chennai – Peepal Media

ಕ್ಷೇತ್ರ ಪುನರ್ ವಿಂಗಡನೆ|ಚೆನ್ನೈನಲ್ಲಿ ನಡೆಯುತ್ತಿರುವ ಸ್ಟಾಲಿನ್ ನೇತೃತ್ವದ ಸಭೆಯಲ್ಲಿ ಡಿ.ಕೆ.ಶಿ ಭಾಗಿ
ಕ್ಷೇತ್ರ ಪುನರ್ ವಿಂಗಡನೆ ಕುರಿತಾಗಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕರ್ನಾಟಕದ ಪರವಾಗಿ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದಾರೆ.

ಈ ಸಭೆಯಲ್ಲಿ 2026ಕ್ಕೆ ನಡೆಯಲಿರುವ ಕ್ಷೇತ್ರ ಪುನರ್ ವಿಂಗಡನೆ ರಾಜ್ಯಗಳ ಮೇಲೆ ಬೀರುವ ಪ್ರಭಾವಗಳ ಬಗ್ಗೆ  ಚರ್ಚೆ ನಡೆಯಲಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇನ್ನು ತೆಲಂಗಾಣದ ಮಾಜಿ ಸಚಿವ ಕೆ. ಟಿ ರಾಮರಾವ್ ಬಿಆರ್‌ಎಸ್‌ ಅನ್ನು ಪ್ರತಿನಿಧಿಸಿದರೆ, ವೈಎಸ್‌ಆರ್‌ಸಿಪಿ, ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಬಿಜೆಡಿ ಮತ್ತು ಎಎಪಿಯಂತಹ ರಾಜಕೀಯ ಪಕ್ಷಗಳ ನಾಯಕರು ಕೂಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಜನಸೇನಾ ಸಂಸದ ತಂಗೆಲ್ಲ ಉದಯ್ ಶ್ರೀನಿವಾಸ್ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಊಹಾಪೋಹಗಳಿದ್ದವು. ಆದರೆ ಅವರು ತಮ್ಮ ನಾಯಕ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ರವನ್ನು ಸ್ಟಾಲಿನ್‌ ಅವರಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಈ ನಡುವೆ ಡಿಎಂಕೆ ತನ್ನ ದ್ವಿಭಾಷಾ ಸೂತ್ರಕ್ಕೆ ಅನುಗುಣವಾಗಿ ಭಾಗವಹಿಸುವ ನಾಯಕರ ಹೆಸರುಗಳನ್ನು ಅವರ ಮಾತೃಭಾಷೆ ಮತ್ತು ಇಂಗ್ಲಿಷ್‌ನಲ್ಲಿ ನಾಮಫಲಕಗಳಲ್ಲಿ ಮುದ್ರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಸಂದೇಶವನ್ನು ರವಾನಿಸಿದೆ. ಲೋಕಸಭಾ ಚುನಾವಣೆಯ ನಂತರ ಬಿಜೆಪಿಯ ವಿಪಕ್ಷಗಳ ಮೊದಲ ಸಭೆ ಇದಾಗಿರುವುದರಿಂದ ಮಹತ್ವವನ್ನು ಪಡೆದಿದೆ.

ಕ್ಷೇತ್ರ ಪುನರ್ ವಿಂಗಡಣೆಯನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಡೆಸಿದರೆ ಅನೇಕ ರಾಜ್ಯಗಳು ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತವೆ ಎಂಬ ಬಗ್ಗೆ ಚರ್ಚೆ ನಡೆಯಲಿದ್ದು, ಈ ರಾಜ್ಯಗಳೆಲ್ಲ ಸೇರಿ ಕ್ಷೇತ್ರ ಮರುವಿಂಗಡಣೆ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಾಧ್ಯತೆಗಳಿವೆ.

ಕರ್ನಾಟಕದ ಪ್ರತಿನಿಧಿಯಾಗಿ ಚೆನ್ನೈಗೆ ಆಗಮಿಸಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಕ್ಷೇತ್ರ ಪುನರ್ ವಿಂಗಡಣೆ ವಿವಾದ ಕುರಿತ ದಕ್ಷಿಣ ರಾಜ್ಯಗಳ ಪ್ರತಿನಿಧಿಗಳನ್ನು ಒಗ್ಗೂಡಿಸುವಲ್ಲಿ ಎಂ.ಕೆ ಸ್ಟಾಲಿನ್ ಮೊದಲ ಹೆಜ್ಜೆ ಇಟ್ಟಿದ್ದಾರೆ. ಅವರು ಈ ದೇಶದ ಒಕ್ಕೂಟ ಮತ್ತು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆ ಎಂಬ ಹೆಮ್ಮೆ ನಮಗಿದೆ. ಮುಂದೆ ಏನು ಅನುಸರಿಸಬೇಕು ಹಾಗೂ ಹೇಗೆ ಒಗ್ಗೂಡಿ ಕೆಲಸ ಮಾಡಬೇಕು ಎಂಬುದರ ಕುರಿತು ನಾವೆಲ್ಲರೂ ಚರ್ಚಿಸುತ್ತೇವೆ ಎಂದರು.

ತೆಲಂಗಾಣ, ಪಂಜಾಬ್, ಕೇರಳದ ನಾಯಕರು ಸೇರಿದಂತೆ ನಾವೆಲ್ಲರೂ ಇಲ್ಲಿ ಸೇರಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ನಾವು ನಮ್ಮ ದೇಶವನ್ನು ನಿರಾಸೆಗೊಳಿಸುವುದಿಲ್ಲ ಮತ್ತು ನಮ್ಮ ಸ್ಥಾನಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ನಮ್ಮದು ಬಹಳ ಪ್ರಗತಿಪರ ರಾಜ್ಯವಾಗಿದ್ದು, ಆರ್ಥಿಕವಾಗಿ ಮತ್ತು ಸಾಕ್ಷರತೆಯಲ್ಲಿ ಗಟ್ಟಿಯಾಗಿ ನಿಂತಿದ್ದೇವೆ ಎಂದು ಹೇಳಿದರು.

ಮಾಂಡೌಸ್‌ ಚಂಡಮಾರುತ : ಚೆನ್ನೈನ ಪ್ರದೇಶಗಳು ಜಲಾವೃತ
ತಮಿಳುನಾಡು: ತಮಿಳುನಾಡಿನಲ್ಲಿ ಅಪ್ಪಳಿಸಿರುವ ಮಾಂಡೌಸ್‌ ಚಂಡಮಾರುತದಿಂದಾಗಿ ಅಲ್ಲಿನ ಹಲವು ಭಾಗಗಳಲ್ಲಿ ಬಾರೀ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ. ಅಲ್ಲದೇ ಸುಮಾರು 60 ಕ್ಕೂ ಹೆಚ್ಚು ಮರಗಳು ಬುಡಸಮೇತ ಕಿತ್ತು ಬರುತ್ತಿದ್ದು, ಚೆನ್ನೈನ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಶುಕ್ರವಾರ ಸಂಜೆ ಮಾಮಲ್ಲಪುರದಿಂದ ಅಪ್ಪಳಿಸಿದ ಮಾಂಡೌಸ್‌ ಚಂಡಮಾರುತದಿಂದ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಚಂಡಮಾರುತದ ಪ್ರಭಾವಕ್ಕೆ, ವಿಪರೀತ ಮಳೆಯಾಗಿದ್ದು, ರಾತ್ರಿ 10.30ರ ಹೊತ್ತಿಗೆ ಭೂಕುಸಿತ ಉಂಟಾಗಿದ್ದು, ತಮಿಳುನಾಡಿನ ಮಹಾಬಳಿಪುರಂ ಕರಾವಳಿ ಹಾಗೂ ಪುದಚೇರಿ ಶ್ರೀ ಹರಿಕೋಟ ಪ್ರದೇಶಗಳಲ್ಲಿ ಗಾಳಿ  ವೇಗ ಹೆಚ್ಚಾಗಿದೆ.

ಮಾಂಡೌಸ್‌ ಚಂಡಮಾರುತವು ವಾಯುವ್ಯ ದಿಕ್ಕಿನಿಂದ ಚಲಿಸುತ್ತಿದ್ದು, ಕರಾವಳಿಯನ್ನು ದಾಟಿದ್ದು, ಆಳವಾದ ವಾಯುಭಾರ ಕುಸಿತದಲ್ಲಿದೆ. ವಾಯುವ್ಯ ಭಾಗದ ಪ್ರದೇಶಗಳಲ್ಲಿ ಗಂಟೆಗೆ 55-65 ಕಿಮೀ ನಷ್ಟು ಅಲ್ಲಿನ ಗಾಳಿಯ ವೇಗ ಇದ್ದು, ಸಂಜೆಯ ವೇಳೆಹೆ 30ರಿಂದ 40ಕಿಮೀಗೆ ಇಳಿಯುತ್ತದೆ ಎಂದು ಚೆನ್ನೈನ ಡಿಡಿಜಿಯಂ ಎಸ್‌ ಬಾಲಚಂದ್ರನ್‌ ತಿಳಿಸಿದ್ದಾರೆ.

ಈ ಚಂಡಮಾರುತ ಕಡಿಮೆ ಆಗುವವರೆಗೆ ಜನರು ಹೊರಗೆ ಹೋಗುವುದನ್ನು ತಪ್ಪಿಸುವಂತೆ ಗ್ರೇಟರ್‌ ಚೆನ್ನೈ ಕಾರ್ಪೊರೇಶನ್‌(JCC) ವಿನಂತಿಸಿದ್ದಾರೆ. ಮೂರು ಗಂಟೆಗಳಲ್ಲಿ ಸುಮಾರು 65ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ ಎಂದು ಹೇಳಲಾಗುತ್ತಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ನೀರು ನಿಲ್ಲುವುದನ್ನು ತೆಗೆಯಲು ಮೋಟಾರ್‌ ಪಂಪ್‌ಗಳನ್ನು ಬಳಸಲಾಗುತ್ತಿದೆ.

ʼಮಾಂಡೌಸ್‌ ಚಂಡಮಾರುತದ ಬಗ್ಗೆ ಸರ್ಕಾರವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರೆ. ಆದ್ದರಿಂದ ಸರ್ಕಾರದ ಆದೇಶಗಳನ್ನುಅದರೊಂದಿಗೆ ಕಾರ್ಪೊರೇಟ್‌ ಆದೇಶಗಳನ್ನು ಅನುಸರಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಒತ್ತಾಯಿಸಿದ್ದಾರೆ.

ಭಾರಿ ಮಳೆಯಿಂದ ಆಗುತ್ತಿರುವ ಅವಾಂತರಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಅಲ್ಲಿನ ಹಲವು ಭಾಗಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿದೆ. ಅಲ್ಲದೇ ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ಮತ್ತೆ ಟ್ರೆಂಡ್‌ ಆದ #StopHindiImpostion
ಚೆನ್ನೈ: ಉನ್ನತ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿ, ಇಂಗ್ಲಿಷ್‌ ಭಾಷೆಯನ್ನು ತೆಗೆದುಹಾಕಲು ಶಿಫಾರಸು ಮಾಡುವ ವರದಿಯನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಸಂಸದೀಯ ಸಮಿತಿ ರಾಷ್ಟ್ರಪತಿಗಳಿಗೆ ನೀಡಿರುವ ಹಿನ್ನೆಲೆಯಲ್ಲಿ ಹಿಂದಿಯೇತರ ರಾಜ್ಯಗಳ ಪ್ರತಿಭಟನೆ ತೀವ್ರವಾಗತೊಡಗಿದ್ದು, ಇಂದು ಟ್ವಿಟರ್‌ ನಲ್ಲಿ #StopHindiImpostion ರಾಷ್ಟ್ರಮಟ್ಟದಲ್ಲಿ ನಂ.೧ ಸ್ಥಾನದಲ್ಲಿ ಟ್ರೆಂಡ್‌ ಆಯಿತು.

ತಮಿಳುನಾಡಿನ ಆಡಳಿತಾರೂಢ ಡಿ,ಎಂ.ಕೆ ಪಕ್ಷ ರಾಜ್ಯಾದ್ಯಂತ ಇಂದು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಅದರ ಭಾಗವಾಗಿ ಟ್ವಿಟರ್‌ ನಲ್ಲೂ ಕೂಡ ಹಿಂದಿಹೇರಿಕೆ ವಿರುದ್ಧ ಪ್ರತಿರೋಧದ ಧ್ವನಿ ತೀವ್ರವಾಗಿ ಕೇಳಿಸಿತು.

ಸಾವಿರಾರು ಮಂದಿ ಟ್ವಿಟರ್‌ ಬಳಕೆದಾರರು, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಭಾಷಾ ಹೋರಾಟಗಾರರು ಟ್ವಿಟರ್‌ ನಲ್ಲಿ ಇಂದು ಕೇಂದ್ರ ಸರ್ಕಾರದ ಹಿಂದಿಹೇರಿಕೆಯ ನೀತಿಯನ್ನು ಖಂಡಿಸಿದರು. ನಮಗೆ ತಮಿಳು, ಇಂಗ್ಲಿಷ್‌ ಸಾಕು, ಹಿಂದಿ ಬೇಕಾಗಿಲ್ಲ ಎಂದು ನೂರಾರು ಮಂದಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ಕಿವಿ ಹಿಂಡಿದರು.

ಕೇಂದ್ರ ಸರ್ಕಾರ ಸರ್ವಾಧಿಕಾರಿ ಮನಸ್ಥಿತಿಯಿಂದ ತನ್ನ ಫ್ಯಾಸಿಸ್ಟ್‌ ನೀತಿಯನ್ನು ದೇಶದ ಜನತೆಯ ಮೇಲೆ ಹೇರುತ್ತಿದೆ. ಇದನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ನೀತಿಯಿಂದ ಶ್ರೀಲಂಕ ಯಾವ ಸ್ಥಿತಿ ತಲುಪಿತು ಎಂಬುದನ್ನು ನಾವು ನೋಡಿದ್ದೇವೆ. ಭಾರತ ಮತ್ತೆ ಇದೇ ತಪ್ಪನ್ನು ಮಾಡುತ್ತಿದೆ ಎಂದು ಅರುಣ್‌ ಕುಮಾರ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ 72,000ಕ್ಕೂ ಹೆಚ್ಚು ಟ್ವೀಟ್‌ ಗಳನ್ನು ಮಾಡಲಾಗಿದ್ದು, ತಮಿಳುನಾಡು ಮಾತ್ರವಲ್ಲದೆ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಟ್ವಿಟರ್‌ ಬಳಕೆದಾರರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಅಮಿತ್‌ ಶಾ ನೇತೃತ್ವದ ಸಮಿತಿಯ ವರದಿಯನ್ನು ಈಗಾಗಲೇ ದೇಶದ ಹಲವು ಹಿಂದಿಯೇತರ ರಾಜ್ಯಗಳ ರಾಜಕಾರಣಿಗಳು ಖಂಡಿಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಕೇಂದ್ರ ಸರ್ಕಾರ ತಮಿಳರ ವಿರುದ್ಧ ಯುದ್ಧ ಹೂಡಲು ಯತ್ನಿಸುತ್ತಿದೆ ಎಂದು ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ.

Huge protest in Kolkata by Bengalis against Hindi Imposition conspiracy by Hindi Imperialist BJP. In rally by @BanglaPokkho, National org of Bengalis in India, unprecedented scenes of Bengalis carrying posters of CN Annadurai, Kuvempu & Thalapathy @mkstalin. #StopHindiImposition pic.twitter.com/SGTfmUPSvB
— Garga Chatterjee (@GargaC) October 12, 2022

If implemented, the vast non-Hindi speaking population will be made second-class citizens in their own land.

Imposing Hindi is against the integrity of India.

The BJP govt would do well to learn lessons from the Anti-Hindi agitations in the past.#StopHindiImposition 2/2 pic.twitter.com/0R1IuvtzEx
— M.K.Stalin (@mkstalin) October 10, 2022

Hindi is national language of which nation?😛

Only in – ImagiNATION. 😂🤡🤣#StopHindiImposition pic.twitter.com/etpDcGDhBm
— Shaki sweety (@shakila_sweety) October 15, 2022

In heavy rain, @BanglaPokkho, National org of Bengalis in India, holds huge rally in Kolkata against Hindi Imposition conspiracy by Hindi Imperialist BJP. Bengalis carried picture quote placards of non-Hindi giants Annadurai, Kuvempu, Karunanidhi & @mkstalin. #stophindiimposition pic.twitter.com/a3Jp5ZTExf
— Garga Chatterjee (@GargaC) October 12, 2022

ಟ್ರಾನ್ಸ್‌ ಜೆಂಡರ್‌ಗಳಿಗೆ ವಿಶೇಷ ಮೀಸಲಾತಿ: ಮದ್ರಾಸ್‌ ಹೈಕೋರ್ಟ್‌ ಆದೇಶ
ಚೆನ್ನೈ: ಮಹತ್ವಪೂರ್ಣ ತೀರ್ಪೊಂದರಲ್ಲಿ ಮದ್ರಾಸ್‌ ಹೈಕೋರ್ಟ್‌, ಟ್ರಾನ್ಸ್‌ ಜೆಂಡರ್‌ ಸಮುದಾಯಕ್ಕೆ ನರ್ಸಿಂಗ್‌ ಕೋರ್ಸ್‌ ದಾಖಲಾತಿ ಸಂದರ್ಭದಲ್ಲಿ ವಿಶೇಷ ಮೀಸಲಾತಿ ಕಲ್ಪಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನಾಲಯಕ್ಕೆ ಆದೇಶಿಸಿದೆ.

ಟ್ರಾನ್ಸ್‌ ಜೆಂಡರ್‌ ವ್ಯಕ್ತಿಯೊಬ್ಬರು ನರ್ಸಿಂಗ್‌ ಕೋರ್ಸ್‌ ಮತ್ತು ಮನೋವಿಜ್ಞಾನ ನರ್ಸಿಂಗ್‌ ಶಿಕ್ಷಣದ ಡಿಪ್ಲಮೋ ವ್ಯಾಸಾಂಗಕ್ಕಾಗಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ್ದಾಗ ಅವರನ್ನು ಮಹಿಳೆ ಎಂದು ಆಯ್ಕೆ ಸಮಿತಿ ಪರಿಗಣಿಸಿದ ಹಿನ್ನೆಲೆಯಲ್ಲಿ ಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌ ಸುರೇಶ್‌ ಕುಮಾರ್‌, ಅರ್ಜಿದಾರರನ್ನು ವಿಶೇಷ ಕೆಟಗರಿಯಲ್ಲಿ ಸೇರಿಸದೇ ಹೋದಲ್ಲಿ 2019ರಲ್ಲಿ ಸುಪ್ರೀಂ ಕೋರ್ಟ್‌ ಟ್ರಾನ್ಸ್‌ ಜೆಂಡರ್‌ ಸಮುದಾಯ ಹಕ್ಕುಗಳಿಗಾಗಿ ನಿಗದಿಪಡಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಟ್ರಾನ್ಸ್‌ ಜೆಂಡರ್‌ ಸಮುದಾಯದ ಜನರ ಸಂಖ್ಯೆ ಕಡಿಮೆ ಇರುವುದರಿಂದ ಅವರಿಗೆ ವಿಶೇಷ ಮೀಸಲಾತಿ ಕಲ್ಪಿಸಿದರೆ ಸೀಟುಗಳು ವ್ಯರ್ಥವಾಗುವ ಸಾಧ್ಯತೆ ಇದೆ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು.

ಹಾಸ್ಟೆಲ್ ನಲ್ಲಿ ಕಾಣೆಯಾಗಿದ್ದ ಮೂರು ಜನ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ
ಮಂಗಳೂರು : ಬುಧವಾರ ಹಾಸ್ಟೆಲ್‌ನಿಂದ ಕಾಣೆಯಾಗಿದ್ದ ಮೂರು ಜನ ವಿದ್ಯಾರ್ಥಿನಿಯರು ಇಂದು ಚೆನ್ನೈನಲ್ಲಿ  ಪೋಲೀಸರ ವಶಕ್ಕೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ಇಬ್ಬರು ಮತ್ತು ಚಿಕ್ಕಮಗಳೂರಿನ ಒಬ್ಬ ವಿದ್ಯಾರ್ಥಿನಿ ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ಉಳಿದಿದ್ದರು. ಬುಧವಾರ ಬೆಳಗ್ಗೆ ಸುಮಾರು 3.30 ಕ್ಕೆ ಹಾಸ್ಟೆಲ್‌ನ ಕಿಟಕಿ ಮುರಿದು ಹೊರಬಂದು ಅಲ್ಲಿಂದ ತಪ್ಪಿಸಿಕೊಂಡು ಹೋಗಿರುವುದು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು ಈ ಕುರಿತು ಕಂಕನಾಡಿಯ ನಗರ ಪೋಲಿಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಹಾಗೆ ಸಿಸಿಟಿವಿ ದೃಶ್ಯ ಆಧರಿಸಿ ಹುಡುಕಾಟಕ್ಕೆಂದು  ಚೆನ್ನೈಗೆ ತೆರಳಿದ ಪೋಲೀಸರಿಗೆ ಇಂದು ಚೆನ್ನೈನಲ್ಲಿ  ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಮೂವರು ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಮೂರು ಜನರನ್ನು ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಲಾಗಿದ್ದು ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ನಾಪತ್ತೆಯಾಗಲು ಕಾರಣವೇನು ಎಂದು ತನಿಖೆ ಮುಗಿದ ನಂತರ ತಿಳಿದು ಬರಬೇಕಿದೆ ಎಂದು ಅಲ್ಲಿನ ಪೋಲೀಸರು ಮಾಹಿತಿ ನೀಡಿದ್ದಾರೆ.