covid-19 – Peepal Media

ಭಾರತದ ಬಳಿ ಅಂಕಿಅಂಶಗಳಿಲ್ಲ! ಕೇಂದ್ರದ ಹೊಣೆಗೇಡಿತನ
ಯಾವುದೇ ಪ್ರಜಾಪ್ರಭುತ್ವದಲ್ಲಿ, ಸರ್ಕಾರವು ಸಮಯಕ್ಕೆ ಸರಿಯಾಗಿ ಮತ್ತು ನಿಖರವಾದ ರೀತಿಯಲ್ಲಿ ದತ್ತಾಂಶವನ್ನು ಸಂಗ್ರಹಿಸುವುದು ಮುಖ್ಯ. ದತ್ತಾಂಶವಿಲ್ಲ ಎಂದರೆ ಅದು ಸರ್ಕಾರದ ಹೊಣೆಗೇಡಿತನ.

ಸಂಸತ್ತಿನಲ್ಲಿ ಸಂಸದರು ಎತ್ತಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ, ಸರ್ಕಾರವು ತನ್ನ ಬಳಿ ಡೇಟಾ ಇಲ್ಲ ಎಂದು ಹೇಳಿಕೊಂಡಿದೆ. ಇದರಲ್ಲಿ ಕೋವಿಡ್-19 ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ, ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ನೈಸರ್ಗಿಕ ವಿಕೋಪಗಳಿಂದ ಉಂಟಾದ ನಷ್ಟಗಳ ಡೇಟಾ ಮತ್ತು ರೈತರ ಆತ್ಮಹತ್ಯೆಗೆ ಕಾರಣಗಳ ಡೇಟಾ ಸೇರಿವೆ.

ಜನಗಣತಿ

ಭಾರತದಲ್ಲಿ 150 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಹತ್ತು ವರ್ಷಗಳ ಜನಗಣತಿಯನ್ನು 2011 ರಿಂದ ನಡೆಸಲಾಗಿಲ್ಲ. 2021 ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬ ಮಾಡಲಾಯಿತು, ಆದರೂ ದೊಡ್ಡ ರಾಜಕೀಯ ರ್ಯಾಲಿಗಳು ಮತ್ತು ಧಾರ್ಮಿಕ ಸಭೆಗಳು ನಡೆಯಲು‌ ಆ ಸಮಯದಲ್ಲಿ ಅವಕಾಶವಿತ್ತು. ಮುಂದಿನ ಜನಗಣತಿಯನ್ನು 2027 ರಲ್ಲಿ ನಡೆಸಲಾಗುವುದು ಎಂದು ಭಾರತ ಸರ್ಕಾರ ಅಂತಿಮವಾಗಿ ಘೋಷಿಸಿದೆ.

ಜನಗಣತಿ ಕೇವಲ ಶೈಕ್ಷಣಿಕ ಚಟುವಟಿಕೆಯಲ್ಲ; ಇದು ನೀತಿ ನಿರೂಪಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜನಗಣತಿಯನ್ನು ನಡೆಸದಿರುವುದು ಲಕ್ಷಾಂತರ ಜನರ ಜೀವನದ ಮೇಲೆ, ವಿಶೇಷವಾಗಿ ಸಮಾಜದ ಅಂಚಿನಲ್ಲಿ ಬದುಕುವವರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಉದಾಹರಣೆಗೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ, ಪಡಿತರ ಚೀಟಿಗಳನ್ನು ನೀಡಬೇಕಾದ ಜನರ ಸಂಖ್ಯೆಯನ್ನು ಇತ್ತೀಚಿನ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. 2021 ರ ಜನಗಣತಿಯನ್ನು ನಡೆಸದ ಕಾರಣ 10 ಕೋಟಿಗೂ ಹೆಚ್ಚು ಜನರು ಆಹಾರ ಭದ್ರತಾ ಜಾಲದ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ ಎಂದು ಅಂದಾಜಿಸಲಾಗಿದೆ. ನವೀಕರಿಸಿದ ಜನಗಣತಿ ಅಂಕಿಅಂಶಗಳು ಇಲ್ಲದೇ ಇದ್ದಾಗ ಸಮಾಜದಲ್ಲಿ ತಪ್ಪು ಮಾಹಿತಿ ಹರಡಲು ಕಾರಣವಾಗುತ್ತದೆ. ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಅಸಮಾನ ಹೆಚ್ಚಳ, ಲಿಂಗ ಅನುಪಾತದಲ್ಲಿನ ಸುಧಾರಣೆ ಇತ್ಯಾದಿಗಳ ಬಗ್ಗೆ ರಾಜಕೀಯ ಲಾಭಕ್ಕಾಗಿ ಮಾಡಲಾಗುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಸಾಧ್ಯವಾಗುತ್ತದೆ.

ಕೋವಿಡ್ ಸಾವುಗಳು

ದತ್ತಾಂಶ ಸಂಗ್ರಹಿಸಲಾದ ಸಂದರ್ಭಗಳಲ್ಲಿಯೂ ಸಹ, ಅದರ ನಿಖರತೆಯ ಬಗ್ಗೆ ಬಹಳ ಗಂಭೀರವಾದ ಕಳವಳಗಳಿವೆ. ದೇಶದಲ್ಲಿ ಕೋವಿಡ್ ಸಮಯದಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯ ದತ್ತಾಂಶವು ಭಾರಿ ವಿವಾದವನ್ನುಂಟುಮಾಡಿದೆ. ಸರ್ಕಾರವು ಕೇವಲ ಐದು ಲಕ್ಷ ಕೋವಿಡ್ ಸಾವುಗಳನ್ನು ವರದಿ ಮಾಡಿದ್ದರೂ, ವಿಶ್ವ ಆರೋಗ್ಯ ಸಂಸ್ಥೆ (WHO) ಸೇರಿದಂತೆ ಸ್ವತಂತ್ರ ಅಂದಾಜುಗಳು ಈ ಅಂಕಿಅಂಶವನ್ನು 40 ಲಕ್ಷಕ್ಕೂ ಹೆಚ್ಚು ಎಂದು ತಿಳಿಸಿವೆ. ಸುಮಾರು ನಾಲ್ಕು ವರ್ಷಗಳ ವಿಳಂಬದ ನಂತರ ಸರ್ಕಾರ ಇತ್ತೀಚೆಗೆ 2021 ರ ನಾಗರಿಕ ನೋಂದಣಿ ವ್ಯವಸ್ಥೆಗೆ ಸಂಬಂಧಿಸಿದ ಡೇಟಾವನ್ನು ಬಿಡುಗಡೆ ಮಾಡಿದೆ. 2021 ರಲ್ಲಿ ಮಾತ್ರ ಸಂಭವಿಸಿದ ಹೆಚ್ಚುವರಿ ಸಾವುಗಳು ಸುಮಾರು 21 ಲಕ್ಷ ಎಂದು ದತ್ತಾಂಶವು ತೋರಿಸುತ್ತದೆ – ಸಾಂಕ್ರಾಮಿಕ ರೋಗದಿಂದಾಗಿ ಸುಮಾರು 40 ಲಕ್ಷ ಕೋವಿಡ್ ಸಂಬಂಧಿತ ಸಾವುಗಳ ಸಾಧ್ಯತೆಯನ್ನು ಇದು ಸೂಚಿಸುತ್ತದೆ.

ಡೇಟಾ ಕಾಣೆಯಾಗಿದೆ!

2017-18ರ NSO ನ ಗ್ರಾಹಕ ವೆಚ್ಚ ಸಮೀಕ್ಷೆಯನ್ನು ತಿರಸ್ಕರಿಸಲಾಯಿತು. ಸಮೀಕ್ಷೆಯ ಸೋರಿಕೆಯಾದ ಸಂಶೋಧನೆಗಳು ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಗ್ರಾಹಕ ಖರ್ಚು ಕುಸಿದಿದೆ ಮತ್ತು ಬಳಕೆ ಕಡಿಮೆಯಾಗಿದೆ ಎಂದು ತೋರಿಸಿದೆ, ಇದು ಬಡತನದ ಹೆಚ್ಚಳವನ್ನು ಸೂಚಿಸುತ್ತದೆ.

ಇಂಡಿಯಾಸ್ಪೆಂಡ್ ವರದಿಯ ಪ್ರಕಾರ , 2024 ರ ಅಂತ್ಯದ ವೇಳೆಗೆ 16 ನಿರ್ಣಾಯಕ ದತ್ತಾಂಶಗಳು ವಿಳಂಬವಾಗಿವೆ ಮತ್ತು ಒಂಬತ್ತು ಸಚಿವಾಲಯಗಳು ತಮ್ಮ ವಾರ್ಷಿಕ ವರದಿಗಳನ್ನು ಬಿಡುಗಡೆ ಮಾಡಿಲ್ಲ. ವಿಳಂಬವಾದ ದತ್ತಾಂಶಗಳಲ್ಲಿ ‘ಭಾರತದಲ್ಲಿ ಅಪರಾಧ’ ವರದಿಯೂ ಸೇರಿದೆ, ಇದು ಸೈಬರ್ ಅಪರಾಧಗಳು, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಅಂಕಿಅಂಶಗಳು ಸೇರಿದಂತೆ ಅಪರಾಧ ಅಂಕಿಅಂಶಗಳ ಕುರಿತು ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ ಮತ್ತು ‘ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ’ ಸೇರಿವೆ. ಎರಡನ್ನೂ ಕೊನೆಯದಾಗಿ 2022 ರಲ್ಲಿ ಪ್ರಕಟಿಸಲಾಯಿತು.

ಶೂಟಿಂಗ್‌ ದಿ ಮೆಸೆಂಜರ್?

ಇತ್ತೀಚೆಗೆ, ಕೇಂದ್ರ ಸರ್ಕಾರವು ಭಾರತದ ಮಾಜಿ ಮುಖ್ಯ ಅಂಕಿಅಂಶಶಾಸ್ತ್ರಜ್ಞ ಡಾ. ಪ್ರಣಬ್ ಸೇನ್ ನೇತೃತ್ವದ ಅಂಕಿಅಂಶಗಳ ಸ್ಥಾಯಿ ಸಮಿತಿಯನ್ನು ವಿಸರ್ಜಿಸಿತು. ವರದಿಗಳ ಪ್ರಕಾರ, ಸಮಿತಿಯ ಸದಸ್ಯರು ಜನಗಣತಿಯನ್ನು ನಡೆಸುವಲ್ಲಿನ ವಿಳಂಬದ ಬಗ್ಗೆ ಸಭೆಗಳಲ್ಲಿ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಸಂಶೋಧನೆಗಳು ಸರ್ಕಾರದ ಹೇಳಿಕೆಗಳಿಗೆ ವಿರುದ್ಧವಾಗಿ, ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬಯಲು ಮಲವಿಸರ್ಜನೆ ಇನ್ನೂ ಅಸ್ತಿತ್ವದಲ್ಲಿ ಇರುವುದನ್ನು ಇವು ತೋರಿಸಿವೆ. 2023 ರಲ್ಲಿ, NFHS ಅನ್ನು ಸಿದ್ಧಪಡಿಸುವ ಜವಾಬ್ದಾರಿಯುತ ಸಂಸ್ಥೆಯ ನಿರ್ದೇಶಕರನ್ನು ತೆಗೆದುಹಾಕಲಾಯಿತು.

ದತ್ತಾಂಶ ರಾಜಕೀಯ

ಮೋದಿ ಸರ್ಕಾರ ದತ್ತಾಂಶದ ಬಗ್ಗೆ ಅತ್ಯಂತ ಜಾಗರೂಕರಾಗಿರುವಂತೆ ಕಾಣುತ್ತದೆ. ವಸ್ತುನಿಷ್ಠ ದತ್ತಾಂಶದ ಲಭ್ಯತೆಯು ಸರ್ಕಾರದ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಲು ಮತ್ತು ಅಧಿಕಾರದಲ್ಲಿರುವವರು ಮಾಡುವ ಪ್ರಚಾರ ಮತ್ತು ಅವರು ನೀಡುವ ಹೇಳಿಕೆಗಳನ್ನು ಪ್ರಶ್ನಿಸಲು ಜನರಿಗೆ ಅಧಿಕಾರ ನೀಡುತ್ತದೆ. ದತ್ತಾಂಶವು ನಿರ್ಣಾಯಕ ನಾಗರಿಕರ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಡಳಿತ ನಡೆಸುವವರ ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ತನ್ನ ಬಗ್ಗೆ ತಾನೇ ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವ ತಂತ್ರವನ್ನು ಹೆಣೆಯುವ ಕೊಡುವ ಸರ್ಕಾರವು ಪ್ರಾಥಮಿಕವಾಗಿ ಪರಿಣಾಮಕಾರಿ ದತ್ತಾಂಶ ಆಡಳಿತವನ್ನು ಜಾರಿಗೆ ತರಲು ತಡಮಾಡುತ್ತದೆ.

ಈ ಬಗ್ಗೆ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಜಯತಿ ಘೋಷ್ ಅವರು ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೋಹ್ರಿ ನಡೆಸಿದ ಚರ್ಚೆಯನ್ನು ಇಲ್ಲಿ ನೋಡಬಹುದು: ‘ಭಾರತದಲ್ಲಿ ದತ್ತಾಂಶ ಸ್ಥಗಿತ – ಜನಗಣತಿಯಿಂದ ಕೋವಿಡ್ ಸಾವುಗಳವರೆಗೆ | ಜಾನೆ ಭಿ ದೋ ಯಾರೋ ‘

ಬರಹ: ಅಂಜಲಿ ಭಾರದ್ವಾಜ್, ಅಮೃತಾ ಜೋಹ್ರಿ ಮತ್ತು ಸಿಂಧು ಕೋಶಿ, ದಿ ವೈರ್

ಹಠಾತ್‌ ಸಾವಿನ ಹೆಚ್ಚಳಕ್ಕೆ ಕೋವಿಡ್‌ ಲಸಿಕೆ ಕಾರಣವಲ್ಲ: ಐಸಿಎಂಆರ್ ವರದಿಯಲ್ಲಿ ಏನಿದೆ?
ಬೆಂಗಳೂರು: ಕೋವಿಡ್-19 ಲಸಿಕೆಯಿಂದ ಹಠಾತ್ ಸಾವು ಸಂಭವಿಸಿಲ್ಲ, ಬದಲಿಗೆ ಸಾವಿನ ಪ್ರಮಾಣವನ್ನು ಅದನ್ನು ಕಡಿಮೆ ಮಾಡಿದೆ ಎಂದು 2021 ರಿಂದ ಭಾರತದಲ್ಲಿ ಯುವಜನತೆಯ ಹಠಾತ್ ಸಾವಿನ ಹೆಚ್ಚಳವನ್ನು ಅಧ್ಯಯನ ಮಾಡುತ್ತಿರುವ Indian Council of Medical Research – ICMR ತಿಳಿಸಿದೆ.

ನವೆಂಬರ್ 21 ರಂದು ಪ್ರಕಟವಾದ ಈ ವರದಿಯ ಪ್ರಕಾರ 1.5 ವರ್ಷಗಳ ಸುದೀರ್ಘ ಅಧ್ಯಯನದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಭಾರತದ ಆರೋಗ್ಯವಂತ ಯುವ ವಯಸ್ಕರಲ್ಲಿ ಹಠಾತ್ ಮತ್ತು ಅನಿರೀಕ್ಷಿತ ಸಾವುಗಳ ಕಾರಣವನ್ನು ಅರ್ಥೈಸಲು ಪ್ರಯತ್ನಿಸಲಾಗಿದೆ.

Factors associated with unexplained sudden deaths among adults aged 18-45 years in India – A multicentric matched case–control study

ಅಧ್ಯಯನದ ಕೆಲವು ಪ್ರಮುಖ ಅಂಶಗಳು:

ಎರಡು ಡೋಸ್‌ಗಳ COVID-19 ಲಸಿಕೆಯು ಹಠಾತ್ ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡಿದೆ, ಆದರೆ ಒಂದು ಡೋಸ್ ಇದನ್ನು ಮಾಡಲಿಲ್ಲ. ಕೋವಿಡ್ ವ್ಯಾಕ್ಸಿನೇಷನ್‌ನಿಂದ ಈ ಸಾವುಗಳು ಸಂಬಂಧಿಸಿಲ್ಲ, ಬದಲಿಗೆ

COVID-19 ಪೂರ್ವದ ಆರೋಗ್ಯ ಸಮಸ್ಯೆಗಳು (Past COVID-19 hospitalisation)

ಕೌಟುಂಬಿಕವಾಗಿ ಬಂದಿರುವ ಹಠಾತ್‌ ಸಾವಿನ ಸಾಧ್ಯತೆಗಳು (Family history of sudden deaths)

ಸಾವಿಗೆ 48 ಗಂಟೆಗಳ ಮೊದಲು ಮಾಡಿದ ಮದ್ಯ ಸೇವನೆ (Binge alcohol drinking 48 hours before death)

ಡ್ರಗ್ಸ್‌ ಬಳಕೆ (Use of recreational drug/substance)

ಸಾವಿಗೆ 48 ಗಂಟೆಗಳ ಮೊದಲು ಅಭ್ಯಾಸವಿಲ್ಲದ ಕಠಿಣ ಕೆಲಸಗಳನ್ನು ಮಾಡಿರುವುದು (Intense unaccustomed activity 48 hours before death)

ಅಧ್ಯಯನದ ಬಗ್ಗೆ:

ಈ ಅಧ್ಯಯನವನ್ನು ಭಾರತದಾದ್ಯಂತ 47 ತೃತೀಯ ಮಟ್ಟದ ಆರೋಗ್ಯ ಕೇಂದ್ರಗಳನ್ನು ಒಳಗೊಂಡು ನಡೆಸಲಾಗಿದೆ. 2021 ಅಕ್ಟೋಬರ್ 1 ಮತ್ತು 31 ಮಾರ್ಚ್ 2023 ರ ನಡುವೆ ಹಠಾತ್ತನೆ ಸಾವನ್ನಪ್ಪಿದ ಆರೋಗ್ಯವಂತ 18-45 ವರ್ಷ ವಯಸ್ಸಿನ 729 ವ್ಯಕ್ತಿಗಳ ಸಾವಿನ ಪ್ರಕರಣಗಳನ್ನು 2916 ನಿಯಂತ್ರಿಸಲಾದ ಪ್ರಕರಣಗಳೊಂದಿಗೆ ವಿಶ್ಲೇಷಿಸಲಾಗಿದೆ.

ವರದಿಯನ್ನು ಇಲ್ಲಿ ಓದಿ: Factors associated with unexplained sudden deaths among adults aged 18-45 years in India – A multicentric matched case–control study

ಕೋವಿಡ್ ಲಸಿಕೆ ಮತ್ತು ಸೋಂಕಿನ ಸ್ಥಿತಿ, ಹಾಗೆಯೇ ಕೋವಿಡ್-19 ನಂತರದ ಪರಿಸ್ಥಿತಿಗಳು, ಹಠಾತ್ ಸಾವನ್ನಪ್ಪಿದವರ ಕುಟುಂಬದ ಇತಿಹಾಸ ಮತ್ತು ಎಲ್ಲಾ ರೋಗಿಗಳ ಜೀವನಶೈಲಿ, ಅಭ್ಯಾಸಗಳಂತಹ ಇತರ ಅಂಶಗಳನ್ನು ವಿಶ್ಲೇಷಿಸಲಾಗಿದೆ.

ಈ ಅಧ್ಯಯನ ಯಾಕೆ ಮುಖ್ಯವಾಗಿತ್ತು?

ಕೋವಿಡ್ ಲಸಿಕೆಗಳನ್ನು ಹಾಕಿದ ನಂತರ, ಇಂತಹ ಹಠಾತ್‌ ಸಾವಿನ ಪ್ರಮಾಣಗಳು ನಡೆದಾಗ ಲಸಿಕೆಯ ಸುರಕ್ಷತೆಯನ್ನು ಪ್ರಶ್ನೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ಸಣ್ಣ ಪ್ರಾಯದಲ್ಲಿ ಮರಣಹೊಂದಿದಾಗ ಈ ಚರ್ಚೆ ಗ್ರಾಸವಾಗಿ ನಡೆದಿತ್ತು.

ಕಳೆದೆರಡು ವರ್ಷಗಳಲ್ಲಿ ಭಾರತದಲ್ಲಿ ಯುವಜನರ ಸಾವಿನ ಪ್ರಮಾಣ ಹೆಚ್ಚಿದಾಗ ಕೋವಿಡ್‌ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸುವಂತೆ ಮಾತುಗಳು ಕೇಳಿಬರುತ್ತಿದ್ದವು.

ಸದ್ಯ ಐಸಿಎಂಆರ್‌ನ ಈ ಅಧ್ಯಯನ ಇಂತಹ ಹಠಾತ್‌ ಸಾವಿಗೆ ಲಸಿಕೆಯಲ್ಲ, ಬದಲಾಗಿ ಜೀವನಶೈಲಿ, ಆಹಾರ ಮತ್ತು ವ್ಯಾಯಾಮಗಳು ಇದರಲ್ಲಿ ಪಾತ್ರವನ್ನು ವಹಿಸಿವೆ ಎಂದು ಹೇಳಿದೆ.

ಕೋವಿಡ್ ಲಸಿಕೆಯಿಂದ ಯುವ ಜನರ ಸಾವು: ಉತ್ತರ ನೀಡಿದ ಐಸಿಎಂಆರ್

ಹೈ ಅಲರ್ಟ್:‌ ಕರ್ನಾಟಕದಲ್ಲಿ ಝಿಕಾ ವೈರಸ್‌ ಪತ್ತೆ
ಚಿಕ್ಕಬಳ್ಳಾಪುರ,ನವೆಂಬರ್.‌03: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿರುವ ಸೊಳ್ಳೆಯ ಮಾದರಿಯಲ್ಲಿ ಝಿಕಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈ ಅಲರ್ಟ್ ಆಗಿದೆ. ಸೆಪ್ಟೆಂಬರ್‌ 25ರಂದು ಸಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಿಂದ ಈ ಸ್ಯಾಂಪಲ್‌ ಸಂಗ್ರಹಿಸಲಾಗಿತ್ತು. ಹೀಗಾಗಿ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಡುವೆ ಪ್ರಯಾಣ ಮಾಡುವವರಿಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಸೂಚಿಸಲಾಗಿದೆ.

ಚಿಕ್ಕಬಳ್ಳಾಪುರದಿಂದ ಬೆಂಗಳೂರು ಮತ್ತು ಇತರೆಡೆಗೆ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಕಳೆದ ಎರಡು ತಿಂಗಳಿಂದ ರಾಜ್ಯದ 68 ಪ್ರದೇಶಗಳಲ್ಲಿ ಜ್ವರ ಪೀಡಿತ, ಗರ್ಭಿಣಿಯರನ್ನು ಝಿಕಾ ವೈರಸ್‌ ಸೋಂಕಿನ ತಪಾಸನೆಗೆ ಒಳಪಡಿಸಲಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಪ್ರಕಾರ, ದಿಬ್ಬೂರಹಳ್ಳಿಯ 30 ವರ್ಷದ ಪುರುಷ, ತಲಕಾಯಲಬೆಟ್ಟದ 38 ವರ್ಷದ ಮಹಿಳೆ ಮತ್ತು ಬಾಚನಹಳ್ಳಿಯ 50 ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದು, ಸೋಂಕಿನ ದೃಢೀಕರಣಕ್ಕಾಗಿ ಅವರ ರಕ್ತದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗಿದೆ ಎಂದು ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಝಿಕಾ ವೈರಸ್ ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ಈ ಸೋಂಕು ದೇಹದಲ್ಲಿ ರ್ಯಾಷಸ್, ಜ್ವರ, ಕೆಂಪು ಕಣ್ಣು, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ಇತ್ಯಾದಿ ರೋಗ ಲಕ್ಷಣಗಳನ್ನು ತೋರಿಸುತ್ತದೆ. ಸದ್ಯ ಈ ಸೋಂಕಿಗೆ ಯಾವುದೇ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ.

81.5 ಕೋಟಿ ಭಾರತೀಯರ ಆಧಾರ್‌ ಮಾಹಿತಿ ಲೀಕ್!‌
ಬೆಂಗಳೂರು,ಅಕ್ಟೋಬರ್.‌31: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ನೋಂದಾಯಿತವಾಗಿರುವ ನಾಗರಿಕರ ಕೋವಿಡ್-19 ಪರೀಕ್ಷಾ ವಿವರಗಳ ಮಾಹಿತಿಯನ್ನು ಕದ್ದಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ.

ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಡೇಟಾ ಸೋರಿಕೆಯ ಪ್ರಕರಣ ಇದಾಗಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಿಂದ 81.5 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳು ಆನ್‌ಲೈನ್‌ನಿಂದ ಸೋರಿಕೆಯಾಗಿವೆ.

ಈ ಮಾಹಿತಿ ಸೋರಿಕೆ ಮೊದಲು ರೆಸೆಕ್ಯುರಿಟಿ ಎಂಬ ಅಮೆರಿಕದ ಸೈಬರ್ ಭದ್ರತೆ ಮತ್ತು ಗುಪ್ತಚರ ಸಂಸ್ಥೆಯ ಬಂದಿದೆ. ಈ ಸೈಬರ್ ಸಂಸ್ಥೆಯ ಪ್ರಕಾರ, ‘threat actor’ ಅಲಿಯಾಸ್ ‘pwn001’ ಬ್ರೀಚ್ ಫೋರಮ್‌ಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾನೆ.

ಯಾವ ಮಾಹಿತಿ ಸೋರಿಕೆಯಾಗಿದೆ?

pwn001,  X ಹ್ಯಾಂಡಲ್ಸ್‌ (ಹಿಂದೆ Twitter), ಹೆಸರು, ಫೋನ್ ಸಂಖ್ಯೆ ಮತ್ತು ವಿಳಾಸಗಳೊಂದಿಗೆ ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಯನ್ನೂ ಲೀಕ ಮಾಡಿದ್ದಾನೆ.; ICMR ನಲ್ಲಿ ನೋಂದಾಯಿಸಲಾದ ನಾಗರಿಕರ ಕೋವಿಡ್-19 ಪರೀಕ್ಷಾ ವಿವರಗಳಿಂದ ಇವುಗಳನ್ನು ಕದ್ದಿರುವುದಾಗಿ ಹ್ಯಾಕರ್ ಹೇಳಿಕೊಂಡಿದ್ದಾನೆ.

ಇದಕ್ಕೆ ಪುರಾವೆಯಾಗಿ ‘pwn001’ ಆಧಾರ್ ಡೇಟಾದೊಂದಿಗೆ ನಾಲ್ಕು ದೊಡ್ಡ ಮಾದರಿಗಳೊಂದಿಗೆ ಸ್ಪ್ರೆಡ್‌ಶೀಟ್‌ಗಳನ್ನು ಪೋಸ್ಟ್ ಮಾಡಿದ್ದಾನೆ. ಇವುಗಳನ್ನು ಅಧಿಕೃತ ಆಧಾರ್ ಕಾರ್ಡ್ ಐಡಿಗಳು ಎಂದು ಗುರುತಿಸಲಾಗಿದೆ.

ICMR ಅಥವಾ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲದಿದ್ದರೂ, ICMR ನಿಂದ ದೂರನ್ನು ಸ್ವೀಕರಿಸಿದ ನಂತರ ಸಿಬಿಐ ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ.

ಫೇಸ್‌ ಮಾಸ್ಕ್‌ ಕಡ್ಡಾಯ-ಉಲ್ಲಂಘಿಸಿದವರಿಗೆ ದಂಡ
ನವದೆಹಲಿ: ದೇಶದಲ್ಲಿ ಕೋವಿಡ್‌ ದೃಢ ಪಡುತ್ತಿರುವವರ ಸಂಖ್ಯೆ ಹಚ್ಚಾಗುತ್ತಿರುವ ಹಿನ್ನಲೆಯಲ್ಲಿ, ದೆಹಲಿ ಸರ್ಕಾರವು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ, ಹಾಗೂ ನಿಯಮ ಉಲ್ಲಂಘಿಸುವವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಈ ಅಧಿಸೂಚನೆಯ ನಿಬಂಧನೆಯ ಅಡಿಯಲ್ಲಿ ದಂಡವು ಖಾಸಗಿ ನಾಲ್ಕು ಚಕ್ರದ ವಾಹನಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಿಯಾಂಕ ಗಾಂಧಿಗೆ ಮತ್ತೊಮ್ಮೆ ಕೋವಿಡ್‌ ಧೃಡ
ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಗೆ ಮತ್ತೊಮ್ಮ ಕೋವಿಡ್‌ ಸೋಂಕು ತಗುಲಿದ್ದು, ಮನೆಯಲ್ಲಿ ಪ್ರತ್ಯೆಕ ವಾಸದಲ್ಲಿದ್ದೇನೆ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.

Tested positive for covid (again!) today. Will be isolating at home and following all protocols.
— Priyanka Gandhi Vadra (@priyankagandhi) August 10, 2022

ಇನ್ನೂ ಪಕ್ಷದ ಹಲವರಿಗೆ ಸೋಂಕು ತಗುಲಿರುವುದರಿಂದ ಕೋವಿಡ್‌ ನಿಯಮವನ್ನು ಪಾಲಿಸಬೇಕೆಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಒಂದೇ ಚುಚ್ಚುಮದ್ದಿನಿಂದ 39 ಮಕ್ಕಳಿಗೆ ಕೋವಿಡ್‌ ಲಸಿಕೆ..!
ಸಾಗರ್‌ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ  ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಕೋವಿಡ್​-19 ಲಸಿಕೆಯನ್ನು ನೀಡಿದ್ದು. ಚುಚ್ಚುಮದ್ದು ನೀಡುವ ವ್ಯಕ್ತಿ ಎಲ್ಲಾ ಮಕ್ಕಳಿಗೂ ಒಂದೇ ಸಿರಂಜ್‌ ಉಪಯೋಗಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬೃಹತ್‌ ಲಸಿಕೆ ಅಭಿಯಾನದ ಭಾಗವಾಗಿ ನಗರದ ಜೈನ್‌ ಹೈಯರ್ ಸೆಕಂಡರಿ ಶಾಲೆಯಲ್ಲಿ ಲಸಿಕೆ ನೀಡಲಾಗುತ್ತಿದ್ದ ಸಂದರ್ಭದಲ್ಲಿ, ಜಿತೇಂದ್ರ ಅಹಿರ್ವಾರ್‌ ಎಂಬ ವ್ಯಕ್ತಿ ಮಕ್ಕಳಿಗೆ ಒಂದೇ ಚುಚ್ಚು ಮದ್ದಿನಲ್ಲಿ ಲಸಿಕೆ ಹಾಕುತ್ತಿದ್ದುದನ್ನು ಗಮನಿಸಿದ ಪೋಷಕರು, ಆತನ ಮೇಲೆ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಂತರ ಲಸಿಕೆ ನೀಡುತ್ತಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು. ಲಸಿಕೆ ನೀಡುವ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಈ ಪ್ರಕರಣ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರವಾಗಿ ಕ್ಷಿತಿಜ್ ಸಿಂಘಾಲ್, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯಾಗಿರುವ ಡಾ. ಡಿ.ಕೆ. ಗೋಸ್ವಾಮಿ ಅವರನ್ನು ಕಳುಹಿಸಿ ಘಟನೆಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿ ಯಲ್ಲಿ ಜಿತೇಂದ್ರ ಅಹಿರ್ವಾರ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. .

ವಿಭಾಗೀಯ ಆಯುಕ್ತರು ಇಲಾಖಾ ತನಿಖೆ ಮತ್ತು ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು. ಸಿಎಂಎಚ್‌ಒ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ.

ಲಸಿಕೆ ಪಡೆದ ಲ್ಲಾ ಮಕ್ಕಳುಗಳು 15 ವರ್ಷ ಮೇಲ್ಪಟ್ಟವರಾಗಿದ್ದು, 9ರಿಂದ 12ನೇ ತರಗತಿ ಒಳಗಿನವರಾಗಿದ್ದರೆ. ಎಲ್ಲ ಮಕ್ಕಳ ತಪಾಸಣೆ ನಂತರ 19 ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಉಳಿದ ಮಕ್ಕಳ ವರದಿಗಳು ಬರಬೇಕಿದೆ ಎಂದು ಸಾಗರ್​ ವಿಭಾಗೀಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.