congres – Peepal Media

ರೈತರ ಪರ ಧ್ವನಿ ಎತ್ತುವುದಾಗಿ ತಿಳಿಸಿದ ರಾಹುಲ್‌: ಸಂಸತ್ತಿನ ಆವರಣದಲ್ಲಿ ರೈತರೊಂದಿಗೆ ಸಭೆ
ನವದೆಹಲಿ: ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ 12 ರೈತ ಮುಖಂಡರ ನಿಯೋಗವು ಲೋಕಸಭೆಯ ಸಂಕೀರ್ಣದಲ್ಲಿಂದು ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಅವರೊಂದಿಗೆ ಕನಿಷ್ಟ ಬೆಂಬಲ ಬೆಲೆ ನೀತಿ ಪರೀಷ್ಕರಣೆಗೆ ಆಗ್ರಹಿಸಿ ಸಭೆ ನಡೆಸಿತು.

ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ದೀಪೇಂದರ್ ಸಿಂಗ್ ಹೂಡಾ ಅವರು ಸಂಸದರಾದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಾರಿಂಗ್‌ ಅವರು, ರಾಹುಲ್ ಗಾಂಧಿಯವರು ಸಂಸತ್ತಿನ ಒಳಗೆ ರೈತರ ಪರ ಧ್ವನಿ ಎತ್ತುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ರೈತರು ಮತ್ತೆ  ದೆಹಲಿಗೆ ಬಂದು ಮತ್ತೊಂದು ಮೆರವಣಿಗೆ ಆಯೋಜಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ರೈತರು ದೆಹಲಿಗೆ ಬಂದು ಪ್ರತಿಭಟಿಸಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಖಾಸಗಿ ಸದಸ್ಯರ ಮಸೂದೆ ಅಗತ್ಯವಿದ್ದರೆ ನಾವು ಅದನ್ನು ಸಹ ತರುತ್ತೇವೆ” ಎಂದರು.

ರೈತರಲ್ಲಿ ಒಬ್ಬರಾದ ಜಗಜಿತ್ ಸಿಂಗ್ ದಲ್ಲೆವಾಲ್ ಮಾತನಾಡಿ, “ಸರ್ಕಾರ ಇದುವರೆಗೆ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ; ಸ್ವಾಮಿನಾಥನ್ ವರದಿ ಅನುಷ್ಠಾನ ಅತ್ಯಗತ್ಯ. ನಾವು ದೆಹಲಿ ಕಡೆಗೆ ಪಾದಯಾತ್ರೆಯನ್ನು ಮುಂದುವರಿಸಲಿದ್ದೇವೆ ಎಂದು ಅವರು ತಿಳಿಸಿದರು.

ಇದಕ್ಕೂ ಮೊದಲು, ರೈತರು ತಮ್ಮ ರಾಜ್ಯಗಳಲ್ಲಿನ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿದರು. ದೀರ್ಘಾವಧಿಯ ಬೇಡಿಕೆಗಳನ್ನು ಈಡೇರಿಸಲು ಖಾಸಗಿ ಸದಸ್ಯರ ಮಸೂದೆಯನ್ನು ಪರಿಚಯಿಸಲು ಕೇಳಿಕೊಂಡರು. ಎಂಎಸ್‌ಪಿಯನ್ನು ಪರಿಷ್ಕರಿಸಲು ಮತ್ತು ಕಾನೂನು ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಈ ಬೇಡಿಕೆಗಳು 2020 ರಲ್ಲಿ ಪ್ರಾರಂಭವಾದಾಗಿನಿಂದ ಅವರ ಪ್ರತಿಭಟನೆಯ ಮುಖ್ಯ ಭಾಗವಾಗಿದೆ ಎಂದರು.

ದೇಶದಾದ್ಯಂತದ ರೈತ ಸಂಘಗಳು ಎಂಎಸ್‌ಪಿಯನ್ನು ಬಯಸುತ್ತವೆ, ಸ್ವಾಮಿನಾಥನ್ ಆಯೋಗದ ಸಿ2+50 ಸೂತ್ರವನ್ನು ಆಧರಿಸಿರಬೇಕು, ಇದು ಬಂಡವಾಳದ ವೆಚ್ಚ ಮತ್ತು ಬೆಂಬಲ ಬೆಲೆಯನ್ನು ಲೆಕ್ಕಾಚಾರ ಮಾಡುವಾಗ ಭೂಮಿ ಬಾಡಿಗೆಯೂ ಸೇರಿರುತ್ತದೆ. ಆದರೆ, ಈಗಿರುವ ಎ2+ಎಫ್‌ಎಲ್‌+50 ಶೇಕಡಾ ವಿಧಾನವನ್ನು ಕೈಬಿಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ರೈತರನ್ನು ಸಂಸತ್ತಿ ಅವರಣದೊಳಕ್ಕೆ ಬಿಡದಿರುವುದಕ್ಕೆ ಆಕ್ರೋಶ: ರೈತರನ್ನು ಸಂಸತ್ತಿನ ಆವರಣದೊಳಕ್ಕೆ ಬಿಡದಿರುವುದಕ್ಕೆ ರೈತರು ಸ್ವಲ್ಪ ಹೊತ್ತು ಪ್ರತಿಭಟನೆ ನಡೆಸಿದರು. ಸಭೆಗೂ ಮುನ್ನ ಗೊಂದಲ ಉಂಟಾಯಿತು.

“ನಾನು ರೈತರನ್ನು ಆಹ್ವಾನಿಸಿದ್ದೆ. ಆದರೆ, ರೈತರನ್ನು ಸಂಸತ್ತಿನ  ಆವರಣದೊಳಗೆ ಬರುವುದನ್ನು ಸರ್ಕಾರದ ನಿರ್ದೇಶನದಿಂದ ಸಿಬ್ಬಂದಿ ತಡೆದರು. ಬಹುಶಃ ಅವರು ರೈತರಾಗಿರುವ ಕಾರಣಕ್ಕೆ ಇರಬಹುದು. ಇದಕ್ಕೆ ಕಾರಣವನ್ನು ನೀವು ಪ್ರಧಾನಿಯವರನ್ನು ಕೇಳಬೇಕಾಗುತ್ತದೆ.” ಎಂದು ರಾಹುಲ್ ಗಾಂಧಿ ಲೇವಡಿಯಾಡಿದರು.

ಈಗ ಸರ್ಕಾರಿ ಅಧಿಕಾರಿಗಳು RSS ಚಡ್ಡಿ ಹಾಕ್ಕೊಂಡು ಕಚೇರಿಗೆ ಬರಬಹುದು: ಜೈ ರಾಮ್‌ ರಮೇಶ್‌
ನವದೆಹಲಿ: ಆರ್‌ಎಸ್‌ಎಸ್‌ ಸಭೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಇದ್ದ ನಿಷೇಧವನ್ನು ತೆಗೆದು ಹಾಕಿರುವುದಕ್ಕೆ ಕಾಂಗ್ರೆಸ್‌ ಪಕ್ಷದ ಮುಖಂಡ ಜೈರಾಮ್‌ ರಮೇಶ್‌ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ  ಈ ಹಿಂದೆ ನಿಷೇಧಗೊಂಡಿದ್ದ RSSನ ಸಭೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು RSS ಚಡ್ಡಿ ಹಾಕ್ಕೊಂಡು ಕಚೇರಿಗೆ ಬರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ಜುಲೈ 9 ರಂದು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದೆ ಎನ್ನಲಾದ ಆದೇಶ ಪ್ರತಿಯ ಫೋಟೋವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದಾರೆ.

RSSನ ದುಷ್ಕೃತ್ಯಗಳನ್ನು ಮನಗಂಡು 1948ರ ಫೆಬ್ರವರಿಯಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಸರ್ದಾರ್ ಪಟೇಲ್ ಆರಈ ಸಂಘಟನೆಯನ್ನು ನಿಷೇಧಿಸಿದ್ದರು. ನಂತರದ ದಿನಗಳಲ್ಲಿ ಉತ್ತಮ ನಡವಳಿಕೆಯ ಭರವಸೆಯ ಮೇಲೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿತ್ತು.  ಇದಾದ ನಂತರವೂ ಆರ್‌ಎಸ್‌ಎಸ್ ನಾಗಪುರದಲ್ಲಿ ತಿರಂಗವನ್ನು ಹಾರಿಸಿರಲಿಲ್ಲ. ಹೀಗಾಗಿ 1966 ರಲ್ಲಿ, ಆರ್‌ಎಸ್‌ಎಸ್‌ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದಂತೆ  ನಿಷೇಧ ಹೇರಲಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.

ಬಿಜೆಪಿ ಪಕ್ಷದ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ  ಈ ಕಾನೂನು ಜಾರಿಯಲ್ಲಿತ್ತು. 58 ವರ್ಷಗಳ ನಿಷೇಧವನ್ನು ಈಗ ಮೋದಿ ಸರ್ಕಾರ ತೆಗೆದು ಹಾಕಿದೆ. ಇನ್ನು ಮುಂದೆ  ಅಧಿಕಾರಿಗಳು ಚೆಡ್ಡಿ ತೊಟ್ಟು ಬರಬಹುದು ಎಂಬುವುದು ನನ್ನ ಭಾವನೆ” ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೂಡಾ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.

ಉತ್ತರ ಪ್ರದೇಶದಲ್ಲೊಂದು ಹೇಯ ಕ್ರೌರ್ಯ… ಮುಸ್ಲಿಂ ವಿದ್ಯಾರ್ಥಿಗೆ ತರಗತಿಯ ವಿದ್ಯಾರ್ಥಿಗಳಿಂದ ಹೊಡೆಸಿದ ಶಿಕ್ಷಕಿ
ಲಕ್ನೋ: ಯುಪಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಸಹ ವಿದ್ಯಾರ್ಥಿಗಳ ಬಳಿ ಹೊಡೆಸಿದ ಘಟನೆ ಸಂಚಲನ ಮೂಡಿಸಿದೆ. ವಿದ್ಯಾರ್ಥಿಯನ್ನು ಥಳಿಸಿದ್ದಲ್ಲದೆ, ಆಕೆಯ ದ್ವೇಷದ ಮಾತುಗಳನ್ನು ಆಡಿರುವುದು ಈಗ ವಿವಾದವನ್ನು ಇನ್ನಷ್ಟು ದೊಡ್ಡದಾಗಿಸಿದೆ.

ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದ್ದು ರಾಜಕೀಯ ವಲಯದಲ್ಲಿ ಕಿಚ್ಚು ಹೊತ್ತಿಸಿದೆ.

ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಪಾಠ ಹೇಳಬೇಕಿದ್ದ ಶಿಕ್ಷಕಿ ಅಮಾನವೀಯವಾಗಿ ವರ್ತಿಸಿ ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ದ್ವೇಷ ತುಂಬಲು ಯತ್ನಿಸಿದ್ದಾಳೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ. ವೀಡಿಯೋ ಆಧರಿಸಿ ಯುಪಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

How humiliating for a small child to be put through this at a young age.

Making the Muslim boy stand in front of the whole class and getting the Hindu kids to come and slap him.

That teacher needs a slap tbh pic.twitter.com/n1KDWtTTwQ
— Abu Hafsah (@AbuHafsah1) August 25, 2023

ಪೊಲೀಸರ ಪ್ರಕಾರ ಶಿಕ್ಷಕರಿಂದ ಥಳಿಸಿದ ಬಾಲಕ ಮುಸ್ಲಿಂ. ಶಿಕ್ಷಕಿ ಧರ್ಮ ದೂಷಣೆ ಎಸಗಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿದ್ದು, ಆಕೆಯ ಧರ್ಮ ಯಾವುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಗಣಿತ ಟೇಬಲ್ ಕಲಿಯದಿದ್ದಕ್ಕೆ ಧಾರ್ಮಿಕ ನಿಂದನೆ ಮಾಡುವದರ ಜೊತೆಗೆ ಮುಸ್ಲಿಂ ವಿದ್ಯಾರ್ಥಿಯ ಮೇಲೆ ತನ್ನ ಸಹವರ್ತಿ ವಿದ್ಯಾರ್ಥಿಗಳನ್ನು ಬಾಲಕನ ಮೇಲೆ ಹಲ್ಲೆಗೆ ಪ್ರೇರೇಪಿಸಿದ್ದಾಳೆ ಎನ್ನಲಾಗಿದೆ. ಮಕ್ಕಳ ಹಕ್ಕುಗಳ ಸಂಘಟನೆಯೂ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

मासूम बच्चों के मन में भेदभाव का ज़हर घोलना, स्कूल जैसे पवित्र स्थान को नफ़रत का बाज़ार बनाना – एक शिक्षक देश के लिए इससे बुरा कुछ नहीं कर सकता।

ये भाजपा का फैलाया वही केरोसिन है जिसने भारत के कोने-कोने में आग लगा रखी है।

बच्चे भारत का भविष्य हैं – उनको नफ़रत नहीं, हम सबको मिल…
— Rahul Gandhi (@RahulGandhi) August 25, 2023

ಶಾಲಾ ಆಡಳಿತ ಮಂಡಳಿ ರಾಜಿ ಸಂಧಾನಕ್ಕೆ ಬಂದಿದ್ದು, ತಾವು ಕಟ್ಟಿಸಿಕೊಂಡಿದ್ದ ಶುಲ್ಕವನ್ನೂ ವಾಪಸ್ ನೀಡಿದ್ದು, ಇನ್ನು ಮುಂದೆ ತಮ್ಮ ಮಗುವನ್ನು ಆ ಶಾಲೆಗೆ ಕಳುಹಿಸುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಬಾಲಕನ ತಂದೆ ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸುವ ಮನಸ್ಸಿಲ್ಲದ ಕಾರಣ ವಿಷಯವನ್ನು ಇಲ್ಲಿಗೆ ಬಿಡುವಂತೆ ಅವರು ಕೋರಿದರು.

ಈ ವಿಚಾರವಾಗಿ ಕಾಂಗ್ರೆಸ್ ಸಂಸದ ರಾಜೀವ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.. ಪವಿತ್ರ ಶಾಲೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತುವುದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ. ಇದು ಬಿಜೆಪಿ ಸರಕಾರವೇ ಪೋಷಿಸಿದ ದ್ವೇಷದ ಪರಿಣಾಮವಾಗಿದೆ. ಚಿಕ್ಕ ಮಕ್ಕಳು ದೇಶದ ಭವಿಷ್ಯ. ಅವರನ್ನು ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಸಬೇಕು ಎಂದರು.

पुलिस द्वारा मामला संज्ञान में ले लिया गया है और अध्यापिका पर विभागीय कार्यवाही की जा रही है pic.twitter.com/QtpzrOik6R
— रेखा तिवारी (@_Prayagraj) August 25, 2023

ಮತ್ತೋರ್ವ ಸಂಸದ ಜಯಂತ್ ಸಿಂಗ್ ಪ್ರತಿಕ್ರಿಯಿಸಿದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಲ್ಪಸಂಖ್ಯಾತರ ವಿರುದ್ಧ ಕೋಮುದ್ವೇಷ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ಥಳೀಯ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಯ ಭವಿಷ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.ಪೊಲೀಸರು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದಿದ್ದಾರೆ.

Muzaffarnagar school video is a painful warning of how deep rooted religious divides can trigger violence against the marginalised, minority communities. Our MLAs from Muzzafarnagar will ensure that UP Police files a case suomoto & the child’s education is not disrupted!
— Jayant Singh (@jayantrld) August 25, 2023