chaitra kundapura – Peepal Media

ಟಿಕೆಟ್ ವಂಚನೆ ಪ್ರಕರಣ : ಚೈತ್ರ ಸೇರಿದಂತೆ 9 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಬಿಜೆಪಿ ಟಿಕೆಟ್ ಗೆ ಆಮಿಷವೊಡ್ಡಿ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಮೂಲದ ಚೈತ್ರ ಸೇರಿದಂತೆ 9 ಮಂದಿ ಆರೋಪಿಗಳ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು 75 ಮಂದಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು ಸುಮಾರು 800 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಡಿಜಿಟಲ್ ಸಾಕ್ಷಿಗಳು, ಬ್ಯಾಂಕ್ ಸ್ಟೇಟ್ ಮೆಂಟ್​ಗಳು, ಸಾಂದರ್ಭಿಕ ಸಾಕ್ಷಿಗಳು, ಸ್ವಾಮಿಜಿ ಕಾರು ಚಾಲಕ ಹಣ ಇಟ್ಟು ಹೋಗಿದ್ದ ಬಗ್ಗೆ ಸೇರಿದಂತೆ ಸ್ಪಾಟ್ ಮಹಜರ್ ನಡೆಸಿ ಹಣ ಸೀಜ್ ಮಾಡಿದ ಸ್ಥಳಗಳ ಬಗ್ಗೆ ಸಿಸಿಬಿ ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ ಚೈತ್ರಾ ವಂಚನೆ ಪ್ರಕರಣದಲ್ಲಿ‌ ಈವರೆಗೆ ಬರೋಬ್ಬರಿ 4 ಕೋಟಿ 11 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲಾ ಆಡಿಯೋ, ವಿಡಿಯೋವನ್ನು ಸಿಸಿಬಿ ಪೊಲೀಸರು ಪಡೆದಿದ್ದಾರೆ. ಗೋವಿಂದ ಬಾಬು ಪೂಜಾರಿ ಬಳಿಯೇ ಡೀಲ್ ಸಂಬಂಧ 10 ವಿಡಿಯೋ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ ಗಳ ಡೇಟಾ ರಿಟ್ರೀವ್ ವರದಿ ಕೂಡ ಉಲ್ಲೇಖಿಸಲಾಗಿದೆ.

ಬಿಜೆಪಿ ಟಿಕೆಟ್‌ ಹಗರಣ: ಚೈತ್ರಾ ಕುಂದಾಪುರ ಮತ್ತು ಇತರ ಆರು ಮಂದಿ ನ್ಯಾಯಾಂಗ ಬಂಧನಕ್ಕೆ
ಬೆಂಗಳೂರು: ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದ ರೂವಾರಿ ಚೈತ್ರಾ ಕುಂಧಾಪುರ ಹಾಗೂ ಆಕೆಯ ಆರು ಮಂದಿ ಸಹಚರರನ್ನು ಬೆಂಗಳೂರಿನ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಕ್ಟೋಬರ್ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಆರೋಪಿಗಳನ್ನು ನಗರದ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗುವುದು.
ಚೈತ್ರಾ ಕುಂದಾಪುರ ಮತ್ತಿತರರ ಪೊಲೀಸ್ ಕಸ್ಟಡಿಯು ಶನಿವಾರ ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಆರೋಪಿಗಳಾದ ರಮೇಶ್, ಚನ್ನನಾಯಕ್ ಮತ್ತು ಧನರಾಜ್ ಅವರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿದೆ.

ಹಗರಣದ ಮತ್ತೊಬ್ಬ ಆರೋಪಿ ಅಭಿನವ ಹಾಲಶ್ರೀ ಸ್ವಾಮಿಯನ್ನು ವಿಶೇಷ ತಂಡ ವಿಚಾರಣೆ ನಡೆಸುತ್ತಿದೆ.

ಟಿಕೆಟ್ ಹಗರಣದ ತನಿಖೆ ನಡೆಸುತ್ತಿರುವ ಸಿಸಿಬಿ ವಿಶೇಷ ದಳದ ಅಧಿಕಾರಿಗಳು ಆರೋಪಿ ಕುಂದಾಪುರದಿಂದ 2 ಕೋಟಿ ಮೌಲ್ಯದ ಮೌಲ್ಯದ ವಸ್ತುಗಳು, ಚಿನ್ನಾಭರಣಗಳು ಮತ್ತು 76 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ತಿಳಿಸಿದ್ದಾರೆ.

ಬಂಧಿತ ಶ್ರೀ ಅಭಿನವ ಹಾಲಶ್ರೀ ಮಠದಿಂದ 56 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ದಯಾನಂದ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದ ನಂತರ ಈ ಸ್ವಾಮಿಯಡನೆ ಸಂಪರ್ಕ ಹೊಂದಿದ್ದ ವ್ಯಕ್ತಿಯಿಂದ 20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದು, ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮೈಸೂರಿನ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ಇದು 185 ಕೋಟಿ ರೂಪಾಯಿ ಮೊತ್ತದ ಟಿಕೆಟ್ ಹಗರಣ ಎಂದು ಆರೋಪಿಸಿದ್ದು, 17 ಟಿಕೆಟ್ ಆಕಾಂಕ್ಷಿಗಳಿಗೆ ಚೈತ್ರಾ ಕುಂದಾಪುರ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ. “ಅವಳು 23 ಜನರಿಗೆ ಟಿಕೆಟ್ ಪಡೆದು, ಅದನ್ನು ಮಾರುವ ಮೂಲಕ ಹಣ ಸಂಪಾದಿಸಿದ್ದಾಳೆ” ಎಂದು ಅವರು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ನೇರ ಸಂಪರ್ಕ ಹೊಂದಿದ್ದು, ಈ ಸಂಬಂಧಗಳ ಕುರಿತಾಗಿಯೂ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನಿಯೋಗ ಕೊಂಡೊಯ್ಯುತ್ತಿದ್ದು, ಹಗರಣದ ಸಮಗ್ರ ತನಿಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 72 ಹೊಸ ಮುಖಗಳಿಗೆ ಟಿಕೆಟ್ ನೀಡಿ ಹೀನಾಯ ಸೋಲು ಕಂಡಿತ್ತು.

ಕೈಗಾರಿಕೋದ್ಯಮಿ ಗೋವಿಂದ್ ಬಾಬು ಪೂಜಾರಿ ಅವರು ಚೈತ್ರಾ ಕುಂದಾಪುರ ಹಾಗೂ ಇತರರ ವಿರುದ್ಧ ಬಿಜೆಪಿ ಟಿಕೆಟ್ ಭರವಸೆ ನೀಡಿ 5 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಹಗರಣ ಬೆಳಕಿಗೆ ಬಂದಿದೆ. ಚೈತ್ರಾ ಕುಂದಾಪುರ ಕೂಡ ಹಗರಣದಲ್ಲಿ ಪಕ್ಷದ ಉನ್ನತ ನಾಯಕತ್ವದ ಕೈವಾಡವಿದೆ ಎಂದು ಆರೋಪಿಸಿದ್ದರು.

ಬಿಜೆಪಿ ಟಿಕೆಟ್ ಹಗರಣ : ಚೈತ್ರ ಕುಂದಾಪುರ ಬೆಂಬಲಕ್ಕೆ ಪರೋಕ್ಷವಾಗಿ ನಿಂತ RSS! ಹೇಗಂತೀರಾ? ಸ್ಟೋರಿ ಓದಿ.
ಬಿಜೆಪಿ ಟಿಕೆಟ್ ಹಗರಣದಲ್ಲಿ ಇಲ್ಲಿಯವರೆಗೆ ತೆರೆಮರೆಯಲ್ಲೇ ಇದ್ದ RSS ಈಗ ನೇರ ಅಖಾಡಕ್ಕೆ ಇಳಿದಿದೆ. ಆ ಮೂಲಕ ಇಡೀ ಪ್ರಕರಣವನ್ನು ಬೇರೆಡೆಗೆ ತಿರುಗಿಸಲು ಕಾನೂನಿನ ಅಡಿಯಲ್ಲಿ ಏನು ಸಾಧ್ಯವೋ ಅದನ್ನು ಅಳೆದೂ ತೂಗಿ ಹಾದಿ ತಪ್ಪಿಸಲು ಮುಂದಾಗಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಸಧ್ಯ ಪ್ರಕರಣ ದಾಖಲಾಗಿ ಇಷ್ಟು ದಿನದ ವರೆಗೂ ತನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದ RSS ನಿಧಾನವಾಗಿ ದಾಳ ಉರುಳಿಸಿದೆ. RSS ನ ಪ್ರಮುಖ ಪ್ರಕರಣಗಳನ್ನು ನಿಭಾಯಿಸುತ್ತಿದ್ದ ಹೈಕೋರ್ಟ್ ವಕೀಲ ನಟರಾಜ್ ಶರ್ಮಾ ಈಗ ಪ್ರಕರಣದಲ್ಲಿ ಸಂತ್ರಸ್ತನ ಸ್ಥಾನದಲ್ಲಿ ನಿಂತಿರುವ ಗೋವಿಂದ ಬಾಬು ಪೂಜಾರಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ವಕೀಲರಾದ ನಟರಾಜ್ ಶರ್ಮಾ ಅವರು ಕಲ್ಲಡ್ಕ ಪ್ರಭಾಕರ ಭಟ್ಟರ ಅಳಿಯ ಎಂದೂ ತಿಳಿದು ಬಂದಿದೆ. ಬಿಜೆಪಿ ಪಕ್ಷದಲ್ಲಿ ಟಿಕೆಟ್ ಲಾಭಿಯ ಬಗ್ಗೆ ಹಿಂದಿನಿಂದಲೂ ಆರೋಪ ಕೇಳಿ ಬಂದಿತ್ತು, ಆದರೆ ಅದು ಗೋವಿಂದ ಬಾಬು ಪೂಜಾರಿಗೆ ವಂಚಿಸುವ ಮೂಲಕ ಹೊರ ಬಿದ್ದಿದ್ದು, ಸ್ವತಃ ಉದ್ಯಮಿಯೂ ಆದಂತಹ ಗೋವಿಂದ ಬಾಬು ಪೂಜಾರಿ ಮೇಲೆ ನಟರಾಜ್ ಶರ್ಮಾ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲಿಸುವ ಹವಾಲಾ ವ್ಯವಹಾರ ಎಂದು ದೂರು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದು ಪರೋಕ್ಷವಾಗಿ ಚೈತ್ರ ಬೆಂಬಲಕ್ಕೆ ನಿಂತು, ನೇರಾನೇರ ಗೋವಿಂದ ಬಾಬು ಪೂಜಾರಿಯ ಮೇಲೆ ಬ್ಲಾಕ್ಮೇಲ್ ತಂತ್ರ ಪ್ರಯೋಗ ಮಾಡುವ ರೀತಿಯಲ್ಲಿ ನಟರಾಜ್ ಶರ್ಮಾ (RSS) ತನ್ನ ದಾಳ ಉರುಳಿಸಿದೆ.

ಇತ್ತ ಕೇಸಿನ ಗಂಭೀರತೆ ಕುಗ್ಗಿಸುವುದು, ದೂರುದಾರ ಅಥವಾ ಸಂತ್ರಸ್ತನ ಜಾಗದಲ್ಲಿರುವ ಗೋವಿಂದ ಬಾಬು ಪೂಜಾರಿ ಕೇಸ್ ವಾಪಸ್ ತಗೆಯುವಂತೆ ಮಾಡುವುದು ಹಾಗೂ ಪರೋಕ್ಷವಾಗಿ ಚೈತ್ರಾ ಕುಂದಾಪುರ ಗ್ಯಾಂಗಿಗೆ ‘ನಾವು ನಿಮ್ಮ ಜೊತೆಗಿದ್ದೇವೆ’ ಎಂಬ ಭರವಸೆ ಕೊಟ್ಟಂತಾಗುತ್ತದೆ.

ಈ ಮೂಲಕ RSS ಒಂದೇ ಕಲ್ಲಿಗೆ ಮೂರು ಹಕ್ಕಿ ಉದುರುವಂತೆ ಮಾಡುವ ‘ಚಾಣಾಕ್ಷ’ ಕೆಲಸಕ್ಕೆ ಮುಂದಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ‘ಹವಾಲಾ’ ನಡೆದಿದೆ ಎಂದೇ ಭಾವಿಸಿದರೂ ಬೇರಾವುದೇ ವ್ಯಕ್ತಿ ಅಥವಾ ವಕೀಲರು ಈ ರೀತಿಯಾಗಿ ಕೇಸು ದಾಖಲಿಸದೇ ನಟರಾಜ್ ಶರ್ಮಾ ಅವರೇ ಗೋವಿಂದ ಬಾಬು ಪೂಜಾರಿ ಮೇಲೆ ಪ್ರಕರಣ ದಾಖಲಿಸಲು ಕಾರಣವೇನು? ಸಂಘ ಪರಿವಾರದ ಬಹುತೇಕ ಕೇಸುಗಳನ್ನು ನಿಭಾಯಿಸುವ ನಟರಾಜ್ ಶರ್ಮಾ ಅವರಿಗೆ RSS ನೇರವಾಗಿ ನಿರ್ದೇಶನ ನೀಡಿದೆ ಎಂಬುದೂ ಸಹ ಮೂಲಗಳಿಂದ ತಿಳಿದು ಬಂದಿದೆ.

ಇತ್ತ ಚೈತ್ರ ಕುಂದಾಪುರ ಗ್ಯಾಂಗ್ ಗೆ ಹಣವನ್ನೂ ಕೊಟ್ಟು, ನಟರಾಜ್ ಶರ್ಮಾ (RSS) ಕಡೆಯಿಂದ ಕೇಸೂ ದಾಖಲಿಸಿಕೊಳ್ಳುವ ಮೂಲಕ ಇಲ್ಲಿಯವರೆಗೆ ನಿಸ್ವಾರ್ಥವಾಗಿ ‘ಪರಿವಾರದ’ ಸೇವೆ ಮಾಡಿಕೊಂಡು ಬಂದಿದ್ದ ಗೋವಿಂದ ಬಾಬು ಪೂಜಾರಿ ನಿಜವಾದ ಸಂತ್ರಸ್ತ ಎಂಬುದರಲ್ಲಿ ಎರಡು ಮಾತಿಲ್ಲ. ಅಕಸ್ಮಾತ್ ನಟರಾಜ್ ಶರ್ಮಾ ಗೋವಿಂದ ಬಾಬು ಪೂಜಾರಿ ವಿರುದ್ಧ ದೂರು ದಾಖಲಿಸಿದ್ದೇ ಆದರೆ ಪೂಜಾರಿ ಅವರ ಮುಂದಿನ ನಿಲುವು ಏನಿರಬಹುದು ಎಂಬ ಕುತೂಹಲ ಹುಟ್ಟಿಸಿದೆ.

ಹಿಂದುತ್ವದ ಹೆಸರಲ್ಲಿ ಬಿಜೆಪಿ ಯೂಸ್ ಅಂಡ್ ಥ್ರೋ : ಚೈತ್ರ ಕೇಸ್ ಉಲ್ಲೇಖಿಸಿ ಕಾಂಗ್ರೆಸ್ ಆರೋಪ
ಹಿಂದುತ್ವದ ಹೆಸರಿನಲ್ಲಿ ಚೈತ್ರ ಕುಂದಾಪುರ ಹತ್ತಿರ ಚುನಾವಣಾ ಪ್ರಚಾರ ಭಾಷಣ ಮಾಡಿಸಿ, ಈಗ ನಮಗೂ ಆಕೆಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ನಾಟಕ ಆಡುತ್ತಿದೆ. ಇದು ವಿಚಾರದಲ್ಲಿ ಮಾತ್ರ ಅಲ್ಲ, ಹಿಂದುತ್ವದ ಅಡಿಯಲ್ಲಿ ಬಿಜೆಪಿ ಬೆಂಬಲಿಸುವ ಎಲ್ಲರಿಗೂ ಇದೇ ಕಥೆ ಎಂಬಂತೆ ರಾಜ್ಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಗಂಭೀರವಾಗಿ ಆರೋಪಿಸಿದೆ.

ಟಿಕೆಟ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ, ಟಿಕೆಟ್ ವಂಚನೆ ವಿಚಾರದಲ್ಲಿ ಬಿಜೆಪಿ ಒಳಗೇ ದೊಡ್ಡ ಹಗರಣ ನಡೆದರೂ, ಎಲ್ಲಕ್ಕಿಂತ ಹೆಚ್ಚಾಗಿ ಅದು ಗೊತ್ತಿದ್ದರೂ ಬಿಜೆಪಿ ಮುಖಂಡರು ಮೌನ ವಹಿಸಿದ್ದಾರೆ. ಅದರಲ್ಲೂ ಬಿಜೆಪಿ ಪಕ್ಷದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಗೆ ಈ ವಿಚಾರ ಗೊತ್ತಿದ್ದೂ ಮುಚ್ಚಿಟ್ಟ ಬಗ್ಗೆಯೂ ಕಾಂಗ್ರೆಸ್ ಆರೋಪಿಸಿದೆ.

“ಚಕ್ರವರ್ತಿ ಸೂಲಿಬೆಲೆ ಎಂಬ ಕರ್ನಾಟಕದ ಫ್ರಿಂಜ್ ಎಲಿಮೆಂಟ್ ಗೆ ಆತನೇ ಒಪ್ಪಿಕೊಂಡಂತೆ ಟಿಕೆಟ್ ವಂಚನೆ ಮೊದಲೇ ಗೊತ್ತಿತ್ತಂತೆ, ಸಿಟಿ ರವಿ ಅವರಿಗೂ ತಿಳಿದಿತ್ತಂತೆ. ಬಿಜೆಪಿ ಪಕ್ಷದ ಹೆಸರಲ್ಲಿ ಮಹಾವಂಚನೆ ನಡೆದಿದ್ದರೂ, ಹಣದ ಅಕ್ರಮ ವರ್ಗಾವಣೆ ನಡೆದಿದ್ದರೂ ಈ ಮಹಾ ಸುಭಗಧ್ವಯರು ಸುಮ್ಮನಿದಿದ್ದೇಕೆ? ಈ ಚೈನ್ ಚೈತ್ರ (ಚೈತ್ರ ಕುಂದಾಪುರ ಅವರ ಅಡ್ಡ ಹೆಸರು) ನಮಗೆ ತಿಳಿದೇ ಇಲ್ಲ ಎನ್ನುತ್ತಿರುವ ಎನ್ನುತ್ತಿರುವ ಬಿಜೆಪಿಗರು ಹಿಂದುತ್ವದ ಹೆಸರಲ್ಲಿ ಯಾರನ್ನು ಬೇಕಾದರೂ ಬಳಸಿಕೊಂಡು ಬೀದಿಗೆ ತಳ್ಳುತ್ತಾರೆ!” ಎಂದು ಕಾಂಗ್ರೆಸ್ ಆರೋಪಿಸಿದೆ.

ಹಾಗೆಯೇ ಬಿಜೆಪಿ ನಾಯಕನೊಬ್ಬನಿಗೆ ಮೋಸ ಆಗುತ್ತಿದ್ದರೂ, ಆತ ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಕೋಟಿ ಕೋಟಿ ಕಳೆದುಕೊಳ್ಳುತ್ತಿದ್ದರೂ ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಸಿ.ಟಿ.ರವಿಯವರು ಈ ಬಗ್ಗೆ ಸ್ವಲ್ಪ ಕೂಡಾ ಪಕ್ಷದ ಗಮನಕ್ಕೆ ತಂದು ಶಿಸ್ತು ಕ್ರಮ ಕೈಗೊಳ್ಳದ ಬಗ್ಗೆಯೂ ಕಾಂಗ್ರೆಸ್ ಆರೋಪಿಸಿದೆ.

ಸಿಟಿ ರವಿಯವರೇ, ನಿಮ್ಮ ಪಕ್ಷದ ಟಿಕೆಟ್ ಹೆಸರಲ್ಲಿ ಕೋಟ್ಯಂತರ ರೂಪಾಯಿಯ ವಂಚನೆ ನಡೆದಿದ್ದು ನಿಮ್ಮ ಗಮನಕ್ಕೆ ಬಂದಿದ್ದರೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಿದ್ದು ಏಕೆ? ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂತಹ ಮಹತ್ವದ ಹೊಣೆಗಾರಿಕೆ ಹೊಂದಿದ್ದರೂ, ಮಾಜಿ ಸಚಿವರಾಗಿದ್ದರೂ ಇಂತಹ ಕಾನೂನು ಬಾಹಿರ ಚಟುವಟಿಕೆಗೆ ಬೆಂಬಲ ಮೌನದ ಮೂಲಕ ಬೆಂಬಲ ನೀಡಿದೇಕೆ? ಬಿಜೆಪಿಯಲ್ಲಿ ನಿಜಕ್ಕೂ ಹಣಕ್ಕಾಗಿ ಟಿಕೆಟ್ ಮಾರಾಟ ನಡೆಯುತ್ತಿತ್ತೆ? ಇಂತಹ ವಂಚನೆಗಳೆಲ್ಲ ಬಿಜೆಪಿ ಪಕ್ಷದಲ್ಲಿ ಸಾಮಾನ್ಯವೇ? ಅಥವಾ ಈ ವಂಚನೆ ಬಿಜೆಪಿಯ ದೊಡ್ಡ ನಾಯಕರ ಅಣತಿಯಂತೆ ನಡೆದಿದೆಯೇ?” ಎಂದು ಅನುಮಾನ ವ್ಯಕ್ತಪಡಿಸಿದೆ.

ಸಧ್ಯ ಇತ್ತು ಇದ್ದೂ ಇಲ್ಲದಂತಿರುವ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನೂ ಇಲ್ಲದ ಬಿಜೆಪಿಗೆ ಈಗ ಚೈತ್ರ ಕುಂದಾಪುರ ಟಿಕೆಟ್ ವಂಚನೆ ಪ್ರಕರಣ ನುಂಗಲಾರದ ತುತ್ತಾಗಿದೆ. ಟಿಕೆಟ್ ಹಗರಣದಲ್ಲಿ ಮೋಸ ಮಾಡಿದವರು ಮತ್ತು ಮೋಸ ಹೋದವರು ಇಬ್ಬರೂ ಬಿಜೆಪಿಯವರೇ ಆಗಿದ್ದರಿಂದ ಬಿಜೆಪಿ ಈಗ ಕಾಂಗ್ರೆಸ್ ನ ಆರೋಪಗಳಿಗೆ ಉತ್ತರ ಕೊಡದ ಸ್ಥಿತಿಗೆ ಬಂದಿದೆ.

ಮೀನು ವ್ಯಾಪಾರಿಗೆ ಮೋಸ: ಚೈತ್ರಾಳನ್ನು ವಶಕ್ಕೆ ನೀಡುವಂತೆ ಕೋಟ ಪೊಲೀಸ್‌ ಮನವಿ
ಉಡುಪಿ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ ರೂ 5 ಲಕ್ಷ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ತಾಲ್ಲೂಕಿನ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನಲೆಯಲ್ಲಿ ಚೈತ್ರಾ ಕುಂದಾಪುರಳನ್ನು ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಗಳನ್ನು ಹಾಕಲು ನೆರವು ನೀಡುತ್ತೇನೆ ಎಂದು 2018ರಿಂದ 2022ರವರೆಗೆ ಹಂತ ಹಂತವಾಗಿ 5 ಲಕ್ಷ ಪಡೆದಿದ್ದಾರೆ ಎಂದು ಕೋಡಿ ಕನ್ಯಾನದ ಸುದಿನ ಎಂಬವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸುದಿನ ನೀಡಿದ ದೂರಿನ ಮೇರೆಗೆ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಮೂಲಕ ಚೈತ್ರ ವಿಚಾರಣೆಗೆ ಕೋಟ ಪೊಲೀಸರು ಮನವಿ ಮಾಡಿದ್ದು ಬಾಡಿವಾರೆಂಟ್ ನೀಡುವಂತೆ ಬೆಂಗಳೂರು 1st ACMM (ಒಂದನೇ ಮುಖ್ಯ ಅಪರ ಮುಖ್ಯ ದಂಡಾಧಿಕಾರಿಗಳ ನ್ಯಾಯಾಲಯ) ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಬೆಂಗಳೂರು 1st ACMM ಕೋರ್ಟಿಗೆ ಮನವಿ ರವಾನೆ ಮಾಡಲಾಗಿದ್ದು ಸಿಸಿಬಿ ವಿಚಾರಣೆ ಮುಗಿದ ಬಳಿಕ ಬಾಡಿವಾರೆಂಟ್ ಪಡೆಯುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಸಿಸಿಬಿ ವಶದಲ್ಲಿರುವ ಚೈತ್ರಾ ಮತ್ತು ಸಂಗಡಿಗರ ವಿಚಾರಣೆ ಮುಂದುವರೆದಿದೆ.

ಬಿಜೆಪಿ ಟಿಕೆಟ್‌ ಹಗರಣ: ಹತ್ತು ದಿನಗಳ ಪೊಲೀಸ್‌ ಕಸ್ಟಡಿಗೆ ಹಾಲಶ್ರೀ
ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಅಭಿನವ ಹಾಲಶ್ರೀ ಸ್ವಾಮಿಯನ್ನು ಕೋರ್ಟ್‌ ಹತ್ತು ದಿನಗಳ ಅವಧಿಗೆ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಗೋವಿಂದ ಬಾಬು ಪೂಜಾರಿ ಎನ್ನುವ ವ್ಯಕ್ತಿಗೆ ಬಿಜೆಪಿ ಟಿಕೆಟ್‌ ಕೊಡಿಸುತ್ತೇವೆಂದು ಕೋಟ್ಯಂತರ ಹಣ ಮೋಸ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಇತರ ಆರೋಪಿಗಳೊಡನೆ ಬಂಧಿತನಾಗಿದ್ದ ಹಾಲಶ್ರೀಯನ್ನು ಇಂದು ಸಿಸಿಬಿ ಪೊಲೀಸರು ವೈದ್ಯಕೀಯ ಪರೀಕ್ಷೆಯ ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.

ಸೆ. 20ರಂದು ಬೆಳಗ್ಗೆ 19ನೇ ಎಸಿಎಂಎಂ ನ್ಯಾಯಾಲಯದ ಮಂದೆ ಹಾಜರುಪಡಿಸಿದ ಸಿಸಿಬಿ ಪೊಲೀಸರು, ಸ್ವಾಮೀಜಿಯ ಹೆಚ್ಚಿನ ವಿಚಾರಣೆ ನಡೆಸಬೇಕಿರುವುದರಿಂದ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಸೆ. 29ರವರೆಗೆ (10 ದಿನ) ಸ್ವಾಮಿಯನ್ನು ಸಿಸಿಬಿ ಪೊಲೀಸರ ವಶಕ್ಕೆ ಕೊಟ್ಟಿದೆ.

ಪೊಲೀಸರು ಮುಂದಿನ ತನಿಖೆಗಾಗಿ ಆರೋಪಿಯನ್ನು ಮೈಸೂರಿಗೆ ಕರೆದೊಯ್ಯಲಿದ್ದು ಅಲ್ಲಿ ಮಹಜರು ನಡೆಸಲಿದ್ದಾರೆ ಎನ್ನಲಾಗಿದೆ. ಸ್ವಾಮಿಯು ಪರಾರಿಯಾಗುವ ಮೊದಲು ಮೈಸೂರಿನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರನ್ನು ಭೇಟಿಯಾಗಿ ಪ್ರಕರಣದಲ್ಲಿ ತನ್ನ ಹೆಸರು ಬಾರದಂತೆ ಮಾಡಲು ಪ್ರಯತ್ನಿಸಿದ್ದ ಸುದ್ದಿ ಬರುತ್ತಿದೆ.

ಪ್ರಕರಣ ದಿನದಿಂದ ದಿನಕ್ಕೆ ಜಟಿಲವಾಗುತ್ತಿರುವ ಕಾರಣ ಪೊಲೀಸರು ಚೈತ್ರಾ ಮತ್ತು ಸ್ವಾಮಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನಿಸುವ ಸಾಧ್ಯತೆಯನ್ನೂ ಪತ್ರಿಕೆಯೊಂದು ವರದಿ ಮಾಡಿದೆ.

ಬಿಜೆಪಿ ಟಿಕೆಟ್ ಹಗರಣ : ‘ಇದು ಕೇವಲ 5 ಕೋಟಿಯಲ್ಲ, 185 ಕೋಟಿಯ ಹಗರಣ!’
ಮೈಸೂರು : ವಿಧಾನಸಭಾ ಚುನಾವಣೆಯಲ್ಲಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚಿಸಿದ ಪ್ರಕರಣದ ಬಗ್ಗೆ ರಾಜ್ಯದ ಜನ ತಲೆ ಕೆಡಿಸಿಕೊಳ್ಳುತ್ತಿರುವ ಬೆನ್ನಲ್ಲೇ, ಬಿಜೆಪಿ ಹಿನ್ನೆಲೆಯವರ ಟಿಕೆಟ್ ವಂಚನೆ ಪ್ರಕರಣ ಕೇವಲ 5 ಕೋಟಿ ಅಲ್ಲ, ಇದು 185 ಕೋಟಿಯ ಬಹುಕೋಟಿ ಹಗರಣ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಎಂ.ಲಕ್ಷ್ಮಣ್, ಈ ಬಗ್ಗೆ ಸರಿಯಾಗಿ ತನಿಖೆ ನಡೆದರೆ ಟಿಕೆಟ್ ಗಾಗಿ ವಂಚನೆ ಪ್ರಕರಣದಲ್ಲಿ ಹಲವಷ್ಟು ಮಂದಿ ಭಾಗಿಯಾಗಿದ್ದು ತನಿಖೆ ಚುರುಕುಗೊಂಡರೆ ಇನ್ನಷ್ಟು ಮಂದಿ ಸಂತ್ರಸ್ತರು ಸಿಗಲಿದ್ದಾರೆ ಎಂದು ಹೇಳಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ಗುಂಪಿನ ಹಿಂದೆ ಇರುವವರು ಯಾರು? ಎಷ್ಟು ಹಣ ವಂಚಿಸಿದ್ದಾರೆ. ಎಷ್ಟು ಜನರಿಗೆ ವಂಚಿಸಿದ್ದಾರೆ ಎಂಬುದನ್ನು ಪೊಲೀಸರು ಇನ್ನೆರಡು ದಿನಗಳಲ್ಲಿ ತಿಳಿಸುತ್ತಾರೆ. ಈಗಷ್ಟೇ ಹಾಲಶ್ರೀ ಸ್ವಾಮಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಹಗರಣದಲ್ಲಿ ಒಟ್ಟು 17ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ ಎಂದಿದ್ದಾರೆ.

ಅಂದಾಜು 23 ಜನರಿಗೆ ಟಿಕೆಟ್ ಕೊಡಿಸುವಂತೆ ಆಮಿಷ ಒಡ್ಡಲಾಗಿದೆ. ಅದರಲ್ಲಿ 17 ಜನರಿಂದ ಈಗಾಗಲೇ ಹಣ ವಸೂಲು ಮಾಡಿದ್ದಾರೆ. ಈ ಅವ್ಯವಹಾರದಲ್ಲಿ 40 ಕ್ಕೂ ಹೆಚ್ಚು ಜನರು ಟಿಕೆಟ್ ಪಡೆಯುವ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇದು ಬರೋಬ್ಬರಿ 185 ಕೋಟಿಯ ವ್ಯವಹಾರ ಇಲ್ಲಿ ಆಗಿದೆ ಎಂದು ಆರೋಪಿಸಿದರು.

ಚೈತ್ರ ಕುಂದಾಪುರ ಗ್ಯಾಂಗ್ ಸೇರಿದಂತೆ 9 ಜನರ ತಂಡದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಮೋಸವೆಸಗಲಾಗಿದೆ. ಇವರೆಲ್ಲರೂ ಬಿಜೆಪಿ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರು. ಮೋಸ ಹೋದವರು ಮತ್ತು ಮೋಸ ಮಾಡಿದರು ಎಲ್ಲರೂ ಬಿಜೆಪಿಯವರೇ ಆದ್ದರಿಂದ ಇದು ಹೆಚ್ಚು ಬೆಳಕಿಗೆ ಬರುತ್ತಿಲ್ಲ. ಸರಿಯಾದ ಜಾಡು ಹಿಡಿದು ಹೊರಟರೆ ಬಿಜೆಪಿ ಬಂಡವಾಳ ಹೊರ ಬರಲಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಇನ್ನು ಚೈತ್ರಾ ಕುಂದಾಪುರ ಗ್ಯಾಂಗ್ ಗೆ ಪಿಎಸ್ ಐ ಹಗರಣ ಸೇರಿದಂತೆ ಬಿಜೆಪಿ ಆಡಳಿತದಲ್ಲಿ ನಡೆದ ನಾಲ್ಕಕ್ಕೂ ಹೆಚ್ಚು ಹಗರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ಚೈತ್ರಾ ಕುಂದಾಪುರ ಎಂಬ ಯುವತಿಗೆ ನೇರ ಸಂಪರ್ಕವಿದೆ. ಚುನಾವಣಾ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಯಾರ್ಯಾರ ಪರ ಪ್ರಚಾರದಲ್ಲಿ ತೊಡಗಿದ್ದಳೋ ಅವರನ್ನೆಲ್ಲಾ ವಿಚಾರಣೆಗೊಳಪಡಿ‌ಸಬೇಕು. ಅಷ್ಟೆ ಅಲ್ಲ ಪಿಎಸ್ ಐ ಹಗರಣದಲ್ಲಿ ಜೈಲಿನಲ್ಲಿರುವವರ ಕೆಲ ಸಂಪರ್ಕವೂ ಆಕೆಗಿದೆ. ಇದೊಂದು ಸಾಧಾರಣ ಹಗರಣ ಅಲ್ಲ ಎಂದು ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಚೈತ್ರಾ ಕುಂದಾಪುರ ಹಣ ವಂಚನೆ ಪ್ರಕರಣ: ಶಿವಮೊಗ್ಗ ABVP ಶಾಮೀಲು?
ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣದ ತನಿಖೆಗಾಗಿ ಪ್ರಕರಣದ ಎ2 ಆರೋಪಿ ಆಗಿರುವ ಗಗನ್ ಕಡೂರು ಎಂಬ ಆರೋಪಿಯನ್ನು ಶಿವಮೊಗ್ಗ RSS ಕಚೇರಿಗೆ ಸಿಸಿಬಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಶಿವಮೊಗ್ಗದ RSS ಕಚೇರಿ ಬಳಿಯಲ್ಲಿ ಸಂತ್ರಸ್ತರಿಗೆ ಸಂಬಂಧಿಸಿದ 50 ಲಕ್ಷ ಹಣವನ್ನು ಪಡೆದ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಗಗನ್ ಕಡೂರು ನನ್ನು ಶಿವಮೊಗ್ಗಕ್ಕೆ ತನಿಖೆಗೆ ಕರೆದುಕೊಂಡು ಹೋಗಿದ್ದಾರೆ.

ಉದ್ಯಮಿ ಹಾಗೂ ಹಾಗೂ RSS ಕಾರ್ಯಕರ್ತನೂ ಆಗಿರುವ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರ ಕುಂದಾಪುರ ತಂಡ ವಂಚಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಸ್ವಾಮಿ ಹಾಲಶ್ರೀಯನ್ನು ಬಂಧಿಸಿ ಸಧ್ಯ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಈ ನಡುವೆ ಎ2 ಆರೋಪಿ ಗಗನ್‌ ನನ್ನು ಶಿವಮೊಗ್ಗಕ್ಕೆ ಕರೆದೊಯ್ದ ಸಿಸಿಬಿ ತಂಡ, ಶಿವಮೊಗ್ಗ ಆರ್‌ ಎಸ್‌ ಎಸ್‌ ಕಚೇರಿ ಬಳಿ 50 ಲಕ್ಷ ಪಡೆದಿದ್ದ ಗಗನ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ಹಣ ವರ್ಗಾವಣೆ ಬಗ್ಗೆ ಶಿವಮೊಗ್ಗ ABVP ಕಚೇರಿಯಲ್ಲೇ ಪ್ರಮುಖವಾಗಿ ಮಾತುಕತೆ ಮತ್ತು ಸಭೆ ನಡೆದ ಬಗ್ಗೆ ಆರೋಪಿ ಗಗನ್ ಕಡೂರು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸಧ್ಯದ ಬೆಳವಣಿಗೆ ನೋಡಿದರೆ ಶಿವಮೊಗ್ಗದ RSS ಹಾಗೂ ABVP ಕಚೇರಿಯಲ್ಲೇ ಇದರ ಮಾತುಕತೆ ನಡೆದಿರಬಹುದಾದದ ಹಿನ್ನೆಲೆಯಲ್ಲಿ ಜಿಲ್ಲಾ ABVP ಮುಖಂಡರು ಸಹ ಇದರಲ್ಲಿ ಭಾಗಿ ಆಗಿರಬಹುದು ಎಂದೂ ಸಿಸಿಬಿ ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಇದರಲ್ಲಿ ಭಾಗಿ ಆಗಿರಬಹುದಾದ RSS ನಾಯಕರ ಬಗ್ಗೆಯೂ ತೀವ್ರವಾಗಿ ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸಧ್ಯ ಗೋವಿಂದ ಬಾಬು ಪೂಜಾರಿ, ಚೈತ್ರಾ ಕುಂದಾಪುರ ಹಾಗೂ ಗಗನ್‌ ಕಡೂರು ನಡುವೆ ನಡೆದಿದ್ದ ಶಿವಮೊಗ್ಗ ABVP ಕಚೇರಿಯಲ್ಲಿ ನಡೆದ ಸಭೆಯ ಬಗ್ಗೆ ಕುತೂಹಲ ಮೂಡಿಸಿದೆ. ಇನ್ನೇನು ABVP, RSS ಕಚೇರಿ ಬಳಿಯೂ ಸಿಸಿಬಿ ತಂಡ ಪರಿಶೀಲನೆ ನಡೆಸಲಿದೆ.

ಹಾಲಶ್ರೀ ಬಂಧನ ; ಸಿಸಿಬಿಗೆ ಚಳ್ಳೆಹಣ್ಣು ತಿನ್ನಿಸಲು ಸ್ವಾಮಿ ಹೂಡಿದ ಕಳ್ಳಾಟದ ಸಂಪೂರ್ಣ ಮಾಹಿತಿ ನೋಡಿ
“ಸ್ವಾಮೀಜಿಗಳು ಅರೆಸ್ಟ್ ಆಗಲಿ ಇನ್ನೂ ಹಲವಷ್ಟು ಜನರ ಬಂಡವಾಳ ಹೊರಬರಲಿದೆ” ಎಂದು ಕೋಟಿ ಕೋಟಿ ವಂಚನೆಯ ಎ1 ಆರೋಪಿ ಚೈತ್ರ ಕುಂದಾಪುರ ಹೇಳಿ ಮೂರೇ ದಿನಗಳಲ್ಲಿ ಕಳ್ಳಸ್ವಾಮಿ ಎಂದೇ ಕುಖ್ಯಾತಿ ಪಡೆದಿರುವ ಅಭಿನವ ಹಾಲಶ್ರೀ ಬಂಧನವಾಗಿದೆ. ಒಡಿಶಾದ ಕಟಕ್ ನಲ್ಲಿ ಸಿನಿಮೀಯ ಶೈಲಿಯಲ್ಲಿ ಸಿಸಿಬಿ ಪೊಲೀಸರು ಹಾಲಶ್ರೀ ಸ್ವಾಮಿಯನ್ನು ಬಂಧಿಸಿದ್ದಾರೆ.

ಪ್ರಕರಣದ ದಾಖಲಾದ ದಿನದಿಂದಲೇ ನಾಪತ್ತೆಯಾಗಿದ್ದ ಕಳ್ಳಸ್ವಾಮಿ ಹೈದರಾಬಾದ್ ಗೆ ಹೋದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲಿಂದ ತನಿಖೆ ಹಾಲಶ್ರೀ ಬೇಟೆಗೆ ಮುಂದಾಗಿದ್ದ ಸಿಸಿಬಿ ಪೊಲೀಸರು ಹಾಲಶ್ರೀ ಕಾರು ಚಾಲಕನನ್ನು ತಂದು ವಿಚಾರಣೆಗೆ ಒಳಪಡಿಸಿದ್ದರು. ಆತನ ಬಳಿ ಹೆಚ್ಚು ಮಾಹಿತಿ ಸಿಗಲಿಲ್ಲವಾದರೂ ಅವನ ಮೇಲೂ ನಿಗಾ ಇಡಲಾಗಿತ್ತು‌. ಹೀಗಾಗಿ ಆತನಿಗೆ ಬರುವ ಫೋನ್‌ಗೆ ಕರೆಗಳ ಆಧಾರಿಸಿ ಸ್ವಾಮಿಯನ್ನು ಟ್ರಾಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸಧ್ಯ ಸಿಸಿಬಿ ಬಂಧನದಲ್ಲಿ ಇರುವ ಹಾಲಶ್ರೀ ಬಂಧನದ ಪ್ರಕ್ರಿಯೆ ಕೂಡಾ ಅಷ್ಟೆ ರೋಚಕವಾಗಿದೆ. ಬಹುಶಃ ಚೈತ್ರ ಕುಂದಾಪುರ ಹೇಳಿಕೆಯಂತೆ ಸ್ವಾಮಿ ಬಂಧನದ ನಂತರ ಹಲವರ ಬಂಡವಾಳ ಬಯಲಿಗೆ ಬರಲು ಹಾಲಶ್ರೀ ಬಂಧನವೇ ಒಂದು ದೊಡ್ಡ ಘಟ್ಟವಾಗಿರುವ ಕಾರಣ ಈ ಕಳ್ಳಸ್ವಾಮಿ ತಪ್ಪಿಸಿಕೊಳ್ಳಲು ನಾನಾ ಪ್ರಯತ್ನ ಹೂಡಿದ್ದಾರೆ.

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಕುಖ್ಯಾತ ಕಳ್ಳಸ್ವಾಮಿ ವೇಷ ಬದಲಿಸುವ ಕಳ್ಳಾಟ ನಡೆಸಿದ್ದಾರೆ. ಮೊದಲಿಗೆ ಕಾವಿ ಹಾಕಿಕೊಂಡು ಸ್ವಾಮಿಯ ವೇಷದಲ್ಲಿದ್ದ ಹಾಲಶ್ರೀ ನಂತರ ಕಾವಿ ತಗೆದು ಟೀ ಶರ್ಟ್ ಧರಿಸಿ ಮಾಮೂಲಿ ಜನರಂತೆ ನಾಟಕವಾಡಿದ್ದಾರೆ.

ಈ ನಡುವೆ ಹೊಸ ಮೊಬೈಲ್ ಖರೀದಿ ಮಾಡಿದ್ದ ಹಾಲಶ್ರೀ, ಪ್ರತಿಯೊಂದು ಕರೆಗೂ ಸಿಮ್ ಚೇಂಜ್ ಮಾಡಿದ್ದಾರೆ. ಆದರೆ ಪ್ರತಿಯೊಂದು ಹೊಸ ಸಿಮ್ ಕರೆಯೂ ಕರ್ನಾಟಕಕ್ಕೇ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಾಹಿತಿ ತಿಳಿದು ಕರೆ ಬಂದ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಹಾಲಶ್ರೀ ಕರೆ ಮಾಡಿದ ಲೊಕೇಶನ್ ಟ್ರೇಸ್ ಮೂಲಕ ಕಳ್ಳಸ್ವಾಮಿಗೆ ಸಿಸಿಬಿ ಖೆಡ್ಡಾ ತೋಡಿ ಬಂಧಿಸಿದ್ದಾರೆ.

ಈ ನಡುವೆ, ಪೊಲೀಸರ ಕಣ್ತಪ್ಪಿಸಲು ಹಾಲಶ್ರೀ ನಂಬರ್ ಪ್ಲೇಟ್ ಬದಲಿಸಿದ ಕಾರನ್ನು ಉಪಯೋಗಿಸಿದ್ದರು ಎನ್ನಲಾಗಿದೆ. ಒಟ್ಟಾರೆ ಕೇಸ್ ದಾಖಲಾಗಿ 11 ದಿನಗಳ ನಂತರ ಕಳ್ಳಸ್ವಾಮಿಯ ಬಂಧನವಾಗಿದೆ.

ಬಂಧನದ ನಂತರ ಬಿಜೆಪಿ ಪಕ್ಷದ ಪ್ರಮುಖ ನಾಯಕರು ಮತ್ತು ಬಿಜೆಪಿ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿರುವ ಹಲವು ಪ್ರಮುಖ ವ್ಯಕ್ತಿಗಳ ಬಂಡವಾಳ ಹೊರಬರಲಿದೆ ಎಂದೇ ಅಂದಾಜಿಸಲಾಗಿದೆ. ಅದರಲ್ಲೂ ಬಿಜೆಪಿ ಪಕ್ಷದ ಬಾಡಿಗೆ ಭಾಷಣಕಾರನೊಬ್ಬನ ಮೇಲೆ ಹಲವು ಗುಮಾನಿ ಇದ್ದು ಆತನೇ ಇವೆಲ್ಲದರ ಮಾಸ್ಟರ್ ಮೈಂಡ್ ಎಂದೂ ಹೇಳಲಾಗುತ್ತಿದೆ.

ಸಧ್ಯಕ್ಕೆ ಬಂಧನವಾದ ಹಾಲಶ್ರೀಯನ್ನು ಇಂದು ಮಧ್ಯರಾತ್ರಿ ವೇಳೆಗೆ ಬೆಂಗಳೂರಿಗೆ ಸಿಸಿಬಿ ಪೊಲೀಸರು ಕರೆತರಲಿದ್ದಾರೆ. ಒಡಿಶಾದಲ್ಲಿ ಬಂಧಿತರಾಗಿರುವ ಅಭಿವನ ಹಾಲಶ್ರೀಯನ್ನು ಈಗ ಅಲ್ಲಿನ ಪೊಲೀಸ್‌ ಠಾಣೆಗೆ ಹಾಜರುಪಡಿಸಿ ಬಳಿಕ ವಿಮಾನದ ಮೂಲಕ ಸಂಜೆ ವೇಳೆಗೆ ಬೆಂಗಳೂರಿಗೆ ಕರೆ ತರುವ ಸಾಧ್ಯತೆ ಇದೆ.

ಬಿಜೆಪಿ ಎಮ್ಮೆಲ್ಲೆ ಟಿಕೆಟ್ ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ಬಿಜೆಪಿ ಟಿಕೆಟ್ ಹಗರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳನ್ನು ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಆಕೆ ಸಂಪೂರ್ಣವಾಗಿ ನಾರ್ಮಲ್ ಆಗಿದ್ದಾಳೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವಿಚಾರಣೆ ವೇಳೆ ಕುಸಿದು ಬಿದ್ದಿದ್ದರಿಂದ ಚೈತ್ರಾಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆ ಮೂರ್ಛೆ ರೋಗದಿಂದ ಬಳಲುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆದರೆ, ವಿಚಾರಣೆ ತಪ್ಪಿಸಲು ಹೈ ಡ್ರಾಮಾ ಸೃಷ್ಟಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ಹೇಳಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಚೈತ್ರಾಗೆ ಯಾವುದೇ ಸಮಸ್ಯೆಯಿಲ್ಲದಿರುವುದು ದೃಢಪಟ್ಟಿದೆ.

ಟಿಕೆಟ್ ಹಗರಣಕ್ಕೆ ಸಂಬಂಧಿಸಿದಂತೆ ಆಕೆಯಿಂದ ಎಸ್‌ಯುವಿ ಕಾರ್‌, 1.1 ಕೋಟಿ ರೂಪಾಯಿ ನಗದು ಮತ್ತು 40 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಠೇವಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೈಗಾರಿಕೋದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ 5 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಮತ್ತು ಆಕೆಯ ತಂಡವನ್ನು ವಿಶೇಷ ವಿಭಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವಶಪಡಿಸಿಕೊಂಡಿರುವ ಸೊತ್ತುಗಳ ಕುರಿತು ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಉಡುಪಿ, ಕುಂದಾಪುರದಲ್ಲಿ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಉತ್ತರ ಕರ್ನಾಟಕ ಭಾಗದ ಬಾಗಲಕೋಟೆಯಲ್ಲಿ SUVಯನ್ನು ಪತ್ತೆಹಚ್ಚಲಾಗಿದೆ.

ಇದೇ ವೇಳೆ ಚೈತ್ರಾ ಹಗರಣದಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದು, ಹಗರಣದ ಕುರಿತು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರವನ್ನೂ ಬರೆದಿದ್ದಾಳೆ.

ಈ ನಡುವೆ ಬಿಜೆಪಿ ಟಿಕೆಟ್ ಭರವಸೆ ನೀಡಿ ಕೈಗಾರಿಕೋದ್ಯಮಿಯಿಂದ 1.5 ಕೋಟಿ ರೂಪಾಯಿ ಪಡೆದಿದ್ದ ಖ್ಯಾತ ಮಠಾಧೀಶ ಅಭಿನವ ಹಾಲಶ್ರೀಗಾಗಿ ಪೊಲೀಸರ ಶೋಧ ಮುಂದುವರೆದಿದೆ.