CONGRESS LEADERS – Peepal Media

ನಾನು ರೀಲ್‌ ನಾಗವಲ್ಲಿ ಅಲ್ಲ, ಟ್ರೋಲ್‌ಗಳ ಪಾಲಿಗೆ ಒರಿಜಿನಲ್‌ ನಾಗವಲ್ಲಿ: ಪ್ರತಿಭಾ ಕುಳಾಯಿ ಕಿಡಿ
ಮಂಗಳೂರು :  ಆರ್‌ ಎಸ್‌ ಎಸ್‌, ಬಿಜೆಪಿಯ ಟ್ರೋಲ್‌ ಗಳು ಇಂತಹ ಟ್ರೋಲ್‌ ಮೂಲಕ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ. ನಾನು ರಾಣಿ ಅಬ್ಬಕ್ಕ ಹುಟ್ಟಿದ ಊರಿನಲ್ಲಿ ಹುಟ್ಟಿದವಳು. ನಾನು ಆ ಸಿನಿಮಾದಲ್ಲಿನ ರೀಲ್ ನಾಗವಲ್ಲಿ ಅಲ್ಲ,  ಒರಿಜಿನಲ್ ನಾಗವಲ್ಲಿ.‌ ಈ ಟ್ರೋಲ್‌ಗಳಿಗೆಲ್ಲಾ ಹೆದರುವವಳಲ್ಲʼ ಎಂದು ಮಾಜಿ ಕಾರ್ಪೊರೇಟರ್‌, ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ಇಂದು ಕೆಂಡಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕುರಿತು ಬರುತ್ತಿರುವ ಕೀಳು ಮಟ್ಟದ ಅಪಪ್ರಚಾರ ಮತ್ತು ಟ್ರೋಲ್‌ ಕುರಿತು ಸುದ್ದಿಗಾರರೊಂದಿಗೆ ಮಾತಾಡಿದ ಅವರು ಬಿಜೆಪಿಯವರು ಮಹಿಳೆಯರನ್ನು ನಡೆಸಿಕೊಳ್ಳುವ ಸಂಸ್ಕಾರದ ಕುರಿತು ಕಿಡಿಕಾರಿದ್ದಾರೆ.

ಇತ್ತೀಚೆಗೆ ನಡೆದ ಸೂರತ್‌ಕಲ್‌ ಟೋಲ್‌ ಗೇಟ್‌ ತೆರವು ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್‌ ನಾಯಕಿ ಪ್ರತಿಭಾ ಕುಳಾಯಿ ವಿರುದ್ದ  ಕಾಂತಾರ–2, ನಾಗವಲ್ಲಿ ಇನ್ನಿತರ ಹೆಸರುಗಳನ್ನಿಟ್ಟು ವಿಡಿಯೋ ಮಾಡಿ ಟ್ರೋಲ್‌ ಮಾಡಿದ್ದಲ್ಲದೇ ಅಶ್ಲೀಲವಾಗಿ ಟ್ರೋಲ್‌ ನಡೆದಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಟೋಲ್‌ ಗೇಟ್‌ ವಿರೋದಿ ಹೋರಾಟದ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಿರುವ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಎಳೆಯುತ್ತಿರುವ ಫೋಟೋವೊಂದನ್ನು ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದ ಕೆ.ಆರ್.ಶೆಟ್ಟಿ ಅಡ್ಯಾರ್‌ ಪದವು ಎಂಬ ವ್ಯಕ್ತಿಯ ಪೋಸ್ಟನ್ನು ಆರೆಸ್ಸೆಸ್‌ ಬಿಜೆಪಿ ಬೆಂಬಲಿತ ಕಹಳೆ ನ್ಯೂಸ್‌ ಸಂಪಾದಕ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ಹಂಚಿಕೊಂಡಿದ್ದ. ಅದರಲ್ಲಿ ಅವನು “ಮಲಗಿ ಒಳ್ಳೆ ಅಭ್ಯಾಸ ಉಂಟು ಮಾರ್ರೆ, #ಓರಾಟ, #ಪ್ರತಿಭೆ #ಕುಳಾಯಿ ಎಂದು ರೇಪಿಸ್ಟ್‌ ಭಾಷೆಯಲ್ಲಿ ಬರೆದುಕೊಂಡಿದ್ದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ತನ್ನನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅಖಿಲ ಬಾರತೀಯ ವಿದ್ಯಾರ್ಥಿ ಪರಿಷತ್‌ ಗಳಲ್ಲಿ ಕೆಲಸ ಮಾಡಿದವನು ಎಂದು ಸಹ ಈ ಶ್ಯಾಮ ಭಟ್‌ ಪರಿಚಯ ಬರೆದುಕೊಂಡಿದ್ದನಲ್ಲದೇ ಹಲವು ಬಿಜೆಪಿ ಮುಖಂಡರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ.

ಆರೆಸ್ಸೆಸ್‌ ಬೆಂಬಲಿತ ಕಹಳೆ ನ್ಯೂಸ್‌ ಸಂಪಾದಕ ಆರ್‌ ಎಸ್‌ ಎಸ್‌ ಕಾರ್ಯಕರ್ತ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆಯ ಪೋಸ್ಟ್‌

ಆರ್‌ ಎಸ್‌ ಎಸ್‌ ಕಾರ್ಯಕರ್ತ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆಯ ಪ್ರೊಫೈಲ್‌

“ನಾನು ಒಂದು ಹಿಂದುಳಿದ ವರ್ಗದ ಮಹಿಳೆಯಾಗಿ ಬಿಲ್ಲವ ಸಮಾಜಕ್ಕೆ ಸೇರಿದವಳು. ಒಂದು ಸಲ ಬಿಜೆಪಿ ಉಪಾಧ್ಯಕ್ಷ ಜಗದೀಶ್‌ ಅಧಿಕಾರಿ ನಮ್ಮ ಸಮುದಾಯದ ಬಗ್ಗೆ ತುಂಬಾ ಕೇವಲವಾಗಿ ಮಾತನಾಡಿದ್ದ. ಜನಾರ್ಧನ್‌ ಪೂಜಾರಿ ಬಗ್ಗೆ ಕೇವಲವಾಗಿ ಮಾತನಾಡಿದ್ದ. ಆ ದಿನಗಳಲ್ಲಿ ನಾನು ಜಗದೀಶ್‌ ಅಧಿಕಾರಿಯ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ ನಂತರ ಸ್ವತಃ ಅವರೇ ಬಂದು ನನ್ನ ಬಳಿ ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು.

ಹಾಲಪ್ಪ, ರಘುಪತಿ ಭಟ್‌, ರೇಣುಕಾಚಾರ್ಯ, ಜಾರಕಿಹೊಳಿ ಇಂತಹ ನಾಚಿಕೆಗೆಟ್ಟವರು ಲಂಚದ ಹೆಸರಿನಲ್ಲಿ ಅವರ ವಿಡಿಯೋ ವೈರಲ್‌ ಆಗಿವೆ.  ಇವತ್ತು ರಾಜಕಾರಣ ಮಾಡುತ್ತಾ ಇದಾರೆ, ಚುನಾವಣೆಗೆ ನಿಲ್ಲುತ್ತಾ ಇದ್ದಾರೆ, ಜನರನ್ನು ಹೆದರಿಸುತಿದ್ದಾರೆ. ಈ ಟೋಲ್‌ ಗೇಟ್‌ ಎಂಬುದು ಶಾಸಕರುಗಳಿಗೆ ವಸೂಲಿ ಕೇಂದ್ರವಾಗಿದೆ ಅದಕ್ಕೆ ಅದನ್ನು ಮುಚ್ಚುತ್ತಿಲ್ಲ ಎಂದು ಪ್ರತಿಭಾ ಕುಳಾಯಿ ಕಿಡಿಕಾರಿದ್ದಾರೆ.

“RSS ಪತ್ರಿಕೆ ನಡೆಸುವ ಶ್ಯಾಮ್‌ ಸುದರ್ಶನ್‌ ಭಟ್ ಹೊಸಮೂಲೆ  ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅತ್ಯಂತ ಕೆಟ್ಟದಾಗಿ ಬಿಂಬಿಸಿ ಅವಾಚ್ಯ ಶಬ್ಧಗಳಿಂದ ಹರಿದು ಬಿಟ್ಟಿದ್ದಾರೆ. ಇವರು ಯಾವುದೇ ಮೇಲಿನ ಸ್ಥಾನದಲ್ಲಿದ್ದರೂ ನಾನು ಒಬ್ಬ ಮಹಿಳೆಯಾಗಿ ಏನು ಮಾಡಬೇಕೋ ಅದನ್ನು ಮಾಡಿ ತೋರಿಸ್ತೇನೆ, ಈ ರೀತಿ ಮಾತನಾಡುವವರ ಮನಸ್ಥಿತಿ ಅವರ ಮನೆಯವರೂ  ಇದೇ ರೀತಿ  ಚಿಂತನೆವುಳ್ಳವರೋ ಏನೋʼ  ಇಂತಹವರಿಗೆ ಮಹಿಳೆಯಾಗಿ ತಕ್ಕ ಪಾಠ ಕಲಿಸುತ್ತೇನೆ ಎಂದೂ ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರತಿಭಾ ಕುಳಾಯಿ ತಮ್ಮ ಕುರಿತು ಅವಾಚ್ಯ ಶಬ್ದಗಳಿಂದ ಫೇಸ್ಬುಕ್‌ ನಲ್ಲಿ ಬರೆದಿದ್ದ ಈ ಆರೆಸ್ಸೆಸ್‌ ಕಾರ್ಯಕರ್ತರ ಮೇಲೆ ಪೊಲೀಸ್‌ ಕಮಿಶನರ್‌ ಅವರಲ್ಲಿ ದೂರು ಸಲ್ಲಿಸಿದ್ದು ಎಫ್‌ ಐ ಆರ್‌ ದಾಖಲಾಗಿದೆ.

PayCM ನಂತರ SayCM ; ತೀವ್ರ ಮುಜುಗರಕ್ಕೆ ಸಿಕ್ಕಿದ ಬಿಜೆಪಿ ಪಕ್ಷ
ಕಳೆದ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆ ಮತ್ತು ಪ್ರಣಾಳಿಕೆಯನ್ನೇ ಮುಂದಿಟ್ಟು ಈಗ ಕಾಂಗ್ರೆಸ್ ಪಕ್ಷ #SayCM ಅಭಿಯಾನ ಶುರು ಮಾಡಿದೆ.

ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಾಮಾಜಿಕ ಜಾಲತಾಣಗಳಲ್ಲಿ “ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ?” ಎನ್ನುವ ರೀತಿಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಈ ಹಿಂದೆ ಆರಂಭಿಸಿದ್ದ ‘40% ಸರ್ಕಾರ’ ವೆಬ್‌ಸೈಟ್‌ಗೆ ಲಿಂಕ್ ಆಗುವ ಕ್ಯೂಆರ್‌ ಕೋಡ್ ಹಾಕಿ, ‘ನಿಮ್ ಹತ್ರ ಇದ್ಯಾ ಉತ್ತರ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

ಬಿಜೆಪಿ ಪಕ್ಷದ ಕಳೆದ ಬಾರಿಯ ಪ್ರಣಾಳಿಕೆ ಇಟ್ಟು ಟ್ವಿಟ್ ಮಾಡಿ “ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ..? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ?. ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ ಕರ್ನಾಟಕ ಬಿಜೆಪಿ?” ಎಂದು ಬಿಜೆಪಿ ಸಾಮಾಜಿಕ ಜಾಲತಾಣ, ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡುವ ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಹರಿಹಾಯ್ದಿದೆ.

“ಕರ್ನಾಟಕದ ಜನತೆಗೆ ಬಿಜೆಪಿ ಪಕ್ಷ ಚುನಾವಣೆಗೂ ಮುನ್ನ 613 ಆಶ್ವಾಸನೆಗಳ ಮಹಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಆದರೆ 3 ವರ್ಷ ಕಳೆದರೂ 613 ಆಶ್ವಾಸನೆಗಳ ಪೈಕಿ ಬಿಜೆಪಿ ಶೇ.10ರಷ್ಟು ಕೂಡಾ ಭರವಸೆಯನ್ನೂ ಈಡೇರಿಸಿಲ್ಲ. ಈ ಬಗ್ಗೆ ಮೌನವೇಕೆ? #SayCM ಬಿಜೆಪಿಯ ವಿಫಲ ಭರವಸೆಗಳನ್ನು ತಿಳಿಯಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ” ಎಂದು ಪೇಸಿಎಂ ರೀತಿಯಲ್ಲೇ ಸೇಸಿಎಂ ನ ಕ್ಯೂಆರ್ ಕೋಡ್ ಮಾಡಿ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.

ಮಂಗಳವಾರ ಸಂಜೆಯಿಂದಲೇ SayCM ಅಭಿಯಾನ ಶುರುವಾಗಿದ್ದು, ಬಿಜೆಪಿಗೆ ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ‌. ಕಾಂಗ್ರೆಸ್ ಪಕ್ಷದ PayCM ಅಭಿಯಾನ ರಾಜ್ಯ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಹೆಚ್ಚು ಸುದ್ದಿ ಮಾಡಿತ್ತು. QR code ಬಳಸಿದ ವೆಬ್ಸೈಟ್ನಲ್ಲಿ ಬಿಜೆಪಿ ಪಕ್ಷದ ಭ್ರಷ್ಟಾಚಾರ, ವಚನ ಭ್ರಷ್ಟತೆ, 40% ಕಮೀಷನ್ ಆರೋಪದ ಬಗ್ಗೆ ಹೆಚ್ಚು ಒತ್ತು ನೀಡಿ ಮಾಹಿತಿ ನೀಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷ SayCM ಅಡಿಯಲ್ಲಿ ಹಿಂದೆ ಬಿಜೆಪಿ ನೀಡಿದ ಪ್ರಣಾಳಿಕೆ ಇಟ್ಟು ಬಿಜೆಪಿಯನ್ನು ಮತ್ತೆ ಮುಜುಗರಕ್ಕೆ ಸಿಕ್ಕಿಸಿದೆ.

ಇಂದಿಗೆ 1000 ಕಿಲೋಮೀಟರ್‌ ನಡಿಗೆ ಪೂರೈಸಿದ ಭಾರತ ಐಕ್ಯತಾ ಯಾತ್ರೆ
ಬಳ್ಳಾರಿ: ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಆರಂಭವಾದ ಭಾರತ ಐಕ್ಯತಾ ಯಾತ್ರೆ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಕಾಲಿಟ್ಟಿದ್ದು,ಇಂದಿಗೆ ಒಟ್ಟು 1000 ಕಿ.ಮೀ ನಡಿಗೆಯನ್ನು ಯಶಸ್ವಿಯಾಗಿ ಪೂರೈಸಿದೆ.

1000 ಕಿಲೋಮೀಟರ್‌ ಪೂರೈಸಿದ ಸಂಭ್ರಮದಲ್ಲಿ ಭಾರತ ಐಕ್ಯತಾ ಯಾತ್ರೆ

ಸ್ವತಂತ್ರ ಹೋರಾಟದಲ್ಲಿ ಮಹಾತ್ಮ ಗಾಂಧಿಯವರು 1000 ಕಿಲೋಮೀಟರ್ ಪಾದಯಾತ್ರೆಯನ್ನು ನಡೆಸಿದ್ದರು. ಅಂದು ಬ್ರಿಟಿಷರಿಂದ ಸ್ವತಂತ್ರಕ್ಕೆ ಯಾತ್ರೆ, ಇಂದು ದ್ವೇಷ, ಸರ್ವಾಧಿಕಾರ, ಜನವಿರೋಧಿಗಳಿಂದ ಭಾರತವನ್ನು ಮುಕ್ತಗೊಳಿಸಲು  ಯಾತ್ರೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದೆ.

NEP ರದ್ದುಗೊಳಿಸುತ್ತೇವೆ ಎಂದ ಕಾಂಗ್ರೆಸ್‌ ನಾಯಕರಿಗೆ: ಬಿಜೆಪಿ ವಿರೋಧ
ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ರದ್ದುಗೊಳಿಸುತ್ತೇವೆ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ.

ನಾಗಮಂಗಲ ತಾಲೂಕಿನ ಅಂಚೆಭುವನಹಳ್ಳಿಯಲ್ಲಿ ಶುಕ್ರವಾರ ರಾಷ್ಟ್ರೀಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶಿಕ್ಷಣ ತಜ್ಞರು ಹಾಗು ಶಾಲಾ ಮಾಲೀಕರ ಜತೆ ಸಂವಾದ ನಡೆಸಿದ ನಂತರ, ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ನಾಯಕರುಗಳು ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಎಜ್ಯುಕೇಶನ್‌ ಎಮರ್ಜೆನ್ಸಿ ಸೃಷ್ಠಿಯಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎನ್‌ಇಪಿ ಯನ್ನು ಕಿತ್ತು ಹಾಕುತ್ತೇವೆ ಎಂದು ಹೇಳಿದ್ದರು.

ಈ ಹೇಳಿಕೆ ಕುರಿತು ರಾಜ್ಯ ಬಿಜೆಪಿ ಘಟಕ ಟ್ವೀಟ್‌ ಮಾಡಿದ್ದು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 370ನೇ ವಿಧಿ ಮರುಸ್ಥಾಪನೆ, ಎನ್‌ಇಪಿ, ಮತಾಂತರ ನಿಯಂತ್ರಣ ಕಾಯ್ದೆ, ಗೋಹತ್ಯೆ ನಿಷೇಧ ಕಾನೂನು ಸೇರಿದಂತೆ ದೇಶದ ಪರವಾಗಿರುವ ನಿರ್ಧಾರಗಳನ್ನು ರದ್ದುಗೊಳಿಸುವ ವಾಗ್ದಾನ ನೀಡುತ್ತಿದೆ. ಮತಾಂಧರ ಓಲೈಕೆಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವೇ ಎಂದು ಟೀಕಿಸಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 370ನೇ ವಿಧಿ ಮರುಸ್ಥಾಪನೆ, ಎನ್‌ಇಪಿ, ಮತಾಂತರ ನಿಯಂತ್ರಣ ಕಾಯ್ದೆ, ಗೋಹತ್ಯೆ ನಿಷೇಧ ಕಾನೂನು ಸೇರಿದಂತೆ ದೇಶದ ಪರವಾಗಿರುವ ನಿರ್ಧಾರಗಳನ್ನು ರದ್ದುಗೊಳಿಸುವ ವಾಗ್ದಾನ ನೀಡುತ್ತಿದೆ.

ಮತಾಂಧರ ಓಲೈಕೆಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವೇ?#ದೇಶವಿರೋಧಿಕಾಂಗ್ರೆಸ್ pic.twitter.com/BSchF16gj1
— BJP Karnataka (@BJP4Karnataka) October 8, 2022

ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆಗೆ ಚಾಲನೆ: ಬೆಂಬಲಕ್ಕೆ ಹರಿದು ಬಂದ ಜನಸ್ತೋಮ
ಚಾಮರಾಜನಗರ: ಭಾರತ ಐಕ್ಯತಾ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗುವುದರ ಮೂಲಕ ಬೆಂಬಲ ಸೂಚಿಸಿದ್ದಾರೆ.

ಕರ್ನಾಟಕವನ್ನು ಪ್ರವೇಶಿಸಿರುವ ಭಾರತ ಐಕ್ಯತಾ ಯಾತ್ರೆಯ ಉದ್ಘಾಟನೆಯನ್ನು ರಾಹುಲ್‌ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್‌ ನಾಯಕರು ಸೇರಿ ಉದ್ಘಾಟಿಸಿದರು.

ಈ ವೇಳೆ ಯಾತ್ರೆಯ ಉದ್ಘಾಟನೆ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ದೇಶದಲ್ಲಿ ‌ಬಿಜೆಪಿ‌ ಆರ್ ಎಸ್‌ಎಸ್ ದ್ವೇಷ ಹರಡುವ ವಿರುದ್ಧ, ‌ಸಂವಿಧಾನದ ರಕ್ಷಣೆಗಾಗಿ ಭಾರತ್ ಜೋಡೋ ಯಾತ್ರೆ ನಡೆಸಲಾಗುತ್ತಿದೆ. ಇದು ಭಾರತೀಯರ ಯಾತ್ರೆ. ಈ ಯಾತ್ರೆಗೆ  ಧರ್ಮ, ಜಾತಿ, ಲಿಂಗ ಎಂಬ ಅಸಮಾನತೆ ಇಲ್ಲದೇ ಭಾರತ ಐಕ್ಯತೆಗೆ ಎಲ್ಲಾರು ಬೆಂಬಲವಾಗಿ ನಿಂತಿದ್ದಾರೆ. ಇದೆ ನಮ್ಮ ಸುಂದರವಾದ, ಶಾಂತಿಯುತವಾದ, ಸೌಹಾರ್ದತೆಯ ಭಾರತ. ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಈ ಯಾತ್ರೆಯನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ, ಯಾತ್ರೆಯಲ್ಲಿ ಸಾವಿರಾರು ಜನರು ತಮ್ಮ ನೋವನ್ನು , ಕಷ್ಟವನ್ನು ಹಂಚಿಕೊಂಡಿದ್ದಾರೆ.  ನಿರುದ್ಯೋಗ, ಬೆಲೆ ಏರಿಕೆ, ರೈತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸುತ್ತಿದ್ದಾರೆ. ಈ ಹಿನ್ನಲೆ, ಯಾತ್ರೆಗೆ ಲಕ್ಷಾಂತರ ಜನರು ಬೆಂಬಲ ನೀಡುತ್ತಿರುವುದು ನಿಜಕ್ಕೂ ಯಾತ್ರೆಗೆ ಹುರುಪು ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯಾತ್ರೆಯು ಗುಂಡ್ಲುಪೇಟೆಯಿಂದ ಶುರುವಾಗಿದ್ದು, ಯಾತ್ರೆಯಲ್ಲಿ ಕಾಂಗ್ರೆಸ್‌ ಮುಖಂಡರುಗಳು, ನಾಯಕರು ಸೇರಿದಂತೆ, ಯಾತ್ರೆಯ ಬೆಂಬಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.