cinema – Peepal Media

ಜನಾಂಗೀಯ ದ್ವೇಷದ ಹಿಂದಿನ ಕಾರಣಗಳನ್ನು ಹುಡುಕುವ ʼOriginʼ ಸಿನಿಮಾ (ನಾಗಾಂಕಣ -10)
ಎಂ ನಾಗರಾಜ ಶೆಟ್ಟಿ

ಆರ್ಯರನ್ನು, ದ್ರಾವಿಡರನ್ನು ಬೇರೆ ಬೇರೆ ಜನಾಂಗಗಳಿಗೆ ಸೇರಿದವರೆಂದು ಪರಿಗಣಿಸುವುದಿಲ್ಲ; ಜರ್ಮನರು, ಯಹೂದಿಗಳನ್ನು ಬಿಳಿಯರೆಂದೇ ತಿಳಿಯಲಾಗುತ್ತಿದೆ. ಹೀಗಿದ್ದರೂ ಭಾರತದಲ್ಲಿ ಜಾತಿ ತಾರತಮ್ಯ, ಜರ್ಮನಿಯಲ್ಲಿ ಹಿಟ್ಲರ್‌ ಕಾಲದಲ್ಲಿ ಯಹೂದಿಗಳ ಹತ್ಯೆ ನಡೆಯುತ್ತದೆ. ಒಂದೇ ಜನಾಂಗಕ್ಕೆ ಸೇರಿದವರಲ್ಲಿ ತಾರತಮ್ಯ, ಒಂದೇ ವರ್ಣದ ಜನರ ಕ್ರೂರ ಹತ್ಯೆ ಇದಕ್ಕೆ ಕಾರಣಗಳಾದರೂ ಏನು?

ಇಸಾಬೆಲ್ ವಿಲ್ಕರ್ ಸನ್ ಹೆಸರಿನ ಮಹಿಳೆ ಈ ಕುರಿತ ಅಧ್ಯಯನ, ಸಂಶೋಧನೆ ನಡೆಸಿ 2020 ರಲ್ಲಿ Caste- The origin of our discontents ಎನ್ನುವ ಕೃತಿ ರಚಿಸುತ್ತಾರೆ. ಈ ಪುಸ್ತಕದಲ್ಲಿ ಅವರು ಜನಾಂಗೀಯ ದ್ವೇಷವೊಂದೇ ಭೇದಭಾವಕ್ಕೆ ಕಾರಣವಾಗಿರಲಾರದು; ಮೇಲು ಕೀಲು, ಉಚ್ಚ, ನೀಚ ಭಾವನೆಗಳು ವಿದ್ವೇಷವನ್ನು, ತರತಮವನ್ನು ಹುಟ್ಟುಹಾಕುತ್ತದೆ, ಇದರ ಮೂಲ ಜಾತಿಭಾವನೆಯಲ್ಲಿದೆ ಎಂದು ಪ್ರತಿಪಾದಿಸುತ್ತಾರೆ. ಈ ಪುಸ್ತಕ ಕೆಲವು ತಿಂಗಳುಗಳ ಕಾಲ ಅಮೇರಿಕಾದಲ್ಲಿ ಬೆಸ್ಟ್ ಸೆಲ್ಲರ್ ಆಗಿ ಸಾವಿರಾರು ಪ್ರತಿಗಳು ಮಾರಾಟವಾಗುತ್ತವೆ. ಈ ಪುಸ್ತಕವನ್ನು ಆಧರಿಸಿ ಅವಾ ಡುವೆರ್ನೇ ʼ Origin ʼ ಹೆಸರಿನ ಸಿನಿಮಾ ಮಾಡಿದ್ದಾರೆ.

ಇಸಾಬೆಲ್ ಈ ಪುಸ್ತಕವನ್ನು ಬರೆಯುವ ಮೊದಲೇ ಪುಲಿಟ್ಜರ್ ಪ್ರಶಸ್ತಿ ಪಡೆದಿರುತ್ತಾರೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಬರೆದ ಸಂಶೋಧನಾತ್ಮಕ ಲೇಖನಗಳಿಗೆ ಈ ಪ್ರಶಸ್ತಿ ಬಂದಿರುತ್ತದೆ. ಜನಾಂಗೀಯ ಹತ್ಯೆಗಳ ಬಗೆಗಾಗಲೀ, ಜಾತೀಯ ವೈಷಮ್ಯದ ಕುರಿತಾಗಲೀ ಬರೆಯಬೇಕೆಂಬ ಯೋಚನೆ ಅವರಿಗಿರುವುದಿಲ್ಲ. ಅದಕ್ಕೆ ಕಾರಣವಾಗುವುದು ಒಂದು ಕೊಲೆ!

ಒಂದು ರಾತ್ರಿ ಕಪ್ಪು ವರ್ಣದ ಯುವಕನೊಬ್ಬ ಮಾಲ್ ನಲ್ಲಿ ಖರೀದಿಸಿ ವಾಪಾಸಾಗುತ್ತಿರುವಾಗ ಬೆನ್ನಟ್ಟಿದ ಬಿಳಿಯ ಪೊಲೀಸರು ತಪ್ಪಿಸಿಕೊಳ್ಳಲು ಬಿಡದೆ ಅವನನ್ನು ಕೊಲೆ ಮಾಡುತ್ತಾರೆ. ಮೈ ಬಣ್ಣ ಬಿಟ್ಟರೆ ಆ ಅಮಾಯಕ ಹುಡುಗನನ್ನು ಕೊಲ್ಲಲು ಕಾರಣಗಳಿರುವುದಿಲ್ಲ. ಇದರಿಂದ ಕಪ್ಪು ಬಣ್ಣದವರ ಹಕ್ಕಿನ ಬಗ್ಗೆ ಕಳಕಳಿ ಉಳ್ಳ ಇಸಾಬೆಲ್ ತಾಯಿ ಕ್ರುದ್ಧಳಾಗಿ ಮಗಳೊಡನೆ ಚರ್ಚಿಸುತ್ತಾರೆ. ಇಸಾಬೆಲ್ ಗೆಳತಿಯೂ ನೊಂದು ಪ್ರತಿಕ್ರಿಯಿಸುತ್ತಾಳೆ. ಇಸಾಬೆಲ್ ಈ ಕೊಲೆಯ ಬಗ್ಗೆ ಅರಿತಂತೆ, ಹತ್ಯೆಗೊಳಗಾದ ಯುವಕನ ಫೋನ್ ಕರೆಗಳನ್ನು ಪರಿಶೀಲಿಸಿದಂತೆ ಜನಾಂಗೀಯ ದ್ವೇಷದ ಕಾರಣಗಳು ಗೋಚರಿಸುತ್ತವೆ.

ಚರ್ಮದ ಬಣ್ಣಕ್ಕಾಗಿ ಸಹಜೀವಿಗಳನ್ನು ಕೊಲ್ಲುವ ಮನಸ್ಥಿತಿ ಇಸಾಬೆಲ್ ರನ್ನು ಯೋಚಿಸುವಂತೆ ಮಾಡುತ್ತದೆ. ಕೇವಲ ಮೈ ಬಣ್ಣದ ಕಾರಣಕ್ಕಾಗಿ ಕೊಲ್ಲುತ್ತಾರೆಯೇ? ಜನಾಂಗೀಯ ದ್ವೇಷವಲ್ಲದೆ ಹತ್ಯೆಗೆ ಬೇರೆ ಕಾರಣಗಳು ಇವೆಯೇ ಎನ್ನುವುದನ್ನು ತಿಳಿದುಕೊಳ್ಳಲು ಆಕೆ ಪ್ರಯತ್ನಿಸುತ್ತಾರೆ.

ಇಸಾಬೆಲ್ ಗಂಡ ಬ್ರೆಟ್ ಗಣಿತಜ್ಞ. ಬಿಳಿ ಬಣ್ಣದವನಾದರೂ ಸಂಕುಚಿತ ಮನಸ್ಸಿನವನಲ್ಲ. ಮಡದಿಯ ಅಧ್ಯಯನಕ್ಕೆ, ಸಂಶೋಧನೆಗೆ, ತಿರುಗಾಟಕ್ಕೆ ಅವನ ಪೂರ್ಣ ಸಹಕಾರ ಇದ್ದೇ ಇರುತ್ತದೆ. ಇಸಾಬೆಲ್ ಅಸ್ವಸ್ಥ ತಾಯಿಯನ್ನೂ ಅಕ್ಕರೆಯಿಂದ ನೋಡಿಕೊಳ್ಳುವ ಬ್ರೆಟ್ ಅಕಾಲದಲ್ಲಿ ಸಾವನ್ನಪ್ಪತ್ತಾನೆ. ಅನಾರೋಗ್ಯದಿಂದಿರುವ ತಾಯಿಯೂ ಬದುಕುವುದಿಲ್ಲ. ಇದರಿಂದ ತೀವ್ರ ಕ್ಷೋಭೆಗೊಳಗಾಗುವ ಇಸಾಬೆಲ್ ಅಧ್ಯಯನದ ಬಗ್ಗೆ ಅನಾಸಕ್ತಿ ತಳೆಯುವ ಪ್ರಸಂಗ ಬರುತ್ತದೆ. ಈ ಸಮಯದಲ್ಲಿ ಆಕೆಯ ಕಸಿನ್ ಧೈರ್ಯ ತುಂಬುತ್ತಾಳೆ. ʼ ನಿನ್ನೊಂದಿಗಿರುವೆ ʼ ಎಂದು ಭರವಸೆ ನೀಡುವ, ಕಾಯಿಲೆಯಿಂದ ಒದ್ದಾಡುವ ಆಕೆ ಕೂಡಾ ತೀರಿಹೋಗುತ್ತಾಳೆ. ಆ ಸಮಯದಲ್ಲಿ ಹೊರದೇಶದಲ್ಲಿರುವ ಇಸಾಬೆಲ್ ಸಾಯುವ ಸ್ಥಿತಿಯಲ್ಲಿರುವ ಆಕೆ ಕೇಳಿಸಿಕೊಳ್ಳುವಂತೆ ಹೃದಯದ ಮಾತುಗಳನ್ನು ಹೇಳುತ್ತಾರೆ.

ಇಸಾಬೆಲ್ ತನ್ನ ಅಧ್ಯಯನಕ್ಕಾಗಿ ಜರ್ಮನಿ, ಅಮೇರಿಕಾದ ಮಿಸಿಸೆಪ್ಪಿ ಮತ್ತು ಭಾರತಕ್ಕೆ ಭೇಟಿ ನೀಡುತ್ತಾರೆ. ಅಮೇರಿಕಾದ ವರ್ಣಭೇದದ ಕುರಿತು ಸಂಶೋಧನೆ ನಡೆಸಿದ ಇಬ್ಬರು ದಂಪತಿಯರ ʼ ಡೀಪ್ ಸೌತ್ ʼ ಎನ್ನುವ ಪುಸ್ತಕದ ಮುಖಾಂತರ ಪ್ರತ್ಯೇಕತೆಯ ಕಾರಣಗಳನ್ನು ತಿಳಿಯಲು ಯತ್ನಿಸುತ್ತಾರೆ. ಜರ್ಮನಿಯ ಮ್ಯೂಸಿಯಂ, ಹತ್ಯಾಕಾಂಡ ನಡೆದ ಸ್ಥಳಗಳಿಗೆ ಭೇಟಿ ಕೊಟ್ಟಾಗ ನಾಜಿಗಳ ಕ್ರೂರತೆಯ ದರ್ಶನವಾಗುತ್ತದೆ. ನಾಜಿಗಳ ಜೊತೆಗಾರನಾಗಿದ್ದೂ ತಾನು ಪ್ರೇಮಿಸಿದ ಯುವತಿಯನ್ನು ಪಾರುಮಾಡಲಾಗದೆ ಶಿಬಿರಕ್ಕೆ ಕಳಿಸಬೇಕಾದ ಅವಸ್ಥೆಯ ಪರಿಚಯವಾಗುತ್ತದೆ. ಹೆಣ್ಣು, ಗಂಡೆಂಬ ಭೇದವಿಲ್ಲದೆ, ಪ್ರೀತಿ, ಕರುಣೆ ಇಲ್ಲದೆ ನಾಜಿಗಳು ಕ್ರೂರವಾಗಿ ಹತ್ಯೆ ಮಾಡಿದ ಇತಿಹಾಸ ತೆರೆದುಕೊಳ್ಳುತ್ತದೆ. ಯಹೂದಿಗಳ ಹಕ್ಕುಗಳನ್ನು ಕಸಿದುಕೊಳ್ಳಲು ನಾಜಿಗಳು ಅಮೇರಿಕಾದ ಜಿಮ್ ಕ್ರೌ ಕಾನೂನನ್ನು ಅನುಷ್ಠಾನಕ್ಕೆ ತರಬಯಸಿದ್ದು, ಬಳಿಕ ಸಾಮೂಹಿಕ ನರಮೇಧದಲ್ಲಿ ಪರ್ಯಾವಸಾನಗೊಳ್ಳುವುದನ್ನು ಇಸಾಬೆಲ್ ಕಂಡುಕೊಳ್ಳುತ್ತಾರೆ.

ಭಾರತಕ್ಕೆ ಬಂದ ಇಸಾಬೆಲ್ ಗೆ  ಇನ್ನೊಂದು ರೀತಿಯಲ್ಲಿ ನರಕ ದರ್ಶನವಾಗುತ್ತದೆ. ಸೂರಜ್ ಯಂಗ್ಡೆ ಮತ್ತವರ ಸಹವರ್ತಿಗಳ ಮೂಲಕ ಭಾರತದ ಜಾತಿ ತಾರತಮ್ಯವನ್ನು ತಿಳಿದುಕೊಳ್ಳುತ್ತಾಳೆ. ತಮ್ಮ ಹಾಗೇ ಇರುವ ಮನುಷ್ಯರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುವ, ಹೀನ ಕೆಲಸಗಳಿಗೆ ಬಳಸಿಕೊಳ್ಳುವ ರೀತಿಯನ್ನು ಕಣ್ಣಾರೆ ಕಾಣುತ್ತಾರೆ. ಚಿತ್ರದಲ್ಲಿ ಮನಸ್ಸು ಕಲಕುವಂತೆ ಮಲದ ಗುಂಡಿಗಿಳಿದು ಮಲ ಎತ್ತುವ , ಕಕ್ಕಸ್ಸಿನ ಹೊಲಸನ್ನು ಕೈಯಿಂದ ಬಾಚುವ ದೃಶ್ಯಗಳನ್ನು ತೋರಿಸಲಾಗಿದೆ.

ಇದೇ ರೀತಿಯಲ್ಲಿ ಅಮೇರಿಕಾದಲ್ಲಿ ಕಪ್ಪು ಹುಡುಗನೊಬ್ಬನನ್ನು ಬಿಳಿಯರು ನಡೆಸಿಕೊಳ್ಳುವ ದೃಶ್ಯ ಕರುಳಿರಿಯುತ್ತದೆ. ರಗ್ಬಿ ಆಟದಲ್ಲಿ ಗೆದ್ದ ತಂಡದ ಕಪ್ಪು ಬಣ್ಣದ ಹುಡುಗನಿಗೆ ಸಹ ಆಟಗಾರರೊಂದಿಗೆ ಈಜುಕೊಳ ಪ್ರವೇಶಿಸದಂತೆ ನಿಷೇಧಿಸುತ್ತಾರೆ. ಆ ಹುಡುಗ ಕೊಳದ ಹೊರಗೆ ವಿಷಣ್ಣನಾಗಿ ಕುಳಿತಿದ್ದಾಗ ತರಬೇತುದಾರ ವ್ಯವಸ್ಥಾಪಕರೊಂದಿಗೆ ಮಾತನಾಡಿ ಈಜು ಕೊಳ ಪ್ರವೇಶಿಸಲು ಅನುಮತಿ ಪಡೆಯುತ್ತಾನೆ. ಆದರೆ ಕೊಳದೊಳಗೆ ಇಳಿದರೂ ನೀರು ಮುಟ್ಟುವಂತಿಲ್ಲ! ಚಾಪೆಯಂತ ತೆಪ್ಪದಲ್ಲಿ ಅವನನ್ನು ಮಲಗಿಸಿ, ಕೈಕಾಲುಗಳು ನೀರಿಗೆ ತಗಲಬಾರದೆಂದು ಎಚ್ಚರಿಕೆ ನೀಡಲಾಗುತ್ತದೆ. ಆ ಹುಡುಗ ಭೀತಿಯಿಂದ ಸೆಟೆದು ಕುಳಿತು ಆಕಾಶ ನೋಡುತ್ತಾ ತೇಲುವುದು ತೀವ್ರ ವಿಷಾದವನ್ನು ಹುಟ್ಟಿಸುತ್ತದೆ.

ಭಾರತಕ್ಕೆ ಬಂದ ಇಸಾಬೆಲ್ ಅವರಿಗೆ ಸೂರಜ್ ಯೆಂಗ್ಡೆ ಮತ್ತವರ ಗೆಳೆಯರು ದೆಹಲಿಯ ಪರಿಚಯ ಮಾಡಿಕೊಡುತ್ತಾರೆ. ಅಂಬೇಡ್ಕರ್ ಪ್ರತಿಮೆಯನ್ನು ತೋರಿಸಿ, ಕೈಯಲ್ಲಿರುವ ಸಂವಿಧಾನದ ಪ್ರತಿಯನ್ನು ತೋರಿಸುತ್ತಾ ʼ ಸಂವಿಧಾನ ಶಿಲ್ಪಿ ʼ ಎಂದು ಹೇಳಿ, ಜಾತಿವಿನಾಶ ಹೋರಾಟದ ಬಗ್ಗೆ ಹೇಳುತ್ತಾರೆ. ದೇಶದ ಎಲ್ಲೆಡೆ ಅಂಬೇಡ್ಕರ್   ಪ್ರತಿಮೆಗಳನ್ನು ಕಾಣಬಹುದು. ಆದರೆ ಅದನ್ನು ವಿರೂಪಗೊಳಿಸುವ ಕೆಲಸವೂ ನಡೆಯುತ್ತಿದೆ, ಅದಕ್ಕಾಗಿ ಇಲ್ಲಿಯೂ ಕಬ್ಬಿಣದ ಕಟಾಂಜನದ ಒಳಗೆ ಅಂಬೇಡ್ಕರ್ ಪ್ರತಿಮೆಯನ್ನು ಇರಿಸಲಾಗಿದೆ ಎಂದು ವಿವರಿಸುತ್ತಾರೆ. ಇದು ಸಾಂಕೇತಿಕವಾಗಿದೆ. ವರದಿಯನ್ನೇ ಆಧರಿಸಿದರೆ ದೇಶದಲ್ಲಿ ದಲಿತರ ಮೇಲೆ ಪ್ರತಿ ಹದಿನೈದು ನಿಮಿಷಕ್ಕೆ ಹಲ್ಲೆಗಳಾಗುತ್ತಿವೆ. ಪ್ರತಿ ದಿನ ಹತ್ತು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ. ದಲಿತರ ಬದುಕುವ ಹಕ್ಕನ್ನೇ  ನಿರಾಕರಿಸಿ, ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡ ವ್ಯವಸ್ಥೆಯನ್ನು ಇದು ತೋರಿಸುವಂತಿದೆ.

ಸೂರಜ್ ಯಂಗ್ಡೆ ಮೂಲಕ ಅಂಬೇಡ್ಕರ್ ವಿಚಾರಗಳು, ಅಧ್ಯಯನಗಳನ್ನು ಇಸಾಬೆಲ್ ತಿಳಿದುಕೊಳ್ಳುತ್ತಾರೆ. ಚಿತ್ರದ ಬಹಳಷ್ಟು ಅವಧಿ ಅಂಬೇಡ್ಕರ್ ಚಿಂತನೆಗೆ, ವ್ಯಕ್ತಿತ್ವ ಪರಿಚಯಕ್ಕೆ ಮೀಸಲಾಗಿದೆ. ಜಾತೀಯ ವಿಷಯದಲ್ಲಿ ತಿಳಿದುಕೊಳ್ಳಲೇಬೇಕಾದ ಅಂಬೇಡ್ಕರ್ ವಿಚಾರಗಳನ್ನು ಇಸಾಬೆಲ್ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸಿರುವುದು ಆಕೆಯ ಬದ್ಧತೆಗೆ ಸಾಕ್ಷಿ.

ಇಸಾಬೆಲ್ ಬಹಳಷ್ಟು ಕಡೆ ಓಡಾಡಿ, ಅಧ್ಯಯನ, ಸಂಶೋಧನೆ ಮಾಡಿ ಪುಸ್ತಕವನ್ನು ಬರೆದಿದ್ದರೂ ಅದರಲ್ಲಿ ಪ್ರಸ್ತಾಪಿತವಾಗಿರುವ ಅನೇಕ ವಿಷಯಗಳು ಚರ್ಚಾರ್ಹವಾಗಿವೆ. ಕಪ್ಪು ಜನರನ್ನು ಗುಲಾಮರನ್ನಾಗಿಸಿದ್ದು, ನಾಗರಿಕ ಹಕ್ಕುಗಳನ್ನು ನಿರಾಕರಿಸಿದ್ದು ಮತ್ತು ಈಗಲೂ ಅವರನ್ನು ಸಮಾನವಾಗಿ ಕಾಣಲು ಹಿಂಜರಿಯುತ್ತಿರುವುದರಲ್ಲಿ ಭಾರತದ ಜಾತಿಯ ಲಕ್ಷಣಗಳಿವೆ. ಆದರೆ ಯಹೂದಿಗಳನ್ನು ನಾಜಿಗಳು ದ್ವೇಷ ಮಾಡಿದ್ದು, ಕೊಂದಿದ್ದು ಜನಾಂಗೀಯವಲ್ಲ; ಅದರಲ್ಲಿ ಜಾತಿಭೇದದ ಅಂಶಗಳಿವೆ ಎನ್ನುವುದಕ್ಕೆ ಸರಿಯಾದ ವಿವರಣೆ ಇಲ್ಲ. ನಾಜಿಗಳು ಮತ್ತು ಯಹೂದಿಗಳಲ್ಲಿ ಮೇಲು ಕೀಳಿನ ಭಾವನೆ, ಪ್ರತ್ಯೇಕತಾ ಭಾವನೆ ಇತ್ತು. ಆದರೆ ಅದಷ್ಟೇ ನಾಜಿಗಳ ಸಾಮೂಹಿಕ ಕೊಲೆಗೆ ಕಾರಣವಲ್ಲ. ಪ್ರತ್ಯೇಕತೆಯೊಂದಿಗೆ ರಾಷ್ಟ್ರೀಯತೆ, ರಾಜಕೀಯ, ಅಧಿಕಾರ ದಾಹ ಇವೆಲ್ಲವೂ ಯಹೂದಿಗಳ ಹತ್ಯೆಯಲ್ಲಿ ಅಡಕವಾಗಿವೆ. ಭಾರತಕ್ಕೆ ಕಳಂಕವೆನ್ನಿಸುವ ಜಾತಿವ್ಯವಸ್ಥೆಯನ್ನು ಇತರ ದೇಶಗಳಲ್ಲಿ ಇರುವ ತಾರತಮ್ಯದ ಜೊತೆ ತಳಕು ಹಾಕುವುದಕ್ಕೆ ಸರಿಯಾದ ಕಾರಣಗಳನ್ನು ಒದಗಿಸಲು ಇಸಾಬೆಲ್ ವಿಫಲರಾಗಿದ್ದಾರೆ ಎಂದೇ ಅನ್ನಿಸುತ್ತದೆ. ಅಥವಾ ಭಾರತದ ಜಾತಿ ವ್ಯವಸ್ಥೆಯನ್ನು, ಶ್ರೇಣೀಕೃತ ಸಮಾಜವನ್ನು ಸರಿಯಾಗಿ ಗ್ರಹಿಸಲಾಗಿಲ್ಲವೆಂದು ತೋರುತ್ತದೆ.

ಈ ಚರ್ಚೆಯ ನಡುವೆಯೂ ಇಸಾಬೆಲ್ ಪುಸ್ತಕ ಮತ್ತು ʼ Origin ʼ ಸಿನಿಮಾ ಗಮನಾರ್ಹವಾದುದು. ಕೊಲೆಗೆ ಕಾರಣವಾಗುವ ಮನುಷ್ಯ ವಿರೋಧಿ ಪ್ರತ್ಯೇಕತಾ ಭಾವನೆಯ ಮೂಲವನ್ನು ಕಂಡುಕೊಳ್ಳಲು ಇಸಾಬೆಲ್ ಪ್ರಯತ್ನ ನಡೆಸಿರುವುದನ್ನು ಮೆಚ್ಚಲೇಬೇಕು. ತರತಮ ಭಾವನೆಗೆ ಪರಿಹಾರ ಕಂಡುಕೊಳ್ಳುವುದು ಇಸಾಬೆಲ್ ಉದ್ದೇಶವಲ್ಲ;  ಭೇದಭಾವದ ಕಾರಣಗಳನ್ನು ಕಂಡು ಹಿಡಿಯುವ ಪ್ರಯತ್ನವೆಂದೇ ಇದನ್ನು ತಿಳಿಯಬಹುದು.

ಇಸಾಬೆಲ್ ಪುಸ್ತಕವನ್ನು ಸಿನಿಮಾ ರೂಪಕ್ಕೆ ತರುವಲ್ಲಿ ಚಿತ್ರಕತೆ ಬರೆದು ನಿರ್ದೇಶಿಸಿದ ಅವಾ ಡ್ಯುವರ್ಮೆ ಯಶಸ್ವಿಯಾಗಿದ್ದಾರೆ. ಇಸಾಬೆಲ್ ರವರ ಬದುಕಿನ ಕ್ಷಣಗಳನ್ನು ಹಿಂದು- ಮುಂದಾಗಿ ಹೆಣೆದು ಆಸಕ್ತಿ ಹುಟ್ಟುವಂತೆ ನಿರೂಪಣೆ ಮಾಡಿದ್ದಾರೆ. ಅವರ ತಾಯಿಯನ್ನು ಗಂಡ ಬ್ರೆಟ್ ಎತ್ತಿಕೊಳ್ಳುವ ಸಂದರ್ಭ, ಆತ ನಿಧನನಾದಾಗ ಆಕೆಯ ಪರಿತಾಪ, ತೆಪ್ಪದಲ್ಲಿ ತೇಲುವ ಹುಡುಗನ ಪಕ್ಕದಲ್ಲಿ ಕೂತಂತ ಕಲ್ಪನೆ ಪರಿಣಾಮಕಾರಿಯಾಗಿದೆ. ಇಸಾಬೆಲ್ ಅವರ ವ್ಯಕ್ತಿತ್ವದೊಳಗೆ ಹೊಕ್ಕು ಆಂಜನ್ಯೂ ಎಲಿಸ್ ಟೇಲರ್ ನಟಿಸಿದ್ದಾರೆ. ಅವರಲ್ಲಿ ಸಾಕ್ಷಾತ್ ಇಸಾಬೆಲ್ ರನ್ನೇ ಕಂಡಂತಾಗುತ್ತದೆ.

ವರ್ಣ ಭೇದ ನೀತಿಯಿಂದ ನೊಂದ ಅಮೇರಿಕಾ ಕಪ್ಪು ಬಣ್ಣದ ಮಹಿಳೆಯೊಬ್ಬರು, ಮನುಷ್ಯ ಮನುಷ್ಯನನ್ನು ಕೊಲ್ಲುವ, ಕೀಳಾಗಿ ಕಾಣುವ ಮನಸ್ಥಿತಿ ಹೊಂದುವುದಾದರೂ ಹೇಗೆ ಎಂದು ತಿಳಿದುಕೊಳ್ಳಲು ಪರಿಶ್ರಮ ಪಡುವುದು, ಭಾರತದ ಜಾತಿಪದ್ಧತಿಯಲ್ಲಿ ಅದರ ಮೂಲ ಹುಡುಕುವುದು ಆಸಕ್ತಿದಾಯಕ. ಅದನ್ನು ಸಿನಿಮಾ ಮಾಡುವುದಂತೂ ಇನ್ನೂ ಹೆಚ್ಚಿನ ಸವಾಲುಗಳನ್ನು ಆಹ್ವಾನಿಸುತ್ತದೆ. ಶ್ರೇಷ್ಠ, ಕನಿಷ್ಟ ಭಾವನೆಗಳ ಮೂಲ ಎಲ್ಲಿದೆ ಎನ್ನುವುದನ್ನು ಕಂಡುಕೊಳ್ಳಲು ಅಸಕ್ತಿ ಇರುವವರು ನೋಡಲೇ ಬೇಕಾದ ಸಿನಿಮಾ ʼ Origin!

ಇಂದು ಮಹಿಳೆಯರೂ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ: ಮಾಧುರಿ ದೀಕ್ಷಿತ್
ಮುಂಬೈ: ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮದಲ್ಲಿ ವಿಭಿನ್ನ ಉದ್ಯೋಗಗಳನ್ನು ಮಾಡಲು ಮುಂದೆ ಬರುತ್ತಿದ್ದಾರೆ ಮತ್ತು ಸಿನೇಮಾ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಅವರು 80 ಮತ್ತು 90 ರ ದಶಕದಿಂದ ಬಾಲಿವುಡ್‌ನಲ್ಲಿ ಆಗಿರುವ ಉತ್ತಮ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.

1984 ರಲ್ಲಿ “ಅಬೋಧ್” ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಮಾಧುರಿ, “ದಿಲ್ ತೋ ಪಾಗಲ್ ಹೈ”, “ತೇಜಾಬ್”, “ಬೇಟಾ” ಮತ್ತು “ರಾಜಾ” ನಂತಹ ಚಿತ್ರಗಳಲ್ಲಿ ಅಭಿಯಿಸಿದ್ದರು, ಚಲನಚಿತ್ರ ಸೆಟ್‌ಗಳಲ್ಲಿ ನಟಿಯರು ಮತ್ತು ಕೇಶ ವಿನ್ಯಾಸಕರಾಗಿ ಮಾತ್ರ ಈ ಹಿಂದೆ ಮಹಿಳೆಯರೇ ಇರುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು.

“ಮಹಿಳೆಯರು ಬಹಳ ದೂರ ಬಂದಿದ್ದಾರೆ, ಇದು ಒಂದು ಪುಟ್ಟ ಹೆಜ್ಜೆಯ ನಡಿಗೆ. ನಾನು 80 ಮತ್ತು 90 ರ ದಶಕದಲ್ಲಿ ಕೆಲಸ ಮಾಡುತ್ತಿದ್ದಾಗ, ಸೆಟ್‌ನಲ್ಲಿ ನಾನು, ನನ್ನ ಸಹ ನಟಿಯರು ಮತ್ತು ಕೇಶ ವಿನ್ಯಾಸಕಿಯರು ಮಾತ್ರ ಮಹಿಳೆರು. ಇಂದು, ನಾನು ಸೆಟ್‌ನಲ್ಲಿ ಕಾಲಿಟ್ಟಾಗ — DOP ನಿಂದ ಹಿಡಿದು AD ಗಳು, ಬರಹಗಾರರು ಮತ್ತು ಆಕ್ಷನ್ ಮಾಸ್ಟರ್‌ಗಳವರೆಗೆ – ಮಹಿಳೆಯರು ಬೇರೆ ಬೇರೆ ಕ್ಷೇತ್ರದಲ್ಲಿರುತ್ತಾರೆ ಎಂದು ನಾನು ಊಹಿಸಿರಲಿಲ್ಲ,” ಅದ್ಭುತ,” ಎಂದು ಅವರು ಹೇಳಿದ್ದಾರೆ. (PTI)

ನಟಿ ಮಲೈಕಾ ಅರೋರಾ ಅವರ ತಂದೆ ಆ*ಹತ್ಯೆ
ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಇಂದು ಬೆಳಗ್ಗೆ (ಸೆಪ್ಟೆಂಬರ್‌, 11) ಆ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡವೊಂದರ ಏಳನೇ ಮಹಡಿಯಿಂದ ಅನಿಲ್ ಅರೋರಾ ಜಿಗಿದು ಸಾವನ್ನಪ್ಪಿದ್ದಾರೆ.

ನಟಿಯ ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆಕೆಯ ನಿವಾಸಕ್ಕೆ ತಲುಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಅನಿಲ್ ಅರೋರಾ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದರು.

ಹಸಿವು ಕಲಿಸಿಕೊಡುವಷ್ಟು ಯಾವ ಯೂನಿವರ್ಸಿಟಿಯೂ ಕಲಿಸಲ್ಲ (ʼವಾಳೈʼ ಸಿನಿಮಾ ಕುರಿತು ಸುರಭಿಯವರ ಅನಿಸಿಕೆ)
ಹಸಿವು ಕಲಿಸಿಕೊಡುವ ಪಾಠ, ಜಗತ್ತಿನ ಯಾವ ಯೂನಿವರ್ಸಿಟಿಯೂ ಕಟ್ಟಿಕೊಡಲಾರದು. ನಮ್ಮಂತೋರಿಗೆ,
ವಾಳೈ ಸಿನಿಮಾ ನೋಡಿ, ಬಾಲ್ಯ ನೆನಪಾಯ್ತು ಅಂತ ಹೇಳೋದಿಕ್ಕಾಗಲ್ಲ. ನಾನಿನ್ನೂ ಬಾಲ್ಯದ ಟ್ರೋಮಾಗಳಲ್ಲೇ ಬದುಕನ್ನ ಬದುಕುತ್ತಿರೋದು. ಹತ್ತಾರು ಸಲ ಈ ಬಗ್ಗೆ ಬರೆದುಕೊಂಡದ್ದಿದೆ.

ನನ್ನ ಕಾರ್ಮೀಕ ಬದುಕು ಶುರುವಾದಾಗ ಒಂದನೇ ಕ್ಲಾಸ್ ಓದುತ್ತಿದ್ದೆ. ನನಗಾಗ ಆರು ವರ್ಷ…,ಅಂದು ಶುರುವಾದ ದುಡಿಮೆ, ಬಹುಶಃ ನನ್ನ ಎರಡು ಮಕ್ಕಳ ಡೆಲಿವರಿ ಸಮಯದಲ್ಲಿ ಮಾತ್ರ ಬ್ರೇಕ್ ತೆಗೆದುಕೊಂಡಿದ್ದು, ಅದೂ ಕೂಡ ಹದಿನೈದು ದಿನಗಳಿಂದ ತಿಂಗಳವರೆಗೆ ಮಾತ್ರ.
ಬೆಂಗಳೂರಿನ ಸ್ಲಮ್ ಒಂದರಲ್ಲಿ ಹುಟ್ಟಿ, ಅನುಭವಿಸಿದ ಬಡತನದ ಯಾತನೆ, ಹಸಿವಿನ ಸಂಕಟ ನಾನಿಂದಿಗೂ ಮರೆತಿಲ್ಲ. ಯಾವುದನ್ನೂ ಮರೆಯುವುದೂ ಇಲ್ಲ…
ಆ ದಿನಗಳಲ್ಲಿ ನನ್ನಂತೇ ಸಣ್ಣ ವಯಸ್ಸಿನಲ್ಲಿ ದುಡಿಮೆಗೆ ಬಿದ್ದವರು ನಮ್ಮ ಬೀದಿಯಲ್ಲೇ ಹತ್ತದಿನೈದು ಮಕ್ಕಳಿದ್ದವು. ಊದುಬತ್ತಿ ತೀಡುತ್ತಿದ್ದ ಅಂಬಿಕಾ, ಶಾಂತಿ, ಅಗಸರ ನಾಣಿ ಅಣ್ಣ, ಸೀಮೆಣ್ಣೆ ಕೃಷ್ಣಾ, ಅಶ್ವತ್ಥ, ಬಾಲ್ಯದ ಗೆಳತಿ ಟೀನಾ, ತರಕಾರಿ ಅಂಗ್ಡಿ ಆನಂದ, ಭಾರತಿ, ನಮ್ಮೆಲ್ಲರದ್ದೂ ಆಲ್ಮೋಸ್ಟ್ ಪ್ಯಾರಲಲ್ ಟ್ರ್ಯಾಕಿನಲ್ಲಿ ಸಾಗುತ್ತಿರುವ ಬದುಕೇ ಆಗಿತ್ತು. ಪ್ರೈಮರಿ ಶಾಲೆಯ ಶ್ರೀಕಂಠಯ್ಯ ಮೇಷ್ಟ್ರು, ಶಾಲೆಯ ಅರಳಿಕಟ್ಟೆ, ಮರಿಯಮ್ಮ ಟೀಚರ್‌, ಏಳನೇ ತರಗತಿಯಲ್ಲಿದ್ದಾಗ, ಕಣ್ಣೆದುರೇ ರೈಲ್ವೆ ಹಳಿಗೆ ಬಿದ್ದು ಸಾವಿಗೆ ಶರಣಾದ ಆತ್ಮೀಯ ಗೆಳತಿ ಪದ್ಮಜಾ…ಎಲ್ಲವೂ ನೆನಪಾಗಿ ಎದೆಭಾರವಾಯಿತು.

ನಮ್ಮ ಮನೆಯಲ್ಲಿ ವಾರದಲ್ಲಿ, ಮೂರ್ನಾಲ್ಕು ದಿನಗಳು ಮನೆಯಲ್ಲಿ ಅನ್ನ ಮಾಡುತ್ತಿರಲಿಲ್ಲ. ಎದ್ರೆ ಕುಂತ್ರೆ ಅಂಗನವಾಡಿಯ ಹಾಲು ಬ್ರೆಡ್ಡು…ಅನ್ನ ಸಾರು ತಿನ್ನಬೇಕಾದ್ರೆ, ಅಜ್ಜಿಯ ಮನೆಗೆ ಎರಡು ಕಿಲೋಮೀಟರ್ ನೆಡೆದು ಹೋಗಬೇಕಿತ್ತು. ಗುಡ್ಡದಹಳ್ಳಿಯ ಫ್ಲೋರ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾತ, ಮಿಲ್ಲಿಗೆ ಬರುತ್ತಿದ್ದ ಗಿರಾಕಿಗಳ ಬಳಿ, ರಾಗಿ ಹಿಟ್ಟು, ಅಕ್ಕಿ ಹಿಟ್ಟು ಸಂಗ್ರಹಿಸಿ, ಕೂಡಿಟ್ಟು, ಒಂದು ಚೀಲ ತುಂಬಿದ ಮೇಲೆ, ಅದನ್ನು ನಮ್ಮ ಮನೆಗೆ ತಲುಪಿಸುತ್ತಿತ್ತು. ಆ ಏರಿಯಾ ಮಾರ್ವಾಡಿ ಜನರ ಮನೆಯಲ್ಲಿ ಬರ್ತಡೇಯೋ, ಪೂಜೆಗಳೋ, ಮದುವೆ ಕಾರ್ಯಗಳೋ ಜರುಗಿದಾಗ, ಅವರ ಮನೆಯಲ್ಲಿ ಮಾಡುತ್ತಿದ್ದ ಸಿಹಿ ತಿಂಡಿಗಳನ್ನು ಕವರ್ ನಲ್ಲಿ ಹಾಕಿ ತಂದು ಕೊಡುತ್ತಿತ್ತು. ಒಂದು ಸಣ್ಣ ಮಿಠಾಯಿ ತಿನ್ನಲು ಅಮ್ಮನ ಬಳಿ ನಾಲ್ಕಾಣೆಗಾಗಿ ಹೇಳಿದ ಸುಳ್ಳಿಗೆ, ಬೀದಿಯುದ್ದಕ್ಕೂ ಮನೆ ಬಾಗಿಲಿನವರೆಗೂ ಇಟ್ಟಿನ ದೊಣ್ಣೆ ಮುರಿಯುವವರೆಗೂ ಅಮ್ಮಾ ಹೊಡೆದಿದ್ದಳು.

ವೈರ್ ಚೇರುಗಳ ಫ್ರೇಮುಗಳನ್ನ, ಎಳೆಯ ಕೈಯಲ್ಲಿ ಹೊತ್ತು, ಸ್ಕೂಲಿನ ಬ್ಯಾಗು ತಗಲಾಕಿಕೊಂಡು ಎರಡು ಕಿಲೋ ಮೀಟರ್ ನಡೆದುಕೊಂಡು ಮನೆಗೆ ಬರಬೇಕಾಗಿತ್ತು. ಕಾಲಿನಲ್ಲಿ ಮೆಟ್ಟಿರುತ್ತಿದ್ದ ಹವಾಯ್ ಚಪ್ಪಲಿ ಒಂದು ಸಲ ಕಿತ್ತು ಹೋದರೆ, ಮತ್ತೆ ಅದನ್ನು ಕೊಂಡಕೊಳ್ಳಲು ತಿಂಗಳುಗಳೇ ಆಗುತ್ತಿತ್ತು. ಹರಿದ ಬಟ್ಟೆಗಳು, ನೆಂಟರು ಕೊಡುತ್ತಿದ್ದ ಅವರ ಮಕ್ಕಳ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ವರ್ಷಾನುಗಟ್ಟಲೆ ಬದುಕನ್ನ ದೂಡಿದ್ದಿದೆ.
ಹಗಲು – ರಾತ್ರಿಗಳ ವ್ಯತ್ಯಾಸವೇ ಗೊತ್ತಿರದೇ ದುಡಿಯುವುದು ನಮ್ಮ ಧರ್ಮ…ಅದಿಲ್ಲದಿದ್ದರೆ, ಕುಟುಂಬದ ನೌಕೆ ಸಾಗುತ್ತಿರಲಿಲ್ಲ…ಚೇರುಗಳಿಗೆ ವೈರ್ ಪೋಣಿಸುತ್ತಾ, ರಬ್ಬರ್ ಫ್ಯಾಕ್ಟರಿಯ ಮಿಡ್ನೈಟ್ ಹನ್ನೆರಡರ ಸೈರನ್, ನಮಗೆ ಆ ದಿನದ ಕೂಲಿಯಿಂದ ಸಿಗುತ್ತಿದ್ದ ಬಿಡುಗಡೆ. ಕೈ ಕಾಲು ಮರಗಟ್ಟಿ, ಸಿಮೆಂಟ್ ಮೆತ್ತದ ಇಟ್ಟಿಗೆಯ ಗೋಡೆಗಳಿಗೆ ಒರಗಿ ಕುಂತಿದ್ದರೆ, ಸುತ್ತಮುತ್ತಲ ಗಲೀಜಿಗೆ ಅದೆಷ್ಟೊ ಸಲ ಮೈ ಮೇಲೆ ಹತ್ತುತ್ತಿದ್ದ ಚೇಳು, ಜರಿಗಳು…ಮೂಗಿನಲ್ಲಿ ಸುರಿದು ಬರುತ್ತಿದ್ದ ರಕ್ತ ಮಾಮೂಲಾಗೋಗಿತ್ತು. ಮೈ ಮೇಲಿರುತ್ತಿದ್ದ ಶರ್ಟಿನಿಂದ ಒರೆಸಿಕೊಂಡು, ಆ ದಿನದ ಟಾರ್ಗೆಟ್ ರೀಚ್ ಮಾಡುವುದಷ್ಟೇ ನಮ್ಮ ಕೆಲಸ. On time ಚೇರುಗಳನ್ನು ಎಣೆದು ಕೊಡದಿದ್ದರೆ, ಮತ್ತೆ ನಮಗೆ ಕೆಲಸ ಸಿಗುತ್ತಿರಲಿಲ್ಲ. ಆ ಭಯ ಬೇರೆ.
ನನ್ನ ಅಮ್ಮಾ , ನಮ್ಮ ಮನೆಯ ಬಡತನದ ಸಿಟ್ಟನ್ನೆಲ್ಲಾ ಎತ್ತಿಹಾಕಲು ಸಿಗುತ್ತಿದ್ದ ಏಕೈಕ ಪ್ರಾಣಿ ನಾನೊಬ್ಬಳೇ. ಗಂಡನ ಎದುರು ಕೆಮ್ಮುತ್ತಿರಲಿಲ್ಲ. ಅಣ್ಣಂದಿರ ಮೇಲಿನ ಮುದ್ದು…ಸಿಕ್ಕ ನನ್ನೊಬ್ಬಳ ಮೇಲೆ ಸದಾ ಬ್ರಹ್ಮಾಸ್ತ್ರ ಪ್ರಯೋಗ. ಆಕೆಯ ಬೈಗುಳ, ಸಿಟ್ಟು, ಆ ಕೆಂಗಣ್ಣು ಇಂದಿಗೂ ನನಗೆ night mares…ತಪ್ಪಿಸಿಕೊಳ್ಳಲು ಬದಲಿ ಆಯ್ಕೆಗಳಿರಲಿಲ್ಲ. ಅಪ್ಪನ ಕುಡಿತ, ಮನೆಯ ಬಡತನ, ಸಂಬಂಧಿಕರ ನಡುವೆ ಕಟ್ಟಿಕೊಟ್ಟ ಅವಮಾನಗಳನ್ನು ಮಾತುಗಳಲ್ಲಿ ಪೋಣಿಸಿ, ಭದ್ರವಾಗಿ ಯಾವುದೋ ಪೆಟ್ಟಿಗೆಯಲ್ಲಿಟ್ಟು, ಅಟ್ಟದ ಮೇಲಿಟ್ಟು, ಓ ಇದು ನನ್ನದಲ್ಲ ಎಂದು ಮರೆತುಬಿಡಲು ಸಾಧ್ಯವೇ ಇಲ್ಲ…!

ಕಳೆದ ಹತ್ತು ವರ್ಷಗಳಲ್ಲಿ ಎಷ್ಟೋ ಸಲ ನನ್ನ ಬಾಲ್ಯದ ನೆನಪುಗಳನ್ನು, ದುರ್ಘಟನೆಗಳನ್ನು ಫೇಸ್ಬುಕ್ಕಿನಲ್ಲಿ ಎತ್ತಿ ಹಾಕುವಾಗ, ನನ್ನಂತವೇ ಒಂದಷ್ಟು ಜೀವಗಳು, ಆ ಬರಹಗಳಲ್ಲಿ ತಮ್ಮನ್ನು ಹಗುರಾಗಿಸಿಕೊಂಡು ನನ್ನೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡದ್ದಿದೆ. ಅದೇ ತರ, ವೈಯಕ್ತಕ ಬದುಕಿನ ಬಗ್ಗೆ ಹೀಗೆ ಮುಕ್ತವಾಗಿ ಬರೆದುಕೊಳ್ಳುವುದು ಕ್ಷಮಿಸಲಾರದ ಅಪರಾಧ ಎಂದು judge ಮಾಡಿದವರೂ ಇದ್ದಾರೆ.
ಕನಿಷ್ಠ ಊಟ ಬಟ್ಟೆಗೆ ಬಾಲ್ಯದಲ್ಲಿ ಹೋರಾಡಿಯೇ, ದುಡಿದೇ ಪಡೆದವರಿಗೆ ಮಾತ್ರ, ಆ ಅವಮಾನ, ಕುದಿವ ರಕ್ತದ ಅರ್ಥ ಗೊತ್ತಿರುತ್ತದೆ. ಮತ್ತು, ನನ್ನ ಪ್ರಕಾರ ಯಾವುದೇ ವ್ಯಕ್ತಿ ತನ್ನ ಬದುಕನ್ನು ಯಥಾವತ್ತಾಗಿ ಕಟ್ಟಿಕೊಡಲು ಸಾಧ್ಯವಾಗುವ ಸಂವೇದನೆಗಳಿರುವುದಿಲ್ಲವೋ, ಆತನಿಗೆ/ಆಕೆಗೆ ಸಮಾಜದ ಯಾವುದೇ ಇನ್ನೊಬ್ಬ ವ್ಯಕ್ತಿಯ/ಇನ್ನೊಬ್ಬರ ಬದುಕಿನ ಬಗ್ಗೆ ಬರೆಯುವ ಅರ್ಹತೆ ಇರುವುದಿಲ್ಲ.

ಸಿನ್ಮಾದಲ್ಲಿ ಮಾರಿ ಸೆಲ್ವರಾಜ್ ಬಾಲ್ಯದ ಬದುಕು ಜರುಗಿದ ಊರು, ಸಮಯ, ಬೇರೆ…ಆದ್ರೆ ಹಸಿವು ಕೊಟ್ಟ ನೆನಪು, ನೋವು ಸಂಕಟ, ಹಸಿವು ಕಲಿಸಿಕೊಟ್ಟ ಪಾಠ ಒಂದೇ…! ಸಿನಿಮಾ ನೋಡ ನೋಡುತ್ತಾ, ನಮ್ಮದೇ ಬದುಕಿಗೆ ಕನ್ನಡಿ ಹಿಡಿದಷ್ಟು ಸಾಮ್ಯತೆಗಳು ತಾಗುತ್ತಾ ಹೋಗುತ್ತದೆ. ಅದರಲ್ಲೂ ಬುಡುಬಡುಕೆಯವನ ಕಿರುಡಮರುಗದ ಸದ್ದಿಗೆ ಎರಡ್ಮೂರ ಸಲ ಬೆಚ್ಚು ಬಿದ್ದೆ. ಸತ್ತ ಕರುವೊಂದರ ಮೈಯೊಳಗೆ ಒಣಹುಲ್ಲು ತುಂಬಿ, ಅದರ ನೆನಪನ್ನು ಜೀವಂತವಾಗಿಡುವ ಶಿವಾನೆಂಜಮ್, ಪೂಂಗುಡಿ ಟೀಚರ್‌ ಮೇಲಿನ ಅವನ ಅಗಾಧವಾದ ಪ್ರೇಮ, ರೇಡಿಯೋದಲ್ಲಿ ಕೇಳಿಬರುವ ಹಾಡು, ಬಾಳೆ ತೋಟದಲ್ಲಿ ಹಸಿವಿನಿಂದ ಕದ್ದು ತಿಂದ ಒಂದು ಬಾಳೆಹಣ್ಣಿಗಾಗಿ, ತೋಟದ ಮಾಲೀಕನಿಂದ ಬಿದ್ದ ಏಟುಗಳು, ವೆಂಬು ಮತ್ತವಳ ಪ್ರೇಮಿಯ ಮೌನ ಸಂಭಾಷಣೆಗೆ ಸಿಗದ ಒಂದು ಲಾಜಿಕಲ್‌ ಕನ್‌ಕ್ಲೂಷನ್‌, ಕಳೆದು ಹೋದ ಹಸುವಿನ ಹುಡುಕಾಟದಲ್ಲಿ ಶಿವಾನೆಂಜಮ್‌ ನ ಆಕ್ರಂದನದ ಕೂಗಿನ ಶಬ್ಧ, ಅನ್ನದ ತುತ್ತು ತಿನ್ನುವ ಹೊತ್ತಿಗೆ, ತಾಯ ಬೈಗುಳಕ್ಕೆ ಹೆದರಿ, ಶಿವಾನೆಂಜಮ್‌ ಎದ್ದು ಬಿದ್ದು ಓಡುವಾಗಿನ ಆ ಏದುಸಿರು, ಅವನೆದೆಯ ಬಡಿತ, ಮೈಯಿಂದ ಕಿತ್ತುಕೊಂಡು ಹೊರಬರುವ ಬೆವರು, ಹೊಟ್ಟೆಯ ಸಂಕಟ, ಅವನ ತಾಯಿಯ ಮಡುಗಟ್ಟಿದ ನೋವು, ನರಕಸದೃಶ ಸಾವಿನ ಲೋಕವನ್ನು ಕಟ್ಟಿಕೊಟ್ಟ, ಕ್ಲೈಮ್ಯಾಕ್ಸ್‌ ಕಡೆಗಿನ ಆ ಇಪ್ಪತ್ತು ನಿಮಿಷದ ಪಯಣ….,

ಅಂದಿಗೂ, ಇಂದಿಗೂ ನನಗ್ಯಾವುದೇ ಬರಹಗಳು, ಅಥವ ಸಿನ್ಮಾಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯೋದು, ಅಲ್ಲಿ ಬದುಕಿನ ನೈಜ ಚಿತ್ರಣ ಇದ್ದಾಗ ಮಾತ್ರ.

ವಾಳೈ ಸಿನಿಮಾವನ್ನ, ಸಿನಿಮಾ ಅಂತ ಮಾತ್ರ ನೋಡಲು ಸಾಧ್ಯವೇ ಇಲ್ಲ. ಅದೊಂದು ಮಾರಿ ಸೆಲ್ವರಾಜ್‌ ಎಂಬ ಮುಗ್ಧ ಜೀವ, ತನ್ನ ಹಸಿವಿನ ಜರ್ನಿಯನ್ನು, ನಿರ್ಭೀತವಾಗಿ, ಮುಕ್ತವಾಗಿ ಕಟ್ಟಿಕೊಟ್ಟ ಒಂದು painful Biopic.‌
ಇದೇ ಸಿನಿಮಾವನ್ನು ಮಾರಿ ಸೆಲ್ವರಾಜ್‌, ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಮಾಡಿದ್ದರೆ, ಬಹುಶಃ, ಒಂದು sophisticated ವರ್ಗದ ಜನ, ಅದೆಷ್ಟು ಅವಮಾನಗಳನ್ನು ಮಾಡುತ್ತಿದ್ದರೋ? ಮಾರಿ, ಅದೆಷ್ಟು ತಿರಸ್ಕಾರಕ್ಕೆ ಒಳಗಾಗುತ್ತಿದ್ದರೋ ಕಾಣೆ.

ಒಂದು ಹಂತದವರೆಗೆ, ನೋವನ್ನೆಲ್ಲಾ ನುಂಗಿ, ತನ್ನದೇ ಟ್ಯಾಲೆಂಟ್‌, ಬದುಕಿನ ಶ್ರದ್ಧೆಯಿಂದ ಇಂದು ತಮ್ಮದೇ ಬೆಂಚ್‌ಮಾರ್ಕ್‌ ಸೃಷ್ಟಿಸಿರುವ ಮಾರಿ ಸೆಲ್ವರಾಜ್‌, ಬಹುಶಃ, ಇದು ಸರಿಯಾದ ಸಮಯ ಎಂಬುದನ್ನು ಮನಗಾಣಿಕೊಂಡಿರಬೇಕು. ಹಾಗಾಗಿಯೇ, ಇಷ್ಟು ನಿರ್ಭೀತವಾಗಿ, ತಮ್ಮ ಬದುಕಿನ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ, ಸಿನಿಮಾದ ಮೂಲಕ ಹೊರಹಾಕಿದ್ದಾರೆ.

ಹಸಿವಿನ ಬಾಲ್ಯ ಕಟ್ಟಿಕೊಟ್ಟ ಅನುಭವಗಳಿಗೋ, ಅವಮಾನಗಳಿಗೋ ಏನೋ, ನನ್ನ ಸುತ್ತಮುತ್ತ ಸಂಪರ್ಕಕ್ಕೆ ಬಂದ ಅದೆಷ್ಟೋ ಜನರ ನೋವು, ಸಂಕಟ ನನ್ನನ್ನು ಅಲುಗಾಡಿಸಿರುವುದು ಕೂಡ, ಇಂತದ್ದೇ ಕಾರಣಕ್ಕೆ.
ಇಂತದ್ದೇ ಕಾರಣಕ್ಕಾಗಿಯೇ ಬಹುಶಃ ನನ್ನ ಕಣ್ಣುಗಳು ನಗುವಿನಲ್ಲೂ, ಎಂದೂ ಬತ್ತದ ಕಣ್ಣೀರೊಂದನ್ನು ಇಂದಿಗೂ ಜೊತೆಗೇ ಹೊತ್ತು ಸಾಗುತ್ತಿರುವುದು.
ಇದೇ ಕಾರಣಕ್ಕಾಗಿಯೇ ಬಹುಶಃ ನನ್ನ ಕೈಲಾದಷ್ಟು, ನನ್ನ ಮಿತಿಯಲ್ಲಿ ಜೊತೆಗಾರರ ಜೊತೆ ನಿಂತಿದ್ದು.
ಇದೇ ಕಾರಣಕ್ಕಾಗಿಯೇ ನನ್ನೊಂದಿಗೆ ಜರುಗಿದ ಮೋಸಗಳನ್ನೂ, ಬಿದ್ದ ಬಾಸುಂಡೆಗಳನ್ನೂ, ಮಾಫಿ ಮಾಡಿ, ಮುಂದೆ ಸಾಗಿದ್ದು…!
ಇದೇ ಕಾರಣಕ್ಕಾಗಿಯೇ ನಾನಿಷ್ಟು ಗಟ್ಟಿಯಾಗಿದ್ದು, ಸ್ವತಂತ್ರವಾಗಿ ನನ್ನ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದು …!
ಎಷ್ಟೋ ಜನ ” ನೀ ಯಾಕಿಷ್ಟು ಎಮೋಷನಲ್”‌ ಇದ್ದೀಯ ?” ಎಂದು ಕೇಳಿದಾಗ ಎಂದಿನಂತೆ ನನ್ನ ಉತ್ತರ “ಯಾರ ಕಣ್ಣುಗಳಲ್ಲಿ ಇನ್ನೂ ಕಣ್ಣೀರು ಬತ್ತಿಲ್ಲವೋ, ಅಂತವರಷ್ಟೇ ಮನುಷ್ಯರು, And I proud to identify myself, one among them” ಎಂದೇ ಹೇಳುತ್ತೇನೆ.

ಅಂತ ಮನುಷ್ಯರ ಸಾಲಿನಲ್ಲಿ ಮಾರಿ ಸೆಲ್ವರಾಜ್‌ ಎಂಬ ದೈತ್ಯ ಪ್ರತಿಭೆ ನಮ್ಮ ನಡುವಿನ ಹೆಮ್ಮೆ !

Loads of Love to U Mari Selvaraj sir❤

U deserve more and more respect ❤

ಸುರಭಿ ರೇಣುಕಾಂಬಿಕಾ

ರಾಕ್ ಸ್ಟಾರ್ ರೂಪೇಶ್ ಶೆಟ್ಟಿಗೆ ಜಾಹ್ನವಿ ಜೋಡಿ…ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಗಿಚ್ಚಿ ಗಿಲಿಗಿಲಿ ಜಾಹ್ನವಿ
ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾಗೆ ಅಧಿಪತ್ರ ಎಂಬ ಟೈಟಲ್ ಇಡಲಾಗಿದೆ.ರೂಪೇಶ್ ಜನ್ಮದಿನದ ಅಂಗವಾಗಿ ಟೈಟಲ್ ರಿವೀಲ್ ಮಾಡಲಾಗಿತ್ತು.ಟೈಟಲ್ ಮೂಲಕವೇ ಸಿನಿಮಾ ಪ್ರಿಯರಿಗೆ ಕುತೂಹಲ ಮೂಡಿಸಿದ್ದ ಚಿತ್ರ ತಂಡ,ಇದೀಗ ಅಧಿಪತ್ರ ಅಂಗಳದಿಂದ ಹೊಸ ಸಮಾಚಾರ ಹೊರಬಿದ್ದಿದೆ. ಈ ಸಿನಿಮಾ ಮೂಲಕ ಜಾಹ್ನವಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಸುದ್ದಿ ಮನೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಶೋ ನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಈಗ ಅಧಿಪತ್ರದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಿ ನಟಿಸಲಿದ್ದಾರೆ

ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ ಎಂಬುವರು ಅಧಿಪತ್ರ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಇದೇ 23 ಅಧಿಪತ್ರ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದೆ.

ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ತುಳು ಸಿನಿಮಾ ಸರ್ಕಸ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು ಇದೀಗ ರೂಪೇಶ್ ಹಾಗೂ ಜಾಹ್ನವಿ ಜೋಡಿಯಾಗಿ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ.

ಚಂದನ್ ಶೆಟ್ಟಿ ನಟನೆಯ ಹೊಸಾ ಚಿತ್ರದ ಟೈಟಲ್ ಅನಾವರಣ!
ವರಮಹಾಲಕ್ಷ್ಮಿ ಹಬ್ಬದಂದು ಪ್ರೇಕ್ಷಕರಿಗೆ ಕಾದಿದೆ ಸರ್‍ಪ್ರೈಸ್!
ರ್ಯಾಪರ್ ಆಗಿ ಪ್ರವರ್ಧಮಾನಕ್ಕೆ ಬಂದು, ಆ ವಲಯದಲ್ಲಿಯೇ ಒಂದಷ್ಟು ಖ್ಯಾತಿ ಪಡೆದಿರುವವರು ಚಂದನ್ ಶೆಟ್ಟಿ. ತಮ್ಮ ವೃತ್ತಿಯಲ್ಲಿ ಬಹು ಬೇಡಿಕೆ ಚಾಲ್ತಿಯಲ್ಲಿರುವಾಗಲೇ ಚಂದನ್ ನಟನೆಯತ್ತ ಮುಖ ಮಾಡಿದ್ದಾರೆ. ಅವರು ನಾಯಕ ನಟನಾಗಿ ನಟಿಸಿರುವ ಒಂದೆರಡು ಸಿನಿಮಾಗಳು ಅಚಿತಿಮ ಘಟ್ಟದಲ್ಲಿರುವಾಗಲೇ ಚಂದನ್ ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಯುವ ನಿರ್ದೇಶಕ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರದ ಟೈಟಲ್ ಇದೇ 25ರಂದು ಅಂದರೆ, ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಅನಾವರಣಗೊಳ್ಳಲಿದೆ.
ಇದೇ ಹದಿನೆಂಟನೇ ತಾರೀಕಿನಂದು ಚಿತ್ರತಂಡ ಟೈಟಲ್ ಪ್ರೋಮೋ ಒಂದನ್ನು ಬಿಡುಗಡೆಗೊಳಿಸಿದೆ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗಳೂ ಸಿಕ್ಕಿವೆ. ಈ ಮೂಲಕವೇ ಸದರಿ ಚಿತ್ರದ ಶೀರ್ಷಿಕೆ ಏನಿರಬಹುದೆಂಬ ಕುತೂಹಲವೂ ಮೂಡಿಕೊಂಡಿದೆ. ಒಂದು ಪ್ರತಿಭಾನ್ವಿತ ಯುವ ತಂಡ, ಒಂದೊಳ್ಳೆ ಕಥೆಯ ಮೂಲಕ ಈ ಸಿನಿಮಾದೊಂದಿಗೆ ಚಂದನ್ ಪ್ರೇಕ್ಷಕರ ಮುಂದೆ ಬರುವ ಲಕ್ಷಣಗಳೂ ದಟ್ಟವಾಗಿವೆ. ಒಟ್ಟಾರೆ ಸಿನಿಮಾ ಹೇಗಿರಬಹುದೆಂಬ ಸಣ್ಣ ಸೂಚನೆ ಈ ಟೈಟಲ್ ಜೊತೆಗೇ ಅನಾವರಣಗೊಳ್ಳುವ ನಿರೀಕ್ಷೆಗಳಿವೆ.
ಈ ಹಿಂದೆ ಶ್ರೀ ಮುರುಳಿ ನಾಯಕನಾಗಿ ನಟಿಸಿದ್ದ `ಲೂಸ್ ಗಳು’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಅರುಣ್ ಅಮುಕ್ತ. ಮೂಲತಃ ಆಡ್ ಫಿಲಂ ಮೇಕರ್ ಆಗಿರುವ ಅರುಣ್, ಚಿತ್ರರಂಗದಲ್ಲಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೆಲ್ಲ ಅನುಭವಗಳನ್ನು ಒಗ್ಗೂಡಿಸಿಕೊಂಡು ಒಂದೊಳ್ಳೆ ಕಥೆಯೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರಂತೆ. ಸದ್ಯದ ಮಟ್ಟಿಗೆ ಇದೊಂದು ಟೀನೇಜ್ ಡ್ರಾಮಾ ಆಗಿರಲಿದೆ ಎಂಬ ಏಕಮಾತ್ರ ಸುಳಿವು ಚಿತ್ರತಂಡದ ಕಡೆಯಿಂದ ಸಿಕ್ಕಿದೆಯಷ್ಟೇ.
ಈ ಚಿತ್ರದ ತಾರಾಗಣದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ತಾಂತ್ರಿಕ ವರ್ಗವೂ ಸೇರಿದಂತೆ, ಬಹುಮುಖ್ಯವಾದ ಇನ್ನೊಂದಷ್ಟು ವಿಚಾರಗಳನ್ನು ಹಂತ ಹಂತವಾಗಿ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ತೀರ್ಮಾನಿಸಿದೆ.

ಮರ್ಡರ್ ಮಿಸ್ಟರಿ ‘ಆಪಲ್ ಕಟ್’ ಚಿತ್ರದಲ್ಲಿದೆ ಮಾನವಶಾಸ್ತ್ರದ ಕಥಾವಸ್ತು
ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕಿಯ ಆಗಮನ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ ಈಗ ಸಿಂಧು ಗೌಡ ಸೇರ್ಪಡೆಯಾಗಿದ್ದಾರೆ. ಸಿಂಧು ಗೌಡ “ಆಪಲ್ ಕಟ್” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿಂಧು ಗೌಡ ಖ್ಯಾತ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ. ಇತ್ತೀಚೆಗೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ‘ನಾನು ಕಳೆದ 10ವರ್ಷದಲ್ಲಿ ಹಲವು ಜನಪ್ರಿಯ ಧಾರಾವಾಹಿಗಲ್ಲಿ ನಟನೆ ಮಾಡಿದ್ದೇನೆ. ಈ ಮೊದಲು ಒಂದು ಶಾರ್ಟ್ ಫಿಲ್ಮ ನಿರ್ದೇಶಿಸಿದ್ದು, ಹಿರಿತೆರೆಯಲ್ಲಿ ಈ ಸಿನಿಮಾ ನನ್ನ ಮೊದಲ ಪ್ರಯತ್ನ. ನಿರ್ಮಾಪಕಿ ಶಿಲ್ಪ ಪ್ರಸನ್ನ ಹಾಗೂ ನಾನು ಪಾರ್ಕ್ ನಲ್ಲಿ ಭೇಟಿಯಾದೆವು. ನಂತರ ಕಥೆ ಕೇಳಿ ಅವರು ನಿರ್ಮಾಣಕ್ಕೆ ಮುಂದಾದರು. ‘ಆಪಲ್ ಕಟ್’, ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ಜೊತೆಗೆ ನಾನು ಮಾನವಶಾಸ್ತ್ರ ಓದಿದ್ದು, ಚಿತ್ರದಲ್ಲಿ ಮಾನವಶಾಸ್ತ್ರದ ಒಂದು ಅಂಶ ಸೇರಿಸಲಾಗಿದೆ. ಒಂದು ಆಸ್ಪತ್ರೆಯಲ್ಲಿ ಅನುಮತಿ ಪಡೆದು ಶವವೊಂದನ್ನು ಸಹ ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದೆ ಎನ್ನಬಹುದು.
ಮೊದಲಿನಿಂದಲೂ ನಾನು ತಂದೆ ಜೊತೆ ಶೂಟಿಂಗ್‌ಗೆ ಹೋಗುತ್ತಾ ಇದ್ದೆ. ಹಾಗಾಗಿ ಸಿನಿಮಾ ಆಸಕ್ತಿ ಬೆಳೆಯುತ್ತಾ ಬಂತು. ಸದ್ಯ ‘ಆಪಲ್ ಕಟ್’ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಇನ್ನೆರಡು ತಿಂಗಳಲ್ಲಿ ಸೆನ್ಸಾರ್ ಮುಗಿಸಿಕೊಂಡು ಸಿನಿಮಾ ರಿಲೀಸ್ ಮಾಡುವ ಯೋಜನೆ ಇದೆ. ಸಿನಿಮಾ ಚೆನ್ನಾಗಿ ಬರಲು ತಂಡದ ಸಹಕಾರ ತುಂಬಾ ಇದೆ’ ಎಂದು ಹೇಳಿದರು.

ನಂತರ ಮಾತನಾಡಿದ ಚಿತ್ರದ ನಾಯಕ ಸೂರ್ಯ ಗೌಡ, “ನಾನು ಈ ಚಿತ್ರದಲ್ಲಿ ಸತ್ಯ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ. ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದಿದ್ದು ಇದೇ ಮೊದಲಬಾರಿ ಮುಖ್ಯ ಪಾತ್ರ ನಿರ್ವಹಿಸಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದೇನೆ. ಇದರಲ್ಲಿ ಕಥೆಯಷ್ಟೇ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ” ಎಂದರು.

“ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ” ಎಂದರು ನಾಯಕಿ ಅಶ್ವಿ‌ನಿ ಪೋಲೆಪಲ್ಲಿ.

ವೇದಿಕೆಯಲ್ಲಿ ಹಾಸ್ಯ ನಟ ಅಪ್ಪಣ್ಣ, ಅಭಿಜಿತ್, ತಾಯಿ ಪಾತ್ರ ಮಾಡಿರುವ ಮೀನಾಕ್ಷಿ ತಮ್ಮ ಅನುಭವ ಹಂಚಿಕೊಂಡರು. ಬಾಲು ರಾಜವಾಡಿ ಸಹ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು ಚಿತ್ರವನ್ನು ಸಾನ್ವಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮೊದಲಬಾರಿ ನಿರ್ಮಾಣ ಮಾಡಿರುವ ಶಿಲ್ಪ ಪ್ರಸನ್ನ ಮಾತನಾಡುತ್ತಾ, ಕಥೆ ಕೇಳಿದಾಗ ತುಂಬಾ ಇಷ್ಟವಾಗಿ ನಿರ್ಮಾಣ ಮಾಡಿರುವುದಾಗಿ ಹೇಳಿದರು.

ವೀರ್ ಸಮರ್ಥ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಯೋಗರಾಜ್ ಭಟ್, ಸತ್ಯಪ್ರಕಾಶ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಹಾಗೂ ಸುಚೇಂದ್ರ ಎನ್ ಮೂರ್ತಿ ಸಂಕಲನ “ಆಪಲ್ ಕಟ್” ಚಿತ್ರಕ್ಕಿದೆ.

’ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಕಪ್ ಗೆದ್ದ ಕೋಟಿಗೊಬ್ಬ ಕಿಂಗ್ಸ್…ದಚ್ಚು ಅಭಿಮಾನಿ ತಂಡ ರನ್ನರ್ ಅಪ್
YPL ಗೆದ್ದ ಕೋಟಿಗೊಬ್ಬ ಕಿಂಗ್ಸ್… ಸೂರ್ಯವಂಶ ಸ್ಟ್ರೈಕರ್ಸ್ ರನ್ನರ್ ಅಪ್

ಸಾಹಸಸಿಂಹ ಡಾ.ವಿಷ್ಣುವರ್ಧನ್ ಹೆಸರಿನಡಿ ಆಯೋಜಿಸಲಾಗಿದ್ದ ‘ಯಜಮಾನ ಪ್ರೀಮಿಯರ್ ಲೀಗ್ ಸೀಸನ್-2’ ಟ್ರೋಫಿಯನ್ನು ಸುದೀಪ್ ಅಭಿಮಾನಿಗಳ ತಂಡ ಕೋಟಿಗೊಬ್ಬ ಕಿಂಗ್ಸ್ ಎತ್ತಿ ಹಿಡಿದ್ರೆ, ದರ್ಶನ್ ಅಭಿಮಾನಿಗಳ ಸೂರ್ಯವಂಶ ಸ್ಟ್ರೈಕರ್ಸ್ ರನ್ನರ್ ಆಗಿ ಹೊರಹೊಮ್ಮಿದೆ.

ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಶುರು ಮಾಡಿದ ಕೀರ್ತಿ ವಿಷ್ಣುದಾದಾ ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (YPL) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.

ಈ ಹಿಂದೆ ಜೂನ್ ನಲ್ಲಿಯೇ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಆಯೋಜನೆ ಆಗಿತ್ತು. ಮಳೆ ಮತ್ತು ಇತರ ಕಾರಣಗಳಿಂದಾಗಿ ಅದು ಮುಂದೂಡಲ್ಪಟ್ಟಿತ್ತು. ಬೆಂಗಳೂರಿನ ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ನಲ್ಲಿ ಇದೇ 12 ಮತ್ತು 13 ಎರಡು ದಿನಗಳ ಯಜಮಾನ ಪ್ರೀಮಿಯರ್ ಲೀಗ್ ಸೀಸನ್ 2 ಏರ್ಪಡಿಸಲಾಗಿತ್ತು. ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿದ್ದ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಪಂದ್ಯಾವಳಿ ನಡೆದಿದೆ. ಒಟ್ಟು 12 ತಂಡಗಳು ಭಾಗಿಯಾಗಿದ್ದು, ಈ ಪೈಕಿ ಕೋಟಿಗೊಬ್ಬ ಕಿಂಗ್ಸ್ ಗೆಲುವು ತನ್ನದಾಗಿಸಿಕೊಂಡಿದೆ.

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಟರಾದ ವಸಿಷ್ಠ ಸಿಂಹ, ಡಾರ್ಲಿಂಗ್ ಕೃಷ್ಣ, ರವಿಶಂಕರ್ ಗೌಡ, ಬಾಲಾಜಿ, ಶ್ರೇಯಸ್ ಮಂಜು, ನಟಿ ಮಿಲನಾ ನಾಗರಾಜ್ ಸೇರಿದಂತೆ ಹಲವಾರು ಕಲಾವಿದರು, ನಿರ್ದೇಶಕರಾದ ಶಶಾಂಕ್, ನವೀನ್ ಕೃಷ್ಣ, ರಘು ರಾಮ್ ಮತ್ತು ಇತರ ನಿರ್ದೇಶಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಜೈಲಿಗೆ ಹೋಗಲಿದ್ದಾರ ನಟಿ ಜಯಪ್ರದಾ? ಚೆನ್ನೈ ನ್ಯಾಯಾಲಯದಿಂದ ಶಿಕ್ಷೆ ಘೋಷಣೆ
ತಾರಾ ಜಯಪ್ರದಾ ಆ ಕಾಲದ ಸ್ಟಾರ್ ಹೀರೋಯಿನ್. ಆ ಕಾಲದ ಸ್ಟಾರ್ ಹೀರೋಗಳ ಎದುರು ನಟಿಸಿ ಪ್ರೇಕ್ಷಕರ ಮನಗೆದ್ದ ಜಯಪ್ರದಾ. ಆದರೆ ಈಗ ಆಕೆಗೆ ಅನಿರೀಕ್ಷಿತ ಆಘಾತ ಎದುರಾಗಿದೆ.

ನಟಿಯಾಗಿ ಪ್ರಭಾವಿತರಾಗಿ ಸಂಸದೆಯಾದ ಜಯಪ್ರದಾ ಅವರಿಗೆ ನ್ಯಾಯಾಲಯಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ವಿಧಿಸಿದೆ.

ಹಿರಿಯ ನಾಯಕಿ ಜಯಪ್ರದಾ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರು 1974 ರಲ್ಲಿ ಭೂಮಿ ಕೋಸಂ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ನಾಯಕಿಯಾಗಿ ಮುಂದುವರೆದ ಅವರು ಸ್ಟಾರ್ ಹೀರೋಗಳ ಎದುರು ನಟಿಸುವ ಆಫರ್ ಬಂದ ನಂತರ ಸ್ಟಾರ್ ಹೀರೋಯಿನ್ ಆದರು. ಅದರ ನಂತರ ಜಯಸುಧಾ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದರು ಮತ್ತು ಆ ದಿನಗಳಲ್ಲಿ ಜಯಪ್ರದಾ ಪ್ಯಾನ್ ಇಂಡಿಯಾ ಸ್ಟಾರ್ ಆದರು.

ಆದ್ರೆ, ಸಿನಿಮಾಗಳಿಗೆ ಬ್ರೇಕ್ ಕೊಟ್ಟ ನಂತರ ಜಯಪ್ರದ ರಾಜಕೀಯದಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಆ ಚುನಾವಣೆಯಲ್ಲಿ ಆಗಲೇ ಸಂಸದೆಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಮಾಜಿ ಸಂಸದರಾಗಿ ರಾಜಕೀಯದಲ್ಲಿದ್ದಾರೆ. ಆದರೆ ಜಯಪ್ರದಾ ಅವರಿಗೆ ಈಗ ಅನಿರೀಕ್ಷಿತ ಆಘಾತವೊಂದು ಎದುರಾಗಿದೆ. ಚೆನ್ನೈನ ಎಗ್ಮೋರ್ ನ್ಯಾಯಾಲಯ ಆಕೆಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

ಮಾಜಿ ಸಂಸದೆ ಜಯಪ್ರದಾ ಅವರಿಗೆ ಎಗ್ಮೋರ್ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಆಕೆ ಹಾಗೂ ಇತರ ಮೂವರಿಗೆ ಜೈಲು ಶಿಕ್ಷೆ ವಿಧಿಸಿ ಎಗ್ಮೋರ್ ನ್ಯಾಯಾಲಯ ತೀರ್ಪು ನೀಡಿದೆ. ಕಾರ್ಮಿಕ ಸರ್ಕಾರಿ ವಿಮಾ ನಿಗಮ ಸಲ್ಲಿಸಿದ್ದ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ ಬಳಿಕ ಈ ತೀರ್ಪು ನೀಡಲಾಗಿದೆ. ನ್ಯಾಯಾಲಯ ಜೈಲು ಶಿಕ್ಷೆಯೊಂದಿಗೆ ತಲಾ 5 ಸಾವಿರ ದಂಡ ವಿಧಿಸಿದೆ.

ಚೆನ್ನೈನ ರಾಯಪೇಟದಲ್ಲಿರುವ ಜಯಪ್ರದಾ ಅವರ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಂದ ಇಎಸ್ ಐ ಮೊತ್ತವನ್ನು ಸರ್ಕಾರಿ ಕಾರ್ಮಿಕ ವಿಮಾ ನಿಗಮಕ್ಕೆ ಪಾವತಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ವಿಷಯದಲ್ಲಿ ಸರ್ಕಾರಿ ಕಾರ್ಮಿಕರ ವಿಮಾ ನಿಗಮವು ಎಗ್ಮೋರ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಮತ್ತು ಇತ್ತೀಚೆಗೆ ಆ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಾಲಯ… ಸಿನಿ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಜಯಪ್ರದಾ ಅವರಿಗೆ ಈ ತೀರ್ಪಿನಿಂದ ಅನಿರೀಕ್ಷಿತ ಆಘಾತ ಎದುರಾಗಿದೆ. ಆಕೆಯ ಅಭಿಮಾನಿಗಳು ಕೂಡ ಆತಂಕಗೊಂಡಿದ್ದಾರೆ. ಜಯಪ್ರದಾ ಪ್ರಸ್ತುತ ಜನಪ್ರಿಯ ಟಿವಿ ಹಾಸ್ಯ ಕಾರ್ಯಕ್ರಮವೊಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಬಹಳ ದಿನಗಳ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರಿಂದ ಅವರ ಅಭಿಮಾನಿಗಳು ಖುಷಿಯಾಗಿದ್ದರು.

ಹಿರಿಯ ನಟ, ನಿರ್ದೇಶಕ, ಗೀತರಚನೆಕಾರ ಸಿ.ವಿ.ಶಿವಶಂಕರ್ ನಿಧನ
ಹಿರಿಯ ನಿರ್ದೇಶಕರು ಹಾಗೂ ಗೀತ ರಚನೆಕಾರರಾದ ಸಿ.ವಿ.ಶಿವಶಂಕರ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದ ಸಿ.ವಿ.ಶಿವಶಂಕರ್ ರವರು ಚಿತ್ರರಂಗ ಸದಾಕಾಲ ನೆನಪಿನಲ್ಲಿ ಉಳಿಯುವ ಗೀತೆಗಳನ್ನು ರಚಿಸಿದ್ದಾರೆ. ಬಾಲನಟನಾಗಿ ರಂಗಭೂಮಿ ಪ್ರವೇಶಿಸಿದ್ದ ಇವರು ಸ್ಕೂಲ್ ಮಾಸ್ಟರ್, ರತ್ನಗಿರಿ ರಹಸ್ಯ, ಭಕ್ತ ವಿಜಯ, ರತ್ನಮಂಜರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ನಟನೆಯ ಮೂಲಕವೂ ಗುರುತಿಸಿಕೊಂಡಿದ್ದರು.

ಮನೆ ಕಟ್ಟಿ ನೋಡು, ಪದವೀಧರ, ಮಹಾತಪಸ್ವಿ, ವೀರಮಹಾದೇವ, ಕನ್ನಡ ಕುವರ ಇನ್ನೂ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ರಚಿಸಿರುವ ಗೀತೆಗಳಾದ ‘ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ’, ನಾಡಚರಿತೆ ನೆನಪಿಸುವಾ ವೀರ ಗೀತೆಯ’, ‘ಕನ್ನಡದಾ ರವಿ ಮೂಡಿ ಬಂದಾ’ ಗೀತೆಗಳು ಇಂದಿಗೂ ನೆನಪಿನಲ್ಲಿ ಉಳಿಯುವಂತವು‌.

ಪೀಪಲ್ ಟಿವಿ ಸಿ.ವಿ.ಶಿವಶಂಕರ್ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತದೆ.