅಲ್ಲೇ ಅದೇ ಮರದ ಕೆಳಗೆ ನಿಂತಿದ್ದಂತಹ ವ್ಯಕ್ತಿಗೆ ಗುಬ್ಬಚ್ಚಿಯ ಕೂಗು ಕೇಳಲಿಲ್ಲ. ಪಕ್ಷಿಯ ಭಾಷೆ ಮಾನವನಿಗೆ ಅರ್ಥವಾದೀತೇ…? ಎಷ್ಟೇ ಅದು ಚೀರಿದರೂ ಗುಬ್ಬಚ್ಚಿಯ ಕಡೆ ಗಮನ ಕೊಡದೆ ಅಲ್ಲಿಂದ ಮನುಷ್ಯ ಹೊರಟು ಹೋದನು. ಮತ್ತು ಅದೇ ಮರದ ಕೆಳಗೆ ಮತ್ತೊಬ್ಬ ಮನುಷ್ಯನ ಆಗಮನವಾಯಿತು. ಆತನು ತನ್ನ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಯಾರೊಂದಿಗೋ ಸಂಭಾಷಣೆ ಮಾಡುತ್ತಿರುವುದನ್ನು ಗುಬ್ಬಚ್ಚಿಯು ಕಂಡಿತು. ಚೀರಿ ಚೀರಿ ಮೊಬೈಲ್ ಬಳಸಬೇಡಿ ನಾನು ಸಾಯುತ್ತೇನೆ ಎಂದು ತನ್ನ ಅಳಲನ್ನು ತೋಡಿಕೊಂಡರೂ ಆ ವ್ಯಕ್ತಿಗೆ ಅದು ಅರ್ಥವಾಗದಂತಹ ಪರಿಸ್ಥಿತಿ. ಅಷ್ಟರಲ್ಲಿ ಅಲ್ಲಿಗೆ ಧಿಡೀರನೆ ಮತ್ತೊಬ್ಬ ವ್ಯಕ್ತಿಯು ಕೈಯಲ್ಲಿ ಗರಗಸವನ್ನು ಹಿಡಿದುಕೊಂಡು ಬಂದು ನಿಂತನು.

ಆ ಗರಗಸ ಹಿಡಿದ ವ್ಯಕ್ತಿಯು ನೋಡ ನೋಡುತ್ತಲೇ ಮರವನ್ನು ಕುಯ್ಯಲು ಬುಡಕ್ಕೆ ಕೈ ಹಾಕಿದ. ಬೃಹತ್ ನಗರದಲ್ಲಿ ರಸ್ತೆಯನ್ನು ಅಗಲೀಕರಣ ಮಾಡುವ ಕೆಲಸ ನಡೆಯುತ್ತಿತ್ತು. ʼಕತ್ತರಿಸಬೇಡಿ. ನಾನು ಈ ಮರದಲ್ಲಿ ವಾಸ ಮಾಡುತ್ತಿದ್ದೇನೆʼ ಎಂದು ಗುಬ್ಬಚ್ಚಿಯು ಚೀರಿ ಚೀರಿ ಹೇಳಿದರೂ ಯಾರಿಗೂ ಅರ್ಥವಾಗದೆ ನೋಡ ನೋಡುತ್ತಲೇ ಮರ ಧರೆಗುರುಳಿತು. ಗುಬ್ಬಚ್ಚಿಯ ಮಗುವೂ ಜತೆಗುರುಳಿತು. ಅಲ್ಲೇ ನಿಂತಿದ್ದ ವ್ಯಕ್ತಿಯು ತನ್ನ ಪಾಡಿಗೆ ಆ ಮರಿಯ ಮೇಲೆ ಕಾಲಿಟ್ಟ. ತನ್ನ ಎಲ್ಲಾ ಮರಿಗಳ ಸಾವಿನಿಂದ ಕಂಗೆಟ್ಟ ಗುಬ್ಬಚ್ಚಿಯು ನನಗೆ ಈ ನಗರದ ಸಹವಾಸವೇ ಬೇಡ, ಎಲ್ಲಾದರೂ ದೂರದ ಸಮೃದ್ಧ ಪ್ರದೇಶಕ್ಕೆ ವಲಸೆ ಹೋಗೋಣ ಎಂದು ನಿರ್ಧರಿಸಿ ತನ್ನ ಪಯಣ ಬೆಳೆಸಿತು.

ಎಲ್ಲಿ ನೋಡಿದರೂ ಬರಗಾಲ. ನೀರಿಗೆ ಹಾಹಾಕಾರ. ಪಯಣ ಬೆಳೆಸುತ್ತಾ ಗುಬ್ಬಚ್ಚಿಯು ದಣಿದಿತ್ತು. ಒಂದೆಡೆ ಅದರ ಕಣ್ಣಿಗೆ ಹಚ್ಚ ಹಸಿರಾದ ಪ್ರದೇಶ ಹಾಗೂ ಝಳ ಝಳನೆ ಪ್ರಶಾಂತವಾಗಿ ಹರಿಯುತ್ತಿರುವ ನೀರು ಕಣ್ಣಿಗೆ ಬಿದ್ದಿತು. ನೀರನ್ನು ಕಂಡಂತಹ ಗುಬ್ಬಚ್ಚಿ ಒಮ್ಮೆಲೇ ತನ್ನ ಎಲ್ಲಾ ದುಃಖವನ್ನು ಮರೆತು ಖುಷಿಯಿಂದ ನೀರಿಗೆ ಜಿಗಿದು ಕುಣಿದು ಕುಪ್ಪಳಿಸುತ್ತಾ ಒಂದೆರಡು ಹನಿ ನೀರನ್ನು ಕುಡಿಯಿತು. ಯಾಕೋ ತಲೆ ಸುತ್ತುತ್ತಾ ಇದೆ ಎಂದು ನೋಡಿದರೆ ಅಲ್ಲಿಯೇ ಪಕ್ಕದಲ್ಲಿ ರೈತನೊಬ್ಬ ತನ್ನ ಗದ್ದೆಗೆ ಕ್ರಿಮಿನಾಶಕವನ್ನು ಸಿಂಪಡಿಸಿ ಉಳಿದಂತಹ ಕ್ರಿಮಿನಾಶಕವನ್ನು ಅಲ್ಲಿಯೇ  ಹರಿಯುತ್ತಿದ್ದಂತಹ ನೀರಿಗೆ ಸುರಿದಿದ್ದ. ಇದನ್ನು ಕುಡಿದಿದ್ದಕ್ಕೆ ನನಗೆ ಈ ಪರಿಸ್ಥಿತಿ ಬಂತು ಎಂದು ತಿಳಿದು ಆ ಗುಬ್ಬಚ್ಚಿಯು ಅಲ್ಲಿಯೂ ನೆಲೆಯೂರಲಾರದೆ ತನ್ನ ಪ್ರಾಣವನ್ನು ಕಳೆದುಕೊಂಡಿತು.

ಬುದ್ಧಿವಂತ ಎಂದು ಹೇಳುವ ಮನುಷ್ಯನ ದುರಾಸೆಯಿಂದ ಕೇವಲ ಗುಬ್ಬಚ್ಚಿ ಒಂದೇ ಪ್ರಾಣ ಕಳೆದುಕೊಂಡಿರುವುದಲ್ಲ. ಬದಲಾಗಿ ಅನೇಕ ಪ್ರಾಣಿ ಪಕ್ಷಿಗಳು ಸೇರಿದಂತೆ ಲಕ್ಷಾಂತರ ಜಲಚರ ಜೀವಿಗಳು ತಮ್ಮ  ಪ್ರಾಣವನ್ನು ಕಳೆದು ಕೊಂಡಿವೆ.

ಪರಿಸರ ತಜ್ಞರು ಈಗಾಗಲೇ ಪ್ರಕೃತಿಗೆ ಅಪಾಯಕಾರಿಯಾಗಿರುವ ಅಂಶಗಳನ್ನು ನಿಷೇಧಿಸುವಂತೆ ಸರ್ಕಾರಗಳಿಗೆ ತಿಳಿಸಿದ್ದಾರೆ. ನಮ್ಮ ಪೂರ್ಣಚಂದ್ರ ತೇಜಸ್ವಿ ಅವರು ಹೇಳುವಂತೆ “ಪ್ರಕೃತಿ ನಮ್ಮ ಭಾಗವಲ್ಲ ನಾವು ಪ್ರಕೃತಿಯ ಭಾಗ”. ಹಾಗಾಗಿ ಪ್ರತಿಯೊಂದು ಕ್ಷಣ ಪ್ರಕೃತಿಯ ಬಗ್ಗೆ ಮತ್ತು ಪ್ರಕೃತಿಯಲ್ಲಿ ಜೀವಿಸುತ್ತಿರುವ ಅಮಾಯಕ ಜೀವರಾಶಿಗಳ ಬಗ್ಗೆ ಕಾಳಜಿ ವಹಿಸುವುದು ಬುದ್ಧಿವಂತ ಮನುಷ್ಯನಾದವನ ಮೂಲ ಜವಾಬ್ದಾರಿ. ಒಂದು ವೇಳೆ ಪರಿಸರ ನಾಶವನ್ನ ನಿಲ್ಲಿಸಿ ಅದನ್ನು ಉಳಿಸಿ ಕೊಳ್ಳುವ ಕೆಲಸಕ್ಕೆ ಮುಂದಾಗದೆ ಇದ್ದರೆ ಆ ಗುಬ್ಬಚ್ಚಿಯಂತೆ ಆಸರೆ, ಆಹಾರ ಇಲ್ಲದೆ ಅಲೆದಲೆದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ; ಮತ್ತದು ಮನುಷ್ಯ ರೂಪಿಸಿದ ಅತಿ ಕ್ರೂರ ವ್ಯವಸ್ಥೆಯ ಅಂತಿಮ ಫಲಿತಾಂಶವೂ ಆಗಿರುತ್ತದೆ.

ಮುರುಳಿಮೋಹನ.ಆರ್

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ

ದೀಪಾವಳಿ ತರದಿರಲಿ ಬದುಕಲ್ಲಿ ಕತ್ತಲೆ..
ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತ, ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು, ಪರಿಸರದ ಮೇಲೆ ಬೀರುವ ಹಾನಿ ಇತ್ಯಾದಿಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ದಿವಾಕರ್‌ ಡಿ.

ಎರಡು ವರ್ಷದಿಂದ ಕೋವಿಡ್‌ ಕಾರಣಕ್ಕೆ ಕಳೆಗುಂದಿದ್ದ ದೀಪಾವಳಿಯು ಈ ಬಾರಿ ಪಟಾಕಿಗಳ ಸದ್ದಿನೊಂದಿಗೆ ಹೆಚ್ಚಿನ ಸಂಭ್ರಮದೊಂದಿಗೆ  ಆಚರಣೆಗೊಂಡಿದೆ. ದೀಪಾವಳಿ ಬಂದಿತೆಂದರೆ ಹೊಸ ಬಟ್ಟೆ ಧರಿಸಿ, ವಿಧ ವಿಧವಾದ ತಿನಿಸುಗಳ ಜೊತೆಗೆ ಮನಸೂರೆಗೊಳ್ಳುವ, ಕಣ್ಣಿಗೆ ಮುದ ನೀಡುವ ಕಿವಿಗಡಚಿಕ್ಕುವ ಪಟಾಕಿ ಹಚ್ಚಿ ಮನೆ ಮಂದಿಯೆಲ್ಲ ಸಂಭ್ರಮಿಸುವುದನ್ನೇ  ಬೆಳಕಿನ ಹಬ್ಬವೆಂದು ಬೀಗುವ ಜನಗಳಿಗೆ ಮಣ್ಣಿನ ಹಣತೆಯಲ್ಲಿ ದೀಪಗಳನ್ನು  ಹಚ್ಚುವುದರ ಮೂಲಕ ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸಬಹುದು ಎಂಬುದು ಗೊತ್ತೇ ಇಲ್ಲವೇನೋ.

ಬೆಳಕಿನ ಹಬ್ಬ ದೀಪಾವಳಿ ಎಲ್ಲರಿಗೂ ತುಂಬಾ ದೊಡ್ಡ ಹಬ್ಬವೇ ಸರಿ  ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಬ್ಬದ ಕೆಲವು ಆಚರಣೆಗಳು ಪರಿಸರಕ್ಕೆ ಹಾನಿಯಾಗಿ ಪರಿಣಮಿಸುತ್ತಿವೆ. ದೀಪಾವಳಿ ಹಬ್ಬದಲ್ಲಿ ಹೊಡೆಯುವ ಪಟಾಕಿಗಳು ವಾಯು ಮತ್ತು ಶಬ್ದಮಾಲಿನ್ಯ ಉಂಟು ಮಾಡುತ್ತವೆ ಎಂದು ಹಲವಾರು ವರ್ಷಗಳಿಂದ ಹಲವು ಪರಿಸರ ತಜ್ಞರು ಹಾಗು ಸರ್ಕಾರಗಳು ಅನೇಕ ಕಾರ್ಯಕ್ರಮಗಳ ಮೂಲಕ ಪ್ರಜೆಗಳಿಗೆ ತಿಳುವಳಿಕೆ ಮೂಡಿಸುತ್ತಿದ್ದರೂ ಅವುಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಅಕ್ಷರಶಃ ಸತ್ಯ. ಪಟಾಕಿಗಳಿಗೆ  ರಾಸಾಯನಿಕ ವಸ್ತುಗಳನ್ನು ಮಿಶ್ರ ಮಾಡುವುದರಿಂದ ಅದು ಮಣ್ಣನ್ನು ಕಲುಷಿತಗೊಳಿಸುತ್ತದೆ  ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಪಟಾಕಿಗಳಿಗೆ ಬಳಸುವ  ರಾಸಾಯನಿಕ ವಸ್ತುಗಳು ಪರಿಸರಕ್ಕೆ ಪೂರಕವಾಗಿಲ್ಲ ಎಂದು ತಿಳುವಳಿಕೆಯಿದ್ದರೂ ಅದನ್ನೆಲ್ಲಾ ಮರೆತು ಕೇವಲ ಒಂದು ದಿನ ಪಟಾಕಿ ಸಿಡಿಸಿದರೆ ಪರಿಸರ ಹಾಳಾಗಿಬಿಡುತ್ತದೆಯೇ ಎಂದು ವಾದಿಸುವ ವಿತಂಡವಾದಿಗಳಿಗೂ ನಮ್ಮಲ್ಲಿ ಕಡಿಮೆ ಇಲ್ಲ.

ದೀಪಾವಳಿಯು ಹೇಗೆ ಬೆಳಕಿನ‌ ಹಬ್ಬವೋ ಹಾಗೇ ಅತ್ಯಂತ ಜಾಗರೂಕತೆಯಿಂದ ಆಚರಿಸಬೇಕಾದ ಹಬ್ಬ ಕೂಡ ಹೌದು‌. ಈ ಹಬ್ಬದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೆ ಅದರಿಂದ ಆಘಾತಕಾರಿಯಾದ, ಜೀವಕ್ಕೆ ಹಾನಿ  ಮಾಡುವ ಅನಾಹುತಗಳು ಕೂಡ ಸಂಭವಿಸಬಹುದು. ಇದಕ್ಕೆ ಸಂಬಂಧಿಸಿದಂತೆ, ಹಬ್ಬದ ದಿನಗಳಲ್ಲಿ ನಿತ್ಯ ರಾತ್ರಿ ಎಂಟು ಗಂಟೆಯಿಂದ ಹತ್ತರವರೆಗೆ ಮಾತ್ರ ಅಂದರೆ ಕೇವಲ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸುತ್ತೋಲೆ ಹೊರಡಿಸಿದೆ. ಜೊತೆಗೆ ಈ ಹಬ್ಬದ ವೇಳೆ ಸುಪ್ರೀಂ ಕೋರ್ಟ್‌ ನೀಡಿದ ನಿರ್ದೇಶನ ಪಾಲಿಸುವಂತೆ ಕೂಡ ಮಂಡಳಿ ಸೂಚಿಸಿದೆ. ಇನ್ನುಳಿದಂತೆ ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು,  ಒಂದು ವೇಳೆ ನಿಗದಿಪಡಿಸಿದ ಸಮಯ ಬಿಟ್ಟು ನಿಷೇಧಿತ ಅವಧಿಯಲ್ಲಿ ಪಟಾಕಿ ಸಿಡಿಸುವುದು ಅಥವಾ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ, ಪಟಾಕಿ ಸಿಡಿಸುವವರು ಆ ಪಟಾಕಿಗಳಿಂದ ಉಂಟಾದ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಹ ಕಟ್ಟುನಿಟ್ಟಾಗಿ ಸೂಚಿಸಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಕೂಡ ನಾಡಿನ ಜನರೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ದ ಹಾಗೂ ವಾಯು ಮಾಲಿನ್ಯ ತಡೆಯೋಣ. 125 ಡೆಸಿಬಲ್‌ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ” ಎಂದು ಕೋರಿಕೊಂಡಿದ್ದಾರೆ.

ಆದರೆ, ಬೆಂಗಳೂರಿನಲ್ಲಿ ಈ ಎಲ್ಲ ಆದೇಶ, ಕೋರಿಕೆಗಳನ್ನು ಧಿಕ್ಕರಿಸಿ ಪರಿಸರ ಸ್ನೇಹಿ ದೀಪಾವಳಿಯ ಬದಲಾಗಿ ಪರಿಸರ ವಿರೋಧಿ ದೀಪಾವಳಿಯನ್ನು ಆಚರಣೆ ಮಾಡಲಾಗಿದೆ. ಜಗತ್ತಿನಲ್ಲಿ ಬೆಂಗಳೂರು ಸಿಲಿಕಾನ್ ಸಿಟಿ, ಅಧಿಕ ಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ ಹೆಚ್ಚಿನ ವಿದ್ಯಾವಂತರು ಹಾಗು ಉದ್ಯಮಿಗಳು ಇರುವ ನಗರವೆಂದು ಗುರುತಿಸಿಕೊಂಡಿದೆ. ಹೀಗೆ ತಿಳುವಳಿಕೆಯುಳ್ಳವರೇ ಅಜ್ಞಾನಿಗಳಂತೆ ಪರಿಸರದ ಬಗ್ಗೆ ಸ್ವಲ್ಪವೂ ಯೋಚಿಸದೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪಟಾಕಿಗಳನ್ನು ಸಿಡಿಸುತ್ತಿದ್ದರೆ‌ ಇವರಿಗೆ ಬುದ್ದಿ ಹೇಳುವವರು ಯಾರು?

ಇದಕ್ಕೆ ಒಂದು ರೀತಿಯಲ್ಲಿ ಸರ್ಕಾರವನ್ನೇ ದೂರಬೇಕಾಗುತ್ತದೆ. 125 ಡೆಸಿಬಲ್ ಗಿಂತ ಅಧಿಕ ಶಬ್ದವನ್ನುಂಟು ಮಾಡುವ ಪಟಾಕಿಗಳನ್ನು ಸಿಡಿಸಬಾರದೆಂದು ಆದೇಶವೇನೋ ತಂದಿದ್ದಾರೆ. ಆದರೆ ಈ ಅಧಿಕ ಶಬ್ದದ ಪಟಾಕಿಗಳನ್ನು ಉತ್ಪಾದನೆ ಹಾಗೂ ಮಾರಾಟ ಮಾಡುವವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಉತ್ಪಾದನೆ ಹಾಗೂ ಮಾರಾಟದ ಮೇಲೆ ಕೇವಲ ತೆರಿಗೆ ವಿಧಿಸಿ ಆದಾಯವನ್ನು ಗಳಿಸುವುದರಲ್ಲೇ ನಿರತವಾಗಿದೆ.

ಪಟಾಕಿಯಿಂದ ಉತ್ಪತ್ತಿಯಾಗುವ ಕಸದ ರಾಶಿ

ಈಗಾಗಲೇ ಬೆಂಗಳೂರಿನ ಸಮೀಪದ ನಂದಿದುರ್ಗದಲ್ಲಿ ಪಟಾಕಿ ಕಿಡಿಯಿಂದ ಅಗ್ನಿ ಅವಘಡ ಸಂಭವಿಸಿ 14 ಕಾರುಗಳು ಬೆಂಕಿಗಾಹುತಿಯಾದರೆ, ಇದೇ ಬೆಂಗಳೂರಿನ‌ ವಿವಿಧ ಸ್ಥಳಗಳಲ್ಲಿ‌  ದೀಪಾವಳಿಗೂ ಹಿಂದಿನ ದಿನವೇ ಪಟಾಕಿ ಅವಘಡಗಳು ಸಂಭವಿಸಿ ಗಾಯಗೊಂಡು ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ 7 ಜನರು ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ರೀತಿಯಲ್ಲಿ ಕಳೆದ ವರ್ಷ ಅಂದರೆ 2021 ರಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಜನರು ದೀಪಾವಳಿಯ ಹಬ್ಬದ ಪಟಾಕಿ ಹಚ್ಚುವ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಗಾಯಗೊಂಡು ಕೆಲವರಿಗೆ ಶಾಶ್ವತವಾದ ಅಂಗ ಊನತೆಯೂ ಸಹ ಉಂಟಾಗಿದೆ ಎಂದು ವರದಿಯಾಗಿದೆ.

ಇಷ್ಟಾದರೂ, ಈ ದೀಪಾವಳಿಯಲ್ಲಿ ಎಲ್ಲವನ್ನೂ ಮರೆತು ಮತ್ತೆ ಪಟಾಕಿ ಸಿಡಿಸುವುದರಲ್ಲೇ ಜನರು ನಿರತರಾದರು. ಪಟಾಕಿ ಹಚ್ಚುವ ವೇಳೆ ಉಂಟಾಗುವ ಅಪಘಾತಗಳ ಬಗ್ಗೆ ಎಲ್ಲರೂ ಜಾಗೃತಿ ವಹಿಸಬೇಕಾದ ಅಗತ್ಯವಿದೆ. ಈ ಪಟಾಕಿ ಅನಾಹುತವು  ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಪೋಷಕರು ಮುಂಜಾಗ್ರತೆ ವಹಿಸೋದು ಒಳ್ಳೆಯದು. ಕಣ್ಣಿಗೆ, ಕಿವಿಗೆ ಅಥವಾ ಇತರ ಅಂಗಗಳಿಗೆ ಏನಾದರೂ ತೊಂದರೆಯಾದರೆ, ಭಾಗಶಃ ಅಥವಾ ಶಾಶ್ವತವಾದ ಅಂಗವೈಕಲ್ಯವು ಸಹ ಉಂಟಾಗಬಹುದಾದ ಸಂದರ್ಭಗಳು ಇರುವುದರಿಂದ ಪೋಷಕರು ಮಕ್ಕಳ ಬಗ್ಗೆ ಎಚ್ಚರ ವಹಿಸಲೇ ಬೇಕು. ಹಾಗೂ ಕೆಲವೊಂದು ಆಕಸ್ಮಿಕ, ಅಹಿತಕರ ಘಟನೆಗಳು ಸಂಭವಿಸಿದರೆ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ನಿರ್ಲಕ್ಷ್ಯ ವಹಿಸಿ ಪಟಾಕಿಗಳನ್ನು ಸಿಡಿಸಿ ಅವಘಡಗಳನ್ನು ಮಾಡುವುದರ ಬದಲಾಗಿ ಆದಷ್ಟು ಪಟಾಕಿ ಸಿಡಿಸದೆ ಪರಿಸರ ಸ್ನೇಹಿ  ಹಬ್ಬ ಮಾಡುವುದು ಎಲ್ಲರ ಆರೋಗ್ಯ ಮತ್ತು ಪರಿಸರಕ್ಕೆ ಒಳ್ಳೆಯದೇ ಅಲ್ಲವೇ?

ಕೊನೆಯಲ್ಲಿ, ಬೆಂಗಳೂರಿನ ಪಕ್ಕದ ಜಿಲ್ಲೆಯಾದ ಕೋಲಾರದಲ್ಲಿ ವಿಭಿನ್ನವಾಗಿ ದೀಪಾವಳಿ ಹಬ್ಬ ಆಚರಿಸಲಾಯಿತು. ಪಟಾಕಿ ಖರೀದಿಸಲು ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಸಸಿ ಕೊಟ್ಟು, ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲಾಗುವ  ಹಾನಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಕಳೆದ ಮೂರು ವರ್ಷಗಳಿಂದಲೂ ಈ ಕಾರ್ಯಕ್ರಮವು ನಡೆದುಕೊಂಡು ಬರುತ್ತಿದೆ.  ಈ ಅರ್ಥಪೂರ್ಣ ಕಾರ್ಯಕ್ರಮವು ಕೇವಲ ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಾಗದೆ ದೇಶದೆಲ್ಲೆಡೆ ಕಾರ್ಯಗತವಾಗಿ ಪರಿಸರ ಉಳಿದು ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧಗಾಳಿ ದೊರಕಲಿ ಎಂಬುದು ನಮ್ಮ ಆಶಯ ಕೂಡ.

ದಿವಾಕರ್ ಡಿ. ಮಂಡ್ಯ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿ.

ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!
ಅಂದು ಆಫ್ ಲೈನ್ ಕ್ಲಾಸಿನ ಮೊದಲ ದಿನ. ಕಾಲೇಜ್ ಶುರುವಾಗಿ ಒಂದೂವರೆ ವರ್ಷವಾಗಿದ್ದರೂ, ಅಂದೇ ಮೊದಲು ನಾವು ಕಾಲೇಜ್  ಕ್ಯಾಂಪಸ್ಸಿಗೆ ಹೋಗಿದ್ದು. ಪ್ರತೀ ದಿನ ಆನ್ ಲೈನ್ ಕ್ಲಾಸಿನಲ್ಲಿ ಒಟ್ಟಿಗೆ ಪಾಠ ಕೇಳುತ್ತಿದ್ದರೂ, ಯಾರೂ ಒಬ್ಬರನ್ನೊಬ್ಬರು  ನೋಡಿರಲಿಲ್ಲ. ಎದುರು ಬದುರು ನಿಂತು ಮಾತನಾಡಿರಲಿಲ್ಲ.

ಅಂದು ಕ್ಲಾಸಿಗೆ ಬಂದ ಎಲ್ಲ ಪ್ರೊಫೆಸರ್ ಗಳು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು. ನಮಗೂ ಕೂಡಾ ಪರಿಚಯ ಮಾಡಿಕೊಳ್ಳಲು ಹೇಳಿದರು. ನಮ್ಮ ಹೆಸರು, ಸ್ಥಳ ಮತ್ತು ಸರ್ವನಾಮ ಹೇಳಿ ಪರಿಚಯ ಮಾಡಿಕೊಳ್ಳಿ ಎಂದು ಹೇಳಿದರು.

“ಸರ್ವನಾಮ”…!  ನಾನು ಮೊದಲ ಬಾರಿಗೆ ಕೇಳುತ್ತಿದ್ದೆ. (ಸರ್ವನಾಮವೆಂದರೆ ನಾಮಪದದ ಬದಲು ಬಳಸುವ ಪದ. ಉದಾಹರಣೆಗೆ ಅವರು, ಅವನು, ಅವಳು, ಅದು, ಇದು ಇತ್ಯಾದಿ) ನನ್ನ ಜೀವನದ ಈ ಹದಿನೆಂಟು ವರ್ಷದಲ್ಲಿ ಎಂದೂ ಯಾರೂ ನಿನ್ನ ಸರ್ವನಾಮವೇನೆಂದು ನನ್ನನ್ನು ಕೇಳಿರಲಿಲ್ಲ . ಹೌದು, ಎಲ್ಲರೂ ಬಾಹ್ಯ ಚಹರೆಗಳನ್ನು ನೋಡಿಯೇ ‘ಏ ಅವಳು ಹುಡುಗಿ, ಅವನು ಹುಡುಗ’ ಎಂದು ಸರ್ವನಾಮವನ್ನು ನಿರ್ಧರಿಸಿಬಿಟ್ಟಿರುತ್ತಾರೆ. ನಾವು ಹೇಗೆ ಕರೆಸಿಕೊಳ್ಳಲು ಇಷ್ಟಪಡುತ್ತೇವೆ ಅಥವಾ ನಮ್ಮನ್ನು ಹೇಗೆ ಗುರುತಿಸಿಕೊಳ್ಳಲು ಬಯಸುತ್ತೇವೆ ಎಂದು ಯಾರೂ ನಮ್ಮನ್ನು ಕೇಳುವುದೇ ಇಲ್ಲ. ಬಾಹ್ಯ ಮಾತ್ರವಲ್ಲದ ‘ಒಳಗಿನ ತನ್ನತನ’ ಏನೆಂದು ಯಾರೂ ಅರಿಯಲು ಪ್ರಯತ್ನಿಸುವುದೇ ಇಲ್ಲ. ಆದ್ದರಿಂದ ಯಾರೂ ಹೀಗೆ ನಿಮ್ಮ ಸರ್ವನಾಮ ಏನೆಂದು  ಕೇಳುವುದೇ ಇಲ್ಲ!

ಕಾಲೇಜಿಗೆ ಸೇರಿದ ಆ ಸಮಯದಲ್ಲಿ ನನಗೂ ಇವೆಲ್ಲ ಹೊಸತು. ಸರ್ವನಾಮವೆಂಬ ಮಾತನ್ನು ಕೇಳಿದ ತಕ್ಷಣ ಮೊದಲಿಗೆ, ಇದರಲ್ಲಿ ಕೇಳುವಂತಹದು ಏನಿದೆ? ಎನಿಸಿತು. ನಂತರ ಎಲ್ಲರೂ ತಮ್ಮ ಪರಿಚಯ ಮಾಡಿಕೊಳ್ಳಲು ಶುರು ಮಾಡಿದಾಗ ಸರ್ವನಾಮ ನಮ್ಮ ಬಾಹ್ಯ ರೂಪದ್ದಲ್ಲ, ಮನಸ್ಸಿನದೆಂದು ತಿಳಿಯಿತು. ಅದು ವ್ಯಕ್ತಿಯ ರೂಪ, ಲಿಂಗ, ಎಲ್ಲವನ್ನು ಮೀರಿರುವುದಾಗಿಯೂ, ತಮ್ಮನ್ನು ‘ಅವನು, ಅವಳು, ಅವರು’, ಎಂದು ಕರೆದುಕೊಳ್ಳುವುದು ಅವರವರ ಮನಸ್ಸಿನ ಇಚ್ಚೆಗೆ ಸಂಬಂಧಿಸಿದ್ದೆಂದು ಅರಿವಾಯಿತು.

ಕ್ಲಾಸಿನಲ್ಲಿ ಎಲ್ಲರೂ ತಮ್ಮ ಸರ್ವನಾಮದೊಂದಿಗೆ ‘ಅವನು, ಅವಳು’, ಹೀಗೆ ಪರಿಚಯ ಮಾಡಿಕೊಳ್ಳುತ್ತಿದ್ದರು. ಒಬ್ಬ ಹುಡುಗಿ ತನ್ನ ಸರ್ವನಾಮ ‘ಅವನು’ ಅಥವಾ ‘ಅವರು’ ಎಂದು ಹೇಳಿದಳು ಮತ್ತೂ ಕೆಲ ವಿದ್ಯಾರ್ಥಿಗಳು ತಾವು ‘ಅವರು’ ಎಂದು ಮಾತ್ರ ಗುರುತಿಸಿಕೊಳ್ಳುವುದಾಗಿ ಹೇಳಿದಾಗ, ನನಗೆ ಆಶ್ಚರ್ಯ! ಇದು ಹೇಗೆ ಸಾಧ್ಯ?

ಅವಳು \ ಅವನು (ಹುಡುಗಿ\ ಹುಡುಗ) ತಮ್ಮನ್ನು (ಅವರು) ಎಂದು ಹೇಗೆ ಮತ್ತು  ಏಕೆ ಗುರುತಿಸಿಕೊಳ್ಳುತ್ತಾರೆ?  ಈ ವಿಷಯಗಳನ್ನೆಲ್ಲ ಅರಿತು ಅರಗಿಸಿಕೊಳ್ಳಲು  ಕೆಲ ದಿನ ಬೇಕಾದರೂ, ನನಗೆ ಹೊಸ ಪ್ರಪಂಚಕ್ಕೆ, ಕಲಿಕೆಗಳಿಗೆ, ತೆರೆದುಕೊಳ್ಳಲು ಕುತೂಹಲ ಮತ್ತು ಖುಷಿ ಇತ್ತು. ಇವೆಲ್ಲದರ ನಡುವೆ ನನ್ನಲ್ಲಿ ಮೂಡಿದ ಪ್ರಶ್ನೆ ಏನೆಂದರೆ, ನಾನು ಇಷ್ಟು ವರ್ಷ ಯಾಕೆ ಇಂತಹ ಮೂಲಭೂತವಾದ ವಿಚಾರಗಳಿಗೆ ಒಡ್ಡಿಕೊಂಡಿಲ್ಲ ಎಂದು!

ಮೊದಲಿಗೆ ಜನರಿಗೆ L G B T Q, Queer ಅಥವಾ ವಿವಿಧ Identity ಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ತಿಳಿದಿದ್ದರೂ, ಸಮಾಜದಲ್ಲಿ ಅವರನ್ನು ಪೂರ್ಣವಾಗಿ ಸ್ವೀಕರಿಸುವ ಮನೋಭಾವವಿಲ್ಲ. ಹಾಗಾಗಿ ಇಂತಹ ವಿಷಯಗಳು ಪ್ರತಿದಿನದ ಜೀವನದಲ್ಲಿ ಒಳಗಾಗುವುದಾಗಲಿ, ಚರ್ಚೆಯಾಗುವುದಾಗಲಿ ಇಲ್ಲ. ಇದೇ ಸಮಯದಲ್ಲಿನ ಮತ್ತೊಂದು ಪ್ರಶ್ನೆಯೆಂದರೆ, ಹೀಗಿದ್ದ ಮೇಲೆ ನನ್ನ ಕಾಲೇಜಿನಲ್ಲಿ ಇದೆಲ್ಲ ಹೇಗೆ ಸಾಮಾನ್ಯ? ಎಲ್ಲರೂ ಹೇಗೆ ಇಂತಹ ವಿಷಯಗಳನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸುತ್ತಾರೆ? ಹೇಗೆ ವಿದ್ಯಾರ್ಥಿಗಳು ಕೂಡ ‘ತಮ್ಮತನ’ವನ್ನು ಗುರುತಿಸಿಕೊಳ್ಳುತ್ತಾರೆ?.

ಕಾಲೇಜಿನಲ್ಲಿ ಕೆಲವು ತಿಂಗಳು ಕಳೆದ ನಂತರ ನನಗೆ ಕ್ರಮೇಣ ಅರಿವಾಗತೊಡಗಿತು. ನಾನು ಓದುತ್ತಿರುವ ಕ್ರೈಸ್ಟ್ ಯೂನಿವರ್ಸಿಟಿಗೆ ಬರುವ ಬಹುತೇಕ ಎಲ್ಲ ಮಕ್ಕಳ ಪೋಷಕರು ವಿದ್ಯಾವಂತರು, ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗದವರಾಗಿರುತ್ತಾರೆ. ಅವರು ಚಿಕ್ಕ ವಯಸ್ಸಿನಿಂದ ಮಕ್ಕಳನ್ನು ಬಹಳ ಸ್ವತಂತ್ರವಾಗಿ ಬೆಳೆಸಿದ್ದು, ಮನೆಯಲ್ಲಿ ಇಂತಹ ಸೂಕ್ಷ್ಮ ವಿಷಯಗಳನ್ನು ತಾವೂ ಅರ್ಥ ಮಾಡಿಕೊಂಡು ಮಕ್ಕಳ ಆಯ್ಕೆಗಳಿಗೆ ಬೆಂಬಲ ನೀಡುವ ಮನಸ್ಥಿತಿ ಉಳ್ಳವರಾಗಿರುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಬಹುತೇಕರಿಗಿರುವ ಆರ್ಥಿಕ ಭದ್ರತೆಯು, ಇಂತಹ ವಿಷಯಗಳಲ್ಲಿ ಮುಕ್ತವಾಗಿರಲು ಬೇಕಾದಂತಹ ಆತ್ಮವಿಶ್ವಾಸ ನೀಡಿದೆ. ಹಾಗಾಗಿ ಅವರು ಸಮಾಜದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹದ್ದೇ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ಮುಕ್ತ ಮನಸ್ಸಿನ ಪ್ರೊಫೆಸರ್ ಗಳಿಂದಾಗಿ ಕಾಲೇಜಿನ ವಾತಾವರಣದಲ್ಲಿ ಅವರನ್ನು ತೆರೆದ ಮನಸಿನಿಂದ ಒಪ್ಪಿಕೊಳ್ಳುವುದು ಸಾಧ್ಯವಾಗಿದೆ. ಇದರಿಂದಾಗಿ ಅವರಿಗೂ  ಮುಕ್ತವಾಗಿ  ತೆರೆದುಕೊಳ್ಳಲು ಸಾವಕಾಶವಾಗಿದೆ.

ಆದರೆ ಇದೇ ವಿಷಯಗಳು ಹೊರಗೆ ತುಂಬಾ ಸೂಕ್ಷ್ಮ. ಕೆಲವರಿಗೆ ಅವರೇನೆಂದು ತಿಳಿದುಕೊಳ್ಳುವ ವಾತಾವರಣ ಅಥವಾ ಅವಕಾಶ ಇರುವುದಿಲ್ಲ. ಅವರೇನೆಂದು ವ್ಯಕ್ತಪಡಿಸಲು ಬೆಂಬಲವಿರುವುದಿಲ್ಲ. ಹಾಗಾಗಿ ಸರ್ವನಾಮ (pronoun) \ Identity) ದಂತಹ ಮುಖ್ಯ ಮತ್ತು ಮೂಲಭೂತವಾದ ವಿಷಯಗಳು ಪರದೆಯ ಮರೆಯಲ್ಲೇ ಉಳಿದುಬಿಡುತ್ತವೆ.

ಗೌತಮಿ  ತಿಪಟೂರು
ಬೆಂಗಳೂರಿನ ಕ್ರೈಸ್ಟ್‌ ಯೂನಿವರ್ಸಿಟಿಯಲ್ಲಿ ‌ʼಲಿಬರಲ್‌ ಆರ್ಟ್ಸ್ʼ ಓದುತ್ತಿದ್ದಾರೆ.