chethan ahimsa – Peepal Media

ಕ್ರಿಕೆಟ್ ತಂಡದಲ್ಲಿ ಮೀಸಲಾತಿ: ಚೇತನ್ ಹೇಳಿಕೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಇರಬೇಕು ಎಂದು ಕನ್ನಡ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಅಹಿಂಸಾ ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆಗೆ ಕಾರಣವಾಗಿದೆ.

ಚಾಮರಾಜನಗರದಲ್ಲಿ ಮೀಸಲಾತಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಚೇತನ್, ʼಭಾರತೀಯ ಕ್ರಿಕೆಟ್ನಲ್ಲಿ, ಶೇಕಡಾ 70 ರಷ್ಟು ಆಟಗಾರರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಹೀಗಾಗಿ ಕ್ರಿಕೆಟ್ನಲ್ಲಿಯೂ ಮೀಸಲಾತಿಯನ್ನು ಜಾರಿಗೆ ತಂದರೆ, ತಂಡದ ಪ್ರದರ್ಶನವು ಉತ್ತಮವಾಗಿರುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದರು.

ʼಭಾರತ ಕ್ರಿಕೆಟ್ ತಂಡದಲ್ಲಿ ಆಡುವ ಹೆಚ್ಚಿನ ಆಟಗಾರರು ಮೇಲ್ಜಾತಿಗೆ ಸೇರಿದವರಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ನೋಡಬೇಕಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನಿರ್ದಿಷ್ಟ ಸಂಖ್ಯೆಯ ಬಿಳಿಯರಲ್ಲದ ಆಟಗಾರರನ್ನು ತಮ್ಮ ರಾಷ್ಟ್ರೀಯ ತಂಡದಲ್ಲಿ ಇರುವುದನ್ನು ಕಡ್ಡಾಯಗೊಳಿಸಿದೆ. ಭಾರತದ ಕ್ರಿಕೆಟ್ ಮಂಡಳಿಯು ಎಷ್ಟು ಹಣ ಒಳಗೊಂಡಿದೆ ಮತ್ತು ಅದರ ಮೇಲೆ ಮಾಧ್ಯಮಗಳ ಪ್ರಭಾವವು ಎಲ್ಲರಿಗೂ ತಿಳಿದಿದೆ. ಭಾರತೀಯ ಕ್ರಿಕೆಟ್ ತಂಡವು ಉತ್ತಮ ಪ್ರದರ್ಶನ ನೀಡಬೇಕಾದರೆ, ಮೀಸಲಾತಿಯೂ ಅಗತ್ಯವಾಗಿದೆ. ಉತ್ತಮ ಸಾಧನೆಗಾಗಿ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲಾತಿಯನ್ನು ತರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು, ಕೆಲವರು ಜಾತಿಯನ್ನು ಕೇವಲ ಪ್ರದರ್ಶನದ ಆಧಾರದ ಮೇಲೆ ಕ್ರೀಡೆಗೆ ತರಲು ಏಕೆ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಫೇಸ್ಬುಕ್ ಬಳಕೆದಾರ ಹಮೀದ್ ಬೋರ್ಕಲಾ, ʼಇದು ಅರ್ಥಹೀನ ಹೇಳಿಕೆ, ಆಯ್ಕೆಗಳು ಪ್ರತಿಭೆಯ ಆಧಾರದ ಮೇಲೆ ಇರಬೇಕು. ಇದರಲ್ಲಿ ಮೀಸಲಾತಿಯು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಚೇತನ್ ಕುಮಾರ್ ಅವರನ್ನು ಬೆಂಬಲಿಸಿದ ಫೇಸ್ಬುಕ್ ಬಳಕೆದಾರ ಸೂರಜ್ ಸಮಲ್ ಎಂಬುವರು, ʼಚೇತನ್ ಅವರ ಹೇಳಿಕೆಯು, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಈಗಾಗಲೇ ಕ್ರಿಕೆಟ್ನಲ್ಲಿ ವೈವಿಧ್ಯತೆಯನ್ನು ತರಲು ಮತ್ತು ಏಕಸ್ವಾಮ್ಯವನ್ನು ಕಡಿಮೆ ಮಾಡಲು ಈಗಾಗಲೇ ಪ್ರಯತ್ನಿಸಲಾಗುತ್ತಿದೆ.  ದೀನದಲಿತ ಹಿನ್ನೆಲೆಯಿಂದ ಬರುವ ಜನರನ್ನು ಅಪ್ಪಿಕೊಳ್ಳುವಾಗ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಉತ್ತಮ ಮಾನವ ಜೀವಿಯಾಗಿರಲು ಇದು ನಮಗೆ ಕಲಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.

ಚೇತನ್ ಕುಮಾರ್ ಇತ್ತೀಚೆಗೆ ಕನ್ನಡದ ಜನಪ್ರಿಯ ಚಲನಚಿತ್ರ ಕಾಂತಾರ ಬಗ್ಗೆ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದರು. ಕರಾವಳಿ ಕರ್ನಾಟಕದ ಜನರು ಆಚರಿಸುವ ಮತ್ತು ಚಿತ್ರದಲ್ಲಿ ಚಿತ್ರಿಸಲಾದ ಭೂತ ಕೋಲದ ಆಚರಣೆಯು ಹಿಂದೂ ಸಂಸ್ಕೃತಿಯ ಭಾಗವಲ್ಲ ಎಂದು ಅವರು ಹೇಳಿದ್ದರು. ಅಮೆರಿಕದಲ್ಲಿ ಹುಟ್ಟಿ ಬೆಳೆದ ಚೇತನ್ ಕುಮಾರ್, ರೈತರು, ಕಾರ್ಮಿಕರು, ದಲಿತರು ಮತ್ತು ಆದಿವಾಸಿಗಳ ಕಲ್ಯಾಣಕ್ಕಾಗಿ ನಡೆದ ಚಳವಳಿಗಳಲ್ಲಿ ಚಿರಪರಿಚಿತ ಮುಖವಾಗಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ, ಕೊಡಗಿನಿಂದ ಹೊರಹಾಕಲ್ಪಟ್ಟ ಬುಡಕಟ್ಟು ಜನರಿಗೆ ಮನೆಗಳಿಗಾಗಿ ಆಗ್ರಹಿಸಿದ್ದರು. ಇತ್ತೀಚೆಗೆ, ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನಕ್ಕಾಗಿ ನಡೆದ ಚಳವಳಿಗಳೊಂದಿಗೆ ಅವರು ಗುರುತಿಸಿಕೊಂಡಿದ್ದರು.

ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು
ಬೆಂಗಳೂರು : ಕಾಂತಾರ ಸಿನಿಮಾ ಕುರಿತು ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆ ದೂರು ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಕಾಂತಾರ ಸಿನಿಮಾದ ವಿವಾದಾತ್ಮಕ ಪೋಸ್ಟ್‌ ವಿಚಾರದ ಬಗ್ಗೆ ಮಾತನಾಡಿದ ಚೇತನ್‌, ʼಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಹೇಳಿದ್ದರು. ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕೊರಗ ಪಂಪದ ಎಂಬುದು ಬೇರೆ ಸಮುದಾಯವಿದೆ. ಕೊರಗ ಸಮುದಾಯದಲ್ಲಿ ಅವರದ್ದೇ ಆದ ಸಂಸ್ಕೃತಿ ಇದೆ. ಈ ಮೂಲ ನಿವಾಸಿಗಳು ಭ್ರಾಹ್ಮಣ್ಯಕ್ಕೆ ಒಳಪಡುವುದಿಲ್ಲ. ಭೂತಕೋಲ ಅನ್ನೋದು ತಪ್ಪು, ಹಿಂದೂ ಅನ್ನೋದನ್ನು ಹೇಗೆ ಬಳಸುತ್ತೇವೆ ಎನ್ನುವುದು ಮುಖ್ಯʼ ಎಂದು ಹೇಳಿದ್ದರು.

ಈ ಹಿನ್ನಲೆಯಲ್ಲಿ ನಟ ಚೇತನ್‌ ವಿರುದ್ದ ಹಿಂದೂ ಜಾಗರಣೆ ವೇದಿಕೆಯು ಕಾರ್ಕಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಳ್ಳಾರಿ ಗಣಿ ಕಾರ್ಮಿಕರ ಪಾದಯಾತ್ರೆ : ಮೂರನೇ ದಿನಕ್ಕೆ
ಬಳ್ಳಾರಿ : ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ಮಾಡುತ್ತಿದ ಪಾದಯಾತ್ರೆಯು ಇಂದು ಮೂರನೇ ದಿವಸಕ್ಕೆ ಕಾಲಿಟ್ಟಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.

ಬಳ್ಳಾರಿ ಗಣಿ ಕಾರ್ಮಿಕರ ಪುನರ್ವಸತಿಗಾಗಿ ಒತ್ತಾಯಿಸಿ ದಿನಾಂಕ 11.10.2022ರಂದು ಬೆಳೆಗ್ಗೆ 10 ಗಂಟೆಯಿಂಧ ಸಂಡೂರಿನಿಂದ ಬಳ್ಳಾರಿ ವರೆಗೆ 70 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ಪಾದಯಾತ್ರೆಗೆ ಹೋರಾಟಗಾರರಾದ ಮೇಧಪಾಟ್ಕರ್ ಮತ್ತು ನಟ ಚೇತನ್‌ರವರು ಬಳ್ಳಾರಿ ಗಣಿ ಕಾರ್ಮಿಕರ ಪರವಾಗಿ ಚಾಲನೆ ನೀಡಿದ್ದರು.  ಸಂಡೂರಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಪ್ರಾರಂಭವಾದ ಬಳ್ಳಾರಿ ಗಣಿ ಕಾರ್ಮಿಕರ ಪಾದಯಾತ್ರೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ.

ಪಾದಯಾತ್ರೆಯನ್ನು ಶುರು ಮಾಡಿದ್ದ ಬಳ್ಳಾರಿ ಗಣಿ ಕಾರ್ಮಿಕರ ಸಂಘವು ತೋರಣಗಲ್ಲು, ಕುಡಿತಿನಿ, ವಣಿವಿರಪುರ, ವಡ್ಡು, ಅಲ್ಲಿಪುರ, ಮತ್ತು ಇತರೆ ಪ್ರದೇಶಗಳ ಮೂಲಕ ತೆರಳಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ನೂರಾರು ಕಾರ್ಮಿಕರು ಕಾಲ್ನಡಿಗೆ ಜಾಥಾದಿಂದ ಬಳ್ಳಾರಿ ಜಿಲ್ಲಾಧಿಕಾರಿಯವರ ಕಚೇರಿ ಸೇರಿದ್ದಾರೆ. ಹಳ್ಳಿ-ಹಳ್ಳಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಮಿಕರ ಸಮಸ್ಯೆಗಳು ಮತ್ತು ಅವರ ಜೀವನ-ಜೀವನೋಪಾಯದ ಪರಿಸ್ಥಿತಿ ಕುರಿತು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದ್ದರು. ಗಣಿ ಕಾರ್ಮಿಕರು ಕಳೆದ ಹತ್ತು ವರ್ಷಗಳಿಂದ ಎದುರಿಸುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಅವರುಗಳಿಗೆ ದೊರಕಬೇಕಾದ ಪರಿಹಾರ ಮತ್ತು ಹಕ್ಕುಗಳನ್ನು ಕೇಳುತ್ತಾ, ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಪಾದಯಾತ್ರೆಯು ಬಳ್ಳಾರಿ ಜಿಲ್ಲಾಧಿಕಾರಿಯವರ ಕಚೇರಿಯನ್ನು ತಲುಪಿ, ಈ ಕೆಳಕಂಡ ಹಕ್ಕೋತ್ತಾಯಗಳನ್ನು ಈಡೇರಿಸಲು ಹೋರಾಟವನ್ನು ನಡೆಸಿದ್ದಾರೆ.

ಕರ್ನಾಟಕ ಸರ್ಕಾರದ ಸಚಿವರುಗಳು ಮತ್ತು ಸರ್ಕಾರಿ ಅಧಿಕಾರಿಗಳಲ್ಲಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸಲು ಮುಂದಿಡಲಾಗಿದೆ :

1. 2011 ರಲ್ಲಿ ಉದ್ಯೋಗ ಕಳೆದುಕೊಂಡ ಗಣಿ ಕಾರ್ಮಿಕರ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡಬೇಕು.

2. ಗಣಿ ಕಾರ್ಮಿಕರ ಕುಟುಂಬಕ್ಕೆ ನೀರಾವರಿ ಸೌಲಭ್ಯದೊಂದಿಗೆ 5 ಎಕರೆ ಭೂಮಿ ದೊರಕಬೇಕು.

3. ಕೆಲಸ ಪುನರಾರಂಭಗೊಂಡಿರುವ “ಎ” ಮತ್ತು “ಬಿ” ವರ್ಗದ ಗಣಿಗಳಲ್ಲಿ ಕೆಲಸ ಕಳೆದುಕೊಂಡ ಕಾರ್ಮಿರಿಗೆ ಮರು ಉದ್ಯೋಗ ಕಲ್ಪಿಸಿಕೊಡಬೇಕು.

4. ನಿವೃತ್ತಿ ವಯಸ್ಸನ್ನು ತಲುಪಿರುವ ಗಣಿ ಕಾರ್ಮಿಕರಿಗೆ ಮಾಸಿಕ ರೂ. 5,000/- ಪಿಂಚಣಿ ನೀಡಬೇಕು.

5. ಗಣಿ ಕಾರ್ಮಿಕರಿಗೆ ನಿವೇಶನ ಮತ್ತು ವಸತಿ ವ್ಯವಸ್ಥೆ ಮಾಡಬೇಕು.

6. ಸಮುದಾಯ ಸೌಲಭ್ಯಗಳಾದ ಅಂಗನವಾಡಿ, ಸಮುದಾಯ ಭವನಗಳು, ಗ್ರಂಥಾಲಯ, ಕಾರ್ಮಿಕರ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಮಾಡಬೇಕು.

7. ಗಣಿ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಬೇಕು.

8. ಗಣಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡಬೇಕು.

ಮೂರು ದಿನದ ಹಕ್ಕೊತ್ತಾಯದ ಪಾದಯಾತ್ರೆಯನ್ನು ಹೋರಾಟಗಾರರಾದ ಮೇಧಪಾಟ್ಕರ್‌ ಮತ್ತು ನಟ ಚೇತನ್‌ ಚಾಲನೆ ನೀಡಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಮಾರು 2000ಕ್ಕೂ ಅಧಿಕ ಗಣಿ ಸಂತ್ರಸ್ಥರನ್ನು ಕುರಿತು ಮಾತನಾಡಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೇಧಪಾಟ್ಕರ್‌ “ ಪಾದಯಾತ್ರೆಯು ಇಂದು ಜೀವನೋಪಾಯಕ್ಕಾಗಿ, ಸಮಾನ ಪಾಲು ಹಾಗೂ ಜೀವನಕ್ಕಾಗಿ ಮತ್ತು ಬದಲಾವಣೆಗೋಸ್ಕರವಾಗಿದೆ. ಗಣಿ ಮಾಫಿಯಾ ಮಾಡಿದ ಅನ್ಯಾಯ ನಮಗೆ ತಿಳಿದಿದೆ. ಇಂದು ದೇಶದ ಜಲ, ಅರಣ್ಯ ಮತ್ತು ಜಮೀನು ಎಲ್ಲವೂ ಖಾಸಗೀಕರಣವಾಗಿ ಮಾರ್ಪಟ್ಟಿವೆ. ಸರ್ಕಾರ ಕನಿಷ್ಠ ವೇತನ, ಕನಿಷ್ಠ ಬೆಂಬಲ ಬೆಲೆ ನೀಡಲು ಬಯಸುತ್ತಾರೆ. ಆದರೆ ನಮಗೆ ನಮ್ಮ ಸಮಾನ ಪಾಲು ಬೇಕು…ಕನಿಷ್ಠ ಅಲ್ಲ. ಖಾಯಂ ಆಗಿದ್ದ ಅನೇಕ ಕಾರ್ಮಿಕರು ಈಗ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಇದು ಕಾರ್ಮಿಕರ ಮೇಲೆ ನಡೆಯುತ್ತಿರುವ ಹಿಂಸಾಚಾರ ಎಂದು ಹೇಳಿ ಸಂತೋಷ್‌ ಹೆಗ್ಡೆ ಅವರ ವರದಿಗಳನ್ನು ಪ್ರಸ್ಥಾಪಿಸಿದ್ದರು.

“ಪಾದಯಾತ್ರೆಯಲ್ಲಿರುವ ಕಾಂಗ್ರೆಸ್‌ ಈ ಪಾದಯಾತ್ರೆಗೆ ಸಂಬಂಧಿಸಿದಂತೆ ಏನು ಮಾಡುತ್ತಿದೆ ಎಂಬುದಕ್ಕೆ ಉತ್ತರಿಸಬೇಕು. ಅಧಿಕಾರದಲ್ಲಿರುವ ಸರ್ಕಾರಕ್ಕೆ ಇದೇ ಪ್ರಶ್ನೆ ಕೇಳಬೇಕು. ಸರ್ಕಾರ ಈ ಕಾರ್ಮಿಕರಿಗೆ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದ್ದರು. ಅಂಬೇಡ್ಕರ್‌ ಕಾರ್ಮಿಕ ಮಂತ್ರಿಯಾಗಿ ತಂದ ಕಾನೂನುಗಳು ಇಂದಿಗೂ ಸಹ ಕಾರ್ಮಿಕರನ್ನು ರಕ್ಷಿಸುತ್ತಿವೆ. ಅವುಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಯತ್ನಿಸುತ್ತಿದೆ ಎಂದು ಶೋಷಿತರು ಒಗ್ಗೂಡುವ ಅಗತ್ಯತೆಯ ಬಗ್ಗೆ ನಟ ಚೇತನ್‌ ಅಹಿಂಸರವರು ಮಾತನಾಡಿದ್ದರು