case – Peepal Media

ಬಿಜೆಪಿ ಜೊತೆ ಸಂಬಂಧಿತ ಮೂವರಿಂದ ಮಹಿಳೆ ಮೇಲೆ ಹಲ್ಲೆ: ಜಾಮೀನು ಮಂಜೂರು
ಮಹಾರಾಷ್ಟ್ರ: ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರಿಗೆ ಥಾಣೆ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ ಮತ್ತು. ಈ ಗುಂಪು ಮಹಿಳೆಯನ್ನು ಕಾರಿನಿಂದ ಹಲ್ಲೆ ಮಾಡಲು ಯತ್ನಿಸಿತ್ತು.

ಅಶ್ವಜಿತ್ ಗಾಯಕವಾಡ್, ರೊಮಿಲ್ ಪಾಟೀಲ್ ಮತ್ತು ಸಾಗರ್ ಶೆಡ್ಗೆ ಜಾಮೀನು ಸಿಕ್ಕಿದ ಆರೋಪಿಗಳು.  ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಅಶ್ವಜಿತ್ ಗಾಯಕವಾಡ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲಕುಮಾರ ಗಾಯಕವಾಡ ಅವರ ಪುತ್ರ.

ಪ್ರಿಯಾ ಸಿಂಗ್ ಎಂಬ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಘೋಡ್‌ಬಂದರ್ ರಸ್ತೆಯ ಹೋಟೆಲ್‌ಗೆ ಗಾಯಕ್ವಾಡ್ ಅವರನ್ನು ಭೇಟಿಯಾಗಲು ಹೋಗಿದ್ದಾಗಿ ಹೇಳಿರುವ ಮಹಿಳೆಯ ಜೊತೆಗೆ ಅಶ್ವಜಿತ್‌ ಜಗಳವಾಡಿರುವ ಬಗ್ಗೆ  ಪಿಟಿಐ ವರದಿ ಮಾಡಿದೆ.

ಗಾಯಕ್‌ವಾಡ್ ಅವರ ಕಾರಿನಿಂದ ಆಕೆ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಆಕೆಯನ್ನು ಕಾರಿನಿಂದ ಹೊರದಬ್ಬಲು ಪ್ರಯತ್ನಿಸಿದ್ದಾನೆ.

ಅಶ್ವಜಿತ್ ಗಾಯಕ್‌ವಾಡ್ ಜತೆ ಸಂಬಂಧ ಹೊಂದಿದ್ದ ಈಕಗೆ ಆತನ ವೈವಾಹಿಕ ಬದುಕಿನ ಬಗ್ಗೆ ಗೊತ್ತಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಆದರೂ, ಗಾಯಕ್‌ವಾಡ್ ಆಕೆ ಕೇವಲ ಸ್ನೇಹಿತೆ ಮಾತ್ರ, ಅವಳು ತನ್ನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಳು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಭಾನುವಾರ ಪೊಲೀಸರು ಗಾಯಕ್‌ವಾಡ್, ಪಾಟೀಲ್ ಮತ್ತು ಶೆಡ್ಜ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 279 (ವೇಗದ ಚಾಲನೆ) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಭಾನುವಾರ ಬಂಧಿಸಿದ್ದರು.

ಸೋಮವಾರ, ಆರೋಪಿಗಳ ಪರ ವಕೀಲ ಬಾಬಾ ಶೇಖ್ ಅವರು ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಿದ್ದರು, ಅವರ ಮೇಲಿನ ಎಲ್ಲಾ ಆರೋಪಗಳು ಜಾಮೀನು ನೀಡಬಹುದಾದವು ಮತ್ತು ವಿಚಾರಣೆಗಾಗಿ ಪೊಲೀಸರಿಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪೊಲೀಸರು ಏಕೆ ಕೊಲೆ ಯತ್ನದ ದೂರನ್ನು ದಾಖಲಿಸಿಲ್ಲ ಎಂದು ಮಹಿಳೆಯ ಪರ ವಕೀಲರು ಕೇಳಿದ್ದಾರೆ.

ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದ್ದು. ತಲಾ 15,000 ರೂ.ಗಳ ಬಾಂಡ್ ಅನ್ನು ನೀಡುವಂತೆ ಸೂಚಿಸಿದೆ.

ದೇವಸ್ಥಾನಗಳನ್ನು ರಾಜಕೀಯಕ್ಕೆ ಬಳಸುವಂತಿಲ್ಲ: ಕೇಸರಿ ಧ್ವಜ ಕಟ್ಟಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ದೇವಸ್ಥಾನಗಳ ಮೇಲೆ ಕೇಸರಿ ಧ್ವಜ ಹಾಕಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ್ದು, ದೇವಸ್ಥಾನಗಳನ್ನು ರಾಜಕೀಯ ಏಕಾಏಕಿ ಬಳಸಿಕೊಳ್ಳುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

“ದೇವಾಲಯಗಳು ಆಧ್ಯಾತ್ಮಿಕತೆ, ಸಾಂತ್ವನ ಮತ್ತು ನೆಮ್ಮದಿಗೆ ದಾರಿದೀಪಗಳು. ಇವುಗಳ ಪಾವಿತ್ರ್ಯತೆ ಮತ್ತು ಗೌರವಕ್ಕೆ ಮಹತ್ವವಿದೆ. ಇಂತಹ ಆಧ್ಯಾತ್ಮಿಕ ನೆಲೆಗಳ ಪಾವಿತ್ರ್ಯತೆ ರಾಜಕೀಯ ತಂತ್ರಗಳಿಂದ ಕಡಿಮೆಯಾಗಬಾರದು. ಅರ್ಜಿದಾರರ  ನಡೆ ಮತ್ತು ಉದ್ದೇಶಗಳು ದೇವಾಲಯದ ಪ್ರಶಾಂತತೆ ಮತ್ತು ಪವಿತ್ರ ವಾತಾವರಣಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿವೆ” ಎಂದು ಬಾರ್ ಮತ್ತು ಬೆಂಚ್ ನ್ಯಾಯಾಲಯದ ಹೇಳಿಕೆಯನ್ನು ವರದಿ ಮಾಡಿದೆ.

ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಭಕ್ತರು ಎಂದು ತನ್ನನ್ನು ಕರೆದುಕೊಂಡಿರುವ ಅರ್ಜಿದಾರ ತಾನು ದೇವಸ್ಥಾನದ ಮೇಲೆ ಹಬ್ಬ ಮತ್ತು ಇತರ ವಿಶೇಷ ಸಂದರ್ಭದಲ್ಲಿ ಕೇಸರಿ ಧ್ವಜ ಹಾರಿಸಲು ಮುಂದಾದಾಗ ತಮ್ಮ ರಾಜಕೀಯ ಸಂಪರ್ಕವನ್ನು ಬಳಸಿಕೊಂಡು ಅನೇಕರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇವರು 2022 ರಲ್ಲಿ ದೇವಸ್ಥಾನ ಮತ್ತು ಭಕ್ತರ ಕಲ್ಯಾಣಕ್ಕಾಗಿ ‘ಪಾರ್ಥಸಾರಥಿ ಭಕ್ತಜನಸಮಿತಿʼ ಎಂಬ ಸಂಘಟನೆಯನ್ನು ಕಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಕೇರಳ ಸರ್ಕಾರ ಪರ ವಕೀಲರು ಅರ್ಜಿದಾರರಿಗೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಧ್ವಜಗಳನ್ನು ಉತ್ಸವಗಳಲ್ಲಿ ಹಾಕಲು ಅವಕಾಶ ನೀಡುವುದು “ರಾಜಕೀಯ ತಂತ್ರಗಳಿಗೆ ದೇವಸ್ಥಾನವನ್ನು ಬಳಸಲು ಅನುಮತಿ ನೀಡಿದಂತಾಗುತ್ತದೆ” ಎಂದು ವಾದಿಸಿದ್ದಾರೆ. ಅರ್ಜಿದಾರರ ಕ್ರಮದಿಂದಾಗಿ ದೇವಸ್ಥಾನದ ಆವರಣದಲ್ಲಿ ಈ ಹಿಂದೆ ಹಲವಾರು ಸಂಘರ್ಷಗಳು ನಡೆದಿವೆ ಎಂದು ಸರ್ಕಾರ ಆರೋಪಿಸಿದೆ.

ಕಾಣಿಕ್ಕವಂಚಿಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳ ಧ್ವಜ, ಬ್ಯಾನರ್‌ಗಳನ್ನು ಅಳವಡಿಸುವುದನ್ನು ದೇವಸ್ಥಾನದ ಆಡಳಿತ ಸಮಿತಿಯು ನಿಷೇಧಿಸಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ದೇವಾಲಯದ ಆವರಣದಲ್ಲಿ ಇಂತಹ ಯಾವುದೇ ಕಂಡು ಬಂದರೆ ಕಿತ್ತು ಹಾಕುವಂತೆ 2020 ರಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಅರ್ಜಿದಾರರು ತಮಗೆ ಬೇಕಾದಂತೆ ದೇವಾಲಯದಲ್ಲಿ ಆಚರಣೆಗಳನ್ನು ನಡೆಸಲು ಯಾವುದೇ ಕಾನೂನುಬದ್ಧ ಅಧಿಕಾರವನ್ನು ನ್ಯಾಯಾಲಯದ ಮುಂದೆ ತೋರಿಸಿಲ್ಲ. ಇದಲ್ಲದೆ, ಈ ನ್ಯಾಯಾಲಯವು ಹೊರಡಿಸಿದ ಆದೇಶಗಳು ಮತ್ತು ಆಡಳಿತಾತ್ಮಕ ಸಮಿತಿಯು ತೆಗೆದುಕೊಂಡಿರುವ ನಿರ್ಧಾರಗಳಂತೆ ದೇವಾಲಯದ ಸುತ್ತಮುತ್ತ ಧ್ವಜ ಕಟ್ಟಲು ಅನುಮತಿ ನೀಡುವುದಿಲ್ಲ,” ಎಂದಿದೆ.

ಮತದಾರರ ಮಾಹಿತಿ ಕಳವು ಆರೋಪ: ಕಾಂಗ್ರೆಸ್‌ನಿಂದ ದೂರು
ಬೆಂಗಳೂರು : ಅರಿವು ಕಾರ್ಯಕ್ರಮ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಂದು ಮತದಾರರ ಮಾಹಿತಿಯನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ, ಹಲವು ಕಾಂಗ್ರೆಸ್‌ ಮುಖಂಡರು ಸೇರಿ ನಡೆದಿರುವ ಅಕ್ರಮದ ವಿರುದ್ದ ಕೇಂದ್ರ ಚುನಾವಣೆ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಬಿಬಿಎಂಪಿ  ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಭೇಟಿ ನೀಡಿ ಆನ್‌ಲೈನ್‌ ಅಥವಾ VHA(ವೋಟರ್‌ ಹೆಲ್ಪ್‌ ಲೈನ್) ಮುಖಾಂತರ ಅರ್ಜಿಗಳನ್ನು ಸಲ್ಲಿಸುವ ಸಲುವಾಗಿ ಅರಿವು ಕಾರ್ಯಕ್ರಮಗಳನ್ನು ನಡೆಸಲು ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ  ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುಮತಿ ನೀಡಿತ್ತು. ಅದಾಗಲೇ ಸಂಸ್ಥೆಯು ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದು.ಕೆಲವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಈ ವಿರುದ್ದ ಕೆಲವು ವಿರೋಧಗಳು ವ್ಯಕ್ತವಾದ ನಂತರ ನೀಡಿದ ಆದೇಶವನ್ನು ಹಿಂಪಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್‌ ಮುಖ್ಯಸ್ಥರು ಸೇರಿ, ಮತದಾರರ ಮಾಹಿತಿ ಕಳವು, ಪಟ್ಟಿಯಿಂದ ನಿರ್ದಿಷ್ಟ ಮತದಾರರ ಹೆಸರು ಕೈಬಿಟ್ಟಿರುವುದು ಸೇರಿದಂತೆ ಮತದಾರರ ಪಟ್ಟಿ ಪರಿಷ್ಕರಣೆಯ ಅಕ್ರಮಗಳ ಕುರಿತು ಕೇಂದ್ರ ಚುನಾವಣೆ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಇಂದು ದೂರು ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ ಪಾಟೀಲ್‌, ಶಾಸಕರಾದ ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ರಿಜ್ವಾನ್‌ ಅರ್ಷದ್‌, ಕೃಷ್ಣ ಬೈರೇಗೌಡ, ಯು.ಬಿ ವೆಂಕಟೇಶ್‌, ಕೆ.ಜೆ ಜಾರ್ಜ್‌, ಎಂ.ಹೆಚ್‌ ರೇವಣ್ಣ ದೂರು ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು
ಬೆಂಗಳೂರು : ಕಾಂತಾರ ಸಿನಿಮಾ ಕುರಿತು ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಂತಾರ ಸಿನಿಮಾದ ವಿವಾದಾತ್ಮಕ ಪೋಸ್ಟ್‌ ವಿಚಾರದ ಬಗ್ಗೆ ಮಾತನಾಡಿದ ಚೇತನ್‌, ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ್ದರು. ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕೊರಗ ಪಂಪದ ಎಂಬುದು ಬೇರೆ ಸಮುದಾಯವಿದೆ. ಕೊರಗ ಸಮುದಾಯದಲ್ಲಿ ಅವರದ್ದೇ ಆದ ಸಂಸ್ಕೃತಿ ಇದೆ. ಈ ಮೂಲ ನಿವಾಸಿಗಳು ಭ್ರಾಹ್ಮಣ್ಯಕ್ಕೆ ಒಳಪಡುವುದಿಲ್ಲ. ಭೂತಕೋಲ ಅನ್ನೋದು ತಪ್ಪು, ಹಿಂದೂ ಅನ್ನೋದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯʼ ಎಂದು ಹೇಳಿದ್ದರು.

ಈ ಹಿನ್ನಲೆಯಲ್ಲಿ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆಯು ಕಾರ್ಕಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.