Communal Riots – Peepal Media

ಹರಿಯಾಣ ಕೋಮು ಗಲಭೆ ; ನಿಷೇಧಾಜ್ಞೆ ಜಾರಿ : ಯಾರಿದು ಮೋನು ಮಾನೇಸರ್?
ದೇಶದಲ್ಲಿ ಮಣಿಪುರದ ಹಿಂಸಾಚಾರ ಇನ್ನೂ ಬಿಸಿ ಇರುವಾಗಲೇ ಹರಿಯಾಣದಲ್ಲಿ ಕೋಮು ಗಲಭೆಯಿಂದ 4 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಮೆರವಣಿಗೆಯಲ್ಲಿ ಈ ಹಿಂಸಾಚಾರ ನಡೆದಿದ್ದು ಕೋಮು ಪ್ರಚೋದನೆಯೇ ಈ ಗಲಭೆಗೆ ಕಾರಣ ಎನ್ನಲಾಗಿದೆ.

ಹರಿಯಾಣದ ನುಹ್ ಜಿಲ್ಲೆಯಲ್ಲಿ ಗುಂಪೊಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಬಂದಾಗ, ಕಲ್ಲು ತೂರಾಟ ಮತ್ತು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಸೋಮವಾರ ಮಧ್ಯಾಹ್ನದ ನಂತರ ನಡೆದ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನುಹ್‌ ಜಿಲ್ಲೆಯಲ್ಲಿ ನಡೆದ ಘರ್ಷಣೆಯ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಹರಿಯಾಣದ ಸೊಹ್ನಾದಲ್ಲಿ ಹಲವು ಗುಂಪುಗಳು ಕಲ್ಲು ತೂರಾಟ ನಡೆಸಿದ್ದಾರೆ. ನಿರ್ದಿಷ್ಟ ಸಮುದಾಯದ ಜನರಿಗೆ ಸೇರಿದ ನಾಲ್ಕು ವಾಹನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸೋಹ್ನಾದಲ್ಲೂ ಸಹ ಪ್ರತಿಭಟನಾಕಾರರು ಗಂಟೆಗಟ್ಟಲೆ ರಸ್ತೆ ತಡೆ ನಡೆಸಿದ್ದಾರೆ.

ರಾತ್ರೋರಾತ್ರಿ ನಡೆದ ಹಿಂಸಾಚಾರದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದರೆ, ಗುರುಗ್ರಾಮ್‌ನ ಮಸೀದಿಯ ಮೇಲೆ ಗುಂಪೊಂದು ದಾಳಿ ಮಾಡಿದ ನಂತರ ನಾಲ್ಕನೇ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಸಧ್ಯಕ್ಕೆ ವಿಶ್ವ ಹಿಂದೂ ಪರಿಷತ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಕರ್ಫ್ಯೂ ವಿಧಿಸಲಾಗಿದೆ. ನುಹ್ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹರಿಯಾಣ ಸರ್ಕಾರವು ಒಂದು ವಾರದವರೆಗೆ ಕೇಂದ್ರದಿಂದ ಕ್ಷಿಪ್ರ ಕಾರ್ಯಪಡೆಯ 20 ತಂಡಗಳನ್ನು ಹರಿಯಾಣಕ್ಕೆ ಕಳುಹಿಸಲು ಕೋರಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 20 ಮಂದಿಯ ಮೇಲೆ FIR ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗುರುಗ್ರಾಮ್ ಮತ್ತು ಫರಿದಾಬಾದ್‌ನಲ್ಲಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳು ಆಗಸ್ಟ್ 1 ರ ಮಂಗಳವಾರದಂದು ಬಂದ್ ಮಾಡಲು ಸರ್ಕಾರ ಆದೇಶಿಸಿದೆ. ಜೊತೆಗೆ 3 ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಘಟನೆಗೆ ಕಾರಣ
ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಹರಿಯಾಣದ ವಿವಾದಿತ ವ್ಯಕ್ತಿ, ಹಲವಷ್ಟು ಅನೈತಿಕ ಪೊಲೀಸಗಿರಿ, ಅಕ್ರಮ ಗೋರಕ್ಷಣೆ ಹಾಗೂ ಮುಸ್ಲಿಂ ಯುವಕರು ಸಾವಿನ ಹಿನ್ನೆಲೆಯಲ್ಲಿ ಆರೋಪಿಯಾಗಿದ್ದ ಮೋನು ಮಾನೇಸರ್, VHP ಆಯೋಜಿಸಿದ್ದ ಮೆರವಣಿಗೆಯಲ್ಲಿ ಭಾಗವಹಿಸುತ್ತೇನೆ ಎಂದು ಕರೆ ನೀಡಿದ್ದ.

ಈ ವರ್ಷದ ಪ್ರಾರಂಭದಲ್ಲಿ ಹರಿಯಾಣದ ಭಿವಾನಿ ಜಿಲ್ಲೆಯ ಬೊಲೆರೋದಲ್ಲಿ ನಾಸಿರ್ ಮತ್ತು ಜುನೈದ್ ಎಂಬ ಇಬ್ಬರು ಮುಸ್ಲಿಂ ಯುವಕರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿನ ಪ್ರಕರಣದ ತನಿಖೆಯ ನಂತರ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಗೋರಕ್ಷಣೆ, ಧರ್ಮ ರಕ್ಷಣೆ ಹೆಸರಲ್ಲಿ ಹೆಸರಾಗಿದ್ದ ಮೋನು ಮಾನೇಸರ್ ಹೆಸರನ್ನು ಉಲ್ಲೇಖಿಸಲಾಗಿತ್ತು.

ಅಂದಿನಿಂದಲೇ ಮೋನು ಮಾನೇಸರ್ ವಿರುದ್ಧ ಗುಂಪೊಂದು ಪ್ರತಿಕಾರಕ್ಕೆ ಅವಕಾಶ ಹುಡುಕುತ್ತಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರದ ವಿಶ್ವ ಹಿಂದೂ ಪರಿಷತ್ ನ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಘಟನೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮಣಿಪುರ ಭೇಟಿಗೆ ಹೊರಟ ರಾಹುಲ್ ಗಾಂಧಿಯನ್ನು ಅರ್ಧಕ್ಕೆ ತಡೆದ ಪೊಲೀಸರು
ಮಣಿಪುರ ಹಿಂಸಾಚಾರದ ಹಿನ್ನೆಲೆಯಲ್ಲಿ ಅಲ್ಲಿನ ವಸ್ತುಸ್ಥಿತಿ ವೀಕ್ಷಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಣಿಪುರವನ್ನು ತಲುಪಿದ್ದಾರೆ. ಆದರೆ ಅವರ ಬೆಂಗಾವಲು ಪಡೆಯನ್ನು ಮಣಿಪುರದ ಬಿಷ್ಣುಪುರದಲ್ಲಿ ಮಣಿಪುರ ಪೊಲೀಸರು ತಡೆದಿದ್ದಾರೆ.

“ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಸಂತ್ರಸ್ತ ಜನರನ್ನು ಭೇಟಿ ಮಾಡಲು ಮಣಿಪುರದ ಇಂಪಾಲ್ ಗೆ ಭೇಟಿ ನೀಡುತ್ತಿದ್ದಾರೆಯೇ ಹೊರತು, ಬೇರಾವ ಉದ್ದೇಶವೂ ಇಲ್ಲ. ಇಂಪಾಲ್ ನ ದಾರಿಯಲ್ಲಿ ನಾವು ಸುಮಾರು 20-25 ಕಿಮೀ ಸಂಚರಿಸಿದ್ದೇವೆ ಆದರೆ ಎಲ್ಲಿಯೂ ರಸ್ತೆ ತಡೆ ಇರಲಿಲ್ಲ. ಆದರೆ ಇಂಪಾಲ್ ಗೆ 25 ಕಿಲೋಮೀಟರ್ ಇರುವಾಗಲೇ ಸ್ಥಳೀಯ ಪೊಲೀಸರು ರಾಹುಲ್ ಗಾಂಧಿ ಮತ್ತು ಅವರ ಬೆಂಗಾವಲು ಪಡೆಯನ್ನು ಅಡ್ಡಗಟ್ಟಿದ್ದಾರೆ. ಇದರ ಹಿಂದೆ ಯಾರ ಸೂಚನೆ ಇದೆ ಎಂಬುದು ನಮಗೆ ಗೊತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ANI ಗೆ ತಿಳಿಸಿದ್ದಾರೆ.

ಕುಕಿ ಮತ್ತು ಮೈತಿ ಬುಡಕಟ್ಟು ಜನಾಂಗದವರ ನಡುವಿನ ದೊಡ್ಡ ಪ್ರಮಾಣದ ಘರ್ಷಣೆ, ಹಿಂಸಾಚಾರಕ್ಕೆ 50 ದಿನ ಕಳೆದಿದೆ. ಪರಿಸ್ಥಿತಿ ಉಲ್ಬಣಗೊಂಡ ನಂತರ ಮಣಿಪುರಕ್ಕೆ ಭೇಟಿ ನೀಡಿದ ಮೊದಲ ವ್ಯಕ್ತಿಯಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿಲ್ಲುತ್ತಾರೆ.

ಮಣಿಪುರದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ, ಜೂನ್ 24 ರಂದು ನವದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಆಯೋಜಿಸಿದ್ದರು. ಸಭೆಯ ನಂತರದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ “ಆಡಳಿತ ಪಕ್ಷವು ರಾಜ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಹೇಳಿದ್ದರು. ಆದರೆ ‘ಆಡಳಿತಾರೂಢ ಬಿಜೆಪಿ ಪಕ್ಷ ನಮ್ಮ ಯಾವುದೇ ಸಲಹೆಗಳನ್ನು ಸ್ವೀಕರಿಸಲು ಸಿದ್ದವಾಗಿಲ್ಲ’ ಎಂದು ಕಾಂಗ್ರೆಸ್ ಪಕ್ಷ ಆ ದಿನದಲ್ಲೇ ಪ್ರತಿಕ್ರಿಯಿಸಿತ್ತು.

ಇನ್ನು ರಾಹುಲ್ ಗಾಂಧಿಯವರನ್ನು ಮಣಿಪುರಕ್ಕೆ ಭೇಟಿ ನೀಡದಂತೆ ತಡೆದಿರುವ ಮಣಿಪುರ ಸರ್ಕಾರ ಮತ್ತು ಪೊಲೀಸರ ವರ್ತನೆ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, “ರಾಹುಲ್ ಗಾಂಧಿಯವರು ಪರಿಹಾರ ಶಿಬಿರಗಳಲ್ಲಿ ನರಳುತ್ತಿರುವ ಜನರನ್ನು ಭೇಟಿ ಮಾಡಲು ಮತ್ತು ಕಲಹ ಪೀಡಿತ ರಾಜ್ಯದಲ್ಲಿ ಶಾಂತಿಸ್ಥಾಪನೆಯ ಉದ್ದೇಶದಿಂದ ಅಲ್ಲಿಗೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಣಿಪುರದ ಬಗ್ಗೆ ಮೌನ ಮುರಿಯಲು ಪ್ರಧಾನಿ ಮೋದಿ ತಲೆಕೆಡಿಸಿಕೊಂಡಿಲ್ಲ. ಅವರು ಇಲ್ಲಿ ಸಂಬಂಧವೇ ಇಲ್ಲದಂತಿದ್ದಾರೆ. ಈಗ, ಅವರ ಡಬಲ್ ಇಂಜಿನ್ ವಿನಾಶಕಾರಿ ಸರ್ಕಾರಗಳು ಶ್ರೀ ರಾಹುಲ್ ಗಾಂಧಿಯವರ ಸಹಾನುಭೂತಿಯ ಪ್ರಭಾವವನ್ನು ನಿಲ್ಲಿಸಲು ನಿರಂಕುಶಾಧಿಕಾರದ ವಿಧಾನಗಳನ್ನು ಬಳಸುತ್ತಿವೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮಾನದಂಡಗಳನ್ನು ಛಿದ್ರಗೊಳಿಸುತ್ತದೆ. ಮಣಿಪುರಕ್ಕೆ ಶಾಂತಿ ಬೇಕು, ಸಂಘರ್ಷವಲ್ಲ.” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮತೀಯ ದುಷ್ಕರ್ಮಿಗಳಿಂದ ಕೊಲೆಯಾದ ಮಸೂದ್, ಫಾಸಿಲ್, ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಣೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋಮು ಗಲಭೆ ಮತ್ತು ಸಂಘಪರಿವಾರದ ಕಾರ್ಯಕರ್ತರಿಂದ ಕೊಲೆಗೀಡಾದ ಮಸೂದ್, ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಸಿದ್ದರಾಮಯ್ಯ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಕಳೆದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಕೋಮು ಗಲಭೆಯಲ್ಲಿ ಮೃತಪಟ್ಟ ಸಂಘ ಪರಿವಾರದ ಹಿನ್ನೆಲೆಯ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿ, ಇದೇ ಮಾದರಿಯಲ್ಲಿ ಕೊಲೆಯಾದ ಮಸೂದ್, ಫಾಜಿಲ್ ‌ಹಾಗೂ ಜಲೀಲ್ ಕುಟುಂಬವನ್ನು ನಿರ್ಲಕ್ಷಿಸಿತ್ತು. ಆ ಸಂದರ್ಭದಲ್ಲಿ ಜನಪರ ಸಂಘಟನೆಗಳ ಕಡೆಯಿಂದ ಕನಿಷ್ಟ ಕೊಲೆಯಾದ ಮುಸ್ಲಿಂ ಯುವಕರ ಮನೆಗಳಿಗೆ ಭೇಟಿ ಆದರೂ ಮಾಡಬೇಕೆಂಬ ಒತ್ತಾಯವಿದ್ದರೂ ಬಸವರಾಜ ಬೊಮ್ಮಾಯಿ ಅದಕ್ಕೆ ಕುಂಟು ನೆಪ ಹೇಳಿ ತಪ್ಪಿಸಿಕೊಂಡಿದ್ದರು.

ಇನ್ನು ಪರಿಹಾರದ ವಿತರಣೆ ಸಂದರ್ಭದಲ್ಲಿ ಕೂಡಾ ಬಿಜೆಪಿ ಸರ್ಕಾರ ಸಂಪೂರ್ಣ ತಾರತಮ್ಯ ಮೆರೆದಿದ್ದು ಸ್ಪಷ್ಟವಾಗಿ ಗೋಚರವಾಗಿತ್ತು. ದಕ್ಷಿಣ ಕನ್ನಡ ಭಾಗದ ಪ್ರವೀಣ್ ನೆಟ್ಟಾರು, ಶಿವಮೊಗ್ಗದ ಹರ್ಷ ರಂತಹ ಹಿಂದೂ ಸಂಘಟನೆ ಹಿನ್ನೆಲೆಯ ಕುಟುಂಬಗಳಿಗೆ ಮಾತ್ರ ಲಕ್ಷಗಟ್ಟಲೆ ಪರಿಹಾರ ನೀಡಿತ್ತು.

ಆ ಸಂದರ್ಭದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಮಾಡಿದ ತಾರತಮ್ಯದ ವಿರುದ್ಧ ಗುಡುಗಿದ್ದ ಕಾಂಗ್ರೆಸ್ ಪಕ್ಷ ಅಂದೇ ನ್ಯಾಯ ಎಲ್ಲರಿಗೂ ಸರಿಸಮನಾಗಿ ಇರಬೇಕು.. ಪರಿಹಾರ ವಿತರಣೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡಬಾರದು ಎಂದು ಎಚ್ಚರಿಸಿತ್ತು. ಹಾಗೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಿರ್ಲಕ್ಷ್ಯಕ್ಕೆ ಒಳಗಾದ ಇತರೆ ಯುವಕರ ಕುಟುಂಬಕ್ಕೂ ಪರಿಹಾರ ನೀಡುತ್ತೇವೆ ಎಂಬ ಭರವಸೆ ನೀಡಿತ್ತು.

ಸಧ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಿಂಗಳ ಆಸುಪಾಸಿನಲ್ಲೇ ಈಗ ಸಂಘಪರಿವಾರದ ಹೊರತಾಗಿ ಕೋಮು ಗಲಭೆಯಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ಪರಿಹಾರ ವಿತರಣೆಯ ಘೋಷಣೆ ಮಾಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರು ಸರ್ಕಾರದ ನಿರ್ಧಾರಕ್ಕೆ ಧನ್ಯವಾದ ಸೂಚಿಸಿ, ಅದೇ ರೀತಿ ಇತ್ತೀಚೆಗೆ ಸಂಘ ಪರಿವಾರದ ಹಿನ್ನೆಲೆಯವರಿಂದ ಮೃತಪಟ್ಟ ನರಗುಂದದ ಸಮೀರ್ ಹಾಗೂ ಮಂಡ್ಯದ ಇದ್ರೀಷ್ ಪಾಷ ಕುಟುಂಬಕ್ಕೂ ಪರಿಹಾರ ಸಿಗುವ ಬಗ್ಗೆ ಭರವಸೆ ಮಾತನ್ನಾಡಿದ್ದಾರೆ.

ದೇವಸ್ಥಾನದ ವಿಗ್ರಹಕ್ಕೆ ಹಾನಿ ; ಜಾಗೃತಗೊಂಡ ಪೊಲೀಸರಿಂದ ತಪ್ಪಿದ ಗುಂಪು ಘರ್ಷಣೆ
ರಾಜಸ್ಥಾನ : ರಾಜಸ್ಥಾನದ ಭರತ್‌ಪುರದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ದೇವಸ್ಥಾನದ ವಿಗ್ರಹಕ್ಕೆ ಹಾನಿಯಾದ ನಂತರ ಎರಡು ಪ್ರತ್ಯೇಕ ಸಮುದಾಯಗಳಿಗೆ ಸೇರಿದ ಜನರ ನಡುವೆ ತೀವ್ರ ಘರ್ಷಣೆ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ.

ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜಸ್ಥಾನದ ಕಾಮನ್‌ನ ಭಾಗದ ಕಾರ್ಮುಕ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಇನ್ನೊಂದು ಸಮುದಾಯದ ಮಕ್ಕಳು ದೇವಸ್ಥಾನದ ಹತ್ತಿರದಲ್ಲಿ ಆಟವಾಡುತ್ತಿದ್ದಾಗ ದೇವಸ್ಥಾನದ ವಿಗ್ರಹಕ್ಕೆ ಹಾನಿಯಾಗಿದೆ. ಈ ಸಂಬಂಧ ನಡೆದ ಘರ್ಷಣೆಯಲ್ಲಿ ಎರಡೂ ಕಡೆಯ ಜನರು ಭಾಗಿಯಾಗಿರುವುದರಿಂದ ಪೊಲೀಸರು ಈ ವಿಷಯವನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮ್ಮತ್ ಸಿಂಗ್ ಹೇಳಿದ್ದಾರೆ.

ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಮೀಲ್, ಫಕ್ರುದ್ದೀನ್ ಮತ್ತು ಅಮ್ಜಾದ್ ಎಂದು ಗುರುತಿಸಲಾದ ಮೂವರ ವಿರುದ್ಧ IPC ಸೆಕ್ಷನ್ 151 ಅಡಿಯಲ್ಲಿ ಆರೋಪ ಪಟ್ಟಿ ಹೊರಿಸಲಾಗಿದೆ.

‘ಮಕ್ಕಳು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ದೇವರ ವಿಗ್ರಹಕ್ಕೆ ಹಾನಿಯಾಗಿದೆ. ಆದರೆ ಅಲ್ಲಿನ ಜನರು ಇದನ್ನು ಹಿರಿಯರು ಮಾಡಿದ್ದಾರೆಂದು ಭಾವಿಸಿದ್ದಾರೆ. ಇದೊಂದು ತಪ್ಪು ಗ್ರಹಿಕೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮ್ಮತ್ ಸಿಂಗ್ ಹೇಳಿದ್ದಾರೆ.

ಇನ್ನು ಗಾಯಗೊಂಡವರಲ್ಲಿ ರಾಮ್ ಭರೋಸಿ, ಮನೀಶ್ ಸೈನಿ, ರಾಮ್ ಚರಣ್ ಸೈನಿ, ಗೀತಾ ದೇವಿ, ರೋಹ್ತಾಶ್ ಸೈನಿ ಮತ್ತು ರೇಖಾ ದೇವಿ ಸೇರಿದ್ದಾರೆ. ಹಾಗೂ ಅವರು ಕಾಮನ್ ನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ಪೊಲೀಸರ ಸಮ್ಮುಖದಲ್ಲಿ, ಇತರ ಸಮುದಾಯದ ಹತ್ತಕ್ಕೂ ಹೆಚ್ಚು ಜನರು ನಮ್ಮ ಮೇಲೆ ಹಲ್ಲೆ ನಡೆಸಿದರು. ಅವರ ಮಕ್ಕಳು ನಮ್ಮ ವಿಗ್ರಹಕ್ಕೆ ಹಾನಿ ಮಾಡಿದ್ದಾರೆ. ಆ ಕಾರಣ ನಾವು ಅವರನ್ನು ಪ್ರಶ್ನಿಸಿದಾಗ ಘಟನೆ ನಡೆದಿದೆ” ಎಂದು ಗಾಯಗೊಂಡವರು ತಿಳಿಸಿದ್ದಾರೆ.
ಜಾಗೃತಗೊಂಡ ಪೊಲೀಸರು ತಕ್ಷಣವೇ ಸ್ಥಳಕ್ಕೆ ದಾವಿಸಿದ ಪರಿಣಾಮ ಅನ್ಯ ಕೋಮುಗಳ ನಡುವಿನ ಘರ್ಷಣೆ ದೊಡ್ಡ ಮಟ್ಟಕ್ಕೆ ತಿರುಗುವುದು ತಪ್ಪಿದೆ. ಸಧ್ಯಕ್ಕೆ ಕಾರ್ಮುಖ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.