chamarajanagara – Peepal Media

ಚಾಮರಾಜನಗರದಲ್ಲಿ ರೈತ ಮುಖಂಡರ ಮೇಲೆ ಬಿಜೆಪಿ ಗುಂಡಾಗಳಿಂದ ದಾಳಿ
ಬಡಗಲಪುರ ನಾಗೇಂದ್ರ ಹಾಗೂ ಮಹೇಶ್ ಪ್ರಭು ಮೇಲೆ ಹಲ್ಲೆ

ಚುರುಕು ಮುಟ್ಟಿಸಿರುವ ರೈತ ಸಂಕಲ್ಪ ಅಭಿಯಾನ

ಅಭಿಯಾನವನ್ನು ತೀವ್ರಗೊಳಿಸಲು ರೈತ ಮುಖಂಡರ ತೀರ್ಮಾನ

ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯ ರೈತ ಸಂಘದ ಕಡೆಯಿಂದ “ಬಿಜೆಪಿ ಮತ್ತು ಮೈತ್ರಿ ಪಕ್ಷಗಳನ್ನು ಸೋಲಿಸಿ – ರೈತ ಸಮುದಾಯವನ್ನು ಉಳಿಸಿ” ಎಂಬ ಅಭಿಯಾನವನ್ನು ರಾಜ್ಯವ್ಯಾಪಿಯಾಗಿ ಹಮ್ಮಿಕೊಳ್ಳಲಾಗಿತ್ತು. ಏಪ್ರಿಲ್ 17ರಂದು ಚಾಮರಾಜನಗರದ ಅಮೃತ ಭೂಮಿಯಲ್ಲಿರುವ ಪ್ರೊ. ನಂಜುಂಡಸ್ವಾಮಿಯವರ ಸಮಾಧಿ ಬಳಿ ರೈತ ಸಂಕಲ್ಪ ಸ್ವೀಕರಿಸಿ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು.

ರಾಜ್ಯದ 130 ವಿಧಾನ ಸಭಾ ಕ್ಷೇತ್ರಗಳಲ್ಲಿ ಅಭಿಯಾನ ಪ್ರಾರಂಭವಾಗಿದೆ. ರೈತ ಕಾರ್ಯಕರ್ತರು “ರೈತರ ಸಾಲ ಮನ್ನಾ ಮಾಡದ, ರೈತರ ಬೆಳೆಗೆ ಎಂ ಎಸ್ ಪಿ ನೀಡದ, ಬರದಿಂದ ರೈತರು ಕಂಗೆಟ್ಟಿದ್ದರೂ ಬಿಡಿಗಾಸ ಪರಿಹಾರ ನೀಡದ ಕೇಂದ್ರದ ಬಿಜೆಪಿ ಮತ್ತು ಮೈತ್ರಿ ಪಕ್ಷಗಳಿಗೆ ಮತ ನೀಡುವುದಿಲ್ಲ” ಎಂಬ ಪ್ರತಿಜ್ಞೆ ಸ್ವೀಕರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ರೈತರ ಈ ಅಭಿಯಾನ ರೈತವಿರೋಧಿ, ಕಾರ್ಪೋರೇಟ್ ಸಾಕು ನಾಯಿಯಾಗಿರುವ ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ರೈತ ಸಂಘ ತಿಳಿಸಿದೆ.

ಇದೇ ಉದ್ದೇಶದಿಂದ ಇಂದು ಚಾಮರಾಜನಗರದ ಬೀದಿಗಳಲ್ಲಿ ಪ್ರಚಾರ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಚಾರ ಬಿರುಸಿನಿಂದ ನಡೆದು, ಅದನ್ನು ಮುಕ್ತಾಯಗೊಳಿಸಿಕೊಂಡು ರೈತ ಸಂಘದ ಕಛೇರಿಗೆ ಮುಖಂಡರು ಹಿಂದುರುಗುತ್ತಿದ್ದಾಗ ಏಕಾಏಕಿ ದಾಳಿ ಮಾಡಿರುವ ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ, ರೈತ ಸಂಘದ ಮುಖಂಡರಾದ ಮಹೇಶ್ ಪ್ರಭು ಅವರ ಮೇಲೆ ದಾಳಿ ಮಾಡಿದ್ದಾರೆ. ಬಿಜೆಪಿ ಪಕ್ಷದ ಮುಖಂಡರು ಅಕ್ಷರಶಃ ಗೂಂಡಾ ಪ್ರವೃತ್ತಿ ಮೆರೆದಿದ್ದಾರೆ. ಈ ಗುಂಡಾಗಿರಿಯನ್ನು ಎಲ್ಲಾ ಪ್ರಜ್ಞಾವಂತರು ತೀವ್ರವಾಗಿ ಖಂಡಿಸಬೇಕೆಂದು ರೈತ ಸಂಘ ಮನವಿ ಮಾಡಿದೆ.

ಬಿಜೆಪಿ ಪಕ್ಷದ ಈ ಗೂಂಡಾ ಪ್ರವೃತ್ತಿಯ ಕಾರಣಕ್ಕೆ ಅಭಿಯಾನವನ್ನು ನಾವು ಮತ್ತಷ್ಟು ಬಿರುಸುಗೊಳಿಸುತ್ತೇವೆ. ಈ ಬಾರಿ ರೈತರೆಲ್ಲರೂ ಕೂಡಿ ಈ ದ್ರೋಹಿ ಪಕ್ಷಗಳಿಗೆ ಸರಿಯಾದ ರೀತಿಯಲ್ಲಿ ಓಟಿನ ಏಟನ್ನು ನೀಡುತ್ತೇವೆ. ಎರಡನೇ ಸುತ್ತಿನ ಮತದಾನ ನಡೆಯಲಿರುವ ಉತ್ತರ ಭಾಗದ ಕ್ಷೇತ್ರಗಳಲ್ಲೂ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸುತ್ತೇವೆ. ರೈತಕುಲದ ಈ ಹೋರಾಟಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

ಕಾಡುಗಳ್ಳ ವೀರಪ್ಪನ್‌ ಮತ್ತು ಅರಣ್ಯಾಧಿಕಾರಿ ಶ್ರೀನಿವಾಸ್:‌ ಒಂದು ದೀರ್ಘ ಸೇಡಿನ ಕತೆ
“ಶ್ರೀನಿವಾಸನ ಹೃದಯದಿಂದ ರಕ್ತ ಚಿಮ್ಮುವುದನ್ನು ನೋಡಬೇಕೆನ್ನುವುದು ನನ್ನ ಆಸೆಯಾಗಿತ್ತು. ಏನಾಗುತ್ತಿದೆ ಎನ್ನುವುದು ಅವನ ಅರಿವೆಗೆ ಬರುವ ಮೊದಲೇ ನಾನು ಅವನಿಗೆ ಗುಂಡಿಕ್ಕಿ ನೆಲಕ್ಕೆ ಕೆಡವಿದ್ದೆ. ಅವನ ರುಂಡ ಮುಂಡವನ್ನು ಬೇರೆ ಬೇರೆ ಮಾಡಿದ್ದೆ. ಅವನ ಕೈಗಳನ್ನು ಕತ್ತರಿಸಿ ಹಾಕಿದ್ದೆ. ಏಕೆಂದರೇ ಅದೇ ಕೈಗಳು ನನ್ನತ್ತ ಮಷಿನ್‌ ಗನ್‌ ಬಳಸಿ ಗುಂಡು ಹಾರಿಸಲು ಬಯಸಿದ್ದವು.”

ಇದು ದಂತ ಚೋರ ಮತ್ತು ಶ್ರೀಗಂಧ ಕಳ್ಳ ಸಾಗಣೆದಾರ ವೀರಪ್ಪನ್ನನ ಮಾತುಗಳು, ಇದು ಅವನು ಇಂಡಿಯನ್‌ ಫಾರೆಸ್ಟ್‌ ಆಫೀಸರ್‌ ಆಗಿದ್ದ ಪಾಂಡಿಲ್ಲಪಲ್ಲಿ ಶ್ರೀನಿವಾಸ್ ಅವರ ಹತ್ಯೆಯ ಬಗ್ಗೆ ಹೇಳಿದ್ದ ಮಾತುಗಳು.

ವೀರಪ್ಪನ್‌ ಮತ್ತು ಶ್ರೀನಿವಾಸ್‌ ಅವರ ಕೊನೆಯ ಮುಖಾಮುಖಿಯಾಗಿದ್ದು 1991ರಲ್ಲಿ. ಅದಕ್ಕೂ ಐದು ವರ್ಷಗಳ ಹಿಂದೆ ಅವರು ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ತನ್ನ ತಂಗಿಯನ್ನು ಕೊಂದವನು ಎನ್ನುವ ಕಾರಣಕ್ಕೆ ವೀರಪ್ಪನ್‌ ಶ್ರೀನಿವಾಸ್‌ ಮೇಲೆ ವಿಪರೀತ ಸೇಡು ಬೆಳೆಸಿಕೊಂಡಿದ್ದ.

ತಾನು ಶರಣಾಗಲು ಸಿದ್ಧವಿದ್ದೇನೆ ಎಂದು ವೀರಪ್ಪನ್‌ ಕಳುಹಿಸಿದ ಸಂದೇಶವನ್ನು ನಂಬಿ ಅಂದು ಶ್ರೀನಿವಾಸ್‌ ಅವನ ಬಲೆಯಲ್ಲಿ ಸಿಕ್ಕಿಬಿದ್ದಿದ್ದರು.

ಶ್ರೀನಿವಾಸ್‌ ಕೂಡಾ ಒಬ್ಬ ಸಾಮಾನ್ಯ ಅರಣ್ಯಾಧಿಕಾರಿಯಾಗಿರಲಿಲ್ಲ. ಅವರ ಸಾಟಿಯಿಲ್ಲದ ಹೋರಾಟಕ್ಕಾಗಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ನೀಡಿ ಸನ್ಮಾನಿಸಲಾಗಿದೆ.

ವೀರಪ್ಪನ್ ಮೇಲೆ ನಿಗಾ

1986ರಲ್ಲಿ ಸಾರ್ಕ್ (ಸೌತ್‌ ಏಷಿಯನ್‌ ಅಸೋಸಿಯೇಷನ್‌ ಫಾರ್‌ ರೀಜನಲ್‌ ಕಾರ್ಪೊರೇಷನ್) ಸಭೆಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದವು. ಶ್ರೀಲಂಕಾದ ಅಧ್ಯಕ್ಷ ಜೆ.ಜಯವರ್ಧನೆ ಆ ಸಭೆಗಳಲ್ಲಿ ಭಾಗವಹಿಸಿದ್ದರು ಮತ್ತು ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ತಮಿಳು ಉಗ್ರಗಾಮಿ ಗುಂಪಾಗಿದ್ದ LTTE ಶ್ರೀಲಂಕಾದಲ್ಲಿ ಬೆಳೆದು ನಿಂತು ಅಲ್ಲಿನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿತ್ತು.

ಈ ಸಭೆಯ ಹಿನ್ನೆಲೆಯಲ್ಲಿ ಪೊಲೀಸರು ನಗರದೆಲ್ಲೆಡೆ ಬಿಗಿ ಭದ್ರತೆಯೊಂದಿಗೆ, ಶಂಕಿತರನ್ನು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಬೆಂಗಳೂರಿನ ಬಸ್‌ ಸ್ಟ್ಯಾಂಡ್‌ ಒಂದರಲ್ಲಿ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಪತ್ತೆಯಾಗಿದ್ದ. ಅವನ ಬಳಿ ಪೊಲೀಸರು “ಯಾರು ನೀನು, ನಿನ್ನ ಹೆಸರೇನು, ಎಲ್ಲಿಂದ ಬಂದೆ? ಇಲ್ಲಿಗ್ಯಾಕೆ ಬಂದೆ” ಇತ್ಯಾದಿಯಾಗಿ ಪ್ರಶ್ನೆ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಸ್ಪಷ್ಟವಾಗಿ ಉತ್ತರಿಸಲಿಲ್ಲ.

ಇದಲ್ಲದೆ ಅವನಿಗೆ ಸರಿಯಾಗಿ ಕನ್ನಡವೂ ಬರುತ್ತಿರಲಿಲ್ಲ. ಹೀಗಾಗಿ ಅನಿಮಾನಗೊಂಢ ಪೊಲೀಸರು ಅವನನ್ನು ವಶಕ್ಕೆ ಪಡೆದರು. ನಂತರ ಅವನನ್ನು ಜಯನಗರ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಅವನು ʼವೀರಪ್ಪನ್‌ʼ ಎನ್ನುವುದು ತಿಳಿದುಬಂತು.

ವೀರಪ್ಪನ್‌ ಹುಟ್ಟಿದ್ದು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ಎಂಬ ಹಳ್ಳಿಯಲ್ಲಿ. ಈ ಊರು ಇರುವುದು ದಟ್ಟ ಕಾಡಿನ ನಡುವಿನಲ್ಲಿ. ಈ ಕಾಡು ಶ್ರೀಗಂಧದ ಮರಗಳು ಮತ್ತು ಆನೆಗಳ ಆಗರ. ಮತ್ತು ವೀರಪ್ಪನ್‌ ಇವೆರಡರ ಕಾರಣದಿಂದಲೇ ಕುಖ್ಯಾತನಾಗಿದ್ದ.

ಈ ಊರು ತಮಿಳುನಾಡಿನ ಸರಹದ್ದಿನಲ್ಲಿದ್ದ ಕಾರಣ ವೀರಪ್ಪನ್‌ ಗ್ಯಾಂಗ್‌ ಕರ್ನಾಟಕದಲ್ಲಿ ಅಪರಾಧವೆಸಗಿ ತಮಿಳುನಾಡಿನಲ್ಲಿ ಅಡಗಿಕೊಳ್ಳುತ್ತಿತ್ತು. ಇದರಿಂದಾಗಿ ಅವನನ್ನು ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಬಹಳ ಸಮಯದ ನಂತರ ಈ ಕುರಿತು ತಿಳಿದುಕೊಂಡ ಇಲಾಖೆಯು ತಮಿಳುನಾಡು ಮತ್ತು ಕರ್ನಾಟಕ ಪೊಲೀಸರ ಜಂಟಿ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿತು.

ತಮ್ಮ ಕುಟುಂಬದೊಡನೆ ಶ್ರೀನಿವಾಸ್

1972ರಲ್ಲಿ ಜಾರಿಗೆ ಬಂದ ವನ್ಯಜೀವಿ ಸಂರಕ್ಷಣಾ ಕಾಯ್ದೆಯು ಆನೆಗಳ ಬೇಟೆಯನ್ನು ತಗ್ಗಿಸಿತು. ಇದು ವೀರಪ್ಪನ್‌ಗೆ ಪ್ರತಿಸ್ಪೃಧಿಗಳಿಲ್ಲದಂತೆ ಮಾಡುವಲ್ಲಿಯೂ ಸಹಾಯವಾಯಿತು. ವೀರಪ್ಪನ್‌ ಬೆಳೆಯುತ್ತಲೇ ಹೋದ.

ಅಂದು ವೀರಪ್ಪನ್‌ ಬಂಧನವನ್ನು ಅಧೀಕೃತವಾಗಿ ತೋರಿಸಲಾಗಿರಲಿಲ್ಲ. ಇದಕ್ಕೆ ಕಾರಣ ಹಾಗೆ ತೋರಿಸಿದಲ್ಲಿ ಅವನನ್ನು ನ್ಯಾಯಾಲಕ್ಕೆ ಹಾಜರಿಪಡಿಸಬೇಕಾಗುತ್ತಿತ್ತು.

ಕೊನೆಗೆ ಅಂದು ವೀರಪ್ಪನನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು. ಆಗ ಇದೇ ಶ್ರೀನಿವಾಸ್‌ ಚಾಮರಾಜನಗರದ ಅರಣ್ಯಾಧಿಕಾರಿಯಾಗಿದ್ದರು. ಅವರು ಈಗಾಗಲೇ ವೀರಪ್ಪನ್‌ ಕುರಿತು ಸಾಕಷ್ಟು ತನಿಖೆ ಮಾಡಿ ಅವನ ವ್ಯವಹಾರಗಳ ಕುರಿತು ಸಾಕಷ್ಟು ಮಾಹಿತಿಯನ್ನು ಹೊಂದಿದ್ದರು.

ಇದೇ ಕಾರಣಕ್ಕಾಗಿ ವೀರಪ್ಪನ್‌ನನ್ನು ಶ್ರೀನಿವಾಸ್‌ ಅವರ ವಶಕ್ಕೆ ನೀಡಲಾಗಿತ್ತು. ಇದರೊಂದಿಗೆ ಅವರು ವೀರಪ್ಪನ್‌ನ ಶ್ರೀಗಂಧ ಕಳ್ಳಸಾಗಣೆ ಜಾಲ, ಅವನ ಬೇಟೆಯ ವಿಧಾನಗಳ ತನಿಖೆ, ಖರೀದಿದಾರರ ಗೋಡೌನ್‌ಗಳ ಮೇಲಿನ ದಾಳಿ ಇತ್ಯಾದಿ ಆರಂಭವಾಯಿತು. ಇದು ಒಂದು ತಿಂಗಳ ಕಾಲ ನಡೆಯಿತು. ಇದುವರೆಗೂ ಅವನ ಬಂಧನವನ್ನು ಅಧಿಕೃತವಾಗಿ ತೋರಿಸಲಾಗಿರಲಿಲ್ಲ.

ಬೋಡಿಪಡ್ಗದಲ್ಲಿರುವ ಅರಣ್ಯ ಕಚೇರಿ ಅತಿಥಿ ಗೃಹದಲ್ಲಿ ಪೊಲೀಸ್ ಪೇದೆಗಳು ಮತ್ತು ಅರಣ್ಯ ಸಿಬ್ಬಂದಿ ವೀರಪ್ಪನ್ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದರು.

ಒಂದು ದಿನ ಶ್ರೀನಿವಾಸ್‌ ಹೊರಗೆ ಕೆಲಸದ ಮೇಲೆ ಹೋಗಿದ್ದ ಸಮಯದಲ್ಲಿ, ಸಿಬ್ಬಂದಿ ಗಡಿಬಿಡಿಯಲ್ಲಿರುವುದನ್ನು ಗಮನಿಸಿ ವೀರಪ್ಪನ್‌ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ.

ಪತ್ರಕರ್ತ ಸುನತ್ ರಘುರಾಮ್ ಅವರು ವೀರಪ್ಪನ್ ಬಂಧನ ಮತ್ತು ತಪ್ಪಿಸಿಕೊಳ್ಳುವಿಕೆಯ ಈ ಅಧ್ಯಾಯದ ಕುರಿತು ‘ವೀರಪ್ಪನ್: ಇಂಡಿಯಾಸ್ ಮೋಸ್ಟ್ ವಾಂಟೆಡ್ ಮ್ಯಾನ್’ (ಪುಟ ಸಂಖ್ಯೆ 35-36) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಅವರು ವೀರಪ್ಪನ್ ಜೀವನದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ.

ಅರಣ್ಯ ಸೇವೆಗಳ ಅಧಿಕಾರಿ ಶ್ರೀನಿವಾಸ್ ಅವರು ಸೆಪ್ಟೆಂಬರ್ 12, 1954ರಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು ಎಂದು ಆಂಧ್ರಪ್ರದೇಶ ಸರ್ಕಾರ ಅವರ ಬದುಕಿನ ಕುರಿತು ಹೊರಡಿಸಿದ ಕರಪತ್ರ ಹೇಳುತ್ತದೆ.

1976ರಲ್ಲಿ ಅವರು ಆಂಧ್ರ ವಿಶ್ವವಿದ್ಯಾಲಯದಿಂದ ಲೈಫ್‌ ಸೈನ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. 1979ರಲ್ಲಿ, ಭಾರತೀಯ ಅರಣ್ಯ ಸೇವೆಗಳಿಗೆ ಆಯ್ಕೆಯಾದ ಅವರು ಚಾಮರಾಜನಗರ ಸಹಾಯಕ ಸಂರಕ್ಷಣಾಧಿಕಾರಿ ಸಹಾಯಕ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಅವರಿಗೆ ಉಪ ಸಂರಕ್ಷಣಾಧಿಕಾರಿಯಾಗಿ ಬಡ್ತಿ ನೀಡಲಾಯಿತು.

ಅಲ್ಲಿ ಅವರು ಶ್ರೀಗಂಧ ಕಳ್ಳಸಾಗಣೆದಾರರ ಹೆಸರುಗಳು ಮತ್ತು ಫೋಟೋಗಳು, ಅವರ ಊರು ಮತ್ತು ವಯಸ್ಸು, ಅವರು ಹೇಗೆ ಕಳ್ಳಸಾಗಣೆ ಮಾಡುತ್ತಿದ್ದಾರೆ ಮತ್ತು ಅವರು ಯಾರಿಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಇದೇ ಸಮಯದಲ್ಲಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಯ ನಡುವಿನ ಸಂವಹನವನ್ನು ಸುಧಾರಿಸಲು ವೈರ್ ಲೆಸ್ ನೆಟ್ ವರ್ಕ್ ಸ್ಥಾಪಿಸಲಾಯಿತು. ಇದು ಮಾಹಿತಿ ವಿತರಣೆಯ ವೇಗವನ್ನು ಹೆಚ್ಚಿಸಿತು.

ಮಾಧ್ಯಮ ವರದಿಗಳ ಪ್ರಕಾರ, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಕೆಲವೊಮ್ಮೆ ವೀರಪ್ಪನ್ ಬಗ್ಗೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇದರ ಪರಿಣಾಮವಾಗಿ ಜನರು ವೀರಪ್ಪನ್‌ ಕುರಿತು ಸಹಾನುಭೂತಿ ಹೊಂದಿದ್ದರು.

ಇನ್ನೊಂದು ಕಡೆ, ವೀರಪ್ಪನ್‌ಗೆ ಯಾರಾದರೂ ಪೊಲೀಸ್‌ ಇಲಾಖೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕುರಿತು ಅನುಮಾನ ಬಂದರೆ ಅವನು ಅಂತವರ ರುಂಡ-ಮುಂಡಗಳನ್ನು ಬೇರ್ಪಡಿಸಿ ನೇತು ಹಾಕುತ್ತಿದ್ದ. ಜನರು ಪೊಲೀಸರ ಪರವಾಗಿದ್ದಿದ್ದರೆ ಅವರ ಗತಿ ಏನಾಗುತ್ತಿತ್ತೆನ್ನುವುದರ ಅರಿವು ನಿಮಗೆ ಈಗ ಮೂಡಿರಬಹುದು.

ಅರಣ್ಯ ಪ್ರದೇಶ, ನದಿ, ತೊರೆ, ಪ್ರಾಣಿ, ಪಕ್ಷಿಗಳು, ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಗ್ಗೆ  ಪೊಲೀಸರಿಗಿಂತ ವೀರಪ್ಪನ್‌ಗೆ ಹೆಚ್ಚು ತಿಳಿದಿತ್ತು, ಇದರಿಂದಾಗಿಯೇ ಅವನು ಸುಲಭವಾಗಿ STF ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದ, ಮತ್ತು ಕಾಡುಗಳು ತುಂಬಾ ದಟ್ಟವಾಗಿದ್ದವು, ಕೆಲವು ಸ್ಥಳಗಳಲ್ಲಿ ಸೂರ್ಯನ ಬೆಳಕು ಸಹ ನೆಲಕ್ಕೆ ಬೀಳುತ್ತಿರಲಿಲ್ಲ, ಮತ್ತು ಯಾರೂ ಕಾಡಿಗೆ ಕಾಲಿಡುತ್ತಿರಲಿಲ್ಲ.

ಈ ನಡುವೆ 1987ರಲ್ಲಿ ಶ್ರೀನಿವಾಸ್‌ ಅವರನ್ನು ಕಾಫಿ ತೋಟಗಳೇ ಪ್ರಧಾನವಾಗಿರುವ ಚಿಕ್ಕಮಗಳೂರಿನ ಕಡೆಗೆ ವರ್ಗಾಯಿಸಲಾಯಿತು. ಆದರೆ ಆ ಸಮಯದಲ್ಲೂ ಅವರು ವೀರಪ್ಪನ್‌ ಚಲವಲನಗಳ ಮೇಲೆ ನಿಗಾ ಇಟ್ಟಿದ್ದರು ಎನ್ನುತ್ತಾರೆ ರಘುರಾಮ್.‌ ಶ್ರೀನಿವಾಸ್‌ ಬಸ್ಸಿನಲ್ಲಿ ಚಾಮರಾಜನಗರಕ್ಕೆ ಬಸ್ಸಿನಲ್ಲಿ ಬಂದು ಮಾಹಿತಿದಾರರನ್ನು ವ್ಯವಸ್ಥೆ ಮಾಡಿ ಅವರ ಮೂಲಕ ವೀರಪ್ಪನ್‌ ಕುರಿತಾದ ಮಾಹಿತಿಗಳನ್ನು ಪಡೆಯುತ್ತಿದ್ದರು.

ಶ್ರೀನಿವಾಸ್‌ ವರ್ಸಸ್‌ ವೀರಪ್ಪನ್

ಆಂಧ್ರಪ್ರದೇಶದ ಅರಣ್ಯ ಇಲಾಖೆ ‘ಅಡವಿ ಮರವೀರುಲು’ (ಅರಣ್ಯ ಹುತಾತ್ಮರು) ಎಂಬ ಪುಸ್ತಕವನ್ನು ಪ್ರಕಟಿಸಿದ್ದು, ಅದರಲ್ಲಿ ಪುಟ ಸಂಖ್ಯೆ 34ರಲ್ಲಿ ಶ್ರೀನಿವಾಸ್ ತರಬೇತಿಗಾಗಿ ಅಮೇರಿಕಾಕ್ಕೆ (US) ಹೋಗಿದ್ದರು ಎಂದು ಬರೆಯಲಾಗಿದೆ.

1990ರ ಎಪ್ರಿಲ್‌ ತಿಂಗಳಿನಲ್ಲಿ ವೀರಪ್ಪನ್‌ ತನ್ನ ಬೆನ್ನಟ್ಟಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಓಢಿ ಹೋಗಿದ್ದ. ಈ ಘಟನೆಯ ನಂತರ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಂಟಿಯಾಗಿ ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಿದವು. ಈ ಟಾಸ್ಕ್‌ಫೋರ್ಸ್‌ನ ನಾಯಕತ್ವವನ್ನು ಶ್ರೀನಿವಾಸ್‌ ಅವರಿಗೆ ನೀಡಲಾಯಿತು. ಯುಎಸ್‌ನಿಂದ ಮರಳಿದ ಅವರು 1990ರಲ್ಲಿ STF ಉಸ್ತುವಾರಿ ವಹಿಸಿಕೊಂಡರು.

ಶ್ರೀನಿವಾಸ್‌ ಅವರ ತಾಯಿ ತನ್ನ ಮಗನಿಗೆ ನೀಡಲಾದ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು

ಸ್ಥಳೀಯ ಜನರು ವೀರಪ್ಪನನ್ನು ರಾಬಿನ್‌ ಹುಡ್‌ ರೀತಿ ನೋಡುತ್ತಿದ್ದರು. ಅವನು ಶ್ರೀಮಂತರನ್ನು ಲೂಟಿ ಮಾಡಿ ಅದನ್ನು ಬಡವರಿಗೆ ಹಂಚುತ್ತಿದ್ದ. ಇದರ ಪ್ರಭಾವಕ್ಕೆ ಒಳಗಾದ ಊರಿನ ಯುವಕರು ವೀರಪ್ಪನ್‌ ಗ್ಯಾಂಗಿಗೆ ಸೇರಿಕೊಳ್ಳುತ್ತಿದ್ದರು. ವೀರಪ್ಪನ್‌ ನಿಷ್ಟಾವಂತರಿಗೆ ಮಾಹಿತಿಗಳನ್ನು ತಲುಪಿಸುವುದು, ಅವರ ಚಲನವಲನಗಳನ್ನು ಗುಟ್ಟಾಗಿಡುವುದು ಮತ್ತು ಅವನ ನೆಲೆಗಳಿಗೆ ಆಹಾರ ಇತ್ಯಾದಿ ಅಗತ್ಯ ವಸ್ತುಗಳನ್ನು ತಲುಪಿಸುವುದು ಈ ಯುವಕರ ಕೆಲಸವಾಗಿತ್ತು.

ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಬಡತನದ ಕಾರಣದಿಂದಾಗಿ ಯುವಕರು ವೀರಪ್ಪನ್‌ ಗ್ಯಾಂಗ್‌ ಸೇರುತ್ತಿದ್ದಾರೆಂದು ಶ್ರೀನಿವಾಸನ್‌ ಅವರಿಗೆ ತಿಳಿದುಬಂದಿತ್ತು ಎಂದು ರಘುರಾಮ್‌ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಆಗ ಶ್ರೀನಿವಾಸ್‌ ಅವರು ಊರಿನ ಜನರಿಗೆ ಉದ್ಯೋಗ ಒದಗಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ವ್ಯವಸ್ಥೆ ಮಾಡಿದರು. ಅವರು ಹಳ್ಳಿಗಳಿಗೆ ನೀರು ಮತ್ತು ಒಳ ಚರಂಡಿ ವ್ಯವಸ್ಥೆಗಳನ್ನು ಸುಧಾರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದರು.

ಶ್ರೀನಿವಾಸ್‌ ಹಿಂಸಾಚಾರ ಮತ್ತು ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಜನರಿಗೆ ಮನವಿ ಮಾಡಿದರು. ಅಲ್ಲದೆ ಅವರು ವೀರಪ್ಪನ್‌ನ ಹುಟ್ಟೂರಿನಲ್ಲಿ ಒಂದು ಡಿಸ್ಪೆನ್ಸರಿಯನ್ನೂ ಕಟ್ಟಿಸಿದರು.

ರಾಜಮಂಡ್ರಿಯಲ್ಲಿ ತಮ್ಮ ತಾತನ ಬಳಿ ಕಲಿತಿದ್ದ ಆಯುರ್ವೇದ ಪಾಠಗಳ ಆಧಾರದ ಮೇಲೆ ಅವರು ಊರಿನ ಜನರಿಗೆ ಜ್ವರ, ಶೀತ, ಕೆಮ್ಮು ಮತ್ತು ಅತಿಸಾರದಂತಹ ಕಾಯಿಲೆಗೆ ಔಷಧಿಯನ್ನು ನೀಡುತ್ತಿದ್ದರು. ಸೇವಾ ಚಟುವಟಿಕೆಗಳಿಗೆ ತಮ್ಮ ಹಣವನ್ನು ಬಳಸುತ್ತಿದ್ದ ಅವರು ಅಗತ್ಯವಿದ್ದಾಗ ಸ್ನೇಹಿತರಿಂದಲೂ ಪಡೆಯುತ್ತಿದ್ದರು.

ಶ್ರೀನಿವಾಸ್‌ ಅವರು ಊರಿನ ಗರ್ಭಿಣಿ ಮಹಿಳೆಯರು ಹಾಗೂ ರೋಗಿಗಳನ್ನು ತನ್ನ ಜೀಪಿನಲ್ಲೇ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು ಎಂದು ಗ್ರಾಮಸ್ಥರು ಈಗಲೂ ಹೇಳುತ್ತಾರೆ. ಈ ನಡುವೆ ವೀರಪ್ಪನ್‌ ಗ್ಯಾಂಗಿನ 20 ಸದಸ್ಯರು ತಮ್ಮ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಿದ್ದರು. ಶ್ರೀನಿವಾಸ್‌ ಇದೇ ಜನರ ಜೊತೆ ಗೋಪಿನಾಥಂನಲ್ಲೇ ವಾಸಿಸುತ್ತಿದ್ದರು. ಅದೇ ಊರಿನಲ್ಲಿ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ, ಸಹೋದರ ಅರ್ಜುನನ್ ಮತ್ತು ಸಹೋದರಿ ಸೇರಿದಂತೆ ವೀರಪ್ಪನ್ ನ ಹಳೆಯ ಸ್ನೇಹಿತರು ಕೂಡಾ ವಾಸಿಸುತ್ತಿದ್ದರು.

“ಅವನು ಒಳ್ಳೆಯವನಾಗಿರಲಿಲ್ಲ. ಅವನು ಒಳ್ಳೆಯ ಮನುಷ್ಯನಂತೆ ನಟಿಸಿದ್ದ. ವೀರಪ್ಪನ್‌ನನ್ನು ಜನರು ದೇವರಂತೆ ಏಕೆ ನೋಡುತ್ತಾರೆನ್ನುವುದನ್ನು ತಿಳಿಯಲು ಊರಿಗೆ ಬಂದಿದ್ದ. ವೀರಪ್ಪನ್‌ ಮಾಡುವ ಕೆಲಸವನ್ನೇ ನಾನೂ ಮಾಡಿದರೆ ಜನರು ನನ್ನನ್ನು ನಂಬುತ್ತಾರೋ, ಅವನನ್ನು ನಂಬುತ್ತಾರೋ ನೋಡೋಣ ಎಂದು ಆತ ಇದನ್ನೆಲ್ಲ ಮಾಡಿದ. ಇದರಿಂದಾಗಿ ನನ್ನ ಗಂಡನಿಗೆ ಸಾಕಷ್ಟು ತೊಂದರೆಯಾಗಿತ್ತು” ಎಂದು ವೀರಪ್ಪನ್‌ ಪತ್ನಿ ಮುತ್ತುಲಕ್ಷ್ಮಿ ಹೇಳಿದ್ದಾಳೆ.

ವೀರಪ್ಪನ್‌ ತಂಗಿಯನ್ನು ಕೆಲಸಕ್ಕೆ ಸೇರಿಸಿಕೊಂಡ ಶ್ರೀನಿವಾಸ್

ಶ್ರೀನಿವಾಸ್‌ ಅವರು ಊರಿನಲ್ಲಿದ್ದ ಮಾರಿಯಮ್ಮ ದೇವಸ್ಥಾನವನ್ನು ಮರುನಿರ್ಮಿಸಿ ಮೂರು ಲಕ್ಷ ರೂಪಾಯಿಗಳ ಠೇವಣಿಯನ್ನೂ ಇಟ್ಟಿದ್ದರು. ಮುಂದೇ ಇದೇ ಶ್ರೀನಿವಾಸ್‌ ಸಾವಿಗೆ ಕಾರಣವಾಯಿತೆಂದು ರಘುರಾಮ್‌ ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ.

ಶ್ರೀನಿವಾಸ್‌ ಮಾರಿಯಮ್ಮ ಎಂಬ ಮಹಿಳೆಯನ್ನು ತಮ್ಮ ಡಿಸ್ಪೆನ್ಸರಿಯಲ್ಲಿ ಕೆಲಸಕ್ಕೆ ಇರಿಸಿಕೊಂಡಿದ್ದರು. ಆಕೆಯ ಗಂಡ ಜೈಲಿನಲ್ಲಿದ್ದ. ಆಕೆ ಮೂರು ಮಕ್ಕಳಿದ್ದರು. ಮಾರಿಯಮ್ಮ ನೀರು ಕುದಿಸುವುದು, ಔಷಧಿಗಳನ್ನು ಸಂಗ್ರಹಿಸುವಂತಹ ಕೆಲಸವನ್ನು ಮಾಡುತ್ತಿದ್ದಳು. ಅವಳು ವೀರಪ್ಪನ್‌ ತಂಗಿಯಾಗಿದ್ದಳು ಮತ್ತು ವೀರಪ್ಪನ್‌ಗೆ ಅವಳೆಂದರೆ ಬಹಳ ಅಕ್ಕರೆಯಿತ್ತು.

ಶ್ರೀನಿವಾಸ್‌ ಅವರು ವಿಶೇಷ ಕಾರ್ಯಪಡೆಯ ಸರ್ವೇಯರ್‌ ಆಗಿದ್ದರು. ಅವರಿಗೆ ವೀರಪ್ಪನನ್ನು ಸರೆಂಡರ್‌ ಮಾಡಿಸುವ ವಿಶ್ವಾಸವಿತ್ತು. ಈ ಕಾರಣಕ್ಕಾಗಿಯೇ ಅವರು ಅವನ ಅನುಯಾಯಿಗಳ ಬಂಧನವನ್ನು ಅಧಿಕೃತವಾಗಿ ದಾಖಲಿಸಿರಲಿಲ್ಲ.

ಒಂದು ಹಂತದಲ್ಲಿ ಎಸ್ ಟಿಎಫ್ ವೀರಪ್ಪನ್ ನನ್ನು ಬಂಧಿಸಲು ಆತನ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆ ಸಮಯದಲ್ಲಿ, ವೀರಪ್ಪನ್ ಮೇಲೆ ಗುಂಡು ಹಾರಿಸದಂತೆ ಕಾರ್ಯಪಡೆಗೆ ಸೂಚನೆ ನೀಡಲಾಗಿತ್ತು. ಈ ಆದೇಶದಿಂದ ಪೊಲೀಸರಿಗೆ ಸಿಟ್ಟು ಬಂದಿತ್ತು. ಆದರೆ ಕರ್ತವ್ಯ ವ್ಯಾಪ್ತಿಯ ಪ್ರಕಾರ ಶ್ರೀನಿವಾಸ್‌ ಅವರ ಮಾತನ್ನು ಕೇಳಲೇಬೇಕಿತ್ತು. ಅವರಿಗೆ ಬೇರೆ ದಾರಿಯಿರಲಿಲ್ಲ.

ಆಗಿನ STF ಟೈಗರ್‌ ಎಂದು ಕರೆಸಿಕೊಳ್ಳುತ್ತಿದ್ದ ಟೈಗರ್‌ ಅಶೋಕ್‌ ಕುಮಾರ್‌ ಹೇಳುವಂತೆ “ಆ ದಿನ ಸಂಜೆ ಸುಮಾರು 6-7 ಗಂಟೆ ಸುಮಾರಿಗೆ ಶ್ರೀನಿವಾಸ್‌ ಮಾರಿಯಮ್ಮನ ಜೊತೆ ಜೀಪಿನಲ್ಲಿ ಹೋಗುತ್ತಿದ್ದರು. ಆಗ ಸೂದನ್‌ ಎನ್ನುವ ಕಾನ್ಸ್ಟೇಬಲ್‌ ಅವರಿಬ್ಬರ ಸಂಬಂಧದ ಕುರಿತು ಮಾತನಾಡಲು ಆರಂಭಿಸಿದರು.”

ಅಲ್ಲಿಯವರೆಗೆ ಟಾಸ್ಕ್‌ಫೋರ್ಸ್‌ ವೀರಪ್ಪನ್‌ ವಿರುದ್ಧ ಯಾವುದೇ ಗಮನಾರ್ಹ ವಿಜಯವನ್ನು ಸಾಧಿಸಿರಲಿಲ್ಲ. ಅಂದು STF ಕಮಾಂಡೆಂಟ್‌ ಗೋಪಿನಾಥಂ ಗ್ರಾಮ ಕೆಲವರನ್ನು ಬಂಧಿಸಿದರು. ಇದು ಶ್ರೀನಿವಾಸ್‌ ಮೇಲೆ ಊರಿನ ಜನರು ಸಿಟ್ಟಾಗುವಂತೆ ಮಾಡಿತು. ಅವರು ಊರಿನ ಜನರಿಗೆ ಯಾರನ್ನೂ ಬಂಧಿಸುವುದಿಲ್ಲವೆಂದು ಮಾತು ಕೊಟ್ಟಿದ್ದರು.

ಈ ನಡುವೆ ವೀರಪ್ಪನ್‌ ಪತ್ನಿ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಳು. ಇದಕ್ಕೆ ಮಾರಿಯಮ್ಮ ಸಹಾಯ ಮಾಡಿದ್ದಳು ಎನ್ನುವ ಸುದ್ದಿಯಿತ್ತು. ಈ ಕಾರಣಕ್ಕಾಗಿ ಶ್ರೀನಿವಾಸ್‌ ಆಕೆಯ ಮೇಲೆ ಕೋಪಗೊಂಡಿದ್ದರು.

“ಮುತ್ತುಲಕ್ಷ್ಮಿ ಎಲ್ಲಿದ್ದಾಳೆಂದು ಹೇಳದೆ ಹೋದರೆ ಅವಳ ಬಟ್ಟೆ ಬಿಚ್ಚಿ ಕರೆಂಟ್‌ ಶಾಕ್‌ ಕೊಡುವುದಾಗಿ ಶ್ರೀನಿವಾಸ್‌ ಮಾರಿಯಮ್ಮನಿಗೆ ಹೆದರಿಸಿದ್ದರು” ಎಂದು ರಘುರಾಮ್‌ ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ

“ಅವನ ಮೇಲೆ ಬಿಸಿ ಎಣ್ಣೆ ಸುರಿದು ಕೊಲ್ಲು. ಹಾಗೆ ಕೊಲ್ಲದೆ ಹೋದರೆ ನೀನು ನನ್ನ ತಂಗಿಯೇ ಅಲ್ಲ” ಎಂದು ವೀರಪ್ಪನ್‌ ಮಾರಿಯಮ್ಮನಿಗೆ ಕಾಗದ ಬರೆದಿದ್ದ ಎನ್ನುತ್ತಾಳೆ ಮುತ್ತುಲಕ್ಷ್ಮಿ

ಆಗಿನ ಅರಣ್ಯ ಅಧಿಕಾರಿ ಬಿ.ಕೆ.ಸಿಂಗ್ ಅವರ ಪ್ರಕಾರ, STF ಅಧಿಕಾರಿಗಳಿಗೆ ವೀರಪ್ಪನ್ ಗೆ ಸಂಬಂಧಿಸಿದ ಒಂದೇ ಒಂದು ಪ್ರಕರಣವನ್ನು ಭೇದಿಸಲು ಸಾಧ್ಯವಾಗಿರಲಿಲ್ಲ, ಆದರೆ ಶ್ರೀನಿವಾಸ್ 22 ಜನರನ್ನು ಶರಣಾಗುವಂತೆ ಮಾಡಿದ್ದರು.

ನಂಬಿಸಿ ಕರೆದೊಯ್ದು…

ಶ್ರೀನಿವಾಸ್‌ ತನ್ನ ವೈಯಕ್ತಿಕ ಪರಿಚಯಗಳನ್ನು ಬಳಸಿ ವೀರಪ್ಪನ್‌ ಸಹೋದರ ಅರ್ಜುನನನ್ನು ಬಿಡುಗಡೆ ಮಾಡಿಸಿದ್ದರು. ಆದರೆ ಮಾರಿಯಮ್ಮ ತೀರಿಕೊಂಡಾಗ ವೀರಪ್ಪನ್‌ ವ್ಯಘ್ರನಾಗಿದ್ದ. ಆದರೆ ಮಾರಿಯಮ್ಮ ಸತ್ತಿದ್ದು ಶ್ರೀನಿವಾಸ್‌ ಅವರಿಗೆ ತಿಳಿದಿರಲಿಲ್ಲ.

ಈ ಹೊತ್ತಿಗೆ STF ನಲ್ಲಿ ಶ್ರೀನಿವಾಸ್‌ ಅವರ ಅಧಿಕಾರವಧಿ ಮುಗಿದಿತ್ತು. ಆದರೆ ಅರ್ಜುನನ್‌ ಹೊರಗೆ ಬಂದರೆ ಅವನ ಮೂಲಕ ತನಗೆ ವೀರಪ್ಪನ್‌ ಕುರಿತಾದ ಮಾಹಿತಿ ಸಿಗಬಹುದೆನ್ನುವುದು ಅವರ ಎಣಿಕೆಯಾಗಿತ್ತು. ಇದಕ್ಕಾಗಿಯೇ ಅವರು ಉನ್ನತಾಧಿಕಾರಿಗಳ ಬಳಿ 15 ದಿನಗಳ ಕಾಲ ಸಮಯ ನೀಡುವಂತೆ ಕೇಳಿಕೊಂಡರು.

ಕೀರ್ತಿ ಚಕ್ರ ಪ್ರಶಸ್ತಿಯ ಸಮಯದಲ್ಲಿ ಉಲ್ಲೇಖಿಸಲಾದ ಮಾಹಿತಿಯ ಪ್ರಕಾರ, ಒಂದು ದಿನ ಶ್ರೀನಿವಾಸ್ ಕಾಳಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ, ಅರ್ಜುನನ್ ಅಲ್ಲಿಗೆ ಬಂದು ವೀರಪ್ಪನ್ ತನ್ನ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಲು ಬಯಸಿದ್ದಾನೆ ಎಂದು ಹೇಳಿದ. ಆದರೆ ಆ ಸಮಯದಲ್ಲಿ, ಪೊಲೀಸರು ಹಾಜರಿರಬಾರದು ಎಂಬ ಷರತ್ತು ವಿಧಿಸಲಾಗಿತ್ತು.

ನವೆಂಬರ್ 9ರ ಮುಂಜಾನೆ ಶ್ರೀನಿವಾಸ್ ಅರ್ಜುನನ್ ಜೊತೆ ಗೋಪಿನಾಥಂನಿಂದ ಹೊರಟಿದ್ದರು. ಶ್ರೀನಿವಾಸ್ ಬಳಿ ಆಯುಧವೂ ಇರಲಿಲ್ಲ.

ಸುಮಾರು ಆರು ಕಿಲೋಮೀಟರ್ ಪ್ರಯಾಣಿಸಿದ ನಂತರ ಅರ್ಜುನನ್ ವಾಹನವನ್ನು ನಿಲ್ಲಿಸುವಂತೆ ಹೇಳಿದ. ಅಲ್ಲಿದ್ದ ನೀರಿನ ಟ್ಯಾಂಕ್ ಒಂದರ ಪಕ್ಕದಲ್ಲಿ ನಿಲ್ಲುವಂತೆ ತಿಳಿಸಲಾಯಿತು. ಆ ಕ್ಷಣದಲ್ಲೇ ಆತನನ್ನು ವೀರಪ್ಪನ್ ಅನುಯಾಯಿಯೊಬ್ಬ ಅವರನ್ನು ಗುಂಡಿಕ್ಕಿ ಕೊಂದಿದ್ದ.

ವೀರಪ್ಪನ್‌ ತನ್ನ ತಂಗಿಯ ಸಾವಿನ ಸೇಡು ತೀರಿಸಿಕೊಳ್ಳಲು, ತಮ್ಮ ಅರ್ಜುನನ್‌ನನ್ನು ಬಳಸಿಕೊಂಡಿದ್ದ ಎನ್ನಲಾಗುತ್ತದೆ

ಇದಾದ ನಂತರ ಶ್ರೀನಿವಾಸ್‌ ಅವರ ದೇಹದ ಅರ್ಧ ಭಾಗಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲಾಗಿತ್ತು. ಅವರ ತಲೆಯನ್ನು ಮುಂಡದಿಂದ ಬೇರ್ಪಡಿಸಲಾಗಿತ್ತು. ಎರಡೂ ಕೈಗಳನ್ನು ದೇಹದಿಂದ ಬೇರ್ಪಡಿಸಲಾಗಿತ್ತು. ಅಂದು ವೀರಪ್ಪನ್‌ ಹೆಂಡತಿ ಶ್ರೀನಿವಾಸ್‌ ಅವರ ತಲೆಯನ್ನು ಕಾಲಿನಿಂದ ಒದ್ದಿದ್ದಳು ಎಂದು ರಘುರಾಮ್‌ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಇದೆಲ್ಲ ಆಗಿ ಹಲವು ವರ್ಷಗಳ ನಂತರ 2004ರ ಅಕ್ಟೋಬರ್ 18ರಂದು ತಮಿಳುನಾಡಿನ ವಿಶೇಷ ಕಾರ್ಯಪಡೆ ವೀರಪ್ಪನ್ ಮತ್ತು ಆತನ ಮೂವರು ಅನುಯಾಯಿಗಳನ್ನು ಹತ್ಯೆ ಮಾಡಿತು.

ವೀರಪ್ಪನ್‌ನನ್ನು ಬಂಧಿಸಲು ಎರಡೂ ರಾಜ್ಯಗಳ ಸರ್ಕಾರಗಳು ಸಾವಿರಾರು ಜನರನ್ನು ನೇಮಿಸಿಕೊಂಡಿದ್ದವು ಮತ್ತು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿದ್ದವು.

ವೀರಪ್ಪನ್‌ ಹತ್ಯೆಯಾದ ಕಾರಣ ಎರಡೂ ರಾಜ್ಯಗಳ ಹಲವು ನಾಯಕರ ಗುಟ್ಟುಗಳು ಎಂದೂ ಹೊರ ಬರದಂತೆ ಮುಚ್ಚಿ ಹೋದವು ಎಂದು ಹೇಳಲಾಗುತ್ತದೆ.

(ಮುತ್ತುಲಕ್ಷ್ಮಿ, ಬಿ. ಕೆ. ಸಿಂಗ್ ಮತ್ತು ಅಶೋಕ್ ಕುಮಾರ್ ಅವರ ಹೇಳಿಕೆಗಳನ್ನು “ದಿ ಹಂಟ್ ಫಾರ್ ವೀರಪ್ಪನ್” ಸಾಕ್ಷ್ಯಚಿತ್ರ ಸರಣಿಯಿಂದ ತೆಗೆದುಕೊಳ್ಳಲಾಗಿದೆ.)

ಆಧಾರ: BBC

ಮಲೆ ಮಹದೇಶ್ವರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ
ಚಾಮರಾಜನಗರ : ಮಲೆ ಮಹದೇಶ್ವರದ ಅಭಿವೃದ್ಧಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ರಚಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಮಲೆ ಮಹದೇಶ್ವರದಲ್ಲಿ ಮಹದೇಶ್ವರ ಪ್ರಾಧಿಕಾರದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಟ್ಟಕ್ಕೆ ಭಕ್ತಾದಿಗಳು ಹೆಚ್ಚಾಗುತ್ತಿದ್ದು, ಪ್ರತಿದಿನ ಹತ್ತರಿಂದ ಇಪ್ಪತ್ತು ಸಾವಿರ ಜನ ಭೇಟಿ ನೀಡುತ್ತಾರೆ. ಅಮಾವಾಸ್ಯೆ, ಹುಣ್ಣಿಮೆಗಳಂದು , ವಾರಾಂತ್ಯಗಳಲ್ಲಿ ಇನ್ನೂ ಹೆಚ್ಚಾಗುತ್ತದೆ. ಆರು ಜಾತ್ರೆಗಳು ನಡೆಯುತ್ತವೆ, ಆಗ ಲಕ್ಷಾಂತರ ಜನ ಸೇರುತ್ತಾರೆ. ಇಲ್ಲಿ 159 ಎಕರೆ ಇದ್ದು, ಇನ್ನೂ 70 ಎಕರೆ ಬಳಕೆಯಾಗಿಲ್ಲ. 80 ಎಕರೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್ ಗಳನ್ನು ತೆಗೆದು ಏನು ಮಾಡಲು ಸಾಧ್ಯವಿದೆ ಎಂದು ಪರಿಶೀಲಿಸಲಾಗುತ್ತದೆ. ಮೂಲ ದೇವಸ್ಥಾನದ 70 ಎಕರೆಗೆ ಮಾಸ್ಟರ್ ಪ್ಲಾನ್ ರಚಿಸಿ ಯೋಜನಾಬದ್ದವಾಗಿ ಅನುಷ್ಠಾನ ಗೊಳಿಸಬೇಕು. ಬಡಜನರು ಇಲ್ಲಿಗೆ ಹೆಚ್ಚು ಬರುವುದರಿಂದ ಡಾರ್ಮಿಟರಿಗಳನ್ನು ನಿರ್ಮಿಸಬೇಕು. ಸುಮಾರು 5 ಸಾವಿರ ಜನ ಒಂದೇ ಬಾರಿಗೆ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಲಾಗಿದೆ ಎಂದರು.

ಮೂರ್ತಿ ಅನಾವರಣ
ಮಲೆ ಮಹಾದೇಶ್ವರನ ಮೂರ್ತಿ ಪೂರ್ಣಗೊಂಡಿದ್ದು ಅದನ್ನು ಮುಂದಿನ ತಿಂಗಳು ಅನಾವರಣವಾಗಲಿದೆ. ಹಲವಾರು ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಿದೆ ಎಂದರು.

ಸಂಪರ್ಕ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ.

ಮಲೆಮಹದೇಶ್ವರ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಬಹಳ ಪ್ರಮುಖವಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಪ್ರದೇಶಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು 100 ಕೋಟಿ ರೂ.ಗಳನ್ನು ಮಲೆಮಹದೇಶ್ವರ ಬೆಟ್ಟ ಹಾಗೂ ಕ್ಷೇತ್ರದ ಎರಡೂ ಬದಿಗಳಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಹಣವನ್ನು ನೀಡಲಾಗುವುದು. ಒಟ್ಟಾರೆ ಮಲೆಮಹದೇಶ್ವರ ಬೆಟ್ಟದ ಯೋಜನಾಬದ್ಧವಾದ ಅಭಿವೃದ್ಧಿ ಸರ್ಕಾರದ ಮುಂದಿರುವ ಗುರಿ. ಕ್ಷೇತ್ರದಲ್ಲಿ ಭಕ್ತಾದಿಗಳ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಶ್ರೀಕ್ಷೇತ್ರದಲ್ಲಿ ದೇವರ ಸನ್ನಿಧಾನಕ್ಕೆ ಸಾಲುಗಟ್ಟಿ ನಿಲ್ಲುವ ಭಕ್ತರಿಗೆ ನೆರಳು ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಅನುಮೋದನೆಯನ್ನು ನೀಡಲಾಗಿದೆ ಎಂದರು.

ಹುಲಿ ಯೋಜನೆ

ಹುಲಿ ಯೋಜನೆಯ ಪ್ರಸ್ತಾಪ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಇಲ್ಲಿನ ಜನವಸತಿಗೆ ಯಾವುದೇ ರೀತಿ ತೊಂದರೆಯಾಗುವ ಬಗ್ಗೆ ಕೆಲವು ಸಂದೇಹಗಳು ವ್ಯಕ್ತವಾಗಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.

ಗಡಿವಿಚಾರದ ಬಗ್ಗೆ ರಾಜ್ಯ ಅಚಲ ನಿಲುವು

ನಾಳೆ ನವದೆಹಲಿಯ ಪ್ರವಾಸ ಕೈಗೊಳ್ಳುತ್ತಿದ್ದು, ಗಡಿವಿಚಾರದ ಬಗ್ಗೆ ಚರ್ಚಿಸಲು ಬೆಳಗಾವಿ ಉಸ್ತುವಾರಿ ಸಚಿವರು, ಎಜಿ, ಗೃಹಸಚಿವರು ಇರಲಿದ್ದಾರೆ. ರಾಜ್ಯ ಪುನರ್ರಚನೆ ನಂತರದ ಎಲ್ಲ ಬೆಳವಣಿಗೆಗಳು , ಗಡಿಗಳ ಬಗ್ಗೆ ರಾಜ್ಯದ ಅಚಲವಾದ ನಿಲುವನ್ನು ನಾಳಿನ ಸಭೆಯಲ್ಲಿ ಪುನ: ಪ್ರತಿಪಾದಿಸಲಾಗುವುದು ಎಂದರು.

ಈಸಂದರ್ಭದಲ್ಲಿ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಅಶೋಕ್ , ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.

ಮಹದಾಯಿ ವಿವಾದಕ್ಕೆ ಕಾಂಗ್ರೆಸ್ ಕಾರಣ: ಸಿಎಂ ಬೊಮ್ಮಾಯಿ ಆರೋಪ
ಚಾಮರಾಜನಗರ: ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಹರಿಯುವ ಮಹಾದಾಯಿ ನದಿಯ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಹದಾಯಿ ವಿವಾದವಿದ್ದು, ಈ ವಿವಾದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ʼ ಮಹದಾಯಿ ವಿವಾದದ ಬಗ್ಗೆ ಜನರು ಮರೆತಿದ್ದಾರೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಅನಿಸುತ್ತದೆ, ಆದರೆ ಅವರಿಗೆ ಆ ಪಕ್ಷದ ಬಗ್ಗೆ ಚೆನ್ನಾಗಿ ತಿಳಿದಿದೆ. ‘ಮಹದಾಯಿʼ, ʼಕೃಷ್ಣಾʼ ಮತ್ತು ʼಎಸ್ಸಿ/ಎಸ್ಟಿʼ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಎರಡು ಸಮಾವೇಶಗಳನ್ನು ಘೋಷಿಸಿದೆ. ಆದರೆ ಮಹಾದಾಯಿ ಯೋಜನೆ ವಿವಾದಕ್ಕೀಡಾಗಲು ಕಾಂಗ್ರೆಸ್ ಪಕ್ಷವೇ ಕಾರಣ’ ಎಂದು ಬೊಮ್ಮಾಯಿ ದೂರಿದ್ದಾರೆ.

ʼ ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಗೋವಾದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಒಂದು ಹನಿ ನೀರನ್ನೂ ಸಹ ಎಲ್ಲಿಯೂ ತಿರುಗಿಸಲಾಗುವುದಿಲ್ಲ ಎಂದು ಘೋಷಿಸಿದ್ದರು. 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದಾಗ ಅವರು ಏನನ್ನೂ ಮಾಡಲು ವಿಫಲರಾಗಿರುವ ಅವರಿಗೆ ಯಾವ ಹಕ್ಕುಗಳಿವೆ ಎಂದು ಕಿಡಿಕಾರಿದ್ದಾರೆ.

ʼಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಒಳ ಮೀಸಲಾತಿ ನೀಡುವುದಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಆದರೆ ಅವರು ಮುಖ್ಯಮಂತ್ರಿಯಾಗಿದ್ದಾಗ ವರದಿ ಮಂಡಿಸಲು ನಡೆದ ಸಮಾವೇಶದಲ್ಲಿ ಎಸ್ಸಿ/ಎಸ್ಟಿಯನ್ನು ಸಮುದಾಯದವರ ಸಮಸ್ಯೆ ನೋಡುವ ಗೋಜಿಗೆ ಹೋಗಲಿಲ್ಲ  ಏಕೆ?ʼ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ʼಅವರ ಎಲ್ಲಾ ಕಾರ್ಯಗಳು ಜನರ ಮನಸ್ಸಿನಲ್ಲಿವೆ. ಅದನ್ನು ಮುಚ್ಚಿಹಾಕಲು ಅಧಿವೇಶನವನ್ನು ನಡೆಸಲಾಯಿತು. ಅವರು ಜನರನ್ನು ಮತ್ತೆ ಮತ್ತೆ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ. ಹಿಂದಿನ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಳ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಅದನ್ನು ಜಾರಿಗೆ ತರುವಂತೆ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆಯೇ? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ನಂತರ ಎಸ್ಸಿ/ಎಸ್ಟಿ ಕೋಟಾದ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಹೇಳಿದ ಅವರು. ಪ್ರಸ್ತಾವನೆಯನ್ನು ಬುಧವಾರ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಚಾಮರಾಜನಗರ: ರಥೋತ್ಸವ ವೇಳೆ ಗಾಲಿ ಮುರಿದು ಬಿದ್ದ ರಥ, ಹೊಸ ರಥ ನಿರ್ಮಾಣಕ್ಕೆ ಕ್ರಮ
ಚಾಮರಾಜನಗರ: ರಥೋತ್ಸವದ ವೇಳೆ ಗಾಲಿ ಮುರಿದು ರಥ ನೆಲಕ್ಕೆ ಬಿದ್ದಿರುವ ಘಟನೆ ಬುಧವಾರ ಚಾಮರಾಜನಗರ ತಾಲ್ಲೂಕಿನ ಚೆನ್ನಪ್ಪನಪುರದಲ್ಲಿ ನಡದಿದೆ.

ಚೆನ್ನಪ್ಪನಪುರದ ವೀರಭದ್ರೇಶ್ವರ ದೇವಾಲಯದಲ್ಲಿ ನಡೆದ ರಥೋತ್ಸವದಲ್ಲಿ ಈ ಅವಘಡ ಸಂಭಿವಿಸಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿನ್ನೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಸಚಿವ ವಿ.ಸೋಮಣ್ಣ

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ವಿ.ಸೋಮಣ್ಣರವರು, ಇದು ಮುಮ್ಮಡಿ ಕೃಷ್ಣರಾಜ ಒಡೆಯರ್‌ ನಿರ್ಮಿಸಿದ್ದ ಪುರಾತನ ದೇವಾಲಯವಾಗಿದೆ. ಇಲ್ಲಿ ಅವಘಡ ಸಂಭವಿಸಿದೆ ಆದರೆ ಯಾವುದೇ ಅನಾಹುತವಾಗಿಲ್ಲ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ಮುಂದಿನ 15 ದಿನಗಳೊಳಗೆ ಹೊಸ ರಥ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು, ಜೊತೆಗೆ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರ್‌ ರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಪೇ ಸಿಎಂ ಟಿ ಶರ್ಟ್‌ ಬಿಚ್ಚಿಸಿ ಹಲ್ಲೆ ನಡೆಸಿರುವ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿ: ಎಂ.ಬಿ.ಪಾಟೀಲ್ ಆಗ್ರಹ
ಚಾಮರಾಜನಗರ: ಭಾರತ ಐಕ್ಯತಾ ಯಾತ್ರೆಯಲ್ಲಿ ಪೇ ಸಿಎಂ ಟಿ ಶರ್ಟ್‌ ಧರಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಪೊಲೀಸ್‌ ದಬ್ಬಾಳಿಕೆ ನಡೆಸಿರುವುದರ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪೇ ಸಿಎಂ ಟಿ ಶರ್ಟ್ ಧರಿಸಿದ್ದ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೋಗಿ ಗ್ರಾಮದ ಯುವಕ ಅಕ್ಷಯ್ ಕುಮಾರ್ ಸಿಂದಗಿ ಅವರ ಮೇಲೆ ಹಲ್ಲೆ ನಡೆಸಿದ ಪೊಲೀಸರ ದಬ್ಬಾಳಿಕೆ ಖಂಡನೀಯ. ಭ್ರಷ್ಟಾಚಾರ ಮಾಡುವುದು ಅಪರಾಧವೇ ಹೊರತು ಅದರ ವಿರುದ್ಧ ಧ್ವನಿ ಎತ್ತುವುದು ಅಪರಾಧವಲ್ಲ ಎಂದು ಕಿಡಿಕಾರಿದ್ದಾರೆ.

ಅಷ್ಟಾಗಿಯೂ ಪೊಲೀಸರು ರಸ್ತೆಯಲ್ಲೇ ಟಿ ಶರ್ಟ್ ಬಿಚ್ಚಿಸಿ ಆತನ ಮೇಲೆ ಹಲ್ಲೆ ನಡೆಸಿರುವುದು ಅಮಾನವೀಯ. ಪೊಲೀಸರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರೇನು ಪೊಲೀಸರೋ ಅಥವಾ ಪುಂಡರೋ? ಮಾನ್ಯ ಮುಖ್ಯಮಂತ್ರಿಗಳು ಹಲ್ಲೆ ನಡೆಸಿದ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕು. ಇಂತಹ ದುಷ್ಕೃತ್ಯಗಳು ಇಲ್ಲಿಗೇ ಕೊನೆಯಾಗಬೇಕು  ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.

#PayCM ಟಿ ಶರ್ಟ್ ಧರಿಸಿದ್ದ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೋಗಿ ಗ್ರಾಮದ ಯುವಕ ಅಕ್ಷಯ್ ಕುಮಾರ್ ಸಿಂದಗಿ ಅವರ ಮೇಲೆ  ಹಲ್ಲೆ  ನಡೆಸಿದ ಪೊಲೀಸದರ  ದಬ್ಬಾಳಿಕೆ ಖಂಡನೀಯ. ಭ್ರಷ್ಟಾಚಾರ ಮಾಡುವುದು ಅಪರಾಧವೇ ಹೊರತು ಅದರ  ವಿರುದ್ಧ ಧ್ವನಿ ಎತ್ತುವುದು ಅಪರಾಧವಲ್ಲ. 1/2 pic.twitter.com/YzcASioHMH
— M B Patil (@MBPatil) October 1, 2022

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರ ನೋವು ಆಲಿಸಿದ ರಾಹುಲ್‌ ಗಾಂಧಿ
ಚಾಮರಾಜನಗರ: ಚಾಮರಾಜನಗರದಲ್ಲಿ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭಾರತ ಐಕ್ಯತಾ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಭೇಟಿ ಮಾಡಿದರು.

ಈ ಸಮಯದಲ್ಲಿ ಕುಟುಂಬಸ್ಥರೊಂದಿಗೆ ಸಂವಾದ ಮಾಡಿ ಅವರ ನೋವು ಆಲಿಸಿದರು ಮತ್ತು ಅವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆ ನೀಡಿದರು.

#BharatJodoYatra

ಚಾಮರಾಜನಗರದಲ್ಲಿ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಶ್ರೀಯುತ @RahulGandhi ಯವರು ಭೇಟಿ ಮಾಡಿ ಅವರ ನೋವು ಆಲಿಸಿದರು ಮತ್ತು ಅವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆ ನೀಡಿದರು.#BharatJodoYatra pic.twitter.com/1rbDFHIp7R
— Karnataka Congress (@INCKarnataka) September 30, 2022

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ: ನಿರಂಜನಾರಾಧ್ಯ.ವಿ.ಪಿ

https://peepalmedia.com/kannada-language-comprehensive-development-bill-2022-narrowed-down-to-comprehensive-niranjanaradhya-v-p/

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ: ನಿರಂಜನಾರಾಧ್ಯ.ವಿ.ಪಿ

ಭಾರತ ಐಕ್ಯತಾ ಯಾತ್ರೆ ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆ: ಪ್ರಿಯಾಂಕ್ ಖರ್ಗೆ
ಚಾಮರಾಜನಗರ: ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಸಾಗುತ್ತಿರುವ ಭಾರತ ಐಕ್ಯತಾ ಯಾತ್ರೆಯು ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆಯಾಗಲಿದೆ ಎಂದು  ಕೆಪಿಸಿಸಿ ಸಂವಹನ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಹುಲ್ ಗಾಂಧಿ ಅವರು ಇಂದು ಎರಡು ಸಂವಾಧ ಕಾರ್ಯಕ್ರಮ ಮಾಡಿದ್ದು, ಒಂದು ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಜತೆ ನಡೆಯಿತು. ಇಲ್ಲಿ ಸದಸ್ಯರು ರಾಹುಲ್ ಗಾಂಧಿ ಅವರ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಪ್ರಮುಖ ಬೇಡಿಕೆಗಳೆಂದರೆ, ಸೋಲಿಗ ಸಮಾಜದವರು ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಶೋಷಿತ ಆದಿವಾಸಿಗಳ ಪಟ್ಟಿಯಲ್ಲಿ ಇರಬೇಕು ಎಂದು ಹಲವು ವರ್ಷಗಳ ಬೇಡಿಕೆ ಹೊಂದಿದ್ದಾರೆ. ಮೋದಿ ಸರ್ಕಾರ ಆಸ್ವಾಸನೆ ನೀಡಿದ್ದರೂ ಇದುವರೆಗೂ ಮಾಡಿಲ್ಲ, ಇದನ್ನು ಸಂಸತ್ ಅಧಿವೇಶನದಲ್ಲಿ ತರಬೇಕು. ಅರಣ್ಯ ಸಂರಕ್ಷಣಾ ಕಾಯ್ದೆ ಅಢಿಯಲ್ಲಿ ಬಿ.ಆರ್ ಹಿಲ್ಸ್, ಸೇರಿದಂತೆ ಇತರೆ ಹುಲಿಸಂರಕ್ಷಿತ ಪ್ರದೇಶಗಳಲ್ಲಿ ಸಣ್ಣ ಅರಣ್ಯ ಉತ್ಪನ್ನ ಮಾಡಲು ಅವಕಾಶ ನೀಡಲಾಗಿತ್ತು. ಬಂಡಿಪುರ ಹೊರತಾಗಿ ಬೇರೆ ಕಡೆಗಳಲ್ಲಿ ಅನುಮತಿ ನೀಡಿದ್ದು, ಅಲ್ಲಿಯೂ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಡ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಮಲೆಮಹದೇಶ್ವರ ಬೆಟ್ಟವನ್ನು ಹುಲಿ ಸಂರಕ್ಷಣಾ ವಲಯ ಮಾಡುವ ಪ್ರಸ್ತಾವ ನೀಡಿದ್ದು, ಇದನ್ನು ಕೈಬಿಡಬೇಕು. ಈ ಪ್ರದೇಶದಲ್ಲಿ 15-20 ಸಾವಿರ ಸೋಲಿಗ ಸಮುದಾಯದವರು ವ್ಯವಸಾಯ ಮಾಡುತ್ತಿದ್ದಾರೆ. ಅರಣ್ಯವನ್ನೆ ಅವರು ಅವಲಂಬಿಸಿದ್ದಾರೆ.ಈ ಸಮಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ಕೇಳಿದಾಗ ಅದರ ಆಶ್ವಾಸನೆ ನೀಡಲಾಗಿದೆ. ಯುಪಿಎ ಸರ್ಕಾರದಲ್ಲಿ ಐಸಿಡಿಎಸ್ ಯೋಜನೆ ಮೂಲಕ ಈ ಭಾಗದ ಮಕ್ಕಳಿಗೆ ನೀಡಲಾದಗುತ್ತಿರುವ 6 ತಿಂಗಳ ಪೌಷ್ಠಿಕ ಆಹಾರವನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದು, ಈಗ ಆ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ಈ ವಿಚಾರವಾಗಿ ಹೋರಾಟ ಮಾಡುವುದಾಗಿ ತಿಳಿಸಿದೆ ಎಂದು ಹೇಳಿದರು.

ಇನ್ನು ಜೇನು ಕುರುಬ ಸಮುದಾಯದವರು ಕಾಡಿನಿಂದ ಜೇನು ತಂದು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಎರಡನೇ ಸಂವಾದದಲ್ಲಿ ಈ ಸರ್ಕಾರದ ನಿರ್ಲಕ್ಷ್ಯ ಹಾಗೂ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ಕುಟುಂಬ ಸದಸ್ಯರ ಜತೆ ಮಾತನಾಡಿ ಅವರ ನೋವು ಹಂಚಿಕೊಂಡರು. ಅವರು ಮೂರು ಬೇಡಿಕೆ ಇಟ್ಟಿದ್ದು, ಈ ಸರ್ಕಾರ ಇವರ ನಿರ್ಲಕ್ಷ್ಯದಿಂದ ಯಾರು ಸತ್ತಿಲ್ಲ ಎಂದು ಸತ್ಯವನ್ನು ಮರೆಮಾಚುತ್ತಿದ್ದಾರೆ. ಈ ಸಾವುಗಳು ಕೋವಿಡ್ ಸಾವುಗಳು ಎಂದು ಸರ್ಕಾರ ಪರಿಗಣಿಸಬೇಕು. ಸರ್ಕಾರದ ನಿರ್ಲಕ್ಷ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳಬೇಕು. ಇವರಿಗೆ ಸರ್ಕಾರದಿಂದ ಪರಿಹಾರ ಸಿಗಬೇಕು ಎಂದು ಕೇಳಿದ್ದು, ಇವರ ಪರವಾಗಿ ಹೋರಾಟ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರ ಇವರ ನೆರವಿಗೆ ಬಾರದಿದ್ದಾಗ ನಮ್ಮ ಅಧ್ಯಕ್ಷರು ಸೇರಿದಂತೆ ಪಕ್ಷದ ನಾಯಕರು ಹೋಗಿ ಅವರ ಕುಟುಂಬಕ್ಕೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ತಮ್ಮ ಕುಟುಂಬದ ಆಧಾರಸ್ತಂಭ ಕಳೆದುಕೊಂಡಿದ್ದು, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂಬ ಬೇಡಿಕೆ ಇಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕೆಲಸ ಮಾಡಲಾಗುವುದು ಎಂದು ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಈ ಸಂವಾದ ನಂತರ ಮುಂದೆ ಬುಡಕಟ್ಟು ಜನರಿಗೆ ಯಾವ ರೀತಿಯ ನೆರವು ನೀಡಬೇಕು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾವ ರೀತಿ ಮೂಲಸೌಕರ್ಯ ಕಲ್ಪಿಸಬೇಕು ಎಂಬ ವಿಚಾರ ಗಮನಕ್ಕೆ ಬಂದಿದೆ. ನಮ್ಮ ನಾಯಕರ ಪರವಾಗಿ ಈ ತಂಡಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ನಾನು ಯಾವುದೇ ವ್ಯಕ್ತಿಗಳ ಕುರಿತು ಮಾತನಾಡುವುದಿಲ್ಲ. ವೈಯಕ್ತಿಕ ವಿಚಾರಗಳು ಅಸಂಬದ್ಧ. ಇಲ್ಲಿ ಕೇವಲ ಭಾರತ ಐಕ್ಯತಾ ಯಾತ್ರೆಯಷ್ಟೇ ಮುಖ್ಯ. ಇದು ಇಡೀ ವ್ಯವಸ್ಥೆಯನ್ನು ಬದಲಿಸುವ ಯಾತ್ರೆಯಾಗಿದ್ದು, ಪಕ್ಷಕ್ಕೆ ಒಂದು ರೂಪಾಂತರ ನೀಡುತ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರ ತನ್ನ ಅಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಸುತ್ತದೆ. ಕಾಂಗ್ರೆಸ್ ಪಕ್ಷ ಮಾತ್ರ ಚುನಾಯಿತ ಅಧ್ಯಕ್ಷರನ್ನು ಹೊಂದಿದೆ. ಭಾರತ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಮಹತ್ವದ ಕೊಡುಗೆ ಎಂದರೆ ಅಭಿಪ್ರಾಯ ಸಂಗ್ರಹಿಸುವುದು. ನಾವು ಅಭಿಪ್ರಾಯ ಸಂಗ್ರಹಿಸುತ್ತೇವೆ. ಇದನ್ನೇ ಕಾಮರಾಜ್ ಅವರು 66ರಲ್ಲಿ ಬಳಸಿದ್ದರು. ಒಮ್ಮತ ಅಭಿಪ್ರಾಯ ಇರದಿದ್ದರೆ ಚುನಾವಣೆ ಮಾಡುತ್ತೇವೆ. ಈ ಚುನಾವಣೆಯಲ್ಲಿ ಪ್ರತಿ ಮತದಾರ ಕ್ಯೂರ್ ಕೋಡ್ ಇರುವ ಮತದಾರ ಗುರುತಿನ ಚೀಟಿ ಹೊಂದಿರುತ್ತಾನೆ. ಸುಮಾರು 9 ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಈ ಗುರುತಿನ ಚೀಟಿ ಮೂಲಕ ಮತ ಹಾಕುತ್ತಾರೆ. ಚುನಾವಣೆ ಪ್ರಜಾಪ್ರಭುತ್ಯ ವ್ಯವಸ್ಥೆ ಮಾದರಿಯಲ್ಲಿ ನಡೆಯಲಿದೆ. ಇಂದು ರಾಜ್ಯದ ನಾಯಕರು ದೆಹಲಿಯಲ್ಲಿ ಏನಾಗುತ್ತಿದೆ ಎಂಬುದಕ್ಕಿಂತ ಭಾರತ ಐಕ್ಯತಾ ಯಾತ್ರೆ ಬಗ್ಗೆ ಹೆಚ್ಚು ಗಮನಹರಿಸಿದ್ದಾರೆ ಎಂದರು.

ಭಾರತ ಐಕ್ಯತಾ ಯಾತ್ರೆ: ಬಿಜೆಪಿ ವಿರುದ್ಧ ಡಿ.ಕೆ.ಶಿ ಆರೋಪ
ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಭಾರತ ಐಕ್ಯತಾ ಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ದ್ವೇಷ, ಅಸೂಯೆ ಹೆಚ್ಚಿದೆ ಎಂದು ಆರೋಪಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3570 ಕಿ.ಮೀ. ದೂರ ಹೆಜ್ಜೆ ಹಾಕುತ್ತಿದ್ದಾರೆ. ಈ ಹೆಜ್ಜೆ ರಾಷ್ಟ್ರಕ್ಕೆ ಕೊಡುಗೆ. ನಿಮ್ಮ ಹೆಜ್ಜೆ ಜತೆಗೆ ಒಂದು ಇತಿಹಾಸ ನಿರ್ಮಾಣವಾಗುತ್ತಿದೆ ಎಂದರು.

ಇಂದು ಐದು ವಿಚಾರಗಳ ಮೇಲೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಾಣ ಮಾಡುವುದು, ಯುವಕರ ನಿರುದ್ಯೋಗ ಸಮಸ್ಯೆ ಪರಿಹಾರ, ರೈತರಿಗೆ ಗೌರವಯುತ ಆದಾಯ ಸಿಗುವಂತೆ ಮಾಡುವುದು, ರಾಜ್ಯದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ, ಜನ ಸಾಮಾನ್ಯರ ಬದುಕು ನರಕ ಮಾಡಿರುವ ಬೆಲೆ ಏರಿಕೆ ಜತೆಗೆ ಜನರ ಆದಾಯ ಪಾತಾಳಕ್ಕೆ ಕುಸಿದು, ವೆಚ್ಚ ಆಕಾಶಕ್ಕೆ ಹೋಗುತ್ತಿರುವುದನ್ನು ತಡೆಯುವುದೇ ಆಗಿದೆ. ಈ ಎಲ್ಲ ಜನಪರ ಉದ್ದೇಶಗಳೊಂದಿಗೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ಕರ್ನಾಟಕ ಕಾಂಗ್ರೆಸ್ ಸಮಿತಿ ಪರವಾಗಿ ರಾಹುಲ್ ಗಾಂಧಿ ಹಾಗೂ ಅವರ ಜತೆಗೆ ಹೆಜ್ಜೆ ಹಾಕುವ ಎಲ್ಲ ಯಾತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಯಾವತ್ತೂ ಅಧಿಕಾರದ ಬಗ್ಗೆ ಯೋಚಿಸುವುದಿಲ್ಲ, ಜನಸಾಮಾನ್ಯರ ಬದುಕಿನ ಬಗ್ಗೆ ಯೋಚಿಸುತ್ತದೆ. ನಮ್ಮ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. ಅವರಿಗೆ ಮೂರು ಬಾರಿ ದೇಶದ ಪ್ರಧಾನ ಮಂತ್ರಿ ಆಗುವ ಅವಕಾಶವಿತ್ತು, ರಾಹುಲ್ ಗಾಂಧಿ ಅವರಿಗೆ ಎರಡು ಬಾರಿ ಅವಕಾಶವಿತ್ತು. ಆದರೆ ಅವರು ದೇಶಕ್ಕಾಗಿ ಅಧಿಕಾರವನ್ನು ತ್ಯಾಗ ಮಾಡಿದರು. ಇಂದು ಅವರು ಬರೀ ನಾಯಕರಾಗಿ ಹೆಜ್ಜೆ ಹಾಕುತ್ತಿಲ್ಲ, ನಿಮ್ಮ ಜತೆ ಸಾಮಾನ್ಯ ಕಾರ್ಯಕರ್ತರಂತೆ ಹೆಜ್ಜೆ ಹಾಕಿ ನಿಮ್ಮೆಲ್ಲರನ್ನು ಒಟ್ಟಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಡಿ.ಕೆ.ಶಿ. ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯರ ಮನದಲ್ಲಿ ಅಸೂಯೆ, ದ್ವೇಷ ಹೆಚ್ಚಿಸಿದ್ದು, ಇದನ್ನು ತೊಡೆದು ಹಾಕಬೇಕು, ಎಲ್ಲರನ್ನು ಒಗ್ಗೂಡಿಸಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ನಮ್ಮನ್ನು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಹತ್ತಿಕ್ಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ನಾವು ಯಾವುದಕ್ಕೂ ಹೆದರುವುದಿಲ್ಲ. ನಿಮ್ಮ ಬದುಕು ರಕ್ಷಿಸಿ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಕಾಂಗ್ರೆಸ್ ಪಕ್ಷವು ಅವಿರತ ಶ್ರಮಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆಗೆ ಚಾಲನೆ: ಬೆಂಬಲಕ್ಕೆ ಹರಿದು ಬಂದ ಜನಸ್ತೋಮ
ಚಾಮರಾಜನಗರ: ಭಾರತ ಐಕ್ಯತಾ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗುವುದರ ಮೂಲಕ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕವನ್ನು ಪ್ರವೇಶಿಸಿರುವ ಭಾರತ ಐಕ್ಯತಾ ಯಾತ್ರೆಯ ಉದ್ಘಾಟನೆಯನ್ನು ರಾಹುಲ್‌ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್‌ ನಾಯಕರು ಸೇರಿ ಉದ್ಘಾಟಿಸಿದರು.

ಈ ವೇಳೆ ಯಾತ್ರೆಯ ಉದ್ಘಾಟನೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ದೇಶದಲ್ಲಿ ‌ಬಿಜೆಪಿ‌ ಆರ್ ಎಸ್‌ಎಸ್ ದ್ವೇಷ ಹರಡುವ ವಿರುದ್ಧ, ‌ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ಇದು ಭಾರತೀಯರ ಯಾತ್ರೆ. ಈ ಯಾತ್ರೆಗೆ  ಧರ್ಮ, ಜಾತಿ, ಲಿಂಗ ಎಂಬ ಅಸಮಾನತೆ ಇಲ್ಲದೇ ಭಾರತ ಐಕ್ಯತೆಗೆ ಎಲ್ಲಾರು ಬೆಂಬಲವಾಗಿ ನಿಂತಿದ್ದಾರೆ. ಇದೆ ನಮ್ಮ ಸುಂದರವಾದ, ಶಾಂತಿಯುತವಾದ, ಸೌಹಾರ್ದತೆಯ ಭಾರತ. ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಈ ಯಾತ್ರೆಯನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ, ಯಾತ್ರೆಯಲ್ಲಿ ಸಾವಿರಾರು ಜನರು ತಮ್ಮ ನೋವನ್ನು , ಕಷ್ಟವನ್ನು ಹಂಚಿಕೊಂಡಿದ್ದಾರೆ.  ನಿರುದ್ಯೋಗ, ಬೆಲೆ ಏರಿಕೆ, ರೈತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುತ್ತಿದ್ದಾರೆ. ಈ ಹಿನ್ನಲೆ, ಯಾತ್ರೆಗೆ ಲಕ್ಷಾಂತರ ಜನರು ಬೆಂಬಲ ನೀಡುತ್ತಿರುವುದು ನಿಜಕ್ಕೂ ಯಾತ್ರೆಗೆ ಹುರುಪು ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯಾತ್ರೆಯು ಗುಂಡ್ಲುಪೇಟೆಯಿಂದ ಶುರುವಾಗಿದ್ದು, ಯಾತ್ರೆಯಲ್ಲಿ ಕಾಂಗ್ರೆಸ್‌ ಮುಖಂಡರುಗಳು, ನಾಯಕರು ಸೇರಿದಂತೆ, ಯಾತ್ರೆಯ ಬೆಂಬಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.