chakravarthisulibele – Peepal Media

ಬೆಂಗಳೂರು ತಲುಪಿದ ಹಾಲಶ್ರೀ : ದಿಗಿಲು ಬಿದ್ದಿರುವ ಕಾಣದ ಕೈಗಳು
ಬೆಂಗಳೂರು : ಬಿಜೆಪಿ ವಿಧಾನಸಭಾ ಟಿಕೆಟ್ ನ ಕೋಟಿ ಕೋಟಿ ವಂಚನೆ ಪ್ರಕರಣ ದಾಖಲಾಗಿ 11 ದಿನಗಳ ನಂತರ ಕಳ್ಳಸ್ವಾಮಿ ಎಂದೇ ಕುಖ್ಯಾತಿ ಪಡೆದ ಹಾಲಶ್ರೀ ಬಂಧನವಾಗಿದೆ. ಸಿಸಿಬಿ ಪೊಲೀಸರಿಂದ ಒಡಿಶಾದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದಿರುವ ಸಿಸಿಬಿ ಪೊಲೀಸರು ಗುಟ್ಟಾಗಿ ಹಾಲಶ್ರೀಯನ್ನು ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಮಾನ ನಿಲ್ದಾಣದಿಂದ ನೇರವಾಗಿ ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಕರಣದ ಅಡಿಯಲ್ಲಿ ಹೆಚ್ಚಿನ ತನಿಖೆ ಕಾರಣಕ್ಕೆ ಸಿಸಿಬಿ ಅಧಿಕಾರಿಗಳಿಗೆ ಕೋರ್ಟ್ ನ ಅನುಮತಿ ಬೇಕಿದ್ದು, ಕಾನೂನು ಪ್ರಕಾರವೇ ಎಲ್ಲಾ ಪ್ರಕ್ರಿಯೆ ಮುಂದುವರಿಸಲಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ನಿಂದಲೇ ರಹಸ್ಯ ಸ್ಥಳಕ್ಕೆ ಹಾಲಶ್ರೀ ಸ್ವಾಮಿಯನ್ನು ಶಿಫ್ಟ್ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಒಡಿಶಾದಲ್ಲಿ ಪೊಲೀಸರಿಗೇ ವಂಚಿಸಿ ಪರಾರಿಯಾಗಲು ಹೊರಟಿದ್ದ ಹಾಲಶ್ರೀ ಸ್ವಾಮಿಯನ್ನು ಗುಪ್ತವಾಗಿ ರಹಸ್ಯ ಸ್ಥಳಕ್ಕೆ ಕರೆದೊಯ್ಯಬೇಕು. ಸ್ವಲ್ಪ ಹೆಚ್ಚು ಕಡಿಮೆ ಆದರೂ ಆತ ತಪ್ಪಿಸಿಕೊಳ್ಳಲು ಸಾಧ್ಯತೆ ಇದೆ ಅಥವಾ ಕಾನೂನಿನ ಅಡಿಯಲ್ಲೇ ಆತ ನುಣುಚಿಕೊಳ್ಳಬಹುದು. ಹಾಗಾಗಿ ತನಿಖೆ ಚುರುಕುಗೊಳ್ಳಲು ಈ ಗೌಪ್ಯತೆ ಅಗತ್ಯ ಎಂದು ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಹಾಲಶ್ರೀ ಬಂಧನದಿಂದ ಈಗ ಬಿಜೆಪಿ ಪಕ್ಷದ ಒಳಗೆ ಟಿಕೆಟ್ ಲಾಭಿಯಲ್ಲಿ ಭಾಗಿಯಾಗಿದ್ದವರಿಗೆ, ಭಾಷಣದ ಮೂಲಕ ಎಲ್ಲರನ್ನೂ ಯಾಮಾರಿಸಿ ಸಾಚಾತನ ಪ್ರದರ್ಶನ ಮಾಡಿದವರಿಗೆ ಈಗ ದಿಗಿಲು ಹುಟ್ಟಿದಂತಾಗಿದೆ. ಸಧ್ಯಕ್ಕೆ ಹಾಲಶ್ರೀ ಜೊತೆಗೆ ಭಾಗಿ ಆಗಿರಬಹುದಾದ ಪ್ರಮುಖ ವ್ಯಕ್ತಿಗಳ ಚಲನವಲನಗಳ ಬಗ್ಗೆಯೂ ಸಿಸಿಬಿ ಪೊಲೀಸರು ಕಣ್ಣಿಟ್ಟಿದ್ದಾರೆ.

ಮಹಿಳೆಗೆ ಅವಹೇಳನಕಾರಿ ಕಾಮೆಂಟ್ : ಬಿಜೆಪಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ಎಫ್‌ಐಆರ್ ದಾಖಲು
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಅವಹೇಳನಕಾರಿ ಕಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿ ಆಗಸ್ಟ್ 24ರಂದು ಕಾಂಗ್ರೆಸ್ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕಿ ಸೌಗಂಧಿಕಾ ರಘುನಾಥ್ ದೂರು ದಾಖಲಿಸಿದ್ದರು. ಇದರ ಅಡಿಯಲ್ಲಿ ಐಪಿಸಿ ಸೆಕ್ಷನ್ 504 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಸಿದ್ದರು.

ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೌಗಂಧಿಕಾ ರಘುನಾಥ್ ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ. ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು ಎಂದು ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಚಕ್ರವರ್ತಿ ಸೂಲಿಬೆಲೆ ‘ನಿನಗೆ ಎಲ್ಲಿ ಯಾಕೆ ಉರಿ ಬಂತೊ ಗೊತ್ತಿಲ್ಲ’ ಎಂದು ಚಕ್ರವರ್ತಿ ಸೂಲಿಬೆಲೆ ಅಸಭ್ಯವಾಗಿ ಕಮೆಂಟ್ ಹಾಕಿದ್ದರು.

ಮಹಿಳೆಯರ ಬಗ್ಗೆ ಅಸಭ್ಯ ವರ್ತನೆ: ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮೇಲೆ ದೂರು
ಫೇಸ್ ಬುಕ್ ನಲ್ಲಿ ಅಸಭ್ಯವಾಗಿ ಕಮೆಂಟ್ ಹಾಕಿ ತನ್ನ ತೇಜೋವಧೆ ಮಾಡಿದ್ದಾನೆ ಎಂದು ಚಕ್ರವರ್ತಿ ಸೂಲಿಬೆಲೆ ಎಂಬ ಭಾಷಣಕಾರರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಪಿಸಿಸಿ ಯ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯ ಉಪಾಧ್ಯಕ್ಷೆ ಆಗಿರುವ ಸೌಗಂಧಿಕ ರಘುನಾಥ್ ಎಂಬುವವರು ಈ ದೂರು ನೀಡಿದ್ದು ಇವರ ಬಗ್ಗೆ ಅವಾಚ್ಯವಾಗಿ ಫೇಸ್ಬುಕ್ ಕಾಮೆಂಟ್ ಮಾಡಿ, ನಂತರ ಡಿಲಿಟ್ ಮಾಡಿ , ಫೇಕ್ ಅಕೌಂಟ್ ಬಳಸಿ ಎಡಿಟ್ ಮಾಡಿಸಿ ಮಾನಹಾನಿಕರ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಚಂದ್ರಯಾನ 3 ಯಶಸ್ಸಿಗೆ ದೇವರಿಗೆ ಕೈ ಮುಗಿದು ಫೋಟೋ ಹಾಕಿ ಎಂದು ಸೂಲಿಬೆಲೆ ಮಾಡಿದ ಪೋಸ್ಟ್ ಮಾಡಿದ್ದು, ಇದಕ್ಕೆ ಸೌಗಂಧಿಕಾ ‘ವಿಜ್ಞಾನಿಗಳ ಶ್ರಮಕ್ಕೆ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಆದರೆ ಅದನ್ನು ತೋರಿಕೆಗಾಗಿ ಆಗಲಿ ಅಥವಾ ಫೋಟೋಗಾಗಿಯಾಗಲಿ ದೇವರ ಮುಂದೆ ನಿಲ್ಲಬೇಡಿ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಚಕ್ರವರ್ತಿ ಸೂಲಿಬೆಲೆ ಕೀಳು ಮಟ್ಟದ ಕಾಮೆಂಟ್ ಮಾಡಿದ್ದು “ನಿನಗೆ ಎಲ್ಲಿ ಯಾಕೆ ಉರಿ ಬಂತು?” ಎಂದು ಕೇಳಿದ್ದಾರೆ.

ಸೌಗಂಧಿಕಾ ಜೊತೆಗೆ ಜಿಲ್ಲಾ ಕಾಂಗ್ರೆಸ್ಸಿನ ಮಹಿಳಾ ನಾಯಕಿಯರಾದ ಸ್ಟೇಲ್ಲಾ ಮಾರ್ಟೀನ್, ಅರ್ಚನಾ, ಸಂಧ್ಯಾರಾಣಿ, ಶಮೀಮ್ ಭಾನು, ಶೋಭಾ, ನಾಗರತ್ನ, ಗ್ಲಾಡಿ, ರಸಿಯ, ಸಲೀಮ ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಇದಲ್ಲದೇ, ಫೇಕ್ ಫೇಸ್ಬುಕ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವವರ ಮೇಲೆ ಕೂಡ ದೂರು ನೀಡಲಾಗಿದೆ.

ಮೋದಿ ಒಬ್ಬರೇ ಸಾಕು ಎಂದ ಸೂಲಿಬೆಲೆಗೆ ನೆಟ್ಟಿಗರ ಮಂಗಳಾರತಿ!!
ಬಿಜೆಪಿ ಪಕ್ಷದ ಬಾಡಿಗೆ ಬಾಷಣಕಾರ ಎಂದೇ ಹೆಸರಾಗಿರುವ ಚಕ್ರವರ್ತಿ ಸೂಲಿಬೆಲೆ ಯಾನೆ ಮಿಥುನ್ ಚಕ್ರವರ್ತಿಯ ಟ್ವಿಟ್ಟರ್ ಪೋಸ್ಟ್ ಒಂದಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮೋದಿ ಒಬ್ಬರೇ ಸಾಕು’ ಎಂಬ ವಿಲಕ್ಷಣ ಮಾದರಿಯ ಅಭಿಯಾನಕ್ಕೆ ಇಳಿದಿರುವ ಚಕ್ರವರ್ತಿ ಸೂಲಿಬೆಲೆ ಮತ್ತು ತಂಡಕ್ಕೆ ಈಗ ನೆಟ್ಟಿಗರು, ಬಿಜೆಪಿ ಮಂದಿಯೂ ಸೇರಿದಂತೆ ಬಹುತೇಕರು ಟ್ವಿಟ್ಟರ್ ನಲ್ಲಿ ಹಾಕಿದ ಪೋಸ್ಟ್ ಗೆ ಬೈದಾಡಿರುವುದು ಈಗ ವೈರಲ್ ಆಗುತ್ತಿದೆ.

ಅಂದಹಾಗೆ ಚುನಾವಣೆ ಬಂತು ಎಂದಾಗ ಎದುರಾಗುವ ಚಕ್ರವರ್ತಿ ಸೂಲಿಬೆಲೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಕಣ್ಮರೆಯಾಗಿದ್ದು ಹಲವು ಮಂದಿ ಗಮನಿಸಿರಬಹುದು. ಆದರೆ ಮುಂದೆ ಎದುರಾಗುವ ಲೋಕಸಭಾ ಚುನಾವಣೆಗೆಂದೇ ಸರ್ವ ಸನ್ನದ್ದರಾಗಿ ಬಂದಿರುವ ಈ ವ್ಯಕ್ತಿ ಈಗ ಮೋದಿ ಪರವಾಗಿ ಕ್ಯಾಂಪೇನ್ ಗೆ ಇಳಿದಿದ್ದಾರೆ.

ಕಳೆದ 9 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಸರ್ಕಾರದ ‘ಸಾಧನೆ’ಗಳನ್ನು ಪಟ್ಟಿ ಮಾಡಿ ಜನರ ಮುಂದೆ ಇಡುವ ಕೆಲಸಕ್ಕೆ ಮುಂದಾಗಿದ್ದಾರೆ ಚಕ್ರವರ್ತಿ ಸೂಲಿಬೆಲೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ಬಿಜೆಪಿ ಪಕ್ಷ ‘ಮೋದಿ’ ಎಂಬ ಒಂದೇ ಒಂದು ಮುಖವನ್ನು ಇಟ್ಟು ಚುನಾವಣೆ ಎದುರಿಸುವ ಮುನ್ಸೂಚನೆಯನ್ನ ಚಕ್ರವರ್ತಿ ಸೂಲಿಬೆಲೆಯ ಈ ಅಭಿಯಾನ ಹೊರಹಾಕಿದಂತಿದೆ.

ಆದರೆ 2019 ಕ್ಕೂ ಮುನ್ನ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸಿಗುತ್ತಿದ್ದ ಸಕಾರಾತ್ಮಕ ಪ್ರತಿಕ್ರಿಯೆ ಈಗ ಇಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಜನಪರ ಚಿಂತನೆಯ ವ್ಯಕ್ತಿಗಳು ಚಕ್ರವರ್ತಿ ಸೂಲಿಬೆಲೆ ಹಳೆಯ ಭಾಷಣಗಳನ್ನು ಹೆಕ್ಕಿ ತಗೆದು, ಆ ಭಾಷಣಗಳಲ್ಲಿ ಆಡಿರುವ ಸುಳ್ಳು ಮಾತುಗಳು ‘ಹೆಂಗ್ ಪುಂಗ್ಲಿ’ ಅಭಿಯಾನದ ಹೆಸರಿನಲ್ಲಿ ಈಗಲೂ ಟ್ರೋಲ್ ಆಗುತ್ತಿವೆ. ಸಧ್ಯ ಅದೊಂದು ಅಭಿಯಾನದಲ್ಲಿ ಹೊರಬಂದ ಹೆಚ್ಚಿನ ಭಾಷಣದ ಅಂಶಗಳಿಗೆ ಈ ವರೆಗೂ ಚಕ್ರವರ್ತಿ ಸೂಲಿಬೆಲೆ ಕಡೆಯಿಂದ ಈಗಲೂ ಉತ್ತರ ಬಂದಿಲ್ಲ ಎಂಬುದು ಸ್ಪಷ್ಟ.

ಅಂದಹಾಗೆ ಈ ಹಿಂದೆ 2014 ಮತ್ತು 2019 ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಇದೇ ಚಕ್ರವರ್ತಿ ಸೂಲಿಬೆಲೆ ಮಾಡಿದ ಭಾಷಣಗಳು, ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆದ ಕ್ಯಾಂಪೇನ್ ಗಳು ಹೆಚ್ಚು ಚರ್ಚಿತ ವಿಷಯಗಳಾಗಿದ್ದವು. ಅದರ ಪರಿಣಾಮವೇ ಈಗ ಚಕ್ರವರ್ತಿ ಸೂಲಿಬೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪ್ರತೀ ಪೋಸ್ಟ್ ನಲ್ಲೂ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದರ ಭಾಗವಾಗಿ ಇಂದು ‘ಮೋದಿ ಒಬ್ಬರೇ ಸಾಕು’ ಎಂದು ಹಾಕಿದ ಪೋಸ್ಟ್ ಗೆ ಬಂದ ಪ್ರತೀ ಪ್ರತಿಕ್ರಿಯೆ ಅವರ ವಿರುದ್ಧವಾಗೇ ಇದೆ.

https://twitter.com/astitvam/status/1674293679471857664?t=roEaK1sxBegPIFUXT9PUQA&s=19

ಮೋದಿಯೊಬ್ಬರೇ ಸಾಕು ಎಂದು ಹಾಕಿದ ಈ ಪೋಸ್ಟ್ ಗೆ ಕೆಲವು ಆಯ್ದ ಪ್ರತಿಕ್ರಿಯೆ ಈ ಕೆಳಗಿನಂತಿದೆ.
ಕುಶಾಲ್ ಬಿದರೆ ಎಂಬುವವರು : “ನೋಡಿ ಮಿಸ್ಟರ್ ಹೆಂಗ್ ಪುಂಗ್ಲಿ 99,000 ಸ್ಟಾರ್ಟ್ ಅಪ್ ಶುರು ಮಾಡಿದ ಮೋದಿಗೆ ಅವರಿಗಾಗಿ ಜೀತ ಮಾಡುತ್ತಿದ್ದ ನೀನು ನೆನಪಾಗಲಿಲ್ಲ ನೋಡು! ನಿನಗೆ ಅಂತ ಒಂದು ಸ್ಟಾರ್ಟ್ ಅಪ್ ಶುರು ಮಾಡಿಕೊಡೋದು ಬಿಡು ಒಂದು ಗುಮಾಸ್ತನ ಕೆಲಸ ಸಹ ಕೊಡಿಸಲಿಲ್ಲವಲ್ಲ! ಹೋಗಿ ಯಾವುದಾದರೂ ಕೆರೆನೋ ಬಾವಿನೋ ನೋಡ್ಕೋ ಗುರು!!!!” ಎಂದು ಪ್ರತಿಕ್ರಿಯಿಸಿದ್ದಾರೆ.
https://twitter.com/Kushal_Bidare/status/1674384977885294593?t=Y5BkpCV24tbPcUBOLOvMOA&s=19

ಸುಧೀರ್ ಕುಮಾರ್ ಎಂಬುವವರು : “ಮಗ ಈ ಅಂಕಿ ಅಂಶಗಳು ನಿನಗೆ ಮಾತ್ರ ಸಿಗೋದ ಇಲ್ಲ ಬರೀ ಬುರುಡೆ ಬಿಡೋದಾ ಹಣ ತಗೊಂಡು ಈ ಅಂಕಿ ಅಂಶಗಳು ಎಲ್ಲಿ. ಸಿಗುತ್ತದೆ ಅದರ ಲಿಂಕ್ ಸೇರಿಸು ಎಲ್ಲರೂ ತಿಳಿದುಕೊಳ್ಳಲಿ” ಎಂದು ಕಾಲೆಳೆದಿದ್ದಾರೆ.
https://twitter.com/CSudheerkumar4/status/1674319488886648834?t=EiDilSaXKZyWxKSN_SydMA&s=19

ಹಾಗೇ ಶಿವಕುಮಾರ ಎಂಬುವವರು : “ನೀನು ಬಂದರೆ ನನ್ನ ಪ್ರಶ್ನೆಗಳು. ಕಪ್ಪು ಹಣ ಎಲ್ಲಿ? ಇನ್ನು ನೂರು ದಿನ ಆಗಿಲ್ವ. ಸ್ಮಾರ್ಟ್ ಸಿಟಿ ಎಲ್ಲಿ? ವರ್ಷದಲ್ಲಿ 2 ಕೋಟಿ ಉದ್ಯೋಗ ಎಲ್ಲಿ? ಪೆಟ್ರೋಲ್ Rs 50 ಡೀಸೆಲ್ Rs 30 ಯಾವಾಗ? ಪಿಟೀಲು ಮಾಮನ 1 ಡಾಲರ್ ಗೆ 15 ರೂಪಾಯಿ ಯಾವಾಗ? ಬುಲೆಟ್ ಟ್ರೈನ್ ಯಾವಾಗ? ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಕೊಡು ಮೊದಲು ಇವೆಲ್ಲ ನೀನೇ ಪುಂಗಿರೋದು!” ಎಂಬಂತೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
https://twitter.com/SHIVAKUMAR81374/status/1674637811813871616?t=khRXS7k-bcFnaKzcqh2NXA&s=19

ಟ್ವಿಟ್ ಗೆ ಬಂದ ಬಹುತೇಕ 99 ಪ್ರತಿಶತ ಪ್ರತಿಕ್ರಿಯೆಗಳು ಚಕ್ರವರ್ತಿ ಸೂಲಿಬೆಲೆಯನ್ನು ತರಾಟೆಗೆ ತಗೆದುಕೊಂಡದ್ದೇ ಆಗಿವೆ.

ಅಂತೂ ಚಕ್ರವರ್ತಿ ಸೂಲಿಬೆಲೆ ಭಾಷಣಗಳು ಕಳೆದ ಅವಧಿಯಲ್ಲಿ ಮಾಡಿದಷ್ಟು ಮ್ಯಾಜಿಕ್ ಈ ಬಾರಿ ಮಾಡುವುದಿಲ್ಲ ಎಂಬುದು ಸತ್ಯ. ಯಾಕೆಂದರೆ ಕೇವಲ ನಾಲ್ಕು ವರ್ಷಗಳ ಈಚೆಗೆ ಚಕ್ರವರ್ತಿ ಸೂಲಿಬೆಲೆಯ ಪ್ರತೀ ಭಾಷಣಗಳು ಒಂದರ ಹಿಂದೆ ಒಂದರಂತೆ ಟ್ರೋಲ್ ಗೆ ಒಳಗಾಗಿವೆ. ಅದೆಷ್ಟು ಎಂದರೆ ಆತ ಬಾಯಿ ಬಿಟ್ಟರೆ ಸುಳ್ಳು ಎಂಬಷ್ಟರ ಮಟ್ಟಿಗೆ ಆತನ ಭಾಷಣಗಳು ಟ್ರೋಲ್ ಗೆ ಒಳಗಾಗಿವೆ.

ಬಿಜೆಪಿಯ ಬಾಡಿಗೆ ಭಾಷಣಕಾರ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಟೀಕೆ
ಬೆಂಗಳೂರು: ಬಿಜೆಪಿಯ ಬಾಡಿಗೆ ಭಾಷಣಕಾರ(ಚಕ್ರವರ್ತಿ ಸೂಲಿಬೆಲೆ) ಬಿಜೆಪಿಯ ವಿರುದ್ಧವೇ ಮಾತನಾಡಿರುವುದು ಒಂದು ಅದ್ಭುತವಾಗಿದೆ. ಇದಕ್ಕೆ ಸರ್ಕಾರದ ವೈಫಲ್ಯಗಳು ಕಾರಣವೇ, ಬಿಜೆಪಿ v/s ಬಿಜೆಪಿ ಜಟಾಪಟಿಯ ಮುಂದುವರಿದ ಭಾಗವೇ? ಅಥವಾ ಬಿಜೆಪಿ ವಲಸಿಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ವಿರುದ್ಧದ ಅಸಹನೆಯೇ? ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಚಕ್ರವರ್ತಿ ಸೂಲಿಬೆಲೆ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ಮುಖಂಡನ ಹತ್ಯೆಯನ್ನು ಖಂಡಿಸಿ ಸರಣಿ ಟ್ವೀಟ್ ಮಾಡುವ ಮೂಲಕ ಬಸವರಾಜ ಬೊಮ್ಮಾಯಿ ಸೇರಿ ಹಲವಾರು ಬಿಜೆಪಿ ಮುಖಂಡರನ್ನು ಟೀಕಿಸಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ವಿಷಯದ ಕುರಿತು ಪ್ರತಿಕ್ರಿಯೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಬಾಡಿಗೆ ಭಾಷಣಕಾರನೊಬ್ಬ ಬಿಜೆಪಿಯ ವಿರುದ್ಧವೇ ತಿರುಗಿ ಬಿದ್ದಿರುವುದು ಜಗತ್ತಿನ ಒಂದು ಅದ್ಭುತವೆಂದು ಹೇಳಿದೆ.

ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನೆಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ ಬಾಡಿಗೆ ಬಾಷಣಕೋರ!@BSBommai ಅವರೇ, ತಮ್ಮ ನಿಷ್ಕ್ರೀಯತೆಯ ಬಗ್ಗೆ ನಿಮ್ಮವರಿಂದಲೇ ಟೀಕೆಗಳು ಬಂದಿದ್ದರೂ ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡದಿರುವುದೇಕೆ?

ತಪ್ಪಿತಸ್ಥನ ಭಾವನೆಯೋ? ಅವರ ವಿರುದ್ಧ ಮಾತಾಡಲು ಭಯವೋ?#BJPvsBJP
— Karnataka Congress (@INCKarnataka) August 2, 2022

ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನಿಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ ಬಾಡಿಗೆ ಭಾಷಣಕಾರ! ಬಸವರಾಜ ಬೊಮ್ಮಾಯಿ ಅವರೇ, ತಮ್ಮ ನಿಷ್ಕಿçಯತೆಯ ಬಗ್ಗೆ ನಿಮ್ಮವರಿಂದಲೇ ಟೀಕೆಗಳು ಬಂದಿದ್ದರೂ ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡದಿರುವುದೇಕೆ? ತಪ್ಪಿತಸ್ಥನ ಭಾವನೆಯೋ? ಅವರ ವಿರುದ್ಧ ಮಾತಾಡಲು ಭಯವೋ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.