chakravathisulibele – Peepal Media

ಬಿಜೆಪಿ ಭಾಷಣಕಾರ ಸೂಲಿಬೆಲೆಗೆ ಪೊರಕೆ ಪ್ರತಿಭಟನೆ ಬಿಸಿ
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರಿಗೆ ಅಸಭ್ಯ ಹಾಗೂ ಅವಹೇಳನಕಾರಿಯಾಗಿ ಪ್ರತಿಕ್ರಿಯೆ ಮಾಡಿದ ಆರೋಪದ ಮೇಲೆ ಬಿಜೆಪಿ ಪಕ್ಷದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಪೊರಕೆ ಪ್ರತಿಭಟನೆ ಬಿಸಿ ತಟ್ಟಿದೆ. ಕಳೆದ ಮಂಗಳವಾರ ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ಆಗಮಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗದ ಮಹಿಳೆಯರು ಪೊರಕೆ ತೋರಿಸಿ ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಪಕ್ಷದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಬರೆದ ಒಂದು ಬರಹಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೂ ಆಗಿರುವ ಸೌಗಂಧಿಕಾ ರಘುನಾಥ್ ಅವರು ಕಾಮೆಂಟ್ ಮಾಡಿದ್ದರು. ಸೌಗಂಧಿಕಾ ರಘುನಾಥ್ ಅವರು ಬರೆದ ಕಾಮೆಂಟ್ ಗೆ ಪ್ರತಿಕ್ರಿಯೆ ಕೊಡುವ ಸಮಯದಲ್ಲಿ ಅಸಭ್ಯವಾಗಿ ಬರೆದ ಚಕ್ರವರ್ತಿ ಸೂಲಿಬೆಲೆ ಸೌಗಂಧಿಕಾ ಅವರಿಗೆ ಅವಹೇಳನ ಮಾಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆ, ‘ಚಂದ್ರಾಯನ 3 ಯಶಸ್ವಿಯಾಗುವಂತೆ ಪ್ರಾರ್ಥಿಸಿ ಎಲ್ಲರೂ ಪೂಜೆ ಮಾಡಿ ಬಳಿಕ ಅದರ ಫೋಟೋವನ್ನು ತಮ್ಮ ಜಾಲತಾಣಗಳಲ್ಲಿ ಶೇರ್ ಮಾಡಿ’ ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದರು.

ಇದಕ್ಕೆ ಸೌಗಂಧಿಕ ಅವರು ಪೂಜೆ ಮಾಡುವುದು ಸರಿ, ಆದರೆ ಫೋಟೋ ಯಾಕೆ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಮರು ಕಾಮೆಂಟ್ ಮಾಡಿದ್ದ ಸೂಲಿಬೆಲೆ `ನಿನಗೆಲ್ಲಿ ಉರಿ?’ ಎಂಬ ರೀತಿಯಾಗಿ ಅಸಭ್ಯ ಪದಗಳಿಂದ ನಿಂದಿಸಿದ್ದನು. ಇದನ್ನೇ ಮುಖ್ಯವಾಗಿಟ್ಟುಕೊಂಡು ಶಿವಮೊಗ್ಗದಲ್ಲಿ ಸೂಲಿಬೆಲೆ ವಿರುದ್ಧ ದೂರು ನೀಡಲಾಗಿತ್ತು. ಲೀಗಲ್ ಒಪಿನಿಯನ್ ಪಡೆದೇ ದೂರು ದಾಖಲಿಸಿರುವುದಾಗಿಯೂ ಶಿವಮೊಗ್ಗ ಪೊಲೀಸರು ತಿಳಿಸಿದ್ದರು.

ಆ ನಂತರದಲ್ಲಿ ಮಂಗಳವಾರ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಷಣ ಇದ್ದ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಿಳೆಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ವಿವಾದಿತ ವ್ಯಕ್ತಿಯನ್ನು ಕರ್ನಾಟಕ ಸಂಘಕ್ಕೆ ಸೇರಿಸಿದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಇದೇ ಸಂದರ್ಭದಲ್ಲಿ ಶಿವಮೊಗ್ಗದ ಮಹಿಳೆಯರು ಸೇರಿದಂತೆ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಮೋದಿ ಎಂದು ಕೂಗಾಡಿದ್ದಾರೆ ಎಂದು ವರದಿಯಾಗಿದೆ.