chikkaballapura – Peepal Media

ಮತ್ತೆ ಅಖಾಡದಲ್ಲಿ ಪ್ರದೀಪ್ ಈಶ್ವರ್ ; ಡಾ.ಸುಧಾಕರ್ ಜಾತಕದಲ್ಲೆ ಸತತ 3 ಸೋಲಿನ ಭವಿಷ್ಯ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಡಾ.ಸುಧಾಕರ್ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಅಖಾಡಕ್ಕೆ ಇಳಿಸಿದೆ. ತನ್ನ ಮಾತಿನ ಚಾಟಿಯಿಂದಲೇ ಡಾ.ಸುಧಾಕರ್ ಗೆ ಸೋಲಿನ ರುಚಿ ತೋರಿಸಿದ ಪ್ರದೀಪ್ ಈಶ್ವರ್ ‘ಇನ್ನು ಒಂದೂವರೆ ತಿಂಗಳು ನನಗೆ ನಿಮಗೆ ನೇರ ಯುದ್ಧ’ ಎಂದೇ ತೊಡೆ ತಟ್ಟಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾದ ಕಾಂಗ್ರೆಸ್ ನಾಯಕ ರಮೇಶ್ ಬಾಬು ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ‘ಡಾ.ಸುಧಾಕರ್ ಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸದೇ ನಾನು ವಿರಮಿಸುವುದಿಲ್ಲ’ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ಶಾಸಕನಾಗಿ ಬಂದಾಗ ಈತ ನನ್ನನ್ನು ಬಾಯಿಗೆ ಬಂದಂತೆ ಬೈದರು, ಟ್ರೋಲ್ ಮಾಡಿದರು. ಆದರೆ ಇದ್ಯಾವುದಕ್ಕೂ ಜಗ್ಗದೇ ಜನರ ಮಧ್ಯೆ ನಿಂತೆ. ಅವರ ಬೈಗುಳ, ಬೆದರಿಕೆ, ತಂತ್ರ, ಕುತಂತ್ರ, ಅವಮಾನ ಎಲ್ಲವನ್ನೂ ನಿರೀಕ್ಷೆ ಮಾಡಿಯೇ ನಾನು ರಾಜಕೀಯಕ್ಕೆ ಬಂದೆ. ಡಾ.ಸುಧಾಕರ್ ಗೆ ತಾಕತ್ತು ಇದ್ದರೆ ಅವರ ಆಸ್ತಿ ಬಹಿರಂಗಪಡಿಸಲಿ, ನಾನೂ ಸಹ ಬಹಿರಂಗಪಡಿಸಲು ಸಿದ್ಧ..” ಎನ್ನುವ ಮೂಲಕ ಪ್ರದೀಪ್ ಈಶ್ವರ್ ಮತ್ತೊಮ್ಮೆ ಡಾ.ಸುಧಾಕರ್ ಎದುರುಗೊಳ್ಳುವ ಮಾತಾಡಿದ್ದಾರೆ.

ಇನ್ನು “ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಡಾ.ಸುಧಾಕರ್ ಅವರನ್ನು ಗೆಲ್ಲಿಸಬೇಡಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಜನಸಾಮಾನ್ಯರ ಬಳಿ ಅವರು ಗುರುತಿಸಿಕೊಳ್ಳಲು ಅವರ ಬಯಸುವುದಿಲ್ಲ. ಜನತೆ ಸಾವಿಗೆ ಎದುರು ನೋಡುತ್ತಿದ್ದ ಕೋವಿಡ್ ಸಂದರ್ಭದಲ್ಲಿ ಆದ ವ್ಯಾಪಕ ಭ್ರಷ್ಟಾಚಾರವೇ ಇವತ್ತು ಸುಧಾಕರ್ ಸೋಲಿಗೆ ಕಾರಣ ಎಂದು ಡಾ.ಸುಧಾಕರ್ ವಿರುದ್ಧ ಆರೋಪ ಮಾಡಿದ್ದಾರೆ.

ಮುಂದುವರಿದು “ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ, ಶತಾಯಗತಾಯ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೇ ಗೆಲ್ಲಿಸುತ್ತೇವೆ, ಆ ಮೂಲಕ ಡಾ.ಕೆ.ಸುಧಾಕರ್ ಗೆ ಮತ್ತೊಂದು ಸೋಲಿನ ರುಚಿ ತೋರಿಸುತ್ತೇವೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಹೈ ಅಲರ್ಟ್:‌ ಕರ್ನಾಟಕದಲ್ಲಿ ಝಿಕಾ ವೈರಸ್‌ ಪತ್ತೆ
ಚಿಕ್ಕಬಳ್ಳಾಪುರ,ನವೆಂಬರ್.‌03: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿರುವ ಸೊಳ್ಳೆಯ ಮಾದರಿಯಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈ ಅಲರ್ಟ್ ಆಗಿದೆ. ಸೆಪ್ಟೆಂಬರ್‌ 25ರಂದು ಸಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಿಂದ ಈ ಸ್ಯಾಂಪಲ್‌ ಸಂಗ್ರಹಿಸಲಾಗಿತ್ತು. ಹೀಗಾಗಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಡುವೆ ಪ್ರಯಾಣ ಮಾಡುವವರಿಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸೂಚಿಸಲಾಗಿದೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರು ಮತ್ತು ಇತರೆಡೆಗೆ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಕಳೆದ ಎರಡು ತಿಂಗಳಿಂದ ರಾಜ್ಯದ 68 ಪ್ರದೇಶಗಳಲ್ಲಿ ಜ್ವರ ಪೀಡಿತ, ಗರ್ಭಿಣಿಯರನ್ನು ಝಿಕಾ ವೈರಸ್‌ ಸೋಂಕಿನ ತಪಾಸನೆಗೆ ಒಳಪಡಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ದಿಬ್ಬೂರಹಳ್ಳಿಯ 30 ವರ್ಷದ ಪುರುಷ, ತಲಕಾಯಲಬೆಟ್ಟದ 38 ವರ್ಷದ ಮಹಿಳೆ ಮತ್ತು ಬಾಚನಹಳ್ಳಿಯ 50 ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದು, ಸೋಂಕಿನ ದೃಢೀಕರಣಕ್ಕಾಗಿ ಅವರ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ ಎಂದು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಝಿಕಾ ವೈರಸ್ ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ಈ ಸೋಂಕು ದೇಹದಲ್ಲಿ ರ್ಯಾಷಸ್, ಜ್ವರ, ಕೆಂಪು ಕಣ್ಣು, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ಇತ್ಯಾದಿ ರೋಗ ಲಕ್ಷಣಗಳನ್ನು ತೋರಿಸುತ್ತದೆ. ಸದ್ಯ ಈ ಸೋಂಕಿಗೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ.

ದಲಿತ ಜೋಡಿಗೆ ಮದುವೆಯಾಗಲು ಅನುಮತಿ ನಿರಾಕರಿಸಿದ ದೇವಾಲಯ: ಕ್ರಮ ಕೈಗೊಳ್ಳುವಂತೆ ದೂರು
ಚಿಕ್ಕಬಳ್ಳಾಪುರ: ಕರ್ನಾಟಕದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದ ಮದುವೆ ಮಂಟಪದ ಅಧಿಕಾರಿಗಳು,  ದಲಿತ ಕುಟುಂಬಕ್ಕೆ ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನಿರಾಕರಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗುಡಿಬಂಡೆ ಪೇಟೆಯಲ್ಲಿ ನಡೆದಿದೆ.

ದಲಿತ ಸಮುದಾಯಕ್ಕೆ ಸೇರಿದ ಬ್ರಾಹ್ಮಣರ ಹಳ್ಳಿಯ ನಿವಾಸಿ ಆವುಲುಕೊಂಡಪ್ಪ ಎಂಬುವರು, ತಮ್ಮ ಮದುವೆಯನ್ನು ದೇವಸ್ಥಾನದಲ್ಲಿ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿ, ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯವರು, ಈಗಾಗಲೇ ದೇವಸ್ಥಾನದ ಕಾರ್ಯದರ್ಶಿ ಮಾಚವಲಹಳ್ಳಿ ವೆಂಕಟರಾಯಪ್ಪ ಅವರಿಗೆ ಸಮುದಾಯ ಭವನವು ಬುಕ್ ಆಗಿದ್ದು, ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.

ನಂತರ, ಮದುವೆ ಮಂಟಪವನ್ನು ಹೇಳಿದ ದಿನಾಂಕದಂದು ಬುಕ್ ಮಾಡದಿರುವುದು ಮತ್ತು ದಂಪತಿಗಳು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಉದ್ದೇಶಪೂರ್ವಕವಾಗಿ ದೇವಸ್ಥಾನದ ಸಮುದಾಯ ಭವನವನ್ನು ಬಾಡಿಗೆಗೆ ನೀಡದಿರುವುದು ಕಂಡುಬಂದಿದೆ.

ಈ ಹಿನ್ನಲೆಯಲ್ಲಿ, ದಂಪತಿಗಳು ಬೀಗ ಹಾಕಿದ ದೇವಸ್ಥಾನದಲ್ಲೇ ವಿವಾಹವಾಗಿದ್ದಾರೆ. ತಾನು ಮತ್ತು ಪತ್ನಿ ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಮದುವೆ ಮಂಟಪವನ್ನು ಬಾಡಿಗೆಗೆ ನೀಡಿಲ್ಲ ಎಂದು ಅವುಲುಕೊಂಡಪ್ಪ ಆರೋಪಿಸಿ, ಗುಡಿಬಂಡೆ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ದಲಿತ ಸಂಘಟನೆಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ʼನಾವು ಅಧಿಕಾರಕ್ಕೆ ಬಂದರೆ 10ಕೆಜಿ ಅಕ್ಕಿ ಉಚಿತʼ
ಚಿಕ್ಕಬಳ್ಳಾಪುರ: ʼನಾವು ಮತ್ತೆ ಅಧಿಕಾರಕ್ಕೆ ಬಂದರೆ ನಾಡಿನ ಜನತೆಗೆ 10 ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುತ್ತೆವೆʼ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದಲ್ಲಿ ಕಾಂಗ್ರೆಸ್ ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು, ʼಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರಬೇಕಾ?ʼ ಎಂದು ಜನತೆಯನ್ನ ಪ್ರಶ್ನಿಸಿದ್ದು,  ಬಿಜೆಪಿ ಅವರು ಬಡವರಿಗೆ ಕೊಟ್ಟ ಅಕ್ಕಿಯನ್ನ ಕಸಿದುಕೊಂಡರು. ಪ್ರತಿಸಲ 7ಕೆಜಿ ಅಕ್ಕಿಯನ್ನ ಉಚಿತವಾಗಿ ಕೊಡುವಂತ ಕೆಲಸವನ್ನು ಸರ್ಕಾರ ಮಾಡಬೇಕಿತ್ತು, ಆದರೆ ಅದನ್ನ ಅವರು ಮಾಡಲಿಲ್ಲ ಎಂದು ಸರ್ಕಾರವನ್ನು ಟೀಕಿಸಿದರು.

ಮುಂದುವರೆದು ಮಾತನಾಡಿದ ಅವರು ನಾವು ಅಧಿಕಾರಕ್ಕೆ ಬಂದರೆ ಎಷ್ಟು ಹಣ ಖರ್ಚಾದರು ಪರವಾಗಿಲ್ಲ, ನಾಡಿನ ಜನತೆಗೆ 10.ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೆವೆ ಮತ್ತು ನಾಡಿನಲ್ಲಿ ಯಾರೂ ಕೂಡ ಹಸಿದು ಬದುಕಲಾರದ ಹಾಗೆ ನಾವು ಮಾಡಿತೋರಿಸುತ್ತೆವೆ ಎಂದು ಭರವಸೆ ನೀಡಿದರು.