cinema news – Peepal Media

‘ವಾಸಂತಿ ನಲಿದಾಗ’ ಬಿಡುಗಡೆ ದಿನಾಂಕ ಮುಂದೂಡಿಕೆ
ಬೆಂಗಳೂರು: ‘ವಾಸಂತಿ ನಲಿದಾಗ’ ಎಂಬ ಕಾಲೇಜ್ ಯೂತ್ ಲವ್ ಸ್ಟೋರಿ ಒಳಗೊಂಡ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಟೈಟಲ್ ಮೂಲಕವೇ ಸಖತ್ ಸುದ್ದಿಯಲ್ಲಿರುವ ಚಿತ್ರ ಈ ಹಿಂದೆ ‘ಕೇಳ್ರಪ್ಪೋ ಕೇಳಿ’ ವೀಡಿಯೋ ಸಾಂಗ್ ಬಿಡುಗಡೆ ಮಾಡಿ ಸೌಂಡ್ ಮಾಡಿತ್ತು. ಇದೀಗ ನಾಗೇಂದ್ರ ಪ್ರಸಾದ್ ಬರೆದ ‘ಕಾಲೇಜ್ ಗೆ ಕಾಲು ಇಟ್ಟರೆ ಕನಸುಗಳು ಜೋರು’ ಎಂಬ ಮತ್ತೊಂದು ಯೂತ್ ಫುಲ್ ಸಾಂಗ್ ರಿಲೀಸ್ ಮಾಡಿದೆ.

ಅಂದಹಾಗೆ ಈ ಚಿತ್ರ ಅಕ್ಟೋಬರ್ 14ರಂದೇ ಬಿಡುಗಡೆಯಾಗಬೇಕಿತ್ತು. ಆದ್ರೆ ಚಿತ್ರಮಂದಿರದ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಇದೆಲ್ಲದರ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಂದು ಸಿನಿಮಾ ತಂಡ ಮಾಧ್ಯಮದೆದುರು ಬಂದಿತ್ತು.

ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ ಅಕ್ಟೋಬರ್ 14ರಂದೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಕ್ಕಾಗಿ ಪ್ರಚಾರ ಕಾರ್ಯವನ್ನು ಮಾಡಿ ಮುಗಿಸಿದ್ದೆವು. ಆದ್ರೆ ಚಿತ್ರಮಂದಿರದ ಸಮಸ್ಯೆಯಿಂದ ಅಕ್ಟೋಬರ್ 14ರಂದು ಬಿಡುಗಡೆ ಮಾಡಲಾಗಲಿಲ್ಲ. ಇದು ಸ್ಟಾರ್ ಸಿನಿಮಾ ಅಲ್ಲ ಹೊಸಬರ ಸಿನಿಮಾ ಆದ್ರಿಂದ ದೊಡ್ಡ ಸಿನಿಮಾದ ಜೊತೆ ಕಾಂಪಿಟೇಶನ್ ಬೇಡ ಎಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ತರಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ, ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಲಿದ್ದೇವೆ ಎಂದು ರವೀಂದ್ರ ವೆಂಶಿ ತಿಳಿಸಿದ್ರು.

ನಾಯಕ ರೋಹಿತ್ ಶ್ರೀಧರ್ ಮಾತನಾಡಿ ಅಕ್ಟೋಬರ್ 14ರಂದು ನಮ್ಮ ಸಿನಿಮಾ ಬಿಡುಗಡೆ ಆಗಬೇಕಿತ್ತು. ಚಿತ್ರಮಂದಿರದಲ್ಲಿ ಕಾಂತಾರ, ಗುರು ಶಿಷ್ಯರು ಸಿನಿಮಾಗಳು ಚೆನ್ನಾಗಿ ಓಡುತ್ತಿದ್ದರಿಂದ ಸಿನಿಮಾ ಬಿಡುಗಡೆಯನ್ನು ಹಿಂತೆಗೆದುಕೊಂಡ್ವಿ. ಡಿಸೆಂಬರ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಲ್ಲರೂ ಸಪೋರ್ಟ್ ಮಾಡಿ ಎಂದು ತಿಳಿಸಿದ್ದರು.

ಪುಟಾಣಿ ಸಫಾರಿ, ವರ್ಣಮಯ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ರವೀಂದ್ರ ವೆಂಶಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಸಿನಿಮಾವಿದು. ಹೊಸ ಪ್ರತಿಭೆಗಳೊಂದಿಗೆ ಕಾಲೇಜ್ ಯೂತ್ ಲವ್ ಸ್ಟೋರಿ ಸಬ್ಜೆಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸಿನಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಮೊದಲೇ ಹೇಳಿದ ಹಾಗೆ ವಾಸಂತಿ ನಲಿದಾಗ ಚಿತ್ರ ನವ ಹಾಗೂ ಯುವ ಪ್ರತಿಭೆಗಳಿಂದ ಕೂಡಿದೆ. ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಕೆ. ಎನ್ ಶ್ರೀಧರ್ ಜೇನುಗೂಡು ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಶ್ರೀ ಗುರು ಸಂಗೀತ ನಿರ್ದೇಶನ, ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣ ಚಿತ್ರಕ್ಕಿದೆ. ಹಾಡುಗಳಿಗೆ ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯವಿದೆ. ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಒಳಗೊಂಡ ಅನುಭವಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಅಮೇಜಾನ್ ಪ್ರೈಮ್ ಗೆ ಲಗ್ಗೆ ಇಟ್ಟ ರಾಷ್ಟ್ರಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾ
ಬೆಂಗಳೂರು: ಗೂಗ್ಲಿ, ರಣವಿಕ್ರಮ, ನಟಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಅಂಗಳಕ್ಕೆ ನೀಡಿರುವ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್, ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣವನ್ನು ಆರಂಭಿಸಿರುವ ಇವರು ನಿರ್ಮಾಣ ಮಾಡಿದ ಮೊದಲ ಸಿನಿಮಾದಲ್ಲೇ ಸಂಚಲನ ಸೃಷ್ಟಿಸಿದ್ದರು.

ಚೊಚ್ಚಲ ನಿರ್ಮಾಣದ ‘ಡೊಳ್ಳು’ ಸಿನಿಮಾ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅಂತರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಕನ್ನಡಿಗರ ಕೀರ್ತಿಯನ್ನು ಹೆಚ್ಚಿಸಿತ್ತು.

ಹೀಗೆ ಎಲ್ಲರ ಹೆಮ್ಮೆಗೆ ಪಾತ್ರವಾದ ‘ಡೊಳ್ಳು’ ಸಿನಿಮಾ ಚಿತ್ರಮಂದಿರದಲ್ಲೂ ಸಿನಿ ಪ್ರೇಮಿಗಳ ಮನಗೆದ್ದಿತ್ತು. ಇದೀಗ ಒಟಿಟಿಗೂ ಲಗ್ಗೆ ಇಟ್ಟಿದ್ದು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿದೆ.

ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿಟ್ಟುಕೊಂಡು ಹೆಣೆದ ಕಥೆ ಈ ಚಿತ್ರದ ಜೀವಾಳ. ಒಡೆಯರ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯುದರೊಂದಿಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳ ನಡುವೆ ಜಾನಪದ ಕಲೆಯ ಕಾಳಜಿ ಕುರಿತಾದ ಈ ಚಿತ್ರ ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಸಿನಿಮಾ.

ಚಿತ್ರದಲ್ಲಿ ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಒಳಗೊಂಡ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅನಂತ್ ಕಾಮತ್ ಎಂ ಸಂಗೀತ, ಅಭಿಲಾಶ್ ಕಲಥಿ ಕ್ಯಾಮೆರಾ ನಿರ್ದೇಶನ, ಬಿ ಎಸ್ ಕೆಂಪರಾಜು ಸಂಕಲನ ಡೊಳ್ಳು ಚಿತ್ರಕ್ಕಿದೆ. ಚಿತ್ರಮಂದಿರದಲ್ಲಿ ಡೊಳ್ಳು ಸಿನಿಮಾ ಮಿಸ್ ಮಾಡಿಕೊಂಡವರು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದಾಗಿದೆ.

ಸಮಂತಾ ‘ಯಶೋದಾ’ ಗಾಥೆ, ನವೆಂಬರ್ 11ಕ್ಕೆ ಚಿತ್ರ ಬಿಡುಗಡೆ
ಸಮಂತಾ ಅಭಿನಯದ ‘ಯಶೋದಾ’ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಹಲವು ದಿನಗಳಿಂದ ಇತ್ತು. ಈಗ ಬಿಡುಗಡೆ ದಿನಾಂಕವು ಕೊನೆಗೂ ಘೋಷಣೆಯಾಗಿದ್ದು, ನವೆಂಬರ್ 11ರಂದು ಜಗತ್ತಿನಾದ್ಯಂತೆ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.

ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ಅವರು ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ನಡಿ 14ನೇ ಚಿತ್ರವಾಗಿ ನಿರ್ಮಿಸುತ್ತಿದ್ದರೆ, ಹರಿ-ಹರೀಶ್ ಅವರು ನಿರ್ದೇಶನ ಮಾಡಿದ್ದಾರೆ.

ಇದೊಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಎನ್ನುವ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್, ಈ ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ಎಮೋಷನ್ಗಳು ಸಮವಾಗಿ ಬೆರೆತಿದ್ದು, ‘ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವ ಶಕ್ತಿ ಹೊಂದಿದೆ. ಸಮಂತಾ ಈ ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಅವರು ಬೆವರು ಮತ್ತು ರಕ್ತವನ್ನೇ ಹರಿಸಿದ್ದಾರೆ ಎಂದರೆ ತಪ್ಪಿಲ್ಲ. ಬರೀ ತೆಲುಗು ಅವತರಣಿಕೆಯಷ್ಟೇ ಅಲ್ಲ, ತಮಿಳಿನಲ್ಲೂ ಅವರು ಡಬ್ಬಿಂಗ್ ಮಾಡಿದ್ದಾರೆ. ಇನ್ನು. ಮಣಿಶರ್ಮ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಹೈಲೈಟ್ ಆಗಿ ಮೂಡಿಬಂದಿದೆ. ಈಗಾಗಲೇ ತೆಲುಗು ಚಿತ್ರದ ಅವತರಣಿಕೆಯು ಸೆನ್ಸಾರ್ ಆಗಿತ್ತು, ಸದ್ಯದಲ್ಲೇ ಬೇರೆ ಭಾಷೆಗಳ ಸೆನ್ಸಾರ್ ಆಗಲಿದೆ. ತಾಂತ್ರಿಕ ಸೇರಿದಂತೆ ಯಾವುದೇ ವಿಷಯದಲ್ಲೂ ರಾಜಿಯಾಗದೇ, ಈ ಚಿತ್ರವನ್ನು ಅದ್ದೂರಿ ಬಜೆಟ್ ನಿರ್ಮಿಸಲಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಹೊಸ ಶೈಲಿಯ ಸಿನಿಮಾಗಳಿಗೆ ಹಾತೊರೆಯುತ್ತಿರುವ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಿರೀಕ್ಷೆ ಇದೆ. ಯಶೋದಾ, ನವೆಂಬರ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.

ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಯಶೋದಾ’ ಚಿತ್ರಕ್ಕೆ ಎಂ. ಸುಕುಮಾರ್ ಛಾಯಾಗ್ರಹಣ ಮಾಡಿದ್ದು, ಪುಲಗಂ ಚಿನ್ನಾರಾಯಣ ಮತ್ತು ಡಾ ಚಲ್ಲ ಭಾಗ್ಯಲಕ್ಷ್ಮೀ ಅವರ ಸಂಭಾಷಣೆ ಮತ್ತು ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

‘ಏಕ್ ಲವ್ ಯಾ’ ಖ್ಯಾತಿಯ ನಟ ರಾಣಾನ ಎರಡನೇ ಸಿನಿಮಾ
‘ಏಕ್ ಲವ್ ಯಾ’ ಸಿನಿಮಾ ಖ್ಯಾತಿಯ ನಟ ರಾಣಾ ಎರಡನೇ ಸಿನಿಮಾ ಯಾರ ಜೊತೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೂ ಸಿಕ್ಕಾಗಿದೆ. ಪ್ರೇಮ್ ಶಿಷ್ಯ ವಿಜಯ್ ಈಶ್ವರ್ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದು, ಮೊದಲ ಸಿನಿಮಾವನ್ನು ರಾಣಾಗೆ ನಿರ್ದೇಶನ ಮಾಡುತ್ತಿದ್ದಾರೆ. ರಾಣಾ ಹುಟ್ಟುಹಬ್ಬದ ದಿನ ಚಿತ್ರತಂಡ ಮೊದಲ ಬಾರಿಗೆ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ರಾಣಾಗೆ ಶುಭ ಕೋರಿದೆ.

‘ಏಕ್ ಲವ್ ಯಾ’ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಾಣಾ ತಮ್ಮ ಎರಡನೇ ಸಿನಿಮಾ ಮೂಲಕ ಈ ಬಾರಿಯಾದರೂ ಸಿನಿರಸಿಕರ ಮನಗೆಲ್ಲಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚಲಿರುವ ರಾಣಾ ಸಿನಿಮಾಗಾಗಿ ಭರ್ಜರಿ ಸಿದ್ದತೆ ನಡೆಸುತ್ತಿದ್ದಾರೆ. ಪೋಸ್ಟರ್ ಕೂಡ ಇಂಟ್ರಸ್ಟಿಂಗ್ ಆಗಿದ್ದು, ಶಾನ್ವಿ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಪ್ರೇಮ್ ಜೊತೆ ಸಹಾಯಕ ನಿರ್ದೇಶಕನಾಗಿ, ಬರಹಗಾರನಾಗಿ ದುಡಿದ  ಅನುಭವ ಇರುವ ವಿಜಯ್ ಈಶ್ವರ್ ಗೆ ಚಿತ್ರರಂಗದಲ್ಲಿ ಎಂಟು ವರ್ಷಗಳ ಅನುಭವವಿದೆ. ಮೊದಲ ಬಾರಿಗೆ ಕಥೆ ಬರೆದು ಸಿನಿಮಾ ನಿರ್ದೇಶನ ಸಾಹಸಕ್ಕೆ ಕೈ ಹಾಕಿರುವ ವಿಜಯ್ ಈಶ್ವರ್ ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಮಾಸ್ ಸಬ್ಜೆಕ್ಟ್ ಒಳಗೊಂಡ ಚಿತ್ರದ ಟೈಟಲ್  ಸದ್ಯದಲ್ಲೇ ರಿವೀಲ್ ಆಗಲಿದೆ.

ಚಿತ್ರದಲ್ಲಿ ರಾಣಾ ಲುಕ್ ಕಂಪ್ಲೀಟ್ ಡಿಫ್ರೆಂಟ್ ಆಗಿರಲಿದ್ದು,  ಬಿಡುಗಡೆಯಾಗಿರುವ ಥೀಮ್ ಪೋಸ್ಟರ್ ಕೂಡ ಅದನ್ನೇ  ಹೇಳುತ್ತಿದೆ. ಬಿಗ್ ಬಜೆಟ್ ನಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟರೊಬ್ಬರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರ ಗೆಸ್ಟ್ ಅಪಿಯರೆನ್ಸ್ ಕೂಡ ಸಿನಿಮಾದಲ್ಲಿರಲಿದೆ ಎನ್ನುತ್ತಾರೆ ನಿರ್ದೇಶಕರು. ಸಿನಿಮಾ ಟೈಟಲ್  ತಾಂತ್ರಿಕ ವರ್ಗ,  ಎಲ್ಲದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಡಾಲಿ, ಸತ್ಯದೇವ್ ಚಿತ್ರಕ್ಕೆ ನಾಯಕಿ ಫಿಕ್ಸ್
ಪ್ರಿಯಾ ಭವಾನಿ ಶಂಕರ್ ಮೊದಲ ತೆಲುಗು ಚಿತ್ರ

ಡಾಲಿ ಧನಂಜಯ್, ಸತ್ಯ ದೇವ್ ನಟನೆಯ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಇಬ್ಬರ ಸಿನಿ ಕೆರಿಯರ್ ನ 26ನೇ ಸಿನಿಮಾವಾಗಿದ್ದು, ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದ್ದು, ಚಿತ್ರತಂಡವನ್ನು ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಸೇರಿಕೊಂಡಿದ್ದಾರೆ.

ಹೌದು, ಧನಂಜಯ್, ಸತ್ಯದೇವ್ ಸಿನಿಮಾಗೆ ನಾಯಕಿಯರ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಇದೀಗ ಪ್ರಿಯಾ ಭವಾನಿ ಶಂಕರ್ ಸಿಕ್ಕಿದ್ದಾರೆ. ‘ಓಹ್ ಮನಪೆಣ್ಣೆ’, ‘ಬ್ಲಡ್ ಮನಿ’, ‘ತಿರುಚಿತ್ರಬಾಲಂ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಭವಾನಿ ಶಂಕರ್ ಗಿದು ತೆಲುಗಿನಲ್ಲಿ ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಪ್ರಿಯಾ. ಚಿತ್ರದ ಇನ್ನೊಬ್ಬ ನಟಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ ಚಿತ್ರತಂಡ.

ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.  ಕ್ರೈಮ್ ಆಕ್ಷನ್ ಎಂಟಟೈನರ್ ಕಥಾಹಂದರ ಒಳಗೊಂಡಿದ್ದು, ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಸಾಹಸ ಚಿತ್ರಕ್ಕಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಮಾಡಲಿದೆ.

ಬಿಗ್ ಬಾಸ್‌ನಲ್ಲೂ ಹೆಡ್ ಬುಷ್ ಸದ್ದು : ಬೆಲ್ ಬಾಟಂ ನಲ್ಲಿ ಕಿಚ್ಚ ಸುದೀಪ್!
ಹೆಡ್ ಬುಷ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಡಾಲಿ ಧನಂಜಯ್ ಅವರು ನಿನ್ನೆ ಭಾನುವಾರ ಬಿಗ್ ವಾಸ್ ಸೀಸನ್ 9 ವೇದಿಕೆಗೆ ಅತಿಥಿಯಾಗಿ ಬಂದಿದ್ದರು. ಕಿಚ್ಚ ಸುದೀಪ್ ಹೆಡ್ ಬುಷ್ ಎಂದರೆ ಏನು? ಎಂದು ಕೇಳಿದಾಗ, ಡಾಲಿ ಧನಂಜಯ ಮಾತನಾಡಿ “ಹೆಡ್ ಮತ್ತು ಟೇಲ್ ಎಂದು ಅರ್ಥ. ಲೈಫ್ ಅನ್ನೋದು ಒಂದು ಗ್ಯಾಂಬ್ಲಿಂಗ್ ಇದ್ದಹಾಗೆ ಎರಡು ಶೇಡ್ಗಳು ಇರ್ತದೆ ಎಂದು ಹೇಳಿದರು.

ನೆಗೆಟಿವ್ ಕ್ಯಾರೆಕ್ಟರ್ ಅಷ್ಟು ಇಷ್ಟವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಾಲಿ, ಹೌದು, “ರಿಯಲ್ ಲೈಫ್‌ನಲ್ಲಿ ಮಾಡದೇ ಇರುವುದನ್ನು ಮಾಡಲಿಕ್ಕೆ ಆಗುತ್ತದೆ” ಎಂದು ಹೇಳಿದರು. ಅದಕ್ಕೆ ಸುದೀಪ್ ಮಾತನಾಡಿ “ರಿಯಲ್ ಲೈಫ್‌ನಲ್ಲಿ ಎಲ್ಲವೂ ಮಾಡುತ್ತೀರಲ್ಲ”ಎಂದು ಕಾಲೆಳೆದಿದ್ದಾರೆ.

ಡಾಲಿ ಧನಂಜಯ್ ರಾತ್ರೆ ಎಷ್ಟು ಹೊತ್ತು ಎಚ್ಚರ ಇರ್ತಾರೆ? ಬೆಳಿಗ್ಗೆ ಎಷ್ಟು ಗಂಟೆಗೆ ಏಳ್ತಾರೆ? ಎಂದು ಕೇಳಿದ ಪ್ರಶ್ನೆಗೆ, ಪ್ರತಿ ದಿನ ಬೇಗ ಏಳ್ತಿನಿ, ರಾತ್ರೆ ತಡವಾಗಿ ಮಲ್ಗೊದು ಅಭ್ಯಾಸ ಆದರೆ ರಾತ್ರಿ ಸೆಲೆಬ್ರೇಷನ್ ಇದ್ದರೆ ಮಲ್ಗೊದು ಲೇಟು ಎದ್ದೇಳೊದು ಲೇಟಾಗುತ್ತೆ ಎಂದು ಹೇಳಿದ್ದಾರೆ‌. ವಾರದಲ್ಲಿ ಆರು ದಿನ ಸೆಲೆಬ್ರೆಷನ್ ಇರತ್ತ ಎಂದು ಸುದೀಪ್ ಡಾಲಿ ಧನಂಜಯ್ ಅವರ ಕಾಲೆಳೆದಿದ್ದಾರೆ.‌

ಮತ್ತೊಂದು ವಿಶೇಷ ಏನೆಂದರೆ, ಡಾಲಿ ಧನಂಜಯ ಮತ್ತು ಕಿಚ್ಚ ಸುದೀಪ್ ಇಬ್ಬರು ಬೆಲ್ ಬಾಟಂನ ಡ್ರೆಸ್‌ನಲ್ಲಿ ಮಿಂಚಿದರು. ನಿಮ್ಮ ಚಿತ್ರಕ್ಕೆ ನಾನು ಬೆಲ್ ಬಾಟಂ ಹಾಕುವ ಮೂಲಕ ಸಪೋರ್ಟ್ ಮಾಡ್ತಿದ್ದೀನಿ ನೋಡಿ ಎಂದು ಸುದೀಪ್ ಡಾಲಿಗೆ ಕಿಚಾಯಿಸಿದರು.

ಕೊನೆಯಲ್ಲಿ ಡಾಲಿ ಧನಂಜಯ ಅವರು, ಚಿತ್ರಮಂದಿರಗಳಲ್ಲೇ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

Love you sir @KicchaSudeep , it’s always good to see you, so much love you give, thanks for the stage and all those kind and inspiring words.

Thanks @ColorsKannada for providing #Bigboss stage to promote my film #HeadBush .#HeadBushOnOct21st pic.twitter.com/idYNkDCxAL
— Dhananjaya (@Dhananjayaka) October 17, 2022

ಹೆಡ್‌ ಬುಷ್‌ ಟ್ರೈಲರ್‌ ನಲ್ಲಿ ತಾಂತ್ರಿಕ ದೋಷ: ತಡವಾಗಿ ಟ್ರೈಲರ್‌ ಬಿಡುಗಡೆ
ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್‌ ಅಭಿನಯನದ ʼಹೆಡ್‌ ಬುಷ್‌ʼ ನಿನಿಮಾದ ಟ್ರೈಲರ್‌ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಟ್ರೈಲರ್‌ ಅನ್ನು ಭಾನುವಾರ ಸಂಜೆ ಪ್ರಸ್ತುತಪಡಿಸುತ್ತೆವೆ ಎಂದು ʼಹೆಡ್‌ ಬುಷ್‌ʼ ಚಿತ್ರತಂಡ ತಿಳಿಸಿದೆ.

ಈ ಕುರಿತು ನಟ ಡಾಲಿ ಧನಂಜಯ್‌ ಅವರು ಸಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ʼಹೆಡ್‌ ಬುಷ್‌ʼ ಸಿನಿಮಾದ ಟ್ರೈಲರ್‌ ಅನ್ನು ಇಂದು ಬೆಳಗ್ಗೆ 11.05 ಕ್ಕೆ ನಿಮ್ಮ ಮುಂದೆ ಪ್ರಸ್ತುತಪಡಿಸಬೇಕಿತ್ತು. ಆದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ಇಂದು ಸಂಜೆ  5.55 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ತಿಳಿಸಿದ್ದು, ತಡವಾಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ನಟ ಧನಂಜಯ್‌ ಮತ್ತು ಯೋಗೇಶ್‌

ಇಡೀ ಹೆಡ್‌ ಬುಷ್‌ ಚಿತ್ರ ತಂಡವು ಚಿತ್ರದ ಟ್ರೈಲರ್‌ ಅರ್ಪಿಸುವ ಮೊದಲು, ಬಂಡಿ ಮಾಕಾಳಮ್ಮನ ಆಶೀರ್ವಾದದೊಂದಿಗೆ ಪ್ರಯಾಣವನ್ನು ಶುರು ಮಾಡಿ, ಸಂಜೆ ದಾವಣಗೆರೆಗೆ ಭೇಟಿ ನೀಡಲಿದೆ.

‘ಅಜಯಂತೆ ರಂದಂ ಮೋಷನಂ’- 3ಡಿ ಮೋಡಿ
ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್, ನಟಿ ಕೃತಿ ಶೆಟ್ಟಿ ಅಭಿನಯದ ನೂತನ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ’ ಇಂದು ಸೆಟ್ಟೇರಿದೆ. ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಇದಾಗಿದ್ದು, 3ಡಿಯಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿದೆ.

ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ.  ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಮೂರು ಯುಗಗಳನ್ನು ಸುತ್ತುವ ಕಥೆ ಚಿತ್ರದಲ್ಲಿದ್ದು ಟೊವಿನೋ ಥಾಮಸ್ ಮಣಿಯನ್, ಅಜಯನ್, ಕುಂಜಿಕೇಲು ಎಂಬ ಮೂರು ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಈ ಚಿತ್ರ ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ ಸ್ಪೆಷಲ್ ಆಗಿದ್ದು ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.

ಚಿತ್ರದ ತಾಂತ್ರಿಕ ಬಳಗ ಅನುಭವಿ ತಂತಜ್ಞರಿಂದ ಕೂಡಿದ್ದು,  ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ದೀಪು ನೈನನ್ ಥಾಮಸ್ ಸಂಗೀತ ನಿರ್ದೇಶನ, ಜೋಮನ್ ಟಿ ಜಾನ್ ಛಾಯಾಗ್ರಹಣ, ಶಮೀರ್ ಮೊಹಮ್ಮದ್ ಸಂಕಲನ ಚಿತ್ರಕ್ಕಿದೆ.

‘ಗಜರಾಮ’ ನ ಅಂತಿಮ ಹೋರಾಟ: ರಾಜವರ್ಧನ್, ಕಬೀರ್ ಸಿಂಗ್ ನಡುವೆ ಫೈಟ್
ಮ್ಯಾಸಿವ್ ಸ್ಟಾರ್ ಅಂತಲೇ ಹೆಸರು ಮಾಡಿರುವ ರಾಜವರ್ಧನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಮಾಸ್ ಆಕ್ಷನ್ ಸಿನಿಮಾ ‘ಗಜರಾಮ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಮೂಲಕ ಗಮನ ಸೆಳೆದ ಚಿತ್ರತಂಡ ಈಗ ಸಿನಿಮಾದ ಆಕ್ಷನ್ ಸೀನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ನಾಯಕ ರಾಜವರ್ಧನ್ ಹಾಗೂ ತೆಲುಗಿನ ಖ್ಯಾತ ಖಳನಟ ಕಬೀರ್ ಸಿಂಗ್ ನಡುವಿನ ಹೈ ವೋಲ್ಟೇಜ್ ಆಕ್ಷನ್ ಸೀನ್ ಚಿತ್ರೀಕರಣ ಬೆಂಗಳೂರಿನ ಎಚ್ ಎಂಟಿ ಯಲ್ಲಿ ನಡೆಯುತ್ತಿದೆ. ಆಕ್ಷನ್ ಸೀನ್ ಗಳಲ್ಲಿ ನಾಯಕ ರಾಜವರ್ಧನ್ ಜೊತೆ ಕಬೀರ್ ಸಿಂಗ್ ಕಾಳಗ ಜೋರಾಗಿದ್ದು, ಹತ್ತು ದಿನಗಳಿಂದ ಸಾಹಸ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ.

ಈ ವೇಳೆ ಮಾತನಾಡಿದ ಕಬೀರ್ ಸಿಂಗ್ ಚಿತ್ರದಲ್ಲಿ ನನ್ನ ಪಾತ್ರ ಇಷ್ಟವಾಯಿತು. ರೌಡಿ ಪಾತ್ರ ನನ್ನದು. ಬೇರೆ ಭಾಷೆಯಿಂದ ಇಲ್ಲಿಗೆ ಬಂದಿದ್ದೇನೆ. ಸಿನಿಮಾಗೆ ಭಾಷೆಗಳ ಮಿತಿಯಿಲ್ಲ. ಸದ್ಯ ಹಿಂದಿ ವೆಬ್ ಸಿರೀಸ್ ನಲ್ಲೂ ನಟಿಸುತ್ತಿದ್ದೇನೆ. ಯಾವ ಭಾಷೆಯಾದರೂ ನಾನು ನಟಿಸುತ್ತೇನೆ. ‘ಗಜರಾಮ’ ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇದೆ ಎಂದು ತಿಳಿಸಿದ್ರು.

ನಾಯಕ ನಟ ರಾಜವರ್ಧನ್ ಮಾತನಾಡಿ ಚಿತ್ರತಂಡ ಸಾಹಸ ದೃಶ್ಯಗಳನ್ನು ಸೆರೆ ಹಿಡಿಯುವುದರಲ್ಲಿ ಬ್ಯುಸಿಯಾಗಿದೆ. ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಒಳ್ಳೆಯ ಕಥೆ ಹಾಗೂ ಪ್ರೊಡಕ್ಷನ್ ಹೌಸ್ ಸಿಕ್ಕಿರೋ ಖುಷಿಯಿದೆ. ಇದು ಪಕ್ಕಾ ಕಮರ್ಶಿಯಲ್ ಸಿನಿಮಾ. ನಿರ್ದೇಶಕರು ಹೇಳಿದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇನೆ ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

ಚಿತ್ರದ ನಿರ್ದೇಶಕ ಸುನೀಲ್ ಕುಮಾರ್ ನಾನು ಅಂದುಕೊಂಡ ಹಾಗೆ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ನನ್ನ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವೆ. ‘ಗಜರಾಮ’ ಮಾಸ್ ಸಿನಿಮಾ. ಈ ಸಿನಿಮಾದಲ್ಲಿ ಸಂದೇಶ ಇದೆ. ಕ್ಲೈ ಮ್ಯಾಕ್ಸ್ ಫೈಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.

ಚಿತ್ರದಲ್ಲಿ ನಟ ಶಿಷ್ಯ ದೀಪಕ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಸಾಹಸ ದೃಶ್ಯಗಳಲ್ಲಿ ಭಾಗಿಯಾಗಿದ್ದ ದೀಪಕ್ ಮಾತನಾಡಿ ಚಿತ್ರದಲ್ಲಿ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದೇನೆ, ಸೆಕೆಂಡ್ ಲೀಡ್ ಕ್ಯಾರೆಕ್ಟರ್ ನನ್ನದು, ಪೂರ್ತಿ ಸಿನಿಮಾ ನಾನಿರುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

‘ಗಜರಾಮ’ ಚಿತ್ರಕ್ಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬಂತು ಬಂತು ‘ಅಂಬುಜಾ’ ಟೀಸರ್
ಶುಭಾ ಪೂಂಜಾ, ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಅಂಬುಜಾ’ ಸಿನಿಮಾ ಟೀಸರ್ ಹಾಗೂ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟೀಸರ್ ಕುತೂಹಲವನ್ನು ಹುಟ್ಟು ಹಾಕಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು  ಹೆಚ್ಚಿಸಿದೆ.

ಕ್ರೈಂ ಥ್ರಿಲ್ಲರ್ ಹಾರರ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿದ್ದು, ಮೊದಲ ಬಾರಿ ಸಿನಿಮಾ ನಿರ್ಮಾಣ ಸಾಹಸಕ್ಕೆ ಕೈ ಹಾಕಿರುವ ಇವರು ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಮಂತರಾಜು  ಚಿತ್ರವನ್ನು ನಿರ್ದೇಶಿಸಿದ್ದು, ಕೆಲವು ದಿನಗಳ ನಂತರ ಸಿನಿಮಾ ಮಾಡಿದ್ದ ಇವರಿಗೆ ಇದು ಎರಡನೇ ಸಿನಿಮಾ.

ನಿರ್ದೇಶಕ ಶ್ರೀನಿ ಅವರ ಜೊತೆ ಈ ಹಿಂದೆ ಕೆಲವು ದಿನಗಳ ನಂತರ ಸಿನಿಮಾ ಮಾಡಿದ್ದೆ, ಇದೀಗ ಅವರ ನಿರ್ದೇಶನದಲ್ಲಿ ಕ್ರೈಂ ಥ್ರಿಲ್ಲರ್ ಹಾರರ್ ಸಿನಿಮಾ ಅಂಬುಜಾದಲ್ಲಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ಕ್ರೈಂ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.

ನಟಿ ರಜಿನಿ ಮಾತನಾಡಿ ಸಿನಿಮಾ ತುಂಬಾ ವಿಶೇಷವಾಗಿದೆ ಹಾಗೆಯೇ ನನ್ನ ಪಾತ್ರ ಕೂಡ ಅಷ್ಟೇ ವಿಶೇಷವಾಗಿದೆ. ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ. ಚಿತ್ರೀಕರಣ ಸಮಯದಲ್ಲಿ ಅವರು ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವೂ ತುಂಬಾ ಖುಷಿ ಕೊಟ್ಟಿದೆ. ಲಂಬಾಣಿ ಪಾತ್ರ ಅಂದಾಗ ನನಗೆ ಬಹಳ ಖುಷಿ ಆಯ್ತು. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ಎಲ್ಲ ತುಂಬಾ ನೋವಾಗುತ್ತಿತ್ತು. ಆಮೇಲೆ ಅಡ್ಜೆಜ್ಟ್ ಆಯ್ತು. ಸಿನಿಮಾದ ಹಾಡು ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಸಂತಸ ಹಂಚಿಕೊಂಡ್ರು.

ಕಥೆ ಬರೆದಾಗ ಚೆನ್ನಾಗನ್ನಿಸಿತು, ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಅದಾದ ಮೇಲೆ ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಅವರು ಕೂಡ ಕಥೆ ತುಂಬಾ ಚೆನ್ನಾಗಿದೆ ಅಂದ್ರು. ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಸಿನಿಮಾಗೆ ಬೇಕಾದ ಪಾತ್ರಗಳು ಸಿಗುತ್ತ ಹೋಯಿತು. ಫೈನಲಿ ಒಂದೊಳ್ಳೆ ಸಿನಿಮಾ ರೆಡಿಯಾಗಿದೆ. ಪ್ರೇಕ್ಷಕರು ನೋಡಿ ಹರಸಬೇಕು. ‘ಅಂಬುಜಾ’ ಪಕ್ಕ ಕಮರ್ಶಿಯಲ್ ಸಿನಿಮಾವಾಗಿದ್ರೂ ಕೂಡ ಮನೆಮಂದಿಯೆಲ್ಲ ಕುಳಿತು ನೋಡಬಹುದು ಎಂದು ಚಿತ್ರದ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಶುಭಾ ಪೂಂಜಾ, ಪದ್ಮಜಾ ರಾವ್, ರಜಿನಿ, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪ್ರಿಯಾಂಕ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್ ಕೆ ಸಿನಿಮಾಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ವಿಜಯ್ ಎಂ ಕುಮಾರ್ ಸಂಕಲನ, ಮುರಳೀಧರ್ ಎಂ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.