controversial tweet – Peepal Media

ʼನರೆಗಾʼದಿಂದಾಗಿ ಕಾರ್ಮಿಕರು ಸಿಗುತ್ತಿಲ್ಲ: L&T ಅಧ್ಯಕ್ಷರಿಂದ ಮತ್ತೊಂದು ವಿವಾಧಾತ್ಮಕ ಹೇಳಿಕೆ
ನವದೆಹಲಿ: ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ವಿವಾದ ಸೃಷ್ಠಿಸಿದ್ದ ಎಲ್‌ ಆ್ಯಂಡ್ ಟಿ ಅಧ್ಯಕ್ಷ ಎಸ್‌. ಎನ್ ಸುಬ್ರಹ್ಮಣ್ಯನ್ ಅವರ ಮತ್ತೊಂದು ಹೇಳಿಕೆ ನೀಡಿದ್ದಾರೆ. ಸರ್ಕಾರದ ನರೆಗಾ ಯೋಜನೆಯಿಂದ ಕಟ್ಟಡಗಳ ನಿರ್ಮಾಣಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ಅವರು  ಹೇಳಿದ್ದಾರೆ.

ಚೆನ್ನೈನಲ್ಲಿ ಮಂಗಳವಾರ ಸಿಐಐ ಸಂಘಟಿಸಿದ್ದ ‘ಸೌತ್ ಗ್ಲೋಬಲ್ ಲಿಂಕೇಜಸ್ ಸಮ್ಮಿಟ್–2025’ರಲ್ಲಿ ಮಾತನಾಡಿದ ಅವರು, ತಮ್ಮ ಊರಿನಲ್ಲಿ ಜನ ಸುಖವಾಗಿರುವುದರಿಂದ ಕೆಲಸಕ್ಕಾಗಿ ಬೇರೆ ಕಡೆ ಹೋಗಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ನಿರ್ಮಾಣ ವಲಯದಲ್ಲಿ ಕಾರ್ಮಿಕರ ಕೊರತೆಯಾಗಿದೆ. ಭಾರತೀಯರು ಕಚೇರಿಗಿಂತ ಮನೆಯಿಂದಲೇ ಕೆಲಸ ಮಾಡಲು ಬಯಸುತ್ತಾರೆ ಎಂದಿದ್ದಾರೆ.

‘ನಿರ್ಮಾಣ ವಲಯದಲ್ಲಿ ಕಾರ್ಮಿಕರು ಸಿಗುವುದೇ ಕಷ್ಟವಾಗಿದೆ. ನೆಮ್ಮದಿಯ ಜೀವನ ಬಯಸುವುದರಿದ ಅವರು ಊರು ಬಿಟ್ಟು ಬರುತ್ತಿಲ್ಲ. ನರೇಗಾ, ನೇರ ನಗದು ವರ್ಗಾವಣೆ ಹಾಗೂ ಜನಧನ ಖಾತೆಗಳಿಂದಾಗಿ ಕಾರ್ಮಿಕರ ಲಭ್ಯತೆ ಕಡಿಮೆಯಾಗುತ್ತಿದೆ. ಅವಕಾಶಗಳನ್ನು ಹುಡುಕಿಕೊಂಡು ಜನ ವಲಸೆ ಹೋಗುತ್ತಿಲ್ಲ. ಸ್ಥಳೀಯ ಆರ್ಥಿಕತೆ ಚೆನ್ನಾಗಿರುವುದರಿಂದಲೂ ಆಗಿರಬಹುದು. ಅಥವಾ ಸರ್ಕಾರದ ವಿವಿಧ ಯೋಜನೆಗಳಿಂದಲೂ ಆಗಿರಬಹುದು’ ಎಂದು ಹೇಳಿದ್ದಾರೆ.

ಹಣದುಬ್ಬರಕ್ಕೆ ಅನುಗುಣವಾಗಿ ಕಾರ್ಮಿಕರ ವೇತನವನ್ನು ಪರಿಷ್ಕರಿಸಬೇಕಿದೆ. ಮಧ್ಯಪ್ರಾಚ್ಯದಲ್ಲಿ 3.5 ಪಟ್ಟು ಹೆಚ್ಚಿನ ವೇತನ ಸಿಗುವುದರಿಂದ ಭಾರತೀಯ ಕಾರ್ಮಿಕರು ಅಲ್ಲಿಗೆ ವಲಸೆ ಹೋಗುತ್ತಿದ್ದಾರೆ. ವಲಸೆ ಸಮಸ್ಯೆ ಕೂಡ ಕಾರ್ಮಿಕರ ಕೊರತೆಗೆ ಕಾರಣ ಎಂದಿದ್ದಾರೆ.

‘ಐಟಿ ಉದ್ಯೋಗಿಯನ್ನು ಕಚೇರಿಗೆ ಬಂದು ಕೆಲಸ ಮಾಡಿ ಎಂದು ಹೇಳಿ. ಆಗ ಅವರು ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಅವರು ಅರೋಪಿಸಿದ್ದಾರೆ.

ನಾನು 1983 ರಲ್ಲಿ ಎಲ್ & ಟಿ ಗೆ ಸೇರಿದಾಗ, ನನ್ನ ಬಾಸ್, ನೀವು ಚೆನ್ನೈನವರಾಗಿದ್ದರೆ, ದೆಹಲಿಗೆ ಹೋಗಿ ಕೆಲಸ ಮಾಡಿ ಎಂದು ಹೇಳಿದ್ದರು. ಇಂದು ನಾನು ಚೆನ್ನೈನ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ದೆಹಲಿಗೆ ಹೋಗಿ ಕೆಲಸ ಮಾಡಲು ಹೇಳಿದರೆ, ಅವರು ರಾಜೀನಾಮೆ ನೀಡುತ್ತಾರೆ. ಸ್ಥಳಾಂತರಗೊಳ್ಳಲು ಐಟಿ ವಲಯದಲ್ಲಿ ಹಿಂದೇಟು ಹಾಕುತ್ತಾರೆ ಎಂದು ಅವರು  ಹೇಳಿದ್ದಾರೆ.

‘ಭಾನುವಾರದಂದು ಸಹ ಕೆಲಸ ಮಾಡಬೇಕು. ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡುತ್ತಾ ಕೂಡುತ್ತಿರಿ? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ. ನಾನು ಭಾನುವಾರವೂ ಕೆಲಸ ಕೆಲಸ ಮಾಡುತ್ತೇನೆ’ ಎಂದು ಅವರು ಹೇಳಿದ್ದ ಹೇಳಿಕೆ ಭಾರಿ ವಿವಾದ ಹುಟ್ಟು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ʼನಾಚಿಗೇಡುʼ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿಕೆಗೆ ಟಿಎಂಸಿ ತರಾಟೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬುಧವಾರ, ಡಿಸೆಂಬರ್ 6 ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ಮಾಡಿರುವ ಅವಹೇಳನಕಾರಿ ಹೇಳಿಕೆಯ ವಿರುದ್ಧ ತೃಣಮೂಲ ಕಾಂಗ್ರೆಸ್ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.

ಸಿಂಗ್ ಹೇಳಿದ್ದೇನು?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬ್ಯಾನರ್ಜಿ ನೃತ್ಯದ ಬಗ್ಗೆ ಸಿಂಗ್ ಪ್ರತಿಕ್ರಿಯಿಸಿದ್ದ ಗಿರಿರಾಜ್‌ ಸಿಂಗ್, “ಜಶ್ನ್ ಮನ ರಹೀ ಹೈ, ತುಮ್ಕೆ ಲಗಾ ರಹೀ ಹೈ, ಯೇ ಉಚಿತ್ ನಹೀ ಹೈ. (ಅವಳು ಸಂಭ್ರಮಿಸುತ್ತಿದ್ದಾಳೆ, ಕುಣಿಯುತ್ತಿದ್ದಾಳೆ, ಇದು ಸರಿಯಲ್ಲ) ಎಂದು ಏಕವಚನದಲ್ಲಿ ಸಂಬೋಧಿಸಿದ್ದರು.

ಚಲನಚಿತ್ರೋತ್ಸವದ ಸಂದರ್ಭದಲ್ಲಿ ಬ್ಯಾನರ್ಜಿ ಮಾಡಿರುವ ನೃತ್ಯಕ್ಕೆ, “ತೋ ಫೆಸ್ಟಿವಲ್ ಮೇ ತುಮ್ಕೆ ಲಗಾನಾ ಕೌನ್ ಜರೂರಿ ಹೈ? (ಉತ್ಸವದಲ್ಲಿ ನೃತ್ಯ ಮಾಡುವ ಅಗತ್ಯವಿದೆಯೇ?)” ಎಂದು ಕೇಳಿದ್ದರು.

KIFF ನ 29 ನೇ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಬ್ಯಾನರ್ಜಿ ನೃತ್ಯ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಈ ಕಾರ್ಯಕ್ರಮದಲ್ಲಿ ಸೋನಾಕ್ಷಿ ಸಿನ್ಹಾ, ಮಹೇಶ್ ಭಟ್, ಅನಿಲ್ ಕಪೂರ್ ಮತ್ತು ಶತ್ರುಘ್ನ ಸಿನ್ಹಾ ಮುಂತಾದ ಹಲವಾರು ತಾರೆಯರು ಭಾಗವಹಿಸಿದ್ದರು.

‘ಸ್ತ್ರೀದ್ವೇಷ ಹೇಳಿಕೆ’: ಟಿಎಂಸಿಯಿಂದ ಸಚಿವರ ತರಾಟೆ

ಮಹಿಳಾ ವಿರೋಧಿ ಹೇಳಿಕೆಯನ್ನು ನೀಡಿರುವ ಕೇಂದ್ರ ಸಚಿವರನ್ನು ತರಾಟೆಗೆ ತೆಗೆದುಕೊಂಡಿರುವ ಟಿಎಂಸಿ ತನ್ನ X ನಲ್ಲಿ ಸಿಂಗ್‌ ವಿರುದ್ಧ ವಾಗ್ದಾಳಿ ನಡೆಸಿದೆ. ಸಿಂಗ್‌ ಅವರ ಕಾಮೆಂಟ್‌ಗಳು ಮತ್ತು ಸನ್ನೆಗಳು “ಅಸಭ್ಯ” ಎಂದು ಆರೋಪಿಸಿದೆ.

.@girirajsinghbjp's attempts to backpedal on his derogatory remarks against Smt. @MamataOfficial are not just feeble but outright dishonest.

This video evidence shows him to not just be uttering the words "thumka" twice but also making gestures that leave no room for… https://t.co/wFA31OYelC pic.twitter.com/1BmhophSIs
— All India Trinamool Congress (@AITCofficial) December 6, 2023

“ಬಿಜೆಪಿ ನಾಯಕರಿಗೆ ತಮ್ಮ ಅಧಿಕಾರಕ್ಕೆ ಸವಾಲೆಸೆಯುವ ಅಧಿಕಾರದಲ್ಲಿರುವ ಮಹಿಳೆಯನ್ನು ಅರಗಿಸಿಕೊಳ್ಳುವುದು ನಂಬಲಾಗದಷ್ಟು ಕಷ್ಟಕರವಾಗಿದೆ ಎಂಬುದು ಸ್ಪಷ್ಟ. ಲಿಂಗ ತಾರತಮ್ಯ ಪೂರ್ವಾಗ್ರಹದಲ್ಲಿ ಬಿದ್ದಿರುವ ಅವರ ಪುರಾತನ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತಿದ್ದಾರೆ” ಎಂದು ಟೀಕಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಂಗ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ಟಿಎಂಸಿ ಈ ವಿಷಯದ ಬಗ್ಗೆ “ಗೊಂದಲ ಸೃಷ್ಟಿಸಲು” ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

“ಭ್ರಷ್ಟಾಚಾರದಿಂದ ಬಳಲುತ್ತಿರುವ ಮತ್ತು ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ರಾಜ್ಯದಲ್ಲಿ ಮಮತಾ ದೀದಿ, ನೀವು ‘ಜಶ್ನ್’ ಮಾಡುತ್ತಿದ್ದೀರಿ, ‘ಜಶ್ನ್’ ಎಂದು ಹೇಳುವುದು ‘ತುಮ್ಕಾ’ ಎಂದು ಹೇಳಿದಂತೆಯೇ?” ಸಿಂಗ್ ANI ಗೆ ತಿಳಿಸಿದ್ದಾರೆ.

“ಟಿಎಂಸಿಯ ಜನರು ಜನರಲ್ಲಿ ಗೊಂದಲ ಮೂಡಿಸಲು ಈ ವಿಷಯವನ್ನು ಎತ್ತುತ್ತಿದೆ. ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರವಿದೆ ಎಂದು ಹೇಳುವುದು ನನ್ನ ಹಕ್ಕು. ಚಲನಚಿತ್ರೋತ್ಸವದಲ್ಲಿ ಸಿಎಂ ಹಾಜರಿದ್ದರು” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ,

Shameful misogynist @girirajsinghbjp – you dare tell @MamataOfficial  what is “uchit”?
You  deprive crores of poor people of rightful MNREGA wages and AWAS funds for years & yet your twisted sick mind tells our CM what is “uchit”. Get a life. pic.twitter.com/hrxStYoHb5
— Mahua Moitra (@MahuaMoitra) December 6, 2023

ಮೊಸಳೆ ಬಬಿಯಾ & ದೇವಸ್ಥಾನದ ಅರ್ಚಕ: ಮತ್ತೆ ಚರ್ಚೆಗೆ ಗ್ರಾಸವಾದ ಟ್ವೀಟ್‌
ಎರಡು ದಿನಗಳ ಹಿಂದೆ ದೇವರ ಮೊಸಳೆ ಎಂದು ಪ್ರಖ್ಯಾತಿಗೊಂಡಿದ್ದ ಕಾಸರಗೋಡಿನ ಮೊಸಳೆ ಬಬಿಯಾ ಸಾವನ್ನಪ್ಪಿತ್ತು. ಈ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಬಿಯಾ ಪೋಟೋಗಳನ್ನು ಹಾಕಿ ಸಂತಾಪ ಸೂಚಿಸಿದ್ದರು.

ಈ ವೇಳೆ ಮೊಸಳೆ ಬಬಿಯಾ ಕುರಿತು ಸಾಕಷ್ಟು ವಿಚಾರ ವೈರಲ್‌ ಆಗುತ್ತಿದ್ದು, ಬಬಿಯಾ ಸಸ್ಯಹಾರಿಯೋ? ಮಾಂಸಹಾರಿಯೋ? ಎಂಬ ಚರ್ಚೆ ನಡೆಯಿತು.

ಮೊಸಳೆ ಸಾವಿನ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಬಬಿಯಾ ಸಸ್ಯಾಹಾರಿಯಾಗಿದ್ದು, ದೇವಾಲಯದಲ್ಲಿ ನಡೆಯುವ ಪೂಜೆಯ ನಂತರ ನೈವೇದ್ಯದ ಅಕ್ಕಿಯನ್ನು ಮತ್ತು ಬೆಲ್ಲವನ್ನು ಸೇವಿಸಿಸುತ್ತಿತ್ತು ಎನ್ನುವ ವಿಡಿಯೋಗಳು ಮತ್ತು ಪೋಟೋಗಳು ವೈರಲ್‌ ಆಗಿದ್ದವು. ಹೀಗಾಗಿ ಮೊಸಳೆ ಬಬಿಯಾ  ಸಸ್ಯಹಾರಿ ಎಂದು ಹೇಳಲಾಗಿತ್ತು.

ಈ ಪೋಟೋ ಮತ್ತು ವಿಡಿಯೋಗಳಿಗೆ ಸಂಬಂಧಿಸಿದಂತೆ ಇನ್ನೋಂದು ಕಡೆ ಬಬಿಯಾ ಮೊಸಳೆ ಸಸ್ಯಹಾರಿ ಅಲ್ಲಾ ಮಾಂಸಹಾರಿ ಎಂದು ಬಬಿಯಾ ಕೋಳಿತಿನ್ನುವ ವಿಡಿಯೋಗಳು ಮತ್ತು ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಬಬಿಯಾ ಸಸ್ಯಹಾರಿ ಎನ್ನುವುದು ಸುಳ್ಳು ಎಂದು ಖಚಿತಪಡಿಸುವ ಚರ್ಚೆ ಮಾಧ್ಯಮಗಳಲ್ಲಿ ನಡೆಯುತ್ತಿದೆ.

ಆದರೆ ಈಗ ಬಬಿಯಾಗೆ ಸಂಬಂಧಿಸಿದ ಇಂತಹದ್ದೇ ಒಂದು ಪೋಟೋ ಮತ್ತೆ ಚರ್ಚೆಗೆ ಕಾರಣವಾಗಿದೆ. ಪೋಟೋದಲ್ಲಿರುವುದು ಬಬಿಯಾ ಮತ್ತೆ ದೇವಸ್ಥಾನದ ಅರ್ಚಕ ಅಲ್ಲಾ ಎಂದು ತಿಳಿದಿದೆ. ಈ ಹಿನ್ನಲೆಯಲ್ಲಿ ಟ್ವಿಟರ್‌ನಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿದ್ದು, ಈ ಸುದ್ದಿ ಸಾಕಷ್ಟು ವೈರಲ್‌ ಆಗಿದೆ.

ಚರ್ಚೆಗೆ ಕಾರಣವಾದ ಪೋಟೋ

ಈ ಹಿನ್ನೆಯಲ್ಲಿ ಮೊಸಳೆ ಬಬಿಯಾ ಮತ್ತೆ ದೇವಸ್ಥಾನದ ಅರ್ಚಕ ಎಂದು ಹೇಳಲಾಗುತ್ತಿದ್ದ ಪೋಟೋ, ಕೋಸ್ಟರಿಕಾದ ಚಿಟೋ ಮತ್ತೆ ಪೂಚೊ ಮೊಸಳೆಯಾಗಿದ್ದು, photo, I swim with crocodile documentary ಯಿಂದ ಕದಿಯಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಮಧು ಎಂಬ ವ್ಯಕ್ತಿ ಮೊಸಳೆ ಮತ್ತು ವ್ಯಕ್ತಿಯ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಪೋಟೋದಲ್ಲಿರುವುದು ಬಬಿಯಾ ಮತ್ತು ಅರ್ಚಕರಲ್ಲ ಎಂದು ಹೇಳಲಾಗುತ್ತಿದ್ದು, ಇದು ಇನ್ನೊಂದು ಚರ್ಚೆಗೆ ದಾರಿಮಾಡಿಕೊಟ್ಟಿದೆ.

ಇದನ್ನ ನೀವು ಕಾಸರಗೋಡಿನ ಮೊಸಳೆ ಬಬಿಯಾ ಮತ್ತೆ ದೇವಸ್ಥಾನದ ಅರ್ಚಕನ photo ಅಂದುಕೊಂಡ್ರ ..ಇಲ್ಲ ಇದು ಕೋಸ್ಟರಿಕಾದ ಚಿಟೋ ಮತ್ತೆ ಪೊಚೊ ಮೊಸಳೆ photo, I swim with crocodile documentary ಯಿಂದ ಸಂಗಿ ಬೋ. ಮಕ್ಕಳು ಕದ್ದು ಬಬಿಯಾಂತ ಪ್ರಚಾರ ಮಾಡಿದ್ದು pic.twitter.com/E4isIzmPdU
— ಮಧು / madhu (@pisumatu) October 11, 2022