Chandrashekar Ravan – Peepal Media

ಚಂದ್ರಶೇಖರ್ ರಾವಣ್ ಮೇಲೆ ದಾಳಿಯ ಮಹತ್ವದ ಸಾಕ್ಷಿ ಪತ್ತೆ
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಅವರ ಮೇಲೆ ಕೆಲವು ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ ಗಂಟೆಗಳ ನಂತರ, ಪೊಲೀಸರು ದಾಳಿಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ ತಡರಾತ್ರಿ ಮಿರಾಗ್‌ಪುರ ಗ್ರಾಮದಲ್ಲಿ ದಾಳಿಗೆ ಬಳಸಲಾಗಿದ್ದ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಗೆ ಬಳಸಲಾದ ಕಾರಿನ ನಂಬರ್ ಪ್ಲೇಟ್ ಹರಿಯಾಣದಲ್ಲಿ ನೋಂದಣಿಯಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸ್ ಅಧಿಕಾರಿಗಳು ದಾಳಿಗೆ ಬಳಸಿದ ವಾಹನ ಪತ್ತೆ ಮಾಡಿದ್ದಾರೆ. ಕಾರು ನಿಲ್ಲಿಸಿದ್ದ ಮನೆಯ ಮಾಲಿಕನ ಪತ್ತೆ ಕೂಡಾ ಆಗಿದೆ. ಹಾಗೂ ಕಾರನ್ನು ಚಲಾಯಿಸಿದ ನಾಲ್ವರನ್ನು ಸಹ ಗುರುತಿಸಿದ್ದಾರೆ. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮ್ಮ ಫೋನ್ ಸ್ವಿಚ್ ಆಫ್ ಮಾಡಿದ್ದರಿಂದ ಯಾರೊಬ್ಬರೂ ಕೂಡಾ ಪೊಲೀಸರ ಕೈಗೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಗ್ರಾಮದಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದರ ನಡುವೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ರಾವಣ್ “ಇಂತಹ ಹಠಾತ್ ದಾಳಿಯನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ದೇಶಾದ್ಯಂತದ ಇರುವ ನಮ್ಮ ಕಾರ್ಯಕರ್ತರಲ್ಲಿ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಲು ಬಯಸುತ್ತೇನೆ. ನಾವು ನಮ್ಮ ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರಿಸುತ್ತೇವೆ. ಕೋಟ್ಯಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ.” ಎಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವಾಗ ANI ಗೆ ತಿಳಿಸಿದ್ದಾರೆ

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ರಾವಣ್ ಮೇಲೆ ಗುಂಡಿನ ದಾಳಿ ; ಸ್ವಲ್ಪದರಲ್ಲೇ ಪಾರು
ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

“ಚಂದ್ರ ಶೇಖರ್ ಆಜಾದ್ ಅವರ ಬೆಂಗಾವಲು ಪಡೆಗೆ ಅಪರಿಚಿತ ಕಾರಿನಲ್ಲಿ ಬಂದ ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಗುಂಡು ಚಂದ್ರಶೇಖರ್ ರಾವಣ್ ಅವರ ಹಿಂಭಾಗಕ್ಕೆ ತಗುಲಿದ್ದು ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಅವರು ಆರೋಗ್ಯವಾಗಿದ್ದಾರೆ, ಮತ್ತು ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ತಾಡಾ ಹೇಳಿದ್ದಾರೆ.

ಚಂದ್ರಶೇಖರ್ ಆಜಾದ್ ರಾವಣ್ ಅವರ ಕಾರಿನ ಮೇಲೆ ಎದುರಾಳಿಗಳು ಎರಡು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಮೊದಲ ಬುಲೆಟ್ ಕಾರಿನ ಡೋರ್ ಮೂಲಕ ವಾಹನದ ಸೀಟನ್ನು ಪ್ರವೇಶಿಸಿದೆ. ಎರಡನೇ ಗುಂಡು ಹಿಂಬಾಗಿಲಿಗೆ ತಗುಲಿ, ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡಿನ ದಾಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿವೆ ಎಂದು ವರದಿಯಾಗಿದೆ.

ಭೀಮ್ ಆರ್ಮಿ ಮುಖ್ಯಸ್ಥರ ಮೇಲಿನ ಈ ದಾಳಿ ಬಹುಜನ ಮಿಷನ್ ಆಂದೋಲನವನ್ನು ನಿಲ್ಲಿಸುವ ಹೇಡಿತನದ ಕೃತ್ಯವಾಗಿದೆ! ಆರೋಪಿಗಳ ತ್ವರಿತ ಬಂಧನ, ಕಟ್ಟುನಿಟ್ಟಿನ ಕ್ರಮ ಮತ್ತು ಚಂದ್ರಶೇಖರ್ ಆಜಾದ್ ಅವರ ಭದ್ರತೆಗೆ ಭೀಮ್ ಆರ್ಮಿ ಬೇಡಿಕೆ ಇಟ್ಟಿದೆ.