Caste-based abuse and assault on Dalit journalist – Peepal Media

ದಲಿತ ಪತ್ರಕರ್ತನ ಮೇಲೆ ಜಾತಿ ನಿಂದನೆ – ಹಲ್ಲೆ : ಪಬ್ಲಿಕ್ ಟಿವಿ ವರದಿಗಾರ ಜೈಲು ಪಾಲು
ತುಮಕೂರು : ದಲಿತ ಸಮುದಾಯದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದಡಿ ತುಮಕೂರು ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಅವರನ್ನು ಬಂಧಿಸಲಾಗಿದ್ದು, ಆರೋಪಿತ ಪತ್ರಕರ್ತನ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆರೋಪಿತ ಪತ್ರಕರ್ತ ಮಂಜುನಾಥ್ ತಾಳಮಕ್ಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದೇ ತಿಂಗಳ 21ರಂದು ಬೆಳಗ್ಗೆ ನಗರದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಇ.ಡಿ. ದಾಳಿ ನಡೆದಿತ್ತು. ಅದರ ವರದಿ ಮಾಡಲು ಝೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ಕೂಡ ತೆರಳಿದ್ದರು. ಈ ವೇಳೆ, ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಮಂಜುನಾಥ್ ಮೇಲೆ ಜಾತಿ ನಿಂದನೆ ಮಾಡಿ, ತಮ್ಮ ಮೈಕ್‌ನಿಂದ ಥಳಿಸಿದ್ದಾರೆ.

“ಏನಲೇ ನೀನು ಬಂದಿದ್ದೀಯಾ, ನಿನಗೆ ನೀನೇ ಮಹಾ ಬುದ್ಧಿವಂತ ಅಂದ್ಕೊಂಡಿದ್ದೀಯಾ, ಏನೇ ಮಾಡಿದರೂ ಕೀಳು ಜಾತಿನೇ, ಕೀಳು ಜಾತಿ ಬುದ್ಧಿ ಬಿಡಲ್ಲ, ಮಾದಿಗರ ಬುದ್ಧಿ ಲದ್ದಿ” ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೇ ತಾನು ಪ್ರತಿನಿಧಿಸುವ ಸುದ್ದಿವಾಹಿನಿಯ ಲೋಗೋವಿದ್ದ ಮೈಕ್ ನಿಂದ ದಲಿತ ಪತ್ರಕರ್ತನ ತಲೆ ಮತ್ತು ಕಿವಿಗೆ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ತುಮಕೂರಿನ ತಿಲಕ್ ಪಾರ್ಕ್ ಠಾಣೆಗೆ ಸಂತ್ರಸ್ತ ಜಿ.ಎನ್.ಮಂಜುನಾಥ್ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.