ccb – Peepal Media

ಬೆಂಗಳೂರು ತಲುಪಿದ ಹಾಲಶ್ರೀ : ದಿಗಿಲು ಬಿದ್ದಿರುವ ಕಾಣದ ಕೈಗಳು
ಬೆಂಗಳೂರು : ಬಿಜೆಪಿ ವಿಧಾನಸಭಾ ಟಿಕೆಟ್ ನ ಕೋಟಿ ಕೋಟಿ ವಂಚನೆ ಪ್ರಕರಣ ದಾಖಲಾಗಿ 11 ದಿನಗಳ ನಂತರ ಕಳ್ಳಸ್ವಾಮಿ ಎಂದೇ ಕುಖ್ಯಾತಿ ಪಡೆದ ಹಾಲಶ್ರೀ ಬಂಧನವಾಗಿದೆ. ಸಿಸಿಬಿ ಪೊಲೀಸರಿಂದ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿರುವ ಸಿಸಿಬಿ ಪೊಲೀಸರು ಗುಟ್ಟಾಗಿ ಹಾಲಶ್ರೀಯನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಕರಣದ ಅಡಿಯಲ್ಲಿ ಹೆಚ್ಚಿನ ತನಿಖೆ ಕಾರಣಕ್ಕೆ ಸಿಸಿಬಿ ಅಧಿಕಾರಿಗಳಿಗೆ ಕೋರ್ಟ್ ನ ಅನುಮತಿ ಬೇಕಿದ್ದು, ಕಾನೂನು ಪ್ರಕಾರವೇ ಎಲ್ಲಾ ಪ್ರಕ್ರಿಯೆ ಮುಂದುವರಿಸಲಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ನಿಂದಲೇ ರಹಸ್ಯ ಸ್ಥಳಕ್ಕೆ ಹಾಲಶ್ರೀ ಸ್ವಾಮಿಯನ್ನು ಶಿಫ್ಟ್ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಒಡಿಶಾದಲ್ಲಿ ಪೊಲೀಸರಿಗೇ ವಂಚಿಸಿ ಪರಾರಿಯಾಗಲು ಹೊರಟಿದ್ದ ಹಾಲಶ್ರೀ ಸ್ವಾಮಿಯನ್ನು ಗುಪ್ತವಾಗಿ ರಹಸ್ಯ ಸ್ಥಳಕ್ಕೆ ಕರೆದೊಯ್ಯಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಆತ ತಪ್ಪಿಸಿಕೊಳ್ಳಲು ಸಾಧ್ಯತೆ ಇದೆ ಅಥವಾ ಕಾನೂನಿನ ಅಡಿಯಲ್ಲೇ ಆತ ನುಣುಚಿಕೊಳ್ಳಬಹುದು. ಹಾಗಾಗಿ ತನಿಖೆ ಚುರುಕುಗೊಳ್ಳಲು ಈ ಗೌಪ್ಯತೆ ಅಗತ್ಯ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಹಾಲಶ್ರೀ ಬಂಧನದಿಂದ ಈಗ ಬಿಜೆಪಿ ಪಕ್ಷದ ಒಳಗೆ ಟಿಕೆಟ್ ಲಾಭಿಯಲ್ಲಿ ಭಾಗಿಯಾಗಿದ್ದವರಿಗೆ, ಭಾಷಣದ ಮೂಲಕ ಎಲ್ಲರನ್ನೂ ಯಾಮಾರಿಸಿ ಸಾಚಾತನ ಪ್ರದರ್ಶನ ಮಾಡಿದವರಿಗೆ ಈಗ ದಿಗಿಲು ಹುಟ್ಟಿದಂತಾಗಿದೆ. ಸಧ್ಯಕ್ಕೆ ಹಾಲಶ್ರೀ ಜೊತೆಗೆ ಭಾಗಿ ಆಗಿರಬಹುದಾದ ಪ್ರಮುಖ ವ್ಯಕ್ತಿಗಳ ಚಲನವಲನಗಳ ಬಗ್ಗೆಯೂ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದಾರೆ.

ಬಿಜೆಪಿ ಟಿಕೆಟ್ ವಂಚನೆ ಪ್ರಕರಣ ; ವಿಚಾರಣೆಯಲ್ಲಿ ಕೇಳಿ ಬರುತ್ತಿದೆ ಘಟಾನುಘಟಿಗಳ ಹೆಸರು !
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಆರೋಪದ ಮೇಲೆ ಪ್ರಕರಣದ ಎಂಟನೇ ಆರೋಪಿ ಪ್ರಸಾದ್ ಬೈಂದೂರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಕೆಲವು ವಿಚಾರಣೆ ಎದುರಿಸಿರುವ ಪ್ರಸಾದ್ ಬೈಂದೂರಿಗೆ ನೋಟಿಸ್ ಜಾರಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಅಭಿನವ ಹಾಲಶ್ರೀ ಸ್ವಾಮಿಯ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿ ಇಲ್ಲಿಯವರೆಗೆ ಹಾಲಶ್ರೀ ಸ್ವಾಮಿ ತಲೆಮರೆಸಿಕೊಂಡಿದ್ದು, ಸ್ವಾಮಿ ಸಿಕ್ಕ ನಂತರ ಪ್ರಕರಣ ಬೇರೆಯದೇ ರೀತಿಯಾಗಿ ತಿರುಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ಪ್ರಕರಣದಲ್ಲಿ ಬಿಜೆಪಿ ಘಟಾನುಘಟಿ ಮುಖಂಡರು ಜೊತೆಗೆ ಬಿಜೆಪಿಯ ಬಾಡಿಗೆ ಭಾಷಣಕಾರನೊಬ್ಬ ಭಾಗಿ ಆಗಿದ್ದಾನೆ ಎಂಬ ಮಾತು ಕೇಳಿ ಬರುತ್ತಿದೆ.

ಸಧ್ಯ ಅನಾರೋಗ್ಯ ನೆಪದಲ್ಲಿ ಆಸ್ಪತ್ರೆಗೆ ಸೇರಿರುವ ಚೈತ್ರ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಮೂರ್ಛೆರೋಗ ಅವರನ್ನು ಭಾದಿಸಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ವಿಚಾರಣೆ ತಪ್ಪಿಸಿಕೊಳ್ಳಲು ಸೋಪಿನ ನೊರೆ ಬಳಸಿಕೊಂಡು ಮೂರ್ಛೆರೋಗ ಬಂದಂತೆ ನಾಟಕ ಮಾಡಿರಬಹುದು. ಎಲ್ಲಾ ರೀತಿಯ ಚಿಕಿತ್ಸೆಯ ಪ್ರಕ್ರಿಯೆ ಮುಗಿದಿದೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಹಣಕಾಸಿನ ವ್ಯವಹಾರ, ಸಂಪರ್ಕಗಳಿಗೆ ಸಂಬಂಧಿಸಿದಂತೆ ಎರಡು ದಿನದ ಹಿಂದೆ ವಿಚಾರಣೆ ನಡೆಸಿ ಕಳುಹಿಸಿದ್ದ ಪ್ರಸಾದ್​ ಬೈಂದೂರನನ್ನು ಸಿಸಿಬಿ ಪೊಲೀಸರು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ನಡುವೆ, ಚೈತ್ರಾ ಮತ್ತು ಪ್ರಸಾದ್ ಮಾತನಾಡಿರುವ ಆಡಿಯೋ ಬಹಿರಂಗವಾಗಿದೆ. ಈ ಸಂಭಾಷಣೆ ವೇಳೆ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಪ್ರಸಾದ್ ಚೈತ್ರಾಗೆ ಪರಿಚಯಿಸಿದ್ದಾನೆ. ಅಷ್ಟು ಮಾತ್ರವಲ್ಲದೆ, ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ.

ಪ್ರಗತಿಪರ ಲೇಖಕರ ಮೇಲಿನ ಬೆದರಿಕೆ ಪ್ರಕರಣ : ಬೆಂಗಳೂರು ಸಿಸಿಬಿಗೆ ವರ್ಗಾಯಿಸಿದ ಕರ್ನಾಟಕ ಪೊಲೀಸ್
ಪ್ರಗತಿಪರ ಲೇಖಕರ ವಿರುದ್ಧ ಹೆಚ್ಚುತ್ತಿರುವ ಬೆದರಿಕೆ ಕರೆ ಮತ್ತು ಎಚ್ಚರಿಕೆ ಪತ್ರಗಳಿಗ ಪ್ರತಿಕ್ರಿಯೆಯಾಗಿ, ಕರ್ನಾಟಕ ಪೊಲೀಸರು ವಿಶೇಷ ನಗರ ಕೇಂದ್ರ ಅಪರಾಧ ವಿಭಾಗಕ್ಕೆ ಪ್ರಕರಣಗಳನ್ನು ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದಂತೆ ಎಸಿಪಿ ಅಧಿಕಾರಿಯ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ಮಾಡಲು ಮುಂದಾಗಿದೆ.

ಈವರೆಗೆ ಹಲವು ಬರಹಗಾರರಿಗೆ ಬೆದರಿಕೆ ಪತ್ರಗಳು ಬಂದಿದ್ದು, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಖ್ಯಾತ ಲೇಖಕ ಕೆ.ಮರುಳಸಿದ್ದಪ್ಪ ಮಾತನಾಡಿ, ಒಂದು ವರ್ಷದಿಂದ ಸಾಹಿತಿಗಳಿಗೆ ದೂರವಾಣಿ ಕರೆ ಮತ್ತು ಪತ್ರಗಳ ಮೂಲಕ ಬೆದರಿಕೆಗಳು ಬರುತ್ತಿವೆ. ಈ ಬೆಳವಣಿಗೆ ಆತಂಕ ಮೂಡಿಸಿದ್ದು, ಲೇಖಕರು ಭಯಭೀತರಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದರು.

ಸಾಹಿತಿಗಳಲ್ಲಿ ಪ್ರಮುಖವಾಗಿ ಕೆ.ಮರುಳಸಿದ್ದಪ್ಪ, ಖ್ಯಾತ ಪ್ರಗತಿಪರ ಸಾಹಿತಿಗಳಾದ ಕುಂ.ವೀರಭದ್ರಪ್ಪ, ವಸುಂಧರಾ ಭೂಪತಿ ಮತ್ತು ಬಂಜಗೆರೆ ಜಯಪ್ರಕಾಶ್ ಅವರಿಗೆ ಗರಿಷ್ಠ ಬೆದರಿಕೆಗಳು ಬಂದಿವೆ. “ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ದಿವಂಗತ ಗೌರಿ ಲಂಕೇಶ್ ಮತ್ತು ಎಂ.ಎಂ. ಕಲ್ಬುರ್ಗಿ ಅವರನ್ನು ಗುಂಡಿಕ್ಕಿ ಕೊಂದ ಸ್ಥಿತಿ ಬರಬಹುದು ಎಂದು ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಸಧ್ಯ ಸಾಹಿತಿಗಳ ಕಳವಳದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಮತ್ತು ಸಂಬಂಧಪಟ್ಟ ಡಿಸಿಪಿ ಅವರು ಪ್ರತಿದಿನವೂ ಪ್ರಕರಣಗಳನ್ನು ಪರಿಶೀಲಿಸಲು ನಿರ್ದೇಶನಗಳನ್ನು ನೀಡಲಾಗಿದೆ.

ಇಲ್ಲಿಯವರೆಗೆ ಲೇಖಕರಿಗೆ ಸುಮಾರು 15 ಬೆದರಿಕೆ ಪತ್ರಗಳು ಬಂದಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಮೂರು ಪತ್ರಗಳನ್ನು ಬರೆಯಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಾಹಿತಿಗಳ ನಿಯೋಗಕ್ಕೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬೃಹತ್‌ ನಕಲಿ ಮಾರ್ಕ್ಸ್‌ಕಾರ್ಡ್‌ ದಂಧೆ : ನಾಲ್ವರ ಬಂಧನ
ಬೆಂಗಳೂರು: ಬೆಂಗಳೂರಿನಲ್ಲಿ ಬೃಹತ್‌  ನಕಲಿ ಮಾರ್ಕ್ಸ್‌ಕಾರ್ಡ್‌ ದಂಧೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ದೇಶದ 29 ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಅಂಕಪಟ್ಟಿಯನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಕಲಿ ಮಾರ್ಕ್ಸ್‌ಕಾರ್ಡ್‌ ದಂಧೆ ನಡೆಸುತ್ತಿದ್ದು, ದೇಶದಲ್ಲಿನ 29 ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಅಂಕಪಟ್ಟಿಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ, 1500ಕ್ಕೂ ಹೆಚ್ಚು ನಕಲಿ ಮಾರ್ಕ್ಸ್‌ ಕಾರ್ಡ್‌, 80 ನಕಲಿ ಸೀಲ್‌ಗಳು. 30 ಹಾಲೋಗ್ರಾಂ ಸ್ಟಿಕರ್‌, 8 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹಾಗೂ ಪಿಯು ಬೋರ್ಡ್, ಸಿ.ವಿ ರಾಮನ್‌ ವಿವಿ, ದೆಹಲಿಯ ಸೆಕೆಂಡರಿ ಬೋರ್ಡ್‌, ಮೇಘಾಲಯದ ವಿಲಿಯಂ ಕ್ಯಾರಿ ಯೂನಿವರ್ಸಿಟಿ ಸೇರಿದಂತೆ 25 ಕ್ಕೂ ಹೆಚ್ಚು ವಿವಿಗಳ ಮಾರ್ಕ್ಸ್‌ಕಾರ್ಡ್‌ಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ, ಸಿಸಿಬಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ವಿ.ಎಸ್.ಎಸ್‌ ಇನ್ಸಿಟ್ಯೂಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ  ನಡೆಸಿದ್ದು, ಅಂಕಪಟ್ಟಿಗಳ ವ್ಯವಸ್ಥಿತ ಜಾಲವನ್ನು ಭೇದಿಸಿದ್ದಾರೆ. ಈ ದಂಧೆಯಲ್ಲಿ ಒಂದೊಂದು ಸರ್ಟಿಫಿಕೇಟ್‌ಗೂ ಬೇರೆ ಬೇರೆ ರೀತಿಯಲ್ಲಿ ಹಣ ಫಿಕ್ಸ್‌ ಮಾಡಲಾಗಿದೆ.  ಸುಮಾರು ಐದು ವರ್ಷಗಳಿಂದ ಆರೋಪಿಗಳು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು, ದೇಶದ ವಿವಿಧ ವಿಶ್ವವಿದ್ಯಾಲಯಗಳ ಸೀಲ್‌ಗಳನ್ನು ಬಳಸಿ  ಈ ಅಕ್ರಮ ಚಟುವಟಿಕೆಗಳನ್ನು ನಡೆಸಿರುವ ವಿಚಾರ  ಬೆಳಕಿಗೆ ಬಂದಿದೆ. ವಿ. ಎಸ್‌.ಎಸ್‌ ವೆಬ್‌ಸೈಟ್‌ ಮೂಲಕ ದೂರ ಶಿಕ್ಷಣ ನೀಡುವುದಾಗಿ ತಿಳಿಸಿ ಈ ಮೂಲಕ ಸಾಕಷ್ಟು ಜನರಿಗೆ ನಕಲಿ ಮಾರ್ಕ್ಸ್ ಕಾರ್ಡ್‌ ನೀಡಿದ್ದು, 1 ಲಕ್ಷದಿಂದ 15 ಲಕ್ಷದವರೆಗೂ ನಕಲಿ ಮಾರ್ಕ್ಸ್‌ಕಾರ್ಡ್‌ ಮಾರಾಟ ಮಾಡಿದ್ದಾರೆ . ಈ ಕುರಿತು ನಕಲಿ  ಮಾರ್ಕ್ಸ್‌ಕಾರ್ಡ್‌ ಪಡೆದವರನ್ನು ಕೂಡ ವಿಚಾರಣೆ ನಡೆಸುತ್ತೇವೆ ಎಂದು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

ಮೆಡಿಕಲ್‌ ಹೊರತು ಪಡಿಸಿ ಪಿಯುಸಿ ಇಂದ ಪಿಎಚ್‌ಡಿ ವರೆಗೂ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈಗಾಗಲೇ ಅಯೂಬ್‌ ಪಾಷಾ, ಖಲೀಲ್‌ ವುಲ್ಲಾ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರ ಬಳಿಯಿದ್ದ ದಂಧೆಗೆ ಸಂಬಂಧಿಸಿದ ನಕಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಹಲವು ಆರೋಪಿಗಳನ್ನು ತಲೆಮರೆಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.