Covid Scam – Peepal Media

“ವರದಿ ಬರುವುದರಲ್ಲಿದೆ.. ಜೈಲಿಗೆ ಹೋಗಲು ರೆಡಿಯಾಗಿ..” : ಬಿಜೆಪಿ ಅಭ್ಯರ್ಥಿ ಸುಧಾಕರ್ ಗೆ ಸಿದ್ದರಾಮಯ್ಯ ಎಚ್ಚರಿಕೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಕೋವಿಡ್ ಕಾಲದ ಭ್ರಷ್ಟಾಚಾರವನ್ನು ಮತ್ತೆ ನೆನಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೇನು ವರದಿ ಬರುವುದರಲ್ಲಿದೆ.. ಜೈಲಿಗೆ ಹೋಗಲು ಸಿದ್ಧರಾಗಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “‘‘ನಾ ಖಾವೂಂಗಾ ನಾ ಖಾನೇ ದೂಂಗಾ’’ ಎಂದು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರೇ, ಇಂದು ಚಿಕ್ಕಬಳ್ಳಾಪುರಕ್ಕೆ ಬಂದು ನೀವು ಪ್ರಚಾರ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಅವರಿಗೆ ಕೊರೊನಾ ಕಾಲದಲ್ಲಿ ಎಷ್ಟು ನುಂಗಿದ್ದೀರಿ ಎಂದು ಕೇಳಿದ್ರಾ? ಕೊರೊನಾ ಹೆಸರಲ್ಲಿ ಆಗಿನ ಆರೋಗ್ಯ ಸಚಿವ ಡಾ.ಸುಧಾಕರ್ 40,000 ಕೋಟಿ ರೂಪಾಯಿ ನುಂಗಿದ್ದಾರೆ ಎಂದು ಆರೋಪಿಸಿದ್ದು ನಾವಲ್ಲ, ನಿಮ್ಮದೇ ಪಕ್ಷದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ. ಅಷ್ಟೊಂದು ದುಡ್ಡನ್ನು ಡಾ.ಸುಧಾಕರ್ ಒಬ್ಬರೇ ನುಂಗಿದ್ರಾ? ಒಂದು ಪಾಲು ಮೇಲ್ಗಡೆಗೂ ಹೋಗಿತ್ತಾ?” ಎಂದು ಪ್ರಶ್ನಿಸಿದ್ದಾರೆ.

ಚಾಮರಾಜ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾಯಕ ಜನ ಆಕ್ಷಿಜನ್ ಇಲ್ಲದೆ ನರಳಾಡುತ್ತಿರುವಾಗ ಆರೋಗ್ಯ ಸಚಿವ ಡಾ.ಸುಧಾಕರ್ ನಾಪತ್ತೆಯಾಗಿದ್ದರು. ಆಕ್ಸಿಜನ್ ಇಲ್ಲದೆ ಸಾವಿಗೀಡಾದ 36 ಮಂದಿಯ ಕುಟುಂಬ ರೋಧಿಸುತ್ತಿದ್ದರೆ, ಡಾ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡದೆ ಬೆಂಗಳೂರಿನಲ್ಲಿಯೇ ಕೂತು ‘’ಸತ್ತವರು ಎರಡೇ ಮಂದಿ’’ ಎಂಬ ಉಡಾಫೆಯಿಂದ ಹೇಳಿಕೆ ನೀಡಿ ರಾಜ್ಯದ ಜನರಿಂದ ಛೀಮಾರಿಗೀಡಾಗಿದ್ದರು. ಈ ಸಾಧನೆಯನ್ನೂ ಅವರ ಪ್ರಚಾರದ ಭಾಷಣದಲ್ಲಿ ಹೇಳಬೇಕಾಗಿತ್ತಲ್ಲವೇ ನರೇಂದ್ರ ಮೋದಿಯವರೇ? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು “ಆರೋಗ್ಯ ಸಚಿವರ ಬ್ರಹ್ಮಾಂಡ ಭ್ರಷ್ಟಾಚಾರದ ಕತೆ ಕೇಳಿ ಇಡೀ ರಾಜ್ಯ ಬೆಚ್ಚಿ ಬಿದ್ದಿತ್ತು. 45 ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಮಾಸ್ಕ್‌ನ್ನು 485 ರೂ. ಗೆ ಖರೀದಿಸಿದ್ದರು. ತಮಿಳುನಾಡು ಸರ್ಕಾರ ವೆಂಟಿಲೇಟರ್ ಒಂದಕ್ಕೆ ರೂ. 4.78 ಲಕ್ಷ ನೀಡಿದ್ದರೆ ಬಿಜೆಪಿ ಸರ್ಕಾರ 15 ರಿಂದ 18 ಲಕ್ಷ ರೂ. ನೀಡಿ ಖರೀದಿಸಿತ್ತು. 80 ರೂ. ಸ್ಯಾನಿಟೈಸರ್‍‌ಗೆ 250 ರೂ. ಕೊಟ್ಟು ಖರೀದಿಸಿದ್ದರು. ದಾಖಲೆಗಳ ಸಹಿತ ಈ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆದದ್ದು ನೀವು ಗಮನಿಸಿರಲಿಲ್ಲವೇ?” ಎಂದು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬೆಡ್ ಕೊರತೆಯ ಕಾರಣ ನೀಡಿ 30 ಸಾವಿರ ಬೆಡ್ ಗಳನ್ನು ನೂರು ದಿನಗಳಿಗಾಗಿ ಒಟ್ಟು 240 ಕೋಟಿ ರೂಪಾಯಿ ಬಾಡಿಗೆ ನೀಡಿ ತರಿಸಿಕೊಂಡಿದ್ದರು. ಬಾಡಿಗೆಗೆ ಪಡೆಯುವ ಬದಲಿಗೆ ಹೊಸ ಬೆಡ್ ಗಳನ್ನು ಖರೀದಿಸಿದ್ದರೆ 21 ಕೋಟಿ ರೂಪಾಯಿಯಷ್ಟೇ ಖರ್ಚಾಗುತ್ತಿತ್ತು. 240 ಕೋಟಿ ರೂಪಾಯಿ ಬೆಡ್ ಬಾಡಿಗೆಯಲ್ಲಿ ಎಷ್ಟು ಪಾಲು ಯಾರ ಜೇಬಿಗೆ ಹೋಗಿತ್ತು ಎಂದು ಡಾ.ಸುಧಾಕರ್ ಅವರನ್ನು ಕೇಳಬೇಕಿತ್ತಲ್ಲಾ ಮೋದಿಯವರೆ? ಎಂದು ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ.

“ವೈದ್ಯರು ಇಲ್ಲದೆ, ಬೆಡ್ ಇಲ್ಲದೆ, ಆಕ್ಸಿಜನ್ ಇಲ್ಲದೆ, ಔಷಧಿ ಇಲ್ಲದೆ ರಾಜ್ಯದಲ್ಲಿ ಕೊರೊನಾ ಸೋಂಕಿತರು ನರಳಾಡುತ್ತಿದ್ದಾಗ ನೀವು ಕೊರೊನಾ ಓಡಿಸಲು ತಟ್ಟೆ ಬಡಿಯಲು ಹೇಳಿದಿರಿ. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ತಮ್ಮ ಐಷಾರಾಮಿ ಮನೆಯ ಈಜುಕೊಳದಲ್ಲಿ ಮಕ್ಕಳೊಡನೆ ನೀರಾಟ ಆಡುತ್ತಿದ್ದರು. ಇಂತಹ ಅಸಮರ್ಥ, ಭ್ರಷ್ಟ ಮಾಜಿ ಸಚಿವನ ಪರವಾಗಿ ನೀವು ಪ್ರಚಾರಕ್ಕೆ ಬಂದು ಹೋದಿರಿ ಎಂದರೆ ಅವರ ಎಲ್ಲ ಕುಕೃತ್ಯಗಳಿಗೆ ನಿಮ್ಮ ಅಖಂಡ ಆಶೀರ್ವಾದದ ಬಲ ಇದೆ ಎಂದು ತಿಳಿದುಕೊಳ್ಳಬಹುದೇ ಮೋದಿ ಅವರೇ?” ಎಂದು ಹೇಳಿದ್ದಾರೆ.

ಹಾಗೆಯೇ ಸಂಸದ ತೇಜಸ್ವಿ ಸೂರ್ಯ ಮೇಲಿರುವ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆಯೂ ಪ್ರಸ್ತಾಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ “ನಿಮ್ಮ ಪಕ್ಷದ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಪರಸ್ಪರ ಷಾಮೀಲಾಗಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸೇರಿ ಬೆಡ್ ದಂಧೆ ಮಾಡಿದ್ದರು. ನಿಮ್ಮ ಪಕ್ಷದ ನಾಯಕರು ಡಿ.ಜೆ ಹಳ್ಳಿಯ ಕೊರೊನಾ ವೈರಸ್ ನಲ್ಲಿ ಹಿಂದೂ-ಮುಸ್ಲಿಮ್ ಧರ್ಮಗಳ ತಳಿಗಳನ್ನು ಹುಡುಕಿ ಕೋಮುಗಲಭೆಗೆ ಕಿಡಿ ಹಾರಿಸಿದರು. ಕರ್ನಾಟಕದಲ್ಲಿ ಹೆಚ್ಚು ಜನರು ಸಾವಿಗೀಡಾದದ್ದು ಕೋರೊನಾ ವೈರಸ್ ನಿಂದ ಅಲ್ಲ, ಡಾ.ಸುಧಾಕರ್ ಅವರ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದಿಂದ ನರೇಂದ್ರ ಮೋದಿಯವರೇ” ಎಂದು ಕೇಳಿದ್ದಾರೆ.

“ಕೊರೊನಾ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಡಿಸಿ ಜನರ ಮುಂದಿಟ್ಟಾಗ ರೋಷಾವೇಶದಿಂದ ಡಾ.ಸುಧಾಕರ್ ಅವರು ಆರೋಪ ಸಾಬೀತಾದ್ರೆ ಸಾರ್ವಜನಿಕವಾಗಿ ನೇಣು ಹಾಕ್ಕೋತೀನಿ ಎಂದು ಸವಾಲು ಹಾಕಿದ್ದರು. ಕೊರೊನಾ ಭ್ರಷ್ಟಾಚಾರದ ತನಿಖೆಗಾಗಿಯೇ ನಿವೃತ್ತಿ ನ್ಯಾಯಮೂರ್ತಿ ಜಾನ್‌ ಮೈಕಲ್‌ ಕುನ್ಹಾ ಅವರ ನೇತೃತ್ವದಲ್ಲಿ ತನಿಖಾ ಆಯೋಗ ಮಾಡಿದ್ದೆವು. ನೇಣು ಹಾಕ್ಕೊಳೋದೇನು ಬೇಡ, ಈಗ ಅವರು ಜೈಲಿಗೆ ಹೋಗೋಕೆ ರೆಡಿಯಾಗಿದ್ದರೆ ಸಾಕು.” ಖಡಕ್ ಸಂದೇಶ ರವಾನಿಸಿದ್ದಾರೆ.

ಕೋವಿಡ್ ಸಾವಿನ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ ಕೊಟ್ಟ ಬಿಜೆಪಿ ಸರ್ಕಾರ : PAC ವರದಿ (ವರದಿಯಲ್ಲಿವೆ ಆಘಾತಕಾರಿ ಅಂಶಗಳು)
WHO ಒಪ್ಪಿಗೆ ನೀಡದಿದ್ದರೂ Ivermectin ಟ್ಯಾಬ್ಲೆಟ್ ಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ. ಪಿಎಂ ಕೇರ್ಸ್ ಫಂಡ್ ಮೂಲಕ ನೀಡಲಾದ ವೆಂಟಿಲೇಟರ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂಬುದನ್ನು ಸಮಿತಿ ಕಂಡುಹಿಡಿದಿದೆ.

2020 ಹಾಗೂ 2021 ರ ಅವಧಿಯಲ್ಲಿ ಸಂಭವಿಸಿದ ಭೀಕರ ಕೋವಿಡ್ ಸೋಂಕಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಮಾಡಿದ ಅಕ್ರಮಗಳನ್ನು PAC ವರದಿ ಬಹಿರಂಗಪಡಿಸಿದೆ. ವಿಶೇಷವಾಗಿ ಆ ಸಂದರ್ಭದಲ್ಲಿ ಆದ ಸಾವಿನ ಸಂಖ್ಯೆಯಲ್ಲಿ ಆಗಿನ ಸರ್ಕಾರ ಕಡಿಮೆ ಲೆಕ್ಕ ನೀಡಿದೆ ಎಂದು ರಾಜ್ಯ ಶಾಸಕಾಂಗದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ವರದಿ ತಿಳಿಸಿದೆ. ಜುಲೈ 17, ಸೋಮವಾರ ಕರ್ನಾಟಕ ಅಸೆಂಬ್ಲಿಯಲ್ಲಿ ವರದಿಯನ್ನು ಮಂಡಿಸಿದ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್ ಸಂದರ್ಭದ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದೆ.

ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಗೆ ಬಿಡ್ ಗಳಲ್ಲಿ ಆಯ್ಕೆಯಾದ ಕಂಪನಿಗಳು, ವೈದ್ಯಕೀಯ ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಬೇಡಿಕೆ ಇದ್ದ ಔಷಧಿಗಳನ್ನೂ ಪೂರೈಸಿಲ್ಲ. ಅಗತ್ಯವಿಲ್ಲದಿದ್ದಾಗ ಹೆಚ್ಚು ಔಷಧಿಗಳನ್ನು ಖರೀದಿಸಲಾಗಿದೆ ಎಂದು ಸಮಿತಿ ಹೇಳಿದೆ. ಸಮಿತಿಯು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಈ ಬಗ್ಗೆ ಸ್ವತಂತ್ರ ತನಿಖೆಗೂ ಕೂಡ ಒತ್ತಾಯಿಸಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಹಾಗೂ ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದ 2020 ರ ಸಂದರ್ಭದಲ್ಲಿ ಮೊದಲು ಕಾಂಗ್ರೆಸ್ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದಲ್ಲಿ ಮತ್ತು ನಂತರ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ, ಕೋವಿಡ್ -19 ಗೆ ಸಂಬಂಧಿಸಿದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಯಿತು.

ಕೋವಿಡ್ ಕಾರಣದಿಂದಾದ ಸಾವುಗಳು ಸಂಖ್ಯೆ ತೀರಾ ಕಡಿಮೆ ವರದಿ ಮಾಡಿದ್ದಕ್ಕಾಗಿ ಆರೋಗ್ಯ ಇಲಾಖೆಯನ್ನು ಟೀಕಿಸುವ ಸಂದರ್ಭದಲ್ಲಿ, ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಾವುಗಳು ಹೆಚ್ಚು ಎಂದು ಸಮಿತಿಯು ಕಂಡುಹಿಡಿದಿದೆ. “ದೇಶದ ಬೇರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರವು ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿದೆ. ಅಷ್ಟೆ ಅಲ್ಲದೆ ಸೋಂಕಿತ ರೋಗಿಗಳನ್ನು ಪತ್ತೆಹಚ್ಚುವಲ್ಲಿ ವಿಳಂಬ, ಪರೀಕ್ಷಾ ಸಾಮರ್ಥ್ಯದಲ್ಲಿ ವಿಫಲ, ಪರೀಕ್ಷಾ ವರದಿಗಳನ್ನು ನೀಡುವಲ್ಲಿ ವಿಳಂಬ, ಔಷಧದ ಕೊರತೆ ಮತ್ತು ಆಮ್ಲಜನಕದ ಕೊರತೆಯಂತಹ ರಾಜ್ಯದ ಚಿಕಿತ್ಸಾ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆಯೂ ಸಮಿತಿ ಬಹಿರಂಗಪಡಿಸಿದೆ.

ಸಾವಿನ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ
ಲೆಕ್ಕಪತ್ರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದಿಂದ ಪಡೆದ ಮಾಹಿತಿಯ ಪ್ರಕಾರ ಜನವರಿಯಿಂದ ಜುಲೈ 2020 ರವರೆಗೆ 2,69,029 ಮತ್ತು ಜನವರಿಯಿಂದ ಜುಲೈ 2021 ರವರೆಗೆ 4,26,943 ಸಾವುಗಳಲ್ಲಿ ಹಿಂದಿನ ಅವಧಿಗಿಂತ 1,57,914 ರಷ್ಟು ಹೆಚ್ಚಳವಾಗಿದೆ ಎಂದು ಸಮಿತಿಯ ತನಿಖಾ ವರದಿ ತೋರಿಸಿದೆ.

“ಆತಂಕಕಾರಿ ಸಂಗತಿಯೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಾವಿನ ಸಂಖ್ಯೆ ಕೇವಲ 3206 ಎಂದು ತಪ್ಪು ಮಾಹಿತಿ ನೀಡಲಾಗಿದೆ. ಸುಮಾರು 1,20,708% ಇದ್ದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಅಧಿಕಾರಿಗಳು ಘೋರ ಅನ್ಯಾಯ ಮತ್ತು ಅಪರಾಧ ಮಾಡಿದ್ದಾರೆ ಎಂದು ಸಮಿತಿ ಅಭಿಪ್ರಾಯ ಪಟ್ಟಿ ಮಾಡಿದೆ. ಈ ಮೃತರ ಕುಟುಂಬಗಳನ್ನು ಗುರುತಿಸಿ ಅವರಿಗೆ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಐವರ್ಮೆಕ್ಟಿನ್ ಔಷಧಿ ಖರೀದಿ ಗೊಂದಲ ಮತ್ತು ಭ್ರಷ್ಟಾಚಾರ
ಕೋವಿಡ್-19 ಚಿಕಿತ್ಸೆಗಾಗಿ ಶಿಫಾರಸು ಮಾಡಲಾದ ಐವರ್‌ಮೆಕ್ಟಿನ್ ಟ್ಯಾಬ್ಲೆಟ್ ಅನ್ನು ಇಲಾಖೆಯು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದೆ ಎಂದು ಸಮಿತಿಯು ಕಂಡುಹಿಡಿದಿದೆ. 2021 ರ ಸಂದರ್ಭದಲ್ಲಿ WHO, ‘ಕೋವಿಡ್ ಸೋಂಕಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ಐವರ್ಮೆಕ್ಟಿನ್ ಔಷಧಿ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಇಲಾಖೆ WHO ಎಚ್ಚರಿಕೆಯನ್ನು ಬದಿಗೊತ್ತಿ ಅದೇ ಔಷಧಿಗಳನ್ನು ಖರೀದಿ ಮಾಡಿದೆ‌. ಏಪ್ರಿಲ್ 2021 ರಲ್ಲಿ, WHO ಎಚ್ಚರಿಕೆ ನೀಡಿದ ನಂತರವೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1.10 ಕೋಟಿ ಮಾತ್ರೆಗಳನ್ನು ಖರೀದಿಸಿದೆ. ಖರೀದಿಗೆ ಖರ್ಚು ಮಾಡಿದ ಮೊತ್ತ ಮತ್ತು ಅದನ್ನು ರಾಜ್ಯದಲ್ಲಿ ಎಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ PAC ಮಾಹಿತಿ ನೀಡಿಲ್ಲ.

ಈ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಮತ್ತು ಅನುಮಾನಾಸ್ಪದ ರೋಗಿಗಳಿಗೆ ಚಿಕಿತ್ಸಾ ವಿಧಾನವಾಗಿ ಶಿಫಾರಸು ಮಾಡುವುದನ್ನು ಮುಂದುವರಿಸಿದ ಅಧಿಕಾರಿಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸುವಂತೆ PAC ಶಿಫಾರಸು ಮಾಡಿದೆ.

ವೆಂಟಿಲೇಟರ್ ಹಗರಣ
ಮೊದಲಿನಿಂದಲೂ ಗೊಂದಲದ ಗೂಡಾಗಿದ್ದ, ಇಂದಿಗೂ ಸಹ ಅದರ ಮಾಹಿತಿಯ ಬಗ್ಗೆ ಗೌಪ್ಯತೆ ತೋರ್ಪಡಿಸುವ ಪಿಎಂ ಕೇರ್ಸ್ ಫಂಡ್ ಬಗ್ಗೆಯೂ ಸಮಿತಿಯ ವರದಿ ಸಿದ್ದಪಡಿಸಿದೆ. ಅದರಂತೆ ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಕರ್ನಾಟಕಕ್ಕೆ ನೀಡಲಾದ ಸುಮಾರು 165 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಇದು ಸ್ಪಷ್ಟವಾಗಿ ನ್ಯಾಯಸಮ್ಮತವಲ್ಲ ಎಂದು PAC ಹೇಳಿದೆ. ಇಷ್ಟಾದರೂ ಬಡ ಮತ್ತು ಮಧ್ಯಮ ವರ್ಗದ, ಆರ್ಥಿಕವಾಗಿ ಸಬಲರಲ್ಲದ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲೂ ಖಾಸಗಿ ಆಸ್ಪತ್ರೆಗಳು ತಮ್ಮ ವೆಚ್ಚದಲ್ಲಿ ಯಾವುದೇ ವಿನಾಯಿತಿ ನೀಡದೇ ಬಡವರಿಂದ ಸುಲಿಗೆ ಮಾಡಿವೆ. ಇಲಾಖೆಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿದ್ದಾರೆ ಎಂದು ಸಮಿತಿ ಹೇಳಿದೆ.

‘ಅನೇಕ ಖಾಸಗಿ ಆಸ್ಪತ್ರೆಗಳು ಸೋಂಕಿತರ ಚಿಕಿತ್ಸೆಗಾಗಿ ಇಲಾಖೆ ನಿಗದಿಪಡಿಸಿದ ದರ ಪಟ್ಟಿಯನ್ನು ಅನುಸರಿಸದೆ ಸಾರ್ವಜನಿಕರಿಂದ ಹೆಚ್ಚಿನ ದರದಲ್ಲಿ ಹಣವನ್ನು ಸುಲಿಗೆ ಮಾಡಿವೆ ಮತ್ತು ಕೆಲವು ಸಂದರ್ಭಗಳಲ್ಲಿ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಿಂದಿರುಗಿಸಲು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿವೆ,’ ಎಂದು ಸಮಿತಿ ಹೇಳಿದೆ. ಕೋವಿಡ್ ಮೊದಲ ಅಲೆಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಇಲಾಖೆ ಎರಡನೇ ಅಲೆಯಲ್ಲೂ ಎಚ್ಚೆತ್ತುಕೊಳ್ಳದ ಬಗ್ಗೆ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ. ಎರಡನೇ ಅಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಾಗ ವೆಂಟಿಲೇಟರ್‌ಗಳ ಅಲಭ್ಯತೆ, ಆಕ್ಸಿಜನ್ ಅಲಭ್ಯತೆ ಮತ್ತು ಪರಿಹಾರ ಸಾಧನಗಳ ಲಭ್ಯತೆಯಿಲ್ಲ ಎಂದು ಅದು ಸೂಚಿಸಿದೆ.

ಇಂತಹ ಗಂಭೀರ ಪರಿಸ್ಥಿತಿಯ ಹೊರತಾಗಿಯೂ, ಅಧಿಕಾರಿಗಳು ಸಮಿತಿಗೆ ನೀಡಿದ ಉತ್ತರದಲ್ಲಿ “ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿಲ್ಲ” ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಮಿತಿಯು ತನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ
ತುರ್ತು ಸಂದರ್ಭದ ಹೆಲ್ತ್ ಕಿಟ್ ಗಳು, ರಕ್ತ ಪರೀಕ್ಷೆಯ ಕಿಟ್ ಗಳು, ಯುಪಿಎಸ್‌ನಂತಹ ಉಪಕರಣಗಳ ಖರೀದಿಯಲ್ಲಿ ಇತರ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಕ್ಕೆ ಹೋಲಿಸಿದರೆ ಇಲಾಖೆಯು ಹೆಚ್ಚಿನ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದೆ ಎಂದು ಸಮಿತಿಯು ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಕೆಲವು ಸಲಕರಣೆಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಬಿಡ್‌ಗಳನ್ನು ಹಾಕಲಾಗಿದೆ. ಉಪಕರಣಗಳ ಆರ್ಡರ್‌ಗಳ ಒಂದು ಭಾಗವನ್ನು ಮಾತ್ರ ಪೂರೈಸಿದ ಸಂಸ್ಥೆಗಳನ್ನು ಈವರೆಗೂ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ. ಪರೀಕ್ಷೆಯ ಸಂದರ್ಭದಲ್ಲಿ ದೋಷಯುಕ್ತ ಉತ್ಪನ್ನಗಳು ಕಂಡುಬಂದ ಕಂಪನಿಗಳೊಂದಿಗೇ ಮತ್ತೆ ವ್ಯವಹಾರ ನಡೆಸಲಾಗಿದೆ. ಒಟ್ಟಾರೆ ಯಾವುದೇ ವೈದ್ಯಕೀಯ ಉಪಕರಣಗಳ ಸಂಗ್ರಹಣೆಯಲ್ಲಿ ಇಲಾಖೆ ಪಾರದರ್ಶಕತೆ ತೋರಿಲ್ಲ ಎಂದು ಸಮಿತಿ ಹೇಳಿದೆ.

ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲೂ ಗೊಂದಲ
ಕೋವಿಡ್ ಸಾಂಕ್ರಾಮಿಕದ ನಂತರ ಕಂಡುಬಂದ ಬ್ಲಾಕ್ ಫಂಗಸ್ ಪರೀಕ್ಷೆಯಲ್ಲೂ ಸಹ ಇಲಾಖೆಯ ಅವ್ಯವಹಾರವನ್ನು PAC ವರದಿ ನೀಡಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಫೊಟೆರಿಸಿನ್ ಔಷಧಿಯ 25,000 ಬಾಟಲುಗಳನ್ನು ಅತಿ ಕಡಿಮೆ 2 ನೇ ಬಿಡ್ ದಾರ ಮೈಲಾನ್ ಫಾರ್ಮಾಸ್ಯುಟಿಕಲ್ಸ್‌ನೊಂದಿಗೆ ಹೆಚ್ಚಿನ ಬೆಲೆಗೆ ಖರೀದಿಸಲು ಇಲಾಖೆ ಆದೇಶ ನೀಡಿದೆ ಎಂದು PAC ಕಂಡುಹಿಡಿದಿದೆ.

“ಭಾರತ್ ಸೀರಮ್ಸ್ ಮತ್ತು ಲಸಿಕೆಗಳಿಂದ ಆರ್ಡರ್ ಮಾಡಿದ 50,000 ಬಾಟಲುಗಳಲ್ಲಿ, ಅವರು ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ಕೇವಲ 1,092 ಬಾಟಲುಗಳನ್ನು ಪೂರೈಸಿದ್ದಾರೆ. ಅವರು ತಮ್ಮ ಆದೇಶಗಳನ್ನು ಪೂರೈಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ,” PAC ಗಮನಿಸಿದೆ.

ಔಷಧಿಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿದೆ. ಕೋವಿಡ್-19 ಸಮಯದಲ್ಲಿ ಮಾಡಿದ ಅನೇಕ ಖರೀದಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಇಲಾಖೆಯಿಂದ ಪಡೆಯುವಲ್ಲಿ ವಿಫಲವಾಗಿದೆ ಎಂದು PAC ಸಮಿತಿಯು ಬಹಿರಂಗಪಡಿಸಿದೆ. ಹಾಗೂ ಒಟ್ಟಾರೆ ಈ ವರದಿಗೆ ಅನುಗುಣವಾಗಿ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಶಿಫಾರಸು ಮಾಡಲಾಗಿದೆ.
(ಆಧಾರ : TNM ಮತ್ತು PAC ವರದಿ)