Chandrayan 3 – Peepal Media

ಚಂದ್ರಯಾನ-3: ಚಂದ್ರನ ಮೇಲೆ ಶಿಲಾಪಾಕದ ಸಾಗರ!
ಬೆಂಗಳೂರು: ಚಂದ್ರನ ಮೇಲ್ಮೈ ತಂಪಾಗುವ ಮೊದಲು ಶಿಲಾಪಾಕ ಸಾಗರದಲ್ಲಿ (Ocean of Magma) ಆವರಿಸಿತ್ತು, ನಂತರ ನಿರಂತರವಾಗಿ ಉಲ್ಕಾಪಾತವಾಯಿತು. ಇದು ಕೆಳ ಪದರಗಳಲ್ಲಿ ಮುಳುಗಿದ್ದ ಭಾರವಾದ ಖನಿಜಗಳನ್ನು ಅಗೆಯಿತು ಎಂದು ಭಾರತೀಯ ಸಂಶೋಧಕರ ತಂಡವು ಆಗಸ್ಟ್ 21 ರಂದು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಶಿಲಾಪಾಕ ಸಾಗರವು ಚಂದ್ರನ ಇಡೀ ಮೇಲ್ಮೈಯನ್ನು ಆವರಿಸಿತ್ತೇ ಎಂಬ ಹಿಂದಿನ ಪ್ರಶ್ನೆಗೆ ಉತ್ತರವನ್ನು ನೀಡಿದೆ..

ಶಿಲಾಪಾಕ ಸಾಗರದ ಸಿದ್ಧಾಂತ – The theory of a magma ocean

ಒಂದು ಸಿದ್ಧಾಂತದ ಪ್ರಕಾರ, ಚಂದ್ರನ ಮೇಲ್ಮೈಯ 1,000 ಕಿಲೋಮೀಟರ್‌ಗಳು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಹುಟ್ಟಿ ತಕ್ಷಣ ಕರಗಿದ ಶಿಲಾಪಾಕದಿಂದ ಮುಚ್ಚಲ್ಪಟ್ಟವು.

ಮುಂದಿನ ನೂರಾರು ಮಿಲಿಯನ್ ವರ್ಷಗಳಲ್ಲಿ, ಪೈರೋಕ್ಸೀನ್ ಮತ್ತು ಆಲಿವಿನ್ (ಇವುಗಳು ಭೂಮಿಯ ಮ್ಯಾಂಟಲ್‌ನ ಮೇಲೂ ಇರುವ ಕಲ್ಲುಗಳ್ನು ರೂಪಿಸುವ ಖನಿಜ ಗುಂಪುಗಳು) ನಂತಹ ಭಾರವಾದ ಖನಿಜಗಳು ಪ್ಲ್ಯಾಜಿಯೋಕ್ಲೇಸ್ (ಫೆಲ್ಡ್ಸ್ಪಾರ್ ಗ್ರೂಪ್ ಎಂದು ಕರೆಯಲ್ಪಡುವ ಖನಿಜ, ಇದರಲ್ಲಿ ಇದು ಅಲ್ಯೂಮಿನಾ ಮತ್ತು ಸಿಲಿಕಾ ಎರಡೂ ಇರುತ್ತವೆ) ನಂತಹ ಹಗುರವಾದ ಅಂಶಗಳ ಕೆಳಗೆ ಬಂದು ಸೇರಿಕೊಂಡವು. ಚಂದ್ರನು ತಣ್ಣಗಾಗುತ್ತಿದ್ದಂತೆ, ಈ ಅಂಶಗಳು ಪದರಗಳಾಗಿ ನೆಲೆಗೊಂಡವು.

ಸಮಭಾಜಕ ರೇಖೆಯ ಸಮೀಪದಿಂದ ಅಪೊಲೊ ಮತ್ತು ಲೂನಾ ಮಿಷನ್‌ಗಳ ರಾಕ್ ಮಾದರಿಗಳು ಮತ್ತು ಮಧ್ಯ ಅಕ್ಷಾಂಶದಿಂದ ಚೀನಾ ನಡೆಸಿದ ಕಾರ್ಯಾಚರಣೆಗಳು ಈ ಸಿದ್ಧಾಂತವನ್ನು ಎತ್ತಿಹಿಡಿದಿವೆ. ಧ್ರುವಗಳ ಸಮೀಪದಿಂದ ಚಂದ್ರಯಾನ-3 ನೀಡಿದ ಡೇಟಾವನ್ನು ಬಳಸಿಕೊಂಡು ಪ್ರಸ್ತುತ ಅಧ್ಯಯನವು ಸಿದ್ದಾಂತಕ್ಕೆ ಹೆಚ್ಚಿನ ಪುರಾವೆಗಳನ್ನು ಒದಗಿಸುತ್ತದೆ.

ಭಾರತೀಯ ಸಂಶೋಧಕರ ತಂಡವು ಚಂದ್ರನ ಸುಮಾರು 70 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರನ ಮಣ್ಣಿನಲ್ಲಿರುವ ಅಂಶಗಳನ್ನು ಅಧ್ಯಯನ ಮಾಡಿದೆ. ಇವರು ಕಳೆದ ಆಗಸ್ಟ್‌ನಲ್ಲಿ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ನಿಂದ ಕಳುಹಿಸಲಾದ ಪ್ರಗ್ಯಾನ್ ರೋವರ್‌ನಲ್ಲಿ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್‌ಎಸ್) ಬಳಸಿ 23 ಪರಿವೀಕ್ಷಣೆಗಳನ್ನು ಮಾಡಿದ್ದಾರೆ.

ಇದು ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್‌ಎಲ್) ಮತ್ತು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ, ಉತ್ತರಾಖಂಡದ ಶ್ರೀನಗರದ ಹೇಮಾವತಿ ನಂದನ್ ಬಹುಗುಣ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವನ್ನು ಒಳಗೊಂಡ ತಂಡವಾಗಿದೆ.

ಕೆಳಗಿನ ಮತ್ತು ಮಧ್ಯ-ಅಕ್ಷಾಂಶಗಳಿಂದ ಬಂಡೆಗಳನ್ನು ಅಧ್ಯಯನ ಮಾಡಿದ ಹಿಂದಿನ ಕಾರ್ಯಾಚರಣೆಗಳಂತೆ, ಅಧ್ಯಯನವು ಪ್ಲ್ಯಾಜಿಯೋಕ್ಲೇಸ್‌ನಲ್ಲಿ ಸಮೃದ್ಧವಾಗಿರುವ ಫೆರೋನ್ ಅನೋರ್ಥೋಸೈಟ್‌ನ ಬಂಡೆಗಳನ್ನು ಕಂಡುಹಿಡಿದಿದೆ.

“ಈ ಬಂಡೆಗಳು ಚಂದ್ರನ ದಕ್ಷಿಣ ಪ್ರದೇಶವು ಈ ಬಂಡೆಗಳು ಹೆಚ್ಚಾಗಿರುವುದು ಚಂದ್ರನಾದ್ಯಂತ ಇವು ಹರಡಿಕೊಂಡಿವೆ ಎಂಬುದಕ್ಕೆ ಬಲವಾದ ಪುರಾವೆಗಳನ್ನು ನೀಡುತ್ತದೆ, ಇದು ಶಿಲಾಪಾಕ ಸಾಗರದಿಂದ ಮಾತ್ರ ಸಂಭವಿಸುತ್ತದೆ” ಎಂದು ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ಸಂತೋಷ್ ವಿ. ವಡವಾಲೆ ಹೇಳಿದರು.

ಆದರೂ ಈ ಅಕ್ಷಾಂಶಗಳಲ್ಲಿ ಈ ರೀತಿಯ ಬಂಡೆಗಳು ಒಂದೇ ರೀತಿಯದ್ದಾಗಿಲ್ಲ ಎಂದು ಅಧ್ಯಯನವು ಕಂಡುಹಿಡಿದಿದೆ: ಸುಮಾರು ನಾಲ್ಕನೇ ಒಂದು ಭಾಗದಷ್ಟು ಬಂಡೆಗಳು ಹಗುರವಾದ ಮೆಗ್ನೀಸಿಯಮ್ ಖನಿಜಗಳು, ಪೈರೋಕ್ಸೀನ್ ಮತ್ತು ಆಲಿವೈನ್ ಅನ್ನು ಒಳಗೊಂಡಿವೆ.

ಈ ಹಗುರವಾದ ಖನಿಜಾಂಶಗಳನ್ನು ನಂತರ ಬಿದ್ದ ಉಲ್ಕೆಗಳಿಂದ ಶತಕೋಟಿ ವರ್ಷಗಳವರೆಗೆ ಅಗೆಯಲ್ಪಟ್ಟವು, ಇದು ಬೇಸಿನ್‌ಗಳೆಂದು ಕರೆಯಲ್ಪಡುವ ದೊಡ್ಡ ಕುಳಿಗಳ ಒಳಗೆ ವಿವಿಧ ಗಾತ್ರದ ಕುಳಿಗಳನ್ನು ರೂಪಿಸಿತು. ಪ್ರತಿಯೊಂದು ಉಲ್ಕಾಶಿಲೆಯು ಈ ಹಗುರವಾದ ಬಂಡೆಗಳ ಬಿಟ್‌ಗಳು ಮತ್ತು ತುಂಡುಗಳನ್ನು ಮೇಲಿನ ಪದರಗಳಿಗೆ ಕೊಂಡೊಯ್ದಿವೆ, ಈ ಅಕ್ಷಾಂಶಗಳಲ್ಲಿ ಬೇರೆ ಬೇರೆ ಪ್ರಕಾರಗಳ ಕಲ್ಲಿನ  ಮಿಶ್ರಣವನ್ನು ಉಂಟುಮಾಡಿವೆ. ಎಲ್ಲಾ ತುಣುಕುಗಳೂ ಒಟ್ಟಾಗಿ ಬರುತ್ತಿವೆ ಎಂದು ವಡವಾಲೆ ಹೇಳಿದ್ದಾರೆ.

ಚಂದ್ರಯಾನ-3 ಕ್ರೆಡಿಟ್‌ ಮೋದಿಯವರಿಗೆ; NCERTಯಿಂದ ಮಕ್ಕಳಿಗೆ ಅವೈಜ್ಞಾನಿಕ ಪಠ್ಯ
ಬೆಂಗಳೂರು, ಅಕ್ಟೋಬರ್.‌18: ಎನ್‌ಸಿಇಆರ್‌ಟಿ ಹೊರತಂದಿರುವ ಚಂದ್ರಯಾನ ಮಿಷನ್‌ನ ವಿಶೇಷ ಪೂರಕ ಪಠ್ಯದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನ್ನಣೆ ನೀಡಿದ್ದು, ಬಾಹ್ಯಾಕಾಶ ವಿಜ್ಞಾನವನ್ನು ಪುರಾಣಗಳೊಂದಿಗೆ ಬೆರೆಸಿ ತಯಾರಿಸಲಾಗಿದೆ.

“ನಿಮಗೆ ಗೊತ್ತಾ, ಚಂದ್ರಯಾನ-2 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸದ ಕಾರಣ ಎಲ್ಲಾ ವಿಜ್ಞಾನಿಗಳ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. ಅವರು ತುಂಬಾ ದುಃಖ ಪಟ್ಟಿದ್ದರು. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ವಿಜ್ಞಾನಿಗಳಿಗೆ ಧೈರ್ಯವನ್ನು ತುಂಬಿ, ಮರುಪ್ರಯತ್ನ ಮಾಡಲು ಹೇಳಿದರು. ಎಲ್ಲಾ ವಿಜ್ಞಾನಿಗಳು ಒಟ್ಟಾಗಿ ಹಿಂದಿನ ಅನುಭವದಿಂದ ಕಲಿಯುವ ಮುಖಾಂತರ ಪ್ರಯತ್ನಿಸಿದರು ಮತ್ತು ಸುಧಾರಿಸಿದರು. ಇದರಿಂದಾಗಿ ಲ್ಯಾಂಡರ್  ಚಂದ್ರನ ಮೇಲೆ ಲಾಂಚರ್‌ನಿಂದ ಯಶಸ್ವಿಯಾಗಿ ಇಳಿಯಬಹುದು,” ಎಂದಿರುವ ನರ್ಸರಿ, ಒಂದನೇ ಮತ್ತು ಎರಡನೇ ತರಗತಿಯ ಮಕ್ಕಳಿಗೆ ಮಾಡ್ಯೂಲನ್ನು ತಯಾರಿಸಲಾಗಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಇದರನಲ್ಲಿ ಉಡಾವಣೆಯ ಲೈವ್ ಟೆಲಿಕಾಸ್ಟ್‌ನ ಚಿತ್ರಗಳು ಮತ್ತು ಚಂದ್ರಯಾನ-3 ಜೊತೆಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಯಲ್ಲಿ ವಿಜ್ಞಾನಿಗಳೊಂದಿಗೆ ಮೋದಿಯವರ ಸಂವಾದದ ಚಿತ್ರಗಳನ್ನು ಹಾಕಲಾಗಿದೆ.

ಅಕ್ಟೋಬರ್ 17 ಸೋಮವಾರ ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್.ಪಿ.ಸೋಮನಾಥ್ ಅವರ ಸಮ್ಮುಖದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚಂದ್ರಯಾನ ಮಿಷನ್‌ನ ವಿಶೇಷ ಓದುವ ಸಾಮಗ್ರಿಗಳನ್ನು ಬಿಡುಗಡೆ ಮಾಡಿದ್ದರು.

“ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವು ಚಂದ್ರಯಾನ-3 ರ ವಿಜಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ನಮ್ಮ ದೇಶದ ಹೆಸರನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದೆ” ಎಂದು ಮಾಡ್ಯೂಲ್‌ಗಳಲ್ಲಿ ಒಂದು ಮೋದಿಯವರನ್ನು ಹೊಗಳಿದೆ.

ಟೆಲಿಗ್ರಾಫ್‌ ವರದಿ ಮಾಡಿರುವಂತೆ ಹಲವಾರು ಬಾಹ್ಯಾಕಾಶ ತಜ್ಞರು ಈ ಇದು ಸಮಸ್ಯಾತ್ಮಕ ಮಾತುಗಳು ಎಂದು ವಿವರಿಸಿದ್ದಾರೆ, ಏಕೆಂದರೆ ಅವರ ಪ್ರಕಾರ ಈ ಪಠ್ಯ ಚಂದ್ರಯಾನ -3 ಮಿಷನ್ ಮೋದಿಯವರಿಂದಲೇ ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ನೀಡುತ್ತದೆ. ಇದು ತನ್ನ ವೈಫಲ್ಯಗಳಿಂದ ಮತ್ತೆ ಪುಟಿದೇಳುವ ಇಸ್ರೋದ ದಾಖಲೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇಸ್ರೋದ ಇತಿಹಾಸದಲ್ಲಿ ಇಂತಹ ಸೋಲು-ಗೆಲುವಿನ ಪಾಠಗಳು ಅನೇಕ ಬಾರಿ ನಡೆದಿದ್ದು, ಇವೇ ಇಸ್ರೋದ ಸಾಧನೆಗಳಿಗೆ ಕಾರಣವಾಗಿವೆ.  1979 ರಲ್ಲಿ  ಉಡಾವಣೆ ಮಾಡಿದ ಉಪಗ್ರಹ ಉಡಾವಣಾ ವಾಹನವು ವಿಫಲವಾಯಿತು. ಆದರೆ ಮುಂದಿನ ವರ್ಷ ಮತ್ತೆ  ಪ್ರಯತ್ನಿಸಿ ಯಶಸ್ವಿಯಾಯಿತು ಎಂದು ಬಾಹ್ಯಾಕಾಶ ತಜ್ಞರು ನೆನಪಿಸಿಕೊಂಡಿದ್ದಾರೆ. 1987 ರಲ್ಲಿ ವಿಫಲವಾದಾಗ ಮತ್ತೆ ತನ್ನ ಯೋಜನೆಯನ್ನು 1988 ರಲ್ಲಿ ಯಶಸ್ವಿಗೊಳಿಸಿತು. 1993 ರಲ್ಲಿ ವಿಫಲವಾದ ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ 1994 ರಲ್ಲಿ ಯಶಸ್ಸನ್ನು ಕಂಡಿತು.

ಶಾಲಾ ಮಕ್ಕಳಿಗಾಗಿ ಸಿದ್ದಪಡಿಸಿರುವ ಮತ್ತೊಂದು ಮಾಡ್ಯೂಲ್‌ನಲ್ಲಿ ಬಾಹ್ಯಾಕಾಶ ವಿಜ್ಞಾನದೊಂದಿಗೆ ಪುರಾಣವನ್ನು ಬೆರೆಸಲಾಗಿದೆ. “ವೈಜ್ಞಾನಿಕ ಸಾಧನೆಯು ಈಗ ಮಾತ್ರ ಸಂಭವಿಸಿದೆಯೇ? ಎಂಬ ಪಠ್ಯದಲ್ಲಿ ಅದನ್ನು ವೈಮಾನಿಕ ಶಾಸ್ತ್ರ ಎಂಬ ಪುರಾವೆ ರಹಿತ ಕಲ್ಪನೆಯನ್ನು ಮಕ್ಕಳಿಗೆ ಹಂಚಲಾಗಿದೆ. ಎಂದು ಹೇಳುತ್ತದೆ. “ಇದು ನಮ್ಮ ದೇಶವು ಈ ದಿನಗಳಲ್ಲಿ ಹಾರುವ ವಾಹನಗಳ ಜ್ಞಾನವನ್ನು ಹೊಂದಿತ್ತು ಎಂದು ತಿಳಿಸುತ್ತದೆ,” ಮಾಡ್ಯೂಲ್ ಹೇಳುತ್ತದೆ.

“ಭಾರತೀಯ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದ ವೇದಗಳು, ಪ್ರಾಣಿಗಳು, ಸಾಮಾನ್ಯವಾಗಿ ಕುದುರೆಗಳು ಎಳೆಯುವ ಚಕ್ರದ ರಥಗಳ ಮೇಲೆ ಸಾಗಿಸಲ್ಪಡುವ ವಿವಿಧ ದೇವರುಗಳ ಉಲ್ಲೇಖವನ್ನು ಮಾಡುತ್ತವೆ, ಆದರೆ ಈ ರಥಗಳು ಹಾರಬಲ್ಲವು ಕೂಡ” ಎಂದು ಅದು ಹೇಳುತ್ತದೆ.

ಮಾಡ್ಯೂಲ್‌ನಲ್ಲಿ ರಾಮಾಯಣದ ಹಾರುವ ರಥ ಪುಷ್ಪಕ ವಿಮಾನದ ಉಲ್ಲೇಖವನ್ನು ಸಹ ಮಾಡಲಾಗಿದೆ. “ಇದನ್ನು ಬ್ರಹ್ಮನಿಗಾಗಿ ದೇವತೆಗಳ ಮುಖ್ಯ ವಾಸ್ತುಶಿಲ್ಪಿ ವಿಶ್ವಕರ್ಮ ಸೂರ್ಯನ ಧೂಳಿನಿಂದ ಸೃಷ್ಟಿಸಿದ.  ಬ್ರಹ್ಮ ಇದನ್ನು ಕುಬೇರನಿಗೆ ಕೊಟ್ಟನು. ರಾವಣನು ಕುಬೇರನಿಂದ ಲಂಕೆಯನ್ನು ವಶಪಡಿಸಿಕೊಂಡಾಗ, ಅದನ್ನು ತನ್ನ ವೈಯಕ್ತಿಕ ವಾಹನವಾಗಿ ಬಳಸಿಕೊಂಡನು,” ಎಂದು ಬಾಹ್ಯಾಕಾಶ ವಿಜ್ಞಾನವನ್ನು ಸಮಸ್ಯಾತ್ಮಕವಾಗಿ ಪುರಾಣಗಳ ಜೊತೆಗೆ ಜೋಡಿಸಲಾಗಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆನೆ ತಲೆ ಇರುವ ದೇವತೆ ʼಗಣಪತಿʼಯನ್ನು ಪ್ಲಾಸ್ಟಿಕ್‌ ಸರ್ಜರಿ ಹಾಗೂ ಕರ್ಣನನ್ನು ಜೆನೆಟಿಕ್‌ ಟೆಕ್ನಾಲಜಿಯಿಂದ ಹುಟ್ಟಿದ್ದು ಎಂಬ ಅವೈಜ್ಞಾನಿಕ ಹೇಳಿಕೆಯನ್ನು ಮುಂಬೈಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದರು.

ಯಶಸ್ವಿ ಚಂದ್ರಯಾನ : ಇಸ್ರೋ ಕಚೇರಿಗೆ ಭೇಟಿ ನೀಡಿ, ವಿಜ್ಞಾನಿಗಳನ್ನು ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ
ಚಂದ್ರಯಾನ – 3 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಪಾದಗಳನ್ನಿಟ್ಟು ಭಾರತ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದೆ. ಇದು ದೇಶ ಮಾತ್ರವಲ್ಲ, ನಮ್ಮ ಕರುನಾಡಿನ ಉತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಚಂದ್ರಾಯಾನ-3 ರ ರೂವಾರಿ ಇಸ್ರೋ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

ಈ ಮಹತ್‌ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ರಾಜ್ಯದ ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ದೇಶವೇ ನಮ್ಮ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡುತ್ತಿದೆ.

ಬುಧವಾರ ಸಂಜೆ 6:04ಕ್ಕೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ತನ್ನ ಪಾದಗಳನ್ನೂರುವುದನ್ನು ಕಣ್ತುಂಬಿಕೊಂಡಿದ್ದ ಸಿ ಎಂ ಸಿದ್ದರಾಮಯ್ಯ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೇ ಬೇಟಿ ನೀಡಿ ಹೋಗಿ ಚಂದ್ರಯಾನ್‌ -3 ಕ್ಕಾಗಿ ಅವಿರತ ಶ್ರಮಿಸಿರುವ ವಿಜ್ಞಾನಿಗಳನ್ನು ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ನೆನ್ನೆ ಚಂದ್ರಯಾನ್‌ ಯಶಸ್ಸಿಗೆ ತಮ್ಮ ಹರ್ಷ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಟ್ವೀಟ್‌ ಮಾಡಿ… ಎಂದು ತಿಳಿಸಿದ್ದರು.

ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹಾಗೂ ಇತರ ವಿಜ್ಞಾನಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು. ತಮ್ಮ ಕೈಯಾರೆ ಸಿಹಿ ಹಂಚಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್‌. ಬೋಸರಾಜು ಅವರ ಜೊತೆಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಇಸ್ರೋ ಅಧ್ಯಕ್ಷರಾದ ಎಸ್‌. ಸೋಮನಾಥ್‌ ಮತ್ತು ಇತರ ವಿಜ್ಞಾನಿಗಳನ್ನು ಸರ್ಕಾರದ ವತಿಯಿಂದ ಗೌರವಿಸಲು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಚಂದ್ರಯಾನ ನಮಗೆಲ್ಲ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ಬುಧವಾರ ವಿಕ್ರಂ ಲ್ಯಾಂಡರ್‌ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಖುಷಿ ಆಯ್ತು, ಬಹಳ ಹೆಮ್ಮೆ ಎನಿಸಿದೆ. ಇದೊಂದು ದೊಡ್ಡ ಸಾಧನೆ. ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮಪಡುತ್ತಿದ್ದಾರೆ. ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಇದು. ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡ್ತೇವೆ. ಇಸ್ರೋ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ.

ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದು ಹೇಳಿದರು.

ತಮ್ಮ ಬೇಟಿಯ ನಂತರ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿಗಳು “ಇವರು ಚಂದ್ರಯಾನ-3 ಯೋಜನೆಯ ಯಶಸ್ಸಿನ ಹಿಂದಿರುವ ಶಕ್ತಿಗಳು. ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರದ ಮೇಲೆ ಇಳಿದ ಕ್ಷಣದಿಂದ ಇಡೀ ವಿಶ್ವವೇ ಇವರ ಸಾಧನೆಯನ್ನು ಕೊಂಡಾಡುತ್ತಿದೆ. ಇಡೀ ವಿಶ್ವವೇ ಗುರುತಿಸಿ ಕೊಂಡಾಡುತ್ತಿರುವ ಇಸ್ರೋ ಸಂಸ್ಥೆ ನಮ್ಮ ಕರ್ನಾಟಕದ ನೆಲದಲ್ಲಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಇಸ್ರೋ ಮುಂದಿನ ದಿನಗಳಲ್ಲಿ ಮಾನವ ಸಹಿತ ಚಂದ್ರಯಾನ ಹಾಗೂ ಸೌರಗ್ರಹ ಯಾನಗಳನ್ನೂ ಸಾಧಿಸಿ ಭಾರತೀಯರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇನೆ.” ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳ ಸರಳತೆಗೆ ಬೆರಗಾದ ಸಿದ್ದರಾಮಯ್ಯ ಅವರೊಂದಿಗೆ ಎಲ್ಲಾ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಸಂಭ್ರಮದಿಂದ ಫೋಟೋ ತೆಗೆಸಿಕೊಂಡರು. ರಾಜ್ಯದ ಮುಖ್ಯಮಂತ್ರಿ ತಮ್ಮ ಬಳಿ ಬಂದು ಮೆಚ್ಚುಗೆ ಸೂಚಿಸಿದ್ದಕ್ಕೆ ಅವರಿಗಾದ ಸಂತಸವನ್ನು ಅವರ ನಗುಮುಖಗಳೇ ಹೇಳುತ್ತಿದ್ದವು.

ಚಂದ್ರಯಾನದ ಸಂಭ್ರಮದಲ್ಲಿ ದೇಶದ ಅಸಲಿ ಸಮಸ್ಯೆಗಳು ಮರೆಯಾಗದಿರಲಿ : ಚಿತ್ರನಟ ಕಿಶೋರ್
ಚಂದ್ರಯಾನ 3 ಯಶಸ್ವಿ ಉಡಾವಣೆಯ ಬೆನ್ನಲ್ಲೇ ಭಾರತದ ಅಸಲಿ ದುಸ್ಥಿತಿಯನ್ನು ನೆನೆದು ಕನ್ನಡದ ಖ್ಯಾತ ನಟ ಕಿಶೋರ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ ಯಶಸ್ವಿ ಉಡಾವಣೆ ಬಗ್ಗೆ ಹೆಮ್ಮೆ ಇದೆ.. ಎದೆ ಬೀಗಿದೆ. ಆದರೆ ಈ ಸಂಭ್ರಮಾಚರಣೆ ನಡುವೆ ಭಾರತದ ಜ್ವಲಂತ ಸಮಸ್ಯೆಗಳನ್ನು ಜನ ಮರೆಯದಿರಲಿ ಎಂಬ ಸಂದೇಶ ನೀಡಿದ್ದಾರೆ.

ಈ ಬಗ್ಗೆ ತಮ್ಮ ಫೇಸ್‌ಬುಕ್‌ ಗೋಡೆಯ ಮೇಲೆ ಬರೆದುಕೊಂಡಿರುವ ಅವರು, “ಚಂದ್ರನ ದಕ್ಷಿಣ ದ್ರುವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ. ಹೆಮ್ಮೆಯಿದೆ , ಎದೆ ಬೀಗಿದೆ. ಆದರೆ.. ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ ನನ್ನ ದೇಶದ ಕುತಂತ್ರಿ ರಾಜಕಾರಣಿಗಳು, ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ” ಎಂದು ಮಣಿಪುರದ ಹೆಣ್ಣು ಮಕ್ಕಳ ದುರಂತದ ಬಗ್ಗೆ ಪ್ರಸ್ತಾಪಿಸಿ ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಭಾರತದಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆಯೂ ಪ್ರಸ್ತಾಪಿಸಿದ ಕಿಶೋರ್ “ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ. ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ. ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ ಚಿತ್ರ ಕಣ್ಣ ಮುಂದೆ ಬಂದು ನಿಲ್ಲುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿ ಅವರನ್ನು ಅಸೂಕ್ಷ್ಮಮತಿಯ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಾರೆ. “ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಶ್ಮೀರದ ಜನತೆಯ ಚಿತ್ರ. ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ.. ಹೀಗೇ ನೂರಾರು..ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ. ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು” ಎಂದು ಕಿಶೋರ್ ದೇಶದ ದುಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ- 3 ; ಯಾರೂ ಗುರುತಿಸದ ವಿಶೇಷಗಳಿವು!
ಚಂದ್ರಯಾನ -3 ಇಂದಿನ ವರೆಗೆ ಗುರುತಿಸದೇ ಇರುವ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ ಗಳನ್ನು ಹೊಂದಿರುವ ಲ್ಯಾಂಡರ್ ಮಾಡ್ಯೂಲ್ ಇಂದು ಸಂಜೆ 6.04 ನಿಮಿಷಕ್ಕೆ ಚಂದ್ರನ ನೆಲವನ್ನು ಸ್ಪರ್ಶಿಸಲಿದೆ.

ಲ್ಯಾಂಡರ್ ಮಾಡ್ಯೂಲ್ ನಲ್ಲಿ ಲ್ಯಾಂಡರ್ ಮತ್ತು ರೋವರ್ ಗಳಿದ್ದು ಚಂದ್ರನ ಮೇಲೆ ಲ್ಯಾಂಡರ್ ಮಾಡ್ಯೂಲ್ ಇಳಿದಂತೆ ರೋವರ್ ಹೊರಗೆ ಬರುತ್ತದೆ ರೋವರ್ ಚಂದ್ರನ ಮೇಲೆ ಇಳಿಯುವ ನೌಕೆ. ಇದನ್ನು ಚಂದ್ರನ ನೆಲವನ್ನು ಅಧ್ಯಯನ ಮಾಡುವಂತೆ ನಿರ್ಮಾಣ ಮಾಡಲಾಗಿದೆ.

ರೋವರ್ ಪ್ರಗ್ಯಾನ್ ಸೇರಿಂತೆ ವಿಕ್ರಮ್ ಲ್ಯಾಂಡರ್ 1749.86 ಕೆಜಿ ತೂಕವಿದೆ. ಚಂದ್ರನ ಮೇಲೆ ಒಂದು ದಿನ ಇದು ಕಾರ್ಯ ನಿರ್ವಹಿಸಲಿದೆ. ಚಂದ್ರನಲ್ಲಿ ಒಂದು ದಿನ ಅಂದರೆ ಭೂಮಿಯಲ್ಲಿ 14 ದಿನಗಳು.

ಚಂದ್ರಯಾನ 3 ಯಲ್ಲಿ ಚಂದ್ರನ ಮೇಲಿರುವ ಪ್ಲಾಸ್ಮಾ ,ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆಯನ್ನು, ಲ್ಯಾಂಡಿಂಗ್ ಸೈಟ್ ನ ಕಂಪನವನ್ನು, ಮಣ್ಣಿನಲ್ಲಿರು ರಾಸಾನಿಕಗಳನ್ನು ಕಂಡುಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಎಎನ್ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಲ್ಯಾಂಡಿಂಗ್ ಸೈಟ್ ಸುತ್ತ ಇರುವ ಮಣ್ಣು ಮತ್ತು ಬಂಡೆಗಳ ಮೇಲಿರುವ ಮೆಗ್ನೀಸಿಯಮ್, ಅಲ್ಯೂಮಿನಿಯಂ, ಸಿಲಿಕಾನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಟೈಟಾನಿಯಂ ಮತ್ತು ಕಬ್ಬಿಣದಂತಹ ಸಂಯೋಜನೆಯನ್ನು ಅನಾಲೈಸ್‌ ಮಾಡಲಿದೆ.

ಈ ಚಂದ್ರಯಾನ ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಚಂದ್ರನ ದಕ್ಷಿಣ ದ್ರುವದ ಮೇಲೆ ನೌಕೆಯನ್ನು ಇಳಿಸಲಿದೆ. ಇದು ಭಾರತೀಯರಿಗೆ ಒಂದು ಹೆಮ್ಮೆಯ ಸಂಗತಿ. ಚೀನಾದ ನಂತರ ಭಾರತವೇ ಚಂದ್ರನ ಮೇಲೆ ಆಪರೇಟಿಂಗ್ ರೋವರ್ ಹೊಂದಿರುವ ದೇಶವಾಗಲಿದೆ.

ಭಾರತ ಚೀನಾ, ಯುಎಸ್ ಮತ್ತು ಸೋವಿಯತ್ ಒಕ್ಕೂಟಗಳ ಜೊತೆಗೆ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ನಾಲ್ಕನೇ ದೇಶವಾಗಲಿದೆ.

ಐತಿಹಾಸಿಕ ಹೆಜ್ಜೆಯತ್ತ ಇಸ್ರೋ : ವಿಕ್ರಂ ಲ್ಯಾಂಡರ್ ಮೊದಲ ಹಂತದ ಕಾರ್ಯ ಪೂರ್ಣ
ಚಂದ್ರಯಾನ 3 ಮಿಷನ್ ನಲ್ಲಿ ಮಹತ್ವದ ಸುದ್ದಿ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರಿನ ಡೀಬೂಸ್ಟ್ ಮಾಡುವ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮುಂದಿನ ಹಂತದ ಡೀಬೂಸ್ಟಿಂಗ್ ಆಗಸ್ಟ್ 20 ರಂದು ನಡೆಯಲಿದೆ ಎಂದು ಇಸ್ರೋ ಅಧಿಕೃತವಾಗಿ ತಿಳಿಸಿದೆ.

ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಆ ಮೂಲಕ ಚಂದ್ರಯಾನ 3 ಯಲ್ಲಿ ಮೊದಲ ಹಂತವನ್ನು ಇಸ್ರೋ ಯಶಸ್ವಿಯಾಗಿ ಪೂರೈಸಿದ್ದೆವೆ ಎಂದು ಹೇಳಿಕೊಂಡಿದೆ.

ಅಧಿಕೃತವಾಗಿ ಸಿಕ್ಕ ಮಾಹಿತಿಯ ಪ್ರಕಾರ, ಲ್ಯಾಂಡರ್ ಮಾಡ್ಯೂಲ್ (LM) ತನ್ನ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿದೆ. ಲ್ಯಾಂಡರ್ ಮಾಡ್ಯೂಲ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅದು ತನ್ನ ಕಕ್ಷೆಯನ್ನ 113 ಕಿಮೀ x 157 ಕಿಮೀಗೆ ಇಳಿಸಿದೆ. ಎರಡನೇ ಡೀಬೂಸ್ಟಿಂಗ್ ಕಾರ್ಯಾಚರಣೆಯನ್ನ 20 ಆಗಸ್ಟ್ 2023 ರಂದು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಟ್ವಿಟ್ಟರ್ ನಲ್ಲಿ ತಿಳಿಸಿದೆ.

Chandrayaan-3 Mission:
The Lander Module (LM) health is normal.

LM successfully underwent a deboosting operation that reduced its orbit to 113 km x 157 km.

The second deboosting operation is scheduled for August 20, 2023, around 0200 Hrs. IST #Chandrayaan_3#Ch3 pic.twitter.com/0PVxV8Gw5z
— ISRO (@isro) August 18, 2023

ಚಂದ್ರಯಾನ-3 ಗೆ ಕ್ಷಣಗಣನೆ : ಹೇಗಿದೆ ತಯಾರಿ?
ಚಂದ್ರಯಾನ-3 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-2 ತನ್ನ ಕೊನೆಯ ಹಂತದಲ್ಲಿ ವಿಫಲದ ನಂತರ ಮಹತ್ವದ ಉಪಗ್ರಹ ನೌಕೆಯ ಉಡಾವಣೆಗೆ ಹೆಚ್ಚು ಗಮನ ಸೆಳೆದಿದೆ.

ಚಂದ್ರನತ್ತ ಭಾರತದ ಮೂರನೇ ಮಿಷನ್ ಶುಕ್ರವಾರ ಮಧ್ಯಾಹ್ನ 2:35 ಕ್ಕೆ ಟೇಕಾಫ್ ಆಗಲಿದೆ. ಚಂದ್ರಯಾನದ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮೂಲಕ ಭಾರತವನ್ನು ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ನಂತರ ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.

2019 ರಲ್ಲಿ ಇಸ್ರೇಲ್ ಮತ್ತು ಭಾರತದ ಕಾರ್ಯಾಚರಣೆಗಳು ಕ್ರ್ಯಾಶ್-ಲ್ಯಾಂಡ್ ಆದ ನಂತರ ಮತ್ತು ಜಪಾನ್‌ನಿಂದ ಲ್ಯಾಂಡರ್-ರೋವರ್ ಅನ್ನು ಹೊತ್ತೊಯ್ಯುವ ಬಾಹ್ಯಾಕಾಶ ನೌಕೆ ಮತ್ತು ಯುಎಇಯಿಂದ ರೋವರ್ 2022 ರಲ್ಲಿ ವಿಫಲವಾದ ನಂತರ ಈ ಸ್ಥಾನವು ಖಾಲಿಯಾಗಿತ್ತು. ಸಧ್ಯ ಈಗ ಭಾರತ ನಾಲ್ಕೇ ವರ್ಷಗಳಲ್ಲಿ ಚಂದ್ರಯಾನದ ಮತ್ತೊಂದು ಪ್ರಯೋಗಕ್ಕೆ ಇಸ್ರೋ ಗ್ರೀನ್ ಸಿಗ್ನಲ್ ನೀಡಿದೆ.

ಇಸ್ರೋ ವಿಜ್ಞಾನಿ ಸತೀಶ್ ಧವನ್ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಎಲ್ಲ ಸಿದ್ಧತೆಗಳನ್ನು ಗಮನಿಸಿ ಈ ಬಾರಿ ಯಾವುದೇ ವೈಫಲ್ಯಗಳು ಆಗದಂತೆ ಸಿದ್ಧತೆ ನಡೆಸುತ್ತಿದ್ದಾರೆ. ಭಾರತವು ಈ ಹಿಂದೆ ಚಂದ್ರಯಾನ-1 ಮತ್ತು ಚಂದ್ರಯಾನ-2 ಮಿಷನ್‌ಗಳಲ್ಲಿ ಚಂದ್ರನ ಮೇಲೆ ಉಪಗ್ರಹಗಳನ್ನು ಕಳುಹಿಸಿತ್ತು. ಚಂದ್ರಯಾನ-2 ಮಿಷನ್‌ನಲ್ಲಿ ಲ್ಯಾಂಡರ್ ಕೂಡ ಸೇರಿತ್ತು, ಆದರೆ ಅದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಲಿಲ್ಲ. ಈ ಬಾರಿ ಚಂದ್ರಯಾನ-3 ಮಿಷನ್‌ನಲ್ಲಿ ಲ್ಯಾಂಡರ್ ವಿಕ್ರಮ್ ಮತ್ತು ಅದರೊಳಗಿನ ರೋವರ್ ಪ್ರಗ್ಯಾನ್ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತಿದೆ.

ಮೂರರಿಂದ ಆರು ತಿಂಗಳ ಕಾಲ ಚಂದ್ರನ ಸುತ್ತ ಕಕ್ಷೆಯಲ್ಲಿ ಉಳಿಯುವ ಪ್ರೊಪಲ್ಷನ್ ಮಾಡ್ಯೂಲ್‌ಗೆ ಹೊಸ ಪ್ರಯೋಗವನ್ನು ಮಾಡಲಾಗಿದೆ. ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಎಂದು ಕರೆಯಲ್ಪಡುವ ಇದು ಪ್ರತಿಫಲಿತ ಬೆಳಕಿನಲ್ಲಿ ವಾಸಯೋಗ್ಯವಾಗಿರುವ ಸಣ್ಣ ಗ್ರಹಗಳನ್ನು (ಚಂದ್ರನ ಸುತ್ತ ಸುತ್ತುವ) ಹುಡುಕುತ್ತದೆ.