chikkamagaluru – Peepal Media

ಮಗನಿಗಾಗಿ ಹಂಬಲಿಸಿದ್ದ ಆ ತಾಯಿಗೆ ʼಮಗ ಇನ್ನಿಲ್ಲʼ ಎಂಬ ಸುದ್ದಿ ಕೇಳಿದಾಗ….
ಲೇಖನ: ರಾಜೇಶ್ ರಾವ್ ಪುತ್ತೂರು

ಆ ತಾಯಿಯ ಕಣ್ಣೀರು ಇಂದಿಗೂ ನನ್ನ ಕಣ್ಣ ಮುಂದಿದೆ. ಮಗನಿಗಾಗಿ ಹಂಬಲಿಸಿದ್ದಾಕೆ ‘ಮಗ ಇನ್ನಿಲ್ಲ’ ಎಂಬ ಸುದ್ದಿ ಕೇಳಿ ಅಂದು ಅತ್ತ ರೀತಿ ಇಂದಿಗೂ ನೆನಪಿದೆ. ಜೊತೆಗೆ ತನ್ನ ಮಗ ಯಾಕೆ ಹೀಗಾದ ಎಂದು ಆಕೆ ಹೇಳಿದ ಕಣ್ಣೀರ ಕಥೆ ಇಂದಿಗೂ ಕಿವಿಯಲ್ಲಿ ಕೇಳಿಸುತ್ತಿದೆ. ಮಗ ಬಿಟ್ಟು ಹೋಗಿ ವರ್ಷಗಳಾದ್ರೂ ಇಂದಲ್ಲ ನಾಳೆ ಬರಬಹುದು ಅಂತ ಕಾದಿದ್ದ ಆಕೆಗೆ ಅಂದು ಮಗನ ಸಾವಿನ ಸುದ್ದಿ ಬರ ಸಿಡಿಲಿನಂತೆ ಕೇಳಿಸಿತ್ತು. ಆಕೆಯ ರೋದನ ಆ ಕಾಡಿನ ಇಂಚಿಂಚಿಗೂ ತಲುಪಿ ಅಲ್ಲೇ ಕರಗಿ ಹೋಗಿತ್ತು.

ಆದರೆ ವಿಪರ್ಯಾಸ ಅಂದ್ರೆ, ನಿಜವಾಗಿಯೂ ಅಂದು ಆಕೆಯ ಮಗ ಸತ್ತಿರಲಿಲ್ಲ. ತಪ್ಪು ಮಾಹಿತಿಯೊಂದು ಆಕೆಯ ಮಗ ಇನ್ನಿಲ್ಲ ಎಂಬ ಸುದ್ದಿಯನ್ನು ಆಕೆಯ ಕಿವಿಗೆ ತಲುಪಿಸಿತ್ತು. ಆದರೆ, ಇಂದು ನಿಜವಾಗಿಯೂ ಆಕೆಯ ಮಗ ಎನ್‌ಕೌಂಟರ್ ಗೆ ಬಲಿಯಾಗಿದ್ದಾನೆ. ಆತ ಬೇರಾರು ಅಲ್ಲ ನಿನ್ನೆ ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ.

ಅದು 2007 ರ ಕಥೆ.. ಚಿಕ್ಕಮಗಳೂರಿನಲ್ಲಿ ನಡೆದಿದ್ದ ಎನ್‌ಕೌಂಟರ್‌ನಲ್ಲಿ ವಿಕ್ರಂ ಗೌಡ ಸತ್ತು ಹೋದ ಎಂಬ ಸುದ್ದಿ ಪೊಲೀಸ್ ಮೂಲದಿಂದಲೇ ಸಿಕ್ಕಿತ್ತು. ಹೀಗಾಗಿ ಅಂದು ಉಡುಪಿಯಲ್ಲಿದ್ದ ನಾನು ಕ್ಯಾಮೆರಾ ಮೆನ್ ಜೊತೆ ಬೈಕೇರಿ ಕಬ್ಬಿನಾಲೆಯತ್ತ ಪ್ರಯಾಣ ಆರಂಭಿಸಿದ್ದೆವು. ಹೆಬ್ರಿ ದಾಟಿ ಕಬ್ಬಿನಾಲೆ ರಸ್ತೆ ಎಂಟ್ರಿ ಆಗುವಾಗಲೇ ಎಎನ್‌ಎಫ್ ತಂಡ ನಮ್ಮನ್ನು ನಿಲ್ಲಿಸಿ ಮುಂದೆ ಹೋಗುವಂತಿಲ್ಲ ಎಂದು ಸೂಚನೆ ನೀಡಿದ್ರು. ಆ ವೇಳೆಗೆ ಕಾರ್ಕಳ ಪೊಲೀಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ಬಳಿಕ ಹೇಗೋ ಒಪ್ಪಿಸಿ ಕಬ್ಬಿನಾಲೆಯತ್ತ ತೆರಳಿದ್ದೆವು. ನಡುನಡುವೆ ಅಲ್ಲಲ್ಲಿ ಎಎನ್‌ಎಫ್ ಸಿಬ್ಬಂದಿ ನಿಂತಿದ್ದು, ನಕ್ಸಲ್ ತಂಡ ದಾಳಿ ನಡೆಸಬಹುದಾ ಎಂಬ ಆತಂಕ ನಮ್ಮಲ್ಲೂ ಎದುರಾಗಿತ್ತು. ಹಾಗೆ ಕೆಲ ದೂರ ಬೈಕ್ ನಲ್ಲಿ ತೆರಳಿ ಬಳಿಕ ರಸ್ತೆ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿ ಸುಮಾರು ಮೂರು ಕಿಲೋ ಮೀಟರ್ ಕ್ರಮಿಸಿ ಕಬ್ಬಿನಾಲೆ ತಲುಪಿದ್ದೆವು. ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಲ್ಲಿ, “ವಿಕ್ರಂ ಗೌಡನ ಮನೆ ಎಲ್ಲಿ ಅಣ್ಣಾ?” ಎಂದು ವಿಚಾರಿಸಿದಾಗ ಒಮ್ಮೆ ನಮ್ಮನ್ನು ವಿಚಿತ್ರವಾಗಿ ನೋಡಿ ಬಳಿಕ, “ಇನ್ನೊಂದೆರಡು ಫರ್ಲಾಂಗು ಮುಂದೆ ಹೋಗಿ, ಎಡದಲ್ಲಿ ಹಳ್ಳ ದಾಟಲು ಒಂದು ಹಗ್ಗದ ಸೇತುವೆ ಇದೆ. ಅಲ್ಲಿಂದ ಮುಂದೆ ಒಂದು ಫರ್ಲಾಂಗು ಹೋದ್ರೆ ಅಲ್ಲಿ ಮನೆಗಳಿವೆ ಅಲ್ಲಿ ಕೇಳಿ” ಎಂದು ಹೇಳಿದ್ರು. ಜೊತೆಗೆ “ಅವನ ತಾಯಿ ನಮ್ಮ ದಣಿಯ ತೋಟದಲ್ಲೇ ಕೆಲಸ ಮಾಡೋದು. ನಾನು ಅವರಿಗೆ ಹೇಳ್ತೇನೆ ನೀವು ಹೊರಡಿ” ಎಂದು ನಮ್ಮನ್ನು ಕಳುಹಿಸಿದ್ರು. ಹಾಗೇ ಮುಂದಡಿಯಿಡುತ್ತಿದ್ದಂತೆ ಅವರು ಯಾರನ್ನೋ ಕೂಗಿ ಕರೆದು ನಾವು ಬಂದ ವಿಚಾರ ಯಾರಿಗೋ ತಿಳಿಸಿದ್ದು ನಮಗೆ ಕೇಳಿಸಿತ್ತು. ಅವರು ಹೇಳಿದ ದಾರಿಯಲ್ಲೇ ಸಾಗಿದ ನಮಗೆ ವಿಚಿತ್ರ ಅನಿಸಿದ್ದು ಮಗ ಸತ್ತ ಸುದ್ದಿ ಗೊತ್ತಿದ್ರೂ ತಾಯಿ ಕೆಲಸಕ್ಕೆ ಹೋಗಿದ್ದಾರಾ ಅನ್ನೋದು. ಹಾಗೇ ನಾವಿಬ್ಬರು ಚರ್ಚಿಸುತ್ತಾ ಹೆಜ್ಜೆ ಹಾಕಿ ವಿಕ್ರಂ ಗೌಡನ ಮನೆ(ಗುಡಿಸಲು) ತಲುಪಿದ್ದೆವು. ಆದರೆ ಅಲ್ಲಿನ ವಾತಾವರಣ ಕೂಡ ನಮಗೆ ಅಲ್ಲೇನೂ ಆಗಿಲ್ಲ ಅನ್ನೋ ರೀತಿಯಲ್ಲೇ ಕಾಣಿಸಿತ್ತು.

ಅದೊಂದು ಪುಟ್ಟ ಗುಡಿಸಲಾಗಿದ್ದು ಅಂದಾಜು 200 ಚದರ ಅಡಿ ಇರಬಹುದು ಅಷ್ಟೇ. ಒಂದು ರೀತಿಯಲ್ಲಿ ಜೋಪಡಿ ಮಾದರಿಯಲ್ಲಿ ಬಾಗಿಲುಗಳಿಲ್ಲದ ಒಂದು ಸೂರು ಅದು. ಮನೆಯಲ್ಲಿ ಯಾರೂ ಕಾಣಿಸದ ಕಾರಣ ಸೆಗಣಿ ಸಾರಿಸಿ ಶುಭ್ರವಾಗಿದ್ದ ಮೆಟ್ಟಿಲ ಮೇಲೆ ವಿಶ್ರಾಂತಿ ಪಡೆದೆವು. ಅಷ್ಟರಲ್ಲಿ ಹಿಂಬದಿಯಿಂದ “ಅತ್ತೆ ಇಲ್ಲ.. ಏನು ಬೇಕು” ಎಂಬ ಹೆಣ್ಣಿನ ಧ್ವನಿ ಕೇಳಿಸಿ ತಿರುಗಿದಾಗ ಕಂಕುಳಲ್ಲಿ ಮಗು ಇಟ್ಟುಕೊಂಡ ಸಣ್ಣ ಪ್ರಾಯದ ಮಹಿಳೆ ನಿಂತಿದ್ದರು. ವಿಚಾರಿಸಿದಾಗ ಆಗೆ ವಿಕ್ರಂ ಗೌಡನ ಕಿರಿಯ ಸಹೋದರ‌ನ ಪತ್ನಿ ಅನ್ನೋದು ಗೊತ್ತಾಯ್ತು. ಆದರೆ ಆಕೆಯ ಮುಖದಲ್ಲೂ ಯಾವುದೇ ದುಃಖ ಕಾಣಿಸದೆ ನಾವು ಮತ್ತೆ ಕೇಳಿದ ಪ್ರಶ್ನೆ “ಇದು ವಿಕ್ರಂ ಗೌಡ ಮನೆ ಅಲ್ವಾ?” ಎಂಬುದಾಗಿತ್ತು. ಹೌದು ಅನ್ನೋ ಉತ್ತರ ಆ ಕಡೆಯಿಂದ ಬಂತು. ಇದೇನಪ್ಪಾ! ಅಂತ ಒಂದು ಕಡೆ ಕಸಿವಿಸಿ ಮತ್ತೊಂದು ಕಡೆ ನಕ್ಸಲ್ ವಿಕ್ರಂ ಗೌಡನ ಮನೆ ಅಂತಾ ಇನ್ಯಾರದೋ ಮನೆಗೆ ಬಂದೆವಾ ಅನ್ನೋ ಅನುಮಾನ. ಈ ವೇಳೆ ಪಕ್ಕದ ಮನೆಯವರು ಕೂಡ ಕುತೂಹಲದಿಂದ ನಮ್ಮನ್ನೇ ದಿಟ್ಟಿಸಿ ನೋಡುವುದನ್ನು ಕಂಡು ಒಬ್ಬರನ್ನು ಕರೆದು ವಿಚಾರಿಸಿದಾಗ ನಾವು ಹುಡುಕಿಕೊಂಡು ಬಂದ ಮನೆ ಇದುವೆ ಎಂಬುದು ಖಾತರಿಯಾಗಿತ್ತು. ಇದೇ ವೇಳೆ ಅವರು ಪಿಸು ದನಿಯಲ್ಲಿ, “ಅವರಿಗೆ ಇನ್ನೂ ವಿಚಾರ ಗೊತ್ತಾಗಿಲ್ಲ” ಎಂಬ ಸೂಚನೆ ಕೊಟ್ರು.

ಇಷ್ಟೆಲ್ಲಾ ಘಟನೆಗಳು ನಡೆಯುವ ವೇಳೆಗೆ ವಿಕ್ರಂ ಗೌಡನ ತಾಯಿ ಹಾಜರಾಗಿದ್ದರು. ಅವರು, “ಏನು ಬಂದಿದ್ದು? ಎಂತ ವಿಚಾರ?” ಅಂದಾಗ ನನಗಂತೂ ಮಾತಾಡಲು ಬಾಯಿ ಬಂದಿರಲಿಲ್ಲ. “ಅಮ್ಮ ಸುಮ್ಮನೆ ನಿಮ್ಮ ಮಗನ ಬಗ್ಗೆ ಮಾತಾಡಲು ಬಂದೆ” ಅಂದೆ. ಈ ವೇಳೆಗೆ ಕ್ಯಾಮರಾ ರೆಕಾರ್ಡಿಂಗ್ ಮಾಡಲು ರೆಡಿ ಆಗಿತ್ತು. ಅವರ ಬಳಿ ಮೈಕ್ ಹಿಡಿದು ಮಗ ನಕ್ಸಲ್ ಹೇಗಾದಾ ? ಯಾವಾಗ ಕಾಡಿಗೆ ಹೋದ? ಹೀಗೆ ಹಲವು ಕಥೆಗಳನ್ನ ಕೇಳಿದೆ. ಕಣ್ಣೀರು ಸುರಿಸುತ್ತಾ ಒಂದೊಂದೇ ಕಥೆ ಹೇಳಿದ್ದ ಆ ತಾಯಿ ಹೇಳಿದ ಆ ಒಂದು ಮಾತು “ನಿತ್ಯ ಪೊಲೀಸರು ಬಂದು ಹೊಡೆದು ಬಡಿದ ಕಾರಣವೇ ನನ್ನ ಮಗ ಬೆಟ್ಟ ಹತ್ತಿ ಹೋದ.” ಈ ಮಾತು ಹೇಳಿದಾಗ ವ್ಯವಸ್ಥೆಯ ಬಗ್ಗೆ ಅವರ ಮುಖದಲ್ಲಿನ ಅಸಹನೆ ಮುಚ್ಚಿಡಲಾಗಿರಲಿಲ್ಲ.

ಕಾಡುತ್ಪತ್ತಿ ಸಂಗ್ರಹಿಸಿ ಜೀವನ ಮಾಡುತ್ತಿದ್ದ ವಿಕ್ರಂ ಗೌಡ ಅದಕ್ಕಾಗಿ ಮನೆಯ ಹಿಂಬದಿಯಲ್ಲಿರುವ ದಟ್ಟ ಅರಣ್ಯಕ್ಕೆ ಹೋಗ್ತಾ ಇದ್ದ. ಸಂಗ್ರಹಿಸಿದ ಕಾಡುತ್ಪತ್ತಿಯನ್ನು ಅರಣ್ಯ ಇಲಾಖೆಯ ಮೂಲಕವೇ ಮಾರಾಟ ಮಾಡುತ್ತಿದ್ದ. ಆದರೆ, ಸಾಕೇತ್ ರಾಜನ್‌ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಈತನ ಬಗ್ಗೆ ಅನುಮಾನ ಇತ್ತು. ಬೆಟ್ಟಕ್ಕೆ ಹೋಗುವ ಈತ ನಕ್ಸಲರ ಸಂಪರ್ಕದಲ್ಲಿ ಇದ್ದಾನೆ ಅನ್ನೋ ಅನುಮಾನ ಪೊಲೀಸರಿಗಿತ್ತು. (ಅನುಮಾನ ನಿಜವೋ ಸುಳ್ಳೋ ಬೇರೆ ವಿಚಾರ ) ಇದೇ ಕಾರಣಕ್ಕೆ ಒಂದೆರಡು ಬಾರಿ ವಿಕ್ರಂ ಗೌಡನನ್ನು ಠಾಣೆಗೆ ಎಳೆದೊಯ್ದು ವಿಚಾರಣೆ ಮಾಡಿದ್ದರು. ಆದರೆ ನನಗೇನೂ ಗೊತ್ತಿಲ್ಲ ಅಂದಿದ್ದ ವಿಕ್ರಂ ಗೌಡ ಮತ್ತೆ ತನ್ನ ಕಾಡುತ್ಪತ್ತಿ ಸಂಗ್ರಹದ ಕಾಯಕ ಮುಂದುವರಿಸಿದ್ದ. ಈ ವೇಳೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದ್ದು ಅದೊಂದು ದಿನ ಪೊಲೀಸರು ಆತನನ್ನು ಎಳೆದೊಯ್ದು ಚೆನ್ನಾಗಿ ವಿಚಾರಿಸಿದ್ರು. ಆ ವಿಚಾರಣೆಯಿಂದ ಸುಧಾರಿಸಲು ವಿಕ್ರಂ ಗೌಡನಿಗೆ ವಾರಗಳೇ ಬೇಕಾಗಿತ್ತು. ಇದಾಗಿ ಮತ್ತೆ ಮನೆಗೆ ಬಂದ ಪೊಲೀಸರು ಮನೆಯಲ್ಲೂ ವಿಚಾರಣೆ ನಡೆಸಿ ಮತ್ತೆ ವಿಕ್ರಂ ಗೌಡನನ್ನು ಎಳೆದೊಯ್ದಿದ್ದರು. ಇದೇ ಪೊಲೀಸರು ನಡೆಸಿದ್ದ ಆತನ ಕೊನೆಯ ವಿಚಾರಣೆಯಾಗಿತ್ತು. ಪೊಲೀಸ್ ಠಾಣೆಯಿಂದ ಬಂದಿದ್ದ ವಿಕ್ರಂ ಗೌಡ ರಾತ್ರೋರಾತ್ರಿ ಮನೆಯಿಂದ ಹೊರಟು ಹಿಂಬದಿಯ ಬೆಟ್ಟ ಏರಿದ್ದ. ಇದಿಷ್ಟೂ ವಿಕ್ರಂ ಗೌಡನ ತಾಯಿ ಅಂದು ನಮ್ಮಲ್ಲಿ ಹೇಳಿದ್ದ ಕಥೆ.

ಇಷ್ಟೆಲ್ಲಾ ಕಥೆ ಕೇಳಿದ‌ ನಮಗೆ ಆ ತಾಯಿ ನಿಮ್ಮ ಮಗ ಪೊಲೀಸರ ಗುಂಡಿಗೆ ಸತ್ತಿದ್ದಾನೆ ಎಂಬ ಸತ್ಯ ಹೇಗೆ ಹೇಳುವುದು ಅನ್ನೋ ಸಂಕಟ. ಪಕ್ಕದ ಗುಡಿಸಲಿನ ಅವರ ಸಂಬಂಧಿ ಮಹಿಳೆ ನೀವು ಹೇಳಿ ಅಂತ ನಮ್ಮಲ್ಲಿ ಮನವಿ ಮಾಡಿದ್ರು. ಆದ್ರೆ, ಹೇಗೆ ಹೇಳೋದು ಅಂತ ಚಿಂತಿಸುವಾಗಲೇ ಇನ್ನೊಂದಷ್ಟು ಪತ್ರಕರ್ತರ ತಂಡ ಅಲ್ಲಿಗೆ ಬಂದು ತಲುಪಿದ್ರು. ಅವರಿಗೂ ಮನೆಯ ಪರಿಸ್ಥಿತಿ ನೋಡಿ ಅಯೋಮಯ. ನನ್ನಲ್ಲಿ ವಿಚಾರಿಸಿದಾಗ ಅವರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಅಂತ ವಿಷಯ ತಿಳಿಸಿದೆ. ಅಷ್ಟರಲ್ಲಿ ಆ ತಾಯಿಗೂ ಒಂದು ಸಣ್ಣ ಅನುಮಾನ ಕಾಡಿ ಬಾಯಿ ಬಿಟ್ಟು, “ನೀವು ಇಷ್ಟು ಜನ ಬಂದಿದ್ದೀರಿ ಅಂದ್ರೆ ನನ್ನ ಮಗನಿಗೆ ಏನೋ ಆಗಿರಬೇಕು..ಏನಾಯ್ತು ?” ಅಂತ ಕೇಳಿಯೇ ಬಿಟ್ಟರು. ಆ ವೇಳೆಗೆ ಹಿರಿಯ ಪತ್ರಕರ್ತರೊಬ್ಬರು ನಿಧಾನವಾಗಿ, “ನಿಮ್ಮ ಮಗನಿಗೆ ಚಿಕ್ಕಮಗಳೂರು ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರು ಗುಂಡು ಹೊಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿ ಬಂದೆವು” ಎಂದು ವಿಚಾರ ಹೇಳಿದ್ರು. ಈ ಸುದ್ದಿ ಕೇಳಿ ಬರಸಿಡಿಲು ಬಡಿದಂತಾದ ಆ ತಾಯಿ ರೋದನೆ ಇಡೀ ಅರಣ್ಯದ ಮೂಲೆ ಮೂಲೆಗೂ ಕೇಳಿಸಿತು. ಇದಾದ ಬಳಿಕ ಒಂದಷ್ಟು ಜನ ಆಕೆಯನ್ನು ಸಮಾಧಾನಪಡಿಸಿ ವಿಕ್ರಂ ಗೌಡನ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕಿಕೊಂಡು ಅಲ್ಲಿಂದ ಹೊರಟರು. ನಾವೂ ಕಬ್ಬಿನಾಲೆಯ ಕಾಡಿನಿಂದ ಹೆಬ್ರಿ ತಲುಪಿ ವಿಕ್ರಂ ಗೌಡನ ಮೃತದೇಹ ಎಲ್ಲಿ ಬರುತ್ತದೆ ಎಂಬ ಮಾಹಿತಿ ಕಲೆ ಹಾಕಲು ಆರಂಭಿಸಿದೆವು. ಅಷ್ಟರಲ್ಲಿ ಪೊಲೀಸ್ ಇಲಾಖೆಯ ಮಾಹಿತಿ ನಮ್ಮನ್ನೇ ಒಮ್ಮೆ ಅಲುಗಾಡಿಸಿ ಬಿಟ್ಟಿತ್ತು. ಅವರ ಮಾಹಿತಿ ಕೇಳಿ ಛೇ..! ಬದುಕಿದ್ದ ಮಗನನ್ನು ಸತ್ತಾ ಎಂದು ಹೇಳಿ ತಾಯಿಯ ಕಣ್ಣೀರು ಹಾಕಿಸಿದೆವಲ್ಲಾ ಅನ್ನೋ ಪಶ್ಚಾತ್ತಾಪ ಕಾಡಿತು.
ಅಸಲಿಗೆ ಅಂದು ಪೊಲೀಸ್ ಎನ್‌ಕೌಂಟರ್ ನಲ್ಲಿ ಹತನಾದವನು ಕುತ್ಲೂರಿನ ದಿನಕರ ಗೌಡ. ಪೊಲೀಸರ ಮೊದಲ ಮಾಹಿತಿಯಲ್ಲಿ ವಿಕ್ರಂ ಗೌಡ ಎಂದು ತಪ್ಪಾಗಿತ್ತು.

ಅಂದು ಸುಳ್ಳಾಗಿದ್ದ ಘಟನೆ ಇಂದು ನಿಜವಾಗಿದೆ. ತನ್ನೂರ ಪಕ್ಕದಲ್ಲೇ ಎನ್‌ಕೌಂಟರ್ ನಲ್ಲಿ ವಿಕ್ರಂ ಗೌಡ ಹತನಾಗಿದ್ದಾನೆ. ಆತನ ತಾಯಿಯ ಪ್ರಕಾರ ಆತನ ಈ ಸ್ಥಿತಿಗೆ ನಮ್ಮ ವ್ಯವಸ್ಥೆಯೇ ಕಾರಣ. ಅಂದು ವಿಚಾರಣೆಯ ಹೆಸರಿನಲ್ಲಿ ನಡೆದ ಹಿಂಸೆ ತಾಯಿ ಮಗನನ್ನು ಬೇರೆ ಮಾಡಿತ್ತು. ಆದರೆ ಬೆಟ್ಟ ಹತ್ತಿ ಬಂದೂಕು ಹಿಡಿದ ವಿಕ್ರಂ ಗೌಡ ಕೂಡ ಮಾಡಿದ್ದು ಸರಿ ಅಂತ ಹೇಳಲಾಗದು. ಆದರೆ, ಆತ ಬಂದೂಕು ಹಿಡಿದರೂ ಆತನ ತಾಯಿಯನ್ನು ಜೀತದಿಂದ ತಪ್ಪಿಸಲಾಗಿರಲಿಲ್ಲ. ಆತನ ತಾಯಿಗೊಂದು ಸೂರು ಮಾಡಲಾಗಿರಲಿಲ್ಲ. ತಮ್ಮನ ಬದುಕಿಗಾದ್ರೂ ಏನಾದ್ರೂ ಮಾಡಿದ್ನಾ ಅಂದ್ರೆ ಅದೂ ಇಲ್ಲ. ಹಾಗಿದ್ರೆ ವಿಕ್ರಂ ಗೌಡ ಕಾಡಲ್ಲಿ ಬಂದೂಕು ಹಿಡಿದು ಸಾಧಿಸಿದ್ದು ಏನನ್ನು ಎಂಬ ಪ್ರಶ್ನೆಗೆ ಉತ್ತರ ಏನಾಗಿರಬಹುದು?

ರಾಜೇಶ್ ರಾವ್ ಪುತ್ತೂರು

ಮಸೀದಿ ಮುಂದೆ ಪಟಾಕಿ ಸಿಡಿಸಿ ಗುಂಪು ಘರ್ಷಣೆ : RSS ಕಾರ್ಯಕರ್ತರ ವಿರುದ್ಧ FIR ದಾಖಲು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಸೀದಿಯ ಮುಂದೆ ದುರುದ್ದೇಶದಿಂದ ಪಟಾಕಿ ಸಿಡಿಸಿದ ಮತ್ತು ಮೆರವಣಿಗೆಯ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಏಳು ಹಿಂದುತ್ವದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

ದತ್ತಾತ್ರೇಯ ಜಯಂತಿ ನಿಮಿತ್ತ ಆಲ್ದೂರು ಪಟ್ಟಣದಲ್ಲಿ ಶನಿವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ವತಿಯಿಂದ ದತ್ತ ಮಾಲಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಅಧಿಕಾರಿಗಳ ಪ್ರಕಾರ, ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಲು ಸಂಘಟಕರಿಗೆ ಅನುಮತಿ ನೀಡಲಾಗಿತ್ತು. ಆದರೆ, ಶನಿವಾರ ರಾತ್ರಿ ದತ್ತ ಮಾಲಾಧಾರಿಗಳು ಮೆರವಣಿಗೆ ಹೊರಡುವ ವೇಳೆ ಜಾಮಿಯಾ ಮಸೀದಿ ಎದುರು ದುರುದ್ದೇಶದಿಂದ ಪಟಾಕಿ ಸಿಡಿಸಲು ಕಾರ್ಯಕರ್ತರು ಮುಂದಾಗಿದ್ದಾರೆ.

ಮಸೀದಿ ಬಳಿ ಪಟಾಕಿ ಸಿಡಿಸದಂತೆ ಪೊಲೀಸರ ಸ್ಪಷ್ಟ ನಿರ್ದೇಶನದ ಹೊರತಾಗಿಯೂ ಕಾರ್ಯಕರ್ತರ ಗುಂಪು ಪಟಾಕಿ ಸಿಡಿಸಲು ಯತ್ನಿಸಿ ತೀವ್ರ ಘರ್ಷಣೆಯಲ್ಲಿ ತೊಡಗಿದೆ ಎಂದು ವರದಿಯಾಗಿದೆ.

ಅಧಿಕಾರಿಗಳು ಕ್ರಮವನ್ನು ಕೈಗೋಳ್ಳಲು ಪ್ರಯತ್ನಿಸಿದಾಗ, ಕೋಪಗೊಂಡ ಗುಂಪಿನಿಂದ ಪೊಲೀಸರ ಮೇಲೆ ದಾಳಿ ನಡೆದಿದೆ. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ಪರಿಸ್ಥಿತಿಯಲ್ಲಿ ದಾಳಿ ಉಲ್ಬಣಗೊಳ್ಳುತ್ತಿರುವ ಯತ್ನ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಏಳು RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಧಿಕಾರಿಗಳಿಗೆ ಪ್ರೇರೇಪಿಸಿದೆ. ಗಾಯಗೊಂಡ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಎಲ್ಲಾ ಬೆಳವಣಿಗೆ ನಡೆಯುವಾಗ ಮೆರವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ.ರವಿ ಕೂಡ ಇದ್ದರು ಎಂದು ವರದಿಯಾಗಿದೆ.

ರಾತ್ರಿ 8 ಗಂಟೆ ಸುಮಾರಿಗೆ ಮಸೀದಿ ಮುಂದೆ ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದಾಗ, ನಮ್ಮ ಸಿಬ್ಬಂದಿ ಯಾವುದೇ ಪಟಾಕಿ ಸಿಡಿಸದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆಲ್ದೂರು ವೃತ್ತ ನಿರೀಕ್ಷಕ ಎಂ ಸತ್ಯನಾರಾಯಣ ತಿಳಿಸಿದ್ದಾರೆ.

ಎಚ್ಚರಿಕೆಯ ಹೊರತಾಗಿಯೂ ಕೆಲವು ಕಾರ್ಮಿಕರು ಪಟಾಕಿ ಸಿಡಿಸಲು ಮುಂದಾದರು. ಆಲ್ದೂರು ಸಬ್ ಇನ್ಸ್ ಪೆಕ್ಟರ್ ಅಕ್ಷಿತಾ ಸೇರಿದಂತೆ ನಮ್ಮ ಸಿಬ್ಬಂದಿ ತಡೆಯಲು ಯತ್ನಿಸಿದರಾದರೂ ಪೊಲೀಸರನ್ನು ತಳ್ಳಿ ಪಟಾಕಿ ಸಿಡಿಸಿದ್ದಾರೆ.

ನಾಗರಾಜ, ಸತೀಶ್, ಬನ್ನೂರು ನವೀನ್, ತುಡುಕೂರು ಮಂಜ, ಪ್ರಜ್ವಲ್, ಮಂಜ ಹಾದಿ, ಸುನೀಲ್ ಹಾಡಿ ಮತ್ತು ಇತರ ಏಳು ಮಂದಿಯ ವಿರುದ್ಧ ಸೆಕ್ಷನ್ 286 (ಸ್ಫೋಟಕ ವಸ್ತುವಿನ ಬಗ್ಗೆ ನಿರ್ಲಕ್ಷ್ಯ ವರ್ತನೆ), 332 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಕರ್ತವ್ಯವನ್ನು ತಡೆಹಿಡಿಯಲು ಸಾರ್ವಜನಿಕ ಸೇವಕ), 353 (ಸಾರ್ವಜನಿಕ ಸೇವಕನು ತನ್ನ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯಲು ಅಪರಾಧ ಶಕ್ತಿ), ಮತ್ತು ಭಾರತೀಯ ದಂಡ ಸಂಹಿತೆಯ (IPC) 149 (ಕಾನೂನುಬಾಹಿರ ಸಭೆಯೊಂದಿಗೆ ಸಾಮಾನ್ಯ ವಸ್ತು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪಟಾಕಿಗಳನ್ನು ಶಮನಗೊಳಿಸಲು ಯತ್ನಿಸಿದ ಉಪ ಎಸ್ಪಿ ಎಚ್‌ಎಂ ಶೈಲೇಂದ್ರ, ಪಿಎಸ್‌ಐ ಅಕ್ಷಿತಾ ಮತ್ತು ಹೆಡ್ ಕಾನ್‌ಸ್ಟೆಬಲ್ ಜೆಕೆ ಚಂದ್ರಪ್ಪ ಅವರಿಗೆ ಸಣ್ಣ ಸುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ವಕೀಲರ ಮೇಲಿನ ಹಲ್ಲೆ ಪ್ರಕರಣ ; ಎಫ್ಐಆರ್ ಗೆ ತಡೆ ನೀಡಿದ ಹೈಕೋರ್ಟ್
ಚಿಕ್ಕಮಗಳೂರು ಪೊಲೀಸ್ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಾಲ್ವರು ವಕೀಲರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಡಿ.3ರಂದು ದಾಖಲಾಗಿರುವ ಎಫ್‌ಐಆರ್‌ಗೆ ತಡೆ ಕೋರಿ ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ನವೆಂಬರ್ 30 ರಂದು ಚಿಕ್ಕಮಗಳೂರಿನಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುವ ವಿವಾದದ ನಂತರ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಪ್ರಕರಣವನ್ನು ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸ್ವೀಕರಿಸಿ ಆರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಪೊಲೀಸರನ್ನು ಡಿಸೆಂಬರ್ 1 ರಂದು ಕರ್ತವ್ಯದಿಂದ ಅಮಾನತುಗೊಳಿಸಲಾಯಿತು ಮತ್ತು ಉಪ ಅಧೀಕ್ಷಕ ಶ್ರೇಣಿಯ ಪೊಲೀಸ್ ಅಧಿಕಾರಿ ಈ ಹಲ್ಲೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದರು.

ನಾಲ್ವರು ವಕೀಲರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆಗೊಳಗಾದ ವಕೀಲರ ಹೇಳಿಕೆ ಪಡೆಯಲು ಹೋದಾಗ ಅವರ ಫೋನ್ ಕಸಿದುಕೊಂಡರು ಮತ್ತು ವಕೀಲರ ಗುಂಪು ಅವರನ್ನು ಕರ್ತವ್ಯ ನಿರ್ವಹಿಸದಂತೆ ತಡೆದರು ಎಂದು ಆರೋಪಿಸಿದ್ದಾರೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ಅವರು ವಾದ ಮಂಡಿಸಿ, ಸಾಮಾನ್ಯ ಮತ್ತು ಆಮ್ನಿಬಸ್ ಆರೋಪಗಳನ್ನು ಹೊರತುಪಡಿಸಿ ನಾಲ್ವರು ವಕೀಲರ ವಿರುದ್ಧ ಯಾವುದೇ ನಿರ್ದಿಷ್ಟ ಆರೋಪಗಳನ್ನು ಮಾಡಲಾಗಿಲ್ಲ. ಮೂರು ದಿನಗಳ ಹಿಂದೆ ಮೂಲ ಘಟನೆ ನಡೆದಾಗ ಡಿಸೆಂಬರ್ 3 ರಂದು ಎಫ್‌ಐಆರ್ ದಾಖಲಿಸಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.

ಮುಂದಿನ ವಿಚಾರಣೆಯವರೆಗೆ ಎಫ್‌ಐಆರ್‌ಗೆ ನ್ಯಾಯಾಲಯ ತಡೆ ನೀಡಿದೆ.

ಪರಿಶಿಷ್ಟ ಸಮುದಾಯದ ಕುಟುಂಬದ ಮೇಲೆ ದೌರ್ಜನ್ಯ: ನ್ಯಾಯ ಒದಗಿಸುವಂತೆ ಸಿದ್ಧರಾಮಯ್ಯ ಆಗ್ರಹ
ಚಿಕ್ಕಮಗಳೂರು ತಾಲ್ಲೂಕಿನ ಹುಣಸೆಹಳ್ಳಿಪುರದ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಯ ಒಂದೇ ಕುಟುಂಬದ 10 ಮಂದಿಯನ್ನು ಎಸ್ಟೇಟ್ ಮಾಲೀಕರು ಕೂಡಿ ಹಾಕಿ ಹಿಂಸಿಸಿರುವ ಘಟನೆ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಒದಗಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ಶಾಸಕ ಸಿ.ಟಿ.ರವಿ ಮತ್ತು ಬಿಜೆಪಿಯವರ ಬೇಷರತ್ ಬೆಂಬಲ ತಮಗೆ ಇದೆ ಎನ್ನುವ ದರ್ಪದಲ್ಲಿ ಎಸ್ಟೇಟ್ ಮಾಲೀಕರಿಂದ ಈ ದೌರ್ಜನ್ಯ ನಡೆಸಲಾಗಿದೆ ಎನ್ನುವ ಸಂಗತಿ ಆಘಾತಕಾರಿಯಾದದ್ದು. ದಲಿತ ಕಾರ್ಮಿಕ ಕುಟುಂಬವನ್ನು ಶೌಚಾಲಯವೂ ಇಲ್ಲದ ಮನೆಯೊಳಗೆ ಇಡೀ ದಿನ ಕೂಡಿ ಹಾಕಲಾಗಿದೆ. ಮಕ್ಕಳು ಕೂಡ ಈ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಗರ್ಭಿಣಿಯ ಕಪಾಳಕ್ಕೂ ಹೊಡೆದು ಹಿಂಸಿಸಲಾಗಿದೆ ಎನ್ನುವ ವರದಿಗಳೂ ಇವೆ. ಸದ್ಯ ಬಾಳೆಹೊನ್ನೂರು ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆದರೆ ಆರೋಪಿಗಳನ್ನು ಬಂಧಿಸುವುದಾಗಲೀ, ಸೂಕ್ತ ವಿಚಾರಣೆ ನಡೆಸುವುದಾಗಲೀ ಇದುವರೆಗೂ ಆಗಿಲ್ಲ. ಆರೋಪಿಗಳ ಬೆನ್ನಿಗೆ ಬಿಜೆಪಿ ಸರ್ಕಾರವೇ ನಿಂತಿರುವುದರಿಂದ ಆರೋಪಿಗಳು ಇನ್ನೂ ಸುರಕ್ಷಿತವಾಗಿ ಓಡಾಡುತ್ತಿದ್ದಾರೆ. ಸಂತ್ರಸ್ತರು ಜೀವ ಭಯದಲ್ಲಿದ್ದಾರೆ.

ದೌರ್ಜನ್ಯಕ್ಕೆ ಒಳಗಾದ ಗರ್ಭಿಣಿಯ ಗರ್ಭಪಾತವಾಗಿದೆ ಎನ್ನುವ ಸುದ್ದಿಗಳೂ ಹರಿದಾಡುತ್ತಿವೆ. ಇದರ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸಬೇಕು. ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಭಯದಲ್ಲಿರುವ ಸಂತ್ರಸ್ಥ ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ನೀಡಬೇಕು. ಎಸ್ಟೇಟ್‌ಗಳಿಗೆ ಗುಳೆ ಬಂದು ಕೆಲಸ ಮಾಡುತ್ತಿರುವ ನೂರಾರು ಕುಟುಂಬಗಳಿಗೆ ಸರ್ಕಾರದ ಯಾವ ಸವಲತ್ತುಗಳೂ ತಲುಪುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಆಕರ್ಷಕ ಮಾತುಗಳಿಂದ ದಲಿತ ಕೂಲಿ ಕಾರ್ಮಿಕರನ್ನು ಮರಳು ಮಾಡುವ ಬಿಜೆಪಿಯವರು ಈಗ ಅವರ ಮೇಲೆ ಕ್ರೌರ್ಯ, ದೌರ್ಜನ್ಯ ನಡೆದಾಗಲೂ ಅವರ ರಕ್ಷಣೆಗೆ ನಿಲ್ಲುತ್ತಿಲ್ಲ.

ಎಸ್ಟೇಟ್ ಕಾರ್ಮಿಕರ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ತಂದೆ ತಾಯಿಯರು ಕೂಲಿ ಕೆಲಸಕ್ಕೆ ಹೋದಾಗ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅವರ ಕಲಿಕೆಗೆ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು. ಆ ಮಕ್ಕಳಿಗೆ ಅಗತ್ಯ ಪೌಷ್ಠಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೊಬೈಲ್ ಆರೋಗ್ಯ ಕೇಂದ್ರಗಳ ಮೂಲಕ ಎಸ್ಟೇಟ್ ಕಾರ್ಮಿಕರು ಮತ್ತು ಮಕ್ಕಳ ಆರೋಗ್ಯಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ನಾನು ಈ ಹಿಂದೆಯೂ ನಾನಾ ಸಂದರ್ಭಗಳಲ್ಲಿ ಒತ್ತಾಯಿಸಿದ್ದೆ. ಆದರೆ, ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ.

ಕಾರ್ಮಿಕರು ಸಾಮೂಹಿಕವಾಗಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಮೊದಲು ಅವರ ಸಂಕಷ್ಟಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು. ಮೇಲಿಂದ ಮೇಲೆ ನಡೆಯುವ ದೌರ್ಜನ್ಯಗಳಿಗೆ ತಡೆ ಬೀಳಬೇಕು. ದಲಿತ ಕಾರ್ಮಿಕ ಕುಟುಂಬದ ಮೇಲೆ ನಡೆದಿರುವ ದೌರ್ಜನ್ಯಕ್ಕೆ ನೆಪ ಮಾತ್ರದ ಕೇಸು ದಾಖಲಿಸಿ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ನಾಟಕದ ವಿರುದ್ಧವೂ ಎಸ್ಟೇಟ್ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪಕ್ಕದ ಕ್ಷೇತ್ರದವರೇ ಆಗಿದ್ದಾರೆ. ಆದರೆ ಇದುವರೆಗೂ ಸಂತ್ರಸ್ಥ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವ, ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಿಲ್ಲ. ಆದ್ದರಿಂದ ತಕ್ಷಣ ಗೃಹ ಸಚಿವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ನಾವು ಅಲ್ಲಿಗೆ ಹೋದ್ರೆ ಈಗ ಹೊಡೀತಾರೆ: ದಲಿತ ಯುವಕನ ಅಳಲು
ಚಿಕ್ಕಮಗಳೂರು: “ನಮ್ಮ 13 ಕುಟುಂಬಗಳ ಆಧಾರ್‌ ಕಾರ್ಡ್‌ ಅವರೇ ಇಟ್ಕೊಂಡಿದ್ದಾರೆ. ಇಂದು ಬೆಳಿಗ್ಗೆ ನಮ್ಮ ಮಕ್ಕಳು ಹೆಂಡತಿ ಎಲ್ಲರನ್ನೂ ಒಂದು ರೂಮಿಗೆ ಹಾಕಿ ಕೂಡಿ ಹಾಕಿದ್ದಾರೆ. ಅರ್ಪಿತಾ, ರೂಪಾ ಮತ್ತು ಇಂದ್ರ ಎಂಬ ಮೂರು ಜನ ಮಹಿಳೆಯರ ಮೇಲೆ ಜಗದೀಶ್‌ ಎಸ್ಟೇಟ್‌ ಮಾಲೀಕ ಗೌಡ್ರು ಹಲ್ಲೆ ಮಾಡಿದ್ದಾರೆ” ಎಂದು ದಲಿತ ಕುಟುಂಬದ ಯುವಕ ಆರೋಪಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಜೇನುಗುಡ್ಡೆಯಲ್ಲಿ ಎಸ್ಟೇಟ್‌ ಮಾಲೀಕ ಹಾಗೂ ಬಿಜೆಪಿಯ ಮುಖಂಡ ಜಗದೀಶ್‌ ಗೌಡ ಎಂಬುವವರು 14 ಮಂದಿ ದಲಿತ ಮಹಿಳಾ ಕಾರ್ಮಿಕರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದ ಕುರಿತು ಪೀಪಲ್‌ ಮೀಡಿಯಾ ವರದಿ ಮಾಡಿತ್ತು.

ಇದೀಗ ಚಿಕ್ಕಮಗಳೂರು ಪೊಲೀಸರು ತಡವಾಗಿ ಎಚ್ಚೆತ್ತುಕೊಂಡು, ಹಲ್ಲೆ ಮಾಡಿರುವ ಎಸ್ಟೇಟ್‌ ಮಾಲೀಕರ ಮೇಲೆ ಎಫ್‌ ಐ ಆರ್‌ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿ ಮಾದ್ಯಮದವರೊಂದಿಗೆ ಮಾತನಾಡಿರುವ ಕುಟುಂಬದ ಯುವಕರು “ನಾವೀಗ ಅಲ್ಲಿಗೆ ಹೋದ್ರೆ ಹೊಡೀತಾರೆ, ನಮಗೆ ಹೆದ್ರಿಕೆ ಆಗ್ತಾ ಇದೆ. ನಮ್ಮ ಕುಟುಂಬದವರು ಕೂಡಲೇ ಬಿಡುಗಡೆಯಾಗಬೇಕು” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಾಬಾಬುಡನ್‌ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ
ಮಲೆನಾಡಿನ ಬೆಟ್ಟ ಸಾಲಿನಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಿಂಜೆ ಅರಳಿದೆ. ತಂಡೋಪತಂಡವಾಗಿ ಪ್ರವಾಸಿಗರು ಇದನ್ನು ನೋಡಲು ಹೋಗಿ ಬರುತ್ತಿದ್ದಾರೆ. ನೀಲಿ ಕುರಿಂಜೆ ನೋಡಿದಾಗ ಆಗುವ ಅನುಭವವಾದರೂ ಎಂತಹುದು? ಹೂವುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ದಾಕ್ಷಾಯಿಣಿ ದಾಚಿ ಅವರು ತಮ್ಮ ಹೂವನುಭವವನ್ನು ಪೀಪಲ್‌ ಮೀಡಿಯಾ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಗಿರಿಕನ್ಯೆ ನೀಲಕುರಿಂಜೆ ಸೀರೆಯನ್ನು ಉಟ್ಟು ಕಂಗೊಳಿಸುತ್ತಿದ್ದ ನೋಟ ಅವರ್ಣನೀಯ.‌

ನೀಲ ಕುರಿಂಜೆಯ ಮನಮೋಹಕ ದೃಶ್ಯ ಪದಗಳಿಗೆ ನಿಲುಕೋದೇ ಇಲ್ಲಾ…

ಹೂವು ಅರಳಿದ ದಿನದಿಂದಲೇ ಈ ನೀಲಿ ಸುಂದರಿಯರನ್ನು ಅದ್ಯಾವಾಗ ನೋಡ್ತಿನೋ ಅಂತ ಮನಸು ಹಂಬಲಿಸ್ತಾ ಇತ್ತು…

ಬೆಳಿಗ್ಗೆ ಕುರಿಂಜೆಯನ್ನು ನೋಡೋಕೆ ಹೋಗೋಣ ಅಂತ ಕೇಳಿದ ಕ್ಷಣದಿಂದ ಒಂಥರಾ ಎಕ್ಸೈಟ್ಮೆಂಟ್..‌. ಹೋಗುವ ದಾರಿಯಲ್ಲೆಲ್ಲಾ ಇವಳಾ ನೀಲಿ ಕುರಿಂಜೆ, ಹೇಗಿರ್ತಾಳೋ ಅಂತ ಕುತೂಹಲ … ನೀಲಿ ಸುಂದರಿಯ ನಿರೀಕ್ಷೆಯಲ್ಲಿ ದಾರಿ ಸಾಗಿದ್ದೇ ತಿಳಿಯಲಿಲ್ಲ…

ಸೀದಾ ಬಾಬಾಬುಡನ್ ಗಿರಿಗೆ ಹೋದ್ವಿ ನೋಡಿ… ‘ಗಂಧರ್ವ ಸೀಮೆಯಾಯಿತು ಕಾಡಿನ ನಾಡು ಕ್ಷಣದೊಳು ಕಾಡಿನ ನಾಡು ʼದ.ರಾ.ಬೇಂದ್ರೆʼಯವರ ಮಾತಿನಂತೆ –

“ಬೆಟ್ಟಕ್ಕೆ ಬೆಟ್ಟವೇ ಅರಳಿದ ಸೊಬಗು…”

ನೀಲಕುರಿಂಜೆಯ ಕಡಲೊಳಗೆ ಮುಳುಗಿದಂತೆ ಭಾಸವಾಗ್ತಿತ್ತು…

ಹೂವನ್ನು ತುಳಿಯದೆ ನಡೆಯಲು ಆಗಲೇ ಇಲ್ಲಾ…

ಎಲ್ಲೆಲ್ಲೂ ಹೂವ ಹಾಸು … (Flower Carpet) ನೀಲಕುರಿಂಜೆ ಕ್ಷಮೆ ಕೇಳಿ ..ಅದ್ಭುತ ಸೌಂದರ್ಯವನ್ನು ಕಣ್ತುಂಬಿಕೊಂಡೆವು…

ಒಂದೊಂದೇ ಹೂವನ್ನು ನೋಡಿದಾಗ ಅದೇನೂ ಅಷ್ಟು ಚಂದ ಅನಿಸ್ಲಿಲ್ಲಾ ..ಹಾಗೇ ಒಟ್ಟಾಗಿ ಪೊದೆಯಾಕಾರದಲ್ಲಿ ಸಹಸ್ರ ಸಹಸ್ರ ಹೂವುಗಳು ಚೂರು ಜಾಗವನ್ನೇ ಬಿಡದಂತೆ ಅರಳಿದ್ದು ನಯನಮನೋಹರ ..

ತಂಗಾಳಿಗೆ ಹೂವಿನ ನೃತ್ಯ ….

ಸಾವಿರ ಸಾವಿರ

ಜೇನಿನ ಜೇಂಕಾರ ..

ನೀಲಕುರಿಂಜೆಯ ಮಡಿಲಲ್ಲಿ ಸುಮಾರು ಮೂರು ಗಂಟೆಗಳ ಗಂಟೆ ಇದ್ವಿ … ಮೂರು ನಿಮಿಷವೇನೋ ಅಂತ ಅನಿಸ್ತು..

ಹನ್ನೆರಡು ವರ್ಷಕ್ಕೊಮ್ಮೆ ಅರಳಿದರೇನು ಮನುಷ್ಯ ನೆಟ್ಟು ಬೆಳೆಸುವ  ಕೃತಕ ಹೂಗಿಡಗಳ ಸೊಬಗಿಗಿಂತ ..

ಈ ನೀಲ ಕುರಿಂಜೆಯು ಹಬ್ಬಿದ ಪರಿಯು…

ಈ ಜಗದ ಸಮಸ್ತರೂ ಒಟ್ಟಾಗಿ ಇದ್ದರೆ  ಮಾತ್ರ ಜಗಕೆ ಸೌಂದರ್ಯ ಅಂತ ಸಾರಿ ಹೇಳುವಂತಿತ್ತು..

ಹನ್ನೆರಡು ವರ್ಷಕ್ಕೊಮ್ಮೆ ಅರಳುವ ಈ ಸುಂದರಿ ನೀಲ ಕುರಿಂಜೆ ಪ್ರಕೃತಿಯ ವಿಸ್ಮಯಗಳಲ್ಲಿ ಒಂದು.. ಅನಿರ್ವಚನೀಯ ಆನಂದ

ದಾಕ್ಷಾಯಿಣಿ ದಾಚಿ
ಶಿವಮೊಗ್ಗ

ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ಮುರುಗೇಶ್‌ ನಿರಾಣಿ
ಹುಬ್ಬಳ್ಳಿ: ರಾಜ್ಯದ ದಾವಣಗೆರೆ, ಬಾದಾಮಿ, ರಾಯಚೂರು, ಕೊಪ್ಪಳ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94ನೇ ಸಂಸ್ಥಾಪನಾ ದಿನ ಹಾಗೂ ‘ವಾಣಿಜ್ಯ ರತ್ನʼಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸಾಕಷ್ಟು ಉದ್ಯಮಿಗಳು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಕಡೆಯೂ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಅದಕ್ಕೆ ಅನುಕೂಲವಾಗುವಂತೆ ರಾಜ್ಯದ ಈ ಐದು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಮುರುಗೇಶ್‌ ನಿರಾಣಿ ಹೇಳಿದರು.

ಈ ಹಿನ್ನಲೆ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತಿದ್ದು, 18 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಹಾಗೆಯೇ ತುಮಕೂರು ಮತ್ತು ಶಿರಾ ನಡುವೆ ಹಾಗೂ ಬೆಳಗಾವಿಯ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೆದುಳು ನಿಷ್ಕ್ರಿಯವಾಗಿರುವ ಯುವತಿಯ ಅಂಗಾಂಗ ದಾನಕ್ಕೆ ಪೋಷಕರು ಸಮ್ಮತಿ
ಚಿಕ್ಕಮಗಳೂರು: ಮೆದುಳು ನಿಷ್ಕ್ರಿಯವಾಗಿರುವ ಯುವತಿಯ ಅಂಗಾಂಗ ದಾನಕ್ಕೆ ಪೋಷಕರು ಸಮ್ಮತಿ ನೀಡಿದ್ದಾರೆ. ಇದರ ಅಂಗವಾಗಿ ಹೆಲಿಕಾಪ್ಟರ್‌ನಲ್ಲಿ ಅಂಗಾಂಗ ಸಾಗಣೆಗೆ ತಯಾರಿ ನಡೆದಿದೆ.

ಚಿಕ್ಕಮಗಳೂರಿನಿಂದ ಯುವತಿಯ ಅಂಗಾಂಗಗಳನ್ನು ಬೆಂಗಳೂರಿಗೆ ಹೆಲಿಕಾಪ್ಟರ್ ನ ಸಹಾಯದಿಂದ ಒಯ್ಯುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

ಚಿಕ್ಕಮಗಳೂರು: ಮೆದುಳು ನಿಷ್ಕ್ರಿಯವಾಗಿರುವ ಯುವತಿಯ ಅಂಗಾಂಗ ದಾನಕ್ಕೆ ಪೋಷಕರು ಸಮ್ಮತಿ ನೀಡಿದ್ದು, ಹೆಲಿಕಾಪ್ಟರ್‌ನಲ್ಲಿ ಅಂಗಾಂಗ ಸಾಗಣೆಗೆ ತಯಾರಿ ನಡೆದಿದೆ. ಬೆಂಗಳೂರಿಗೆ ಅಂಗಾಂಗ ಒಯ್ಯಲು ಹೆಲಿಕಾಪ್ಟರ್ ಚಿಕ್ಕಮಗಳೂರಿಗೆ ಬಂದಿದೆ.#chikmagaluru #OrganDonation #organdoner pic.twitter.com/tUZo8DYo4x
— Prajavani (@prajavani) September 22, 2022

ಇದನ್ನೂ ನೋಡಿ: https://www.youtube.com/watch?v=MmrFo2LjyNg&list=UU-xt7Mk2bvdfuq9QVofcWCw

ಹಲ್ಲೆ ನಡೆಸಿದ ಸ್ಥಳದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತರ್ಧಮೀಯ ಜೋಡಿ
ಚಿಕ್ಕಮಗಳೂರು: ಲವ್‌ ಜಿಹಾದ್‌ ಆರೋಪ ಹೋರಿಸಿ ಮದುವೆಗೆ ಅಡ್ಡಿಪಡಿಸಿದ ಸ್ಥಳದಲ್ಲೇ ಯುವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮುಸ್ಲಿಂ ಹುಡುಗ ಜಾಫರ್‌-ಹಿಂದೂ ಹುಡಗಿ ಚೈತ್ರಾ ಎಂಬುವರು ಮದುವೆಗೆ ಮುಂದಾಗಿದ್ದ ವೇಳೆ, ಮುಸ್ಲಿಂ ಯುವಕನ ಮೇಲೆ ಲವ್‌ ಜಿಹಾದ್‌ ಆರೋಪ ಹೊರಿಸಿದ ಹಿಂದುತ್ವ ಸಂಘಟನೆ ಕಾರ್ಯಕರ್ತರು ವಿವಾಹಕ್ಕೆ ತಡೆಯೊಡ್ಡಿದ್ದು, ಆತನಿಗೆ ಅವಾಚ್ಯ ಪದಗಳಿಂದ ನಿಂದಿಸಿ, ನಿನಗೆ ಹಿಂದೂ ಹುಡುಗಿ ಬೇಕಾ ಎಂದು ಆತನನ್ನು ಥಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಚೈತ್ರಾ ಅವರು, ನಾವಿಬ್ಬರು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇಬ್ಬರು ಇಷ್ಟಪಟ್ಟೆ ಮದುವೆಯಾಗುತ್ತಿದ್ದೇವೆ, ಮುಂದೆ ಚನ್ನಾಗಿ ಬಾಳುತ್ತೇವೆ ಅದನ್ನು ಕೇಳುವುದಕ್ಕೆ ಇವರುಗಳೆಲ್ಲಾ ಯಾರು ಎಂದು ಭಜರಂಗದಳದ ಕಾರ್ಯಕರ್ತರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಘಟನೆ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಿದರೆ, ಆ ದಿನ ಭಜರಂಗದಳದ ಕಾರ್ಯಕರ್ತರು ನನಗೆ ಏನಾದರು ಮಾಡುತ್ತಾರೆ ಎಂದು ಪೊಲೀಸರು ನನ್ನನ್ನು ಮನೆಗೆ ಕಳಿಸಲಿಲ್ಲ, ಅದರ ಬದಲು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು ಮತ್ತು ಹಲ್ಲೆ ಮಾಡಿ ಅವಾಚ್ಯಾವಾಗಿ ನಿಂದನೆ ಮಾಡಿದವರ ಮೇಲೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳದೆ ಹಾಗೆ ಕಳುಹಿಸಿದರು ಎಂದು ಚೈತ್ರಾ ಪೊಲೀಸ್‌ ಇಲಾಖೆ ವಿರುದ್ಧ ಅಸಮಧಾನಗೊಂಡರು.

ನಂತರ ಮಾಧ್ಯಮದವರ ಮುಂದೆಯೇ ಹಲ್ಲೆ ನಡೆದ ಸ್ಥಳವಾದ ಚಿಕ್ಕಮಗಳೂರಿನ ಸಬ್‌ ರಿಜಿಸ್ಟ್ರಾರ್ ಕಛೇರಿ ಎದುರಲ್ಲೇ ಹಾರ ಬದಲಿಸುಕೊಂಡು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಿ.ಟಿ ರವಿ ವಿರುದ್ಧ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಮನವಿ
ಚಿಕ್ಕಮಗಳೂರು: 2023 ರ ವಿಧಾನಸಭೆ ಚುನಾಚಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿಯ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವಂತೆ ಚಿಕ್ಕಮಗಳೂರು ಕಿಸಾನ್ ಕಾಂಗ್ರೆಸ್ ಮನವಿ ಮಾಡಿದೆ.

ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಾಕ್ರಮದಲ್ಲಿ ಕಿಸಾನ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚ್ಚಿನ್ ಮೀಗಾ ನೇತೃತ್ವದ ತಂಡ ಸಿದ್ದರಾಮಯ್ಯ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದರು.

ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಸಿ.ಟಿ.ರವಿಯವರ ಆಡಳಿತದ ಬಗ್ಗೆ ಜನರು ಬೇಸತ್ತಿದ್ದಾರೆ. ಈ ಕುರಿತು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದಲೇ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವುದರ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎಂಬುದು ಇನ್ನೂ ನಿಗೂಢ ಇರುವಾಗ ಸಚ್ಚಿನ್ ಮೀಗಾ ಅವರ ಮನವಿ ಬಹಳಷ್ಟು ಚರ್ಚೆಗೆ ಒಳಪಟ್ಟಿದೆ.