chilume samsthe – Peepal Media

ಚಿಲುಮೆ ಹಗರಣ : ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ
ಮತದಾರರ ಪಟ್ಟಿಯ ಖಾಸಗಿ ವಿಷಯ ಸಂಗ್ರಹ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯ ಮೇಲಿನ ಆರೋಪದ ಬಗ್ಗೆ ಪೂರ್ಣ ಪ್ರಮಾಣದ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಸಧ್ಯ ಈ ಆದೇಶದಿಂದ ರಾಜ್ಯ ಬಿಜೆಪಿ ನಾಯಕರಲ್ಲಿ ನಡುಕ ಶುರುವಾಗಿದೆ ಎಂದು ಕಾಂಗ್ರೆಸ್ ನಾಯಕರು ನುಡಿದಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಮತದಾರರ ಖಾಸಗಿ ವಿಷಯ ಸಂಗ್ರಹಕ್ಕೆ ಅವಕಾಶ ನೀಡಿ, ಕರ್ತವ್ಯಲೋಪ ಎಸಗಿರುವ ಸಂಬಂಧ ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಕೋರಿದ್ದರು. ಈ ಸಂಬಂಧ ಪೂರ್ಣ ಪ್ರಮಾಣದ ತನಿಖೆ ನಡೆಸಿ, ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಲುಮೆ ಎಂಬ ಸಂಸ್ಥೆಯು ಮತದಾರರ ಜಾಗೃತಿ ಹಾಗೂ ಪರಿಷ್ಕರಣೆ ಹೆಸರಿನಲ್ಲಿ ಮತದಾರರ ಮಾಹಿತಿ ಸಂಗ್ರಹ ಮಾಡಿದೆ ಎಂದು ಖಾಸಗಿ ವಾಹಿನಿ ತನಿಖಾ ವರದಿ ಪ್ರಕಟಿಸಿತ್ತು. ಈ ವರದಿಯ ಆಧಾರದ ಮೇಲೆ ಬಿಜೆಪಿ ಪಕ್ಷದ ಘಟಾನುಘಟಿ ನಾಯಕರ ಹೆಸರುಗಳು ಕೇಳಿ ಬಂದಿತ್ತು.

ಬಿಬಿಎಂಪಿಯಿಂದ ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿ) ಎಂದು ಗುರುತಿನ ಚೀಟಿ ಹಾಕಿಕೊಂಡು ಈ ಅಕ್ರಮ ಎಸೆಯಲಾಗಿದೆ. ಈ ಅಕ್ರಮದ ಹಿಂದೆ ಸಚಿವರು ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯ ಸಮ್ಮತ ಸಿಗುವುದು : ಬೊಮ್ಮಾಯಿ
ಬೆಂಗಳೂರು: ನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯ ಸಮ್ಮತ ಸಿಗುವುದು, ಎಲ್ಲಿಂದಲೋ ಬಂದವರನ್ನು ಎಲ್ಲೋ ಸೇರಿಸಿ ಗೆಲ್ಲುವ ಇಷ್ಟು ದಿನದ ತಂತ್ರ ಬಂದ್‌ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರದಂದು  ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಅರಿವು ಕಾರ್ಯಕ್ರಮ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಎಂದು ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿಯನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ, ಹಲವು ಕಾಂಗ್ರೆಸ್‌ ಮುಖಂಡರು ಸೇರಿ ನಡೆದಿರುವ ಅಕ್ರಮದ ವಿರುದ್ದ ಕೇಂದ್ರ ಚುನಾವಣೆ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿಯವರು ಮಾಧ್ಯದವರ ಜೊತೆ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿದ ಬೊಮ್ಮಯಿಯವರು, ʼ2013ರಿಂದಲೂ ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಇತರ ಜವಾಬ್ದಾರಿಗಳನ್ನು ವಹಿಸಿದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದೇನೆ. ನಿರಾಧಾರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ನ ಈ ಪ್ರಯತ್ನ, ಮುಂದಿನ ದಿನಗಳಲ್ಲಿ ಅವರಿಗೆ ತಿರುಗುಬಾಣವಾಗಲಿದೆʼ ಎಂದು ಹೇಳಿದ್ದಾರೆ.

ʼಈ ಚಿಲುಮೆ ಸಂಸ್ಥೆ ಬಗ್ಗೆ ಯಾರು,  ಏನು ಆದೇಶ ಕೊಟ್ಡಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿ ಸತ್ಯಾಸತ್ಯತೆ ಹೊರಗೆ ಬರಲಿ. ಜಾಗೃತಿ ಮೂಡಿಸಬೇಕೆಂದು ನಾವು ಆದೇಶ ಕೊಟ್ಟಿದ್ದೀವಿ ಮತ್ತು ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧ ಇರಬಾರದು ಅಂತ ಹೇಳಿದ್ದೆವು. ಆದರೆ ಅವರು ಹೇಳಿರುವ ಆದೇಶದ ಪ್ರಕಾರ ಎಲೆಕ್ಷನ್‌ ಕಮೀಷನ್‌ ಜವಬ್ದಾರಿಯನ್ನು ಪ್ರೈವೇಟ್‌ಗೆ ಕೊಟ್ಟಿರುತ್ತಾರೆ. ಅದನ್ನೇ ತನಿಖೆ ಮಾಡಿ ಅಂತ ಹೇಳುವುದು ಅಕ್ಷಮ್ಯ ಅಪರಾಧವಾಗಿದೆʼ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ʼವೋಟರ್‌ ಡಿವಿಷನ್‌ ಅಲ್ಲಿ ಸೇರಿಸುವುದು ತೆಗೆಯುವುದು ಎಲ್ಲವೂ ಎಲೆಕ್ಷನ್‌ ಕಮೀಷನ್‌ ಮಾಡುತ್ತದೆ. ಆ ಕೆಲಸ ನಾವು ಮಾಡುವುದು ಅಲ್ಲವೇ ಅಲ್ಲ. ಸುಮ್ಮನೆ ರಾಜಕೀಯ ಪ್ರಯುಕ್ತವಾದ ಆರೋಪವನ್ನು ಮಾಡುತ್ತಿದ್ದಾರೆʼ ಎಂದು ತಿಳಿಸಿದರು.

ʼನಕಲಿ ಮತದಾರರನ್ನು ತೆಗೆದರೆ ಮಾತ್ರ ನ್ಯಾಯ ಸಮ್ಮತ ಸಿಗುವುದು, ಎಲ್ಲಿಂದಲೋ ಬಂದವರನ್ನು ಎಲ್ಲೋ ಸೇರಿಸಿ ಗೆಲ್ಲುವ ಇಷ್ಟು ದಿನದ ತಂತ್ರ ಬಂದ್‌ ಆಗುತ್ತದೆʼ ಎಂದು ಮಾತನಾಡಿದ್ದಾರೆ.