constitution day – Peepal Media

ಆರೆಸ್ಸೆಸ್, ಜನಸಂಘ ಸಂವಿಧಾನವನ್ನು ವಿರೋಧಿಸಿತ್ತು: ಖರ್ಗೆ
ಹೊಸದಿಲ್ಲಿ: 1949ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮತ್ತು ಜನಸಂಘವು ಮನುಸ್ಮೃತಿಯನ್ನು ಆಧರಿಸಿದೆ ರಚಿಸಿರುವ ಸಂವಿಧಾನವನ್ನು ವಿರೋಧಿಸಿತ್ತು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಡಿಸೆಂಬರ್ 16, ಸೋಮವಾರ ಆರೋಪಿಸಿದರು. 2002 ರಲ್ಲಿ RSS ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಲು ನ್ಯಾಯಾಲಯದ ಆದೇಶ ನೀಡುವ ವರೆಗೆ ಆರ್‌ಎಸ್‌ಎಸ್ ಸಂವಿಧಾನ ಅಥವಾ ತ್ರಿವರ್ಣ ಧ್ವಜವನ್ನು ಸ್ವೀಕರಿಸಲಿಲ್ಲ ಎಂದು ಅವರು ಹೇಳಿದರು.

“ಕೇವಲ ಒಬ್ಬರಿಗೊಬ್ಬರು ಬೊಟ್ಟು ಮಾಡಿ ತೋರಿಸುವುದರಿಂದ ಉಪಯೋಗವಿಲ್ಲ. ಜನಸಂಘವು ಒಮ್ಮೆ ಮನುಸ್ಮೃತಿಯ ಕಾನೂನುಗಳ ಆಧಾರದ ಮೇಲೆ ಸಂವಿಧಾನವನ್ನು ರಚಿಸುವ ಗುರಿಯನ್ನು ಹೊಂದಿತ್ತು. ಇದು ಆರ್‌ಎಸ್‌ಎಸ್‌ನ ಉದ್ದೇಶವಾಗಿತ್ತು. ತ್ರಿವರ್ಣ ಧ್ವಜ, ಅಶೋಕ ಚಕ್ರ, ಸಂವಿಧಾನವನ್ನು ಅವಹೇಳನ ಮಾಡುವವರು ಈಗ ನಮಗೆ ಪಾಠ ಮಾಡುತ್ತಿದ್ದಾರೆ. ಸಂವಿಧಾನವನ್ನು ಜಾರಿಗೆ ತಂದ ದಿನ, ಈ ಜನರು ರಾಮಲೀಲಾ ಮೈದಾನದಲ್ಲಿ [ಬಿಆರ್] ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರ ಪ್ರತಿಕೃತಿಗಳನ್ನು ಸುಟ್ಟರು. ಅವರು ನಾಚಿಕೆಯಿಲ್ಲದೆ ನೆಹರು-ಗಾಂಧಿ ಕುಟುಂಬವನ್ನು ಅವಮಾನಿಸುತ್ತಾರೆ,” ಎಂದು ಖರ್ಗೆ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ’ ಕುರಿತ ಚರ್ಚೆಯಲ್ಲಿ ಹೇಳಿದರು.

“ಅವರು ಸಂವಿಧಾನ ಅಥವಾ ತ್ರಿವರ್ಣ ಧ್ವಜವನ್ನು ಸ್ವೀಕರಿಸಲಿಲ್ಲ. 26 ಜನವರಿ 2002 ರಂದು, ಮೊದಲ ಬಾರಿಗೆ, ಬಲವಂತದ ಮೇರೆಗೆ RSS ಪ್ರಧಾನ ಕಛೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಏಕೆಂದರೆ ನ್ಯಾಯಾಲಯದ ಆದೇಶವಿತ್ತು,” ಎಂದು ಅವರು ಹೇಳಿದರು.

ಇದಲ್ಲದೆ, ಸಂವಿಧಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗಳನ್ನು ವಿರೋಧಿಸಿದ ಕಾಂಗ್ರೆಸ್ ಅಧ್ಯಕ್ಷರು, ದೇಶಕ್ಕಾಗಿ ಹೋರಾಡದವರಿಗೆ ಅದರ ಮಹತ್ವವನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಆರೋಪಿಸಿದರು.

11 ವರ್ಷಗಳ ಕಾಲ ಭರವಸೆಗಳನ್ನು ಈಡೇರಿಸಲು ವಿಫಲವಾದ ಮತ್ತು ಭಾರತವನ್ನು ದಾರಿ ತಪ್ಪಿಸಿದ್ದಕ್ಕಾಗಿ ಮೋದಿಯನ್ನು “ನಂಬರ್ ಒನ್ ಸುಳ್ಳುಗಾರ” ಎಂದು ಕರೆದರು. ಭರವಸೆ ನೀಡಿದ 15 ಲಕ್ಷ ರೂ.ಗಳ ಉದಾಹರಣೆಯನ್ನು ಅವರು ಉಲ್ಲೇಖಿಸಿ, ಅದು ಎಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ಕಳೆದ 11 ವರ್ಷಗಳಲ್ಲಿ ಸಂವಿಧಾನವನ್ನು ಬಲಪಡಿಸಲು ಪ್ರಧಾನಿ ಏನು ಮಾಡಿದ್ದಾರೆ ಎಂಬುದನ್ನು ಅವರು ವಿವರಿಸಬೇಕು ಎಂದು ಖರ್ಗೆ ಆಗ್ರಹಿಸಿದರು.

“ದೇಶಕ್ಕಾಗಿ ಹೋರಾಡದವರಿಗೆ ಸ್ವಾತಂತ್ರ್ಯ ಮತ್ತು ಸಂವಿಧಾನದ ಮಹತ್ವ ಹೇಗೆ ತಿಳಿಯುತ್ತದೆ? ಪ್ರಧಾನಿ ನಮಗೆ ಕಲಿಸುತ್ತಿದ್ದಾರೆ. ನಾವೂ ಸುಳ್ಳು ಹೇಳುತ್ತೇವೆ ಆದರೆ ನಂಬರ್ ಒನ್ ಸುಳ್ಳುಗಾರ ಪ್ರಧಾನಿ,” ಎಂದು ಹೇಳಿದರು. 15 ಲಕ್ಷ ನೀಡುವುದಾಗಿ ಹೇಳಿದ್ದರೂ ಏನೂ ಬಂದಿಲ್ಲ. ಇವರು ಸುಳ್ಳು ಹೇಳಿ ದೇಶವನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಜನರನ್ನು ವಂಚಿಸುತ್ತಿದ್ದಾರೆ. ಸಂವಿಧಾನವನ್ನು ಬಲಪಡಿಸಲು ಕಳೆದ 11 ವರ್ಷಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ಪ್ರಧಾನಿ ಹೇಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

ಪ್ರಗತಿಪರ ವಿದ್ಯಾರ್ಥಿಗಳಿಗೆ ಹೆಸರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಹಳೆಯ ವಿದ್ಯಾರ್ಥಿಯಾಗಿದ್ದರೂ ಸಮಾಜವಾದವನ್ನು ಪ್ರಶ್ನಿಸುವವರನ್ನು ಹೇಗೆ ಬೆಂಬಲಿಸುತ್ತೀರಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಖರ್ಗೆ ವ್ಯಂಗ್ಯವಾಡಿದರು.

“ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಓದಿದ್ದಾರೆ, ಅವರು ಅಲ್ಲಿ ಏನು ಓದಿದ್ದಾರೆಂದು ನನಗೆ ತಿಳಿದಿಲ್ಲ ಆದರೆ ಜೆಎನ್‌ಯು ವಿದ್ಯಾರ್ಥಿಗಳು ತುಂಬಾ ಪ್ರಗತಿಪರರು. ಮತ್ತು, ಇಲ್ಲಿ ಅವರು ಸಮಾಜವಾದವನ್ನು ಪ್ರಶ್ನಿಸುವವರನ್ನು ಬೆಂಬಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿ ತನ್ನ ಸಿದ್ಧಾಂತವನ್ನು ಹೀಗೆ ಬದಲಾಯಿಸಲು ಹೇಗೆ ಸಾಧ್ಯ?” ಎಂದು ಖರ್ಗೆ ಪ್ರಶ್ನಿಸಿದರು.

ಭಾರತೀಯ ಜನತಾ ಪಕ್ಷ (ಬಿಜೆಪಿ) ಜನರನ್ನು ಮೂರ್ಖರನ್ನಾಗಿಸಲು ಜುಮ್ಲಾಗಳನ್ನು ನೀಡುತ್ತಿದೆ ಮತ್ತು ಬದಲಿಗೆ ಕಾಂಗ್ರೆಸ್ ಅನ್ನು ದೂಷಿಸುತ್ತಿದೆ ಎಂದು ಅವರು ಆರೋಪಿಸಿದರು. ಮೋದಿಯವರು ವರ್ತಮಾನವನ್ನು ಕಡೆಗಣಿಸಿ ಭೂತಕಾಲದಲ್ಲಿ ಅಥವಾ ಕಲ್ಪನೆಯ ಲೋಕದಲ್ಲಿ ಬದುಕುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

ಭೂಸುಧಾರಣೆ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಎಂಎನ್‌ಆರ್‌ಇಜಿಎ, ಆಹಾರ ಭದ್ರತಾ ಕಾಯ್ದೆ ಮತ್ತು ಶಿಕ್ಷಣದ ಹಕ್ಕು ಮುಂತಾದ ಬಡವರ ಸ್ಥಿತಿಯನ್ನು ಸುಧಾರಿಸಿದ ಕೆಲಸಗಳ ಮಹತ್ವವನ್ನು ಕಾಂಗ್ರೆಸ್ ನಾಯಕ ಒತ್ತಿ ಹೇಳಿದರು . ಇಂದು ಭಾರತೀಯ ಸಂವಿಧಾನ ಅಪಾಯದಲ್ಲಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಮೀಸಲಾತಿ ಮತ್ತು ಜಾತಿ ಗಣತಿಯ ವಿರುದ್ಧವಾಗಿದೆ ಎಂದರು.

ನೆಹರೂ ಬಗ್ಗೆ ಸತ್ಯವನ್ನು ತಿರುಚಿ ನೆಹರು-ಗಾಂಧಿ ಕುಟುಂಬವನ್ನು ಅವಮಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕು ಎಂದು ಖರ್ಗೆ ಒತ್ತಾಯಿಸಿದರು. ಆರ್‌ಎಸ್‌ಎಸ್ ಮತ್ತು ಜನಸಂಘದ ವಿರೋಧದ ನಡುವೆಯೂ ಮಹಿಳೆಯರಿಗೆ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಮತ್ತು ಮತದಾನದ ಹಕ್ಕುಗಳನ್ನು ನೀಡುವಲ್ಲಿ ಭಾರತದ ಸಾಧನೆಯನ್ನು ಅವರು ಎತ್ತಿ ತೋರಿಸಿದರು.

“ನೀವು ಪಂಡಿತ್ ಜವಾಹರಲಾಲ್ ನೆಹರು ಹೆಸರಿನಲ್ಲಿ ಎಲ್ಲರನ್ನೂ ಅವಮಾನಿಸುತ್ತಿದ್ದೀರಿ. ಅವರ ಜೊತೆ ಸರ್ದಾರ್ ಪಟೇಲ್ ಕೂಡ ಇದ್ದರು, ಅಂಬೇಡ್ಕರ್ ಕೂಡ ಇದ್ದರು. ನೆಹರೂಜಿಯವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು, ಮೋದಿಜಿಯವರು ತಮ್ಮ ಭಾಷಣದಲ್ಲಿ ನೆಹರೂಜಿಯವರ ಮಾನಹಾನಿ ಮಾಡುವ ಉದ್ದೇಶದಿಂದ ಸತ್ಯವನ್ನು ತಿರುಚುವ ಮೂಲಕ ನೆಹರೂಜಿಯವರ ಬಗ್ಗೆ ಪ್ರಸ್ತಾಪಿಸಿದ್ದರು, ಅದಕ್ಕಾಗಿ ಅವರು ದೇಶದ ಕ್ಷಮೆಯಾಚಿಸಬೇಕು. ಇದು ನನ್ನ ಬೇಡಿಕೆಯಾಗಿದೆ,” ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.

“ಹಲವು ಶಕ್ತಿಶಾಲಿ ದೇಶಗಳು ಸಾರ್ವತ್ರಿಕ ವಯಸ್ಕರ ಫ್ರಾಂಚೈಸಿಯನ್ನು ಹೊಂದಿರಲಿಲ್ಲ, ಮಹಿಳೆಯರಿಗೆ ಮತದಾನದ ಹಕ್ಕನ್ನು ಹೊಂದಿರಲಿಲ್ಲ, ಆ ಸಮಯದಲ್ಲಿ ಭಾರತವು ಸಾರ್ವತ್ರಿಕ ವಯಸ್ಕರ ಫ್ರಾಂಚೈಸ್ ಅನ್ನು ನೀಡಿತು, ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ನೀಡಲಾಯಿತು. ಇದನ್ನು ಕಾಂಗ್ರೆಸ್ ಮಾಡಿದೆ, ಆದರೆ ಆರ್‌ಎಸ್‌ಎಸ್ ಮತ್ತು  ಜನಸಂಘ ಸಂವಿಧಾನವನ್ನು ವಿರೋಧಿಸಿದೆ,” ಎಂದರು.

ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರವನ್ನು ಬಿಜೆಪಿಗೆ ನೆನಪಿಸಿದ ಅವರು, ನೆರೆಯ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಮೋದಿ ನೇತೃತ್ವದ ಸರ್ಕಾರವು ಧ್ವನಿ ಎತ್ತುವಂತೆ ಒತ್ತಾಯಿಸಿದರು.

“ನಮ್ಮ ವೀರ ನಾಯಕಿ ಇಂದಿರಾಗಾಂಧಿಯವರು ಪಾಕಿಸ್ತಾನವನ್ನು ಎರಡು ಭಾಗ ಮಾಡಿ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದರು. ಆಗ ಈ ದೇಶದ ಹೆಮ್ಮೆ ಪ್ರಪಂಚದಾದ್ಯಂತ ಹರಡಿತು. ಅಲ್ಲಿ (ಬಾಂಗ್ಲಾದೇಶದಲ್ಲಿ) ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ, ಕನಿಷ್ಠ ಈ (ಬಿಜೆಪಿ) ಜನ ತಮ್ಮ ಕಣ್ಣು ತೆರೆಯಬೇಕು ಮತ್ತು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಉಳಿಸಲು ಪ್ರಯತ್ನಿಸಬೇಕು,” ಎಂದು ಖರ್ಗೆ ಹೇಳಿದರು.

ಸಂವಿಧಾನ ಬದಲಾಯಿಸುತ್ತೇವೆ ಎಂದ ಬಿಜೆಪಿಯನ್ನೇ ಜನ ಬದಲಾಯಿಸಿದರು: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ನ.26: “ಸಂವಿಧಾನವನ್ನು ಕಿತ್ತು ಹಾಕುತ್ತೇವೆ, ಹರಿದು ಹಾಕುತ್ತೇವೆ, ಬದಲಾಯಿಸುತ್ತೇವೆ ಎಂದು ಬಿಜೆಪಿಯವರನ್ನೇ ಜನರು ಬದಲಾಯಿಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ನಗರದ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ʼಸಂವಿಧಾನ ದಿನಾಚರಣೆʼಯಲ್ಲಿ ಮಾತನಾಡಿದ ಅವರು, “ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡಿದ ಬಿಜೆಪಿಯವರಿಗೆ ತಿರುಗೇಟು ನೀಡಲು ರಾಹುಲ್ ಗಾಂಧಿ ಅವರು ತಮ್ಮ ಎಲ್ಲಾ ಭಾಷಣದ ವೇಳೆಯೂ ಸಂವಿಧಾನದ ಪ್ರತಿ ಹಿಡಿದು ಮಾತು ಪ್ರಾರಂಭಿಸುತ್ತಿದ್ದರು. ಇದರಿಂದ ಪ್ರಧಾನ ಮಂತ್ರಿಗಳು ಸಂವಿಧಾನ ಪ್ರತಿಗೆ ನಮಸ್ಕರಿಸಿ ಪ್ರಮಾಣ ವಚನ ತೆಗೆದುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಯಿತು. ನಮ್ಮ ಇಂಡಿಯಾ ಒಕ್ಕೂಟದ ಸಂಸದರು ಸಂವಿಧಾನದ ಪ್ರತಿ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದು ಇತಿಹಾಸ” ಎಂದರು.

ಇತಿಹಾಸದಿಂದ ಪಾಠ ಕಲಿತು ಪ್ರತಿಯೊಬ್ಬರು ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಬೇಕು

“ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ ಮಾರಾಟ ಮಾತ್ರ ಆಗಬೇಡ ಎನ್ನುವ ಕಿವಿಮಾತನ್ನು ರಾಜಕಾರಣಿಗಳಿಗೆ ಅಂಬೇಡ್ಕರ್ ಅವರು ಹೇಳಿದ್ದಾರೆ. ನಾವುಗಳು ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಪ್ರತಿಯೊಬ್ಬರು ಇತಿಹಾಸದಿಂದ ಪಾಠ ಕಲಿಯಬೇಕು ಎನ್ನುವ ಸಂದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ” ಎಂದು ಹೇಳಿದರು.

“ಅನೇಕ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಮಾರಾಟವಾಗಿರುವ ನಿದರ್ಶನಗಳನ್ನು ನೋಡಿದ್ದೇವೆ. ಇದು ನಮ್ಮೆಲ್ಲರ ಬದುಕಿಗೂ ಸಂಬಂಧ ಪಡುತ್ತದೆ ಎನ್ನುವ ಕಿವಿಮಾತನ್ನು ನಮಗೆ ಅಂಬೇಡ್ಕರ್ ಅವರು ಬಿಟ್ಟು ಹೋಗಿದ್ದಾರೆ” ಎಂದರು.

“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳನ್ನು ಆಯಾಯ ಧರ್ಮದವರು ಪವಿತ್ರ ಎಂದು ಹೇಳುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ. ಇದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ” ಎಂದು ಹೇಳಿದರು.

ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ

“ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ. ವಿದ್ಯಾರ್ಥಿಗಳು ಮುಂದಿನ 60- 70 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವವರು. ಅವರಿಗೆ ಸಂವಿಧಾನದ ಬಗ್ಗೆ ಅಡಿಪಾಯ ಹಾಕಬೇಕು ಎನ್ನುವ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಅಮೆರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಬಬಾಮ ಅವರು ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.

“ಕಾಂಗ್ರೆಸ್ ಪಕ್ಷ ಈ ದೇಶದ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಸ್ಮರಿಸಿಕೊಳ್ಳುವಂತಹ ಮಹಾನ್ ಗ್ರಂಥ ನಮಗೆ ನೀಡಿದ್ದಾರೆ” ಎಂದು ಹೇಳಿದರು.

ಮಹದೇವಪ್ಪ ಅವರನ್ನು ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು

“ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆಗೆ ಹೊಸ ರೂಪವನ್ನು ನೀಡಿದ್ದಾರೆ. ರಾಜಕೀಯದಿಂದ ನಿವೃತ್ತಿ ಪಡೆದ ಮೇಲೆ ಮಹದೇವಪ್ಪ ಅವರನ್ನು ನಮ್ಮ ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು” ಎಂದರು.

“ಗುಣಕ್ಕೆ ಮತ್ಸರವಿಲ್ಲ ಎನ್ನುವ ರೀತಿ ನಮ್ಮ ಸಂವಿಧಾನವೇ ನಮ್ಮ ಧರ್ಮ. ಈ ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿ ಅವರು ಸಂವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸಂವಿಧಾನ ಪೀಠಿಕೆಯನ್ನು ಶಾಲಾ, ಕಾಲೇಜುಗಳಲ್ಲಿ ಪಠಿಸಬೇಕು ಎನ್ನುವ ಹೊಸ ಆಚರಣೆಗೆ ನಾಂದಿ ಹಾಡಿದವರು. ಇದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ” ಎಂದರು.

ಮೀಸಲಾತಿ ಕೇವಲ SC, ST ಸಮುದಾಯಕ್ಕೆ ಮಾತ್ರ ಎಂಬ ತಪ್ಪು ಕಲ್ಪನೆ ಹೋಗಬೇಕಿದೆ : ನ್ಯಾಯಾಧೀಶ ಮರಿಯಪ್ಪ
‘ಸಂವಿಧಾನ ಇರದಿದ್ದರೆ ನಾನಿಲ್ಲಿ ನಿಂತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಸಂಪೂರ್ಣ ಮೀಸಲಾತಿಯಲ್ಲಿಯೇ ನಾನು ಬಂದಿದ್ದು, ರಿಸರ್ವೇಶನ್ ಇಲ್ಲದಿದ್ದರೆ ನಾನು ಯಾರದ್ದೋ ಮನೆಯಲ್ಲಿ ಜೀತ ಮಾಡಿಕೊಂಡು ಇರುತ್ತಿದ್ದೆ’ ಎಂದು ಧಾರವಾಡ ಜಿಲ್ಲಾ ನ್ಯಾಯಾಲಯದ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪನವರು ಹೇಳಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದಲ್ಲಿ ಭಾನುವಾರ ಆಯೋಜಿಸಿದ್ದ CONSTITUTION DAY-2023 ರಲ್ಲಿ ಮುಖ್ಯ ಅತಿಥಿಗಳಾಗಿದ್ದ ಶ್ರೀ ಮರಿಯಪ್ಪನವರು ಸಮಾಜದಲ್ಲಿ ಇನ್ನೂ ಜಾತಿ ಪದ್ಧತಿ ಜೀವಂತವಾಗಿದೆ. ಅದು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಲಯದಲ್ಲೂ ಸಹ ಹಾಗೆಯೇ ಇದೆ ಎಂದು ಹೇಳಿದರು.

‘ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಸ್ಥಾನವನ್ನು ಅಂಬೇಡ್ಕರ್ ಅವರಿಗೆ ಯಾಕೇ ನೀಡಿದ್ದರೆಂದರೆ, ಅವರಿಗೆ ಗೊತ್ತಿತ್ತು ಈ ಕೆಲಸ ನಮ್ಮಿಂದಾಗಲ್ಲವೆಂದು, ಯಾಕೆಂದರೆ ಬಾಬಾಸಾಹೇಬರು ಪಡೆದಿರುವಂತಹ ಪದವಿಗಳು ಯಾರೂ ಪಡೆದಿಲ್ಲ. ಆಗಿನ ಕಾಲದಲ್ಲಿ ಪದವಿಗಳು ಸುಮ್ಮನೆ ಸಿಗುತ್ತಿರಲಿಲ್ಲ’ ಎಂದು ಮರಿಯಪ್ಪನವರು ಹೇಳಿದರು.

ಇನ್ನು ಅಸ್ಪೃಶ್ಯತೆ ಕೇವಲ ಮೇಲ್ವರ್ಗದ ಆಚರಣೆ ಮಾತ್ರವಲ್ಲ ಎನ್ನುವ ಮೂಲಕ ‘ಇಲ್ಲೊಂದು ಬೇರೂರಿಬಿಟ್ಟಿದೆ ಅದೇನೆಂದರೆ; ಅಂಬೇಡ್ಕರ್ ಅಂದರೆ SCST ಗಳಿಗೆ ST ಗಳಿಗೂ ಅಲ್ಲ. SC ಗೆ ಅಷ್ಟೇ ಅದರಲ್ಲೂ ಮುಂದುವರೆದು, ಹೊಲೆಮಾದಿಗರಿಗಷ್ಟೇ ಅಂತ ಹುಟ್ಟುಹಾಕಿಬಿಟ್ಟಿದ್ದಾರೆ. Untouchables ಗಳಿಗೆ ಮಾತ್ರ ಅಂಬೇಡ್ಕರ್ ವಿಚಾರ ಇರಲಿಲ್ಲ. ಹಿಂದೂ ಕೋಡ್ ಬಿಲ್ ಮಾಡಿದ್ದು ಯಾರ ಸಲುವಾಗಿ ಅದೇನು ದಲಿತರಿಗಾಗಿ ಅಷ್ಟೇ ಇದೆಯಾ, ಅಂಬೇಡ್ಕರ್ ಒಂದು ಸಮುದಾಯಕ್ಕೆ, ವಿಷಯಕ್ಕೆ, ಸಂಕ್ಷಿಪ್ತವಾಗಿ ಯಾವುದೇ ಒಂದು ವಿಷಯಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ’ ಎಂದು ಹೇಳಿದರು.

ಮೀಸಲಾತಿ ಎಲ್ಲರೂ ಪಡೆಯುತ್ತಿದ್ದಾರೆ. ಅದರಲ್ಲೂ ದೊಡ್ಡ ರಗಳೆನೆ ಹೊಲೆಮಾದಿಗರಿಗಷ್ಟೇ ಇದೆ ಅಂತ ಹೇಳುತ್ತಾರೆ; ST, OBCಗಳು ಇವರೆಲ್ಲರೂ ಸಂವಿಧಾನದಡಿಯಲ್ಲಿ ಮೀಸಲಾತಿ ಪಡೆದುಕೊಳ್ಳುತ್ತಿದ್ದೇವೆಂಬ ಪರಿಕಲ್ಪನೆನೆ ಇಲ್ಲ. ರಿಸರ್ವೇಶನ್ ಅಂದರೆ SC ಗಳಿಗೆ ಮಾತ್ರ ಎನ್ನುವಂತಹದ್ದು ಅಭಿಪ್ರಾಯ ಇದೆ. ಈ ತರಹ ತಪ್ಪು ತಿಳುವಳಿಕೆ ಗೊತ್ತಿರುವವರೇ ಹುಟ್ಟು ಹಾಕಿಬಿಟ್ಟಿದ್ದಾರೆ. ಜನಸಾಮಾನ್ಯರು ಹುಟ್ಟುಹಾಕಿರುವಂತಹ ತಪ್ಪುಗಳಲ್ಲ ಇವು ಎನ್ನುತ್ತಾ, ಇಂದಿನ ದಿನ ಸಂವಿಧಾನ ದಿನವನ್ನು ಘೋಷಿಸಿದವರಿಗೆ ನಾವು ಧನ್ಯವಾದಗಳು ಹೇಳಬೇಕಿದೆ ಎಂದರು.

ಕಲ್ಯಾಣ ರಾಷ್ಟ್ರದ ಕಲ್ಪನೆ; ಇತ್ತೀಚಿಗೆ ಬಂದಿರುವಂತಹ ಗ್ಯಾರಂಟಿ ಯೋಜನೆಗಳನ್ನು, ತುಂಬಾ ಜನ ತೆಗಳುತ್ತಾರೆ. ಕೋಟ್ಯಾಧೀಶರು ಟ್ಯಾಕ್ಸ್ ಕಟ್ಟದೇ ಇರುವಂತಹದ್ದು, ಸಾಲ ಮಾಡಿ ಎಷ್ಟೋ ಜನ ದೇಶಬಿಟ್ಟು ಹೊರಗೆ ಹೋಗಿಬಿಟ್ಟರು. ಅದೆಲ್ಲ ಸಾಲ ಸಾರ್ವಜನಿಕ ಹಣ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಸಾಲ ಮಾಡಿ ಓಡಿ ಹೋಗಿರುವಂತಹ ಒಬ್ಬನನ್ನು ಸೇರಿಸಿದರೆ ಒಂದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಪೂರ್ಣವಾಗುತ್ತದೆ. ಒಬ್ಬಬ್ಬರತ್ರ ಅಷ್ಟಷ್ಟು ಹಣ ಇದೆ ಅದು ಯಾರೂ ಮಾತನಾಡುವುದಿಲ್ಲ. ಸರ್ಕಾರದ ಜವಾಬ್ದಾರಿ ಸರ್ಕಾರವು ತನ್ನ ರಾಜ್ಯದ ಕಟ್ಟಕಡೆಯ ವ್ಯಕ್ತಿಯ ಸರ್ವಾಂಗೀಣವನ್ನು ಮಾಡುವಂತಹದ್ದು ಕರ್ತವ್ಯ ಹಾಗೂ ಆದ್ಯತೆ. ಬಡವರಿಗೆ ಏನಾದರೂ ಯೋಜನೆಗಳು ರೂಪುಗೊಳ್ಳುತ್ತವೆ ಅಂದರೆ ಅದಕ್ಕೂ ಬಹಳಷ್ಟು ಜನ ಕಲ್ಲು ಹಾಕುವವರು ಹಾಗೂ ಅಪಾರ್ಥ ಕೊಡುವಂತಹದ್ದನ್ನು ಮಾತಾಡುವವರು ಇರುತ್ತಾರೆ. ಅದೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅಂತಹವರನ್ನು ಗಮನಕ್ಕೆ ತೆಗೆದುಕೊಳ್ಳದೇ, ಅವರ ಬಗ್ಗೆ ಮಾತನಾಡದೇ ಅಪಹಾಸ್ಯ ಮಾಡುವವರನ್ನು ನಿರ್ಲಕ್ಷಿಸುವುದೊಂದೇ ದಾರಿ. ಯಾಕೆಂದರೆ ಯಾರ‌್ಯಾರೋ ಲೂಟಿ ಮಾಡಿ ಹೋಗುತ್ತಾರೆ. ರಾಷ್ಟ್ರದ ಸಂಪತ್ತು, ಜನರ ಸಂಪತ್ತು ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನವನ್ನು ದೂಷಣೆ ಮಾಡಲು ಯಾವ ಅಂಶಗಳು ಅದರಲ್ಲಿ ಇಲ್ಲವೇ ಇಲ್ಲ. ಸಂವಿಧಾನವನ್ನು ಬದಲಾವಣೆಗೆ ಮುಂದಾಗುತ್ತೇವೆ ಅಂದರೆ ಅದು ಅವರ ದುಷ್ಕೃತ್ಯಕ್ಕೆ ಒಂದು ಉದಾಹರಣೆ ಎಂದು ಆತಂಕ ವ್ಯಕ್ತಪಡಿಸಿದರು.

ಎಷ್ಟೋ ರಾಜ-ಮಹಾರಾಜರು ಆಳಿಹೋದರು. ಅವರ ಆಡಳಿತದಲ್ಲಿ ಯಾವ ಜಾತಿಯಾದರೂ ನಾವೆಲ್ಲರೂ ಗುಲಾಮರೇ, ದೊಡ್ಡ ಜಾತಿ ಇರಲಿ-ಸಣ್ಣ ಜಾತಿ ಇರಲಿ. ಈ ಸಂವಿಧಾನಕ್ಕೆ ಪದಚ್ಯುತಿಯ ಸಮಯ ಬಂದರೆ ಅದು ನಮ್ಮ ನಿಮ್ಮೆಲ್ಲರ ಶವಶಾಸನ. ಸಂವಿಧಾನದ ಪದಚ್ಯುತಿಯ ವಿಚಾರ ಬಂದಾಗ ನೀವೆಲ್ಲರೂ ಜಾಗೃತವಾಗಿರಬೇಕು. ಇಲ್ಲಿ ಸಾವಿರಾರು ಭಾಷೆ, ಆಚರಣೆ, ಸಂಸ್ಕೃತಿ ಇದೆ. ಇದೆಲ್ಲವನ್ನೂ ನಾವು ಗೌರವಿಸಬೇಕು. ಒಂದು ಜಾತಿಯ ಜನಸಂಖ್ಯೆ ಹೆಚ್ಚಿದೆ ಎಂದು ಉಳಿದವರ ಮೇಲೆ ದೌರ್ಜನ್ಯ ಮಾಡುವುದು ಹಾಗೂ ವಿಶೇಷ ಸವಲತ್ತು ಇದೆ ಎಂದ ಮಾತ್ರಕ್ಕೆ ಮತ್ತೊಬ್ಬರ ಮೇಲೆ ದೌರ್ಜನ್ಯ ಯಾವುದೇ ಕಾರಣಕ್ಕೂ ಆಗಬಾರದು ಎಂದು ಮನವರಿಕೆ ಮಾಡಿದರು.

ಕಾಲಕಾಲಕ್ಕೆ ಚುನಾವಣೆ ನಡೆಸುವುದಂತೂ ಎಲ್ಲರಿಗೂ ಗೊತ್ತು. ಈಗೆಲ್ಲ ಎಷ್ಟೆಷ್ಟು ಅಧ್ವಾನ ಆಗಿದ್ದಾವೆ ಅಂದರೆ, ಅದನ್ನು ಮಾತನಾಡಲು ಸಹ ಅಸಹ್ಯವಾಗುತ್ತದೆ. ಯಾಕೆಂದರೆ ಚುನಾವಣಾ ಆಯೋಗ ತನ್ನ ಸ್ವಸಾಮರ್ಥ್ಯವನ್ನು ಕಳೆದುಕೊಂಡು ಬಿಟ್ಟಿದೆ ಹಾಗಾಗಿ ಅದರ Mistake of state-Mistake of Government but not mistake of constitution ಎಂದು ನಾವು ಗಮನದಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದರು.

ಭಾರತದ ಸಂವಿಧಾನವೆಂದರೆ ನಾವು ಬಾಬಾಸಾಹೇಬರನ್ನು ಬಿಟ್ಟು ನೋಡುವುದಕ್ಕೆ ಆಗುವುದಿಲ್ಲ. ಅವರ ಜೀವನ, ತುಳಿತಕ್ಕೆ ಒಳಗಾಗಿದ್ದ ಜನರಿಗೆ ಅವಕಾಶಗಳನ್ನು ಒದಗಿಸಿಕೊಡಲು ಅವರು ಪಟ್ಟ ಪರಿಶ್ರಮ ಅಗಾಧವಾದದ್ದು. ಇವತ್ತಿನ ಸ್ಥಿತಿಯಲ್ಲಿ ಸಂವಿಧಾನಕ್ಕೆ ಬಂದೊದಗಿದ ಆಘಾತಗಳು ಅಥವಾ ಅಪಹಾಸ್ಯಗಳನ್ನು ಪುನರಾವಲೋಕನ ಮಾಡಿ ಅಪವಾದಗಳನ್ನು ಒಡೆದೋಡಿಸಲು ಇದೊಂದು ನಮಗೆ ಸುಸಂದರ್ಭವೆಂದು, ನಾವು ಸಂವಿಧಾನದ ಋಣ, ಫಲ ತಿಂತಿದ್ದೇವೆ ಅಂದರೆ; ಅದರ ಅಂಶಗಳನ್ನು ಜನರಿಗೆ ತಿಳಿಸುವುದು ನಮ್ಮ ನಿಮ್ಮೆಲ್ಲರ ಆದ್ಯವಾದ ಕರ್ತವ್ಯವಾಗಿದೆ ಎಂದು ಒತ್ತಿ ಹೇಳಿದರು.

ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಡಾ. ಎನ್‌.ವಾಯ್ ಮಟ್ಟಿಹಾಳ ಮೌಲ್ಯಮಾಪನ ಕುಲಸಚಿವರು, ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಸಿ. ಕೃಷ್ಣಮೂರ್ತಿ, ಅಂಬೇಡ್ಕರ್ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಎಸ್ ನಾಟೇಕರ್ ಇತರರು ಇದ್ದರು.

ʼಸಂವಿಧಾನ ಅಪಾಯದಲ್ಲಿದೆ, ಎಚ್ಚರಿಕೆʼ
ಸಂವಿಧಾನ ಅಪಾಯದಲ್ಲಿದೆ ಎಂದು ಒಪ್ಪಿಕೊಳ್ಳದೇ ಹೋದರೆ, ಸಂವಿಧಾನದ ರಕ್ಷಣೆಗೆ ಎಂತಹಾ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಮನೋಭಾವನೆಯನ್ನು ಜನಸಮೂಹದಲ್ಲಿ ಗಟ್ಟಿಗೊಳಿಸುವ ಕೆಲಸ ಆಗದೆ ಹೋದರೆ ಮತ್ತು ಇದಕ್ಕೆ ಪೂರಕವಾಗಿ ಸಂವಿಧಾನದ ಕುರಿತಾದ ಅರಿವನ್ನು ಜನರ ಸಾಂಸ್ಕೃತಿಕ ಅರಿವಿನ ಭಾಗವಾಗಿ ಸ್ಥಾಪಿಸದೆ ಹೋದರೆ, ಪರಿಸ್ಥಿತಿ ಬಹುಬೇಗ ಕೈ ಮೀರಿ ಹೋಗಲಿದೆ ಎಂದು ಜನ ಸಮುದಾಯಕ್ಕೆ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ ಲೇಖಕ ಎ. ನಾರಾಯಣ

‘ಧರ್ಮವನ್ನು ರಕ್ಷಿಸಿ, ಅದು ನಿಮ್ಮನ್ನು ರಕ್ಷಿಸುತ್ತದೆ’ ಅಂತ ಕೆಲವರು ಕಂಡ ಕಂಡ ಕಡೆ ಬರೆದರು, ಬೇರೆ ಬೇರೆ ಕಡೆ ಹೇಳಿದರು. ಅದರಲ್ಲಿ ಯಾರಿಗೂ ಏನೂ ದೋಷ ಕಾಣಲಿಲ್ಲ. ಧರ್ಮವನ್ನು ರಕ್ಷಿಸುವಷ್ಟರ ಮಟ್ಟಿಗೆ ಧರ್ಮಕ್ಕೇನು ಅಪಾಯ ಬಂದಿದೆ ಅಂತ ಯಾರೂ ಕೇಳಲಿಲ್ಲ. ಈ ಮೌನದ ನಡುವೆ ‘ಧರ್ಮವನ್ನು ರಕ್ಷಿಸಿ’ ‘ಧರ್ಮವನ್ನು ರಕ್ಷಿಸಿ’ ಎನ್ನುವ ಮಾತೇ ಮತ್ತೆ ಮತ್ತೆ ಎಲ್ಲೆಡೆ  ಮಾರ್ದನಿಗೊಂಡು ‘ನಮ್ಮ ಧರ್ಮಕ್ಕೇನೋ’ ಆಗಿದೆ ಎನ್ನುವ ಒಂದು ಭಾವನೆ ದೊಡ್ಡ ಸಂಖ್ಯೆಯ ಜನರಲ್ಲಿ ಮೂಡತೊಡಗಿತು.  ಅದನ್ನು ಯಾರೂ ಗಮನಿಸಲಿಲ್ಲ. ಮಾತ್ರವಲ್ಲ, ಅವರು ಹಾಗೆ ಹೇಳುತ್ತಿದ್ದಾಗ ‘ಸಂವಿಧಾನವನ್ನು ರಕ್ಷಿಸಿ. ಅದು ನಮ್ಮನ್ನು ರಕ್ಷಿಸುತ್ತದೆ’ ಅಂತ ಪ್ರತಿ ಹೇಳಿಕೆ ನೀಡಬೇಕು ಅಂತಲೂ ಯಾರಿಗೂ ಅನ್ನಿಸಲಿಲ್ಲ. ಸಂವಿಧಾನ ಪಾಲನೆಯೇ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯ ಧರ್ಮ, ಸಂವಿಧಾನವೇ ಸ್ವತಂತ್ರ ಭಾರತದ ಧರ್ಮ ಗ್ರಂಥ ಅಂತ ಯಾರೂ ಸ್ವಾತಂತ್ರ್ಯಾನಂತರದ ತಲೆಮಾರುಗಳಿಗೆ ಮನವರಿಕೆ ಮಾಡಲಿಲ್ಲ. ಹೊಸ ತಲೆಮಾರಿನ ಮಕ್ಕಳು ಸಂವಿಧಾನವನ್ನು ಸಾಮಾನ್ಯ ಜ್ಞಾನದ ಪುಸ್ತಕ ಓದುವಂತೆ ಓದಿದರು. ಶಿಕ್ಷಕರು ಪಾಠ ಹೇಳುವಾಗಲೂ ಹಾಗೇನೇ ಮಾಡಿದರು.

ಸಂವಿಧಾನವನ್ನು ಕಡ್ಡಾಯವಾಗಿ ಭೋದಿಸಬೇಕು ಅಂದರೆ ಆದದ್ದೇನು?

ಸಂವಿಧಾನವು ಸಮಾಜ ವಿಜ್ಞಾನದ ಭಾಗವಾಗಿ ಶಾಲಾ ಪಠ್ಯದಲ್ಲಿ ಸೇರಿಕೊಂಡಿದೆ. ಸಮಾಜ ವಿಜ್ಞಾನ ಎಂದರೆ ಅದು ‘ಓದಿ, ಮಾರ್ಕು ಗಳಿಸಿ, ಮರೆತು ಬಿಡಲು’ ಎನ್ನುವ ಧೋರಣೆ ಹೇಗೂ ಇದೆ. ಸಮಾಜ ವಿಜ್ಞಾನದ ಜತೆಗೆ, ಸಂವಿಧಾನದ ಬಗ್ಗೆ ಶಾಲೆಯಲ್ಲಿ ಕಲಿತ ಸಾಮಾನ್ಯ ಜ್ಞಾನವೂ ಮರೆತು ಹೋಗುತ್ತದೆ. ಉನ್ನತ ಶಿಕ್ಷಣದಲ್ಲಿ ಕಲಿಯುವ ವಿಷಯ ಯಾವುದಾದರೂ ಇರಲಿ, ಅದರ ಜತೆಗೆ ಸಂವಿಧಾನವನ್ನು ಕಡ್ಡಾಯ ಭೋದನೆ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿತು. ನಿಜಕ್ಕೂ  ಇದು ಸುಪ್ರೀಂ ಕೋರ್ಟ್ ಹೇಳ ಬೇಕಿರುವುದಕ್ಕಿಂತ ಹೆಚ್ಚಾಗಿ ಸಂವಿಧಾನ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪಕ್ಷದ ಸರಕಾರ ಹೇಳಿ ಕಡ್ಡಾಯ ಗೊಳಿಸ ಬೇಕಿತ್ತು. ಅಂತೂ ಸುಪ್ರೀಂ ಕೋರ್ಟ್ ಆದರೂ ಹೇಳಿತಲ್ಲ, ಒಳ್ಳೆಯದಾಯಿತು ಅಂದು ಕೊಂಡರೆ, ನಮ್ಮ ಉನ್ನತ ಶಿಕ್ಷಣ ರಂಗದಲ್ಲಿ ನಡೆದದ್ದೇ ಬೇರೆ. ಕಾಟಾಚಾರಕ್ಕೆ ಎಂಬಂತೆ ಏನೋ ಸಂವಿಧಾನದ ಬಗ್ಗೆ ಕೆಲವು ತರಗತಿಗಳನ್ನು ನಡೆಸಿ ಕೈತೊಳೆದುಕೊಳ್ಳುವ ಕೆಲಸವನ್ನು ಒಂದಷ್ಟು ಸಮಯ ಒಂದಷ್ಟು ಸಂಸ್ಥೆಗಳು ಮಾಡಿದವು. ಆ ನಂತರ ಅದೂ ನಿಂತು ಹೋಯಿತು.

ಸಂವಿಧಾನ ಕಲಿಕೆ ಹೇಗಿರಬೇಕು?

ಕೆಲವು ರಾಷ್ಟ್ರಗಳಲ್ಲಿ ಸಂವಿಧಾನ ಕಲಿಕೆ ಎನ್ನುವುದೇ ಒಂದು ದೊಡ್ಡ ಅಧ್ಯಯನದ ವಿಷಯ. ದೇಶದ ಸಂವಿಧಾನವನ್ನು ಶಾಲೆಯಲ್ಲಿ ಹೇಗೆ ಕಲಿಸಬೇಕು, ಹೈಸ್ಕೂಲು ಮುಗಿಯುವ ವೇಳೆಗೆ ಮಕ್ಕಳಲ್ಲಿ ಕನಿಷ್ಠ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಎಷ್ಟು ಅರಿವಿರಬೇಕು ಎನ್ನುವ ಬಗ್ಗೆ ನಿಯಮಗಳಿವೆ ಮತ್ತು ಅವುಗಳನ್ನು ಅನುಸರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನವನ್ನು ಮಕ್ಕಳಿಗೆ ಹೇಗೆ ಹೇಳಿಕೊಡಬೇಕು ಎಂದು ಶಿಕ್ಷಕರಿಗೆ ಸರಿಯಾದ ತರಬೇತಿ ಇಲ್ಲ. ಬಿಎಡ್ ಕಲಿಯುವಾಗ ಸಮಾಜ ವಿಜ್ಞಾನವನ್ನು ಹೇಗೆ ಕಲಿಸ ಬೇಕೆಂಬ ಸ್ಥೂಲವಾದ ಮಾರ್ಗದರ್ಶಿ ಸೂತ್ರಗಳಿರುತ್ತವೆಯೇ ಹೊರತು ಸಂವಿಧಾನ ಬೋಧನೆಯ ಬಗ್ಗೆ, ಬೋಧನಾ ವಿಧಾನಗಳ ಬಗ್ಗೆ ನಿರ್ದಿಷ್ಟವಾಗಿ ಏನೂ ಇಲ್ಲ. ಸಂವಿಧಾನದ ಬಗ್ಗೆ ಸರಿಯಾಗಿ ಅರಿಯದ, ಸಂವಿಧಾನದ ಮೌಲ್ಯಗಳ ಬಗ್ಗೆ ಭಾವನಾತ್ಮಕ ಸ್ಪಂದನೆಯೇ ಇಲ್ಲದ ಶಿಕ್ಷಕ ವರ್ಗ ಯಾಂತ್ರಿಕವಾಗಿ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಸಂವಿಧಾನವನ್ನು ಕಲಿಸುತ್ತದೆ. ಎಲ್ಲೋ ಒಬ್ಬಿಬ್ಬರು ಶಿಕ್ಷಕರು ವೈಯಕ್ತಿಕ ಆಸಕ್ತಿಯಿಂದ ಇದಕ್ಕಿಂತಾಚೆಗೆ ಏನಾದರೂ ಕಲಿಸುವ ಪ್ರಯತ್ನ ಮಾಡಿರಬಹುದೇನೋ!

‘ಸಂವಿಧಾನ ಓದು’ ಎಂಬ ಸೀಮಿತ ಕಾರ್ಯಕ್ರಮ

ಕೆಲವು ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ‘ಸಂವಿಧಾನ ಓದು’ ಎನ್ನುವ ಕಾರ್ಯಕ್ರಮದ ಮೂಲಕ, ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಪುಟ್ಟ ಕೃತಿಗಳನ್ನು ರಚಿಸಿ ಹಂಚುವ ಮೂಲಕ ಈ ಕೊರತೆಯನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೂ, ಅದೂ ತುಂಬಾ ತಡವಾಗಿ ಆದ ತೀರಾ ಸೀಮಿತ ಪ್ರಮಾಣದ ಕೆಲಸ. ಸಾಮಾನ್ಯ ಜ್ಞಾನದ ನೆಲೆಯಾಚೆಗೆ ಸಂವಿಧಾನದ ಬಗ್ಗೆ ಏನೂ ಹೇಳದೆ, ಸಂವಿಧಾನ ಈ ದೇಶದಲ್ಲಿ ತಂದ ಮೌನ ಕ್ರಾಂತಿಯ ಬಗ್ಗೆ ಅಭಿಮಾನ ಮೂಡಿಸದೆ, ಸಂವಿಧಾನದ ಮೌಲ್ಯಗಳನ್ನು ಎಳೆಯ ತಲೆಮಾರಿನ ಹೃದಯಕ್ಕೆ ದಾಟಿಸದೆ, ಸಂವಿಧಾನದ ಬಗ್ಗೆ ಹೇಳಲಾಗುವ ಸುಳ್ಳುಗಳಿಗೆ ಸೂಕ್ತ ಸ್ಪಷ್ಟೀಕರಣ ನೀಡದೆ, ಪ್ರತೀ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತದೆ; ಗಣರಾಜ್ಯ ದಿನವನ್ನು ಆಚರಿಸಲಾಗುತ್ತದೆ. ಈಗ್ಗೆ ಕೆಲ ವರ್ಷಗಳಿಂದ ಆ ಪಟ್ಟಿಗೆ ಸಂವಿಧಾನ ದಿನವೂ ಸೇರಿಕೊಂಡಿದೆ.

ವಾಟ್ಸಪ್ಪ್ ಯೂನಿವರ್ಸಿಟಿ ಮಾಡಿದ್ದೇನು?

ಈ ಮಧ್ಯೆ ವಾಟ್ಸಪ್ಪ್ ಯೂನಿವರ್ಸಿಟಿ ಅಂಗಡಿ ತೆರೆದುಕೊಳ್ಳುತ್ತಲೇ ‘ಧರ್ಮವನ್ನು ರಕ್ಷಿಸಿ, ಧರ್ಮ ನಿಮ್ಮನ್ನು ರಕ್ಷಿಸುತ್ತದೆ’ ಅಂತ ಹೇಳುತ್ತಿದ್ದವರೆಲ್ಲಾ ಅಲ್ಲಿ ತಮ್ಮ ವರಸೆ ಬದಲಿಸಿದರು. ಧರ್ಮವನ್ನು ನಾವು ರಕ್ಷಿ ಬೇಕಾದ ಸ್ಥಿತಿ ಬರಲು ಸಂವಿಧಾನವೂ ಕಾರಣ ಎನ್ನುವ ಅರ್ಥದ ಬಗೆಬಗೆಯ ಸಾಹಿತ್ಯ ಸೃಷ್ಟಿಸಿ ಜಾಲತಾಣ ಪೂರ್ತಿ ಹರಡಿದರು. ವಿಡಿಯೋಗಳನ್ನೂ ಮಾಡಿ ಯಥೇಚ್ಛ ಹರಿಬಿಟ್ಟರು. ಈ ರೀತಿಯ ಸಾಹಿತ್ಯ ಮತ್ತು ವಿಡಿಯೋಗಳ ಮೂಲಕ ‘ಸಂವಿಧಾನ’ ದೇಶಕ್ಕೇನೋ ಕೆಟ್ಟದ್ದು ಮಾಡಿದೆ, ಅಪಚಾರ ಬಗೆದಿದೆ, ಬಹುಸಂಖ್ಯಾತರ ಧರ್ಮಕ್ಕೆ ಅನ್ಯಾಯ ಮಾಡಿದೆ, ಅಲ್ಪಸಂಖ್ಯಾತರ ಧರ್ಮಗಳಿಗೆ ಎಲ್ಲಾ ಸೌಲಭ್ಯಗಳನ್ನೂ ನೀಡಿದೆ  ಎನ್ನುವ ರೀತಿಯ ಭಾವನೆ ಜನರಲ್ಲಿ ನಿಧಾನವಾಗಿ ಮೂಡುವಂತೆ ಮಾಡುವ ಪ್ರಯತ್ನಗಳನ್ನು ನಿರಂತರವಾಗಿ ಕೈಗೊಂಡರು. ಈ ಪ್ರಯತ್ನದ ಭಾಗವಾಗಿ  ವೈರಲ್ ಆದ ಒಂದು ವಿಡಿಯೋದ ಉದಾಹರಣೆ ಹೀಗಿದೆ:

ಆ ವಿಡಿಯೋದಲ್ಲಿ ಕಾವಿಧಾರಿ ವ್ಯಕ್ತಿಯೊಬ್ಬರು ಕಿಕ್ಕಿರಿದ ಸಭಾಂಗಣ ಒಂದರಲ್ಲಿ ಭಾಷಣ ಮಾಡುವುದು ಕಾಣಿಸುತ್ತದೆ. ಆ ಭಾಷಣದಲ್ಲಿ ಅವರು ಹೇಳಿದ್ದು ಹೀಗೆ: ನಾನೊಬ್ಬ ಸನ್ಯಾಸಿ… ಒಂದು ದಿನ ನನ್ನ ಬಳಿ ಎರಡು ಅನ್ಯ ಧರ್ಮಗಳಿಗೆ ಸೇರಿದ ಧರ್ಮಗುರುಗಳು ಬಂದರು. ನನ್ನ ಜತೆ ವೃಥಾ ಜಗಳಕ್ಕಿಳಿದು ನನ್ನನ್ನು ಒಂದೇ ಸಮನೆ ಥಳಿಸ ತೊಡಗಿದರು (ಈ ಹಂತದಲ್ಲಿ ಇದು ನಿಜ ಘಟನೆಯಲ್ಲ, ಕಲ್ಪನೆ ಎಂದೂ ಹೇಳುತ್ತಾರೆ) ನನಗೆ ಅವರು ಥಳಿಸುತ್ತಿದ್ದಾಗ ಪಕ್ಕದಲ್ಲಿ ಒಬ್ಬ ಪೊಲೀಸ್ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ. ನೋವು ತಡೆಯಲಾರದೆ ನಾನು ಆ ಪೊಲೀಸ್ ನವನ ಜತೆ ನನ್ನ ಸಹಾಯಕ್ಕೆ ಬರುವಂತೆ ಅಂಗಲಾಚಿದೆ. ಆತ ‘’ನೀವು ಧಾರ್ಮಿಕ ಮುಖಂಡರು. ಜಗಳವಾಡುವಾಗ ನಾನು ಮಧ್ಯೆ ಪ್ರವೇಶಿಸಲಾರೆ. ನಾನು ಸೆಕ್ಯುಲರ್ ಆಗಿ ಕೆಲಸ ಮಾಡಬೇಕು’ ಎಂದು ಹೇಳಿದ (ಸಭಿಕರಿಂದ ಚಪ್ಪಾಳೆ). ನಾನು ಬೇರೆ ದಾರಿ ಕಾಣದೆ ಆತ್ಮ ರಕ್ಷಣೆಗೆಂದು ನನಗೆ ಹೊಡೆಯುತ್ತಿರುವವರನ್ನು ತಿರುಗಿ ಹೊಡೆಯಲಾರಂಭಿಸಿದೆ. ನಾನು ತಿರುಗಿ ಯಾವಾಗ ಹೊಡೆಯಲಾರಂಭಿಸಿದೆನೋ ಆಗ ಪಕ್ಕದಲ್ಲಿದ್ದ ಪೊಲೀಸಿನವ ಬಂದು ನನ್ನನ್ನು ತಡೆದ. ನೀವು ಅವರಿಗೆ ಹೊಡೆಯುವಂತಿಲ್ಲ ಎಂದ. ನನ್ನ ರಕ್ಷಣೆಗೆ ಬಾರದ ನೀನು ಈಗ್ಯಾಕೆ ಬಂದೆ ಅಂತ ನಾನು ಕೇಳಿದರೆ ಆತ ‘ನಾನು ಅಲ್ಪಸಂಖ್ಯಾತರನ್ನು ರಕ್ಷಿಸಬೇಕು’ ಎಂದ. ಇದು ನಮ್ಮ ಸಂವಿಧಾನ…

ಇದನ್ನು ಕೇಳಿಸಿಕೊಂಡ ಸಭೆಗೆ ಸಭೆಯೇ ಚಪ್ಪಾಳೆ ತಟ್ಟುತ್ತದೆ. ಆಗ ಭಾಷಣಕಾರ ಹೇಳುತ್ತಾರೆ: ‘LET US BLOODY CHANGE THIS CONSTITUTION’… ಮತ್ತೆ ಚಪ್ಪಾಳೆ. ಈ ವಿಡಿಯೋ ಲಿಂಕ್ ಇಲ್ಲಿದೆ:

ಜನರ ಸ್ವಾಭಿಮಾನ ಕೆರಳಿಸುವಂತೆ ಪ್ರಚಾರ

ಸಂವಿಧಾನ ಮತ್ತು ಸಂವಿಧಾನ ಮೌಲ್ಯಗಳನ್ನು ಪರಿಹಾಸ್ಯ ಮಾಡುವ ಮತ್ತು ಸಂವಿಧಾನ ಬದಲಿಸಬೇಕೆಂಬ ಸಂದೇಶವಿರುವ ಇಂತಹ ವಿಡಿಯೋಗಳ ಮೂಲಕ ಜನಸಾಮಾನ್ಯರ ಮನಸ್ಸುಗಳನ್ನು ಸಂವಿಧಾನ ಬದಲಾವಣೆಗಾಗಿ ನಿಧಾನವಾಗಿ ತಯಾರಿಸುವ ಕೆಲಸ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ವಿದ್ಯಾವಂತರ, ಯೋಚಿಸುವವರ ಮನಸ್ಸನ್ನು ಮುಟ್ಟಲು ಇನ್ನೊಂದು ರೀತಿಯ ಕೆಲಸ ನಡೆಯುತ್ತಿದೆ. ಜನಸಾಮಾನ್ಯರಿಗೆ ಹೇಳುವಾಗ ಸಂವಿಧಾನ ಧರ್ಮ ವಿರೋಧಿ ಎನ್ನುವ ಸಂದೇಶವನ್ನು ನೀಡಿದರೆ, ಮೇಲ್‌ಸ್ತರದ ಜನರ ಮಧ್ಯೆ ‘ಸಂವಿಧಾನದಲ್ಲಿ ಭಾರತೀಯ ಎನ್ನುವಂತದ್ದು ಏನೂ ಇಲ್ಲ, ಅದರಲ್ಲಿ ಪಾಶ್ಚಿಮಾತ್ಯ ವಿಚಾರಗಳೇ ತುಂಬಿವೆ’ ಅಂತ ಅವರ ಸ್ವಾಭಿಮಾನವನ್ನು ಕೆರಳಿಸುವ ಪ್ರಚಾರ ನಡೆಯುತ್ತದೆ. ಉದಾಹರಣೆಗೆ ಈ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ಸಂವಿಧಾನದ ಬಗ್ಗೆ ಚರ್ಚಿಸಲು ದೊಡ್ಡ ಮಟ್ಟದ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ಆಳುವ ಪಕ್ಷದ ಜತೆಗೆ ಕೆಲಸ ಮಾಡುವ ವಿದ್ವತ್ ಲೋಕದ ಹಲವಾರು ಭಾಷಣಕಾರರು ಅಲ್ಲಿದ್ದರು. ಅಲ್ಲಿ ಕುಹಕವಿಲ್ಲ. ಪರಿಹಾಸ್ಯವಿಲ್ಲ. ನೇರವಾಗಿ ಧಾಳಿ ಇಲ್ಲ. ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ನೀಡಿದ ಸಂದೇಶ ಏನೆಂದರೆ, ಈಗಿನ ಸಂವಿಧಾನವನ್ನು ಬರೆದದ್ದು ಪಾಶ್ಚಿಮಾತ್ಯ ಶಿಕ್ಷಣ ಪಡೆದು, ಪಾಶ್ಚಿಮಾತ್ಯ ಮೌಲ್ಯಗಳನ್ನು ಆರಾಧಿಸುವ ಮಂದಿ, ಭಾರತ ಈಗ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ನಮಗೆ ನಮ್ಮದೇ ಆದ ಸಂವಿಧಾನ ಇರಬೇಕು ಎಂದು.

ದಲಿತ ವರ್ಗದ ಪ್ರತಿರೋಧದ ಭಯ

ಸಂವಿಧಾನ ವಿರೋಧಿಗಳಿಗೆ ಮತ್ತು ಒಂದಲ್ಲ ಒಂದು ದಿನ ಅದನ್ನು ಬದಲಿಸಿಯೇ ತೀರುತ್ತೇವೆ ಅಂತ ಹೊರಟವರಿಗೆ ದೊಡ್ಡ ತೊಡಕಾಗಿರುವುದು ಈ ದೇಶದ ದಲಿತ ವರ್ಗ ಸಂವಿಧಾನದ ಜತೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವುದು. ದಲಿತ ರಾಜಕೀಯದ ಬಹುದೊಡ್ಡ ಐಕಾನ್ ಆಗಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಆಗಿರುವ ಕಾರಣಕ್ಕೆ ಈ ದೇಶದಲ್ಲಿ ಉಳಿದೆಲ್ಲಾ ಜನ ಸಮುದಾಯಗಳಿಗಿಂತ ಹೆಚ್ಚಾಗಿ ಸಂವಿಧಾನವನ್ನು ಒಪ್ಪಿಕೊಂಡು ಅಪ್ಪಿಕೊಂಡು ಇರುವುದು ದಲಿತರು. ಅಂಬೇಡ್ಕರ್ ಅವರ ಮುಂದಾಳುತ್ವದಲ್ಲಿ ರೂಪುಗೊಂಡ ಸಂವಿಧಾನವನ್ನು ಏಕಾಏಕಿ ಕಿತ್ತು ಅದರ ಜಾಗದಲ್ಲಿ ಹೊಸತೊಂದು ಸಂವಿಧಾನ ತರುತ್ತೇವೆ ಅಂತ ನೇರವಾಗಿ ಮುಂದುವರಿದರೆ ಬಹುದೊಡ್ಡ ಮಟ್ಟಿಗೆ ದಲಿತರ ಕೋಪವನ್ನು ಎದುರಿಸಬೇಕಾಗುತ್ತದೆ  ಮತ್ತು ದಲಿತರ ಮತಗಳನ್ನು ಕಳೆದು ಕೊಳ್ಳಬೇಕಾಗುತ್ತದೆ ಎನ್ನುವ ಅರಿವು ಸಂವಿಧಾನ ವಿರೋಧಿಗಳಿಗೆ ಇದೆ. ಹಾಗಾಗಿ ಈ ವಿಚಾರದಲ್ಲಿ ಬಹಳ ನಾಜೂಕಿನಿಂದ ಮುಂದುವರಿಯುವುದರ ಜತೆಗೆ ದಲಿತರನ್ನು ಕೂಡಾ ನಿಧಾನವಾಗಿ ಈ ಉದ್ದೇಶಕ್ಕಾಗಿ ಒಲಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ.  ದಲಿತ ರಾಜಕೀಯ ನಾಯಕರಿಗೆ ಆಯಕಟ್ಟಿನ ಹುದ್ದೆಗಳನ್ನು ಕೊಡುವಲ್ಲಿಂದ ಹಿಡಿದು, ಅಂಬೇಡ್ಕರ್ ಅವರ ಎಲ್ಲಾ ಸ್ಮಾರಕಗಳನ್ನು ಭವ್ಯವಾಗಿ ಪುನರ್ ನಿರ್ಮಾಣ ಮಾಡುವುದರಿಂದ ಹಿಡಿದು, ದಲಿತ-ಬುಡಕಟ್ಟು ಜನಾಂಗದ ಮಕ್ಕಳ ಮನಸ್ಸುಗಳನ್ನು ಶಾಲಾ ಹಂತದಿಂದಲೇ ‘ಧಾರ್ಮಿಕವಾಗಿ ಹದ’ಗೊಳಿಸಲು ತಮ್ಮದೇ ಶಾಲೆಗಳನ್ನು ತೆರೆಯುವುದರಿಂದ ಹಿಡಿದು ಎಲ್ಲವೂ ನಡೆಯುತ್ತಿದೆ. ಮೇಲ್ನೋಟಕ್ಕೆ ಇವೆಲ್ಲ ಸಹಜವಾದ ಅಧಿಕಾರ ಹಂಚಿಕೆಯ ಮತ್ತು ಆಡಳಿತದ ಭಾಗ ಅಂತ ಅನ್ನಿಸ ಬಹುದು. ಆದರೆ ಇದರ ಹಿಂದೆ ಲೆಕ್ಕಾಚಾರ ಬೇರೆ ಇದ್ದಂತಿದೆ. ‘ದೊಡ್ಡ ಪ್ರಮಾಣದ ದಲಿತ ನಾಯಕ ವರ್ಗವನ್ನು ತಮ್ಮ ಕಡೆಗೆ ಒಲಿಸಿ ಕೊಂಡರೆ ಅಷ್ಟರ ಮಟ್ಟಿಗೆ ಸಂವಿಧಾನ ಬದಲಾವಣೆಗೆ ದಲಿತ ವರ್ಗದ ಪ್ರತಿರೋಧ ಕಡಿಮೆ ಆದಂತೆ ಆಗುತ್ತದೆ’ ಎನ್ನುವ ಲೆಕ್ಕಾಚಾರ ಅದು. ಅಲ್ಲದೆ, ಸ್ವತಃ ಅಂಬೇಡ್ಕರ್ ಅವರೇ ಮುಂದಿನ ತಲೆಮಾರು ಬೇಕಾದರೆ ಸಂವಿಧಾನವನ್ನು ಬದಲಿಸಿಕೊಳ್ಳಲಿ ಎಂಬ ಅರ್ಥದ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಜನರನ್ನು ನಂಬಿಸಲು ಅವರ ಬರಹ ಮತ್ತು ಭಾಷಣಗಳ ಕೆಲವು ಅಂಶಗಳನ್ನು ಸನ್ನಿವೇಶದಿಂದ ಪ್ರತ್ಯೇಕಿಸಿ ಎತ್ತಿ ತೋರಿಸುವ ಕೆಲಸವೂ ನಡೆದಿದೆ.

ಸಂವಿಧಾನ ಬದಲಿಸಲು ಜನಮನದ ಸಿದ್ಧತೆ

ಇಷ್ಟೆಲ್ಲಾ ಆಗುತ್ತಿದ್ದರೂ ಸಂವಿಧಾನ ಅಪಾಯದಲ್ಲಿದೆ ಎನ್ನುವ ಅಭಿಪ್ರಾಯ ದಟ್ಟಗೊಳ್ಳುತ್ತಿಲ್ಲ. ‘ಧರ್ಮ ಅಪಾಯದಲ್ಲಿದೆ’ ಎನ್ನುವ ಅಭಿಪ್ರಾಯದ ಮಹಾ ಪ್ರವಾಹದಲ್ಲಿ ಅಲ್ಲಿಲ್ಲಿ ಕೇಳಿಸಿ ಕೊಳ್ಳುತ್ತಿರುವ ‘ಸಂವಿಧಾನ ಅಪಾಯದಲ್ಲಿದೆ’ ಎನ್ನುವ ಕೆಲವರ ಆತಂಕ ಭರಿತ ಮಾತುಗಳೂ ಕೊಚ್ಚಿ ಹೋಗುತ್ತಿವೆ. ಈ ದೇಶದಲ್ಲಿ ಜನತಂತ್ರ ಬಂದದ್ದು, ಸಮಾನತೆಯ ಕಾನೂನು ಬಂದದ್ದು ಸಂವಿಧಾನದ ಮೂಲಕ ಎನ್ನುವ ಸತ್ಯವನ್ನೇ ಅಳಿಸಲೆಂಬಂತೆ, ವೇದಕಾಲದಿಂದಲೂ ದೇಶದಲ್ಲಿ ಪ್ರಜಾತಂತ್ರ ಇತ್ತು ಎನ್ನುವ ಅರ್ಥದ   ಸಂಕಥನಗಳನ್ನು ಸೃಷ್ಟಿಸುವ ಸನ್ನಾಹವೂ ನಡೆಯುತ್ತಿದೆ. ಅದಕ್ಕಾಗಿಯೇ ಸಂವಿಧಾನ ದಿನವನ್ನು ‘ಭಾರತ: ಪ್ರಜಾತಂತ್ರದ ಜನನಿ’ ಎನ್ನುವ ಘೋಷಣೆಯೊಂದಿಗೆ ಆಚರಿಸಬೇಕೆಂಬ ಆದೇಶ ಬಂದಿರುವುದು. ಇವೆಲ್ಲವೂ ಸಂವಿಧಾನ ಬದಲಿಸಲು ಜನಮನವನ್ನು ಹದಗೊಳಿಸುವ ಸನ್ನಾಹದ ಭಾಗ.

ಸಂವಿಧಾನ ರಕ್ಷಣೆಗೆ ಸಿದ್ಧರಾಗದಿದ್ದರೆ…

ಹಾಗಾಗಿ ಈಗಲಾದರೂ ಸಂವಿಧಾನ ಅಪಾಯದಲ್ಲಿದೆ ಎಂದು ಒಪ್ಪಿಕೊಳ್ಳದೇ ಹೋದರೆ, ಸಂವಿಧಾನದ ರಕ್ಷಣೆಗೆ ಎಂತಹಾ ತ್ಯಾಗಕ್ಕೂ ಸಿದ್ಧರಾಗಬೇಕು ಎನ್ನುವ ಮನೋಭಾವನೆಯನ್ನು ಜನಸಮೂಹದಲ್ಲಿ ಗಟ್ಟಿಗೊಳಿಸುವ ಕೆಲಸ ಆಗದೆ ಹೋದರೆ ಮತ್ತು ಇದಕ್ಕೆ ಪೂರಕವಾಗಿ ಸಂವಿಧಾನದ ಕುರಿತಾದ ಅರಿವನ್ನು ಜನರ ಸಾಂಸ್ಕೃತಿಕ ಅರಿವಿನ ಭಾಗವಾಗಿ ಸ್ಥಾಪಿಸದೆ ಹೋದರೆ, ಪರಿಸ್ಥಿತಿ ಬಹುಬೇಗ ಕೈ ಮೀರಿ ಹೋಗಲಿದೆ. ಈಗ ಮೈಮರೆತರೆ ಊರು ಸೂರೆ ಹೋದ ಮೇಲೆ ಕೋಟೆಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದೀತು.

ಎ ನಾರಾಯಣ

ಲೇಖಕರು

ಭಾರತ ಸಂವಿಧಾನವೆಂಬ ಶ್ರೀ ಸಾಮಾನ್ಯನ ಜೀವಂತ ಗ್ರಂಥ!
ಭಾರತದ ಸಂವಿಧಾನದ ಬಗ್ಗೆ ಬೇಕಾಬಿಟ್ಟಿ ಮಾತಾಡುವ ಜನರ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಸಂವಿಧಾನದ ಆಶೋತ್ತರಗಳನ್ನು ಯುವ ಸಮುದಾಯ ಹೆಚ್ಚು ಹೆಚ್ಚಾಗಿ ಅಂತರ್ಗತಗೊಳಿಸಿ ಕೊಳ್ಳಬೇಕಾದ ತುರ್ತು ದೇಶದ ಮುಂದಿದೆ. ಈ ಸಂದರ್ಭದಲ್ಲಿ ತಿಪಟೂರಿನ ಯುವಕ ವಿನಯ್ ಎಸ್ ಕೆ  ಅವರು ಸಂವಿಧಾನದ ಉದಾತ್ತ ಆದರ್ಶಗಳ ಮೇಲೆ ತಮ್ಮ ಲೇಖನಿ ಹರಿಸಿದ್ದಾರೆ

ನವೆಂಬರ್ 26, 1949 ಭಾರತದ ಸಂವಿಧಾನ ಸಭೆಯಲ್ಲಿ ಭಾರತಕ್ಕೆ ಹೊಸದಾದ ಒಂದು ಸಂವಿಧಾನ ಅಂಗೀಕಾರಗೊಂಡ ದಿನ. ಅಂದಿಗೆ ಶತಮಾನಗಳ ಕಾಲ ಇದ್ದ ಧರ್ಮ ಶಾಸ್ತ್ರಗಳು, ಪುರಾಣಗಳು ಬದಿಗೆ ಸರಿದು ಮಾನವೀಯ ಮುಖದ  ಸಮತೆಯ  ಗ್ರಂಥ ಅಂಗೀಕಾರಗೊಂಡಿತು. ಅ ದಿನವನ್ನು ಸರ್ಕಾರ  ಸಂವಿಧಾನ ದಿನವಾಗಿ ಆಚರಿಸುತ್ತದೆ. ಸಂವಿಧಾನ ಸಭೆಯ 284 ಜನ ಸದಸ್ಯರ  ಸಹಿ ಮೂಲಕ ನಮ್ಮ ಹೆಮ್ಮೆಯ ಸಂವಿಧಾನವು ಅಂಗೀಕಾರಗೊಂಡಿತು. ಆ ಮೂಲಕ ಡಾ ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿಯ ಸುದೀರ್ಘ 2 ವರ್ಷ 11ತಿಂಗಳು 18 ದಿನಗಳ ಶ್ರಮ ಫಲಪ್ರದವಾಯಿತು. ಇದುವರೆಗೂ 468 ಅನುಚ್ಛೇದಗಳು,  12 ಪರಿಚ್ಛೇದಗಳು, 105 ತಿದ್ದುಪಡಿಗಳನ್ನು ಕಂಡ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲಿಖಿತ ಸಂವಿಧಾನ ಎಂಬಾ ಹೆಗ್ಗಳಿಕೆಯನ್ನು ನಮ್ಮ ಭಾರತ ಸಂವಿಧಾನ ಪಡೆದುಕೊಂಡಿತು.

ಸಂವಿಧಾನದ ಪ್ರಾಮುಖ್ಯತೆ

ಭಾರತ ಒಂದು ಒಕ್ಕೂಟ

ಐತಿಹಾಸಿಕವಾಗಿ 550 ಕ್ಕು ಹೆಚ್ಚು ಪ್ರಾಂತಗಳಾಗಿದ್ದ ಭಾರತ  ಒಂದೇ ಕಾನೂನಿನ ವ್ಯಾಪ್ತಿಗೆ ಒಳಪಟ್ಟಿದ್ದು  ಸಂವಿಧಾನದಿಂದ. ಭಾರತ ರಾಜ್ಯಗಳ ಒಕ್ಕೂಟ ಎಂದು ಸಂವಿಧಾನದ 1ನೇ ಅನುಚ್ಛೇದ ಹೇಳುತ್ತದೆ. ಅಂದಿನಿಂದ ಭಾರತ ಒಕ್ಕೂಟ ಮಾದರಿಯ ದೇಶವಾಯಿತು.

ಸಾಮಾಜಿಕ ಸ್ವಾತಂತ್ರ್ಯ

ಐತಿಹಾಸಿಕವಾಗಿ ಚಾತುರ್ವರ್ಣ ಮನುಧರ್ಮ ಶಾಸ್ತ್ರದಿಂದ  ಭಾರತೀಯರು ಜಾತಿಗಳಾಗಿ ಒಡೆದು ಹೋಗಿ ಹಲವಾರು ಅಸಮಾನತೆಗಳನ್ನು ಅನುಭವಿಸಿ  ವಿದ್ಯೆ, ಆಸ್ತಿ, ಅಧಿಕಾರ, ಇಷ್ಟದ ವೃತ್ತಿ ಇಲ್ಲದೇ ನೋವುಂಡಿದ್ದರು. ಅಂತಹ ಜನರಿಗೆ ಓದುವ ಬರೆಯುವ, ದೇಶದ ಯಾವುದೇ ಭಾಗದಲ್ಲಿ ಸಂಚರಿಸುವ, ಇಷ್ಟಪಟ್ಪ ಬಟ್ಟೆ ತೊಡುವ, ಇಷ್ಟ ಪಟ್ಟ ಆಹಾರ ಸೇವನೆ ಮಾಡುವ ಸ್ವಾತಂತ್ರ್ಯ ಕೊಟ್ಟಿದ್ದು ಸಂವಿಧಾನ. ಈ ಎಲ್ಲದರ ಮೇಲೆ ನಿಷೇಧ ಹೇರಿದ್ದು ಶಾಸ್ತ್ರ ಪುರಾಣಗಳು. ಎಲ್ಲಕ್ಕೂ ಮಿಗಿಲಾಗಿ ಶ್ರೇಣೀಕೃತ ಸಮಾಜದಿಂದ ಸಮತೆಯ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ್ದೇ ಸಂವಿಧಾನ.

ರಾಜಕೀಯ ಸಮಾನತೆ ಮತ್ತು ಸಮಾನ ಅವಕಾಶ

ರಾಷ್ಟ್ರದ ರಾಷ್ಟ್ರಪತಿಯವರಿಂದ ಹಿಡಿದು ಕಟ್ಟಕಡೆಯ ವ್ಯಕ್ತಿಗೂ ಒಂದೇ ಮತ ಒಂದೇ ಮೌಲ್ಯ. 25 ವರ್ಷ ವಯಸ್ಸಿನ ಮೇಲ್ಪಟ್ಟ ಯಾವುದೇ ಜಾತಿ, ಧರ್ಮ, ಅಂತಸ್ತು, ಲಿಂಗ, ಪ್ರದೇಶ, ತಾರತಮ್ಯವಿಲ್ಲದೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆತಿದ್ದು ಸಂವಿಧಾನದಿಂದ. ಬಹುಸಂಖ್ಯಾತ ವರ್ಗಕ್ಕೆ ಐತಿಹಾಸಿಕವಾಗಿ ರಾಜ್ಯ ಆಳುವ ಹಕ್ಕನ್ನು ಧರ್ಮಶಾಸ್ತ್ರಗಳು ನಿಷೇಧ ಹೇರಿದ್ದವು.

ಅವಕಾಶಗಳ ಸಮಾನತೆ

ಐತಿಹಾಸಿಕ ಅನ್ಯಾಯದ ಪರಿಣಾಮವಾಗಿ ಮತ್ತು ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸಲು  ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದೊರಕಿರುವುದು ಸಂವಿಧಾನದಿಂದ.

ಅಸ್ಪೃಶ್ಯತೆ ನಿಷೇಧ

ಶತಮಾನಗಳ ಕಾಲ  ಅನುಭವಿಸಿದ ಶೋಷಣೆ  ಮತ್ತು ಕ್ರೌರ್ಯದಿಂದ  ಮುಕ್ತಿಗೆ ಕಾನೂನಿನ ಬಲ ತಂದಿದ್ದು ಸಂವಿಧಾನ.

ನಮ್ಮ ದೇಶದ ವೈವಿಧ್ಯತೆಯನ್ನು ಗುರುತಿಸಿದ್ದು ಸಂವಿಧಾನ. ಭಾಷಾವಾರು ರಾಜ್ಯಗಳ  ರಚನೆ, ಯಾವುದೇ ಭಾಷೆಗೆ ದೇವ ಭಾಷೆ,  ರಾಷ್ಟ್ರೀಯ ಭಾಷೆ ಸ್ಥಾನಮಾನ ನೀಡದೆ ಬಹುಮುಖ್ಯವಾಗಿ ಮಾತನಾಡುವ 22 ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಗುರುತಿಸಿರುವುದು ಸಂವಿಧಾನ. ಯಾವುದೇ ನುಡಿ, ಭಾಷೆ, ಸಂಸ್ಕೃತಿ ರಕ್ಷಣೆ ಸಂವಿಧಾನ ನೀಡಿದ ಮೂಲಭೂತ ಹಕ್ಕು.

ಧಾರ್ಮಿಕ ಸ್ವಾತಂತ್ರ್ಯ

ಭಾರತವು ಐತಿಹಾಸಿಕವಾಗಿ ಜಾತ್ಯತೀತ ರಾಷ್ಟ್ರ. ಇಲ್ಲಿ ಹಲವಾರು ಧರ್ಮಗಳಿವೆ. ಹಾಗಾಗಿ ಧರ್ಮ ಧರ್ಮಗಳ ನಡುವೆ ಸಮಾನತೆ, ಧರ್ಮದ ಒಳಗೂ ಸ್ವಾತಂತ್ರ್ಯ ಮತ್ತು ಸಮಾನತೆ ನೀಡುವ ಮೂಲಕ ಧಾರ್ಮಿಕ ದಬ್ಬಾಳಿಕೆಗೆ ಆಸ್ಪದ ನೀಡದೆ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ.

ಪ್ರಜೆಗಳು ತಮ್ಮ ಹಕ್ಕುಗಳಿಂದ ವಂಚಿತರಾದಾಗ ಸಂವಿಧಾನದ ಪರಿಹಾರದ ಹಕ್ಕುಗಳ ಮೂಲಕ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನಲ್ಲಿ ತಮ್ಮ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುವ ಹಕ್ಕನ್ನು ಸಹ ಇದು ನೀಡಿದೆ.

ʼಸಂವಿಧಾನವನ್ನು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆʼ

ಭಾರತದ ಪ್ರಜೆಗಳು ತಮಗೆ ತಾವೇ ಅರ್ಪಿಸಿಕೊಂಡ ಸಂವಿಧಾನ ಇದಾಗಿದೆ. ಅದನ್ನು ಪಾಲಿಸಿ ಎತ್ತಿಹಿಡಿದು ಕಾಪಾಡುವ ಮಹತ್ತರ ಜವಾಬ್ದಾರಿಯನ್ನು ನಮಗೆ ಸಂವಿಧಾನ ಕರ್ತೃಗಳು ನೀಡಿದ್ದಾರೆ. ಅದನ್ನು ನಮ್ಮ ಪ್ರತಿ ನಡೆಗಳಲ್ಲಿ ಕಾಪಾಡೋಣ, ಎತ್ತಿಹಿಡಿಯೋಣ. ನಾವು ಸಂವಿಧಾನವನ್ನು ರಕ್ಷಿಸಿದರೆ ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂಬ ದೇವನೂರು ಮಹಾದೇವ ಅವರ ಮಾತುಗಳು ಸದಾ ಮನನೀಯ.

ವಿನಯ್ ಎಸ್ ಕೆ

ತಿಪಟೂರು

ಭಾರತ ಸಂವಿಧಾನದ ಸ್ತ್ರೀ ಪರ ನಿಲುವು: ಪ್ರಸ್ತುತ ವಿದ್ಯಮಾನಗಳು
ಭಾರತ ಸಂವಿಧಾನದ ಸ್ತ್ರೀ ಪರ ನಿಲುವು ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ ಪ್ರಶ್ನೆಗಳು ನಿಜವಾದ ಸ್ತ್ರೀ ಪರ ನ್ಯಾಯವನ್ನು ಪಡೆಯಬಲ್ಲವು ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಕಾನೂನು ವಿದ್ವಾಂಸರೂ, ಸಿಂಬಿಯಾಸಿಸ್ ಲಾ ಸ್ಕೂಲಿನ‌ ನಿರ್ದೇಶಕರೂ ಆಗಿರುವ ಡಾ. ಶಶಿಕಲಾ ಗುರುಪುರ

ಅಮೃತ ಮಹೋತ್ಸವದ ಆಚರಣೆಯಲ್ಲಿರುವ ಭಾರತದ ಪ್ರಜಾಪ್ರಭುತ್ವದ ಭದ್ರ ತಳಹದಿಯೇ ನಮ್ಮ ಸಂವಿಧಾನ. ಕಾಲಾತೀತವಾಗಿ ಈ ದೇಶದ ಆಶೋತ್ತರಗಳನ್ನು ಪ್ರತಿಬಿಂಬಿಸುವ ಈ ಸಾಮಾಜಿಕ ದಾಖಲೆಯಲ್ಲಿ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತೆಗಳು ಮೂಲಭೂತ ಮೌಲ್ಯಗಳು.

ಸಂವಿಧಾನದ ಆತ್ಮವೆಂಬುದಾಗಿ ಹೇಳಲಾದ ಮೂರನೆಯ ಪರಿಚ್ಛೇದದ ೧೨ ರಿಂದ ೩೨ ರ ವರೆಗಿನ ವಿಧಿಗಳು ಮೂಲಭೂತ ಹಕ್ಕುಗಳನ್ನು ವಿವರಿಸುತ್ತವೆ. ಇವುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಜೀವಿಸುವ ಹಕ್ಕು ಧಾರ್ಮಿಕ ಸ್ವಾತಂತ್ರ್ಯ ಹಾಗೂ ನ್ಯಾಯಾಂಗ ನೆರವಿನ ಹಕ್ಕು ಒಳಗೊಂಡಿವೆ. ೧೫ನೆಯ ವಿಧಿಯು ತಾರತಮ್ಯಗಳನ್ನು ನಿಷೇಧಿಸುತ್ತಾ ಲಿಂಗಾಧಾರಿತ ತಾರತಮ್ಯವನ್ನು ವಿರೋಧಿಸಿದೆ. ಅದೇ ವಿಧಿಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ಒದಗಿಸುವಂಥ ಕರ್ತವ್ಯ ಸರಕಾರದ ಮೇಲಿದೆ.

ಸಂವಿಧಾನದ ಒಳ ಸ್ತ್ರೋತವಾದ ನ್ಯಾಯವನ್ನು ಸಾಮಾಜಿಕ, ಆರ್ಥಿಕ, ಹಾಗೂ ರಾಜಕೀಯ ಸ್ತರಗಳಲ್ಲಿ  ಅನುಷ್ಠಾನ ಗೊಳಿಸುವಲ್ಲಿ ಕಾಯಿದೆ ಹಾಗೂ ಅಡಳಿತ ನೀತಿಗಳಿಗಿಂತಲೂ ತೀವ್ರವಾಗಿ ಭಾರತೀಯ ನ್ಯಾಯಾಂಗದ ಕೊಡುಗೆ ಕಂಡು ಬರುತ್ತದೆ. ಇದರಲ್ಲಿ ಮಹಿಳಾಪರವಾದ ನ್ಯಾಯದ ನಿಲುವುಗಳು ಗಮನಾರ್ಹ. ಆದರೂ ಮಹಿಳಾ ನಿರ್ಲಿಪ್ತ, ಮಹಿಳಾ ವಿರೋಧಿ, ಪೂರ್ವಾಗ್ರಹ ಪೀಡಿತ ನಿಲುವುಗಳು ಕಂಡು ಬರುತ್ತವೆ. ೧೯೭೦ ರ ದಶಕದ ಮಥುರಾ ಮೊಕದ್ದಮೆಯಲ್ಲಿ ಅತ್ಯಾಚಾರ ಸಂತ್ರಸ್ತೆಯ ಶೀಲದ ಸುತ್ತಲಿನ  ಸಂಶಯವು ಆರೋಪಿಯ ಶಿಕ್ಷೆಯನ್ನು ಕಡಿತಗೊಳಿಸಿರುವುದು ಒಂದು. ಗಂಡನು ಸಹಜೀವನಕ್ಕಾಗಿ ಆದೇಶಿಸಿದಾಗ ವೃತ್ತಿಯ ಕಾರಣಕ್ಕೆ ನಿರಾಕರಿಸಿದ ಮಡದಿ ಸಿನೆಮಾ ನಟಿ ಸರಿತಾ ಅವರ ಸಾಂವಿಧಾನಿಕ ಘನತೆಯನ್ನು ಮದುವೆಯೆಂಬ ಪವಿತ್ರ ಬಂಧನದ ಪ್ರತಿಸ್ಪರ್ಧಿಯಾಗಿ ನೋಡಿರುವುದೂ ವಿಪರ್ಯಾಸ!

ಕಳೆದ ಐದು ವರುಷಗಳಲ್ಲಿ ಕಾನೂನಿನ ತಕ್ಕಡಿಯನ್ನು ಹಿಡಿದಿರುವ ನ್ಯಾಯ ದೇವತೆ ತನ್ನ ಕಣ್ಣ ಪಟ್ಟಿಯನ್ನು ಸರಿಸಿ ಮಹಿಳೆಯ ನೋವನ್ನು ಗ್ರಹಿಸಿರುವ ವಿದ್ಯಮಾನಗಳು ಅನೇಕ. ಇಲ್ಲಿ, ಹಾಲಿ ಸರ್ವೋಚ್ಚ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಧನಂಜಯ ಚಂದ್ರಚೂಡ್‌ ಒಬ್ಬ ದೃಷ್ಟಾರರಾಗಿ ಅಪರೂಪದ ಮಹಿಳಾ ಒಳ ದನಿಯಾಗಿ ಕಾಣುತ್ತಾರೆ. ಮಹಿಳೆಯರನ್ನು ವೃತ್ತಿಯ ಹುದ್ದೆಯ ತಾರತಮ್ಯದಿಂದ ಸಕ್ರಿಯವಾಗಿ ಸೈನ್ಯದಲ್ಲಿ ಇರಿಸಿದ ತೀರ್ಪು ಮಾತ್ರವಲ್ಲ, ಮದುವೆಯೊಳಗೆ ಮಹಿಳೆಯ ಶರೀರದ ಒಡೆತನ ಪುರುಷನದ್ದಲ್ಲ ಎಂದು  ವ್ಯಭಿಚಾರದ ಅಪರಾಧ ಕಾನೂನನ್ನು ಒರೆಗೆ ಹಚ್ಚಿದವರು. ಮಾನ್ಯ ನ್ಯಾಯ ಮೂರ್ತಿಗಳು ಶಬರಿಮಲೆಯ ತೀರ್ಪಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯನ್ನು ಸಾರ್ವಜನಿಕ ಧರ್ಮಾನುಭವಕ್ಕೆ ಶರೀರದ ಆಧಾರದಲ್ಲಿ ಅತೀತವಾಗಿಸುವುದು ʼಅಸ್ಪೃಶ್ಯತೆʼ ಎಂದು ಸಾರಿದ್ದಾರೆ. ಇದು ಮಹಿಳಾ ಹಕ್ಕುಗಳಿಗೆ ನಾಗರಿಕ ಹಕ್ಕಿನ ನಿರ್ದಿಷ್ಟ ಹೋರಾಟಕ್ಕೆ ಮುನ್ನುಡಿ ಬರೆದಂತಿದೆ. ಖಾಸಗಿ ತನದ ವ್ಯಾಖ್ಯಾನವನ್ನು ʼಆಧಾರ್‌ʼ ಕೇಸಲ್ಲಿ ನೀಡುತ್ತಾ, ಗರ್ಭಪಾತದ  ಕಾನೂನುಗಳ, ಖಾಸಗಿ ಕೌಟುಂಬಿಕ ಕಾನೂನುಗಳ ಮಹಿಳಾ ವಿರೋಧಿ ಅಂಶಗಳನ್ನು ಪರಿಶೋಧಿಸಿದ್ದೂ ಇದೆ.

ಇದರಂತೆಯೇ ಮುನ್ನುಗ್ಗಿದ ಪುರೋಗಾಮಿ ಛಲವು ಮಾಜಿ ನ್ಯಾಯಮೂರ್ತಿ ಸುಜಾತಾ ಮನೋಹರ್‌ ಅವರಲ್ಲಿ, ಹಾಲಿ ಮುಂಬೈ  ಹೈಕೋರ್ಟಿನ ನಮ್ಮ ಹಳೆ ವಿದ್ಯಾರ್ಥಿನಿ ನ್ಯಾಯ ಮೂರ್ತಿ ರೇವತಿ ಡೇರೆಯವರಲ್ಲಿ, ನ್ಯಾಯಮೂರ್ತಿ ರವೀಂದ್ರ ಭಟ್‌ ರವರ ಸ್ತ್ರೀ ಪರ ತೀರ್ಪುಗಳಲ್ಲಿ ಕಾಣುತ್ತವೆ.

ಇವೆಲ್ಲ ವಿದ್ಯಮಾನಗಳು ಸಂವಿಧಾನದ ರಕ್ಷಕರಾಗಿ ನ್ಯಾಯಾಂಗದ ಪರಿಣತರ ಎಚ್ಚರ ಹಾಗೂ ದಕ್ಷತೆಗಳಿಗೆ ಕುರುಹಾಗಿವೆ. ಅಪವಾದವೆಂಬಂತೆ ʼಚರ್ಮ ಸ್ಪರ್ಷವಿಲ್ಲದ ಶೋಷಣೆ ಮಗುವಿನ ಮೇಲಾಗಿದ್ದರೆ ಅದನ್ನು ಹಾಗೆ ಹೇಳಲಾಗದುʼ ಎಂಬ ಮಹಿಳಾ ನ್ಯಾಯಾಧೀಶೆಯ ಅಪ್ರಬುದ್ಧ ವ್ಯಾಖ್ಯಾನಗಳೂ ಕಾಣಿಸುತ್ತವೆ.

ಒಟ್ಟಿನಲ್ಲಿ ನ್ಯಾಯಾಧೀಶರ ಎಚ್ಚರ ಮತ್ತು ಸ್ಫೂರ್ತಿ ಹಾಗೂ ಸಮಾಜವು ನ್ಯಾಯಾಂಗವನ್ನು ಧನಾತ್ಮಕ ಪರಿವರ್ತನೆಗೆ ಹಚ್ಚುವುದು ಇವೆರಡೂ ಏಕಕಾಲಕ್ಕೆ ನಡೆದಲ್ಲಿ ಮಾತ್ರ ಮಹಿಳಾ ಪ್ರಶ್ನೆಗಳು ನಿಜವಾದ ಸ್ತ್ರೀ ಪರ ನ್ಯಾಯವನ್ನು ಪಡೆದು ಐತಿಹಾಸಿಕ ತಾರತಮ್ಯಕ್ಕೆ ಹಾಗೂ ಪರಿಹಾರ ಸಿಗದ ಅನ್ಯಾಯದ ಮೂಕ ರೋಧನಕ್ಕೆ ಕಿವಿಯಾಗಬಲ್ಲುದು.

ಡಾ.ಶಶಿಕಲಾ ಗುರುಪುರ

ಪ್ರಸ್ತುತ ಪುಣೆಯ ಸಿಂಬಿಯಾಸಿಸ್‌ ಲಾ ಸ್ಕೂಲಿನ ನಿರ್ದೇಶಕರು, ಸಿಂಬಿಯಾಸಿಸ್ ಅಂತಾರಾಷ್ಟ್ರೀಯ‌ ಯೂನಿವರ್ಸಿಟಿಯ ಡೀನ್‌ ಆಗಿರುವ ಇವರು ಖ್ಯಾತ ಅಂತಾರಾಷ್ಟ್ರೀಯ ಕಾನೂನು ವಿದ್ವಾಂಸರು.