chandrachud – Peepal Media

ಆರ್ಟಿಕಲ್‌ 35ಎ ಜಮ್ಮು ಮತ್ತು ಕಾಶ್ಮೀರದ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಸಿದಿದೆ : ಡಿವೈ ಚಂದ್ರಚೂಡ್
ಸಂವಿಧಾನದ ವಿಧಿ (Article) 35ಎ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಂದ ಕೆಲವು ಪ್ರಮುಖ ಸಾಂವಿಧಾನಿಕ ಹಕ್ಕುಗಳಿಂದ ವಂಚಿತಗೊಳಿಸಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇಂದು ಹೇಳಿದ್ದಾರೆ. “ಸಮಾನತೆಯ ಅವಕಾಶ, ರಾಜ್ಯ ಸರ್ಕಾರದಲ್ಲಿ ಉದ್ಯೋಗ ಮತ್ತು ಭೂಮಿ ಖರೀದಿಸುವ ಹಕ್ಕು — ಇವನ್ನು ನಾಗರಿಕರಿಂದ ಕಸಿದುಕೊಳ್ಳುತ್ತದೆ. ಏಕೆಂದರೆ ನಿವಾಸಿಗಳು (Jammu and Kashmir) ವಿಶೇಷ ಹಕ್ಕುಗಳನ್ನು ಹೊಂದಿದ್ದರು. ಆದರೆ ಅನಿವಾಸಿಗಳನ್ನು ಹೊರಗಿಡಲಾಗಿತ್ತು,” ಎಂದು ಅವರು ಹೇಳಿದ್ದಾರೆ. ಭಾರತೀಯ ಸಂವಿಧಾನವು ಜಮ್ಮು ಮತ್ತು ಕಾಶ್ಮೀರದ ಸಂವಿಧಾನಕ್ಕೂ ಮೇಲಿರುವ ದಾಖಲೆ ಎಂದು ಕೇಂದ್ರದ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ (Special Status) ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ 11 ನೇ ದಿನದ ವಿಚಾರಣೆಯ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Article 35 A ಯನ್ನು Article 370 ಜೊತೆಗೆ 2019 ರ ಆಗಸ್ಟ್‌ನಲ್ಲಿ ರದ್ದುಗೊಳಿಸಲಾಗಿತ್ತು. ಹಿಂದಿನ ರಾಜ್ಯದ ಶಾಸಕಾಂಗವು “ಶಾಶ್ವತ ನಿವಾಸಿಗಳನ್ನು ( Permanent Residents) ” ವ್ಯಾಖ್ಯಾನಿಸಲು ಮತ್ತು ಅವರಿಗೆ ಸಾರ್ವಜನಿಕ ಉದ್ಯೋಗ, ಸ್ಥಿರ ಆಸ್ತಿ ವಿಚಾರದಲ್ಲಿ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸಲು ಅವಕಾಶ ಮಾಡಿಕೊಟ್ಟಿದೆ.

“ಆರ್ಟಿಕಲ್ 16 (1) ಅಡಿಯಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸಾರ್ವಜನಿಕ ಉದ್ಯೋಗ ಪಡೆಯುವ ಸಮಾನ ಹಕ್ಕಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಉದ್ಯೋಗವನ್ನು ನಿರ್ದಿಷ್ಟವಾಗಿ ಆರ್ಟಿಕಲ್ 16 (1) ಅಡಿಯಲ್ಲಿ ಒದಗಿಸಲಾಗಿದೆ. ಆದ್ದರಿಂದ ಒಂದು ಕಡೆ ಆರ್ಟಿಕಲ್ 16 (1) ಮತ್ತೊಂದು ಕಡೆ ಆರ್ಟಿಕಲ್ 35 ಎ ನೇರವಾಗಿ ಮೂಲಭೂತ ಹಕ್ಕನ್ನು ಕಸಿದುಕೊಂಡಿದೆ,” ಎಂದು ಸಿಜೆಐ ಹೇಳಿದರು.

ಆರ್ಟಿಕಲ್ 19 ದೇಶದ ಯಾವುದೇ ಮೂಲೆಯಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕನ್ನು ನಾಗರಿಕರಿಗೆ ನೀಡುತ್ತದೆ. “ಆದ್ದರಿಂದ ಎಲ್ಲಾ ಮೂರು ಮೂಲಭೂತ ಹಕ್ಕುಗಳನ್ನು ಮೂಲಭೂತವಾಗಿ 35A ಕಸಿದುಕೊಳ್ಳುತ್ತದೆ, ಇದು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನೂ ಕಸಿದುಕೊಳ್ಳಲಾಗಿದೆ” ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವಲ್ಲಿ ಒಂದು ವೇದಿಕೆಯನ್ನು ಕಲ್ಪಿಸುವುದು ಕೇಂದ್ರದ ಪ್ರಮುಖ ವಾದಗಳಲ್ಲಿ ಒಂದು.
ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General Tushar Mehta), ಕೇಂದ್ರದ ಈ ನಡೆಯು ಜಮ್ಮು ಮತ್ತು ಕಾಶ್ಮೀರದ ಜನರನ್ನು ದೇಶದ ಇತರ ಭಾಗಗಳ ನಾಗರಿಕರಂತೆ ಸರಿಸಮಾನವಾಗಿ ಬದುಕುವಂತೆ ಮಾಡಿದೆ . ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣದ ಹಕ್ಕನ್ನು ಸೇರಿಸುವ ತಿದ್ದುಪಡಿ ಸೇರಿದಂತೆ ಈ ಹಿಂದೆ ಜಾರಿಗೆ ತರದ ಎಲ್ಲಾ ಕಾನೂನುಗಳನ್ನು ಈಗ ಜಾರಿಗೊಳಿಸಲಾಗುತ್ತಿದೆ,” ಎಂದು ಅವರು ಹೇಳಿದರು.

” 370 ನೇ ವಿಧಿಯ ಪ್ರಕಾರ ಭಾರತೀಯ ಸಂವಿಧಾನಕ್ಕೆ ಮಾಡಲಾದ ಯಾವುದೇ ತಿದ್ದುಪಡಿಯು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ . ಆದ್ದರಿಂದ 2019 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಿಕ್ಷಣದ ಹಕ್ಕನ್ನು ಜಾರಿಗೊಳಿಸಲಾಗಿರಲಿಲ್ಲ,” ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾತ್ಯತೀತತೆ ಮತ್ತು ಸಮಾಜವಾದದ ತಿದ್ದುಪಡಿಯನ್ನು (Secularism and Socialism Amendment) ಎಂದಿಗೂ ಅಂಗೀಕರಿಸಲಾಗಿರಲಿಲ್ಲ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ 50ನೇ ಮುಖ್ಯ ನ್ಯಾಯಾಧೀಶರಾಗಿ ಜಸ್ಟೀಸ್‌ ಡಿ.ವೈ ಚಂದ್ರಚೂಡ್‌ ಅಧಿಕಾರ ಸ್ವೀಕಾರ
ಹೊಸದಿಲ್ಲಿ: ಭಾರತ ಅತ್ಯುಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಡಿ ವೈ ಚಂದ್ರಚೂಡ್‌ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. 49ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದ ಯು.ಯು ಲಲಿತ್ ಮಂಗಳವಾರ ನವೆಂಬರ್ 8ರಂದು ತಮ್ಮ ಕರ್ತವ್ಯದಿಂದ ನಿರ್ಗಮಿಸಿದ್ದರು. ಇಂದು 50ನೇ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆ ಸುಪ್ರಿಂ ಕೋರ್ಟ್‌ನ ನ್ಯಾಯಾಧೀಶರ ಸಭೆಯಲ್ಲಿ ನಿವೃತ್ತ ನ್ಯಾ.ಯು.ಯು ಲಲಿತ್‌ ಅವರು ಧನಂಜಯ್‌ ಚಂದ್ರಚೂಡ್ ಅವರ ಹೆಸರನ್ನು ತನ್ನ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು.

1959 ನವೆಂಬರ್ 11ರಂದು ಜನಿಸಿದ ಡಿ.ವೈ ಚಂದ್ರಚೂಡ್ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟಿನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದರು. ನಂತರ ಬಾಂಬೆ ಹೈಕೋರ್ಟ್ ಅವರಿಗೆ 1998ರ ಜೂನ್‌ ತಿಂಗಳಿನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. 2000 ಇಸವಿಯಲ್ಲಿ ಬಾಂಬೆ ಹೈಕೋರ್ಟಿನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

ಅವರನ್ನು ಈ ಸ್ಥಾನಕ್ಕೆ ಹಿಂದಿನ ನ್ಯಾಯಾಧೀಶರು ಶಿಫಾರಸ್ಸು ಮಾಡುತ್ತಿದ್ದಂತೆ ಗುಂಪೊಂದು ಅವರ ವಿರುದ್ಧ ಜಾಲತಾಣಗಳಲ್ಲಿ ಕ್ಯಾಂಪೇನ್‌ ನಡೆಸಿದ್ದಲ್ಲದೆ. ಅವರ ಆಯ್ಕೆಯ ವಿರುದ್ಧ ಕೋರ್ಟಿಗೂ ಹೋಗಲಾಗಿತ್ತು. ಆದರೆ ಕೋರ್ಟ್‌ ಮನವಿಯನ್ನು ತಳ್ಳಿ ಹಾಕಿ ಆಯ್ಕೆಯನ್ನು ಪುರಸ್ಕರಿಸಿತ್ತು. ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಹೆಚ್ಚು ನಂಬಿಕೆಯುಳ್ಳ ಮಾನ್ಯ ನ್ಯಾಯಾಧೀಶರು ಪ್ರಜಾಪ್ರಭುತ್ವವಾದಿ ಜನರ ಗುಂಪುಗಳಲ್ಲಿ ನಿರೀಕ್ಷೆಯನ್ನು ಹುಟ್ಟಿಸಿದ್ದಾರೆ. ಅವರ ಕೆಲವು ತೀರ್ಪುಗಳು ಐತಿಹಾಸಿಕವಾಗಿದ್ದವು ಮತ್ತು ಮಾನವೀಯವಾಗಿದ್ದವು.

ಡಿ ವೈ ಚಂದ್ರಚೂಡ್‌ ವಿರುದ್ದ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌
ಹೊಸದಿಲ್ಲಿ: ನ್ಯಾ. ಡಿ ವೈ ಚಂದ್ರಚೂಡ್‌ ಅವರನ್ನು ಸುಪ್ರೀಂ ಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ

ನ್ಯಾಯವಾದಿ ಮುರ್ಸಲಿನ್ ಅಸಿಜಿತ್ ಶೇಖ್ ಅವರು ಸಲ್ಲಿಸಿದ ಮನವಿಯಲ್ಲಿ, “ನ್ಯಾ. ಚಂದ್ರಚೂಡ್ ಅವರು ಹನ್ನೆರಡು ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತಳೆದಿದ್ದು ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠಗಳು ಈ ಹಿಂದೆ ನೀಡಿದ್ದ ತೀರ್ಪುಗಳನ್ನ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಅರ್ಹ ದಾವೆದಾರರಿಗೆ ನ್ಯಾಯ  ನಿರಾಕರಿಸಿದ್ದಾರೆ” ಎಂದು ಆರೋಪಿಸಿದ್ದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮತ್ತಿತರ ಕ್ರಿಮಿನಲ್ ಕ್ರಮಗಳನ್ನು ಜರುಗಿಸಬೇಕು. ಜೊತೆಗೆ, ಅವರನ್ನು ಸಿಜೆಐ ಆಗಿ ನೇಮಕ ಮಾಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದರು.

ಈ ಹಿನ್ನಲೆಯಲ್ಲಿ ಆದೇಶ ನೀಡಿದ ಸುಪ್ರೀಂಕೋರ್ಟ್‌ ʼನ್ಯಾಯಮೂರ್ತಿಗಳು ನೀಡಿದ ಆದೇಶಗಳು ಅವರ ನೇಮಕಾತಿ ಪ್ರಶ್ನಿಸಲು ಆಧಾರವಾಗದುʼ ಎಂದು ಸ್ಪಷ್ಟಪಡಿಸಿದೆ. “ನೀವಿಲ್ಲಿ ಇಂತಹ ಅಂಶಗಳನ್ನು ವಾದಿಸುವಂತಿಲ್ಲ” ಎಂದು ನ್ಯಾ. ಭಟ್‌ ತಿಳಿಸಿದರು. “ಅರ್ಜಿಯನ್ನು ಪರಿಗಣಿಸಬೇಕು ಎನ್ನುವುದಕ್ಕೆ ನಮಗೆ ಯಾವುದೇ ಕಾರಣ ದೊರೆಯುತ್ತಿಲ್ಲ. ಇಡೀ ಮನವಿ ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದೆ. ಹೀಗಾಗಿ ವಜಾಗೊಳಿಸಲಾಗುತ್ತಿದೆ” ಸಿಜೆಐ ಯು ಯು ಲಲಿತ್, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಹಾಗೂ ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ಹೇಳಿದೆ.