castism – Peepal Media

ಜಾತಿ ದೌರ್ಜನ್ಯ – ಅಸ್ಪೃಶ್ಯತೆ ಆಚರಣೆ: ತಿಂಗಳಾದರೂ ತಪ್ಪಿತಸ್ಥರ ಮೇಲೆ ಕ್ರಮ ಇಲ್ಲ
* ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಣೆ ಪ್ರಕರಣ ಕುರಿತು ತಿಂಗಳಾದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಇಲ್ಲ
* ಕಾಲೇಜಿಗೆ ಡಿಎಚ್ಎಸ್ ನಿಯೋಗ ಬೇಟಿ ನೀಡಿ ಕ್ರಮಕ್ಕೆ ಒತ್ತಾಯ

ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಲ್ಲಿ ಇರುವ ತಮ್ಮ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಜಾತಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತಗೆದುಕೊಳ್ಳಲಾಗಿಲ್ಲ. ಇಲ್ಲಿ ಕಳೆದ 4 ವರ್ಷಗಳಿಂದ ಪರಿಚಾರಕರಾಗಿ (ಅಟೆಂಡರ್) ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿ(ಎಸ್.ಸಿ) ಸಮುದಾಯಕ್ಕೆ ಸೇರಿದ ಪರಮೇಶ್ ಜಿ.ಕೆ ಎಂಬುವವರು ಮೇಲೆ ಇಬ್ಬರು ಅತಿಥಿ ಉಪನ್ಯಾಸಕರು ಅಸ್ಪೃಶ್ಯತೆಯ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಇವರ ಮೇಲೆ ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಬಿ.ಡಿ ಮತ್ತು ಡಾ. ಚಂದ್ರಶೇಖರ್ ಎಚ್.ಆರ್ ಎಂಬುವವರು ಹಲವು ತಿಂಗಳುಗಳಿಂದ ಪರಮೇಶ್ ರವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಮಧ್ಯಾಹ್ನದ ಊಟದ ಸಂದರ್ಭಗಳಲ್ಲಿ “ಕೀಳು ಜಾತಿಯವನು ಹೇಗೆ ನಮ್ಮ ಜೊತೆಯಲ್ಲೇ ಒಟ್ಟಿಗೆ ಊಟ ಮಾಡುತ್ತಾನೆ,” ಎಂದು ಹಲವು ನೆಪಗಳನ್ನೊಡ್ಡಿ ಪರಮೇಶ್ ಊಟ ಮಾಡುವುದನ್ನು ತಪ್ಪಿಸಿರುತ್ತಾರೆ ಎಂಬ ಆರೋಪ ಮಾಡಲಾಗಿದೆ.

ಜೊತೆಗೆ ಕುರ್ಚಿ ಮೇಲೆ ಕೂರುವುದನ್ನು ಸಹಿಸದಿರುವುದು, ನಾಯಿಗೆ ನಿಂದಿಸುವ ನೆಪದಲ್ಲಿ ಮಾರ್ಮಿಕವಾಗಿ ಬಯ್ಯುವುದು ಸೇರಿದಂತೆ, ನಾವು ಒಬ್ಬ ಎಸ್.ಸಿ (ಪರಿಶಿಷ್ಟ ಜಾತಿ) ಯವನ ಜೊತೆ ಕೂರಬೇಕಾ ಎಂದು ಸಾರ್ವಜನಿಕವಾಗಿ ಅವರಿವರ ನೆಪದಲ್ಲಿ ನಿಂದಿಸಿ, ಜಾತಿಯತೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದುದು ತಿಳಿದು ಬಂದಿದೆ.

ಕವಿತ ಮತ್ತು ಚಂದ್ರಶೇಖರ್ ರವರುಗಳು ಮಾರ್ಚ್‌ 20, 2025 ರಂದು ಪರಮೇಶ್ ರವರ ಮಾನಕ್ಕೆ ಕುಂದುಂಟಾಗುಂತೆ ಮತ್ತೊರ್ವರ‌ ಸಮ್ಮುಖದಲ್ಲಿ ಜಾತಿಯ ಹೆಸರು ಹಿಡಿದು ಅಪಮಾನಿಸಿ ಮಾತನಾಡಿದ್ದಾರೆ.

ಈ ಬಗ್ಗೆ ಕವಿತ ಬಿ.ಡಿ ರವರು “ನೀನು ಪ್ರಾಂಶುಪಾಲರು ಅಥವಾ ಪೊಲೀಸ್ ಗೆ ದೂರು ನೀಡಲು ಮುಂದಾದರೆ, ನಾನು ಹೇಗಿದ್ದರೂ ಹೆಂಗಸು ಬೇರೆ ಕೇಸನ್ನೇ ಕೊಡುತ್ತೇನೆಂದು ಮತ್ತು ನಿನ್ನನ್ನು ಇಲ್ಲಿ ಇರುಲು ಬಿಡುವುದಿಲ್ಲ. ಬೇರೆ ಕಡೆಗೆ ವರ್ಗಾವಣೆ ಮಾಡಿಸುತ್ತೇನೆಂದು ಬೆದರಿಕೆ ಹಾಕುವುದರ ಜೊತೆಗೆ ನೀನು ನಮ್ಮಂಥವರೊಂದಿಗೆ ಕೆಲಸ ಅರ್ಹನಲ್ಲ, ಎಲ್ಲಾದರೂ ಹೋಗಿ ಸಾಯಿರಿ,” ಎಂದು ತಮ್ಮ ಜಾತಿ ಹೆಸರನ್ನು ಕೀಳಾಗಿ ಬಳಸಿ ಅಪಮಾನಿಸಿ ತೊಂದರೆ ಕೊಟ್ಟಿದ್ದಾರೆ ಎಂದು ಪರಮೇಶ್ ಅವರು ಆರೋಪಿಸಿದ್ದಾರೆ.

ಈ ಘಟನೆಯಿಂದ ನೊಂದ ಪರಮೇಶ್ ರವರು ಕವಿತ.ಬಿ.ಡಿ ಮತ್ತು ಡಾ.ಚಂದ್ರಶೇಖರ್ ಎಚ್. ಆರ್. ಎಂಬುವವರ ಮೇಲೆ ಮಾರ್ಚ್‌ 20, 2025 ರಂದು ಹಳ್ಳಿ‌ಮೈಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ಮಾಡಲಾಗಿರುತ್ತದೆ. ಘಟನೆ ಇಷ್ಟು ದಿನವಾದರೂ ವಿ.ವಿ ಕೇಂದ್ರದಿಂದ ತಪ್ಪಿತಸ್ಥರ ಮೇಲೆ‌ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ನಿರ್ಲಕ್ಷ್ಯತನವಾಗಿರುತ್ತದೆ.

ನಂತರ ಶಾಸಕ‌ ಎ. ಮಂಜು ರವರು ಕಾಲೇಜಿಗೆ ಬೇಟಿ ನೀಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಬದಲು ಜಾತಿ ನಿಂದನೆಗೆ ಒಳಗಾಗಿ ನೊಂದಿರುವ ತಮ್ಮ  ದಬ್ಬಾಳಿಕೆಯ ಮಾತುಗಳನ್ನಾಡಿ, ಬೆದರಿಕೆ ಒಡ್ಡಿದ್ದಾರೆ ಎಂದು ಪರಮೇಶ್ ಆರೋಪಿಸಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪನ್ಯಾಸಕರೇ ಈ ರೀತಿಯಲ್ಲಿ ಅನಾಗರೀಕವಾಗಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಮಾಡಿರುವುದು ಅತ್ಯಂತ ದುರಂತದ ಸಂಗತಿ ಮತ್ತು ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದಾಗಿರುತ್ತದೆ. ಈ ಘಟನೆಯನ್ನು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ (ಡಿಎಚ್ಎಸ್) ತೀವ್ರವಾಗಿ ಖಂಡಿಸಿದೆ.

ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಸನ ವಿಶ್ವವಿದ್ಯಾನಿಲಯದ ಉಪ ಕುಲಪತಿ ಮತ್ತು ಕುಸಚಿವರಿಗೆ ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಿಸಿರುವ ಕವಿತ ಬಿ.ಡಿ. ಮತ್ತು ಡಾ. ಚಂದ್ರಶೇಖರ್ ಎಚ್. ಆರ್. ಎಂಬುವವರ ಮೇಲೆ ಸೂಕ್ತ ಕ್ರಮ‌ ಜರುಗಿಸಿ, ನೊಂದ ಪರಮೇಶ್ ರವರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಡಿಎಚ್ಎಸ್ ಹಾಸನ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.

ಇಂದು, ಎಪ್ರಿಲ್‌ 22 ರಂದು ಡಿಎಚ್‌ಎಸ್ಜಿಲ್ಲಾ ಸಂಚಾಲಕ, ಎಂ.ಜಿ ಪೃಥ್ವಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ರಮೇಶ್ ಹಳ್ಳಿ ಮೈಸೂರಿನ ಪದವಿ ಕಾಲೇಜಿಗೆ ಬೇಟಿ ನೀಡಿ, ಪ್ರಾಂಶುಪಾಲರನ್ನು ಬೇಟಿ ಮಾಡಿದ್ದಾರೆ. ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಿಸಿರುವವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮತ್ತು ಜಾತಿ ದೌರ್ಜನ್ಯ ಕೊಳಗಾದ ಪರಮೇಶ ರವರಿಗೆ ನ್ಯಾಯ ದೊರಕಿಸದಿದ್ದರೆ ಮುಂದಿನ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ ತಿಳಿಸಿದ್ದಾರೆ.

ಜೈಲುಗಳಲ್ಲೂ ದಲಿತರ ಮೇಲೆ ಜಾತಿ ತಾರತಮ್ಯ: ಸುಪ್ರೀಂ ಕಳವಳ
ನವದೆಹಲಿ: ಸರ್ಕಾರಿ ಜೈಲುಗಳಲ್ಲಿರುವ ಎಸ್‌ಸಿ, ಎಸ್ಟಿ ಸಮುದಾಯದವರ ಮೇಲೆ ದಿನನಿತ್ಯ ಕೆಲಸ ಮಾಡಿಸುವ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಬಾರ್‌ ಅಂಡ್‌ ಬೆಂಚ್‌ ವರದಿ  ಪ್ರಕಟಿಸಿದೆ.  ಪತ್ರಕರ್ತರಾದ ಸುಕನ್ಯಾ ಶಾಂತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿನ ಕೆಲ ನಿಬಂಧನೆಗಳು ಜಾತಿ ತಾರತಮ್ಯವನ್ನು ಉತ್ತೇಜಿಸುವ ರೀತಿಯಲ್ಲಿವೆ. ಅವುಗಳನ್ನು ಬದಲಾಯಿಸಬೇಕಿದೆ ಎಂದಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ ತೀರ್ಪು ಕಾಯ್ದಿರಿಸಿದೆ.

ಭಾರತದ ಕಾರಾಗೃಹಗಳಲ್ಲಿ ಜಾತಿ ಆಧಾರದಲ್ಲಿ ಶ್ರಮ ವಿಭಜನಾ ಕೆಲಸಗಳನ್ನು ನೀಡಲಾಗುತ್ತಿದೆ. ಕೆಳಜಾತಿಯವರಿಗೆ ಜಾಸ್ತಿ ಶ್ರಮದಾಯಕ ಹಾಗೂ ಮೇಲ್ಜಾತಿಯವರಿಗೆ ಕಡಿಮೆ ಶ್ರಮದ ಕೆಲಸಗಳನ್ನು ನೀಡಲಾಗುವ ಮೂಲಕ ಜಾತಿ ತಾರತಮ್ಯ ಎಸಗಲಾಗುತ್ತಿದೆ ಎಂದು ಶಾಂತಾ  ತಮ್ಮ ಅರ್ಜಿಯಲ್ಲಿ ವಿವರಸಿದ್ದಾರೆ.

ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿಯೇ ಈ ರೀತಿಯ ತಾರತಮ್ಯ ಮಾಡಲು ಅವಕಾಶ ನೀಡಲಾಗಿದೆ. ಅಧಿಸೂಚಿತ ಪಂಗಡಗಳಿಗೆ ಸೇರಿದವರಿಗೆ ಇಂಥಿಂಥ ಕೆಲಸ ಕೊಡಬಹುದು ಎಂದು ಮಾರ್ಗಸೂಚಿಯೇ ತಿಳಿಸುತ್ತದೆ.  ದಲಿತರನ್ನು ಅಪರಾಧಿಗಳು, ತಿರುಕರು, ವಲಸೆಯವರು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಶಾಂತಾ ತಿಳಿಸಿದ್ದಾರೆ.  ಗುರುವಾರ ಈ ಅರ್ಜಿಯ  ವಿಚಾರಣೆ ನಡೆಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.