chikkaballapur – Peepal Media

ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ10 ಸಾವಿರ ವರ್ಷ ಹಳೆಯ ಶಿಲಾ ವರ್ಣಚಿತ್ರಗಳು ಪತ್ತೆ!
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ( ನಾಲ್ಕು ತಿಂಗಳ ಕಾಲ ನಡೆಸಿದ ಸಮೀಕ್ಷೆಯ ಸಂದರ್ಭದಲ್ಲಿ ಪುರಾತತ್ತ್ವಜ್ಞರು ಪ್ರಾಗೈತಿಹಾಸಿಕ ಸ್ಥಳಗಳನ್ನು ಪತ್ತೆಹಚ್ಚಿದ್ದಾರೆ.

ಸುಮಾರು 10,000 ವರ್ಷಗಳ ಹಿಂದಿನ ನವಶಿಲಾಯುಗದ ಕಾಲದ ಶಿಲಾ ವರ್ಣಚಿತ್ರಗಳು ಇಲ್ಲಿ ಸಿಕ್ಕಿವೆ. ಬಟ್ಲಹಳ್ಳಿ ಪಂಚಾಯತ್‌ನ ಸಿದ್ದನಮಲೆಬೆಟ್ಟದಲ್ಲಿರುವ ಗ್ರಾನೈಟ್ ಬಂಡೆಯ ಮೇಲೆ ಇರುವ ಈ ವರ್ಣಚಿತ್ರಗಳು ಪತ್ತೆಯಾಗಿವೆ.

ಪುರಾತತ್ವ ಇಲಾಖೆ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿಯ ಆಶ್ರಯದಲ್ಲಿ ತಂಡವು ಸಮೀಕ್ಷೆಯ ಸಮಯದಲ್ಲಿ ಹಿಂದೆ ದಾಖಲೀಕರಣ ಆಗದ 40 ಇತಿಹಾಸಪೂರ್ವ ಸ್ಥಳಗಳನ್ನು ದಾಖಲಿಸಿದೆ.

“ಚಿಂತಾಮಣಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಕೇವಲ ಆರು ಇತಿಹಾಸಪೂರ್ವ ಸ್ಥಳಗಳನ್ನು ಮಾತ್ರ ದಾಖಲಿಸಲಾಗಿದೆ. ಈ 40 ಹೊಸ ಸ್ಥಳಗಳಲ್ಲಿ, ಸಮೀಕ್ಷೆಯ ಸಮಯದಲ್ಲಿ ನಾವು 97 ಬಗೆಯ ಇತಿಹಾಸಪೂರ್ವ ಕಲೆ, ಉಪಕರಣಗಳು, ಸಮಾಧಿ ಸ್ಥಳಗಳು ಮತ್ತು ಕಲಾಕೃತಿಗಳನ್ನು ದಾಖಲಿಸಿದ್ದೇವೆ. ಇದರಲ್ಲಿ ಕಬ್ಬಿಣದ ಯುಗದ ಬೂದಿ ದಿಬ್ಬಗಳು ಮತ್ತು ಕಬ್ಬಿಣದ ಸ್ಲ್ಯಾಗ್‌ಗಳು ಸಹ ಸೇರಿವೆ. ಮೊದಲ ಬಾರಿಗೆ, ನಾವು ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಲಾ ವರ್ಣಚಿತ್ರಗಳನ್ನು ಕಂಡುಹಿಡಿದಿದ್ದೇವೆ, ಇದು ಗಮನಾರ್ಹವಾಗಿದೆ,” ಎಂದು ಸಂಶೋಧನೆಯ ಭಾಗಿಯಾಗಿರುವ ಪವನ್ ಮೌರ್ಯ ಚಕ್ರವರ್ತಿ ಹೇಳಿದರು.

“ನಾವು ಐತಿಹಾಸಿಕ ಕಾಲದ ಶಾಸನವನ್ನು ಪರಿಶೀಲಿಸುತ್ತಿದ್ದಾಗ ಗ್ರಾಮಸ್ಥರೊಬ್ಬರು ವೀಳ್ಯದೆಲೆ ಉಗುಳು ಎಂದು ವಿವರಿಸಿದ ಇನ್ನೊಂದು ‘ಶಾಸನ’ದ ಬಗ್ಗೆ ನಮಗೆ ತಿಳಿಸಿದರು. ಅವರು ನಮ್ಮನ್ನು ಸಿದ್ದರ ಗವಿ ಗುಹೆಗಳ ಬಳಿಯ ಬಂಡೆಯೊಂದಕ್ಕೆ ಕರೆದೊಯ್ದರು. ಸ್ಥಳೀಯವಾಗಿ ಸೂಳೆ ಗುಂಡು ಅಥವಾ ಲಂಜಾ ಬಂಡಾ (ವೇಶ್ಯೆಯ ಕಲ್ಲು) ಎಂದು ಕರೆಯಲಾಗುವ ಕಲ್ಲಿನ ಮೇಲೆ ನಾವು ಗೂಳಿಗಳು, ನವಿಲುಗಳು, ಆನೆಗಳು, ಕಾಡುಗಳನ್ನು, ಹಂದಿಗಳು ಮತ್ತು ಮಾನವ ಆಕೃತಿಗಳು ಚಿತ್ರಿಸುವ ಇತಿಹಾಸಪೂರ್ವ ವರ್ಣಚಿತ್ರಗಳನ್ನು ಕಂಡುಕೊಂಡಿದ್ದೇವೆ ” ಎಂದು ಚಕ್ರವರ್ತಿ ವಿವರಿಸಿದರು.

ಹಳ್ಳಿಗರು ಉಗುಳು ಎಂದು ಭಾವಿಸಿದ್ದು ಶಿಲಾಯುಗದ ಕಲಾವಿದರು ಬಳಸಿದ ಕೆಂಪು ಬಣ್ಣ ಆಗಿತ್ತು.

“ಇವುಗಳು ನವಶಿಲಾಯುಗಕ್ಕೆ ಹಿಂದಿನವು, ಕ್ರಿ.ಪೂ 10,000 ನಿಂದ ಸುಮಾರು ಕ್ರಿ.ಪೂ 2000 BCE ವರೆಗಿನವು. ಆದ್ದರಿಂದ ಈ ವರ್ಣಚಿತ್ರಗಳು 10,000 ವರ್ಷಗಳಷ್ಟು ಹಳೆಯದಾಗಿರಬಹುದು. ಹೆಚ್ಚಿನ ವಿಶ್ಲೇಷಣೆಯು ನಿಖರ ಕಾಲವನ್ನು ತಿಳಿಸಬಹುದು.” 120 ಅಡಿ ಸುತ್ತಳತೆ ಮತ್ತು 30 ಅಡಿ ಎತ್ತರದ ಬಂಡೆಯು ವರ್ಣಚಿತ್ರಗಳನ್ನು ಹೊಂದಿದೆ.

ಚಕ್ರವರ್ತಿ ನೇತೃತ್ವದ ಸಮೀಕ್ಷಾ ತಂಡದಲ್ಲಿ ಹಿರಿಯ ಸಂಶೋಧಕ ಶಿವ ತಾರಕ್ ಮತ್ತು ಸ್ಥಳೀಯ ಮಾರ್ಗದರ್ಶಕರಾದ ರೆಡ್ಡಪ್ಪ ಮತ್ತು ರಾಘವೇಂದ್ರ ಇದ್ದರು. ಹತ್ತಿರದಲ್ಲಿ, ಅವರು ಪ್ರಾಚೀನ ಶಿಲಾಯುಗಕ್ಕೆ (ಕ್ರಿ.ಪೂ 12,000 ಹಿಂದಿನದು) ಸೇರಿದೆ ಎಂದು ಅವರು ಹೇಳುವ ದೊಡ್ಡ ಭೂಗತ ಕೋಣೆಯನ್ನು ಗುರುತಿಸಿದರು. ಇದು 300 ಕ್ಕೂ ಹೆಚ್ಚು ಸಮಾಧಿಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಸ್ಥಳವು ಕಲ್ಲಿನ ಉಪಕರಣಗಳ ಹೊರತಾಗಿ ಶಿಲಾಯುಗದಿಂದ ವ್ಯಾಪಕವಾದ ಕಬ್ಬಿಣದ ನಿಕ್ಷೇಪಗಳು ಮತ್ತು ಕೆಂಪು ಮತ್ತು ಕಪ್ಪು ಮಡಿಕೆಗಳ ದೊಡ್ಡ ತುಣುಕುಗಳು ಕಂಡುಬಂದಿವೆ ಎಂದು ಅವರು ಹೇಳಿದರು.

ʼಪ್ರದೀಪ್‌ ಈಶ್ವರ್‌ ಕೈಗೆ ಏನಾಯಿತು? ಅವರ ಕೈಗೆ ಕಬ್ಬಿಣ ಕೊಡಿʼ: ಸದನದಲ್ಲಿ ನಡೆದ ಹಾಸ್ಯ ಪ್ರಸಂಗ
ಬೆಂಗಳೂರು: ʼಪ್ರದೀದ್‌ ಈಶ್ವರ್‌ ಅವರ ಕೈಗಳಿಗೆ ಏನಾಗಿದೆ ನೋಡಿ. ಅವರಿಗೆ ಕೈಗೆ ಕಬ್ಬಿಣ ಕೊಡಿʼ ಎಂದು ಸ್ಪೀಕರ್‌ ಯು.ಟಿ.ಖಾದರ್‌ ಅವರು ತಮಾಷೆಯಾಗಿ ಹೇಳಿದ ಪ್ರಸಂಗ ಶುಕ್ರವಾರದ ಸದನದಲ್ಲಿ ನಡೆಯಿತು.

ವಿರೋಧ ಪಕ್ಷ ಬಿಜೆಪಿ ಸದಸ್ಯರು ವಾಲ್ಮಿಕಿ ನಿಗಮ ಮತ್ತು ಮೂಡಾ ಹಗರಣಗಳ ಬಗ್ಗೆ ಗಲಾಟೆ ಮಾಡುತ್ತಿರುವಾಗ ಖಾದರ್‌ ಅವರು ಪ್ರದೀಪ್‌ ಈಶ್ವರ್‌ ಅವರಿಗೆ ಮಾತನಾಡಲು ಆವಕಾಶ ನೀಡಿದರು. ಪ್ರದೀಪ್‌ ಈಶ್ವರ್‌ ಮಾತಾಡಲು ಶುರು ಮಾಡಿದಾಗ ಇನ್ನಷ್ಟು ಗದ್ದಲ ಶುರುವಾಯಿತು.

ʼರಾಜ್ಯದಲ್ಲಿ ಮಳೆ ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳು ನಾಶ ಆಗಿವೆ ಈ ಕುರಿತು ಚರ್ಚೆ ಮಾಡುವುದು ಬಿಟ್ಟು ಹೀಗೆ ಸದನದಲ್ಲಿ ಗಲಾಟೆ ಮಾಡುವುದು ಸರಿಯೇ? ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯೇ?ʼ ಎಂದು ಪ್ರದೀಪ್‌ ಈಶ್ವರ್‌ ಪ್ರಶ್ನಿಸಿದರು.

ನಮ್ಮ ಸರ್ಕಾರ ಜನರ ಸಂಕಷ್ಟಕ್ಕೆ ಸಾಕಷ್ಟು ಸ್ಪಂದಿಸುತ್ತಿದೆ. ನಮ್ಮ ಸಿದ್ದರಾಮಯ್ಯ ಸಾಹೇಬರು ಪ್ರತಿ  ವಿಧಾನಸಬಾ ಕ್ಷೇತ್ರಕ್ಕೂ 25 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಮಳೆ ಪ್ರವಾಹದ ಪರಿಹಾರಕ್ಕೂ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಬಗ್ಗೆ ವಿರೋಧ ಪಕ್ಷದವರು ಚರ್ಚೆ ನಡೆಸಬೇಕು ಎಂದಾಗ ವಿರೋಧ ಪಕ್ಷದ ಸದಸ್ಯರು ಮತ್ತಷ್ಟು ಗಲಾಟೆ ತೀವ್ರಗೊಳಿಸಿದರು.

ಇನ್ನೊಂದು ಬದಿಯಿಂದ ಆರ್‌. ಆಶೋಕ್‌ ಅವರು ಕಾಂಗ್ರೆಸ್ಸಿನ ಭ್ರಷ್ಟಾಚಾರ ಕುರಿತು ಕೂಗುತ್ತಿದ್ದುದರಿಂದ ʼಅಶೋಕಣ್ಣ ಇಲ್ಲಿ ಕೇಳಿ ನೀವೇನು ಕಡಿಮೆಯೇ? ಕೃಷಿ ಮಾರುಕಟ್ಟೆ ಮಂಡಳಿಯಲ್ಲಿ 47 ಕೋಟಿ  ರೂ ಹಗರಣ, ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಹತ್ತಾರು ಕೋಟಿ, ದೇವರಾಜ್‌ ಅರಸ್‌ ಅಭಿವೃದ್ಧಿ ನಿಗಮದಲ್ಲಿ 36 ಕೋಟಿ ಕರ್ನಾಟಕ ಮಾಲಿನಿ ನಿಯಂತ್ರಣ ಮಂಡಳಿಯಲ್ಲಿ  10 ಕೋಟಿ ಲೂಟಿ ಹೊಡೆದವರು ನೀವು? ಈ  ನಿಮ್ಮ ಪ್ರಕರಣಗಳ ಬಗ್ಗೆ ಯಾಕೆ ಸಿಬಿಐಗೆ ವಹಿಸಿಲ್ಲ? ಎಂದು ಪ್ರದೀಪ್‌ ಜೋರಾಗಿ ಕೂಗತೊಡಗಿದರು.

ಬಂಡಲ್‌ ಬಂಡಲ್‌ ಪ್ರದೀಪ್‌ ಈಶ್ವರ್‌ ಬಂಡಲ್‌: ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು “ಬಂಡಲ್‌ ಬಂಡಲ್‌ ಪ್ರದೀಪ್‌ ಈಶ್ವರ್‌ ಬಂಡಲ್‌” ಎಂದು ಗಲಾಟೆ ಹೆಚ್ಚಿಸಿದರು. ಸ್ಪೀಕರ್‌ ಖಾದರ್‌ ಅವರು ಪ್ರದೀಪ್‌ ಈಶ್ವರ್‌ ಅವರಿಗೆ ಕುಳಿತುಕೊಳ್ಳಿ ಎಂದು ಹೇಳಿದರು. ಆದರೆ, ಈಶ್ವರ್‌ ಆ ಕಡೆಯಿಂದ ಜೋರಾಗಿ ಕೂಗುತ್ತಲೇ ಇದ್ದರು. ಈ ಸಂದರ್ಭದಲ್ಲಿ ಸ್ಪೀಕರ್‌ ಅವರು ತಮಾಷೆಯಾಗಿ ಪ್ರದೀಪ್‌ ಈಶ್ವರ್‌ ಅವರ ಕೈಗಳಿಗೆ ಏನಾಗಿದೆ ನೋಡಿ. ಅವರ ಕೈಗೆ ಕಬ್ಬಿಣ ಕೊಡಿ ಎಂದು ತಮಾಷೆಯಾಗಿ ಹೇಳಿದ ಪ್ರಸಂಗ ನಡೆಯಿತು.

ಜನ ತೀರ್ಮಾನವೇ ನಿಜವಾದ ಪ್ರಜಾಪ್ರಭುತ್ವ
ಚಿಕ್ಕಬಳ್ಳಾಪುರ: ನಿಜ ಪ್ರಜಾಪ್ರಭುತ್ವ ಗ್ರಾಮ ಪಂಚಾಯತ್ ಕಾನೂನಿನಲ್ಲಿದೆ. ಅದು ಜನ ತೀರ್ಮಾನ ಮೂಲಕ ಸಾಧ್ಯ ಎಂದು ಶನಿವಾರದಂದು ಜಿಲ್ಲೆಯ ಕೋನಪಲ್ಲಿ ಗ್ರಾಮ ಪಂಚಾಯತ್ ಧನಮಿಟ್ಟೆನಹಳ್ಳಿಯಲ್ಲಿ ನಡೆದ ನಿವೇಶನ ಒದಗಿಸುವ ವಿಶೇಷ ಗ್ರಾಮ ಸಭೆಯಲ್ಲಿ ಶಶಿರಾಜ್ ಹರತಲೆ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನ ಮತ ಹಾಕುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಷ್ಟೆ ಅಲ್ಲದೆ ಸ್ಥಳಿಯ ಸರ್ಕಾರಗಳಾದ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ನ ಸದಸ್ಯರುಗಳನ್ನು ಆಯ್ಕೆ ಮಾಡ್ತಾರೆ.  ಗ್ರಾಮ ಪಂಚಾಯತಿ ಹೊರತು ಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳಲ್ಲಿ ಅನುಷ್ಟಾನಿಸಬಹುದಾದ ಕಾರ್ಯಗಳು ಮತ್ತು ಅವುಗಳಿಗೆ ಅನುಮೋದನೆಯನ್ನು ಅಲ್ಲಿನ ಜನ ಪ್ರತಿನಿಧಿಗಳು ಮಾಡುತ್ತಾರೆ. ಅದರೆ ಗ್ರಾಮ ಪಂಚಾಯತ್ ಆಡಳಿತದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಜನ ಆಯ್ಕೆ ಮಾಡ್ತಾರೆ ಅದಕ್ಕೆ ಅನುಮೋದನೆಯನ್ನು ಕೂಡ ಗ್ರಾಮ ಸಭೆ ಮೂಲಕ ಜನರೇ ನೀಡ್ತಾರೆ. ಹಾಗಾಗಿ ನಿಜವಾದ ಪ್ರಜಾಪ್ರಭುತ್ವ ದ ಬಳಕೆ ಗ್ರಾಮ ಪಂಚಾಯತ್ ಗಳಲ್ಲಿ ಆಗುತ್ತದೆ. ಅದನ್ನು ಜನ ಅರಿತು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಬಂದ ನಂತರವೂ ಹಳ್ಳಿ ಆಡಳಿತ ಕಟ್ಟೆ ಪಂಚಾಯತಿ ಮೂಲಕ ನಡೆಯೋದು ವಂಶಪಾರಂಪರ್ಯವಾಗಿ ಮೇಲ್ವರ್ಗದ ಶ್ರಿಮಂತ ಕುಟುಂಬಗಳ 5  ಜನರು ಮಾತ್ರ  ನ್ಯಾಯ ಪಂಚಾಯತ್ ಮಾಡೋರು ಅಸ್ಪೃಶ್ಯರು, ಮಹಿಳೆಯರು, ಅಲ್ಲಿಗೆ ಹೋಗುವ ಹಾಗೆ ಇರಲಿಲ್ಲ. ಹಿಂದುಳಿದ ಸಮುದಾಯದವರೂ  ಹೋದರು ತೀರ್ಮಾನಿಸುವ ಹಕ್ಕಿರಲಿಲ್ಲ. ಆದರೆ ಸಂವಿಧಾನದ ಅಡಿಯಲ್ಲಿ ರಚಿತವಾದ ಕಾನೂನು ಪಂಚಾಯತ್ ನಲ್ಲಿ ಮಹಿಳೆಯರಿಗೆ 50% ರಾಜಕೀಯ ಮಿಸಾಲಾತಿ ನೀಡಲಾಗಿದ್ದು, ಈಗ ಪುರಷರಷ್ಟೆ ಮಹಿಳೆರು ಕೂಡ ಚುನಾಯಿತರಾಗುತ್ತಿದ್ದಾರೆ. ಪರಿಶಿಷ್ಟ ವರ್ಗ ಮತ್ತು ಪಂಗಡ ಹಾಗೂ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಲಾಗಿದ್ದು ಅವರು ಕೂಡ ಸದಸ್ಯರಾಗಿ ಅಧ್ಯಕ್ಷರಾಗಿ ಉಪಾಧ್ಯಕ್ಷ ರಾಗುತ್ತಿರುವುದನ್ನು ನೋಡಬಹುದು. ಅದಕ್ಕಾಗಿಯೇ ಇದನ್ನು ಗ್ರಾಮ ಸರ್ಕಾರ ಅಂತ ಕರೆಯಲಾಗತ್ತೆ. ಹಾಗಾಗಿ ವ್ಯಕ್ತಿ ನಾಯಕತ್ವಕ್ಕೆ ಮನ್ನಣೆ ನೀಡದೆ ಜನ ನಾಯಕತ್ವವನ್ನು ಎತ್ತಿಡಿಯುವಲ್ಲಿ ಇಂತಹ ಗ್ರಾಮ ಸಭೆ ಸಾಗಬೇಕು. ಕಳೆದ ಹತ್ತು ವರ್ಷಗಳ ಜನರ ಹಕ್ಕೊತ್ತಾಯಕ್ಕೆ  ಈ ದಿನ ಮನೆ ಮತ್ತು ನಿವೇಶನ ರಹಿತ 25 ಕುಟುಂಬಗಳಿಗೆ ಜನ ಸಹಭಾಗಿತ್ವದಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ  ಗ್ರಾಮ ಸಭೆಯ ಮಹತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ತಿಳಿಸಿದರು. ಅಷ್ಟೆ ಅಲ್ಲದೆ ನಿವೇಶನ ಮತ್ತು ಮನೆ ವಂಚಿತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅವರಿಗೂ ಕೂಡಲೆ ನಿವೇಶನ ಮತ್ತು ಮನೆ ನೀಡಲು ಗ್ರಾಮ ಪಂಚಾಯತ್ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ ಮಾತನಾಡಿ, ʼನನ್ನ ಅವಧಿ ಇರುವುದರೊಳಗೆ ನನ್ನ ಗ್ರಾಮ ಪಂಚಾಯತಿ ಯಲ್ಲಿ ಇರುವ ಎಲ್ಲಾ ಬಡವರಿಗೂ ನಿವೇಶನ ಮತ್ತು ಮನೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆರೋಗ್ಯ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದು, ಅವರ ಸಹಕಾರ, ಬೆಂಬಲ ಪಡೆದು ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂದು ಮಾತನಾಡಿದ್ದಾರೆ.

ಈ ಸಂಧರ್ಭದಲ್ಲಿ ಪಿ.ಡಿ.ಓ ಪ್ರತಿಭಾ, ಕಾರ್ಯದರ್ಶಿ ಚಲಪತಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಗಿರೀಶ್, ಸುಧಾಕರ್, ಸುವರ್ಣ, ವೆಂಕಟೇಶಪ್ಪ, ಮಾಜಿ ಸದಸ್ಯರಾದ ಡಿ.ಸಿ ವೆಂಕಟೇಶಪ್ಪ, ಆಶೋಕ ಕರವಸೂಲಿಗಾರ ನಾಗರಾಜ್, ಕಾಯಕ ಮಿತ್ರ ಸಾವಿತ್ರಮ್ಮ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜನರ ವಿರೋಧಿ ಕೆಲಸ ಮಾಡುತ್ತಿದೆ ಬಿಜೆಪಿ : ಮೋಹನ್‌ ದಾಸರಿ
ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಮುಂದಿಟ್ಟುಕೊಂಡು, ʼಸರ್ಕಾರಕ್ಕೆ ಬಡಜನರು, ಹಿಂದುಳಿತ ವರ್ಗದವರು, ದಲಿತರ ಮೇಲೆ ಯಾವುದೇ ರೀತಿಯ ಕಾಳಜಿ ಇಲ್ಲʼ ಎಂದು ಬೆಂಗಳೂರಿನ ಆಮ್‌ ಆದ್ಮಿ ಅಧ್ಯಕ್ಷ ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಕೇವಲ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ ಇಲ್ಲ ಎಂದು ತಾಯಿ ಮತ್ತು ನವಜಾತ ಶಿಶುಗಳನ್ನು ಕೊಲೆಮಾಡಿದ್ದಾರೆ.ಚಿಕ್ಕಬಳ್ಳಾಪುರದ ಒಂದು ಹಳ್ಳಿಯಲ್ಲಿ ಈಗಲೂ ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಅಸ್ಪೃಶ್ಯತೆ ಹೋಗಿಲ್ಲ. ಹೇರ್‌ಕಟ್‌   ಮಾಡಿಸಬೇಕು ಅಂದರೆ, ದೇವಾಲಯಗಳಿಗೆ ಪೂಜೆ ಸಲ್ಲಿಸಬೇಕಾದರೆ ಟೌನ್‌ಗಳಿಗೆ ಹೋಗುತ್ತಿದ್ದಾರೆ ಎಂದು ಅಸ್ಪೃಶ್ಯತೆಯ ಈಗಿನ ವಾಸ್ತವ್ಯದ ಬಗ್ಗೆ ಮಾತನಾಡಿದ್ದಾರೆ.

ʼಗುಡಿಬಂಡೆಯಲ್ಲಿಸರ್ಕಾರ ನಡೆಸುತ್ತಿರುವ ಕಲ್ಯಾಣ ಮಂಟಪದಲ್ಲಿ ಪರಿಶಿಷ್ಟ ಜಾತಿಯ ಜನರಿಗೆ ಯಾವುದೇ ಸ್ಥಾನ ಕೊಡದಿದ್ದರೆ ಹೇಗೆ. ಮೊನ್ನೆ ಬಂದ ಟೆಂಡರ್‌ನಲ್ಲಿ ಪರಿಶಿಷ್ಟ ಜಾತಿಯವರು ಎಂದು ಜಾತಿಯ ಹೆಸರನ್ನೂ ಬರೆದು ಚಪ್ಪಲಿಗಳನ್ನು ಕಾಯುವ ಕೆಲಸ ಎಂದು ಪ್ರಕಟಿಸಿರುವು, ಅವರಿಗೆ ಸಾಮಾಜಿಕ ಗೌರವವೇ ಇಲ್ಲದಂತೆ ಮಾಡಿದೆ. ಬಡಜನರ, ದಲಿತರ, ಸಾಮಾಜಿಕವಾಗಿ ಹಿಂದುಳಿದವರಿಗೆ ಯಾವುದೇ ರೀತಿಯ ಭದ್ರತೆ ಇಲ್ಲದಂತೆ ಆಗಿದೆ. ಪರಿಶಿಷ್ಟ ಜಾತಿಯವರು ದೇವರ ಮಕ್ಕಳು ಅಂತಿರಾ. ಇದೆನಾ ನೀವು ದೇವರ ಮಕ್ಕಳನ್ನು ನೋಡಿಕೊಳ್ಳುವ ರೀತಿ ?ʼ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ʼಬೊಮ್ಮಾಯಿಯವರಿಗೆ ಬಡಜನರ ಮೇಲೆ, ಶೋಷಿತ ವರ್ಗದವರ ಮೇಲೆ ಯಾವುದೇ ರೀತಿಯ ಕಾಳಜಿ ಇಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ʼಆರೋಗ್ಯ ಮಂತ್ರಿ ಡಾ. ಕೆ ಸುಧಾಕರ್‌ ಅವರು ತುಮಕೂರಿನ ಘಟನೆಯ ನಂತರ ಸಿಬ್ಬಂದಿಗ ಸಸ್ಪೆಂಡ್‌ ಮಾಡುತ್ತೇನೆ ಅಂದಿದ್ರಿ. ಹಾಗೆ ನೋಡಿದರೆ ನೀವೇ ನೈತಿಕವಾಗಿ ಹೊಣೆ ಹೊತ್ತು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಯಾಕಂದರೆ ನೀವು ತುಮಕೂರು ಜಿಲ್ಲಾ ಆಸ್ಪತ್ರಗೂ ಹೋಗಿ ಭೇಟಿ ಮಾಡಿಲ್ಲ. ಸರ್ಕಾರದ ಜಿಲ್ಲಾ ಆಸ್ಪತ್ರೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತೆ ಅಂತ ನೀವು ಯಾವತ್ತು ನೋಡಿಲ್ಲ. ಇವತ್ತು ನಿಮ್ಮದೇ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ವಿರುದ್ಧ ಸರ್ಕಾರ ನಡೆಸುತ್ತಿರೋ ಕಲ್ಯಾಣ ಮಂಟಪ ಸಿಗುತ್ತಿಲ್ಲ. ತುಮಕೂರಿನ ಘಟನೆಯಿಂದ ಆರೋಗ್ಯ ಸಚಿವರಾಗಿ, ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಂತ್ರಿಗಳಾಗಿ ವಿಫಲರಾಗಿದ್ದೀರಾ ಎಂದು ಬೆಂಗಳೂರಿನ ಆಮ್‌ ಆದ್ಮಿ ಅಧ್ಯಕ್ಷ ಮೋಹನ್‌ ದಾಸರಿ ಡಾ. ಕೆ ಸುಧಾಕರ್‌ ಅವರ ವಿರುದ್ಧ ಕಿಡಿಕಾರಿದ್ದಾರೆ.

ಜನರ ವಿರೋಧಿ ಕೆಲಸ ಮಾಡ್ತಿರೋ ಬಿಜೆಪಿ ವಿರುದ್ಧ ಬೊಮ್ಮಯಿ ಸರ್ಕಾರದ ವಿರುದ್ಧ ಜನ ಯೋಚಿಸಬೇಕು ಎಂದು ಮೋಹನ್‌ ದಾಸರಿ ಇಂದು ತಮ್ಮ ಫೇಸ್‌ಬುಕ್‌ ಲೈವ್‌ ಬಂದು ಮಾತನಾಡಿದ್ಧಾರೆ.

ತುಮಕೂರಿನ ಘಟನೆಯ ಕುರಿತು ಟ್ವೀಟ್‌ ಮಾಡಿರುವ ಮೋಹನ್‌ ದಾಸರಿಯವರು, ʼಪ್ರಾಣ ಉಳಿಸಬೇಕಾದ ವೈದ್ಯರೇ ಇಲ್ಲವೆಂದು ದೂಡಿ ತಾಯಿ ಮಕ್ಕಳು ಮನೆಯಲ್ಲಿ ಸಾಯಬೇಕಾದ ಅಮಾನವೀಯ ಘಟನೆ ನಮ್ಮ ನಾಡಲ್ಲಿ ನಡೆದಿರುವುದು ದುರಾದೃಷ್ಟಕರ!́ʼ ಎಂದು ಹೇಳಿದ್ದಾರೆ.

ಹಾವು ಹಿಡಿದು ಪ್ರದರ್ಶನ: ಜಗ್ಗಿ ವಾಸುದೇವ್‌ ವಿರುದ್ಧ ದೂರು ದಾಖಲು
ಚಿಕ್ಕಬಳ್ಳಾಪುರ: ಅಕ್ರಮವಾಗಿ ಹಾವು ಹಿಡಿದು, ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ ಆರೋಪದ ಮೇಲೆ ಇಶಾ ಫೌಂಡೇಶನ್‌ ಸಂಸ್ಥಾಪಕ, ಸದ್ಗುರು ಎಂದೇ ಖ್ಯಾತರಾಗಿರುವ ಜಗ್ಗಿ ವಾಸುದೇವ್‌ ಅವರ ವಿರುದ್ಧ ದೂರು ದಾಖಲಾಗಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನ ಇಶಾ ಆದಿಯೋಗಿ ಧ್ಯಾನ ಕೇಂದ್ರದಲ್ಲಿ ನಡೆದ ಇತ್ತೀಚಿಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಜಗ್ಗಿ ವಾಸುದೇವ್‌ ಅವರು ಜೀವಂತ ಹಾವನ್ನು ಹಿಡಿದು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಹಿಂಸೆ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರದ ಉರಗತಜ್ಞ ಸಿಎನ್‌ ಪೃಥ್ವಿರಾಜ್‌ ಅವರು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮೂಲಗಳ ಪ್ರಕಾರ ದೂರಿನಲ್ಲಿ ಹಾವಿನ ಅಕ್ರಮ ಸಾಗಣೆ ಮಾಡಿ ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ತಿಳಿದು ಬಂದಿದೆ.

ಅಂತರ್ಜಾತಿ ಯುವಕನೊಂದಿಗೆ ಯುವತಿ ಪರಾರಿ :ಕುಟುಂಬದ ಮೂವರ ಆತ್ಮಹತ್ಯೆ
ಚಿಕ್ಕಬಳ್ಳಾಪುರ : ಅಂತರ್ಜಾತಿ ಹುಡುಗನೊಂದಿಗೆ ಮಗಳು ನಾಪತ್ತೆಯಾದ ಕಾರಣ ಮನನೊಂದ ಮನೆಯವರು ಡೆತ್‌ ನೋಟ್‌ ಬರೆದಿಟ್ಟು ಒಂದೇ ಕುಟುಂಬದ ಮೂರು ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ಬೇರೆ ಜಾತಿಯವನಾದ ಆಟೋ ಚಾಲಕ ನಾರಾಯಣ ಸ್ವಾಮಿ ಎಂಬುವವನ ಜೊತೆ ತನ್ನ ಮಗಳು ಅರ್ಚನ ಪರಾರಿಯಾಗಿದ್ದಾಳೆ. ಇದರಿಂದ ನಾವೆಲ್ಲಾ ಮನನೊಂದಿದ್ದೇವೆ. ನಮ್ಮ ಮೂರು ಜನ ಸಾವಿಗೆ ನಮ್ಮ ಮಗಳು ಅರ್ಚನ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಬರೆದಿಟ್ಟು, ವಿಷದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಾಹಿತಿ ತಿಳಿದ ನಂತರ ಹೆಚ್ಚುವರಿ ಪೋಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ, ಸಿಪಿಐ ನಂದನ್‌ ಕುಮಾರ್‌, ಗ್ರಾಮಾಂತರ ಪೋಲೀಸ್‌ ಠಾಣೆಯ ಪಿಎಸ್‌ಐ ಸತೀಶ್‌ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿದ್ದು, ಅರ್ಚನಾಳ ತಂದೆ ಶ್ರೀರಾಮಪ್ಪ(69), ತಾಯಿ ಸರೋಜ(55) ಮತ್ತು ಸಹೋದರ (25) ಮೃತಪಟ್ಟವರಾಗಿದ್ದಾರೆ.

ಘಟನೆಯ ಕುರಿತು ಶಿಡ್ಲಘಟ್ಟ ಗ್ರಾಮಾಂತರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ವಸಾಹತುಶಾಹಿಗೆ ಚಳ್ಳೆಹಣ್ಣು ತಿನ್ನಿಸಿದ ಶೂದ್ರ ರಾಣಿ ರಾಶ್ಮೋನಿ

ಕುಟಿಲ ವಸಾಹತುಶಾಹಿ ಕಂಪನಿಗೆ ಚಳ್ಳೆಹಣ್ಣು ತಿನ್ನಿಸಿ ಕೋಲ್ಕತಾದ ಹೂಗ್ಲಿ ನದಿ ತಟದಲ್ಲಿ ಕಾಳಿಕಾ ದೇವಿಗೆ ದಕ್ಷಿಣೇಶ್ವರ ದೇವಾಲಯ ನಿರ್ಮಿಸಿದ ಶೂದ್ರ ರಾಣಿ ರಾಶ್ಮೋನಿ ಭಾರತದ ಇತಿಹಾಸದ ಒಂದು ದಂತಕತೆ. ಸಹಾಯಕ ಪ್ರಾಧ್ಯಾಪಕರಾದ ಪುನೀತ್‌ ಕುಮಾರ್‌ ರಾಶ್ಮೋನಿಯ ಕತೆಯನ್ನು ಇಲ್ಲಿ ಹೇಳಿದ್ದಾರೆ.